ವಿಕಿಪೀಡಿಯ:ಪರಿಶೀಲನಾರ್ಹತೆ
ವಿಕಿಪೀಡಿಯದಲ್ಲಿ ಪರಿಶೀಲನಾರ್ಹತೆ ಎಂದರೆ, ವಿಶ್ವಕೋಶವನ್ನು ಉಪಯೋಗಿಸುವ ಯಾರಾದರೂ ಮಾಹಿತಿಯು ಅಧಿಕೃತ ಮೂಲದಿಂದ ಬಂದಿದೆಯೆ ಎಂದು ಪರೀಕ್ಷಿಸಬಹುದು. ವಿಕಿಪೀಡಿಯವು ಸ್ವಂತ ಸಂಶೋಧನೆ ಯನ್ನು ಪ್ರಕಾಶಿಸುವುದಿಲ್ಲ. ಅದರ ಸಂಗ್ರಹವು ಹಿಂದೆ ಪ್ರಕಾಶನಗೊಂಡಿರುವ ಮಾಹಿತಿಯ ಮೇಲೆ ನಿರ್ಣಯವಾಗುವುದೇ ವಿನಃ, ಸಂಪಾದಕರ ನಂಬಿಕೆ ಅಥವಾ ಅನುಭವದ ಮೇಲಲ್ಲ. ನೀವು ಕೆಲವೊಂದರ ಬಗ್ಗೆ ಖಂಡಿತವಾಗಿ ಸರಿ ಎನಿಸಿದರೂ, ನೀವು ಅವುಗಳನ್ನು ಸೇರಿಸುವ ಮುನ್ನ ಅವುಗಳು ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಾಗಿರಬೇಕು. ಯಾವಾಗ ಅಧಿಕೃತ ಮೂಲಗಳು ಒಪ್ಪಿಗೆಯಾಗವಿದಿಲ್ಲವೋ, ಆಗ ಬಹಳಷ್ಟು ಮೂಲಗಳು ಏನು ಹೇಳುತ್ತವೆಯೋ ಅವುಗಳನ್ನು ಪ್ರತಿಕಡೆಗೂ ಬರಾಬರಿ ತೂಕವನ್ನು ಕೊಟ್ಟು ಮತ್ತು ತಟಸ್ತ ದೃಷ್ಟಿಕೋನ ವನ್ನು ಕಾಯ್ದುಕೊಂಡು ಮುಂದಿಡಬೇಕಾಗುವುದು. ಲೇಖನಗಳು, ಪಟ್ಟಿಗಳು ಮತ್ತು ಶಿರೋನಾಮೆಗಳಲ್ಲಿರುವ ಎಲ್ಲಾ ವಸ್ತುಗಳೂ ಸೇರಿದಂತೆ ಪರಿಶೀಲನಾರ್ಹ. ಪರಿಶೀಲನಾರ್ಹಗಳಲ್ಲಿ ಪ್ರಶ್ನಿಸಲ್ಪಟ್ಟುವುಗಳು ಅಥವಾ ಪ್ರಶ್ನಿಸಲ್ಪಡುವಂತವಹ ಎಲ್ಲಾ ಯಥೋಕ್ತಿಗಳು ಮತ್ತು ಯಾವುದೇ ವಸ್ತುವನ್ನು ನೇರವಾಗಿ ಬೆಂಬಲಿಸುವ ಒಂದು ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತ ಕೊಡಬೇಕಾಗಬಹುದು. ಆಧಾರದ ಅಗತ್ಯವಿದ್ದುಕೂಡ, ಆಧಾರವಿಲ್ಲದಿರುವ ಯಾವುದೇ ಒಂದನ್ನೂ ತೆಗೆದುಹಾಕಬಹುದು. ಆಧಾರವಿಲ್ಲದಿರುವ ಅಥವಾ ದುರ್ಬಲ ಆಧಾರವಿರುವ ಜೀವಂತ ವ್ಯಕ್ತಿಗಳ ಬಗ್ಗೆ ಇರುವ ಕಲಹಪ್ರಿಯ ವಸ್ತುಗಳನ್ನು ದಯವಿಟ್ಟು ತತ್ಕ್ಷಣ ತೆಗೆದುಹಾಕಿ.
ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡುವ ಬರವಣಿಗೆ ಹೇಗೆ ಮಾಡಬೇಕೆಂದು ತಿಳಿಯಲು ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡುವ ಆಕರಗಳು ಇದನ್ನು ನೋಡಿ. ಪರಿಶೀಲನಾರ್ಹತೆ, ಸ್ವಂತ ಸಂಶೋಧನೆ ಅಲ್ಲದಿರುವುದು ಮತ್ತು ತಟಸ್ತ ದೃಷ್ಟಿಕೋನ ಇವುಗಳು ವಿಕಿಪೀಡಿಯದ ಒಳಭಾಗದ ಅಡಕ ನೀತಿಗಳಾಗಿವೆ. ಅವುಗಳು ಜತೆ ಸೇರಿ ಕಾರ್ಯವೆಸೆಗಿ ಸಾರಾಂಶವನ್ನು ನಿರ್ದರಿಸುವುದರಿಂದ, ಸಂಪಾದಕರುಗಳು ಈ ಎಲ್ಲಾ ಮೂರು ಮುಖ್ಯವಾದ ಅಂಶಗಳನ್ನು ತಿಳಿದುಕೊಂಡಿರಬೇಕು. ಲೇಖನಗಳು ಹಕ್ಕುಸಾಮ್ಯ(ಕಾಪಿರೈಟ್) ನೀತಿಯನ್ನು ಕೂಡ ಒಪ್ಪಿಕೊಳ್ಳುವಂತಿರಬೇಕು
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು ~aanzx (ಚರ್ಚೆ | ಕೊಡುಗೆಗಳು) 7692291 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |