ಆನೆಮುಂಗು ಇದನ್ನು ಬಿಗ್ನೊನೇಸಿಯೆ (Bignonaceae) ಕುಟುಂಬದ ದೊಡ್ಡ ಮರ.ಇದು ಹೂಬಿಡುವ ಸಸ್ಯದ ಜಾತಿ. ಸಾಮಾನ್ಯವಾಗಿ, ಕಹಳೆ ಹೂವು, ಕ್ಯಾಪರ್, ಅಥವಾ ಡ್ಯಾಮೊಕ್ಲಿಸ್ ಮರ ಎಂದು ಕರೆಯುತ್ತಾರೆ. ಒರೊಕ್ಸಿಲಮ್ ಇಂಡಿಕಮ್ (Oroxylum indicum) ಇದರ ವೈಜ್ಞಾನಿಕ ಹೆಸರು. ಇದು ೧೮ ಮೀಟರ್(೫೯ಅಡಿ) ಎತ್ತರ ಬೆಳೆಯುತ್ತದೆ. ಈ ಗಿಡದ ವಿವಿಧ ಭಾಗಗಳನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ.[][]

ಆನೆಮುಂಗು ಸಸ್ಯ

ಇತರೆ ಹೆಸರುಗಳು

ಬದಲಾಯಿಸಿ

ಸಸ್ಯದ ವಿವರಣೆ

ಬದಲಾಯಿಸಿ
 
ಆನೆಮುಂಗು ಸಸ್ಯದ ಹೂವು

ಆನೆಮುಂಗು ಸಸ್ಯದ ದೊಡ್ಡ ಎಲೆಯ ತೊಟ್ಟುಗಳು ಕೊಳೆಯುತ್ತವೆ ಹಾಗೂ ಕಾಂಡದ ತಳದ ಬಳಿ ಸಂಗ್ರಹವಾಗುತ್ತದೆ. ಎಲೆಗಳು ಸುಮಾರು ೧ಮೀಟರ್ ಉದ್ದವಿರುತ್ತದೆ. ಇದರ ಎಲೆಯು ಎಲ್ಲಾ ದ್ವಿದಳ ಸಸ್ಯಗಳಿಗ ಎಲೆಗಳಿಗಿಂತ ದೊಡ್ಡದು. ಈ ಗಿಡದ ಹೂವುಗಳು ಹೆಚ್ಚಾಗಿ ರಾತ್ರಿ ಅರಳುವುದರಿಂದ ಇವುಗಳು ಬಾವಲಿಗಳಿಂದ ಪರಾಗಸ್ಪರ್ಶಕ್ಕೆ ಒಳಪಡುತ್ತವೆ. ಹಣ್ಣುಗಳು ೧.೫ಮೀಟರ್ಗಳಷ್ಟು ಉದ್ದವಾಗಿರುತ್ತವೆ. ಅವುಗಳು ಕತ್ತರಿ ಕವಲುಗಳನ್ನು ಹೊಂದಿದೆ. ಉದ್ದವಾದ ಹಣ್ಣುಗಳು ದೊಡ್ಡ ಹಕ್ಕಿಗಳ ರೆಕ್ಕೆಗಳನ್ನು ಹೋಲುತ್ತವೆ.ಇದರಿಂದಾಗಿ ಇದು ಎಲ್ಲಾ ಡಿಕೋಟ್ಮರದ ಎಲೆಗಳಲ್ಲಿ ದೊಡ್ಡದಾಗಿದೆ. ಇದರ ಹೂವುಗಳನ್ನು ಬಾವಲಿಗಳು ನೈಸರ್ಗಿಕ ಪರಾಗಸ್ಪರ್ಶಕ್ಕೆ ಅಳವಡಿಸಿಕೊಳ್ಳುತ್ತದೆ. ಇದು ಅಗಾಧವಾದ ಬೀಜಕೋಶಗಳನ್ನು ರೂಪಿಸುತ್ತದೆ.[][]

ಬೆಳೆಯುವ ಪ್ರದೇಶಗಳು

ಬದಲಾಯಿಸಿ

ಈ ಸಸ್ಯವು ಭೂತಾನ್ ಮತ್ತುದಕ್ಷಿಣ ಚೀನಾ, ಇಂಡೋಚೈನಾ, ಮಲೇಶಿಯಾ ಹಾಗೂ ಭಾರತದ ಪ್ರದೇಶಗಳಿಗೆ ವಿಸ್ತರಿಸಿರುವ ಹಿಮಾಲಯದ ಪ್ರದೇಶಗಳಲ್ಲಿ ಬೆಳೆತುತ್ತದೆ. ವಿಯೆಟ್ನಾಂನಲ್ಲಿ ಈ ಮರವನ್ನು ನೂಕ್ ನಾಕ್ ಎಂದು ಕರೆಯಲಾಗುತ್ತದೆ ಇದರ ಮಾದರಿಯು ಕ್ಯಾಟ್ ಟೈನ್ ರಾಷ್ಠ್ರೀಯ ಉದ್ಯಾನವನದಲ್ಲಿದೆ. ಭಾರತದ ಅಸ್ಸಾಂನ ಮನಸ್ ರಾಷ್ಟ್ರೀಯ ಉದ್ಯಾನವನದ ಅರಣ್ಯ ಬಯೋಮ್ನಲ್ಲಿ ಕಾಣಬಹುದು. ಇವು ಭಾರತದ ರಾಜಸ್ಥಾನ್ ರಾಜ್ಯದ ಬನ್ಸ್ವಾರಾ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತದೆ.ಕೇರಳದ ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯಕ್ಕೊಳಗಾದ ಸಸ್ಯಗಳ ಪಟ್ಟಿಯಲ್ಲಿಇದನ್ನು ವರದಿ ಮಾಡಲಾಗಿದೆ. ಇದು ಶ್ರೀಲಂಕಾದಲ್ಲೂ ಕಂಡುಬರುತ್ತದೆ.


 
ಆನೆಮುಂಗು ಸಸ್ಯದ ಹಣ್ಣು

ಪರಿಸರ ವಿಜ್ಞಾನ

ಬದಲಾಯಿಸಿ

ಆನೆಮುಂಗು ಬೇರುಗಳನ್ನು ಸುತ್ತುವರಿದಿರುವ ಮಣ್ಣಿನಲ್ಲಿ ಆಕ್ಸಿನೋಮೈಸೀಟ್ ಸೂಡೊನೊಕಾರ್ಡಿಯಾ ಓರೋಕ್ಸಿಲಿ ಜೊತೆಯಾಗಿ ಬೆಳೆಯುತ್ತದೆ. ಇದರ ಸೆಟೊಬಾಸಿಡಿಯಮ್ ಬೊಗೋರಿಯೆನ್ಸ್ ಎನ್ನುವುದು ವೆಲ್ವೆಟ್ ರೋಗಕ್ಕೆ ಕಾರಣವಾಗುವ ಫಂಗಲ್ ಜಾತಿಯಾಗಿದೆ. ಸಸ್ಯಎಲೆಗಳು, ಬೇರಿನ ತೊಗಟೆ, ಮತ್ತು ಬೀಜಗಳು ಸೇರಿದಂತೆ ಆನೆಮುಂಗು ಸಸ್ಯದ ಹಲವಾರು ಭಾಗಗಳು ಪ್ರುನೆಟಿನ್, ಸಿಟೊಸ್ಟೀರಾಲ್, ಓರೊಕ್ಸಿನ್ಡಿನ್, ಒರಾಕ್ಸಿಲಿನ್-ಎ, ಬಯೋಚಾಚಿನ್- ಎ, ಇಲಾಜಿಕ್ ಆಸಿಡ್, ಟೆಟುನ್, ಅಂತ್ರಕ್ವಿನೋನ್ ಮತ್ತು ಎಮೋಡಿನ್ಗಳಂತಹ ಫೈಟೊಕೆಮಿಕಲ್ಗಳನ್ನು ಒಳಗೊಂಡಿರುತ್ತವೆ.[][]

ಇದನ್ನು ಅಲಂಕಾರಿಕ ಸಸ್ಯವಾಗಿ ಬೆಳೆಯಲಾಗುತ್ತದೆ. ಈ ಗಿಡವನ್ನು ಕಿರಾತ್, ಸುನವಾರ್, ರಾಯ್, ಲಿಂಬು, ನೇಪಾಳ, ಯಖಾ, ಥೈಲ್ಯಾಂಡ್, ಥಾಯ್ ಮತ್ತು ಲಾವೊಸ್ನ ಮದುವೆ ಆಚರಣೆಗಳಲ್ಲಿ ಬಳಸುತ್ತಾರೆ. ಹಿಮಾಲಯದಲ್ಲಿ ಜನರು ತಮ್ಮ ಮನೆಗಳ ಮೇಲ್ಛಾವಣಿಯ ಅಲಂಕಾರಕ್ಕೆ ಬಳಸುತ್ತಾರೆ. ಇದರ ಎಲೆಗಳು ಮತ್ತು ಕಾಂಡಗಳನ್ನು ಖಾದ್ಯವಾಗಿ ಉಪಯೋಗಿಸುತ್ತಾರೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಆನೆಮುಂಗು ಬೀಜಗಳನ್ನು ಭಾರತೀಯ ಆಯುರ್ವೇದ ಮತ್ತು ಚೀನೀ ಔಷಧಿಗಳಲ್ಲಿ ಬಳಸಲಾಗುತ್ತದೆ.ಇದರ ಬೀಜಗಳಿಂದ ತಯಾರಿಸಲಾದ ಶಿಲ್ಪಗಳು ಅಥವಾ ಹೂಮಾಲೆಗಳನ್ನು ಮನೆಗಳಲ್ಲಿ ಅಲಂಕಾರಕ್ಕೆ ಬಳಸುತ್ತಾರೆ.ಇದರ ಎಳೆ ಕಾಯಿಗಳನ್ನು ಉಪ್ಪಿನಕಾಯಿ ಮಾಡುತ್ತಾರೆ.ಬೇರಿನ ಕಷಾಯವನ್ನು ಅಜೀರ್ಣ,ಮೈಕೈನೋವು ಗಂಟುನೋವು ಇತ್ಯಾದಿಗಳಲ್ಲಿ ಬಳಸುತ್ತಾರೆ [][]

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2020-08-05. Retrieved 2018-08-29.
  2. http://www.flowersofindia.net/catalog/slides/Broken%20Bones%20Tree.html
  3. https://indiabiodiversity.org/species/show/16688
  4. http://eol.org/pages/2895129/details
  5. https://www.jstor.org/stable/25172953
  6. https://www.researchgate.net/publication/305639362_FLORAL_AND_PHENOLOGICAL_STUDIES_ON_OROXYLUM_INDICUM_IN_SIKKIM
  7. "ಆರ್ಕೈವ್ ನಕಲು". Archived from the original on 2018-04-07. Retrieved 2018-08-29.
  8. http://nif.org.in/innovation/the_medicinal_properties_of_oroxylum_indicum_the_traditional_community_knowledge_of_various_tribes_of_manipur_such_as_anal_etc/264