ಮೊಹಮ್ಮದ್ ಅಝರುದ್ದೀನ್ ಇವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಆಕರ್ಷಕ ಬಲಗೈ ಮಧ್ಯಮ ಕ್ರಮಾಂಕದ ದಾಂಡಿಗರು. ಇವರು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಹಾಕಿಕೊಂಡು, ಕ್ರಿಕೆಟ್ ಆಟದಿಂದ ಬಹಿಷ್ಕೃತಗೊಂಡರು.

ಇವರು ತಮ್ಮ ಮೊದಲನೇಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದು ದಾಖಲೆಯಾಗಿದ್ದು, ಆ ದಾಖಲೆಯು ಇನ್ನೂವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಮುಂಗೈ ಫ್ಲಿಕ್ ಇವರ ಅತ್ಯಾಕರ್ಷಕ ಹೊಡೆತವಾಗಿತ್ತು, ಆಫ್ ಸೈಡದಲ್ಲಿರುತ್ತಿದ್ದ ಚೆಂಡನ್ನು ಕೂಡ ಇವರು ಈ ಫ್ಲಿಕ್ ಮೂಲಕ ಲೆಗ್ ಸೈಡಗೆ ಹೊಡಿಯುತ್ತಿದ್ದ ಹೊಡೆತಗಳು ಮನಮೋಹವಾಗಿರುತ್ತಿತ್ತು. ಇವರ ಬ್ಯಾಟಿಂಗ್ ಶೈಲಿಯು ಇಂಗ್ಲೆಂಡ್ ತಂಡದ ಡೇವಿಡ್ ಗಾವರ್ ಮತ್ತು ಆಸ್ಟ್ರೇಲಿಯಾ ತಂಡದ ಗ್ರೇಗ್ ಚಾಪೆಲ್ ಅವರ ಆಟವನ್ನು ಹೋಲುತ್ತಿತ್ತು. ಇವರ ಮುಂಗೈ ಫ್ಲಿಕ್ ನಿಂದ ಮೋಹಿತಗೊಂಡಿದ್ದ ಖ್ಯಾತ ಕ್ರಿಕೆಟ್ ಬರಹಗಾರ ಜಾನ್ ವುಡಕಾಕ್ ಹೀಗೆ ಉದ್ಘರಿಸಿದ್ದರು, "ಯಾವುದೇ ಇಂಗ್ಲಿಷ್ ಕ್ರಿಕೆಟಿಗನಿಗೆ ಅಝರುದ್ದೀನರ ಹಾಗೇ ಆಡೆಂದು ಹೇಳುವುದು ಸಾಧ್ಯವಿಲ್ಲ. ಹಾಗೆನಾದರೂ ಮಾಡಿದರೆ, ಅದು ಇಂಗ್ಲಿಷ್ ಡರ್ಬಿ ಕುದುರೆ ರೇಸಿನಲ್ಲಿ ಗ್ರೇಹೌಂಡ್ ನಾಯಿಯನ್ನು ಓಡಿಸಿದ ಹಾಗಾಗುವದು".

ಟೆಸ್ಟ್ ಪಂದ್ಯಗಳಲ್ಲಿನ ಸಾಧನೆಸಂಪಾದಿಸಿ

ದೇಶವಾರು ಟೆಸ್ಟ್ ಸಾಧನೆ(1-11)
ಎದುರಾಳಿ ರನ್ನುಗಳು ಸರಾಸರಿ ಶತಕಗಳು
ಆಸ್ಟ್ರೇಲಿಯಾ ೭೮೦ ೩೯.೦೦
ಇಂಗ್ಲೆಂಡ್ ೧೨೭೮ ೫೮.೦೯
ನ್ಯೂಜೀಲ್ಯಾಂಡ್ ೭೯೬ ೬೧.೨೩
ಪಾಕಿಸ್ತಾನ್ ೭೬೯ ೪೦.೪೭
ದಕ್ಷಿಣ ಆಫ್ರಿಕಾ ೭೭೯ ೪೧.೦೦
ಶ್ರೀಲಂಕಾ ೧೨೧೫ ೫೫.೨೩
ವೆಸ್ಟ್ ಇಂಡೀಜ್ ೫೩೯ ೨೮.೩೭
ಜಿಂಬಾಬ್ವೆ ೫೯ ೧೪.೭೫
ಒಟ್ಟು ೬೨೧೫ ೪೫.೦೪ ೨೨

ಟೆಸ್ಟ್ ಶತಕಗಳ ಪಟ್ಟಿಸಂಪಾದಿಸಿ

 
Mohammad Azharuddin's career performance graph.