ಮನೋವೈದ್ಯಶಾಸ್ತ್ರ (ಸೈಕಿಯಾಟ್ರಿ)

ಮನೋವೈದ್ಯಶಾಸ್ತ್ರ ವು ಒಂದು ವೈದ್ಯಕೀಯ ತಜ್ಞತೆ ಯಾಗಿದ್ದು, ಮಾನಸಿಕ ಅಸ್ವಸ್ಥತೆಯ ಅಧ್ಯಯನ ಮತ್ತು ಚಿಕಿತ್ಸೆಗೆ ಸಂಬಂಧಿಸಿದೆ. ಇದು ವಿವಿಧ ರೀತಿಯ ಭಾವಾತ್ಮಕ , ವರ್ತನೆ, ಜ್ಞಾನಗ್ರಹಣ ಮತ್ತು ಇಂದ್ರಿಯಾತ್ಮಕ ಅಸ್ವಸ್ಥತೆಗಳನ್ನೂ ಒಳಗೊಂಡಿರುತ್ತದೆ. ಈ ಪದವನ್ನು 1808ರಲ್ಲಿ ಮೊದಲು ಬಳಸಿದ್ದು ಜರ್ಮನ್‌ ವೈದ್ಯ ಜೊಹಾನ್ ಕ್ರಿಸ್ಟಿಯನ್ ರೀಲ್ . ಇದರ ಅಕ್ಷರಶಃ ಅರ್ಥವೆಂದರೆ 'ಮನಸ್ಸಿನ ವೈದ್ಯಕೀಯ ಚಿಕಿತ್ಸೆ' (ಸೈಕ್- : ಮನಸ್ಸು; -ಯಾಟ್ರಿ : ವೈದ್ಯಕೀಯ ಚಿಕಿತ್ಸೆ; ಗ್ರೀಕ್‌ನಿಂದ ಇಯಾಟ್ರಿಕೊಸ್‌  : ವೈದ್ಯಕೀಯ, ಇಯಸ್ಥಾಯಿ : ಗುಣಪಡಿಸಲು). ಮನೋವೈದ್ಯಕೀಯ ಶಾಸ್ತ್ರದಲ್ಲಿ ತಜ್ಞತೆ ಪಡೆದ ವೈದ್ಯರಿಗೆ ಮನೋವೈದ್ಯರು ಎನ್ನಲಾಗುತ್ತದೆ.

ಸೈಕ್ ಎಂಬ ಪದವು ಪುರಾತನ ಗ್ರೀಕ್‌ನ ಆತ್ಮ ಅಥವಾ ಚಿಟ್ಟೆ/ಪತಂಗ ಎಂಬ ಪದದಿಂದ ವ್ಯುತ್ಪನ್ನಗೊಂಡಿದೆ. .<ಉಲ್ಲೇಖ> ಚಿಟ್ಟೆ/ಪತಂಗದ ವ್ಯುತ್ಪತ್ತಿಶಾಸ್ತ್ರ </ಉಲ್ಲೇಖ> ಈ ಚಿತ್ತಾಕರ್ಷಕ ಕೀಟದ ಚಿತ್ರವು ಬ್ರಿಟನ್ನಿನ ರಾಯಲ್ ಕಾಲೇಜ್‌ನ ಮನೋವೈದ್ಯರ ಕೋಟಿನ ತೋಳುಗಳ ಮೇಲೆ ಇರುತ್ತದೆ. <ಉಲ್ಲೇಖ>[1]</ಉಲ್ಲೇಖ>

ಪ್ರಸ್ತುತ ಮಾನಸಿಕ ಅಸ್ವಸ್ಥತೆಗಳನ್ನು ಮಿದುಳಿನ ನರವ್ಯೂಹದಲ್ಲಿ ಆಗಿರುವ ಕೆಲವು ನ್ಯೂನತೆಗಳು ಎಂದು ಕಲ್ಪಿಸಲಾಗಿದೆ. ಇದು ವಂಶವಾಹಿಗಳು ಮತ್ತು ಅನುಭವಗಳು ಪರಸ್ಪರ ಪ್ರಭಾವಿಸುವ ಒಂದು ಸಂಕೀರ್ಣ ಕ್ರಿಯೆಯಿಂದ ರೂಪುಗೊಂಡ ಬೆಳವಣಿಗೆಯ ಪ್ರಕ್ರಿಯೆಯಿಂದ ಉಂಟಾಗಬಹುದು.[] ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಮಾನಸಿಕ ಅಸ್ವಸ್ಥತೆಯ ಆನುವಂಶಿಕತೆಯು ಮಿದುಳಿನ ಬೆಳವಣಿಗೆಯ ಆನುವಂಶಿಕತೆಯೇ ಆಗಿರಬಹುದು ಮತ್ತು ಇಲ್ಲಿ ಜೈವಿಕ ಮತ್ತು ಪಾರಿಸರಿಕ ಸಂದರ್ಭಗಳನ್ನು ಅವಲಂಬಿಸಿ ವಿವಿಧ ರೀತಿಯ ಫಲಿತಾಂಶಗಳು ಸಾಧ್ಯವಿದೆ.[]

ಮನೋವೈದ್ಯಕೀಯ ಪರೀಕ್ಷೆಯು ಸಾಮಾನ್ಯವಾಗಿ ಮಾನಸಿಕ ಸ್ಥಿತಿಗತಿ ಪರೀಕ್ಷೆ ಮತ್ತು ಪ್ರಕರಣ ಇತಿಹಾಸ (ಕೇಸ್‌ ಹಿಸ್ಟರಿ)ದ ಸಂಗ್ರಹಕಾರ್ಯದೊಂದಿಗೆ ಆರಂಭವಾಗುತ್ತದೆ. ಮಾನಸಿಕ ಪರೀಕ್ಷೆಗಳು ಮತ್ತು ದೈಹಿಕ ಪರೀಕ್ಷೆಗಳನ್ನು ಮಾಡಬಹುದು, ಇವು ಕೆಲವು ಸಂದರ್ಭಗಳಲ್ಲಿ ನರವ್ಯೂಹಚಿತ್ರ (ನ್ಯೂರೋಇಮೇಜಿಂಗ್) ಅಥವಾ ಬೇರೆ ನ್ಯೂರೋಸೈಕಾಲಾಜಿಕಲ್ ತಂತ್ರಗಳನ್ನು ಬಳಸುವುದನ್ನೂ ಒಳಗೊಂಡಿರುತ್ತದೆ. ಮಾನಸಿಕ ಅಸ್ವಸ್ಥತೆಗಳನ್ನು ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ ಪ್ರಕಟಿಸಿರುವ ಮಾನಸಿಕ ಅಸ್ವಸ್ಸ್ಥತೆಗಳ ರೋಗನಿರ್ಣಯ ಮತ್ತು ಅಂಕಿಸಂಖ್ಯಾತ್ಮಕ ಕೈಪಿಡಿ (DSM), ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಸಂಪಾದಿಸಿ, ಬಳಸುತ್ತಿರುವ ರೋಗಗಳ ಅಂತಾರಾಷ್ಟ್ರೀಯ ವರ್ಗೀಕರಣ (ICD), ಇತ್ಯಾದಿ ವ್ಯಾಪಕವಾಗಿ ಬಳಸಲಾಗುವ ಕೆಲವು ಕೈಪಿಡಿಗಳಲ್ಲಿ ಪಟ್ಟಿಮಾಡಿರುವ ಮಾನದಂಡಗಳ ಪ್ರಕಾರ ರೋಗನಿರ್ಣಯ ಮಾಡಲಾಗುತ್ತದೆ. DSMನ ಐದನೇ ಆವೃತ್ತಿಯು(DSM-5) 2013ರಲ್ಲಿ ಪ್ರಕಟವಾಗಲಿದ್ದು, ಅದು ಅನೇಕ ವೈದ್ಯಕೀಯ ಕ್ಷೇತ್ರಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.[]

ಮನೋವೈದ್ಯಕೀಯ ಚಿಕಿತ್ಸೆಯು ಔಷಧ ಚಿಕಿತ್ಸೆ, ಮನೋಚಿಕಿತ್ಸೆ ಮತ್ತು ಟ್ರಾನ್ಸ್ ಕ್ರೇನಿಯಲ್ ಕಾಂತೀಯ ಉದ್ದೀಪನ ಇನ್ನಿತರ ವಿಶಾಲ ಶ್ರೇಣಿಯ ಬೇರೆ ತಂತ್ರಗಳನ್ನು ಒಳಗೊಂಡಂತೆ ಅನೇಕ ವಿಧಾನಗಳನ್ನು ಬಳಸುತ್ತದೆ. ಕಾರ್ಯನಿರ್ವಹಣೆ ನ್ಯೂನತೆ/ಅಸ್ವಸ್ಥತೆಯ ತೀವ್ರತೆಯನ್ನು ಅವಲಂಬಿಸಿ ಒಳರೋಗಿ ಅಥವಾ ಹೊರರೋಗಿಯಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮನೋವೈದ್ಯಶಾಸ್ತ್ರದಲ್ಲಿ ಸಂಶೋಧನೆ ಮತ್ತು ಚಿಕಿತ್ಸೆಯನ್ನು ಒಂದು ಅಂತರಶಿಸ್ತು ಆಧಾರದ ಮೇಲೆ ನಡೆಸಲಾಗುತ್ತದೆ ಮತ್ತು ಇದಕ್ಕೆ ಬೇರೆ ಬೇರೆ ಉಪ-ತಜ್ಞತೆಗಳು ಮತ್ತು ಸೈದ್ಧಾಂತಿಕ ದೃಷ್ಟಿಕೋನಗಳನ್ನು ಆಕರವಾಗಿ ಬಳಸಲಾಗುತ್ತದೆ.

ನೇಚರ್  ಪತ್ರಿಕೆಯ ಸಂಪಾದಕರಾಗಿರುವ ಫಿಲಿಪ್ ಕ್ಯಾಂಪ್‌‌ಬೆಲ್‌ ಅವರು 2010-2019ರವರೆಗಿನ 10-ವರ್ಷದ ಅವಧಿಯನ್ನು "ಮಾನಸಿಕ ಅಸ್ವಸ್ಥತೆಗಳ ದಶಕ"[] ಎಂದು ಕರೆದಿದ್ದಾರೆ.  ತಳಿವಿಜ್ಞಾನ ಮತ್ತು ನರವಿಜ್ಞಾನದಿಂದ ಪಡೆದ ಒಳನೋಟಗಳು ಮಾನಸಿಕ ರೋಗದ ಕುರಿತ ನಮ್ಮ ತಿಳಿವಳಿಕೆಯನ್ನು ರೂಪಾಂತರಿಸುವ ಒಂದು ಹಂತಕ್ಕೆ ಮಾನಸಿಕ ರೋಗದ ಕುರಿತ ಸಂಶೋಧನೆಯು ಕೊನೆಗೂ ತಲುಪಿದೆ ಎನ್ನುವುದನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.[] ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್  (JAMA) ಕೂಡ ತನ್ನ 2010, ಮೇ19ರ ಸಂಚಿಕೆಯನ್ನು ಮಾನಸಿಕ ಆರೋಗ್ಯದ ವಿಷಯಕ್ಕೆ ಮೀಸಲಾಗಿರಿಸಿದೆ [] ಎಂಬ ಅಂಶವೂ ವೈದ್ಯಕೀಯ ವಿಜ್ಞಾನದಲ್ಲಿ ಮಾನಸಿಕ ಅಸ್ವಸ್ಥತೆಗಳು ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬ ಮಹತ್ವವಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಲ

ಬದಲಾಯಿಸಿ

5ನೇ ಶತಮಾನದಿಂದ ಆರಂಭಿಸಿ, ಮಾನಸಿಕ ಅಸ್ವಸ್ಥತೆಯನ್ನು, ವಿಶೇಷವಾಗಿ ಬುದ್ಧಿವಿಕಲ್ಪ ಗುಣಲಕ್ಷಣಗಳಿರುವವರನ್ನು ಅತಿಮಾನುಷ ಎಂದು ಪರಿಗಣಿಸಲಾಗುತ್ತಿತ್ತು.[] ಈ ದೃಷ್ಟಿಕೋನವು ಪುರಾತನ ಗ್ರೀಸ್ ಮತ್ತು ರೋಮ್ ನಾದ್ಯಂತ ಪ್ರಚಲಿತದಲ್ಲಿತ್ತು.[] ಗ್ರೀಕರು ಮಾನಸಿಕ ಅಸ್ವಸ್ಥತೆಗಳ ಕುರಿತು ಆರಂಭಿಕ ಸಾಹಿತ್ಯವನ್ನು ಬರೆದಿದ್ದಾರೆ.[] ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ, ಹಿಪ್ಪೊಕ್ರೇಟ್ಸ್ ನು ಶಾರೀರಕ ಅಸಹಜತೆಗಳು ಮಾನಸಿಕ ಅಸ್ವಸ್ಥತೆಯ ಮೂಲಕಾರಣವಾಗಿರಬಹುದು ಎಂಬ ಸಿದ್ಧಾಂತ ರೂಪಿಸಿದ್ದಾನೆ.[][] ಧಾರ್ಮಿಕ ಮುಖಂಡರು ಮತ್ತು ಇನ್ನಿತರರು ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಭೂತೋಚ್ಛಾಟನೆಯ ಆರಂಭಿಕ ವಿಧಾನಗಳನ್ನು ಬಳಸುತ್ತಿದ್ದರು ಮತ್ತು ಈ ವಿಧಾನಗಳು ಹೆಚ್ಚಿನ ವೇಳೆ ಒರಟಾಗಿ, ಬರ್ಬರವಾಗಿ, ಕ್ರೂರವಾಗಿ ಇರುತ್ತಿದ್ದವು.[]

ಮಧ್ಯಕಾಲೀನ ಯುಗ

ಬದಲಾಯಿಸಿ
ಮೊಟ್ಟಮೊದಲ ಮನೋವೈದ್ಯಕೀಯ ಆಸ್ಪತ್ರೆಯನ್ನು 8ನೇ ಶತಮಾನದಲ್ಲಿ ಮಧ್ಯಯುಗೀನ ಇಸ್ಲಾಂ ವಿಶ್ವದಲ್ಲಿ ನಿರ್ಮಿಸಲಾಗಿತ್ತು.   ಮೊದಲ ಆಸ್ಪತ್ರೆಯನ್ನು ಕ್ರಿ.ಶ. 705ರಲ್ಲಿ ಬಾಗ್ದಾದ್‌ನಲ್ಲಿ ನಿರ್ಮಿಸಲಾಗಿತ್ತು. ತದನಂತರ 8ನೇ ಶತಮಾನದ ಆರಂಭದಲ್ಲಿ ಫೆಸ್‌ ನಗರದಲ್ಲಿ ಮತ್ತು ಕ್ರಿ.ಶ. 800ರಲ್ಲಿ  ಕೈರೋದಲ್ಲಿಯೂ ಮಾನಸಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಮಧ್ಯಯುಗೀನ ಕ್ರೈಸ್ತ ವೈದ್ಯರು ಮಾನಸಿಕ ಕಾಯಿಲೆಗಳಿಗೆ ದೆವ್ವಕ್ಕೆ ಸಂಬಂಧಿಸಿದ ವಿವರಣೆಗಳನ್ನು ಆಧರಿಸಿದ್ದರೆ, ಮಧ್ಯಯುಗೀನ ಮುಸ್ಲಿಂ ವೈದ್ಯರು   ರೋಗಿಯನ್ನು ಹತ್ತಿರದಿಂದ ನೋಡುವ ಪ್ರಾಯೋಗಿಕ ಅಂದರೆ ಕ್ಲಿನಿಕಲ್ ವೀಕ್ಷಣೆಯನ್ನು ಅವಲಂಬಿಸಿದ್ದರು.  ಅವರು ಮನೋವೈದ್ಯಶಾಸ್ತ್ರದಲ್ಲಿ ಮಹತ್ತರ ಪ್ರಗತಿ ಸಾದಿಸಿದ್ದರು ಮತ್ತು ಮಾನಸಿಕ ರೋಗಿಗಳಿಗೆ ಮನೋಚಿಕಿತ್ಸೆ  ಮತ್ತು  ನೈತಿಕ ಚಿಕಿತ್ಸೆಯನ್ನು ಒದಗಿಸಿದವರಲ್ಲಿ ಮೊದಲಿಗರು. ಜೊತೆಗೆ ಸ್ನಾನ, ಔಷಧ ಚಿಕಿತ್ಸೆ, ಸಂಗೀತ ಚಿಕಿತ್ಸೆ  ಮತ್ತು ಔದ್ಯೋಗಿಕ ಚಿಕಿತ್ಸೆ  ಇನ್ನಿತರ ಸ್ವರೂಪದ ಚಿಕಿತ್ಸೆಯನ್ನೂ ಅವರು ನೀಡುತ್ತಿದ್ದರು.  10ನೇ ಶತಮಾನದಲ್ಲಿ ಪರ್ಷಿಯನ್ ವೈದ್ಯ ಮಹಮ್ಮದ್ ಇಬ್ನ್ ಜಕಾರಿಯಾ ರಾಜಿ   (ರಾಜಾಸ್) ಮನೋರೋಗಿಗಳಿಗೆ ಚಿಕಿತ್ಸೆ ನೀಡಲು ಮಾನಸಿಕ ವಿಧಾನಗಳನ್ನು ಮತ್ತು ಶಾರೀರಿಕ  ವಿವರಣೆಗಳನ್ನು ಒಂದುಗೂಡಿಸಿದನು.  ಅವನ ಸಮಕಾಲೀನನಾದ, ಅರಬ್ ವೈದ್ಯನಾದ ನಜಬ್ ಉದ್-ದಿನ್ ಮಹಮ್ಮದ್ ಅನೇಕ ಮಾನಸಿಕ ರೋಗಗಳನ್ನು ವಿವರಿಸಿದ್ದಾನೆ. ಅವುಗಳೆಂದರೆ   ಕ್ಷೋಭೆಯ ಖಿನ್ನತೆ  , ನರವ್ಯಾಧಿ, ಕಾಮುಕತೆ ಮತ್ತು ಲೈಂಗಿಕ ಶಕ್ತಿಹೀನತೆ  (ನಫಕೇ ಮಲಿಕೋಲಿಯ  ), ಬುದ್ಧಿವಿಕಲ್ಪ (ಕತ್ರಿಬ್ ), ಮತ್ತು ಉನ್ಮಾದ/ಹುಚ್ಚು (ದಾವುಲ್ ಕಲ್ಬ್  ).[]

11ನೇ ಶತಮಾನದಲ್ಲಿ ಇನ್ನೊಬ್ಬ ಪರ್ಷಿಯನ್ ವೈದ್ಯ, ಅವಿಸೆನ್ನ , ಭಾವನೆಗಳನ್ನು ಒಳಗೊಂಡ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ "ಶಾರೀರಿಕ ಮನಶ್ಯಾಸ್ತ್ರ "ವನ್ನು ಗುರುತಿಸಿದನು ಮತ್ತು ನಾಡಿ ಮಿಡಿತದಲ್ಲಾಗುವ ಬದಲಾವಣೆಗಳಿಗೆ ಹಾಗೂ ಒಳಗಿನ ಭಾವನೆಗಳಿಗೆ ಸಂಬಂಧ ಕಲ್ಪಿಸುವ ಒಂದು ವಿಧಾನವನ್ನು ಅಭಿವೃದ್ಧಿಪಡಿಸಿದನು. ಇದನ್ನು 19ನೇ ಶತಮಾನದಲ್ಲಿ ಕಾರ್ಲ್‌ ಜಂಗ್ ಅಭಿವೃದ್ಧಿಪಡಿಸಿದ ಸಂಬಂಧ (ಅಸೋಸಿಯೇಶನ್ ) ಪರೀಕ್ಷೆಗೆ ಪೂರ್ವಭಾವಿ ಎಂದು ನೋಡಲಾಗುತ್ತದೆ.[] ಅವಿಸೆನ್ನ ನರಮನೋಶಾಸ್ತ್ರದ ಆರಂಭಿಗರಲ್ಲಿ ಒಬ್ಬನು ಮತ್ತು ಭ್ರಮೆ, ನಿದ್ರಾಹೀನತೆ, ಹುಚ್ಚು/ಉನ್ಮಾದ, ದುಃಸ್ವಪ್ನ, ವಿಷಾದರೋಗ, ಬುದ್ಧಿಮಾಂದ್ಯತೆ, ಮೂರ್ಛೆರೋಗ, ಪಾರ್ಶ್ವವಾಯು, ಆಘಾತ, ತಲೆಸುತ್ತು ಮತ್ತು ನಡುಕ ಇತ್ಯಾದಿ ಹಲವಾರು ನರಮನೋರೋಗದ ಸ್ಥಿತಿಯನ್ನು ಪ್ರಪ್ರಥಮವಾಗಿ ವಿವರಿಸಿದ್ದಾನೆ.[]

ಮಧ್ಯಯುಗೀನ ಯೂರೋಪ್‌‌ ನಲ್ಲಿ 13ನೇ ಶತಮಾನದಿಂದ ಮಾನಸಿಕ ಅಸ್ವಸ್ಥತೆಗಳನ್ನು ಗುಣಪಡಿಸಲು ಮನೋವೈದ್ಯದ ಆಸ್ಪತ್ರೆಗಳನ್ನು ನಿರ್ಮಿಸಲಾಗಿತ್ತು, ಆದರೆ ಅವುಗಳನ್ನು ಪಾಲನೆಯ ಸಂಸ್ಥೆಗಳ ಹಾಗೆ ಬಳಸಿಕೊಳ್ಳಲಾಯಿತು ಮತ್ತು ಅವುಗಳಲ್ಲಿ ಯಾವುದೇ ರೀತಿಯ ಚಿಕಿತ್ಸೆಯನ್ನು ನೀಡಲಿಲ್ಲ.[೧೦] 13ನೇ ಶತಮಾನದಲ್ಲಿ ಲಂಡನ್ನಲ್ಲಿ ಆರಂಭಗೊಂಡ, ಬೆಥ್ಲೆಮ್ ರಾಯಲ್ ಆಸ್ಪತ್ರೆಯು ಅತ್ಯಂತ ಹಳೆಯ ಮನೋವೈದ್ಯದ ಆಸ್ಪತ್ರೆಗಳಲ್ಲಿ ಒಂದಾಗಿದೆ.[೧೦] 1547ರ ಸುಮಾರಿಗೆ ಲಂಡನ್ ನಗರವು ಆಸ್ಪತ್ರೆಯನ್ನು ಹೊಂದಿತ್ತು ಮತ್ತು 1948ರ ವರೆಗೂ ಅದು ಕಾರ್ಯನಿರ್ವಹಿಸಿತ್ತು.[೧೧] ಅದು ಈಗ ರಾಷ್ಟ್ರೀಯ ಆರೋಗ್ಯ ಸೇವೆಯ ಭಾಗವಾಗಿದೆ ಮತ್ತು NHS ಫೌಂಡೇಶನ್ ಟ್ರಸ್ಟ್ ಆಗಿದೆ.

 
ಅನೇಕರು ಫಿಲಿಪ್ಪಿ ಪಿನೆಲ್‌ ಅವರನ್ನು ಆಧುನಿಕ ಮನೋವೈದ್ಯಶಾಸ್ತ್ರದ ಪಿತಾಮಹ ಎಂದು ಪರಿಗಣಿಸುತ್ತಾರೆ.

ಆರಂಭಿಕ ಆಧುನಿಕ ಯುಗ

ಬದಲಾಯಿಸಿ

1966ರಲ್ಲಿ, ಫ್ರಾನ್ಸ್ ನ XIVನೇ ಲೂಯಿಸ್ ನು ಮಾನಸಿಕ ಅಸ್ವಸ್ಥತೆಗಳಿಂದ ನರಳುತ್ತಿರುವವರಿಗೆ ಸಾರ್ವಜನಿಕ ಆಸ್ಪತ್ರೆಗಳ ವ್ಯವಸ್ಥೆಯನ್ನು ಹುಟ್ಟುಹಾಕಿದ, ಆದರೆ ಇಂಗ್ಲೆಂಡ್‌ನಂತೆ ಇಲ್ಲಿಯೂ ಯಾವುದೇ ರೀತಿಯ ನೈಜ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಿಲ್ಲ.[೧೧] 1758ರಲ್ಲಿ ಇಂಗ್ಲಿಶ್ ವೈದ್ಯ ವಿಲಿಯಂ ಬೆಟ್ಟಿಯು ಟ್ರೀಟೈಸ್ ಆಫ್ ಮ್ಯಾಡ್‌ನೆಸ್ ಕೃತಿಯನ್ನು ರಚಿಸಿದ ಮತ್ತು ಇದು ಮನೋವಿಕಲರ ರಕ್ಷಣಾಲಯಗಳಲ್ಲಿ ಬಳಸಬೇಕಾದ ಚಿಕಿತ್ಸೆಯ ಕುರಿತು ಕರೆನೀಡಿತು.[೧೨] ಮೂವತ್ತು ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಹೊಸದಾಗಿ ಆಳ್ವಿಕೆಗೆ ಬಂದ IIIನೇ ಜಾರ್ಜ್‌, ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ.[] 1789ರಲ್ಲಿ ರಾಜನ ಮನೋವ್ಯಾಧಿ ಉಪಶಮನಗೊಂಡ ನಂತರ, ಮಾನಸಿಕ ಅನಾರೋಗ್ಯವನ್ನು ಚಿಕಿತ್ಸೆ ನೀಡಿ, ಗುಣಪಡಿಸಬಹುದಾದ ರೋಗ ಎಂಬಂತೆ ನೋಡಲಾಯಿತು.[] 1972ರ ಸುಮಾರಿಗೆ ಫ್ರೆಂಚ್ ವೈದ್ಯ ಫಿಲಿಪ್ಪಿ ಪಿನೆಲ್ ಮಾನಸಿಕ ಅಸ್ವಸ್ಥತೆಗಳಿಂದ ನರಳುತ್ತಿರುವವರಿಗೆ ಚಿಕಿತ್ಸೆ ನೀಡಲು ದಯಾಪರ ಚಿಕಿತ್ಸೆ ದೃಷ್ಟಿಕೋನವನ್ನು ಪರಿಚಯಿಸಿದನು.[] ವಿಲಿಯಂ ಟ್ಯುಕ್ ಪಿನೆಲ್ ರೂಪಿಸಿದ ವಿಧಾನಗಳನ್ನು ಬಳಸಿಕೊಂಡ ಮತ್ತು ಅದೇ ವರ್ಷ ಟ್ಯುಕ್ ಇಂಗ್ಲೆಂಡ್‌ನಲ್ಲಿ ಯಾರ್ಕ್‌ ರಿಟ್ರೀಟ್ ಸಂಸ್ಥೆಯನ್ನು ಆರಂಭಿಸಿದ.[] ಆ ಸಂಸ್ಥೆಯು ಮಾನಸಿಕ ಅಸ್ವಸ್ಥತೆಯುಳ್ಳವರಿಗೆ ದಯಾಪರ ಮತ್ತು ನೈತಿಕ ಚಿಕಿತ್ಸೆಯ ಒಂದು ಮಾದರಿಯೆಂದು ವಿಶ್ವಾದ್ಯಂತ ಹೆಸರಾಯಿತು.[೧೩] ಅದು ಸಂಯುಕ್ತ ಸಂಸ್ಥಾನದಲ್ಲಿ ಇದೇ ರೀತಿಯ ಹಲವಾರು ಸಂಸ್ಥೆಗಳಿಗೆ ಸ್ಫೂರ್ತಿಯಾಯಿತು. ಅವುಗಳಲ್ಲಿ ಪ್ರಮುಖವಾದವು ಎಂದರೆ ಬ್ರಟ್ಲೆಬೊರೊ ರಿಟ್ರೀಟ್ ಮತ್ತು ಹರ್ಟ್‌ಫೋರ್ಡ್‌ ರಿಟ್ರೀಟ್ (ಈಗ ಇನ್‌ಸ್ಟಿಟ್ಯೂಟ್ ಆಫ್ ಲಿವಿಂಗ್).

19ನೇ ಶತಮಾನ

ಬದಲಾಯಿಸಿ

ಹತ್ತೊಂಬತ್ತನೇ ಶತಮಾನದ ಕೊನೆಯ ವೇಳೆಗೆ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಎರಡೂ ಸೇರಿ ಮಾನಸಿಕ ರಕ್ಷಣಾಲಯಗಳಲ್ಲಿ ನೂರಿನ್ನೂರು ವ್ಯಕ್ತಿಗಳನ್ನು ಹೊಂದಿದ್ದವು.[೧೪] 1980ರ ಕೊನೆಯಲ್ಲಿ ಮತ್ತು 1900ರ ಆರಂಭದ ಹೊತ್ತಿಗೆ, ಈ ಸಂಖ್ಯೆಯು ನೂರಿನ್ನೂರಿಂದ ಸಾವಿರಾರು ವ್ಯಕ್ತಿಗಳಿಗೆ ಏರಿತು.[೧೪] ಸಂಯುಕ್ತ ಸಂಸ್ಥಾನವು 1904ರ ವೇಳೆಗೆ ಮಾನಸಿಕ ಆಸ್ಪತ್ರೆಗಳಲ್ಲಿ 150,000 ರೋಗಿಗಳನ್ನು ಹೊಂದಿತ್ತು.[೧೪] ಜರ್ಮನಿ ಭಾಷೆ ಮಾತನಾಡುವ ದೇಶಗಳು 400ಕ್ಕೂ ಹೆಚ್ಚು ಸಾರ್ವಜನಿಕ ಮತ್ತು ಖಾಸಗಿ ವಲಯದ ರಕ್ಷಣಾಲಯಗಳನ್ನು ಹೊಂದಿತ್ತು.[೧೪] ಈ ರಕ್ಷಣಾಲಯಗಳು ಮನೋವೈದ್ಯಶಾಸ್ತ್ರದ ವಿಕಾಸಕ್ಕೆ ಬಹಳ ಮುಖ್ಯವಾಗಿದ್ದವು, ಏಕೆಂದರೆ ಅವು ವಿಶ್ವಾದ್ಯಂತ ವೈದ್ಯವೃತ್ತಿ ಪದ್ಧತಿಗಳ ಒಂದು ಸಾರ್ವತ್ರಿಕ ವೇದಿಕೆಯನ್ನು ಒದಗಿಸಿದವು.[೧೪]

ವಿಶ್ವವಿದ್ಯಾಲಯಗಳು ಹೆಚ್ಚಿನ ವೇಳೆ ರಕ್ಷಣಾಲಯಗಳ ಆಡಳಿತ ನಿರ್ವಹಣೆಯಲ್ಲಿ ಒಂದು ಪಾತ್ರವನ್ನು ವಹಿಸಿದ್ದವು.[೧೫] ವಿಶ್ವವಿದ್ಯಾಲಯಗಳು ಮತ್ತು ರಕ್ಷಣಾಲಯಗಳ ಮದ್ಯದ ಸಂಬಂಧದಿಂದಾಗಿ, ಜರ್ಮನಿಯಲ್ಲಿ ಅಸಂಖ್ಯಾತ ಸ್ಪರ್ಧಾತ್ಮಕ ರೀತಿಯ ಮನೋವೈದ್ಯರು ತಯಾರಾಗಲು ಸಾಧ್ಯವಾಯಿತು.[೧೫] ಹತ್ತೊಂಬತ್ತನೇ ಶತಮಾನದಲ್ಲಿ ಜರ್ಮನಿಯು ಮನೋವೈದ್ಯಶಾಸ್ತ್ರದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ದೇಶವೆಂದು ಹೆಸರಾಗಿತ್ತು.[೧೪] ಜರ್ಮನಿಯಲ್ಲಿ 20ಕ್ಕೂ ಅಧಿಕ ಪ್ರತ್ಯೇಕ ವಿಶ್ವವಿದ್ಯಾಲಯಗಳು ಇದ್ದು, ಅವು ವೈಜ್ಞಾನಿಕ ಪ್ರಗತಿಯ ವಿಚಾರದಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದವು.[೧೪] ಆದಾಗ್ಯೂ, ಜರ್ಮನಿಯ ಪ್ರತ್ಯೇಕ ರಾಜ್ಯಗಳು ಮತ್ತು ರಕ್ಷಣಾಲಯಗಳ ರಾಷ್ಟ್ರೀಯ ನಿಯಂತ್ರಣದ ಕೊರತೆಯಿಂದಾಗಿ, ಆ ದೇಶದಲ್ಲಿ ರಕ್ಷಣಾಲಯಗಳ ಅಥವಾ ಮನೋವೈದ್ಯಶಾಸ್ತ್ರದ ಸಂಘಟಿತ ಕೇಂದ್ರೀಕೃತ ವ್ಯವಸ್ಥೆ ಇರಲಿಲ್ಲ.[೧೪] ಜರ್ಮನಿಯಂತೆ ಬ್ರಿಟನ್ನಿನಲ್ಲಿ ಕೂಡ, ರಕ್ಷಣಾಲಯಗಳ ಆಡಳಿತಕ್ಕೆ ಕೇಂದ್ರೀಕೃತ ವ್ಯವಸ್ಥೆಯ ಕೊರತೆ ಇತ್ತು.[೧೬] ಈ ಕೊರತೆಯು ಔಷಧ ಮತ್ತು ಮನೋವೈದ್ಯಶಾಸ್ತ್ರದಲ್ಲಿ ಹೊಸ ಹೊಸ ವಿಚಾರಗಳ ಹರಡುವಿಕೆಗೆ ಅಡ್ಡಿಯಾಯಿತು.[೧೬]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1834ರಲ್ಲಿ ವೈದ್ಯರೊಬ್ಬರ ವಿಧವೆಯಾದ ಅನ್ನಾ ಮಾರ್ಷ್‌ ತಮ್ಮ ದೇಶದ ಮೊದಲ, ಆರ್ಥಿಕವಾಗಿ ದೃಢವಾದ ಖಾಸಗಿ ರಕ್ಷಣಾಲಯವನ್ನು ನಿರ್ಮಿಸಲು ನಿಧಿ ಕೂಡಿಸಿ, ಉತ್ತಮ ಕೆಲಸ ಮಾಡಿದರು. ಬ್ರಟ್ಲೆಬೊರೊ ರಿಟ್ರೀಟ್ ಅಮೆರಿಕಾದ ಖಾಸಗಿ ಮನೋರೋಗದ ಆಸ್ಪತ್ರೆಯ ಆರಂಭವನ್ನು ಸೂಚಿಸುತ್ತಿದ್ದು, ಇದು ರೋಗಿಗಳು, ಹಣಕಾಸು ಮತ್ತು ಪ್ರಭಾವದ ವಿಚಾರದಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಸವಾಲೊಡ್ಡುವ ಖಾಸಗಿ ಆಸ್ಪತ್ರೆಗಳ ಆರಂಭವಾಗಿದೆ. ಇಂಗ್ಲೆಂಡ್ ನ ಯಾರ್ಕ್ ರಿಟ್ರೀಟ್ಅನ್ನು ಆಧರಿಸಿದ್ದರೂ, ಇದನ್ನು ಪ್ರತಿಯೊಂದೂ ಚಿಕಿತ್ಸಾ ತತ್ವದ ತಜ್ಞ ಸಂಸ್ಥೆಗಳು ಅನುಸರಿಸುತ್ತಿದ್ದವು.

1838ರಲ್ಲಿ, ಫ್ರಾನ್ಸ್ ತನ್ನ ದೇಶಾದ್ಯಂತ ರಕ್ಷಣಾಲಯಗಳು ಮತ್ತು ರಕ್ಷಣಾಲಯಗಳ ಸೇವೆಗೆ ಪ್ರವೇಶಾತಿಯನ್ನು ನಿಯಂತ್ರಣಕ್ಕೊಳಪಡಿಸಿತು.[೧೭] 1840ರ ವೇಳೆಗೆ, ಚಿಕಿತ್ಸಾ ಸಂಸ್ಥೆಗಳ ಹಾಗೆ ರಕ್ಞಣಾಲಯಗಳು ಇಡೀ ಯೂರೋಪ್‌ನಲ್ಲಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಇದ್ದವು.[೧೮]

 
ಎಮಿಲ್ ಕ್ರೇಪೆಲಿನ್ ಮಾನಸಿಕ ಅಸ್ವಸ್ಥತೆಯ ರೋಗ ವರ್ಗೀಕರಣವದ ವಿಚಾರಗಳನ್ನು ಅಧ್ಯಯನ ಮಾಡಿದರು ಮತ್ತು ಆ ವಿಚಾರಗಳನ್ನು ಉತ್ತೇಜಿಸಿದರು.

ಆದರೆ ಹತ್ತೊಂಬತ್ತನೇ ಶತಮಾನದ ಮಧ್ಯದ ವೇಳೆಗೆ ಮಾನಸಿಕ ರೋಗಗಳನ್ನು "ಗೆಲ್ಲಬಹುದು" ಎಂಬ ಹೊಸ ಮತ್ತು ಪ್ರಭಾವಿಸುವ ವಿಚಾರಗಳು ಒಮ್ಮೆಲೆ ಕುಸಿಯುವಂತಾದವು.[೧೮] ರೋಗಿಗಳ ಸಂಖ್ಯೆ ಹಿಂದೆಂದೂ ಇಲ್ಲದಷ್ಟು ಅಧಿಕಗೊಳ್ಳುತ್ತ ಮನೋವೈದ್ಯರು ಮತ್ತು ರಕ್ಞಣಾಲಯಗಳ ಮೇಲೆ ಇನ್ನಿಲ್ಲದ ಒತ್ತಡ ಬೀಳತೊಡಗಿತು.[೧೮] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಕ್ಷಣಾಲಯಗಳಲ್ಲಿ ರೋಗಿಗಳ ಸಂಖ್ಯೆ ಶೇ. 927ಕ್ಕೆ ಏರಿತು.[೧೮] ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿಯೂ ಸರಿಸುಮಾರು ಇದೇ ಸಂಖ್ಯೆ ಇತ್ತು.[೧೮] ಫ್ರಾನ್ಸ್‌ನಲ್ಲಿಯೂ ರೋಗಿಗಳ ಸಂಖ್ಯೆ ಅಧಿಕಗೊಂಡಿದ್ದು, ರಕ್ಷಣಾಲಯಗಳು ತಮ್ಮ ಗರಿಷ್ಠ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಸಂಖ್ಯೆಯ ರೋಗಿಗಳನ್ನು ತೆಗೆದುಕೊಳ್ಳುತ್ತಿದ್ದವು.[೧೯] ರಕ್ಷಣಾಲಯಗಳಲ್ಲಿ ರೋಗಿಗಳ ಸಂಖ್ಯೆ ಅಧಿಕಗೊಳ್ಳಲು ರೋಗಿಗಳ ಆರೈಕೆಯು ಕುಟುಂಬಗಳು ಮತ್ತು ಬಡಕುಟುಂಬಗಳಿಂದ ರಕ್ಷಣಾಲಯಗಳಿಗೆ ವರ್ಗಾವಣೆಗೊಂಡಿದ್ದು ಒಂದು ಕಾರಣ. ಆದರೆ ಯಾಕೆ ಇಷ್ಟು ಹೆಚ್ಚಳವಾಯಿತು ಎಂಬ ವಿಚಾರದಲ್ಲಿ ಇಂದಿಗೂ ಚರ್ಚೆಗಳು ನಡೆಯುತ್ತಲೇ ಇದೆ.[೨೦][೨೧] ಕಾರಣ ಏನೇ ಇರಲಿ, ಈ ಹೆಚ್ಚಳದಿಂದ ರಕ್ಞಣಾಲಯಗಳ ಮೇಲಿನ ಒತ್ತಡವು ಅಧಿಕಗೊಂಡಿತು, ಜೊತೆಗೆ ರಕ್ಷಣಾಲಯಗಳು ಮತ್ತು ವಿಶೇಷ ಅಧ್ಯಯನವಾದ ಮನೋವೈದ್ಯಶಾಸ್ತ್ರಕ್ಕೆ ಇದು ಹಾನಿಯುಂಟು ಮಾಡಿತು. ರಕ್ಷಣಾಲಯಗಳು ಮತ್ತೆ ಪಾಲನಾ ಸಂಸ್ಥೆಗಳಾಗಿ ಪರಿವರ್ತನೆಗೊಂಡವು [೨೨] ಮತ್ತು ವೈದ್ಯಕೀಯ ಜಗತ್ತಿನಲ್ಲಿ ಮನೋವೈದ್ಯಶಾಸ್ತ್ರದ ಘನತೆಯು ಅತ್ಯಂತ ಕೆಳಮಟ್ಟಕ್ಕೆ ಇಳಿಯಿತು.[೨೩]

20ನೇ ಶತಮಾನ

ಬದಲಾಯಿಸಿ

ರೋಗ ವರ್ಗೀಕರಣ ಮತ್ತು ಜೀವಶಾಸ್ತ್ರೀಯ ಮನೋವೈದ್ಯಶಾಸ್ತ್ರದ ಮರುಹುಟ್ಟು

ಬದಲಾಯಿಸಿ

20ನೇ ಶತಮಾನವು ವಿಶ್ವಕ್ಕೆ ಒಂದು ಹೊಸ ಮನೋವೈದ್ಯಶಾಸ್ತ್ರವನ್ನು ಪರಿಚಯಿಸಿತು. ಮಾನಸಿಕ ಅಸ್ವಸ್ಥತೆಗಳನ್ನು ನೋಡುವ ವಿವಿಧ ಪರಿಕಲ್ಪನೆಗಳನ್ನು ಪರಿಚಯಿಸಲಾಯಿತು. ಎಮಿಲ್ ಕ್ರೇಪೆಲಿನ್ ಅವರ ವೃತ್ತಿಯು ಮನೋವೈದ್ಯಶಾಸ್ತ್ರದಲ್ಲಿ ವಿವಿಧ ಶಿಸ್ತುಗಳು ಒಮ್ಮುಖವಾಗಿದ್ದನ್ನು ಪ್ರತಿಬಿಂಬಿಸುತ್ತದೆ.[೨೪] ಆರಂಭದಲ್ಲಿ ಕ್ರೇಪೆಲಿನ್ ಮನಶ್ಯಾಸ್ತ್ರದತ್ತ ಬಹಳ ಆಕರ್ಷಿತರಾದರು ಮತ್ತು ಶರೀರಶಾಸ್ತ್ರೀಯ ಮನೋವೈದ್ಯಶಾಸ್ತ್ರದ ವಿಚಾರಗಳನ್ನು ನಿರ್ಲಕ್ಷಿಸಿದರು.[೨೪] ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡ ನಂತರ ಮತ್ತು ವಿಶ್ವವಿದ್ಯಾಲಯದ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನಂತರ, ಶುದ್ಧ ಮನಶ್ಯಾಸ್ತ್ರದಲ್ಲಿ ಕ್ರೇಪೆಲಿನ್ ಅವರ ಆಸಕ್ತಿಯು ಕುಂದಲಾರಂಭಿಸಿತು ಮತ್ತು ಅವರು ಹೆಚ್ಚು ಸಮಗ್ರವಾದ ಮನೋವೈದ್ಯಶಾಸ್ತ್ರದ ಒಂದು ಯೋಜನೆಯನ್ನು ಪರಿಚಯಿಸಿದರು.[೨೫][೨೬] ಕ್ರೇಪೆಲಿನ್ ಕಾರ್ಲ್‌ ಲ್ಯುಡ್ವಿಗ್ ಕಾಲ್‌ಬಾಮ್ ಅವರು ಪರಿಚಯಿಸಿದ್ದ ಮಾನಸಿಕ ಅಸ್ವಸ್ಥತೆಗಳ ರೋಗ ವರ್ಗೀಕರಣದ ವಿಚಾರಗಳನ್ನು ಅದ್ಯಯನ ಮಾಡಲಾರಂಭಿಸಿದರು ಮತ್ತು ಉತ್ತೇಜಿಸಲಾರಂಭಿಸಿದರು.[೨೬] ಜೀವಶಾಸ್ತ್ರೀಯ ಮನೋವೈದ್ಯಶಾಸ್ತ್ರದ ಹಿನ್ನೆಲೆಯಲ್ಲಿದ್ದ ಆರಂಭಿಕ ವಿಚಾರಗಳು ವಿವಿಧ ಮಾನಸಿಕ ಅಸ್ವಸ್ಥತೆಗಳು ಗುಣಲಕ್ಷಣದಲ್ಲಿ ಜೀವಶಾಸ್ತ್ರೀಯವಾಗಿರುತ್ತವೆ ಎಂದು ಹೇಳುತ್ತವೆ. ಇವು ಹುಟ್ಟುಹಾಕಿದ ಹೊಸ ವಿಚಾರಗಳಾದ "ನರಗಳು" ಮತ್ತು ಮನೋವೈದ್ಯಶಾಸ್ತ್ರವು ಇಂದಿನ ನರಶಾಸ್ತ್ರ ಮತ್ತು ನರಮನೋಶಾಸ್ತ್ರ ಎಂಬುದಕ್ಕೆ ಹೆಚ್ಚುಕಡಿಮೆ ಸಮಾನವಾಗಿದ್ದವು.[೨೭] ಸಿಗ್ಮಂಡ್ ಪ್ರಾಯ್ಡ್ ನ ಮರಣಾನಂತರ ಮನೋವಿಶ್ಲೇಷಣಾತ್ಮಕ ಸಿದ್ಧಾಂತ ದಿಂದ ಕವಲೊಡೆದ ವಿಚಾರಗಳೂ ಕೂಡ ಬೇರುಬಿಡಲಾರಂಭಿಸಿದವು.[೨೮] ಮನೋವಿಶ್ಲೇಷಣಾತ್ಮಕ ಸಿದ್ಧಾಂತವು ಮನೋವೈದ್ಯರಲ್ಲಿ ಹೆಚ್ಚು ಜನಪ್ರಿಯವಾಯಿತು, ಏಕೆಂದರೆ ಅದು ರೋಗಿಗಳಳನ್ನು ರಕ್ಷಣಾಲಯಗಳಲ್ಲಿ ಕೂಡಿಹಾಕಿ ಚಿಕಿತ್ಸೆ ನೀಡುವುದಕ್ಕಿಂತ ಖಾಸಗಿಯಾಗಿ ನೋಡಿ ಚಿಕಿತ್ಸೆ ನೀಡಲು ಆಸ್ಪದ ಕಲ್ಪಿಸಿತ್ತು.[೨೮] 1970ರ ಸುಮಾರಿಗೆ ಮನೋವಿಶ್ಲೇಷಣಾ ಸಿದ್ಧಾಂತವು ಈ ಕ್ಷೇತ್ರದಲ್ಲಿಯೇ ಅಪ್ರಧಾನವೆಂದು ಪರಿಗಣಿತವಾಯಿತು.[೨೮]

 
ಒಟ್ಟೋ ಲಯೆವಿ ಅವರ ಸಂಶೋಧನಾ ಕಾರ್ಯವು ಮೊಟ್ಟಮೊದಲ ಪ್ರಪ್ರಥಮ ನ್ಯೂರೋಟ್ರಾಮಿಟರ್ ಅಸಿಟೈಲ್‌ಕ್ಲೋರಿನ್ ಸಂಯುಕ್ತವನ್ನು ಕಂಡುಹಿಡಿಯಲು ಕಾರಣವಾಯಿತು.

ಜೀವಶಾಸ್ತ್ರೀಯ ಮನೋವೈದ್ಯಶಾಸ್ತ್ರವು ಈ ಸಮಯದಲ್ಲಿ ಪುನಾ ಪ್ರಬಲವಾಯಿತು. ಒಟ್ಟೊ ಲೊಯೆವಿ ಯು ಮೊದಲ ನರಪ್ರೇಕ್ಷಕ (ನ್ಯೂರೋಟ್ರಾನ್ಸ್‌ಮಿಟರ್‌) ಅಸಿಟೈಲ್‌ಕ್ಲೋರಿನ್ ಸಂಯುಕ್ತವನ್ನು ಕಂಡುಹಿಡಿಯುವುದರೊಂದಿಗೆ ಮನೋಔಷಧಶಾಸ್ತ್ರ (ಸೈಕೋಫಾರ್ಮಾಕಾಲಜಿ)ವು ಮನೋವೈದ್ಯಶಾಸ್ತ್ರದ ಒಂದು ಅವಿಭಾಜ್ಯ ಭಾಗವಾಯಿತು.[೨೯] ನರವ್ಯೂಹಚಿತ್ರ (ನ್ಯೂರೋಇಮೇಜಿಂಗ್)ವನ್ನು ಮೊದಲು ಮನೋವೈದ್ಯಶಾಸ್ತ್ರದಲ್ಲಿ ಒಂದು ಸಾಧನವನ್ನಾಗಿ 1980ರಲ್ಲಿ ಬಳಸಲಾಯಿತು.[೩೦] ಛಿದ್ರಮನಸ್ಕತೆ (ಸ್ಕೀಜೋಫ್ರೇನಿಯಾ) ಯ ಚಿಕಿತ್ಸೆಯಲ್ಲಿ ಕ್ಲೋರೋಪ್ರೊಮಜಿನ್ ಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವುದು 1952ರಲ್ಲಿ ಕಂಡುಹಿಡಿದಿದ್ದು ಆ ರೋಗದ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟುಮಾಡಿತು.[೩೧] ಅದೇ ರೀತಿಯಾಗಿ 1948ರಲ್ಲಿ ಖೇದವಿಕಲ್ಪ ಅಸ್ವಸ್ಥತೆ (ಬೈಪೋಲಾರ್ ಡಿಸ್‌ಆರ್ಡರ್‌) ಯಲ್ಲಿ ಮನಸ್ಥಿತಿಯ ಏರಿಳಿತಗಳನ್ನು ಸ್ಥಿರಗೊಳಿಸುವ ಸಾಮರ್ಥ್ಯವುಳ್ಳ ಲಿತಿಯಂ ಕಾರ್ಬೊನೇಟ್ ನ ಶೋಧವೂ ಕ್ರಾಂತಿಕಾರಕವಾಗಿತ್ತು.[೩೨] ಮನೋಚಿಕಿತ್ಸೆಯನ್ನು ಇನ್ನೂ ಬಳಸಲಾಗುತ್ತಿದೆ, ಆದರೆ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಮಾತ್ರವೇ ಬಳಕೆಯಾಗುತ್ತಿದೆ.[೩೩] ತಳಿವಿಜ್ಞಾನವು ಮಾನಸಿಕ ಅನಾರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮತ್ತೊಮ್ಮೆ ಯೋಚಿಸಲಾಯಿತು.[೨೯] ಅಣು ಜೀವವಿಜ್ಞಾನವು ಗುರುತಿಸಲಾದ ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗುವ ನಿರ್ದಿಷ್ಟವಾದ ವಂಶವಾಹಿಗಳ ಕುರಿತು ಮಾಹಿತಿ ನೀಡುತ್ತದೆ.[೨೯]

ಪ್ರತಿ-ಮನೋವೈದ್ಯಶಾಸ್ತ್ರ ಮತ್ತು ಸಾಂಸ್ಥೀಕರಣ ತೆಗೆದುಹಾಕುವುದು

ಬದಲಾಯಿಸಿ

ಮನೋವೈದ್ಯಕೀಯದ ಔಷಧ ಗಳ ಪರಿಚಯ ಮತ್ತು ಪ್ರಯೋಗಾಲಯ ಪರೀಕ್ಷೆಯ ಬಳಕೆಗಳು ಮನೋವೈದ್ಯರು ಮತ್ತು ಅವರ ರೋಗಿಗಳ ನಡುವಣ ವೈದ್ಯ-ರೋಗಿ ಸಂಬಂಧ ವನ್ನು ಬದಲಿಸಿತು.[೩೪] ಮನೋವೈದ್ಯಶಾಸ್ತ್ರವು ಮೂಲ/ಸ್ವಾಭಾವಿಕ ವಿಜ್ಞಾನ (ಹಾರ್ಡ್‌ ಸೈನ್ಸ್) ದತ್ತ ಹೊರಳಿದ್ದನ್ನು ರೋಗಿಗಳ ಕುರಿತು ಕಾಳಜಿಯ ಕೊರತೆ ಎಂದು ವ್ಯಾಖ್ಯಾನಿಸಲಾಯಿತು.[೩೪] ಇದರಿಂದಾಗಿ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಮಿಥ್ಯೆ ಎಂಬಂತೆ ಕಲ್ಪಿಸಿದ ಮಾಧ್ಯಮಗಳ ಪ್ರಕಟಣೆಗಳಿಂದಾಗಿ ಪ್ರತಿ-ಮನೋವೈದ್ಯಶಾಸ್ತ್ರವು 20ನೇ ಶತಮಾನದ ಅಂತ್ಯದ ವೇಳೆಗೆ ಹೆಚ್ಚು ಪ್ರಚಲಿತಗೊಂಡಿತು.[೩೫] ಈ ಆಂದೋಲನದಲ್ಲಿದ್ದ ಇನ್ನಿತರರು ಮನೋವೈದ್ಯಶಾಸ್ತ್ರವು ಸಾಮಾಜಿಕ ನಿಯಂತ್ರಣದ ಒಂದು ಸ್ವರೂಪ ಎಂದು ಪ್ರತಿಪಾದಿಸಿದರು ಮತ್ತು ಪಿನೆಲ್‌ನ ಚಿಕಿತ್ಸೆಯ ರಕ್ಷಣಾಲಯಗಳಿಂದ ರೂಪುಗೊಂಡಿರುವ ಸಾಂಸ್ಥಿಕ ಮನೋವೈದ್ಯಕೀಯ ಆರೈಕೆಯನ್ನು ನಿರ್ಮೂಲನೆಗೊಳಿಸಬೇಕೆಂದು ಆಗ್ರಹಿಸಿದರು.[೩೬] ಸರ್ವಾಧಿಕಾರವಿರುವ ಕೆಲವು ದೇಶಗಳಲ್ಲಿ ರಾಜಕೀಯ ನಿಯಂತ್ರಣವನ್ನು ಜಾರಿಗೊಳಿಸುವ ವ್ಯವಸ್ಥೆಯ ಭಾಗವಾಗಿ ಕೆಲವು ಮನೋವೈದ್ಯರು ರೋಗಿಗಳ ಮೇಲೆ ದೈಹಿಕ ದೌರ್ಜನ್ಯವೆಸಗಿದ ಪ್ರಕರಣಗಳು ನಡೆದವು. ಕೆಲವು ಬಗೆಯ ದೌರ್ಜನ್ಯಗಳು ಇಂದಿಗೂ ಮುಂದುವರೆದಿವೆ.[೩೭] ಮನೋವೈದ್ಯಶಾಸ್ತ್ರದ ದುರುಪಯೋಗದ ಐತಿಹಾಸಿಕ ಉದಾಹರಣೆಗಳು ಎಂದರೆ ನಾಜಿ ಜರ್ಮನಿಯಲ್ಲಿ,[೩೮] ಸಿಕುಷ್ಕ ಅಡಿಯಲ್ಲಿ ಸೋವಿಯೆತ್ ಒಕ್ಕೂಟದಲ್ಲಿ, ಮತ್ತು ದಕ್ಷಿಣ ಆಫ್ರಿಕಾದ ಪ್ರತ್ಯೇಕತಾನೀತಿ ವ್ಯವಸ್ಥೆಯಲ್ಲಿ ನಡೆದಿರುವುದನ್ನು ಹೇಳಬಹುದು.[೩೯]

ಪ್ರತಿ-ಮನೋವೈದ್ಯಶಾಸ್ತ್ರ ಆಂದೋಲನವು ನಿರ್ಮೂಲನೆ ಮಾಡಬಯಸಿದ ಒಂದು ಚಿಕಿತ್ಸೆ ಎಂದರೆ ವಿದ್ಯುತ್‌ಕಂಪನದ (ಎಲೆಕ್ಟ್ರೋಕನ್‌ವಲ್ಸಿವ್) ಚಿಕಿತ್ಸೆ (ECT)[೪೦] ECTಯು ಮಿದುಳಿಗೆ ಹಾನಿಯುಂಟು ಮಾಡುತ್ತದೆ ಮತ್ತು ಇದನ್ನು ಶಿಸ್ತಿನ ಒಂದು ಸಾಧನವನ್ನಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಆಪಾದಿಸುತ್ತಾರೆ.[೪೦] ಮತ್ತೆ ಕೆಲವರು ECTಯು ಮಿದುಳಿಗೆ ಹಾನಿಮಾಡುತ್ತದೆ ಎನ್ನುವುದಕ್ಕೆ ಏನೂ ಪುರಾವೆಗಳಿಲ್ಲ ಎಂದು ನಂಬುತ್ತಾರೆ,[೪೧][೪೨][೪೩] ಆದರೆ ECTಯು ಹಾನಿಯುಂಟು ಮಾಡುತ್ತದೆ ಎಂಬುದಕ್ಕೆ ಕೆಲವು ಉಲ್ಲೇಖಗಳಿವೆ.[೪೪][೪೫] ಕೆಲವೊಮ್ಮೆ ECTಯನ್ನು ಶಿಕ್ಷೆಯಾಗಿ ಅಥವಾ ಭಯಪಡಿಸಲು ಬಳಸಲಾಗುತ್ತದೆ ಮತ್ತು ECTಯನ್ನು ರೋಗಿಗಳು ತಮಗೆ "ಅನುಗುಣವಾಗಿ" ಇರುವಂತೆ ಇಡಲು ಅವರನ್ನು ಭಯಪಡಿಸಲು ಬಳಕೆಯಾದ ಕೆಲವು ಪ್ರತ್ಯೇಕ ಉದಾಹರಣೆಗಳೂ ಇವೆ.[೪೦] ಮನೋವೈದ್ಯಕೀಯದ ಔಷಧಗಳ ವ್ಯಾಪಕತೆಯು ಸಾಂಸ್ಥೀಕರಣವನ್ನು ತೆಗೆದುಹಾಕಲು ಆರಂಭಿಸಲು ಸಹಾಯಕವಾಯಿತು ,[೪೬] ಅಂದರೆ ರೋಗಿಗಳನ್ನು ಮನೋವೈದ್ಯಕೀಯ ಆಸ್ಪತ್ರೆಗಳಿಂದ ಸಮುದಾಯಕ್ಕೆ ಬಿಡುಗಡೆ ಮಾಡುವ ಪ್ರಕ್ರಿಯೆಯ ಆರಂಭಕ್ಕೆ ಸಹಾಯಕವಾಯಿತು.[೪೭] ಪ್ರತಿ-ಮನೋವೈದ್ಯಶಾಸ್ತ್ರ ಆಂದೋಲನವು ಉಂಟುಮಾಡಿದ ಒತ್ತಡವು ಮತ್ತು ವೈದ್ಯಕೀಯ ಕ್ಷೇತ್ರದಿಂದ ಸಮುದಾಯ ಚಿಕಿತ್ಸೆಯ ಸಿದ್ಧಾಂತವು ಸಾಂಸ್ಥೀಕರಣವನ್ನು ತೆಗೆದುಹಾಕುವುದನ್ನು ಸುಸ್ಥಿರಗೊಳಿಸಿದವು.[೪೬] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಾಂಸ್ಥೀಕರಣವನ್ನು ತೆಗೆದುಹಾಕುವ ಪ್ರಕ್ರಿಯೆ ಆರಂಭಗೊಂಡ ಮೂವತ್ಮೂರು ವರ್ಷಗಳ ನಂತರ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಶೇ. 19ರಷ್ಟು ರೋಗಿಗಳು ಮಾತ್ರವೇ ಉಳಿದರು.[೪೬] ರೋಗಿಗಳು ಸಮುದಾಯದಕ್ಕೆ ಬಿಡುಗಡೆಗೊಂಡ ನಂತರ ಅವರು ಚಿಕಿತ್ಸಾತ್ಮಕ ವಾತಾವರಣದಲ್ಲಿ ಬದುಕುತ್ತಲೇ ಸಹಜ ಜೀವನವನ್ನು ನಡೆಸುವ ಒಂದು ಪ್ರಕ್ರಿಯೆಯನ್ನು ಮಾನಸಿಕ ಆರೋಗ್ಯ ವೈದ್ಯರುಗಳು ಯೋಚಿಸಿದರು.[೪೬] ಆದರೆ ಸಮುದಾಯ-ಆಧಾರಿತ ಬೆಂಬಲ ಮತ್ತು ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಮನೋವೈದ್ಯರು ಟೀಕೆಗೊಳಗಾದರು. ಸಮುದಾಯ-ಆಧಾರಿತ ಸೌಲಭ್ಯಗಳು ಲಭ್ಯವಿರಲಿಲ್ಲ, ಏಕೆಂದರೆ ಒಳರೋಗಿಗಳು ಮತ್ತು ಸಮುದಾಯ-ಆಧಾರಿತ ಸಾಮಾಜಿಕ ಸೇವೆಗಳ ನಡುವೆ ಒಳಜಗಳವಿತ್ತು ಮತ್ತು ರೋಗಿಗಳನ್ನು ಬಿಡುಗಡೆ ಮಾಡುವ ಸಮುದಾಯ-ಆಧಾರಿತ ಸೌಲಭ್ಯಗಳಿಗೆ ಅಗತ್ಯ ಹಣಕಾಸನ್ನು ನೀಡಲು ಸಾಮಾಜಿಕ ಸೇವೆಗಳಿಗೆ ಮನಸ್ಸಿರಲಿಲ್ಲ.

ಸಾಂಸ್ಥೀಕರಣದ ಆಚೆಗೆ ಮತ್ತು ನಂತರದ ಪರಿಣಾಮ

ಬದಲಾಯಿಸಿ

1963ರಲ್ಲಿ, ಅಮೆರಿಕಾದ ಅಧ್ಯಕ್ಷ ಜಾನ್ ಎಫ್. ಕೆನಡಿ ಯವರು ಸರ್ಕಾರಿ ಮನೋವೈದ್ಯಕೀಯ ಆಸ್ಪತ್ರೆಗಳಿಂದ ಬಿಡುಗಡೆಗೊಂಡ ವ್ಯಕ್ತಿಗಳಿಗಾಗಿ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರಗಳನ್ನು ನಡೆಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ಯಡಿಯಲ್ಲಿ ಶಾಸನವನ್ನು ರೂಪಿಸಿದರು.[೪೬] ತದನಂತರ, ಮಾನಸಿಕ ಆರೋಗ್ಯ ಕೇಂದ್ರಗಳ ಮುಖ್ಯಗಮನವು ತೀವ್ರತರದ ಮಾನಸಿಕ ಅಸ್ವಸ್ಥತೆಗಳಿಂದ ಬಳಸುತ್ತಿರುವವರಿಗೆ ಮನೋಚಿಕಿತ್ಸೆ ಕೂಟ/ಸೆಶನ್‌ಗಳನ್ನು ನೀಡುವುದರತ್ತ ಹರಿಯಿತು.[೪೬] ಅಂತಿಮವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ತೀವ್ರತರದ, ಉಲ್ಭಣಾವಸ್ಥೆಯಲ್ಲಿದ್ದ ಮಾನಸಿಕ ರೋಗಿಗಳಿಗೆ ಯಾವುದೇ ವ್ಯವಸ್ಥೆಯನ್ನೂ ಮಾಡಲಿಲ್ಲ.[೪೬] ಮಾನಸಿಕ ಅಸ್ವಸ್ಥತೆಗಳಿಂದ ನರಳುತ್ತಿದ್ದ ಇವರಲ್ಲಿ ಕೆಲವರು ಮನೆಯಿಲ್ಲದ ನಿರ್ಗತಿಕರಾದರು ಅಥವಾ ಜೈಲುಗಳನ್ನು ಸೇರುವಂತಾಯಿತು.[೪೬][೪೮] ಮನೆಯಿಲ್ಲದ ಶೇ. 33ರಷ್ಟು ಜನರು ಮತ್ತು ಜೈಲಿನ ಶೇ. 14ರಷ್ಟು ಬಂದಿಗಳು ಮಾನಸಿಕ ರೋಗವಿದೆಯೆಂದು ರೋಗನಿದಾನವಾದ ವ್ಯಕ್ತಿಗಳು ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ.[೪೬][೪೯]

 1972ರಲ್ಲಿ, ಮನೋವೈದ್ಯರಾದ ಡೇವಿಡ್ ರೋಸೆನ್‌ಹನ್    ರೋಸೆನ್‌ಹನ್ ಪ್ರಯೋಗ ವನ್ನು ಪ್ರಕಟಿಸಿದರು. ಇದರಲ್ಲಿ ಅವರು ಮನೋವೈದ್ಯಕೀಯದ ರೋಗನಿದಾನದ ಮೌಲಿಕತೆಯನ್ನು ವಿಶ್ಲೇಷಿಸಿ, ಅಧ್ಯಯನ ಮಾಡಿದ್ದಾರೆ.[೫೦] ಈ ಅಧ್ಯಯನವು ಮನೋರೋಗವಿಜ್ಞಾನದ ಯಾವುದೇ ಇತಿಹಾಸವಿಲ್ಲದ ಎಂಟು ವ್ಯಕ್ತಿಗಳನ್ನು ಮನೋವೈದ್ಯಕೀಯದ ಆಸ್ಪತ್ರೆಗಳಿಗೆ ಸೇರಿಸುವ ವ್ಯವಸ್ಥೆಯನ್ನು ಮಾಡಿತು.  ಈ ವ್ಯಕ್ತಿಗಳಲ್ಲಿ ಒಬ್ಬರು ಮನೋವೈದ್ಯರನ್ನೂ ಒಳಗೊಂಡಂತೆ ಒಬ್ಬರು ಪದವಿ ವಿದ್ಯಾರ್ಥಿ, ಮನಶ್ಯಾಸ್ತ್ರಜ್ಞರು, ಒಬ್ಬರು ಕಲಾವಿದರು, ಒಬ್ಬರು ಗೃಹಣಿ ಮತ್ತು ಇಬ್ಬರು ವೈದ್ಯರು ಇದ್ದರು.   ಈ ಎಲ್ಲ ಎಂಟು ವ್ಯಕ್ತಿಗಳೂ ಛಿದ್ರಮನಸ್ಕತೆ (ಸ್ಕೀಜೋಫ್ರೇನಿಯಾ) ಅಥವಾ ಖೇದವಿಕಲ್ಪ ಅಸ್ವಸ್ಥತೆ (ಬೈಪೋಲಾರ್ ಡಿಸ್‌ಆರ್ಡರ್‌) ಎಂದು ರೋಗನಿದಾನ ಮಾಡಿ ಆಸ್ಪತ್ರೆಗೆ ಸೇರಿಸಲಾಯಿತು.   ನಂತರ ಮನೋವೈದ್ಯರು ಈ ವ್ಯಕ್ತಿಗಳಿಗೆ ಮನೋವೈದ್ಯಕೀಯದ ಔಷಧಿಗಳನ್ನು ನೀಡಿ ಗುಣಪಡಿಸಲು ಪ್ರಯತ್ನಿಸಿದರು.   ಎಲ್ಲ ಎಂಟು ಜನರನ್ನೂ 7ರಿಂದ 52 ದಿನಗಳ ಒಳಗೆ ಬಿಡುಗಡೆ ಮಾಡಲಾಯಿತು.   ಅಧ್ಯಯನದ ನಂತರದ ಭಾಗ ದಲ್ಲಿ, ಮನೋವೈದ್ಯಕೀಯದ ಸಿಬ್ಬಂದಿಗೆ ಸುಳ್ಳು-ರೋಗಿಗಳನ್ನು ಅವರ ಸಂಸ್ಥೆಗಳಿಗೆ ಕಳುಹಿಸಬಹುದು ಎಂದು ಎಚ್ಚರಿಕೆ ನೀಡಲಾಯಿತು, ಆದರೆ ನಿಜಕ್ಕೂ ಯಾರನ್ನೂ ಕಳುಹಿಸಲಿಲ್ಲ.   ಆದಾಗ್ಯೂ, ಕೊನೇಪಕ್ಷ ಒಬ್ಬರು ಸಿಬ್ಬಂದಿಯಾದರೂ 193ರಲ್ಲಿ 83 ರೋಗಿಗಳು ಸುಮ್ಮನೆ ರೋಗವನ್ನು ನಟಿಸುತ್ತಾರೆ ಎಂದು ನಂಬಿದ್ದರು.    ಮಾನಸಿಕ ಅಸ್ವಸ್ಥತೆಗಳಿಲ್ಲದ ವ್ಯಕ್ತಿಗಳಿಗೆ ಮತ್ತು ಮಾನಸಿಕ ಅಸ್ವಸ್ಥತೆಗಳಿಂದ ನರಳುತ್ತಿರುವವರಿಗೆ ಬಹಳ ವ್ಯತ್ಯಾಸವೇನಿಲ್ಲ ಎಂದು ಅಧ್ಯಯನವು ನಿರ್ಣಯಿಸಿತು.[೫೦]  ರಾಬರ್ಟ್‌ ಸ್ಪಿಟ್ಜರ್ ಅವರಂತಹ ಕೆಲವು ವಿಮರ್ಶಕರು ಅಧ್ಯಯನದ ಮೌಲಿಕತೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ, ಆದರೆ ಮನೋವೈದ್ಯಕೀಯದ ರೋಗನಿದಾನದ ಸಮಂಜಸತೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.[೫೧]

ಹಲವಾರು ವೈದ್ಯಕೀಯ ತಜ್ಞಕ್ಷೇತ್ರಗಳ ಹಾಗೆಯೇ ಮನೋವೈದ್ಯಶಾಸ್ತ್ರವು ವಿವಿಧ ಮನೋರೋಗಗಳು, ಅವುಗಳ ವರ್ಗೀಕರಣ ಮತ್ತು ಚಿಕಿತ್ಸೆಗಳಿಗೆ ನಿರಂತರ, ಮಹತ್ವದ ಸಂಶೋಧನೆಯ ಅಗತ್ಯವನ್ನು ಹೊಂದಿದೆ.[೫೨] ಮನೋವೈದ್ಯಶಾಸ್ತ್ರವು ರೋಗಗಳು ಮತ್ತು ಆರೋಗ್ಯವು ವ್ಯಕ್ತಿಯು ಒಂದು ಪರಿಸರಕ್ಕೆ ಹೊಂದಿಕೊಳ್ಳುವ ಎರಡು ಭಿನ್ನ ಅಂಶಗಳು ಎಂಬ ಜೀವವಿಜ್ಞಾನದ ಮೂಲ ನಂಬಿಕೆಯನ್ನು ಆಧರಿಸಿದೆ.[೫೩] ಆದರೆ ಮನುಷ್ಯರ ಪರಿಸರವು ಬಹಳ ಸಂಕೀರ್ಣವಾಗಿದೆ ಮತ್ತು ಅದು ಭೌತಿಕ, ಸಾಂಸ್ಕೃತಿಕ ಮತ್ತು ಅಂತರ-ವೈಯಕ್ತಿಕ ಅಂಶಗಳನ್ನು ಒಳಗೊಂಡಿದೆ ಎಂಬುದನ್ನೂ ಮನೋವೈದ್ಯಶಾಸ್ತ್ರವು ಗುರುತಿಸುತ್ತದೆ.[೫೩] ಬಾಹ್ಯ ಅಂಶಗಳ ಜೊತೆಗೆ ಮಾನವ ಮಿದುಳು ವ್ಯಕ್ತಿಯ ಆಶಯಗಳು, ಭಯ, ಆಕಾಂಕ್ಷೆಗಳು, ಕಲ್ಪನೆಗಳು ಮತ್ತು ಭಾವನೆಗಳನ್ನು ಹೊಂದಿದೆ ಮತ್ತು ಇವುಗಳನ್ನು ವ್ಯವಸ್ಥಿತವಾಗಿಡುತ್ತದೆ.[೫೩] ಮನೋವೈದ್ಯಶಾಸ್ತ್ರದ ಕಷ್ಟಕರ ಕೆಲಸವೆಂದರೆ ಈ ಅಂಶಗಳ ಮಧ್ಯೆ ಸಂಬಂಧ ಕಲ್ಪಿಸುವುದು ಮತ್ತು ಅವುಗಳನ್ನು ವೈದ್ಯಕೀಯವಾಗಿ ಹಾಗೂ ಶಾರೀರಿಕವಾಗಿ, ಎರಡೂ ರೀತಿಯಿಂದ ಅಧ್ಯಯನ ಮಾಡಲು ಸಾಧ್ಯವಾಗುವಂತೆ ಮಾಡುವುದು.[೫೩]

ಸಿದ್ಧಾಂತ ಮತ್ತು ಗಮನಕೇಂದ್ರ

ಬದಲಾಯಿಸಿ

ವೈದ್ಯಕೀಯದ ಬೇರೆ ಯಾವುದೇ ಶಾಖೆಗಿಂತ, "ಮನೋವೈದ್ಯಶಾಸ್ತ್ರವು, ತನ್ನ ವೈದ್ಯರಿಗೆ ಪುರಾವೆಯ ಲಕ್ಷಣ, ಅವಲೋಕನದ ಮೌಲಿಕತೆ, ಸಂವಹನದಲ್ಲಿರುವ ಸಮಸ್ಯೆಗಳು, ಇನ್ನಿತರ ದೀರ್ಘಕಾಲದ ದೈಹಿಕ ಸಮಸ್ಯೆಗಳನ್ನು ಹೆಚ್ಚು ಅರಿಯಲು ಪ್ರಯತ್ನಿಸುವಂತೆ ಒತ್ತಾಯಿಸುತ್ತದೆ.(ಗಜ್‌, 1992, ಪು.4).

 ಮನೋವೈದ್ಯಶಾಸ್ತ್ರ ಎಂಬ ಪದವನ್ನು (ಗ್ರೀಕ್ "ψυχιατρική", ಸೈಕಿಯಾಟ್ರಿಕ್ ),  ಜೊಹಾನ್ ಕ್ರಿಸ್ಟಿಯನ್ ರೀಲ್ 1808ರಲ್ಲಿ ಹುಟ್ಟುಹಾಕಿದನು. ಇದು ಗ್ರೀಕ್ "ψυχή" (ಸೈಕ್ : "ಆತ್ಮ ಅಥವಾ ಮನಸ್ಸು") ಮತ್ತು "ιατρός" (ಇಯಾಟ್ರೊಸ್ : "ಚಿಕಿತ್ಸಕ") ಎಂಬುದರಿಂದ ಬಂದಿದೆ.[೫೪][೫೫][೫೬] ಇದು ಮನಸ್ಸಿನ ಮೇಲೆ ವಿಶೇಷವಾಗಿ ಗಮನಕೇಂದ್ರೀಕರಿಸಿದ ವೈದ್ಯಕೀಯ ಕ್ಷೇತ್ರವಾಗಿದ್ದು, ಮನುಷ್ಯರಲ್ಲಿ ಮಾನಸಿಕ ಅಸ್ವಸ್ಥತೆಗಳ ಅಧ್ಯಯನ, ತಡೆಗಟ್ಟುವುದು, ಮತ್ತು ಚಿಕಿತ್ಸೆ ನೀಡುವಿಕೆಯನ್ನು ಗುರಿಯಾಗಿರಿಸಿಕೊಂಡಿದೆ.[೫೭][೫೮][೫೯] ಇದನ್ನು ಸಾಮಾಜಿಕ ಸಂದರ್ಭದ ದೃಷ್ಟಿಯಿಂದ ಕಾಣುವ ವಿಶ್ವ ಮತ್ತು ಮಾನಸಿಕವಾಗಿ ಅನಾರೋಗ್ಯಗೊಂಡಿರುವವರ ದೃಷ್ಟಿಯಿಂದ ಕಾಣುವ ವಿಶ್ವ, ಈ ಎರಡರ ನಡುವಣ ಮಧ್ಯವರ್ತಿ ಎಂದು ವಿವರಿಸಲಾಗಿದೆ.[೬೦]
ಮನೋವೈದ್ಯಶಾಸ್ತ್ರವನ್ನು ವೃತ್ತಿಯಾಗಿ ತೆಗೆದುಕೊಂಡವರು  ಇನ್ನಿತರ ಮಾನಸಿಕ ಆರೋಗ್ಯ ವೈದ್ಯ ರು ಮತ್ತು ವೈದ್ಯರಿಂದ ಭಿನ್ನವಾಗಿರುತ್ತಾರೆ, ಏಕೆಂದರೆ ಅವರು ಸಾಮಾಜಿಕ ಮತ್ತು ಜೀವವಿಜ್ಞಾನ ಎರಡನ್ನೂ ಚೆನ್ನಾಗಿ ಅರಿತಿರಬೇಕಾಗುತ್ತದೆ.[೫೮] ಈ ವಿಷಯವು ವಿವಿಧ ಅಂಗಾಂಗಗಳ ಮತ್ತು ರೋಗಿಯ ವೈಯಕ್ತಿಕ ಅನುಭವಗಳು ಮತ್ತು ರೋಗಿಯ ವಸ್ತುನಿಷ್ಟ ಶರೀರವಿಜ್ಞಾನದಿಂದ ವರ್ಗೀಕೃತಗೊಂಡ ಹಾಗೆ ದೇಹ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಆಸಕ್ತಿ ಹೊಂದಿದೆ.[೬೧] ಮನೋವೈದ್ಯಶಾಸ್ತ್ರವು ಮಾನಸಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲೆಂದು ಇದೆ ಮತ್ತು ಅನುಕೂಲಕ್ಕೆಂದು ಈ ಅಸ್ವಸ್ಥತೆಗಳನ್ನು ಮೂರು ಸಾಮಾನ್ಯ ವರ್ಗಗಳಾಗಿ ವಿಂಗಡಿಸಲಾಗಿದೆ: ಮಾನಸಿಕ ರೋಗ , ತೀವ್ರತರದ ಕಲಿಕಾ ಅಸಾಮರ್ಥ್ಯ, ಮತ್ತು ವ್ಯಕ್ತಿತ್ವ ಅವ್ಯವಸ್ಥೆ ಅಥವಾ ಅಸಮತೋಲನ.[೬೨]  ಮನೋವೈದ್ಯಶಾಸ್ತ್ರದ ಗಮನಕೇಂದ್ರವು ಕಾಲಾಂತರದಲ್ಲಿ ಹೆಚ್ಚೇನೂ ಬದಲಾವಣೆಗೊಂಡಿಲ್ಲ. ಆದರೆ ರೋಗನಿದಾನ ಮತ್ತು ಚಿಕಿತ್ಸಾ ಪ್ರಕ್ರಿಯೆಗಳು ಹಠಾತ್‌ಆಗಿ ವಿಕಾಸಗೊಂಡಿವೆ ಮತ್ತು ಮುಂದೆಯೂ ಹೀಗೆಯೇ ಆಗುತ್ತದೆ.    20ನೇ ಶತಮಾನದ ಕೊನೆಯಿಂದ, ಮನೋವೈದ್ಯಶಾಸ್ತ್ರದ ಕ್ಷೇತ್ರವು ಹೆಚ್ಚು ಹೆಚ್ಚು ಜೀವಶಾಸ್ತ್ರೀಯವಾಗಿದೆ ಮತ್ತು ಔಷಧಿಶಾಸ್ತ್ರ ಕ್ಷೇತ್ರದಿಂದ ಕಲ್ಪನಾತ್ಮಕವಾಗಿ ಹೆಚ್ಚು ಪ್ರತ್ಯೇಕಗೊಂಡಿಲ್ಲ.[೬೩]

ವೃತ್ತಿಯ ವ್ಯಾಪ್ತಿ

ಬದಲಾಯಿಸಿ
 
2002ರಲ್ಲಿ ಪ್ರತಿ 1,00,000 ಜನರಿಗೆ ನರಸಂಬಂಧಿ ಮನೋವ್ಯಾಧಿಯ ( ನ್ಯೂರೋಸೈಕಿಯಾಟ್ರಿಕ್)ಸ್ಥಿತಿ ಅಸಾಮರ್ಥ್ಯ-ಹೊಂದಾಣಿಕೆಯಾದ ಆಯುಷ್ಯ ವರ್ಷಗಳು. [118][119][120][121][122][123][124][125][126][127][128][129][130]
 ಮನೋವೈದ್ಯಶಾಸ್ತ್ರದ ವೈದ್ಯಕೀಯ ತಜ್ಞತೆಯು ನರವಿಜ್ಞಾನ, ಶರೀರವಿಜ್ಞಾನ, ಔಷಧಶಾಸ್ತ್ರ , ಜೀವವಿಜ್ಞಾನ, ಜೀವರಸಾಯನಶಾಸ್ತ್ರ, ಮತ್ತು ಔಷಧತಯಾರಿಕಾಶಾಸ್ತ್ರ (ಫಾರ್ಮಾಕಾಲಜಿ),[೬೪] ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಗಳನ್ನು ಬಳಕೆ ಮಾಡಿಕೊಳ್ಳುತ್ತದೆ ಮತ್ತು ಇದು  ನರಶಾಸ್ತ್ರ ಮತ್ತು ಮನಶ್ಯಾಸ್ತ್ರದ ಮಧ್ಯದ ನೆಲೆ ಎಂದು ಪರಿಗಣಿತವಾಗಿದೆ.[೬೫] ಬೇರೆ ವೈದ್ಯರು ಮತ್ತು ನರಶಾಸ್ತ್ರಜ್ಞರಂತೆ ಅಲ್ಲದೇ, ಮನೋವೈದ್ಯರು   ವೈದ್ಯ-ರೋಗಿ ಸಂಬಂಧದಲ್ಲಿ ತಜ್ಞತೆ ಹೊಂದಿರುತ್ತಾರೆ ಮತ್ತು  ಮನೋಚಿಕಿತ್ಸೆ ಮತ್ತು ಇನ್ನಿತರ ಚಿಕಿತ್ಸಾ ಸಂವಹನ ತಂತ್ರಗಳ ಬಳಕೆಯ ಪ್ರಮಾಣವನ್ನು ಮಾರ್ಪಾಡು ಮಾಡುವಲ್ಲಿ ತರಬೇತಿ ಹೊಂದಿರುತ್ತಾರೆ.[೬೫] ಮನೋವೈದ್ಯರಿಗೂ ಮತ್ತು ಮನಶ್ಯಾಸ್ತ್ರಜ್ಞರಿಗೂ ಭಿನ್ನತೆ ಇದೆ, ಇವರು ವೈದ್ಯರು ಮತ್ತು  ಇಡೀ ಅವರ ಸ್ನಾತಕೋತ್ತರ ತರಬೇತಿಯ ಔಷಧಶಾಸ್ತ್ರದ ಸುತ್ತಲೇ ಇರುತ್ತದೆ.[೬೬] ಆದ್ದರಿಂದ ಮನೋವೈದ್ಯರು ರೋಗಿಗಳಿಗೆ ಸಮಾಲೋಚನೆ ಮಾಡಬಲ್ಲರು, ಔಷಧಗಳನ್ನು ಹೇಳಬಲ್ಲರು, ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡುವಂತೆ, ನರವ್ಯೂಹ ಚಿತ್ರ (ನ್ಯೂರೋಇಮೇಜಿಂಗ್) ತೆಗೆದುಕೊಳ್ಳುವಂತೆ  ಮತ್ತು  ದೈಹಿಕ ಪರೀಕ್ಷೆಗಳನ್ನು ಮಾಡುವಂತೆ ಹೇಳುತ್ತಾರೆ.[೬೭]

ನೀತಿಶಾಸ್ತ್ರ

ಬದಲಾಯಿಸಿ

ಬೇರೆ ವೃತ್ತಿಗಳ ಹಾಗೆ, ಮನೋವೈದ್ಯರ ನಡವಳಿಕೆಯನ್ನು ನಿಯಂತ್ರಿಸಲು ವಿಶ್ವ ಮನೋವೈದ್ಯಶಾಸ್ತ್ರ ಸಂಘ ವು ನೀತಿ ಸಂಹಿತೆ ಯನ್ನು ರೂಪಿಸಿದೆ. ಮನೋವೈದ್ಯಶಾಸ್ತ್ರ ನೀತಿಸಂಹಿತೆಯು, ಮೊದಲು 1977ರಲ್ಲಿ ಹವಾಯ್ ಘೋಷಣೆಯ ಮೂಲಕ ರೂಪುಗೊಂಡಿತು ಮತ್ತು 1983ರ ವಿಯೆನ್ನಾ ಪರಿಷ್ಕರಣೆ ಮತ್ತು 1986ರಲ್ಲಿ ವಿಸ್ತೃತವಾದ ಮ್ಯಾಡ್ರಿಡ್ ಘೋಷಣೆಯ ಮೂಲಕ ಅದನ್ನು ವಿಸ್ತರಿಸಲಾಯಿತು. ಈ ಸಂಹಿತೆಯನ್ನು 1999ರಲ್ಲಿ ಹ್ಯಾಮ್‌ಬರ್ಗ್‌ನಲ್ಲಿ ಇನ್ನಷ್ಟು ಪರಿಷ್ಕರಿಸಲಾಯಿತು. ವಿಶ್ವ ಮನೋವೈದ್ಯಶಾಸ್ತ್ರ ಸಂಘದ ನೀತಿಸಂಹಿತೆಯು ರೋಗಿಗಳ ತಪಾಸಣೆ/ಪರೀಕ್ಷೆ, ಸದ್ಯೋಚಿತ (ಅಪ್‌--ಟು- ಡೇಟ್) ಜ್ಞಾನ, ಅಸಾಮರ್ಥ್ಯವುಳ್ಳ ರೋಗಿಗಳ ಮಾನವ ಘನತೆ, ಗೌಪ್ಯತೆ ಕಾಯ್ದುಕೊಳ್ಳುವುದು, ಸಂಶೋಧನಾ ನೀತಿಶಾಸ್ತ್ರ, ಲಿಂಗ ಆಯ್ಕೆ ಸುಖಮರಣ,[೬೮] ಅಂಗಾಂಗ ಕಸಿ, ಹಿಂಸೆ,[೬೯][೭೦] ಮರಣ ದಂಡನೆ, ಮಾಧ್ಯಮ ಸಂಬಂಧಗಳು, ತಳಿವಿಜ್ಞಾನ, ಮತ್ತು ಜನಾಂಗೀಯ ಅಥವಾ ಸಾಂಸ್ಕೃತಿಕ ತಾರತಮ್ಯ ಇತ್ಯಾದಿ ಅನೇಕ ವಿಷಯಗಳನ್ನು ಒಳಗೊಂಡಿದೆ.[೭೧] ಅಂತಹ ನೀತಿ ಸಂಹಿತೆಗಳನ್ನು ಹುಟ್ಟುಹಾಕುವಲ್ಲಿ, ಮನೋವೈದ್ಯಶಾಸ್ತ್ರದ ಆಚರಣೆಯ ಕುರಿತ ಅನೇಕ ವಿವಾದಗಳಿಗೆ ಈ ವೈದ್ಯವೃತ್ತಿಯು ಪ್ರತಿಕ್ರಿಯಿಸಿದೆ.

ಉಪತಜ್ಞತೆಗಳು

ಬದಲಾಯಿಸಿ

ಮನೋವೈದ್ಯಶಾಸ್ತ್ರದ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ವಿವಿಧ ಉಪತಜ್ಞತೆಗಳು ಮತ್ತು/ಅಥವಾ ಸೈದ್ಧಾಂತಿಕ ದೃಷ್ಟಿಕೋನಗಳು ಇವೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿವೆ:

  • ದುಶ್ಚಟ ಕುರಿತ ಮನೋವೈದ್ಯಶಾಸ್ತ್ರ; ಇದು ಮದ್ಯ, ಮಾದಕದ್ರವ್ಯಗಳು ಅಥವಾ ಇನ್ನಿತರ ವಸ್ತುಗಳಿಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಮೌಲ್ಯಾಂಕನ ಮಾಡಿ, ಚಿಕಿತ್ಸೆ ನೀಡುವುದರ ಮೇಲೆ ಗಮನಕೇಂದ್ರೀಕರಿಸಿದೆ. ಜೊತೆಗೆ ವಸ್ತು-ಸಂಬಂಧಿತ ವ್ಯಾಧಿ ಮತ್ತು ಇನ್ನಿತರ ಮನೋವ್ಯಾಧಿ, ಎರಡನ್ನೂ ಹೊಂದಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವುದನ್ನೂ ಇದು ಒಳಗೊಂಡಿದೆ.
  • ಜೀವಶಾಸ್ತ್ರೀಯ ಮನೋವೈದ್ಯಶಾಸ್ತ್ರ; ಇದು ನರಮಂಡಲ ವ್ಯವಸ್ಥೆಯ ಜೀವಶಾಸ್ತ್ರೀಯ ಕಾರ್ಯನಿರ್ವಹಣೆಯ ರೂಪದಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಮನೋವೈದ್ಯಶಾಸ್ತ್ರದ ಒಂದು ದೃಷ್ಟಿಕೋನವಾಗಿದೆ.
  • ಮಗು ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ; ಇದು ಮನೋವೈದ್ಯಶಾಸ್ತ್ರದ ಒಂದು ಶಾಖೆಯಾಗಿದ್ದು, ಮಕ್ಕಳು, ಹದಿಹರೆಯದವರು ಮತ್ತು ಅವರ ಕುಟುಂಬಗಳೊಂದಿಗೆ ಕೆಲಸ ಮಾಡಲು ಪರಿಣತಿ ಒದಗಿಸುತ್ತದೆ.
  • ಸಮುದಾಯ ಮನೋವೈದ್ಯಶಾಸ್ತ್ರ; ಒಂದು ಸಮಗ್ರ ಆರೋಗ್ಯ ದೃಷ್ಟಿಕೋನವನ್ನು ಪ್ರತಿಫಲಿಸುವ ಒಂದು ಪರಿಕಲ್ಪನೆಯಾಗಿದ್ದು, ಸಮುದಾಯ ಮಾನಸಿಕ ಆರೋಗ್ಯ ಸೇವೆಗಳಲ್ಲಿ ಬಳಕೆಯಾಗುತ್ತದೆ.[೭೨]
  • ಕ್ರಾಸ್ -ಸಾಂಸ್ಕೃತಿಕ ಮನೋವೈದ್ಯಶಾಸ್ತ್ರ; ಇದು ಮಾನಸಿಕ ಅಸ್ವಸ್ಥತೆ ಮತ್ತು ಮನೋವೈದ್ಯಕೀಯ ಸೇವೆಗಳಲ್ಲಿ ಜನಾಂಗೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಗೆ ಸಂಬಂಧಿಸಿದಂತೆ ಇರುವ ಮನೋವೈದ್ಯಶಾಸ್ತ್ರದ ಶಾಖೆಯಾಗಿದೆ.
  • ತಿನ್ನುವ ಅಸ್ವಸ್ಥತೆ ; ಇದು ಆಹಾರಮಾಂದ್ಯ (ಅನೆರೆಕ್ಸಿಯಾ ನೆರ್ವೊಸ) ಅಂದರೆ ಮಾನಸಿಕ ಕಾರಣಗಳಿಂದಾಗಿ ಹಸಿವಾಗದಿರುವುದು, ಅತಿಹಸಿವೆ (ಬುಲಿಮಿಯ ನರ್ವೊಸ), ಅತಿಯಾಗಿ ತಿನ್ನುವ ಕಾಯಿಲೆ, ನಿರ್ದಿಷ್ಟವಾಗಿ ಇಂತಹುದೇ ಎಂದು ಹೇಳಲಾಗದ ತಿನ್ನುವ ಅಸ್ವಸ್ಥತೆ (EDNOS) ಮತ್ತು ಪೈಕಾ ಅಸ್ವಸ್ಥತೆ ಅಂದರೆ ಮಾಮೂಲಿ ತಿನ್ನುವ ಆಹಾರ ಬಿಟ್ಟು ಬೇರೆ ತಿನ್ನುವುದು ಇಂತಹ ನಿರ್ದಿಷ್ಟ ಅಸ್ವಸ್ಥತೆ, ಇವುಗಳ ಕುರಿತು ಕೇಂದ್ರೀಕರಿಸುತ್ತದೆ.
  • ತುರ್ತು ಮನೋವೈದ್ಯಶಾಸ್ತ್ರ; ಇದು ತುರ್ತು ಸಂದರ್ಭಗಳಲ್ಲಿ ಮನೋವೈದ್ಯಶಾಸ್ತ್ರದ ಪ್ರಾಯೋಗಿಕ (ಕ್ಲಿನಿಕಲ್) ಅನ್ವಯಿಕತೆಯಾಗಿದೆ.
  • ನ್ಯಾಯಾಸ್ಥಾನಿಕ (ಫಾರೆನ್ಸಿಕ್) ಮನೋವೈದ್ಯಶಾಸ್ತ್ರ; ಇದು ಕಾನೂನು ಮತ್ತು ಮತ್ತು ಮನೋವೈದ್ಯಶಾಸ್ತ್ರದ ಅಂತರಕ್ರಿಯೆಯಾಗಿದೆ (ಇಂಟರ್‌‌‌ಫೇಸ್).
  • ವೃದ್ಯಾಪ್ಯದ ಮನೋವೈದ್ಯಶಾಸ್ತ್ರ; ವೃದ್ಯಾಪ್ಯದಲ್ಲಿರುವ ವ್ಯಕ್ತಿಗಳ ಮಾನಸಿಕ ಅಸ್ವಸ್ಥತೆಗಳ ಅಧ್ಯಯನ, ಅದನ್ನು ತಡೆಗಟ್ಟುವುದು ಚಿಕಿತ್ಸೆಗೆ ಸಂಬಂಧಿಸಿದ ಮನೋವೈದ್ಯಶಾಸ್ತ್ರ ಶಾಖೆ.
  • ಜಾಗತಿಕ ಮಾನಸಿಕ ಆರೋಗ್ಯ ; ಇದು ವಿಶ್ವಾದ್ಯಂತದ ಎಲ್ಲ ಜನರಿಗೆ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುವ ಮತ್ತು ಮಾನಸಿಕ ಆರೋಗ್ಯದ ಸಮತೆಯನ್ನು ಸಾಧಿಸುವ ದಿಕ್ಕಿನಲ್ಲಿ ಅದ್ಯಯನ, ಸಂಶೋಧನೆ ಮತ್ತು ಆಚರಣೆಗಳಿಗೆ ಹೆಚ್ಚಿನ ಆದ್ಯತೆ ಕೊಡುವ ಮನೋವೈದ್ಯಶಾಸ್ತ್ರದ ಶಾಖೆಯಾಗಿದೆ.[೭೩]
  • ಸಂಬಂಧಗಳ ಕುರಿತಾದ ಮನೋವೈದ್ಯಶಾಸ್ತ್ರ; ಇದು ಬೇರೆ ವೈದ್ಯಕೀಯ ತಜ್ಞತೆಗಳು ಮತ್ತು ಮನೋವೈದ್ಯಶಾಸ್ತ್ರದ ಮಧ್ಯದ ಅಂತರಕ್ರಿಯೆಯ ಕುರಿತು ವಿಶೇಷಜ್ಞಾನ ನೀಡುವ ಮನೋವೈದ್ಯಶಾಸ್ತ್ರದ ಶಾಖೆಯಾಗಿದೆ.
  • ಸೇನಾ ಮನೋವೈದ್ಯಶಾಸ್ತ್ರ; ಇದು ಸೇನೆಯ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥತೆಗಳು ಮತ್ತು ಮನೋವೈದ್ಯಶಾಸ್ತ್ರದ ವಿಶೇಷ ಅಂಶಗಳನ್ನು ಒಳಗೊಂಡಿದೆ.
  • ನರ ಮನೋವೈದ್ಯಶಾಸ್ತ್ರ; ನರ ಮಂಡಲದ ಕಾಯಿಲೆಯಿಂದ ಉಂಟಾಗುವ ಮಾನಸಿಕ ಅಸ್ವಸ್ಥತೆಗಳೊಂದಿಗೆ ವ್ಯವಹರಿಸುವ ವೈದ್ಯಕೀಯ ವಿಭಾಗವಾಗಿದೆ.
  • ಸಾಮಾಜಿಕ ಮನೋವೈದ್ಯಶಾಸ್ತ್ರ; ಇದು ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ಆರೋಗ್ಯದ ಅಂತರಸಂಬಂಧಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಮೇಲೆ ಗಮನಕೇಂದ್ರೀಕರಿಸುವ ಮನೋವೈದ್ಯಶಾಸ್ತ್ರದ ಶಾಖೆಯಾಗಿದೆ.

ಅಮೆರಿಕದಲ್ಲಿ ಮನೋವೈದ್ಯಶಾಸ್ತ್ರವು ತಜ್ಞತೆಗಳಲ್ಲಿ ಒಂದಾಗಿದ್ದು, ನೋವು ಔಷಧಶಾಸ್ತ್ರ, ಉಪಶಾಮಕ , ಮತ್ತು ನಿದ್ರೆ ಔಷಧಶಾಸ್ತ್ರ ದಲ್ಲಿ ಅದು ಹೆಚ್ಚಿನ ಶಿಕ್ಷಣಕ್ಕಾಗಿ ಮತ್ತು ವಿಸ್ತೃತ-ಪ್ರಮಾಣೀಕರಣಕ್ಕಾಗಿ ಅರ್ಹಗೊಳಿಸುತ್ತದೆ.

ದೃಷ್ಟಿಕೋನಗಳು

ಬದಲಾಯಿಸಿ

ಮಾನಸಿಕ ಅಸ್ವಸ್ಥತೆಯನ್ನು ವಿವಿಧ ಬಗೆಯ ದೃಷ್ಟಿಕೋನಗಳಿಂದ ನೋಡಬಹುದಾಗಿದೆ. ಜೀವಔಷಧೀಯ (ಬಯೋಮೆಡಿಕಲ್ ದೃಷ್ಟಿಕೋನವು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಪರೀಕ್ಷಿಸುತ್ತದೆ ಮತ್ತು ಅವುಗಳನ್ನು ರೋಗನಿದಾನದ ಮಾನದಂಡಗಳೊಡನೆ ಹೋಲಿಸುತ್ತದೆ. ಮಾನಸಿಕ ಅಸ್ವಸ್ಥತೆಯ ರೋಗಲಕ್ಷಣಗಳನ್ನು ಒಂದು ಅರ್ಥಪೂರ್ಣ ಬದುಕಿನ ಇತಿಹಾಸದ ಭಾಗವಾಗಿ ಮತ್ತು ಬಾಹ್ಯ ಪರಿಸ್ಥಿತಿಗಳಿಗೆ ಒಂದು ಪ್ರತಿಕ್ರಿಯೆಯ ಭಾಗವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಒಂದು ನಿರೂಪಣೆಯ ಮೂಲಕವೂ ನಿರ್ಣಯಿಸಬಹುದು. ಮನೋವೈದ್ಯಶಾಸ್ತ್ರದ ಕ್ಷೇತ್ರದಲ್ಲಿ ಎರಡೂ ದೃಷ್ಟಿಕೋನಗಳು ಬಹಳ ಮುಖ್ಯ.[೭೪] ಹೆಚ್ಚಿನವೇಳೆ ಈ ಎರಡೂ ವಿರುದ್ಧ ದೃಷ್ಟಿಕೋನಗಳ ಮಧ್ಯೆ ಸಹಮತದ ಕೊರತೆಯು ಜೀವಮನೋವೈದ್ಯಶಾಸ್ತ್ರ ವಿವಾದ ಗಳಿಗೆ ಭಾಗಶಃ ಕಾರಣವಾಗಿವೆ. ಇವು ಎಡಿಎಚ್‌ಡಿ (ADHD) ಮತ್ತು ಬಹುವ್ಯಕ್ತಿತ್ವಗಳು, ಇಂತಹ ನಿರ್ದಿಷ್ಟ ಮಾನಸಿಕ ಅಸ್ವಸ್ಥತೆಯ ಕುರಿತ ವಿವಾದಗಳಲ್ಲಿ ಒಂದು ಪಾತ್ರವನ್ನೂ ವಹಿಸಿವೆ. ಜೀವಮಾನಸಿಕ ಮಾದರಿಯನ್ನು ಹೆಚ್ಚಾಗಿ ಮಾನಸಿಕ ಅಸ್ವಸ್ಥತೆಯನ್ನು ಅರ್ಥ ಮಾಡಿಕೊಳ್ಳಲು ಬಳಸಲಾಗುತ್ತದೆ. ಡಾ. ನಿಯಲ್ ಮೆಕ್ ಲರೆನ್ ಅವರ 1998 ಲೇಖನ, ಎ ಕ್ರಿಟಿಕಲ್ ರಿವ್ಯೂ ಆಫ್ ದಿ ಜೀವಮಾನಸಿಕ ಮಾಡೆಲ್ ನಲ್ಲಿ [೭೫] ಮತ್ತು ಅವರ ಹ್ಯೂಮನೈಜಿಂಗ್ ಮ್ಯಾಡ್‌ನೆಸ್ ಮತ್ತು ಹ್ಯೂಮನೈಜಿಂಗ್ ಮನೋವೈದ್ಯಶಾಸ್ತ್ರ ಪುಸ್ತಕಗಳಲ್ಲಿ "ಮಾದರಿ"ಗಳ ವೈಜ್ಞಾನಿಕ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗಿದೆ. ಸರಳವಾಗಿ ಹೇಳಬೇಕೆಂದರೆ, ಸಮಾಜಶಾಸ್ತ್ರ, ಮನಶ್ಯಾಸ್ತ್ರ ಮತ್ತು ಜೀವಶಾಸ್ತ್ರಗಳು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳಾದರೂ, ಈ ಸುವ್ಯಕ್ತ ಅಂಶವನ್ನು ಸುಮ್ಮನೇ ಹೇಳುವುದು ಅದನ್ನು ಆ ಪದದ ವೈಜ್ಞಾನಿಕ ಅರ್ಥದಲ್ಲಿ ಅದನ್ನೊಂದು ಮಾದರಿಯನ್ನಾಗಿ ಮಾಡುವುದಿಲ್ಲ. ವೈಜ್ಞಾನಿಕ ಮಾದರಿಗಳು ವೈಜ್ಞಾನಿಕ ಸಿದ್ಧಾಂತದ ವಾಸ್ತವೀಕರಣ ಎಂಬಂತೆ ಇರಬೇಕು ಮತ್ತು ಜೀವಮಾನಸಿಕ ಮಾದರಿಯು "ವಿವೇಕಯುಕ್ತ ಸಂವೇದನಾಶೀಲತೆ ಇರುವ ಎಲ್ಲ ವೈದ್ಯರು" (ಸಾಮಾಜಿಕ ಮತ್ತು ಮಾನಸಿಕ ಅಂಶಗಳು ಗಮನಾರ್ಹವಾದದ್ದು ಎಂದು)ನಿಸ್ಸಂದಿಗ್ಧವಾಗಿ ಅರಿತಿರಬೇಕು ಎಂಬದನ್ನು ಒತ್ತಿಹೇಳುವ ಹೊರತಾಗಿ ಮತ್ತೇನನ್ನೂ ವಾಸ್ತವದಲ್ಲಿ ಹೇಳುವುದಿಲ್ಲ.[೭೫][೭೬] [೭೭]

ಉದ್ಯಮ ಮತ್ತು ಶಿಕ್ಷಣಸಂಸ್ಥೆಗಳು

ಬದಲಾಯಿಸಿ

ಚಿಕಿತ್ಸಕರು

ಬದಲಾಯಿಸಿ

ಎಲ್ಲ ವೈದ್ಯರೂ ಮಾನಸಿಕ ಅಸ್ವಸ್ಥತೆಗಳನ್ನು ರೋಗನಿದಾನ ಮಾಡಬಲ್ಲರು ಮತ್ತು ಮನೋವೈದ್ಯಶಾಸ್ತ್ರದ ತತ್ವಗಳನ್ನು ಬಳಸಿಕೊಂಡು ಚಿಕಿತ್ಸೆಗಳನ್ನು ಸೂಚಿಸಬಲ್ಲರು. ಮನೋವೈದ್ಯರು ಎಂದರೆ : 1) ಮನೋವೈದ್ಯಶಾಸ್ತ್ರದಲ್ಲಿ ತಜ್ಞತೆ ಪಡೆದ ಮತ್ತು ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡುವುದರಲ್ಲಿ ಪ್ರಮಾಣಪತ್ರವನ್ನು ಪಡೆದಿರುವ ವೈದ್ಯರು  ;[೭೮] ಅಥವಾ 2) ಮನೋವೈದ್ಯಶಾಸ್ತ್ರದ ಶೈಕ್ಷಣಿಕ ಕ್ಷೇತ್ರದಲ್ಲಿರುವ ವಿಜ್ಞಾನಿಗಳು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನಾ ವೈದ್ಯರೆಂದು ಪ್ರಮಾಣಿತಗೊಂಡವರು. ಮನೋವೈದ್ಯರು ಮನೋಚಿಕಿತ್ಸೆ , ಮನೋವಿಶ್ಲೇಷಣೆ ಮತ್ತು ಜ್ಞಾನಗ್ರಹಣ ವರ್ತನಾ ಚಿಕಿತ್ಸೆ ಯನ್ನು ನಡೆಸಲು ಮಹತ್ವದ ತರಬೇತಿಯನ್ನೂ ಪಡೆಯಬಹುದು, ಆದರೆ ವೈದ್ಯರಾಗಿ ಅವರ ತರಬೇತಿಯು ಬೇರೆ ಮಾನಸಿಕ ಆರೋಗ್ಯ ವೃತ್ತಿಪರರಿಂದ ಅವರನ್ನು ಪ್ರತ್ಯೇಕಿಸುತ್ತದೆ.[೭೮]

ಸಂಶೋಧನೆ

ಬದಲಾಯಿಸಿ
 
ಮಿದುಳಿನ ಎಂಆರ್‌ಐ ಸ್ಕ್ಯಾನ್ : ಅನೇಕ ಮಾನಸಿಕ ಅಸ್ವಸ್ಥತೆಗಳು ನರಸಂಬಂಧಿಜೈವಿಕ ಅಸಹಜತೆಗಳೊಂದಿಗೆ ಸೇರಿರುತ್ತವೆ ಎಂದು ಯೋಚಿಸಲಾಗಿದೆ. <ಉಲ್ಲೇಖ ಹೆಸರು=ಹೆಡ್ಜ್‌ಸ್ 64>ಹೆಡ್ಜ್‌ಸ್ ,ಡಿ.; ಬರ್ಚ್‌ಫೀಲ್ಡ್, ಸಿ. C. (2006). ಮನಸ್ಸು, ಮಿದುಳು ಮತ್ತು ಔಷಧ : ಮನೋಔಷಧಶಾಸ್ತ್ರಕ್ಕೆ ಒಂದು ಪರಿಚಯ . ಬೋಸ್ಟನ್ : ಪಿಯರ್‌ಸನ್ ಎಜುಕೇಶನ್, ಪು. 64,65. ISBN 978-0-205-35556-3</ಉಲ್ಲೇಖ>

ಮನೋವೈದ್ಯಶಾಸ್ತ್ರೀಯ ಸಂಶೋಧನೆಯು ತನ್ನ ಮೂಲ ಲಕ್ಷಣದಲ್ಲಿಯೇ ಅಂತರಶಿಸ್ತು ಲಕ್ಷಣವನ್ನು ಹೊಂದಿದೆ. ಅದು ಮಾನಸಿಕ ಅಸ್ವಸ್ಥತೆಯ ಲಕ್ಷಣವನ್ನು ಮತ್ತು ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳಲು, ಸಾಮಾಜಿಕ, ಜೀವಶಾಸ್ತ್ರೀಯ ಮತ್ತು ಶಾರೀರಿಕ ಪರಿಕಲ್ಪನೆಗಳನ್ನು ಒಂದುಗೂಡಿಸುತ್ತದೆ.[೭೯] ಪ್ರಾಯೋಗಿಕ ಮತ್ತು ಸಂಶೋಧನಾ ಮನೋವೈದ್ಯರು ಸಂಶೋಧನಾ ಸಂಸ್ಥೆಗಳಲ್ಲಿ ಮೂಲಭೂತ ಮತ್ತು ಪ್ರಾಯೋಗಿಕ ಮನೋವೈದ್ಯಶಾಸ್ತ್ರದ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ನಿಯತಕಾಲಿಕಗಳಲ್ಲಿ ಅಥವಾ ಜರ್ನಲ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಾರೆ.[೬೪][೮೦][೮೧][೮೨] ಸಾಂಸ್ಥಿಕ ಅವಲೋಕನಾ ಮಂಡಳಿ ಗಳ ಅಡಿಯಲ್ಲಿ, ಮನೋವೈದ್ಯಶಾಸ್ತ್ರದ ಪ್ರಾಯೋಗಿಕ ಸಂಶೋಧಕರು ನರಚಿತ್ರ (ನ್ಯೂರೋಇಮೇಜಿಂಗ್) ತಳಿವಿಜ್ಞಾನ ಮತ್ತು ಮನೋಔಷಧಶಾಸ್ತ್ರ (ಸೈಕೋಫಾರ್ಮಾಕಾಲಜಿ), ಇನ್ನಿತರ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಇಂತಹ ಅಧ್ಯಯನದ ಮೂಲಕ ಅವರು ರೋಗನಿದಾನದ ಮೌಲಿಕತೆ ಮತ್ತು ವಿಶ್ವಾಸಾರ್ಹತೆಯನ್ನು ವೃದ್ಧಿಸಲು, ಹೊಸ ಬಗೆಯ ಚಿಕಿತ್ಸಾಕ್ರಮಗಳನ್ನು ಕಂಡುಹಿಡಿಯಲು ಮತ್ತು ಹೊಸ ಬಗೆಯ ಮಾನಸಿಕ ಅಸ್ವಸ್ಥತೆಗಳನ್ನು ವರ್ಗೀಕರಿಸಲು ಸಮರ್ಥರಾಗುತ್ತಾರೆ.[೮೩]

ಪ್ರಾಯೋಗಿಕ ಅನ್ವಯಿಕತೆ (ಕ್ಲಿನಿಕಲ್ ಅಪ್ಲಿಕೇಶನ್)

ಬದಲಾಯಿಸಿ

ರೋಗನಿಧಾನ ವ್ಯವಸ್ಥೆಗಳು

ಬದಲಾಯಿಸಿ

ಮನೋವೈದ್ಯಶಾಸ್ತ್ರದಲ್ಲಿ ಬಳಸುವ ರೋಗನಿದಾನದ ವರ್ಗೀಕರಣ ಮತ್ತು ಪ್ರಮಾಣದ ಮಾನದಂಡಗಳು (ರೇಟಿಂಗ್ ಸ್ಕೇಲ್ಸ್) ಅನ್ನೂ ನೋಡಿರಿ.

 
ಎಫ್‌ಎಂಆರ್‌ಐ ಚಿತ್ರಗಳು - ಇವು ಬೇರೆ ರೋಗಲಕ್ಷಣಗಳಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ರೋಗನಿದಾನದಲ್ಲಿ ಸಹಾಯಕವಾಗುತ್ತವೆ.

ಮನೋವೈದ್ಯಶಾಸ್ತ್ರ ರೋಗನಿದಾನ ವನ್ನು ವಿವಿಧ ಬಗೆಯ ಸಂದರ್ಭಗಳಲ್ಲಿ ನಡೆಸಲಾಗುತ್ತದೆ ಮತ್ತು ಬೇರೆ ಬೇರೆ ಆರೋಗ್ಯ ವೈದ್ಯರು ಇದನ್ನು ಮಾಡುತ್ತಾರೆ. ಆದ್ದರಿಂದ ರೋಗನಿದಾನ ಕಾರ್ಯವಿಧಾನವು ಈ ಅಂಶಗಳನ್ನು ಆಧರಿಸಿ ಬಹಳಷ್ಟು ವ್ಯತ್ಯಾಸವಾಗಬಹುದು. ಸಾಮಾನ್ಯವಾಗಿ, ಮನೋವೈದ್ಯಶಾಸ್ತ್ರವು ಭೇದಾತ್ಮಕ/ಸಾಂದರ್ಭಿಕ ರೋಗನಿದಾನ ವನ್ನು ಬಳಸುತ್ತದೆ. ಇದರಲ್ಲಿ ಮಾನಸಿಕ ಸ್ಥಿತಿಗತಿ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಿಂದ ರೋಗಿಯ ರೋಗಶಾಸ್ತ್ರೀಯ, ಮನೋರೋಗದ ಕುರಿತ ಅಥವಾ ಮನೋಸಾಮಾಜಿಕ ಇತಿಹಾಸವನ್ನು ಪಡೆದುಕೊಳ್ಳಲಾಗುತ್ತದೆ. ಜೊತೆಗೆ ಕೆಲವೊಮ್ಮೆ ನರವ್ಯೂಹಚಿತ್ರ (ನ್ಯೂರೋಇಮೇಜ್‌) ಅಥವಾ ಇನ್ನಿತರ ನರಶಾರೀರಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಅಥವಾ ಕೆಲವೊಮ್ಮೆ ವ್ಯಕ್ತಿತ್ವ ಪರೀಕ್ಷೆ ಗಳು ಅಥವಾ ಜ್ಞಾನಗ್ರಹಣ ಪರೀಕ್ಷೆ ಗಳನ್ನು ಮಾಡಲಾಗುತ್ತದೆ.[೮೪][೮೫][೮೬][೮೭][೮೮][೮೯][೯೦] ಕೆಲವು ಸಂದರ್ಭಗಳಲ್ಲಿ, ಬೇರೆ ರೀತಿಯ ಶಾರೀರಿಕ ರೋಗಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮಿದುಳಿನ ಸ್ಕ್ಯಾನ್ ಅನ್ನು ಬಳಸಲಾಗುತ್ತದೆ. ಆದರೆ ಈಗ ಮಿದುಳಿನ ಸ್ಕ್ಯಾನ್ ಮಾತ್ರವನ್ನೇ ಅವಲಂಬಿಸಿ, ಮಾನಸಿಕ ರೋಗವನ್ನು ಖಚಿತವಾಗಿ ರೋಗನಿದಾನ ಮಾಡಲು ಅಥವಾ ಭವಿಷ್ಯದಲ್ಲಿ ಮಾನಸಿಕ ರೋಗ ಬರುವ ಅಪಾಯವಿದೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ.[೯೧] ಕೆಲವು ಮನೋವೈದ್ಯರು ತಳಿವಿಜ್ಞಾನವನ್ನು ರೋಗನಿದಾನದ ಪ್ರಕ್ರಿಯೆಯಲ್ಲಿ ಬಳಸಲಾರಂಭಿಸಿದ್ದಾರೆ, ಆದರೆ ಒಟ್ಟಾರೆಯಾಗಿ ಅದಿನ್ನೂ ಸಂಶೋಧನಾ ವಿಷಯವಾಗಿಯೇ ಉಳಿದಿದೆ.[೯೨][೯೩][೯೪]

ರೋಗನಿದಾನದ ಕೈಪಿಡಿಗಳು
ಬದಲಾಯಿಸಿ

ಇಂದು ಮಾನಸಿಕ ಆರೋಗ್ಯ ಸ್ಥಿತಿಗತಿಗಳನ್ನು ವರ್ಗೀಕರಿಸಲು ಮೂರು ಪ್ರಮುಖ ರೋಗನಿದಾನದ ಕೈಪಿಡಿಗಳನ್ನು ಬಳಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಸಿದ್ಧಪಡಿಸಿ, ಪ್ರಕಟಿಸುವ ICD-10 ಕೈಪಿಡಿಯು ಮನೋವೈದ್ಯಶಾಸ್ತ್ರದ ಸ್ಥಿತಿಗತಿ ಕುರಿತ ವಿಭಾಗಗಳನ್ನು ಒಳಗೊಂಡಿರುತ್ತದೆ ಮತ್ತು ವಿಶ್ವಾದ್ಯಂತ ಬಳಕೆಯಾಗುತ್ತದೆ.[೯೫] ಅಮೆರಿಕದ ಮನೋವೈದ್ಯಶಾಸ್ತ್ರ ಸಂಘ (ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್) ಪ್ರಕಟಿಸುವ ಮಾನಸಿಕ ಅಸ್ವಸ್ಥತೆಗಳ ರೋಗನಿದಾನ ಮತ್ತು ಅಂಕಿಸಂಖ್ಯಾತ್ಮಕ ಕೈಪಿಡಿಯು, ಮುಖ್ಯವಾಗಿ ಮಾನಸಿಕ ಆರೋಗ್ಯದ ಸ್ಥಿತಿಗತಿಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಮುಖ ವರ್ಗೀಕರಣದ ಸಾಧನವಾಗಿದೆ.[೯೬] ಪ್ರಸ್ತುತ ಅದರ ನಾಲ್ಕನೇ ಪರಿಷ್ಕೃತ ಆವೃತ್ತಿಯು ಸಿದ್ಧವಾಗುತ್ತಿದ್ದು, ಇದನ್ನೂ ವಿಶ್ವಾದ್ಯಂತ ಬಳಸಲಾಗುತ್ತದೆ.[೯೬] ಚೀನಾ ಮನೋವೈದ್ಯಶಾಸ್ತ್ರ ಸಂಘವು ಮಾನಸಿಕ ಅಸ್ವಸ್ಥತೆಗಳ ಚೀನೀ ವರ್ಗೀಕರಣ (ಚೀನೀಸ್ ಕ್ಲಾಸಿಫಿಕೇಶನ್ ಆಫ್ ಮೆಂಟಲ್ ಡಿಸ್‌ಆರ್ಡರ್) ಎಂಬ ಒಂದು ರೋಗಿದಾನದ ಕೈಪಿಡಿಯನ್ನು ಸಿದ್ಧಗೊಳಿಸಿದೆ.[೯೭]

ರೋಗನಿದಾನ ಕೈಪಿಡಿಗಳ ಪ್ರಸ್ತಾಪಿತ ಉದ್ದೇಶಗಳೆಂದರೆ ಪ್ರಾತಿನಿಧಿಕವಾಗಿ, ಮರುಪ್ರತಿಮಾಡಬಹುದಾದ ಮತ್ತು ಪ್ರಾಯೋಗಿಕವಾಗಿ ಉಪಯುಕ್ತವಾದ ವರ್ಗೀಕರಣಗಳು ಮತ್ತು ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು, ಪ್ರಮಾಣಕಗಳ ಕುರಿತು ಒಮ್ಮತ ಮತ್ತು ಒಪ್ಪಿಗೆಯನ್ನು ಅನುಕೂಲಿಸುವುದು ಆಗಿದೆ. ಹೀಗೆ ಮಾಡುವಾಗ ವ್ಯಾಧಿಕಾರಣವಿಜ್ಞಾನಕ್ಕೆ ಸಂಬಂಧಿಸಿದಂತೆ ಊಹಾತ್ಮಕವಾಗಿ ಇರಬಾರದು.[೯೬][೯೮] ಏನೇಆದರೂ ಈ ವರ್ಗೀಕರಣಗಳು ನಿರ್ದಿಷ್ಟ ಮನೋವೈದ್ಯಶಾಸ್ತ್ರದ ಸಿದ್ಧಾಂತಗಳು ಮತ್ತು ದತ್ತಾಂಶಗಳನ್ನು ಆಧರಿಸಿರುತ್ತವೆ; ಅವು ವಿಶಾಲವಾಗಿರುತ್ತವೆ ಮತ್ತು ರೋಗಲಕ್ಷಣಗಳ ಹಲವಾರು ಸಂಭಾವ್ಯ ಸಂಯೋಜನೆಗಳಿಂದ ನಿರ್ದಿಷ್ಟಗೊಂಡಿರುತ್ತವೆ. ಅನೇಕ ವರ್ಗೀಕರಣಗಳು ಲಕ್ಷಣಶಾಸ್ತ್ರದಲ್ಲಿ ಒಂದಕ್ಕೊಂದು ಸೇರಿಕೊಂಡಿರುತ್ತವೆ ಅಥವಾ ಅವು ಪ್ರಾತಿನಿಧಿಕವಾಗಿ ಒಟ್ಟಾಗಿ ಇರುತ್ತವೆ.[೯೯] ಮೂಲದಲ್ಲಿ ಕೈಪಿಡಿಗಳ ಬಳಕೆಯಲ್ಲಿ ತರಬೇತಿಯಿರುವ ಅನುಭವಿ ವೈದ್ಯರಿಗೆ ಈ ಕೈಪಿಡಿಗಳು ಒಂದು ಮಾರ್ಗದರ್ಶಿಯಾಗಿರುತ್ತವೆ ಎಂಬ ಉದ್ದೇಶವಿದ್ದರೂ, ನಾಮಕರಣ ಪದ್ಧತಿಯನ್ನು ಈಗ ವೈದ್ಯರು, ಆಡಳಿತಗಾರರು ಮತ್ತು ವಿಮಾ ಕಂಪನಿಗಳು ವ್ಯಾಪಕವಾಗಿ ಬಳಸುತ್ತಿದ್ದಾರೆ.[೧೦೦]

ಚಿಕಿತ್ಸಾ ಸನ್ನಿವೇಶಗಳು

ಬದಲಾಯಿಸಿ
ಸಾಮಾನ್ಯ ಪರಿಗಣನೆಗಳು
ಬದಲಾಯಿಸಿ

ಮಾನಸಿಕ ಆರೋಗ್ಯ ಸ್ಥಿತಿಗತಿ ಇರುವವರನ್ನು ಸಾಮಾನ್ಯವಾಗಿ ರೋಗಿಗಳು ಎಂದು ಪರಿಗಣಿಸಲಾಗುತ್ತದೆ, ಆದರೂ ಅವರನ್ನು ಕಕ್ಷಿಗಾರರು , ಗ್ರಾಹಕರು , ಅಥವಾ ಸೇವೆ ಸ್ವೀಕರಿಸುವವರು ಎಂದೂ ಕರೆಯಲಾಗುತ್ತದೆ. ಅವರು ಒಬ್ಬರು ಮನೋವೈದ್ಯರಲ್ಲಿ ಅಥವಾ ವಿವಿಧ ಮಾರ್ಗಗಳ ಬೇರೆ ಮನೋವೈದ್ಯಕೀಯ ವೈದ್ಯರಲ್ಲಿ ಆರೈಕೆಗಾಗಿ ಬರಬಹುದು. ಎರಡು ಮುಖ್ಯ ಸಾಮಾನ್ಯ ವಿಧಾನಗಳೆಂದರೆ ಸ್ವ -ಉಲ್ಲೇಖದೊಂದಿಗೆ ರೋಗಿ ತಜ್ಞ ವೈದ್ಯರಲ್ಲಿಗೆ ಬರುವುದು ಅಥವಾ ಪ್ರಾಥಮಿಕ-ಆರೋಗ್ಯ ವೈದ್ಯರು ರೋಗಿಯನ್ನು ಉಲ್ಲೇಖದೊಂದಿಗೆ ತಜ್ಞವೈದ್ಯರಲ್ಲಿಗೆ ಕಳಿಸುವುದು. ಪರ್ಯಾಯವಾಗಿ, ವ್ಯಕ್ತಿಯೊಬ್ಬನನ್ನು ವೈದ್ಯಕೀಯ ಆಸ್ಪತ್ರೆಯ ಸಿಬ್ಬಂದಿಗಳು ನ್ಯಾಯಾಲಯದ ಆದೇಶ, ವ್ಯಕ್ತಿಯ ಅಭಿಪ್ರಾಯ ಕೇಳದೆಯೇ ಅಥವಾ ಅನೈಚ್ಛಿಕವಾಗಿ ಸೇರಿಸುವಿಕೆ ಯ ಮೂಲಕ ತಜ್ಞರಲ್ಲಿಗೆ ಕಳುಹಿಸಬಹುದು , ಅಥವಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಮಾಡುವಂತೆ ಮಾನಸಿಕ ಆರೋಗ್ಯ ಕಾಯಿದೆಯಡಿಯಲ್ಲಿ ಕಾನೂನುಬದ್ಧವಾಗಿ ಸೇರಿಸುವಿಕೆ ಮೂಲಕವೂ ತಜ್ಞ ವೈದ್ಯರಲ್ಲಿಗೆ ಕಳುಹಿಸಬಹುದು.

 
ಸಂಯುಕ್ತಸಂಸ್ಥಾನದಲ್ಲಿ ಮನೋರೋಗಿಯೊಬ್ಬರ ಕೊಠಡಿ.

ತಜ್ಞವೈದ್ಯರಲ್ಲಿಗೆ ಉಲ್ಲೇಖದ ಮೇರೆಗೆ ಕಳುಹಿಸುವ ಸಂದರ್ಭಗಳೇನೇ ಇದ್ದರೂ, ಮನೋವೈದ್ಯರು ಮೊದಲು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಗಳನ್ನು ಪರೀಕ್ಷಣೆ ಮಾಡುತ್ತಾರೆ ಇದು ಸಾಮಾನ್ಯವಾಗಿ ವ್ಯಕ್ತಿಯನ್ನು ಸಂದರ್ಶನ ಮಾಡುವುದು ಮತ್ತು ಮಾಹಿತಿಯನ್ನು ಬೇರೆ ಆರೋಗ್ಯ ಹಾಗೂ ಸಾಮಾಜಿಕ ಆರೈಕೆ ವೃತ್ತಿಪರರು, ಬಂಧುಗಳು, ಸಂಗಡಿಗರು, ಕಾನೂನುಪಾಲಕರು ಮತ್ತು ಬೇರೆ ಮೂಲಗಳಿಂದ ಪಡೆದುಕೊಳ್ಳುವುದು, ತುರ್ತು ವೈದ್ಯಕೀಯ ಸಿಬ್ಬಂದಿಗಳು ಮತ್ತು ಮನೋವೈದ್ಯಕೀಯ ರೇಟಿಂಗ್ ಸ್ಕೇಲ್‌ಗಳು, ಇನ್ನಿತರ ಮೂಲಗಳಿಂದ ಮಾಹಿತಿಯನ್ನು ಪಡೆದುಕೊಳ್ಳುವುದನ್ನೂ ಒಳಗೊಂಡಿರುತ್ತದೆ. ಮಾನಸಿಕ ಸ್ಥಿತಿಗತಿ ಪರೀಕ್ಷೆ ಯೊಂದನ್ನು ಮಾಡಲಾಗುವುದು ಮತ್ತು ಬೇರೆ ಕಾಯಿಲೆಗಳಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ದೈಹಿಕ ಪರೀಕ್ಷೆ ಯನ್ನು ಮಾಡಲಾಗುವುದು. ಇವುಗಳೆಂದರೆ ಥೈರಾಯಿಡ್ ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರುವುದು ಅಥವಾ ಮಿದುಳಿನ ಗಡ್ಡೆಗಳು, ಅಥವಾ ಸ್ವ-ಹಾನಿ ಯ ಯಾವುದಾದರೂ ಚಿಹ್ನೆಗಳಿವೆಯೇ ಎಂದು ಗುರುತಿಸಲು; ದೈಹಿಕ ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಯನ್ನು, ವಿಶೇಷವಾಗಿ ರಕ್ತ ಪರೀಕ್ಷೆಗಳು ಮತ್ತು ವೈದ್ಯಕೀಯ ಚಿತ್ರ ಗಳನ್ನು ತೆಗೆದುಕೊಳ್ಳುವುದಿದ್ದರೆ ಮನೋವೈದ್ಯರ ಹೊರತಾಗಿ ಬೇರೆ ಯಾರಾದರೂ ವೈದ್ಯರು ಮಾಡುತ್ತಾರೆ.

ಎಲ್ಲ ಔಷಧಗಳ ಹಾಗೆ, ಮನೋವೈದ್ಯಕೀಯ ಔಷಧಗಳು ಕೂಡ ರೋಗಿಗಳಲ್ಲಿ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಹೆಚ್ಚಿನವೇಳೆ ಇದು ನಿರಂತರ ಚಿಕಿತ್ಸಾ ಔಷಧ ಮೇಲ್ವಿಚಾರಣೆ ಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಪೂರ್ಣ ರಕ್ತದ ಗಣನೆ (ಫುಲ್ ಬ್ಲಡ್ ಕೌಂಟ್) ಅಥವಾ, ಲಿಥಿಯಂ ಸಾಲ್ಟ್ ಗಳನ್ನು ತೆಗೆದುಕೊಳ್ಳುವವರಿಗೆ ಲಿಥಿಯಂನ ಸೀರಂ ಮಟ್ಟ, ಮೂತ್ರಪಿಂಡಗಳಿಗೆ ಸಂಬಂಧಿಸಿದ ಮತ್ತು ಥೈರಾಯ್ಡ್ ಕಾರ್ಯನಿರ್ವಹಣೆ. ಕೆಲವೊಮ್ಮೆ ವಿದ್ಯುತ್‌ಕಂಪನದ (ಎಲೆಕ್ಟ್ರೋಕನ್‌‌ವಲ್ಸಿವ್) ಚಿಕಿತ್ಸೆ ಯನ್ನು (ECT) ತುಂಬ ಗಂಭೀರ ಮತ್ತು ತೀರಾ ದುರ್ಬಲ ಸ್ಥಿತಿಯಲ್ಲಿ, ವಿಶೇಷವಾಗಿ ಔಷಧಗಳಿಗೆ ಪ್ರತಿಕ್ರಿಯಿಸದ ಸಂದರ್ಭಗಳಲ್ಲಿ ನಡೆಸಲಾಗುವುದು, ಮನೋವೈದ್ಯಕೀಯ ಔಷಧಗಳ ಪರಿಣಾಮಕಾರತ್ವ[೧೦೧][೧೦೨] ಮತ್ತು ಅಡ್ಡ ಪರಿಣಾಮಗಳ ಸವಾಲು ಇದ್ದೇಇದೆ.[೧೦೩]

ಮನೋವೈದ್ಯಕೀಯ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸುವವರ ಹಾಗೂ ಔಷಧತಯಾರಿಕಾ ಕಂಪನಿಗಳ ಮದ್ಯದ ಆಪ್ತ ಸಂಬಂಧವು ತುಂಬ ವಿವಾದ[೧೦೪] ಗಳಿಗೆ ಕಾರಣವಾಗುತ್ತಿದೆ. ಜೊತೆಗೆ ಮಾನಸಿಕ ಆರೋಗ್ಯ ನೀತಿಗಳ ಮೇಲೆ ಔಷಧತಯಾರಿಕಾ ಕಂಪನಿಗಳು ಬೀರುತ್ತಿರುವ ಪ್ರಭಾವವೂ ವಿವಾದಾತ್ಮಕವಾಗಿದೆ.[೧೦೫][೧೦೬]

ಒತ್ತಾಯಪೂರ್ವಕ ಔಷಧ ನೀಡುವುದು ಮತ್ತು "ಒಳನೋಟಗಳ ಕೊರತೆ" ಎಂಬ ಗುರುತುಪಟ್ಟಿ ನೀಡುವುದೂ ಅಷ್ಟೇ ವಿವಾತ್ಮಕವಾಗಿರುತ್ತದೆ. ಅಸಾಮರ್ಥ್ಯದ ಕುರಿತ ಅಮೆರಿಕಾ ರಾಷ್ಟ್ರೀಯ ಮಂಡಳಿ (ಯುಎಸ್ ನ್ಯಾಶನಲ್ ಕೌನ\ನ್ಸಿಲ್ ಆನ್ ಡಿಸೆಬಲಿಟಿ)ಯು ಪ್ರಕಟಿಸಿರುವ ಒಂದು ವರದಿ ಪ್ರಕಾರ,

ವ್ಯಕ್ತಿಯ ಅಭಿಪ್ರಾಯ ಕೇಳದೆಯೇ ಅಥವಾ ಅನೈಚ್ಛಿಕವಾಗಿ ಚಿಕಿತ್ಸೆ ನೀಡುವುದು ಮನೋವೈದ್ಯಕೀಯ ವ್ಯವಸ್ಥೆ ಹೊರತುಪಡಿಸಿದರೆ ಬೇರೆಡೆ ಬಹಳ ಅಪರೂಪ. ಪ್ರಜ್ಞಾಹೀನ ಅಥವಾ ಸಂವಹನ ಮಾಡಲಾಗದ ಸ್ಥಿತಿಯಲ್ಲಿ ಮಾತ್ರ ವ್ಯಕ್ತಿಯನ್ನು ಕೇಳದೆಯೇ ಚಿಕಿತ್ಸೆ ನೀಡಲಾಗುವುದು. ಮಾನಸಿಕ ಅಸ್ವಸ್ಥತೆ ಇರುವವರು ತಮಗೆ ಚಿಕಿತ್ಸೆ ಇಷ್ಟವಿಲ್ಲ ಎಂದು ತೀವ್ರವಾಗಿ ಪ್ರತಿರೋಧಿಸಿದರೂ, ಅವರಿಗೆ ಚಿಕಿತ್ಸೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಅವರಿಗೆ "ಮಾನಸಿಕ ಕಾಯಿಲೆ"ಯಿಂದಾಗಿ "ಒಳನೋಟಗಳ ಕೊರತೆ"ಯಿದೆ ಅಥವಾ ತಮಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಗುರುತಿಸಲು ಅಸಮರ್ಥರು ಎಂಬ ಸಮರ್ಥನೆಯ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಚರಣೆಯಲ್ಲಿ, "ಒಳನೋಟಗಳ ಕೊರತೆ"ಯು ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಒಪ್ಪಿಗೆಯಿಲ್ಲದಿರುವುದು ಎಂದಾಗುತ್ತದೆ ಮತ್ತು ಒಪ್ಪಿಗೆಯಿಲ್ಲದವರನ್ನು"ಅವಿಧೇಯ" ಅಥವಾ "ಚಿಕಿತ್ಸೆಗೆ ಅಸಹಕಾರಿ" ಎಂದು ಹೆಸರಿಸಲಾಗುತ್ತದೆ.[೧೦೭]

ಒಳರೋಗಿಗಳ ಚಿಕಿತ್ಸೆ
ಬದಲಾಯಿಸಿ

ಮನೋವೈದ್ಯಕೀಯ ಚಿಕಿತ್ಸೆಗಳು ಕಳೆದ ಹಲವು ದಶಕಗಳಲ್ಲಿ ಬಹಳಷ್ಟು ಬದಲಾಗಿದೆ. ಹಿಂದೆ, ಮನೋರೋಗಿಗಳನ್ನು ಹೆಚ್ಚಿನವೇಳೆ ಆರು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಆಸ್ಪತ್ರೆಗೆ ಸೇರಿಸಲಾಗುತ್ತಿತ್ತು , ಕೆಲವು ಸಂದರ್ಭಗಳಲ್ಲಿ ಅನೇಕ ವರ್ಷಗಳವರೆಗೆ ಆಸ್ಪತ್ರೆಗೆ ಸೇರಿಸಲಾಗುತ್ತಿತ್ತು. ಇಂದು, ಮನೋವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿರುವ ವ್ಯಕ್ತಿಗಳನ್ನು ಹೊರರೋಗಿಗಳಾಗಿ ನೋಡುವುದೇ ಹೆಚ್ಚು. ಆಸ್ಪತ್ರೆಗೆ ಸೇರಿಸುವುದು ಅಗತ್ಯವಿದ್ದರೆ, ಸರಾಸರಿ ಆಸ್ಪತ್ರೆಯಲ್ಲಿರುವುದು ಸುಮಾರು ಒಂದರಿಂದ ಎರಡು ವಾರಗಳು, ಬಹಳ ಕಡಿಮೆ ಜನರನ್ನು ದೀರ್ಘ-ಕಾಲೀನವಾಗಿ ಆಸ್ಪತ್ರೆಯಲ್ಲಿಡಲಾಗುವುದು.[ಸೂಕ್ತ ಉಲ್ಲೇಖನ ಬೇಕು]

ಮನೋವೈದ್ಯಕೀಯ ಒಳರೋಗಿಗಳು ಎಂದರೆ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಿಗೆ ಮನೋವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಲೆಂದು ಸೇರಿಸಿದ ವ್ಯಕ್ತಿಗಳು. ಕೆಲವರನ್ನು ಅಭಿಪ್ರಾಯ ಕೇಳದೆಯೇ ಸುರಕ್ಷಿತ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ ಅಥವಾ ಕೆಲವೊಮ್ಮೆ ಕಾನೂನುಕ್ಷೇತ್ರದಲ್ಲಿ ಜೈಲಿನ ವ್ಯವಸ್ಥೆಯೊಳಗೇ ಆಸ್ಪತ್ರಗೆ ಸೇರಿಸಲಾಗುತ್ತದೆ. ಅಮೆರಿಕಾ ಮತ್ತು ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ, ವ್ಯಕ್ತಿಯ ಅಭಿಪ್ರಾಯ ಕೇಳದೆಯೇ ಆಸ್ಪತ್ರೆಗೆ ಸೇರಿಸುವ ಮಾನದಂಡಗಳು ಸ್ಥಳೀಯ ನ್ಯಾಯಾಧಿಕಾರಕ್ಕೆ ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ. ಈ ಮಾನದಂಡಗಳು ಏನಾದರೊಂದು ಮಾನಸಿಕ ಆರೋಗ್ಯ ಪರಿಸ್ಥಿತಿಯನ್ನು ಹೊಂದಿರುವಷ್ಟು ವಿಶಾಲವಾಗಿರಬಹುದು ಅಥವಾ ಅವರು ತಮಗೇ ಅಥವಾ ಬೇರೆಯವರಿಗೆ ಅಪಾಯ ಉಂಟುಮಾಡುವಷ್ಟು ಪರಿಮಿತವೂ ಆಗಿರಬಹುದು. ಸಾರ್ವಜನಿಕ ಸೌಲಭ್ಯಗಳಲ್ಲಿ ಹೀಗೆ ಒಳರೋಗಿಗಳಾಗಿ ಸೇರಿಸಿಕೊಳ್ಳಲು ಹಾಸಿಗೆ ಲಭ್ಯತೆಯು ನೈಜ ನಿರ್ಣಾಯಕ ಅಂಶವಾಗಿರುತ್ತದೆ. ಐರೋಪ್ಯ ಮಾನವ ಹಕ್ಕುಗಳ ಶಾಸನವು ಮಾನಸಿಕ ಅಸ್ವಸ್ಥತೆಯ ವೈದ್ಯಕೀಯ-ಪ್ರಮಾಣೀಕೃತ ವ್ಯಕ್ತಿಗಳನ್ನು ಆಸ್ಪತ್ರೆಯಲ್ಲಿ ಕೂಡಿ ಹಾಕುವುದನ್ನು ನಿಯಂತ್ರಿಸುತ್ತದೆ ಮತ್ತು ಹೀಗೆ ಕೂಡಿಹಾಕುವುದನ್ನು ನಿಯಮಿತವಾಗಿ ಪುನರ್ವಿಮರ್ಶೆ ಮಾಡುವ ಹಕ್ಕನ್ನೂ ಸೇರಿಸಿದೆ. [ಸೂಕ್ತ ಉಲ್ಲೇಖನ ಬೇಕು]

 
ಮನೋವ್ಯಾಧಿಯ ಔಷಧಗಳನ್ನು ನೀಡಲು ಹಲವಾರು ವಿಧಾನಗಳಲ್ಲಿ ಚುಚ್ಚುಮದ್ದು ಕೂಡ ಒಂದು ವಿಧಾನ.

ರೋಗಿಗಳು ತಾವಾಗಿಯೇ ಆಸ್ಪತ್ರೆಗೆ ಸೇರಬಹುದು, ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಈ ಕಡಿಮೆ ನಿಯಂತ್ರಿತ ಆಯ್ಕೆಯಿಂದ ಸುರಕ್ಷಿತೆಯೊಂದಿಗೆ ರಾಜಿಯಾದಂತಾಗುವುದಿಲ್ಲ ಎಂದು ಪರಿಗಣಿಸಿದರೆ ಹೀಗೆ ಮಾಡಲು ಅವಕಾಶವಿದೆ. ಒಳರೋಗಿ ಮನೋವೈದ್ಯಕೀಯ ವಾರ್ಡ್‌ಗಳು ತಪ್ಪಿಸಿಕೊಳ್ಳಲಾರದಂತೆ ಭದ್ರವಾಗಿರಬಹುದು (ಹಿಂಸೆ ಅಥವಾ ಸ್ವ-ಹಾನಿಯ ನಿರ್ದಿಷ್ಟ ಅಪಾಯ ಹೊಂದಿದ್ದಾರೆ ಎಂದು ಯೋಚಿಸಲಾದ ವ್ಯಕ್ತಿಗಳಿಗೆ) ಅಥವಾ ಬೀಗಹಾಕದೇ, ತೆರೆದ ಪರಿಸರವೂ ಇರಬಹುದು. ಕೆಲವು ವಾರ್ಡ್‌ಗಳು ಮಹಿಳೆಯರು ಮತ್ತು ಪುರುಷರನ್ನು ಸೇರಿಸಿ ಮಿಶ್ರ-ಲಿಂಗದ ವಾರ್ಡ್‌ ಆಗಿರಬಹುದು, ಆದರೆ ಇತ್ತೀಚೆಗೆ ಮಹಿಳಾ ಒಳರೋಗಿಗಳ ಸುರಕ್ಷತೆಗಾಗಿ ಏಕ-ಲಿಂಗದ ವಾರ್ಡ್‌ಗಳು ಹೆಚ್ಚು ಒಪ್ಪಿಗೆಯಾಗುತ್ತಿವೆ. ಆಸ್ಪತ್ರೆಯ ಆರೈಕೆಯಲ್ಲಿ, ವ್ಯಕ್ತಿಗಳನ್ನು, ತಪಾಸಣೆ , ಮೇಲ್ವಿಚಾರಣೆ ಮಾಡಿದ ನಂತರ ಸಾಮಾನ್ಯವಾಗಿ ಔಷಧಗಳನ್ನು ಬಹುಶಿಸ್ತೀಯ ವೈದ್ಯ ತಂಡವು ಕೊಡುತ್ತದೆ. ಈ ತಂಡವು ವೈದ್ಯರು, ಮನೋವೈದ್ಯಕೀಯ ನರ್ಸ್‌ಗಳು, ಪ್ರಾಯೋಗಿಕ ಅಥವಾ ಕ್ಲಿನಿಕಲ್ ವೈದ್ಯರು, ಮನೋಚಿಕಿತ್ಸಕರು, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು, ವೃತ್ತಿಪರ ಚಿಕಿತ್ಸಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಿರಬಹುದು. ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ವ್ಯಕ್ತಿ ಬೇರೆಯವರಿಗೆ ಅಥವಾ ಸ್ವತಃ ತನಗೇ ಹಾನಿ ಮಾಡುವ ಅಪಾಯವಿದೆ ಎಂದು ನಿರ್ಣಯಿಸಿದ ನಂತರ, ಒಬ್ಬೊಬ್ಬೊರಿಗೇ ನಿರಂತರ ಅಥವಾ ಆಗಾಗ ಮೇಲ್ವಿಚಾರಣೆ ಮಾಡುವಂತೆ ಇಡಬಹುದು. ಜೊತೆಗೆ ದೈಹಿಕವಾಗಿ ನಿರ್ಬಂಧಕ್ಕೊಳಪಡಿಸಬಹುದು ಅಥವಾ ಔಷಧಗಳನ್ನು ನೀಡಬಹುದು. ಒಳರೋಗಿಗಳ ವಾರ್ಡ್‌ಗಳಲ್ಲಿರುವ ವ್ಯಕ್ತಿಗಳಿಗೆ ಕೆಲವು ಸಮಯ ಹೊರಹೋಗಲು ಆಸ್ಪದ ನೀಡಬಹುದು; ಒಬ್ಬರನ್ನೇ ಅಥವಾ ಯಾರ ಜೊತೆಗಾದರೂ ಕಳುಹಿಸಬಹುದು.[೧೦೮]

ಅನೇಕ ಮುಂದುವರಿದ ದೇಶಗಳಲ್ಲಿ, 20ನೇ ಶತಮಾನದ ಮಧ್ಯಭಾಗದ ನಂತರ, ಸಮುದಾಯ ಆರೈಕೆ ಸೌಲಭ್ಯದ ಬೆಳವಣಿಗೆಯೊಂದಿಗೆ ಮನೋವೈದ್ಯಕೀಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಅಥವಾ ಒಳರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಆರೈಕೆಯ ಮಾನದಂಡಗಳು ಅನುದಾನದ ಪ್ರಮಾಣದಿಂದಾಗಿ ಇನ್ನೂ ಒಂದು ಸವಾಲಾಗಿಯೇ ಉಳಿದಿವೆ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿಯೂ ಇದೇ ಕಾರಣದಿಂದಾಗಿ ಸೌಲಭ್ಯಗಳು ಒಟ್ಟಾರೆಯಾಗಿ ಅಸಮರ್ಪಕವಾಗಿವೆ. [ಸೂಕ್ತ ಉಲ್ಲೇಖನ ಬೇಕು]

ಹೊರರೋಗಿ ಚಿಕಿತ್ಸೆ
ಬದಲಾಯಿಸಿ

ವ್ಯಕ್ತಿಗಳು ಹೊರರೋಗಿಗಳಾಗಿ ಅಥವಾ ಒಳರೋಗಿಗಳಾಗಿ ಮನೋವೈದ್ಯಕೀಯ ಆರೈಕೆಯನ್ನು ಪಡೆಯಬಹುದು. ಹೊರರೋಗಿ ಚಿಕಿತ್ಸೆಯಲ್ಲಿ ವ್ಯಕ್ತಿಯು ನಿಯಮಿತ ಅವಧಿಗಳಲ್ಲಿ ಸಮಾಲೋಚನೆಗಾಗಿ ವೈದ್ಯರನ್ನು ಹೋಗಿ ಕಾಣಬೇಕಾಗುತ್ತದೆ ಮತ್ತು ಇಂತಹ ಭೇಟಿಗಳು ಸಾಮಾನ್ಯವಾಗಿ 30ರಿಂದ 60 ನಿಮಿಷಗಳವರೆಗೆ ಆಗಬಹುದು. ಈ ಸಮಾಲೋಚನೆಗಳು ಸಾಧಾರಣವಾಗಿ ಮನೋವೈದ್ಯರು ವ್ಯಕ್ತಿಯನ್ನು ಸಂದರ್ಶಿಸುವುದನ್ನು ಒಳಗೊಂಡಿರುತ್ತದೆ. ವ್ಯಕ್ತಿಯ ಪರಿಸ್ಥಿತಿಯ ಕುರಿತ ತಮ್ಮ ಮೌಲ್ಯಾಂಕನವನ್ನು ಪರಿಷ್ಕರಣೆ ಮಾಡಿಕೊಳ್ಳಲು ಮತ್ತು ಮನೋಚಿಕಿತ್ಸೆ ನೀಡಲು ಅಥವಾ ಪುನರ್ವಿಮರ್ಶೆ ಮಾಡಲು ಇದು ಅಗತ್ಯವಾಗಿರುತ್ತದೆ. ಎಷ್ಟು ದಿನಗಳಿಗೊಮ್ಮೆ ಮನೋವೈದ್ಯರು ವ್ಯಕ್ತಿಗಳನ್ನು ಕಾಣುತ್ತಾರೆ ಎಂಬುದು ವ್ಯಾಪಕವಾಗಿ ವ್ಯತ್ಯಾಸಗೊಳ್ಳುತ್ತದೆ. ಮನೋವ್ಯಾಧಿ ಯಾವ ಬಗೆಯದು, ಅದರ ತೀವ್ರತೆ, ಪ್ರತಿ ವ್ಯಕ್ತಿಯ ಪರಿಸ್ಥಿತಿಯ ಸ್ಥಿರತೆ ಇತ್ಯಾದಿ ಅಂಶಗಳನ್ನು ಅವಲಂಬಿಸಿ ಕೆಲವು ದಿನಗಳಿಂದ ತಿಂಗಳುಗಳ ಅಂತರದಲ್ಲಿ ವೈದ್ಯರು ರೋಗಿಗೆ ಪುನಾ ಬರಲಿಕ್ಕೆ ಹೇಳುತ್ತಾರೆ. ಜೊತೆಗೆ ಚಿಕಿತ್ಸೆ ಪಡೆಯುವ ವ್ಯಕ್ತಿ ಮತ್ತು ವೈದ್ಯರು ಇಬ್ಬರಿಗೂ ಯಾವ ಅಂತರದಲ್ಲಿ ಭೇಟಿಯಾಗುವುದು ಅನುಕೂಲ, ಉತ್ತಮ ಎಂಬುದನ್ನೂ ಇದು ಅಲಂಬಿಸಿರುತ್ತದೆ. ಮನೋವೈದ್ಯರು ಮನೋಚಿಕಿತ್ಸೆ ಅಥವಾ "ಮಾತಿನ " ಚಿಕಿತ್ಸೆಗೆ ಅಥವಾ ವರ್ತನಾ ಮಾರ್ಪಾಡು ಚಿಕಿತ್ಸೆಗೆ ಹೆಚ್ಚಿನ ಸಮಯ ಮೀಸಲಿಡುವ ಬದಲಿಗೆ ಮನೋಔಷಧಶಾಸ್ತ್ರ ಅಂದರೆ ಔಷಧಗಳನ್ನು ತೆಗೆದುಕೊಳ್ಳಲು ಸೂಚಿಸುವುದಕ್ಕೆ ತಮ್ಮ ಚಿಕಿತ್ಸೆಯನ್ನು ಸೀಮಿತಗೊಳ್ಳುವುದು ಹೆಚ್ಚುತ್ತಿದೆ. ಸಮುದಾಯ ಮನೋವೈದ್ಯಶಾಸ್ತ್ರದಲ್ಲಿ ಮನೋವೈದ್ಯರ ಪಾತ್ರ ಬದಲಾಗುತ್ತಿದೆ. ಈಗ ಈ ನಿಟ್ಟಿನಲ್ಲಿ ಹಲವಾರು ಜನರು ನಾಯಕತ್ವ ಪಾತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ಆರೋಗ್ಯ ವೃತ್ತಿಪರರ ಒಕ್ಕೂಟದ ಸಂಯೋಜನಾ ಮತ್ತು ಮೇಲ್ವಿಚಾರಣಾ ತಂಡಗಳು ಮತ್ತು ಕಿರಿಯ ವೈದ್ಯರುಗಳು ಆರೋಗ್ಯ ಸೇವೆಗಳನ್ನು ಒದಗಿಸಲು ಮುಂದಾಗುತ್ತಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ

ಬದಲಾಯಿಸಿ
  • ಜೀವಮನೋವೈದ್ಯಶಾಸ್ತ್ರ ವಿವಾದ
  • ಮಾನಸಿಕ ಆರೋಗ್ಯ
  • ಮನೋವೈದ್ಯಕೀಯ ನಿರ್ಧಾರಣೆ
  • ದೂರ-ಮನೋವೈದ್ಯಶಾಸ್ತ್ರ (ಟೆಲಿಸೈಕಿಯಾಟ್ರಿ)
  • ಪ್ರತಿ-ಮನೋವೈದ್ಯಶಾಸ್ತ್ರ - ಮನೋವೈದ್ಯಶಾಸ್ತ್ರ ವಿರುದ್ಧ ಟೀಕೆ

ಉಲ್ಲೇಖಗಳು

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ ೧.೨ ಇನ್ಸೆಲ್ ಟಿ. ಆರ್., ವ್ಯಾಂಗ್, ಪಿ. ಎಸ್. (2010). ರಿಥಿಂಕಿಂಗ್ ಮೆಂಟಲ್ ಇಲ್‌ನಸ್. JAMA, 303 , 1970-1971.
  2. ಕಫೆರ್, ಡಿ. ಜೆ., ರೀಗರ್, ಡಿ.ಎ. (2010). ವೈ ಆಲ್ ಆಫ್‌ ಮೆಡಿಸಿನ್ ಶುಡ್ ಕೇರ್ ಅಬೌಟ್ DSM-5. JAMA, 303 , 1974-1975.
  3. ಕ್ಯಾಂಪ್‌ಬೆಲ್ ಪಿ. (2010). ಎ ಡೆಕೇಡ್ ಫಾರ್ ಸೈಕಿಯಾಟ್ರಿಕ್ ಡಿಸ್‌ಆರ್ಡರ್ಸ್. ನೇಚರ್, 463 , 9.
  4. ಗ್ಲಾಸ್‌, ಆರ್. ಎಂ. (2010). ಮೆಂಟಲ್ ಹೆಲ್ತ್‌ ವರ್ಸಸ್‌ ಮೆಂಟಲ್ ಡಿಸ್‌ಆರ್ಡರ್ಸ್. JAMA, 303 , 1978-1979.
  5. ೫.೦ ೫.೧ ೫.೨ ೫.೩ ೫.೪ ೫.೫ ೫.೬ ೫.೭ ೫.೮ ಎಲ್ಕೆಸ್, ಎ. & ಥೊರ್ಪೆ ಜೆ. ಜಿ. (1967). ಎ ಸಮ್ಮರಿ ಆಫ್ ಸೈಕಿಯಾಟ್ರಿ . ಲಂಡನ್ : ಫೆಬರ್ & ಫೆಬರ್, ಪು.13.
  6. ಶಾರ್ಟರ್‌, ಇ. (1997), ಪು. 1
  7. ಸಯೀದ್. (2002), ಪು.7-8
  8. ಸಯೀದ್. (2002), ಪು. 7
  9. ಎಸ್ ಸಫವಿ-ಅಬ್ಬಾಸಿ, ಎಸ್‌ಬಿಸಿ ಬ್ರಸಿಲೈನ್ಸ್, ಆರ್‌ಕೆ ವರ್ಕ್‌ಮ್ಯಾನ್, (2007), "ದಿ ಫೇಟ್ ಆಫ್ ಮೆಡಿಕಲ್ ನಾಲೆಜ್ ಆಂಡ್ ದಿ ನ್ಯೂರೋಸೈನ್ಸ್‌ ಡ್ಯೂರಿಂಗ್ ದಿ ಟೈಮ್ ಆಫ್‌ ಚಂಗೀಸ್ ಖಾನ್ ಆಂಡ್ ದಿ ಮಂಗೋಲಿಯನ್ ಎಂಪೈರ್‌‌", ನ್ಯೂರೋಸರ್ಜಿಕಲ್ ಫೋಕಸ್, 23 (1), E13,ಪು. 3.
  10. ೧೦.೦ ೧೦.೧ ಶಾರ್ಟರ್, ಇ. (1997), ಪು. 4
  11. ೧೧.೦ ೧೧.೧ ಶಾರ್ಟರ್, ಇ. (1997), ಪು. 5
  12. ಶಾರ್ಟರ್, ಇ. (1997), ಪು. 9
  13. ಬೊರ್ತ್‌ವಿಕ್, ಎ; ಹೋಲ್ಮನ್, ಸಿ.; ಕೆನ್ನರ್ಡ್‌, ಡಿ; (2001). ದಿ ರೆಲೆವೆನ್ಸ್ ಆಫ್ ಮಾರಲ್ ಟ್ರೀಟ್‌ಮೆಂಟ್ ಟು ಕಂಟೆಂಪೊರರಿ ಮೆಂಟಲ್ ಹೆಲ್ತ್ ಕೇರ್. ಜರ್ನಲ್ ಆಫ್‌ ಮೆಂಟಲ್ ಹೆಲ್ತ್‌, 10 , 427-439.
  14. ೧೪.೦ ೧೪.೧ ೧೪.೨ ೧೪.೩ ೧೪.೪ ೧೪.೫ ೧೪.೬ ೧೪.೭ ಶಾರ್ಟರ್, ಇ. (1997), ಪು. 34
  15. ೧೫.೦ ೧೫.೧ ಶಾರ್ಟರ್, ಇ. (1997), ಪು. 35
  16. ೧೬.೦ ೧೬.೧ ಶಾರ್ಟರ್, ಇ. (1997), ಪು. [41]
  17. ಶಾರ್ಟರ್, ಇ. (1997), ಪು. 40
  18. ೧೮.೦ ೧೮.೧ ೧೮.೨ ೧೮.೩ ೧೮.೪ ಶಾರ್ಟರ್, ಇ. (1997), ಪು. 46
  19. ಶಾರ್ಟರ್, ಇ. (1997), ಪು. 47
  20. ಶಾರ್ಟರ್, ಇ. (1997), ಪು. 48
  21. ಶಾರ್ಟರ್, ಇ. (1997), ಪು. 49
  22. ರಾತ್‌ಮನ್, ಡಿ.ಜೆ. , (1990). ದಿ ಡಿಸ್ಕವರಿ ಆಫ್ ಅಸಿಲಮ್ : ಸೋಶಿಯಲ್ ಆರ್ಡರ್ ಆಂಡ್ ಡಿಸ್‌ಆರ್ಡರ್ ಇನ್ ದಿ ನ್ಯೂ ರಿಪಬ್ಲಿಕ್ . ಬೋಸ್ಟನ್: ಲಿಟಲ್ ಬ್ರೌನ್, ಪು. 239. ISBN 978-0-316-75745-4
  23. ಶಾರ್ಟರ್, ಇ. (1997), ಪು. 65
  24. ೨೪.೦ ೨೪.೧ ಶಾರ್ಟರ್, ಇ. (1997), ಪು. 101
  25. ಶಾರ್ಟರ್, ಇ. (1997), ಪು. 102
  26. ೨೬.೦ ೨೬.೧ ಶಾರ್ಟರ್, ಇ. (1997), ಪು. 103
  27. ಶಾರ್ಟರ್, ಇ. (1997), ಪು. 114
  28. ೨೮.೦ ೨೮.೧ ೨೮.೨ ಶಾರ್ಟರ್, ಇ. (1997), ಪು. 145
  29. ೨೯.೦ ೨೯.೧ ೨೯.೨ ಶಾರ್ಟರ್, ಇ. (1997), ಪು. 246
  30. ಶಾರ್ಟರ್, ಇ. (1997), ಪು. 270
  31. Turner T. (2007). "Unlocking psychosis". Brit J Med. 334 (suppl): s7. doi:10.1136/bmj.39034.609074.94. PMID 17204765.
  32. ಕೇಡ್, JFJ; ಲಿಥಿಯಂ ಸಾಲ್ಟ್ಸ್ ಇನ್ ದಿ ಟ್ರೀಟ್‌ಮೆಂಟ್ ಆಫ್‌ ಸೈಕೋಟಿಕ್ ಎಕ್ಸೈಟ್‌ಮೆಂಟ್ . ಮೆಡ್ ಜೆ ಆಸ್ಟ್ 1949, 36, p349-352
  33. ಶಾರ್ಟರ್, ಇ. (1997), ಪು. 239
  34. ೩೪.೦ ೩೪.೧ ಶಾರ್ಟರ್, ಇ. (1997), ಪು. 273
  35. ಶಾರ್ಟರ್, ಇ. (1997), ಪು. 274
  36. ಶಾರ್ಟರ್, ಇ. (1997), ಪು. 277
  37. ಸನ್ನಿ ವೈ. ಲು. & ವಿವಿಯನ ಬಿ ಗಲ್ಲಿ, , ಮನೋವೈದ್ಯಶಾಸ್ತ್ರ ಮತ್ತು ಕಾನೂನಿನ ಅಮೆರಿಕನ್ ಅಕಾಡೆಮಿಯ ನಿಯತಕಾಲಿಕ,
  38. ದಿ ಕಿಲ್ಲಿಂಗ್ ಆಫ್‌ ಸೈಕಿಯಾಟ್ರಿಕ್ ಪೇಶಂಟ್ಸ್ ಇನ್ ನಾಜಿ ಜರ್ಮನ್ ...[Isr J ಸೈಕಿಯಾಟ್ರಿ ರಿಲೇಟ್ ಸೈ. 2003] - ಪಬ್‌ಮೆಡ್ ರಿಸಲ್ಟ್ಸ್
  39. ಮೆಂಟಲ್ ಹೆಲ್ತ್ ಡ್ಯೂರಿಂಗ್ ಅಪಾರ್ಥೈಡ್
  40. ೪೦.೦ ೪೦.೧ ೪೦.೨ ಶಾರ್ಟರ್, ಇ. (1997), ಪು. 282
  41. ವೈನರ್, ಆರ್. ಡಿ. (1984). ಎಸ್ ಇಸಿಟಿ ಕಾಸ್ ಬ್ರೈನ್ ಡ್ಯಾಮೇಜ್? ಬಿಹೇವಿಯರಲ್ ಆಂಡ್ ಬ್ರೈನ್ ಸೈನ್ಸ್‌ಸ್, 7 , 153.
  42. ಮೆಲ್ಡ್ರಮ್, ಬಿ. ಎಸ್. (1986). ನ್ಯೂರೋಲಾಜಿಕಲ್ ಕಾನ್‌ಸೀಕ್ವೆನ್ಸಸ್‌ ಆಫ್ ಕೆಮಿಕಲಿ ಅಂಡ್ ಎಲೆಕ್ಟ್ರಿಕಲಿ ಇಂಡ್ಯೂಸ್ಡ್ ಸೀಜರ್ಸ್. ಅನಲ್ಸ್ ಆಫ್ ದಿ ನ್ಯೂಯಾರ್ಕ್‌ ಅಕಾಡಮಿ ಆಫ್ ಸೈನ್ಸಸ್‌, 462 , 18693.
  43. ಡ್ವೊಕ್, ಎ.ಜೆ. ; ಅರಂಗೊ, ವಿ.; ಅಂಡರ್‌ವುಡ್, ಎಂ.; ಇಲೆವಸ್ಕಿ, ಬಿ.; ರೊಸೊಕ್ಲಿಜ, ಜಿ.; ಸಕೀಮ್, ಎಚ್‌. ಎ.; ಲಿಸನ್ಬಿ, ಎಸ್‌.ಎಚ್‌. (2004). ಅಬ್ಸೆನ್ಸ್ ಆಫ್ ಹಿಸ್ಟಾಲಾಜಿಕಲ್ ಲೆಸನ್ಸ್ ಇನ್ ಪ್ರೀಮೇಟ್ ಮಾಡೆಲ್ಸ್ ಆಫ್ ಇಸಿಟಿ ಆಂಡ್ ಮ್ಯಾಗ್ನೆಟಿಕ್ ಸೀಜರ್. ಅಮೇರಿಕಾದ ಮನಃಶಾಸ್ತ್ರದ ನಿಯತಕಾಲಿಕ, 161,576-578 .
  44. ಪೀಟರ್ ಆರ್ ಬ್ರೆಗ್ಗಿನ್, ಎಂ.ಡಿ., ಎಲೆಕ್ಟ್ರೋಶಾಕ್ : ಇಟ್ಸ್ ಬ್ರೈನ್ ಡಿಸೇಬ್ಲಿಂಗ್ ಇಫೆಕ್ಟ್ಸ್
  45. ಡಾ. ಸಿಡ್ನಿ ಸಮೆಂಟ್ ಕ್ಲಿನಿಕಲ್ ಸೈಕಿಯಾಟ್ರಿ ನ್ಯೂಸ್, ಮಾರ್ಚ್‌ 1983, ಪು. 4.
  46. ೪೬.೦ ೪೬.೧ ೪೬.೨ ೪೬.೩ ೪೬.೪ ೪೬.೫ ೪೬.೬ ೪೬.೭ ೪೬.೮ ಶಾರ್ಟರ್, ಇ. (1997), ಪು. 280
  47. ಶಾರ್ಟರ್, ಇ. (1997), ಪು. 279
  48. ಸ್ಲೊವೆಂಕೊ, ಆರ್‌, (2003). ದಿ ಟ್ರಾನ್ಸಿಸ್ಟಿಟ್ಯೂಶನಲೈಜೇಶನ್ ಆಫ್ ದಿ ಮೆಂಟಲಿ ಇಲ್. ಓಹಿಯೋ ಯುನಿವರ್ಸಿಟಿ ಲಾ ರಿವ್ಯೂ, 29 , 641.
  49. ಟೊರ್ರೆ, ಇ. ಎಫ್‌. (1988). ನೋವೇರ್‌ ಟು ಗೋ : ದಿ ಟ್ರಾಜಿಕ್ ಒಡಿಸ್ಸಿ ಆಫ್‌ ದಿ ಮೆಂಟಲಿ ಇಲ್ . ನ್ಯೂಯಾರ್ಕ್‌ : ಹಾರ್ಪರ್ ಆಂಡ್ ರೋ. ಪುಟಗಳು : 25-29, 126-128. ISBN 978-0-06-015993-1
  50. ೫೦.೦ ೫೦.೧ ರೊಸೆನ್‌ಹನ್, ಡಿ. (1973). ಆನ್ ಬೀಯಿಂಗ್ ಸೇನ್ ಇನ್ ಇನ್‌ಸೇನ್ ಪ್ಲೇಸ್‌ಸ್‌ . ಸೈನ್ಸ್ 179 , 250-258.
  51. (2005). ರೊಸೆನ್‌ಹೆನ್‌ ರಿವಿಸಿಟೆಡ್ : ದಿ ಸೈಂಟಿಫಿಕ್ ಕ್ರೆಡಿಬಿಲಿಟಿ ಆಫ್ ಲಾರೆನ್ ಸ್ಲೇಟರ್ಸ್ ಸ್ಯೂಡೋಪೇಶಂಟ್ ಡಯಾಗ್ನಿಸಿಸ್‌ ಸ್ಟಡಿ. ಜರ್ನಲ್ ಆಫ್ ನರ್ವಸ್ ಆಂಡ್ ಮೆಂಟಲ್ ಡಿಸೀಸ್, 193 , 734-739.
  52. ಲೈನೆಸ್, ಜೆ.ಎಂ. (1997). ಸೈಕಿಯಾಟ್ರಿಕ್ ಪಲ್ರ್ಸ್‌ . ಫಿಲಡೆಲ್ಫಿಯಾ : ಎಫ್‌. ಎ. ಡೇವಿಸ್ ಕಂಪನಿ. ISBN 978-0-8036-0280-9[full citation needed]
  53. ೫೩.೦ ೫೩.೧ ೫೩.೨ ೫೩.೩ ಗಜ್‌ ಎಸ್‌. ಬಿ. (1992), ಪು. 130
  54. "ಜೊಹನ್ ಕ್ರಿಸ್ಟಿಯನ್ ರೈಲ್, ಡಿಕ್ಷನರಿ ಆಫ್ ಏಯ್ಟೀನ್ತ್ ಸೆಂಚುರಿ ಜರ್ಮನ್ ಫಿಲಾಸಫರ್ಸ್ ". Archived from the original on 2010-05-28. Retrieved 2010-10-19.
  55. ಬ್ರಿಟಿಶ್ ಜರ್ನಲ್ ಆಫ್ ಸೈಕಿಯಾಟ್ರಿ, , ಮನೋವೈದ್ಯಶಾಸ್ತ್ರದ 200ನೇ ಜನ್ಮದಿನ 2
  56. ಸೆಮಿನಲ್- ಕಾಂಟ್ರಿಬ್ಯೂಶನ್ಸ್-ಜೊಹಾನ್-ಕ್ರಿಶ್ಟಿಯನ್-ರೈಲ್-ಅನಾಟಮಿ-ಪಿಸಿಯಾಲಜಿ. ಎಚ್‌ಟಿಎಂ. ಸೆಮಿನಲ್ ಕಾಂಟ್ರಿಬ್ಯೂಶನ್ಸ್ ಜೊಹಾನ್ ಕ್ರಿಶ್ಟಿಯನ್ ರೈಲ್
  57. ಗಜ್, ಎಸ್‌. ಬಿ. (1992), ಪು. 4
  58. ೫೮.೦ ೫೮.೧ ಸ್ಟೊರೊ, ಎಚ್‌. ಎ. (1969). ಔಟ್‌ಲೈನ್ ಆಫ್ ಕ್ರಿನಿಕಲ್ ಸೈಕಿಯಾಟ್ರಿ . New York:Appleton-Century-Crofts, p 1. ISBN 978-0-390-85075-1
  59. ಲೈನೆಸ್, ಜೆ.ಎಂ. (1997), ಪು. 3
  60. ಗಸ್ಕ್‌, ಎಲ್. (2004), ಪು. 7
  61. ಗಜ್, ಎಸ್‌. ಬಿ. (1992), ಪು. 131
  62. ಗಸ್ಕ್‌, ಎಲ್. (2004), ಪು. 113
  63. ಗಸ್ಕ್‌, ಎಲ್. (2004), ಪು. 128
  64. ೬೪.೦ ೬೪.೧ ಪೈಟ್ರಿನಿ, ಪು. (2003). ಟುವರ್ಡ್‌ ಎ ಬಯೋಕೆಮಿಸ್ಟ್ರಿ ಆಫ್ ಮೈಂಡ್? ಅಮೇರಿಕಾದ ಮನಃಶಾಸ್ತ್ರದ ನಿಯತಕಾಲಿಕ, 160, 1907-1908.
  65. ೬೫.೦ ೬೫.೧ ಶಾರ್ಟರ್, ಇ. (1997), ಪು. 326
  66. ಹಾಸರ್ ಎಂ.ಜೆ. (ಕೊನೆಯದಾಗಿ ನವೀಕರಿಸಿರುವುದು ತಿಳಿಯದು). ವಿದ್ಯಾರ್ಥಿ ಮಾಹಿತಿ. ಸೆಪ್ಟೆಂಬರ್ 21, 2007ರಲ್ಲಿ, http://www.psychiatry.com/student.phpಯಿಂದ ಮರುಸಂಪಾದಿಸಲಾಗಿದೆ
  67. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ. 31 ಜನವರಿ 2006 ಇನ್‌ಫಾರ್ಮೇಶನ್ ಎಬೌಟ್ ಮೆಂಟಲ್ ಇಲ್‌ನೆಸ್ ಆಂಡ್ ದಿ ಬ್ರೈನ್ .http://science-education.nih.gov/supplements/nih5/Mental/guide/info-mental-c.htm ದಿಂದ ಏಪ್ರಿಲ್ 19, 2007ರಲ್ಲಿ ಮರುಸಂಪಾದಿಸಲಾಗಿದೆ.
  68. López-Muñoza, Francisco; Alamo, C; Dudley, M; Rubio, G; García-García, P; Molina, JD; Okasha, A (2006-12-07). "Progress in Neuro-Psychopharmacology and Biological Psychiatry: Psychiatry and political–institutional abuse from the historical perspective: The ethical lessons of the Nuremberg Trial on their 60th anniversary". Progress in Neuro-Psychopharmacology and Biological Psychiatry. 31 (4). Cecilio Alamoa, Michael Dudleyb, Gabriel Rubioc, Pilar García-Garcíaa, Juan D. Molinad and Ahmed Okasha. Science Direct: 791. doi:10.1016/j.pnpbp.2006.12.007. PMID 17223241. These practices, in which racial hygiene constituted one of the fundamental principles and euthanasia programmes were the most obvious consequence, violated the majority of known bioethical principles. Psychiatry played a central role in these programmes, and the mentally ill were the principal victims.
  69. Gluzman, S.F. (1991). "Abuse of psychiatry: analysis of the guilt of medical personnel". J Med Ethics. 17 (Suppl): 19–20. doi:10.1136/jme.17.Suppl.19. PMID 11651120. Based on the generally accepted definition, we correctly term the utilisation of psychiatry for the punishment of political dissidents as torture. {{cite journal}}: |access-date= requires |url= (help)
  70. Debreu, Gerard (1988). "Part 1: Torture, Psychiatric Abuse, and the Ethics of Medicine". In Corillon, Carol (ed.). Science and Human Rights. National Academy of Sciences. Retrieved 2007-10-04. Over the past two decades the systematic use of torture and psychiatric abuse have been sanctioned or condoned by more than one-third of the nations in the United Nations, about half of mankind.
  71. "ದಿ ಡಬ್ಲ್ಯುಪಿಎ ಕೋಡ್ ಆಫ್ ಎತಿಕ್ಸ್". Archived from the original on 2008-07-20. Retrieved 2010-10-19.
  72. ಅಮೆರಿಕದ ಸಮುದಾಯ ಮನೋವೈದ್ಯರ ಸಂಘ ಎಎಸಿಪಿ ಕುರಿತು Archived 2009-09-06 ವೇಬ್ಯಾಕ್ ಮೆಷಿನ್ ನಲ್ಲಿ. ಆಗಸ್ಟ್-05-2008ರಲ್ಲಿ ಮರುಸಂಪಾದಿಸಲಾಗಿದೆ.
  73. ಪಟೇಲ್, ವಿ. , ಪ್ರಿನ್ಸ್, ಎಂ. (2010). ಗ್ಲೋಬಲ್ ಮೆಂಟಲ್ ಹೆಲ್ತ್ - ಎ ನ್ಯೂ ಗ್ಲೋಬಲ್ ಹೆಲ್ತ್ ಫೀಲ್ಡ್ ಕಮ್ಸ್ ಆಫ್ ಏಜ್. JAMA, 303 , 1976-1977.
  74. Verhulst J, Tucker G (1995). "Medical and narrative approaches in psychiatry". Psychiatr Serv. 46 (5): 513–514. PMID 7627683. {{cite journal}}: Unknown parameter |month= ignored (help)
  75. ೭೫.೦ ೭೫.೧ McLaren N (1998). "A critical review of the biopsychosocial model". The Australian and New Zealand Journal of Psychiatry. 32 (1): 86–92, discussion 93–6. doi:10.1046/j.1440-1614.1998.00343.x. PMID 9565189. {{cite journal}}: Unknown parameter |month= ignored (help)
  76. McLaren, Niall (2007). Humanizing Madness. Ann Arbor, MI: Loving Healing Press. ISBN 1-932-69039-5.[page needed]
  77. McLaren, Niall (2009). Humanizing Psychiatry. Ann Arbor, MI: Loving Healing Press. ISBN 1-615-99011-9.[page needed]
  78. ೭೮.೦ ೭೮.೧ ಅಬೌಟ್: ಸೈಕಾಲಜಿ. (ಕೊನೆಯದಾಗಿ ನವೀಕರಿಸಿರುವುದು ತಿಳಿಯದು) ಡಿಫರೆನ್ಸ್ ಬಿಟ್ವೀನ್ ಸೈಕಾಲಜಿಸ್ಟ್ಸ್ ಆಂಡ್ ಸೈಕಿಯಾಟ್ರಿಸ್ಟ್ಸ್ . http://psychology.about.com/od/psychotherapy Archived 2008-07-09 ವೇಬ್ಯಾಕ್ ಮೆಷಿನ್ ನಲ್ಲಿ. /f/psychvspsych.htmದಿಂದ 25, 2007ರಲ್ಲಿ ಮರುಸಂಪಾದಿಸಲಾಗಿದೆ.
  79. ಮ್ಯಾಚೆಸ್ಟರ್ ವಿಶ್ವವಿದ್ಯಾಲಯ. (ಕೊನೆಯದಾಗಿ ನವೀಕರಿಸಿರುವುದು ತಿಳಿಯದು). ಮನೋವೈದ್ಯಶಾಸ್ತ್ರದಲ್ಲಿ ಸಂಶೋಧನೆ . http://www.manchester.ac.uk/research/areas/subareas/?a=s&id=44694 ದಿಂದ ಅಕ್ಟೋಬರ್ 13, 2007ರಲ್ಲಿ ಮರುಸಂಪಾದಿಸಲಾಗಿದೆ.
  80. ನ್ಯೂಯಾರ್ಕ್ ಸ್ಟೇಟ್ ಸೈಕಿಯಾಟ್ರಿಕ್ ಇನ್‌ಸ್ಟಿಟ್ಯೂಟ್. (2007, ಮಾರ್ಚ್‌ 15). ಸೈಕಿಯಾಟ್ರಿಕ್ ರಿಸರ್ಚ್‌ ಇನ್‌ಸ್ಟಿಟ್ಯೂಟ್ ನ್ಯೂಯಾರ್ಕ್ ಸ್ಟೇಟ್ . http://nyspi.org/ದಿಂದ ಅಕ್ಟೋಬರ್ 13, 2007ರಲ್ಲಿ ಮರುಸಂಪಾದಿಸಲಾಗಿದೆ.
  81. ಕೆನೆಡಿಯನ್ ಸೈಕಿಯಾಟ್ರಿಕ್ ರಿಸರ್ಚ್‌ ಫೌಂಡೇಶನ್. (2007, ಜುಲೈ 27). ಕೆನೆಡಿಯನ್ ಸೈಕಿಯಾಟ್ರಿಕ್ ರಿಸರ್ಚ್‌ ಫೌಂಡೇಶನ್ . http://www.cprf.ca/ದಿಂದ ಅಕ್ಟೋಬರ್ 13, 2007ರಲ್ಲಿ ಮರುಸಂಪಾದಿಸಲಾಗಿದೆ.
  82. ಎಲ್ಸೆವೈರ್. 08 ಅಕ್ಟೋಬರ‍್ 2007 ಜರ್ನಲ್ ಆಫ್‌ ಸೈಕಿಯಾಟ್ರಿಕ್ ರಿಸರ್ಚ್‌ . http://www.elsevier.com/wps/find/journaldescription.cws_home/241/ದೆಸ್ಕ್ರಿಪ್ತಿಒನ್ ದಿಂದ ಅಕ್ಟೋಬರ್‌ 13ರಂದು ಮರುಸಂಪಾದಿಸಲಾಗಿದೆ.
  83. ಮಿಶೆಲ್, ಜೆ.ಇ. ಕ್ರಾಸ್‌ಬಿ, ಆರ್‌.ಡಿ. ; ವಂಡರ್ ಲಿಚ್, ಎಸ್‌.ಎ.; ಅಡ್ಸನ್, ಡಿ.ಇ. (2000). ಎಲಿಮೆಂಟ್ಸ್ ಆಫ್ ಕ್ಲಿನಿಕಲ್ ರಿಸರ್ಚ್‌ ಇನ್ ಸೈಕಿಯಾಟ್ರಿ, . ವಾಷಿಂಗ್ಟನ್ ಡಿಸಿ : ಅಮೆರಿಕನ್ ಸೈಕಿಯಾಟ್ರಿಕ್ ಪ್ರೆಸ್. ISBN 978-0-88048-802-0.
  84. ಮೆಯೆಂಡಾರ್ಫ್, ಆರ್. (1980). ಮನೋವೈದ್ಯಶಾಸ್ತ್ರದಲ್ಲಿ ರೋಗನಿದಾನ ಮತ್ತು ಭೇದಾತ್ಮಕ ರೋಗನಿದಾನ ಹಾಗೂ ಪೂರ್ವಸೂಚಕ ರೋಗನಿದಾನಕ್ಕೆ ಸಂಬಂಧಿಸಿದ ಸನ್ನಿವೇಶದ ಪ್ರಶ್ನೆ Schweizer Archiv Neurol Neurochir Psychiatry für Neurologie, Neurochirurgie et de psychiatrie, 126 , 121-134.
  85. ಲೀಹ್, ಎಚ್‌. (1983), ಪು. 15
  86. ಲೀಹ್, ಎಚ್‌. (1983), ಪು. 67
  87. ಲೀಹ್, ಎಚ್‌. (1983), ಪು. 17
  88. ಲೈನೆಸ್, ಜೆ.ಎಂ. (1997), ಪು. 10
  89. ಹ್ಯಾಂಪೆಲ್, ಎಚ್.; ಟೇಪೆಲ್, ಎಸ್.ಜೆ.; ಕೊಟ್ಟರ್, ಎಚ್.ಯು.; ಎಟ್ ಅಲ್. 1997 ಅಲ್ಜಿಮೆರ್‌ನ ಕಾಯಿಲೆಯ ಪತ್ತೆಹಚ್ಚುವ ಮತ್ತು ಸಂಶೋಧನೆಯಲ್ಲಿ ಸ್ಟ್ರಕ್ಚರಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. Nervenarzt, 68 , 365-378.
  90. ಟೌನ್‌ಸೆಂಡ್, ಬಿ.ಎ.; ಪೆಟ್ರೆಲ್ಲಾ, ಜೆ.ಆರ್.; ದೊರೈಸ್ವಾಮಿ, ಪಿ.ಎಮ್. (2002). ಮುಪ್ಪಿನ ಮನೋರೋಗ ಚಿಕಿತ್ಸೆಯಲ್ಲಿ ನ್ಯೂರೋಇಮೇಜಿಂಗ್ ಪಾತ್ರ. ಮನೋರೋಗ ಚಿಕಿತ್ಸೆಯಲ್ಲಿ ಪ್ರಸ್ತುತ ಅಭಿಪ್ರಾಯ, 15, 427-432.
  91. "NIMH publications (2009) Neuroimaging and Mental Illness". Archived from the original on 2013-06-01. Retrieved 2010-10-19.
  92. ಕ್ರೆಬ್ಸ್, ಎಂ.ಒ. (2005). ತಳಿವಿಜ್ಞಾನ ಕುರಿತು ಭವಿಷ್ಯದ ಕೊಡುಗೆಗಳು. ವರ್ಲ್ಡ್ ಜರ್ನಲ್ ಆಫ್ ಬಯಾಲಾಜಿಕಲ್ ಸೈಕಿಯಾಟ್ರಿ, 6 , 49-55
  93. ಬೆನೆಸ್, ಎಫ್‌.ಎಂ. (2007). ಆನ್ ಎಲೆಕ್ಟ್ರೋಫಿಸಿಯಾಲಾಜಿಕಲ್ ಎಂಡೋಫೀನೋಟೈಪ್ ಆಫ್ ಹೈಪೋಮ್ಯಾನಿಕ್ ಆಂಡ್ ಹೈಪರ್‌ತಿಮಿಕ್ ಪರ್ಸನಾಲಿಟಿ. ಜರ್ನಲ್ ಆಫ್ ಅಫೆಕ್ಟಿವ್ ಡಿಸ್‌ಆರ್ಡರ್ಸ್, 101 , 13-26.
  94. ವೊಂಕ್, ಆರ್‌. ; ವಾನ್ ಡರ್ ಸ್ಕಾಟ್, ಎ.ಸಿ.; ಖಾನ್, ಆರ್‌. ಎಸ್‌; ಎಟ್ ಅಲ್. (2007). ಈಸ್ ಆಟೋಇಮ್ಯೂನ್ ಥೈರಾಯ್ಡ್‌ಟಿಸ್ ಪಾರ್ಟ್‌ ಆಫ್‌ ದಿ ಜೆನೆಟಿಕ್ ವಲ್ನರಬಿಲಿಟಿ (ಆರ್‌ ಆನ್ ಎಂಡೋಫೀನೋಟೈಪ್) ಫಾರ್ ವೈಪೋಲಾರ್ ಡಿಸ್‌ಆರ್ಡರ್‌? ಬಯಾಲಾಜಿಕಲ್ ಸೈಕಿಯಾಟ್ರಿ, 62 , 135-140.
  95. ವಿಶ್ವ ಆರೋಗ್ಯ ಸಂಸ್ಥೆ. (1992). ICD-10 ಮಾನಸಿಕ ಮತ್ತು ವರ್ತನಾ ಅಸ್ವಸ್ಥತೆಯ ವರ್ಗೀಕರಣಗಳು : ಕ್ಲಿನಿಕಲ್ ವಿವರಣೆಗಳು ಮತ್ತು ರೋಗನಿದಾನದ ಮಾರ್ಗದರ್ಶಿಸೂತ್ರಗಳು . ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆ. ISBN 978-92-4-154422-1
  96. ೯೬.೦ ೯೬.೧ ೯೬.೨ ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್. (2000). ಮಾನಸಿಕ ಅಸ್ವಸ್ಥತೆಗಳ ರೋಗನಿದಾನ ಮತ್ತು ಅಂಕಿಸಂಖ್ಯಾತ್ಮಕ ಕೈಪಿಡಿ (4ನೇ ಆವೃತ್ತಿ) . ವಾಷಿಂಗ್ಟನ್ ಡಿ.ಸಿ. ಅಮೆರಿಕನ್ ಸೈಕಿಯಾಟ್ರಿಂಕ್ ಪಬ್ಲಿಷಿಂಗ್, ಇಂಕ್. ISBN 978-0-89042-025-6
  97. ಚೆನ್, ವೈ. ಎಫ್. (2002) ಮಾನಸಿಕ ಅಸ್ವಸ್ಥತೆಗಳ ಚೀನೀ ವರ್ಗೀಕರಣ (CCMD-3): ಅಂತಾರಾಷ್ಟ್ರೀಯ ವರ್ಗೀಕರಣದೊಂದಿಗೆ ಸಮನ್ವಯದ ದಿಕ್ಕಿನಲ್ಲಿ. ಸೈಕೋಪೆಥಾಲಜಿ, 35 , 171-175
  98. ಎಸ್ಸೆನ್ - ಮೋಲರ್, ಇ.(1971). ಮಾನಸಿಕ ಅಸ್ವಸ್ಥತೆಗಳ ವರ್ಗೀಕರಣದ ಕುರಿತು. ಆಕ್ಟಾ ಸೈಕಿಯಾಟ್ರಿಕಾ ಸ್ಕ್ಯಾಂಡಿನಾವಿಕಾ , 37 , 119-126.
  99. ಮೆಜ್ಜಿಶ್, ಜೆ. ಇ. (1979). ಬಹುಅಕ್ಷೀಯ ಮನೋವೈದ್ಯಶಾಸ್ತ್ರ ರೋಗನಿದಾನದಲ್ಲಿ ವಿನ್ಯಾಸಗಳು ಮತ್ತು ಸಮಸ್ಯೆಗಳು. ಸೈಕಾಲಾಜಿಕಲ್ ಮೆಡಿಸಿನ್ , 9 , 125-137.
  100. ಗಜ್ ಎಸ್‌. ಬಿ. (1970) The need for toughmindedness in psychiatric thinking. ಸೌದರ್ನ್‌ ಮೆಡಿಕಲ್ ಜರ್ನಲ್ , 63 , 662-671.
  101. ಮಾನ್‌ಕ್ರಿಫ್ ಅಟ್ ಅಲ್. (2003). ಆಕ್ಟಿವ್ ಪ್ಲಸೀಬೋಸ್ ವರ್ಸಸ್ ಆಂಟಿಡಿಪ್ರೆಸೆಂಟ್ಸ್ ಫಾರ್ ಡಿಪ್ರೆಶನ್. ಕೊಕ್ರೇನ್ ಡಾಟಾಬೇಸ್‌ಸ್‌.
  102. ಹಾಪರ್ ಕೆ, ವಾಂಡರ್‌ಲಿಂಗ್ ಜೆ (2000). ಅಭಿವೃದ್ಧಿಗೊಂಡ ಮತ್ತು ಅಭಿವೃದ್ಧಿಶೀಲ ದೇಶಗಳ ನಡುವೆ ಛಿದ್ರಮನಸ್ಕತೆ (ಸ್ಕೀಜೋಫ್ರೇನಿಯಾ)ಯ ಭಿನ್ನತೆಗಳು ಮತ್ತು ಫಲಿತಾಂಶವನ್ನು ಪುನರಾವಲೋಕನ : ISoSನ ಫಲಿತಾಂಶಗಳು, ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದ ಅನುಸರಣಾ ಯೋಜನೆ ಛಿದ್ರಮನಸ್ಕತೆ ಕುರಿತ ಅಂತಾರಾಷ್ಟ್ರೀಯ ಅಧ್ಯಯನ. ಸ್ಕೀಜೋಫ್ರೇನಿಯಾ ಬುಲೆಟಿನ್ , 26 (4), 835–46. ಪಿಎಮ್‌ಐಡಿ 15172857
  103. Eds. ಸ್ಪೀಗೆಲ್ ಟಿ, ಲೇಕ್‌ ಜೆ. (2006). ಕಾಂಪ್ಲಿಮೆಂಟರಿ ಆಂಡ್ ಆಲ್ಟರ್‌ನೇಟಿವ್ ಟ್ರೀಟ್‌ಮೆಂಟ್ಸ್ ಇನ್ ಮೆಂಟಲ್ ಹೆಲ್ತ್‌ ಕೇರ್ ಅಮೆರಿಕನ್ ಸೈಕಿಯಾಟ್ರಿಕ್ ಪಬ್ಲಿಕೇಶನ್, ಇಂಕ್. , ಪು. xxi ರ ಉಲ್ಲೇಖ
  104. ಲಾರೆನ್ ಆರ್ ಮೊಶರ್, ರಿಚರ್ಡ್‌ ಗೊಸ್ಡನ್ ಮತ್ತು ಶರೊನ್ ಬೆಡರ್, ' ಡ್ರಗ್ ಕಂಪನೀಸ್ ಆಂಡ್ ಸ್ಕೀಜೋಫ್ರೇನಿಯಾ : ಅನ್‌ಬ್ರಿಡಲ್‌‌ಡ್ ಕ್ಯಾಪ್ಟಲಿಸಮ್‌ ಮೀಟ್ಸ್ ಮ್ಯಾಡ್‌ನೆಸ್' , ಹುಚ್ಚುತನದ ಮಾದರಿಗಳು : ಛಿದ್ರಮನಸ್ಕತೆ (ಸ್ಕೀಜೋಫ್ರೇನಿಯಾ) ಕುರಿತ ಮಾನಸಿಕ, ಸಾಮಾಜಿಕ ಮತ್ತು ಜೈವಿಕ ದೃಷ್ಟಿಕೋನಗಳು ಜಾನ್‌ ರೀಡ್, ಲಾರೆನ್ ಮೊಶೆರ್ ಮತ್ತು ರಿಚರ್ಡ್‌ ಬೆಂಟಾಲ್, ಬ್ರುನ್ನೆರ್-ರೂಟ್ಲೆಡ್ಜ್, ನ್ಯೂಯಾರ್ಕ್‌, ಇವರಿಂದ ಸಂಪಾದಿತ, 2004, ಪು. 115-130.
  105. ರಿಚರ್ಡ್‌ ಗೊಸ್ಡನ್ ಮತ್ತು ಶರೊನ್ ಬೆಡರ್, 'ಫಾರ್ಮಾಸ್ಯುಟಿಕಲ್ ಇಂಡಸ್ಟ್ರಿ ಅಜೆಂಡಾ ಸೆಟ್ಟಿಂಗ್ ಇನ್ ಮೆಂಟಲ್ ಹೆಲ್ತ್‌ ಪಾಲಿಸೀಸ್‌' , ಎಥಿಕಲ್ ಹ್ಯೂಮನ್ ಸೈನ್ಸಸ್ ಆಂಡ್ ಸರ್ವಿಸಸ್ 3(3) ಫಾಲ್/ವಿಂಟರ್ 2001, ಪುಟಗಳು. 147-159
  106. ಥಾಮಸ್ ಗಿನ್ಸ್‌ಬರ್ಗ್‌. "ಡೊನೇಶನ್ಸ್ ಟೈ ಡ್ರಗ್ ಫರ್ಮ್ಸ್ ಆಂಡ್ ನಾನ್‌‌ಪ್ರಾಫಿಟ್ಸ್" . ದಿ ಫಿಲಡೆಲ್ಫಿಯಾ ಇನ್‌ಕ್ವೈರರ್‌, 28 ಮೇ 2006.
  107. ರೇ ಇ ಅನ್‌ಜಿಕರ್, ಕೇಟ್ ಪಿ. ವಾಲ್ಟರ್ಸ್, ಡೆಬ್ರಾ ರಾಬಿನ್ಸನ್‌ ಎಟ್ ಅಲ್. ಸೌಲಭ್ಯಗಳಿಂದ ಹಕ್ಕುಗಳವರೆಗೆ : ಮನೋವ್ಯಾಧಿ ಇರುವರೆಂದು ಹಣೆಪಟ್ಟಿ ಹಚ್ಚಲಾದ ವ್ಯಕ್ತಿಗಳು ಸ್ವತಃ ಮಾತನಾಡಿರುವುದು Archived 2010-12-28 ವೇಬ್ಯಾಕ್ ಮೆಷಿನ್ ನಲ್ಲಿ.. ನ್ಯಾಶನಲ್ ಕೌನ್ಸಿಲ್ ಆನ್ ಡಿಸೆಬಲಿಟಿ 20 ಜನವರಿ 2000.
  108. Treatment Protocol Project (2003). Acute inpatient psychiatric care: A source book. Darlinghurst, Australia: World Health Organisation. ISBN 0-9578073-1-7. OCLC 223935527. {{cite book}}: More than one of |author= and |last= specified (help)


ಉಲ್ಲೇಖಿತ ವಿಷಯಗಳು

ಬದಲಾಯಿಸಿ
  • ಗಾಸ್ಕ್, ಎಲ್. (2004). ಎ ಶಾರ್ಟ್‌ ಇಂಟ್ರೊಡಕ್ಷನ್ ಟು ಸೈಕಿಯಾಟ್ರಿ . ಲಂಡನ್: ಸೇಜ್ ಪಬ್ಲಿಕೇಶನ್‌ ಲಿಮಿಟೆಡ್.,ಪು: 113 ISBN 978-0-7619-7138-2
  • ಗಜ್‌ ಎಸ್‌. ಬಿ.(1992). ವೈ ಸೈಕಿಯಾಟ್ರಿ ಈಸ್ ಎ ಬ್ರಾಂಚ್ ಆಫ್ ಮೆಡಿಸಿನ್ . ನ್ಯೂಯಾರ್ಕ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ., ಪು. 35. ISBN 978-0-19-507420-8
  • ಲೀಹ್, ಎಚ್‌. (1983). ಸೈಕಿಯಾಟ್ರಿ ಇನ್ ದಿ ಪ್ರ್ಯಾಕ್ಟೀಸ್ ಆಫ್ ಮೆಡಿಸಿನ್. ಮೆನ್ಲೋ ಪಾರ್ಕ್: ಅಡಿಸನ್-ವೆಸ್ಲೇ ಪಬ್ಲಿಶಿಂಗ್ ಕಂಪನಿ. ISBN 978-0-201-05456-9
  • ಲೈನೆಸ್, ಜೆ. ಎಂ. (1997). ಸೈಕಿಯಾಟ್ರಿಕ್ ಪರ್ಲ್ಸ್ . ಫಿಲಡೆಲ್ಫಿಯಾ : ಎಫ್. ಎ. ಡೇವಿಸ್ ಕಂಪನಿ ಪು.3. ISBN 978-0-8036-0280-9
  • ಶಾರ್ಟರ್, ಇ. (1997). ಎ ಹಿಸ್ಟರಿ ಆಫ್ ಸೈಕಿಯಾಟ್ರಿ : ಫ್ರಮ್ ದಿ ಎರಾ ಆಫ್ ದಿ ಅಸಿಲಮ್ ಟು ದಿ ಏಜ್ ಆಪ್ ಪ್ರೊಜಾಕ್ . ನ್ಯೂಯಾರ್ಕ್‌ : ಜಾನ್ ವಿಲೆ & ಸನ್ಸ್, ಇಂಕ್. ISBN 978-0-471-24531-5
  • ಸಯೀದ್, ಇಬ್ರಾಹಿಂ ಬಿ. (2002). "ಇಸ್ಲಾಮಿಕ್ ಮೆಡಿಸಿನ್ : 1000 ಇಯರ್ಸ್ ಅಹೆಡ್ ಆಫ್ ಇಟ್ಸ್ ಟೈಮ್‌" ಜರ್ನಲ್ ಆಫ್ ದಿ ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಇಸ್ಲಾಮಿಕ್ ಮೆಡಿಸಿನ್ , (2): 2-9 [7-8].

ಮುಂದಿನ ಓದಿಗಾಗಿ

ಬದಲಾಯಿಸಿ
  • ಬೆರಿಯೋಸ್ ಜಿ ಇ, ಪೋರ್ಟರ್ ಆರ್ (1995) ದಿ ಹಿಸ್ಟರಿ ಆಫ್ ಕ್ಲಿನಿಕಲ್ ಸೈಕಿಯಾಟ್ರಿ . ಲಂಡನ್, ಆಥ್ಲೋನ್ ಪ್ರೆಸ್
  • ಬೆರಿಯೋಸ್ ಜಿ ಇ (1996) ಹಿಸ್ಟರಿ ಆಫ್ ಮೆಂಟಲ್ ಸಿಂಪ್ಟನ್ಸ್. ದಿ ಹಿಸ್ಟರಿ ಆಫ್ ಡಿಸ್ಕ್ರಿಪ್ಟಿವ್ ಸೈಕೋಪ್ಯಥಾಲಜಿ ಸಿನ್ಸ್ ದಿ ನೈಂಟೀನ್ತ್ ಸೆಂಚುರಿ . ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಮುದ್ರಣಾಲಯ.
  • ಫೋರ್ಡ್‌-ಮಾರ್ಟಿನ್, ಪೌಲಾ ಆನ್ನೆ ಗೇಲ್ (2002), "ಸೈಕೋಸಿಸ್ " ಗೇಲ್ ಎನ್‌ಸೈಕ್ಲೋಪಿಡಿಯಾ ಆಫ್ ಮೆಡಿಸಿನ್, ಫಾರ್ಮಿಂಗ್ಟನ್ ಹಿಲ್ಸ್, ಮಿಚಿಗನ್
  • ಹರ್ಶ್‌ಫೆಲ್ಡ್ ಎಟ್ ಅಲ್ . 2003, "ಪರ್ಸೆಪ್ಷನ್ಸ್ ಆಂಡ್ ಇಂಪ್ಯಾಕ್ಟ್ ಆಫ್ ಬೈಪೋಲಾರ್ ಡಿಸ್‌ಆರ್ಡರ್ : ಹೌ ಫಾರ್ ಹ್ಯಾವ್‌ ವಿ ರಿಯಲಿ ಕಮ್‌?" /0}, ಜೆ. ಕ್ಲಿನ್. ಸೈಕಿಯಾಟ್ರಿ , ಸಂಚಿಕೆ 64, ಪು. vol.64(2), ಪು. 161-174.
  • ಮೆಕ್‌ಗೊರಿ, ಪಿಡಿ, ಮಿಹಲೊಪಾಲಸ್ ಸಿ, ಹೆನ್ರಿ ಎಲ್ ಎಟ್ ಅಲ್. (1995) ಸ್ಪರಿಯಸ್ ಪ್ರಿಸಿಶನ್ : ಪ್ರೊಸಿಜರಲ್ ವ್ಯಾಲಿಡಿಟಿ ಆಫ್ ಡಯಗ್ನೊಸ್ಟಿಕ್ ಅಸೆಸ್‌ಮೆಂಟ್ ಇನ್ ಸೈಕಿಯಾಟ್ರಿಕ್ ಡಿಸ್‌ಆರ್ಡರ್ಸ್. ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ 152 (2) 220-223
  • ಮೆಡ್‌ಫ್ರೆಂಡ್ಲಿ.ಕಾಮ್, ಸೈಕಾಲಜಿಸ್ಟ್ , 2006ರ ಸೆಪ್ಟೆಂಬರ್ 20ರಂದು ನೋಡಿರುವುದು
  • ಮಾನ್‌ಕ್ರಿಫ್ ಜೆ, ಕೊಹೆನ್ ಡಿ. (2005). ರಿಥಿಂಕಿಂಗ್ ಆಫ್ ಮಾಡೆಲ್ಸ್ ಆಫ್‌ ಸೈಕೋಟ್ರೋಪಿಕ್ ಡ್ರಗ್ ಆಕ್ಷನ್. ಸೈಕೋಥೆರಪಿ & ಸೈಕೋಚಾಸ್ಮಾಟಿಕ್ಸ್, , 74, 145-153
  • ಸಿ, ಬರ್ಕೆ, ಸೈಕಿಯಾಟ್ರಿ : ಎ "ವ್ಯಾಲ್ಯೂ-ಫ್ರೀ" ಸೈನ್ಸ್‌? ಲಿನಾಕ್ರಿ ತ್ರೈಮಾಸಿಕ, , ಸಂಚಿಕೆ. 67/1 (ಫೆಬ್ರವರಿ 2000), ಪುಟ59–88. Cormacburke.or.ke
  • ನ್ಯಾಶನಲ್ ಅಸೋಸಿಯೇಶನ್ ಆಫ್ ಕಾಗ್ನಿಟಿವ್ ಥೆರಪಿಸ್ಟ್ಸ್, ವಾಟ್‌ ಈಸ್ ಕಾಗ್ನಿಟಿವ್-ಬಿಹೇವಿಯರಲ್ ಥೆರಪಿ? , ಸೆಪ್ಟೆಂಬರ್ 20ರಂದು ನೋಡಿರುವುದು
  • ವಾನ್ ಒಎಸ್ ಜೆ, ಗಿಲ್ವರ್ರಿ ಸಿ, ಬೇಲ್ ಆರ್ ಎಟ್ ಅಲ್. (1999) ಎ ಕಂಪ್ಯಾರಿಸನ್ ಆಫ್‌ ದಿ ಯುಟಿಲಿಟಿ ಆಫ್ ಡೈಮೆನ್ಷನಲ್ ಆಂಡ್ ಕೆಟಗಾರಿಕಲ್ ರೆಪ್ರೆಸೆಂಟೇಶನ್ಸ್ ಆಫ್ ಸೈಕೋಸಿಸ್. ಸೈಕಾಲಾಜಿಕಲ್ ಮೆಡಿಸಿನ್ 29 (3) 595-606
  • ವಿಲಿಯಮ್ಸ್ ಜೆ.ಬಿ, ಗಿಬ್ಬನ್ ಎಂ., ಫರ್ಸ್ಟ್ ಎಂ., ಸ್ಪಿಟ್ಜರ್ ಆರ್‌., ಡೇವಿಸ್ ಎಂ., ಬೋರಸ್ ಜೆ., ಹೋವೆಸ್ ಎಂ., ಕೇನ್‌ ಜೆ., ಪೋಪ್ ಎಚ್‌., ರೌನ್‌ಸವಿಲ್ಲೆ, ಬಿ., ಮತ್ತು ವಿಟ್ಚೆನ್ ಎಚ್‌. (1992). ದಿ ಸ್ಟ್ರಕ್ಚರ್ಡ್ ಕ್ಲಿನಿಕಲ್ ಇಂಟರ್‌ವ್ಯೂ ಫಾರ್ DSM-III-R (SCID) II: ಮಲ್ಟಿ-ಸೈಟ್ ಟೆಸ್ಟ್-ರಿಟೆಸ್ಟ್ ರಿಲಾಯಬಲಿಟಿ. ಸಾಮಾನ್ಯ ಮನೋರೋಗ ಚಿಕಿತ್ಸೆಯ ದಾಖಲೆಗಳು , 49, 630-636.
  • ಹಿರುಟಾ, ಗೆನ್ಷಿರೊ (ಡಾ. ಅಲನ್‌ ಬೆವೆರಿಜ್ ಸಂಪಾದಿಸಿರುವುದು) "ಜಪಾನೀಸ್ ಸೈಕಿಯಾಟ್ರಿ ಇನ್ ದಿ ಎಡೊ ಪೀರಿಯಡ್ (1600-1868) Archived 2015-12-27 ವೇಬ್ಯಾಕ್ ಮೆಷಿನ್ ನಲ್ಲಿ.." ಹಿಸ್ಟರಿ ಆಫ್ ಸೈಕಿಯಾಟ್ರಿ,ಸಂಚಿಕೆ. 13, No. 50, 131-151 (2002).

ಬಾಹ್ಯ ಕೊಂಡಿಗಳು

ಬದಲಾಯಿಸಿ