ವಿಕ್ರಮ್ ಸೇಠ್
ವಿಕ್ರಮ್ ಸೇಠ್ ( ೨೦ ಜೂನ್ ೧೯೫೨) ಭಾರತೀಯ ಕವಿ ಹಾಗು ಕಾದಂಬರಿಕಾರ. ಇವರು ಬಹಳಷ್ಟು ಕವನಗಳು ಹಾಗು ಕಾದಂಬರಿಗಳನ್ನು ಬರೆದಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ - ಪದ್ಮಶ್ರೀ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪ್ರವಾಸಿ ಭಾರತೀಯ ಸನ್ಮಾನ, ಡಬ್ಲು ಹೆಚ್ ಸ್ಮಿತ್ ಸಾಹಿತ್ಯ ಪ್ರಶಸ್ತಿ, ಮತ್ತು ಕ್ರಾಸ್ವರ್ಡ್ ಪುಸ್ತಕ ಪ್ರಶಸ್ತಿ. ಸೇಠ್ ರವರ 'ಮ್ಯಾಪಿಂಗ್' ಹಾಗು 'ಬೀಸ್ಟ್ಲಿ ಟೇಲ್ಸ್' ಕವನಸಂಕಲನಗಳು ಭಾರತೀಯ ಆಂಗ್ಲ ಭಾಷಾ ರಚನೆಗಳಿಗೆ ಅಮೂಲ್ಯವಾದ ಕೊಡುಗೆಗಳು.
ಹಿನ್ನೆಲೆ
ಬದಲಾಯಿಸಿವಿಕ್ರಮ್ ಸೇಠ್ ೨೦ ಜೂನ್ ೧೯೫೨ರಂದು ಪಾಟ್ನಾದಲ್ಲಿ ಪ್ರೇಮ್ ಹಾಗು ಲೈಲ ದಂಪತಿಗಳಿಗೆ ಜನಿಸಿದನು. ಇವರ ತಾಯಿ ಲೈಲ ಸೇಠ್ ದೆಹಲಿಯ ಹೈಕೋರ್ಟಿನ ಪ್ರಥಮ ಮುಖ್ಯ ನ್ಯಾಯಮೂರ್ತಿ ಯಾಗಿದ್ದರು. ಇವನು ಬಾಲ್ಯವನ್ನು ಪಟ್ಟಣದಲ್ಲಿ ಕಳೆದ. ಸೆಂಟ್ ಝೇವಿಯರ್ಸ್ ಪ್ರೌಢಶಾಲೆಯಲ್ಲಿ ಇವನು ತಮ್ಮ ಶಾಲಾಶಿಕ್ಷಣವನ್ನು ಮುಗಿಸಿದ.[೧] ತಮ್ಮ ಯೌವ್ವನವನ್ನು ಲಂಡನ್ ನಲ್ಲಿ ಕಳೆದು ೧೯೮೭ರಲ್ಲಿ ಭಾರತಕ್ಕೆ ಹಿಂತಿರುಗಿದನು.
ಡೂನ್ ಕಾಲೇಜಿನಲ್ಲಿ ಓದುತ್ತಿರುವ ಅವಧಿಯಲ್ಲಿ ವಿಕ್ರಮ್ ತಮ್ಮ ಶಾಲಾಪತ್ರಿಕೆಯಾದ ಡೂನ್ ಸ್ಕೂಲ್ ವೀಕ್ಲಿಯ ಪ್ರಧಾನ ಸಂಪಾದಕನಾಗಿದ್ದನು.[೨] ಅಲ್ಲಿ ಶಿಕ್ಷಣ ಮುಗಿಸಿದ ನಂತರ ಇಂಗ್ಲೆಂಡ್ ತಮ್ಮ ಉನ್ನತ ಶಿಕ್ಷಣ ಮುಂದುವರೆಸಿದ. ಅಲ್ಲಿ ಅವನಿಗೆ ಕವನಗಳನ್ನು ಬರೆಯಲು ಮತ್ತು ಚೈನಿಸ್ ಭಾಷೆಯನ್ನು ಕಲಿಯಲು ಇಷ್ಟಪಡುತ್ತಾನೆ. ಆಕ್ಸ್‌ಫರ್ಢನ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ನಂತರ ಇವನು ಕ್ಯಾಲಿಫೋನಿಯಾದ ಸ್ಟಾನ್‌ಫ್ರೋಢ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಓದಿದ್ದನು. ಅಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಕಲಿತ. ತದನಂತರ ಚೀನಾದ ನನ್ಜ್‌ಂಗ್ ವಿಶ್ವವಿದ್ಯಾಲಯದಲ್ಲಿ ಚೈನೀಸ್ ಕವಿತೆಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದನು.
ವಿಕ್ರಮ್ ರವರ ತಮ್ಮ ಶಾಂತಂ ಬೌದ್ಧಧರ್ಮದ ಧ್ಯಾನಪ್ರಕಾರಗಳನ್ನು ಭಾರತದಾದ್ಯಂತ ಪ್ರಚಾರ ಮಾಡುವುದರಲ್ಲಿ ತೊಡಗಿದ್ದನು. ತಂಗಿ ಆರಾಧನ, ಪ್ರಖ್ಯಾತ ಚಲನಚಿತ್ರ ನಿರ್ಮಾಪಕಿ, ಅವಳು ಆಸ್ಟ್‌ರಿಯನ್ ಡಿಪೋಮಟ್‌ರವನ್ನು ಮದುವೆಯಾಗಿ, ದೀಪಾ ಮೆಹ್ತಾರವರ ಅರ್ತ್ ಮತ್ತು ಫೈಯರ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಕೀರ್ತಿ ಹೊಂದಿದವರು.
ವೃತ್ತಿಜೀವನ
ಬದಲಾಯಿಸಿಅಂತರಾಷ್ಟ್ರೀಯ ಮಟ್ಟದಲ್ಲಿ ಇವರನ್ನು ಒಳ್ಳೆಯ ಬರಹಗಾರ ಮತ್ತು ಕವಿ ಎಂದು ಗುರುತಿಸಲಾಗಿದೆ. ವಿಕ್ರಮ್ ಸೇಥ್ ಮೂರು ಕಾದಂಬರಿಗಳನ್ನು, ಮತ್ತು ಆರು ಕವನದ ಪುಸ್ತಕವನ್ನು ಪ್ರಕಟಿಸುತ್ತಾನೆ. ೧೯೮೬ ರಲ್ಲಿ ದಿ ಗೋಲ್ಡ್‌ನ್ ಗೇಟ್ ಎನ್ನುವ ಕಾದಂಬರಿಯನ್ನು ಬರೆದನು. ನಂತರ 'ಎ ಸ್ಯೂಟಬಲ್ ಬಾಯ್' ಎನ್ನುವ ಕಾದಂಬರಿಗೆ ಡಬಲ್‌ಯೂ.ಎಚ್.ಪ್ರಶಸ್ತಿ ಬಂದಿದೆ. ಮತ್ತು ಎ ಸ್ಯೂಟಬಲ್ ಬಾಯ್ ಎನ್ನುವ ಕಾದಂಬರಿಯನ್ನು ೨೦೧೬ ರಂದು ಬಿಡುಗಡೆ ಮಾಡಲು ನಿರ್ಧರಿಸುತ್ತಾರೆ.
೧೯೮೦ರಲ್ಲಿ ವಿಕ್ರಮ್ ತಮ್ಮ ಮೊದಲ ಕವನಸಂಕಲನವನ್ನು ಬಿಡುಗಡೆ ಮಾಡಿದನು. ಜನರ ಮನವನ್ನು ಮೆಚ್ಚಿದ ಪುಸ್ತಕ 'ಮ್ಯಾಪ್ಪಿಂಗ್ಸ್' ವಿಕ್ರಮ್ ರವರ ಪ್ರಸಿದ್ಧ ಕವಿತೆ 'ದಿ ಫ಼್ರಾಗ್ ಅಂಡ್ ದಿ ನೈಟಿಂಗೇಲ್' ಎಂಬುದು ಆ ಪುಸ್ತಕದಲ್ಲಿದೆ. ೨೦೦೬ ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭, ಅಂದರೆ ಸಲಿಂಗಕಾಮದ ವಿರುಧ್ದ ಅಭಿಯಾನದ ನಾಯಕನಾಗಿದ್ದನು.[೩] ಅವರ ತಾಯಿ ವಿಕ್ರಮ್ ಸೇಥ್‌ನ ಲೈಂಗಿಕತೆಯ ಬಗ್ಗೆ ಬರೆದಿದ್ದಳು.
೨೦೦೫ರಲ್ಲಿ, ಅಸ್ಟ್ರೇಲಿಯನ್ ಪತ್ರಿಕೆಯ, ಗುಡ್ ವಿಕೆಂಡ್ ಎಂಬುದನ್ನು ಹಲವಾರು ಭಾಷೆಗಳಲ್ಲಿ ಓದಿದ್ದಾನೆ ಎಂದು ಒಂದು ಸಂದರ್ಶನದಲ್ಲಿ ವಿವರಿಸಿದ್ದಾನೆ. ಅವು ವೆಲ್ಷ, ಜರ್ಮನ್, ಫ್ರೆಂಚ್, ಇಂಗ್ಲೀಷ್, ಮತ್ತು ಉರ್ದು,ಮೂತಾದ ಭಾಷೆಗಳಲ್ಲಿ... ನಾಸ್ಟಾಲಿಕ್ ಸ್ಕ್ರೀಪ್ಟ್ ಎಂಬುದನ್ನು ಅವರೇ ಓದಿ ಬರೆದಿದ್ದಾನೆ. ಫ್ರ್ಯಾನ್ಸ್ ಶುಬರ್ಟ್‌ರ ಮೂಲಕ ಇವನು ಭಾರತೀಯ 'ಕೂಳಲು ಮತ್ತು ಸೆಲ್ಲೂ' ಮತ್ತು ಜರ್ಮನ್ ಲೈದರ್ ಎನ್ನುವ ಹಾಡನ್ನು ಹಾಡುತ್ತಾನೆ.
ಇವರನ್ನು ಸಂದರ್ಶನ ಮಾಡುವಾಗ, ಸೇಥ್ ಒಳ್ಲೆಯ ಸ್ಥಾನವನ್ನು ಪಡೆಯಲು ಗೈಡ್ಸ್ ಗಾರ್ಡನ್ ಎನ್ನುವ ಸಾಹಿತ್ಯವನ್ನು ನೆನೆಪಿಸಿಕೂಳ್ಳುತ್ತಾನೆ. ಇಂಗ್ಲಾಂಡಿನ ಸ್ಯಾಲ್ಸಬರಿ ಪ್ರದೇಶದ ಬಳಿ ಆಂಗ್ಲ ಕವಿ ಜಾರ್ಜ್ ಹರ್ಬರ್ಟನ ಮನೆಯನ್ನು ಕೊಂಡು, ಅದನ್ನು ಸರಿ ಪಡಿಸಿ ಅದರಲ್ಲಿ ವಾಸಿಸುತ್ತಾನೆ. ಅಲ್ಲಿನ ಸಾಂಸ್ಕೃತಿಕ ಹಾಗು ಸಾಹಿತಿಕ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸುತ್ತಿದ್ದ ಅದಲ್ಲದೆ ರಾಜಾಸ್ಥಾನದ ಜೈಪುರಿನಲ್ಲೂ ಸಹ ಮನೆಗಳನ್ನು ಇಟ್ಟುಕೊಂಡಿದ್ದ.
ಇವರ ಕಾದಂಬರಿಗಳು ಬಹಳ ಪ್ರಸಿದ್ಧವಾದವು. 'ಅ ಸೂಟಬ್ಲ್ ಬಾಯ್'ಯಿಂದ ₤೨,೫೦,೦೦, 'ಆನ್ ಈಕ್ವಲ್ ಮ್ಯೂಸಿಕ್'ಯಿಂದ ₤೫,೫೦,೦೦೦ ಮತ್ತು 'ಟೂ ಲೈವ್ಸ್'ಯಿಂದ ₤೧.೪ ಮಿಲ್ಲಿಯನ್‌ರಷ್ಟು ವರ್ಷಕ್ಕೆ ಮಾಡಿಕೊಂಡನು. ಇವರ ಕವನಸಂಕಲನ 'ಬೀಸ್ಟ್ಲಿ ಟೇಲ್ಸ್ ಫ್ರಂಮ್ ಇಯರ್ ಆಂಡ್ ದೇರ್' ಎನ್ನುವುದು ಮಕ್ಕಳಿಗಾಗಿ ಬರೆದ ಕವನಸಂಕಲನ ಆ ಕವನದಲ್ಲಿ ಪ್ರಾಣಿಗಳ ಕಥೆಯಿತ್ತು.
ಕಾದಂಬರಿಗಳು
ಬದಲಾಯಿಸಿ- ದಿ ಗೋಳ್ಡನ್ ಗೇಟ್ (೧೯೮೬)
- ಅ ಸೂಟಬ್ಲ್ ಬಾಯ್](೧೯೯೩)
- ಆನ್ ಈಕ್ವಲ್ ಮ್ಯೂಸಿಕ್ (೧೯೯೯)[೪]
- ಅ ಸೂಟಬ್ಲ್ ಗರ್ಲ್ (೨೦೧೬)
ಕವನಸಂಕುಲನಗಳು
ಬದಲಾಯಿಸಿ- ಮ್ಯಾಪ್ಪಿಂಗ್ಸ್ (೧೯೮೦)
- ದ ಹಂಬ್ಲೆ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ (೧೯೮೫)
- ಆಲ್ ಯೂ ಹೂ ಸ್ಲೀಪ್ ಟುನೈಟ್ (೧೯೯೦)
- ಬೀಸ್ಟ್ಲಿ ಟೇಲ್ಸ್ ಫ್ರಂಮ್ ಇಯರ್ ಆಂಡ್ ದೇರ್ (೧೯೯೧)
- ತ್ರೀ ಚೈನೀಸ್ ಪೊಎಟ್ಸ್ (೧೯೯೨)
- ಅಟ್ ಈವನಿಂಗ್ (೧೯೯೩)
- ದ ಫ಼್ರಾಗ್ ಅಂಡ್ ದ ನೈಟಿಂಗೇಲ್ (೧೯೯೪)[೫]
ಪ್ರಶಸ್ತಿಗಳು
ಬದಲಾಯಿಸಿ- ೧೯೮೩ - ಥಾಮಸ್ ಕುಕ್ ಟ್ರಾವೆಲ್ ಬುಕ್ ಪ್ರಶಸ್ತಿ
- ೧೯೮೫ - ದ ಹಂಬ್ಲೆ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ಗೆ ಕಾಮನ್ವೆಲ್ತ್ ಕಾವ್ಯಪ್ರಶಸ್ತಿ
- ೧೯೮೮ -ದಿ ಗೋಳ್ಡನ್ ಗೇಟ್'
- ೧೯೯೪ - ಅ ಸೂಟಬ್ಲ್ ಬಾಯ್ಗೆ ಡಬ್ಲು ಹೆಚ್ ಸ್ಮಿತ್ ಲಿಟೆರರಿ ಅವಾರ್ಡ್
- ೧೯೯೯ - ಆನ್ ಈಕ್ವಲ್ ಮ್ಯೂಸಿಕ್ಗೆ ಕ್ರಾಸವರ್ಡ್ ಬೂಕ್ ಅವಾರ್ಡ್
- ೨೦೦೧ - ಒರ್ಡರ್ ಅಫ್ ಬ್ರಿಟಿಶ್ ಎಂಪೈರ್, ಆಫಿಸರ್
- ೨೦೦೫ - ಪ್ರವಾಸಿ ಭಾರತೀಯ ಸಮ್ಮಾನ
- ೨೦೦೭ - ಸಾಹಿತ್ಯ ಹಾಗು ಶಿಕ್ಷಣಕ್ಕೆ ಪದ್ಮಶ್ರೀ ಪ್ರಶಸ್ತಿ.
ಹೊರಗಿನ ಕೊಂಡಿಗಳು
ಬದಲಾಯಿಸಿಉಲೇಖನಗಳು
ಬದಲಾಯಿಸಿ- ↑ "ಕ್ಸೇವಿಯರ್ ಫ್ರೌಢಶಾಲೆ". Archived from the original on 5 ಮಾರ್ಚ್ 2016. Retrieved 5 ನವೆಂಬರ್ 2015.
- ↑ "'ದಿ ಡೂನ್ ಶಾಲೆ'".
- ↑ "ಸಲಿಂಗಕಾಮ".
- ↑ "ಆನ್ ಈಕ್ವಲ್ ಮ್ಯೂಸಿಕ್".
- ↑ "ಕವನಸಂಕಲನಗಳು"./