ನೇಚರ್ (ನಿಯತಕಾಲಿಕ )
ನೇಚರ್ ಇದೊಂದು ಬ್ರಿಟಿಶ್ ನ ವೈಜ್ಞಾನಿಕ ನಿಯತಕಾಲಿಕ ಮೊದಲಬಾರಿಗೆ 4,ನವೆಂಬರ್ 1869ರಲ್ಲಿ ಪ್ರಕಟಗೊಂಡಿತು. ಇದು ವಿಶ್ವದ ಅತ್ಯಂತ ಶಿಸ್ತುಬದ್ದ ವೈಜ್ಞಾನಿಕ ವಲಯದ [೧] ನಿಯತಕಾಲಿಕ ಬಹಳಷ್ಟು ವೈಜ್ಞಾನಿಕ ನಿಯತಕಾಲಿಕಗಳು ಈಗ ವಿಶೇಷತೆಯನ್ನು ಹೊಂದಿವೆ.ಇದರಲ್ಲಿ ನೇಚರ್ ಕೂಡ ಕೆಲವೇ ಕೆಲವುಗಳಲ್ಲಿ ಒಂದು(ಇನ್ನುಳಿದ ಸಾಪ್ತಾಹಿಕ ನಿಯತಕಾಲಿಕಗಳೆಂದರೆ ಸೈನ್ಸ್ ಅಂಡ್ ಪ್ರೊಸೀಡಿಂಗ್ಸ ಆಫ್ ದಿ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಿಸ್ ಗಳು ಪ್ರಮುಖ ಉದಾಹರಣೆಗಳು)ಇದು ಇವತ್ತಿಗೂ ನೈಜ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸುತ್ತದೆ.ವೈಜ್ಞಾನಿಕ ವಲಯದಲ್ಲಿನ ಸಂಪೂರ್ಣ ವಿವರಗಲನ್ನು ಅದು ಪ್ರಕಟಿಸುತ್ತದೆ. ವೈಜ್ಞಾನಿಕ ಸಂಶೋಧನೆಯ ವಿವಿಧ ಕ್ಷೇತ್ರಗಳಲ್ಲಿ ಯಾವ ಯಾವ ಹೊಸ ಆವಿಷ್ಕಾರಗಳು ಬಂದಿವೆ ಇನ್ನುಳಿದ ಲೇಖನಗಳು ಹೇಗೆ ಮತ್ತು ಯಾವ ತೆರನಾಗಿ ಬೆಳಕು ಕಂಡಿವೆ.ನೇಚರ್. ನಲ್ಲಿ ಬಂದ ಪತ್ರಗಳ ಬಗ್ಗೆ ವಿವರ ಮಾಹಿತಿ ನೀಡುತ್ತವೆ.
Nature | |
---|---|
ಸಂಕ್ಷಿಪ್ತ ಶೀರ್ಷಿಕೆ (ISO 4) | Nature |
ವರ್ಗ | Interdisciplinary |
ಭಾಷೆ | English |
Publication details | |
ಪ್ರಕಾಶಕ | Nature Publishing Group (United Kingdom) |
ಪ್ರಕಟಣೆ ಇತಿಹಾಸ | 1869–present |
ಆರ್ವತನ | Weekly |
ಪ್ರಭಾವದ ಅಂಶ (2008) | 31.434 |
Indexing | |
ಐ.ಎಸ್.ಎಸ್.ಎನ್. | 0028-0836 (print) 1476-4687 (web) |
ಕೋಡೆನ್(CODEN) | NATUAS |
ಒ.ಸಿ.ಎಲ್.ಸಿ. ಸಂಖ್ಯೆ | 01586310 |
Links | |
ಸಂಶೋಧನಾ ವಿಜ್ಞಾನಿಗಳು ಈ ಜರ್ನಲ್ ನ ಪ್ರಮುಖ ಮತ್ತು ಮೊದಲ ವೀಕ್ಷಕರಾಗಿರುತ್ತಾರೆ.ಆದರೆ ಹಲವಾರು ವೈಜ್ಞಾನಿಕ ಆವಿಷ್ಕಾರಗಳ ಕುರಿತು ಹಲವಾರು ವಿಷಯಗಳನ್ನು ಮಂಡಿಸಲಾಗುತ್ತದೆ.ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಮತ್ತು ವಿಜ್ಞಾನಿಗಳಿಗೆ ಅವರ ವಲಯದ ಮಾಹಿತಿಯು ದೊರೆಯುವಂತೆ ಮಾಡಲಾಗುತ್ತದೆ. ಪ್ರತಿ ಸಂಚಿಕೆಯ ಮೊದಲ ಭಾಗದಲ್ಲಿ ಸಂಪಾದಕೀಯಗಳಿದ್ದರೆ ಇನ್ನುಳಿದಂತೆ ಜನಸಾಮಾನ್ಯರಿಗೆ ಅಗತ್ಯವಿರುವ ವಿಜ್ಞಾನ ಮಾಹಿತಿಯ ಲೇಖನಗಳು ಪ್ರಕಟಗೊಂಡಿರುತ್ತವೆ.ಪ್ರಸಕ್ತ ವಿದ್ಯಮಾನಗಳು,ವಿಜ್ಞಾನದ ನಿಧಿ,ವ್ಯವಹಾರ-ವಹಿವಾಟು,ವೈಜ್ಞಾನಿಕ ನೀತಿ-ನಿಯಮಾವಳಿಗಳು ಮತ್ತು ಸಂಶೋಧನೆಯ ಆವಿಷ್ಕಾರಗಳು ಇತ್ಯಾದಿ. ಇದರಲ್ಲಿ ಪುಸ್ತಕ ಮತ್ತು ಕಲೆಗಳಿಗಾಗಿ ಪ್ರತ್ಯೇಕ ವಿಭಾಗಗಳಿವೆ. ಇನ್ನುಳಿದ ಭಾಗದಲ್ಲಿ ಬಹುಭಾಗವು ಸಂಶೋಧನಾತ್ಮಕ ಲೇಖನಗಳಿರುತ್ತವೆ.ಅವು ಅತ್ಯಂತ ಗಾಢ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುತ್ತವೆ. ಲೇಖನಗಳ ಪರಿಧಿಯ ಬಗ್ಗೆ ಯಾವಾಗಲೂ ಒಂದು ಪರಿಮಿತಿ ಇರುತ್ತದೆ.ಇನ್ನು ಕೆಲವು ಸಂಶೋಧನೆಗಳ ಬಗ್ಗೆ ಇನ್ನೂ ಅರ್ಧ ಮರ್ಧ ವಿವರಗಳು ಪ್ರಕಟವಾಗಿ ಅವು ಪ್ರಶ್ನಾತೀತ ಎನಿಸುತ್ತವೆ.ಈ ಲೇಖನಗಳಿಗೆ ಪುರವಣಿಗಳಲ್ಲಿಯೂವಿಷಯವಸ್ತು ಗಳು ಸಹ ಪ್ರಕಟವಾದ ವಿಷಯಗಳು ಇತ್ಯಾದಿ ಜರ್ನಲ್ ನ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಾಗ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ.
ಸುಮಾರು 2007ರಲ್ಲಿ ನೇಚರ್ (ವಿಜ್ಞಾನ ದ ಜೊತೆಗೆ ಪ್ರಿನ್ಸ್ ಆಫ್ ಆಸ್ಟುರಿಯಸ್ ಅವಾರ್ಡ್ ನ್ನು ಸಂಪರ್ಕಗಳು ಮತ್ತು ಮಾನವೀಯ ಸಂವೇದನೆಗಳಿಗಾಗಿ ಪ್ರಶಸ್ತಿ [೨] ಪಡೆಯಿತು.
ಇತಿಹಾಸ
ಬದಲಾಯಿಸಿವೈಜ್ಞಾನಿಕ ಮ್ಯಾಗಸಿನ್ ಗಳು ಮತ್ತು ನೇಚರ್
ಬದಲಾಯಿಸಿಹತ್ತೊಂಬತ್ತನೆಯ ಶತಮಾನವು ವೈಜ್ಞಾನಿಕ ಪ್ರಗತಿಗೆ ಬ್ರಿಟೇನ್ ಒಂದು ತವರು ಮನೆಯಾಗಿತ್ತು;ಅದರಲ್ಲೂ 9ನೆಯ ಶತಮಾನದ ಅಂತ್ಯಕ್ಕೆ ಹೆಚ್ಚಾಗಿತ್ತು.ಇದೇ ಸಂದರ್ಭದಲ್ಲಿ ಬ್ರಿಟನ್ ದೊಡ್ಡ ಪ್ರಮಾಣದ ತಂತ್ರಜ್ಞಾನಿಕ ಮತ್ತು ಕೈಗಾರಿಕಾ ಬದಲಾವಣೆ ಮತ್ತು ಪ್ರಗತಿಯನ್ನು [೩] ಕಂಡಿತು. ಈ ವೇಳೆಯಲ್ಲಿನ ಅತ್ಯಂತ ಗೌರವಯುತ ವೈಜ್ಞಾನಿಕ ಜರ್ನಲ್ ಗಳೆಂದರೆ;ರಾಯಲ್ ಸೊಸೈಟಿ,ಇದು ಐಸಾಕ್ ನ್ಯುಟನ್ ,ಮೈಕೆಲ್ ಫಾರ್ಡೆ,ಚಾರ್ಲ್ಸ್ ಡ್ರಾವಿನ್ ಅವರ ಆರಂಭಿಕ ಆವಿಷ್ಕಾರಗಳು ಹೀಗೆ ಹಲವಾರು ಸಂಶೋಧನೆಗಳ ಲೇಖನಗಳನ್ನು ಪ್ರಕಟಿಸಿತು.ಇದೂ ಅಲ್ಲದೇ ಈ ಸಮಯದಲ್ಲಿ ಬಹಳಷ್ಟು ವೈಜ್ಞಾನಿಕ ನಿಯತಕಾಲಿಕಗಳು ದ್ವಿಗುಣಗೊಂಡವು,1850ರಿಂದ 1860ರ ವರೆಗೆ ಇದರ ಪ್ರಾಬಲ್ಯ ಹೆಚ್ಚುತ್ತಾ [೪] ಬಂತು. ಇಂತಹ ಜನಪ್ರಿಯ ವೈಜ್ಞಾನಿಕ ನಿಯತಕಾಲಿಕಗಳ ಬಗ್ಗೆ ಅವುಗಳ ಸಂಪಾದಕರು ಹೇಳುವಂತೆ ಅತ್ಯಂತ ಮುಂದುವರೆದ ಅವಿಷ್ಕಾರಗಳನ್ನು ಬೆಳಕಿಗೆ ತಂದು "ವಿಜ್ಞಾನದ ಅಂಗಗಳನ್ನು" ಸೇವೆ ಮಾಡಲು ಅನುಕೂಲ ಮಾಡಲಾಗುತ್ತದೆ.ಈ ಮೂಲಕ ಸಾರ್ವಜನಿಕರನ್ನು ವಿಜ್ಞಾನದ ಆಗುಹೋಗುಗಳ ಬಗ್ಗೆ ಸಂಪರ್ಕಕ್ಕೆ [೪] ತರಲಾಗಿದೆ.
ನೇಚರ್ , ನಿಯತಕಾಲಿಕವು 1869ರಲ್ಲಿ ಮೊದಲ ಬಾರಿಗೆ ರಚಿತವಾಗಿತ್ತಾದರೂ ಇದು ಇಂತಹ ನಿಯತಕಾಲಿಕಗಳ ಮೊದಲ ಜರ್ನಲ್ ಏನಲ್ಲ. ಈ ನೇಚರ್ ಎಂಬ Recreative Science: A Record and Remembrancer of Intellectual Observation ಶೀರ್ಷಿಕೆಯ ಜರ್ನಲ್ 1859 ರಲ್ಲಿ ನಿರ್ಮಿಸಲಾಯಿತು.ಇದು ನೈಸರ್ಗಿಕ ಇತಿಹಾಸದ ನಿಯತಕಾಲಿಕವಾಗಿ ಇದು ಪ್ರಕಟಗೊಂಡಿತು.ಅಲ್ಲದೇ ಈ ನಿಯತಕಾಲಿಕವು ಭೌತಿಕವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು.ವಿಜ್ಣಾನ ಮತ್ತು ತಂತ್ರಜ್ಞಾನದ ವಿಷಯಗಳು ಮತ್ತು ಸಣ್ಣ ಪ್ರಮಾಣದ ನೈಸರ್ಗಿಕ [೫] ಇತಿಹಾಸವೆನಿಸಿದೆ. ಈ ಜರ್ನಲ್ ನ ಮೂಲ ಹೆಸರನ್ನು ಬದಲಾಯಿಸಲಾಗಿತ್ತು.ಇದನ್ನು ಇಂಟೆಲೆಕ್ಚುವಲ್ ಆಬ್ಸವರ್ :ನೈಸರ್ಗಿಕ ಇತಿಹಾಸದ ಒಂದು ಅವಲೋಕನ,ಮೈಕ್ರೊಸ್ಕೊಪಿಕ್ ಸಂಶೋಧನೆ ಮತ್ತು ರಿಕ್ರಿಯೆಟಿವ್ ಸೈನ್ಸ್ ನಂತರ ಅದು ಸ್ಟುಡೆಂಟ್ ಅಂಡ್ ಇಂಟೆಲೆಕ್ಚುವಲ್ ಆಬ್ಸವರ್ ಆಫ್ ಸೈನ್ಸ್ ,ಲಿಟರೇಚರ್ ,ಅಂಡ್ ಆರ್ಟ್ [೬] ಎಂದಾಗಿತ್ತು. ರಿಕ್ರೆಟಿವ್ ಸೈನ್ಸ್ ವಿಷಯವು ಹೆಚ್ಚಿನ ಪ್ರಮಾಣದ ಭೌತ ವಿಜ್ಞಾನವನ್ನು ಒಳಗೊಳ್ಳಲು ಮುಂದಾಯಿತು.ಉದಾಹರಣೆಗೆ ಖಗೋಳಶಾಸ್ತ್ರ ಮತ್ತು ಪುರಾತನ ವಸ್ತು ಶಾಸ್ತ್ರ,ಹೀಗೆ ಇಂಟೆಲ್ಲೆಕ್ಚವಲ್ ಆಬ್ಸವರ್ ತನ್ನ ಸುದ್ದಿ ಪರಿಧಿಯನ್ನು ವಿಸ್ತರಿಸಿಕೊಂಡು ಅದರಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು [೬] ಸೇರಿಸಿತು. ರಿಕ್ರಿಯೆಟಿವ್ ಸೈನ್ಸ್ ಗೆ ಸಮನಾದ ವೈಜ್ಞಾನಿಕ ನಿಯತಕಾಲಿಕ ಪಾಪ್ಯುಲರ್ ಸೈನ್ಸ್ ರಿವಿವ್ [೭] 1862ರಲ್ಲಿ[7]1862ರಲ್ಲಿ ಆರಂಭವಾಯಿತು.ಇದು ವಿಜ್ಞಾನ ಕ್ಷೇತ್ರದ ಹಲವು ವಿಭಾಗಗಳನ್ನು ಕೈಗೊಂಡಿತು.ಉದಾಹರಣೆಗೆ 'ಸೈಂಟಿಫಿಕ್ ಸಮ್ಮರಿ' ಅಥವಾ 'ಕ್ವಾರ್ಟೆರ್ಲಿ ರಿಟ್ರೊಸ್ಪೆಕ್ಟ್ 'ಹೀಗೆ ಪ್ರಸಕ್ತ ವಿಜ್ಞಾನ ಸಂಹೋಧನೆಗಳ ವಿಮರ್ಶೆ,ಅವಲೋಕನ,ಪ್ರಚಲಿತ ವೈಜ್ಞಾನಿಕ ವಿಷಯಗಳ [೭] ಪ್ರಕಟನೆ ಬಗ್ಗೆ ಅದು ಬೆಳಕು ಚೆಲ್ಲಲಿದೆ. ನೇಚರ್ ನಿಯತಕಾಲಿಕಗಿಂತ ಮುಂಚಿತವಾಗಿ ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡಿದು ಎಂದರೆ ಕ್ವಾರ್ಟೆರ್ಲಿ ಜರ್ನಲ್ ಆಫ್ ಸೈನ್ಸ್ ಮತ್ತು ಸೈಂಟಿಫಿಕ್ ಒಪಿನಿಯನ್ ಇವು ಅನುಕ್ರಮವಾಗಿ 1864 ಮತ್ತು [೬] 1868ರಲ್ಲಿ ಆರಂಭಗೊಂಡವು. ಈ ಜರ್ನಲ್ ಗಳು ಬಹಳಷ್ಟು ನೇಚರ್ ಜರ್ನಲ್ ಗೆ ಬಹಳಷ್ಟು ಹತ್ತಿರವಾಗಿದ್ದವು,ಅದರ ಸಂಪಾದಕೀಯತೆ ಮತ್ತು ಅದರ ರೂಪವು ದಿ ರೀಡರ್ ಎಂಬ ಶೀರ್ಷಿಕೆಯನ್ನು ಹೊಂದಿತ್ತು.ಇದನ್ನು 1864ರಲ್ಲಿ ಆಕಾರಕ್ಕೆ ತರಲಾಗಿತ್ತು.ಇಲ್ಲಿ ಎಲ್ಲಾ ವರ್ಗದ ಓದುಗರನ್ನು ಆಕರ್ಷಿಸಲು ಕಲೆ ಮತ್ತು ಸಾಹಿತ್ಯದ ವಿಷಯಗಳನ್ನು ವಿಜ್ಞಾನದೊಂದಿಗೆ ಪಾಪ್ಯುಲರ್ ಸೈನ್ಸ್ ರಿವಿವ್ ನಲ್ಲಿ [೬] ನೀಡಲಾಗುತಿತ್ತು.
ಇಂತಹ ಒಂದೇ ರೀತಿಯ ಜರ್ನಲ್ ಗಳು ನಂತರದಲ್ಲಿ ವಿಉಫಲವಾದವು. ಪಾಪ್ಯುಲರ್ ಸೈನ್ಸ್ ರಿವಿವ್ ಮಾತ್ರ ಸುಧೀರ್ಘ ಕಾಲದ ವರೆಗೆ ಇತ್ತು,ಸುಮಾರು 20ವರ್ಷಗಳ ಕಾಲ ಇದ್ದು 1881ರಲ್ಲಿ ಮುಚ್ಚಿಹೋಯಿತು.ರಿಕ್ರಿಯೆಟಿವ್ ಸೈನ್ಸ್ ಕೂಡಾ ಸ್ಟುಡಂಟ್ ಅಂಡ್ ಇಂಟೆಲೆಕ್ಚುವಲ್ ಆಬ್ಸರ್ವರ್ ಆಗಿದ್ದು 1871ರಲ್ಲಿ ತಮ್ಮ ಪ್ರಕಾಶನವನ್ನು ನಿಲ್ಲಿಸಿತು. ಕೂಡಾ ಹಲವಾರು ಸಂಪಾದಕೀಯವಿಭಾಗದ ಬದಲಾವಣೆಗಲಿಗೆ ಒಳಗಾಯಿತಲ್ಲದೇ 1885 ರಲ್ಲಿ ತನ್ನ ಪ್ರಕಾಶನ ನಿಲ್ಲಿಸಿತು. ದಿ ರೀಡರ್ ಕೂಡಾ 1867 ರಲ್ಲಿ ನಿಂತುಹೋಯಿತು,ಸೈಂಟಿಫಿಕ್ ಒಪಿನಿಯನ್ ಸುಮಾರು ಎರಡು ವರ್ಷಗಳ ಕಾಲ ನಡೆದು 1870 ರಲ್ಲಿ [೫] ನಿಂತಿತು.
ನೇಚರ್ ನ ನಿರ್ಮಾಣ,ರಚನೆ
ಬದಲಾಯಿಸಿದಿ ರೀಡರ್ ಕೊನೆಗೊಂಡ ನಂತರ ಮಾಜಿ ಸಂಪಾದಕ ನಾರ್ಮನ್ ಲಾಕಿಯರ್ ಹೊಸ ಮಾದರಿಯ ವೈಜ್ಞಾನಿಕ ನೇಚರ್ ,ಎಂಬ ಶೀರ್ಷಿಕೆಯ ಜರ್ನಲ್ ನ್ನು ವಿಲಿಯಮ್ ವರ್ಡ್ಸ್ ವರ್ತ್ ಅವರ ಕವನದ ಸಾಲು "ಟು ದೊ ಸೊಲಿಡ್ ಗ್ರೌಂಡ್ ಆಫ್ ನೇಚರ್ ಟ್ರಸ್ಟ್ಸ್ ದಿ ಮೈಂಡ್ ದ್ಯಾಟ್ ಬಿಲ್ಡ್ಸ್ ಫಾರ್ ಆಯೆ"ಎಂಬಲ್ಲಿನ ನೇಚರ್ ಪದವನ್ನು [೮][೯] ಬಳಸಿಕೊಂಡರು. ಮೊದಲ ಬಾರಿಗೆ ಮಾಲಿಕತ್ವ ಮತ್ತು ಪ್ರಕಾಶನವು ಅಲೆಕ್ಸಾಂಡರ್ ಮ್ಯಾಕ್ ಮಿಲನ್ ರಿಂದ ಸುರು ಆಯಿತು.ನೇಚರ್ ಜರ್ನಲ್ ತನ್ನ ಹಿಂದಿನ ಕೆಲವುಗಳ ಮಾದರಿಯಲ್ಲೇ" ಸುಸಂಸ್ಕೃತ ಓದುಗರಿಗೆ ವಿಜ್ಞಾನದ ಆವಿಷ್ಕಾರ,ಜ್ಞಾನಗಳನ್ನು ಕಾಲ ಕಾಲಕ್ಕೆ ಒದಗಿಸಲು [೮] ಆರಂಭಿಸಿತು." ಜಾನೆಟ್ ಬ್ರೌನೆ ಅವರ ಪ್ರಕಾರ"ಯಾವುದೇ ವೈಜ್ಞಾನಿಕ ಜರ್ನಲ್ ಗ್ಳಿಗೆ ಹೋಲಿಸಿದರೆ ನೇಚರ್ ನ ಪ್ರಸ್ತಾವನೆ,ಹುಟ್ಟು,ಹಾಗು ಇನ್ನಿತರೆ ವಿಷಯಗಳು ಕೇವಲ ಓದುಗನ ವಿಜ್ಞಾನದ ಹಸಿವನ್ನು ಮನದಲಿಟ್ಟು [೮] ಆರಂಭಿಸಿತು." ನೇಚರ್ ನಲ್ಲಿನ ಮೊದಲ ಲೇಖನಗಳು ಅದೇ ಸಂಸ್ಥೆಯ ಸಮೂಹದX ಕ್ಲಬ್ ,ಸದಸ್ಯರು ಹೆಚ್ಚಾಗಿ ಲೇಕಹನಗಳನ್ನು ಬರೆಯುತ್ತಿದ್ದರು.ಆ ಸಮಯದಲ್ಲಿನ ವಿಜ್ಞಾನಿಗಳ ಸಮೂಹವು ಸ್ವಾತಂತ್ರ್ಯ,ವಿಜ್ಞಾನದ ವಿವಾದಿತ ವಿಷಯಗಳು,ಪ್ರಗತಿ ಕುರಿತಾದ ಮಾಹಿತಿಗಳನ್ನು [೮] ನೀಡಲಾಗುತ್ತಿತ್ತು. ಈ ಸಮೂಹದ ಪ್ರವರ್ತಕರಾದ ಥಾಮಸ್ ಹೆನ್ರಿ ಹಕ್ಸಲಿ ಅವರ ಈ ಗುಂಪಿನಲ್ಲಿ ವಿಜ್ಞಾನಿಗಳಾದ ಜೊಸೆಫ್ ಹೂಕರ್ ಹರ್ಬರ್ಟ್ ಸ್ಪೆನ್ಸರ್ ಮತ್ತು ಜಾನ್ ತಿಂಡಲ್ ಅವರುಗಳ ಜೊತೆಗೆ ಇನ್ನು ಐದು ಜನ ಗಣಿತಜ್ಞರು ಮತ್ತು ವಿಜ್ಞಾನಿಗಳು ತಮ್ಮ ಎಲ್ಲಾ ಬೆಂಬಲವನ್ನು ಡಾರ್ವಿನ್ ನ ವಿಕಾಸವಾದಕ್ಕೆ ಸೂಚಿಸಿದ್ದರು.ಆತನ ಸಾಮಾನ್ಯ ಇಳಿಮುಖತೆ ಅಥವಾ ಕಾಮನ್ ಡಿಸಂಟ್ ಪ್ರಮೇಯವು 19ನೆಯ ಶತಮಾನದ ಕೊನೆಯಲ್ಲಿ ತೀವ್ರವಾದ ವಿವಾದವನ್ನು ಸೃಷ್ಟಿಸಿತು.ಈ ವಿವಾದಕ್ಕೆ ತೀವ್ರ ಬದಲಾವಣೆಗಳನ್ನು ಪ್ರತಿರೋಧಿಸುವ ಗುಂಪು ಹೊಸತನ್ನು [೧೦] ವಿರೋಧಿಸಿತು. ಈ ವೈಜ್ಞಾನಿಕ ಮುಕ್ತತೆಯ ಕಾರಣದಿಂದಾಗಿ ನೇಚರ್ ತನ್ನ ಅಸ್ತಿತ್ವವನ್ನು ಬಹುಕಾಲ ಉಳಿಸಿಕೊಂಡು ತನ್ನ ಇನ್ನಿತರ ಸಮಕಾಲೀನರಿಗಿಂತ ಹೆಚ್ಚು ಯಶಸ್ವು ಗಳಿಸಿತು. ನೇಚರ್ ನ ಸಂಪಾದಕರಾಗಿದ್ದ ಜೊನ್ ಮ್ಯಾಡೊಕ್ಸ್ ಅವರು 1966ರಿಂದ 1973ರ ವರೆಗೆ ಮತ್ತು 19890ರಿಂದ 1995ರಿಂದ ವರೆಗೆ ಜವಾಬ್ದಾರಿ ಹೊತ್ತಿದ್ದರು."ನೇಚರ್ ನ ಶತಾಮೋತ್ಸವದ ಭೋಜನಕೂಟದಲ್ಲಿ ಮ್ಯಾಡೊಕ್ಸ್ ಅವರು ಇದು ತನ್ನ "ಪತ್ರಿಕೋದ್ಯಮ"ದ ಎಲ್ಲಾ ಗುಣಗಳನ್ನು ಹೊಂದಿದೆ ಅಲ್ಲದೇ ಓದುಗರ ಸಾಮಾನ್ಯ ವಿಜ್ಞಾನದ ಮಾಹಿತಿಯ ದಾಹವನ್ನು ತಣಿಸಲು ಸಮರ್ಥವಾಗಿದೆ.ಜನಸಾಮಾನ್ಯರನ್ನು ಈ ವಿಷಯಗಳಲ್ಲಿ ಹೆಚ್ಚಿನ ವಿವರ ನೀಡುವುದು ಅದರ ಕಾರ್ಯವಾಗಿದೆ. ಲೊಕಿಯರ್ ಅವರ ಈ ಜರ್ನಲ್ ಪ್ರಾರಂಭದಿಂದಲೂ ತನ್ನ ಉದ್ದೇಶಗಳನ್ನು ಪೂರೈಸುತ್ತಾ [೧೧] ಬಂದಿದೆ." ಇನ್ನೂ ಹೆಚ್ಚಿನದೆಂದರೆ ಇದರ ಪ್ರಾರಂಭದ ವರ್ಷಗಳಲ್ಲಿ ಮ್ಯಾಕ್ ಮಿಲನ್ ಕುಟುಂಬದವರಿಂದ ಅತ್ಯುತ್ತಮ ಹಣಕಾಸಿನ ಬೆಂಬಲವನ್ನು ಪಡೆದು ಅದು ತನ್ನ ಮುಕ್ತತೆ ಹಾಗು ಸ್ವಾತಂತ್ರ್ಯವನ್ನು ಉಳಿಸಿಕೊಂಡಿತು.ಇದರಿಂದಾಗಿ ಜರ್ನಲ್ ನ ಉತ್ತುಂಗತೆ [೧೧] ಉಳಿದುಕೊಂಡಿತು.
20ನೆಯ ಮತ್ತು 21ನೆಯ ಶತಮಾನದಲ್ಲಿನ ನೇಚರ್
ಬದಲಾಯಿಸಿಕಳೆದ 20ನೆಯ ಮತ್ತು 21ನೆಯ ಶತಮಾನದಲ್ಲಿನ ನೇಚರ್ ಬಹಳಷ್ಟು ಅಭಿವೃದ್ಧಿ ಮತ್ತು ವಿಸ್ತರಣೆಗಳಿಗೆ ಒಳಗಾಯಿತು.ವಿಶೇಷವಾಗಿ 90ನೆಯ ದಶಕದಲ್ಲಿ ಅದು ಹೆಚ್ಚಿನ ಬದಲಾವಣೆಗಳನ್ನು ಕಂಡಿತು.
ಸಂಪಾದಕರುಗಳು
ಬದಲಾಯಿಸಿನೇಚರ್ ನ ಸಂಸ್ಥಾಪಕ ನಾರ್ಮನ್ ಲೊಕಿಯರ್ ಇಂಪಿರಿಯಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಸುಮಾರು 1919ರಲ್ಲಿ ಆತನ ನಂತರ ರಿಚರ್ಡ್ ಗ್ರೆಗೊರಿ,ಜರ್ನಲ್ ನ ಎರಡನೆಯ [೧೨] ಸಂಪಾದಕರಾಗಿದ್ದರು. ನೇಚರ್ ನ್ನು ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯಕ್ಕೆ ಹತ್ತಿರ ತರಲು ಗ್ರೆಗೊರಿ ನೆರವಾದರು. ರಾಯಲ್ ಸೊಸೈಟಿಯು ತನ್ನ ಸಂತಾಪ ಸೂಚಕದಲ್ಲಿ:"ಗ್ರೆಗೊರೊಯು ಯಾವಾಗಲೂ ಅಂತಾರಾಷ್ಟ್ರೀಯ ವಿಜ್ಞಾನಗಳನ್ನು ನೇಚರ್ ನ ಕಾಲಮ್ ಗಳಲ್ಲಿ ಬಹು ಆಸಕ್ತಿಯಿಂದ ಪ್ರಕಟಿಸುತ್ತಿದ್ದರು.ಅಂತಾರಾಷ್ಟ್ರೀಯ ವೈಜ್ಞಾನಿಕ ಯುನಿಯನ್ ಚಟುವಟಿಕೆಗಳಿಗೆ ಅವರು ಒತ್ತು [೧೩] ಕೊಡುತ್ತಿದ್ದರು." ಇಸವಿ 1945 ರಿಂದ 1973ರ ವರೆಗೆ ನೇಚರ್ ನ ಸಂಪಾದಕೀಯತ್ವ ಮೂರು ಬಾರಿ ಬದಲಾವಣೆಗೊಂಡಿತು.ಮೊದಲು 1945ರಲ್ಲಿ ಎ.ಜೆ.ವಿ. ಗೇಲ್ ಮತ್ತುಎಲ್.ಜೆ .ಎಫ್. ಬ್ರಿಂಬ್ಲೆ(ಆತ 1958ರಲ್ಲಿ ಏಕೈಕ ಸಂಪಾದಕರಾಗಿದ್ದರು)ನಂತರ 1965ರಲ್ಲಿ ಮ್ಯಾಡೊಕ್ಸ್ ಅಲ್ಲದೇ ಡೇವಿಡ್ ಡೇವಿಸ್ 1973ರಲ್ಲಿ ಕೊನೆಯಲ್ಲಿ ಅದರ ಸಂಪಾದಕೀಯತ್ವದ ಜವಾಬ್ದಾರಿ [೧೨] ಹೊತ್ತರು. ಮ್ಯಾಡೊಕ್ಸ್ ಅವರು 1980ರಲ್ಲಿ ಮತ್ತೆ ಸಂಪಾದಕೀಯತ್ವಕ್ಕೆ ಮರಳಿ 1995ರ ವರೆಗೆ ಇದ್ದರು. ಆವಾಗಿನಿಂದ ಫಿಲಿಪ್ ಕ್ಯಾಂಪ್ ಬೆಲ್ ನೇಚರ್ ನ ಎಲ್ಲಾ ಪ್ರಕಾಶನಗಳಿಗೆ ವ್ಯವಸ್ಥಾಪಕ [೧೨] ಸಂಪಾದಕರಾಗಿದ್ದಾರೆ.
ನೇಚರ್ ’ನ ವಿಸ್ತರಣೆ ಮತ್ತು ಅಭಿವೃದ್ಧಿ
ಬದಲಾಯಿಸಿಸುಮಾರು 1970ರಲ್ಲಿ ನೇಚರ್ ತನ್ನ ವಾಶಿಂಗ್ಟನ್ ಕಚೇರಿಯನ್ನುತೆರೆಯಿತು.ಉಳಿದ ಶಾಖೆಗಳೆಂದರೆ 1985 ನ್ಯುಯಾರ್ಕ್ ನಲ್ಲಿ,ಟೊಕೊಯೊ ಮತ್ತು ಮುನಿಚ್ ನಲ್ಲಿ 1987ರಲ್ಲಿ,ಪ್ಯಾರಿಸ್ ನಲ್ಲಿ 1989,ಸ್ಯಾನ್ ಫ್ರಾನ್ಸಿಸಿಕೊದಲ್ಲಿ2001,ಬಾಸ್ಟನ್ ನಲ್ಲಿ 2004ರಲ್ಲಿ ಮತ್ತು ಹಾಂಗ್ ಕಾಂಗ್ ನಲ್ಲಿ 2005ರಲ್ಲಿ ಆರಂಭಗೊಂಡವು. ಸುಮಾರು 1980ರಲ್ಲಿ ಜರ್ನಲ್ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಕೈಗೊಂಡು ಹೊಸ ಹತ್ತು ಜರ್ನಲ್ ಗಳನ್ನು ಪ್ರಾರಂಭಿಸಿತು. ಈ ಹೊಸ ಹತ್ತು ಜರ್ನಲ್ ಗಳು ನೇಚರ್ ನ ಪ್ರಕಾಶನದ ಸಮೂಹಗಳನ್ನು ಒಳಗೊಂಡಿವೆ,ಇದು 1999ರಿಂದ ಆರಂಭವಾದವುಗಳು, ನೇಚರ್ , ನೇಚರ್ ರಿಸರ್ಚ್ ಜರ್ನಲ್ಸ್ ,ಸ್ಟೊಕ್ ಟೊನ್ ಪ್ರೆಸ್ ಸ್ಪೆಸಿಲಿಸ್ಟ್ ಜರ್ನಲ್ಸ್ ಅಂಡ್ ಮ್ಯಾಕ್ ಮಿಲನ್ ರೆಫ್ರೆನ್ಸ್ (NPG ಎಂದು ಮರುನಾಮಕರಣಗೊಂಡವು)
ಸುಮಾರು 1997ರಲ್ಲಿ ನೇಚರ್ ತನ್ನ ಸ್ವಂತ ವೆಬ್ ಸೈಟ್ , www.ನೇಚರ್.com,ನಂತರ ಅದು ನೇಚರ್ ರಿವಿವ್ಸ್ ಕಾಲಮ್ ನ್ನು 1999ರಲ್ಲಿ -[೧೨] ಪ್ರಕಟಿಸಲಾರಂಭಿಸಿತು. ಕೆಲವು ಲೇಖನಗಳು ಮತ್ತು ವೈಜ್ಞಾನಿಕ ವಿಷಯಗಳು ಉಚಿತವಾಗಿ ನೇಚರ್ ವೆಬ್ ಸೈಟ್ ನಲ್ಲಿ ದೊರೆಯುತ್ತವೆ. ಉಳಿದವರು ಸೈಟ್ ನ ಸಂಪೂರ್ಣ ಮತ್ತು ಪ್ರಧಾನ ವಿಷಯಗಳಿಗಾಗಿ ಇದನ್ನು ಖರೀದಿಸಬಹುದಾಗಿದೆ.
ತನಗೆ ಒಟ್ಟಾರೆ 300,000 ರಷ್ಟು ಹಿರಿಯ ವಿಜ್ಞಾನಿಗಳು ಮತ್ತು ಇತರ ಅಧಿಕಾರಿ ವರ್ಗ ಅಲ್ಲದೇ 600,0000 ಓದುಗರಿದ್ದಾರೆ,ಎಂದು ನೇಚರ್ ಮೂಲಗಳು ಹೇಳಿಕೊಳ್ಳುತ್ತವೆ. ಜರ್ನಲ್ ನ ಒಟ್ಟು ಪ್ರಸಾರವು 65,000ದಷ್ಟಿದ್ದು ಒಂದು ಪ್ರತಿಯನ್ನು ಸುಮಾರು 10ಜನರು ಓದುತ್ತಾರೆಂದು ಸಮೀಕ್ಷೆಗಳು [೧೪] ಹೇಳಿವೆ.
ಕಳೆದ ಆಕ್ಟೊಬರ್ 30,2008ರಲ್ಲಿನೇಚರ್ ಮೊದಲ ಬಾರಿಗೆ ಅಮೆರಿಕನ್ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ ಅವರನ್ನು ಬೆಂಬಲಿಸಿತ್ತು.ಅಮೆರಿಕಾದ 2008ರ ಅಧ್ಯಕ್ಷೀಯ ಚುನಾವಣೆಗಳಲ್ಲಿಒಬಾಮಾ ಅವರ ಪ್ರಚಾರ ಸಭೆಗಳಿಗೆ ತನ್ನ ಒಲವು [೧೫][೧೬] ತೋರಿಸಿತು.
ನೇಚರ್ ನಲ್ಲಿ ಪ್ರಕಾಶಿತವಾದದ್ದು
ಬದಲಾಯಿಸಿಆ ಸಂದರ್ಭದಲ್ಲಿ ನೇಚರ್ ಪ್ರಕಟಗೊಂಡ ಲೇಖನವು ಬಹಳಷ್ಟು ಗೌರವವನ್ನು ತಂದಿತು.ಹಲವಾರು ಲೇಖನಗಳು ಅಧಿಕತೆಯ ಬಡ್ತಿಗಳು,ಹಣಕಾಸಿನ ನಿಧಿಗಳು ಮತ್ತು ಮಾಧ್ಯಮದ ಮುಖ್ಯವಾಹಿನಿಯ ಬಗ್ಗೆ ಗಮನ ಸೆಳೆವ ಲೇಖನಗಳು ಪ್ರಕಟಗೊಂಡವು. ಇದರ ಅತ್ಯುತ್ತಮ ಪ್ರತಿಕ್ರಿಯೆಯಿಂದಾಗಿ ವಿಜ್ಞಾನಿಗಳಲ್ಲಿ ಸಂಶೋಧಕರಲ್ಲಿ ತಮ್ಮ ಲೇಖನಗಳು ನೇಚರ್ ನಲ್ಲಿ ಪ್ರಕಟಿಸಲು ಹಾತೊರೆಯುತ್ತಿದ್ದರು,ಅದಲ್ಲದೇ ಅದರ ಅತ್ಯಂತ ಕಠಿಣ ಸ್ಪರ್ಧಿ ಸೈನ್ಸ್ ನೊಂದಿಗೆ ಪೈಪೊಟಿ ಮಾಡುವುದು ಅತ್ಯಂತ ಬಿರುಸಾಗಿತ್ತು. ನೇಚರ್ ನ ಅತ್ಯಂತ ಪರಿಣಾಮಕಾರಿ ಅಂಶಗಳೆಂದರೆ ಜರ್ನಲ್ ಒಂದು ಎಷ್ಟೊಂದು ಲೇಖನ ಮತ್ತು ಸಂಶೋಧನೆಗಳನ್ನು ಓದುಗರ ಎದುರಿಗೆ ಇಡುತ್ತದೆ ಎಂಬುದು ಮುಖ್ಯವಾಗುತ್ತದೆ.2008ರಲ್ಲಿ ಅದು ತನ್ನ ಪ್ರಮಾಣವನ್ನು 31.434 (ಅಂದರೆ ಥಾಮಸ್ ISI),ಅವರಿಂದ ಪ್ರಮಾಣೀಕರಿಸಲ್ಪಟ್ಟಿತು,ಇದು ಇನ್ನುಳಿದ ವಿಜ್ಞಾನದ ಜರ್ನಲ್ ಗಳಿಗಿಂತ ಮುಂದಿತ್ತು.)
ಇನ್ನುಳಿದ ವೃತ್ತಿಪರ ಸೈನ್ಸ್ ಜರ್ನಲ್ ಗಳ ಎಲ್ಲಾ ಲೇಖನಗಳು ಸಂಪಾದಕರ ಅವಗಾಹನೆಗೆ ಒಳಗಾಗುತ್ತವೆ.ಇದನ್ನು ಸಮಗ್ರ ಪರಾಮರ್ಶೆ (ಇದರಲ್ಲಿ ಪರಿಣತ ವಿಜ್ಞಾನಿಗಳು ಹಾಗು ಸಂಶೋಧನೆ ಮತ್ತು ಅದರ ಸಮಗ್ರ ವಿವರಗಳನ್ನು ಬಲ್ಲ ವಿಜ್ಞಾನಿಗಳಿಗೆ ಇದರ ಪರಾಮರ್ಶೆಯ ಅವಕಾಶವನ್ನು ನೀಡಲಾಗುವುದು)ಪ್ರಕಾಶನಗೊಳ್ಳುವ ಪೂರ್ವ ಪರಿಶೀಲನೆಯು ವೈಜ್ಞಾನಿಕ ಹಿರಿಯರ ಮೂಲಕ ನಡೆಸಲಾಗುವುದು. ಆದರೆ ನೇಚರ್ ,ಜರ್ನಲ್ ಪ್ರಕಾರ ನಿರ್ಧಿಷ್ಟ ಅವುಗಳ ವಿಷಯ ವ್ಯಾಪ್ತಿಯನ್ನು ಗಮನಿಸಿ ಪರಾಮರ್ಶೆಗೆ ಕಳಿಸಲಾಗುವುದು.ಸಂಬಂಧಪಟ್ಟ ವಿಷಯಗಳನ್ನು ಆಯಾ ಕ್ಷೇತ್ರದಲ್ಲಿನ ವಿದ್ವಾಂಸರು ಪರಾಮರ್ಶಿಸುವರು. ವ್ಯತಿರಿಕ್ತ ಪರಿಸ್ಥಿತಿಯೆಂದರೆ ಬಹಳಷ್ಟು ಲೇಖನಗಳು ಪರಾಮರ್ಶಗೆ ಒಳಗಾಗದೇ ವಾಪಸು ಬಂದ ಪ್ರಸಂಗಗಳಿವೆ.
ನೇಚರ್ನ ಮೂಲಭೂತ ಉದ್ದೇಶದ್ ಹೇಳಿಕೆ ಎಂದರೆ:
It is intended, FIRST, to place before the general public the grand results of Scientific Work and Scientific Discovery; and to urge the claims of Science to a more general recognition in Education and in Daily Life; and, SECONDLY, to aid Scientific men themselves, by giving early information of all advances made in any branch of Natural knowledge throughout the world, and by affording them an opportunity of discussing the various Scientific questions which arise from time to time.
— 20, 20, Nature, 1869[೧೭]
ಇದನ್ನು 2000ರಲ್ಲಿ ಪರಿಶೀಲಿಸಲಾಗಿ :
First, to serve scientists through prompt publication of significant advances in any branch of science, and to provide a forum for the reporting and discussion of news and issues concerning science. Second, to ensure that the results of science are rapidly disseminated to the public throughout the world, in a fashion that conveys their significance for knowledge, culture and daily life.
— 20, 20, Nature, 2000[೧೮]
ಗುರುತಿಸಲ್ಪಡುವ ಲೇಖನಗಳು
ಬದಲಾಯಿಸಿಹಲವಾರು ಹೆಸರಾಂತ ಆವಿಷ್ಕಾರಗಳು ಮೊದಲ ಬಾರಿಗೆ ನೇಚರ್ ನಲ್ಲಿ ಬೆಳಕು ಕಂಡಿವೆ. ಈ ಕೆಳಗಿನವುಗಳನ್ನು ಆವಿಷ್ಕಾರಗಳ ಆಯ್ಕೆಗಳು ನೇಚರ್ ನಲ್ಲಿ ಪ್ರಕಟಗೊಂಡಿವೆ.ಲೇಖನಗಳಿಗೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ.ವಿಜ್ಞಾನದ ಹಲವಾರು ವಿಷಯಗಳು ಪ್ರಕಟಗೊಂಡಿವೆ.
- ಕ್ಷ-ಕಿರಣಗಳು — W. C. Röntgen (1896). "On a new kind of rays". Nature. 53: 274–276. doi:10.1038/053274b0.
- ಅಲೆಯ ಲಕ್ಷಣ ದ ಕಣಗಳು — C. Davisson and L. H. Germer (1927). "The scattering of electrons by a single crystal of nickel". Nature. 119: 558–560. doi:10.1038/119558a0.
- ದಿ ನ್ಯುಟ್ರಾನ್ — J. Chadwick (1932). "Possible existence of a neutron". Nature. 129: 312. doi:10.1038/129312a0.
- ಪರಮಾಣುವಿನ ವಿದಳನ — L. Meitner and O. R. Frisch (1939). "Disintegration of uranium by neutrons: a new type of nuclear reaction". Nature. 143: 239–240. doi:10.1038/143239a0.
- DNA — J. D. Watson and F. H. C. Crick (1953). "Molecular structure of Nucleic Acids: A structure for deoxyribose nucleic acid". Nature. 171: 737–738. doi:10.1038/171737a0.ದ ರಚನೆ
- ಮೊದಲ ಪ್ರೊಟೀನ್ ರಚನೆ (ಮೈಯೊಗ್ಲೊಬಿನ್ ) — J. C. Kendrew, G. Bodo, H. M. Dintzis, R. G. Parrish, H. Wyckoff and D. C. Phillips (1958). "A three-dimensional model of the myoglobin molecule obtained by X-ray analysis". Nature. 181: 662–666. doi:10.1038/181662a0.
{{cite journal}}
: CS1 maint: multiple names: authors list (link) - ಸಮಪಾತಳಿ ನಿರ್ಮಾಣ ಶೈಲಿ — J. Tuzo Wilson (1966). "Did the Atlantic close and then re-open?". Nature. 211 (5050): 676–681. doi:10.1038/211676a0.
{{cite journal}}
: Cite has empty unknown parameter:|unused_data=
(help) - ರೇಡಿಯೊ ಅಲೆಗಳು — A. Hewish, S. J. Bell, J. D. H. Pilkington, P. F. Scott & R. A. Collins (1968). "Observation of a Rapidly Pulsating Radio Source". Nature. 217: 709–713. doi:10.1038/217709a0.
{{cite journal}}
: CS1 maint: multiple names: authors list (link) - ದಿ ಓಜೋನ್ ರಂಧ್ರ — J. C. Farman, B. G. Gardiner and J. D. Shanklin (1985). "Large losses of total ozone in Antarctica reveal seasonal ClOx/NOx interaction". Nature. 315 (6016): 207–210. doi:10.1038/315207a0.
- [[ಸಸ್ತನಿಗಳ ಮೊದಲ ತದ್ರೂಪಿ |ಸಸ್ತನಿಗಳ ಮೊದಲ ತದ್ರೂಪಿ ]] (ಡಾಲಿ ದಿ ಶೀಪ್ ) — I. Wilmut, A. E. Schnieke, J. McWhir, A. J. Kind and K. H. S. Campbell (1997). "Viable offspring derived from fetal and adult mammalian cells". Nature. 385 (6619): 810–813. doi:10.1038/385810a0.
{{cite journal}}
: CS1 maint: multiple names: authors list (link)
- ಮಾನ ವಂಶವಾಹಿನಿ — International Human Genome Sequencing Consortium (2001). "Initial sequencing and analysis of the human genome". Nature. 409 (6822): 860–921. doi:10.1038/35057062.
ದೋಷಗಳ ಸಮಗ್ರ ಪರಾಮರ್ಶೆ
ಬದಲಾಯಿಸಿನೇಚರ್ in the 2000–2001 period.ಜಾನ್ ಹೆಂಡ್ರಿಕ್ ಸ್ಕೊನ್ ಅವರ ಐದು ತಪ್ಪು ಕಂಡು ಹಿಡಿವ ಲೇಖನಗಳುನೇಚರ್ ನಲ್ಲಿ2001-2001ರಲ್ಲಿ ಪ್ರಕಟಗೊಂಡವು. ನಿರಪೇಕ್ಷ ಸೊನ್ನೆ ರೋಧ ,ದ ಬಗ್ಗೆ ಹಾಗು ಅದರಲ್ಲಿನ ದೋಷಗಳನ್ನು ಮತ್ತು ದೋಷಪೂರಿತ ಅಂಕಿಅಂಶಗಳನ್ನು ವೈಜ್ಞಾನಿಕ ತಪ್ಪುಗಳನ್ನು ಈ ಪತ್ರಿಕೆಗಳಲ್ಲಿ ಮಂಡಿಸಲಾಗಿದೆ. ನೇಚರ್ ತನ್ನೆಲ್ಲ ಮಂಡನಾ ಪತ್ರಗಳನ್ನು 2003ರಲ್ಲಿ ಹಿಂದಕ್ಕೆ ಪಡೆದುಕೊಂಡಿತು. ದಿ ಶೊನ್ ಹಗರಣವು ಕೇವಲನೇಚರ್ ಗೆ ಮಾತ್ರ ಸಂಬಂಧಿಸಿದಲ್ಲ. ಇನ್ನುಳಿದ ಪ್ರಧಾನ ಜರ್ನಲ್ ಗಳೆಂದರೆ ಸೈನ್ಸ್ ಮತ್ತು ಫಿಸಿಕಲ್ ರಿವಿವ್ ಕೂಡಾ ಸ್ಕೊನ್ ನ ಪತ್ರಿಕೆಗಳನ್ನು [೧೯] ಹಿಂಪಡೆಯಿತು.
DNA ರಚನೆ ಮೇಲಿನ ವಾಟ್ಸನ್ ಮತ್ತು ಕ್ರಿಕ್ ಅವರ 1953ರಲ್ಲಿ ಮಂಡಿಸಿದ ಕಾಗದಪತ್ರಗಳ ಬಗ್ಗೆನೇಚರ್ ತನ್ನ ಯಾವುದೇ ಮಂಡನಾ ಪತ್ರಗಳನ್ನು ಬಹಿರಂಗಗೊಳಿಸಲಿಲ್ಲ.ಅದೂ ಅಲ್ಲದೇ ಅವುಗಳ ಕುರಿತ ಸಮಗ್ರ ವಿಮರ್ಶೆಗಳನ್ನೂ ಅದು ಪ್ರಕಟಿಸಲಿಲ್ಲ. ನೇಚರ್ನ ಸಂಪಾದಕ ಜೊನ್ ಮ್ಯಾಡೊಕ್ಸ್ ಅವರ ಪ್ರಕಾರ ವಾಟ್ಸನ್ ಮತ್ತು ಕ್ರಿಕ್ ಅವರ ಸಲ್ಲಿಕೆಯ ಕಾಗದವನ್ನು ನೇಚರ್...ಪರಿಶೀಲನೆ ಅಥವಾ ಪರಾಮರ್ಶೆಗೆ ಕಳಿಸಲು ಸಾಧ್ಯವಾಗಲಿಲ್ಲ.ಎಂದು ಉದ್ಘರಿಸಿದ್ದಾರೆ.ಇದು ಸ್ವಯಂ ಕಾಣುವ ಒಂದು ಪುರಾವೆಯಾಗಿದೆ .ಉಲ್ಲೇಖನೀಯ ಯಾವುದೇ ಕಾರ್ಯಚಟುವಟಿಕೆಯು ಆಯಾ ವಲಯದಲ್ಲಿ ಪ್ರಚಾರ ಪಡೆಯುವದಲ್ಲದೇ ಯಾರೂ ಸುಮ್ಮನೆ ಕೂರಲು ಸಾಧ್ಯವಿಲ್ಲ."
ಈ ಮೊದಲು ಎನ್ ರಿಕೊ ಫೆರ್ಮಿ ಬೆಟಾ ಡಿಕೆ ಥೆಯರಿಯ ದುರ್ಬಲ ಪ್ರತಿಕ್ರಿಯೆಗಳ ಬಗ್ಗೆ ವಿಷಯ ಮಂಡಿಸಿದಾಗ ಅದರಲ್ಲಿ ಕೆಲ ತಪ್ಪುಗಳು ಕಂಡು ಬಂದವು. ಈ ವಿಷಯಗಳನ್ನೊಳಗೊಂಡ ಮಂಡನಾಪತ್ರದಲ್ಲಿ ಅದು ವಾಸ್ತವಕ್ಕಿಂತ ತುಂಬಾ ದೂರದ ವಿಷಯವಸ್ತು ಎಂದು ನೇಚರ್ ಅದನ್ನು [೨೦] ತಳ್ಳಿಹಾಕಿತು. ಫೆರ್ಮಿಯ ಸಂಶೋಧನಾ ಮಂಡನೆಗಳು ಜಿಟ್ ಕ್ರಿಫ್ಟ್ ಫರ್ ಫಿಸಿಕ್ ನಲ್ಲಿ1934ರಲ್ಲಿ ಪ್ರಕಟಗೊಂಡವು ನಂತರ ಕೊನೆಯಲ್ಲಿನೇಚರ್ ನಿಂದ ಪ್ರಕಾಶಿತಗೊಂಡವು,ಹೀಗೆ ಫರ್ಮಿಯ ಮಂಡಿಸಿದ ವಿಷಯವು ಎಲ್ಲೆಡೆಯಿಂದಲೂ ಮೆಚ್ಚುಗೆ [೨೧] ಪಡೆಯಿತು.
ಯಾವಾಗ ಪೌಲ್ ಲ್ಯಾಟರ್ ಬರ್ ಮತ್ತು ಪೀಟರ್ ಮ್ಯಾನ್ಸಿ ಫೀಲ್ಡ್ ಅವರು ಫಿಸಿಯಾಲೊಜಿ ಅಥವಾ ಔಷಧಿ ಗಾಗಿನ ನೊಬೆಲ್ ನ ಸಂಶೋಧನಾ ಪ್ರಶಸ್ತಿಗೆ ಪಾತ್ರರಾದರು.ಆದರೆ ಇವರ ಸಂಶೋಧನಾ ವಿವರಗಳನ್ನುನೇಚರ್ ಆರಂಭದಲ್ಲಿ ತಿರಸ್ಕರಿಸಿತ್ತು.ಆದರೆ ಲ್ಯಾಟರ್ ಬರ್ ಯಾವಾಗ ಇದರ ಬಗ್ಗೆ ಮನವಿ ಮಾಡಿದರೊ ಆಗ ನೇಚರ್ ತನ್ನ ತಪ್ಪು ಕ್ರಮವನ್ನು ಕುರಿತು ಸಂಪಾದಕೀಯದಲ್ಲಿ ಪ್ರಕಟಿಸಿತ್ತು."ಕೋಪಿಂಗ್ ಉಯಿತ್ ಪೀರ್ ರಿಜೆಕ್ಷನ್ "ಎಂಬ ತಲೆಬರಹದಲ್ಲಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸಿತ್ತು.
[T]here are unarguable faux pas in our history. These include the rejection of Cerenkov radiation, Hideki Yukawa’s meson, work on photosynthesis by Johann Deisenhofer, Robert Huber and Hartmut Michel, and the initial rejection (but eventual acceptance) of Stephen Hawking’s black-hole radiation.[೨೨]
ನೇಚರ್ ಮತ್ತು ಅದಕ್ಕೆ ಸಂಬಂಧಿಸಿದ ಜರ್ನಲ್ ಗಳ ಪ್ರಕಟನೆ
ಬದಲಾಯಿಸಿನೇಚರ್ ಯುನೈಟೆಡ್ ಕಿಂಗ್ ಡಮ್ ನಲ್ಲಿ ಸಂಪಾದಿಸಲ್ಪಟ್ಟು ಅಲ್ಲಿಯೇ ನೇಚರ್ ಪಬ್ಲಿಶಿಂಗ್ ಗ್ರುಪ್ ನಿಂದ ,ಇದುಮ್ಯಾಕ್ ಮಿಲನ್ ಪಬ್ಲಿಶರ್ಸ್ ಶಾಖೆಯಾಗಿದ್ದು ಪ್ರಕಾಶನಗೊಳ್ಳುತ್ತದೆ.ಇದು ಜಾರ್ಜ್ ವೊನ್ ಹೊಲ್ಟೆಬ್ರಿಂಕ್ ಪ್ರಕಾಶನದ ಸಮೂಹದ ಒಡೆತನಕ್ಕೆ ಸೇರಿದೆ. ನೇಚರ್ ನ ಕಚೇರಿಗಳು ಲಂಡನ್ ನ್ಯುಯಾರ್ಕ್ ಸಿಟಿ, ಸ್ಯಾನ್ ಫ್ರಾನ್ಸಿಸ್ಕೊ,ವಾಶಿಂಗ್ಟನ್ D.C.,ಬಾಸ್ಟನ್ ,ಟೊಕಿಯೊ ,ಹಾಂಗ್ ಕಾಂಗ್ ,ಪ್ಯಾರಿಸ್ ಮುನಿಚ್ ಮತ್ತು ಬ್ಯಾಸಿಂಗ್ ಟೊಕೆಗಳಲ್ಲಿವೆ. ನೇಚರ್ರ್ ಪಬ್ಲಿಶಿಂಗ್ ಗ್ರುಪ್ ಇನ್ನುಳಿದ ಪ್ರಕಾಶನವು ಇನ್ನುಳಿದ ವಿಶೇಷ ಪ್ರಕಟನೆಗಳೆಂದರೆ ನೇಚರ್ ನ್ಯುರೊ ಸೈನ್ಸ್ , ನೇಚರ್ ಬಯೊಟೆಕ್ನಾಲಾಜಿ , ನೇಚರ್ ಮೆಥೆಡ್ಸ್ , ದಿ ನೇಚರ್ ಕ್ಲಿನಿಕಲ್ ಪ್ರಾಕ್ಟೀಸ್ ಜರ್ನಲ್ ಗಳ ಸರಣಿ, ನೇಚರ್ ರಚನಾ & ಮೊಲ್ಯಾಕುಲರ್ ಬಯೊಲಾಜಿ ಮತ್ತು ದಿ ನೇಚರ್ ರಿವಿವ್ಸ್ ಜರ್ನಲ್ ಗಳ ಸರಣಿ.
ನೇಚರ್ ಸದ್ಯ ಪ್ರತಿಯೊಂದುನೇಚರ್ ಪೊಡ್ ಕಾಸ್ಟ್ ಅಂದರೆ ಅದರ ಪ್ರತಿ ವಿಷಯಗಳನ್ನು ಮತ್ತೆ ಒಟ್ಟುಗೂಡಿಸಿ ಎಲ್ಲಾ ಲೇಖನದ ಮತ್ತು ಬರಹಗಾರರ ವಿವರಗಳನ್ನು ಪ್ರಕಟಿಸಲಾಗುತ್ತದೆ.ಪತ್ರಿಕಾ ಕರ್ತರಿಗೆ ಸಂಶೋಧನಾ ಬರಹಗಳನ್ನು ದಾಖಲಿಸಲು ಸಹ ನೆರವು [೨೩] ಒದಗಿಸಲಾಗಿದೆ. ಇದು ಈಗ ಆಡಮ್ ರುದರ್ ಫೊರ್ಡ್ ಮತ್ತು ಕೆರ್ರಿ ಸ್ಮಿತ್ ಅವರ ಪ್ರಸ್ತುತಿಯೊಂದಿಗೆ ಪ್ರಸಕ್ತ ವೈಜ್ಞಾನಿಕ ಸಂಶೋಧನೆಗಳು, ಸದರ್ಶನಗಳು,ಪ್ರಚಲಿತ ಸುದ್ದಿಗಳನ್ನು ನೇಚರ್ ನ ಸಂಪಾದಕರು ಮತ್ತು ಪತ್ರಕರ್ತರು ಇಲ್ಲಿನ ವಿಷಯಗಳನ್ನು ಮಂಡಿಸುತ್ತಾರೆ. ಇದು ತನ್ನ ನಿಯಮಿತ ಪ್ರಚಾರಕ್ಕಾಗಿ 'ಪೊಡಿಯಮ್ 'ಎಂಬ 60 ಸೆಕೆಂಡ್ ಗಳ 'ಸೌಂಡ್ ಆಫ್ ಸೈನ್ಸ್ 'ಸ್ಲಾಟ್ ನ್ನು ಪರದೆಯ ಮೇಲೆ ತೋರಿಸಿ ತನ್ನ ವಿಜ್ಞಾನದ ಸಂಬಂಧಿಸಿದ ವಿಷಯಗಳನ್ನು ಪ್ರಚಾರ ಮಾಡಿತು.ಇದರ ಕುರಿತಾದ ಸೈಂಟಿಫಿಕ್ ಸಂಗೀತ ಆಡಿಯೊಗಳನ್ನು ಬಿಡುಗಡೆ ಮಾಡಲಾಗುತ್ತದೆ. ಕ್ಯಾಂಬ್ರಿಜ್ ಯುನ್ವರ್ಸಿಟಿ ಮತ್ತು ದಿ ನೇಕೆಡ್ ಸೈಂಟಿಸ್ಟ್ ನ ಕ್ರಿಸ್ ಸ್ಮಿತ್ ಇವರು ಅದನ್ನು ಮೊದಲು ಪ್ರಾರಂಭಿಸಿದರು
ಸುಮಾರು 2007ರಲ್ಲಿ ನೇಚರ್ ಪಬ್ಲಿಶಿಂಗ್ ಗ್ರುಪ್ ಕ್ಲಿನಿಕಲ್ ಫಾರ್ಮಾಲಜಿ &ಥೆರಾಪಿಯೆಟಿಕ್ಸ್ ನ್ನು ಪ್ರಕಟಿಸಲು ಆರಂಭಿಸಿತು."ಇದು ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಫಾರ್ಮೊಲಾಜಿ &ಥೆರಾಪಿಟಿಕ್ಸ್ "ಮತ್ತು ಮೊಲ್ಯಾಕುಲರ್ ಥೆರಪಿ ಯ ಅಧಿಕೃತ ಜರ್ನಲ್ ಇದಾಗಿತ್ತು.ಅದೂ ಅಲ್ಲದೇ ದಿ ಅಮೆರಿಕನ್ ಸೊಸೈಟಿ ಅಫ್ ಜೆನೆ ಥೆರಪಿಯ ಅಧಿಕೃತ ಜರ್ನಲ್ ಮತ್ತು ಇಂಟರ್ ನ್ಯಾಶನಲ್ ಸೊಸೈಟಿ ಫಾರ್ ಮೈಕ್ರೊಬಿಯಲ್ ಎಕೊಲಾಜಿ (ISME)ಜರ್ನಲ್ ನ್ನು ಪ್ರಕಟಿಸುತಿತ್ತು. ನೇಚರ್ ಪಬ್ಲಿಶಿಂಗ್ ಗ್ರುಪ್ ನೇಚರ್ ಫೊಟೊನಿಕ್ಸ್ ನ್ನು 2007ರಲ್ಲಿ ಮತ್ತು ನೇಚರ್ ಜಿಯೊಸೈನ್ಸ್ ನ್ನು 2008ರಲ್ಲಿ ಪ್ರಾರಂಭಿಸಿತು. ನೇಚರ್ ಕೆಮಿಸ್ಟ್ರಿ ಯ ಮೊದಲ ಆವೃತ್ತಿಯನ್ನು ಏಪ್ರಿಲ್ 2009ರಲ್ಲಿ ಪ್ರಕಟಿಸಲಾಯಿತು.
ನೇಚರ್ ಪಬ್ಲಿಶಿಂಗ್ ಗ್ರುಪ್ ತನ್ನ ಸ್ವಯಂ ಸಂಸ್ಕರಣಾ ವಿಧಾನಗಳಿಗೆ ಆದ್ಯತೆ ನೀಡುತ್ತದೆ,2002ರಲ್ಲಿ ಬರಹಗಾರರು ತಮ್ಮ ಬರಹಗಳನ್ನು ಸ್ವಂತ ವೆಬ್ ಸೈಟ್ ಗಳಲ್ಲಿ ಕಳಿಸುವ ಸುಲಭದ ವ್ಯವಸ್ಥೆ ಮಾಡಿತು.ಇದಕ್ಕಾಗಿ ಪ್ರಕಟನೆಯ ಸಂಪೂರ್ಣ ಹಕ್ಕುಸ್ವಾಮ್ಯಗಿಂತಲೂ ಅದಕ್ಕಾಗಿ ಪರವಾನಿಗೆ ಮತ್ತು ವರ್ಗಾಯಿಸುವದನ್ನು ಸೂಕ್ತ ರೀತಿಯಲ್ಲಿ ಪಡೆಯುವ ಸವಲತ್ತನ್ನು ನೀಡಿತು.ಇದರಿಂದಾಗಿ ವೈಯಕ್ತಿಕ ವೆಬ್ ಸೈಟ್ ಗಳನ್ನು ಬಳಸಿಕೊಳ್ಳಬಹುದಾಗಿದೆ. ಕಳೆದ ಡಿಸೆಂಬರ್ 2007ರಲ್ಲಿ ನೇಚರ್ ಪಬ್ಲಿಶಿಂಗ್ ಗ್ರುಪ್ ಕ್ರಿಯೆಟಿವ್ ಕಾಮನ್ಸ್ ಸಂಬಂಧಿಸಿದ ಲೇಖನಗಳಿಗೆ ಲೈಸನ್ಸ್ ಕೊಡುವ ಮೂಲಕ ನೇಚರ್ ಜರ್ನಲ್ ನಲ್ಲಿ ಪರಿಚಯಿಸಿತು.ತನ್ನ ಲೇಖನಗಳಲಿನ ಸತ್ವ ಕಾಪಾಡುವ ಎಲ್ಲಾ ತೆರನಾದ ಪ್ರಾಥಮಿಕ ಘಟನಾ ಕ್ರಮಗಳನ್ನು ಮೊದಲ ಬಾರಿಗೆ ತೆಗೆದುಕೊಂಡಿತು. ಇಸವಿ 2008ರಲ್ಲಿ ನೇಚರ್ ನಲ್ಲಿನ ಎಲ್ಲಾ ಲೇಖನಗಳ ಸಂಗ್ರಹವನ್ನು ಜಾನ್ ಎಸ್ .ಪಾರ್ಟಿಂಗ್ಟನ್ ಅವರು ಎಚ್. ಜಿ. ವೆಲ್ಸ್ ಅವರು ನೇಚರ್ ನಲ್ಲಿ ಎಂಬ ಶೀರ್ಷಿಕೆಯೊಂದಿಗೆ 1893-1946 ರಲ್ಲಿ ಸಂಪಾದಿಸಿದರು:ಎ ರಿಸೆಪ್ಶನ್ ರೀಡರ್ ನ್ನು ಪೀಟರ್ ಲಾಂಗ್ ಅವರು ಪ್ರಕಟಿಸಿದರು.
ನೇಚರ್ , ಜರ್ನಲ್ ಗಳ ಕುಟುಂಬ
ಬದಲಾಯಿಸಿಇನ್ನೂ ಅಲ್ಲದೇ ನೇಚರ್ ಯೊಂದೇ ತನ್ನ ಕುಟುಂಬದಲ್ಲಿ ನೇಚರ್ ಮಾದರಿಯ ಜರ್ನಲ್ ಗಳನ್ನು ನೇಚರ್ ಪಬ್ಲಿಶಿಂಗ್ ಗ್ರುಪ್ [೨೪] ಮೂಲಕ ಪ್ರಕಟಿಸುತ್ತದೆ.
- ಸಂಶೋಧನಾ ಜರ್ನಲ್ ಗಳು :
- ನೇಚರ್ ಬಯೊಟೆಕ್ನಾಲಜಿ
- ನೇಚರ್ ಜೀವಕೋಶ ಜೀವಶಾಸ್ರ್ತ
- ನೇಚರ್ ರಾಸಾಯನಿಕ ಜೀವಶಾಸ್ತ್ರ
- ನೇಚರ್ ಕೆಮಿಸ್ಟ್ರಿ
- ನೇಚರ್ ಜೆನಿಟಿಕ್ಸ್
- ನೇಚರ್ ಜಿಯೊಸೈನ್ಸ್
- ನೇಚರ್ ಇಮ್ಮ್ಯುನಾಲಜಿ
- ನೇಚರ್ ವಸ್ತುಗಳು
- ನೇಚರ್ ಔಷಧಿ
- ನೇಚರ್ ವಿಧಾನಗಳು
- ನೇಚರ್ ನ್ಯಾನೊಟೆಕ್ನೊಲಾಜಿ
- ನೇಚರ್ ನ್ಯುರೊಸೈನ್ಸ್
- ನೇಚರ್ ಫೊಟೊನಿಕ್ಸ್
- ನೇಚರ್ ಭೌತಶಾಸ್ತ್ರ
- ನೇಚರ್ ಸ್ಟ್ರಕ್ಚರಲ್ ಅಂಡ್ ಮೊಲಾಕ್ಯುಲರ್ ಬಯೊಲಾಜಿ
- ಪ್ರೊಟೊಕೊಲ್ :
- ರಿವಿವ್ಸ್ ಜರ್ನಲ್ಸ್ :
- ನೇಚರ್ ರಿವಿವ್ಸ್ ಕ್ಯಾನ್ಸರ್
- ನೇಚರ್ ರಿವಿವ್ಸ್ ಔಷಧಿ ಸಂಶೋಧನೆ
- ನೇಚರ್ ರಿವಿವ್ಸ್ ವಂಶವಾಹಿನಿ ತಳಿ ಶಾಸ್ತ್ರ
- ನೇಚರ್ ರಿವಿವ್ಸ್ ಇಮ್ಮ್ಯುನಾಲಜಿ
- ನೇಚರ್ ರಿವಿವ್ಸ್ ಮೈಕ್ರೊಬಯೊಲಾಜಿ
- ನೇಚರ್ ರಿವಿವ್ಸ್ ಮೊಲೆಕ್ಯುಲರ್ ಸೆಲ್ ಬಯೊಲಾಜಿ
- ನೇಚರ್ ರಿವಿವ್ಸ್ ನ್ಯುರೊಸೈನ್ಸ್
- ಹಿಂದಿನ ನೇಚರ್ ಕ್ಲಿನಿಕಲ್ ಪ್ರಾಕ್ಟೀಸ್ ಜರ್ನಲ್ಸ್:
- ನೇಚರ್ ರಿವಿವ್ಸ್ ಕಾರ್ಡಿಯೊಲಾಜಿ
- ನೇಚರ್ ರಿವಿವ್ಸ್ ಎಂಡೊಕ್ರಿನೊಲೊಜಿ
- ನೇಚರ್ ರಿವಿವ್ಸ್ ಗ್ಯಾಸ್ಟ್ರೊಎಂಟೊರಾಲಾಜಿ ಮತ್ತು ಹೆಪ್ಟೊಲೊಜಿ
- ನೇಚರ್ ರಿವಿವ್ಸ್ ನೆಫ್ರೊಲಾಜಿ
- ನೇಚರ್ ರಿವಿವ್ಸ್ ನ್ಯುರೊಲಾಜಿ
- ನೇಚರ್ ರಿವಿವ್ಸ್ ಕ್ಲಿನಿಕಲ್ ಆಂಕೊಲೊಜಿ
- ನೇಚರ್ ರಿವಿವ್ಸ್ ರುಮೊಟೊಲಾಜಿ
- ನೇಚರ್ ರಿವಿವ್ಸ್ ಯುರೊಲಾಜಿ
- ನೇಚರ್ ಆನ್ ಲೈನ್ ಪಬ್ಲಿಕೇಶನ್ಸ್ :
- ರಿವಿವ್ಸ್ ಜರ್ನಲ್ಸ್ :
ಗ್ರಂಥಸೂಚಿ
ಬದಲಾಯಿಸಿ- (1953). "ರಿಚರ್ಡ್ ಆರ್ಮನ್ ಗ್ರೆಗರಿ , 1864–1952." ಆಬಿಚರಿ ನೋಟಿಸಿಸ್ ಆಫ್ ಫೆಲ್ಲೊಸ್ ಅಫ್ ದಿ ರಾಯಲ್ ಸೊಸೈಟಿ 8(22).
- (1970). "ದಿ 'ನೇಚರ್' ಶತಮಾನೋತ್ಸವ ರಾತ್ರಿಯೂಟ." ನೋಟ್ಸ್ ಅಂಡ್ ರೆಕಾರ್ಡ್ಸ್ ಆಫ್ ದಿ ರಾಯಲ್ ಸೊಸೈಟಿ ಆಫ್ ಲಂಡನ್ 25(1).
- (2006). "ನೇಚರ್ ಪಬ್ಲಿಶಿಂಗ್ ಗ್ರುಪ್: ಇತಿಹಾಸ." Retrieved November 15, 2006, from http://npg.ನೇಚರ್.com/npg/servlet/Content?data=xml/02_history.xml&style=xml/02_history.xsl
- (2006). "ಜರ್ನಲ್ ನೇಚರ್ ಬಗ್ಗೆ" Retrieved November 20, 2006, from http://www.ನೇಚರ್.com/ನೇಚರ್/about/index.html
- ಬಾರ್ಟನ್ , R. (1996). .""ಜಸ್ಟ್ ಬಿಫೊರ್ ಜರ್ನಲ್ :ವಿಜ್ಞಾನದ ಉದ್ದೇಶ ಮತ್ತು ಕೆಲವು ಇಂಗ್ಲಿಷ್ ಜರ್ನಲ್ ಗಳನ್ನು1860ರಲ್ಲಿ ಜನಪ್ರಿಯಗೊಳಿಸಲಾಯಿತು. ಆನ್ನಲ್ಸ್ ಆಫ್ ಸೈನ್ಸ್ 55: 33.
- ಬ್ರೌನೆ, J. (2002). ಚರ್ಲ್ಸ್ ಡಾರ್ವಿನ್: ದಿ ಪಾವರ್ ಆಫ್ ಪ್ಲೇಸ್ . ನ್ಯುಯಾರ್ಕ್, ಅಲ್ ಫ್ರೆಡ್ ಎ. ನಾಫ್, Inc.
- ಸೀಗಲ್, R. S. a. G. E. (2006). "ಎ ಕೊಆಪ ರೇಟಿವ್ ಪಬ್ಲಿಶಿಂಗ್ ಮಾಡೆಲ್ ಫಾರ್ ಸಸ್ಟೇನೇಬಲ್ ಸ್ಕಾಲರ್ ಶಿಪ್" ಜರ್ನಲ್ ಆಫ್ ಸ್ಕಾಲರ್ಲಿ ಪಬ್ಲಿಶಿಂಗ್ 37(2): 13.
ಆಕರಗಳು
ಬದಲಾಯಿಸಿ- ↑ http://www.ನೇಚರ್.com/ನೇಚರ್/about/
- ↑ ಜರ್ನಲ್ ನೇಚರ್ Archived 2008-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಸೀಗಲ್, "ಎ ಕೊಆಪ ರೇಟಿವ್ ಪಬ್ಲಿಶಿಂಗ್ ಮಾಡೆಲ್ ಫಾರ್ ಸಸ್ಟೇನೇಬಲ್ ಸ್ಕಾಲರ್ ಶಿಪ್," p. 88
- ↑ ೪.೦ ೪.೧ Barton, "Just Before ನೇಚರ್," p. 3
- ↑ ೫.೦ ೫.೧ Barton, "Just Before ನೇಚರ್," p. 7
- ↑ ೬.೦ ೬.೧ ೬.೨ ೬.೩ Barton, "Just Before ನೇಚರ್," p. 6
- ↑ ೭.೦ ೭.೧ ಬಾರ್ಟನ್, "ಜಸ್ಟ್ ಬೆಫೊರ್ ನೇಚರ್," p. 13
- ↑ ೮.೦ ೮.೧ ೮.೨ ೮.೩ Browne, Charles Darwin: The Power of Place , p. 248
- ↑ ಕವಿತೆ: "ಎ ವೊಲಂಟ್ ಟ್ರೈಬ್ ಆಫ್ ಬಾರ್ಡ್ಸ್ ಆನ್ ಅರ್ಥ್ ಆರ್ ಫೌಂಡ್"
- ↑ ಬ್ರೌನೆ, ಚಾರ್ಲ್ಸ್ ಡಾರ್ವಿನ್: ದಿ ಪವರ್ ಆಫ್ ಪ್ಲೇಸ್ , p. 247
- ↑ ೧೧.೦ ೧೧.೧ "ದಿ ನೇಚರ್ ಶತಮಾನೋತ್ಸವದ ಭೋಜನಕೂಟ ," p. 13
- ↑ ೧೨.೦ ೧೨.೧ ೧೨.೨ ೧೨.೩ "ನೇಚರ್ ಪಬ್ಲಿಶಿಂಗ್ ಗ್ರುಪ್ : ಇತಿಹಾಸ", ಮರುಸಂಪಾದನೆ ನವೆಂಬರ್ 15, 2006
- ↑ "ರಿಚರ್ಡ್ ಅರ್ಮನ್ ಗ್ರೆಗೊರಿ, 1864–1952," p. 413
- ↑ ಡೆಮೊಗ್ರಾಫಿಕ್ಸ್: ನೇಚರ್ , ಓದುಗರ ಒಂದು ಚಿತ್ರಣ
- ↑ ನೇಚರ್: ಅಮೆರಿಕಾದ ಆಯ್ಕೆ
- ↑ ಸೈನ್ಸ್ ಜರ್ನಲ್ ನ ಸಾಪ್ತಾಹಿಕವು ಅಧ್ಯಕ್ಷೀಯ ಅಭ್ಯರ್ಥಿಯನ್ನು ಸೂಚಿಸಿತು:ಬರಾಕ್ ಒಬಾಮಾ
- ↑ "Nature's mission statement". 1869-11-11. Retrieved 2008-09-11.
- ↑ "Nature's mission statement". 2000. Retrieved 2008-09-11.
- ↑ "Retractions' realities". Nature. 422 (6927): p. 1. 2003-03-06. doi:10.1038/422001a.
{{cite journal}}
:|pages=
has extra text (help) - ↑ ರಿಚರ್ಡ್ ರೊಡ್ಸ್ , ದಿ ಮೇಕಿಂಗ್ ಆಫ್ ದಿ ಅಟೊಮಿಕ್ ಬಾಂಬ್ , ಟಚ್ ಸ್ಟೋನ್, ನ್ಯುಯಾರ್ಕ್ , 1986. ISBN 0-14-130220-8.
- ↑ ಫೆರ್ಮಿ, ಇ (1934).' ವರ್ಸಚ್ ಇಯನರ್ ಥೆಯರಿ ಡೆರ್ ಬೆಟಾ–ಸ್ಟಾಱಲೆನ್', ಜಿಟ್ ಕ್ರಿಫ್ಟ್ ಫರ್ ಫಿಸಿಕ್ , vol. 88, p. 161.
- ↑ "Coping with peer rejection". Nature. 425: p. 645. 2003-10-16. doi:10.1038/425645a.
{{cite journal}}
:|pages=
has extra text (help) - ↑ "nature.com". Nature Podcast.
- ↑ ಫೆಮಿಲಿ ಆಫ್ ಜರ್ನಲ್ಸ್
ಬಾಹ್ಯ ಕೊಂಡಿಗಳು
ಬದಲಾಯಿಸಿ- ದಿ ನೇಚರ್ ವೆಬ್ ಸೈಟ್ Archived 2008-12-03 ವೇಬ್ಯಾಕ್ ಮೆಷಿನ್ ನಲ್ಲಿ.
- 1869ರಿಂದ ಮೊದಲ ಸಂಚಿಕೆ ನಂತರ ಮೊದಲ ಎಲೆಕ್ಟ್ರಾನಿಕ್ ಆವೃತ್ತಿ
- ನೇಚರ್ ಆರ್ಚಿವ್, 1869–2008
- ದಿ ನೇಚರ್ ನ ವಿಮರ್ಶೆಗಳು ವೆಬ್ ಸೈಟ್
- ನೇಚರ್ ಕ್ಲಿನಿಕಲ್ ಪ್ರಾಕ್ಟೀಸ್ ವೆಬ್ ಸೈಟ್ Archived 2008-10-07 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಮ್ಮೊ ಹ್ಯಾನಿಯೊಂದಿಗೆ ಸಂದರ್ಶನ,ನೇಚರ್ ನ ವೆಬ್ ಪಬ್ಲಿಶಿಂಗ್ ಸಮೂಹ
- ನೇಚರ್ ಜರ್ನಲ್ ನ ಇತಿಹಾಸ