ಹೀರೋ ಹೋಂಡ - ಭಾರತದ ದ್ವಿಚಕ್ರ ಮಾದರಿಗಳಲ್ಲೊಂದು. ಹೀರೋ ಮತ್ತು ಹೋಂಡ ಕಂಪನಿಗಳ ಸಹಯೋಗದಿಂದ ಮಾರುಕಟ್ಟೆಗೆ ಬಿಡುಗಡೆಗೊಂಡ ಈ ವಾಹನವು, ಎರಡೂ ಕಂಪನಿಗಳ ಹೆಸರುಗಳನ್ನೊಳಗೊಂಡಂತೆ ಹೀರೋ ಹೋಂಡ ಎಂದು ನಾಮಕರಣ ಮಾಡಲ್ಪಟ್ಟಿತು.

ಹೀರೋ ಹೋಂಡ ಮೋಟಾರ್ ಸೈಕಲ್ ಲಿಮಿಟೆಡ್
ಪ್ರಕಾರ: ಸಾರ್ವಜನಿಕ ಸಂಸ್ಥೆ ಮುಂಬಯಿ ಸ್ಟಾಕ್ ಎಕ್ಸ್‌ಚೇಂಜ್:HEROHONDA M
ಸ್ಥಾಪನೆ: {{{ ಸ್ಥಾಪನೆ }}}
ಕೇಂದ್ರ ಸ್ಥಳ: ಗುರಗಾಂವ್, ಹರಿಯಾಣ, ಭಾರತ
ಮುಖ್ಯವಾದ ಸಿಬ್ಬಂದಿ:ಬ್ರಿಜ್‍ಮೋಹನ್ ಲಾಲ್ ಮುಂಜಲ್ (ಚೇರ್ಮನ್ ಮತ್ತು ನಿರ್ವಾಹಕ ನಿರ್ದೇಶಕ)
ಕೈಗಾರಿಕೆ:ಆಟೋಮೊಟಿವ್
ಉತ್ಪನ್ನಗಳು :ದ್ವಿಚಕ್ರವಾಹನಗಳು
ವಹಿವಾಟು :೭,೩೫೬ ಕೋಟಿ ರೂಪಾಯಿಗಳು ೨೦೦೪-೨೦೦೫
ಅಂತರಜಾಲ:www.herohonda.com

ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್

ಬದಲಾಯಿಸಿ

ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್ ಎಂಬುದು ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕೆಯ ಸಂಸ್ಥೆ. ಹೀರೋ ಹೋಂಡ ಜಂಟಿ ಸಹಯೋಗವು ೧೯೮೪ರಲ್ಲಿ ಹೀರೋ ಗ್ರೂಪ್ ಮತ್ತು ಜಪಾನ್ ದೇಶದ ಹೋಂಡ ಸಂಸ್ಥೆಯೊಂದಿಗೆ ಪ್ರಾರಂಭವಾಯಿತು.

ಈ ಸಂಸ್ಥೆಯು ಪ್ರಪಂಚದ ಅತ್ಯಂತ ದೊಡ್ಡ ದ್ವಿಚಕ್ರ ತಯಾರಿಕೆಯ ಸಂಸ್ಥೆ ಎಂದು ೨೦೦೧ರಿಂದ ಪ್ರಖ್ಯಾತಿ ಪಡೆಯಿತು. ಆ ಒಂದು ವರ್ಷದಲ್ಲಿ ಇದು ೧.೩ ದಶಲಕ್ಷ ಮೋಟಾರ್ ಬೈಕ್‍ಗಳನ್ನು ಬಿಡುಗಡೆ ಮಾಡಿತ್ತು.

ಹೀರೋ ಹೋಂಡ ಸ್ಪ್ಲೆಂಡರ್

ಬದಲಾಯಿಸಿ

ಹೀರೋ ಹೋಂಡ ಸ್ಪ್ಲೆಂಡರ್ ಪ್ರಪಂಚದ ಅತ್ಯಂತ ಹೆಚ್ಚು ಮಾರಾಟವಾಗಿರುವ ಮೋಟಾರ್ ಬೈಕ್. ಇದರ ಎರಡು ಸ್ಥಾವರಗಳು ಭಾರತದ ರಾಜ್ಯ ಹರಿಯಾಣದಲ್ಲಿನ ಧರುಹೆರ ಮತ್ತು ಗುರಗಾಂವ್ ನಗರಗಳಲ್ಲಿವೆ.