ರಾಗಿಣಿ ದ್ವಿವೇದಿ (ಜನನ ೨೪ ಮೇ ೧೯೯೦)[] ಇವರು ಭಾರತೀಯ ಚಲನಚಿತ್ರ ನಟಿ.ಇವರು ಮುಖ್ಯವಾಗಿ ಕನ್ನಡ , ತೆಲುಗು, ತಮಿಳು, ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. "ವೀರ ಮದಕರಿ" ಚಿತ್ರದ ಮೂಲಕ ಇವರು ಚಿತ್ರರಂಗ ಪ್ರೆವೇಶಿಸಿದರು.ಇವರು ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಆರಂಭಿಕ ಜೀವನ

ಬದಲಾಯಿಸಿ

ರಾಗಿಣಿಯವರು ಮೇ ೨೪, ೧೯೯೦ ರಂದು ಬೆಂಗಳೂರಿನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. [] ಅವರ ತಂದೆ ರಾಕೇಶ್ ಕುಮಾರ್ ದ್ವಿವೇದಿ ಹಾಗೂ ತಾಯಿ ರೋಹಿಣಿ. ರಾಗಿಣಿ ಅವರನ್ನು ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ೨೦೦೮ ರಲ್ಲಿ ಮಾಡಲಿಂಗ್ ಗೆ ಪರಿಚಯಿಸಿದರು. ೨೦೦೮ ರಲ್ಲಿ ಹೈದರಾಬಾದ್ ನಲ್ಲಿ ನಡೆದ 'ಫೆಮಿನಾ ಮಿಸ್ ಇಂಡಿಯಾ' ದಲ್ಲಿ ಪಾಲ್ಗೊಂಡಿದ್ದರು ಹಾಗೂ ಇದರಲ್ಲಿ ಇವರು ಪ್ರಥಮ ರನ್ನರ್-ಅಪ್ ಆದರು.[] ಈ ಮೂಲಕ ೨೦೦೯ ರಲ್ಲಿ ಮುಂಬೈನಲ್ಲಿ ನಡೆದ 'ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಇಂಡಿಯಾ' ದಲ್ಲಿ ನೇರವಾಗಿ ಪ್ರವೇಶವನ್ನು ಪಡೆದರು. ಅಲ್ಲಿ ಅವರು "ರಿಚ್ಫೀಲ್ ಮಿಸ್ ಬ್ಯೂಟಿಫುಲ್ ಹೇರ್" ಬಿರುದು ಪಡೆದರು. []

ವೃತ್ತಿ

ಬದಲಾಯಿಸಿ

ರಾಗಿಣಿ ರವರು ಮೊದಲು "ವೀರ ಮದಕರಿ" ಚಿತ್ರ ಮಾಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅದೇ ವರ್ಷದಲ್ಲಿ "ಗೋಕುಲ" ಚಿತ್ರದಲ್ಲಿ ಕಾಣಿಸಿಕೊಂಡರು.ನಂತರ ಇವರು ೫ ಚಿತ್ರದಲ್ಲಿ ನಟಿಸಿದರು ಹಾಗೂ ಮಲೆಯಾಳಂ ಚಿತ್ರವಾದ ಕಂಧಹಾರ್ ಚಿತ್ರದಲ್ಲಿ ಮೊದಲು ನಟಿಸಿದರು. ೨೦೧೧ ರಲ್ಲಿ ಸುದೀಪ್ ಜೊತೆ "ಕೆಂಪೇಗೌಡ" ಚಿತ್ರದಲ್ಲಿ ನಟಿಸಿದರು.[][] ಅದೇ ವರ್ಷದಲ್ಲಿ "ಕಳ್ಳ ಮಳ್ಳ ಸುಳ್ಳ" ಚಿತ್ರದಲ್ಲಿ 'ತುಪ್ಪ ಬೇಕಾ ತುಪ್ಪ..' ಎಂಬ ಹಾಡಿಗೆ ನೃತ್ಯವನ್ನು ಮಾಡಿ ಪ್ರಸಿದ್ಧಿ ಪಡೆದರು.[] ಹಾಗೂ ಪ್ರಮುಖ ನಟರಾದ ಉಪೇಂದ್ರ ರವರ ಜೊತೆ "ಆರಕ್ಷಕ" ಚಿತ್ರ ಹಾಗೂ ಶಿವರಾಜ್ ಕುಮಾರ್ ಜೊತೆ "ಶಿವ" ಚಿತ್ರದಲ್ಲಿ ನಟಿಸಿ "ಆತ್ಯುತ್ತಮ ನಟಿ" ಎಂಬ ಪ್ರಶಸ್ತಿ ಯನ್ನು ಪಡೆದರು.[]

ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ಭಾಷೆ
೨೦೦೯ ವೀರ ಮದಕರಿ ನೀರಜಾ ಗೋಸ್ವಾಮಿ ಕನ್ನಡ
೨೦೦೯ ಗೋಕುಲ - ಕನ್ನಡ
೨೦೦೯ ಗಂಡೆದೆ ನಂದಿನಿ ಕನ್ನಡ
೨೦೧೦ ಹೋಳಿ ರತಿ ಕನ್ನಡ
೨೦೧೦ ನಾಯಕ ಮಧು ಕನ್ನಡ
೨೦೧೧ ಕೆಂಪೇಗೌಡ ಕಾವ್ಯ ಕನ್ನಡ
೨೦೧೧ ಕಳ್ಳ ಮಳ್ಳ ಸುಳ್ಳ ಖುಶ್ಬೂ ಕನ್ನಡ
೨೦೧೧ ಕಾಂಚನ ಬೇಬಿ ಕನ್ನಡ
೨೦೧೨ ಆರಕ್ಷಕ ಮಾಯಾ ಕನ್ನಡ
೨೦೧೨ ಶಿವ ಜೂಲಿ ಕನ್ನಡ
೨೦೧೩ ಬಂಗಾರಿ ಪದ್ದು ಕನ್ನಡ
೨೦೧೪ ರಾಗಿಣಿ ಐಪಿಎಸ್ ರಾಗಿಣಿ ಕನ್ನಡ
೨೦೧೪ ನಮಸ್ತೇ ಮೇಡಮ್ ರಾಧಿಕ ಕನ್ನಡ
೨೦೧೫ ಶಿವಂ ಮಂದಿರ ಕನ್ನಡ
೨೦೧೭ ವೀರ ರಣಚಂಡಿ ರಾಗಿಣಿ ಕನ್ನಡ
೨೦೧೮ ಕಿಚ್ಚು ಪದ್ಮಿನಿ ಕನ್ನಡ
೨೦೧೮ ದಿ ಟೆರರಿಸ್ಟ್ ರೇಷ್ಮಾ ಕನ್ನಡ

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ