ಸ್ವಪ್ನಾ ಬರ್ಮನ್ (ಜನನ ೨೯ ಅಕ್ಟೋಬರ್ ೧೯೯೬) ಒಬ್ಬ ಭಾರತೀಯ ಹೆಪ್ಟಾಥ್ಲೀಟ್. ಅವರು ೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ[] ಹೆಪ್ಟಾಥ್ಲಾನ್ ನಲ್ಲಿ ಮೊದಲನೆಯ ಸ್ಥಾನವನ್ನು ಪಡೆದರು. ಗೋಸ್ಪೋರ್ಟ್ಸ್ ಫೌಂಡೇಶನ್ ಇವರಿಗೆ ರಾಹುಲ್ ದ್ರಾವಿಡ್ ಕ್ರೀಡಾಪಟು ಮಾರ್ಗದರ್ಶಿ ಕಾರ್ಯಕ್ರಮದ ಮೂಲಕ ಬೆಂಬಲವನ್ನು ನೀಡಿದ್ದಾರೆ. ಭಾರತದ ಸ್ವಪ್ನಾ ಬರ್ಮನ್ ರವರು ಇಂಡೋನೇಷ್ಯಾದಲ್ಲಿ ನಡೆದ ೨೦೧೮ ರ ಏಷ್ಯನ್ ಗೇಮ್ಸ್ ನಲ್ಲಿ ವಿಮೆನ್ಸ್ ಹೆಪ್ಟಾಥ್ಲಾನ್ ಚಿನ್ನದ ಪದಕವನ್ನು ಗೆದ್ದರು.

ಸ್ವಪ್ನ ಬರ್ಮನ್
ಒಡಿಶಾದಲ್ಲಿ ಸ್ಪಪ್ನ ಬರ್ಮನ್ (೨೦೧೭)
ವೈಯುಕ್ತಿಕ ಮಾಹಿತಿ
ಜನನ೨೯ ಅಕ್ಟೋಬರ್ ೧೯೯೬
ಜಲ್ಪೈಗುರಿ, ಪಶ್ಚಿಮ ಬಂಗಾಲ,ಭಾರತ
Sport
ದೇಶ ಭಾರತ
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)ಹೆಪ್ಟಾಥ್ಲಾನ್
Achievements and titles
ವೈಯಕ್ತಿಕ ಪರಮಶ್ರೇಷ್ಠ೬೦೨೬ ಅಂಕಗಳು
(ಜಕರ್ತ ೨೦೧೮)
Updated on 29 August 2018.

ಸ್ಪಪ್ನಾ ರವರು ಪಶ್ಚಿಮ ಬಂಗಾಳಜಲ್ಪೈಗುರಿ ಎಂಬಲ್ಲಿ ೨೯ ಅಕ್ಟೋಬರ್ ೧೯೯೬ ರಂದು ಜನಿಸಿದರು.[]

ಅವರ ತಂದೆ ಪಂಚನನ್ ಬರ್ಮನ್ ಒಬ್ಬ ರಿಕ್ಷಾ ಚಾಲಕ ಮತ್ತು ಅವರ ತಾಯಿ ಬಸಾನಾ ರವರು ಚಹಾದ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.[] ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರ ತಂದೆ ಸ್ವಲ್ಪ ಸಮಯದ ನಂತರ ಹಾಸಿಗೆ ಹಿಡಿದರು. ನಂತರ ನಾಲ್ಕು ಮಕ್ಕಳ ಪೋಷಣೆ ಮಾಡಲು ಅವರಿಂದ ಸಾಧ್ಯವಾಗಲ್ಲಿಲ್ಲ. ಸ್ಪಪ್ನಾ ರವರ ಎರಡು ಕಾಲುಗಳಲ್ಲೂ ಆರು ಬೆರಳುಗಳಿರುವುದರಿಂದಾಗಿ ಅವರು ತುಂಬಾ ನೋವನ್ನು ಅನುಭವಿಸಿದರು.[] [] ಅವರ ಅಸಾಮಾನ್ಯ ಕಾಲುಗಳಿಂದಾಗಿ ಅವರಿಗೆ ಹೆಚ್ಚಿನ ವ್ಯಾಪಕದ ಬೂಟುಗಳನ್ನು ಖರೀದಿಸಲಾಗಲಿಲ್ಲ. ಸ್ವಪ್ನಾ ರವರು ತಾನು ಗೆದ್ದ ಬಹುಮಾನದ ನಗದನ್ನು, ಕಾಂಕ್ರೀಟ್ ಗೋಡೆ ಇಲ್ಲದೆ ವಾಸಿಸುತ್ತಿದ್ದ ತನ್ನ ಕುಟುಂಬವನ್ನು ನೋಡಿಕೊಳ್ಳಲು ಉಪಯೋಗಿಸುತ್ತಿದ್ದರು. ಅಥ್ಲೆಟಿಕ್ಸ್ ನಲ್ಲಿ ಅವರ ಯಶಸ್ಸನ್ನು ಗುರುತಿಸಿ ೨೦೧೬ ರಲ್ಲಿ ಅವರು ಸರಕಾರದಿಂದ ೧,೫೦,೦೦೦ ರೂಪಾಯಿಗಳನ್ನು ವಿದ್ಯಾರ್ಥಿವೆತನವಾಗಿ ಪಡೆದರು. [] ಪ್ರಸ್ತುತವಾಗಿ ಇವರು ಕೊಲ್ಕತ್ತಾದಲ್ಲಿನ ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ಕ್ಯಾಂಪಸ್ ನಲ್ಲಿ ತರಬೇತಿ ನೀಡುತ್ತಿದ್ದಾರೆ. ತನ್ನ ದವಡೆಯಲ್ಲಿ ಗಾಯವಿದ್ದರೂ ಅದನ್ನು ಹೊರತುಪಡಿಸಿ ಅವರು ೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು.[] ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚ್ಯಾಂಪಿಯನ್ಷಿಪ್ - ವಿಮೆನ್ಸ್ ಹೆಪ್ಟಾಥ್ಲಾನ್ (೮೦೦ ಮೀ.)ನ ಅಂತಿಮ ಈವೆಂಟ್ ನಲ್ಲಿ ಇವರು ಕುಸಿದರು. ಆದರೆ ಸ್ವಪ್ನಾ ರವರು ತನ್ನ ವೈಯಕ್ತಿಕ ದಾಖಲೆಗಳನ್ನು ಮುರಿದು ಹಿಂದಿನ ಆರು ಈವೆಂಟ್ ಗಳಿಂದ ಸಾಕಷ್ಟು ಅಂಕಗಳನ್ನು ಗಳಿಸಿ, ೮೦೦ ಮೀ. ಓಟದಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದರು.

 
ಸ್ವಪ್ನಾ ರವರು ೧೦೦ ಮೀ. ಹೆಪ್ಟಾಥ್ಲಾನ್ ಒಡಿಶಾ ೨೦೧೭ (cropped)

ಸಾಧನೆಗಳು

ಬದಲಾಯಿಸಿ
 
ಸ್ವಪ್ನಾ ಬರ್ಮನ್ (ಭಾರತಕ್ಕೆ ಚಿನ್ನ),ಮೆಗ್ ಹೆಂಪ್ಹಿಲ್(ಜಪಾನ್ ಗೆ ಬೆಳ್ಳಿ) ಮತ್ತು ಪೋರ್ಣಿಮಾ ಹೆಮ್ಬ್ರಮ್(ಭಾರತಕ್ಕೆ ಕಂಚು)
 
ಭಾರತದ ಮಹಿಳಾ ಹೆಪ್ಟಾಥ್ಲಾನ್, ತನ್ನ ಕ್ರಿಯೆಯಲ್ಲಿ ಸ್ವಪ್ನಾ ಬರ್ಮನ್

೨೦೧೭ ಏಷ್ಯನ್ ಅಥ್ಲೆಟಿಕ್ಸ್ ಚ್ಯಾಂಪಿಯನ್ಷಿಪ್ಸ್

ವರ್ಷ ಸ್ಥಳ ಈವೆಂಟ್ ಅಂಕಗಳು ಫಲಿತಾಂಶ
೨೦೧೭ ಕಾಳಿಂಗ ಸ್ಟೇಡಿಯಂ, ಭುವನೇಶ್ವರ್[] ಹೆಪ್ಟಾಥ್ಲಾನ್ ೫೯೪೨ ಚಿನ್ನ[]

ಪಟಿಯಾಲ ಫೆಡರೇಷನ್ ಕಪ್

ವರ್ಷ ಸ್ಥಳ ಈವೆಂಟ್ ಅಂಕಗಳು ಫಲಿತಾಂಶ
೨೦೧೭ ಜೆಎಲ್ಎನ್ ಸ್ಟೇಡಿಯಂ, ನವದೆಹಲಿ ಹೆಪ್ಟಾಥ್ಲಾನ್ ೫೮೯೭ ಚಿನ್ನ

ಏಷ್ಯನ್ ಗೇಮ್ಸ್

ವರ್ಷ ಸ್ಥಳ ಈವೆಂಟ್ ಅಂಕಗಳು ಫಲಿತಾಂಶ
೨೦೧೪ ಇಂಚಿಯೋನ್ ಏಷ್ಯನ್ ಮೈನ್ ಸ್ಟೇಡಿಯಂ ಹೆಪ್ಟಾಥ್ಲಾನ್ ೫೧೭೮ ೫ ನೇ ಸ್ಥಾನ[೧೦]
೨೦೧೮ ಗೆಲೋರಾ ಬುಂಗ್ ಕರ್ಣೊ ಸ್ಟೇಡಿಯಂ ಹೆಪ್ಟಾಥ್ಲಾನ್[೧೧] ೬೦೨೬[೧೨] ಚಿನ್ನ

೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಗೆಲುವಿಗೆ ಬಹುಮಾನಗಳು

ಉಲ್ಲೇಖಗಳು

ಬದಲಾಯಿಸಿ
  1. ಇಂಡಿಯನ್ ಎಕ್ಸ್‌ಪ್ರೆಸ್‌
  2. "News Bug". Archived from the original on 2019-04-04. Retrieved 2019-03-22.
  3. https://wikiwiki.in/tv-actor-actress/swapna-barman/
  4. ಇಂಡಿಯನ್ ಎಕ್ಸ್ಪ್ರೆಸ್ ಸಪ್ನಾ ಬರ್ಮನ್
  5. Sports star The Hindu
  6. Sports scholarship
  7. Sportskeeda
  8. Updated: Thursday, August 24, 2017, 17:43 (IST)Swapna Barman
  9. https://www.dofaq.co/us/swapna-barman
  10. "ಆರ್ಕೈವ್ ನಕಲು". Archived from the original on 2020-09-24. Retrieved 2019-03-22. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  11. Indiatoday
  12. ಟೈಮ್ಸ್ ಆಫ್ ಇಂಡಿಯಾ, ಸ್ವಪ್ನಾ ಬರ್ಮನ್
  13. ಟೈಮ್ಸ್ ಆಫ್ ಇಂಡಿಯಾ