ನಿರ್ನಾಳ ಗ್ರಂಥಿಗಳ ರೋಗಗಳು

ನಿರ್ನಾಳ ಗ್ರಂಥಿಗಳ ರೋಗಗಳು

ಬದಲಾಯಿಸಿ

ಪ್ರತಿಯೊಂದು ನಿರ್ನಾಳ ಗ್ರಂಥಿಗಳ ಅಸ್ತವ್ಯಸ್ಥತೆಯಲ್ಲಿ ಎರೆಡು ಬದಲಾವಣೆಗಳು ಹಾರ್ಮೋನು ಉತ್ಪತಿ ಕ್ರಿಯೆಯಲ್ಲಿ ಕೆಲವು ಬದಲಾವಣೆಗಳಿಗಾಗಿ ಕೆಲವು ಗುರುತುಗಳು ತೋರುತ್ತವೆ

ರಚನೆ ಮತ್ತು ಗಾತ್ರದಲ್ಲಿ ಬದಲಾವಣೆ

ಕಾಯಿಲೆಗಳ ಪರಿಣಾಮವಾಗಿ ಈ ಗ್ರಂಥಿ ರ‍ಚನೆ ಬದಲಾಗುತ್ತದೆ ಇಲ್ಲವೆ ಗಾತ್ರ ಸಣ್ಣದಾಗುತ್ತದೆ ಅಥವಾ ಸಹಜವಾದುದಕಿಂತಲು ದಪ್ಪವಾಗುತ್ತದೆ ಚರ್ಮದ ತಳದಲ್ಲೇ ನೆಲೆಗೊಂಡ ಗ್ರಂಥಿಗಳಾದ ಥೈರಾಯಿಡ್ ಮತ್ತು ಟೆಸ್ಟಿಸ್(ವೃಷಣ) ಗಳ ಗಾತ್ರದಲ್ಲುಂಟಾಗುವ ಬದಲಾವಣೆಗಳನ್ನು ಪರೀಕ್ಷಿಸಿ ಸುಲುಭವಾಗಿ ಈ ರೋಗಗಳನ್ನು ಗುರುತಿಸಬಹುದು. ಥೈರಾಯಿಡ್ ಊತವನ್ನು ಜನ ಸಾಮಾನ್ಯರು ಗುರುತಿಸಬಹುದು ಕಂಠದ ಮುಂದೆ ಇರುವ ಊತವನ್ನು ಯಾರಲ್ಲಾದರೂ ನೀವು ನೋಡಿರಬಹುದು. ಇದು ಅಹಾರವನ್ನು ನುಂಗಿದಾಗ ಮೇಲಕ್ಕೆ ಸರಿದಾಡುತ್ತದೆ ಥೈರಾಯಿಡ್ ಗ್ರಂಥಿಯ ಇಂಥ: ಪರಿಚಿತ ಗಡ್ಡೆಯನ್ನು 'ಗಾಯಿಟರ್' ಎನ್ನಲಾಗುತ್ತದೆ ಪಿಟುಟರಿ ಗ್ರಥಿಯ ಪ್ರಕರಣದಲ್ಲಿ ಇದು ದಪ್ಪವಾಗಿ ಎರೆಡು ಕಡೆಯ ಜಾಕ್ಷಸ ನರಗಳು ಒಂದನ್ನೋಂದು ದಾಟುವ ಸ್ಥಳದಲ್ಲಿ ಒತ್ತಡ ಉಂಟಾಗುತ್ತದೆ ಇದರ ಪಲಿತಾಂಶ ದೃಷ್ಟಿ ದೋಷ ದಪ್ಪವಾಗಿರುವ ಪಿಟುಟರಿ ಗ್ರಂಥಿ ಮೆದುಳಿನ ಗಡ್ಡೆಯಂತೆ ತಲೆ ಬುರುಡೆಯೊಳಗೆ ಒತ್ತಡವನ್ನು ಹೆಚ್ಚಿಸಿ ತಲೆ ನೋವು ಮತ್ತು ವಾಂತಿಗಳನ್ನು ಉಂಟುಮಾಡುತ್ತದೆ ಹೀಗೆ ಇದು ಆಳವಾದ ಜಾಗದಲ್ಲಿ ಕುಳಿತಿದ್ದರೂ ಇದರ ಗಾತ್ರ ದಪ್ಪವಾಗಿರುವುದನ್ನು ಗುರುತಿಸಲು ಶಖ್ಯವಿದೆ. ಅಡ್ರಿನಲ್ ಗ್ರಂಥಿಗಳಂತಹ ಇತರ ಗ್ರಂಥಿಳಲ್ಲಿ ಇಂತಹ ಬದಲಾವಣೆಗಳನ್ನು ವಿಶಿಷ್ಟವಾದ ಎಕ್ಸ್ -ರೇ ಪರೀಕ್ಷೆಗಳು ಹಾಗೂ ಕೆಲವು ವಿಶಿಷ್ಟ ತಂತ್ರಗಾರಿಕೆಯಿಂದ ಕಂಡು ಹಿಡಿಯಬಹುದು

ಗ್ರಥಿಯ ಕ್ರಿಯೆಯಲ್ಲಿ ಬದಲಾವಣೆ ಕಾಯಿಲೆ ಇರುವ ಗ್ರಂಥಿಗಳು ಸೃವಿಸಿದ ಹಾರ್ಮೋನುಗಳು ಹಲವು ರೀತಿಯಲ್ಲಿ ಬದಲಾಗುತ್ತವೆ ಮೊದಲನೆಯದು ಅದರ ಪ್ರಮಾಣಕ್ಕೆ ಸಂಬದಿಸಿದುದು ಇದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು ಮೊದಲಿನ ಪ್ರಸಂಗ' ಅತಿರೇಕದ ಚಟುವಟಿಕೆ 'ಎರೆಡನೆ ಪ್ರಸಂಗದಲ್ಲೂ ಅತಿ ಕಡಿಮೆ ಚಟುವಟಿಕೆ ಉಂಟಾಗುತ್ತದೆ ಹೀಗೆ ಪಿಟುಟರಿ ಕಾಯಿಲೆಯಲ್ಲಿ 'ಹೈಪರ್ ಪಿಟುಟರಿ (ಅತಿರೇಕದ ಚಟುವಟಿಕೆ )ಅಥವಾ 'ಹೈಪೋ ಪಿಟುಟರಿ'(ಪಿಟುಟರಿ ಕಡಿಮೆ ಚಟುವಟಿಕೆ)ಗಳು ಉಂಟಾಗುತ್ತವೆ ಇದರಿಂದ ವ್ಯಕ್ತಿ ಅಸಮಾನ್ಯ ಎತ್ತರ ಬೆಳೆದು ದೈತ್ಯಕಾರ ತಾಳುತ್ತಾನೆ ಅಥವಾ ದೈತ್ಯನಾಗಿ ಕುಬ್ಜನಾಗುತ್ತಾನೆ ರೋಗ ಗ್ರಸ್ತ ಗ್ರಂಥಿಯಿಂದ ಹಾರ್ಮೋನಿನ ಗುಣದಲ್ಲಿ ಬದಲಾವಣೆಯಾಗುವುದೂ ಇದೆ ಅಂದರೆ ಸಹಜವಾಗಿ ಗ್ರಹಿಸುವ ಹಾರ್ಮೋನಿಗಿಂತ ಭಿನ್ನವಾದ ಹಾರ್ಮೋನನ್ನು ಸೃವಿಸುತ್ತದೆ. ಚಿಹ್ನೆಗಳು ಹಾಗು ರೋಗ-ಲಕ್ಷಣಗಳು

ಶರೀರದ ಇತರ ಅವಯವಗಳಂತೆ ನಿರ್ನಾಳ ಗ್ರಂಥಿಗಳು ವಿವಿಧ ಬಗೆಯ ರೋಗಗಳಿಗೆ ಪೀಠವಾಗಬಹುದು ಇವುಗಳು ಬೆಳವಣಿಗೆಯಲ್ಲಿ ದೋಷ, ಏಟು, ಉರಿಯೂತ ,ಸೋಂಕು ,ಸವಕಳಿ ಮತ್ತು ಗಡ್ಡೆಗಳಾಗಿರಬಹುದು ಈ ಕಾಯಿಲೆಗಳ ಪರಿಣಾಮವಾಗಿ ಸಹಜ ಕ್ರಿಯೆಯಾದ ಹಾರ್ಮೋನ್ ನ ಉತ್ಪತ್ತಿ ಅಸ್ತವ್ಯಸ್ತಗೊಳಿಸುವುದು ಸ್ವಾಭಾವಿಕ . ಶರೀರದಲ್ಲಿ ನಾನಾ ಬಗೆಯ ಬದಲಾವಣೆಗಳು ಪ್ರಕಟವಾಗುತ್ತದೆ ನಿರ್ನಾಳ ಗ್ರಂಥಿಗಳ ರೋಗ ಹಾಗೂ ಅವುಗಳ ಲಕ್ಷಣಗಳನ್ನು ಎಂಡೋಕ್ರೈನೋಪತಿ ಎನ್ನಲಾಗುತ್ತದೆ........... ಉದಾ:- ಕಾಯಿಲೆಗೊಳಗಾದ ಅಂಡಾಶಯ ಸಹಜವಾಗಿ ಸೃವಿಸುತ್ತಿದ್ದ ಸ್ತ್ರೀ ಹಾರ್ಮೊನಿಗೆ ಬದಲಾಗಿ ಪುರುಷ ಹಾರ್ಮೋನನ್ನು ಸೃವಿಸಲಾರಂಬಿಸುತ್ತದೆ ಇದು ಪುರುಷ ಲಕ್ಷಣಗಳಾದ ಗಡ್ದ ಮತ್ತು ಮೀಸೆಗಳು ಸ್ತ್ರೀಯರಲ್ಲಿ ಬೆಳೆಯುವಂತೆ ಮಾಡುತ್ತದೆ ಈ ಒಂದು ಪ್ರತಿ ಕ್ರಿಯೆಯನ್ನು ವಿರಿಲೇಜೇಶನ್ (Virlization ) ಅಥವಾ ಮಾಸ್ಕಲೈಜೇಶನ್ ಎನ್ನಲಾಗುತ್ತದೆ ಇದನ್ನು ವಿವಿಧ ಬಗೆಯ ಅಂಡಾಶಯದ ಗಡ್ಡೆಗಳಲ್ಲಿ ಕಾಣಬಹುದು ಅಂತೆಯೇ ಪುರುಷರಲ್ಲಿ ಅಸ್ವಭಾವಿಕ ರೀತಿಯಲ್ಲಿ ವೃಷಣಗಳು ವರ್ತಿಸಿದಾಗ ಸ್ತ್ರೀ ಲಕ್ಷಣಗಳಾದ ಸ್ವರಗಳ ಬೆಳವಣಿಗೆ ಉಂಟಾಗುತ್ತದೆ ಇದನ್ನು ಫೇಮಿನೈಜೇಶನ್ (Feminisation ) ಎನ್ನಲಾಗುತ್ತದೆ ಸಂಪೂರ್ಣ ದಹಿಕ ಪರೀಕ್ಷೆಗಳು ಜೊತೆಗೆ ವಾಡಿಕೆಯಾದ ರಕ್ತ ಮತ್ತು ಮೂತ್ರ ಪರೀಕ್ಷೆಗಳು ಎಕ್ಸ್-ರೇ ಪರೀಕ್ಷೆಗಳು ಇಸಿಜಿಗಳು ಹಾರ್ಮೋನು ಸೃವಿಕೆಯ ಗುಣಮಟ್ಟ ಮತ್ತು ಪ್ರಮಾಣದಲ್ಲಿನ ಬದಲಾವಣೆಗಳನ್ನು ತೋರಿಸುತ್ತವೆ ಸೃವಿಕೆ ಅಧಿಕವಾಗಿದೆ ಕಡಿಮೆಯಾಗಿ ಅದರ ಗುಣಮಟ್ಟ ಬದಲಾಗಿದೆ ಎಂದು ಸಾಬೀತು ಪಡಿಸಲು ಹರ್ಮೋನನ್ನು ಅಳೆಯಬೇಕು ಅಥವಾ ಅದರ ವಿಭಜನೆಗೊಂಡ ವಸ್ತುಗಳನ್ನು ರಕ್ತದಲ್ಲಿ ಶರೀರದ ದ್ರವಗಳಲ್ಲಿ ಮೂತ್ರದಲ್ಲಿ ಅಳೆಯುವುದು ಅಗತ್ಯ ಈ ವಿಧಾನಕ್ಕೆ ಹಾರ್ಮೋನು ಅಸೆಸ್ ಎನ್ನುತ್ತಾರೆ ಇವುಗಳಲ್ಲಿ ರಸಾಯನಿಕ ಜೈವಿಕ ಪ್ರಾಣಿಗಳ ಮೇಲಣ ಅಧಾಯನ ಎಂಬ ಎರೆಡು ವಿಧಗಳಿವೆ ಯಾವ ಅಂಶಗಳು ನಿರ್ನಾಳ ಗ್ರಥಿಗಳ ರೋಗ ಉಂಟುಮಾಡುತ್ತವೆ ಎಂದು ತಿಳಿದ ನಂತರ ನಿರ್ನಾಳ ಗ್ರಥಿಗಳ ವ್ಯೂಹದ ಹಲವಾರು ಕಾಯಿಲೆ ಗಳನ್ನು ಅರ್ಥಮಾಡಿಕೊಳ್ಳಬಹುದು ಈ ಮುಂದೆ ಕೊಡಲಾದ ಕೋಷ್ಟಕದ ಅವಲೋಕನವು ಪ್ರತೀ ಅಂತ:ಸ್ರಾವಿ ಗ್ರಥಿಗಳ ಬಗ್ಗೆ ತಿಳಿಸುತ್ತದೆ ಅವುಗಳ ಮಿತಿಮೀರಿದ ಕೆಲಸದ ಕೊರತೆ. ಅಸಹಜ ಕೆಲಸಗಳಿಂದುಂಟಾಗುವ ಕಾಯಿಲೆಗಳು ಮತ್ತು ರೋಗಗಳ ಮುಖ್ಯ ಗುರುತುಗಳನ್ನು ತಿಳಿಸುತ್ತದೆ. ಥೈರಾಯಿಡ್ ಕುರಿತಂತೆ ಅಸ್ವಭಾವಿಕವಾದ ಊತ ಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಕಾಣಿಸಿಕೊಳ್ಳಬಹುದು ಇಂತಹ ಪ್ರಕರಣಗಳನ್ನು ಸರಳ ಗಾಯಿಟರ್ ಎನ್ನುವರು ಅದ್ಯಾಗು ಎಚ್ಚರಿಕೆಯಿಂದ ಒಂದು ಮಾತು ಇಲ್ಲಿ ಅಗತ್ಯ . ಇಂತಹ ಗುಣಲಕ್ಷಣಗಳು ಇದ್ದಕೂಡಲೇ ಯಾರು ಕಾಯಿಲೆ ಇದೆ ಎಂದು ಒಮ್ಮೇಲೆ ನಿರ್ಧಾರ ಮಾಡಿಬಿಡಬಾರದು ಇದಕ್ಕೆ ಒಂದು ಉತ್ತಮ ಉದಾಹರಣೆ ಕುಬ್ಜರಾಗುವುದು ಕುಬ್ಜರಾಗಿ ಇರುವುದಕ್ಕೆ ನಿರ್ನಾಳ ಗ್ರಥಿಗಳ ರೋಗಗಳಲ್ಲದೆ ಅನುವಂಶಿಯ ಅಥವಾ ಕೌಟಂಭಿಕ ಅಥವಾ ಅಪೌಷ್ಟಿಕತೆ ಶ್ವಾಸಕೋಶದ ಹೃದಯದ ಮತ್ತು ಯಕೃತ್ತಿನ ನಿದಾನಗತಿಯ ಕಾಯಿಲೆಗಳಿರಬಹುದು .ಕುಲಂಕುಶವಾದ ರೋಗ ವಿವರ ಮತ್ತು ದೇಹ ಪರೀಕ್ಷೆಗಳಿಂದ ವೈದ್ಯರು ಸ್ಪಷ್ಟ ಕಾರಣಗಳನ್ನು ಖಚಿತಪಡಿಸಬಹುದು ಹಾಗೂ ತೃಪ್ತಿಕರವಾದ ಚಿಕಿತ್ಸೆ ಮಾಡಬಹುದು. ಥೈರಾಯಿಡ್ ಗ್ರಂಥಿಯ ಸಮಸ್ಸೆ

ಥೈರಾಯಿಡ್ ಗ್ರಂಥಿಯ ಪ್ರಧಾನ ಸಮಸ್ಸೆ

ಥೈರಾಯಿಡ್ ಗ್ರಂಥಿಯ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಅದು ಅನೇಕ ಆರೋಗ್ಯ ಸಮಸ್ಸೆಗಳಿಗೆ ಕಾರಣವಾಗುತ್ತದೆ ಎಲ್ಲಾ ಸಮಸ್ಸೆಗಳನ್ನು ಒಟ್ಟಾಗಿ ಸೇರಿಸಿ ಅದನ್ನು ಥೈರಾಯಿಡ್ ಗಲಿಬಿಲಿ ಅಥವಾ ಕ್ರಮ ತಪ್ಪುವುದು ಎಂದು ಕರೆಯಬಹುದು. ಥೈರಾಯಿಡ್ ನ ಗಲಿಬಿಲಿ

   A ಆರೋಗ್ಯದ ಸಮಸ್ಸೆಗಳು ಎಲ್ಲವೂ ಥೈರಾಯಿಡ್ ದೊಡ್ಡದಾಗಲು ಕಾರಣವಾಗಬಹುದು (Goiter)ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು.
   ೧) ಥೈರಾಯಿಡ್ ಗ್ರಂಥಿಯ ಅತಿಯಾದ ಕ್ರಿಯೆ ಹೈಪೋಥೈರಾಯಿಡಿಸಮ್
   ೨) ಥೈರಾಯಿಡ್ ಗ್ರಂಥಿಯ ಅತ್ಯಂತ ಕಡಿಮೆ ಕ್ರಿಯೆ ಹೈಪೋಥೈರಾಯಿಡಿಸಮ್
   ೩) ಥೈರಾಯಿಡ್ ಗ್ರಂಥಿಯ ಗಂಟುಗಳು Nodule: ಥೈರಾಯಿಡ್ ನಾಡಬಲ್ (ಕ್ಯಾನ್ಸರ್ ರಹಿತದ ಗಂಟು)
   ೪) ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ (Thyroid Cancer ) ಈ ಎಲ್ಲಾ ಸಮಸ್ಸೆಗಳು ಗಳಗಂಡಕ್ಕೆ (Goiter ) ಅಂದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದಕ್ಕೆ ಕಾರಣವಾಗಬಹುದು.