ಮಿರಿಡೀ
ಮಿರಿಡೀ ಎಂಬುದು ಹೆಮಿಪ್ಟರ ಗಣದ ಹೆಟರಾಪ್ಟರ ಉಪಗಣಕ್ಕೆ ಸೇರಿದ ಕೀಟ ಕುಟುಂಬ. ಉಪಗಣಕ್ಕೆ ಸೇರಿದ 43 ಕುಟುಂಬಗಳ ಪೈಕಿ ಇದೇ ಅತ್ಯಂತ ದೊಡ್ಡದಾಗಿದ್ದು ಸುಮಾರು 600 ಜಾತಿಗಳ 10,000 ಕ್ಕಿಂತ ಹೆಚ್ಚು ಪ್ರಭೇದಗಳನ್ನು ಒಳಗೊಂಡಿದೆ. ಇದನ್ನು ಕ್ಯಾಪ್ಸಿಡೀ ಎಂದು ಕೂಡ ಹೆಸರಿಸುವುದಿದೆ.[೧] ಇದಕ್ಕೆ ಸೇರಿದ ಕೀಟಗಳನ್ನು ಗಿಡತಿಗಣೆ ಅಥವಾ ಎಲೆ ತಿಗಣೆ ಎಂದು ಕರೆಯುವುದುಂಟು.
ಮಿರಿಡೀ | |
---|---|
ರ್‍ಯಾಬ್ಡೋಮಿರಿಸ್ ಸ್ಟ್ರಯಾಟೆಲಸ್ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಆರ್ಥ್ರೊಪೋಡಾ |
ವರ್ಗ: | ಇನ್ಸೆಕ್ಟಾ |
ಗಣ: | ಹೆಮಿಪ್ಟೆರಾ |
ಉಪಗಣ: | ಹೆಟೆರಾಪ್ಟೆರಾ |
ಮೇಲ್ಕುಟುಂಬ: | ಮಿರಾಯ್ಡೀ |
ಕುಟುಂಬ: | ಮಿರಿಡೀ Hahn, 1831 |
Type species | |
ಸೈಮೆಕ್ಸ್ ಸ್ಟ್ರಯಾಟಸ್ L. | |
ಉಪಕುಟುಂಬಗಳು | |
| |
Synonyms | |
ಕ್ಯಾಪ್ಸಿಡೀ Burmeister, 1835 |
ಪ್ರಮುಖ ಲಕ್ಷಣಗಳು
ಬದಲಾಯಿಸಿಮೃದುಚರ್ಮದ ದೇಹ ಅಸಿಲಸ್ ಇಲ್ಲದಿರುವುದು, ದೇಹಕ್ಕಿಂತ ದೊಡ್ಡಗಾತ್ರದ ಎಲಿಟ್ರ ರೆಕ್ಕೆಗಳು, ನಾಲ್ಕು ಖಂಡಗಳಿಂದ ರಚಿತವಾದ ಸ್ಪರ್ಶಾಂಗಗಳು, ತೆಳುವಾದ ಕಾಲುಗಳು, ನಯವಾದ ಹಾಗೂ ತ್ರಿಕೋನಾಕಾರದ ಸ್ಕುಟೆಲಮ್-ಇವು ಈ ತಿಗಣೆಗಳ ಪ್ರಮುಖ ಲಕ್ಷಣಗಳು.
ಆಹಾರ
ಬದಲಾಯಿಸಿಬಹುತೇಕ ಪ್ರಭೇದಗಳು ಸಸ್ಯಾಹಾರಿಗಳು. ಬೇರೆ ಕೀಟಗಳನ್ನು ತಿಂದುಜೀವಿಸುವ ಕೆಲವು ಬಗೆಗಳೂ ಉಂಟು. ಮತ್ತೆ ಕೆಲವು ಸಸ್ಯ ಪ್ರಾಣಿಗಳೆರಡನ್ನೂ ತಿನ್ನುವಂಥವು.
ಕೆಲವು ಉಪದ್ರವಕಾರಿಗಳು
ಬದಲಾಯಿಸಿಸಾಲ್ಬರ್ಜೆಲ ಸಿಂಗ್ಯುಲೇರಿಸ್ ಎಂಬುದು ಪಶ್ಚಿಮ ಆಫ್ರಿಕದ ಕೋಕೊ ಗಿಡಗಳನ್ನು ತಿಂದು ಹಾಳು ಮಾಡಿದರೆ ಕಿಯಾಂಬುರ ಕಾಫಿಯೇ ಎಂಬುದು ಪೂರ್ವ ಆಫ್ರಿಕದಲ್ಲಿ ಕಾಫಿಗಿಡಗಳಿಗೆ ಉಪದ್ರವವನ್ನುಂಟು ಮಾಡುತ್ತದೆ. ಯೂರೋಪಿನಲ್ಲಿ ಹಣ್ಣಿನ ಗಿಡಗಳ ಮೇಲೆ ಕ್ಯಾಲೋಕೋರಿಸ್ ಫಲ್ವೊಮ್ಯಾಕ್ಯುಲೇಟಸ್ ಎಂಬ ತಿಗಣೆ ವಾಸಿಸುತ್ತದೆ. ಹೆಲೊಪೆಲ್ಟಿಸ್ ಜಾತಿಯವು ಭಾರತ, ಶ್ರೀಲಂಕಾ, ಮಲೇಷ್ಯ, ಆಫ್ರಿಕಗಳಲ್ಲಿ ಕ್ವಿನೀನು ಮರಗಳನ್ನು ಪೀಡಿಸುತ್ತವೆ. ಇವುಗಳ ಪೈಕಿ ಹೆಲೊಪೆಲ್ಟಿಸ್ ತಿವೋರು ಎಂಬುದು ಅಸ್ಸಾಮಿನ ಟೀ ತೋಟಗಳಲ್ಲಿ ಹೇರಳವಾಗಿದೆ. ಟೀ ಸೊಳ್ಳೆ ಎಂದೇ ಇದನ್ನು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಹಾಗನಿ, ಬೇವು, ಟೀ, ಕೋಕೊ, ಸಿಂಕೋನ ಮರಗಳ ಮೇಲೆ ಹೆಲೊಪೆಲ್ಟಿಸ್ ಅಂಟೊನಿಯೈ ಎಂಬ ಹಾನಿಕಾರಕ ತಿಗಣೆ ಕಂಡುಬರುತ್ತದೆ. ಅಂತೆಯೇ ಡಿಸ್‌ಫಿಂಕ್ಟಸ್ ಪಾಲಿಟನ್ ಎಂಬುದು ವೀಳೆಯದೆಲೆ ಬಳ್ಳಿಗಳ ಮೇಲೂ, ಕ್ಯಾಲೊಕೋರಿಸ್ ಆಂಗುಸ್ಟೇಟಸ್ ಜೋಳ ಮತ್ತು ಮುಸುಕಿನ ಜೋಳಗಳ ಮೇಲೂ, ಗ್ಯಾಲೊಬೆಲಿಕಸ್ ಕ್ರಾಸಿಯೊಕೋರಿಸ್ ತಂಬಾಕು ಗಿಡಗಳ ಮೇಲೂ ಜೀವಿಸಿ ಬೆಳೆಯನ್ನು ಹಾಳುಮಾಡುವುವು.
ಪರಭಕ್ಷಿ ಕೀಟಗಳು
ಬದಲಾಯಿಸಿಮಿರಿಡೀ ಕುಟುಂಬದ ಪರಭಕ್ಷಿ ತಿಗಣೆಗಳ ಪೈಕಿ ಯೂರೋಪಿನ ಡೆರಿಯೊಕೋರಿಸ್ ರೂಬರ್ ಎಂಬುದು ಏಫಿಡ್ ಕೀಟಗಳನ್ನು ತಿಂದು ಅವನ್ನು ನಿಯಂತ್ರಿಸುತ್ತದೆ. ಸಿರ್ಟೊರೈನಸ್ ಮುಂಡಲಸ್ ಕಬ್ಬಿನ ಬೆಳೆಗೆ ಬೀಳುವ ಮಿಡತೆಗಳನ್ನು ತಿಂದು ಉಪಕಾರವೆಸಗುತ್ತದೆ. ಅಂತೆಯೇ ಮ್ಯಾಲಗ್ಯಾಸೀ ದ್ವೀಪದಲ್ಲಿ ಕಾಣದೊರೆಯುವ ಲಿಸೊಕ್ಯಾಪ್ಸಸ್ ವಾಸ್‌ಮ್ಯಾನಿಯೈ ಎಂಬುದು ಕ್ರೆಮಟೋಗ್ಯಾಸ್ಟರ್ ಕೀಟಗಳನ್ನು ತಿಂದು ಜೀವಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Henry, T. J. and A. G. Wheeler, Jr., 1988A. Family Miridae Hahn, 1833 (= Capsidae Burmeister, 1835). The plant bugs, pp. 251--507. In: Henry, T. J. and R. C. Froeschner (eds.), Catalog of the Heteroptera, or True Bugs of Canada and the Continental United States. E. J. Brill, Leiden.
ಹೆಚ್ಚಿನ ಓದಿಗೆ
ಬದಲಾಯಿಸಿ- Cassis, G.; Schuh, R. T. (2012). "Systematics, Biodiversity, Biogeography, and Host Associations of the Miridae (Insecta: Hemiptera: Heteroptera: Cimicomorpha)". Annual Review of Entomology. 57: 377–404. doi:10.1146/annurev-ento-121510-133533. PMID 22149267.
- Wheeler, Alfred George Jr. (2001). Biology of the plant bugs (Hemiptera: Miridae), pests, predators, opportunists. Ithaca, New York: Cornell University Press. ISBN 978-0-8014-3827-1. Google books preview
ಹೊರಗಿನ ಕೊಂಡಿಗಳು
ಬದಲಾಯಿಸಿ- PBI Plant Bug Index
- Link to Al Wheeler's book on the biology of mirids
- Research on mirids of Southern California at UC Riverside
- Garden fleahopper on the University of Florida / Institute of Food and Agricultural Sciences Featured Creatures website