ಮೊಹಮ್ಮದ್‌ ರಫಿ

ಭಾರತೀಯ ಹಿನ್ನೆಲೆ ಗಾಯಕ
(ಮೊಹಮ್ಮದ್‌. ರಫಿ ಇಂದ ಪುನರ್ನಿರ್ದೇಶಿತ)

ಮೊಹಮ್ಮದ್ ರಫಿ (ಹಿಂದಿ:मोहम्मद रफ़ी, ಉರ್ದು: محمد رفیع) (ದಶಂಬರ್ ೨೪, ೧೯೨೪-ಜುಲೈ ೩೧, ೧೯೮೦) ಭಾರತೀಯ ಹಿನ್ನೆಲೆ ಗಾಯಕ. ಇವರು ತಮ್ಮ ವೃತ್ತಿಜೀವನವನ್ನು ನಾಲ್ಕು ದಶಕಗಳ ಕಾಲ ನಡೆಸಿದ್ದಾರೆ.[] ಅವರು ೫ ನ್ಯಾಶನಲ್ ಅವಾರ್ಡ್ಸ್ ರಾಷ್ಟ್ರೀಯ ಪುರಸ್ಕಾರ ಮತ್ತು ೬ ಫಿಲ್ಮ್ ಫೇರ್ ಅವಾರ್ಡ್ಸ್ ಗೆ ಪಾತ್ರರಾಗಿದ್ದಾರೆ. ಅವರು ೧೯೬೭ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಪಡೆದರು.[]

ಮೊಹಮ್ಮದ್ ರಫಿ
ಹಿನ್ನೆಲೆ ಮಾಹಿತಿ
ಮೂಲಸ್ಥಳಭಾರತೀಯ
ಸಂಗೀತ ಶೈಲಿ
  • ಭಾರತೀಯ ಶಾಸ್ತ್ರೀಯ ಸಂಗೀತ
  • ಗಝಲ್
  • ಚಲನಚಿತ್ರ ಸಂಗೀತ
  • ಖವ್ವಾಲಿ
  • ಭಜನ್
  • ನಝ್ರುಲ್ ಗೀತಿ
  • ಹಾಸ್ಯ ಸಂಗೀತ
ವೃತ್ತಿಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ಹಿನ್ನೆಲೆ ಗಾಯಕ
ವಾದ್ಯಗಳು
  • ಗಾಯನ
  • ಹಾರ್ಮೋನಿಯಂ
ಸಕ್ರಿಯ ವರ್ಷಗಳು೧೯೪೪–೧೯೮೦

ತಮ್ಮ ೪೦ ವರ್ಷಗಳ ವೃತ್ತಿ ಜೀವನದಲ್ಲಿ ರಫಿ ಸುಮಾರು ೨೬,೦೦೦ ಚಲನಚಿತ್ರಗೀತೆಗಳಿಗೆ ಕಂಠದಾನ ಮಾಡಿದ್ದಾರೆ.[] ಅವರ ಹಾಡುಗಳಲ್ಲಿ ಶಾಸ್ತ್ರೀಯದಿಂದ ಹಿಡಿದು ದೇಶಭಕ್ತಿ ಗೀತೆಗಳ ವರೆಗೆ ವಿಸ್ತರಿಸಿವೆ.ಕವಾಲಿಗಳಿಂದ ಹಿಡಿದು ಘಜಲ್ಸ್ ಮತ್ತು ಭಜನ್ಸ್ ಮತ್ತು ಮೃದು ಮಧುರ ಪ್ರೇಮ ಗೀತೆಗಳು ಅವರ ಪ್ರಮುಖ ಕೊಡುಗೆಗಳಾಗಿವೆ. ಅವರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಅತ್ಯುತ್ತಮ ಹಿಡಿತ ಹೊಂದಿದ್ದರಿಂದ ಅವರಿಗೆ ಈ ವಿಭಿನ್ನತೆ ಸಾಧನೆ ಸಾಧ್ಯವಾಗಿದೆ.[] ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಅದರಲ್ಲಿ ಹಿಂದಿ, ಕೊಂಕಣಿ, ಉರ್ದು, ಭೋಜಪುರಿ, ಒಡಿಯಾ, ಪಂಜಾಬಿ,ಬಂಗಾಳಿ, ಮರಾಠಿ, ಸಿಂಧಿ, ಕನ್ನಡ, ಗುಜರಾತಿ,ತೆಲುಗು, ಮಾಘಿ, ಮೈಥಿಲಿ ಮತ್ತು ಅಸ್ಸಾಮಿ ಗಳಲ್ಲಿಯೂ ಕಂಠದಾನ ಮಾಡಿದ ಖ್ಯಾತಿ ಅವರದು. ಅವರು ಕೆಲವು ಇಂಗ್ಲೀಷ್, ಪರ್ಸಿಯನ್, ಸ್ಪ್ಯಾನಿಶ್ ಮತ್ತು ಡಚ್ ಹಾಡುಗಳನ್ನೂ ಧ್ವನಿ ಮುದ್ರಣ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಜುಲೈ ೨೪,೨೦೧೦ ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಅವರ ಧ್ವನಿ ಎಂದರೆ "ಸುಮಾರು೧೦೧ ಪ್ರಕಾರದಲ್ಲಿ "ಐ ಲೌ ಯು"ವನ್ನು ಒಂದೇ ಹಾಡಿನಲ್ಲಿ ಹೇಳಿಸಬೇಕೆಂದರೆ ಮೊಹಮ್ಮದ ರಫಿ ಅವುಗಳನ್ನೆಲ್ಲಾ ಬಲ್ಲರು ಎಂದು ವರ್ಣಿಸಿದೆ. ಅತ್ಯಂತ ಸಣ್ಣ ಪ್ರಕಾರದ ಮರಿ ಪ್ರೀತಿ,ಎಳೆಯ ವಯಸ್ಸಿನ ಅಪಕ್ವ ಪ್ರೇಮದ ರೋಮಾಂಚನ,ಯಾವುದೇ ನಿರೀಕ್ಷೆಗಳಿಲ್ಲದ ಪ್ರೀತಿಯ ತತ್ವ ಮತ್ತು ಹೃದಯ ಭಗ್ನವಾದ ದುರಂತ ಪ್ರೇಮ-ಹೀಗೆ ಯಾವುದನ್ನೂ ಅವರು ಸಮರ್ಪಕ ಭಾವಗಳಲ್ಲಿ ಅಭಿವ್ಯಕ್ತಿಗೊಳಿಸುವಲ್ಲಿ ಸಫಲರಾಗಿದ್ದಾರೆ. ಅದು ಬರೀ ಪ್ರೇಮವಲ್ಲ,ಅದು ಜೀವನದ ನವರಸಗಳ ಸಂಗಮವಿದ್ದಂತೆ ತೋರಿಸಿದ್ದಾರೆ-ವಿಫಲ ಕವಿಯೊಬ್ಬನ ಮರೆವುಗಳಿವೆ,ಕವಿಯೊಬ್ಬನ ಸಕ್ರಿಯ ಕ್ರಿಯಾಶೀಲತೆ ಇದೆ,ಓರ್ವ ಸಾಲದ ಹೊರೆಹೊತ್ತ ರೈತನೊಬ್ಬನ ನಿರಾಸೆ ಇದೆ,ಹೀಗೆ ಇವರೆಲ್ಲರ ಸೂಕ್ತ ಸಂದರ್ಭದ ಧ್ವನಿಯಾಗಿದ್ದಾರೆ.ರಫಿ ಅವರ ನಾಲ್ಕು ದಶಕಗಳ ಈ ವೃತ್ತಿ ಜೀವನವು ಪ್ರತಿ ಋತು ಮತ್ತು ಪ್ರತಿ ಕಾರಣಕ್ಕೂ ಸೂಕ್ತವಾಗಿತ್ತು."[]

ಜನನ ಮತ್ತು ಕುಟುಂಬ

ಬದಲಾಯಿಸಿ

ಮೊಹಮ್ಮದ್ ರಫಿ ಅವರು ಹಾಜಿ ಅಲಿ ಮೊಹಮ್ಮದ್ ಅವರ ಆರು ಮಕ್ಕಳಲ್ಲಿ ಎರಡನೆಯವರು. ಅವರು ಪಂಜಾಬ್ ರಾಜ್ಯದ (ಬ್ರಿಟಿಶ್ ಭಾರತ)ಅಮೃತಸರದ ಬಳಿಯ ಕೊಟ್ಲಾ ಸುಲ್ತಾನ್ ಸಿಂಗ್ ಗ್ರಾಮದಲ್ಲಿ ಜನಿಸಿದರು.[] ರಫಿ ಅವರನ್ನು ಚಿಕ್ಕವರಿರುವಾಗ ಫೀಕಾ ಎಂದು ಸಂಕ್ಷಿಪ್ತ ನಾಮದಿಂದ ಕರೆಯಲಾಗುತ್ತಿತ್ತು. ಅವರು ಹಳ್ಳಿಯಲ್ಲಿ ಫಕೀರ್ ಅವರ ಹಾಡುಗಳ ಮೂಲಗಳನ್ನು ಅನುಕರಿಸುತ್ತಿದ್ದರು.[] ರಫಿ ಅವರ ತಂದೆ ೧೯೩೫-೩೬, ರಲ್ಲಿ ಲಾಹೋರಿಗೆ ಹೋಗಿ ನೆಲೆಸಿದರು ನಂತರ ಅವರ ಕುಟುಂಬ ಅವರನ್ನು ಹಿಂಬಾಲಿಸಿತು. ರಫಿ ಅವರ ಕುಟುಂಬವು ಲಾಹೋರ್ ನ ನೂರ್ ಮೊಹಲ್ಲಾದಲ್ಲಿ ಒಂದು ಪುರುಷರಿಗಾಗಿ ಸಲೂನ್ ನನ್ನು ಹೊಂದಿದೆ.[] ಅವರ ಅಳಿಯ ಸಂಬಂಧಿ ಮೊಹಮ್ಮದ್ ಹಮೀದ್ ಇದರ ಒಡೆಯರಾಗಿದ್ದು ಅವರೇ ರಫಿಯವರಲ್ಲಿನ ಪ್ರತಿಭೆ ಗುರ್ತಿಸಿ ಸಂಗೀತ ಲೋಕಕ್ಕೆ ಪ್ರೊತ್ಸಾಹಿಸಿದರು. ನಂತರ ರಫಿ ಅವರು ಶಾಸ್ತ್ರೀಯ ಸಂಗೀತವನ್ನು ಉಸ್ತಾದ್ ಬಡೆ ಗುಲಾಮ್ ಅಲಿ ಖಾನ್, ಉಸ್ತಾದ್ ಅಬ್ದುಲ್ ವಹೀದ್ ಖಾನ್ , ಪಂಡಿತ ಜೀವನ್ ಲಾಲ್ ಮಟ್ಟೂ ಮತ್ತು ಫಿರೋಜ್ ನಿಜಾಮ್ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು.[][]

ರಫಿ ಅವರು ೧೩ನೇಯ ವರ್ಷ ವಯಸ್ಸಿನವರಗಿದ್ದಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಸಂಗೀತ ಕಚೇರಿ ನೀಡಿದ್ದಾರೆ.ಕೆ.ಎಲ್ ಸೈಗಲ್ ಅವರ ಸಂಗೀತ ಕಚೇರಿಯಲ್ಲಿ ಅವರಿಗೆ ಈ ಪ್ರದರ್ಶನದ ಅವಕಾಶ ದೊರೆಕಿತು.[] ರಫಿ ಅವರು ಶ್ಯಾಮ್ ಸುಂದರ ಅವರ ಮಾರ್ಗದರ್ಶನದಲ್ಲಿ ಚೊಚ್ಚಿಲ ಹಿನ್ನಲೆಗಾಯಕರಾಗಿ "ಸೊನಿಯೆ ನೀ,ಹೀರಿಯೆ ನೀ" ಎಂಬ ಹಾಡನ್ನು ಪಂಜಾಬಿ ಚಿತ್ರ ಗುಲ್ ಬಲೊಚ್ ನಲ್ಲಿ ಜೀನತ್ ಬೇಗಮ್ ರೊಂದಿಗೆ ಹಾಡಿದ್ದಾರೆ.[೧೦] ಅದೇ ವರ್ಷ ರಫಿ ಅವರನ್ನು ಲಾಹೋರ್ ನ ಆಲ್ ಇಂಡಿಯಾ ರೇಡಿಯೊ ಕೇಂದ್ರದಲ್ಲಿ ಅವರಿಗಾಗಿ ಹಾಡಲು ಆಮಂತ್ರಿಸಲಾಗಿತ್ತು.[೧೧] ಅವರು ತಮ್ಮ ವೃತ್ತಿಪರತೆಯನ್ನು ಚೊಚ್ಚಿಲ ಚಿತ್ರ ಶ್ಯಾಮ್ ಸುಂದರ್ ಅವರ-ನಿರ್ದೇಶಿತ ೧೯೪೧ ರಲ್ಲಿನ ಗುಲ್ ಬಲೊಚ್ ಮತ್ತು ಅದರ ಬೆನ್ನ ಹಿಂದೆಯೇ ಬಾಂಬೆ ಚಿತ್ರ ಗಾಂವೊ ಕಿ ಗೌರಿ,ಯಲ್ಲಿಯೂ ಹಿನ್ನಲೆ ಗಾಯಕರಾಗಿದ್ದಾರೆ.

ಲೈಲಾ ಮಜ್ನೂ (೧೯೪೫)ಮತ್ತು ಜುಗ್ನು ಚಿತ್ರಗಳಲ್ಲಿ ರಫಿ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಲೈಲಾ-ಮಜ್ನೂ ದಲ್ಲಿ ಅವರು 'ತೇರಾ ಜಲ್ವಾ'ದ ಗೀತೆಯಲ್ಲಿನ ಕೋರಸ್ ನಲ್ಲಿ ಕಾಣಿಸಿಕೊಂಡಿದ್ದರು.[೧೨]

ಬಾಂಬೆಯೆಡೆಗಿನ ಸಾಹಸ

ಬದಲಾಯಿಸಿ

ರಫಿ ಅವರು ೧೯೪೪ ರಲ್ಲಿ ಬಾಂಬೆಗೆ (ಈಗಿನ ಮುಂಬಯಿ)ಬಂದು ಸಹೋದರರೊಂದಿಗೆ ಬೆಹೆಂಡಿ ಬಜಾರ್ ನ ವಾಣಿಜ್ಯ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಹತ್ತಡಿಯ ಚಿಕ್ಕ ಕೋಣೆಯೊಂದನ್ನು ಬಾಡಿಗೆ ಪಡೆದರು. ಇಲ್ಲಿ ತನ್ವೀರ್ ನಕ್ವಿ ಅವರು ಅವರನ್ನು ಕೆಲವು ಚಲನಚಿತ್ರ ನಿರ್ಮಾಪಕರಿಗೆ ಪರಿಚಯಿಸಿದರು.ಅದರಲ್ಲಿ ಅಬ್ದುರ್ ರಶೀದ್ ಕರ್ದಾರ್,ಮೆಹಬೂಬ್ ಖಾನ್ ಮತ್ತು ನಟ-ನಿರ್ದೇಶಕ ನಜೀರ್ ಅವರನ್ನು ಪರಿಚಯಿಸಿದರು.[] ಚೌಪಾಟಿಯ ಸಮುದ್ರಕ್ಕೆ ಮುಖಮಾಡಿ ಅವರು ಪ್ರತಿ ನಿತ್ಯ ಮುಂಜಾನೆ ರಿಯಾಜ್ ಮಾಡುವುದು ಅವರ ದಿನದ ರೂಢಿಯಾಗಿತ್ತು. ಮುಂಬಯಿನಲ್ಲಿಯೂ ಸಹ ಶ್ಯಾಮ್ ಸುಂದರ್ ಅವರು ರಫಿ ಅವರಿಗೆ ಜಿ.ಎಂ.ದುರಾನಿಯವರೊಂದಿಗೆ ಅವರಿಗೆ 'ಅಜಿ ದಿಲ್ ಹೊ ಕಾಬು ಮೈ ತೊ ದಿಲದಾರ್ ಕಿ ಐಸಿ ತೈಸಿ..'ಹಾಡಿನಲ್ಲಿ ಯುಗಳ ಗೀತೆ ಹಾಡಿದ್ದು ಗಾವೊಂ ಕಿ ಗೌರಿ ಚಿತ್ರದ್ದು ಮೊದಲ ಹಿಂದಿ ಹಾಡಿದ ಧ್ವನಿ ಮುದ್ರಣದ ಚಲನಚಿತ್ರವಾಗಿತ್ತು. ಹಲವು ಹಾಡುಗಳೂ ಆಗ ಧ್ವನಿಮುದ್ರಣಗೊಂಡವು.[೧೩]

ಮಹಾತ್ಮಾ ಗಾಂಧಿ ಅವರ ಹತ್ಯೆಯ ನಂತರ ಹುಸನ್ಲಾಲ್ ಭಗತರಾಮ್-ರಾಜೆಂದ್ರ ಕೃಷ್ಣನ್-ಅವರ 'ಸುನೊ ಸುನೊ ಏಯೆ ದುನಿಯಾವಾಲೊ,ಬಾಪೂಜಿ ಕಿ ಅಮರ್ ಕಹಾನಿ..'ಎಂಬ ಹಾಡನ್ನು ಹಾಡಿದ್ದಾರೆ.[೧೩] ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹ್ರೂ ಅವರು ರಫಿಯವರನ್ನು ಕರೆದು ಮನೆಯಲ್ಲಿ ಹಾಡಲು ಆಮಂತ್ರಿಸಿದ್ದರು. ರಫಿ ಅವರು ನೆಹ್ರೂ ಅವರಿಂದ ಭಾರತದ ಸ್ವಾತಂತ್ರ್ಯ ದಿನದಂದು ರಜತ ಪದಕ ಪಡೆದುಕೊಂಡರು. ಆಗ ೧೯೪೯, ರಲ್ಲಿ ರಫಿ ಹಲವು ಜನಪ್ರಿಯ ಹಾಡುಗಳನ್ನು ಸಂಗೀತ ನಿರ್ದೇಶಕರಾದ ನೌಶಾದ್ ರೊಂದಿಗೆ (ಚಾಂದಿನಿ ರಾತ್ , ದಿಲ್ಲಗಿ ಮತ್ತುದುಲಾರಿ ) ಶ್ಯಾಮ್ ಸುಂದರ್ ಅವರ (ಬಜಾರ್ ) ಮತ್ತು ಹುಸ್ನಲಾಲ್ ಭಗತರಾಮ್ (ಮೀನಾ ಬಜಾರ್ ).

ರಫಿ ಅವರ ಮೊದಲ ಹಾಡು ನೌಶಾದ್ ರೊಂದಿಗೆ "ಹಿಂದುಸ್ತಾನ್ ಕೆ ಹಮ್ ಹೈ",ಶ್ಯಾಮ್ ಕುಮಾರ್ ಅವರೊಂದಿಗೆ ಅಲಾಉದ್ದೀನ್ ಮತ್ತು ಇನ್ನುಳಿದವರೊಂದಿಗೆ ಸಾಥ್ ನೀಡಿದ್ದಾರೆ.ಎ.ಆರ್ ಕರ್ದಾರ್ ಅವರ ಪೆಹೆಲೆ ಆಪ್ (೧೯೪೪)ರಲ್ಲಿ ಮೂಡಿ ಬಂತು. ಅದೇ ವೇಳೆಗೆ ೧೯೪೫ ರ ಚಲನಚಿತ್ರ ಗಾವೊಂ ಕೆ ಗೊರಿ ಗಾಗಿ "ಅಜಿದಿಲ್ ಹೊ ಕಾಬೂ ಮೈ"ಹಾಡನ್ನು ಹಾಡಿದರು. ಅವರು ಈ ಹಾಡನ್ನೇ ತಮ್ಮ ಮೊದಲ ಹಿಂದಿ ಭಾಷೆಯ ಹಾಡೆಂದು ಪರಿಗಣಿಸುತ್ತಾರೆ.[೧೧]

ರಫಿ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಫಿ ಅವರು ೧೯೪೫ ರಲ್ಲಿ "ತೇರೆ ಜಲ್ವಾ ಜಿಸ್ ನೆ ದೇಖಾ"ದಲ್ಲಿನ ಸಮೂಹ ಗಾಯಕರೊಂದಿಗೆ ಚಿತ್ರ ಲೈಲಾ ಮಜ್ನೂ ದಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ.[೧೧] ನೌಶಾದ್ ರಿಗಾಗಿ ಹಲವು ಹಾಡಿಗೆ ಅವರು ಕೋರಸ್ ಆಗಿದ್ದಾರೆ.ಅದರಲ್ಲಿ "ಮೇರೆ ಸಪ್ನೊಂ ಕಿ ರಾಣಿ,ರೂಹಿ ರೂಹಿ"ಇದನ್ನು ಕೆ.ಎಲ್ ಸೈಗಲ್ ಅವರೊಂದಿಗೆ ಶಹಾಜಾನ್ (೧೯೪೬)ಚಿತ್ರದಲ್ಲಿ ಹಾಡಿದ್ದಾರೆ. ರಫಿ ಅವರು "ತೇರೆ ಖಿಲೊನಾ ಟೂಟಾ ಬಲಕ್"ಹಾಡನ್ನು ಮೆಹಬೂಬ್ ಖಾನ್ ಅವರಅನ್ ಮೋಲ್ ಘಡಿ (೧೯೪೬) ಮತ್ತು ಯುಗಳ ಗೀತೆಯೊಂದನ್ನು ನೂರ್ ಜಹಾನ್ ಅವರೊಂದಿಗೆ ೧೯೪೭ ರ ಚಿತ್ರಜುಗ್ನು ,ದಲ್ಲಿ "ಯಹಾ ಬದ್ಲಾ ವಫಾ ಕಾ" ಹಾಡಿಗೂ ಧ್ವನಿ ನೀಡಿದ್ದಾರೆ. ಭಾರತದ ಇಭ್ಭಾಗದ ನಂತರ ರಫಿ ಭಾರತದಲ್ಲಿರಲು ನಿರ್ಧರಿಸಿ ತಮ್ಮ ಕುಟುಂಬವನ್ನು ಮುಂಬಯಿಗೆ ಸ್ಥಳಾಂತರಿಸಿದರು. ಅದೇ ರೀತಿ ನೂರ್ ಜಹಾನ್ ಪಾಕಿಸ್ತಾನಕ್ಕೆ ಮರಳಿ ಹಾಡುಗಾರ ಅಹ್ಮದ್ ರಶ್ದಿವರೊಂದಿಗೆ ಜೋಡಿಯಾದರು.

ರಫಿ ಆಗಿನ ಹಲವು ಗಾಯಕರ ಪ್ರಭಾವಕ್ಕೊಳಗಾದರು.ಉದಾಹರಣೆಗೆ ಕೆ.ಎಲ್ ಸೈಗಲ್,ತಲತ್ ಮೆಹಮೂದ್ ಮತ್ತು ಅಧಿಕವಾಗಿ ಜಿ.ಎಂ ದುರಾನಿಯವರ ಶೈಲಿಗಳನ್ನು ಅವರ ಹಾಡುಗಳಲ್ಲಿ ಕೇಳಬಹುದಾಗಿದೆ. ಅವರು ತಮ್ಮ ಇಂತಹ ಮಾದರಿಗಳಲ್ಲಿ "ಹಮ್ಕೊ ಹಸ್ತೆ ದೇಖ್ ಜಮಾನಾ ಜಲತಾ ಹೈ (ಹಮ್ ಸಬ್ ಚೋರ್ ಹೈ, ೧೯೫೬)[೧೪] ಮತ್ತು"ಖಬರ್ ಕಿಸಿ ಕೊ ನಹಿ, ವೊ ಕಿಧರ್ ದೇಖತೆ (ಬೆಕಸೂರ್, ೧೯೫೦),[೧೫] ಇತ್ಯಾದಿಗಳಲ್ಲಿ ತಮ್ಮನ್ನು ಪ್ರಭಾವಿಸಿದವರೊಂದಿಗೆ ಹಾಡಿದ್ದಾರೆ.

ಪ್ರಸಿದ್ದಿಯತ್ತ - ಬೆಳವಣಿಗೆ

ಬದಲಾಯಿಸಿ

ಸುಮಾರು ೧೯೫೦ ರಿಂದ ೧೯೭೦ ರ ವರೆಗೆ ರಫಿ ಹಿನ್ನಲೆ ಗಾಯಕರಾಗಿದ್ದರು. ಅವರು ತಮ್ಮ ಕಾಲದ ಹಲವು ಸಂಗೀತ ನಿರ್ದೇಶಕರೊಂದಿಗೆ ಸಹಯೋಗ ಹೊಂದಿದ್ದರು,ಅದರಲ್ಲೂ ಮುಖ್ಯವಾಗಿ ನೌಶಾದರೊಂದಿಗೆ ಅವರ ಒಡನಾಟ ಚೆನ್ನಾಗಿತ್ತು. ಆಗ ೧೯೫೦ ರ ಮತ್ತು ೧೯೬೦ ರ ಸಂದರ್ಭದಲ್ಲಿ ಆಗಿನ ಕಾಲದ ಬಹುಮುಖ್ಯ ಗೀತ ರಚನೆಗಾರರೊಂದಿಗೆಯೂ ಉತ್ತಮ ಬಾಂಧವ್ಯ ಹೊಂದಿದ್ದರು.ಉದಾಹರಣೆಗೆ ಒ.ಪಿ ನಯ್ಯರ್,ಶಂಕರ್ ಜೈಕಿಶನ್ ಮತ್ತು ಎಸ್ ಡಿ.ಬರ್ಮನ್ ಅದರಲ್ಲಿ ಪ್ರಮುಖ ಸಂಗೀತ ಸಂಯೋಜಕಾರಾಗಿದ್ದರು.

ನೌಶಾದ್ ರೊಂದಿಗಿನ ಒಡನಾಟ

ಬದಲಾಯಿಸಿ

ನೌಶಾದ್ ಅವರು ಹೇಳುವ ಪ್ರಕಾರ ರಫಿ ಅವರು ತಮ್ಮ ತಂದೆಯ ಶಿಫಾರಸ್ಸು ಪತ್ರದೊಂದಿಗೆ ಬಂದು ಅವರನ್ನು ಭೇಟಿಯಾಗಿದ್ದರು.[೧೬] ನೌಶಾದ್ ರಿಗಾಗಿ ರಫಿ ಹಾಡಿದ ಮೊದಲ ಹಾಡೆಂದರೆ "ಹಿಂದುಸ್ತಾನ್ ಕೆ ಹಮ್ ಹೈ"(ನಾವು ಹಿಂದುಸ್ತಾನದವರು)ಪೆಹೆಲೆ ಆಪ್ ಚಿತ್ರಕ್ಕಾಗಿ ಅವರು ೧೯೪೪ ರಲ್ಲಿ ಈ ಹಾಡು ಹೇಳಿದರು. ಮೊದಲ ಬಾರಿಗೆ ಇಬ್ಬರ ಜೋಡಿ ಹಾಡೆಂದರೆ ಧ್ವನಿಪಥ ಜಾಡಿನ ಚಿತ್ರ ಅನ್ಮೋಲ್ ಘಡಿ (೧೯೪೬) ರಫಿ ಅವರಿಗಿಂತ ಮೊದಲು ತಲತ್ ಮೆಹಮೂದ್ ಅವರು ನೌಶಾದ್ ಅವರ ಅಚ್ಚುಮೆಚ್ಚಿನ ಗಾಯಕರಾಗಿದ್ದರು. ಧ್ವನಿ ಮುದ್ರಣ ಸಂದರ್ಭದಲ್ಲಿ ತಲತ್ ಧೂಮಪಾನ ಮಾಡುವುದನ್ನು ನೌಶಾದ್ ನೋಡಿದರು. ಅವರು ಆಗ ಕೋಪಗೊಂಡರಲ್ಲದೇ ಬೈಜು ಬಾವರಾ ಚಿತ್ರದ ಎಲ್ಲಾ ಹಾಡುಗಳಿಗೆ ರಫಿ ಅವರನ್ನು ಗಾಯಕರನ್ನಾಗಿಸಿದರು.[೧೨]

ಆಗ ೧೯೪೯ ರಲ್ಲಿ "ಸುಹಾನೀ ರಾತ್ ಢಲ್ ಚುಕಿ"[೧೭] ಪ್ರಖ್ಯಾತವಾಯಿತು.

ಹೀಗೆ ನೌಶಾದರೊಂದಿಗಿನ ಅವರ ಒಡನಾಟ ಹಿಂದಿ ಚಲನಚಿತ್ರಗಳ ಹಿಂದಿಗೆ ಹಾಡಿಗೆ ರಫಿ ಅವರನ್ನು ಪ್ರಮುಖ ಹಿನ್ನಲೆ ಗಾಯಕರನ್ನಾಗಿ ಮಾಡಿತು.[೧೧] ಬೈಜು ಬಾವರಾ (೧೯೫೨)ದ "ಓ ದುನಿಯಾ ಕೆ ರಖವಾಲೆ"ಮತ್ತು ಮನ್ ತರಪತ್ ಹರಿ ದರ್ಶನ್ ಕೊ ಆಜ್"ಹಾಡುಗಳು ರಫಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು.[೧೦] ರಫಿ ಅವರು ನೌಶಾದ್ ಅವರೊಡನೆ ಸೇರಿ ೧೪೯ ಹಾಡುಗಳ(೮೧ ಅದರಲ್ಲಿ ಅವರ ವೈಯಕ್ತಿಕ ಹಾಡುಗಳಾಗಿವೆ)ಇದಾದ ನಂತರ ಅವರು ಅವರೊಂದಿಗೆ ಒಡನಾಟಕ್ಕೆ ವಿದಾಯ ಹೇಳಿದರು.[೧೮]

ಎಸ್ ಡಿ ಬರ್ಮನ್ ರೊಂದಿಗಿನ ಒಡನಾಟ

ಬದಲಾಯಿಸಿ

ಎಸ್.ಡಿ.ಬರ್ಮನ್ ಅವರು ರಫಿ ಅವರನ್ನು ದೇವಾನಂದ್ ಮತ್ತು ಗುರು ದತ್ತ.ಅವರ ಧ್ವನಿಗೆ ಪೂರಕವಾಗಿ ಬಳಸಿಕೊಂಡರು.[೧೯] ರಫಿ ಅವರು ಬರ್ಮನ್ ರೊಂದಿಗೆ ಪ್ಯಾಸಾ (೧೯೫೭), ಕಾಗಜ್ ಕೆ ಫೂಲ್ (೧೯೫೯), ತೇರೆ ಘರ್ ಕೆ ಸಾಮನೆ (೧೯೬೨), ಗೈಡ್ (೧೯೬೫), ಆರಧಾನಾ (೧೯೬೯), ಮತ್ತುಅಭಿಮಾನ್ (೧೯೭೩)ಚಿತ್ರಗಳಲ್ಲಿ ಗೀತೆಗಳಿಗಾಗಿ ಕಂಠದಾನ ಮಾಡಿರುತ್ತಾರೆ. ಎಸ್ ಡಿ.ಬರ್ಮನ್ ಅವರು ರಫಿ ಅವರನ್ನು ನೌಶಾದ್ ರಂತೆಯೇ ಸಂಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡ ಸಂಗೀತ ನಿರ್ದೇಶಕರಾಗಿದ್ದಾರೆ.

ಶಂಕರ್-ಜೈಕಿಶನ್ ರೊಂದಿಗಿನ ಒಡನಾಟ

ಬದಲಾಯಿಸಿ

ರಫಿ ಮತ್ತು ಶಂಕರ್ ಜೈಕಿಶನ್ ಹಿಂದಿ ಚಲನಚಿತ್ರೋದ್ಯಮದಲ್ಲಿ ಒಂದು ಅಪರೂಪದ ಜೋಡಿಯಾಗಿತ್ತು. ಶಂಕರ್-ಜೈಕಿಶನ್ ಅವರ ಮಾರ್ಗದರ್ಶನದಲ್ಲಿ ರಫಿ ಹಲವು ಹಾಡುಗಳನ್ನು ಶಮ್ಮಿ ಕಪೂರ್ ಮತ್ತು ರಾಜೇಂದ್ರ ಕುಮಾರರಿಗಾಗಿ ಹಾಡಿದ್ದಾರೆ. ಆರು ಫಿಲ್ಮ್ ಫೇರ್ ಅವಾರ್ಡ್ಸ್ ಗಳಲ್ಲಿ ರಫಿ, ಎಸ್-ಜೆ ಹಾಡುಗಳಿಗಾಗಿ ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಅದರಲ್ಲಿ "ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ" ಬಹಾರೋ ಫೂಲ್ ಬರಸಾವೋ".ಮತ್ತು ದಿಲ್ ಕೆ ಝರೋಂಖೆ ಮೆ" ಸೇರಿವೆ. ಪ್ರಖ್ಯಾತ "ಯಾಹೂ! ಚಾಹೆ ಕೊಯಿ ಮುಝೆ ಜಂಗಲಿ ಕಹೆ" ಈ ಹಾಡು ಸುಮಾರಾಗಿ ಎಲ್ಲಾ ಸಂಗೀತಗೋಷ್ಟಿ ವಾದ್ಯಗಾರರ ಮನಸೆಳೆಯಿತು.ಇದನ್ನು ಶಂಕರ್ ಜೈಕಿಶನ್ ಅವರು ಸಂಯೋಜಿಸಿದ್ದಾರೆ. ಎಸ್-ಜೆ ಅವರು ರಫಿ ಅವರು ಕಿಶೋರ್ ಕುಮಾರ್ ಅವರಿಗೆ ಶರಾರತ್ ಚಿತ್ರದಲ್ಲಿ ಹಾಡಲು ಅವಕಾಶ ನೀಡಲು ಸೂಚಿಸಿದರು. ("ಅಜಬ್ ಹೈ ದಾಸ್ತಾಂ ತೇರಿ ಯೆಹ್ ಜಿಂದಗಿ"). ರಫಿ ಒಟ್ಟಾರೆ (ವೈಯಕ್ತಿಕವಾಗಿ ೨೧೬) ಹಾಡುಗಳನ್ನೊಳಗೊಂಡಂತೆ ೩೪೧ ಹಾಡುಗಳನ್ನು ಶಂಕರ್-ಜೈಕಿಶನ್ ರಿಗಾಗಿ ಹಾಡಿದ್ದಾರೆ.[೧೮] ಈ ಚಲನಚಿತ್ರಗಳ ಒಟ್ಟಾಗಿದ್ದುದೆಂದರೆ,ಬಸಂತ್ ಬಹಾರ್ , ಪ್ರೊಫೆಸ್ಸರ್ , ಜಂಗ್ಲೀ , ಸೂರಜ್ , ಬ್ರಹ್ಮಚಾರಿ , ಆನ್ ಇವನಿಂಗ್ ಇನ್ ಪ್ಯಾರಿಸ್ , ದಿಲ್ ತೇರಾ ದೀವಾನ್ , ಯಕೀನ್ , ಪ್ರಿನ್ಸ್ , ಲೌ ಇನ್ ಟೊಕಿಯೊ , ಬೇಟಿ ಬೇಟೆ , ದಿಲ್ ಏಕ್ ಮಂದಿರ್ , ದಿಲ್ ಅಪನಾ ಔರ್ ಪ್ರೀತ್ ಪರಾಯಿ , ಗಬಾನ್ ಮತ್ತುಜಬ್ ಕಿಸಿಸೆ ಹೋತಾ ಹೈ .

ರವಿ ಅವರೊಂದಿಗೆ ಒಡನಾಟ

ಬದಲಾಯಿಸಿ

ರಫಿ ಅವರು ತಮ್ಮ ಮೊದಲ ಫಿಲ್ಮ್ ಫೇರ್ ಅವಾರ್ಡ್ ಅನ್ನು ರವಿ ಅವರು ಸಂಯೋಜಿಸಿದ ಚೌದವೀ ಕಾ ಚಾಂದ್ ನ (೧೯೬೦) ಶೀರ್ಷಿಕೆ ಹಾಡಿಗಾಗಿ ಪಡೆದರು. ಅವರು ನೀಲ್ ಕಮಲ್ (೧೯೬೮) ಚಿತ್ರದ "ಬಾಬೂಲ್ ಕಿ ದುವಾಯೇ ಲೇತಿ ಜಾ" ಹಾಡಿಗಾಗಿ ನ್ಯಾಶನಲ್ ಅವಾರ್ಡ್ ಅಂದರೆ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು. ರಫಿ ಈ ಹಾಡಿನ ಧ್ವನಿ ಮುದ್ರಣದ ಸಂದರ್ಭದಲ್ಲಿ ಸ್ವತಃ ಕಣ್ಣೀರಿಟ್ಟರು. ಅವರು ಈ ವಿಷಯವನ್ನು ತಮ್ಮ ಸಂದರ್ಶನ ಬಿಬಿಸಿಯಲ್ಲಿನ ೧೯೭೭ ರ ಸಂದರ್ಭದಲ್ಲೇ ಬಹಿರಂಗಪಡಿಸಿದ್ದಾರೆ.[೨೦]

ರವಿ ಮತ್ತು ರಫಿ ಅವರು ಹಲವು ಜೊತೆಯಾಗಿ ಹಾಡುಗಳಿಗೆ ಅಂದರೆ, ಚೀನಾ ಟೌನ್ (೧೯೬೨), ಕಾಜಲ್ (೧೯೬೫), ಮತ್ತು ದೋ ಬದನ್ (೧೯೬೬).

ಮದನ್ ಮೋಹನ್ ರೊಂದಿಗಿನ ಒಡನಾಟ

ಬದಲಾಯಿಸಿ

ಮದನ್ ಮೋಹನ್ ಅವರೂ ಕೂಡ ರಫಿ ಅವರನ್ನು ತಮ್ಮ ಅಚ್ಚುಮೆಚ್ಚಿನ ಹಾಡುಗಾರರೆಂದು ಪರಿಗಣಿಸಿದ್ದರು. ರಫಿ ಅವರ ವೈಯಕ್ತಿಕ ಹಾಡು ಮದನ ಮೋಹನ್ ಅವರ ಆಂಖೇ (೧೯೫೦)"ಹಮ್ ಇಶ್ಕ್ ಮೆ ಬರ್ಬಾದ್ ಹೈ ಬರ್ಬಾದ್ ರಹೆಂಗೆ"ಹಾಡು ಮೊದಲಿನದಾಗಿದೆ.[೧೧] ಅವರು ತಮ್ಮ ತಂಡದೊಂದಿಗೆ ಹಲವಾರು ಹಾಡುಗಳನ್ನು ಹೊರತಂದರು."ತೇರಿ ಆಂಖೊ ಕೆ ಸಿವಾ"ರಂಗ್ ಔರ್ ನೂರ್ ಕಿ ಬಾರಾತ್,"ಯೆಹ್ ದುನಿಯಾ ಯೆಹೆ ಮೆಹೆಫಿಲ್" ಮತ್ತು "ತುಮ್ ಜೊ ಮಿಲ್ ಗಯೆ ಹೋ" ಇತ್ಯಾದಿ ವಿಕ್ರಮ ಸಾಧಿಸಿದವು.

ಒ.ಪಿ ನಯ್ಯರ್ ಅವರೊಂದಿಗಿನ ಒಡನಾಟ

ಬದಲಾಯಿಸಿ

ರಫಿ ಮತ್ತು ಒ.ಪಿ ನಯ್ಯರ್ ೧೯೫೦ ಮತ್ತು ೧೯೬೦ರಲ್ಲಿ ಜೋಡಿಯಾಗಿ ಸಂಗೀತ ರಚಿಸಿದರು. ಒ.ಪಿ ನಯ್ಯರ್ ಒಮ್ಮೆ "ಒಂದು ವೇಳೆ ಮೊಹಮ್ಮದ್ ಇಲ್ಲದೇ ಹೋಗಿದ್ದರೆ ಎಂದು ಉದ್ಘರಿಸಿದ್ದಾರೆ. ರಫಿ,ಇರದಿದ್ದರೆ ಒ.ಪಿ ನಯ್ಯರ್ ಇರುತ್ತಿರಲಿಲ್ಲ."[this quote needs a citation] ಅವರು ಮತ್ತು ರಫಿ ಜೊತೆಯಾಗಿ ಹಲವು ಹಾಡುಗಳನ್ನು ಸಂಯೋಜಿಸಿದ್ದರು.ಅದರಲ್ಲಿ "ಯೆಹ್ ಹೈ ಬಾಂಬೆ ಮೇರಿ ಜಾನ್"ಕೂಡ ಒಂದು ಜನಪ್ರಿಯವಾಗಿತ್ತು. ಅವರು ಹಾಡುಗಾರ-ನಟ ಕಿಶೋರ್ ಕುಮಾರ್ಅವರಿಗಾಗಿ – ರಫಿ ಅವರು "ಮನ್ ಮೋರೆ ಬಾವರಾ ಹಾಡನ್ನು ರಾಗಿಣಿ ಗಾಗಿ ಹಾಡಲು ಹೇಳಿದರು. ನಂತರ ರಫಿ ಅವರು ಕಿಶೋರ್ ಕುಮಾರ್ ಅವರಿಗಾಗಿ ಬಾಗಿ ,ಶೆಹಜಾದಾ ಮತ್ತು ಶರಾರತ್ ಚಿತ್ರಗಳಿಗಾಗಿ ಹಾಡಿದರು. ಒ.ಪಿ ನಯ್ಯರ್ ಅವರು ರಫಿ ಮತ್ತು ಆಶಾ ಭೋಶಲೆ ಅವರ ಜೋಡಿಯನ್ನು ತಮ್ಮ ಹಾಡುಗಳಿಗೆ ಜೋಡಿಯಾಗಿ ಬಳಸಿಕೊಂಡರು. ಈ ಜೋಡಿಯು ೧೯೫೦ ಮತ್ತು ೧೯೬೦ ರಲ್ಲಿ ನಯಾ ದೌರ್ (೧೯೫೭), ತುಮ್ಸಾ ನಹಿ ದೇಖಾ (೧೯೫೭), ಮತ್ತು ಕಾಶ್ಮೀರ್ ಕಿ ಕಲಿ (೧೯೬೪)ಚಿತ್ರಗಳಿಗಾಗಿ ಗೀತ ರಚಿಸಿತು. ರಫಿ ಒಟ್ಟು ೧೯೭ ಹಾಡುಗಳನ್ನು ನಯ್ಯರ್ ಅವರಿಗಾಗಿ ಹಾಡಿದರೆ ಅದರಲ್ಲಿ (೫೬ ವೈಯಕ್ತಿಕ)ಹಾಡುಗಳಾಗಿವೆ.[೨೧] ಆ ಹಾಡು "ಜವಾನಿಯಾ ಯೆಹ್ ಮಸ್ತ್ ಮಸ್ತ್"ಮತ್ತು ಶೀರ್ಷಿಕೆ ಹಾಡು "ಯುನ್ ತೊ ಹಮನೆ ಲಾಖ್ ಹಸೀ ದೇಖಾ ಹೈ,ತುಮ್ಸಾ ನಹಿ ದೇಖಾ"ವನ್ನು ತುಮ್ಸಾ ನಹಿ ದೇಖಾ ಗಾಗಿ ಹಾದಿದ್ದಾರೆ. ಅದರ ನಂತರ ಕಾಶ್ಮೀರ್ ಕಿ ಕಲಿ ಗಾಗಿ "ತಾರೀಫ್ ಕರೂ ಕ್ಯಾ ಉಸ್ಕಿ ಜಿಸ್ನೆ ತುಮ್ಹೆ ಬನಾಯಾ"ಮುಂತಾದ ಹಾಡುಗಳನ್ನು ಹಾಡಿದ್ದಾರೆ.[೨೨]

ಲಕ್ಷ್ಮಿಕಾಂತ್-ಪ್ಯಾರೆಲಾಲ್ ರೊಂದಿಗಿನ ಒಡನಾಟ

ಬದಲಾಯಿಸಿ

.ಲಕ್ಷ್ಮಿಕಾಂತ್-ಪ್ಯಾರೆಲಾಲ್ (ಎಲ್-ಪಿ) ಸಂಗೀತ ಸಂಯೋಜಕ ಜೋಡಿ ಕೂಡ ರಫಿ ಅವರನ್ನು ಕೆಲ ದಿನಗಳ ಕಾಲ ಪೋಷಿಸಿಕೊಂಡು ಬಂದಿತೆಂದೇ ಹೇಳಬಹುದು.ಅವರ ಮೊದಲ ಚಿತ್ರ ಪಾರಸಮಣಿ (೧೯೬೩)ರಿಂದ ಹಿಡಿದು ಅವರನ್ನೇ ನೆಚ್ಚಿಕೊಂಡಿತ್ತು. ರಫಿ ಮತ್ತು ಎಲ್-ಪಿ ಜೋಡಿಯ ದೋಸ್ತಿ (೧೯೬೪)ಚಿತ್ರದ "ಚಾಹೂಂಗಾ ಮೈ ತುಝೆ ಸಾಂಜ್ ಸವೇರೆ"ಹಾಡಿಗಾಗಿ ಇಬ್ಬರಿಗೂ ಫಿಲ್ಮ್ ಫೇರ್ ಅವಾರ್ಡ್ ದೊರೆಯಿತು. ರಫಿ ಒಟ್ಟು ೩೬೯ ಹಾಡುಗಳನ್ನು ಎಲ್-ಪಿ ಗಾಗಿ ಹಾಡಿದ್ದಾರೆ.[೧೮](ಅದರಲ್ಲಿ ೧೮೬ ವೈಯಕ್ತಿಕ)

ಆಗ ೧೯೫೦ ಮತ್ತು ೧೯೭೦ ರ ಮಧ್ಯದ ಅವಧಿಯಲ್ಲಿ ರಫಿ ಬಾಲಿಯುಡ್ ನಲ್ಲಿ ಬಹಳಷ್ಟು ಬೇಡಿಕೆಯ ಗಾಯಕರಾಗಿದ್ದರು.[೨೩] ಹಿಂದಿ ಚಲನಚಿತ್ರಗಳಲ್ಲಿ ಹಲವಾರು ಚಿತ್ರನಾಯಕರೆನಿಸಿದ ತಾರೆಗಳಿಗಾಗಿ ಹಾಡಿದ್ದಾರೆ.[೨೪] ಅವರು ೧೯೬೫,ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದರು. ರಫಿ ಎರಡು ಹಿಂದಿ ಹಾಡುಗಳನ್ನು ಇಂಗ್ಲೀಷ್ ೭ನಲ್ಲಿ ೧೯೬೮ ರಲ್ಲಿ ಬಿಡುಗಡೆಯಾದದಕ್ಕೆ ಧ್ವನಿಮುದ್ರಿಸಿದ್ದಾರೆ. ಅವರು ಕ್ರೊಯಲೆ ಚಿತ್ರಕ್ಕಾಗಿಯೂ ಹಾಡಿದ್ದಾರೆ.ಅವರು ಮಾರಿಶಸ್ ಗೆ ೧೯೬೦ ರ ಕೊನೆಯಲ್ಲಿ ಭೇಟಿ ನೀಡಿದಾಗ ಈ ಕೊಡುಗೆ ನೀಡಿದ್ದಾರೆ.[] ರಫಿ ಅವರು ಎರಡು ಇಂಗ್ಲೀಷ್ ಅಲ್ಬಮ್ ಗಳನ್ನೂ ಸಹ ಧ್ವನಿಮುದ್ರಿಸಿದ್ದಾರೆ. ಅದರಲ್ಲೊಂದುಪಾಪ್ ಹಿಟ್ಸ್ . ಬಾಲಿಯುಡ್ ನಲ್ಲಿ ಧ್ವನಿ ಏರಿಳಿತ ಮಾಡುವಲ್ಲಿ ಅಥವಾ ಯೊಡೆಲಿಂಗ್ ನಲ್ಲಿ ಸಾಮಾನ್ಯವಾಗಿ ಕಿಶೋರ್ ಕುಮಾರ ಪ್ರಖ್ಯಾತರಾಗಿದ್ದಾರೆ.ಆದರೆ ರಫಿ ಕೂಡಾ ಈ ಧ್ವನಿ ಬದಲಾವಣೆಯ ತ್ವರಿತ ವಿಧಾನವನ್ನು ಭಾರತದ ಹಿನ್ನಲೆ ಗಾಯನಗಳಲ್ಲಿ ಜನಪ್ರಿಯವಾಗುವಂತೆ ಮಾಡಿದ್ದಾರೆ. ರಫಿ ತಮ್ಮ ಧ್ವನಿ ಏರಿಳಿತದ ಬದಲಾವಣೆಯನ್ನು ಹಳೆಯ ಹಾಡುಗಳಲ್ಲಿ ತೋರಿಸಿದ್ದಾರೆ."ಹೆಲ್ಲೊ ಸ್ವೀಟಿ ಸೆವೆಂಟೀನ್"(ಇದು ಆಶಾ ಭೋಸ್ಲೆ ಅವರೊಂದಿಗಿನ ಯುಗಳ ಗೀತೆ)"ಓ ಚಲೆ ಹೊ ಕಹಾಂ"ದಿಲ್ ಕೆ ಐನೆ ಮೆ",ಮತ್ತು ಉನ್ ಸೆ ರಿಪ್ಪಿ ಟಿಪ್ಪಿ ಹೋಗಯಿ"(ಗೀತಾ ದತ್ತರೊಂದಿಗೆ ಯುಗಳ ಗೀತೆ)ಇತ್ಯಾದಿಗಳಲ್ಲಿ ಕಾಣಬಹುದು.

ವಿವಾದಗಳು

ಬದಲಾಯಿಸಿ

ಸಂಭಾವನೆ ವಿಷಯ

ಬದಲಾಯಿಸಿ

ಲತಾ ಮಂಗೇಶ್ಕರ್ ಆಗ ರಫಿಯ ಬೇಡಿಕೆ ಪರಿಗಣಿಸಿ ೧೯೬೨-೧೯೬೩ ರಲ್ಲಿ ತಮ್ಮ ಬೇಡಿಕೆಯಡಿ ತಮ್ಮ ರಾಜಧನದ ಪ್ರಮಾಣದ ಶೇಕಡಾ ೫ ರಷ್ಟರ ಪಾಲು ಕೇಳಲು ಅದೇ ಅರ್ಧದಷ್ಟು ಪಾಲು ಕೇಳಲು ಆಗ್ರಹಿಸಿದಾಗ ಅದು ಸಂಯೋಜಕರ ಗಲಿಬಿಲಿಗೆ ಕಾರಣವಾಗುತ್ತದೆ. ಲತಾ ಅವರ ಬೇಡಿಕೆ ಹಿನ್ನಲೆಯಲ್ಲಿ ಈ ಜೋಡಿ ಹಾಡಿಗಾಗಿ ಸಂಗೀತ ನಿರ್ದೇಶಕರುಗಳು ಅರ್ಧ ಸಂಭಾವನಾ ರಾಜಧನಕ್ಕೊಪ್ಪಬೇಕಲ್ಲದೇ ೫ ರ ಶೇಕಡಾವನ್ನು ಸಂಯೋಜನಕನ ಪಾಲಿಗಿರಲೆಂದು ಹೇಳಿದ್ದರು. ರಫಿ ಹೇಳುವಂತೆ ತಮ್ಮ ಹಾಡಿಗಾಗಿನ ಬೇಡಿಕೆಯ ಸಂಭಾವನೆ ನೀಡಿದ ಅನಂತರ ನಿರ್ಮಾಪಕ-ತಮ್ಮ ಜವಾಬ್ದಾರಿ ಕೊನೆಯಾಗುವುದೆಂದು ಹೇಳಿಕೆ ನೀಡಿದ್ದಾರೆ. ಅದರ ನಂತರ ಚಿತ್ರ ಯಶಸ್ಸಾದರೆ ಚಿತ್ರ ನಿರ್ಮಾಪಕನಿಗೆ ಉತ್ತಮ ಅದೃಷ್ಟ,ಅದಕ್ಕೆ ಗ್ರಾಮ್ಕೊ (HMV)ದ ಸಂಭಾವನೆಯನ್ನು ಅವರೇ ಪಡೆಯುವ ಅವಕಾಶ ಪಡೆಯುತ್ತಾರೆ.

ಒಂದು ಚಿತ್ರ ವಿಫಲವಾದರೆ ಈಗಾಗಲೇ ತಾನು ತನ್ನ ಹಾಡಿಗೆ ಸಂಭಾವನೆ ಪಡೆದಿದ್ದು ಹೀಗಾಗಿ ಚಿತ್ರ ನಿರ್ಮಾಪಕ ಮತ್ತು ತಾವು ಆ ಜವಾಬ್ದಾರಿ ಕಳೆದುಕೊಳ್ಳುತ್ತೇವೆ,ಎನ್ನುತ್ತಾರೆ. ರಫಿ ಹೇಳುವಂತೆ "ನಾವು ಹಿನ್ನಲೆ ಗಾಯಕರಾಗಿ ಹಾಡನ್ನು ಸೃಜಿಸಲಾರೆವು,ನಾವು ಕೇವಲ ಅದನ್ನು ಪರದೆ ಮೇಲೆ ಸಂಗೀತ ನಿರ್ದೇಶಕ ಹೇಳಿದಂತೆ ಮರು-ಸೃಷ್ಟಿ ಮಾಡುತ್ತೇವೆ. ನಾವು ಹಾಡುತ್ತೇವೆ,ಅವರು ಸಂಭಾವನೆ ನೀಡುತ್ತಾರೆ,ಅಲ್ಲಿಗೆ ನಮ್ಮಿಬ್ಬರ ಬದ್ದತೆ ಮುಗಿಯಿತು."[this quote needs a citation]

ಲತಾ,ಈ ಹೇಳಿಕೆಯು ಸಂಭಾವನಾ ವಿಷಯದಲ್ಲಿ ಇದು ಅಸ್ಥಿರತೆಯನ್ನು ಹುಟ್ಟು ಹಾಕುತ್ತದೆ ಎನ್ನುತ್ತಾರೆ. ಲತಾ ಅವರು ನಂತರ ತಾವು ರಫಿಯೊಂದಿಗೆ ಹಾಡುವುದಿಲ್ಲ ಎಂದು ಹೇಳಿದರು,ಆದರೆ ರಫಿ ಒಬ್ಬರೇ ಆಗ ಲತಾ ಜೊತೆ ಹಾಡಲು ಉತ್ಸುಕತೆ ತೋರಿದ್ದರು.[೨೫][೨೬] ಅದಾದ ನಂತರ ಎಸ್.ಡಿ ಬರ್ಮನ್ ಅವರ ಸಂಧಾನದ ಮೂಲಕ ತಮ್ಮ ನಿರ್ಧಾರ ಬದಲಿಸಿ ಜೊತೆಯಾಗಿ ಹಾಡಲು ಒಪ್ಪಿದರು.

ಗಿನ್ನೆಸ್ ವಿಶ್ವ ದಾಖಲೆಗಳು

ಬದಲಾಯಿಸಿ

ರಫಿ ತಮ್ಮ ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರನ್ನು ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಪರಿಚಯಿಸುವ ವಿಷಯದಲ್ಲಿ ವಿವಾದಕ್ಕೊಳಗಾದರು. ಅವರು ಜೂನ್ ೧೧,೧೯೭೭ ರಲ್ಲಿ ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಪತ್ರವೊಂದರಲ್ಲಿ ಲತಾ ಮಂಗೇಶಕರ್ ಅವರು ಅತ್ಯಧಿಕ ಹಾಡುಗಳ ಧ್ವನಿಮುದ್ರಣ("೨೫,೦೦೦ ಗಿಂತ ಕಡಿಮೆ ಗಿನ್ನೀಸ್ ದಾಖಲೆ ಪ್ರಕಾರ)ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಿದ್ದರು. ಅವರು ಗಿನ್ನೀಸ್ ನಿಂದ ಮರು ಉತ್ತರ ಪಡೆದ ಅನಂತರ ನವೆಂಬರ್ ೨೦,೧೯೭೯ ರಲ್ಲಿ ಅವರು "ನಾನು ನಿರಾಸೆಗೊಂಡಿದ್ದೇನೆ,ಮರುಪರಿಶೀಲಿಸುವಂತೆ ಸಲ್ಲಿಸಿದ ಅರ್ಜಿಗೆ ಯಾವುದೇ ಉತ್ತರವಿಲ್ಲ ಮತ್ತು ಮಂಗೇಶ್ಕರ್ ಅವರ ವಿಶ್ವ ದಾಖಲೆ ಬಗ್ಗೆ ಕೇಳಿದ್ದು ಯಾರ ಕಿವಿಗಳಿಗೂ ಬಿದ್ದಿಲ್ಲ."[೨೭]

ಆಗ ೧೯೭೭ ರ ನವೆಂಬರ್ ರಲ್ಲಿ ಬಿಬಿಸಿ ಗೆ ನೀಡಿದ ಸಂದರ್ಶನವೊಂದರಲ್ಲಿ, ರಫಿ ಆ ಅವಧಿಯಲ್ಲಿ ೨೫,೦೦೦ ದಿಂದ ೨೬,೦೦೦ ವರೆಗೂ ಹಾಡಿರುವುದಾಗಿ ಹೇಳಿದರು.[೨೦]

ಆದರೆ ರಫಿ ಅವರ ಮರಣಾಂತರ ೧೯೮೪, ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಸಂಪುಟದಲ್ಲಿ ಲತಾ ಮಂಗೇಶ್ಕರ್ ಅವರನ್ನು "ಅತಿ ಹೆಚ್ಚು ರೆಕಾರ್ಡಿಂಗ್ಸ್ "ಮಾಡಿದವರೆಂದು ತಿಳಿಸಿದೆ.ಆದರೆ "ಮೊಹಮ್ಮದ್ ರಫಿ (d ೧ ಆಗಸ್ಟ್ ೧೯೮೦) ವರೆಗೆ ಭಾರತದ ೧೧ ಭಾಷೆಗಳಲ್ಲಿ ಸುಮಾರು ೧೯೪೪ ರಿಂದ ಏಪ್ರಿಲ್ ೧೯೮೦ ರ ಅವಧಿಯಲ್ಲಿ ತಾವು ೨೮,೦೦೦ ಹಾಡುಗಳ ಧ್ವನಿ ಮುದ್ರಣ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಎಂದೂ ತಿಳಿಸಿದೆ. [sic][೨೮][೨೮] ಆದರೆ ಸದ್ಯ ಲಭ್ಯ ದಾಖಲೆ ಪ್ರಕಾರ ರಫಿ ೪,೫೧೬ ಹಿಂದಿ ಚಲನಚಿತ್ರ ಗೀತೆಗಳು,೧೧೨ ಹಿಂದಿಯೇತರ ಸಿನೆಮಾ ಹಾಡುಗಳು ಮತ್ತು ೩೨೮ ಖಾಸಗಿ (ಚಲನಚಿತ್ರವಲ್ಲದ)ಹಾಡುಗಳನ್ನು ೧೯೪೫ ರಿಂದ ೧೯೮೦ ರ ವರೆಗೆ ಹಾಡಿದ್ದಾರೆ.[೨೮] ಲತಾ ಮತ್ತು ರಫಿ ಅವರಿಬ್ಬರ ಗಿನ್ನೀಸ್ ದಾಖಲೆಗಳನ್ನು ೧೯೯೧ ರಲ್ಲಿ ತೆಗೆದು ಹಾಕಲಾಯಿತು.

ವರ್ಷ ೧೯೭೦ ರ ಆರಂಭದಲ್ಲಿ

ಬದಲಾಯಿಸಿ

ರಫಿ ೧೯೭೦ ರಲ್ಲಿ ಅನಾರೋಗ್ಯಕ್ಕೆ ತುತ್ತಾದಾಗ ಅತ್ಯಂತ ಕಡಿಮೆ ಹಾಡುಗಳನ್ನು ಹಾಡಿದ್ದಾರೆ.[೨೯] ಕೆಲವರು[who?] ಹೇಳುವ ಪ್ರಕಾರ ಹಜ್ ಯಾತ್ರೆ ಸಂದರ್ಭದಲ್ಲಿ ಹಾಡದಿರುವಂತೆ ಅವರನ್ನು ಆಗ ಎಚ್ಚರಿಸಲಾಗಿತ್ತು.[೩೦]

ಅದೇ ವೇಳೆಗೆ ಕಿಶೋರ್ ಕುಮಾರ್ ಅವರ ಹಾಡುಗಳ ಜನಪ್ರಿಯತೆ ಹೆಚ್ಚಿತು.ಆರಾಧಾನಾ ಚಿತ್ರಕ್ಕಾಗಿ ಮೊಹಮ್ಮದ ರಫಿ ಹಜ್ಜ್ ಯಾತ್ರೆ ಸಂದರ್ಭದ ೧೯೬೯ ರಲ್ಲಿ ಅವರ ಜಾಗೆಯಲ್ಲಿ ಕಿಶೋರ್ ಕುಮಾರ್ ಹಾಡಿದ್ದರು.[೨೫][೩೧] ಆರಾಧಾನಾ ಕ್ಕಾಗಿ ಎಸ್.ಡಿ ಬರ್ಮನ್ ಅವರು ಸಂಗೀತ ಸಂಯೋಜಿಸಿದ್ದರು.ಅದರಲ್ಲಿ ಪುರುಷ ಧ್ವನಿಗಾಗಿ ಎರಡು ಹಾಡುಗಳಾದ "ಬಾಗೊಮೆ ಬಹಾರ್ ಹೈ ಮತ್ತು ಗುನ್ ಗುನಾ ರಹೇ ಹೈ ಭಂವರೆ"ಗಳನ್ನು ರಫಿ ಅವರಿಂದ ಹಾಡಿಸಿದ್ದರು.[೧೯] ಇವೆರಡರ ಧ್ವನಿ ಮುದ್ರಣದ ನಂತರ ಎಸ್.ಡಿ ಬರ್ಮನ್ ಅವರು ಅನಾರೋಗ್ಯಕ್ಕೊಳಗಾದರು.ನಂತರ ಅವರ ಪುತ್ರ ಮತ್ತು ಸಹಾಯಕ ಆರ್.ಡಿ ಬರ್ಮನ್ ಅವರು ಮುದ್ರಣ ಕಾರ್ಯ ಕೈಗೆತ್ತಿಕೊಂಡರು. ಆರ್. ಡಿ. ಬರ್ಮನ್ ಅವರು ಕಿಶೋರ್ ಕುಮಾರ್ ಅವರನ್ನು ಕರೆದು ವೈಯಕ್ತಿಕ ಗೀತೆಗಳಾದ "ರೂಪ್ ತೇರಾ ಮಸ್ತಾನಾ" ಮತ್ತು "ಮೇರೆ ಸಪ್ನೊಂಕಿ ರಾಣಿ" ಗಳಿಗೆ ಅವರ ಧ್ವನಿ ಪಡೆದರು.

ಆದರೆ ೧೯೭೧-೧೯೭೩ ರ ಮಧ್ಯೆ ರಫಿ ಅವರ ಸಂಗೀತ ಕೊಡುಗೆ ಕ್ಷೀಣಿಸಿತು;ಆದರೂ ಅವರು ಕೆಲವು ಹಾಡುಗಳಿಗೆ ಕಂಠದಾನ ಮಾಡಿದರು.[೩೨] ರಫಿ ಅವರ ೧೯೭೦ ರ ಆರಂಭಿಕ ಹಾಡುಗಳು ಲಕ್ಷ್ಮಿಕಾಂತ್ ಪ್ಯಾರೆಲಾಲ್,ಮದನ್ ಮೋಹನ್,ಆರ್.ಡಿ ಬರ್ಮನ್ ಮತ್ತು ಎಸ್.ಡಿ ಬರ್ಮನ್ ಇವರ ಸಂಗೀತ ನಿರ್ದೇಶನದಲ್ಲಿ ಆರಂಭಿಕವಾಗಿ ಕೆಲವೇ ಕೆಲವು ಇದ್ದವು ಇವುಗಳಲ್ಲಿ "ತುಮ್ ಮುಝೆ ಯುವ್ ಭೂಲಾ ನಾ ಪಾವೋಗೆ" (ಒಂದು ಆರಂಭಿಕ ರಫಿ ಅವರ ನಾಂದಿ ಹಾಡು ೧೯೭೧ ರಲ್ಲಿ ಬಂದಿತು.) ಪಗಲಾ ಕಹಿ ಕಾ,"ಯೆಹ್ ದುನಿಯಾ ಯೆಹ್ ಮೆಹೆಫಿಲ್ ಹೀರ್ ರಾಂಜಾ ದಿಂದ (೧೯೭೦), "ಝಿಲ್ ಮಿಲ್ ಸಿತಾರೊಂಕಾ" ಜೀವನ ಮೃತ್ಯು (ಲತಾ ಮಂಗೇಶಕರ್ ಅವರೊಂದಿಗೆ ಯುಗಳ ಗೀತೆ,೧೯೭೦),"ಗುಲಾಬಿ ಆಂಖ್ಯೆ"ದಿ ಟ್ರೇನ್ ನಿಂದ (೧೯೭೦),"ಯೆಹ್ ಜೊ ಚಿಲ್ಮನ್ ಹೈ" ಮತ್ತು "ಇತನಾ ತೊ ಯಾದ್ ಹೈ ಮುಝೆ"ಮೆಹಬೂಬ್ ಕಿ ಮೆಹಂದಿ ಯಿಂದ (೧೯೭೧),"ಮೇರೆ ಮನ್ ತೇರೆ ಪ್ಯಾಸಾ" ಗ್ಯಾಂಬಲರ್,"ಚಲೊ ದಿಲ್ ದಾರ್ ಚಲೊ" ೧೯೭೨ ಬಿಡುಗಡೆಯಾದಪಾಕೀಜಾ,ದಿಂದ "ಚುರಾ ಲಿಯಾ ಹೈ ತುಮ್ನೆ"ಯಾದೊಂಕಿ ಬಾರಾತ್ (ಇದು ಆಶಾ ಭೋಸ್ಲೆ ಅವರೊಂದಿಗೆ ಯುಗಳ ಗೀತೆ, ೧೯೭೩ರಲ್ಲಿ ),"ನಾ ತು ಜಮೀನ್ ಕೆ ಲಿಯೆ" ೧೯೭೩ ರಲ್ಲಿ ಬಿಡುಗಡೆಯಾಯಿತು.ದಿಲೀಪ್ ಕುಮಾರ್ ಚಿತ್ರ ದಾಸ್ತಾಯೆ,"ತುಮ್ ಜೊ ಮಿಲ್ ಗಯೆ ಹೊ" ಹಸ್ತೆ ಝಕಮ್ದಿಂದ (೧೯೭೩),"ತೇರಿ ಬಿಂದಿಯಾ ರೇ", ಅಭಿಮಾನದಿಂದ(೧೯೭೩) ಮತ್ತು "ಆಜ್ ಮೌಸಮ್ ಬಡಾ ಬೇಮಾನ್ ಹೈ" ಲೋಫರ್ ಚಿತ್ರದಿಂದ ಹಾಡು.(೧೯೭೩).

ನಂತರದ ವರ್ಷಗಳು

ಬದಲಾಯಿಸಿ

ರಫಿ ೧೯೭೦-ರ ಮಧ್ಯದಲ್ಲಿ ಮತ್ತೆ ಗಾಯಕನಾಗಿ ವಾಪಸಾದರು. ಅವರು ೧೯೭೪ ರಲ್ಲಿ ಫಿಲ್ಮ್ ವರ್ಲ್ಡ್ ಮ್ಯಾಗ್ಜಿನ್ ಬೆಸ್ಟ್ ಸಿಂಗರ್ ಅವಾರ್ಡ್ ನ್ನು ಅವರ "ತೆರೀ ಗಲಿಯೊಂ ಮೆ ನಾ ರಖೆಂಗೆ ಕದಮ್ ಆಜ್ ಕೆ ಬಾದ್"(ಹವಸ್ ೧೯೭೪)ಹಾಡಿಗಾಗಿ ಪಡೆದರು.ಇದನ್ನು ಉಷಾ ಖನ್ನಾ ರಚಿಸಿದ್ದರು.[೧೮]

ಅದಲ್ಲದೇ ೧೯೭೭ ರಲ್ಲಿ ಎರಡು ಫಿಲ್ಮ್ ಫೇರ್ ಅವಾರ್ಡ್ ಮತ್ತು ನ್ಯಾಶನಲ್ ಅವಾರ್ಡ್ ಗಳನ್ನು "ಕ್ಯಾ ಹುವಾ ತೇರಾ ವಾದಾ"ಇದಕ್ಕೆ ಪಡೆದರು.ಇದು ಹಮ್ ಕಿಸಿ ಸೆ ಕಮ್ ನಹಿ ಚಿತ್ರದ ಹಾಡಾಗಿದ್ದು ಆರ್.ಡಿ ಬರ್ಮನ್ ಅವರು ಇದಕ್ಕೆ ಗೀತ ರಚನೆ ಮಾಡಿದ್ದಾರೆ.[೧೯] ರಫಿ ಅವರು ರಿಶಿ ಕಪೂರ್ ಅವರ ಚಿತ್ರಗಳಾದ ಅಮರ್ ಅಕ್ಬರ್ ಅಂಥೊನಿ (೧೯೭೭),ಸರ್ಗಮ್ (೧೯೭೯) ಮತ್ತುಕರ್ಜ್ (೧೯೮೦)ಎಂಬಿತ್ಯಾದಿಗಳಿಗೆ ಹಾಡಿದ್ದಾರೆ. ಅವರಕವ್ವಾಲಿ "ಪರ್ಧಾ ಹೈ ಪರ್ಧಾ" ಅಮರ್ ಅಕ್ಬರ್ ಅಂಥೊನಿ (೧೯೭೭)ಒಂದು ಸೂಪರ್ ಹಿಟ್ ಆಗಿತ್ತು. ರಫಿ ಅವರ ೧೯೭೦ ರ ಕೊನೆಯಲ್ಲಿ ಮತ್ತು ೮೦ ರ ಅರಂಭದಲ್ಲಿ ಹಾಡಿದ್ದೆಂದರೆ' ಲೈಲಾ ಮಜ್ನೂ (೧೯೭೬),ಅಪ್ನಾಪನ್ (೧೯೭೮),ಕುರ್ಬಾನ್ ,ದೋಸ್ತಾನಾ (೧೯೮೦), ದಿ ಬರ್ನಿಂಗ್ ಟ್ರೇನ್ (೧೯೮೦),ನಸೀಬ್ (೧೯೮೧), ಅಬ್ದುಲ್ಲಾ (೧೯೮೦),ಶಾನ್ (೧೯೮೦),ಮತ್ತು ಆಶಾ (೧೯೮೦)ಚಿತ್ರಗಳಲ್ಲಿ ಧ್ವನಿ ನೀಡಿದರು.

ರಫಿ ಅವರು ಜುಲೈ೩೧,೧೯೮೦,ಗುರುವಾರ ರಾತ್ರಿ ೧೦:೫೦ ರ ಸುಮಾರು ಹೃದಯಾಘಾತಕ್ಕೊಳಗಾಗಿ ಮೃತರಾದರು.[೩೩] ಅವರ ಕೊನೆಯ ಹಾಡು "ಶ್ಯಾಮ್ ಫಿರ್ ಕ್ಯುಂವ್ ಉದಾಸ್ ಹೈ ದೋಸ್ತ್"(ಆಸ್ ಪಾಸ್ )ಇದಕ್ಕಾಗಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಅವರ ಹಾಡಿಗೆ ಧ್ವನಿ ನೀಡಿದ್ದು ತಮ್ಮ ಸಾವಿನ ಕೆಲವು ಗಂಟೆಗಳ ಮುಂಚೆ ಧ್ವನಿಮುದ್ರಣ ಮಾಡಿದ್ದರು.[೩೪][೩೫] ಅವರು ನಾಲ್ವರು ಪುತ್ರರು (ಸಈದ್ ರಫಿ,ಖಲೀಲ್ ರಫಿ,ಹಮಿದ್ ರಫಿ,ಶಾಹಿದ್ ರಫಿ)ಮೂವರು ಪುತ್ರಿಯರಾದ (ಪರವೀನ್,ನಸ್ರೀನ್,ಯಾಸ್ಮಿನ್)ಮತ್ತು ೧೮ ಮೊಮ್ಮಕ್ಕಳನ್ನು ಅಗಲಿದ್ದಾರೆ.

ರಫಿ ಅವರ ಅಂತ್ಯಕ್ರಿಯೆ ಜುಹು ಮುಸ್ಲಿಮ್ ಸ್ಮಶಾನ ಭೂಮಿಯಲ್ಲಿ ನಡೆಯಿತು.[೩೬] ಅವರ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಸುಮಾರು ೧೦,೦೦೦ ಕ್ಕೂ ಹೆಚ್ಚು ಜನರು ಪಾಲ್ಗೊಂಡ ಮುಂಬಯಿನ ಅತಿ ದೊಡ್ಡ ಜನಸಮುದಾಯವಾಗಿತ್ತು.

ಆದರ ೨೦೧೦ ರಲ್ಲಿ ಮೃತ ಶರೀರಗಳಿಗೆ ಜಾಗ ಮಾಡಿಕೊಡುವ ಸಲುವಾಗಿ ಅವರ ಸಮಾಧಿಯನ್ನು ನಾಶಪಡಿಸಲಾಯಿತು. ಆದರೆ ಮೊಹಮ್ಮದ್ ರಫಿ ಅವರ ಅಭಿಮಾನಿಗಳು ಪ್ರತಿ ಡಿಸೆಂಬರ್ ೨೪ ಮತ್ತು ಜುಲೈ ೩೧ ಕ್ಕೆ ಇಲ್ಲಿಗೆ ಬಂದಾಗ ಅವರ ಸಮಾಧಿಯ ಹತ್ತಿರವಿದ್ದ ತೆಂಗಿನ ಮರವನ್ನು ಸಂಕೇತಿಸುತ್ತಾರೆ.[೩೭]

ಅವರು ಯಾವದೇ ದುಶ್ಚಟಗಳಿಗೆ ಬಲಿಯಾದವರಲ್ಲ,ಧಾರ್ಮಿಕ ಪ್ರವೃತ್ತಿಯ ಅವರು ಕರುಣಾಳು ವ್ಯಕ್ತಿಯಾಗಿದ್ದರು. ಆತ ಕಟ್ಟಾ ಮುಸ್ಲಿ ಆಗಿದ್ದರು. ಒಮ್ಮೆ ಅಷ್ಟಾಗಿ ಜನಪ್ರಿಯವಲ್ಲದ ಸಂಗೀತ ಸಂಯೋಜಕ ನಿಸಾರ್ ಬಾಜ್ಮಿ (ಅವರು ಪಾಕಿಸ್ತಾನದಿಂದ ವಲಸೆ ಬಂದಿದ್ದರು)ಅವರಲ್ಲಿ ಹಣವಿರದ ಕಾರಣ ರಫಿ ಕೇವಲ ಒಂದು ರೂಪಾಯಿ ಸಂಭಾವನೆ ತೆಗೆದುಕೊಂಡು ಹಾಡಿದರು. ಅವರು ನಿರ್ಮಾಪಕರಿಗೂ ಹಣಕಾಸಿನ ನೆರವು ನೀಡಿದ್ದರು. ಲಕ್ಷ್ಮಿಕಾಂತ್ (ಲಕ್ಷ್ಮಿಕಾಂತ್-ಪ್ಯಾರೆಲಾಲ್ ಜೋಡಿ)ಅವರ ಪ್ರಕಾರ "ಅವರು ಯಾವಾಗಲೂ ಯಾವುದೇ ಅಪೇಕ್ಷೆಗಳಿಲ್ಲದೇ ನೀಡುತ್ತಿದ್ದರು."ಎಂದು ಹೇಳುತ್ತಾರೆ.[೩೮]

ಪರಂಪರೆ

ಬದಲಾಯಿಸಿ

ಭಾರತ ಸರ್ಕಾರ ಅವರ ಸ್ಮರಣಾರ್ಥ ಎರಡು-ದಿನಗಳ ಸಾರ್ವಜನಿಕ ರಜೆ ಘೋಷಿಸಿ ಅವರ ಗೌರವ ಸಮರ್ಪಣೆ ಮಾಡಿದೆ.[೩೯]

ರಫಿ ಅವರ ಗೂಮ್ನಾಮ್ (೧೯೬೫),ಚಿತ್ರದ "ಜಾನ್ ಪೆಹೆಚಾನ್ ಹೊ", ಹಾಡನ್ನುಘೋಷ್ಟ್ ವರ್ಲ್ಡ್ (೨೦೦೧) ಚಿತ್ರದ ಧ್ವನಿಪಥದ ಜಾಡಿನಲ್ಲಿ ಅಳವಡಿಸಲಾಗಿದೆ. ಈ ಚಿತ್ರವು ನಾಯಕ ಪಾತ್ರವೊಂದು ಆಕೆಯ ಮಲಗುವ ಕೋಣೆಯ ಸುತ್ತ ನರ್ತಿಸುವುದಕ್ಕೆ ಗೂಮ್ನಾನ್ ವಿಡಿಯೊವನ್ನು ಅಳವಡಿಸಲಾಗಿದೆ.[೪೦]

ಅವರ "ಆಜ್ ಮೌಸಮ್ ಬಡಾ ಬೇಮಾನ್ ಹೈ"ಇದು ೨೦೦೧ ರಲ್ಲಿ ಮಾನ್ಸೂನ್ ವೆಡ್ಡಿಂಗ್ ನಲ್ಲಿ ಕಾಣಿಸಲಾಗಿದೆ.[೪೧]

ಅವರ ಹಾಡು "ಮೇರೆ ಮನ್ ತೇರೆ ಪ್ಯಾಸಾ"(ಗ್ಯಾಂಬ್ಲರ್ ),೧೯೬೦)ಇದರ ಧ್ವನಿಮುದ್ರಣವನ್ನು ಜಿಮ್ ಕ್ಯಾರೆಯ್-ಕಾಟೆ ವಿನ್ಸ್ಲೆಟ್ ಅಭಿನಯದ ಎಟರ್ನಲ್ ಸನ್ ಶೈನ್ ಆಫ್ ದಿ ಸ್ಪಾಟ್ ಲೆಸ್ ಮೈಂಡ್ ನಲ್ಲಿ (೨೦೦೪)ಅಳವಡಿಸಲಾಗಿದೆ. ಈ ಹಾಡನ್ನು ಕಾಟೆ ವಿನ್ಸ್ಲೆಟ್ಸ್ ಅಭಿನಯದ ವೇಳೆ ಅವರ ಮನೆಯಲ್ಲಿ ಹಿನ್ನಲೆ ಸಂಗೀತವಾಗಿ ಬಳಸಲಾಗಿದೆ.ಅದರ ನಾಯಕ-ನಾಯಿಕೆ ಮದ್ಯ ಸೇವಿಸಿ-ಸುಮಾರು ೦೦.೧೧.೧೪ ವೇಳೆ ಯಲ್ಲಿ)ಇದನ್ನು ಬಳಸಿಕೊಳ್ಳಲಾಗಿದೆ.[೪೨]

ಹಲವು ರಫಿಯವರ ಬಿಡುಗಡೆಯಾಗದ ಹಾಡುಗಳನ್ನು ಇತ್ತೆಚಿಗೆ ಬರಲಿರುವ ಸಾರೀ ಮ್ಯಾಡಮ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.[೪೩]

ರಫಿ ಅವರ ಬಗೆಗಿನ ಸಾಕ್ಷ್ಯಚಿತ್ರವೊಂದನ್ನು ದಿ ಫಿಲಮ್ಸ್ ಡಿವಿಜನ್ ಆಫ್ ಇಂಡಿಯಾ ಸಿದ್ದಪಡಿಸುತ್ತದೆ.[೪೪]

ಆಗಿನ ಬೇಸಿಗೆಯ ೨೦೦೮ ರಲ್ಲಿ ಸಿಟಿ ಆಫ್ ಬರ್ಮಿಂಗ್ ಹ್ಯಾಮ್ ಸಿಂಫೊನಿ ಆರ್ಕೆಸ್ಟ್ರಾ ಡಬಲ್ CD ಯೊಂದನ್ನು ಬಿಡುಗಡೆ ಮಾಡಿದೆ.ಇದನ್ನು ರಫಿ ನರುಜನ್ಮ ಪಡೆದರು ಎಂದು ಅದರ ಶೀರ್ಷಿಕೆ ಇದ್ದು ಇದರಲ್ಲಿ ಅವರ ೧೬ ಹಾಡುಗಳನ್ನು ಅಳವಡಿಸಿದ್ದಾರೆ. ಇದಕ್ಕಾಗಿ ಬಾಲಿಯುಡ್ ನ ಹಿನ್ನಲೆ ಗಾಯಕ ಸೋನು ನಿಗಮ್ ಇದಕ್ಕಾಗಿ ಯೋಜನೆ ಸಿದ್ದಪಡಿಸಿದ್ದಾರೆ.ಅವರು CBSO ಜೊತೆ ವಿವಿಧ ಕಡೆಗಳಲ್ಲಿ ಪ್ರವಾಸ ಕೈಗೊಂಡರು ಅದರಲ್ಲೂ ಲಂಡನ್ ನಲ್ಲಿನ ಇಂಗ್ಲೀಷ್ ನ್ಯಾಶನಲ್ ಒಪೆರಾ,ಮ್ಯಾಂಚೆಸ್ಟರ್ ನ ಅಪೊಲ್ಲೊ ಥೆಯೆಟರ್ ಮತ್ತು ಸಿಂಫೊನಿ ಹಾಲ್,ಬರ್ಮಿಂಗ್ ಹ್ಯಾಮ್ ಸ್ಥಳಗಳಿಗೂ ಭೇಟಿ ನೀಡಿದರು.[೪೫]

ಸದ್ಯ ಪದ್ಮಶ್ರೀ ಮೊಹಮ್ಮದ್ ರಫಿ ಚೌಕ್ ಮಂಬಯಿಯನ ಬಾಂದ್ರಾದ ಉಪನಗರದಲ್ಲಿ ಮತ್ತು ಪುಣೆ(ಎಂಜಿ ರಸ್ತೆ ವರೆಗೆ ವಿಸ್ತರಿಸಲಾಗುತ್ತದೆ)ಇದು ರಫಿ ಅವರ ಸ್ಮಾರಕವಾಗಿ ಹೆಸರು ಇಡಲಾಗಿದೆ.[೨೭]

ಜೂನ್ ೨೦೧೦ ರಲ್ಲಿ ರಫಿ ಅವರು ಜನಪ್ರಿಯ ಹಿನ್ನಲೆ ಗಾಯಕರಾಗಿದ್ದಾರೆ ಎಂದು ಔಟ್ ಲುಕ್ ಮ್ಯುಜಿಕ್ ಪೊಲ್ ನಲ್ಲಿ ಅವರು ಲತಾ ಮಂಗೇಶಕರ್ ಅವರೊಂದಿಗೆ ಉತ್ತಮ ಗಾಯಕರಾಗಿದ್ದಾರೆ.[೪೬] ಇದೇ ಪೊಲ್ ಮತದಾನದಲ್ಲಿ "ಮನ್ ರೆ ತು ಕಹೆ ನಾ ಧೀರೆ ಧಾರೆ"(ಚಿತ್ರಲೇಖಾ , ೧೯೬೪)ರಫಿ ಹಾಡಿದ್ದ #೧ ಹಾಡು ಇದರಲ್ಲಿದೆ.[೪೭] ಮೂರು ಹಾಡುಗಳನ್ನು #೨ ಗೆ ಈ ಹಾಡುಗಳನ್ನು ರಫಿ ಹಾಡಿದ್ದಾರೆ. ಈ ಹಾಡುಗಳೆಂದರೆ "ತೇರೆ ಮೇರೆ ಸಪ್ನಾ ಅಬ್ ಏಕ್ ರಂಗ್ ಹೈ" (ಗೈಡ್ , ೧೯೬೫) ಮತ್ತು "ದಿನ್ ಢಲ್ ಜಾಯೆ, ಹೈ ರಾತ್ ನಾ ಜಾಯೆ" (ಗೈಡ್ ,೧೯೬೫).

ಉತ್ತಮ ಗಾಯಕರ ಆಯ್ಕೆಗಾಗಿದ್ದ ಮತದಾನದ ಬಗ್ಗೆ ಔಟ್ ಲುಕ್ ಪ್ರಕಟಿಸಿತು.ಆಯ್ಕೆಯ ತೀರ್ಪುಗಾರರೆಂದರೆ ಉತ್ತಮ ಸಂಗೀತದ ಭಾರತದ ವಿದ್ವಾಂಸರು; ಅಭಿಜೀತ್, ಆದೆಶ್ ಶ್ರೀವಾಸ್ತವ್, ಅಲಿಶಾ ಚಿನೈ, ಅನು ಮಲಿಕ್, ಐಸಾನ್, ಗುಲ್ಜಾರ್, ಹರಿಹರನ್, ಹಿಮೆಶ್ ರೆಶಮ್ಮಿಯಾ, ಜತಿನ್, ಜಾವೆದ್ ಅಖ್ತರ್, ಕೈಲಾಶ್ ಖೆರ್, ಕವಿತಾ ಕೃಷ್ಣಮೂರ್ತಿ, ಖಯ್ಯಾಮ್, ಕುಮಾರ್ ಸಾನು, ಲಲಿತ್, ಲೊಯ್, ಮಹಾಲಕ್ಷ್ಮಿ ಐಯ್ಯರ್, ಮಹೆಂದ್ರ ಕಪೂರ್, ಮನ್ನಾ ಡೆಯ್, ಪ್ರಸೂನ್ ಜೊಶಿ, ರಾಜೇಶ್ ರೋಶನ್, ಸಾಧನಾ ಸರ್ಗಮ್, ಸಮೀರ್, ಸಂದೇಶ್ ಶ್ಯಾಂಡಿಲ್ಯ್, ಶಾನ್, ಶಂಕರ್, ಶಂತನು ಮೊಯಿತ್ರಾ, ಶ್ರೇಯಾ ಘೋಷಾಲ್, ಸೋನು ನಿಗಮ್ ಮತ್ತು ತಲತ್ ಅಜೀಜ್.[೪೮]

ಟೈಮ್ಸ್ ಆಫ್ ಇಂಡಿಯಾ ದಲ್ಲಿನ ಲೇಖನವೊಂದರಲ್ಲಿ ರಫಿ ಒಬ್ಬ "ವಿಭಿನ್ನ ಗಾಯಕ" ಎಂದು ವರ್ಣಿಸಿದೆ.ಅವರು ಶಾಸ್ತ್ರೀಯ,ರಾಕ್ ಮತ್ತು ರೊಲ್ ಅಲ್ಲದೇ ಯಾವುದೇ ಹಾಡನ್ನು ಸಲೀಸಾಗಿ ಹಾಡಬಲ್ಲರು ಎಂದು ಹೇಳಿದೆ ಅಲ್ಲದೇ ಅವರೊಬ್ಬ ೧೯೫೦ಮತ್ತು ೧೯೬೦ ರ ದಶಕದಲ್ಲಿ ಹಿಂದಿ ಚಲನಚಿತ್ರದ ಅಚ್ಚುಮೆಚ್ಚಿನ ಹಾಡುಗಾರರಾಗಿದ್ದಾರೆ. ಸಂಗೀತ ನಿರ್ದೇಶಕ ರಾಜೇಶ್ ರೋಶನ್ ಅವರೊಂದಿಗೆ ಕೆಲವು ಹಾಡುಗಳನ್ನು ಧ್ವನಿಮುದ್ರಿಸಿದ್ದಾರೆ,ಅವರ ಪ್ರಕಾರ"ಅವರೊಬ್ಬ ಆರ್ದೃ-ಹೃದಯದ ಸರಳ ವ್ಯಕ್ತಿತ್ವದ ನಿಗರ್ವಿ ಎಂದು ವರ್ಣಿಸಿದ್ದಾರೆ."[೪೯]

ಸಂಗೀತ ಪ್ರೇಮಿಗಳು[who?] ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.(ಭಾರತದ ದೊಡ್ಡ ನಾಗರಿಕ ಗೌರವ)[೧೩]

ಶಾಸ್ತ್ರೀಯ ಮತ್ತು ಹಿನ್ನಲೆ ಗಾಯಕರಾದ ಮನ್ನಾ ಡೆಯ್ ಅವರು ತಮ್ಮ ಸಮಕಾಲೀನ ರಫಿ ಅವರು "ಎಲ್ಲರಿಗಿಂತ ಅತ್ಯುತ್ತಮ ಹಿನ್ನಲೆ ಗಾಯಕರಾಗಿದ್ದಾರೆ." ಅವರು ಹೇಳುವಂತೆ "ರಫಿ ಮತ್ತು ನಾನು ಪ್ರತಿಯೊಂದನ್ನೂ ಹಾಡಿದ್ದೇವೆ,ಅವರೊಬ್ಬ ಉತ್ತಮ ಸಭ್ಯ ವ್ಯಕ್ತಿ ಎನಿಸಿದ್ದಾರೆ. ಅವರು ನನಗಿಂತ ಉತ್ತಮ ಗಾಯಕ,ಅವರ ಸಮಕ್ಕೆ ಯಾರೂ ಬರಲಾರರು! ಅವರಿಗೆ ಸಿಗಬೇಕಾದದ್ದು ಸಿಗಲೇಬೇಕು! ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಆದರೆ ಯಾರದೇ ವೈಯಕ್ತಿಕ ಪ್ರಾಬಲ್ಯವಿಲ್ಲ".[೫೦][೫೧]

ಹೆಸರಾಂತ ನಟ ಶಮ್ಮಿ ಕಪೂರ್ "ಮೊಹಮ್ಮದ್ ರಫಿ ಇಲ್ಲದೇ ನಾನು ಸಂಪೂರ್ಣನಲ್ಲ."ಎಂದಿದ್ದಾರೆ. ನಾನು ಅವರು ಹಾಡಿದ ಹಾಡಿಗೆ ಹೇಗೆ ಅಭಿನಯ ಮಾಡಬೇಕೆಂಬುದನ್ನು ತಿಳಿಯಲು ನಾನು ಅವರನ್ನು ಮತ್ತೊಮ್ಮೆ ಹಾಡಲು ಅವರನ್ನು ಕೇಳಿತ್ತಿದ್ದೆ. ಅವರು ನನ್ನ ಅದರಲ್ಲಿನ ಮಗ್ನನಾಗಿದ್ದನ್ನು ಮೆಚ್ಚುತ್ತಾರೆ".[೫೨]

ಸೆಪ್ಟೆಂಬರ್ ೨೨,೨೦೦೭ ರಲ್ಲಿ ರಫಿ ಅವರ ಸ್ಮಾರಕವನ್ನು ಕಲಾವಿದ ತಸವಾರ್ ಬಶೀರ್ ಅವರು UK ನಲ್ಲಿನ ಫೇಜೆಲೆಯ್ ಸ್ಟ್ರೀಟ್ ಬರ್ಮಿಂಗ್ ಹ್ಯಾಮ್ ನಲ್ಲಿ ಉಧ್ಘಾಟಿಸಿದರು.ಈ ಗೋಪುರವನ್ನು ನೋಡಿದ್ದರೆ ಅವರೊಬ್ಬ ಸಂತನಾಗಿರುತ್ತಿದ್ದರು ಎಂದು ಅವರು ಹೇಳುತ್ತಾರೆ.[೫೩][೫೪]

ಗಾಯಕರಾದ ಶಬ್ಬೀರ್ ಕುಮಾರ್,ಮೊಹಮ್ಮದ್ ಅಜೀಜ್ ಮತ್ತು ಇತ್ತೀಚಿಗೆ ಸೋನು ನಿಗಮ್ ಅವರಂತಹವರೂ ಕೂಡಾ ರಫಿ ಶೈಲಿಯನ್ನು ಅಳವಡಿಸಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ.[೫೫]

ಅವರ ಮರಣಾಂತರ ಏಳು ಚಲನಚಿತ್ರಗಳು ಮೊಹಮ್ಮದ ರಫಿಗೆ ಸಮರ್ಪಿತವಾಗಿ ಬಿಡುಗಡೆಯಾದವು;ಅಲ್ಲಾ ರಖಾ , ಮರ್ದ್ , ಕೂಲೀ ,ದೇಶ್-ಪ್ರೇಮೀ , ನಸೀಬ್ ,ಆಸ್-ಪಾಸ್ ಮತ್ತು ಹೀರಾಲಾಲ್-ಪನ್ನಾಲಾಲ್ .[೫೬]

ವೈಯಕ್ತಿಕ ಜೀವನ

ಬದಲಾಯಿಸಿ

ರಫಿ ಅವರು ೧೯೪೫ ರಲ್ಲಿ ತಮ್ಮ ಸಂಭಂಧಿ ಬಶಿರಾ,ಅವರ ಸಂಕ್ಷಿಪ್ತವಾದ "ಮಾಝಿ"ಅವರನ್ನು ತಮ್ಮ ಹಳ್ಳಿಯಲ್ಲಿಯೇ [] ವಿವಾಹವಾದರು.ಅವರು ನಾಲ್ಕು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಅವರು ಅತ್ಯಂತ ಶಿಸ್ತಿನ ವ್ಯಕ್ತಿ ಧಾರ್ಮಿಕ ಸ್ವಭಾವದ ಉತ್ತಮ ವ್ಯಕ್ತಿಯಾಗಿದ್ದರು.[೫೭] ಅವರು ಕುಟುಂಬದ ವ್ಯಕ್ತಿ,ಧ್ವನಿ ಮುದ್ರಣದ ಕೊಠಡಿಯಿಂದ ಅಲ್ಲಿನ ವರೆಗೂ ಅವರು ಶಿಸ್ತಿನ ಸಿಪಾಯಿ ಆಗಿದ್ದಾರೆ. ಅವರು ಚಲನಚಿತ್ರಗಳ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ,ಅವರು ಧೂಮಪಾನ ಅಥವಾ ಮದ್ಯಪಾನ ಮಾಡುತ್ತಿರಲಿಲ್ಲ. ಅವರು ತಮ್ಮ ರಿಯಾಜ್ (ಸಂಗೀತ ಅಭ್ಯಾಸ)ವನ್ನು ಮುಂಜಾನೆ ೩ ರಿಂದ ೭ ರವರೆಗೆ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಅವರ ಹವ್ಯಾಸಗಳೆಂದರೆ ಕೇರಮ್ ಮತ್ತು ಬ್ಯಾಂಡ್ಮಿಟನ್ ಮತ್ತು ಪತಂಗ ಹಾರಿಸುವಿಕೆ. .

ಚಿಕ್ಕ-ಚೊಕ್ಕ ವಿಷಯಗಳು

ಬದಲಾಯಿಸಿ
  • ಆಗ ೧೯೬೦ ರಲ್ಲಿ ಮುಘಲ್-ಎ-ಆಜಮ್ ನಲ್ಲಿ ಮೊಹಮ್ಮದ್ ರಫಿ ಅವರು "ಏ ಮೊಹಬ್ಬತ್ ಜಿಂದಾಬಾದ್"ಹಾಡನ್ನು ೧೦೦ ಜನರ ಕೋರಸ್ ಜೊತೆ ಅವರು ಹಾಡಿದ್ದಾರೆ.[೫೮]
  • ರಫಿ ಅವರು ಲಕ್ಷ್ಮಿಕಾಂತ್-ಪ್ಯಾರೆಲಾಲ್ ಅವರ ಸಂಗೀತ ನಿರ್ದೇಶದನಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.ಅವರು ೩೬೯ ಹಾಡು,೧೮೬ ಅದರಲ್ಲಿ ವೈಯಕ್ತಿಕ ಹಾಡುಗಳಾಗಿದ್ದವು.[೫೮]
  • ಅವರು ಆಶಾ ಭೋಸ್ಲೆ(ಮಹಿಳೆ) ಮತ್ತು ಮನ್ನಾ ಡೆಯ್ (ಪುರುಷ)ಅವರೊಂದಿಗೆ ಹೆಚ್ಚು ಹಾಡುಗಳನ್ನು ಜೊತೆಯಾಗಿ ಹಾಡಿದ್ದಾರೆ.[೫೮]
  • ರಫಿ ಅವರು ದಾಖಲೆಯನ್ನುವಷ್ಟು ಫಿಲಮ್ ಫೇರ್ ಅವಾರ್ಡ್ ಗಳಿಗೆ ನಾಮನಿರ್ದೇಶನ ಪಡೆದಿದ್ದಾರೆ.(೨೩) ಅವರು ಅದನ್ನು ಆರು ಬಾರಿ ಗೆದ್ದಿದ್ದಾರೆ.[೫೮]
  • "ಮನ್ ಮೋರಾ ಬಾವರಾ.." ರಾಗಿಣಿಯಲ್ಲಿನ ಈ ಹಾಡನ್ನು ಕಿಶೋರ್ ಕುಮಾರ್ ತಮಗಾಗಿ ಹಾಡುವಂತೆ ರಫಿ ಅವರನ್ನು ವಿನಂತಿ ಮಾಡಿದ್ದರು.ಇದು ಅರ್ಧ ಶಾಸ್ತ್ರೀಯ ಇದೆ ಎಂದು ಅವರು ಇದನ್ನು ರಫಿ ಸಾಹೇಬ್ ಮಾತ್ರ ಹಾಡಬಲ್ಲರು ಎಂದು ಹೇಳಿದ್ದರು." ರಫಿ ಈ ಹಾಡನ್ನು ಹಾಡಿದರು.[೫೯]
  • "ಅಜಬ್ ಹೈ ದಾಸ್ತಾ ತೇರಿ ಏಯಿ ಜಿಂದಗಿ.."ಈ ಹಾಡಿನ ಅಂತರಾ ವನ್ನು ಕಿಶೋರ್ ಕುಮಾರ್ ಹಾಡಿದ್ದಾರೆ.ಅದರ ಅರ್ಧ ಉಳಿದದನ್ನು ಹಾಡುವಾಗ ತೊಂದರೆ ಅನುಭವಿಸಬೇಕಾಯಿತು.ಇದಕ್ಕೆ ವಿಭಿನ್ನ ಶ್ರೇಷ್ಟತೆ ನೀಡಲು ಶಂಕರ್-ಜೈಕಿಶನ್ ಅವರು ರಫಿ ಅವರಿಂದಲೇ ಈ ಹಾಡು ಹೇಳಿಸಿದರು.[೫೯]
  • ಅದರ ಹಾಡಾದ "ಹಮ್ಕೊ ತುಮ್ಸೆ ಹೊ ಗಯಾ ಹೈ ಪ್ಯಾರ್ ಕ್ಯಾ ಕರೆಂ"(ಅಮರ್,ಅಕ್ಬರ್ ಅಂಥೊನಿ)ಮೊಹಮ್ಮದ್ ರಫಿ ಅದನ್ನು ಕಿಶೋರ್ ಕುಮಾರ್,ಲತಾ ಮಂಗೇಶಕರ್ ಮತ್ತು ಮುಕೇಶ್ ರೊಂದಿಗೆ ಗೂಡಿ ಎಲ್ಲರೂ ಒಂದರಲ್ಲೇ ಹಾಡಿದ್ದಾರೆ. ಈ ಎಲ್ಲಾ ಗಾಯಕರು ಒಂದೇ ಬಾರಿಗೆ ತಮ್ಮ ಸೇರಿಸಿದ ಹಾಡು ಇದೇ ಮೊದಲೆಂದು ಹೇಳಬಹುದು.[೬೦]
  • ಓರ್ವ ನೇಣು ಶಿಕ್ಷೆಗೆ ಒಳಗಾದ ವ್ಯಕ್ತಿಯ ಕೊನೆ ಆಸೆ ಏನೆಂದು ಕೇಳಲಾಯಿತು. ಆ ವ್ಯಕ್ತಿ ತನಗೆ "ಒ ದುನಿಯಾ ಕೆ ರಖವಾಲೆ,ಸುನ್ ದರ್ದ್ ಬರೆ ಮೇರೆ ನಾಲೆ;ಜೀವನ್ ಅಪ್ನಾ ವಾಪಸ್ ಲೇಲೆ,ಜೀವನ್ ದೇನೆವಾಲೇ " ಹಾಡನ್ನು ಕೇಳಲು ಅನುಮತಿ ನೀಡಲು ಕೇಳಿಕೊಂಡಿದ್ದ.[೬೧]
  • ರಾಯಪುರ್ ನಲ್ಲಿ ನಡೆದ ಸಂಗೀತ ಕಚೇರಿ ಶಂಕರ್-ಜೈಕಿಶನ್ ಅವರ ಈ ಹಾಡನ್ನು "ಮತ್ತೊಮ್ಮೆ"..ಹಾಡಲು ಬೇಡಿಕೆಯೊಡ್ಡಲಾಯಿತು. ಆ ಸಂಗೀತ ಕಚೇರಿಯ ಎಲ್ಲಾ ಹಾಡುಗಾರರು ದಣಿದಿದ್ದರೂ ಕೂಡ ಇದಕ್ಕೆ ಆಗ್ರಹಿಸಲಾಯಿತು. ಕೊನೆಯಲ್ಲಿ ಕೇವಲ ಹಾರ್ಮೊನಿಯಮ್ ನ ಜೊತೆಯಲ್ಲಿ ರಫಿ ಐದು ಹಾಡುಗಳನ್ನು ಸತತವಾಗಿ ಹಾಡಿದರು. ನಂತರ ಅವರು ರಾಷ್ಟ್ರಗೀತೆ ಹಾಡಿದರು.[೬೨]
  • ಆರಂಭಿಕ ವರ್ಷಗಳಲ್ಲಿ ಫಿಲ್ಮ್ ಫೇರ್ ಕೇವಲ ಒಂದೇ ಒಂದು ಬೆಸ್ಟ್ ಸಿಂಗರ್ ಅವಾರ್ಡ್ (ಮಹಿಳೆ-ಪುರುಷ ಭೇದವಿಲ್ಲ) ನೀಡುತ್ತದೆ. ರಫಿ ಇದನ್ನು ಆರು ಬಾರಿ ಬಾಚಿದ್ದಾರೆ.[೬೩]

ಪ್ರಶಸ್ತಿಗಳು

ಬದಲಾಯಿಸಿ
ಗೌರವ ಪ್ರಶಸ್ತಿಗಳು
  • ೧೯೪೮ - ರಫಿ ಅವರು ಭಾರತ ಪ್ರಧಾನಿ ಜವಾಹರಲಾಲ್ ನೆಹ್ರೂ, ರಿಂದ ಭಾರತದ ಮೊದಲ ಸ್ವಾತಂತ್ರ್ಯ ದಿನದಂದು ಬೆಳ್ಳಿ ಪದಕ ಪಡೆದರು.[೧೧]
  • ೧೯೬೭ - ಪದ್ಮಶ್ರೀ ಭಾರತ ಸರ್ಕಾರ ದಿಂದ ಗೌರವ ನೀಡಲಾಯಿತು.
  • ೧೯೭೪ - ಫಿಲ್ಮ್ ವರ್ಲ್ಡ್ ಮ್ಯಾಗ್ಜಿನ್ ನಿಂದ ಬೆಸ್ಟ್ ಸಿಂಗರ್ ಅವಾರ್ಡ್ ನ್ನು "ತೇರೀ ಗಲಿಯೊಮೆ ನಾ ರಖೆಂಗೇ ಕದಮ್ ಆಜ್ ಕೆ ಬಾದ್" ಹಾಡಿಗೆ ಪ್ರಶಸ್ತಿ ಬಂತು (ಹವಸ್,೧೯೭೪).
  • ೨೦೦೧ - ರಫಿ ಅವರನ್ನು "ಸಹಸ್ರಮಾನದ ಅತ್ಯುತ್ತಮ ಗಾಯಕ" ಪ್ರಶಸ್ತಿಯನ್ನು ಮುಂಬಯಿನಲ್ಲಿನ ಹಿರೊ ಹೊಂಡಾ ಮತ್ತು ಸ್ಟಾರ್ ಡಸ್ಟ್ ಮ್ಯಾಗ್ಜಿನ್ ಗಳು ಜನವರಿ ೭, ೨೦೦೧ರಲ್ಲಿ ನೀಡಿದವು. ರಫಿ ಈ ಜನಮತದಲ್ಲಿ ೭೦% ರಷ್ಟು ಮತ ಪಡೆದರು.
ನ್ಯಾಶನಲ್ ಫಿಲ್ಮ್ ಅವಾರ್ಡ್ಸ್

ಟೆಂಪ್ಲೇಟು:/0:ವಿಜೇತ/ಗೆದ್ದವರು

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
೧೯೫೭ "ಜಿನ್ಹೆನಾ ನಾಜ್ ಹೈ ಹಿಂದ್ ಪಾರ್r" ಪ್ಯಾಸಾ ಸಚಿನ್ ದೇವ್ ಬರ್ಮನ್ ಸಾಹಿರ್ ಲುಧಿಯಾನ್ವಿ
೧೯೬೪[೬೪] "ಚಾಹೂಂಗಾ ಮೈ ತುಜೆ " ದೋಸ್ತಿ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಮಜ್ರೂಹ್ ಸುಲ್ತಾನ್ ಪುರಿ
೧೯೬೬[೬೪] "ಬಾಹಾರೋಂ ಫೂಲ್ ಬರಸಾವೊ" ಸೂರಜ್‌‌‌ ಶಂಕರ್ ಜೈಕಿಶನ್ Shailendra
೧೯೬೭[೬೫][೬೬] "ಬಾಬುಲ್ ಕಿ ದುವಾಯೆ" ನೀಲ್ ಕಮಲ್‌ ರವಿ ಸಾಹಿರ್ ಲುಧಿಯಾನ್ವಿ
೧೯೭೭[] "ಕ್ಯಾ ಹುವಾ ತೇರಾ ವಾದಾ" ಹಮ್ ಕಿಸಿಸಿಸೆ ಕಮ್ ನಹಿ ರಾಹುಲ ದೇವ್ ಬರ್ಮನ್ ಮಜ್ರೂಹ್ ಸುಲ್ತಾನ್ ಪುರಿ
ಫಿಲ್ಮ್ ಫೇರ್ ಅವಾರ್ಡ್[೬೭]

ಟೆಂಪ್ಲೇಟು:/0:ವಿಜೇತ/ಗೆದ್ದವರು

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
೧೯೬೦ "ಚೌದಹ್ವೀಂ ಕಾ ಚಾಂದ್ ಹೊ" "ಚೌದಹ್ವೀಂ ಕಾ ಚಾಂದ್ " ಬಾಂಬೆ ರವಿ ಶಕೀಲ್ ಬದಾಯೂನಿ
೧೯೬೧ "ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ" ಸಸುರಾಲ್ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೪ "ಚಾಹೂಂಗಾ ಮೈ ತುಝೆ" ದೋಸ್ತಿ ಲಕ್ಷ್ಮೀಕಾಂತ-ಪ್ಯಾರೆಲಾಲ್ ಮಜ್ರೂಹ್ ಸುಲ್ತಾನ್ ಪುರಿ
೧೯೬೬ "ಬಹಾರೋ ಫೂಲ್ ಬರಸಾವೊ" ಸೂರಜ್‌‌‌ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೮ "ದಿಲ್ ಕೆ ಝರೋಂಕೆ ಮೆ" ಬ್ರಹ್ಮಚಾರಿ ಶಂಕರ್ ಜೈಕಿಶನ್ ಶೈಲೇಂದ್ರ
೧೯೭೭ "ಕ್ಯಾ ಹುವಾ ತೇರಾ ವಾದಾ" ಹಮ್ ಕಿಸಿಸೆ ಕಮ್ ನಹಿ ರಾಹುಲ ದೇವ್ ಬರ್ಮನ್ ಮಜ್ರೂಹ್ ಸುಲ್ತಂಪುರಿ

ನಾಮನಿರ್ದೇಶಿತಗೊಂಡಿದ್ದು :[೬೭]

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1961 "ಹುಸ್ನವಾಲೇ ತೇರಾ ಜವಾಬ್ ನಹೀ" ಘರಾನಾ ರವಿ ಶಕೀಲ್ ಬದಾಯುನಿ
1962 "ಏ ಗುಲಾಬದನ್ ಏ ಗುಲಾಬದನ್" ಪ್ರೊಫೆಸರ್ ಶಂಕರ್ ಜೈಕಿಶನ್ ಶೈಲೇಂದ್ರ
1963 "ಮೇರೆ ಮೆಹಬೂಬ್ ತುಝೆ" ಮೇರೆ ಮೆಹಬೂಬ್ ನೌಶಾದ್ ಶಕೀಲ್ ಬದಾಯುನಿ
1965 "ಛೂ ಲೇನೆ ದೊ ನಾಜುಕ್ ಹೋಂಟೋಂಕೊ" ಕಾಜಲ್ ರವಿ ಸಾಹಿರ್ ಲುಧಿಯಾನ್ವಿ
೧೯೬೮ "ಮೈ ಗಾಂವೂ ತುಮ್ ಸೋ ಜಾವೊ" ಬ್ರಹ್ಮಚಾರಿ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೯ "ಬಡಿ ಮಸ್ತಾನಿ ಹೈ" ಜೀನೆ ಕಿ ರಾಹ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦)
೧೯೭೦ "ಖಿಲೋನಾ, ಜಾನ್ ಕರ್" ಖಿಲೋನಾ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦)
೧೯೭೩ "ಹಮ್ ಕೊ ತೊ ಜಾನ್ ಸೆ ಪ್ಯಾರಿ" ನೈನಾ ಶಂಕರ್ ಜೈಕಿಶನ್ ಹಸರತ್ ಜೈಪುರಿ
೧೯೭೪ "ಅಚ್ಛಾ ಹೀ ಹುವಾ ದಿಲ್ ಟೂಟ್ ಗಯಾ" ಮಾ ಬಹೆನ್ ಓರ್ ಬೀವಿ ಶಾರದಾ ಖಮರ ಜಲಾಲಾಬಾದಿ, ವೇದ್ಪಾಲ್ ವರ್ಮಾ
೧೯೭೭ "ಪರ್ಧಾ ಹೈ ಪರ್ಧಾ" ಅಮರ್ ಅಕ್ಬರ್ ಅಂತೋನಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦)
೧೯೭೮ "ಆದಮೀ ಮುಸಾಫಿರ್ ಹೈ" ಅಪ್ನಾಪನ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦)
೧೯೭೯ "ಚಲೋ ರೇ ಡೋಲಿ ಉಠಾವೊ ಕಹಾರ್" ಜಾನಿ ದುಶ್ಮನ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ವರ್ಮಾ ಮಲಿಕ್
೧೯೮೦ "ಮೇರೆ ದೋಸ್ತ್ ಕಿಸ್ಸಾ ಯೆಹೆ" ದೋಸ್ತಾನಾ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦)
೧೯೮೦ "ದರ್ದ್-ಎ-ದಿಲ್ ದರ್ದ್-ಎ-ಜಿಗರ್" ಕರ್ಜ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦)
೧೯೮೦ "ಮೈನೆ ಪೂಛಾ ಚಾಂದ್ ಸೆ" ಅಬ್ದುಲ್ಲ್ಹಾ ರಾಹುಲ ದೇವ್ ಬರ್ಮನ್ ಆನಂದ್ ಭಕ್ಷಿ (/೦)
ಬೆಂಗಾಲ್ ಫಿಲ್ಮ್ ಜರ್ನಾಲಿಸ್ಟ್ಸ್ ಅಸೋಶಿಯೇಶನ್ ಅವಾರ್ಡ್ಸ್

ವಿಜೇತ

ವರ್ಷ (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1957 ತುಮ್ಸಾ ನಹಿ ದೇಖಾ ಒ. ಪಿ. ನಯ್ಯರ್ ಮಜ್ರೂಹ್ ಸುಲ್ತಂಪುರಿ
೧೯೬೫[೬೮] ದೋಸ್ತಿ ಲಕ್ಷ್ಮಿಕಾಂತ-ಪ್ಯಾರೆಲಾಲ್ ಮಜ್ರೂಹ್ ಸುಲ್ತಂಪುರಿ
೧೯೬೬[೬೯] ಆರ್ಜೂ ಶಂಕರ್ ಜೈಕಿಶನ್ ಹಸರತ್ ಜೈಪುರಿ
ಸುರ್ ಶೃಂಗಾರ್ ಅವಾರ್ಡ್

ವಿಜೇತ

ವರ್ಷ (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1964 ಚಿತ್ರಲೇಖಾ ರೋಶನ್ ಸಾಹಿರ್ ಲುಧಿಯಾನ್ವಿ[೭೦]

ಉಲ್ಲೇಖಗಳು

ಬದಲಾಯಿಸಿ
  1. Harris, Craig. "Mohammed Rafi on [[Allmusic]]". Allmusic. Retrieved ೨೨ January ೨೦೦೯. {{cite web}}: Check date values in: |accessdate= (help); URL–wikilink conflict (help)
  2. "Padma Shri Awardees". india.gov.in. Retrieved 22 December 2010.
  3. K. Pradeep. "Rafi's unmatched track record". ದಿ ಹಿಂದೂ. Archived from the original on 2006-05-13. Retrieved ೨೦೦೫-೦೭-೨೯. {{cite web}}: Check date values in: |accessdate= (help)
  4. "Mohd. Rafi - Biography". Archived from the original on 2010-08-04. Retrieved 2010-12-25.
  5. "The unforgettable Rafi - The Times of India". Retrieved 2010-12-25.
  6. ೬.೦ ೬.೧ ೬.೨ Varinder Walia (೨೦೦೩-೦೬-೧೬). "Striking the right chord". The Tribune: Amritsar Plus. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  7. ೭.೦ ೭.೧ Syed Abid Ali (2003-06-16). "The Way It Was: Tryst With Bollywood". Daily Times, Pakistan. Archived from the original on 2012-12-21. Retrieved 2007-04-28.
  8. ೮.೦ ೮.೧ ೮.೨ "Mohammed Rafi". Retrieved 2007-04-28.
  9. ೯.೦ ೯.೧ Amit Puri. "When Rafi sang for Kishore Kumar". The Tribune. Retrieved ೨೦೦೭-೦೪-೨೮. {{cite web}}: Check date values in: |accessdate= (help)
  10. ೧೦.೦ ೧೦.೧ M.L. Dhawan (೨೦೦೪-೦೭-೨೫). "His voice made him immortal". Spectrum (The Tribune). Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  11. ೧೧.೦ ೧೧.೧ ೧೧.೨ ೧೧.೩ ೧೧.೪ ೧೧.೫ "Hall Of Fame: Saatwan Sur". Retrieved 2007-04-28.
  12. ೧೨.೦ ೧೨.೧ "Mohd Rafi - Biography". Archived from the original on 2010-08-04. Retrieved 2010-12-25.
  13. ೧೩.೦ ೧೩.೧ ೧೩.೨ "ಆರ್ಕೈವ್ ನಕಲು". Archived from the original on 2011-06-05. Retrieved 2011-01-10.
  14. https://www.youtube.com/watch?v=j_8DGgVBV8g
  15. https://www.youtube.com/watch?v=IScyIsMTygM
  16. "Naushad Remembers Rafi Saheb". Retrieved 2010-12-25.
  17. http://chandrakantha.com/biodata/mohd_rafi.html
  18. ೧೮.೦ ೧೮.೧ ೧೮.೨ ೧೮.೩ Raju Bharatan (೨೦೦೬-೦೮-೨೩). "How fair were they to Mohammed Rafi?". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  19. ೧೯.೦ ೧೯.೧ ೧೯.೨ Raju Bharatan (೨೦೦೬-೦೮-೨೩). "How fair were they to Mohammed Rafi? (Page 2)". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  20. ೨೦.೦ ೨೦.೧ "BBC Interview : Mohd. Rafi - Audio (You Tube)". Retrieved 2010-12-25.
  21. Raju Bharatan (೨೦೦೬-೦೮-೨೩). "How fair were they to Mohammed Rafi?: Page 5". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  22. "Mohd Rafi Sahab: A Legend has no substitute". Archived from the original on 2011-05-02. Retrieved 2010-12-25.
  23. Arthur J Pais (೨೦೦೬-೦೮-೨೧). "Did Mohammad Rafi get his due?". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  24. "ಮೊಹಮ್ಮದ್ ರಫಿ: ಎವರಿವನ್ಸ್ ವೈಸ್". Archived from the original on 2007-12-05. Retrieved 2011-01-10.
  25. ೨೫.೦ ೨೫.೧ Raju Bharatan (೨೦೦೬-೦೮-೨೩). "How fair were they to Mohammed Rafi?: Page 3". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  26. Raju Bharatan (೨೦೦೬-೦೮-೨೧). "How fair were they to Mohammed Rafi?: Page 4". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  27. ೨೭.೦ ೨೭.೧ Raju Bharatan (೨೦೦೬-೦೮-೨೩). "How fair were they to Mohammed Rafi?: Page 6". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  28. ೨೮.೦ ೨೮.೧ ೨೮.೨ Raju Bharatan (೨೦೦೬-೦೮-೨೩). "How fair were they to Mohammed Rafi?: Page 7". Rediff.com. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  29. http://music.indobase.com/composers-playback-singers/mohammed-rafi.html
  30. http://www.rafisongs.org/೨೦೦೭/೦೮/೨೬/೭೮೬೨೧/mohammed-rafi-biograpohy/index.html
  31. Anil Grover (2005-07-29). "Forever velvet". The Telegraph. Archived from the original on 2007-08-19. Retrieved 2007-04-28.
  32. Rajiv Vijayakar (2002). "The mammoth myth about Mohammed Rafi". Screen. Archived from the original on 2007-06-08. Retrieved 2007-06-13.
  33. V. Gangadhar (೨೦೦೫-೦೮-೦೫). "The immortal Rafi". ದಿ ಹಿಂದೂ Business Line. Retrieved ೨೦೦೭-೦೪-೨೮. {{cite web}}: Check date values in: |accessdate= and |date= (help)
  34. Salam, Ziya U. S. (July 22, 2001). "Matchless magic lingers". The Hindu. Archived from the original on 2010-12-28. Retrieved 2009-04-09.
  35. ಮೊಹಮ್ಮದ್ ರಫಿ: ದಿ ಸೌಲ್ ಫುಲ್ ವೈಸ್ ಲೈವ್ಸ್ ಆನ್!. ಝೀ ನ್ಯೂಸ್. ೩೧ ಜುಲೈ ೨೦೦೮.
  36. "Mohammed Rafi Bioagraphy". Retrieved 2010-12-25.
  37. "Rafi, Madhubala don't rest in peace here". ದಿ ಟೈಮ್ಸ್ ಆಫ್‌ ಇಂಡಿಯಾ. 11 February 2010. Retrieved 2010-02-14.
  38. "Mohd Rafi Bioagraphy". Archived from the original on 2010-08-04. Retrieved 2010-12-25.
  39. http://www.zeenews.com/news೪೫೯೨೨೩.html
  40. Mike D'Angelo. "Teenage wasteland: Adolescent angst takes on new dimensions in the magnificently mundane Ghost World". Archived from the original on 2006-08-04. Retrieved 2007-04-28.
  41. "Monsoon Wedding soundtrack listing". Retrieved 2009-02-03.
  42. "Soundtracks for Eternal Sunshine of the Spotless Mind". Retrieved 2010-12-25.
  43. "Tributes to legendary Mohammad Rafi". Archived from the original on 2007-04-27. Retrieved 2007-04-28.
  44. ""ಫಿಲಮ್ಸ್ ಡಿವಿಜನ್ ಟು ಮೇಕ್ ಡಾಕ್ಯುಮೆಂಟರಿ ಆನ್ ಮೊಹಮ್ಮದ ರಫಿ"". Archived from the original on 2012-09-05. Retrieved 2011-01-10.
  45. "Mumbai to Birmingham". 2007-04-30. Archived from the original on 2007-09-27. Retrieved 2007-06-14.
  46. "The Most Popular Singer - Outlook Music Poll 2010".
  47. "The #1 Song - Indian Movies - Outlook Music Poll 2010".
  48. "Outlook Music Poll".
  49. "Thirty years on, Mohd Rafi remains a favourite".
  50. "ಆರ್ಕೈವ್ ನಕಲು". Archived from the original on 2016-03-05. Retrieved 2021-08-10.
  51. http://timesofindia.indiatimes.com/city/kolkata-/Rafi-was-a-better-singer-than-me/articleshow/೫೦೮೫೩೦೮.cms
  52. "I am incomplete without Rafi: Shammi - The Times of India". Archived from the original on 2010-08-03. Retrieved 2010-12-25.
  53. "ಮೊಹಮ್ಮದ್ ರಫಿ ಸೇಂಟ್ ಹುಡ್ ಅಟೆಂಪ್ಟ್". Archived from the original on 2007-10-17. Retrieved 2011-01-10.
  54. "A shrine to be built in memory of Mohammed Rafi".
  55. http://www.hindustantimes.com/Mohammed-Rafi-lives-on/Article೧-೪೩೭೯೯೬.aspx
  56. http://www.imdb.com/name/nm೦೭೦೬೩೨೭/#Soundtrack
  57. "Mohd Rafi: A Legend has no substitute". Archived from the original on 2011-05-02. Retrieved 2010-12-25.
  58. ೫೮.೦ ೫೮.೧ ೫೮.೨ ೫೮.೩ http://www.thecolorsofindia.com/mohd-rafi/facts.html
  59. ೫೯.೦ ೫೯.೧ http://www.rafi.co.in/೨೦೦೯/೧೦/೨೫/iinteresting-facts-about-rafi-sahab-and-kishore-da/೫೧೨೧೫೩/index.html
  60. "ಆರ್ಕೈವ್ ನಕಲು". Archived from the original on 2012-10-01. Retrieved 2011-01-10.
  61. http://www.mohdrafi.com/meri-awaaz-suno/a-wide-range-of-fans-for-one-song.html
  62. http://en.wikipedia.org/w/index.php?title=Mohammed_Rafi&action=edit&section=೧೯
  63. "ಆರ್ಕೈವ್ ನಕಲು". Archived from the original on 2011-07-11. Retrieved 2011-01-10.
  64. ೬೪.೦ ೬೪.೧ http://calcuttatube.com/mohammed-rafi-the-golden-voice-that-lives-on-and-on/44167/
  65. http://popcorn.oneindia.in/artist-awards/494/7/mohammed-rafi.html
  66. http://www.thecolorsofindia.com/mohd-rafi/awards.html
  67. ೬೭.೦ ೬೭.೧ "ಆರ್ಕೈವ್ ನಕಲು". The Times Of India. Archived from the original on 2012-07-08. Retrieved 2011-01-10.
  68. "1965- 28th Annual BFJA Awards - Awards For The Year 1964". Bengal Film Journalists' Association. Archived from the original on 8 ಜನವರಿ 2010. Retrieved 14 December 2008. {{cite web}}: Cite has empty unknown parameter: |coauthors= (help)
  69. "1966: 29th Annual BFJA Awards - Awards For The Year 1965". Bengal Film Journalists' Association. Archived from the original on 8 ಜನವರಿ 2010. Retrieved 22 October 2009. {{cite web}}: Text "Bfjaawards.com" ignored (help)
  70. "His Voice swayed millions". Retrieved 2010-12-25.


ಬಾಹ್ಯ ಕೊಂಡಿಗಳು

ಬದಲಾಯಿಸಿ