ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಹಿಮಾಂಶು ಪಾಂಡ್ಯ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ.ಇವರು ಬಲಗೈ ಬ್ಯಾಟ್ಸ್‌ಮನ್ ಹಾಗು ಮಧ್ಯಮ ವೇಗದ ಬೌಲರ್.ಐಪಿಎಲ್‍ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಆಡುತ್ತಾರೆ.
ಹಾರ್ದಿಕ್ ಪಾಂಡ್ಯ | ||||
ಭಾರತ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | ಹಾರ್ದಿಕ್ ಹಿಮಾಂಶು ಪಾಂಡ್ಯ | |||
ಅಡ್ಡಹೆಸರು | ಕೂಂ ಫೂ ಪಾಂಡ್ಯ | |||
ಹುಟ್ಟು | ಅಕ್ಟೋಬರ್ ೧೧ ೧೯೯೩ | |||
ಸೂರತ್, ಗುಜರಾತ್, ಭಾರತ | ||||
ಪಾತ್ರ | ಆಲ್ರೌಂಡರ್ | |||
ಬ್ಯಾಟಿಂಗ್ ಶೈಲಿ | ಬಲಗೈ | |||
ಬೌಲಿಂಗ್ ಶೈಲಿ | ಬಲಗೈ ಮಧ್ಯಮ | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap ೨೮೯) | ೨೬ ಜುಲೈ ೨೦೧೭: v ಶ್ರೀಲಂಕಾ | |||
ಕೊನೆಯ ಟೆಸ್ಟ್ ಪಂದ್ಯ | ೦೨ ಅಗಸ್ಟ್ ೨೦೧೭: v ಶ್ರೀಲಂಕಾ | |||
ODI ಪಾದಾರ್ಪಣೆ (cap ೨೧೫) | ೧೬ ಅಕ್ಟೋಬರ್ ೨೦೧೬: v ನ್ಯೂಜೀಲ್ಯಾಂಡ್ | |||
ಕೊನೆಯ ODI ಪಂದ್ಯ | ೦೧ ಅಕ್ಟೋಬರ್ ೨೦೧೭: v ಆಸ್ಟ್ರೇಲಿಯ | |||
ODI ಅಂಗಿಯ ಸಂಖ್ಯೆ | ೩೩ | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
೨೦೧೨/೧೩ ರಿಂದ - | ಬರೋಡ ಕ್ರಿಕೆಟ್ ತಂಡ | |||
೨೦೧೫ ರಿಂದ - | ಮುಂಬೈ ಇಂಡಿಯನ್ಸ್ | |||
೨೦೧೬ ರಿಂದ - | ಇಂಡಿಯಾ ಎ | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ಏ.ದಿ.ಪ | ಟಿ-೨೦ ಕ್ರಿಕೆಟ್ | ಪಟ್ಟಿ ಎ | |
ಪಂದ್ಯಗಳು | ೦೩ | ೨೬ | ೧೯ | ೪೭ |
ಒಟ್ಟು ರನ್ನುಗಳು | ೧೭೮ | ೫೩೦ | ೧೦೦ | ೮೬೪ |
ಬ್ಯಾಟಿಂಗ್ ಸರಾಸರಿ | ೫೯.೩೩ | ೪೦.೭೬ | ೧೦ | ೩೩.೨೩ |
೧೦೦/೫೦ | ೧/೧ | -/೪ | -/- | -/೬ |
ಅತೀ ಹೆಚ್ಚು ರನ್ನುಗಳು | ೧೦೮ | ೮೩ | ೩೧ | ೮೩ |
ಬೌಲ್ ಮಾಡಿದ ಚೆಂಡುಗಳು | ೧೯೨ | ೧೦೭೬ | ೨೯೧ | ೧೮೨೬ |
ವಿಕೇಟುಗಳು | ೪ | ೨೯ | ೧೫ | ೪೫ |
ಬೌಲಿಂಗ್ ಸರಾಸರಿ | ೨೩.೭೫ | ೩೪.೪೪ | ೨೫.೯೩ | ೩೫.೬೦ |
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ | - | - | - | - |
೧೦ ವಿಕೆಟುಗಳು ಪಂದ್ಯದಲ್ಲಿ | - | - | - | - |
ಶ್ರೇಷ್ಠ ಬೌಲಿಂಗ್ | ೨/೩೧ | ೩/೩೧ | ೩/೮ | ೩/೨೬ |
ಕ್ಯಾಚುಗಳು /ಸ್ಟಂಪಿಂಗ್‍ಗಳು | ೪/- | ೧೦/- | ೧೧/- | ೧೯/- |
ದಿನಾಂಕ ೦೨ ಅಕ್ಟೋಬರ್, ೨೦೧೭ ವರೆಗೆ. |
ಆರಂಭಿಕ ಜೀವನ
ಬದಲಾಯಿಸಿಇವರು ೧೧ನೇ ಅಕ್ಟೋಬರ್ ೧೯೯೩, ಸೂರತ್, ಗುಜರಾತ್ನಲ್ಲಿ ಜನಿಸಿದರು. ಆರ್ಥಿಕವಾಗಿ ದುರ್ಬಲವಾಗಿದ್ದ, ಪಾಂಡ್ಯ ಕುಟುಂಬವು ಗೋರ್ವಾದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್‌ನಲ್ಲಿ ಕೇಂದ್ರೀಕರಿಸುವ ಸಲುವಾಗಿ ಹಾರ್ದಿಕ್ ಪಾಂಡ್ಯ, ಎಂ.ಕೆ. ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯವರೆಗೆ ಅಧ್ಯಯನ ಮಾಡಿ ನಂತರ ತಮ್ಮ ಶಿಕ್ಷಣವನ್ನ ನಿಲ್ಲಿಸಿದರು.ಹಾರ್ದಿಕ್ ಕಿರಿಯ-ಮಟ್ಟದ ಕ್ರಿಕೆಟ್ ನಲ್ಲಿ ಸ್ಥಿರವಾದ ಪ್ರಗತಿ ಮಾಡಿದರು. ಕ್ರುನಾಲ್ (ಹಾರ್ದಿಕ್ ಪಾಂಡ್ಯನ ಸಹೋದರ) ಪ್ರಕಾರ, "ಕ್ಲಬ್ ಕ್ರಿಕೆಟ್ನಲ್ಲಿ ಸಾಕಷ್ಟು ಪಂದ್ಯಗಳನ್ನು ಒಬ್ಬಂಟಿಯಾಗಿಯೆ ಗೆದ್ದಿದ್ದಾರೆ".[೧]
ವೃತ್ತಿ ಜೀವನ
ಬದಲಾಯಿಸಿಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಜನವರಿ ೨೭, ೨೦೧೬ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.ಅಕ್ಟೊಬರ್ ೧೬, ೨೦೧೬ರಲ್ಲಿ ನ್ಯೂ ಜೀಲ್ಯಾಂಡ್ ವಿರುದ್ಧ ನಡೆದ ಏಕದಿನ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು. ಜುಲೈ ೨೭, ೨೦೧೭ರಲ್ಲಿ ಶ್ರೀಲಂಕ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೨]
ಐಪಿಎಲ್ ಕ್ರಿಕೆಟ್
ಬದಲಾಯಿಸಿಐಪಿಎಲ್ ೨೦೧೫ ರಲ್ಲಿ ಮುಂಬೈ ಇಂಡಿಯನ್ಸ್ ಪರ ಐ.ಪಿ.ಎಲ್.ನಲ್ಲಿ ಪಾದಾರ್ಪನೆ ಮಾಡಿದರು.ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಾವು ಎದುರಿಸಿದ ೮ ಎಸೆತಗಳಲ್ಲಿ ೨೧ ರನ್ ಗಳಿಸಿ ಮುಂಬೈಗೆ ೬ ವಿಕೇಟ್ಗಳ ಜಯ ದಾಖಲಿಸಿದರು.ಇದೇ ಪಂದ್ಯದಲ್ಲಿ ೩ ಪ್ರಮುಖ ಕ್ಯಾಚ್ಗಳನ್ನು ಗಳಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಆ ಪಂದ್ಯದ ನಂತರ, ಸಚಿನ್ ತೆಂಡುಲ್ಕರ್ ಅವರು ಹಾರ್ದಿಕ್‍ರನ್ನು ಕರೆಮಾಡಿ, ಮುಂದಿನ ೧೮ ತಿಂಗಳುಗಳಲ್ಲಿ ಭಾರತಕ್ಕಾಗಿ ಅವರು ಆಡಲಿದ್ದಾರೆ ಎಂದು ತಿಳಿಸಿದರು.ಮುಂದಿನ ವರ್ಷವೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಗ್ರ ೪ ತಂಡಗಳ ಸ್ಪರ್ಧೆಯಲ್ಲಿ ಉಳಿಯಲು ಗೆಲ್ಲಲೇಬೇಕಾದ ಪಂದ್ಯದಲ್ಲಿ, ೩೧ ಎಸೆತಗಳಲ್ಲಿ ೬೧ ರನ್ ಗಳಿಸಿದರು ಮತ್ತು ಋತುವಿನಲ್ಲಿ ತಮ್ಮ ಎರಡನೆಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಸಾಧನೆಗಳು
ಬದಲಾಯಿಸಿ೧೮ ಜೂನ್ ೦೧೭ ರಂದು ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿಯ ಪ್ರತಿಷ್ಠಿತ ಸರಣಿಯ ಫೈನಲ್ ಪಂದ್ಯದಲ್ಲಿ ಅವರು ೪೩ ಎಸೆತಗಳಲ್ಲಿ ೭೬ ರನ್ ಗಳಿಸಿ ಅತ್ಯಂತ ವೇಗದ ಅರ್ಧಶತಕವನ್ನು ದಾಖಲಿಸಿದ ಆಟಗಾರರಾದರು,ಕೇವಲ ೩೨ ಎಸೆತಗಳಲ್ಲಿ ೫೦ ರನ್ ಸೇರಿದ್ದವು.
ಟೆಸ್ಟ್ ಕ್ರಿಕೆಟ್
ಬದಲಾಯಿಸಿವೈಯಕ್ತಿಕ ಜೀವನ
ಬದಲಾಯಿಸಿಪಾಂಡ್ಯ ೧ ಜನವರಿ ೨೦೨೦ ರಂದು ನಟಿ ನತಾಶ ಸ್ಟಾಂಕೋವಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.[೪]
ಪ್ರಶಸ್ತಿಗಳು
ಬದಲಾಯಿಸಿ೧೬ ಅಕ್ತೋಬರ್ ೨೦೧೬, ಧರ್ಮಶಾಲದಲ್ಲಿ ನ್ಯೂ ಜೀಲ್ಯಾಂಡ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.[೫]
ಗ್ಯಾಲರಿ
ಬದಲಾಯಿಸಿ-
ಹಾರ್ದಿಕ್ ಪಾಂಡ್ಯ ಮತ್ತು ದಿಲ್ಜಾನ್ ವಾಡಿಯಾ
-
ಕ್ರುನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Hardik_Pandya
- ↑ http://www.cricbuzz.com/profiles/9647/hardik-pandya
- ↑ http://www.vijaykarnatakaepaper.com/Details.aspx?id=24025&boxid=135935811
- ↑ "Hardik Pandya announces engagement with Serbian actress Natasa Stankovic - Times of India ►". The Times of India. Archived from the original on 8 ಜನವರಿ 2020. Retrieved 15 January 2020.
- ↑ http://www.espncricinfo.com/india-v-new-zealand-2016-17/engine/match/1030219.html