ಒಂದು ಮುದ್ರೆ ಯುAbout this sound [muːˈdrɑː]  (ಸಂಸ್ಕೃತ: मुद्रा, ("ಮೊಹರು," "ಗುರುತು," ಅಥವಾ "ಅಭಿನಯ),) ಹಿಂದೂಧರ್ಮ ಅಥವಾ ಬುದ್ಧಧರ್ಮದಲ್ಲಿ ಸಾಂಕೇತಿಕ ಅಥವಾ ಧಾರ್ಮಿಕ ಅನುಷ್ಠಾನಗಳ ಒಂದು ಅಭಿನಯವಾಗಿದೆ ಅಥವಾ ಸಂಕೇತವಾಗಿದೆ.[೧] ಹಲವು ಮುದ್ರೆಗಳು ಪೂರ್ತಿ ದೇಹದ ಉಪಯೋಗವನ್ನು ಒಳಗೊಂಡಿರುತ್ತವೆ, ಹೆಚ್ಚಿನ ಮುದ್ರೆಗಳು ಕೈಗಳು ಮತ್ತು ಬೆರಳುಗಳ ಜೊತೆಗೆ ನಿರ್ವಹಿಸಲ್ಪಡುತ್ತವೆ. ಮುದ್ರೆಯು ಒಂದು ಆಧ್ಯಾತ್ಮಿಕ ಅಭಿನಯವಾಗಿದೆ ಮತ್ತು ಧರ್ಮ ಮತ್ತು ಟಾವೋ ತತ್ವಗಳ ಭಾರತಿಯ ಧರ್ಮಗಳು ಮತ್ತು ಸಂಪ್ರದಾಯಗಳ ಪ್ರತಿಮಾಶಾಸ್ತ್ರ ಮತ್ತು ಆಧಾತ್ಮಿಕ ಆಚರಣೆಗಳಲ್ಲಿ ಪ್ರಮಾಣಿತವಾಗಿ ಆಚರಿಸಲ್ಪಡುವ ಒಂದು ಶಕ್ತಿಯುತ ಸಂಕೇತವಾಗಿದೆ.

ಒಂದು ನೂರಾ ಎಂಟು ಮುದ್ರೆಗಳು ಧಾರ್ಮಿಕ ತಾಂತ್ರಿಕ ವಿಧಿಗಳಲ್ಲಿ (ಆಚರಣೆಗಳಲ್ಲಿ) ಬಳಸಲ್ಪಡುತ್ತವೆ.[೨]

ಯೋಗದಲ್ಲಿ, ಮುದ್ರೆಗಳು ಪ್ರಾಣಾಯಾಮದ (ಯೋಗದಲ್ಲಿ ಉಸಿರಾಟದ ವ್ಯಾಯಾಮ) ಜೊತೆಗೆ ಬಳಸಲ್ಪಡುತ್ತವೆ, ಸಾಮಾನ್ಯವಾಗಿ ಯೋಗದಲ್ಲಿ ವಜ್ರಾಸನ ಭಂಗಿಯಲ್ಲಿ ಕುಳಿತ ಸಂದರ್ಭದಲ್ಲಿ, ದೇಹದ ವಿವಿಧ ಭಾಗಗಳು ಉಸಿರಾಟದ ಜೊತೆಗೆ ಸಂಯೋಜನಗೊಳ್ಳುವುದನ್ನು ಪ್ರಚೋದಿಸುವುದಕ್ಕೆ ಮತ್ತು ದೇಹದಲ್ಲಿ ಪ್ರಾಣದ ಹರಿಯುವಿಕೆಯ ಮೇಲೆ ಪರಿಣಾಮ ಬೀರುವುದಕ್ಕೆ ಬಳಸಲ್ಪಡುತ್ತವೆ.

ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ (ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ)ಯಲ್ಲಿ ನವೆಂಬರ್ ೨೦೦೯ ರಲ್ಲಿ ಪ್ರಕಟಿಸಲ್ಪಟ್ಟ ಒಂದು ಮೆದುಳಿನ ಸಂಶೋಧನೆಯ ಪತ್ರಿಕೆಯು, ಕೈಗಳ ಅಭಿನಯಗಳು ಅದೇ ರೀತಿಯ ಮೆದುಳಿನ ಭಾಗಗಳನ್ನು ಭಾಷೆಗಳಾಗಿ ಪ್ರಚೋದಿಸುತ್ತವೆ ಎಂಬುದಾಗಿ ವಿವರಿಸಿತು.[೩]

ನಾಮಕರಣ ಪದ್ಧತಿ ಮತ್ತು ವ್ಯುತ್ಪತ್ತಿ ಶಾಸ್ತ್ರಸಂಪಾದಿಸಿ

ಯಿನ್ (Chinese: ; pinyin: yìn) ಅಥವಾ ಯಿನ್‌ಕ್ಸಿಯಾಂಗ್ (Chinese: 印相; pinyin: yìnxiàng) ಇದು ಮುದ್ರೆ ಶಬ್ದದ ಚೀನಾ ಭಾಷೆಯ ಅನುವಾದವಾಗಿದೆ. ಜಪಾನಿಯರು ಮತ್ತು ಕೋರಿಯನ್‌ರು ಅದನ್ನು "ಇನ್ " ಎಂಬುದಾಗಿ ಉಚ್ಚರಿಸುತ್ತಾರೆ.

ಪ್ರತಿಮಾಶಾಸ್ತ್ರಸಂಪಾದಿಸಿ

ಮುದ್ರೆಯು ಭಾರತೀಯ ಉಪಖಂಡದ ಹಿಂದೂ ಮತ್ತು ಬುದ್ಧ ಕಲೆಗಳ ಪ್ರತಿಮಾಶಾಸ್ತ್ರಗಳಲ್ಲಿ ಬಳಸಲ್ಪಟ್ಟಿದೆ ಮತ್ತು ಶಿಲ್ಪಗಳಲ್ಲಿ ವರ್ಣಿಸಲ್ಪಟ್ಟಿದೆ, ಉದಾಹರಣೆಗೆ ನಾಟ್ಯಶಾಸ್ತ್ರವು ೨೪ asaṁyuta ("ಬೇರ್ಪಟ್ಟ", ಅಂದರೆ "ಒಂದು-ಕೈಯ" ಮುದ್ರೆ) ಮತ್ತು ೧೩ saṁyuta ("ಸಂಯೋಜಿತ", ಅಂದರೆ "ಎರಡು-ಕೈಯಿಂದ") ಮುದ್ರೆಗಳನ್ನು ವರ್ಣಿಸುತ್ತದೆ. ಮುದ್ರೆಯ ಸ್ಥಾನಗಳು ಸಾಮಾನ್ಯವಾಗಿ ಎರಡೂ ಕೈಗಳು ಮತ್ತು ಬೆರಳುಗಳ ಮೂಲಕ ಮಾಡಲ್ಪಡುತ್ತವೆ. ಆಸನಗಳ ("ಕುಳಿತುಕೊಳ್ಳಲ್ಪಟ್ಟ ಭಂಗಿಗಳು") ಜೊತೆಗೆ ಮುದ್ರೆಗಳು ಸಾಂಕೇತಿಕವಾಗಿ ಧ್ಯಾನದಲ್ಲಿ ಮತ್ತು ಹಿಂದೂಧರ್ಮದ ಆಚರಣೆಯಲ್ಲಿ ಕ್ರಿಯಾತ್ಮಕವಾಗಿNāṭya ಬಳಸಲ್ಪಟ್ಟಿವೆ. ಪ್ರತಿ ಮುದ್ರೆಯು ಅದನ್ನು ಮಾಡುವವನ ಮೇಲೆ ಒಂದು ನಿರ್ದಿಷ್ಟವಾದ ಪರಿಣಾಮವನ್ನು ಹೊಂದಿರುತ್ತದೆ. ಸಾಮಾನ್ಯವಾದ ಕೈಯ ಅಭಿನಯಗಳನ್ನು ಹಿಂದೂ ಮತ್ತು ಬೌದ್ಧ ಪ್ರತಿಮಾಶಾಸ್ತ್ರ ಎರಡರಲ್ಲೂ ಕೂಡ ಕಾಣಬಹುದಾಗಿದೆ. ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಥೈಲ್ಯಾಂಡ್ ಮತ್ತು ಲಾವೋಸ್‌ಗಳಲ್ಲಿ, ಇವುಗಳು ಪರಸ್ಪರರಿಂದ ಭಿನ್ನವಾಗಿರುತ್ತವೆ, ಆದರೆ ಸಂಬಂಧಿತವಾದ ಪ್ರತಿಮಾಶಾಸ್ತ್ರೀಯ ಸಂಪ್ರದಾಯಗಳು ಬಳಸಲ್ಪಡುತ್ತವೆ.

ಜ್ಯಾಮ್‌ಗೊನ್ ಕೊಂಗ್ಟ್ರುಲ್‌ನ ಹೇವಜ್ರಾ ತಂತ್ರ ದ ಮೇಲಿನ ಅವನ ವ್ಯಾಖ್ಯಾನದ ಪ್ರಕಾರ, ಸಾಂಕೇತಿಕ ಮೂಳೆಯ ಅಲಂಕಾರಗಳೂ (ಸಂಸ್ಕೃತ: aṣṭhiamudrā; Tib: rus pa'i rgyanl phyag rgya) ಕೂಡ "ಮುದ್ರೆ" ಅಥವಾ "ಮೊಹರುಗಳು" ಎಂದು ಕರೆಯಲ್ಪಡುತ್ತವೆ.[೪]

ಭಾರತೀಯ ಶಾಸ್ತ್ರೀಯ ನೃತ್ಯಸಂಪಾದಿಸಿ

ಭಾರತೀಯ ಸಾಂಪ್ರದಾಯಿಕ ನೃತ್ಯಗಳಲ್ಲಿ "ಹಸ್ತ ಮುದ್ರೆ"ಯು (ಹಸ್ತ ಎನ್ನುವುದು ಕೈ ಎಂಬುದರ ಸಂಸ್ಕೃತ ಶಬ್ದ) ಬಳಸಲ್ಪಡುತ್ತದೆ. ಭಾರತೀಯ ಶಾಸ್ತ್ರೀಯ ನೃತ್ಯಗಳ ಎಲ್ಲಾ ವಿಧಗಳಲ್ಲಿಯೂ ಮುದ್ರೆಗಳು ಒಂದೇ ರೀತಿಯಾಗಿರುತ್ತವೆ, ಆದಾಗ್ಯೂ ಅವುಗಳ ಹೆಸರುಗಳು ಮತ್ತು ಬಳಕೆಗಳು (ಉಪಯೋಗಗಳು) ವಿಭಿನ್ನವಾಗಿರುತ್ತವೆ. ಭರತನಾಟ್ಯದಲ್ಲಿ ೨೮ (ಅಥವಾ ೩೨) ಮೂಲ ಮುದ್ರೆಗಳು, ಕಥಕ್ಕಳಿಯಲ್ಲಿ ೨೪ ಮುದ್ರೆಗಳು ಮತ್ತು ಓಡಿಸಿಯಲ್ಲಿ ೨೦ ಮುದ್ರೆಗಳಿವೆ. ಈ ಮೂಲ ಮುದ್ರೆಗಳು ಒಂದು ಕೈ, ಎರಡು ಕೈಗಳು, ಭುಜದ ಚಲನೆಗಳು, ದೇಹದ ಮತ್ತು ಮೌಖಿಕ ಅಭಿನಯಗಳು ಎಂಬುದಾಗಿ ಹಲವಾರು ವಿಧಗಳಲ್ಲಿ ಸಂಯೋಜಿಸಲ್ಪಟ್ಟಿವೆ. ಅತ್ಯಂತ ಹೆಚ್ಚಿನ ಸಂಖ್ಯೆಯ ಸಂಯೋಜನವನ್ನು ಹೊಂದಿರುವ ಕಥಕ್ಕಳಿಯಲ್ಲಿ ಶಬ್ದಕೋಶವು ಸುಮಾರು ೯೦೦ ಶಬ್ದಗಳನ್ನು ಸೇರಿಸುತ್ತದೆ.[೫]

ಯೋಗಿಕ ಮುದ್ರೆಗಳುಸಂಪಾದಿಸಿ

ಮುದ್ರೆಗಳು ಯೋಗ ಅಭ್ಯಾಸದ ಮೂಲಭೂತ ವಿಧಗಳಾಗಿವೆ, ಅಂದರೆ ಬಿಹಾರ್ ಸ್ಕೂಲ್ ಆಫ್ ಯೋಗ (ಯೋಗದ ಬಿಹಾರಿ ಸ್ಕೂಲ್)ದಿಂದ ಪ್ರಕಟಿಸಲ್ಪಟ್ಟ ಹೆಚ್ಚು ಜನಪ್ರಿಯ ಪುಸ್ತಕಗಳು ಅದನ್ನು ಆಸನ, ಪ್ರಾಣಾಯಮ, ಮುದ್ರೆ, ಬಂಧ ಎಂಬುದಾಗಿ ಕರೆಯುತ್ತವೆ.

ಮೂಲ ಮುದ್ರೆ: ಚಿನ್ ಮುದ್ರೆಸಂಪಾದಿಸಿ

ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳು ಒಂದು ಶೂನ್ಯವಾಗಿ (ಜೀರೋ) ಸಯೋಜಿಸಲ್ಪಡುತ್ತವೆ. ಮಧ್ಯದ ಬೆರಳು ತೋರುಬೆರಳಿನ ಮಡಚಲ್ಪಟ್ಟಿರದ ಭಾಗವನ್ನು ಮುಟ್ಟುವುದರ ಜೊತೆಗೆ ಉಳಿದ ಬೆರಳುಗಳು ವಿಸ್ತರಿಸಲ್ಪಡುತ್ತವೆ. ವಜ್ರಾಸನದಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಕೈಗಳು ತೊಡೆಯ ಮೇಲೆ ಅಂಗೈ-ಊರಲ್ಪಟ್ಟಿರುತ್ತವೆ. ಈ ಮುದ್ರೆಯು ಆಳವಾದ "ಹೊಟ್ಟೆಯ-ಉಸಿರಾಟ"ಕ್ಕೆ ಸಹಾಯ ಮಾಡುವ ಮೂಲಕ ವಿಭಾಜಕಾಂಗವನ್ನು (ಎದೆಯ ಭಾಗಕ್ಕೂ ಹೊಟ್ಟೆಯ ಭಾಗಕ್ಕೂ ನಡುವಿನ ಭಾಗ) ಕ್ರಿಯಾಶೀಲವಾಗಿಸುತ್ತದೆ, ವಿಭಾಜಕಾಂಗವು ಉಸಿರೆಳೆತದ ಸಮಯದಲ್ಲಿ ಶ್ರೋಣಿ ಕುಹರಗಳ ಕಡೆಗೆ ಕುಗ್ಗಿದ ಸಂದರ್ಭದಲ್ಲಿ ಇದು ಆಂತರಿಕ ಅಂಗಗಳನ್ನು ಮುಂದೂಡುತ್ತದೆ. ಒಂದು ೫-೨-೪-೨ (೫ ನಿಶ್ವಾಸವಾಗಿರುತ್ತದೆ, ಮತ್ತು ೪ ಉಸ್ಛ್ವಾಸವಾಗಿರುತ್ತದೆ) ಲಯದಲ್ಲಿ ನಿಧಾನವಾದ ಲಯಬದ್ಧವಾದ ಉಸಿರಾಟವು ಶ್ರೋಣಿ ಕುಹರಗಳಲ್ಲಿ (ಕಲಿಜ ಕುಹರಗಳಲ್ಲಿ) ಮತ್ತು ಕಾಲುಗಳಲ್ಲಿ ಪ್ರಾಣವನ್ನು (ಶಕ್ತಿ) ಉಂಟುಮಾಡುತ್ತದೆ.

ಮೂಲ ಮುದ್ರೆ: ಚಿನ್ಮಯ ಮುದ್ರೆಸಂಪಾದಿಸಿ

ಹೆಬ್ಬೆರಳು ಮತ್ತು ತೋರುಬೆರಳು ಚಿನ್ ಮುದ್ರೆಯ ರೀತಿಯಲ್ಲಿಯೇ ಇರುತ್ತವೆ. ಉಳಿದ ಬೆರಳುಗಳು ಒಂದು ಮುಷ್ಟಿಯಾಗಿ ಮಡಚಲ್ಪಟ್ಟಿರುತ್ತವೆ. ತೋರುಬೆರಳಿನ ಮತ್ತು ಮಧ್ಯದ ಬೆರಳಿನ ಮಡಚಲ್ಪಟ್ಟಿರದ ಭಾಗವು ಆ ಸಮಯದಲ್ಲಿಯೂ ಕೂಡ ಒಂದನ್ನೊಂದು ಮುಟ್ಟುತ್ತಿರಬೇಕು. ಚಿನ್ ಮುದ್ರೆಯಲ್ಲಿರುವಂತೆಯೇ, ವಜ್ರಾಸನ ಭಂಗಿಯಲ್ಲಿ ಕುಳಿತಿರುವ ಸಮಯದಲ್ಲಿ ಕೈಗಳು ತೊಡೆಯ ಮೇಲೆ ಇಡಲ್ಪಟ್ಟಿರಬೇಕು. ಈ ಮುದ್ರೆಯು ಪಕ್ಕೆಲುಬುಗಳನ್ನು ಕ್ರಿಯಾಶಿಲವಾಗಿಸುತ್ತದೆ, ಅದು ಉಸಿರೆಳೆದುಕೊಳ್ಳುವ ಸಮಯದಲ್ಲಿ ಬದಿಯ ಭಾಗಗಳನ್ನು ವಿಸ್ತರಿಸುವಂತೆ ಮಾಡುತ್ತದೆ. ಒಂದು ೫-೨-೪-೨ (೫ ನಿಶ್ವಾಸವಾಗಿರುತ್ತದೆ, ಮತ್ತು ೪ ಉಸ್ಛ್ವಾಸವಾಗಿರುತ್ತದೆ) ಲಯದಲ್ಲಿ ನಿಧಾನವಾದ ಲಯಬದ್ಧವಾದ ಉಸಿರಾಟವು ಮುಂಡದಲ್ಲಿ ಮತ್ತು ಕುತ್ತಿಗೆಯಲ್ಲಿ ಪ್ರಾಣದ ಸಂಚಾರವನ್ನು ಉಂಟುಮಾಡುತ್ತದೆ.

ಮೂಲ ಮುದ್ರೆ: ಆದಿ ಮುದ್ರೆಸಂಪಾದಿಸಿ

ಹೆಬ್ಬೆರಳು ಸಣ್ಣ ಬೆರಳಿನ ಮೂಲವನ್ನು ಮುಟ್ಟುವಂತೆ ಅಂಗೈಯೊಳಗೆ ಮಡಚಲ್ಪಡುತ್ತದೆ. ಉಳಿದ ಬೆರಳುಗಳು ಒಂದು ಮುಷ್ಟಿಯನ್ನು ಸೃಷ್ಟಿಸುವ ಸಲುವಾಗಿ ಹೆಬ್ಬೆರಳಿನ ಮೇಲೆ ಮಡಚಲ್ಪಡುತ್ತವೆ. ಚಿನ್ ಮುದ್ರೆಯಲ್ಲಿ ಇರುವಂತೆಯೇ, ವಜ್ರಾಸನ ಭಂಗಿಯಲ್ಲಿ ಕುಳಿತಿರುವ ಸಮಯದಲ್ಲಿ ಕೈಗಳು ತೊಡೆಯ ಮೇಲೆ ಇಡಲ್ಪಟ್ಟಿರಬೇಕು. ಈ ಮುದ್ರೆಯು ಉಸಿರೆಳೆತದ ಸಮಯದಲ್ಲಿ ಎದೆಯ ಭಾಗವನ್ನು ವಿಸ್ತರಿಸುವ ಮೂಲಕ ವಕ್ಷಕವಚದ (ಎದೆಕವಚ)ಸ್ನಾಯುಗಳನ್ನು ಕ್ರಿಯಾಶಿಲವಾಗಿಸುತ್ತದೆ. ಒಂದು ೫-೨-೪-೨ (೫ ನಿಶ್ವಾಸವಾಗಿರುತ್ತದೆ, ಮತ್ತು ೪ ಉಸ್ಛ್ವಾಸವಾಗಿರುತ್ತದೆ) ಲಯದಲ್ಲಿ ನಿಧಾನವಾದ ಲಯಬದ್ಧವಾದ ಉಸಿರಾಟವು ಕುತ್ತಿಗೆಯಲ್ಲಿ ಮತ್ತು ತಲೆಯಲ್ಲಿ ಪ್ರಾಣದ ಸಂಚಾರವನ್ನು ಉಂಟುಮಾಡುತ್ತದೆ.

ಮೂಲ ಸ್ಥಿರ ಮುದ್ರೆ: ಬ್ರಹ್ಮ ಮುದ್ರೆಸಂಪಾದಿಸಿ

ಅಂಗೈಗಳು ಆದಿ ಮುದ್ರೆಯಲ್ಲಿರುವಂತೆ ಇರುತ್ತವೆ, ಆದರೆ ಅಂಗೈಯ ಒಳಭಾಗವು ಮೇಲ್ಮುಖವಾಗಿರುತ್ತದೆ ಮತ್ತು ಎಡ ಮತ್ತು ಬಲ ಬೆರಳಿನ ಗೆಣ್ಣುಗಳು ಮತ್ತು ಮೊದಲ ಬೆರಳಿನ ಗಂಟುಗಳು ಮುಟ್ಟುವಂತೆ ಇರುವುದರ ಜೊತೆಗೆ ನಾಭಿಯ ಮಟ್ಟಕ್ಕೆ ಸ್ಥಾಪಿತಗೊಂಡಿರುತ್ತವೆ. ಇದು ವಜ್ರಾಸನ ಭಂಗಿಯಲ್ಲಿ ಕುಳಿತಿರುವ ಸಮಯದಲ್ಲಿ ನಡೆಸಲ್ಪಡುತ್ತದೆ ಉಸಿರಾಟವು ಪೂರ್ಣವಾಗಲ್ಪಡುತ್ತದೆ: ಉಸಿರೆಳೆತದಲ್ಲಿ, ವಿಭಾಜಕಾಂಗವು ಕುಗ್ಗಲ್ಪಡುತ್ತದೆ, ಪಕ್ಕೆಲುಬುಗಳು ನಂತರದಲ್ಲಿ ವಿಸ್ತಾರವಾಗಲ್ಪಡುತ್ತವೆ ಮತ್ತು ನಂತರ ಎದೆಕವಚದ ಸ್ನಾಯುಗಳು ಮುಂದಕ್ಕೆ ಚಲಿಸುತ್ತವೆ. ನಿವಾಸವು ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಅದು ಒಂದು "ತರಂಗದ" ಅಥವಾ ಸಣ್ಣ ಅಲೆಗಳ ಪರಿಣಾಮವನ್ನು ಉಂಟುಮಾಡುತ್ತದೆ. ಒಂದು ೫-೨-೪-೨ (೫ ನಿಶ್ವಾಸವಾಗಿರುತ್ತದೆ, ಮತ್ತು ೪ ಉಸ್ಛ್ವಾಸವಾಗಿರುತ್ತದೆ) ಲಯದಲ್ಲಿ ನಿಧಾನವಾದ ಲಯಬದ್ಧವಾದ ಉಸಿರಾಟವು ಪೂರ್ತಿ ದೇಹದಲ್ಲಿ ಪ್ರಾಣದ ಸಂಚಾರವಾಗುವಂತೆ ಮಾಡುತ್ತದೆ.

ಸುಧಾರಿತ ಸ್ಥಿರ ಮುದ್ರೆ: ಪ್ರಾಣ ಮುದ್ರೆಸಂಪಾದಿಸಿ

ಇದು ಕೈಯ ಅಭಿನಯಗಳು, ಉಸಿರಾಟದ ಚಕ್ರ ಮತ್ತು ಧ್ಯಾನದಲ್ಲಿ ಅಭಿನಯದಿಂದ ಅಭಿನಯಕ್ಕೆ ಏಕಕಾಲಿಕ ಚಲನೆಗಳನ್ನು ಸಂಯೋಜಿಸುವ ಒಂದು ಕ್ಲಿಷ್ಟವಾದ ಮುದ್ರೆಯಾಗಿದೆ. ಈ ಮುದ್ರೆಯು ಸಿದ್ಧಾಸನ ಭಂಗಿಯಲ್ಲಿ ಕುಳಿತುಕೊಂಡು ಅಭ್ಯಾಸ ಮಾಡುವುದಾಗಿದೆ. ಈ ಮುದ್ರೆಯು ಏಕೈಕ ಉಸಿರಾಟದ ಚಕ್ರವೂ ಕೂಡ ದೇಹವನ್ನು ಗಣನೀಯ ಪ್ರಮಾಣದಲ್ಲಿ ಪ್ರಚೋದಿಸುತ್ತದೆ. ಇದು ಚಕ್ರದ ಸಿದ್ಧಾಂತಗಳು ಎಂಬ ಪುಸ್ತಕದಲ್ಲಿ ಹಿರೋಷಿ ಮೊಟೊಯಾಮಾರಿಂದ ವರ್ಣಿಸಲ್ಪಟ್ಟಿದೆ.

ಬೌದ್ಧರ ಸಾಮಾನ್ಯ ಮುದ್ರೆಗಳುಸಂಪಾದಿಸಿ

ಅಭಯ ಮುದ್ರೆಸಂಪಾದಿಸಿ

 
ಕೊರಿಯಾಸ್ ನ್ಯಾಶನಲ್ ಟ್ರಶರ್ ಸಂಖ್ಯೆ. 119. ಬಲಗೈಯಲ್ಲಿ ಅಭಯ ಹಸ್ತವನ್ನು, ಎಡಗೈಯಲ್ಲಿ ವರದ ಹಸ್ತವನ್ನು ತೋರಿಸುತ್ತಿರುವ ದೃಶ್ಯ (ಬಯಸಿದ್ದನ್ನು ಕೊಡುವ ಸನ್ನೆ).

ಅಭಯ ಮುದ್ರೆ ("ಭಯ-ಇಲ್ಲದ ಮುದ್ರೆ")ಯು ರಕ್ಷಣೆ, ಶಾಂತಿ, ದಯಾಪರತೆ, ಮತ್ತು ಭಯದ ಹೋಗಲಾಡಿಸುವಿಕೆಯನ್ನು ಪ್ರತಿನಿಧಿಸುತ್ತದೆ. ತೆರವಾದದಲ್ಲಿ, ಈ ಮುದ್ರೆಯು ಬಲ ಕೈಯು ಭುಜದ ಎತ್ತರಕ್ಕೆ ಎತ್ತುವುದರ ಜೊತೆಗೆ ಮಾಡಲ್ಪಡುತ್ತದೆ, ನಂತರದಲ್ಲಿ ತೋಳು ಬಾಗಿಸಲ್ಪಡುತ್ತದೆ ಮತ್ತು ಅಂಗೈಯು ಬೆರಳುಗಳು ಮೇಲ್ಮುಖವಾಗಿರುವುದರ ಜೊತೆಗೆ ಹೊರಗಡೆ ಚಾಚಲ್ಪಡುತ್ತದೆ ಮತ್ತು ಸೇರಲ್ಪಟ್ಟ ಮತ್ತು ಎಡ ಕೈಯು ನಿಂತಿರುವ ಸಮಯದಲ್ಲಿ ಕೆಳಮುಖವಾಗಿರುತ್ತವೆ. ಥೈಲ್ಯಾಂಡ್ ಮತ್ತು ಲಾವೋಸ್‌ನಲ್ಲಿ, ಈ ಮುದ್ರೆಯು ನಡೆಯುತ್ತಿರುವ ಬುದ್ಧನಿಗೆ ಸಂಯೋಜಿಸಲ್ಪಟ್ಟಿದೆ, ಅನೇಕ ವೇಳೆ ಎರಡು ಕೈಗಳು ಎರಡು ಅಭಯ ಮುದ್ರೆಗಳನ್ನು ಮಾಡುತ್ತಿರುವಂತೆ ತೋರಿಸಲಾಗುತ್ತದೆ, ಮತ್ತು ಅವು ಸಮಾನವಾಗಿರುತ್ತವೆ. ಈ ಮುದ್ರೆಯು ಸಂಭಾವ್ಯವಾಗಿ ಅಪರಿಚಿತರನ್ನು ಸಮೀಪಿಸುವ ಸಮಯದಲ್ಲಿ ಸ್ನೇಹಪರತೆಯ ಒಳ್ಳೆಯ ಉದ್ದೆಶಗಳನ್ನು ಪ್ರಸ್ತಾಪಿಸುವ ಒಂದು ಸಂಕೇತವಾಗಿ ಬೌದ್ಧದರ್ಮದ ಸ್ಥಾಪನೆಗೂ ಮುಂಚೆ ಬಳಸಲ್ಪಟ್ಟಿತು. ಗಾಂಧಾರ ಕಲೆಗಳಲ್ಲಿ, ಈ ಮುದ್ರೆಯು ಉಪದೇಶ ಮಾಡುವ ಕಾರ್ಯದ ಸಮಯದಲ್ಲಿ ಕಂಡುಬರುತ್ತದೆ. ಇದು ೪ ನೆಯ ಮತ್ತು ೭ ನೆಯ ಶತಮಾನಗಳ ವಿಯಿ ಮತ್ತು ಸುಯಿ ಶಕೆಗಳ ಸಮಯದಲ್ಲಿ ಚೀನಾದಲ್ಲಿಯೂ ಕೂಡ ಬಳಸಲ್ಪಟ್ಟಿತು. ಈ ಸಂಕೇತವು ಬುದ್ಧನು ಒಂದು ಆನೆಯಿಂದ ಧಾಳಿಗೊಳಗಾದ ಸಂದರ್ಭದ ಸಂಕೇತವಾಗಿ ಬಳಸಲ್ಪಟ್ಟಿತು, ಅವು ಹಲವಾರು ಹಸಿಚಿತ್ರಣಗಳ ಗೋಡೆಗಳಲ್ಲಿ ಮತ್ತು ಶಿಲ್ಪಗಳಲ್ಲಿ ತೋರಿಸಲ್ಪಟ್ಟಿವೆ. ಮಹಾಯಾನದಲ್ಲಿ, ಉತ್ತರ ಭಾಗದ ಸ್ಕೂಲ್‌ನ ಸೃಷ್ಟಿಕರ್ತರು ಅನೇಕ ವೇಳೆ ಮತ್ತೊಂದು ಕೈಯನ್ನು ಬಳಸಿಕೊಂಡು ಮಾಡುವ ಮತ್ತೊಂದು ಮುದ್ರೆಯ ಜೊತೆಗೆ ಸಂಯೋಜಿಸುತ್ತಾರೆ. ಜಪಾನ್‌ನಲ್ಲಿ, ಅಭಯ ಮುದ್ರೆಯು ಮಧ್ಯದ ಬೆರಳನ್ನು ಸ್ವಲ್ಪವಾಗಿ ಮುಂದಕ್ಕೆ ಬಾಗುವಂತೆ ತೋರಿಸುವುದರ ಜೊತೆಗೆ ಬಳಸಲ್ಪಟ್ಟಾಗ, ಇದು ಶಿಂಗಾನ್ ವಿಭಾಗದ ಒಂದು ಸಂಕೇತವಾಗಿ ಕಂಡುಬರುತ್ತದೆ. (ಜಪಾನೀಯರ: ಸೆಮುಯಿ-ಇನ್ ; ಚೀನಿಯರ: ಶಿವುವಿ ಯಿನ್ )[ಸೂಕ್ತ ಉಲ್ಲೇಖನ ಬೇಕು]

ಭೂಮಿಸ್ಪರ್ಶ ಮುದ್ರೆಸಂಪಾದಿಸಿ

 
ಭೂಮಿಸ್ಪರ್ಶ ಮುದ್ರೆದಲ್ಲಿ ಬುದ್ಧ

ಬೊಧ್ ಗಯಾ ದಲ್ಲಿ ಶಕ್ಯಮುನಿ ಬುದ್ಧನ ಜ್ಞಾನಗಳಿಗೆ ಸಾಕ್ಷಿಯಾಗಿ ಈ ಸಂಕೇತವು ಭೂಮಿಯ ಮೇಲೆ ಕರೆಯಲ್ಪಡುತ್ತದೆ. ಕುಳಿತಿರುವ ಆಕೃತಿಯ ಬಲಗೈ ಭೂಮಿಯ ಕಡೆಗೆ ಚಾಚಲ್ಪಡುತ್ತದೆ ಮತ್ತು ಅಂಗೈ ಒಳಗೆ ತಲುಪುತ್ತದೆ.

ಧರ್ಮಚಕ್ರ ಮುದ್ರೆಸಂಪಾದಿಸಿ

ಧರ್ಮಚಕ್ರ ಮುದ್ರೆ ಯು ಸಾರಾನಾಥದಲ್ಲಿನ ಎರಳೆ ಉದ್ಯಾನವನದಲ್ಲಿ ಬುದ್ಧನ ಜ್ಞಾನೋದಯದ ನಂತರ ಅವನ ಮೊದಲ ಧರ್ಮೋಪನ್ಯಾಸದ ನೀತಿ ಬೋಧನೆಯ ಸಮಯದಲ್ಲಿ ಬುದ್ಧನ ಜೀವನದಲ್ಲಿನ ಪ್ರಮುಖ ಕ್ಷಣಗಳನ್ನು ಚಿತ್ರಿಸುತ್ತದೆ. ಸಾಮನ್ಯವಾಗಿ, ಗೌತಮ ಬುದ್ಧ ಮಾತ್ರ ಹಾಕಿರುವಂತೆ ತೋರಿಸಿರುವ ಈ ಮುದ್ರೆ, ವಿಧಿ ಬಂಧನೆಯ ವಿತರಣಾಕಾರನಂತೆ ಮೈತ್ರೇಯ ಕಾಪಾಡಿದ್ದನೆ. ಈ ಮುದ್ರೆಯ ಸ್ಥಿತಿಯು ಧರ್ಮದ ತಿರುಗುತ್ತಿರುವ ಚಕ್ರವನ್ನು ಚಿತ್ರಿಸುತ್ತದೆ. ಧರ್ಮ ಚಕ್ರವು ವಿಕ್ರಾಂತದಲ್ಲಿ ವಕ್ಷಸ್ಥಳದ ಮುಂದೆ ಎರಡು ಕೈಗಳನ್ನು ಒಟ್ಟಿಗೆ ಸೇರಿಸಿದಾಗ, ಬಲ ಅಂಗೈ ಮುಂದೆ ಮತ್ತು ಎಡ ಅಂಗೈ ಮೇಲೆ ಹೊಂದಿಕೊಂಡಂತೆ, ಕೆಲವು ಸಮಯದಲ್ಲಿ ಕೈಗಳು ವಕ್ಷಸ್ಥಳಕ್ಕೆ ಅಬಿಮುಖವಾಗಿರುವಂತೆ ರೂಪುಗೊಳ್ಳಲ್ಪಟ್ಟಿದೆ. ಇದರಲ್ಲಿಯೇ ಅನೇಕ ಬದಲಾವಣೆಗಳಿದ್ದು ಭಾರತದ ಅಜಂತಾ ಗುಹೆಗಳಲ್ಲಿ ಕಂಡ ಒಂದು ಪ್ರಕಾರದಲ್ಲಿ ಕೈಗಳು ಬೇರೆಯಾಗಿದ್ದು ಬೆರಳುಗಳು ಪರಸ್ಪರ ಸ್ಪರ್ಶಿಸಲ್ಪಟ್ಟಿರುವುದಿಲ್ಲ. ಇಂಡೋ-ಗ್ರೀಕ್ ಶೈಲಿಯ ಗಾಂಧಾರದಲ್ಲಿ ಮಡಿಚಲ್ಪಟ್ಟ ಬಲಗೈ ಮುಷ್ಟಿ ಎಡಗೈ ಮೇಲೆ ಹರಡಿರುವ ಬೆರಳುಗಳು ಹೆಬ್ಬೆರಳಿಗೆ ಹೊಂದಿಕೊಂಡಂತೆ ತೋರುತ್ತದೆ. ಜಪಾನಿನಲ್ಲಿ ಹೊರ್ಯು-ಜಿ ಯ ಚಿತ್ರಪತ್ರಿಕೆಗಳಲ್ಲಿ ಬಲಗೈ ಎಡಗೈ ಮೇಲೆ ಇಟ್ಟಿರುವಂತಿದೆ, ಜಪಾನಿನ ಅಮಿತಾಭ ದ ನಿಖರವಾದ ಚಿತ್ರಗಳು ೯ನೇ ಶತಮಾನಕ್ಕಿಂತ ಪೂರ್ವದಲ್ಲಿ ಈ ಮುದ್ರೆಯನ್ನು ಉಪಯೋಗಿಸಿರುವಂತೆ ತೋರಿಸುತ್ತದೆ. (ಜಪಾನೀಯರ: ಟೆನ್‍ಬೊರಿನ್-ಇನ್ , ಚಿಕಿಚಿ-ಜೋ , ಹೊಶಿನ್-ಸೆಪ್ಪೋ-ಇನ್  ; ಚೀನಿಯರ: ಜುವನ್‌ಫಾಲನ್ ಯಿನ್ )

ಧ್ಯಾನ ಮುದ್ರೆಸಂಪಾದಿಸಿ

 
ಕಾಮಕುರದ ಕೋಟಾಕು-ಇನ್‌ನಲ್ಲಿನ ಅಮಿತಾಭ ವಿಗ್ರಹದ ಕೈಗಳು

ಧ್ಯಾನ ಮುದ್ರೆ (ಮೆಡಿಟೇಶನ್ ಮುದ್ರೆ)ಯು ಧ್ಯಾನದ, ಏಕಾಗ್ರತೆಯ, ಒಳ್ಳೆಯ ವಿಧಿಯ ಸಂಕೇತವಾಗಿದೆsaṅgha. ಎರಡು ಕೈಗಳು ತೊಡೆಯ ಮೇಲೆ ಇರಿಸಿದಂತೆ,ಎಡಗೈ ಮೇಲೆ ಬಲಗೈ ಬೆರಳುಗಳ ಜೊತೆಗೆ ಸಂಪೂರ್ಣವಾಗಿ ಹರಡಿಕೊಂಡಂತೆ ಮತ್ತು ಅಂಗೈಗಳು ಮೆಲ್ಮುಖವಾಗಿರುವಂತೆ, ತ್ರಿಕೋನಾಕಾರ ರೂಪಗೊಂಡಿರುವಂತೆ, ಪವಿತ್ರ ಬೆಂಕಿಯ ಸಂಕೇತ ಅಥವಾ ತ್ರಿರತ್ನ, ಮೂರು ಆಭರಣಗಳ ರೂಪಗೊಳ್ಳುತ್ತದೆ. ಧ್ಯಾನ ಮುದ್ರೆಯು ಶಕ್ಯಮುನಿ ಬುದ್ಧ ಮತ್ತು ಅಮಿತಾಭ ಬುದ್ಧ ಇವರುಗಳ ನಿರೂಪಣೆಯಲ್ಲಿ ಉಪಯೋಗಿಸಲ್ಪಟ್ಟಿದೆ ಕೆಲವು ಸಮಯದಲ್ಲಿ ಧ್ಯಾನ ಮುದ್ರೆಯು ಔಷಧಿ ಬುದ್ಧ ನಂತಹBhaiṣajyaguru , ಜೊತೆಗೆ ಔಷಧಿ ಬಟ್ಟಲನ್ನು ಕೈಗಳಲ್ಲಿ ಹಿಡಿದಿರುವಂತಹ ನಿಖರವಾದ ನಿರೂಪಣೆಗಳಲ್ಲಿ ಉಪಯೋಗಿಸಲ್ಪಟ್ಟಿದೆ ಧ್ಯಾನ ಮುದ್ರೆಯು ಭಾರತದಲ್ಲಿ ಅತ್ಯಂತ ಸಂಭಾವ್ಯ ಗಾಂಧಾರ ಶೈಲಿಯಲ್ಲಿ ಮತ್ತು ಚೈನಾದ ಉದ್ದಕ್ಕು ವೈ ಕಾಲದಲ್ಲಿ ಪ್ರಾರಂಭಗೊಂಡಿತು. ಬುದ್ಧನಿಗಿಂತ ತುಂಬಾ ಹಿಂದೆ ಉಪಯೋಗಿಸಲ್ಪಟ್ಟ ಈ ಮುದ್ರೆಯು ಇದು ಯೋಗಿಗಳು ಅವರ ಏಕಾಗ್ರತೆ, ಗುಣಪಡಿಸುವಲ್ಲಿ, ಧ್ಯಾನ ಪ್ರಯೋಗದಲ್ಲಿ ಉಪಯೋಗಿಸಲ್ಪಟ್ಟಿತ್ತು. ಧ್ಯಾನ ಮುದ್ರೆಯು ಬಹಳವಾಗಿ ತೆರವಾದ ಬೌದ್ಧ ಧರ್ಮದಲ್ಲಿ ದಕ್ಷಿಣಪೂರ್ವ ಏಷ್ಯಾದಲ್ಲಿ ಉಪಯೋಗಿಸಲ್ಪಟ್ಟಿತ್ತು; ಹೇಗಾದರೂ, ಹೆಬ್ಬೆರಳುಗಳು ಅಂಗೈಗಳ ವಿರುದ್ಧವಾದ ಜಾಗದಲ್ಲಿರುತ್ತದೆ. (ಧ್ಯಾನ ಮುದ್ರೆಯು ಸಮಾಧಿ ಮುದ್ರೆ ಅಥವಾ ಯೋಗ ಮುದ್ರೆ ಎಂಬುದಾಗಿಯೂ ತಿಳಿಯಲ್ಪಟ್ಟಿದೆ; ಜಪಾನೀಯರ: ಜೋ-ಇನ್ , ಜೋಕೈ-ಇನ್ ; ಚೀನಿಯರ: ಡಿಂಗ್ ಯಿನ್ .)

ವರದಾ ಮುದ್ರೆಸಂಪಾದಿಸಿ

ವರದಾ ಮುದ್ರೆ ("ಅನುಕೂಲಕರವಾದ ಮುದ್ರೆ")ಯು ಸ್ವಾಗತ, ಔದಾರ್ಯ, ನೀಡುವುದು, ಅನುಕಂಪ ಮತ್ತು ಪ್ರಾಮಾಣಿಕತೆಯ ಸಂಕೇತವನ್ನು ಸೂಚಿಸುತ್ತದೆ. ಇದನ್ನು ಯಾವಾಗಲೂ ಎಡಗೈಯಲ್ಲೆ ತೋರಿಸುತ್ತಾರೆ, ಮಾನವನು ದುರಾಸೆ,ಸಿಟ್ಟು, ಮತ್ತು ಭ್ರಾಂತಿ ಇವುಗಳಿಂದ ಮುಕ್ತವಾಗಿ ಭಕ್ತಿ ಮಾರ್ಗದಿಂದ ಮೋಕ್ಷ ಮಾರ್ಗದೆಡೆಗೆ ನಡೆಯವುದನ್ನು ಸೂಚಿಸುತ್ತದೆ. ಈ ಮುದ್ರೆಯಲ್ಲಿ ತೋಳನ್ನು ವಕ್ರಮಾಡಲಾಗುತ್ತದೆ ಮತ್ತು ಹಸ್ತವು ಸ್ವಲ್ಪ ತಿರುಗಿಕೊಂಡಿರುತ್ತದೆ ಅಥವಾ ತೋಳು ಕೆಳಮುಖವಾಗಿ ಭಾಗಿಕೊಂಡಿದ್ದಾಗ ಹಸ್ತದ ಬೆರಳುಗಳು ನೇರವಾಗಿರುತ್ತವೆ ಅಥವಾ ಸ್ವಲ್ಪ ಬಾಗಿರುತ್ತವೆ. ವರಹಾ ಮುದ್ರೆಯು ಇನ್ನಿತರ ಮುದ್ರೆಯಂತೆ ಕಂಡುಬರದೆ ಅಪರೂಪವಾಗಿ ಅಭಯಾ ಮುದ್ರೆಯಂತೆ ಬಲಗೈ ಬಳಸರುವುದು ಕಂಡುಬರುತ್ತದೆ. ಇದು ವಿತರ್ಕಾ ಮುದ್ರೆ ಹೋಲುವುದರಿಂದ ಕೆಲವೊಮ್ಮೆ ಗುರುತಿಸಲು ಗೊಂದಲವಾಗುತ್ತದೆ. ಚೀನಾ ಮತ್ತು ಜಪಾನ್‌ನಲ್ಲಿ ವೈ ಮತ್ತು ಅಸಕಾ ಸಮಯದಲ್ಲಿ ಬೆರಳುಗಳು ಗಟ್ಟಿಯಾಗಿ ನಿಂತಿರುವಂತೆ ಕಾಣುತ್ತಿದ್ದವು ನಂತರ ಬೆಳವಣಿಗೆ ಹೊಂದಿದಂತೆ ನಿಧಾನವಾಗಿ ಸಡಿಲವಾಗತೊಡಗಿದವು, ಕೊನೆಯಲ್ಲಿ ತಾಂಗ್ ಸಾಮ್ರಾಜ್ಯದ ಸಮಯದಲ್ಲಿ ಬೆರಳುಗಳು ಸಹಜವಾಗಿ ಬಾಗಿಕೊಂಡವು. ಭಾರತದಲ್ಲಿ ೪ನೇಯ ೫ನೇಯ ಶತಮಾನಗಳ ಗುಪ್ತರ ಅವಧಿಯಲ್ಲಿ ಅವಲೋಕಿತೇಶ್ವರ ಶಿಲ್ಪದಲ್ಲಿ ಮುದ್ರೆಯನ್ನು ಬಳಸಿದ್ದು ಕಂಡುಬರುತ್ತದೆ. ವರದಾ ಮುದ್ರೆಯನ್ನು ಆಗ್ನೇಯ ಏಷ್ಯಾದ ಮೂರ್ತಿಗಳಲ್ಲಿ ವ್ಯಾಪಕವಾಗಿ ಬಳಸಿರುವುದು ಕಂಡುಬರುತ್ತದೆ. (ಜಪಾನೀಯರ: ಯೋಗನ್-ಇನ್ , ಸೀಗನ್-ಇನ್ , ಸೆಯೊ-ಇನ್ ; ಚೈನಾ: ಶಿಯ್ನನ್ ಯಿನ್ .)

ವಜ್ರಾ ಮುದ್ರೆಸಂಪಾದಿಸಿ

 
ವಜ್ರ ಮುದ್ರೆ

ವಜ್ರಾ ಮುದ್ರೆ ("ಆರ್ಭಟ ಮುದ್ರೆ")ಯು ಜ್ಞಾನದ ಸಂಕೇತವನ್ನು ಸೂಚಿಸುತ್ತದೆ. ಬಲಗೈಯನ್ನು ಮುಷ್ಟಿ ಮಾಡಲಾಗುತ್ತದೆ, ತೋರುಬೆರಳು ನೇರವಾಗಿ ಚಾಚಿಕೊಂಡಿರುತ್ತದೆ ಮತ್ತು ಎಡಗೈಯನ್ನ ಕೂಡ ಮುಷ್ಟಿ ಮಾಡಿ ತೋರುಬೆರಳನ್ನು ಹಿಡಿದುಕೊಳ್ಳಲಾಗುತ್ತದೆ.[clarification needed] ವಜ್ರಾ ಮುದ್ರೆಗೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ನೈನ್ ಸಿಲಾಬಲ್ ಸೀಲ್ಸ್‌ ನ ಏಳನೇಯ (ಒಂಭತ್ತರಲ್ಲಿ) ತಂತ್ರದಂತೆ, ಧಾರ್ಮಿಕ ಕ್ರಿಯೆಗಳಲ್ಲಿ ಮುದ್ರೆಯನ್ನು ಮಂತ್ರಗಳದ ಮೂಲಕ ಬಳಸಲಾಗುತ್ತದೆ ಸಂಸ್ಕೃತದ ಈ[ಸೂಕ್ತ ಉಲ್ಲೇಖನ ಬೇಕು] ಪ್ರಾರ್ಥನೆಯ ವಿಡಿಯೋ ಮನಸ್ಸನ್ನು ಪವಿತ್ರವಾದ ಅವಸ್ಥೆಗೆ ಕೊಂಡೊಯ್ಯುತ್ತದೆ, ನಂತರದಲ್ಲಿ ಕೂಜಿ-ಇನ್ ಎಂಬ ಜಪಾನೀ ವಿಧಿಯಿದ್ದು ಅದನ್ನು ಜಪಾನಿಯರ ಕಂಜಿ ಉಚ್ಚಾರವನ್ನು ಬಳಸಿ ಮಾಡಲಾಗುತ್ತದೆ. (ಸಂಸ್ಕೃತ ಮಂತ್ರಗಳನ್ನು ನಿಜವಾದ ಮುಮುಕ್ಷುವಿಗೆ ನೀಡಲಾಗುತ್ತದೆ.)

ವಿತರ್ಕಾ ಮುದ್ರೆಸಂಪಾದಿಸಿ

 
ವಿಟರ್ಕ ಮುದ್ರೆ, ಟಾರಿಮ್‌ ಬಾಸಿನ್, 9ನೇ ಶತಮಾನ

ವಿತರ್ಕಾ ಮುದ್ರೆ (" ಚರ್ಚೆಯ ಮುದ್ರೆ")ಯು ಬೌದ್ಧಧರ್ಮದ ಕಲಿಕಾ ವಿಧಾನದಲ್ಲಿನ ಚರ್ಚೆ ಮತ್ತು ಪ್ರಸಾರದ ಸಂಕೇತವನ್ನು ಸೂಚಿಸುತ್ತದೆ. ಇದನ್ನು ಹೆಬ್ಬೆರಳಿನ ತುದಿ ಮತ್ತು ತೋರುಬೆರಳನ್ನು ಸೇರಿಸಿ ಮಾಡಲಾಗುತ್ತದೆ, ಮತ್ತು ಉಳಿದ ಬೆರಳುಗಳು ಅಭಯ ಮುದ್ರೆ ಮತ್ತು ವರದಾ ಮುದ್ರೆಯಂತೆ ತುಂಬಾ ನೇರವಾಗಿರುತ್ತದೆ, ಆದರೆ ಇದರಲ್ಲಿ ಹೆಬ್ಬೆರಳು ತೋರುಬೆರಳಿನ ತುದಿಯನ್ನು ತಾಗುತ್ತಿರುತ್ತದೆ. ಪೂರ್ವ ಏಷ್ಯಾದಲ್ಲಿ ಈ ಮುದ್ರೆಯನ್ನ ಮಹಾಯಾನ ಬೌದ್ಧರು ಸ್ವಲ್ಪ ಬದಲಾಯಿಸಿ ಬಳಸಿಕೊಂಡರು. ಟಿಬೇಟಿನಲ್ಲಿ ಇದು ತಾರಾಗಳ ಮತ್ತು ಬೋಧಿಸತ್ವರ ರಹಸ್ಯ ಮುದ್ರೆಯಾಗಿದ್ದು, ಅವರಿಗೆ ಯಾಬ್-ಯುಮ್ ನಲ್ಲಿ ಕೆಲವರಿಗೆ ದೇವತೆಗಳು ಬೇರೆ ಬೇರೆಯಾಗಿರುತ್ತಾರೆ. (ವಿತರ್ಕ ಮುದ್ರೆಯನ್ನು Prajñāliṅganabhinaya , ವ್ಯಾಖ್ಯಾನ ಮುದ್ರೆ ಎಂದೂ ಕರೆಯುತ್ತಾರೆ ("ವಿವರಣೆಯ ಮುದ್ರೆ"); ಜಪಾನೀಯರ: Seppō-in , An-i-in ; ಚೀನಿಯರ: Anwei Yin .)

ಜ್ಞಾನ ಮುದ್ರೆಸಂಪಾದಿಸಿ

 
ಜ್ಞಾನ ಮುದ್ರೆ

ಜ್ಞಾನ ಮುದ್ರೆ ("ಜ್ಞಾನದ ಮುದ್ರೆ")ಯನ್ನು ಹೆಬ್ಬೆರಳಿನ ತುದಿ ಮತ್ತು ತೋರುಬೆರಳನ್ನು ಜೊತೆಯಾಗಿ ಸೇರಿಸಿ ವರ್ತುಲ ಮಾಡಲಾಗುತ್ತದೆ, ಮತ್ತು ಹಸ್ತವನ್ನು ಹೃದಯಕ್ಕೆ ಅಭಿಮುಖವಾಗಿ ಹಿಡಿಯಲಾಗುತ್ತದೆ.[೬]

ಕರಣಾ ಮುದ್ರೆಸಂಪಾದಿಸಿ

 
ಎಡಗಡೆಯಲ್ಲಿ ಕರಣ ಮುದ್ರೆಯಿರುವ ಜೊಸೆಯಾನ್ ಡೈನಸ್ಟಿ ಚಿತ್ರ.

ಕರಣಾ ಮುದ್ರೆ ಯು ಅನಾರೋಗ್ಯ ಮತ್ತು ನಕಾರಾತ್ಮಕ ವಿಚಾರಗಳಂತಹ ಸೈತಾನ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ತೊಂದರೆಯನ್ನು ನಿವಾರಣೆ ಮಾಡುತ್ತದೆ. ಈ ಮುದ್ರೆಯಲ್ಲಿ ತೋರುಬೆರಳು ಮತ್ತು ಕಿರುಬೆರು ನೇರವಾಗಿರುತ್ತದೆ ಮತ್ತು ಉಳಿದ ಬೆರಳುಗಳು ಮಡಚಿರುತ್ತವೆ. ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿರುವ ಕೊರ್ನಾಕ್ಕೆ ಸಮೀಪವಾಗಿದೆ, ವ್ಯತ್ಯಾಸವೆನೆಂದರೆ ಕರಣಾ ಮುದ್ರೆಯಲ್ಲಿ ಹೆಬ್ಬೆರಳು, ಮಧ್ಯಬೆರಳು,ಮತ್ತು ಉಂಗುರ ಬೆರಳು ಕೆಳಮುಖವಾಗಿ ಭಾಗಿರುವುದಿಲ್ಲ. (ಈ ಮುದ್ರೆಯನ್ನು ತರ್ಜನಿ ಮುದ್ರೆ ಎಂದು ಕರೆಯಾಗುತ್ತದೆ; ಜಪಾನೀಯರು: ಫುನ್ನು-ಇನ್ , ಪುದೋ-ಇನ್ ).

ಇತರ ಸಂಪ್ರದಾಯಗಳುಸಂಪಾದಿಸಿ

ಪೂರ್ವ ಆರ್ಥೊಡೆಕ್ಸ್ ಮತ್ತು ಕ್ಯಾಥೋಲಿಕ್ ಧಾರ್ಮಿಕ ಕ್ರಿಯೆಗಳು, ಭೂತಪ್ರೇತಗಳ ಉಚ್ಚಾಟನೆಯ ಪವಿತ್ರ ಧಾರ್ಮಿಕ ಕ್ರಿಯಾವಿಧಿ ಮತ್ತು ಪವಿತ್ರ ಜಲ, ಪವಿತ್ರೀಕರಣ, ಕ್ರೈಸ್ತಮತದ ದೀಕ್ಷಾಸ್ನಾನ, ಯುಚರಿಸ್ಟ್, ಶುಭಕೋರಿಕೆಗಳಂಹ ಕಾರ್ಯಗಲ್ಲಿ ಪವಿತ್ರ ಸಂಕೇತಗಳನ್ನ ಒಳಗೊಂಡಿವೆ.

ಕದನಕಲೆಗಳು ಮತ್ತು ಮುದ್ರೆಸಂಪಾದಿಸಿ

ಮುದ್ರೆಗಳು ಹಿಂದೂಧರ್ಮ ಮತ್ತು ಬೌದ್ಧಮತಗಳಲ್ಲಿ ಬಳಸುವ ತೋಳು, ಕೈ ಮತ್ತು ದೇಹದ ಆಸನಗಳಾಗಿವೆ. ಐತಿಹಾಸಿಕ ಬುದ್ಧ ಮುದ್ರೆಗಳ ಉಪಯೋಗವನ್ನು ತಿಳಿದಿದ್ದ ಮತ್ತು ಕ್ರಿಯಾವಿಧಿಗಳ ಅನುಷ್ಠಾನಗೊಳಿಸುತ್ತಿರುವ ಚಿತ್ರವನ್ನು ಕಾಣಬಹುದಾಗಿದೆ. ಇದು ಕುಂಗ್ ಫು ಮುದ್ರೆಗಳ ರೀತಿಯ ಅನೇಕ ಆಸನಗಳನ್ನು ಹೊಂದಿದೆ.[೭]

ಮುರೊಮೊಟೊ (೨೦೦೩) ತನ್ನ ಮುದ್ರೆ ಯ ಅನುಭವಗಳನ್ನು ಅದರ ಜೊತೆಗೆ ಕದನಕಲೆಗಳಾದ ಮಿಕ್ಯೋ, ಟಂಡೈ ಮತ್ತು ಶಿಂಗಾನ್‌‍ಗಳ ತರಬೇತಿಯಲ್ಲಿ ಹೋಲಿಸಿ ವಿವರಿಸುತ್ತಾನೆ:

ಕದನಕಲೆಗಳ ತರಬೇತಿಯಲ್ಲಿ ಮುದ್ರೆಯಲ್ಲಿ ಕಲಹಪ್ರಿಯ ಕಲೆಗಳ ಉಪಯೋಗವು ನನ್ನನ್ನು ಕುತೂಹಲಗೊಳಿಸಿತು. ಮುದ್ರೆ (ಜಪಾನೀಯರಲ್ಲಿ), ಯಾರಿಗೆ ತಮ್ಮ ಬಗ್ಗೆ ಅರಿವಿರುವಿರುವುದಿಲ್ಲವೋ ಅವರಿಗಾಗಿರುವಂತಹುದಾಗಿದೆ, ಈ ವಿಚಿತ್ರವಾದ ಕೈಯ ಸನ್ನೆಗಳು ಬೌದ್ಧಮತದ (ಮಿಕ್ಯೋ) ದಿಂದ ವಿಶೇಷವಾಗಿ ಟಂಡೈ ಮತ್ತು ಶಿಂಗಾನ್‌‍ ಒಳಪಂಗಡಗಳಿಂದ ಬಂದುದಾಗಿದೆ. ಈ ಆಸನಗಳನ್ನು ಆಧ್ಯಾತ್ಮದಲ್ಲಿ ಕೇಂದ್ರೀಕರಿಸಲು ಮತ್ತು ಶಕ್ತಿಯನ್ನು ಸ್ಪಷ್ಟವಾಗಿ ಹೊರಹಾಕಲು ಬಳಸಲಾಗುತ್ತದೆ.[೮]

ಮುರೊಮೊಟೊ (೨೦೦೩) ಹೇಳುವಂತೆ ಕದನಕಲೆಗಳಲ್ಲಿ ಮುದ್ರೆ ಯ ಪರಂಪರೆಯು ಕೊರ್ಯು, ರಿಯು, ಕಾಂಟೊ, ತೆನ್‌ಶಿನ್ ಶೋಡೆನ್ ಕಟೊತಿ ಶಿಂಟೋ-ರಿಯೂ, ರಿಸುಕೆ ಓಟಾಕೆ ಮತ್ತು ಡಾನ್ ಎಫ್. ಡ್ರಾಗರ್‌ ಮೊದಲಾದವರನ್ನು ಪ್ರಚೋದಿಸುತ್ತದೆ:

ಕೊರ್ಯುದಲ್ಲಿ ("ಹಳೆಯ" ಕದನಕಲೆಗಳು) ಮುದ್ರೆಯ ಉಪಯೋಗಗಳನ್ನು ತಿಳಿದಾಗಿನಿಂದ ಎಲ್ಲಾ ಸಂದರ್ಭದಲ್ಲಿಯೂ ನಾನು ನನ್ನ ಗುರುಗಳಾದ ತೆನ್‌ಶಿನ್ ಶೋಡೆನ್ ಕಟೊತಿ ಶಿಂಟೋ-Ryū, ಓಟಾಕೆ ರಿಸುಕೆ, ಮತ್ತು ದಿವಂಗತ ಡಾನ್ ಎಫ್. ಡ್ರಾಗರ್‌ರೊಂದಿಗೆ ಚರ್ಚಿಸುತ್ತಿದ್ದೆ. ಜಪಾನಿನ ಕಾಂಟೋ(ಪೂರ್ವ ದಿಕ್ಕಿನಲ್ಲಿ) ಅತ್ಯಂತ ಹಳೆಯ ಯುದ್ಧಕಲೆಗಳ ಶಾಲೆಯಾದ ಓಟಾಕೆ ಸೆಸೈ ತರಗತಿಗಳಲ್ಲಿ ಬಳಸಿದ ಮುದ್ರೆಯ ಬಗ್ಗೆ ವಿವರಿಸುತ್ತಾರೆ.[೮]

ಜಪಾನೀಯರ ಯುದ್ಧ ಸಂಸ್ಕೃತಿಯಲ್ಲಿ ಮುದ್ರೆ ಯ ಐತಿಹಾಸಿಕ ಭಾಗದ ನಕಾಶೆಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ, ಮುರೊಮೊಟೊ (೨೦೦೩) ಶಿಂಟೋ, ಸಮುರಾಯ್‌, ಟೊಕುಗವ ಸರ್ಕಾರ, ನಿಯೊ-ಕಫ್ಯೂಶಿಯಾನಿಸಮ್‌, ಝೆನ್ ಬೌದ್ಧ ಧರ್ಮ, ಕಮಕುರ ಕಾಲ, ಎಡೊ, ಟಕುಆನ್ ಮತ್ತು ಹಕುಯಿನ್‌‌ಗಳನ್ನು ಒಳಗೊಳ್ಳುವಂತೆ ಮಾಡಿದನು:

ಮುದ್ರೆ ಮತ್ತು ಇತರ ಮಿಕ್ಯೋ ರೂಪಗಳ ಉಪಯೋಗವನ್ನು ಅನೇಕ ಕೊರ್ಯು ಉದಾಹರಣೆಗಳಲ್ಲಿ ಕಾಣಬಹುದು, ಏಕೆಂದರೆ ಮಿಕ್ಯೋ ಮತ್ತು ಶಿಂಟೋಗಳು ೧೬೦೦ರ ದಶಕದ ಮೊದಲೇ ಸ್ಥಾಪಿಸಿದ ರಿಯುನ ಸಮುರಾಯ್‌ನ ಧರ್ಮಗಳಾಗಿವೆ. ಟೊಕುಗವ ಸರ್ಕಾರವು ತಡೆವೊಡ್ಡಿದ ನಂತರ ನಿಯೊ-ಕಫ್ಯೂಶಿಯಾನಿಸಮ್‌ನಿಂದ ಪ್ರೇರಿತವಾದ ರಿಯು ಅಭಿವೃದ್ಧಿಗೊಂಡಿತು ಮತ್ತು ನಂತರ‌ ಝೆನ್ ಬೌದ್ಧ ಧರ್ಮ‌ದಿಂದ ಬೆಳೆಯಿತು. ೧೩೦೦ರ ದಶಕದಲ್ಲಿ ಕಮಕುರ ಕಾಲದಲ್ಲಿ ಝೆನ್ ಸೈನಿಕರಲ್ಲಿ ಪ್ರಖ್ಯಾತವಾಗಿತ್ತಾದರೂ, ಝೆನ್ ಗುರುಗಳಾದ ಟಕುಆನ್ ಮತ್ತು ಹಕುಯಿನ್‌ ಬರಹಗಳ ಮೂಲಕ ಎಡೊ ಕಾಲದ ಭಾಗವಾಗುವವರೆಗೂ ಕದನಕಲೆಗಳು ಹೆಚ್ಚು ಪ್ರಖ್ಯಾತವಾಗಲಿಲ್ಲ, ಎಡೊ ಕಾಲದಲ್ಲಿ (೧೬೦೦-೧೮೬೮) ಕದನಕಲೆಗಳು ನಿಯೊ-ಕಫ್ಯೂಸಿಯಾನಿಸಮ್‌ನಿಂದ ಮತ್ತು ನಂತರದಲ್ಲಿ ಮೋಡಿಯಂತಹ ಶಿಂಟೋನಿಂದ ಸಮನಾಗಿ ಪ್ರಭಾವಿತವಾಯಿತು.[೮]

ಮುರೊಮೊಟೊ (೨೦೦೩) ಶುಂಟೋ ಮುದ್ರೆಯನ್ನು ಹಾಕುವ ಬಗೆಗೆ ಪಠ್ಯದ ಮೂಲಕ ಸಮೀಕ್ಷೆ ನಡೆಸುತ್ತಾನೆ:

ಮಿಕ್ಯೋ ಮುದ್ರೆಯೊಂದಿಗೆ ಅನೇಕ ಕರ್ಮಾಚರಣೆ ಮತ್ತು ಧ್ವನಿಗಳನ್ನು ಸೇರಿಸಿ ಬಳಸುತ್ತದೆ. ಸಾಮಾನ್ಯವಾದ ಮುದ್ರೆಯೆಂದರೆ "ಚಾಕು ಕೈ," ಅಥವಾ ಶುಂಟೋ. ಮೊದಲ ಎರಡು ಬೆರಳುಗಳು ಲಂಬಿಸಿದ್ದರೆ ಹೆಬ್ಬೆರಳು ಮತ್ತಿತರ ಬೆರಳುಗಳು ಒತ್ತಿಹಿಡಿದಿರುತ್ತವೆ. ಹತ್ತಿರದಿಂದ ನೋಡಿದಾಗ, ಈ ಚಲನೆಯು ಕೆಲವು ಕೊರ್ಯು ಕಾಟದಲ್ಲಿ ಅಡಗಿರುವುದು ಕಾಣುತ್ತದೆ, ವಿಶೇಷವಾಗಿ ತೆನ್‌ಶಿನ್ ಶೋಡೆನ್ ಕಟೊತಿ ಶಿಂಟೋ-ರಿಯುಗಳಂತಹ ಹಳೆಯ ಶಾಲೆಗಳಲ್ಲಿ, ಅಥವಾ ಪವಿತ್ರ ಬುದ್ಧ ಅನುಯಾಯಿಗಳ ವಿಗ್ರಹಗಳಲ್ಲಿ ಕಾಣಬಹುದು. ಇದು ಜ್ಞಾನೋದಯದ ಕತ್ತಿಯಾಗಿದ್ದು ಭ್ರಮೆಯನ್ನು ನಿವಾರಿಸುವುದನ್ನು ಪ್ರತಿನಿಧಿಸುತ್ತದೆ. ಕೆಲವೊಮ್ಮೆ ಚಾಚಿದ ಬೆರಳುಗಳ ತುದಿಯು ಇನ್ನೊಂದು ಕೈಯ ಬಿಗಿಮುಷ್ಟಿಯಲ್ಲಿರುತ್ತದೆ. ಇದರ ಸೂಚಿತ ಅರ್ಥವು ಮಿಕ್ಯೋವಿನಿಂದ ಬಂದುದಾಗಿದೆ.[೮]

ಇವನ್ನೂ ಗಮನಿಸಿಸಂಪಾದಿಸಿ

ಟಿಪ್ಪಣಿಗಳುಸಂಪಾದಿಸಿ

 1. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೧೦).ಮುದ್ರೆ (symbolic gestures). ೨೦೦೮ರ ಅಕ್ಟೋಬರ್ ೧೧ರಂದು ಮರುಪಡೆಯಲಾಯಿತು.
 2. ವುಡ್‌ರೋಫೆ, ಸರ್ ಜಾನ್, ಶಕ್ತಿ ಆ‍ಯ್‌೦ಡ್ ಶಕ್ತ: ಎಸ್ಸೇಸ್ ಆ‍ಯ್‍೬೦ಡ್ ಆಡ್ರಸಸ್ ಆನ್ ಶಕ್ತ ತಂತ್ರಶಾಸ್ತ್ರ
 3. ಸೈನ್ಸ್ ಡೈಲಿ ಆರ್ಟಿಕಲ್ ಅಬೌಟ್ ಹ್ಯಾಂಡ್ ಗೆಸ್ಚರ್ಸ್ ಆ‍ಯ್‌೦ಡ್ ಬ್ರೈನ್ ಸ್ಟಿಮ್ಯುಲೇಶನ್
 4. ಕಂಗ್‌ಟ್ರುಲ್, ಜಾಮ್‌ಗಾನ್ (ಲೇಖಕ); ( ಇಂಗ್ಲೀಷ್ ಅನುವಾದಕರು: ಗ್ಯಾರಿಸ್ಕೊ, ಎಲಿಯೊ; ಮ್ಯಾಕ್‌ಲೆಯ್ಡ್, ಇನ್‌ಗ್ರಿಡ್) (೨೦೦೫). ದ ಟೆಶರಿ ಆಫ್ ನಾಲೆಡ್ಜ್ (ಶೆಸ್ ಬ್ಯಾ ಕುನ್ ಲ ಪೈ ಮಜೊಡ್). ಬುಕ್ ಸಿಕ್ಸ್, ಪಾರ್ಟ್ ಫೋರ್: ಸಿಸ್ಟಮ್ಸ್ ಬುದ್ಧಿಸ್ಟ್ ತಂತ್ರ, ದ ಇಂಡಸ್ಟ್ರುಕ್ಟಿಬೆ ವೇ ಆಫ್ ಸೆಕ್ರೆಟ್ ಮಂತ್ರ . ಬೋಲ್ಡರ್, ಕಲೊರಾಡೊ, ಯುಎಸ್‌ಎ: ಸ್ನೊ ಲಿಯಾನ್ ಪಬ್ಲಿಕೇಶನ್ಸ್. ISBN ೧-೫೫೯೩೯-೨೧೦-X (alk.paper) p.೪೯೩
 5. Barba 1991, pp. 136
 6. ಫಾರ್ ಟ್ರಾನ್ಸ್‌ಲೇಶನ್ ಆಫ್ jñanamudrā ಆ‍ಯ್‌ಸ್ "ಗೆಸ್ಚರ್ ಆಫ್ ನಾಲೆಡ್ಜ್" ನೋಡಿ: Stutley 2003, p. 60.
 7. Johnson 2000, p. 48.
 8. ೮.೦ ೮.೧ ೮.೨ ೮.೩ ಮುರೊಮೊಟೊ, ವೇನೆ (೨೦೦೩) ಮುದ್ರ ಇನ್ ದ ಮಾರ್ಟಿಯಲ್ ಆರ್ಟ್ಸ್ in the ಕದನಕಲೆಗಳು . (ಡಿಸೆಂಬರ್, ೨೦, ೨೦೦೭ರಂದು ನೋಡಲಾಗಿದೆ).

ಉಲ್ಲೇಖಗಳುಸಂಪಾದಿಸಿ

 • Barba, Eugenio (1991). A dictionary of theatre anthropology: the secret art of the performer. London, United Kingdom: Routledge. p. 136. ISBN 0415053080. Unknown parameter |co-authors= ignored (help)
 • ಡ್ರಾಗರ್, ಡಾನ್ (೧೯೮೦). "ಎಸೊಟೆರಿಕ್ ಬೌದ್ಧಿಸಮ್ ಇನ್ ಜಪಾನೀಸ್ ವಾರಿಯರ್‌ಶಿಪ್",: ಸಂಖ್ಯೆ. ೩ರಲ್ಲಿ. ಇಂಟರ್ನ್ಯಾಶನಲ್ ಹೊಪೊಲಾಜಿಕಲ್ ಸೊಸೈಟಿ ಡಾನ್ ಎಫ್. ಡ್ರಾಗರ್‌ ಮೊನೊಗ್ರಾಫ್ ಸೀರೀಸ್ ನ 'ಝೆನ್ ಆ‍ಯ್‌೦ಡ್ ದ ಜಪಾನೀಸ್ ವಾರಿಯರ್' . ಡಿಎಫ್‌ಡಿ ಮೊನೊಗ್ರಾಫ್‌ಗಳು ಹವಾಯಿ ವಿಶ್ವವಿದ್ಯಾಲಯದ ಮತ್ತು ಮಲೇಷ್ಯಾದ ವಿಚಾರ ಸಂಕಿರಣದ ಡಾನ್ ಡ್ರಾಗರ್‌ರ ೧೯೭೦ರ ದಶಕದ ಕೊನೆಯಲ್ಲಿ ಮತ್ತು ೧೯೮೦ರ ದಶಕದ ಆರಂಭದಲ್ಲಿನ ಉಪನ್ಯಾಸಗಳ ಪ್ರತಿಲೇಖನ.
 • Johnson, Nathan J. (2000), Barefoot Zen: The Shaolin Roots of Kung Fu and Karate, York Beach, USA: Weiser, ISBN 1578631424
 • Stutley, Margaret (2003), The Illustrated Dictionary of Hindu Iconography (First Indian Edition ed.), New Delhi: Munshiram Manoharlal Publishers Pvt. Ltd., ISBN 81-215-1087-2CS1 maint: extra text (link)೧೯೮೫ರಲ್ಲಿ ಮೂಲತಃ ಪ್ರಕಟಗೊಂಡಿದ್ದು, ರೂಟ್‌ಲೆಡ್ಜ್ & ಕೆಗನ್ ಪೌಲ್ ಪಬ್ಲಿಕೇಶನ್, ಲಂಡನ್.

ಮುಂದಿನ ಓದಿಗಾಗಿಸಂಪಾದಿಸಿ

 • ಸಾಂಡರ್ಸ್, ಅರ್ನೆಸ್ಟ್ ಡಾಲೆ (೧೯೮೫ ). ಮುದ್ರೆ : ಎ ಸ್ಟಡೀ ಅಫ್ ಸಿಂಬಾಲಿಕ್ ಗೆಸ್ಚರ್ಸ್ ಇನ್ ಜಪಾನೀಸ್ ಬುದ್ಧಿಸ್ಟ್ ಸ್ಕಲ್ಪ್ಚರ್ . ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್. ISBN ೯೭೮-೦-೬೯೧-೦೧೮೬೬-೯.
 • ಹರ್ಶಿ, ಗೆಟರ್ಡ್. ಮುದ್ರಾಸ್: ಯೋಗ ಇನ್ ಯುವರ್ ಹ್ಯಾಂಡ್ಸ್.

ಬಾಹ್ಯ ಕೊಂಡಿಗಳುಸಂಪಾದಿಸಿ