ಲೆವ್ ಲ್ಯಾಂಡೌ
ಲೆವ್ ಡೆವಿಡೋವಿಚ್ ಲ್ಯಾಂಡೌ ರವರು ಸೋವಿಯತ್ ಭೌತವಿಜ್ಞಾನಿಯಾಗಿದ್ದು ಸೈದ್ಧಾಂತಿಕ ಭೌತಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಮೂಲಭೂತ ಕೊಡುಗೆಗಳನ್ನು ನೀಡಿದ್ದಾರೆ.[೧][೨][೩] ದ್ರವ ಹೀಲಿಯಂನ ಗುಣಲಕ್ಷಣಗಳನ್ನು ೨.೧೭ ಕೆಲ್ವಿನ್ ಗಿಂತ ಕೆಳಗಿನ ತಾಪಮಾನದಲ್ಲಿ ಹೊಂದಿದ ಅತಿತರಲತೆಯ ಗಣಿತಶಾಸ್ತ್ರದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರು ಭೌತಶಾಸ್ತ್ರದಲ್ಲಿ ೧೯೬೨ ರ ನೊಬೆಲ್ ಪ್ರಶಸ್ತಿ ಪಡೆದರು.
ಜನನ
ಬದಲಾಯಿಸಿಲ್ಯಾಂಡೌರವರು ಜನವರಿ ೨೨, ೧೯೦೮ ರಂದು ಅಜರ್ಬೈಜಾನ್‍ನ ಬಾಕು ಎಂಬಲ್ಲಿ ಯಹೂದಿ ದಂಪತಿಗಳಿಗೆ ಜನಿಸಿದರು.[೪][೫][೬][೭][೮]
ಜೀವನ
ಬದಲಾಯಿಸಿಇವರ ತಂದೆ ಎಂಜಿನಿಯರ್, ತಾಯಿ ವೈದ್ಯೆ. ಬಾಕು ವಿಶ್ವವಿದ್ಯಾಲಯದಲ್ಲಿ ಓದಿ ಲೆನಿನ್‌ಗ್ರಾಡ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿ ಪಿಎಚ್.ಡಿ. ಪದವಿ ಗಳಿಸಿದ (1927). ಖಾರ್ಕೀವ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ವಿದೇಶಗಳಿಗೆ ಪಯಣಿಸಿ ಅಂದಿನ ಘಟಾನುಘಟಿ ಭೌತವಿಜ್ಞಾನಿ ಮ್ಯಾಕ್ಸ್ ಬಾರ್ನ್ (1901-76) ಅವರ ಉಪನ್ಯಾಸಗಳಿಗೆ ಹಾಜರಾದ. ತರುವಾಯ ಕೆಲವು ವರ್ಷ ಕೂಪನ್‍ಹೇಗನ್ನಿನ್ನಲ್ಲಿ ನೀಲ್ಸ್ ಬೋರ್ (1885-1962) ಜೊತೆ ಸಂಶೋಧನೆಗೈದರು. ಅಂದು ಕೂಪನ್‌ಹೇಗನ್ ಸೈದ್ಧಾಂತಿಕ ಭೌತವಿಜ್ಞಾನದ ಕಾಶಿ ಎನಿಸಿಕೊಂಡಿತ್ತು. ಮುಂದಕ್ಕೆ ಕೆಲಕಾಲ ಕೇಂಬ್ರಿಜ್ಜಿನಲ್ಲಿ ಅರ್ನೆಸ್ಟ್ ರುದರ್ಫರ್ಡ್ (1871-1937)ನ ಶಿಷ್ಯನೂ ಆಗಿದ್ದ.
ಕಬ್ಬಿಣದಂಥ ವಿಶಿಷ್ಟ ಪದಾರ್ಥಗಳ ಕೆಲವೇ ಪುಟ್ಟ ವಲಯಗಳಲ್ಲಿ ಎಲ್ಲ ಪರಮಾಣವಿಕ ಕಾಂತಗಳೂ ನಿರ್ದಿಷ್ಟ ದಿಶೆಯತ್ತ ವಿನ್ಯಾಸಗೊಂಡಿರುವುದುಂಟು. ಇವೇ ಪ್ರಬಲತಮ ಕಾಂತತ್ವದ ಒಂದು ಬಗೆ ಎನ್ನಿಸಿರುವ ಫೆರೊಕಾಂತತ್ವದ ಮೂಲಗಳು. ಈತ ಇವುಗಳ ಗಣಿತೀಯ ಅಧ್ಯಯನವನ್ನು 1935ರಲ್ಲಿ ಆರಂಭಿಸಿದ. ಮುಂದೆ 1937ರಲ್ಲಿ ಇವನನ್ನು ಮಾಸ್ಕೊದಲ್ಲಿಯ ಇನ್‌ಸ್ಟಿಟ್ಯೂಟ್ ಫಾರ್ ಫಿಸಿಕಲ್ ಪ್ರಾಬ್ಲೆಮ್ಸ್ ಎಂಬ ಸಂಸ್ಥೆ ತನ್ನ ಒಂದು ವಿಭಾಗದ ಮುಖ್ಯಸ್ಥನಾಗಿ ನೇಮಿಸಿತು.[೯] ಈ ಸಂಸ್ಥೆಯಲ್ಲಿ ಹಿರಿಯ ಭೌತವಿಜ್ಞಾನಿ ಪೀಟರ್ ಕಪಿತ್ಸಾ (1894-1984) ಎಂಬವ ನಿಮ್ನತಾಪ ವಿದ್ಯಮಾನಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ. ಸಹಜವಾಗಿ ಈತನ ಆಸಕ್ತಿ ಈ ಕ್ಷೇತ್ರದತ್ತವೂ ಹೊರಳಿತು. ರಷ್ಯ ದೇಶದ ಸರ್ವಾಧಿಕಾರಿ ಜೊಸೆಫ್ ಸ್ಟಾಲಿನ್ (1879-1953) ಎಂಬಾತನ ಆಳ್ವಿಕೆಯಲ್ಲಿ ಇವನ ಮೇಲೆ ಜರ್ಮನಿಯ ಬೇಹುಗಾರ ಎಂಬ ಮಿಥ್ಯಾರೋಪ ಹೊರಿಸಿ ಇವನನ್ನು ದಸ್ತಗಿರಿ ಮಾಡಲಾಯಿತು. ಕಪಿತ್ಸಾ ವೈಯಕ್ತಿಕವಾಗಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಇವನನ್ನು ಬಂಧಮುಕ್ತಗೊಳಿಸಿದರು.[೧೦][೧೧]
ಹೀಲಿಯಮ್ IIರ ಗುಣಗಳನ್ನು ಈತ ಕ್ವಾಂಟಮ್ ಬಲವಿಜ್ಞಾನ ಮಾರ್ಗದಲ್ಲಿ ಸೈದ್ಧಾಂತಿಕವಾಗಿ ಅಭ್ಯಸಿಸಿದ (1941). ಮುಂದೆ 1947ರಲ್ಲಿ ಇದನ್ನು ತುಸು ಮಾರ್ಪಡಿಸಿದ. 1950ರ ದಶಕದಲ್ಲಿ ಇವನು ಹೀಲಿಯಮ್-3ರ (ಹೀಲಿಯಮ್‌ನ ವಿರಳ ಸಮಸ್ಥಾನಿ) ಸೈದ್ಧಾಂತಿಕ ಅಧ್ಯಯನ ಕೈಗೊಂಡು ಅತಿ ನಿಮ್ನತಾಪಗಳಲ್ಲಿ ಇದು ಪ್ರದರ್ಶಿಸುವ ತೀರ ವಿಚಿತ್ರ ಗುಣಗಳನ್ನು ಮುನ್ನುಡಿದ. ಇವೆಲ್ಲ ಸಾಧನೆಗಳನ್ನೂ ಗಮನಿಸಿ ಇವನಿಗೆ 1962ರ ಭೌತವಿಜ್ಞಾನದ ನೊಬೆಲ್ ಪಾರಿತೋಷಿಕ ಪ್ರದಾನಿಸಲಾಯಿತು.
1962 ಜನವರಿ 1ರಂದು ಇವನ ಜೀವನದಲ್ಲೊಂದು ಘೋರ ದುರ್ದಿನ. ಮಾಸ್ಕೊ ಸಮೀಪ ಅಂದು ಸಂಭವಿಸಿದ ವಾಹನಾಪಘಾತದಲ್ಲಿ ಇವನು ಮೃತರಾಗದೇ ಉಳಿದದ್ದು ಆಶ್ಚರ್ಯ: ಹನ್ನೊಂದು ಮೂಳೆಗಳು ಮುರಿದಿದ್ದುವು, ತಲೆಬುರುಡೆ ಬಿರುಕುಬಿಟ್ಟಿತ್ತು. ಮುಂದಿನ ಎರಡು ವರ್ಷ ಸಾವು-ಬದುಕು ನಡುವಿನ ಬಿರುಸು ಹೋರಾಟ. ಅಕ್ಟೋಬರ್ 1964ರಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ. ಹಿಂದೆ ಬಿಟ್ಟಿದ್ದ ಸಂಶೋಧನೆಯನ್ನು ಮತ್ತೆ ಕೈಗೊಂಡ. ಆದರೆ ಮೊದಲಿನ ಹುರುಪು ಮತ್ತು ಚಿಂತನಪ್ರಭೆ ಮರಳಲಿಲ್ಲ.
೧೯೩೭ ರಲ್ಲಿ ಲ್ಯಾಂಡೌರವರು ಕೋರಾ ಟಿ.ಡ್ರೋಬನ್ಜೆವ ಅವರನ್ನು ವಿವಾಹವಾದರು.[೧೨] ಅವರ ಮಗ ಇಗೊರ್ ೧೯೪೬ ರಲ್ಲಿ ಜನಿಸಿದರು.
ಕೃತಿಗಳು
ಬದಲಾಯಿಸಿ- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೭೬):
ಮೆಕ್ಯಾನಿಕ್ಸ್ ,ಸಂಪುಟ ೧.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೭೫):
ದ ಕ್ಲಾಸಿಕಲ್ ಥಿಯರಿ ಆಫ್ ಫೀಲ್ಡ್ಸ್,ಸಂಪುಟ ೨.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೭೭):
ಕ್ವಾಂಟಮ್ ಮೆಕ್ಯಾನಿಕ್ಸ್, ನಾನ್ ರಿಲೇಟಿವಿಸ್ಟಿಕ್ ಥಿಯರಿ, ಸಂಪುಟ ೩.
- ವಿ.ಬಿ.ಬೆರೆಟೆಟ್ಸ್ಕಿ,ಇ.ಎಮ್.ಲಿಫ್ಷಿಟ್ಜ್ ,ಎಲ್.ಪಿ.ಪಿಟಾವ್ಸ್ಕಿ (೧೯೮೨):
ಕ್ವಾಂಟಮ್ ಎಲೆಕ್ಟ್ರೋಡೈನಮಿಕ್ಸ್,ಸಂಪುಟ ೪.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೦):
ಸಂಖ್ಯಾಶಾಸ್ತ್ರೀಯ ಭೌತಶಾಸ್ತ್ರ,ಸಂಪುಟ ೫.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೭):
ಫ್ಲುಯಿಡ್ ಮೆಕ್ಯಾನಿಕ್ಸ್, ಸಂಪುಟ ೬.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೬):
ಸ್ಥಿತಿಸ್ಥಾಪಕತ್ವದ ಸಿದ್ಧಾಂತ, ಸಂಪುಟ ೭.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೪):
ನಿರಂತರ ಮಾಧ್ಯಮದ ಎಲೆಕ್ಟ್ರೊಡೈನಮಿಕ್ಸ್,ಸಂಪುಟ ೮.
- ಎಲ್.ಪಿ.ಪಿಟಾವ್ಸ್ಕಿ,ಇ.ಎಮ್.ಲಿಫ್ಷಿಟ್ಜ್ (೧೯೮೦):
ಸಂಖ್ಯಾಶಾಸ್ತ್ರೀಯ ಭೌತಶಾಸ್ತ್ರ, ಸಂಪುಟ ೯.
- ಎಲ್.ಪಿ.ಪಿಟಾವ್ಸ್ಕಿ,ಇ.ಎಮ್.ಲಿಫ್ಷಿಟ್ಜ್ (೧೯೮೧):
ಶಾರೀರಿಕ ಚಲನಶಾಸ್ತ್ರ,ಸಂಪುಟ ೧೦.[೧೩]
ಸಾಧನೆಗಳು
ಬದಲಾಯಿಸಿಕೊಡುಗೆಗಳು
ಬದಲಾಯಿಸಿ- ಡಿಎಲ್ಒ(DLVO) ಸಿದ್ಧಾಂತ.
- ಲ್ಯಾಂಡೌ ಡ್ಯಾಂಪಿಂಗ್
- ಲ್ಯಾಂಡೌ ವಿತರಣೆ.
- ಲ್ಯಾಂಡೌ ಗೇಜ್.
- ಲ್ಯಾಂಡೌ ಪೋಲ್.
- ಲ್ಯಾಂಡೌ ಸಸ್ಪೆಪ್ಟಿಬಿಲಿಟಿ.
- ಲ್ಯಾಂಡೌ ಸಾಮರ್ಥ್ಯ.
- ಲ್ಯಾಂಡೌ ಕ್ವಾಂಟೀಕರಣ.
- ಲ್ಯಾಂಡೌ ಸಿದ್ಧಾಂತ.
- ಲ್ಯಾಂಡೌ-ಸ್ಕ್ವೈರ್ ಜೆಟ್.
- ಲ್ಯಾಂಡೌ-ಲೆವಿಚ್ ಸಮಸ್ಯೆ.
- ಲ್ಯಾಂಡೌ-ಹಾಪ್ಫ್ ಪ್ರಕ್ಷುಬ್ಧತೆಯ ಸಿದ್ಧಾಂತ.
- ಗಿನ್ಜ್ಬರ್ಗ್-ಲ್ಯಾಂಡೌ ಸಿದ್ಧಾಂತ.
- ಡೇರಿಯಸ್-ಲ್ಯಾಂಡೌ ಅಸ್ಥಿರತೆ.
- ಲ್ಯಾಂಡೌ-ಲಿಫ್ಷಿಟ್ಜ್ ಏರೋಕಾಸ್ಟಿಕ್ ಸಮೀಕರಣ.
- ಲ್ಯಾಂಡೌ-ರಾಯಚೂದುರಿ ಸಮೀಕರಣ.
- ಲ್ಯಾಂಡೌ-ಝೀನರ್ ಸೂತ್ರ.
- ಲ್ಯಾಂಡೌ-ಲಿಫ್ಫಿಟ್ಜ್ ಮಾದರಿ.
- ಲ್ಯಾಂಡೌ-ಲಿಫ್ಫಿಟ್ಜ್ ಸ್ಯೂಡೋಟೆನ್ಸರ್.
- ಲ್ಯಾಂಡೌ-ಲಿಫ್ಫಿಟ್ಜ್-ಗಿಲ್ಬರ್ಟ್ ಸಮೀಕರಣ.
- ಲ್ಯಾಂಡೌ-ಪೊಮೆರಂಚಕ್-ಮಿಗ್ಡಾಲ್ ಪರಿಣಾಮ.
- ಲ್ಯಾಂಡೌ-ಯಾಂಗ್ ಪ್ರಮೇಯ.
- ಲ್ಯಾಂಡೌ ತತ್ತ್ವ.
- ಸೂಪರ್ ಫ್ಲುಯಿಡಿಟಿ.
- ಸೂಪರ್ ಕಂಡಕ್ಟಿವಿಟಿ.
ಲೆಗಸಿ
ಬದಲಾಯಿಸಿ- ಲ್ಯಾಂಡೌ ಹುಟ್ಟಿನ ೧೦೦ನೇ ವಾರ್ಷಿಕೋತ್ಸವಕ್ಕೆ ಮೀಸಲಾಸ ರಷ್ಯನ್ ಬೆಳ್ಳಿ ನಾಣ್ಯ.
- ೨೦೧೦ ರ ಯುಕ್ರೇನಿಯನ್ ಸ್ಟಾಂಪ್ ನಲ್ಲಿ ಲ್ಯಾಂಡೌ.
- ೧೯೬೨ ರಲ್ಲಿ ಗೌರವಾನ್ವಿತ ವಸ್ತುಗಳನ್ನು ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.
- ಮೈನರ್ ಗ್ರಹ ೨೧೪೨ ಲ್ಯಾಂಡೌ.
- ಚಂದ್ರನ ಕುಳಿ ಲ್ಯಾಂಡೌ.
- ಲ್ಯಾಂಡೌ ಚಿನ್ನದ ಪದಕ.[೧೫]
ಪ್ರಶಸ್ತಿಗಳು
ಬದಲಾಯಿಸಿ- ಸ್ಟಾಲಿನ್ ಪ್ರಶಸ್ತಿ (೧೯೪೬).
- ಮ್ಯಾಕ್ಸ್ ಪ್ಲ್ಯಾಂಕ್ ಮೆಡಲ್ (೧೯೬೦).
- ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೧೯೬೨).
ಮರಣ
ಬದಲಾಯಿಸಿಲ್ಯಾಂಡೌ ರವರು ಆರು ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡ ಸಮಸ್ಯೆಗಳಿಂದ ೬೦ ವರ್ಷ ವಯಸ್ಸಿನಲ್ಲಿ, ಎಪ್ರಿಲ್ ೧ ,೧೯೬೮ ರಂದು ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ McCauley, Martin (1997). Who's Who in Russia Since 1900. Routledge. p. 128.
Landau, Lev Davydovich (1908-68), a brilliant Soviet theoretical physicist, who was born into a Jewish family in Baku and graduated from Leningrad State University in 1927.
- ↑ Zubok, Vladislav (2012). "Soviet Intellectuals after Stalin's Death and Their Visions of the Cold War's End". In Bozo, Frédéric; Rey, Marie-Pierre; Rother, Bernd; Ludlow, N. Piers (eds.). Visions of the End of the Cold War in Europe, 1945-1990. Berghahn Books. p. 78.
- ↑ Gorelik, Gennady (1997). "The Top-Secret Life of Lev Landau". Scientific American. 277 (2): 72. JSTOR 24995874.
- ↑ http://www.newworldencyclopedia.org/entry/Lev_Landau
- ↑ Kapitza, P. L.; Lifshitz, E. M. (1969). "Lev Davydovitch Landau 1908–1968". Biographical Memoirs of Fellows of the Royal Society. 15: 140–158. doi:10.1098/rsbm.1969.0007.
- ↑ Martin Gilbert, The Jews in the Twentieth Century: An Illustrated History, Schocken Books, 2001, ISBN 0805241906 p. 284
- ↑ Frontiers of physics: proceedings of the Landau Memorial Conference, Tel Aviv, Israel, 6–10 June 1988, (Pergamon Press, 1990) ISBN 0080369391, pp. 13–14
- ↑ Edward Teller, Memoirs: A Twentieth Century Journey In Science And Politics, Basic Books 2002, ISBN 0738207780 p. 124
- ↑ Dorozynsk, Alexander (1965). The Man They Wouldn't Let Die.
- ↑ O'Connor, 2014
- ↑ Yakovlev, 2012
- ↑ Petr Leonidovich Kapitsa, Experiment, Theory, Practice: Articles and Addresses, Springer, 1980, ISBN 9027710619, p. 329.
- ↑ https://www.nobelprize.org/prizes/physics/1962/landau/biographical/
- ↑ https://nationalmaglab.org/education/magnet-academy/history-of-electricity-magnetism/pioneers/lev-davidovich-landau
- ↑ http://www-history.mcs.st-andrews.ac.uk/Biographies/Landau_Lev.html