ರಂಗಭೂಮಿಯನ್ನು ತೀವ್ರವಾಗಿ ಪ್ರೀತಿಸುವ ಕಿರುತೆರೆಯ ನಟ, ವೆಂಕಟಾದ್ರಿ, ೨೭೬೦ ಪ್ರದರ್ಶನ ಕಂಡಿರುವ, 'ಕೃಷ್ಣ ಸಂಧಾನ'ವೆಂಬ ಧಾರಾವಾಹಿಯ ಕೃಷ್ಣನಾಗಿ ಅಭಿನಯಿಸಿ, ಕರ್ನಾಟಕದ ರಸಿಕರಿಗೆ ಚಿರಪರಿಚಿತರಾಗಿದ್ದಾರೆ. ಝೀವಾಹಿನಿಯವರ ಪ್ರಸ್ತುತಿ, 'ರಾಧಾಕಲ್ಯಾಣ'ವೆಂಬ ಧಾರಾವಾಹಿನಿಯಲ್ಲಿ [] 'ಪೂರ್ಣಚಂದ್ರ ಶಾಸ್ತ್ರಿ' ಎಂಬ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡ ವೆಂಕಟಾದ್ರಿಯವರಿಗೆ ಬಹಳ ಜನಪ್ರಿಯತೆ ಸಿಕ್ಕಿತು.

ವೆಂಕಟಾದ್ರಿಯವರಿಗೆ 'ರಾಧಾಕಲ್ಯಾಣ'ದ ತಂದೆಯ ಪಾತ್ರದ ಒಂದು ವಿಶಿಷ್ಠ ವ್ಯಕ್ತಿತ್ವದ ಅನುಭವಾಯಿತು. ಹೆತ್ತವಳಿಗಿಂದ ಸಾಕುಮಗಳು ಮೆಚ್ಚುಗೆಯಾಗುತ್ತಾಳೆ. ಹೆತ್ತವಳು 'ಮಾಡೆಲಿಂಗ ವ್ಯಾಮೋಹ'ಕ್ಕೆ ಬಲಿಯಾಗಿ ತನ್ನ ತನ ಕಳೆದುಕೊಂಡ ಸಮಯದಲ್ಲಿ ಸಾಕುಮಗಳು ತಂದೆಗೆ ಬಲು ಪ್ರಿಯ ವ್ಯಕ್ತಿಯಾಗುವ ಪ್ರಸಂಗ ಒದಗಿಬರುತ್ತದೆ. ವೆಂಕಟಾದ್ರಿಯವರು ಸಂಗೀತ ನಿರ್ದೇಶಕರೆಂದು ಗುರುತಿಸಿಕೊಂಡಿದ್ದಾರೆ. []

ತಂದೆ, ಸೈಕಲ್ ಸುಬ್ಬರಾಯರು. ತಾಯಿ, ಜಯಲಕ್ಷ್ಮಿ ಗಮಕಿಯಾಗಿದ್ದವರು. ತಾಯಿಯವರ ಒಡನಾಟದಿಂದ ಅವರು ಹಾಡುತ್ತಿದ್ದ, ರನ್ನ ,ಪೊನ್ನ, ಲಕ್ಷ್ಮೀಶ, ಕುಮಾರವ್ಯಾಸನ ಹಾಡುಗಳು ಚಿಕ್ಕವಯಸ್ಸಿನಿಂದಲೇ ಬಾಯಿಪಾಠವಾಗಿತ್ತು. ಪತ್ನಿ, 'ಶ್ರೀಮತಿ ಕುಶಲಾ', ಮಗ 'ಜಯಂತ್', ಎಂ.ಎಸ್ಸಿ ಮಾಡಿ ಕೆಲಸದಲ್ಲಿದ್ದಾನೆ. ಮಗಳು 'ಹಿರಣ್ಯಾ', ಬಿಕಾಂ ಪರೀಕ್ಷೆಯ ಬಳಿಕ 'ಕಂಪೆನಿ ಸೆಕ್ರೆಟರಿ ಕೋರ್ಸ್' ಮಾಡುತ್ತಿದ್ದಾಳೆ. ವೆಂಕಟಾದ್ರಿಯವರು ಬಿ.ಕಾಂ ಪದವಿಯಬಳಿಕ 'ಕಿರ್ಲೋಸ್ಕರ್ ಕಾರ್ಖಾನೆ'ಗೆ ಸೇರಿದರು. ಕಿರ್ಲೋಸ್ಕರ್ ತಂಡ ಕಾರ್ಮಿಕರ ೮೦-೮೦ ರ ಕಾಲದಲ್ಲಿ 'ರಂಗಯುಗ'ವೆಂದು ಹೆಸರಾದ ಸಮಯ. ಕಾರ್ಮಿಕ ರಂಗಭೂಮಿಯ ವತಿಯಿಂದ ಸುಮಾರು ಹೊಸನಾಟಕಗಳನ್ನು ಆಡಿದರು. ೧೯೮೫೬ ರಲ್ಲಿ ಡಿ.ಡಿ.ಯಲ್ಲಿ ಪ್ರಸಾರವಾದ, ತ.ರಾ.ಸು.ರವರ ಕುರಿತ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ಮೊದಲ ಮೆಗಾ ಸೀರಿಯಲ್

ಬದಲಾಯಿಸಿ
  • 'ಬೆಳದಿಂಗಳಾಗಿ ಬಾ'. ಎಂಬ ಧಾರಾವಾಹಿ ವೆಂಕಟಾದ್ರಿಯವರ ಮೊಟ್ಟಮೊದಲ ಧಾರಾವಾಹಿ. ಇದನ್ನು ಶೇಶಾದ್ರಿಯವರು ನಿರ್ದೇಶಿಸಿದ್ದರು. ಇದಾದನಂತರ,
  • ಪ್ರೀತಿಯಿಲ್ಲದ ಮೇಲೆ
  • ಮನೆಯೊಂದು ಮೂರು ಬಾಗಿಲು,
  • ಮಳೆ ಬಿಲ್ಲು
  • ಮನ್ವಂತರ
  • ಮುಕ್ತಾ ಮುಕ್ತಾ
  • ಮಹಾಪರ್ವ ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ವಿ.ಆರ್.ಎಸ್. ಪಡೆದು ನಟನಾರಂಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು

ಬದಲಾಯಿಸಿ

ನಟನೆಗೆ ಬಹಳ ಸಮಯ ಬೇಕಾಗಿದ್ದಿದ್ದರಿಂದ, ೧೯೮೯ ರಲ್ಲಿ 'ಕಿರ್ಲೋಸ್ಕರ್ ಕಂಪೆನಿಯ ವೃತ್ತಿಜೀವನ'ದಿಂದ ವಿ.ಆರ್.ಎಸ್. ತೆಗೆದುಕೊಂಡರು. ರಾಮಕೃಷ್ಣ ಮಠದ ಸ್ವಾಮಿಜಿ, 'ಶ್ರೀ. ಪುರುಷಮಾನಂದ' ರವರು ೭ ನೆಯ ವರ್ಷದಲ್ಲಿ ವೆಂಕಟಾದ್ರಿಯವರಿಗೆ, ಸಂಗೀತ-ರಂಗಭೂಮಿಯತ್ತ ಪರಿಚಯಿಸಿದರು. ತಂದೆ ಸೈಕಲ್ ಸುಬ್ಬರಾಯರು. ಅವರ ಒಡನಾಟದಲ್ಲಿ ಸುಪ್ರಸಿದ್ಧ ಸಾಹಿತಿಗಳಾದ ಮಾಸ್ತಿ, ಅನಕೃ ಸೇರಿದಂತೆ ಹಲವು ಮಹನೀಯರ ಪರಿಚಯವಾಯಿತು.

ನಾರಾಯಣಗುರುವಿನ ಬಗ್ಗೆ ಒಂದು ಧಾರಾವಾಹಿ

ಬದಲಾಯಿಸಿ

'ರಾಜಶೇಖರ ಕೊಟ್ಯಾನ್', ನಿರ್ಮಿಸಿ, ನಿರ್ದೇಶಿಸಿದ 'ಬ್ರಹ್ಮರ್ಷಿ ನಾರಾಯಣ ಗುರು'ವೆಂಬ,[] ತುಳು ಭಾಷೆಯ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಭಾಷೆಯನ್ನು ಅರ್ಥಮಾಡಿಕೊಂಡು ಸರಿಯಾಗಿ ಬಳಸಲು, ತುಳು ಭಾಷೆಯನ್ನು ಕಲಿತರು. ಈ ಸಂದರ್ಭದಲ್ಲೇ ಹಲವಾರು ಕ್ರಾಂತಿಕಾರಿ ಕವಿಗಳ ಪರಿಚಯವನ್ನೂ ಓದುವುದರ ಮೂಲಕ ಪಡೆದರು. []

ಉಲ್ಲೇಖಗಳು

ಬದಲಾಯಿಸಿ
  1. 'Radha Kalyana' New Feat
  2. 'ಕಾದಂಬರಿಗಳು ಚಲನಚಿತ್ರವಾಗಲಿ': ವೆಂಕಟಾದ್ರಿ[ಶಾಶ್ವತವಾಗಿ ಮಡಿದ ಕೊಂಡಿ]
  3. 'ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ಎಂಬ ಭಕ್ತಿಪ್ರಧಾನ ಚಿತ್ರ'
  4. Preparations for maiden Tulu film on Brahmashri Narayana Guru[ಶಾಶ್ವತವಾಗಿ ಮಡಿದ ಕೊಂಡಿ]

-ಜೂನ್, ೧೯,೨೦೧೪, 'ಸುಧಾಪತ್ರಿಕೆ', ಪುಟ-೪೯