ಮಾನವನಲ್ಲಿ ವಿಸರ್ಜನಾಂಗ ವ್ಯೂಹ
ಮಾನವನ ವಿಸರ್ಜನಾಂಗವ್ಯೂಹವು ಒಂದು ಜೊತೆ ಮೂತ್ರ ಜನಕಾಂಗಗಳನ್ನು ಒಳಗುಂಡಿರುತ್ತದೆ.ಮೂತ್ರ ಜನಕಾಂಗದಿಂದ ಹೊರಟ ಎರಡು ಮೂತ್ರನಾಳಗಳು ಮುತ್ರವನ್ನು ಶೇಖರಿಸುವ ಚೀಲದಂತಹ ಮೂತ್ರಕೋಶಕ್ಕೆ ತೆರೆಯುತ್ತವೆ.ಮೂತ್ರಕೋಶವು ಯುರಿತ್ರಾ ಎಂಬ ದ್ವಾರದ ಮೂಲಕ ದೇಹದ ಹೊರಭಾಗದೊಡನೆ ಸಂಪರ್ಕವನ್ನು ಹೊಂದಿರುತ್ತದೆ.ಮೂತ್ರಜನಕಾಂಗಗಳು ಕಡುಕಂದು ಬಣ್ಣದ ಹುರುಳಿ ಬೀಜದ ಆಕಾರದ ಅಂಗಗಳು.ಇವು ಒದರಾವಕಾಶದ ಹಿಂಬದಿಯಲ್ಲಿ ಬನ್ನು ಮುಳೆಯ ಅಕ್ಕ ಪಕ್ಕದಲ್ಲಿರುತ್ತದೆ.ಪ್ರತಿಯೊಂದು ಮೂತ್ರಜನಕಾಂಗದಲ್ಲಿ ಹೈಲಮ್ ಎಂಬ ತಗ್ಗಾದ ಭಾಗವಿದ್ದು ಅದರ ಮುಲಕ ರೀನಲ್ ಅಪಧಮನಿಯ ಮೂತ್ರಜನಕಾಂಗವನ್ನು ಪ್ರವೇಶಿಸಿ ಕವಲುಗಳಾಗಿ ರಕ್ತವನ್ನು ಒದಗಿಸುತ್ತದೆ.ಇದೇ ಭಾಗದಿಂದ ರೀನಲ್ ಅಭಿಧಮನಿಯು ಹೊರಬರುತ್ತದೆ.ಈ ಬಾಗದಿಂದ ಮೂತ್ರನಾಳವು ಹೊರಬಂದು ಮೂತ್ರಕೋಶವನ್ನು ಸೇರುತ್ತದೆ.ಪ್ರತಿ ಮೂತ್ರಜನಕಾಂಗವು ಸಂಯೋಜಕ ಅಂಗಾಂಶಗಳಿಂದ ಆದ ರೀನಲ್ ಕ್ಯಾಪ್ಸೂಲ್ ಎಂಬ ಹೊದಿಕೆಯಿಂದ ಆವರಿಸಲ್ಪಟ್ಟಿದೆ.
ಮೂತ್ರಜನಕಾಂಗ ವ್ಯವಸ್ಥೆ | |
---|---|
[[File:|px|]] | |
Human kidneys viewed from behind with spine removed | |
ಲ್ಯಾಟಿನ್ | Ren |
System | Urinary system and endocrine system |
Artery | Renal artery |
Vein | Renal vein |
Nerve | Renal plexus |
MeSH | Kidney |
Dorlands/Elsevier | Kidney |
ಮೂತ್ರದ ರಚನೆ
ಬದಲಾಯಿಸಿಮೂತ್ರದ ರಚನೆ ಈ ಕೆಳಗಿನ ಮೂರು ಹಂತಗಳಲ್ಲಿ ನಡೆಯುತ್ತದೆ.
- ಗ್ಲಾಮರುಲಸ್ ನ ಸೋಸುವಿಕೆ
- ವ್ಯತ್ತ್ಯಸ್ಥ ಮರುಹೀರಿಕೆ
- ನಳಿಕಾ ಸ್ರವಿಕೆ
ರಕ್ತವು ನೆಫ್ರಾನ್ಗಳಿಗೆ ಹಚ್ಚು ಒತ್ತಡದಿಂದ ಪ್ರವೇಶಿಸುವುದರಿಂದ ಗ್ಲಾಮರುಲಸ್ ನಲ್ಲಿ ರಕ್ತವು ಸೋಸಲ್ಪಡುತ್ತದೆ.ಇದನ್ನು ಗ್ಲಾಮರುಲಸ್ ಸೋಸುವಿಕೆ ಅಥವಾ ಸೂಕ್ಷ್ಮ ಸೋಸುವಿಕೆ ಎನ್ನುತ್ತಾರೆ.
ರಕ್ತಕಣಗಳು ಮತ್ತು ದೊಡ್ಡದಾಗಿರುವ ಪ್ರೋಟೀನ್ ಅಣುಗಳನ್ನು ಉಳಿದು ಎತರೆ ವಸ್ತುಗಳು ಬೌಮನ್ನನ ಕೋಶವನ್ನು ಪ್ರವೇಶಿಸುತ್ತದೆ.ಈ ಸೋಸಲ್ಪಟ್ಟ ದ್ರವದಲ್ಲಿ ಗ್ಲೂಕೋಸ್.ಆಮೈನೋ ಆಮ್ಲಗಳು,ಸೋಡಿಯಂ,ಪೋಟಾಸಿಯಂ.ಬೈ ಕಾರ್ಬೊನೆಟ್ ಗಳು,ಯೂರಿಯಾ ಮತ್ತು ನೀರು ಇರುತ್ತದೆ.ಈ ದ್ರವವು ನುಲಿಕೆ ನಾಳದ ಮೂಲಕ ಹೆನ್ಲೆಯ ಕುಣಿಕೆಗೆ ಬರುತ್ತದೆ.
ಶೋಧಿತದ್ರವದಲ್ಲಿರುವ ಉಪಯುಕ್ತ ವಸ್ತುಗಳಾದ ನೀರು,ಗ್ಲೂಕೋಸ್,ಅಮೈನೋ ಆಮ್ಲ,ಗ್ಲಿಸರಾಲ್,ಸೋಡಿಯಮ,ಪೋಟಾಸಿಯಂ,ಕ್ಯಾಲ್ಸಿಯಂ,ವಿಟಮಿನ್ಗಳುಮತ್ತು ಹಾರ್ಮೋನುಗಳು ಸುತ್ತಲಿನ ಲೋಮನಾಳಗಳಿಂದ ಹೀರಲ್ಪಡುತ್ತದೆ.ಈ ಕ್ರಿಯೆಗೆ ವ್ಯತ್ಯಸ್ಥ ಮರುಹೀರಿಕೆ ಎಂದು ಹೆಸರು.ಈ ಮರುಹೀರಿಕೆ ವಿಸರಣೆ,ಅಭಿಸರಣೆ ಮತ್ತು ಸಕ್ರಿಯ ಸಾಗಾಣಿಕೆ ಕ್ರಿಯೆಗಳ ಮೂಲಕ ನಡೆಯುತ್ತದೆ.ಈ ದ್ರವವು ನುಲಿಕೆನಾಳದ ಕೊನೆಯ ಹಂತವನನು ತಲುಪಿದಾಗ ನಾಳದ ಭಿತ್ತಿಯಲ್ಲಿರುವ ಕೋಶಗಳು ಸುತ್ತಲೂ ಇರುವ ಲೋಮನಾಲಗಳ ರಕ್ತದಿಂದ ಹೀರಿದ ಅನುಪಯುಕ್ತ ವಸ್ತಗಳಾದ ಅಮೋನಿಯಾ,ಹೈಡ್ರೋಜನ್,ಅಯಾನ್ ಗಳು ಮತ್ತು ಯೂರಿಕಾಮ್ಲಗಳನ್ನು ಸ್ರವಿಸುತ್ತದೆ.ಇದನ್ನು ನಳಿಕಾ ಸ್ರವಿಕೆ ಎನ್ನುವರು.
ಈ ಹಂತದ ನಂತರ ನಾಳದಲ್ಲಿರುವ ದ್ರವವನ್ನು ಮೂತ್ರ ವೆಂದು ಕರೆಯಬಹುದು.ಮೂತ್ರವು ಒಣ ಹುಲ್ಲಿನ ಬಣ್ಣವನ್ನು ಹೊಂದಿರುತ್ತದೆ.ಮೂತ್ರದಲ್ಲಿ ನೀರು,ಯೂರಿಯಾ,ಸೋಡಿಯಂ,ಪೊಟಾಸಿಯಂ ಕ್ಲೋರೈಡ್ ಗಳು,ಯೂರಿಕಾಮ್ಲ,ಅತಿ ಕಡಿಮೆ ಪ್ರಮಾಣದ ಅಮೋನಿಯಾ ಮತ್ತು ನೀರಿನಲ್ಲಿ ಕರಗುವ ಪೋಟೀನ್ ಗಳು ಇರುತ್ತದೆ.