ಮುನ್ನಾರ್
ಮುನ್ನಾರ್ (ಮಲಯಾಳಂ:മൂന്നാർ) ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಗಿರಿಧಾಮ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಒಂದಾದ ಮುನ್ನಾರ್ ಸಮುದ್ರ ಮಟ್ಟದಿಂದ 1,600 metres (5,200 ft) ಎತ್ತರದಲ್ಲಿದೆ[೨].
ಮುನ್ನಾರ್
മൂന്നാർ ದಕ್ಷಿಣ ಭಾರತದ ಕಾಶೀರ | |
---|---|
Coordinates: 10°05′21″N 77°03′35″E / 10.08917°N 77.05972°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ಇಡುಕ್ಕಿ ಜಿಲ್ಲೆ |
Named for | ಚಹಾ ತೋಟ, ತಂಪಾದ ವಾತಾವರಣ |
Government | |
• Type | ಪಂಚಾಯತ್ |
• Body | ಮುನ್ನಾರ್ ಗ್ರಾಮ ಪಂಚಾಯತ್ |
Area | |
• Total | ೧೮೭ km೨ (೭೨ sq mi) |
Elevation | ೧೭೦೦ m (೫,೬೦೦ ft) |
Population (೨೦೦೧) | |
• Total | ೩೮,೪೭೧ |
• Density | ೨೧೦/km೨ (೫೩೦/sq mi) |
ಭಾಷೆಗಳು | |
• ಅಧಿಕೃತ | ಮಳಯಾಳಂ, ಇಂಗ್ಲೀಷ್ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | ೬೮೫೬೧೨ |
ದೂರವಾಣಿ ಕೋಡ್ | ೦೪೮೬೫ |
Vehicle registration | ಕೆಎಲ್-68, ಕೆಎಲ್-06 |
ಸಾಕ್ಷರತೆ | ೭೬% |
Website | keralatourism |
ವ್ಯುತ್ಪತ್ತಿಶಾಸ್ತ್ರ
ಬದಲಾಯಿಸಿಮುನ್ನಾರ್ ಎಂಬ ಹೆಸರು "ಮೂರು ನದಿ"ಗಳನ್ನು ಬಿಂಬಿಸುತ್ತದೆ ಎಂದು ನಂಬಲಾಗುತ್ತದೆ[೩], ಅಂದರೆ ಮುದಿರಪುಜ಼, ನಲ್ಲತನ್ನಿ ಮತ್ತು ಕುನ್ಡಲಿ ನದಿಗಳ ಸಂಗಮವನ್ನು ಉಲ್ಲೇಖಿಸುತ್ತದೆ.[೪]
ಸ್ಥಳ
ಬದಲಾಯಿಸಿಮುನ್ನಾರ್ ನ ಭೌಗೋಳಿಕ ನಿರ್ದೇಶಾಂಕಗಳು 10°05′21″N 77°03′35″E. ಮುನ್ನಾರ್ ಪಟ್ಟಣವು ಕಣ್ಣನ್ ದೆವನ್ ಬೆಟ್ಟಗಳ ದೆವಿಕುಲ್ಲಮ್ ತಾಲ್ಲೂಕಿನ ಕಣ್ಣನ್ ದೆವನ್ ಬೆಟ್ಟಗಳ ಹಳ್ಳಿಯ ಮೇಲೆ ನೆಲೆಗೊಂಡಿದೆ ಮತ್ತು ಇಡುಕ್ಕಿ ಜಿಲ್ಲೆಯ ಅತಿ ದೊಡ್ಡ ಪಂಚಾಯತ್.
ರಸ್ತೆ
ಬದಲಾಯಿಸಿಮುನ್ನಾರ್ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಮೂಲಕ ಚೆನ್ನಾಗಿ ಸಂಪರ್ಕಗೊಂಡಿದೆ. ಮುನ್ನಾರ್ ಪಟ್ಟಣವು ಕೊಚ್ಚಿ - ಧನುಷ್ಕೋಡಿ ರಾಷ್ಟೀಯ ಹೆದ್ದಾರಿಯಲ್ಲಿ(N.H 49),ಕೊಚ್ಚಿಯಿಂದ ಸುಮಾರು ೧೩೦ಮೈಲಿ, ಅದಿಮಲಿಯಿಂದ ೩೧ಮೈಲಿ, ತಮಿಳುನಾಡಿನ ಉದುಮಲ್ಪೆಟ್ಟು ಇಂದ ೮೫ಮೈಲಿ ಮತ್ತು ನೆರಿಯಮನ್ಗಲಮ್ ೬೦ಮೈಲಿ ದೂರದಲ್ಲಿದೆ.
ಪ್ರಮುಖ ನಗರಗಳಿಂದ ದೂರ
- ಕೊಚ್ಚಿ ಇಂದ- ಎರ್ನಾಕುಳಮ್ ಇಂದ- 150 km
ವಿಮಾನ ನಿಲ್ದಾಣ
ಬದಲಾಯಿಸಿ110 kilometres (68 mi) ದೂರದಲ್ಲಿರುವ ಕೊಚ್ಚಿ ಅಂತರ್ರಾಷ್ಟೀಯ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣ. ಮುನ್ನಾರ್ನಿಂದ ಕೊಯಂಬತ್ತೂರು ಮತ್ತು ಮದುರೈ ವಿಮಾನ ನಿಲ್ದಾಣವು ೧೬೫km ದೂರದಲ್ಲಿದೆ.
ಆಡಳಿತ
ಬದಲಾಯಿಸಿ೧೯೬೨ ಜನವರಿ ೨೪ರಂದು ನಿರ್ಮಿತವಾದ ಮುನ್ನಾರ್ ಪಂಚಾಯತ್ ೨೧ ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಉತ್ತರ ದಿಕ್ಕಿಗೆ ಕೊಯಂಬತ್ತೂರು ಜಿಲ್ಲೆಯು, ದಕ್ಷಿಣಕ್ಕೆ ಪಲ್ಲಿವಸಲ್, ಪೂರ್ವಕ್ಕೆ ದೆವಿಕುಳಮ್ ಮತ್ತು ಮರಯೂರ್ ಮತ್ತು ಮನುಕುಳಮ್, ಪಶ್ಚಿಮಕ್ಕಿ ಕುಟ್ಟಮ್ಪುಜ಼ ಪಂಚಾಯತ್ ಇದೆ.
|
|
ಆಕರ್ಷಕ ಸ್ಥಳಗಳು
ಬದಲಾಯಿಸಿ- ಎರವಿಕುಳಮ್ ರಾಷ್ಟೀಯ ಉದ್ಯಾನವನ
- ಅನ್ನಮುಡಿ ಉತ್ತುಂಗ
- ಮಟ್ಟುಪೆಟ್ಟಿ ಅಣೆಕಟ್ಟು
- ಪಲ್ಲಿವಸಲ್
- ಚಿನ್ನಕನಾಲ್ ಮತ್ತು ಅನಯಿರನ್ಗಳ್
- ಟಾಪ್ ಸ್ಟೇಷನ್
- ಮುನ್ನಾರ್ ಟೀ ಮ್ಯೂಸಿಯಂ
- ಕುನ್ಡ್ಲಾ ಅಣೆಕಟ್ಟು
ಉಲ್ಲೇಖಗಳು
ಬದಲಾಯಿಸಿ- ↑ Munnar
- ↑ "Munnar - the Hill Station of Kerala in Idukki | Kerala Tourism". Archived from the original on 2014-01-18. Retrieved 2017-05-10.
- ↑ "Munnar History". Archived from the original on 2018-01-30. Retrieved 2017-05-10.
- ↑ "Munnar". Archived from the original on 2014-01-18. Retrieved 2017-05-10.