ಸದಸ್ಯ:Snikhiilchavan/sandbox
ಭಾರತದ ಶ್ರೀಮಂತ ದೇವಸ್ಥಾನಗಳು
೧) ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ
ಯಾವುದಾದರು ಕೆಲಸ ಕಾರ್ಯವನ್ನು ಗಣಪತಿಯನ್ನು ನಮಿಸಿ ಮಾಡಿದರೆ ಯಾವುದೇ ಅಡಚಣೆ ಇರುವುದಿಲ್ಲ ಏಕೆಂದರೆ ಗಣೇಶನನ್ನು ವಿಘ್ನವಿನಾಷಕನೆಂದು ಕರೆಯುತ್ತಾರೆ. ಅದಕ್ಕೆ ಮೊದಲು ಗಣೇಶನ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಮುಂಬೈ ನಗರದ ಪ್ರಭಾದೆವಿಯಲ್ಲಿದೆ. ಎರಡು ಶತಮಾನಗಳ ಕಾಲ ಹಳೆಯದಾದ ಈ ದೇವಸ್ಥಾನ ಭಕ್ತರ ಇಚ್ಚೆಗಳನ್ನು ನೆರವೆರಿಸುತ್ತೆದೆ. ಮುಂಬೈ ನಗರವು ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳಿಗೆ ಸಾಕ್ಷಿಯಾಗಿವೆ. ಅವು ಕೇವಲ ಜನಪ್ರಿಯ ಅಲ್ಲದೆ ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿದೆ. ಶ್ರೀ ವಿನಾಯಕ ದೇವಾಲಯವನ್ನು ಸುಮಾರು ೧೮೦೧,೧೯ ನವೆಂಬರ್ ರಂದು ಪವಿತ್ರವಾದ ಸ್ಥಳವೆಂದು ಸರ್ಕಾರ ನಿರ್ಮಿಸಿದ ದಾಖಲೆಯಲ್ಲಿ ಸೂಚಿಸಲಾಗಿದೆ. ನಮ್ಮ ಹಿಂದು ಕ್ಯಾಲೆಂಡರ್ ಪ್ರಕಾರ ಇದು ಕಾರ್ತಿಕ ಸುದ್ದ ಚತುರ್ದಶಿಯಂದು ಬೀಳುತ್ತದೆ. ಈ ದೇವಸ್ಥಾನವನ್ನು ಲೇಟ್.ಲಕ್ಷ್ಮಣ್ ವೀತು ಪಾಟೀಲ್ ಎಂಬ ವೃತ್ತಿಪರ ಗುತ್ತಿಗೆದಾರ ಲೇಟ್.ದೇವು ಬಾಯಿ ಅವರ ಸೂಚನೆಗಳ ಪ್ರಕಾರ ಮತ್ತು ಅವರ ಆರ್ಥಿಕ ಬೆಂಬಲದಿಂದ ದೇವಾಲಯವನ್ನು ನಿರ್ಮಿಸಿದರು. ದೇವು ಬಾಯಿಯವರು ಓರ್ವ ಶ್ರೀಮಂತ ಮಹಿಳೆಯಾಗಿದ್ದರು. ಅವರು ಅಗ್ರಿ ಸಮಾಜದವರು ಅವರಿಗೆ ಮಕ್ಕಳಿರಲಿಲ್ಲ. ದೇವಸ್ಥಾನದ ನಿರ್ಮಾಣದ ಕಲ್ಪನೆ ಲೇಟ್.ದೆವುಬಾಯಿ ಅವರಿಗೆ ಪ್ರಾರ್ಥನೆ ವೇಳೆ ಬಂತು ಅಗಾ ಅವರು ನಮ್ರತೆಯಿಂದ ಗಣೇಶನಿಗೆ "ನಾನು ಮಗುವನ್ನು ಪಡೆಯಲು ಸಾಧ್ಯವಿಲ್ಲ ಅದಕ್ಕೆ ಮಕ್ಕಳಿಲ್ಲದ ಇತರ ಹೆಂಗಸರು ನಿನ್ನ ಸನ್ನಿಧಾನಕ್ಕೆ ಭೇಟಿ ಮಾಡಿ ನಿನ್ನನ್ನು ಪ್ರಾರ್ಥಿಸಿದರೆ ಅವರಿಗೆ ಮಗುವನ್ನು ಹೆರುವ ಭಾಗ್ಯವನ್ನು ಕೊಡು ಎಂದು ದೇವುಬಾಯಿ ಕೇಳುತ್ತಾರೆ" ದೇವಾಲಯದ ಯಶಸ್ವಿ ಮತ್ತು ಐತಿಹಾಸ ನೋಡಿದರೆ ಗಣೇಶನು ದೇವುಬಾಯಿ ಅವರ ಧಾರ್ಮಿಕ ಆಲೋಚನೆಗಳನ್ನು ಮತ್ತು ಕಾರ್ಯಗಳನ್ನು ಪರಿಗಣಿಸಿ ವಿನಮ್ರ ವಿನಂತಿಯನ್ನು ಒಪ್ಪಿಕೊಂಡಿದ್ದಾನೆ ಎಂದೆನಿಸುತ್ತದೆ.
ದೇವಾಲಯದ ರಚನೆ ಮೊದಲು ಚಿಕ್ಕ ವಸತಿಯಿಂದ ಕೂಡಿತ್ತು ಅದರಲ್ಲಿ ಎರಡೂವರೆ ಅಡಿ ಅಗಲವಿರುವ ಶ್ರೀ ಸಿದ್ಧಿವಿನಾಯಕನ ಕಲ್ಲಿನ ವಿಗ್ರಹವನ್ನು ಸ್ಥಾಪಿಸಲಾಗಿತ್ತು. ಅದರ ಸೊಂಡಿಲು ಬಲಭಾಗಕ್ಕೆ ತಿರುಗಿತ್ತು. ಆ ವಿಗ್ರಹವು ನಾಲ್ಕು ಕೈಗಳನ್ನು(ಚತುರ್ಭುಜ) ಹೊಂದಿದ್ದವು. ಮೇಲಿನ ಬಲ ಕೈಯಲ್ಲಿ ಕಮಲವನ್ನು, ಎಡ ಕೈಯಲ್ಲಿ ಕೊಡಲಿ ಮತ್ತು ಕೆಳಗಿರುವ ಬಲ ಕೈಯಲ್ಲಿ ಪವಿತ್ರ ಮಣಿಗಳು ಎಡ ಕೈಯಲ್ಲಿ ಮೋದಕ ಬಟ್ಟಲನ್ನು ಹೊಂದಿದ್ದವು ಮತ್ತು ವಿಗ್ರಹದ ಎಡ ಹಾಗು ಬಲಭಾಗದಲ್ಲಿ ವೃದ್ಧಿ ಮತ್ತು ಸಿದ್ಧಿ ಎಂಬ ಎರಡು ಪಾವಿತ್ರ್ಯತೆ, ಏಳಿಗೆ, ಐಶ್ವರ್ಯಗಳನ್ನು ಸೂಚಿಸುವ ದೇವತೆಗಳು, ಸ್ಥಾನವನ್ನುಪಡೆದಿವೆ. ಆ ವಿಗ್ರಹದ ಹಣೆಯ ಮೇಲೆ ಶಿವನ ಮೂರನೇ ಕಣ್ಣನ್ನು ಹೋಲುವ ಪವಿತ್ರವಾದ ಕಣ್ಣಿದೆ.
ದೇವಾಲಯದ ಆರ್ಥಿಕ ಮಾಹಿತಿಗಳು
- ಶ್ರೀ ಸಿದ್ದಿವಿನಾಯಕ ದೇವಾಲಯ- ಮುಂಬೈ
- ಸರಾಸರಿ ವಾರ್ಷಿಕ ಆದಾಯ- 46 ಕೋಟಿ ರೂ
- ನಿಗದಿತ ಠೇವಣೆ ರೂ- 152 ಕೋಟಿ
- ನಡೆಸುತ್ತಿರುವ ಸಂಸ್ಥೆ- ಸಿದ್ಧಿ ವಿನಾಯಕ ಮಂದಿರ ಟ್ರಸ್ಟ್
- ದೇವಸ್ಥಾನ ಟ್ರಸ್ಟ್ ಸಿಇಓ- ಹನುಮಂತ್.ಬಿ.ಜಗಪತ್ ರವರು.
೨. ಸೋಮನಾಥ ದೇವಾಲಯ
ಸೌರಾಷ್ಟ್ರಧೀಷಾ ವಿಸಾಧೆ, ಅತಿರಮ್ಯೇ ,ಜ್ಯೋತಿರ್ ಮಯಾ ,ಚಂದ್ರಕಲಾ ವಂತಸಂ | ಜೈ ಸೋಮನಾಥ್ | ಜೈ ಸೋಮನಾಥ್
ಶ್ರೀ ಸೋಮನಾಥ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಮೊದಲನೆಯದಾಗಿದೆ. ಅದರ ಒಂದು ಆಯಕಟ್ಟಿನ ಸ್ಥಳ ಭಾತರದ ಪಶ್ಚಿಮ ಕರಾವಳಿಯಲ್ಲಿದೆ(ಸೌರಾಷ್ಟ್ರ-ಗುಜರಾತ್) ಪ್ರಾಚೀನ ಭಾರತೀಯ ಸಂಪ್ರದಾಯಗಳು ಸೋಮನಾಥ್ ದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ, ಚಂದ್ರನ (ಚಂದ್ರದೇವರು)ಬಿಡುಗಡೆಯೊಂದಿಗೆ ಹೊಂದಿದೆ. ಚಂದ್ರನು ದಕ್ಷ ಪ್ರಜಾಪತಿಯ ಇಪ್ಪತ್ತೇಳು ಹೆಣ್ಣುಮಗಳನ್ನು ಮದುವೆಯಾಗಿದ್ದ. ಆದರೆ ಅವನು ರೋಹಿಣಿಯನ್ನು ಬಹಳ ಇಷ್ಟಪಡುತ್ತಿದ್ದ ಮತ್ತು ಇತರೆ ರಾಣಿಯನ್ನು ನಿರ್ಲಕ್ಷಿಸಿದ. ಇದರಿಂದ ಕೋಪಗೊಂಡ ದಕ್ಷ ಪ್ರಜಾಪತಿ ಚಂದ್ರನಿಗೆ ನಿನ್ನ ಬೆಳಕಿನ ಶಕ್ತಿ ಕಳೆದು ಹೋಗಲ ಎಂದು ಶಾಪಿಸಿದನು ತಪ್ಪಿನ ಅರಿವಾಗಿ ಚಂದ್ರನು ಕ್ಷಮೆಯಾಚಿಸಿದ ಅದರ ಪ್ರಕಾರ ದಕ್ಷನು ಸಲಹೆ ನೀಡಿ ಪ್ರಭಾಸ ತೀರ್ಥಕ್ಕೆ ಹೋಗಿ ಶಿವನನ್ನು ಪೂಜಿಸು ಎಂದ. ನಂತರ ಚಂದ್ರನ ಪೂಜೆಯನ್ನು ಮೆಚ್ಚಿ ಭಗವಾನ್ ಶಿವನು (ಚಂದ್ರ ದೇವನನ್ನು) ಷಾಪದಿಂದ ಮುಕ್ತಿ ನೀಡಿದನು. ಪೌರಾಣಿಕ ಸಂಪ್ರದಾಯಗಳ ಪ್ರಕಾರ ಚಂದ್ರದೇವನು ಚಿನ್ನದ ಸೋಮನಾಥ ದೇವಾಲಯವನ್ನು ರಾವಣ ಬೆಳ್ಳಿಯ ದೇವಾಲಯವನ್ನು ಮತ್ತು ಶ್ರೀಕೃಷ್ಣ ಶ್ರೀಗಂಧದ ದೇವಾಲಯವನ್ನು ಶಿವನಿಗೆ ನಿರ್ಮಿಸಿದ್ದಾರೆ ಎಂದು ಹೇಳುತ್ತದೆ. ಧಾರ್ಮಿಕ ಸ್ಥಳವಾದ ಸೋಮನಾಥ ದೇವಾಲಯವು ಹತ್ತು ಸಾವಿರ ಹಳ್ಳಿಗಳು ಬೆಳೆಯುವ/ಉಪಯೋಗಿಸುವ ಉತ್ಪನ್ನಗಳಷ್ಟುಗಳಿಸುತ್ತಿತ್ತು.ಏಕೆಂದರೆ ಜ್ಯೋತಿರ್ಲಿಗಗಳಲ್ಲಿ ಸೋಮನಾಥ ದೇವಾಲಯ ಮೊದಲು ಮತ್ತು ಅದರ ಜೊತೆ ಇಲ್ಲಿ ಶಿವನು 'ಸ್ವಯಂಭೂವಾಗಿದ್ದಾನಿ' ಅಂದರೆ ಉದ್ಭವ ಮೂರ್ತಿಯಾಗಿದ್ದಾನೆ ಮತ್ತು ಅಲ್ಲಿಗೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ ಮತ್ತು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಕೋಟ್ಯಾಂತರ ಭಕ್ತರ ಕಾಣಿಕೆಯಿಂದಾಗಿ ಅಲ್ಲಿ ಕೋಟ್ಯಾಂತರ ರೂಪಾಯಿಗಳು ಸಂಗ್ರಹವಾಗುತ್ತದೆ ಅದರಿಂದ ಆ ಸ್ಥಳ ಶ್ರೀಮಂತ ಸ್ಥಳವಾಗಿದೆ. ಇದರ ಜೊತೆಗೆ ಸೂರ್ಯ ದೇವನನ್ನು ಪೂಜಿಸುವ ಹೊರದೇಶದವರು ಸಹ ಅಲ್ಲಿನ ಹುಂಡಿಗೆ ಕಾಣಿಕೆ ಅರ್ಪಿಸಿ ದೇವಾಲಯವನ್ನು ಶ್ರೀಮಂತರಾಗಿಸಿದ್ದಾರೆ. ಶತಮಾನದವರೆಗೆ ಮುಸ್ಲಿಮರ ದಾಳಿಯಿಂದ ಸೋಮನಾಥ ದೇವಾಲಯವೂ ಅದರ ಅಂದವನ್ನು ಕಟ್ಟಿಕೊಂಡಿತ್ತು. ಆದರೆ ಜನರ ಚೈತನ್ಯದಿಂದ ಪ್ರತಿ ಬಾರಿಯ ದಾಳಿಯ ನಂತರ ಮರು ನಿರ್ಮಾಣ ಮಾಡಲಾಗುತ್ತಿತ್ತು. ಆಧುನಿಕ ದೇವಾಲಯವನ್ನು ಸರ್ದಾರ್ ಪಟೇಲ್ ಅವರ ನಿರ್ಧಾರದಿಂದ ಕಟ್ಟಲಾಯಿತು. ಅವರು ಹಾಳಾದ ದೇವಸ್ಥಾನಗಳ ಅವಷೇಷಗಳನ್ನು ಕಂಡು(ನವೆಂಬರ್ ೧೩ ೧೯೪೭ ರಂದು) ಮರುನಿರ್ಮಾಣ ಕಾರ್ಯಕ್ಕೆ ಅವರ ಒಲವನ್ನು ವ್ಯಕ್ತಪಿಡಿಸಿದರು. ನಂತರ ಅಂದಿನ ಭಾರತದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ೧೧ಮೇ ೧೯೫೧ ರಂದು ದೇವಸ್ಥಾನದಲ್ಲಿ ಪ್ರಾಣ-ಪ್ರತಿಸ್ಥಾಪನೆ ಮಾಡಿದರು.
೩. ಪದ್ಮನಾಭ ಸ್ವಾಮಿ ದೇವಸ್ಥಾನ
ಈ ದೇವಾಲಯವು ಕೇರಳದ ರಾಜಧಾನಿಯಲ್ಲಿದೆ. ತಿರುವನಂತಪುರಂನ ಕೇಂದ್ರ ಭಾಗದಲ್ಲಿದೆ. ಈ ದೇವಾಲಯ ದ್ರಾವಿಡ ಶೈಲಿ ಕಟ್ಟಲಾಗಿದೆ. ಇದು ನೆರೆಯ ರಾಜ್ಯವಾದ ತಮಿಳುನಾಡಿನ ದೇವಸ್ಥಾನಗಳ ಶೈಲಿಯನ್ನು ಬಿಂಬಿತವಾಗುತ್ತದೆ. ಕನ್ಯಾಕುಮಾರಿಯಲ್ಲಿ ನೆಲೆಸಿರುವ ಆದಿಕೇಶವ ಪೆರುಮಾಳ್ ದೇವಸ್ಥಾನದ ಪ್ರತಿಕೃಉತಿಯಾಗಿದೆ. ಅಲ್ಲಿರುವ ಪ್ರಮುಖ ದೇವತೆ ವಿಷ್ಣು ಸರ್ಪದ ಮೇಲೆ ಅವನ ನಿಲುವು ಅನಂತ ಷಯಣದ ಹಾಗೆ ಅಂದರೆ ಸನಾತನ ಯೋಗದ ನಿದ್ರೆಯ ಹಾಗೆ ಬಿಂಬಿತವಾಗುತ್ತದೆ. ಶ್ರೀ ಪದ್ಮನಾಭಸ್ವಾಮಿ ತಿರುವಾಂಕೂರಿನ ರಾಜ ಮನೆತನದ ರಕ್ಷಕ ದೈವವಾಗಿದೆ. ನಾಮ ಮಾತ್ರದ ಮಹಾರಾಜನಾದ ತಿರುವಾಂಕೂರು ಮೂಲದ ತಿರುನಾಳ್ ರಾಮ ವರ್ಮಾ ಅವರು ದೇವಸ್ಥಾನದ ಟ್ರಸ್ಟೀ ಹಾಗು ಶ್ರೀ ಪದ್ಮನಾಭದಾಸನಾಗಿದ್ದಾರೆ. ದೇವಾಲಯದ ಪ್ರವೇಷ ಸಾಲಿನಲ್ಲಿ ಒಂದು ಘೋಷಣೆ ಮಾಡಲಾಗಿದೆ. ಅದು ದೇವಸ್ಥಾನದ ಗರ್ಭ ಗುಡಿಗೆ ಹಿಂದುಗಳನ್ನು ಮಾತ್ರ ಬಿಡುವುದಾಗಿ ಹಾಗೆಯೇ ಭಕ್ತರು ಕಟ್ಟು ನಿಟ್ಟಾಗಿ ಉಡುಗೆ ಸಂಕೇತವನ್ನು ಪಾಲಿಸಬೇಕು ಎಂದು ಬರೆಯಲಾಗಿದೆ.
ಇತ್ತಿಚಿನ ಸಾಧನೆಯ ಪ್ರಕಾರ ದೇವಾಲಯದ ನೆಲಮಾಳಿಗೆಯಲ್ಲಿ(ನೆಲದಡಿಯ ಕೋಣೆಗಳು) ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಸಂಪತ್ತು ಆ ದೇವಸ್ಥಾನದಲ್ಲಿ ಲಭಿಸಿದೆ. ಆದ್ಹರಿಂದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ(ಬಹುಷಃ ಇದು ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನ.
ದೇವರ ಮೊಸಳೆ
ಇಪ್ಪತ್ತನೇ ಶತಮಾನವು ವಿಜ್ಞಾನ ಯುಗವಾಗಿದೆ. ವಿಜ್ಞಾನದ ಸತ್ಯಶೋಧನೆ ಪ್ರಕ್ರಿಯೆಗಳು ಅದರ ಉತ್ಕೃಷ್ಟ ಸ್ಥಿತಿಗೆ ಬಂದ ಕಾಲ. ಧಾರ್ಮಿಕ ವಿಶ್ವಾಸಗಳಿಗೂ ವೈಜ್ಞಾನಿಕ ಉತ್ಪನ್ನಗಳಿಗೂ ಏನು ಸಂಬಂಧ ಎಂದೂ ಕೇಳಬಹುದು. ಮೂಢನಂಬಿಕೆಗಳೆಂದು ಅಲ್ಲಗಳೆಯುವ ಧಾರ್ಮಿಕ ಭಾವನೆಗಳಿಗೂ ಆಚಾರ ಅನುಷ್ಟಾನಗಳಿಗೂ ಕೆಲವೊಂದು `ಪ್ರಶ್ನೆ’ಗಳು ಮಾತ್ರ ಉಳಿದುಕೊಂಡಿವೆ. ಕೆಲವೊಂದು ದೇವಾಲಯ ಮತ್ತು ದೇವರುಗಳಿಗೆ ಮೃಗ ಪಕ್ಷಿಗಳೊಂದಿಗೆ ನಿಕಟವಾದ ಸಂಬಂಧವನ್ನು ಕಾಣುತ್ತೇವೆ. ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ದಿನದಂದು ಪ್ರದಕ್ಷಿಣೆ ಬರುವ ಗಿಡುಗನು ಇನ್ನೂ ಒಂದು ನಿಗೂಢ ರಹಸ್ಯವಾಗಿಯೇ ಉಳಿದಿದೆ. ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವು ವಿಶಾಲವಾದ ಒಂದು ಕೆರೆಯ ಮಧ್ಯದಲ್ಲಿದೆ. ಈ ಕೆರೆಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರು ತುಂಬಿಕೊಂಡಿರುತ್ತದೆ. ಕೆರೆಯಲ್ಲೊಂದು ಮೊಸಳೆ! ದೇವರ ಮೊಸಳೆ! ಕೆರೆಯ ಬಡಗು ಭಾಗದಲ್ಲಿ ಇದರ ವಾಸಸ್ಥಳವಾದ ಎರಡು ಗುಹೆಗಳಿವೆ. ಕೆರೆಯಲ್ಲಿ ಸಂಚರಿಸದೇ ಇರುವಾಗ, ಮೊಸಳೆಯು ಈ ಗುಹೆಗಳಲ್ಲಿ ವಿಶ್ರಾಂತಿಯನ್ನು ಪಡೆಯುತ್ತದೆ. ಭಕ್ತಜನರಿಗೆ ಕಂಡರೂ ಕಾಣಬಹುದು. ಬಹಳ ಸುಲಭದಲ್ಲಿ ಕಂಡು ಸಂತೋಷಗೊಂಡ ಬಹಳಷ್ಟು ಯಾತ್ರಿಕರೂ ಇದ್ದಾರೆ. ಅದೇ ರೀತಿ ಬಹಳಷ್ಟು ಪ್ರಯತ್ನಪಟ್ಟು, ಹಗಲಿಡೀ ಕಾದು ನಿಂತು, ಮೊಸಳೆಯನ್ನು ಕಾಣದೆ ಹಿಂತಿರುಗಿದವರೂ ಬಹಳಷ್ಟು ಜನರು ಇದ್ದಾರೆ. ಈ ಮೊಸಳೆಗೆ ಮೊದಲು ಇನ್ನೊಂದು ಮೊಸಳೆ ಕೆರೆಯಲ್ಲಿ ಇದ್ದುದಾಗಿ ಹಿರಿಯರು ಹೇಳುತ್ತಾರೆ. ಇದು `ಬಬಿಯಾ’ ಎಂದು ಕೆರೆಯ ದಡದಲ್ಲಿ ನಿಂತು ಗಟ್ಟಿಯಾಗಿ ಕೂಗಿದರೆ, ಶರವೇಗದಲ್ಲಿ ಕರೆದವರ ಸನಿಹಕ್ಕೆ ಬರುತ್ತಿತ್ತು. ಬಂದಾಗ ಎನಾದರೂ ತಿನ್ನಲು ಸಿಗುತ್ತಿತ್ತು. ಎಷ್ಟೋ ಜನರು ಕೈಯಲ್ಲಿಯೇ ಆಹಾರವನ್ನು ಕೊಟ್ಟವರೂ ಇದ್ದಾರೆ ಎಂದು ಸುಮಾರು ಎಪ್ಪತ್ತು ವರ್ಷ ಪ್ರಾಯದ ಸ್ಥಳವಾಸಿಯೊಬ್ಬರು ಹೇಳಿದರು. ಒಂದು ದಿನ ಐದು ಜನ ಒಳಗೊಳ್ಳುವ ಒಂದು ತಂದ ಕೊಲ್ಲೂರಿಗೆ ಪಯಣ ಮಾಡುತ್ತಿದ್ದರು. ದೇವಸ್ಥಾನದ ಕುರಿತು ಕೇಳಿದ ಇವರು ಶ್ರೀ ಕ್ಷೇತ್ರಕ್ಕೂ ಆಗಮಿಸಿದ್ದರು. ಇವರೆಲ್ಲರೂ ತಮಿಳರಾಗಿದ್ದರು. ಸಾಯಂಕಾಲ 5 ಗಂಟೆಯ ಹೊತ್ತು! ವಿಜ್ಞಾನಿಗಳೂ, ಬುದ್ಧಿಶಾಲಿಗಳೂ ಸೇರಿದ್ದ ತಂಡವಾಗಿತ್ತು. ದೇವಾಲಯದ ಬಗ್ಗೆ ವಿವರಣೆಯನ್ನು ಕೊಟ್ಟಮೇಲೆ ಕೆರೆಯಲ್ಲಿರುವ ಮೊಸಳೆಯ ಬಗ್ಗೆ ಹೇಳಿದೆವು. ಅದರಲ್ಲೊಬ್ಬರು ಈ ರೀತಿ ಪ್ರಶ್ನಿಸಿದರು ‘ಸಮೀಪದಲ್ಲಿ ಹೊಳೆಯೋ ಸಮುದ್ರವೋ ಇದೆಯೇ?’ ನಾವು ಇಲ್ಲ ಎಂದು ಉತ್ತರ ಕೊಟ್ಟೆವು. ಎಷ್ಟು ಮೊಸಳೆಗಳಿವೆ ಎಂದು ಪ್ರಶ್ನಿಸಿದ್ದಕ್ಕೆ 'ಒಂದೇ ಇರುವುದು'ಎಂದೆವು. ನಮ್ಮ ಉತ್ತರವನ್ನು ಕೇಳಿದಾಕ್ಷಣ ಆ ವಿದ್ವಾಂಸ ಗಕ್ಕನೆ ನಕ್ಕು ಬಿಟ್ಟ. ಅವನು ಹೇಳಿದ, ‘ನೋಡೀ, ಮೊಸಳೆ ಒಂದು ಕ್ರೂರ ಪ್ರಾಣಿ, ಅದು ಒಂದು ಮಾಂಸಾಹಾರಿ, ಅದೂ ಅಲ್ಲದೆ ಯಾವುದೇ ಪ್ರಾಣಿಯು ಒಂಟಿಯಾಗಿ ಜೀವಿಸಲಾರದು. ನೀವು ಜನರನ್ನು ಆಕರ್ಷಿಸುವುದಕ್ಕೆ ಬೇರೆ ಏನಾದರೂ ವಿಷಯಗಳನ್ನು ಹೇಳಿ, ಅವರನ್ನು ನಂಬಿಸಿ, ಆದರೆ ಇದು ಸರಿಯಲ್ಲ’ ಎಂದು ಬಿಟ್ಟ. ಮೊಸಳೆಯ ಫೋಟೋವನ್ನು ತಂದು ತೋರಿಸಿದೆವು. ಅದಕ್ಕೆ ಅವನು “ಇಂತಹ ಫೋಟೋ ಎಷ್ಟು ಬೇಕಾದರೂ ನಾನು ತೋರಿಸುತ್ತೇನೆ ” ಎಂದ. ನಮಗೆ ಉತ್ತರ ಇರಲಿಲ್ಲ. ಮುಖಭಂಗವಾಯಿತು. ಇನ್ನೇನು ಮಾಡುವುದೆಂದು ಯೋಚಿಸುತ್ತಾ ಇದ್ದಾಗ, ದೇವಸ್ಥಾನದ ಅರ್ಚಕರು, ‘ಅದೋ ಮೊಸಳೆ’ ಎಂದು ಬೆರಳು ತೋರಿಸಿ, ಬಂದವರ ಗಮನವನ್ನು ಅತ್ತ ಸೆಳೆದರು. ಬಹಳ ರಭಸದಿಂದಲೇ ಬಂದ ಮೊಸಳೆಯು ದೇವಸ್ಥಾನದ ಬಡಗು ಬದಿಯಲ್ಲಿ ಬಂದು ನಿಂತಿತು. ಆಮೇಲೆ ಐದು ನಿಮಿಷಗಳ ಕಾಲ ಅದರ ಕಸರತ್ತಾಗಿತ್ತು. ನೀರಿನ ಮೇಲೆ ನಿಲ್ಲುವುದು, ಬೀಳುವುದು, ಹೊರಳಾಡುವುದು ಇತ್ಯಾದಿ. ನಾವೆಂದೂ ಮೊಸಳೆಯನ್ನು ಈ ಸ್ಥಿತಿಯಲ್ಲಿ ಕಂಡಿರಲಿಲ್ಲ. ತನ್ನ ಕಸರತ್ತನ್ನು ನಿಲ್ಲಿಸಿ ನೇರವಾಗಿ ಗುಹೆಯೊಳಗೆ ಹೋಯ್ತು. ಮೊಸಳೆಯ ಕಸರತ್ತನ್ನು ಕಂಡು ತಮಿಳರ ತಂಡವು ದಂಗಾಗಿ ಬಿಟ್ಟಿತು. ಮಾತುಗಳನ್ನಾಡಲೂ ಅವರಿಂದ ಆಗಲಿಲ್ಲ. ನೇರವಾಗಿ ಶ್ರೀ ನಡೆಯಲ್ಲಿ ಕಣ್ಣೀರು ಸುರಿಸಿ ಪ್ರಾರ್ಥಿಸಿದರು. ‘ತಪ್ಪಾಯ್ತು, ಕ್ಷಮಿಸು’ ಎಂದು ಪದೇ ಪದೇ ಆ ವಿದ್ವಾಂಸನು ದೇವರಿಗೆ ಅಡ್ಡಬಿದ್ದು ಗೊಣಗುತ್ತಿದ್ದನು.
೪. ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯ
ವೈಷ್ಣೋ ದೇವಿ ಅಥವಾ ಮಾತಾ ರಾಣಿ ಮತ್ತು ವೈಷ್ಣವಿ, ಹಿಂದೂ ದೇವಿ ದುರ್ಗಾಮಾತಾ ಅವರ ಅಭಿವ್ಯಕ್ತಿಯಾಗಿದೆ. ಭಾರತದಲ್ಲಿ 'ಮಾ' ಅಥವಾ 'ಮಾತಾ' ಸಾಮಾನ್ಯವಾಗಿ ತಾಯಿ ಅನ್ನುವ ಪದವನ್ನು ಬಿಂಬಿಸುತ್ತದೆ. ಹಾಗೂ ಆ ಪದಗಳನ್ನು ವೈಷ್ಣೋ ದೇವಿಗೆ ಸಂಬಂಧಿಸಿ ಬಳಸಲಾಗುತ್ತಿದೆ. ವೈಷ್ಣೋ ದೇವಿ ಮಂದಿರವು ಹಿಂದೂ ದೇವಸ್ಥಾನವಾಗಿ ಮತ್ತು ಹಿಂದೂ ದೇವತೆಗೆ ಮೀಸಲಾಗಿದೆ. ಈ ದೇವಾಲಯವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸೇರಿದ-ತ್ರಿಕೂಟ ಪರ್ವತದಲ್ಲಿದೆ. ಈ ಪವಿತ್ರ ಗುಹೆ ಪ್ರತಿವರ್ಷ ಲಕ್ಷಾಂತರ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ವಾಸ್ತವವಾಗಿ ಈ ಪವಿತ್ರ ದೇವಾಲಯಕ್ಕೆ ವಾರ್ಷಿಕವಾಗಿ ಒಂದು ಕೋಟಿಗೂ ಮೀರಿದ ಯಾತ್ರಿಗರು ಭೇಟಿ ನೀಡುತ್ತಾರೆ. ಏಕೆಂದರೆ ಹಿಂದೆಗೆಯದ ನಂಬಿಕೆ ಭಕ್ತರನ್ನು ಈ ಸ್ಥಳಕ್ಕೆ ದೇಶದಿಂದ ಮತ್ತು ವಿದೇಶಗಳಿಂದ ಕರೆಸಿಕೊಳ್ಳುತ್ತದೆ. ತಾಯಿಯ ಪವಿತ್ರ ಗುಹೆ ೫೨೦೦ಅಡಿ ಎತ್ತರದಲ್ಲಿದೆ ಕತ್ರಾದಲ್ಲಿರುವ ಮೂಲ ಷಿಬಿರದಿಂದ ದೇವಾಲಯಕ್ಕೆ ಸುಮಾರು 12 ಕಿಲೋಮೀಟರ್ ಚಾರಣ ಕೈಗೊಳ್ಳಬೇಕು. ಪವಿತ್ರ ಗುಹೆಯ ಒಳಗೆ ಮೂರು ನೈಸರ್ಗಿಕ ಕಲ್ಲಿನ ರಚನೆಗಳ ಆಕಾರದಲ್ಲಿ "ಪಿಂಡಿಗಳಿವೆ". ಗುಹೆ ಒಳಗೆ ಯಾವುದೇ ಪ್ರತಿಮೆಗಳು ಅಥವಾ ವಿಗ್ರಹಗಳು ಇಲ್ಲದರ್ಶನ ವರ್ಷದ ಎಲ್ಲಾ ತಿಂಗಳಲ್ಲಿಯೂ ಅವಕಾಷವಿದೆ. ೧೯೮೬ ರಂದು ಶ್ರೀ ಮಾತಾ ವೈಷ್ಣೋದೇವಿ ಶ್ಹ್ರಿನ್ ಬೋರ್ಡ್ ರಚನೆಯಾಯಿತು. ದೇವಾಲಯದ ಸಮಿತಿ ಯಾತ್ರಿಗಳಿಗೆ ಆರಾಮದಾಯಕ ಮತ್ತು ತೃಪ್ತಿ ಕಲ್ಪಿಸು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಅಲ್ಲಿ ಬರುವ ಅರ್ಪಣೆಗೆಳು, ಕಾಣಿಕೆಗಳು, ದೇಣಿಗೆಗಳಿಂದ ದೇವಾಲಯದ ಸಮಿತಿ ಯಾತ್ರಿಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕೊಡಲು ಮುಂದುವರಿಸಿದೆ.
ದೇವಾಲಯದ ಆರ್ಥಿಕ ಮಾಹಿತಿಗಳು
- ಮಾತಾ ವೈಷ್ಣೋದೇವಿ- ಜಮ್ಮು
- ಸರಾಸರಿ ಒಂದು ತಿಂಗಳ ಆದಾಯ- 40 ಕೋಟಿ ರೂ.
- ಸರಾಸರಿ ವಾರ್ಷಿಕ ಆದಾಯ- 500 ಕೋಟಿ
- ನಡೆಸುತ್ತಿರುವ ಸಂಸ್ಥೆ- ಶ್ರೀಮಾತಾ ವೈಷ್ಣೋದೇವಿ ಶ್ಹ್ರಿನ್ ಬೋರ್ಡ್
೫ ಸಾಯಿ ಬಾಬಾ ದೇವಾಲಯ
ಶಿರಡಿ ಸಾಯಿ ಬಾಬಾ(೧೮೩೮ -೧೯೧೮) ಅವರು ಭಾರತೀಯ ಗುರು ಮತ್ತು ಯೋಗಿ ಅವರು ಅನುಯಾಯಿಗಳು ಅವರು ದೇವರ ಅವತಾರವೆಂದು ಪರಿಗಣಿಸುತ್ತಾರೆ. ಕೆಲವು ಹಿಂದೂ ಭಕ್ತರು ಸಾಯಿ ಬಾಬಾ ಅವರನ್ನು ಶಿವ ಅಥವಾ ದತ್ತಾತ್ರೇಯ ಅವತಾರವೆಂದು ನಂಬುತ್ತಾರೆ. ಇನ್ನೂ ಇತರರು ಅವರನ್ನು ಸದ್ಗುರು ಎಂದು ನಂಬುತ್ತಾರೆ. ಅನೇಕ ಕಥೆಗಳು ಮತ್ತು ಪ್ರತ್ಯೇಕ್ಷದರ್ಷಿಗಳ ದಾಖಲೆಗಳು ಅವರ ಪವಾಡ ಪ್ರದರ್ಷನವನ್ನು ಹೇಳುತ್ತದೆ. ಅವರು ವಿಶ್ವದ ಹಲವು ಭಾಗಗಳಲ್ಲಿ ಸುಪಂಚಿತ, ಆದರೆ ಭಾರತದಲ್ಲಿ ಅವರನ್ನು ಹೆಚ್ಚು ವಿಶೇಷವಾಗಿ ಪೂಜಿಸುತ್ತಾರೆ. ಷಿರಡಿಯ ಶ್ರೀ ಸಾಯಿಬಾಬಾ ಅವರು ೧೮೩೮ ರಿಂದ ೧೯೧೮ ರವರೆಗೆ ಇದ್ದರು, ಅವರ ನಿಜವಾದ ಹೆಸರು, ಜನ್ಮಸ್ಥಳ ಮತ್ತು ಹುಟ್ಟಿದ ದಿನಾಂಕ ತಿಳಿದಿಲ್ಲ. ಭಾರತೀಯ ಆಧ್ಯಾತ್ಮಿಕ ಗುರು ಮತ್ತು ಫಕೀರ್ ಧರ್ಮಗಳ ತಡೆಗೋಡೆಗಳನ್ನು ಮೀರಿ ಹಿಂದೂ ಮತ್ತು ಮುಸ್ಲಿಂ ಅನುಯಾಯಿಗಳು ಅವರನ್ನು ಮಹಾನ್ ಎಂದು ಪರಿಗಣಿಸಿದ್ದರು. ಅವರ ತತ್ವಸಸ್ತ್ರಾ ಬೇರುಬಿಟ್ಟ "ಶ್ರಾದ್ಧ" ಅಂದರೆ ನಂಬಿಕೆ ಮತ್ತು "ಸಬೂರಿ" ಅಂದರೆ ಸಹಾನುಭತಿ, ಬಹಳ ಪ್ರಸಿದ್ದಿ.
ಸರಿಸುಮಾರು ೧೯ ವರ್ಷ ಹುಡುಗನಿದ್ದಾಗಿ ಶಿರಡಿಗೆ ಬಂದಿದ್ದ ಸಾಯಿ ಬಾಬು ಅವರು ಸಾಯುವ ತನಕ ಅಲ್ಲಿಯೇ ಇದ್ದರೆಂದು ಜನರು ಹೇಳುವರು. ಅವರು ಕಂಡೋಬ ದೇವಾಲಯದಲ್ಲಿ ಆಶ್ರಯಾ ಪಡೆದಿದ್ದರು. ಅಲ್ಲಿ ಬಾಬಾ ಅವರನ್ನು ಮಹಲ್ ಸಾಪತಿ(ಕಂಡೋಬ ದೇವಾಲಯದ ಪೂಜಾರಿ) 'ಸಾಯಿ' ಎಂದು ಕರೆದಿದ್ದರು. ಇಂದು ಶ್ರೀ ಸಾಯಿಬಾಬಾ ಭಕ್ತರು ಭಾರತ ಮತ್ತು ವಿದೇಶದಲ್ಲಿ ಲಕ್ಷಾಂತರ ಜನ ಇದ್ದಾರೆ. ಈ ತಾಣ ತೀರ್ಥಯಾತ್ರೆಯ ಸ್ಥಳಗಳಾದ ಬೆತ್ ಲೆಹೆಮ್, ಜೆರುಸಲೆಂ ಮತ್ತು ವಾರಣಾಸಿಯಂತೆ ಮಾರ್ಪಟ್ಟಿದೆ. ದಿನಕ್ಕೆ ಸುಮಾರು ೨೫,೦೦೦ ಯಾತ್ರಿಗಳು ಹಾಗೂ ಹಬ್ಬ ಮತ್ತು ರಜಾದಿನಗಳಲ್ಲಿ ನೂರು ಸಾವಿರ ಜನರು ಬರುವರು. ಭಾರತದಲ್ಲಿ ೨,000 ಪ್ರಮುಖ ಸಾಯಿ ದೇವಾಲಯಗಳುಂಟು ಮತ್ತು ೧೫೦ ದೇವಾಲಯಗಳು ದೂರದ ಸ್ಥಳಗಳಾದ ಕೆನಡಾ ಮತ್ತು ಕೀನ್ಯಾ, ಸಿಂಗಪುರ ಮತ್ತು ಇಂಗ್ಲೆಂಡ್ ದೇಶಗಳಲ್ಲಿವೆ.
ದೇವಾಲಯದ ಆರ್ಥಿಕ ಮಾಹಿತಿಗಳು
- ಶ್ರೀ ಶಿರಡಿ ಸಾಯಿ ಬಾಬಾ ಮಂದಿರ- ಮಹಾರಾಷ್ಟ್ರ
- ಸರಾಸರಿ ದೈನಂದಿನ ಆದಾಯ- ೬೦ ಲಕ್ಷ ರೂ
- ಸರಾಸರಿ ವಾರ್ಷಿಕ ಆದಾಯ- ೨೧೦ ಕೋಟಿ ರೂ
- ನಡೆಸುತ್ತಿರುವ ಸಂಸ್ಥೆ- ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್
- ಆದಾಯ ೬೮ ಕೋಟಿ ರೂ (೨೦೦೪) ಯಿಂದ ಏರಿಕೆ ಕಂಡಿದೆ.
- ದೇವಾಲಯವು ದೇಣಿಗೆ ರೂಪದಲ್ಲಿ ಚಿನ್ನದ ಸಿಂಹಾಸನ, ಚಿನ್ನ, ಬೆಳ್ಳಿ ,ವಜ್ರಗಳು, ಮತ್ತು ಇತರ ಕೊಠಡಿಗಳ ನಿರ್ಮಾಣ ಮತ್ತು ಇತರ
ಮೂಲ ಸೌಕರ್ಯಗಳನ್ನು ಮಾಡಿದೆ ಅದರ ಮೌಲ್ಯ ಸುಮಾರು ೩೦೦ ಕೋಟಿ ರೂ/-ಗಳು.
೬ ತಿರುಮಲ ಶ್ರೀ ವೆಂಕಟೇಷ್ವರ ದೇವಾಲಯ
ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿ ಪ್ರಸಿದ್ಧ ವೈದಿಕ ದೇವಾಲಯವಾಗಿದೆ. ಈ ಬೆಟ್ಟವು ಏಳು ಶಿಕರವನ್ನು ಒಳಗೊಂಡಿದೆ ಇದು ಅಧಿಶೇಷಣ ಏಳು ತಲೆಗಳನ್ನು ಪ್ರತಿನಿಧಿಸುವುದರಿಂದ 'ಶೇಷಛಲಂ' ಎಂದು ಹೆಸರು ಗಳಿಸಿದೆ. ಏಳು ಶಿಖರಗಳು ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವ್ರಿಷಾಬಾದ್ರಿ, ನರಾಯನಾದ್ರಿ ಮತ್ತು ವೆಂಕಟಾದ್ರಿ ಎಂದು ಕರೆಯಲಾಗುತ್ತದೆ. ದೇವಾಲಯವು ವೆಂಕಟಾದ್ರಿ ಬೆಟ್ಟದಲ್ಲಿದೆ ಆದರಿಂದ ಅದಕ್ಕೆ ವೆಂಕಟಾಚಲ ಅಥವಾ ವೆಂಕಟ ಹಿಲ್ ಎಂದು ಕರೆಯಲ್ಪಡುತ್ತದೆ ಹಾಗು "ಸೆವೆನ್ ಹಿಲ್ಸ್ ದೇವಾಲಯ" ಎಂದು ಕರೆಯಲಾಗುತ್ತದೆ. ದೇವಾಲಯದ ದೈವವಾದ ವೆಂಕಟೇಶ್ವರ,ವಿಷ್ಣುವಿನ ಒಂದು ಅವತಾರ. ಬಾಲಾಜಿ, ಗೋವಿಂದ, ಮತ್ತು ಶ್ರೀನಿವಾಸ : ವೆಂಕಟೇಶ್ವರ ಇತರ ಹೆಸರುಗಳಿಂದ ಕರೆಯಲಾಗುತ್ತದೆ.
ತಿರುಮಲ ತಿರುಪತಿ ಬಾಲಾಜಿ ಪ್ರಪಂಚದ ಅತ್ಯಂತ ಯಾತ್ರಿಗಳು ಭೇಟಿ ಮಾಡುವ ದೇವಾಲಯವಾಗಿದೆ. ದೈನಂದಿನ ಸುಮಾರು ೫೦,೦೦೦ ಭಕ್ತರು ಬರುತ್ತಾರೆ. (ಟಿಟಿಡಿ) ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್, ದೇವಸ್ಥಾನವನ್ನು ನಿರ್ವಹಿಸುತ್ತದೆ. ಜುಲೈ ೨, ೨೦೧೧ ರಲ್ಲಿ ಭಾರತದ ರಾಷ್ಟ್ರಪತಿ ಪ್ರಪಂಚದ ಅತಿದೊಡ್ಡ ಉಚಿತ ಊಟ ಸಂಕೀರ್ಣವನ್ನು ತಿರುಮಲದಲ್ಲಿ ಉದ್ಘಾಟಿಸಿದರು. ಟಿಟಿಡಿ ಸಂಪೂರ್ಣವಾಗಿ ಸುಮಾರು ೫೦,೦೦೦/- ಕೋಟಿ ರೂಪಾಯಿ ಸ್ವತ್ತನ್ನು ವಿಶ್ವದೆಲ್ಲೆಡೆ ಹೊಂದಿದೆ. ತಿರುಮಲ ಪರ್ವತವು ಸಮುದ್ರ ಮಟ್ಟದಿಂದ ೮೫೩ ಮೀಟರ್ ಮತ್ತು ಪ್ರದೇಷದಲ್ಲಿ ಸುಮಾರು ೨೩ ಕಿ.ಮೀ. ವಿಸ್ತಾರವಾಗಿದೆ. ಇದು ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ದೇಣಿಗೆ ದೃಷ್ಟಿಯಿಂದ ಮತ್ತು ಹೆಚ್ಚು ಯಾತ್ರಿಗಳು ಭೇಟಿ ನೀಡುವ ಆರಾಧನಾ ಸ್ಥಳವಾಗಿದೆ. ಈ ದೇವಾಲಯಕ್ಕೆ ಸುಮಾರು ೫೦,೦೦೦ ದಿಂದ ೧,೦೦,೦೦೦ ಭಕ್ತರು ಭೇಟಿ ನೀಡುತಾರೆ ಮತ್ತು ವಿಶೇಷ ಸಂದರ್ಭಗಳಲ್ಲಿ (ಬ್ರಹ್ಮೋತ್ಸವ) ೫೦,೦೦,೦೦ ಗಿಂತಲು ಹೆಚು ಭಕ್ತರು ಭೇಟಿ ನೀಡುತ್ತಾರೆ. ೨೦೧೨ರ ಶ್ರೀರಾಮಯಂದು ೫.೭೩ ಕೋಟಿ ರೂ. ವೆಂಕಟೇಶ್ವರ ಹುಂಡಿಗೆ ಸೇರಿತ್ತು, ಇದು ಒಂದು ದಿನದಲ್ಲಿ ಬಂದ ಅತಾಂತ್ಯ ಹೆಚ್ಚು ಹಣವಾಗಿದೆ ಮತ್ತು ವಾರ್ಷಿಕ ಆಧಾಯ ೮೩೨ ಕೋತಿ ರೂ. ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಕೆ.ಬಪಿರಾಜು ಹೇಳುವರು.
ಉಲ್ಲೇಖಗಳು
ಬದಲಾಯಿಸಿ೧) http://www.siddhivinayak.org/temple_history.asp
೨) http://luxpresso.com/news-lifestyle/maharashtras-richest-temples/6294
೩) http://www.shaivam.org/siddhanta/sp/spjyoti_somnath.htm
೪) http://sreepadmanabhaswamytemple.org/history.htm
೫) http://ananthapuratemple.com/kn/history-4
೬) http://hindupad.com/10-richest-temples-in-india-list-of-ten-richest-indian-temples/
೭) https://www.maavaishnodevi.org/mata_vaishno_devi_ji.aspx
೮) https://www.facebook.com/SUPERPOWERINDIA/posts/169840923157018
೯) http://en.wikipedia.org/wiki/Sai_Baba_of_Shirdi
೧೦) http://en.wikipedia.org/wiki/Tirumala_Venkateswara_Temple