ಭೂಗೋಳ ಶಾಸ್ತ್ರದಲ್ಲಿ ಸ್ಥಳ ಅಥವಾ ಜಾಗ ಪದಗಳನ್ನು ಭೂಮಿಯ ಮೇಲ್ಮೈ ಮೇಲಿನ ಅಥವಾ ಬೇರೆಡೆಯ ಒಂದು ಬಿಂದು ಅಥವಾ ಪ್ರದೇಶವನ್ನು ಗುರುತಿಸಲು ಬಳಸಲಾಗುತ್ತದೆ. ಸ್ಥಳ ಪದವು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ನಿಶ್ಚಿತತೆಯನ್ನು ಸೂಚಿಸುತ್ತದೆ. ಹಲವುವೇಳೆ ಜಾಗ ಪದವು ಅಸ್ಪಷ್ಟ ಗಡಿರೇಖೆಯಿರುವ ಘಟಕವನ್ನು ಸೂಚಿಸುತ್ತದೆ ಮತ್ತು ಜ್ಯಾಮಿತಿಗಿಂತ ಹೆಚ್ಚಾಗಿ ಸ್ಥಳ ಗುರುತು ಮತ್ತು ಸ್ಥಳಭಾವದ ಮಾನವ ಅಥವಾ ಸಾಮಾಜಿಕ ಲಕ್ಷಣಗಳ ಮೇಲೆ ಅವಲಂಬಿಸುತ್ತದೆ.[೧]

ಸಾಪೇಕ್ಷ ಸ್ಥಳವನ್ನು ಮತ್ತೊಂದು ಸ್ಥಾನದಿಂದ ಸ್ಥಳಾಂತರ ಎಂದು ವಿವರಿಸಲಾಗುತ್ತದೆ. ಒಂದು ಉದಾಹರಣೆ ಎಂದರೆ "ಸಿಯಾಟಲ್‍ನಿಂದ ೩ ಮೈಲಿ ವಾಯವ್ಯಕ್ಕೆ". ಒಂದು ಸ್ಥಳ, ವಾಸಸ್ಥಳ, ಅಥವಾ ಜನರಿರುವ ಪ್ರದೇಶವು ಸುನಿರ್ದಿಷ್ಟ ಹೆಸರನ್ನು ಹೊಂದಿರುವ ಸಾಧ್ಯತೆ ಇರುತ್ತದೆ ಆದರೆ ಸುನಿರ್ದಿಷ್ಟವಲ್ಲದ ಗಡಿಯು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಉದಾಹರಣೆಗೆ, ಲಂಡನ್ ಒಂದು ಕಾನೂನುಬದ್ಧ ಗಡಿಯನ್ನು ಹೊಂದಿದೆ, ಆದರೆ ಇದು ಸಾಮಾನ್ಯ ಬಳಕೆಯೊಂದಿಗೆ ಸಂಪೂರ್ಣವಾಗಿ ಹೊಂದುವ ಸಾಧ್ಯತೆಯಿರುವುದಿಲ್ಲ. ಒಂದು ಪಟ್ಟದೊಳಗಿನ ಒಂದು ಪ್ರದೇಶ, ಉದಾಹರಣೆಗೆ ಲಂಡನ್‍ನಲ್ಲಿ ಕೋವೆಂಟ್ ಗಾರ್ಡನ್ ಕೂಡ ಅದರ ವಿಸ್ತಾರದ ಸಂಬಂಧ, ಬಹುತೇಕ ಯಾವಾಗಲೂ ಸ್ವಲ್ಪ ಅಸ್ಪಷ್ಟತೆಯನ್ನು ಹೊಂದಿರುತ್ತದೆ. ನಿರ್ದಿಷ್ಟ ಸ್ಥಳವನ್ನು ಕಾರ್ಟೇಸಿಯನ್ ನಿರ್ದೇಶಾಂಕ ವ್ಯವಸ್ಥೆಯಲ್ಲಿ ಅಕ್ಷಾಂಶ ಮತ್ತು ರೇಖಾಂಶದ ನಿರ್ದಿಷ್ಟ ಜೋಡಿಯನ್ನು ಬಳಸಿ ಹೆಸರಿಸಲಾಗುತ್ತದೆ - ಉದಾಹರಣೆಗೆ, ಗೋಳಾಕಾರದ ನಿರ್ದೇಶಾಂಕ ವ್ಯವಸ್ಥೆ ಅಥವಾ ಅಂಡಾಭ ಆಧಾರಿತ ವ್ಯವಸ್ಥೆಯಲ್ಲಿ. ಉದಾಹರಣೆಗೆ, ವೆನೆಜ಼ುಯೇಲಾದಲ್ಲಿನ ಮಾರಾಕಾಯ್ಬೊ ಸರೋವರದ ಸ್ಥಾನವನ್ನು ಸರಿಸುಮಾರಾಗಿ 9.80°N (ಅಕ್ಷಾಂಶ), 71.56°W (ರೇಖಾಂಶ) ಸ್ಥಳ ಎಂದು ವ್ಯಕ್ತಪಡಿಸಬಹುದು. ಆದರೆ, ಇದು ಕೇವಲ ಒಂದು ರೀತಿಯಾಗಿದೆ. ಪರ್ಯಾಯ ರೀತಿಗಳೂ ಇವೆ ಉದಾಹರಣಗೆ ಜಿಯೊ ಹ್ಯಾಕ್.

ಆದರೆ ನಿರ್ದಿಷ್ಟ ಸ್ಥಳವು ಬಹಳ ಸ್ವಲ್ಪವೇ ನೈಜ ಅರ್ಥದ ಪದವಾಗಿದೆ, ಏಕೆಂದರೆ ಯಾವುದೇ ಸ್ಥಳವನ್ನು ಬೇರೆ ಯಾವುದಕ್ಕಾದರೂ ಸಾಪೇಕ್ಷವಾಗಿ ವ್ಯಕ್ತಪಡಿಸಬೇಕಾಗುತ್ತದೆ. ಉದಾಹರಣೆಗೆ, ರೇಖಾಂಶವೆಂದರೆ ಪ್ರಧಾನ ಮಧ್ಯಾಹ್ನ ರೇಖೆಯ ಪೂರ್ವದ ಅಥವಾ ಪಶ್ಚಿಮದ ಕೋನಮಾನಗಳ ಸಂಖ್ಯೆಯಾಗಿದೆ. ಪ್ರಧಾನ ಮಧ್ಯಾಹ್ನರೇಖೆಯು ಗ್ರೀನ್‍ವಿಚ್, ಲಂಡನ್ ಮೂಲಕ ಸಾಗಲು ಯಾದೃಚ್ಛಿಕವಾಗಿ ಆರಿಸಲಾಗುವ ಒಂದು ರೇಖೆ. ಹಾಗೆಯೇ, ಅಕ್ಷಾಂಶವೆಂದರೆ ಸಮಭಾಜಕ ರೇಖೆಯ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವ ಕೋನಮಾನಗಳ ಸಂಖ್ಯೆಯಾಗಿದೆ. ಅಕ್ಷಾಂಶ ಮತ್ತು ರೇಖಾಂಶಗಳನ್ನು ಈ ರೇಖೆಗಳಿಗೆ ಸಾಪೇಕ್ಷವಾಗಿ ವ್ಯಕ್ತಪಡಿಸಲಾಗುವುದರಿಂದ, ಅಕ್ಷಾಂಶ ಮತ್ತು ರೇಖಾಂಶದಲ್ಲಿ ವ್ಯಕ್ತಪಡಿಸಲಾಗುವ ಸ್ಥಳವು ವಾಸ್ತವವಾಗಿ ಒಂದು ಸಾಪೇಕ್ಷ ಸ್ಥಳವಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. Simandan, Dragos (April 2011). "Making sense of place through multiple memory systems". New Zealand Geographer. 67 (1): 21–24. doi:10.1111/j.1745-7939.2011.01194.x.
"https://kn.wikipedia.org/w/index.php?title=ಸ್ಥಳ&oldid=855832" ಇಂದ ಪಡೆಯಲ್ಪಟ್ಟಿದೆ