ಮಸ್ತ್ ಮಜಾ ಮಾಡಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮಸ್ತ್ ಮಜಾ ಮಾಡಿ ೨೦೦೮ ರ ಕನ್ನಡ ಹಾಸ್ಯ ಚಲನಚಿತ್ರವಾಗಿದ್ದು, ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್, ನಾಗ ಕಿರಣ್, ಕೋಮಲ್ ಮತ್ತು ಜೆನ್ನಿಫರ್ ಕೊತ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್. ಅನಂತ್ ರಾಜು ನಿರ್ದೇಶಿಸಿದ್ದಾರೆ. ಚಿತ್ರವು ಹಿನ್ನೆಲೆ ಸಂಗೀತವನ್ನು ಪಿಬಿ ಬಾಲಾಜಿ ಸಂಯೋಜಿಸಿದ್ದಾರೆ ಮತ್ತು ಕೆ. ರಾಮ್ ನಾರಾಯಣ್ ಅವರ ಸಾಹಿತ್ಯವನ್ನು ಒಳಗೊಂಡಿದೆ.ಇದು ೨೦೦೭ ರ ಹಿಂದಿ ಹಾಸ್ಯ ಚಲನಚಿತ್ರ ಧಮಾಲ್ ನ ರಿಮೇಕ್ ಆಗಿದ್ದು, ಆರಂಭಿಕ ದೃಶ್ಯಗಳನ್ನು ೨೦೦೬ ರ ಹಾಸ್ಯ ಚಲನಚಿತ್ರ ಗೋಲ್ಮಾಲ್: ಫನ್ ಅನ್ಲಿಮಿಟೆಡ್ ನಿಂದ ತೆಗೆದುಕೊಳ್ಳಲಾಗಿದೆ. [] []

ಮಸ್ತ್ ಮಜಾ ಮಾಡಿ
ಚಿತ್ರ:Mast Maja Maadi.png
Directed byಆರ್. ಅನಂತ್ ರಾಜು
Produced byಸೌಂದರ್ಯ ಜಗದೀಶ್
Starring
Cinematographyಎಂ. ಆರ್. ಸೀನು
Edited byತಿರುಪತಿ ರೆಡ್ಡಿ
Music byಪಿ. ಬಿ. ಬಾಲಾಜಿ
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 12 ಡಿಸೆಂಬರ್ 2008 (2008-12-12)[]
Running time
೧೬೦ ನಿಮಿಷಗಳು
Countryಭಾರತ
Languageಕನ್ನಡ

ಕಥಾವಸ್ತು

ಬದಲಾಯಿಸಿ

ಮಸ್ತ್ ಮಜಾ ಮಾಡಿ ಊಟಿಯ ಸಸ್ಯೋದ್ಯಾನದ ಜಾಗದಲ್ಲಿ ನಿಧಿಯನ್ನು ಹುಡುಕುವ ನಾಲ್ವರು ನಿರುದ್ಯೋಗಿ ಯುವಕರ ಕಥೆಯಾಗಿದೆ. ಇವರಲ್ಲದೆ ಒಬ್ಬ ಪೊಲೀಸ್ ಅಧಿಕಾರಿಯೂ ನಿಧಿಯ ಮೇಲೆ ಕಣ್ಣಿಟ್ಟಿದ್ದಾನೆ. ನಿಧಿಯನ್ನು ತಮ್ಮದಾಗಿಸಿಕೊಳ್ಳಲು ಯುವಕರ ಪ್ರಯತ್ನಗಳು ಮತ್ತು ಅವರ ಕಾರ್ಯಾಚರಣೆಯಲ್ಲಿ ಅವರು ಎದುರಿಸುವ ಅಡಚಣೆಗಳು ಕಥೆಯ ತಿರುಳನ್ನು ರೂಪಿಸುತ್ತವೆ []

ತಾರಾಗಣ

ಬದಲಾಯಿಸಿ

ಅತಿಥಿ ಪಾತ್ರಗಳು

ಬದಲಾಯಿಸಿ

"ಶಕಲಕ ಭೂಮ್" ಹಾಡಿನಲ್ಲಿ ಕೆಳಗಿನ ನಟ-ನಟಿಯರು ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಧ್ವನಿಮುದ್ರಿಕೆ

ಬದಲಾಯಿಸಿ

ಪಿಬಿ ಬಾಲಾಜಿ ಸಂಗೀತ ಸಂಯೋಜಿಸಿದ್ದು, "ಅಕ್ಷಯ ಆಡಿಯೋ" ಬಿಡುಗಡೆ ಮಾಡಿದೆ.

ಟ್ರ್ಯಾಕ್ ಪಟ್ಟಿ
ಸಂ. ಶೀರ್ಷಿಕೆ ಸಾಹಿತ್ಯ ಗಾಯಕ(ರು) ಅವಧಿ
1. "ಚೋರಿ ಚೋರಿ" ರಾಮ್ ನಾರಾಯಣ್ ಕಾರ್ತಿಕ್, ಚಿನ್ಮಯಿ 5:10
2. "ಝಣ ಝಣ ಕಾಂಚನ" ರಾಮ್ ನಾರಾಯಣ್ ಬೆನ್ನಿ ದಯಾಳ್, ಕ್ರಿಶ್, ಪಿಬಿ ಬಾಲಾಜಿ, ಸುವಿ 6:10
3. "ಓಟ ಓಟ" ರಾಮ್ ನಾರಾಯಣ್ ಟಿಪ್ಪು , ಗೋಪಾಲ್ ಶರ್ಮಾ, ಪಿಬಿ ಬಾಲಾಜಿ, ಜಾನಕಿ ಅಯ್ಯರ್ 4:53
4. "ಓಟ ಓಟ (ಹೆಣ್ಣು)" ರಾಮ್ ನಾರಾಯಣ್ ಸುವಿ 5:08
5. "ಶಕಲಕ ಭೂಮ್" ರಾಮ್ ನಾರಾಯಣ್ ಬೆನ್ನಿ ದಯಾಳ್, ಜಾನಕಿ ಅಯ್ಯರ್ 6:05
ಒಟ್ಟು ಅವಧಿ: 27:26

ಬಿಡುಗಡೆ ಮತ್ತು ಪ್ರತಿಕ್ರಿಯೆ

ಬದಲಾಯಿಸಿ

ಮಸ್ತ್ ಮಜಾ ಮಾಡಿ ೧೨ ಡಿಸೆಂಬರ್ ೨೦೦೮ ರಂದು ಭಾರತದಲ್ಲಿ ಬಿಡುಗಡೆಯಾಯಿತು.

"ನಿಮ್ಮ ಥಿಂಕಿಂಗ್ ಕ್ಯಾಪ್ ಪಕ್ಕಕ್ಕಿಟ್ಟು ಸುಮ್ಮನೆ ಎಂಜಾಯ್ ಮಾಡಿ" ಎಂದು ಬೆಂಗಳೂರು ಮಿರರ್ ಅಭಿಪ್ರಾಯಪಟ್ಟಿದೆ. [] ರೆಡಿಫ್ ಡಾಟ್ ಕಾಮ್ ನ ಆರ್.ಜಿ.ವಿಜಯಸಾರಥಿಯವರು "ಮಸ್ತ್ ಮಜಾ ಮಾಡಿ ,ನಿಮಗೆ ಕಾಮಿಡಿ ಇಷ್ಟವಿದ್ದರೆ ಟೈಂಪಾಸ್ ಚಿತ್ರ" ಎಂದು ಬರೆದಿದ್ದಾರೆ. []

ಉಲ್ಲೇಖಗಳು

ಬದಲಾಯಿಸಿ
  1. "Mast Maja Maadi Kannada Movie - Preview, Trailers, Gallery, Review, Events, Synopsis". Nowrunning.com. 2008-12-12. Retrieved 2013-12-12.[permanent dead link]
  2. "Guest entry". Bangalore Mirror. 21 October 2008.
  3. "Mast Maja Maadi Cast & Crew". entertainment.oneindia.in. Archived from the original on 2013-12-14. Retrieved 2013-12-12.
  4. "Mast Maja Maadi - Vijay Raghavendra, Diganth Hit Movie". 21 January 2010.
  5. "Mast Maja Maadi: This is fun". Bangalore Mirror. 12 December 2008.
  6. Vijayasarathy, R. G. (15 December 2008). "Mast Maja Maadi is timepass". Rediff.

ಬಾಹ್ಯ ಕೊಂಡಿಗಳು

ಬದಲಾಯಿಸಿ