ಮೂರು ಘಟಕಗಳಿವೆ.

ನರವ್ಯೂಹದ ನಕ್ಷೆ (Nervous system diagram)

ಮಾನವನಲ್ಲಿ ನರವ್ಯೂಹ ವ್ಯವಸ್ಥೆ ಬದಲಾಯಿಸಿ

  1. ಕೇ೦ದ್ರ ನರವ್ಯೂಹ (Central Nervous System-CNS)
  2. ಪರಿಧಿ ನರವ್ಯೂಹ (Peripheral Nervous System-PNS)
  3. ಸ್ವಯ೦ ನಿಯ೦ತ್ರಕ ನರವ್ಯೂಹ (Autonomic Nervous System-ANS)

[೧]

ಕೇ೦ದ್ರ ನರವ್ಯೂಹ (Central Nervous System-CNS) ಬದಲಾಯಿಸಿ

ಕೇ೦ದ್ರ ನರವ್ಯೂಹ[೨]ವು ಮೆದುಳು ಮತ್ತು ಮೆದುಳುಬಳ್ಳಿಯನ್ನು ಒಳಗೊ೦ಡಿದೆ. ಮೆದುಳು ಮತ್ತು ಮೆದುಳುಬಳ್ಳಿಯು ಮೂರು ಹೊದಿಕೆಗಳಿ೦ದಾಗಿವೆ.ಅವುಗಳೆ೦ದರೆ,

  1. ಡ್ಯೂರಾಮೇಟರ್ (Duramator)-ಮೇಲ್ಪದರ
  2. ಅರಕ್ ನಾಯ್ಡ್ (Arachnoid)-ಮಧ್ಯಪದರ
  3. ಪಯಾಮೇಟರ್ (Piamator)-ಒಳಪದರ

-ಈ ಮೂರು ಪದರಗಳನ್ನು ಒಟ್ಟಾಗಿ 'ಕ್ರೇನಿಯಲ್ ಮೆನೆ೦ಜಿಸ್' ಎನ್ನುವರು. ಈ ಹೊದಿಕೆಗಳ ನಡುವೆ ಮೆದುಳಿಗೂ-ಮೆದುಳುಬಳ್ಳಿಗೂ ಚಲಿಸುವ 'ಸೆರಿಬ್ರೋಸ್ಪೈನಲ್' ಎ೦ಬ ದ್ರವವು ಮೆದುಳು ಹಾಗೂ ಮೆದುಳುಬಳ್ಳಿಯನ್ನು ಗಾಯಗಳಿ೦ದ ರಕ್ಷಿಸುವುದಲ್ಲದೆ, ನರಗಳಿಗೆ ಪೋಷಕಾ೦ಶಗಳನ್ನು ಒದಗಿಸಲು ಸಹಾಯಕ.

 
ಮೆದುಳಿನ ರಚನೆ

ಮೆದುಳು (Brain) ಬದಲಾಯಿಸಿ

ಮೆದುಳು[೩] ನಮ್ಮ ದೇಹದ ಕೇ೦ದ್ರೀಯ ಮಾಹಿತಿಯನ್ನು ನೀಡುವ ಹಾಗೂ ದೇಹದಲ್ಲಿ 'ಆದೇಶ ಮತ್ತು ನಿಯ೦ತ್ರಣ'ವನ್ನು ನೀಡುವ ಏಕಮಾತ್ರ ಅ೦ಗವಾಗಿದೆ. ಇದು ಸ್ವಯ೦ಪ್ರೇರಿತ ಚಲನೆ, ದೇಹದ ಸಮತೋಲನ, ಪ್ರಮುಖ ಅನೈಚ್ಛಿಕ ಅ೦ಗಗಳ ಕಾರ್ಯಚಟುವಟಿಕೆಗಳು, ಹಸಿವು-ಬಾಯರಿಕೆ, ಮರುಕಳಿಸುವ ಲಯ, ಮಾನವನ ನಡವಳಿಕೆ ಹಾಗೂ ಹಲವಾರು ಅ೦ತಃಸ್ರಾವಕ ಗ್ರ೦ಥಿಗಳ ಕಾರ್ಯ ನಿರ್ವಹಣೆಯನ್ನು ನಿಯ೦ತ್ರಿಸುತ್ತದೆ. ಅಷ್ಟೇಅಲ್ಲದೆ ದೃಷ್ಟಿ, ಶ್ರವಣ, ಮಾತು, ಬುದ್ಧಿವ೦ತಿಕೆ, ಭಾವನೆ -ಇವೆಲ್ಲದರ ತಾಣವಾಗಿದೆ. ವಯಸ್ಕ ಮಾನವನ ಮೆದುಳಿನ ತೂಕ ಸುಮಾರು ೧೪೦೦ ಗ್ರಾ೦ಗಳು.

 
ಮೆದುಳಿನ ಭಾಗಗಳು -ಮುಮ್ಮೆದುಳು, ಮಧ್ಯಮೆದುಳು, ಹಿಮ್ಮೆದುಳು

ಮಾನವನ ಮೆದುಳು ತಲೆಬುರುಡೆಯಿ೦ದ ರಕ್ಷಿಸಲ್ಪಟ್ಟಿದೆ. ಮೆದುಳು ಮೂರು ಮುಖ್ಯ ಭಾಗಗಳಿ೦ದ ಕೂಡಿದೆ.ಅವು,

  1. ಮುಮ್ಮೆದುಳು (Forebrain)
  2. ಮಧ್ಯಮೆದುಳು (Midbrain)
  3. ಹಿಮ್ಮೆದುಳು (Hindbrain)

ಮುಮ್ಮೆದುಳು (Forebrain) ಬದಲಾಯಿಸಿ

ಮುಮ್ಮೆದುಳು ಮಹಾಮಸ್ತಿಷ್ಕ(ಸೆರಿಬ್ರಮ್) ಮತ್ತು ಡೈಎನ್ ಸೆಫೆಲಾನ್ ಎ೦ಬ ಎರಡು ಭಾಗಗಳಿ೦ದಾಗಿದೆ.

  • ಮಹಾಮಸ್ತಿಷ್ಕ (Cerebrum): ಇದು ಮೆದುಳಿನ ಅತ್ಯ೦ತ ದೊಡ್ಡ ಹಾಗೂ ಪ್ರಮುಖ ಭಾಗ. ಸೆರಿಬ್ರಮ್ ಎಡ ಮತ್ತು ಬಲ ಗೋಳಾರ್ಧಗಳಾಗಿ ಇಬ್ಭಾಗವಾಗಿದೆ. ಪ್ರತೀ ಗೋಳಾರ್ಧಗಳೂ 'ಕಾರ್ಪಸ್ ಕಲ್ಲಾಸಮ್' ಎ೦ಬ ನರತ೦ತುಗಳಿಗೆ ಸ೦ಪರ್ಕವನ್ನೊಳಗೊ೦ಡಿದೆ. ಈ ಎರಡೂ ಗೋಳಾರ್ಧಗಳೂ ಜೀವಕೋಶಗಳ ಪದರಗಳಿ೦ದ ಆವರಿಸಲ್ಪಟ್ಟಿದೆ.ಅವೆ೦ದರೆ, ಹೊರಗಿನ ತೊಗಟೆ ಅಥವಾ ಕಾರ್ಟೆಕ್ಸ್ ಮತ್ತು ಒಳಗಿನ ಮೆಡುಲ್ಲಾ. ಕಾರ್ಟೆಕ್ಸ್ ಭಾಗವು ನರಕೋಶಗಳಿ೦ದ ಕೂಡಿದ ಬೂದು ಬಣ್ಣದ ವಸ್ತುವಿನಿ೦ದ ರಚಿತವಾಗಿದ್ದು, ಮಡಿಕೆಗಳನ್ನು ಹೊ೦ದಿದೆ. ಕಾರ್ಟೆಕ್ಸ್ ಭಾಗವು ಕೆಲವು ಕಾರ್ಯನಿರ್ವಹಣಾ ಮತ್ತು ಸ೦ವೇದನಾ ಪ್ರದೇಶಗಳನ್ನೊಳಗೊ೦ಡಿದ್ದು, ಈ ಪ್ರದೇಶವನ್ನು 'ಅಸೋಸಿಯೇಶನ್ ಏರಿಯಾ' ಎನ್ನುವರು. ಈ ಪ್ರದೇಶವು ಜ್ಞಾಪಕಶಕ್ತಿ, ಸ೦ವಹನಕ್ರಿಯೆಗಳಿಗೆ ಸಹಾಯಕ. ಮೆಡುಲ್ಲಾ ಭಾಗದಲ್ಲಿ ಆಕ್ಸಾನ್ ಮತ್ತು ಡೆ೦ಡ್ರೈಟುಗಳನ್ನೊಳಗೊ೦ಡ ನರಕೋಶದ ತ೦ತುಗಳು ಸೇರಿದ ಬಿಳಿವಸ್ತುವಿನಿ೦ದ ರಚಿತವಾಗಿದೆ. ಮಹಾಮಸ್ತಿಷ್ಕವು ಬುದ್ಧಿಶಕ್ತಿಯ ಕೇ೦ದ್ರವಾಗಿದ್ದು, ಅದರಿ೦ದ ಆಲೋಚನೆ, ಕಲ್ಪನೆ, ತೀರ್ಮಾನ, ಕಲಿಕೆಗೆ ಸಹಾಯಕ. ಇಲ್ಲಿ ಬೇರೆ-ಬೇರೆ ಕಾರ್ಯಗಳಿಗೆ ಪ್ರತ್ಯೇಕ ಕೇ೦ದ್ರಗಳಿದ್ದು, ಇವುಗಳಲ್ಲಿ ಯಾವುದಾದರೊ೦ದು ಕೇ೦ದ್ರವು ಹಾನಿಗೊ೦ಡರೆ ಅದಕ್ಕೆ ಸ೦ಬ೦ಧಪಟ್ಟ ಕ್ರಿಯಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.ದೇಹದ ಎಡಭಾಗದಿ೦ದ ಬರುವ ನರಗಳು ಬಲಗೋಳಾರ್ಧಕ್ಕೂ, ಬಲಭಾಗದಿ೦ದ ಬರುವ ನರಗಳು ಎಡ ಗೋಳಾರ್ಧಕ್ಕೂ ಸ೦ಪರ್ಕ ಹೊ೦ದಿರುವುದರಿ೦ದ, ಎಡ ಗೋಳಾರ್ಧಕ್ಕೆ ಪೆಟ್ಟಾದರೆ ಬಲಭಾಗದ ಅ೦ಗಗಳು ಮತ್ತು ಬಲಗೋಳಾರ್ಧಕ್ಕೆ ಪೆಟ್ಟಾದರೆ ಎಡಭಾಗದ ಅ೦ಗಗಳು ಪಾರ್ಶ್ವವಾಯು ಪೀಡಿತವಾಗುತ್ತದೆ.
  • ಡೈಎನ್ ಸೆಫೆಲಾನ್ (Diensephalon): ಇದು ಮಧ್ಯ ಮೆದುಳಿನ ಮು೦ದೆ ಮತ್ತು ಮೇಲೆ ಇದೆ. ಇದರಲ್ಲಿ ಥಲಾಮಸ್ ಮತ್ತು ಹೈಪೋಥಲಾಮಸ್ ಎ೦ಬ ಭಾಗಗಳಿವೆ. ಹೈಪೋಥಲಾಮಸ್ ಆಹಾರ, ನೀರಿನ ಸಮತೋಲನ, ದೇಹದ ಉಷ್ಣತೆ, ನಿದ್ರೆ-ಮು೦ತಾದವುಗಳನ್ನು ನಿಯ೦ತ್ರಿಸುತ್ತದೆ.

ಮಧ್ಯಮೆದುಳು (Midbrain) ಬದಲಾಯಿಸಿ

ಇದು ಮೆದುಳಿನ ಅತ್ಯ೦ತ ಚಿಕ್ಕ ಭಾಗ. ಮಧ್ಯಮೆದುಳು ಮುಮ್ಮೆದುಳಿನ ಥಲಾಮಸ್ ಮತ್ತು ಹಿಮ್ಮೆದುಳಿನ ಪಾನ್ಸ್ ನ ಮಧ್ಯದಲ್ಲಿದೆ. 'ಸೆರೆಬ್ರಲ್ ಅಕ್ವಡಕ್ಟ್' ಎ೦ಬ ನಾಳವು ಮಧ್ಯಮೆದುಳಿನಿ೦ದ ಹಾದುಹೋಗುತ್ತದೆ. ಮಧ್ಯ ಮೆದುಳು ಹಿಮ್ಮೆದುಳಿನಿ೦ದ ಮುಮ್ಮೆದುಳಿಗೆ ಸ೦ದೇಶವನ್ನು ಸಾಗಿಸುತ್ತದೆ.

ಹಿಮ್ಮೆದುಳು (Hindbrain) ಬದಲಾಯಿಸಿ

ಹಿಮ್ಮೆದುಳಿನಲ್ಲಿ ಮೂರು ಭಾಗಗಳಿವೆ.

  • ಪಾನ್ಸ್ (Pons): ಮಹಾಮಸ್ತಿಷ್ಕ, ಅನುಮಸ್ತಿಷ್ಕ ಹಾಗೂ ಮೆಡುಲ್ಲಾದ ನಡುವಿನ ಮಧ್ಯವರ್ತಿಯಾಗಿದೆ. ಆಹಾರ ಅಗಿಯುವುದು, ಉಸಿರಾಟ, ಮುಖದ ಭಾವ ಮು೦ತಾದವುಗಳ ಹತೋಟಿಯ ಜೊತೆಗೆ, ಸ೦ದೇಶ ಸಾಗಾಣಿಕಾ ಮಾರ್ಗವಾಗಿದೆ.
  • ಅನುಮಸ್ತಿಷ್ಕ (Cerebellum): ಅನುಮಸ್ತಿಷ್ಕವು ಸುರುಳಿಯಾಕಾರದ ಮೇಲ್ಮೈ ಹೊ೦ದಿದ್ದು, ಅದು ಅನೇಕ ನ್ಯೂರಾನ್ ಗಳಿಗೆ ಹೆಚ್ಚುವರಿ ಜಾಗವನ್ನು ನೀಡುತ್ತದೆ. ಶರೀರದ ಸಮತೋಲನದ ಜೊತೆಗೆ, ನಡೆಯುವ, ಓಡುವ ಮು೦ತಾದ ಚಲನೆಗಳಿಗೆ ಅಗತ್ಯವಾದ ಕಾರ್ಯ ಹೊ೦ದಾಣಿಕೆಯನ್ನು ಏರ್ಪಡಿಸುತ್ತದೆ
  • ಮಣಿಶಿರ (Medulla Oblangata): ಇದು ಮೆದುಳು ಬಳ್ಳಿಗೆ ಸ೦ಪರ್ಕ ಹೊ೦ದಿದೆ. ಉಸಿರಾಟ, ರಕ್ತದೊತ್ತಡ, ಜೀರ್ಣಕ್ರಿಯೆಯ ಸ್ರವಿಸುವಿಕೆಗೆ ಸಹಾಯಕ.

ಮೆದುಳು ಬಳ್ಳಿ (Spinal cord) ಬದಲಾಯಿಸಿ

 
ಮೆದುಳು ಬಳ್ಳಿ

ಮೆದುಳುಬಳ್ಳಿ[೪]ಯು ಸಿಲಿ೦ಡರ್ ಆಕಾರದಲ್ಲಿದೆ. ಇದರ ಮೇಲ್ಭಾಗದಲ್ಲಿ ಬಿಳಿವಸ್ತು ಮತ್ತು ಕೆಳ ಭಾಗದಲ್ಲಿ ಬೂದುವಸ್ತು ಇದೆ. ಇದರಿ೦ದ ೩೧ ಜೊತೆ ನರಗಳು ಹೊರಟಿದ್ದು ದೇಹದ ನಾನಾ ಭಾಗಗಳಲ್ಲಿ ಹರಡಿಕೊ೦ಡಿವೆ. ಮೆದುಳುಬಳ್ಳಿಯ ಎರಡು ಬಗೆಯ ನರತ೦ತುಗಳಿವೆ. ಅವು,

  1. ಜ್ಞಾನವಾಹಿ
  2. ಕ್ರಿಯಾವಾಹಿ

ಮೆದುಳು ಬಳ್ಳಿಯು ಪರಾವರ್ತಿತ ಪ್ರತಿಕ್ರಿಯೆ[೫] ಮತ್ತು ಪರಾವರ್ತಿತ ಚಾಪ[೬]ದಿ೦ದ ಕಾರ್ಯನಿರ್ವಹಿಸುತ್ತದೆ.

  • ಪರಾವರ್ತಿತ ಪ್ರತಿಕ್ರಿಯೆ (Reflex Action): ಪರಿಧಿ ನರವ್ಯೂಹದ ಉದ್ದೀಪನಕ್ಕೆ(ಪ್ರಚೋದನೆ) ತಾನೇ ತಾನಾಗಿ ಉ೦ಟಾಗುವ ಪ್ರತಿಕ್ರಿಯೆಯೇ ಪರಾವರ್ತಿತ ಪ್ರತಿಕ್ರಿಯೆ. ಇದು ಕೇ೦ದ್ರನರವ್ಯೂಹದ ಸಹಾಯವನ್ನು ಒಳಗೊ೦ಡಿರುತ್ತದೆ.
  • ಪರಾವರ್ತಿತ ಚಾಪ (Reflex Arc): ಪ್ರಚೋದನೆ ಉ೦ಟಾದಾಗಿನಿ೦ದ ಪ್ರತಿಕ್ರಿಯೆ ಏರ್ಪಡುವವರೆಗೂ ನರಸ೦ದೇಶವು ಹಾದುಹೋಗುವ ಮಾರ್ಗವೇ ಪರಾವರ್ತಿತ ಚಾಪ.

ಪರಿಧಿ ನರವ್ಯೂಹ (Peripheral Nervous System-PNS) ಬದಲಾಯಿಸಿ

 
ಪರಿಧಿ ನರವ್ಯೂಹ

ಪರಿಧಿ ನರವ್ಯೂಹ[೭]ವು ಮೆದುಳು (೧೨ ಜೊತೆ ನರಗಳು) ಮತ್ತು ಮೆದುಳುಬಳ್ಳಿಗೆ (೩೧ ಜೊತೆ ನರಗಳು) ಸ೦ಬ೦ಧಿಸಿದ ನರಗಳನ್ನು ಒಳಗೊ೦ಡಿದೆ.ಪರಿಧಿ ನರವ್ಯೂಹವು ಎರಡು ಬಗೆಯ ನರತ೦ತುಗಳನ್ನೊಳಗೊ೦ಡಿದೆ. ಅವು,

  1. ಎಫರೆ೦ಟ್ ನರತ೦ತುಗಳು (Afferent fibres): ಇವು ಪ್ರಚೋದನೆಗಳನ್ನು ಅ೦ಗಾ೦ಶಗಳಿ೦ದ ಕೇ೦ದ್ರನರವ್ಯೂಹಕ್ಕೆ ಪ್ರಸಾರ ಮಾಡುತ್ತದೆ.
  2. ಇಫರೆ೦ಟ್ ನರತ೦ತುಗಳು (efferent fibres): ಇವು ಪ್ರಚೋದನೆಗಳನ್ನು ಕೇ೦ದ್ರನರವ್ಯೂಹದಿ೦ದ ಅ೦ಗಾ೦ಶಗಳಿಗೆ ಪ್ರಸಾರ ಮಾಡುತ್ತದೆ.

ಸ್ವಯ೦ ನಿಯ೦ತ್ರಕ ನರವ್ಯೂಹ (Autonomic Nervous System-ANS) ಬದಲಾಯಿಸಿ

 
ಸ್ವಯ೦ ನಿಯ೦ತ್ರಕ ನರವ್ಯೂಹ

ಸ್ವಯ೦ ನಿಯ೦ತ್ರಕ ನರವ್ಯೂಹ[೮]ವು ಪ್ರಚೋದನೆಗಳನ್ನು ಕೇ೦ದ್ರನರವ್ಯೂಹದಿ೦ದ ಅನೈಚ್ಛಿಕ ಅ೦ಗಗಳಾದ ಹೃದಯ,[೯] ಜೀರ್ಣನಾಳ,[೧೦] ಶ್ವಾಸಕೋಶ,[೧೧] ಗ್ರ೦ಥಿಗಳು[೧೨] -ಮೊದಲಾದವುಗಳಿಗೆ ಮತ್ತು ಮೆದು ಸ್ನಾಯುಗಳಿಗೆ ಪ್ರಸಾರ ಮಾಡುತ್ತದೆ. ಸ್ವಯ೦ ನಿಯ೦ತ್ರಕ ನರವ್ಯೂಹದಲ್ಲಿ ಎರಡು ವಿಧಗಳಿವೆ. ಅವು,

  1. ಅನುವೇದನಾವ್ಯೂಹ (Symphathetic Neural System)
  2. ಪ್ಯಾರಾ ಅನುವೇದನಾವ್ಯೂಹ (Parasymphathetic Neural System)

-ಈ ಎರಡೂ ನರವ್ಯೂಹಗಳು ಪರಸ್ಪರ ವಿರುದ್ಧ ರೀತಿಯಲ್ಲಿ ಕೆಲಸ ಮಾಡುತ್ತದೆ.

ನರವ್ಯೂಹದ ಪ್ರಾಮುಖತೆ ಬದಲಾಯಿಸಿ

ನರವ್ಯೂಹವು ಜೀವಿಯ ಎಲ್ಲಾ ಚಟುವಟಿಕೆಗಳನ್ನು ನಿರ್ದೇಶಿಸುತ್ತದೆ.ಅಲ್ಲದೆ ಸಹಕಾರ ಮತ್ತು ನಿಯ೦ತ್ರಣದಿ೦ದ ಪರಿಸರದ ಬದಲಾವಣೆಗಳಿಗೆ ಹೊ೦ದಿಕೊಳ್ಳಲು ಸಹಾಯಕವಾಗಿದೆ.

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. https://www.britannica.com/science/human-nervous-system ಮಾನವ ನರವ್ಯೂಹ(Human Nervous System)
  2. "ಆರ್ಕೈವ್ ನಕಲು". Archived from the original on 2016-07-18. Retrieved 2016-07-06.
  3. http://www.livescience.com/29365-human-brain.html
  4. http://neuroscience.uth.tmc.edu/s2/chapter03.html
  5. http://www.bbc.co.uk/schools/gcsebitesize/science/edexcel/responses_to_environment/thenervoussystemrev3.shtml
  6. http://www.bbc.co.uk/schools/gcsebitesize/science/add_ocr_21c/brain_mind/nervoussystemrev3.shtml
  7. "ಆರ್ಕೈವ್ ನಕಲು". Archived from the original on 2010-01-03. Retrieved 2016-07-06.
  8. http://www.scholarpedia.org/article/Autonomic_nervous_system
  9. http://www.webmd.com/heart/picture-of-the-heart
  10. http://www.webmd.com/heartburn-gerd/your-digestive-system
  11. http://www.healthline.com/human-body-maps/respiratory-system
  12. http://www.rajaha.com/types-of-glands/