ಮಾರ್ಮಸೆಟ್
ಮಾರ್ಮಸೆಟ್ ಪ್ರೈಮೇಟ್ ಗಣದ ಕ್ಯಾಲಿತ್ರೈಸಿಡೀ ಕುಟುಂಬಕ್ಕೆ ಸೇರಿದ, ಚಿಕ್ಕಗಾತ್ರದ ಹಾಗೂ ಉದ್ದಬಾಲ ಇರುವ ಹಲವಾರು ಬಗೆಯ ಕೋತಿಗಳಿಗೆ ಅನ್ವಯವಾಗುವ ಹೆಸರು. ಇವುಗಳ ತವರು ದಕ್ಷಿಣ ಹಾಗೂ ಮಧ್ಯ ಅಮೆರಿಕ.[೩][೪] ಅಳಿಲಿನಂತೆ ಕಾಣುವ ವೃಕ್ಷವಾಸಿ ಪ್ರಾಣಿಗಳಿವು. ಮರಗಳಲ್ಲಿ ಚುರುಕಾದ ವಿಚಿತ್ರ ನುಲಿಚಲನೆಯಿಂದ ಓಡಾಡಿಕೊಂಡಿರುವುವು. ಹಗಲಿನಲ್ಲಿ ಚಟುವಟಿಕೆ ಹೆಚ್ಚು.
ಮಾರ್ಮಸೆಟ್‍ಗಳು[೧][೨] |
---|
ಸಾಮಾನ್ಯ ಮಾರ್ಮಸೆಟ್ (ಕ್ಯಾಲಿತ್ರಿಕ್ಸ್ ಜ್ಯಾಖೂಸ್)
|
Scientific classification |
|
Included groups |
|
Excluded groups |
|
ದೇಹರಚನೆ
ಬದಲಾಯಿಸಿವೃಕ್ಷವಾಸಿಗಳಾದ್ದರಿಂದ ರೆಂಬೆಗಳನ್ನು ಹಿಡಿದು ಹತ್ತಲು ಅನುಕೂಲವಾಗುವಂತೆ ಕೈಕಾಲುಗಳ ಬೆರಳುಗಳಲ್ಲಿ (ಹೆಬ್ಬೆರಳು ವಿನಾ) ಉಗುರಿಗೆ ಬದಲಾಗಿ ಮೊನೆಯುಗುರುಗಳಿವೆ.
ಆಹಾರ
ಬದಲಾಯಿಸಿಇವು ಮುಖ್ಯವಾಗಿ ಕೀಟಭಕ್ಷಿಗಳು. ಹಣ್ಣುಗಳನ್ನೂ ಇನ್ನಿತರ ಪ್ರಾಣಿಗಳನ್ನೂ ತಿನ್ನವುದುಂಟು.
ಬಗೆಗಳು
ಬದಲಾಯಿಸಿಮಾರ್ಮಸೆಟ್ ಕೋತಿಗಳಲ್ಲಿ ಹಲವಾರು ಬಗೆಗಳಿವೆಯೆಂದು ಮೇಲೆ ಸೂಚಿಸಲಾಗಿದೆ. ಮುಖ್ಯವಾದವು ಇಂತಿವೆ:
- ಕ್ಯಾಲಿತ್ರಿಕ್ಸ್ ಜಾತಿಯ ಪೆನಿಸಿಲೇಟ, ಕ್ರೈಸೊಲ್ಯೂಕ, ಅರ್ಜೆಂಟೇಟ, ಜ್ಯಾಕಸ್ ಪ್ರಭೇಧಗಳು. ಇವು ಬ್ರಜಿಲ್ ಹಾಗೂ ಬೊಲೀವಿಯಗಳ ಕಾಡುಗಳಲ್ಲಿ ಕಾಣದೊರೆಯುವುವು. 15-25 ಸೆಂಮೀ ಉದ್ದದ ಪ್ರಾಣಿಗಳಿವು; 25-40 ಸೆಂಮೀ ಉದ್ದದ ಬಾಲ ಉಂಟು. ಮೈಬಣ್ಣ ಬಿಳಿಯಿಂದ ಕಗ್ಗೆಂಪಿನವರೆಗೆ ವ್ಯತ್ಯಸ್ತ. ಕೆಲವಲ್ಲಿ ಬಾಲದ ಮೇಲೆ ಅಡ್ಡಪಟ್ಟೆಗಳಿರುವುದುಂಟು. ತುಪ್ಪುಳು ರೇಷ್ಮೆಯಂತೆ ಬಲುಮೃದು. ಕಿವಿಗಳ ತುದಿಯಲ್ಲಿ ರೋಮಗುಚ್ಛಗಳಿವೆ.
- ಸೆಬುಯೆಲ ಪಿಗ್ಮಿಯ (ಪಿಗ್ಮಿ ಮಾರ್ಮಸೆಟ್): ಪೆರು ಹಾಗೂ ಎಕ್ವಡಾರುಗಳಲ್ಲಿ ಸಿಕ್ಕುತ್ತದೆ. ಬಲುಚಿಕ್ಕಗಾತ್ರದ್ದು, ಉದ್ದ ಕೇವಲ 14 ಸೆಂಮೀ. ವಯಸ್ಕ ಪ್ರಾಣಿ 90 ಗ್ರಾಮಿಗೂ ಹೆಚ್ಚು ಭಾರವಿರದು. ದೇಹದ ಬಣ್ಣ ಕಗ್ಗಂದು ಇಲ್ಲವೆ ಬೂದು.
ಮಾರ್ಮಸೆಟ್ಟುಗಳನ್ನು ಸಾಕುವುದು ಸುಲಭ.
ಉಲ್ಲೇಖಗಳು
ಬದಲಾಯಿಸಿ- ↑ Groves, C. P. (2005). Wilson, D. E.; Reeder, D. M (eds.). Mammal Species of the World (3rd ed.). Baltimore: Johns Hopkins University Press. pp. 129–133. OCLC 62265494. ISBN 0-801-88221-4.
{{cite book}}
: Invalid|ref=harv
(help) - ↑ Garber, Paul A.; Estrada, Alejandro; Bicca-Marques, Júlio César; Heymann, Eckhard W.; Strier, Karen B., eds. (2008). "The Diversity of the New World Primates (Platyrrhini): An Annotated Taxonomy". South American Primates: Comparative Perspectives in the Study of Behavior, Ecology, and Conservation: Developments in Primatology: Progress and Prospects. Springer. pp. 23–54. ISBN 978-0-387-78704-6.
- ↑ Primate Info Net, Callithrix Factsheet, University of Wisconsin, Madison.
- ↑ "The Primates: New World Monkeys". Archived from the original on 2005-12-11. Retrieved 2005-12-06.
ಹೊರಗಿನ ಕೊಂಡಿಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: