ರೆಕ್ಕೆಯು ಗಾಳಿ ಅಥವಾ ಯಾವುದೇ ಇತರ ದ್ರವದ ಮೂಲಕ ಚಲಿಸುವಾಗ ಉತ್ಥಾಪಕ ಬಲವನ್ನು ಸೃಷ್ಟಿಸುವ ಒಂದು ಬಗೆಯ ರಚನೆ. ವಸ್ತುತಃ, ರೆಕ್ಕೆಗಳು ವಾಯುಬಲವಿಜ್ಞಾನ ಸಂಬಂಧಿ ಬಲಗಳಿಗೆ ಒಳಪಡುವ ಸರಳೀಕೃತ ಅಡ್ಡಕೊಯ್ತಗಳನ್ನು ಹೊಂದಿರುತ್ತವೆ ಮತ್ತು ಇವು ವಾಯುಫಲಕಗಳಾಗಿ ಕಾರ್ಯನಿರ್ವಹಿಸುತ್ತವೆ. ಒಂದು ರೆಕ್ಕೆಯ ವಾಯುಬಲ ಕಾರ್ಯಕಾರಿತ್ವವನ್ನು ಅದರ ಉತ್ಥಾಪಕ ಬಲ ಮತ್ತು ಎಳೆತದ ನಡುವಿನ ಅನುಪಾತವಾಗಿ ವ್ಯಕ್ತಪಡಿಸಲಾಗುತ್ತದೆ. ಒಂದು ನಿರ್ದಿಷ್ಟ ವೇಗ ಮತ್ತು ದಾಳಿಯ ಕೋನದಲ್ಲಿ ಒಂದು ರೆಕ್ಕೆಯು ಸೃಷ್ಟಿಸುವ ಉತ್ಥಾಪಾಕ ಬಲವು ರೆಕ್ಕೆಯ ಒಟ್ಟು ಎಳೆತಕ್ಕಿಂತ ಒಂದು ಅಥವಾ ಎರಡು ಪರಿಮಾಣ ವರ್ಗಗಳಷ್ಟು ಹೆಚ್ಚು ಇರಬಹುದು. ಹೆಚ್ಚಿನ ಉತ್ಥಾಪಕ ಬಲ-ಎಳೆತ ಅನುಪಾತಕ್ಕಾಗಿ ಸಾಕಷ್ಟು ಉತ್ಥಾಪಕ ಬಲದಿಂದ ಗಾಳಿಯ ಮೂಲಕ ರೆಕ್ಕೆಗಳನ್ನು ಮುನ್ನೂಕಲು ಗಣನೀಯವಾಗಿ ಕಡಿಮೆಯಿರುವ ಒತ್ತಡ ಬೇಕಾಗುತ್ತದೆ.

ಒಂದು ವಿಮಾನದ ರೆಕ್ಕೆಯ ಮೇಲೆ ಸಾಂದ್ರೀಕರಣವನ್ನು ಕಾಣಬಹುದು

ಉತ್ಥಾಪಕ ಬಲವನ್ನು ಸೃಷ್ಟಿಸಲು ಒಂದು ರೆಕ್ಕೆಯು ಅದರ ಮೂಲಕ ಸಾಗುವ ವಾಯುಹರಿವಿಗೆ ಸಾಪೇಕ್ಷವಾಗಿರುವ ಸೂಕ್ತ ದಾಳಿಯ ಕೋನಕ್ಕೆ ನಿರ್ದೇಶಿತವಾಗಿರಬೇಕು. ಇದು ಸಂಭವಿಸಿದಾಗ, ರೆಕ್ಕೆಯು ಗಾಳಿಯ ಹರಿವನ್ನು ಕೆಳಮುಖವಾಗಿ ತಿರುಗಿಸುತ್ತದೆ, ಅಂದರೆ ಗಾಳಿಯು ರೆಕ್ಕೆಯನ್ನು ಸಾಗಿ ಚಲಿಸಿದಾಗ ವಾಯುವನ್ನು ತಿರುಗಿಸುತ್ತದೆ (ಅದರ ದಿಕ್ಕನ್ನು ಬದಲಿಸುತ್ತದೆ). ರೆಕ್ಕೆಯು ದಿಕ್ಕನ್ನು ಬದಲಿಸಲು ಗಾಳಿಯ ಮೇಲೆ ಬಲವನ್ನು ಉಪಯೋಗಿಸುವುದರಿಂದ, ಗಾಳಿಯು ಕೂಡ ರೆಕ್ಕೆಯ ಮೇಲೆ ಗಾತ್ರದಲ್ಲಿ ಸಮವಿರುವ ಆದರೆ ವಿರುದ್ಧ ದಿಕ್ಕಿನಲ್ಲಿರುವ ಬಲವನ್ನು ಉಪಯೋಗಿಸಬೇಕಾಗುತ್ತದೆ. ಈ ಬಲವು ರೆಕ್ಕೆಯ ಮೇಲ್ಮೈ ಮೇಲಿನ ವಿಭಿನ್ನ ಬಿಂದುಗಳ ಮೇಲಿನ ಬದಲಾಗುವ ಗಾಳಿ ಒತ್ತಡಗಳಾಗಿ ವ್ಯಕ್ತವಾಗುತ್ತದೆ.[] ರೆಕ್ಕೆಯ ಮೇಲಿನ ಮೇಲ್ಮೈ ಮೇಲೆ ಸಾಮಾನ್ಯಕ್ಕಿಂತ ಕಡಿಮೆ ಗಾಳಿ ಒತ್ತಡದ ಪ್ರದೇಶದ ಸೃಷ್ಟಿಯಾಗುತ್ತದೆ, ಮತ್ತು ರೆಕ್ಕೆಯ ಕೆಳಗಡೆ ಹೆಚ್ಚಿನ ಒತ್ತಡ ಸೃಷ್ಟಿಯಾಗುತ್ತದೆ. ಈ ಗಾಳಿ ಒತ್ತಡದ ವ್ಯತ್ಯಾಸಗಳನ್ನು ಮಾಪನ ಉಪಕರಣಗಳನ್ನು ಬಳಸಿ ನೇರವಾಗಿ ಅಳೆಯಬಹುದು, ಅಥವಾ ಗಾಳಿವೇಗದ ಹರಡಿಕೆಯಿಂದ ಲೆಕ್ಕಮಾಡಬಹುದು.

ಪ್ರಕೃತಿಯಲ್ಲಿ, ರೆಕ್ಕೆಗಳು ಕೀಟಗಳಲ್ಲಿ, ಟೆರೊಸಾರ್‌ಗಳಲ್ಲಿ, ಡೈನೊಸಾರ್‌ಗಳಲ್ಲಿ (ಪಕ್ಷಿಗಳು), ಮತ್ತು ಸಸ್ತನಿಗಳಲ್ಲಿ (ಬಾವಲಿಗಳು) ಚಲನೆಯ ಸಾಧನವಾಗಿ ವಿಕಸನಗೊಂಡಿವೆ. ಪೆಂಗ್ವಿನ್‍ಗಳ ವಿವಿಧ ಪ್ರಜಾತಿಗಳು ಮತ್ತು ಕಡಲಬಾತುಗಳು, ನೀರುಕಾಗೆಗಳು, ಗಿಲಮಾಟ್‍ಗಳು, ಶಿಯರ್‌ವಾಟರ್‌ಗಳು, ಐಡರ್ ಹಾಗೂ ಸ್ಕಾಟರ್ ಡಕ್‍ಗಳು ಹಾಗೂ ಧುಮುಕುವ ಪೆಟ್ರಲ್‍ಗಳಂತಹ ಇತರ ಹಾರಬಲ್ಲ ಅಥವಾ ಹಾರಲಾರದ ನೀರುಹಕ್ಕಿಗಳು ಅತ್ಯಾಸೆಯ ಈಜುಗರಾಗಿದ್ದಾವೆ, ಮತ್ತು ನೀರಿನ ಮೂಲಕ ಮುನ್ನೂಕಲು ತಮ್ಮ ರೆಕ್ಕೆಗಳನ್ನು ಬಳಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. "...the effect of the wing is to give the air stream a downward velocity component. The reaction force of the deflected air mass must then act on the wing to give it an equal and opposite upward component." In: Halliday, David; Resnick, Robert, Fundamentals of Physics 3rd Edition, John Wiley & Sons, p. 378
"https://kn.wikipedia.org/w/index.php?title=ರೆಕ್ಕೆ&oldid=857253" ಇಂದ ಪಡೆಯಲ್ಪಟ್ಟಿದೆ