ಸಿಗ್ಮಂಡ್‌ ಫ್ರಾಯ್ಡ್‌

ಸಿಗಿಸ್‌ಮಂಡ್ ಷ್ಲೋಮೊ ಫ್ರಾಯ್ಡ್‌ (ಮೇ ೬, ೧೮೫೬ – ಸೆಪ್ಟೆಂಬರ್‌ ೨೩, ೧೯೩೯) ಎಂಬ ಜನ್ಮನಾಮದ ಸಿಗ್ಮಂಡ್‌ ಫ್ರಾಯ್ಡ್‌ (German pronunciation: [ˈziːkmʊnt ˈfʁɔʏt]) ಇವರು ಆಸ್ಟ್ರಿಯಾದ ನರಶಾಸ್ತ್ರಜ್ಞರಾಗಿದ್ದು, ಮನಶ್ಶಾಸ್ತ್ರದ ಮನೋವಿಶ್ಲೇಷಣಾ ಶಾಖೆಯ/ಪಂಥವನ್ನು ಸ್ಥಾಪಿಸಿದರು.[] ರೋಗಿಯ ಸುಪ್ತ ಮನಸ್ಸಿನ ಸ್ಥಿತಿ ಹಾಗೂ ಚಿಕಿತ್ಸೆಗೆ ಅಡ್ಡಿಪಡಿಸುವ ದಮನದ ಪ್ರತಿರೋಧಕ ವ್ಯವಸ್ಥೆಯನ್ನು ಮನೋ ವಿಶ್ಲೇಷಣೆಯ ಮೂಲಕ ವೈದ್ಯಕೀಯವಾಗಿ ಅಭ್ಯಸಿಸಿ, ಮನೋ ವಿಶ್ಲೇಷಕರು ಹಾಗೂ ರೋಗಿಯ ನಡುವಿನ ಸಂವಾದದ ಮೂಲಕ ಮನೋವಿಕಾರವನ್ನು ಹೇಗೆ ಸುಧಾರಿಸಬಹುದು ಎಂಬ ತಮ್ಮ ತತ್ವ ಸಿದ್ಧಾಂತಗಳಿಗೆ ಫ್ರಾಯ್ಡ್‌ ಪ್ರಖ್ಯಾತಿ ಪಡೆದವರು. ಕಾಮಾಪೇಕ್ಷೆಯೇ ಮಾನವ ಜೀವನದ ಅತಿಮುಖ್ಯ ಪ್ರೇರಕ ಶಕ್ತಿ, ಹಾಗೆಯೇ ಮುಕ್ತ ಸಂವಾದವೂ ಸೇರಿದಂತೆ ತನ್ನ ಚಿಕಿತ್ಸೆಗಳಲ್ಲಿ ಅನುಸರಿಸುವ ಕ್ರಮಗಳು, ಚಿಕಿತ್ಸಾ ಕ್ರಮದಲ್ಲಿನ ಸ್ಥಾನಾಂತರ ಸಿದ್ಧಾಂತ ಹಾಗೂ ಸುಪ್ತಮನಸ್ಸಿನ ಬಯಕೆಗಳಿಗೆ ಒಳನೋಟಕ್ಕೆ ಸ್ವಪ್ನಗಳು ಮೂಲಾಧಾರವೆಂಬ ತಮ್ಮ ಪುನರ್‌ ವಿವರಣೆಗಳಿಗೆ ಫ್ರಾಯ್ಡ್‌ ಪ್ರಖ್ಯಾತಿ ಹೊಂದಿದರು. ಅದಕ್ಕಿಂತ ಮುಂಚೆ ಅವರು ನರವಿಜ್ಞಾನದ ಮಸ್ತಿಷ್ಕ ಪಾರ್ಶ್ವವಾಯು ವಿಭಾಗದಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದರು.

ಸಿಗ್ಮಂಡ್ ಫ್ರಾಯ್ಡ್‌
ಸಿಗ್ಮಂಡ್ ಫ್ರಾಯ್ಡ್‌ , by Max Halberstadt, 1914
ಜನನSigismund Schlomo Freud
(೧೮೫೬-೦೫-೦೬)೬ ಮೇ ೧೮೫೬
Freiberg, Moravia, Austria–Hungary, (now the Czech Republic)
ಮರಣ23 September 1939(1939-09-23) (aged 83)
ಲಂಡನ್, ಇಂಗ್ಲೆಂಡ್, UK
ವಾಸಸ್ಥಳAustria, UK
ರಾಷ್ಟ್ರೀಯತೆAustrian
ಕಾರ್ಯಕ್ಷೇತ್ರNeurology
Philosophy
Psychiatry
Psychology
Psychotherapy
Psychoanalysis
Literature
ಸಂಸ್ಥೆಗಳುUniversity of Vienna
ಅಭ್ಯಸಿಸಿದ ವಿದ್ಯಾಪೀಠUniversity of Vienna
ಪ್ರಸಿದ್ಧಿಗೆ ಕಾರಣPsychoanalysis
ಪ್ರಭಾವಗಳುArthur Schopenhauer
Friedrich Nietzsche
Jean-Martin Charcot
Josef Breuer
ಪ್ರಭಾವಿತರುJohn Bowlby
Viktor Frankl
Anna Freud
Ernest Jones
Carl Jung
Melanie Klein
Jacques Lacan
Fritz Perls
Otto Rank
Wilhelm Reich
ಗಮನಾರ್ಹ ಪ್ರಶಸ್ತಿಗಳುGoethe Prize

ಎಷ್ಟೋ ಬಾರಿ, ಫ್ರಾಯ್ಡ್‌‌ನ ಹಲವಾರು ಸಿದ್ಧಾಂತಗಳು ತಿರಸ್ಕೃತಗೊಂಡು, ಅಥವಾ ನವ-ಫ್ರಾಯ್ಡ್‌ಸಿದ್ಧಾಂತಿಗಳು ಮಾಡಿದ ಬದಲಾವಣೆಗಳಿಂದಾಗಿ, ಹಾಗೂ ಮನಶ್ಶಾಸ್ತ್ರದ ಕ್ಷೇತ್ರದಲ್ಲಿನ ಆಧುನಿಕ ಪ್ರಗತಿಗಳು ಆತನ ಕೆಲವು ಸಿದ್ಧಾಂತಗಳು ತಪ್ಪೆಂದು ತೋರಿಸಿದರೂ, ವೈದ್ಯಕೀಯ ಮನೋಬಲ ವಿಜ್ಞಾನಕ್ಷೇತ್ರದಲ್ಲಿ ಫ್ರಾಯ್ಡ್‌ರ ಅಧ್ಯಯನಗಳು ಪ್ರಾಮುಖ್ಯತೆ ಉಳಿಸಿಕೊಂಡಿವೆ. ಶೈಕ್ಷಣಿಕ ಕ್ಷೇತ್ರಗಳಾದ ಮಾನವತಾವಾದ ಹಾಗೂ ಕೆಲ ಸಾಮಾಜಿಕ ವಿಜ್ಞಾನಗಳಲ್ಲಿ ಆತನ ವಿಚಾರಗಳು ಪ್ರಭಾವ ಬೀರಿವೆ.

ಜೀವನಚರಿತ್ರೆ

ಬದಲಾಯಿಸಿ

ಪ್ರಾರಂಭದ ಜೀವನ

ಬದಲಾಯಿಸಿ

ಆಸ್ಟ್ರಿಯಾ ಚಕ್ರಾಧಿಪತ್ಯದ ಪ್ರಿಬೊರ್‌ನ ಮೊರವಿಯನ್‌ ಅಂದರೆ ಈಗಿನ ಜೆಕ್ ಗಣರಾಜ್ಯದ ಭಾಗದಲ್ಲಿ, ಗಲೀಸಿಯನ್ ಯಹೂದ್ಯ[] ದಂಪತಿಗಳಿಗೆ ೧೮೫೬ರ ಮೇ ೬ರಂದು ಸಿಗ್ಮಂಡ್‌ ಫ್ರಾಯ್ಡ್‌ ಜನಿಸಿದನು. ಉಣ್ಣೆ ವ್ಯಾಪಾರಿಯಾದ ೪೧ ವರ್ಷದ ಆತನ ತಂದೆ ಜಾಕೊಬ್‌ಗೆ,[] ಹಿಂದಿನ ವಿವಾಹದಿಂದ ಎರಡು ಮಕ್ಕಳಿದ್ದವು. ಜಾಕೊಬ್‌ನ ಮೂರನೇ ಹೆಂಡತಿ ೨೧ ವರ್ಷದ ಅಮೆಲಿ (ನೇ ನಾಥನ್ಸಾಹ್ನ್‌) ಆತನ ತಾಯಿ. ಆತ ಉಳಿದೆಲ್ಲ ಎಂಟು ಮಕ್ಕಳಿಗಿಂತ ಚುರುಕು ಬುದ್ಧಿಯವನಾದ್ದರಿಂದ, ಹೆತ್ತವರು ಆತನನ್ನು ಆತನ ಇತರೆ ಸೋದರರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರ ಕಡು ಬಡತನದಲ್ಲಿಯೂ ಆತನಿಗೆ ಸರಿಯಾದ ಶಿಕ್ಷಣ ಕೊಡಿಸಲು ತಮ್ಮೆಲ್ಲವನ್ನೂ ತ್ಯಾಗ ಮಾಡಿದರು. ಫ್ರಾಯ್ಡ್‌‌ನ ತಂದೆ 1857ರ ಆರ್ಥಿಕ ದುಷ್ಪರಿಣಾಮದಿಂದ, ವ್ಯಾಪಾರದಲ್ಲಿ ನಷ್ಟ ಅನುಭವಿಸಿದರ ಪರಿಣಾಮ ಇಡೀ ಕುಟುಂಬವು ವಿಯೆನ್ನಾದಲ್ಲಿ ನೆಲೆಗೊಳ್ಳುವುದಕ್ಕೆ ಮುಂಚಿನ ಲೈಪ್‌ಜಿಗ್‌ಗೆ ಸ್ಥಳಾಂತರಗೊಂಡರು. ೧೮೬೫ರಲ್ಲಿ ಸಿಗ್ಮಂಡ್, Leopoldstädter Kommunal-Realgymnasium ಎಂಬ ಸುಪ್ರಸಿದ್ಧ ಶಾಲೆಗೆ ಸೇರಿದ. ೧೮೭೩ರಲ್ಲಿ ಫ್ರಾಯ್ಡ್‌ ಮತುರಾದ ಅತ್ಯುತ್ತಮ ಪದವೀಧರ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರನಾದ. ನಂತರದಲ್ಲಿ ಕಾನೂನನ್ನು ಅಧ್ಯಯನ ಮಾಡಲು ತೀರ್ಮಾನಿಸಿದ ಫ್ರಾಯ್ಡ್‌, ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಡಾರ್ವಿನ್ ವಾದಿಯಾದ Prof. ಕಾರ್ಲ್ ಕ್ಲಾಸ್‌ರ ಮಾರ್ಗದರ್ಶನದಲ್ಲಿ ವೈದ್ಯಕೀಯ ವಿಭಾಗಕ್ಕೆ ಸೇರಿದರು.[] ಹಾವುಮೀನು/ಈಲ್‌‌ಗಳ ಜೀವನ ಚಕ್ರ ಇನ್ನೂ ಅಜ್ಞಾತವಾಗಿದ್ದ ಕಾಲವದು. ಆಸ್ಟ್ರಿಯಾದ ಟ್ರೈಯೆಸ್ಟ್‌ನ ಪ್ರಾಣಿ ಸಂಶೋಧನಾ ಸಂಸ್ಥೆಯಲ್ಲಿ ಗಂಡು ಈಲ್‌ಗಳ ಲೈಂಗಿಕ ಅಂಗಗಳ ಸಂಶೋಧನೆಗಾಗಿ ಫ್ರಾಯ್ಡ್‌ ನಾಲ್ಕು ವಾರಗಳಲ್ಲಿ ನೂರಾರು ಈಲ್‌ಗಳನ್ನು ಕತ್ತರಿಸಿದನಾದರೂ, ತನ್ನ ಹಿಂದಿನವರಿಗಿಂತ ಹೆಚ್ಚೇನೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ವೈದ್ಯಕೀಯ ಶಾಲೆ

ಬದಲಾಯಿಸಿ

೧೮೭೪ರಲ್ಲಿ, ಜರ್ಮನಿಯ ಶರೀವರುಣ್ ಕುಮಾರ್ ಅರ್ನೆಸ್ಟ್‌ ವಿಲ್‌ಹೆಮ್‌ ವಾನ್ ಬ್ರುಕ್]]‌, ಉಷ್ಣಬಲ ವಿಜ್ಞಾನದ ಪ್ರಥಮ ನಿಯಮವನ್ನು (ಶಕ್ತಿಸ್ಥಾಯಿತ್ವ) ಪ್ರತಿಪಾದಿಸಿ, ಎಲ್ಲಾ ಜೀವಿಗಳೂ ಶಕ್ತಿಕೇಂದ್ರವಾಗಿದ್ದು ಮತ್ತು ಅವುಗಳೆಲ್ಲವೂ ಈ ನಿಯಮವನ್ನು ಪಾಲಿಸುತ್ತವೆ ಎಂದು ಹೇಳಿದವರಲ್ಲಿ ಒಬ್ಬರಾದ ಭೌತವಿಜ್ಞಾನಿಯಾದ ಹರ್‌ಮನ್‌ ವಾನ್ ಹೆಲ್‌ಮ್‌ಹೊಲ್ಟ್ಸ್‌ ಜೊತೆಗೂಡಿ ಲೆಕ್ಚರ್ಸ್‌ ಆನ್ ಫಿಸಿಯಾಲಜಿ ಯಲ್ಲಿ ಪ್ರಕಟಣೆಯಡಿ "ಮನೋಬಲ ವಿಜ್ಞಾನ" ಎಂಬ ಪರಿಕಲ್ಪನೆಯನ್ನು ಮಂಡಿಸಿದರು. ಆ ವರ್ಷದಲ್ಲಿ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ, ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಸಿಗ್ಮಂಡ್‌ ಫ್ರಾಯ್ಡ್‌ ಹೊಸದಾದ ಈ "ಕ್ರಿಯಾತ್ಮಕ" ಶರೀರ ವಿಜ್ಞಾನವನ್ನು ಆಯ್ದುಕೊಳ್ಳಲು ಮೇಲ್ವಿಚಾರಕರಾದ ಬ್ರುಕ್‌ ಸಹಕರಿಸಿದರು. ಬ್ರುಕ್ ತನ್ನ ಲೆಕ್ಚರ್ಸ್‌ ಆನ್ ಫಿಸಿಯಾಲಜಿ ಯಲ್ಲಿ ಮಹತ್ವದ ಅಭಿಪ್ರಾಯವಾಗಿ, ಯಾವುದೇ ಜೀವಿಯು ನಿರಂತರ ಕ್ರಿಯಾತ್ಮಕ ವ್ಯವಸ್ಥೆ ಆಗಿದ್ದು, ಇವುಗಳಿಗೆ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರದ ನಿಯಮಗಳು ಅನ್ವಯಿಸುತ್ತವೆ ಎಂದು ತಿಳಿಸುತ್ತಾರೆ.[] ಇದು ಫ್ರಾಯ್ಡ್‌ರ "ಕ್ರಿಯಾತ್ಮಕ" ಶಾರೀರಿಕ ಮಾನಸಿಕ ವಿಜ್ಞಾನ ಹಾಗೂ ಸುಪ್ತಾವಸ್ಥೆಯ ನಡುವಿನ ಸಂಬಂಧದ ಪ್ರಥಮ ಹಂತ.[] ಫ್ರಾಯ್ಡ್‌ ಮಾದರಿಗೆ ಮೂಲ ಆಧಾರ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರಗಳಿಂದ ಬಂದಂತವು ಎಂದು, ಜಾನ್ ಬೊಲ್‌ಬೈ, ಬ್ರುಕ್, ಮೇನೆರ್ಟ್, ಬ್ರ್ಯೂಯೆರ್, ಹೆಲ್ಮ್‌ಹೊಲ್ಟ್ಸ್‌, ಹಾಗೂ ಹರ್ಬೆರ್ಟ್ ತಿಳಿಸುತ್ತಾರೆ.[] ೧೮೭೬ರಲ್ಲಿ Mitteilungen der österreichischen Akademie der Wissenschaften ನಲ್ಲಿ, " ಈಲ್‌ಗಳ ವೃಷಣಗಳು " ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಪ್ರಥಮ ಲೇಖನವನ್ನು ಪ್ರಕಟಿಸಿದ ಅವರು, ತಮ್ಮಿಂದ ಈ ವಿಷಯವನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಫ್ರಾಯ್ಡ್‌ ೧೮೭೭ರಲ್ಲಿ, ತಮ್ಮ ಹೆಸರಿನ ಮೊದಲ ಭಾಗದ "ಸಿಗಿಸ್‌ಮಂಡ್" ಅನ್ನು "ಸಿಗ್ಮಂಡ್"ಎಂದು ಬದಲಾಯಿಸಿಕೊಂಡರು. ಒಂದು ವರ್ಷದ ಕಡ್ಡಾಯ ಸೇನಾ ಸೇವೆಯನ್ನು ಪೂರ್ಣಗೊಳಿಸುವುದಕ್ಕಾಗಿ ೧೮೭೯ರಲ್ಲಿ ಫ್ರಾಯ್ಡ್‌ ‌ತಮ್ಮ ಓದನ್ನು ಮುಂದೂಡಿದರು, ಹಾಗೂ ೧೮೮೧ರಲ್ಲಿ Dr. med. (M.D.)ಯನ್ನು Über das Rückenmark niederer Fischarten ("ಕೆಳಸ್ತರದ ಮೀನಿನ ಪ್ರಭೇದಗಳಲ್ಲಿನ ಬೆನ್ನುಹುರಿ") ಎಂಬ ಮಹಾಪ್ರಬಂಧ ಮಂಡಿಸಿದಕ್ಕಾಗಿ ಸ್ವೀಕರಿಸಿದರು.

ಫ್ರಾಯ್ಡ್‌ ಹಾಗೂ ಮನೋವಿಶ್ಲೇಷಣೆ

ಬದಲಾಯಿಸಿ
 
1909ರಲ್ಲಿ ಕ್ಲಾರ್ಕ್‌ ವಿಶ್ವವಿದ್ಯಾಲಯದ ಮುಂದೆ ಸಮೂಹ ಛಾಯಾಚಿತ್ರ. ಮುಂದಿನ ಸಾಲು : ಸಿಗ್ಮಂಡ್‌ ಫ್ರಾಯ್ಡ್‌, G. ಸ್ಟ್ಯಾನ್ಲಿ ಹಾಲ್‌, ಕಾರ್ಲ್ ಜಂಗ್‌; ಹಿಂದಿನ ಸಾಲು: ಅಬ್ರಹಾಂ A. ಬ್ರಿಲ್‌, ಅರ್ನೆಸ್ಟ್‌ ಜೋನ್ಸ್‌, ಸ್ಯಾಂಡರ್‌ ಫೆರೆನ್ಜಿ.
ಚಿತ್ರ:Berggasse19.JPG
19 ಬರ್ಗ್ಗೆಸ್ಸೆ
 
ಬರ್ಗ್ಗೆಸ್ಸೆಯ ಫ್ರಾಯ್ಡ್‌ರ ಸಮಾಲೋಚನಾ ಕೊಠಡಿಗಳಿಗೆ ಹೋಗುವ ದಾರಿ

೧೮೮೫ರ ಅಕ್ಟೋಬರ್‌ನಲ್ಲಿ ಫ್ರಾಯ್ಡ್‌ ಸ್ನಾತಕೋತ್ತರ ವಿದ್ಯಾರ್ಥಿವೇತನ ಪಡೆದು, ಯುರೋಪಿನ ಅತ್ಯಂತ ಪ್ರಖ್ಯಾತ ನರರೋಗ ಶಾಸ್ತ್ರಜ್ಞ ಜೀನ್ ಮಾರ್ಟಿನ್ ಚಾರ್ಕೋಟ್‌ ಜೊತೆ ಅಧ್ಯಯನ ನಡೆಸಲು ಪ್ಯಾರಿಸ್‌ಗೆ ತೆರಳುತ್ತಾರೆ. ಈ ನಿರ್ಧಾರವು ಅಷ್ಟೇನೂ ಲಾಭದಾಯಕವಾದ ನರರೋಗ ಸಂಶೋಧನಾ ವೃತ್ತಿಯಿಂದ ಬೇರ್ಪಡಿಸಿ ವೈದ್ಯಕೀಯ ಮನೋರೋಗ ವಿಜ್ಞಾನವನ್ನು ನಿರಂತರವಾಗಿ ಅಭ್ಯಾಸವನ್ನು ಮಾಡಲು ಉಪಕ್ರಮಿಸಲು ಪರಿವರ್ತಕವಾಗಿ ಪರಿಣಮಿಸಿದ್ದನ್ನು ಬಹಳ ಕಾಲದ ನಂತರ ಅವರು ನೆನಪಿಸಿಕೊಳ್ಳುತ್ತಾರೆ.[] ಉನ್ಮಾದ ಹಾಗೂ ಸಂಮೋಹನದ ಪ್ರಭಾವಕ್ಕೆ ಒಳಗಾಗಬಲ್ಲ ಅದರ ಗುಣದ ಅಧ್ಯಯನದಲ್ಲಿ ಪರಿಣಿತರಾದ ಚಾರ್ಕೋಟ್‌ ಅದನ್ನು ಪ್ರೇಕ್ಷಕರ ಎದುರು ವೇದಿಕೆಯ ಮೇಲೆ ತಮ್ಮ ರೋಗಿಗಳ ಮೇಲೆ ಪ್ರಯೋಗಿಸುತ್ತಿದ್ದರು. ನಂತರದಲ್ಲಿ ಫ್ರಾಯ್ಡ್‌ ಸಂಮೋಹನದಿಂದ ದೂರ ಉಳಿದು, ಮುಕ್ತ ಸಂವಾದ ಹಾಗೂ ಸ್ವಪ್ನ ವಿಶ್ಲೇಷಣೆಗಳಲ್ಲಿ ತೊಡಗಿಕೊಂಡರು.[] ತನ್ನ ಜೀವನದ ಅಂತ್ಯದಲ್ಲಿ ಚಾರ್ಕೋಟ್‌ ಕೂಡ ಉನ್ಮಾದದ ಬಗೆಗಿನ ತನ್ನ ಅಧ್ಯಯನದ ವಿಚಾರವಾಗಿ ತನ್ನನ್ನು ತಾನು ಪ್ರಶ್ನಿಸಿಕೊಂಡಿದ್ದರು.[]

ನರವಿಜ್ಞಾನದಲ್ಲಿ ಪರಿಣಿತಿ ಪಡೆದು ತನ್ನ ಸ್ವಂತವಾದ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ ನಂತರ ೧೮೮೬ರಲ್ಲಿ ಮಾರ್ಥಾ ಬೇರ್ನಯ್ಸ್‌ರನ್ನು ಫ್ರಾಯ್ಡ್ ಮದುವೆಯಾದರು. ಆಕೆಯ ತಂದೆ ಬೇರ್ಮನ್ ಹ್ಯಾಮ್‌ಬರ್ಗ್‌ನ ಯಹೂದ್ಯ ಧಾರ್ಮಿಕ ಮುಖಂಡ ಐಸಾಕ್ ಬೇರ್ನಯ್ಸ್‌ರ ಮಗ. ತನ್ನ ನರರೋಗಿಗಳ ಮೇಲೆ ಸಾಕಷ್ಟು ಸಂಮೋಹನವನ್ನು ಪ್ರಯೋಗಿಸಿದರೂ ಈ ವಿಧದ ಚಿಕಿತ್ಸೆಯಿಂದಾಗಿ ಅನೇಕರಲ್ಲಿ ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲವಾದ್ದರಿಂದ, ಫ್ರಾಯ್ಡ್‌ ಅದನ್ನು ಕೈಬಿಟ್ಟು ರೋಗಿಯು ಸ್ವತಃ ಆತನ ಅಥವಾ ಆಕೆಯ ಸಮಸ್ಯೆಗಳ ಬಗ್ಗೆ ಮಾತನಾಡುವ ಚಿಕಿತ್ಸಾಪದ್ಧತಿಯ ದಾರಿ ಹಿಡಿದರು. ಪ್ರಾರಂಭದಲ್ಲಿ ತಿರಸ್ಕೃತಗೊಂಡು ಸುಪ್ತ ಮನಸ್ಸಿನಲ್ಲಿ ಹುದುಗಿರುವ ಶಕ್ತಿಶಾಲಿ ಭಾವನಾತ್ಮಕ ಒತ್ತಡವನ್ನು ಗುರುತಿಸಿ ತೆಗೆದುಹಾಕುವುದೇ ಮಾತನಾಡುವಿಕೆಯ ಮೂಲ ಉದ್ದೇಶ ಆಗಿರುವುದರಿಂದ ಇದು "ಸಂವಾದ ಚಿಕಿತ್ಸೆ" ಎಂದೇ ಪ್ರಖ್ಯಾತವಾಯಿತು. ಫ್ರಾಯ್ಡ್‌ ಆ ರೀತಿ ಪ್ರತಿರೋಧ ಒಡ್ಡಿದ ಭಾವನೆಗಳಿಗೆ "ದಮನ" ಎಂದು ಹೆಸರಿಸಿದರು ಹಾಗೂ ಇದು ಮನಸ್ಸಿನ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಹಾಳುಮಾಡುತ್ತದೆ, ಹಾಗೂ ದೈಹಿಕ ಕಾರ್ಯಕ್ಷಮತೆಯನ್ನೂ ಹಾಳುಗೆಡವಬಲ್ಲದು ಎಂದು ನಂಬಿದ್ದ ಅವರು ಇಂತಹ ಲಕ್ಷಣಗಳನ್ನು "ಮನೋದೈಹಿಕ" ಲಕ್ಷಣಗಳು ಎಂದು ವಿವರಿಸಿದ್ದರು. ("ಸಂವಾದ ಚಿಕಿತ್ಸೆ" ಎಂಬ ಪದವನ್ನು ಪ್ರಥಮ ಬಾರಿಗೆ ಫ್ರಾಯ್ಡ್‌‌ನ ಸಹೋದ್ಯೋಗಿ ಜೋಸೆಫ್ ಬ್ರ್ಯೂವರ್ ಚಿಕಿತ್ಸೆ ನೀಡುತ್ತಿದ್ದ ರೋಗಿ ಆನ್ನಾ O.ರವರು ನೀಡಿದರು.) ಮನೋವಿಶ್ಲೇಷಣೆಯಲ್ಲಿ "ಸಂವಾದ ಚಿಕಿತ್ಸೆ"ಯ ಬಳಕೆಯನ್ನು ಬಹಳಷ್ಟು ಕಡೆ ಕಾಣಬಹುದು.[೧೦] ೧೮೯೬ರಲ್ಲಿ 19, ಬೆರ್ಗಾಸ್ಸೇಯಲ್ಲಿನ ಫ್ರಾಯ್ಡ್‌ರ ಮನೆ/ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಿದ ಆತನ ನಾದಿನಿ ಮಿನ್ನಾ ಬೇರ್ನಯ್ಸ್‌ರ ನಡುವೆ ಪ್ರಣಯ ಸಂಬಂಧ ಆರಂಭಗೊಂಡಿರಬಹುದೆಂಬ ವದಂತಿಯ/ಊಹಾಪೋಹವನ್ನು ಕಾರ್ಲ್‌ ಜುಂಗ್‌ ಹರಡಲು ತೊಡಗಿದರು.[೧೧] (ಈ ಸಂಬಂಧದಿಂದ ಆಕೆ ಗರ್ಭವತಿಯಾದಳು ಮತ್ತು ಅದರಿಂದಾಗಿ ಕುಮಾರಿ ಬೇರ್ನಯ್ಸ್‌ರು ಗರ್ಭಪಾತಕ್ಕೊಳಪಡಬೇಕಾಯಿತು ಎಂದು ಮನಶ್ಶಾಸ್ತ್ರಜ್ಞರಾದ ಹ್ಯಾನ್ಸ್‌ ಐಸೆಂಕ್ ಸೂಚಿಸುತ್ತಾರೆ.[೧೨]) ೧೮೯೮ರ ಆಗಸ್ಟ್‌ ೧೩ನೇ ದಿನಾಂಕದ ಸ್ವಿಸ್ಸ್ ಹೋಟೆಲ್‌ ಸಂದರ್ಶಕರ ದಿನಚರಿ ಪುಸ್ತಕವು ೨೦೦೬ರಲ್ಲಿ ಪ್ರಕಟಗೊಂಡ ವಿವರಗಳು ಸೂಚಿಸಿದ ಪ್ರಕಾರ (ಪೀಟರ್ ಗೇ ಸೇರಿದಂತೆ) ಕೆಲ ಫ್ರಾಯ್ಡ್‌ ಪರ ತಜ್ಞರಿಗೆ ಈ ವದಂತಿಗಳಿಗೆ ವಾಸ್ತವದ ಆಧಾರವಿದೆಯೆಂಬ ಸೂಚನೆ ದೊರೆಯಿತು.[೧೩]

ಫ್ರಾಯ್ಡ್‌ ತನ್ನ ನಲವತ್ತರ ಪ್ರಾಯದಲ್ಲಿ, "ಹಲವು ಮನೋದೈಹಿಕ ಅನಾರೋಗ್ಯಗಳ ಜೊತೆಗೆ ಸಾವು ಹಾಗೂ ಇತರೆ ಭಯಗಳಿಂದ ನರಳುತ್ತಿದ್ದರು (ಕೋರೆ ೨೦೦೧, p. ೬೭). ಇದೇ ಸಮಯದಲ್ಲಿ ಫ್ರಾಯ್ಡ್‌ ತನ್ನದೇ ಕನಸುಗಳನ್ನು, ನೆನಪುಗಳನ್ನು, ಮತ್ತು ತನ್ನದೇ ವ್ಯಕ್ತಿತ್ವ ಬೆಳವಣಿಗೆಯ ಪ್ರೇರಕ ಶಕ್ತಿಯ ಬಗ್ಗೆ ಪರಿಶೋಧಿಸಲು ಆರಂಭಿಸಿದರು. ಈ ಆತ್ಮಾವಲೋಕನದಲ್ಲಿ, ೧೮೯೬[೧೪] ರಲ್ಲಿ ಸಾವನ್ನಪ್ಪಿದ ತನ್ನ ತಂದೆಯ (ಜಾಕೋಬ್ ಫ್ರಾಯ್ಡ್‌), ಬಗೆಗೆ ದ್ವೇಷದಿಂದ ನಡೆದುಕೊಂಡ ರೀತಿಯ ಅರಿವಾಯಿತು, ಹಾಗೂ "ಆತ ಆಕರ್ಷಕ, ಮಮತೆಯ, ಸಂರಕ್ಷಕಿಯಾಗಿದ್ದ ತನ್ನ ತಾಯಿಯ(ಅಮಲಿಯಾ ಫ್ರಾಯ್ಡ್‌) ಬಗ್ಗೆ ಉಂಟಾದ ತನ್ನ ಬಾಲ್ಯದಲ್ಲಿನ ಕಾಮದ ಭಾವನೆಗಳು" ನೆನಪಾಗತೊಡಗಿದವು (ಕೋರೆ ೨೦೦೧, p. ೬೭) ಇಂತಹ ಭಾವನಾತ್ಮಕವಾಗಿ ಕಷ್ಟಕರವಾದ ಈ ಕ್ಷಣಗಳು ಫ್ರಾಯ್ಡ್‌ ಜೀವನದ ಅತ್ಯಂತ ಕ್ರಿಯಾತ್ಮಕ ಸಮಯವೆಂದೇ ಭಾವಿಸಿದ್ದರು.

ಫ್ರಾಯ್ಡ್‌ನ ಪುಸ್ತಕಗಳು ೧೯೦೦ ಮತ್ತು ೧೯೦೨ರಲ್ಲಿ ಪ್ರಕಟಣೆಯಾದ ನಂತರವಷ್ಟೇ, ಜನರಿಗೆ ಆತನ ಸಿದ್ಧಾಂತಗಳಲ್ಲಿ ಆಸಕ್ತಿಯು ಬೆಳೆಯತೊಡಗಿತಲ್ಲದೇ, ಅದೇ ಸಮಯದಲ್ಲಿ ಆತನಿಗೆ ಬೆಂಬಲಿಗರ ಗುಂಪೂ ಹುಟ್ಟಿಕೊಂಡಿತು. ಪ್ರಖ್ಯಾತ ಕಾರ್ಲ್‌ ಜಂಗ್‌ ಸೇರಿದಂತೆ ಮೊದಲು ಫ್ರಾಯ್ಡ್‌ನ ಸಿದ್ಧಾಂತಗಳನ್ನು ಬಹಳವಾಗಿ ಬೆಂಬಲಿಸಿದ್ದ ಇತರರು, ತನ್ನ ಸಿದ್ಧಾಂತಗಳನ್ನು ವಿಮರ್ಶೆ ಮಾಡಿದಾಗ ಫ್ರಾಯ್ಡ್‌ ಬಹಳಷ್ಟು ಬಾರಿ ವಾಗ್ವಾದ ಮಾಡಿದ್ದೂ ಇದೆ. ಫ್ರಾಯ್ಡ್‌ ಮತ್ತು ಜುಂಗ್‌ನ ನಡುವಣ ಬಿರುಕಿನ ಅನೇಕ ಕಾರಣಗಳಲ್ಲಿ, ಜುಂಗ್‌ರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಒಲವು ಮತ್ತು ಬದ್ಧತೆಯು ಫ್ರಾಯ್ಡ್‌ಗೆ ಅವೈಜ್ಞಾನಿಕ ಎಂದು ಅನಿಸಿದ್ದೂ ಒಂದು ಭಾಗವಾಗಿತ್ತು.[೧೫]

ಫ್ರಾಯ್ಡ್‌ನ ಸಾಮರ್ಥ್ಯಕ್ಕೆ ತಂಬಾಕು ಮತ್ತು ಫೈನ್ ಸಿಗಾರ್‌ಗಳು ಎಷ್ಟರಮಟ್ಟಿಗೆ ಸಹಾಯಕವಾಗಿತ್ತು ಎಂಬುದರ ಬಗ್ಗೆ ಆತನ ಅನಿಸಿಕೆಯನ್ನು ಪರಿಗಣಿಸುವುದಾದರೆ, ಆಸ್ಟ್ರಿಯಾದಲ್ಲಿ ಮೊದಲನೆಯ ವಿಶ್ವ ಮಹಾಯುದ್ಧದ ಬಿಸಿ ತಟ್ಟಿದ ಸಮಯದಲ್ಲಿಯೂ ಆತ ಬರೆದ ಪತ್ರವೊಂದು ತೋರಿಸುತ್ತದೆ :

Will Ferenczi be called up? Will food and fuel- and cigar-shortages continue?

[೧೬]

ಅಂತಿಮ ವರ್ಷಗಳು

ಬದಲಾಯಿಸಿ

ಜರ್ಮನ್ ಸಾಹಿತ್ಯ ಸಂಸ್ಕೃತಿಯಲ್ಲಿ ಹಾಗೂ ಮನಶ್ಶಾಸ್ತ್ರದಲ್ಲಿನ ಅವರ ಕೊಡುಗೆಗಳಿಗಾಗಿ ಫ್ರಾಯ್ಡ್‌ ೧೯೩೦ರಲ್ಲಿ, ಗೊಯೆಟೆ ಪ್ರಶಸ್ತಿ ಪಡೆದರು. ಮೂರು ವರ್ಷಗಳ ನಂತರ ನಾಜಿಗಳು ಜರ್ಮನಿಯನ್ನು ವಶಪಡಿಸಿಕೊಂಡ ನಂತರ ಸುಟ್ಟು ನಾಶಪಡಿಸಿದ ಪುಸ್ತಕಗಳಲ್ಲಿ ಫ್ರಾಯ್ಡ್‌‌ರ ಪ್ರಮುಖ ಕೃತಿಗಳೂ ಸೇರಿದ್ದವು. ಯಹೂದಿ ಹತ್ಯಾಕಾಂಡದ ಆ ಸಮಯದಲ್ಲಿ, ತನ್ನ ಹಲವು ಸಹೋದರಿಯರಲ್ಲಿ ಎಲ್ಲರೂ ನಾಶವಾಗುತ್ತಾರೆಂದು ತನ್ನಿಂದ ಮುಂಚೆಯೇ ಊಹಿಸಲಾಗಲಿಲ್ಲ ಎಂದು ವ್ಯಂಗ್ಯೋಕ್ತಿ ಸಿಡಿಸಿದರು

What progress we are making. In the Middle Ages they would have burned me. Now they are content with burning my books.[೧೭]

. ೧೯೩೮ರ ಮಾರ್ಚ್‌ನಲ್ಲಿ, ನಾಜಿ ಜರ್ಮನಿಯು ತನ್ನ ಜರ್ಮನ್‌ ಒಕ್ಕೂಟದಲ್ಲಿ ಆಸ್ಟ್ರಿಯಾವನ್ನು ಸೇರ್ಪಡಿಸಿಕೊಂಡಿತು. ಇದರಿಂದಾಗಿ ವಿಯೆನ್ನಾದಲ್ಲಿ ಯೆಹೂದ್ಯ ವಿರೋಧಿ ನಡೆಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಕಾರಣದಿಂದ ನಾಜಿ ಪೋಲಿಸರು ಫ್ರಾಯ್ಡ್‌ ಮತ್ತು ಆತನ ಕುಟುಂಬದವರ ಮನೆಗೆ ಭೇಟಿ ನೀಡುತ್ತಾರೆ. ಫ್ರಾಯ್ಡ್‌ "ಸ್ವತಂತ್ರವಾಗಿ ಸಾಯಲು ತೀರ್ಮಾನಿಸಿ" ತಲೆಮರೆಸಿಕೊಂಡು ಹೋಗಲು ನಿರ್ಧರಿಸಿದರು. ಅವರು ತಮ್ಮ ಕುಟುಂಬದೊಂದಿಗೆ ಜೂನ್ ೧೯೩೮ರಲ್ಲಿ ವಿಯೆನ್ನಾ ಬಿಟ್ಟು, ಲಂಡನ್‌ನ ಹ್ಯಾಂಪ್ಸ್‌ಟೆಡ್‌ನಲ್ಲಿರುವ ೨೦ ಮಾರೆಸ್‌ಫೀಲ್ಡ್ ಗಾರ್ಡನ್ಸ್‌ಗೆ ವಲಸೆ ಹೋದರು. ಬೆಲ್‌ಸೈಜ್ ಮಾರ್ಗದ ಫಿಟ್ಸ್‌ಜಾನ್ ಬೀದಿಯಲ್ಲಿರುವ ಸ್ವಿಸ್ಸ್ ಕಾಟೇಜ್ ಹತ್ತಿರದ ತಿರುವಿನಲ್ಲಿ ಅವರ ಪ್ರತಿಮೆ ಇದೆ.

ಅತಿ ಹೆಚ್ಚು ಧೂಮಪಾನ ಮಾಡುತ್ತಿದ್ದ ಫ್ರಾಯ್ಡ್‌, ತನ್ನ ಜೀವಮಾನದಲ್ಲಿ ವಸಡಿನ ಅರ್ಬುದದ ಪರಿಣಾಮವಾಗಿ ೩೦ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂತು. ೧೯೩೯ರ ಸೆಪ್ಟೆಂಬರ್‌ನಲ್ಲಿ ತನ್ನ ಡಾಕ್ಟರ್ ಹಾಗೂ ಸ್ನೇಹಿತನಾದ ಮ್ಯಾಕ್ಸ್‌ ಷೂರ್‌ಗೆ ತಾನು ಸಾಯಲು ಸಹಕರಿಸುವಂತೆ ಕೇಳಿಕೊಂಡರು‌.[ಸೂಕ್ತ ಉಲ್ಲೇಖನ ಬೇಕು] ಬಾಲ್ಜಾಕ್‌ರ ಲಾ ಪ್ಯೂ ಡೆ ಷಾಗ್ರಿನ್‌ ನನ್ನು ಒಂದೇ ಬಾರಿಗೆ ಓದಿ ಮುಗಿಸಿದ ನಂತರ, "ನನ್ನ ಪ್ರಿಯ ಷೂರ್‌‌, ನಿನಗೆ ನಮ್ಮ ಪ್ರಥಮ ಮಾತುಕತೆ ಖಂಡಿತಾ ನೆನಪಿರಬೇಕು ಎಂದುಕೊಳ್ಳುತ್ತೇನೆ. ನನ್ನ ಅಂತಿಮ ಗಳಿಗೆಯಲ್ಲಿ ನೀನು ನನ್ನ ಕೈ ಬಿಡುವುದಿಲ್ಲ ಎಂದು ವಚನ ನೀಡಿದ್ದೆ. ಆದರೆ ಈಗ ಬರೀ ಹಿಂಸೆಯ ಹೊರತಾಗಿ ಏನೂ ಉಳಿದಿಲ್ಲವಾದ್ದರಿಂದ ಬದುಕುಳಿಯುವುದರಲ್ಲಿ ಯಾವುದೇ ರೀತಿಯ ಅರ್ಥವಿಲ್ಲ" ಎಂದು ಹೇಳುತ್ತಾರೆ. ಷೂರ್‌ ಹಲವು ಗಂಟೆಗಳ ಬಳಿಕ ಮೂರು ಪ್ರಮಾಣದ ಅಫೀಮನ್ನು ನೀಡಿದ್ದರ ಪರಿಣಾಮ ಫ್ರಾಯ್ಡ್‌ ೧೯೩೯ರ ಸೆಪ್ಟೆಂಬರ್‌ ೨೩ರಂದು ಸಾವನ್ನಪ್ಪಿದರು.[೧೮] ಆತ ಸತ್ತ ಮೂರು ದಿನಗಳ ನಂತರ ಫ್ರಾಯ್ಡ್‌ರ ದೇಹವನ್ನು ಇಂಗ್ಲೆಂಡ್‌ನ ಗೋಲ್ಡರ್ಸ್‌ ಗ್ರೀನ್ ಚಿತಾಗಾರದಲ್ಲಿ, ಲೇಖಕ ಸ್ಟೀಫನ್ ಜ್ವೀಗ್‌ ಸೇರಿದಂತೆ ದೇಶಭ್ರಷ್ಟ ಆಸ್ಟ್ರಿಯನ್ನರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಫ್ರಾಯ್ಡ್‌ರ ಚಿತಾಭಸ್ಮವನ್ನು ನಂತರ ಚಿತಾಗಾರದ ಚಿತಾಭಸ್ಮದ ಗೂಡಿನಲ್ಲಿ ಇರಿಸಲಾಯಿತು. ಅದು ಈಗ ಮೇರಿ ಬೋನಾಪಾರ್ಟೆಯವರಿಂದ ಕಾಣಿಕೆಯಾಗಿ ಪಡೆದು ವಿಯೆನ್ನಾದಲ್ಲಿ ಅಧ್ಯಯನ ಕೊಠಡಿಯಲ್ಲಿ ಹಲವಾರು ವರ್ಷಗಳ ಕಾಲ ಇರಿಸಿಕೊಂಡಿದ್ದ ಪುರಾತನ ಗ್ರೀಕ್ ಭಸ್ಮಕುಂಡದಲ್ಲಿದೆ. ಮಾರ್ಥಾ ಫ್ರಾಯ್ಡ್‌ ೧೯೫೧ರಲ್ಲಿ ಸಾವನ್ನಪ್ಪಿದ ನಂತರ, ಆಕೆಯ ಚಿತಾಭಸ್ಮವನ್ನೂ ಅದೇ ಭಸ್ಮಕುಂಡದಲ್ಲಿ ಇರಿಸಲಾಯಿತು. ಗೋಲ್ಡರ್ಸ್‌ ಗ್ರೀನ್ ಚಿತಾಗಾರವು ಅನ್ನಾ ಫ್ರಾಯ್ಡ್‌ ಮತ್ತು ಆಕೆಯ ಜೀವಮಾನದ ಗೆಳತಿ ಡೊರೊತಿ ಬರ್ಲಿಂಗ್‌ಹ್ಯಾಮ್‌, ಹಾಗೂ ಫ್ರಾಯ್ಡ್‌ ಕುಟುಂಬದ ಹಲವಾರು ಸದಸ್ಯರುಗಳಿಗೂ ಮುಕ್ತಿಸ್ಥಳವಾಗಿದೆ.

ಫ್ರಾಯ್ಡ್‌‌ರ ವಿಚಾರಧಾರೆ

ಬದಲಾಯಿಸಿ

ಫ್ರಾಯ್ಡ್‌ ಒಂದಕ್ಕೊಂದು ಸಂಬಂಧಿಸಿದ ಆದರೆ ಎರಡು ವಿಭಿನ್ನ ಮಾರ್ಗಗಳಲ್ಲಿ ಪ್ರಭಾವ ಬೀರಿದ್ದಾರೆ. ಆತ ಒಂದೆಡೆ ಮಾನವನ ಮನಸ್ಸು ಹೇಗೆ ಸಂಘಟಿತವಾಗಿದೆ ಹಾಗೂ ಆಂತರಿಕ ಕ್ರಿಯೆ ನಡೆಸುತ್ತದೆ ಎಂದೂ ಹಾಗೂ ಇನ್ನೊಂದೆಡೆ, ಮಾನವನ ನಡವಳಿಕೆಯು ಯಾವ ರೀತಿಯಲ್ಲಿ ಇವುಗಳ ನಿಯಂತ್ರಣ ಸಾಧಿಸುತ್ತದೆ ಹಾಗೂ ನಿರ್ದಿಷ್ಟ ಸೈದ್ಧಾಂತಿಕ ಅರ್ಥೈಸುವಿಕೆಯ ಪರಿಣಾಮಗಳನ್ನು ನಿರ್ಧರಿಸುತ್ತದೆ ಎಂಬ ಎರಡು ಸಿದ್ಧಾಂತಗಳನ್ನು ಏಕಕಾಲಿಕವಾಗಿ ವಿಷದೀಕರಿಸಿದರು. ಮನೋವಿಕಾರವನ್ನು ಗುಣಪಡಿಸಲು ಬಳಕೆ ಮಾಡುವ ಕೆಲವು ವೈದ್ಯಕೀಯ ವಿಧಾನಗಳಿಗೆ ಹೆಚ್ಚು ಒಲವು ತೋರಿಸಲು ಇದು ಪೂರಕವಾಯಿತು. ವ್ಯಕ್ತಿಯ ಬಾಲ್ಯದ ಅನುಭವಗಳಿಂದ ಆತನ ವ್ಯಕ್ತಿತ್ವ ವಿಕಾಸ ಹೊಂದುತ್ತದೆ ಎಂಬ ಸಿದ್ಧಾಂತವನ್ನು ಅವರು ಪ್ರತಿಪಾದಿಸಿದರು.

ಆರಂಭಿಕ ಕಾರ್ಯಗಳು

ಬದಲಾಯಿಸಿ
 
ಉತ್ತರ ಲಂಡನ್‌ನ ಹ್ಯಾಂಪ್‌ಸ್ಟೆಡ್‌ನಲ್ಲಿ ಸಿಗ್ಮಂಡ್‌ ಫ್ರಾಯ್ಡ್‌ ‌ಸ್ಮಾರಕ. ಸಿಗ್ಮಂಡ್‌ ಮತ್ತು ಅನ್ನಾ ಫ್ರಾಯ್ಡ್‌ ‌20 ಮಾರೆಸ್‌ಫೀಲ್ಡ್‌ ಗಾರ್ಡನ್ಸ್‌ನಲ್ಲಿ, ಈ ಪ್ರತಿಮೆಯ ಬಳಿ ವಾಸಿಸುತ್ತಿದ್ದರು. ಅವರ ಮನೆಯು ಈಗ ಫ್ರಾಯ್ಡ್‌ರ ಜೀವನ ಹಾಗೂ ಸಾಧನೆಗೆ ಮುಡುಪಾಗಿಟ್ಟಿರುವ ಸಂಗ್ರಹಾಲಯವಾಗಿದೆ.[೧೯] ಪ್ರತಿಮೆಯ ಹಿಂದಿನ ಕಟ್ಟಡ ಟಾವಿಸ್ಟೋಕ್‌ ಕ್ಲಿನಿಕ್‌. ಇದು ಪ್ರಮುಖ ಮಾನಸಿಕ ಆರೋಗ್ಯ ಕೇಂದ್ರವಾಗಿದೆ.

ತನ್ನ ವೈದ್ಯಕೀಯ ವಿದ್ಯಾಭ್ಯಾಸವನ್ನು ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಆರಂಭಿಸಿದರಾದರೂ, ನರಶರೀರ ವಿಜ್ಞಾನದ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದರಿಂದ, ಪ್ರಮುಖವಾಗಿ ಈಲ್‌ಗಳ ಲೈಂಗಿಕ ಅಂಗಾಂಗಗಳ ರಚನೆ ಹಾಗೂ ಮತ್ಸ್ಯಗಳ ನರಮಂಡಲ ಜೀವಶಾಸ್ತ್ರದ ಅಧ್ಯಯನದಲ್ಲಿ (ಮೇಲೆ ಹೇಳಿದಂತೆ) ವಿಶೇಷ ಅಸಕ್ತಿ ಹೊಂದಿದ್ದರಿಂದ ಅದನ್ನು ಪೂರೈಸಲು ಎಂಟು ವರ್ಷ ತೆಗೆದುಕೊಂಡರು. ೧೮೮೧ರಲ್ಲಿ M.D. ಪದವಿಯನ್ನು ಪಡೆದ ಅವರು, ತಮ್ಮ ೨೫ನೇ ವಯಸ್ಸಿನಲ್ಲಿ ದುಡಿಮೆಗಾಗಿ ಖಾಸಗಿ ನರವಿಜ್ಞಾನ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದರು.[೨೦] ಅದಕ್ಕಿಂತ ಮುಂಚೆ "ಮಸ್ತಿಷ್ಕ ಪಾರ್ಶ್ವವಾಯು" ಎಂದು ಕರೆಯಲಾಗುತ್ತಿದ್ದ ಮಸ್ತಿಷ್ಕ ಅರ್ಧಾಂಗವಾಯುವಿನ ಚಿಕಿತ್ಸೆಯಲ್ಲಿ ಸಂಶೋಧಕರಾಗಿದ್ದರು. ಆ ವಿಚಾರವಾಗಿ ಬಹಳಷ್ಟು ವೈದ್ಯಕೀಯ ಲೇಖನಗಳನ್ನು ಪ್ರಕಟಿಸಿದ ಅವರು ರೋಗವು ಅದೇ ಸಮಯದ ಇತರ ಸಂಶೋಧಕರು ಗುರುತಿಸಿ ಅದನ್ನು ಅಧ್ಯಯನಕ್ಕೆ ಬಳಸಿಕೊಳ್ಳುವುದಕ್ಕಿಂತ ಮುಂಚಿನಿಂದಲೂ ಅದು ಇತ್ತು ಎಂದು ತೋರಿಸಿಕೊಟ್ಟರು. ಮೊತ್ತ ಮೊದಲು ಮಸ್ತಿಷ್ಕ ಅರ್ಧಾಂಗವಾಯುವನ್ನು ಗುರುತಿಸಿದ ವಿಲಿಯಂ ಲಿಟಲ್‌ರು ನಂಬಿದಂತೆ ನಿಜವಾಗಿಯೂ ಪ್ರಸವ ಸಮಯದಲ್ಲಿನ ಆಮ್ಲಜನಕದ ಕೊರತೆ ಈ ರೋಗಕ್ಕೆ ಕಾರಣವಲ್ಲ ಎಂಬುದು ತಪ್ಪು ಎಂದು ತೋರಿಸಿಕೊಟ್ಟರು. ಬದಲಾಗಿ ಪ್ರಸವ ಸಮಯದಲ್ಲಿ ಉಂಟಾಗುವ ಜಟಿಲತೆಯೇ ಈ ಸಮಸ್ಯೆಯ ಪ್ರಮುಖ ಕಾರಣ ಎಂಬ ಆಲೋಚನೆ ಮಂಡಿಸಿದರು.

ಫ್ರಾಯ್ಡ್‌ ತನ್ನ ಸಂಶೋಧನೆಯು, ಚಿಕಿತ್ಸಾ ಕ್ರಮಗಳಿಗೆ ಭದ್ರವಾದ ವೈಜ್ಞಾನಿಕ ತಳಹದಿಯನ್ನು ರೂಪಿಸುತ್ತದೆ ಎಂದು ಆಶಿಸಿದ್ದರು. ರೋಗಿಯನ್ನು ಪದೇ ಪದೇ ವಿಚಲಿತರಾಗುವಂತೆ ಮಾಡಿ ಅವರನ್ನು ಕಾಡುವ ಅರೆಪ್ರಜ್ಞಾವಸ್ಥೆಯಲ್ಲಿ ದಮನಗೊಂಡಿರುವ ವಿಚಾರ ಮತ್ತು ಭಾವನೆಗಳನ್ನು, ಜಾಗೃತ ಸ್ಥಿತಿಗೆ ತಂದು ರೋಗಿಯನ್ನು ಅವುಗಳಿಂದ ಮುಕ್ತವಾಗಿಸುವುದೇ ಮನೋ ವಿಶ್ಲೇಷಣೆ ಅಥವಾ ಫ್ರಾಯ್ಡಿಯನ್ ಚಿಕಿತ್ಸೆಯ ಗುರಿಯಾಗಿದೆ.

ಶಾಸ್ತ್ರೀಯವಾಗಿ, ಸುಪ್ತ ಮನಸ್ಸಿನ ಯೋಚನೆಗಳು ಹಾಗೂ ಭಾವನೆಗಳನ್ನು ಜಾಗೃತ ಮನಸ್ಸಿನಲ್ಲಿ ತಂದುಕೊಳ್ಳುವ ವಿಧಾನವು ರೋಗಿಯೊಂದಿಗೆ ಮುಕ್ತ ಸಂವಾದದಲ್ಲಿ ತೊಡಗಿ ಕನಸುಗಳ ಬಗೆಗೆ ಚರ್ಚಿಸುವುದಾಗಿರುತ್ತದೆ. ಮಾನಸಿಕ ವಿಶ್ಲೇಷಣೆಯ ಮತ್ತೊಂದು ಪ್ರಧಾನ ಅಂಶವೆಂದರೆ ವಿಶ್ಲೇಷಕನ ನೇರ ತೊಡಗಿಸಕೊಳ್ಳದಿರುವಿಕೆಯಾಗಿದ್ದು, ಇದರ ಮುಖ್ಯ ಉದ್ದೇಶವು ರೋಗಿಯು ತನ್ನ ಆಲೋಚನೆಗಳು ಹಾಗೂ ಭಾವನೆಗಳನ್ನು ವಿಶ್ಲೇಷಕನ ಮುಂದೆ ವ್ಯಕ್ತಪಡಿಸುವುದಾಗಿರುತ್ತದೆ. ಸ್ಥಾನಾಂತರ ಎನ್ನಬಹುದಾದ ಈ ಪ್ರಕ್ರಿಯೆಯಿಂದ, ರೋಗಿಯು ತನ್ನಲ್ಲಿ ದಮನಿತವಾದ ಸಮಸ್ಯೆಗಳನ್ನು, ವಿಶೇಷವಾಗಿ ಪೋಷಕರೊಡನೆಯ(ಅಥವಾ ಅವರ ಬಗೆಗಿನ) ಬಾಲ್ಯಾವಧಿಯ ಸಮಸ್ಯೆಗಳ ವಿಚಾರವಾಗಿ ಪುನಃ ಕಾರ್ಯಪ್ರವೃತ್ತವಾಗಿ ಅವುಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ.[೨೧]

ಮನೋವಿಶ್ಲೇಷಣೆಯ ಬಗೆಗಿನ ಫ್ರಾಯ್ಡ್‌ರ ಮುಂಚಿನ ಅಧ್ಯಯನದ ಚಟುವಟಿಕೆಯ ಮೂಲ ಜೋಸೆಫ್‌ ಬ್ರೂಯರ್‌ ಎನ್ನಬಹುದು. ಮನೋವಿಶ್ಲೇಷಣೆಯ ವಿಧಾನದ ಅವಿಷ್ಕಾರದ ಗೌರವವನ್ನು ಫ್ರಾಯ್ಡ್‌ ಬ್ರೂಯರ್‌ರಿಗೆ ನೀಡಿದ್ದಾರೆ. ಅನ್ನಾ O. ಎಂಬ ಮನೋವೈಜ್ಞಾನಿಕ ರೋಗಿಯ ಸಂಗತಿಯೊಂದು, ಬರಲಿರುವ ದಶಕಗಳಲ್ಲಿ ಮನೋವಿಜ್ಞಾನ ಕ್ಷೇತ್ರವನ್ನು ರೂಪಿಸುವಂತಹಾ ಮಹತ್ವವನ್ನು ಪಡೆಯಿತು. ೧೮೮೦ರಲ್ಲಿ ಆಗಿನ ಕಾಲದಲ್ಲಿ ಸ್ತ್ರೀ ಉನ್ಮಾದವೆಂದು ಕರೆಯುತ್ತಿದ್ದ ರೋಗದ ಲಕ್ಷಣಗಳನ್ನು ಹೊಂದಿದ್ದ ಯುವತಿಯೊಬ್ಬಳು ಬ್ರೂಯರ್‌ರ ಬಳಿ ಚಿಕಿತ್ಸೆ ಪಡೆಯಲು ಬಂದಳು. ಅನ್ನಾ O. ಓರ್ವ ೨೧-ವರ್ಷ-ವಯಸ್ಸಿನ ಬುದ್ಧಿವಂತ ಮಹಿಳೆ. ಆಕೆಯು ಕೈಕಾಲುಗಳಿಗೆ ಪಾರ್ಶ್ವವಾಯು ಬಡಿದ ಲಕ್ಷಣಗಳು, ಮಾನಸಿಕ ವಿಘಟನೆ ಮತ್ತು ವಿಸ್ಮೃತಿಯಂತಹಾ; ಪ್ರಸ್ತುತ ಕಾಲದಲ್ಲಿ ಪರಿವರ್ತಕ ವ್ಯಾಧಿ ಎಂದೆನಿಸಿಕೊಳ್ಳುವ ರೋಗ ಲಕ್ಷಣಗಳನ್ನು ಹೊಂದಿದ್ದಳು. ಬಹಳಷ್ಟು ವೈದ್ಯರು ಪ್ರಯತ್ನಿಸಿ ಫಲ ಕಾಣದಾಗ ಅನ್ನಾ O.ಳನ್ನು ರೋಗಲಕ್ಷಣಗಳ ಸೋಗು ಹಾಕುವವಳೆಂದು ದೂರಿ ಕೈಚೆಲ್ಲಿದ ನಂತರ, ಬ್ರೂಯರ್‌ ಆಕೆಗೆ ಸಹಾನುಭೂತಿಯಿಂದ ಚಿಕಿತ್ಸೆ ಕೊಡಲು ನಿರ್ಧರಿಸಿದರು, ಆತ ಇದೇ ನಡವಳಿಕೆಯನ್ನು ತನ್ನ ಎಲ್ಲಾ ರೋಗಿಗಳಲ್ಲಿಯೂ ತೋರುತ್ತಿದ್ದರು. ತಾನು ಅನ್ಯಮನಸ್ಕತೆ ಎಂದು ಕರೆದ ಸ್ಥಿತಿಯಲ್ಲಿದ್ದಾಗ ಆಕೆ ಆಡುತ್ತಿದ್ದ ಅಸ್ಪಷ್ಟ ಮಾತುಗಳನ್ನು ಆಲಿಸಲು ಆರಂಭಿಸಿದರು. ಅಂತಿಮವಾಗಿ ಬ್ರೂಯರ್‌ ಆ ಪದಗಳಲ್ಲಿ ಕೆಲವನ್ನು ಗುರುತಿಸಲು ಸಾಧ್ಯವಾಗಿ ಅವುಗಳನ್ನು ಬರೆದುಕೊಳ್ಳಲು ತೊಡಗಿದರು. ನಂತರ ಅವರು ಆಕೆಯನ್ನು ಸಂಮೋಹನಕ್ಕೊಳಪಡಿಸಿ, ಆಕೆಯ ಮುಂದೆ ಅದೇ ಪದಗಳನ್ನು ಪುನರುಚ್ಚರಿಸಿದರು; ಇದರಿಂದ ಬ್ರೂಯರ್‌ ಆ ಪದಗಳು ಆಕೆಯ ತಂದೆಯ ಅನಾರೋಗ್ಯ ಹಾಗೂ ಸಾವಿಗೆ ಸಂಬಂಧಪಟ್ಟವು ಎಂದು ಪತ್ತೆಹಚ್ಚಿದರು.[೨೨]

೧೮೯೦ರ ದಶಕದ ಆರಂಭದಲ್ಲಿ ಬ್ರೂವರ್‌ ವಿವರಿಸಿದ ಚಿಕಿತ್ಸಾ ವಿಧಾನದ ಮೇಲೆ ಆಧಾರಿತವಾದ ಒಂದು ವಿಧದ ಚಿಕಿತ್ಸೆಯನ್ನು ಬಳಸಿದ ಫ್ರಾಯ್ಡ್‌, "ಒತ್ತಡ ತಂತ್ರ"ವೆಂದು ತಾನು ಹೆಸರಿಸಿದ್ದ ವಿಧಾನವನ್ನು ಬದಲಿಸಿ ತಾನು ಹೊಸದಾಗಿ ಅಭಿವೃದ್ಧಿಪಡಿಸಿದ್ದ ವ್ಯಾಖ್ಯಾನ ಮತ್ತು ಪುನರ್ರಚನೆಯ ವಿಶ್ಲೇಷಣಾ ವಿಧಾನವನ್ನು ಬಳಸಿದರು. ಈ ಅವಧಿಯ ಬಗ್ಗೆ ಫ್ರಾಯ್ಡ್‌ರ ನಂತರದ ದಾಖಲಿಕೆಗಳ ಮೇಲೆ ಆಧಾರಿತವಾದ ಸಾಂಪ್ರದಾಯಿಕ ವೃತ್ತಾಂತದ ಪ್ರಕಾರ, ಈ ವಿಧಾನದ ಬಳಕೆಯ ಪರಿಣಾಮವಾಗಿ ೧೮೯೦ರ ದಶಕದ ಮಧ್ಯದಲ್ಲಿನ ಆತನ ರೋಗಿಗಳು ತೀರ ಬಾಲ್ಯಾವಸ್ಥೆಯ ಲೈಂಗಿಕ ದುರ್ಬಳಕೆಯ ಕುರಿತು ಹೇಳಿದರು. ಅವರು ಮೊದಲಿಗೆ ಇವುಗಳನ್ನು ನಂಬಿದರೂ, ನಂತರ ಇವುಗಳೆಲ್ಲವೂ ಭ್ರಮೆಯೆಂದು ಅರ್ಥ ಮಾಡಿಕೊಂಡರು. ಇವುಗಳನ್ನು ಮೊದಲಿಗೆ ಬಾಲ್ಯಾವಸ್ಥೆಯಲ್ಲಿದ್ದಾಗಿನ ಮುಷ್ಟಿಮೈಥುನದ ನೆನಪುಗಳನ್ನು "ನಿವಾರಿಸುವ" ವಿಧಾನವೆಂದು ವಿವರಣೆ ನೀಡಿದರೂ, ನಂತರದ ವರ್ಷಗಳಲ್ಲಿ ಇವು ಈಡಿಪಸ್‌ ಇಚ್ಛಾಪೂರ್ವಕ ಭ್ರಮೆಗಳನ್ನು ಸೂಚಿಸುತ್ತವೆಂದು ಬರೆದರು.[೨೩]

ಫ್ರಾಯ್ಡ್‌ರು ಬಾಲ್ಯದ ಲೈಂಗಿಕ ದುರ್ಬಳಕೆಯ ಸುಪ್ತಾವಸ್ಥೆಯ ನೆನಪುಗಳೇ ಮಾನಸಿಕ ನರವಿಕಾರದ ಮೂಲಕಾರಣವೆಂದು ಅಕ್ಟೋಬರ್‌ ೧೮೯೫ರಲ್ಲಿ ವಿಲ್‌ಹೆಲ್ಮ್‌ ಫ್ಲೀಯೆಸ್‌ರಿಗೆ ಬರೆದ ಪತ್ರಗಳಲ್ಲಿ ಪ್ರತಿಪಾದಿಸಿದಾಗ ಬೇರೆಯದೇ ರೀತಿಯ ಘಟನೆಗಳು ಆರಂಭವಾದವು, ಇದಕ್ಕಿಂತ ಮುಂಚೆ ಆತ ತನ್ನ ರೋಗಿಗಳಲ್ಲಿ ಆ ರೀತಿಯ ದುರ್ಬಳಕೆ ಆಗಿದೆಯೆಂದು ಪತ್ತೆಯಾಗಿದೆಯೆಂದು ತಿಳಿಸಿದ್ದರು.[೨೪] ೧೮೯೬ರ ಮೊದಲ ಭಾಗದಲ್ಲಿ ಫ್ರಾಯ್ಡ್‌ ತನ್ನ ಪ್ರಸ್ತುತ ಎಲ್ಲಾ ರೋಗಿಗಳಲ್ಲಿ ಆಳವಾಗಿ ದಮನಿಸಿದ ಬಾಲ್ಯಾವಸ್ಥೆಯ ಲೈಂಗಿಕ ದುರ್ಬಳಕೆಯ ನೆನಪುಗಳನ್ನು ಪತ್ತೆಹಚ್ಚಿದುದಾಗಿ ಮೂರು ಲೇಖನಗಳನ್ನು ಪ್ರಕಟಿಸಿದರು.[೨೫] ಈ ಲೇಖನಗಳಲ್ಲಿ ಫ್ರಾಯ್ಡ್‌ ಈ ಆರೋಪಿಸಿದ ನೆನಪುಗಳು ಪ್ರಜ್ಞಾಪೂರ್ವಕವಾದುದಲ್ಲ, ಹಾಗೂ ಅವು ಉನ್ಮಾದದ ಅಥವಾ ಭ್ರಾಂತಿಯ ನರವಿಕಾರದ ಪರಿಣಾಮವಾಗಿದ್ದರೆ ತನ್ನ ಸಿದ್ಧಾಂತದಲ್ಲಿ ಅವನ್ನು ಸುಪ್ತಾವಸ್ಥೆಯ ನೆನಪುಗಳಾ ಗಿ ದಾಖಲಿಸಬೇಕಾಗುತ್ತದೆ ಎಂದು ದಾಖಲಿಸಿದ್ದಾರೆ. ರೋಗಿಗಳಿಗೆ ಗಮನಾರ್ಹವಾದ ಒತ್ತಡ ಹೇರಿದ ನಂತರವೇ ಬಾಲ್ಯಾವಸ್ಥೆಯ ಲೈಂಗಿಕ ದುರ್ಬಳಕೆಯ "ದೃಶ್ಯಗಳನ್ನು" "ಪುನರ್ನಿಮಿಸಲು" ಸಾಧ್ಯವಾದುದರಿಂದ ಫ್ರಾಯ್ಡ್‌ರು ಅವನ್ನು ಸುಪ್ತಾವಸ್ಥೆಯಲ್ಲಿ ದಮನಿಸಲ್ಪಟ್ಟವೆಂದು ಮನವರಿಕೆ ಮಾಡಿಕೊಂಡರು.[೨೬] ಆದಾಗ್ಯೂ ಅವರೆಲ್ಲರೂ ಸಾಧಾರಣವಾಗಿ ಆತನ ಚಿಕಿತ್ಸಾ ಪ್ರಕ್ರಿಯೆಗಳ ಪ್ರಭಾವದಲ್ಲಿ ತಾವು ಹೊಂದಿದ ಅನುಭವಗಳು ವಾಸ್ತವವಾಗಿ ತಾವು ಬಾಲ್ಯದಲ್ಲಿ ಲೈಂಗಿಕ ದುರ್ಬಳಕೆಗೆ ಒಳಗಾಗಿದ್ದೆವೆಂದು ತೋರಿಸುತ್ತವೆ ಎಂಬ ವಿಚಾರವನ್ನು ಒಪ್ಪಿರಲಿಲ್ಲ ; ಹಾಗೆಂದು ಭಾವಿಸಿದ್ದ ಲೈಂಗಿಕ ದೃಶ್ಯಗಳ ಪುನನಿರ್ಮಿತಿಯ ನಂತರವೂ ರೋಗಿಗಳು ಖಡಾಖಂಡಿತವಾಗಿ ತಾವು ಇದನ್ನು ನಂಬಲಾರೆವು ಎಂದು ಹೇಳಿದರೆಂದು ತಿಳಿಸಿದ್ದಾರೆ.[೨೭]

ಆತನ "ಒತ್ತಡ ತಂತ್ರ"ದಂತೆಯೇ, ಫ್ರಾಯ್ಡ್‌ರ ಚಿಕಿತ್ಸಾ ಪ್ರಕ್ರಿಯೆಗಳೂ ವಿಶ್ಲೇಷಣಾತ್ಮಕ ತರ್ಕಗಳು ಮತ್ತು ಲಕ್ಷಣಗಳ ಸಾಂಕೇತಿಕ ಅರ್ಥೈಸುವಿಕೆಯನ್ನು ಬಾಲ್ಯಾವಸ್ಥೆಯ ಲೈಂಗಿಕ ದುರ್ಬಳಕೆಯ "ದೃಶ್ಯಗಳ" "ಜಾಡನ್ನು ಹಿಡಿಯಲು" ಬಳಸುತ್ತಿದ್ದವು.[೨೮] ತನ್ನ ಸಿದ್ಧಾಂತವು ಒಂದು ನೂರು ಪ್ರತಿಶತದಷ್ಟು ಸತ್ಯವೆಂಬ ಹೇಳಿಕೆಯು ಆತನ ಸಹೋದ್ಯೋಗಿಗಳು ಆತ ಬಳಸುತ್ತಿದ್ದ ಸಲಹಾತ್ಮಕ ತಂತ್ರಗಳ ಮೂಲಕ ತಿಳಿದ ವಿಷಯಗಳ ಸತ್ಯಾಸತ್ಯತೆಯ ಬಗೆಗಿನ ಅನುಮಾನದ ಅಭಿಪ್ರಾಯವನ್ನು ಮತ್ತಷ್ಟು ಬಲವಾಗಿಸಿತಷ್ಟೇ.[೨೯]

ಕೊಕೇನ್

ಬದಲಾಯಿಸಿ

ಫ್ರಾಯ್ಡ್‌ರು ಮುಂಚಿನಿಂದಲೂ ಕೊಕೇನ್‌ಅನ್ನು ಉದ್ದೀಪಕ ಮದ್ದು ಹಾಗೂ ಅರಿವಳಿಕೆಯಾಗಿ ಬಳಸುತ್ತಿದ್ದರಲ್ಲದೇ ಅದನ್ನು ಪ್ರತಿಪಾದಿಸುತ್ತಿದ್ದರು. ಅವರು ಈ ಔಷಧ ವಸ್ತುವಿನ ಖಿನ್ನತೆನಿವಾರಕ ಗುಣಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದರು ಹಾಗೂ "ಮೂಗಿನ ಪ್ರತಿವರ್ತನ ನರವಿಕಾರ"ದ ಚಿಕಿತ್ಸೆಗೆ ಕೊಕೇನ್‌ಅನ್ನು ಶಿಫಾರಸು ಮಾಡಿದ ತಮ್ಮ ಸ್ನೇಹಿತ ವಿಲ್‌ಹೆಲ್ಮ್‌ ಫ್ಲೀಯೆಸ್‌ರಿಂದ ಪ್ರೇರಿತರಾಗಿದ್ದರು. ಫ್ಲೀಯೆಸ್‌ರು ಈ ವ್ಯಾಧಿಯಿಂದ ಬಳಲುತ್ತಿರುವವರೆಂದು ತಾವು ಅಂದುಕೊಂಡಿದ್ದ ಫ್ರಾಯ್ಡ್‌ ಹಾಗೂ ಶಸ್ತ್ರಚಿಕಿತ್ಸೆಯು ಅನರ್ಥಕಾರಿಯಾಗಿ ಪರಿಮಿಸಿದ ಎಮ್ಮಾ ಎಕ್‌ಸ್ಟೇನ್‌ರೂ ಸೇರಿದಂತೆ ಬಹುಸಂಖ್ಯೆಯ ಫ್ರಾಯ್ಡ್‌ರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದರು.[೩೦]

ಕೊಕೇನ್‌ ಅನೇಕ ರೀತಿಯ ವ್ಯಾಧಿಗಳಿಗೆ ಸರ್ವೌಷಧವಾಗಿ ಪರಿಣಾಮ ಬೀರುತ್ತದೆಂದು ಭಾವಿಸಿ ಉತ್ತಮ ಬೆಂಬಲ ಪಡೆದ ಅದರ ಸದ್ಗುಣಗಳನ್ನು ವಿವರಿಸಿದ "ಆನ್‌ ಕೋಕಾ" ಎಂಬ ಲೇಖನವನ್ನು ಫ್ರಾಯ್ಡ್‌ ಬರೆದರು. ಅವರು ನರಮಂಡಲದ ಚಿಕಿತ್ಸೆ ನೀಡಬೇಕಾದಾಗ ಅಫೀಮಿನ ವ್ಯಸನಕ್ಕೊಳಗಾಗಿದ್ದ ತನ್ನ ಸ್ನೇಹಿತ ಅರ್ನೆಸ್ಟ್‌ ವಾನ್‌ ಫ್ಲೇಷ್‌ಲ್‌-ಮಾರ್ಕ್ಸೌರಿಗೆ ಅದರಿಂದ ಮುಕ್ತಿ ಹೊಂದಲು ಇದನ್ನು ಔಷಧವಾಗಿ ಸೂಚಿಸಿದ್ದರು.[೩೧] ಫ್ರಾಯ್ಡ್‌ ಇದನ್ನು ತನ್ನ ಕುಟುಂಬದಲ್ಲಿನ ಹಾಗೂ ಸ್ನೇಹಿತರಲ್ಲಿನ ಸಮೀಪವರ್ತಿಗಳಿಗೆ ಇದನ್ನು ಶಿಫಾರಸು ಮಾಡಿದ್ದರು. ಕೊಕೇನ್‌ನ ಅರಿವಳಿಕಾ ಗುಣಗಳನ್ನು ಪತ್ತೆಹಚ್ಚಿದ ಬಗ್ಗೆ ವೈಜ್ಞಾನಿಕ ವಲಯದಲ್ಲಿನ ಆದ್ಯತೆ ಪಡೆಯಲು ಸ್ವಲ್ಪದರಲ್ಲಿ ವಿಫಲರಾಗಿದ್ದರು(ಇದರ ಬಗ್ಗೆ ಫ್ರಾಯ್ಡ್‌ರಿಗೆ ಗೊತ್ತಿದ್ದರೂ ವಿಷದವಾಗಿ ಈ ಬಗ್ಗೆ ಬರೆದಿರಲಿಲ್ಲ), ನಂತರ ಫ್ರಾಯ್ಡ್‌ರ ವಿಯೆನ್ನಾದಲ್ಲಿನ ಸಹೋದ್ಯೋಗಿ ಕಾರ್ಲ್‌ ಕಾಲ್ಲರ್‌ರು ೧೮೮೪ರಲ್ಲಿ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಕೊಕೇನ್‌ಅನ್ನು ಕಣ್ಣಿನ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಬಳಸಬಹುದಾದ ಬಗ್ಗೆ ವರದಿಯನ್ನು ಸಲ್ಲಿಸಿ ಅದರ ಗೌರವ ಪಡೆದರು. ಫ್ರಾಯ್ಡ್‌ ಕೊಕೇನ್‌ನ ಕೆಲವೇ ಸುರಕ್ಷಿತ ಬಳಕೆಗಳಲ್ಲಿ ಇದೂ ಒಂದಾಗಿತ್ತಲ್ಲದೆ, ಅದೇ ಸಮಯದಲ್ಲಿ ವಿಶ್ವ ವಿವಿಧೆಡೆಗಳಿಂದ ಅದರ ವ್ಯಸನಾತ್ಮಕ ಹಾಗೂ ವಿಪರೀತ ಸೇವನೆಯ ಬಗ್ಗೆ ವರದಿಗಳು ಬರುತ್ತಿದ್ದುದರಿಂದ ಬಹಳವೇ ಆಘಾತ ಹೊಂದಿದರು. ಫ್ರಾಯ್ಡ್‌ರ ವೈದ್ಯಕೀಯ ಪ್ರತಿಷ್ಠೆಯು ಈ ಆರಂಭಿಕ ಆಕಾಂಕ್ಷೆಯ ಕುಸಿತದಿಂದಾಗಿ ಮಸುಕಾದಂತಾಯಿತು. ಇವುಗಳೊಂದಿಗೆ, ಫ್ರಾಯ್ಡ್‌ರ ಸ್ನೇಹಿತ ಫ್ಲೇಷ್‌ಲ್‌-ಮಾರ್ಕ್ಸೌರು ಫ್ರಾಯ್ಡ್‌ರ ಔಷಧೀಯ ಸೂಚನೆಯ ಪರಿಣಾಮವಾಗಿ ತೀವ್ರ "ಕೊಕೇನ್‌ ಮನೋವಿಕಾರ"ಕ್ಕೊಳಗಾದರಲ್ಲದೆ ಕೆಲ ವರ್ಷಗಳ ನಂತರ ಮೃತಪಟ್ಟರು. ನಂತರ ಜೀವನಚರಿತ್ರಕಾರರು "ಕೊಕೇನ್‌ ವೃತ್ತಾಂತ" ಎಂದು ಹೆಸರಿಸಿದ ಈ ಘಟನೆಗಳಿಂದಾಗಿ ಫ್ರಾಯ್ಡ್‌ ವಿಷಾದಪಟ್ಟರು.[ಸೂಕ್ತ ಉಲ್ಲೇಖನ ಬೇಕು] ಅಷ್ಟೆಲ್ಲಾ ದುರ್ಘಟನೆಗಳು ನಡೆದ ನಂತರವೂ ಸಾವರಿಸಿಕೊಂಡು ಮುನ್ನಡೆದ ಆತ, ಕೊಕೇನ್‌ ಬಳಸುವುದನ್ನು ಕೂಡಾ ಮುಂದುವರೆಸಿದರು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಜುರ್ಗೆನ್‌ ವಾನ್ ಷೇಡ್ತ್‌‌ ಫ್ರಾಯ್ಡ್‌ರ ಮನೋವೈಜ್ಞಾನಿಕ ಸಿದ್ಧಾಂತವು ಆತ ಪ್ರಯೋಗಿಸಿದ ಕೊಕೈನ್ ಪರಿಣಾಮ ಎಂದು ಪ್ರತಿಪಾದಿಸುತ್ತಾರೆ.[೩೨]

ಸುಪ್ತಾವಸ್ಥೆ

ಬದಲಾಯಿಸಿ

ಜಾಗೃತ ಮನದ ಚಿಂತನೆ ಹಾಗೂ ನಡತೆಯನ್ನು ಅರ್ಥೈಸಿಕೊಳ್ಳುವ ವಿಧಾನದಲ್ಲಿ ಮನಸ್ಸಿನ ಸುಪ್ತಾವಸ್ಥೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದ್ದನ್ನು ಫ್ರಾಯ್ಡ್‌ ಪಾಶ್ಚಿಮಾತ್ಯ ವಾದಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಯೆಂದೇ ಹೇಳಬಹುದು. ಮನಶ್ಶಾಸ್ತ್ರಜ್ಞ ಜಾಕ್ವೆಸ್‌ ವಾನ್‌ ರಿಲ್ಲೇಯರ್, "ಹಲವರು ತಿಳಿದುಕೊಂಡಂತೆ ಸುಪ್ತಾವಸ್ಥೆಯನ್ನು ಫ್ರಾಯ್ಡ್‌ ಕಂಡುಹಿಡಿದಿಲ್ಲ‌. ೧೮೯೦ರಲ್ಲಿ, ಮನೋ ವಿಶ್ಲೇಷಣೆಯನ್ನು ಯಾರೂ ಕೇಳರಿಯದಿದ್ದ ಸಂದರ್ಭದಲ್ಲಿಯೇ, ವಿಲಿಯಂ ಜೇಮ್ಸ್‌, ಮನಶ್ಶಾಸ್ತ್ರದ ಪ್ರಮುಖ ಗುಣಲಕ್ಷಣಗಳ ಕುರಿತು ಮಂಡಿಸಿದ ಪ್ರಿನ್ಸಿಪಲ್ಸ್‌ ಆಫ್‌ ಸೈಕಾಲಜಿ ಎಂಬ ಮಹಾ ಪ್ರಬಂಧದಲ್ಲಿ, ಷಾಪೆನ್‌ಹ್ಯೂರ್‌, ವಾನ್‌ ಹರ್ಟ್‌ಮನ್ನ್‌, ಜ್ಯಾನೆಟ್‌, ಬಿನೆಟ್‌ ಹಾಗೂ ಇತರರು 'ಸುಪ್ತಾವಸ್ಥೆ' ಹಾಗೂ 'ಅರೆ ಪ್ರಜ್ಞಾವಸ್ಥೆ' ಎಂಬ ಪದಗಳನ್ನು ಬಳಸಿದ್ದರು'" ಎಂದು ಹೇಳುತ್ತಾರೆ.[೩೩] ೧೮೮೭ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ ಆಫ್‌‌ ಅಮೇರಿಕಾಕ್ಕೆ ವಲಸೆ ಬಂದ ರಷ್ಯನ್ ಯಹೂದಿ ಬೋರಿಸ್‌ ಸೈಡಿಸ್‌, ವಿಲಿಯಂ ಜೇಮ್ಸ್‌ರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ, ೧೮೯೮ರಲ್ಲಿ, ದಿ ಸೈಕಾಲಜಿ ಆಫ್ ಸಜೆಷನ್: ಎ ರೀಸರ್ಚ್ ಇನ್‌ಟು ದಿ ಸಬ್‌ಕಾನ್ಸಿಯಸ್‌ ನೇಚರ್ ಆಫ್ ಮ್ಯಾನ್ ಅಂಡ್ ಸೊಸೈಟಿ ಯಂತಹ ಕೃತಿ ರಚಿಸಿದುದಲ್ಲದೇ ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಫ್ರಾಯ್ಡ್‌ನ ಸಾಧನೆಗಳಿಗೆ ಸಂಬಂಧಪಟ್ಟ ವಿಚಾರಗಳಲ್ಲಿಯೇ ಹತ್ತು ಅಥವಾ ಹೆಚ್ಚಿನ ಸಂಖ್ಯೆಯ ಅಧ್ಯಯನಗಳನ್ನು ನಡೆಸಿದರು. ಮನಶ್ಶಾಸ್ತ್ರದ ಇತಿಹಾಸಕಾರರಾದ ಮಾರ್ಕ್ ಅಲ್ಟ್‌ಷೂಲೆಯವರು, "ಅಪ್ರಜ್ಞಾಪೂರ್ವಕ ಆಲೋಚನೆಯು/ಮಿದುಳಿನ ಸುಪ್ತಾವಸ್ಥೆಯು ಕೇವಲ ವಾಸ್ತವ ಮಾತ್ರವಲ್ಲ, ಬದಲಿಗೆ ಅತ್ಯಂತ ಮಹತ್ವದ್ದು ಎಂದು ಗುರುತಿಸದ ಹತ್ತೊಂಬತ್ತನೇ ಶತಮಾನದ ಮನಶ್ಶಾಸ್ತ್ರಜ್ಞ ಅಥವಾ ಮನೋರೋಗ ತಜ್ಞರು ಯಾರಾದರೂ ಇದ್ದರೆಂದು ಹೇಳುವುದು ಕಷ್ಟ– ಅಥವಾ ಅಸಾಧ್ಯ" ಎಂಬ ತೀರ್ಮಾನಕ್ಕೆ ಬಂದರು.[೩೪] ಫ್ರಾಯ್ಡ್‌‌ರ ಮುನ್ನಡೆಯು ಕೇವಲ ಸುಪ್ತಾವಸ್ಥೆಯನ್ನು ಕಂಡುಹಿಡಿಯುವುದಕ್ಕಿಂತ ಅದನ್ನು ಅಭ್ಯಾಸ ಮಾಡುವುದಕ್ಕೆ ಸರಿಯಾದ ಕ್ರಮ ತಿಳಿಯುವುದರಲ್ಲಿತ್ತು.

ಸ್ವಪ್ನಗಳನ್ನು "ಸುಪ್ತಾವಸ್ಥೆ ತಲುಪಲು ರಾಜಮಾರ್ಗ" ಎಂದು ಫ್ರಾಯ್ಡ್ ಕರೆದರು. ಇದರರ್ಥವೇನೆಂದರೆ ಸ್ವಪ್ನಗಳು ಸುಪ್ತ ಮನಸ್ಸಿನ "ಆಲೋಚನಾಸರಣಿಯನ್ನು" ತಿಳಿಸುತ್ತವೆ. ಫ್ರಾಯ್ಡ್, ಪ್ರಥಮ ಬಾರಿಗೆ ಮನಸ್ಸಿನ ಲಕ್ಷಣಗಳಾದ ಸುಪ್ತ ಮನಸ್ಸಿನ ಬಗ್ಗೆ ದಿ ಇಂಟರ್‌ಪ್ರಿಟೇಷನ್ ಆಫ್ ಡ್ರೀಮ್ಸ್‌ ನಲ್ಲಿ (೧೮೯೯) ಪ್ರಸ್ತಾಪಿಸಿದ್ದು, ಅದರಲ್ಲಿ ಸುಪ್ತ ಮನಸ್ಸಿನ ಇರುವಿಕೆಯನ್ನು ತಿಳಿಸುತ್ತಾ ಅದನ್ನು ಪ್ರವೇಶಿಸುವ ದಾರಿಯನ್ನು ತಿಳಿಸಿದ್ದಾರೆ. ಅಧಃಪ್ರಜ್ಞಾ ಸ್ಥಿತಿಯು ಜಾಗೃತ ಹಾಗೂ ಸುಪ್ತಾವಸ್ಥೆಯ ನಡುವಿನ ಸ್ಥಿತಿಯಾಗಿದ್ದು; ಸ್ವಲ್ಪ ಹೆಚ್ಚಿನ ಪರಿಶ್ರಮ ಹಾಕಿದರೆ ಆ ಸ್ಥಿತಿಯನ್ನೂ ತಲುಪಲು ಸಾಧ್ಯ ಎಂದು ತಿಳಿಸುತ್ತಾರೆ.

ಸುಪ್ತಾವಸ್ಥೆಯ ಕಾರ್ಯವೈಖರಿಯಲ್ಲಿನ ಒಂದು ಪ್ರಮುಖ ಅಂಶವೆಂದರೆ "ದಮನ". ಫ್ರಾಯ್ಡ್‌ರ ಪ್ರಕಾರ ಬಹಳಷ್ಟು ಜನರು ತಮ್ಮ ಯಾತನಾದಾಯಕ ನೆನಪುಗಳನ್ನು ತಮ್ಮ ಸುಪ್ತಮನಸ್ಸಿನ ಆಳದಲ್ಲಿ "ದಮನಿಸಿ" ಬಿಡುತ್ತಾರೆ. ಫ್ರಾಯ್ಡ್‌ ‌ನಂತರ ಮನಸ್ಸಿನ ಸಾರ್ವತ್ರಿಕ ಮಾದರಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ತಮ್ಮ ರೋಗಿಗಳಲ್ಲಿನ ದಮನ ಪ್ರವೃತ್ತಿಯ ಮಾದರಿಗಳನ್ನು ಪಡೆಯಲು ಪ್ರಯತ್ನಿಸಿದರೂ, ಪ್ರತಿ ವ್ಯಕ್ತಿಯು ಪ್ರತ್ಯೇಕ ರೀತಿಯ ದಮನ ಪ್ರವೃತ್ತಿಯನ್ನು ಹೊಂದಿರುತ್ತಾರೆಂಬುದನ್ನು ಗಮನಿಸಿದರು. ದಮನಿಸುವಿಕೆಯು ವ್ಯಕ್ತಿಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಘಟಿಸುವಂತಹುದೆಂದು ಫ್ರಾಯ್ಡ್‌ ‌ ತರ್ಕಿಸಿದರು. ಹಾಗಾಗಿಯೇ, ಜನರಿಗೆ ತಾವು ನೆನಪುಗಳನ್ನು ಅಥವಾ ಆಘಾತಕಾರಿ ಅನುಭವಗಳನ್ನು ಹುದುಗಿಸಿಕೊಂಡಿದ್ದೇವೆಂಬ ಅರಿವನ್ನು ಪಡೆದಿರುವುದಿಲ್ಲ.

ನಂತರ, ಫ್ರಾಯ್ಡ್‌ ‌ಸುಪ್ತಾವಸ್ಥೆಯ ಮೂರು ಕಲ್ಪನೆಗಳಾದ ವಿವರಣಾತ್ಮಕ ಸುಪ್ತಾವಸ್ಥೆ, ಸಕ್ರಿಯ ಸುಪ್ತಾವಸ್ಥೆ ಮತ್ತು ವ್ಯವಸ್ಥಾ ಸುಪ್ತಾವಸ್ಥೆಗಳನ್ನು ಪ್ರತ್ಯೇಕಿಸಿದರು. ವಿವರಣಾತ್ಮಕ ಸುಪ್ತಾವಸ್ಥೆಯೆಂದರೆ ವ್ಯಕ್ತಿಗಳ ಯಥಾರ್ಥ ಗ್ರಹಿಕೆಗೆ ಬರದಿರುವ ಮನಸ್ಸಿನ ವೈಶಿಷ್ಟ್ಯತೆಗಳಾಗಿರುತ್ತವೆ. ಸಕ್ರಿಯ ಸುಪ್ತಾವಸ್ಥೆಯೆಂದರೆ, ಹೆಚ್ಚು ನಿರ್ದಿಷ್ಟವಾಗಿ ಮಾನಸಿಕ ಅಂತರ್ತುಮುಲದಿಂದಾಗಿ ರಕ್ಷಣಾತ್ಮಕವಾಗಿ ಹೊರದೂಡಲ್ಪಡುವ ಮಾನಸಿಕ ಪ್ರಕ್ರಿಯೆಗಳು ಹಾಗೂ ವಸ್ತುವಿಶೇಷಗಳಿಂದುಂಟಾದ ಸಂರಚನೆ. ವ್ಯವಸ್ಥಾ ಸುಪ್ತಾವಸ್ಥೆಯೆಂದರೆ ಮಾನಸಿಕ ಪ್ರಕ್ರಿಯೆಗಳು ದಮನಿತವಾದಾಗ, ಸಾಂದ್ರೀಕರಣ ಮತ್ತು ಪಲ್ಲಟದಂತಹಾ ಜಾಗೃತ ಮನಸ್ಸಿಗಿಂತ ಭಿನ್ನವಾದ ಲಕ್ಷಣಗಳಿಗನುಸಾರವಾಗಿ ಸಂಘಟಿತವಾಗುವ ಚಟುವಟಿಕೆಯಾಗಿರುತ್ತದೆ.

ಅಂತಿಮವಾಗಿ, ಫ್ರಾಯ್ಡ್‌ ‌ ವ್ಯವಸ್ಥಾ ಸುಪ್ತಾವಸ್ಥೆಯ ಕಲ್ಪನೆಯನ್ನು ತೊಡೆದು ಹಾಕಿ, ಅದನ್ನು ಅಹಂ, ವಿಪರೀತ-ಅಹಂ ಮತ್ತು ಪ್ರಾಕೃತ ಪ್ರವೃತ್ತಿಗಳ ಕಲ್ಪನೆಯೊಂದಿಗೆ ಬದಲಾಯಿಸಿದರು. ತಮ್ಮ ವೃತ್ತಿ ಜೀವನದುದ್ದಕ್ಕೂ ಸುಪ್ತಾವಸ್ಥೆಯ ವಿವರಣಾತ್ಮಕ ಹಾಗೂ ಸಕ್ರಿಯ ಸುಪ್ತಾವಸ್ಥೆಗಳ ಕಲ್ಪನೆಯನ್ನು ಉಳಿಸಿಕೊಂಡಿದ್ದರು.

ಮನೋಲೈಂಗಿಕ ಬೆಳವಣಿಗೆ

ಬದಲಾಯಿಸಿ

ಫ್ರಾಯ್ಡ್‌ ತಮ್ಮ ಮಾದರಿಯನ್ನು ಸಾರ್ವತ್ರಿಕವಾಗಿ ತರ್ಕಬದ್ಧವಾಗಿಸುವ ಉದ್ದೇಶದಿಂದ ಪ್ರಾಚೀನ ಪುರಾಣಗಳನ್ನು ಹಾಗೂ ಸಮಕಾಲೀನ ಜನಾಂಗಶಾಸ್ತ್ರಗಳನ್ನು ಹೋಲಿಕೆಗೆ ಆಕರವಾಗಿ ಬಳಸಿದರು. ಫ್ರಾಯ್ಡ್‌ ‌ತಮ್ಮ ಹೊಸ ಸಿದ್ಧಾಂತವನ್ನು ಈಡಿಪಸ್‌ ಮನಸ್ಸಂಕೀರ್ಣ ಎಂದು ಸೊಫೊಕ್ಲಿಸ್‌ ರಚಿತ ಗ್ರೀಕ್‌ ದುರಂತಕಥೆ ಈಡಿಪಸ್‌ ರೆಕ್ಸ್‌ ನ ಹೆಸರಿನಿಂದ ಕರೆದರು. "ನನ್ನಲ್ಲಿ ತಾಯಿಯ ಬಗ್ಗೆ ನಿರಂತರ ಪ್ರೇಮ ಹಾಗೂ ತಂದೆಯ ಬಗ್ಗೆ ಅಸೂಯೆ ಇದ್ದುದನ್ನು ಕಂಡುಕೊಂಡೆನು. ಈಗ ಈ ಪ್ರವೃತ್ತಿಯು ಬಾಲ್ಯದ ಸಾರ್ವತ್ರಿಕ ಪ್ರವೃತ್ತಿ ಎಂದೆನಿಸುತ್ತಿದೆ" ಎಂದು ಫ್ರಾಯ್ಡ್‌ ‌ ಹೇಳಿದರು. ಬೆಳವಣಿಗೆಯ ಈ ಮಾದರಿಯನ್ನು ಫ್ರಾಯ್ಡ್‌ ‌ ಮನಸ್ಸಿನ ಚಲನಶೀಲತೆಗೆ ಸಂಬಂಧಿಸಲು ಯತ್ನಿಸಿದರು. ಪ್ರತಿ ಹಂತವು ಸ್ವಚ್ಛಂದ ಮನೋವೃತ್ತಿಯನ್ನು ತಡೆಹಿಡಿಯಬಲ್ಲ ಸಾಮರ್ಥ್ಯ ಹಾಗೂ ಸದೃಢ ಅಹಂನಂತಹ ವೈಶಿಷ್ಟ್ಯತೆಗಳೊಂದಿಗೆ ಪ್ರಾಪ್ತ ಲೈಂಗಿಕ ಪ್ರೌಢತೆ ಪಡೆಯುವಿಕೆಯ ಮುನ್ನಡೆಯಾಗಿರುತ್ತದೆ (cf. ಲೈಂಗಿಕತೆಯ ಸಿದ್ಧಾಂತದ ಬಗೆಗಿನ ಮೂರು ಪ್ರಬಂಧಗಳು ). ಅವರು ಈಡಿಪಸ್‌ ಮನಸ್ಸಂಕೀರ್ಣತೆಯ ಮೂಲಕ ಹೇಗೆ ಜನರು ಅಗಮ್ಯಗಮನವನ್ನು ಇಷ್ಟಪಡುತ್ತಾರೆ ಹಾಗೂ ಅವರು ಅದನ್ನು ಏಕೆ ದಮನಿಸಲೇಬೇಕಾಗುತ್ತದೆ ಎಂಬ ತಮ್ಮ ಗ್ರಹಿಕೆಯನ್ನು ನಿರೂಪಿಸಿದ್ದಾರೆ. ಈಡಿಪಸ್‌ ಮನಸ್ಸಂಕೀರ್ಣತೆಯನ್ನು ಮನೋಲೈಂಗಿಕ ಬೆಳವಣಿಗೆಯ ಹಾಗೂ ಅರಿವಿನ ಒಂದು ಸ್ಥಿತಿ ಎಂದು ವರ್ಣಿಸುತ್ತಾರೆ. ಅವರು ಕುಲದೇವತಾ ಆರಾಧನಾ ಪದ್ಧತಿಗಳ ಬಗ್ಗೆ ಮಾನವಶಾಸ್ತ್ರಗಳೆಡೆ ಗಮನ ಹರಿಸಿ, ಪಂಗಡಗಳಲ್ಲಿ ಈಡಿಪಸ್‌ ಸಂಕೀರ್ಣತೆಯನ್ನು ಧರ್ಮಾಚರಣೆಯ ಮೂಲಕ ಬಗೆಹರಿಸಲು ಮಾಡುತ್ತಿದ್ದ ಚಟುವಟಿಕೆ ಎಂದು ತರ್ಕಿಸುತ್ತಾರೆ.

ನರವಿಕಾರದ ಮೂಲ ಕಾರಣ ಬಾಲ್ಯದಲ್ಲಿ ತನ್ನ ಮೇಲೆ ನಡೆದ ಲೈಂಗಿಕ ದುರ್ಬಳಕೆ ಎಂಬ "ವ್ಯಾಮೋಹ ಸಿದ್ಧಾಂತ" ಎಂದು ಕರೆಯಲಾದ ಸಿದ್ಧಾಂತವನ್ನು ಪ್ರತಿಪಾದಿಸಿದ್ದ ಫ್ರಾಯ್ಡ್‌, ನಂತರ ಇದನ್ನು ಅಗತ್ಯ ವಿವರಣೆಗಳಿಲ್ಲದ ಕಾರಣ ತಿರಸ್ಕರಿಸಿದ್ದರು. ಅವರು ಸಹಜವಾಗಿ ಕಂಡುಕೊಂಡ ಪ್ರಕಾರ ಬಾಲ್ಯದ ಲೈಂಗಿಕ ಅತ್ಯಾಚಾರದ ನೆನಪುಗಳು ಹೆಚ್ಚಿನ ಮಟ್ಟಿಗೆ ಕಲ್ಪಿತವಾಗಿದ್ದವೇ ಹೊರತು ನಿಜಘಟನೆಗಳ ಮೇಲೆ ಆಧಾರಿತವಾಗಿರಲಿಲ್ಲ. ೧೮೯೦ರ ದಶಕದ ಕೊನೆಯವರೆಗೂ ನರವಿಕಾರಕ್ಕೆ ಲೈಂಗಿಕ ರೋಗನಿದಾನವನ್ನೇ ಆಶ್ರಯಿಸಿದ್ದ ಫ್ರಾಯ್ಡ್‌, ಈಡಿಪಸ್‌ ಮನಸ್ಸಂಕೀರ್ಣತೆಯಿಂದಾಗಿ ಭ್ರಮೆಯಲ್ಲಿರುವಿಕೆಯು ಉನ್ಮಾದ ಹಾಗೂ ಇತರೆ ನರವಿಕಾರ ಲಕ್ಷಣಗಳಿಗೆ ಕಾರಣ ಎಂಬುದರ ಬಗ್ಗೆ ಹೆಚ್ಚು ಗಮನ ನೀಡತೊಡಗಿದರು. ತನ್ನ ವಿವರಣಾತ್ಮಕ ಮಾದರಿಯನ್ನು ಬದಲಿಸಿದ್ದರೂ ಕೂಡ, ಫ್ರಾಯ್ಡ್‌ ‌ಕೆಲ ನರವಿಕಾರಪೀಡಿತರು ವಾಸ್ತವವಾಗಿ ತಮ್ಮ ಬಾಲ್ಯದಲ್ಲಿ ತಂದೆಯವರಿಂದ ಲೈಂಗಿಕ ಪೀಡನೆಗೊಳಗಾಗಿದ್ದರೆಂದು ಗುರುತಿಸಿದ್ದರು. ಅವರು ತಮಗೆ ತಿಳಿದಂತೆ ಪೀಡನೆಗೊಳಗಾಗಿದ್ದ ಅನೇಕ ರೋಗಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿದ್ದರು.[೩೫]

ವ್ಯಕ್ತಿಗಳಲ್ಲಿ ಉಂಟಾಗುವ ಕಾಮೇಚ್ಛೆಯನ್ನು, ಶುದ್ಧೀಕರಣ ಕಲ್ಪನೆಯ ಸಂಗ್ರಹಿತ ಪ್ರಕ್ರಿಯೆಯಿಂದ ಸೂಚಿತವಾಗುವ ವಸ್ತುವಿನ ಮೇಲೆ ತಮ್ಮ ಲಕ್ಷ್ಯವನ್ನು ಬದಲಿಸುವುದರ ಮೂಲಕ ನಿಗ್ರಹಿಸಬಹುದು ಎಂಬುದು ಫ್ರಾಯ್ಡ್‌ರ ನಂಬಿಕೆಯಾಗಿತ್ತು. ಅವರು, ಮಾನವನು ಜನ್ಮತಃ "ಬಹುವಿಧದ ವಿಕೃತಿಗಳನ್ನು ಹೊಂದಿದವನು", ಎಂದರೆ ಅನೇಕ ರೀತಿಯ ವಸ್ತುಗಳು ಮಾನವನಲ್ಲಿ ಆಹ್ಲಾದತೆಯನ್ನುಂಟು ಮಾಡಬಹುದು ಎಂದು ವಾದಿಸಿದರು. ಇದೇ ಆಧಾರದಲ್ಲಿ ಮುಂದುವರಿದು ಅವರು ಮನುಷ್ಯರು ಬೆಳೆದಂತೆ ತಮ್ಮ ಬೆಳವಣಿಗೆಗೆ ಅನುಸಾರವಾಗಿ ವಿವಿಧ ಮತ್ತು ನಿಗದಿತ ವಸ್ತುಗಳ ಮೇಲೆ ಆಕರ್ಷಣೆಯನ್ನು ಬೆಳೆಸಿಕೊಳ್ಳುತ್ತಾರೆ—ಮೊದಲಿಗೆ ಬಾಯಿಯ ಹಂತ (ಉದಾಹರಣೆಗೆ ಮಗುವು ಆರೈಕೆಯಿಂದ ಸಂಪ್ರೀತಿ ಹೊಂದುವಂತೆ), ನಂತರ ಗುದದ ಹಂತ (ಉದಾಹರಣೆಗೆ ಅಂಬೆಗಾಲಿಡುವ ಮಕ್ಕಳು ಮಲ ವಿಸರ್ಜನೆಯಲ್ಲಿ ಅನುಭವಿಸುವ ಆನಂದ), ನಂತರ ಶಿಶ್ನದ ಹಂತ. ನಂತರ ಮಕ್ಕಳು ತಮ್ಮ ತಾಯಿಯನ್ನೇ ಕಾಮದ ವಸ್ತುವನ್ನಾಗಿ(ಈಡಿಪಸ್‌ ಮನಸ್ಸಂಕೀರ್ಣ ಎಂದು ಹೇಳಲಾಗುವ) ಆಶಿಸುವ ಹಂತಕ್ಕೂ ತಲುಪುತ್ತಾರೆ, ಆದರೆ ಅಂತಿಮವಾಗಿ ಈ ಇಚ್ಛೆಯು ನಿಷೇಧಾತ್ಮಕವಾದುದರಿಂದ ಅದನ್ನು ದಮನಿಸುತ್ತವೆ ಎಂದೂ ಫ್ರಾಯ್ಡ್‌ ವಾದಿಸಿದರು. ('ಎಲೆಕ್ಟ್ರಾ ಸಂಕೀರ್ಣತೆ' ಎಂಬ ಪದವನ್ನು ಇದೇ ತರಹ ತಂದೆಯ ಮೇಲೆ ಉಂಟಾಗುವ ಭಾವನೆಗೂ ಕೆಲವೊಮ್ಮೆ ಬಳಸುತ್ತಾರಾದರೂ, ಫ್ರಾಯ್ಡ್‌ ಅದರ ಬ‌ಳಕೆಯನ್ನು ಪುಷ್ಟೀಕರಿಸಿಲ್ಲ.) ಮನೋಲೈಂಗಿಕ ಬೆಳವಣಿಗೆಯ ದಮನಾತ್ಮಕ ಅಥವಾ ಸುಪ್ತ ಅಗೋಚರ ಹಂತದ ನಂತರ ಲೈಂಗಿಕವಾಗಿ ಪ್ರಾಯಕ್ಕೆ ಬರುವ ಜನನಾಂಗಗಳ ಬೆಳವಣಿಗೆಯ ಹಂತ ಬರುತ್ತದೆ.

ಫ್ರಾಯ್ಡ್‌ರ ನಿಲುವುಗಳನ್ನು ಕೆಲವೊಮ್ಮೆ ಶಿಶ್ನ/ಪುರುಷಕೇಂದ್ರಿತವೆನ್ನಲಾಗುತ್ತದೆ. ಏಕೆಂದರೆ ಫ್ರಾಯ್ಡ್‌ರ ಪ್ರಕಾರ, ಸುಪ್ತ ಆಸೆಯೆಂದರೆ ಪುರುಷ ಜನನಾಂಗ (ಶಿಶ್ನ). ಪುರುಷರು ಮತ್ತೋರ್ವ ಪುರುಷನ ಮುಂದೆ ಶಿಶ್ನದಿಂದ ಸಂಕೇತಿಸಲ್ಪಡುವ ತಮ್ಮ ಪುರುಷತ್ವವನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಸ್ತ್ರೀಯರು - ಕೈಗೂಡದ ಬಯಕೆಯಾದರೂ ಶಿಶ್ನವನ್ನು ಹೊಂದುವ ಬಯಕೆ ಹೊಂದಿರುತ್ತಾರೆ. ಇದರಿಂದಲೇ ಹುಡುಗರು ತಮ್ಮ ತಂದೆಯ ಬಗ್ಗೆ ಅಸಂತುಷ್ಟರಾಗಿರುತ್ತಾರೆ (ಪುರುಷತ್ವ ನಷ್ಟದ ಭಯದಿಂದ) ಮತ್ತು ಹುಡುಗಿಯರು ತಮ್ಮ ತಂದೆಯನ್ನು ಬಯಸುತ್ತಾರೆ. ಫ್ರಾಯ್ಡ್‌ರಿಗೆ ಸ್ತ್ರೀ ಜನನಾಂಗಗಳ ಬಗ್ಗೆಯೂ ಸೇರಿಸಿಕೊಳ್ಳಬಹುದಲ್ಲವೇ ಎಂದಾಗ ಅವರು "...ಸ್ತ್ರೀ ಜನನಾಂಗವು ತೆರಪಿನದ್ದಾದರೆ, ಶಿಶ್ನವು ಸಮ್ಮುಖದ್ದು ..." ಎಂದು ಪ್ರತಿಕ್ರಯಿಸಿದರು.

ಪ್ರಾಕೃತಿಕ ಪ್ರವೃತ್ತಿ, ಅಹಂ, ಮತ್ತು ವಿಪರೀತ ಅಹಂ

ಬದಲಾಯಿಸಿ

ತನ್ನ ನಂತರದ ಅಧ್ಯಯನದಲ್ಲಿ, ಫ್ರಾಯ್ಡ್‌ರು ಮನುಷ್ಯನ ಮನಸ್ಸನ್ನು ಮೂರು ಭಾಗಗಳಾಗಿ ವಿಭಜಿಸಬಹುದು‌: ಅಹಂ, ವಿಪರೀತ-ಅಹಂ, ಮತ್ತು ಪ್ರಾಕೃತಿಕ ಪ್ರವೃತ್ತಿ ಎಂದು ಪ್ರಸ್ತಾಪಿಸಿದರು. ಫ್ರಾಯ್ಡ್‌ ‌ಈ ಮಾದರಿಯ ಬಗ್ಗೆ ತಮ್ಮ ೧೯೨೦ರ ಪ್ರಬಂಧ ಬಿಯಾಂಡ್‌ ದ ಪ್ಲೆಷರ್‌ ಪ್ರಿನ್ಸಿಪಲ್‌ ನಲ್ಲಿ ಚರ್ಚಿಸಿದ್ದಲ್ಲದೇ ನಂತರ ತನ್ನ ಹಿಂದಿನ ಸ್ಥಳಾಕೃತಿಯ ರೂಪರೇಖೆ (i.e., ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಅಧಃಪ್ರಜ್ಞೆ)ಯ ಪರ್ಯಾಯವಾಗಿ ಸಿದ್ಧಪಡಿಸಿದ ದ ಇಗೋ ಅಂಡ್‌ ದ ಐಡಿ (೧೯೨೩)ಯಲ್ಲಿ, ಈ ಮಾದರಿಯ ಬಗ್ಗೆ ವಿವರಿಸಿದ್ದಾರೆ. ಪ್ರಾಕೃತಿಕ ಪ್ರವೃತ್ತಿಯು ಆವೇಗವುಳ್ಳದ್ದಾಗಿದ್ದು, ಮನಸ್ಸಿನ ಮಗುವಿನ-ರೀತಿಯ ಭಾಗವಾಗಿದ್ದು, ಕೇವಲ "ಆಹ್ಲಾದ ತತ್ವ"ದ ಮೇಲೆ ಕಾರ್ಯಪ್ರವೃತ್ತಗೊಳ್ಳುವುದಾಗಿದ್ದು ಕೇವಲ ತನಗೇನು ಬೇಕು ಎಂಬುದನ್ನು ಮಾತ್ರವೇ ಗಮನಿಸಿ, ಅದರ ಪರಿಣಾಮಗಳೆಲ್ಲವನ್ನೂ ಅಲಕ್ಷಿಸುತ್ತದೆ.

ಇಗೋ ಎಂಬ ಪದ ಆಂಗ್ಲಭಾಷೆಗೆ ೧೮ನೇ ಶತಮಾನದ ಕೊನೆಯಲ್ಲಿ ಸೇರಿತು; ಬೆಂಜಮಿನ್‌ ಫ್ರಾಂಕ್ಲಿನ್‌ (೧೭೦೬ - ೧೭೯೦) ಚದುರಂಗವನ್ನು "...ಮಿದುಳನ್ನು ಚಟುವಟಿಕೆಯಿಂದಿಡಲು ಹಾಗೂ ಅಹಂ ಅನ್ನು ಅಂಕೆಯಿಂದಿಡುವ" ದಾರಿಯೆಂದು ವರ್ಣಿಸಿದ್ದರು. ಜಾರ್ಜ್‌ ಗ್ರಾಡ್ಡೆಕ್‌ರ ಲೇಖನಗಳಿಂದ ಐಡಿ/ಪ್ರಾಕೃತಿಕ ಪ್ರವೃತ್ತಿ (ಡಾಸ್‌ ಎಸ್ , ‌"ದ ಇಟ್‌/ಇದು") ಪದವನ್ನು ಆಯ್ದುಕೊಂಡಿದ್ದು ಎಂದು ಫ್ರಾಯ್ಡ್‌ ‌ಒಪ್ಪಿಕೊಂಡಿದ್ದಾರೆ. ಐಡಿ ಪದವು ಅತ್ಯಂತ ಮುಂಚೆ ಬೋರಿಸ್‌ ಸಿಡಿಸ್‌ರ ಲೇಖನದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಆ ಪದದ ಬಳಕೆಯನ್ನು ವಿಲಿಯಂ ಜೇಮ್ಸ್‌ರು ೧೮೯೮ರಷ್ಟು ಹಿಂದೆಯೇ ಬಳಸಿದ್ದಾಗಿ ತಿಳಿಸಲಾಗಿದೆ.

ವಿಪರೀತ-ಅಹಂ ಎಂಬುದು ಮನಸ್ಸಿನ ಋಜುತ್ವ ಭಾಗವಾಗಿದ್ದು, ನೈತಿಕವಾದ ವಿಷಯವು ಯಾವುದಾದರೂ ಸಂದರ್ಭದಲ್ಲಿ ಸಮಂಜಸವೆನಿಸದಿದ್ದರೂ ಕೂಡ ಆ ಸಂದರ್ಭವನ್ನು ಅಲಕ್ಷಿಸಿ ನೈತಿಕತೆಯನ್ನು ಪಾಲಿಸುತ್ತದೆ. ತರ್ಕಬದ್ಧ ಅಹಂ ಪ್ರಾಕೃತಿಕ ಪ್ರವೃತ್ತಿಯ ಅವ್ಯಾವಹಾರಿಕ ಭೋಗವಾದ ಮತ್ತು ಅಷ್ಟೇ ಸಮಾನವಾಗಿ ವಿಪರೀತ-ಅಹಂನ ಅವ್ಯಾವಹಾರಿಕ ನೈತಿಕತೆಗಳ ಮಧ್ಯದ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ; ಮನಸ್ಸಿನ ಈ ಭಾಗವೇ ಸಾಧಾರಣವಾಗಿ ವ್ಯಕ್ತಿಯ ನಡವಳಿಕೆಗಳಲ್ಲಿ ನೇರವಾಗಿ ವ್ಯಕ್ತವಾಗುವುದು. ವಿಪರೀತ ಒತ್ತಡ ಉಂಟಾದಾಗ ಅಥವಾ ತನ್ನ ಕಾರ್ಯಗಳಿಂದಾಗಿ ಆತಂಕಿತಗೊಂಡಾಗ, ಸುರಕ್ಷತಾ ಕ್ರಮವಾಗಿ ನಿರಾಕರಣೆ, ದಮನ ಹಾಗೂ ಬದಲಾವಣೆಯಂತಹಾ ಕ್ರಮಗಳನ್ನು ಕೈಗೊಳ್ಳುತ್ತದೆ. ಅಹಂ ಸುರಕ್ಷತಾ ವ್ಯವಸ್ಥೆಗಳಿಗೆ ಪ್ರಾಯೋಗಿಕ ಸ್ವೀಕೃತಿ ದೊರಕಿದ್ದರೆ,[೩೬] ದಮನ ಪ್ರಕೃತಿಯು ೧೯೯೦ರ ದಶಕದಲ್ಲಿ ನಿರ್ದಿಷ್ಟವಾಗಿ ಮನಶ್ಶಾಸ್ತ್ರದಲ್ಲಿ ತೀಕ್ಷ್ಣ ಚರ್ಚೆಗೊಳಗಾಗಿದ್ದ ವಿಷಯವಾಗಿತ್ತು.[೩೭]

ಜೀವನ ಹಾಗೂ ಮರಣ ಪ್ರೇರಣೆ

ಬದಲಾಯಿಸಿ

ಫ್ರಾಯ್ಡ್‌ರ ಪ್ರಕಾರ ಮನುಷ್ಯರು ಎರಡು ವೈರುಧ್ಯ ಹೊಂದಿರುವ ಪ್ರಮುಖ ಆಶಯಗಳನ್ನು ‌ಹೊಂದಿರುತ್ತಾರೆ : ಜೀವನ ಪ್ರೇರಣೆ (ಕಾಮೇಚ್ಛೆ/ಕಾಮ) (ಉಳಿಕೆ/ಅಸ್ತಿತ್ವ, ಪ್ರಜನನ, ಹಸಿವು, ಬಾಯಾರಿಕೆ, ಮತ್ತು ಕಾಮ) ಹಾಗೂ ಸಾವಿನ ಪ್ರೇರಣೆ (ಸಾವಿನ ಸುಪ್ತಬಯಕೆ). ಫ್ರಾಯ್ಡ್‌ರ ಮನಶ್ಶಕ್ತಿ ಕೇಂದ್ರೀಕರಣದ ವಿವರಣೆಯ ಪ್ರಕಾರ ಜೀವೇಚ್ಛೆ ಎಂದೆನಿಸಿಕೊಳ್ಳುವ ಶಕ್ತಿಯು ಎಲ್ಲಾ ಕ್ರಿಯಾತ್ಮಕ, ಜೀವೋತ್ಪತ್ತಿ ಪ್ರವೃತ್ತಿಗಳನ್ನು ಒಳಗೊಂಡಿರುತ್ತದೆ. ಮರಣ ಪ್ರೇರಣೆ (ಅಥವಾ ಮರಣದ ಮೂಲಪ್ರವೃತ್ತಿ), ಇದರ ಶಕ್ತಿಯನ್ನು ಜೀವವಿರೋಧಿತ್ವ ಎಂದರೆ ಎಲ್ಲಾ ಜೀವಿಗಳಲ್ಲಿ ಸಹಜವಾಗಿರುವ ಸ್ತಬ್ಧತೆಗೆ ಬೇರೆ ಪದಗಳಲ್ಲಿ ಹೇಳುವುದಾದರೆ ನಿರ್ಜೀವ ಅಥವಾ ಸತ್ತ ಸ್ಥಿತಿಗೆ ಮರಳುವ ಇಚ್ಛೆ ಎನ್ನಲಾಗುತ್ತದೆ.

ಫ್ರಾಯ್ಡ್‌ ‌ಸಾವಿನ ಸುಪ್ತ ಬಯಕೆಗಳ ಬಗ್ಗೆ ನಂತರದ ವರ್ಷಗಳಲ್ಲಿ ಗುರುತಿಸಿದ್ದುದರಿಂದ ಮರಣ ಪ್ರೇರಣೆಯ ಬಗ್ಗೆ ತಮ್ಮ ಸಿದ್ಧಾಂತವನ್ನು ಬಿಯಾಂಡ್‌ ದ ಪ್ಲೆಷರ್‌ ಪ್ರಿನ್ಸಿಪಲ್‌ ಎಂಬ ಪ್ರಬಂಧದಲ್ಲಿ ಮಂಡಿಸಿದರು. ಫ್ರಾಯ್ಡ್‌ ‌ಜೀವನ ಪ್ರೇರಣೆ ಹಾಗೂ ಮರಣ ಪ್ರೇರಣೆಗಳ ನಡುವಿನ ವಿರೋಧಾಭಾಸವನ್ನು ನಲಿವು ಹಾಗೂ ನೋವುಗಳೆಂದು ವರ್ಣಿಸುವ ಮೂಲಕ ಸರಿದೂಗಿಸಿದರು. ಫ್ರಾಯ್ಡ್‌ರ ಪ್ರಕಾರ, ನೋವು ಎಂದರೆ ದೇಹವು ಪಡೆಯುವ ಪ್ರಚೋದನೆ. (ಉದಾಹರಣೆಗೆ, ಚರ್ಮದ ಮೇಲ್ಮೈ ಮೇಲಿನ ವಿಪರೀತ ಘರ್ಷಣೆಯು ಸುಟ್ಟ ಸಂವೇದನೆ ಉಂಟು ಮಾಡುತ್ತದೆ; ಅಥವಾ ವಿಪರೀತ ವಾಹನದಟ್ಟಣೆಯ ನಡುವೆಯಿದ್ದಾಗ ಕಂಡುಬರುವ ದೃಶ್ಯ ಸಂವೇದನೆ ವ್ಯಗ್ರತೆಯನ್ನುಂಟುಮಾಡುತ್ತದೆ.)

ಇದಕ್ಕೆ ವಿರುದ್ಧವಾಗಿ, ನಲಿವಿಗೆ ಕಾರಣ ಪ್ರಚೋದನೆಯ ಇಳಿಕೆಯಾಗಿರುತ್ತದೆ (ಉದಾಹರಣೆಗೆ, ಒತ್ತಡದ ವಾತಾವರಣದಿಂದ ದೇಹವು ಪ್ರಶಾಂತ ವಾತಾವರಣವನ್ನು ಪ್ರವೇಶಿಸಿದಾಗ). ಫ್ರಾಯ್ಡ್‌ರ ಪ್ರಕಾರ ಪ್ರಚೋದನೆಯು ಇಳಿಕೆಯಾದಂತೆ ನಲಿವು ಹೆಚ್ಚಿತೆಂದರೆ, ನಲಿವಿನ ಸರ್ವೋತ್ಕೃಷ್ಟ ಅನುಭವವೆಂದರೆ ಶೂನ್ಯ ಪ್ರಚೋದನೆ ಅಥವಾ ಮರಣ.[ಸೂಕ್ತ ಉಲ್ಲೇಖನ ಬೇಕು]

ಈ ಪ್ರತಿಪಾದನೆಯಿಂದ, ಫ್ರಾಯ್ಡ್‌ ಸುಪ್ತಾವಸ್ಥೆಯು ನೋವಿನ ಅನುಭವಗಳನ್ನು ಪುನರಾವರ್ತಿಸಿ ದೇಹವನ್ನು ಸಂವೇದನಾರಹಿತವನ್ನಾಗಿ ಮಾಡಲು ಅಥವಾ ನಿಶ್ಚೇತನಗೊಳಿಸುವ ಪ್ರವೃತ್ತಿ ಹೊಂದಿದೆ ಎಂದು ಒಪ್ಪಿಕೊಳ್ಳುತ್ತಾರೆ. ದುಃಖದ ಅನುಭವಗಳನ್ನು ಪುನರಾವರ್ತಿಸುವ ಈ ಪ್ರಬಲ ಪ್ರಚೋದನೆಯೇ ದುಃಸ್ವಪ್ನಗಳು ಬೀಳಲು ಕಾರಣವಾಗಿವೆಯಲ್ಲದೇ, ಫ್ರಾಯ್ಡ್‌ರ ಹಿಂದಿನ ಕನಸುಗಳು ಕೇವಲ ಆಹ್ಲಾದ, ಭ್ರಮೆ ಮತ್ತು ಬಯಕೆಗಳನ್ನು ವ್ಯಕ್ತಪಡಿಸುವ ರೀತಿ ಎಂಬ ಕಲ್ಪನೆಗೆ ವಿರುದ್ಧವಾಗಿದೆ. ಒಂದೆಡೆ, ಜೀವನ ಪ್ರವೃತ್ತಿಯು ವಿಪರೀತ ದುಃಖ ಹಾಗೂ ಸಾವಿನ ಅಪಾಯಗಳನ್ನು ದೂರವಿರಿಸುವ ಮೂಲಕ ಅಸ್ತಿತ್ವವನ್ನು ಉತ್ತೇಜಿಸುತ್ತದೆ. ಮತ್ತೊಂದೆಡೆ, ಮರಣ ಪ್ರೇರಣೆಯು ಅದೇ ಸಮಯದಲ್ಲಿ ವಿಪರೀತ ಆಹ್ಲಾದದ ಕಡೆಗೆ ಪ್ರೇರಿಸಿ ಸಾವಿನೆಡೆ ದಾರಿ ತೋರುತ್ತದೆ. ಸ್ವಪೀಡನೆ ಹಾಗೂ ಖಿನ್ನಸ್ವಪೀಡನೆಗಳ ಕುರಿತ ತನ್ನ ಜಿಜ್ಞಾಸೆಯಲ್ಲಿ ಆಹ್ಲಾದತೆ ಮತ್ತು ದುಃಖದ ಹಾಗೂ ಕಾಮ/ಜೀವನ ಮತ್ತು ಸಾವುಗಳ ನಡುವಿನ ಇಬ್ಬಂದಿತನದ ಬಗ್ಗೆ ಫ್ರಾಯ್ಡ್‌ ಪ್ರಸ್ತಾಪಿಸಿದರು. ಕಾಮ ಹಾಗೂ ಸಾವಿನ ಸುಪ್ತ ಬಯಕೆಗಳ ನಡುವಿನ ತುಯ್ತವು ಅವರ ಚಿಂತನಾ ಶೈಲಿಯಲ್ಲಿ ಕ್ರಾಂತಿಯನ್ನುಂಟು ಮಾಡಿತು.

ಈ ಆಲೋಚನಾ ವಿಧಾನವು ಆರ್ಥರ್‌ ಷೋಪೆನ್‌ಹಾರ್‌ ಮತ್ತು ಫ್ರೆಡ್‌ರಿಚ್‌ ನೀಟ್ಷೆರ ಸಿದ್ಧಾಂತಗಳನ್ನು ಹೋಲುತ್ತವೆ. ಷೋಪೆನ್‌ಹಾರ್‌ರ ದ ವರ್ಲ್ಡ್‌ ಆಸ್‌ ವಿಲ್‌ ಅಂಡ್‌ ರೆಪ್ರೆಸೆಂಟೇಷನ್‌ ನಲ್ಲಿ ಮಂಡಿಸಲಾದ ನಿರಾಶಾಸಿದ್ಧಾಂತವು, ಮನಸ್ಸಿನ ಜೀವನದೆಡೆಗಿನ ವೈರಾಗ್ಯದ ವಿವರಣೆಯು, ಫ್ರಾಯ್ಡ್‌‌ರ ಮರಣ ಪ್ರೇರಣೆಯೊಂದಿಗೆ ಅನೇಕ ಹಂತಗಳಲ್ಲಿ ಹೊಂದಿಕೆಯಾಗುತ್ತದೆ. ಅದೇ ರೀತಿ, ಜೀವನ ಪ್ರೇರಣೆಯು ನೀಟ್ಷೆರ ದ ಬರ್ತ್‌ ಆಫ್‌ ಟ್ರಾಜಿಡಿ ಯಲ್ಲಿನ ವಿಷಯಲೋಲುಪತೆಯ ಕಲ್ಪನೆಗೆ ಸ್ಪಷ್ಟವಾಗಿ ಸಂವಾದಿಯಾಗಿದೆ. ಆದಾಗ್ಯೂ, ತನ್ನ ಸ್ವಂತ ಕಲ್ಪನೆಗಳಿಗೆ ಆಧಾರವಸ್ತುವನ್ನು ರೂಪಿಸುವ ಸಂದರ್ಭದಲ್ಲಿ ಫ್ರಾಯ್ಡ್‌ ಅವರ ಲೇಖನಗಳ ಬಳಕೆಯನ್ನು ಮಾಡಲಿಲ್ಲವೆಂದಿದ್ದಾರೆ.[೩೮]

ಫ್ರಾಯ್ಡ್‌ರ ಸಾಧನೆಗಳು/ಪರಿಶ್ರಮಗಳು/ಕೀರ್ತಿ

ಬದಲಾಯಿಸಿ

ಮಾನಸಿಕ ಚಿಕಿತ್ಸೆ

ಬದಲಾಯಿಸಿ

ಫ್ರಾಯ್ಡ್‌ರ ಸಿದ್ಧಾಂತಗಳು ಹಾಗೂ ಸಂಶೋಧನಾ ವಿಧಾನಗಳು ಯಾವಾಗಲೂ ವಿವಾದಾತ್ಮಕವಾಗಿದ್ದವು. ಆದಾಗ್ಯೂ, ಫ್ರಾಯ್ಡ್‌ ಮಾನಸಿಕ ಚಿಕಿತ್ಸೆಯಲ್ಲಿ ಪ್ರಚಂಡ ಪ್ರಭಾವ ಬೀರಿದ್ದಾರೆ. ಅನೇಕ ಮಾನಸಿಕ ಚಿಕಿತ್ಸಕರು ಆತನ ಸಿದ್ಧಾಂತಗಳನ್ನು ತಿರಸ್ಕರಿಸಿದರೂ, ಒಂದು ಹಂತದವರೆಗೆ ಫ್ರಾಯ್ಡ್‌ರ ವಿಧಾನವನ್ನೇ ಅನುಸರಿಸುತ್ತಾರೆ.

ಫ್ರಾಯ್ಡ್‌-ವಿಧಾನದ ಮಾನಸಿಕ ಚಿಕಿತ್ಸೆಯ ಶೋಧನೆಯ ನಂತರದ ಪ್ರಭಾವೀ ವಿಧಾನವೆಂದರೆ ಅಮೇರಿಕದ ಮಾನಸಿಕ ತಜ್ಞರಾದ ಆರ್ಥರ್‌ ಜಾನೊವ್‌ರ ಮೂಲಭೂತ ಚಿಕಿತ್ಸೆ.[೩೯][೪೦][೪೧]

ಮಾನಸಿಕ ಚಿಕಿತ್ಸೆಯ ಬಗ್ಗೆ ಫ್ರಾಯ್ಡ್‌ರ ಸಾಧನೆಗಳ ಬಗ್ಗೆ ಅನೇಕ ತಜ್ಞರು ಹಾಗೂ ಇತಿಹಾಸಕಾರರಿಂದ ವ್ಯಾಪಕ ಟೀಕೆ ಹಾಗೂ ಬೆಂಬಲಗಳು ವ್ಯಕ್ತವಾಗಿವೆ.

ಟೀಕಾಕಾರರಲ್ಲಿ ಒಬ್ಬರಾದ H. J. ಐಸೆಂಕ್‌ರು, ಫ್ರಾಯ್ಡ್‌ರು ‌ 'ಮನಚಿಕಿತ್ಸೆಯನ್ನು ಶತಮಾನ ಹಿಂದಕ್ಕೆ ಕರೆದೊಯ್ದಿದ್ದಾರೆ', ನಿರಂತರವಾಗಿ ತನ್ನ ರೋಗಿಗಳ ತಪ್ಪು ರೋಗನಿರ್ಣಯ ಮಾಡಿದುದಲ್ಲದೇ, ವಂಚನಾತ್ಮಕವಾಗಿ ರೋಗಚರಿತ್ರೆಯನ್ನು ತಪ್ಪಾಗಿ ನಿರೂಪಿಸಿದ್ದಾರೆಂದು, ಹಾಗೂ ಫ್ರಾಯ್ಡ್‌ರ‌ ಚಿಂತನೆಯಲ್ಲಿ ಸತ್ಯವಾದುದು ಯಾವುದೂ ಹೊಸದಲ್ಲ, ಮತ್ತು ಹೊಸದಾದುದು ಸತ್ಯವಲ್ಲ " ಎಂದು ಬರೆದಿದ್ದರು.[೪೨]

ಬೆಟ್ಟಿ ಫ್ರೀಡನ್‌ರು ಕೂಡಾ ಫ್ರಾಯ್ಡ್‌ ‌ಹಾಗೂ ಅವರ ಮಹಿಳೆಯರ ಮೇಲಿನ ವಿಕ್ಟೋರಿಯನ್‌ ಕಾಲದ ಪೂರ್ವಾಗ್ರಹವನ್ನು ತನ್ನ ೧೯೬೩ರ ಪುಸ್ತಕ ದ ಫೆಮಿನೈನ್‌ ಮಿಸ್ಟಿಕ್‌ ನಲ್ಲಿ ಟೀಕಿಸಿದ್ದರು.[೪೩] ಫ್ರಾಯ್ಡ್‌ರ ಶಿಶ್ನದ ಅಸೂಯೆಯ ಕಲ್ಪನೆ—ಹಾಗೂ ಆತನ ಸ್ತ್ರೀಯನ್ನು ಶೂನ್ಯತೆ/ನಕಾರಾತ್ಮಕ[೪೪] ವೆಂದು ಬಿಂಬಿಸುವ ನಿರೂಪಣೆಯನ್ನು — ಕೇಟ್‌ ಮಿಲ್ಲೆಟ್‌ರು ತಮ್ಮ ೧೯೭೦ರ ಪುಸ್ತಕ ಸೆಕ್ಸುಯಲ್‌ ಪಾಲಿಟಿಕ್ಸ್‌ ನಲ್ಲಿ ಆತನ ಅಧ್ಯಯನಗಳಲ್ಲಿನ ಗೊಂದಲ ಹಾಗೂ ಅಜಾಗರೂಕತೆಗಳ ವಿವರವನ್ನು ನೀಡಿ ತೀವ್ರವಾಗಿ ಖಂಡಿಸಿದ್ದಾರೆ.[೪೫] ನಾವೊಮಿ ವೆಸ್‌ಟೇನ್‌ರು ಫ್ರಾಯ್ಡ್‌ ಮತ್ತು ಅವರ ಹಿಂಬಾಲಕರು ಅವರ "ವರ್ಷಗಳ ಚಿಕಿತ್ಸಾಲಯದ ಗಾಢ ಅನುಭವ"ವು ಆತನ ವೈಜ್ಞಾನಿಕ ತೀಕ್ಷ್ಣತೆಯನ್ನು ಹೆಚ್ಚಿಸಿದೆ ಎಂಬ ತಪ್ಪು ತಿಳುವಳಿಕೆ ಹೊಂದಿದ್ದಾರೆ ಎಂದು ಬರೆದಿದ್ದರು.[೪೬]

ದ ಲಂಡನ್‌ ರಿವ್ಯೂ ಆಫ್‌ ಬುಕ್ಸ್‌ ನಲ್ಲಿ ಪ್ರಕಟವಾದ ಹಾನ್‌ ಇಸ್ರೇಲ್ಸ್‌ರ ಪುಸ್ತಕ ಡೆರ್‌ ಫಾಲ್‌ ಫ್ರಾಯ್ಡ್‌ ನ ವಿಮರ್ಶೆಯಲ್ಲಿ ಮಿಕ್ಕೆಲ್‌ ಬಾರ್ಚ್-ಜಾಕೊಬ್‌ಸೆನ್‌ರು, "ವಾಸ್ತವವೆಂದರೆ ಫ್ರಾಯ್ಡ್‌ರಿಗೆ ಫ್ಲೀಷ್‌ಲ್‌ , ಅನ್ನಾ O. ಮತ್ತು ಆತನ ೧೮ ರೋಗಿಗಳು ಗುಣಮುಖರಾಗಿಲ್ಲವೆಂದು ಮೊದಲಿಂದಲೂ ಗೊತ್ತಿದ್ದರೂ, ಅಸ್ತಿತ್ವದಲ್ಲಿಲ್ಲದ ಈ ತಳಪಾಯದ ಮೇಲೆ ಪ್ರಮುಖ ಸಿದ್ಧಾಂತಗಳನ್ನು ರೂಪಿಸಲು ಹಿಂಜರಿಯಲಿಲ್ಲ. ಸ್ವಯಂ-ವಿಶ್ಲೇಷಣೆಗಳ ಅಂಶಗಳನ್ನು ‘ವಸ್ತುನಿಷ್ಠ’ ಸಂಗತಿಗಳೆಂದು ಮರೆಮಾಚಿದರೆಂದು, ತಮ್ಮ ಮೂಲಗಳನ್ನು ಮರೆಮಾಡಿದರೆಂದು, ತನ್ನ ಕೆಲ ವಿಶ್ಲೇಷಣೆಗಳನ್ನು ಅನುಕೂಲರೀತಿಯಲ್ಲಿ ಹಿಂದಿನದೆಂಬಂತೆ ಬಿಂಬಿಸಿದರೆಂದು, ಕೆಲವೊಮ್ಮೆ ತಾನೇ ಮಾಡಿದ ‘ಮುಕ್ತ ಸಾಹಚರ್ಯಗಳನ್ನು’ ತನ್ನ ರೋಗಿಗಳು ಮಾಡಿದ್ದೆಂದು ಆರೋಪಿಸಿದರೆಂದು, ತನ್ನ ಚಿಕಿತ್ಸೆಯ ಯಶಸ್ಸಿಗೆ ತಾನೇ ವಿಪರೀತ ಪ್ರಚಾರ ನೀಡಿದರೆಂದು, ಹಾಗೂ ತನ್ನ ವಿರೋಧಿಗಳನ್ನು ನಿಂದಿಸಿದರೆಂದು" ಬರೆದಿದ್ದರು.[೪೭]

ಜಾಕ್ವಿಸ್‌ ಲಕಾನ್‌ರು ರೋಗಲಕ್ಷಣ ಶಾಸ್ತ್ರದ ಬಳಕೆಯನ್ನು ಹಾಗೂ ಅದರ ಮೂಲಕ ವ್ಯಕ್ತಿಯ ರೋಗ ನಿವಾರಣೆಯ ಪ್ರಯತ್ನವನ್ನು ಅಮೇರಿಕನ್‌ ಅಹಂ ಮನಶ್ಶಾಸ್ತ್ರದ ಲಕ್ಷಣಗಳನ್ನು ಹೊಂದಿದೆಯೇ ಹೊರತು ಸರಿಯಾದ ಮನೋವಿಶ್ಲೇಷಣೆಯಲ್ಲ ಎಂಬ ಭಾವನೆ ಹೊಂದಿದ್ದರು. ಲಕಾನ್‌ರ ಪ್ರಕಾರ, ಮನೋವಿಶ್ಲೇಷಣೆಯು "ಸ್ವಯಂ-ಶೋಧನೆ" ಮತ್ತು ಸಾಮಾಜಿಕ ವಿಮರ್ಶೆಯನ್ನು ಹೊಂದಿರುತ್ತದೆ ಹಾಗೂ ಅದು ವಿಮೋಚಕವಾದ ಸ್ವಯಂ-ಅರಿವನ್ನು ನೀಡಿದರೆ ಅಷ್ಟರಮಟ್ಟಿಗೆ ಅದು ಯಶಸ್ಸನ್ನು ಕಂಡಂತೆ.[೪೮]

ಡೇವಿಡ್‌ ಸ್ಟಾಫರ್ಡ್‌-ಕ್ಲಾರ್ಕ್‌ ಫ್ರಾಯ್ಡ್‌ರ‌ ಬಗೆಗಿನ ವಿಮರ್ಶೆಯನ್ನು ಸಾರೀಕರಿಸಿ : "ಮನೋವಿಶ್ಲೇಷಣೆಯು ಫ್ರಾಯ್ಡ್‌ರ ಮೂಲ ಸೃಷ್ಟಿಯಾಗಿತ್ತು ಹಾಗೂ ಸೃಷ್ಟಿಯಾಗಿಯೇ ಇರುತ್ತದೆ. ಅದರ ಅವಿಷ್ಕಾರ,ಶೋಧನೆ, ಪರಿಶೀಲನೆ ಮತ್ತು ನಿರಂತರ ಪರಿಷ್ಕರಣೆ ಆತನ ಜೀವಿತಾವಧಿಯ ಸಾಧನೆ. ಮನೋವಿಶ್ಲೇಷಣೆಯನ್ನು ಪ್ರಶಂಸಿಸಿಯೂ 'ಫ್ರಾಯ್ಡ್‌ರನ್ನು ವಿಪರೀತ ದೂರವಿಟ್ಟು' ಬಳಸುವುದು ವ್ಯಕ್ತ ಅನ್ಯಾಯ ಹಾಗೂ ಉದ್ದೇಶಪೂರ್ವಕ ಹೀಗಳೆತವಾಗುತ್ತದೆ" ಎಂದರು.[೪೯] ಇದು ವಿಕಸನವಾದವನ್ನು ಪುರಸ್ಕರಿಸಿ ; 'ಡಾರ್ವಿನ್‌ರನ್ನು ವಿಪರೀತ ದೂರವಿಟ್ಟಂತೆ'. ಮನೋವಿಶ್ಲೇಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದರೆ, ಪ್ರಾಮಾಣಿಕವಾಗಿ ಮತ್ತು ಅಷ್ಟೇ ವಸ್ತುನಿಷ್ಠವಾಗಿ ಸಿಗ್ಮಂಡ್‌ ಫ್ರಾಯ್ಡ್‌ರ ಮೂಲ ಸಿದ್ಧಾಂತಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು‌.

ತತ್ವಜ್ಞಾನ

ಬದಲಾಯಿಸಿ

ಫ್ರಾಯ್ಡ್‌ರು ತಮ್ಮನ್ನು ತತ್ವಜ್ಞಾನಿಯೆಂದು ಪರಿಗಣಿಸುತ್ತಿರಲಿಲ್ಲ, ಆದರೆ ಫ್ರಾನ್ಜ್‌ ಬ್ರೆಂಟಾನೋರನ್ನು ಅವರ ಗ್ರಹಿಕೆಯ ಸಿದ್ಧಾಂತಕ್ಕಾಗಿ, ಹಾಗೂ ಉಪಪ್ರಜ್ಞೆ ಮತ್ತು ತಾದಾತ್ಮತೆ ಕಲ್ಪನೆಗಳ ಪ್ರಮುಖ ಬೆಂಬಲಿಗರಾಗಿದ್ದ ಥಿಯೋಡಾರ್‌ ಲಿಪ್ಸ್‌‌ರನ್ನು ಬಹಳ ಮೆಚ್ಚುತ್ತಿದ್ದರು.[೫೦] ತಮ್ಮ ೧೯೩೨ರ "ಎ ಫಿಲಾಸಫಿ ಆಫ್‌ ಲೈಫ್‌" ಎಂಬ ಮನೋವಿಶ್ಲೇಷಣೆಯ ಮೇಲಿನ ಉಪನ್ಯಾಸದಲ್ಲಿ ಫ್ರಾಯ್ಡ್‌ರು ವಿಜ್ಞಾನ ಮತ್ತು ತತ್ವಶಾಸ್ತ್ರಗಳ ನಡುವಿನ ವ್ಯತ್ಯಾಸದ ಬಗ್ಗೆ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು:

ತತ್ವಶಾಸ್ತ್ರವು ವಿಜ್ಞಾನಕ್ಕೆ ವಿರುದ್ಧವಲ್ಲ, ಅದು ವಿಜ್ಞಾನದಂತೆಯೇ ವರ್ತಿಸುತ್ತದೆ ಹಾಗೂ ನಿರ್ದಿಷ್ಟ ಮಿತಿಯವರೆಗೆ ಅದೇ ವಿಧಾನಗಳನ್ನು ಬಳಸುತ್ತದೆ; ಆದರೆ ವಿಜ್ಞಾನದೊಂದಿಗಿನ ಸಹವಾಸವನ್ನು ಬ್ರಹ್ಮಾಂಡದ ಸಂಪೂರ್ಣ ಹಾಗೂ ಸುಸಂಬದ್ಧ ಚಿತ್ರಣವನ್ನು ನೀಡಬಲ್ಲದೆಂಬ ಅಭಿಪ್ರಾಯಕ್ಕೆ ಅಂಟಿಕೊಳ್ಳುವುದರ ಮೂಲಕ ತೊರೆಯುತ್ತದೆ, ವಾಸ್ತವವಾಗಿ ನಮ್ಮ ಜ್ಞಾನದ ಪ್ರತಿ ಮುನ್ನಡೆಯ ಅಗತ್ಯಗಳಿಗೆ ಆ ಚಿತ್ರಣವು ಸರಿಹೊಂದಬೇಕಿರುತ್ತದೆ. ಅದರ ಕ್ರಮಶಾಸ್ತ್ರೀಯ ತಪ್ಪೇನೆಂದರೆ ನಮ್ಮ ತಾರ್ಕಿಕ ಪ್ರಕ್ರಿಯೆಗಳ ಜ್ಞಾನಮೀಮಾಂಸಕ ಮೌಲ್ಯಕ್ಕೆ ವಿಪರೀತ ಮಹತ್ವವನ್ನು ನೀಡುತ್ತದೆ ಹಾಗೂ ನಿರ್ದಿಷ್ಟ ಹಂತದವರೆಗೆ ಅಂತರ್ದೃಷ್ಟಿಯಂತಹಾ ಇತರೆ ಜ್ಞಾನಮೂಲಗಳ ಕ್ರಮಬದ್ಧತೆಯನ್ನು ಒಪ್ಪಿಕೊಳ್ಳುತ್ತದೆ.[೫೧]

ಫ್ರಾಯ್ಡ್‌ರ ಮನಸ್ಸಿನ ಮಾದರಿಯು, ಆಧುನಿಕ ತತ್ವಶಾಸ್ತ್ರದ ಪ್ರಮುಖ ಅಂಶವಾದ ‌ತರ್ಕಬದ್ಧ ವ್ಯವಸ್ಥೆಯ ಜ್ಞಾನೋದಯದ ಮಾದರಿಯನ್ನು ವಿರೋಧಿಸುವಂತೆ ಕಂಡುಬರುತ್ತದೆ. ಫ್ರಾಯ್ಡ್‌ರ ಸಿದ್ಧಾಂತಗಳು ಫ್ರಾಂಕ್‌ಫರ್ಟ್‌ ಪಂಥ ಹಾಗೂ ಕ್ರಾಂತಿ ಸಿದ್ಧಾಂತಗಳ ಮೇಲೆ ಪ್ರಚಂಡ ಪ್ರಭಾವ ಬೀರಿದ್ದವು. ಫ್ರೆಂಚ್‌ ಮನೋವಿಶ್ಲೇಷಕ ಜಾಕ್ವಿಸ್‌ ಲಕಾನ್‌ರ, "ರಿಟರ್ನ್‌ ಟು ಫ್ರಾಯ್ಡ್‌" ಕೃತಿಯ ನಂತರ, ಫ್ರಾಯ್ಡ್‌ರು ಕೆಲ ಫ್ರೆಂಚ್‌ ತತ್ವಶಾಸ್ತ್ರಜ್ಞರ ಮೇಲೆ ತೀವ್ರ ಪ್ರಭಾವ ಬೀರಿದ್ದರು.

ಫ್ರಾಯ್ಡ್‌ ‌ಒಮ್ಮೆ ಮುಕ್ತವಾಗಿ "ಆತನ ಅಂದಾಜುಗಳು ಮತ್ತು ಅಂತರ್ದೃಷ್ಟಿಯು ಅತ್ಯಂತ ಆಶ್ಚರ್ಯಪೂರ್ವಕವಾಗಿ ತೀವ್ರ ಮನೋವಿಶ್ಲೇಷಣೆಯ ನಂತರದ ಅಭಿಪ್ರಾಯಗಳೊಂದಿಗೆ ಹೋಲುತ್ತಿರುವುದರಿಂದ" ನೀಟ್ಷೆರ ಅಧ್ಯಯನವನ್ನು ದೂರವಿರಿಸುತ್ತಿರುವುದನ್ನು ಒಪ್ಪಿಕೊಂಡರು.[೫೨] ನೀಟ್ಷೆ, ಆದಾಗ್ಯೂ, 'ವೈಜ್ಞಾನಿಕ'ರುಗಳ, ತಂದೆಯ-ದೇವರ ಸಾವನ್ನು 'ರೋಗನಿದಾನ' ಮಾಡಿದ ನಂತರವೂ, ಪ್ರಾಣಿಗಳ ರೀತಿಯ ಬಯಕೆಗಳನ್ನು (ಅಥವಾ 'ಕಾಮೇಚ್ಛೆಯ ಶಕ್ತಿಗಳನ್ನು') ಊಹೆಯನ್ನು ಆಶ್ರಯಿಸಿ ಮಾನವಾಧ್ಯಾಯಿ ಫ್ರಾಯ್ಡ್‌ರು ಪ್ರತ್ಯಕ್ಷೀಕೃತ ಪ್ರಮಾಣದ ಮೂಲಕ ತಿರಸ್ಕರಿಸುವುದನ್ನು ಆಗ್ರಹಪೂರ್ವಕವಾಗಿ ತಿರಸ್ಕರಿಸಿದರು.

ವಿಜ್ಞಾನ

ಬದಲಾಯಿಸಿ

ಆಸ್ಟ್ರಿಯನ್‌-ಬ್ರಿಟಿಷ್‌ ಮೂಲದ ತತ್ವಶಾಸ್ತ್ರಜ್ಞ ಕಾರ್ಲ್ ಪಾಪ್ಪರ್‌ರು ಫ್ರಾಯ್ಡ್‌ರ ಮನೋವಿಶ್ಲೇಷಣೆಯ ಸಿದ್ಧಾಂತಗಳನ್ನು ಪರೀಕ್ಷಿಸಲಾಗದಂತಹಾ ರೀತಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವಾದಿಸಿದರು.[೫೩] ಅಮೇರಿಕದ ವಿಶ್ವವಿದ್ಯಾಲಯಗಳ ಮನೋವಿಜ್ಞಾನದ ಇಂದಿನ ವಿಭಾಗಗಳು, ವೈಜ್ಞಾನಿಕ ರೀತಿಯ ಯೋಜನೆಗಳ ಪರವಾಗಿದ್ದು, ಫ್ರಾಯ್ಡ್‌ ಸಿದ್ಧಾಂತಗಳನ್ನು ಅಮುಖ್ಯವಾಗಿಸಿ, ಬದಲಿಗೆ ಅವನ್ನು "ಸತ್ವವಿಲ್ಲದ ಹಾಗೂ ನಿರ್ಜೀವ" ಐತಿಹಾಸಿಕ ವಿಷಯವಾಗಿಸಲಾಗಿದೆ ಎಂಬುದು ಇತ್ತೀಚಿನ APA ಅಧ್ಯಯನದಲ್ಲಿ ಕಂಡುಬಂದಿದೆ.[೫೪] ಆದಾಗ್ಯೂ, ಇತ್ತೀಚೆಗೆ, ಉದಯೋನ್ಮುಖ ಕ್ಷೇತ್ರವಾದ ನರ-ಮನೋವಿಶ್ಲೇಷಣೆಯ ಸಂಶೋಧಕರು ಫ್ರಾಯ್ಡ್‌ರ‌ ಸಿದ್ಧಾಂತಗಳ ಪರವಾಗಿದ್ದು, ಕಾಮ, ಉತ್ತೇಜನಗಳು, ಸುಪ್ತಮನಸ್ಸು ಮತ್ತು ದಮನದಂತಹಾ ಫ್ರಾಯ್ಡ್‌ ಕಲ್ಪನೆಗಳಿಗೆ ಸಂಬಂಧಿತ ಮೆದುಳಿನ ರಚನೆಗಳನ್ನು ಸೂಚಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ದಕ್ಷಿಣ ಆಫ್ರಿಕಾದ ನರವಿಜ್ಞಾನ ತಜ್ಞ ಮಾರ್ಕ್‌ ಸಾಲ್ಮ್ಸ್‌ರಿಂದ,[೫೫] ಸ್ಥಾಪಿಸಲ್ಪಟ್ಟ ನರ-ಮನೋವಿಶ್ಲೇಷಣೆಯು ಆಲಿವರ್‌ ಸ್ಯಾಕ್ಸ್‌,[೫೬] ಜಾಕ್‌ ಪ್ಯಾಂಕ್‌ಸೆಪ್ಪ್‌,[೫೭] ಡಗ್ಲಾಸ್‌‌ ವಾಟ್‌, ಆಂಟೊನಿಯೋ ಡಮಾಸಿಯೋ,[೫೮] ಎರಿಕ್‌ ಕಾಂಡೆಲ್‌ , ಮತ್ತು ಜೋಸೆಫ್‌ E. ಲೆಡೌಕ್ಸ್‌ಗಳೂ ಸೇರಿದಂತೆ ಅನೇಕ ಸಂಶೋಧಕರಿಂದ ಬೆಂಬಲವನ್ನು ಪಡೆದಿದೆ.[೫೯]

ರೋಗಿಗಳು

ಬದಲಾಯಿಸಿ

ಫ್ರಾಯ್ಡ್‌ ‌ತಮ್ಮ ರೋಗ ಚರಿತ್ರೆಗಳಲ್ಲಿ ಮಿಥ್ಯಾನಾಮಗಳನ್ನು ಬಳಸಿದ್ದರು. ಪೀಟರ್‌ ಸ್ವೇಲ್ಸ್‌ರು ಕೇವಲ ತಮ್ಮ ಮಿಥ್ಯಾನಾಮಗಳಿಂದಲೇ ಗುರುತಿಸಲ್ಪಡುತ್ತಿದ್ದ ಅನೇಕರನ್ನು, ಅವರ ನಿಜ ಗುರುತನ್ನು ಪತ್ತೆಹಚ್ಚಿದ್ದರು. ಮಿಥ್ಯಾನಾಮಗಳಿಂದ ಗುರುತಿಸಲ್ಪಡುತ್ತಿದ್ದ ಕೆಲ ರೋಗಿಗಳೆಂದರೆ ಅನ್ನಾ O. (ಬರ್ತಾ ಪಾಪ್ಪೆನ್‌ಹೇಮ್‌, ೧೮೫೯–೧೯೩೬); ಕ್ಯಾಸಿಲೀ M. (ಅನ್ನಾ ವಾನ್‌ ಲೀಬೆನ್‌ ); ಡೋರಾ (ಇಡಾ ಬಾವರ್‌, ೧೮೮೨–೧೯೪೫); ಫ್ರೌ ಎಮ್ಮಿ ವಾನ್‌ N. (ಫ್ಯಾನ್ನಿ ಮೋಸರ್‌); ಫ್ರಾಲೀನ್‌ ಎಲಿಸಬೆತ್‌ ವಾನ್‌ R. (ಇಲೋನಾ ವೇಸ್ಸ್‌ );[೬೦] ಫ್ರಾಲೀನ್‌ ಕಥರೀನಾ (ಆರೆಲಿಯಾ ಕ್ರಾನ್ರಿಚ್‌ ); ಫ್ರಾಲೀನ್‌ ಲ್ಯೂಸಿ R.; ಲಿಟಲ್‌ ಹ್ಯಾನ್ಸ್‌ (ಹರ್ಬರ್ಟ್‌ ಗ್ರಾಫ್‌, ೧೯೦೩–೧೯೭೩); ರಾಟ್‌ ಮ್ಯಾನ್‌(ಅರ್ನೆಸ್ಟ್‌ ಲ್ಯಾನ್‌ಜರ್‌, ೧೮೭೮–೧೯೧೪); ಮತ್ತು ವೂಲ್ಫ್‌ ಮ್ಯಾನ್‌ (ಸರ್ಜೈ ಪಾಂಕೆಜೆಫ್‌, ೧೮೮೭–೧೯೭೯). ಇತರೆ ಪ್ರಸಿದ್ಧ ರೋಗಿಗಳೆಂದರೆ H.D. (೧೮೮೬–೧೯೬೧); ಎಮ್ಮಾ ಎಕ್‌ಸ್ಟೇನ್‌ (೧೮೬೫–೧೯೨೪); ಗುಸ್ತಾವ್‌ ಮಾಹ್ಲೆರ್‌ (೧೮೬೦–೧೯೧೧), ಇವರುಗಳೊಂದಿಗೆ ಫ್ರಾಯ್ಡ್‌ ಕೇವಲ ಒಮ್ಮೆ ಮಾತ್ರವೇ ವಿಸ್ತೃತವಾದ ಸಮಾಲೋಚನೆ ನಡೆಸಿದರು ಹಾಗೂ ರಾಜಕುಮಾರಿ ಮೇರಿ ಬೋನಾಪಾರ್ಟೆ.

ಪ್ರಕಟಿತವಾದ ಮನೋವಿಶ್ಲೇಷಣಾ ಅಧ್ಯಯನಕ್ಕೊಳಗಾದವರು ಆದರೆ ರೋಗಿಗಳಲ್ಲದವರೆಂದರೆ ಡೇನಿಯಲ್‌ ಪೌಲ್‌ ಷ್ರೆಬರ್‌ (೧೮೪೨–೧೯೧೧); ಗಿಯೋರ್ಡಾನೋ ಬ್ರೂನೋ, ವುಡ್ರೋ ವಿಲ್ಸನ್‌ (೧೮೫೬–೧೯೨೪) ಇವರುಗಳು ಮುಖ್ಯ ಲೇಖಕ ವಿಲಿಯಂ ಬುಲ್ಲಿಟ್ಟ್‌‌ರೊಂದಿಗೆ ಸಹಲೇಖಕರಾಗಿ ಫ್ರಾಯ್ಡ್‌ ಬರೆದ ವಿಶ್ಲೇಷಣೆಯ ವ್ಯಕ್ತಿಗಳು ; ಮೈಕೆಲೇಂಜೆಲೋರವರು ಫ್ರಾಯ್ಡ್‌ ತನ್ನ ಪ್ರಬಂಧ "ದ ಮೋಸೆಸ್‌ ಆಫ್‌ ಮೈಕೆಲೇಂಜೆಲೋ"ದಲ್ಲಿ ವಿಶ್ಲೇಷಿಸಿದ ವ್ಯಕ್ತಿ ; ಲಿಯೋನಾರ್ಡೋ ಡಾ ವಿನ್ಸಿ , ಫ್ರಾಯ್ಡ್‌ರ ಪುಸ್ತಕ, 'ಲಿಯೋನಾರ್ಡೋ ಡಾ ವಿನ್ಸಿ ಅಂಡ್‌ ಎ ಮೆಮರಿ ಆಫ್‌ ಹಿಸ್‌ ಚೈಲ್ಡ್‌ಹುಡ್ 'ನಲ್ಲಿ ವಿಶ್ಲೇಷಿತರಾದರು‌; ಮೋಸೆಸ್‌, ಫ್ರಾಯ್ಡ್‌ರ ಮೋಸೆಸ್‌ ಅಂಡ್‌ ಮಾನೋಥೀಯಿಸಂ ಪುಸ್ತಕದಲ್ಲಿ ; ಹಾಗೂ ಜೋಸೆಫ್‌ ಪಾಪ್ಪರ್‌-ಲಿಂಕೆಯುಸ್‌ರು, ಫ್ರಾಯ್ಡ್‌ರ ‌ಲೇಖನ, "ಜೋಸೆಫ್‌ ಪಾಪ್ಪರ್‌-ಲಿಂಕೆಯುಸ್‌ ಅಂಡ್‌ ದ ಥಿಯರಿ ಆಫ್‌ ಡ್ರೀಮ್ಸ್‌"ನಲ್ಲಿ ವಿಶ್ಲೇಷಿತರಾದರು.

ಗ್ರಂಥಸೂಚಿ

ಬದಲಾಯಿಸಿ

ಫ್ರಾಯ್ಡ್‌ರ ಪ್ರಮುಖ ಕೃತಿಗಳು

ಬದಲಾಯಿಸಿ

ಪತ್ರವ್ಯವಹಾರ

ಬದಲಾಯಿಸಿ

ಜೀವನಚರಿತ್ರೆಗಳು

ಬದಲಾಯಿಸಿ
  • ಹೆಲೆನ್‌ ವಾಕರ್‌ ಪೂನರ್‌, ಫ್ರಾಯ್ಡ್‌ ‌ : ಹಿಸ್‌ ಲೈಫ್‌ ಅಂಡ್‌ ಹಿಸ್‌ ಮೈಂಡ್‌ (೧೯೪೭)
  • ಅರ್ನೆಸ್ಟ್‌ ಜೋನ್ಸ್‌, ದ ಲೈಫ್‌ ಅಂಡ್‌ ವರ್ಕ್‌ ಆಫ್‌ ಸಿಗ್ಮಂಡ್‌ ಫ್ರಾಯ್ಡ್‌ , ೩ vols. (೧೯೫೩–೧೯೫೮)
  • ಹೆನ್ರಿ ಎಲ್ಲೆನ್‌ಬರ್ಗರ್‌, ದ ಡಿಸ್ಕವರಿ ಆಫ್‌ ದ ಅನ್‌ಕಾನ್ಷಿಯಸ್‌ (೧೯೭೦)
  • ಫ್ರಾಂಕ್‌ ಸುಲ್ಲೋವೆ, ಫ್ರಾಯ್ಡ್‌ ‌: ಬಯೋಲಜಿಸ್ಟ್‌ ಆಫ್‌ ದ ಮೈಂಡ್‌ (೧೯೭೯)
  • ಜೆಫ್ರೀ ಮೌಸ್ಸೆಫ್‌ ಮಾಸ್ಸನ್‌. ದ ಅಸಾಲ್ಟ್‌ ಆನ್‌ ಟ್ರುತ್‌ : ಫ್ರಾಯ್ಡ್‌ಸ್‌‌ ಸಪ್ರೆಷನ್‌ ಆಫ್‌ ದ ಸೆಡೆಕ್ಷನ್‌ ಥಿಯರಿ , ಬ್ಯಾಲಂಟೀನ್‌ ಬುಕ್ಸ್‌ (ನವೆಂಬರ್‌ ೨೦೦೩), ISBN ೦-೩೪೫-೪೫೨೭೯-೮
  • ಪೀಟರ್‌ ಗೇ, ಫ್ರಾಯ್ಡ್‌ ‌: ಎ ಲೈಫ್‌ ಫಾರ್‌ ಅವರ್‌ ಟೈಂ (ನ್ಯೂಯಾರ್ಕ್‌ : W. W. ನಾರ್ಟನ್‌ & ಕಂಪೆನಿ, ೧೯೮೮)
  • ಲೂಯಿಸ್‌ ಬ್ರೆಗರ್‌, ಫ್ರಾಯ್ಡ್‌ ‌: ಡಾರ್ಕ್‌ನೆಸ್‌ ಇನ್‌ ದ ಮಿಡ್ಸ್ಟ್‌ ಆಫ್‌ ವಿಷನ್‌ (ನ್ಯೂಯಾರ್ಕ್‌ : ವಿಲೇ, ೨೦೦೦), ISBN ೯೭೮-೦-೪೭೧-೦೭೮೫೮-೬

ಮಾಧ್ಯಮ ಪ್ರಸ್ತುತಿ

ಬದಲಾಯಿಸಿ

ಇದನ್ನೂ ನೋಡಿರಿ

ಬದಲಾಯಿಸಿ

ಉಲ್ಲೇಖಗಳು-ಆಕರಗಳು

ಬದಲಾಯಿಸಿ
  1. Rice, Emanuel (1990). Freud and Moses: The Long Journey Home. SUNY Press. pp. 9, 18, 34. ISBN 0791404536.
  2. Gresser, Moshe (1994). Dual Allegiance: Freud As a Modern Jew. SUNY Press. p. 225. ISBN 0791418111.
  3. Hergenhahn BR (2005). An introduction to the history of psychology. Belmont, CA, USA: Thomson Wadsworth. p. 475.
  4. ಹೋತೆರ್‌ಸಾಲ್ಲ್‌, D. ೧೯೯೫. ಹಿಸ್ಟರಿ ಆಫ್‌ ಸೈಕಾಲಜಿ , ೩ನೇ ed., ಮೆಕ್‌ಗ್ರಾ-ಹಿಲ್:NY
  5. ೫.೦ ೫.೧ Hall, Calvin, S. (1954). A Primer in Freudian Psychology. Meridian Book. ISBN 0452011833.{{cite book}}: CS1 maint: multiple names: authors list (link)
  6. Bowlby, John (1999). Attachment and Loss: Vol I, 2nd Ed. Basic Books. pp. 13–23. ISBN 0-465-00543-8.
  7. ಜೋಸೆಫ್‌ ಅಗ್ವಾಯೋ ಚಾರ್ಕೊಟ್‌ ಮತ್ತು ಫ್ರಾಯ್ಡ್‌ ‌: ಸಮ್‌ ಇಂಪ್ಲಿಕೇಷನ್ಸ್‌ ಆಫ್‌ ಲೇಟ್‌ 19ತ್‌ ಸೆಂಚುರಿ ಫ್ರೆಂಚ್‌ ಸೈಕಿಯಾಟ್ರಿ ಅಂಡ್‌ ಪಾಲಿಟಿಕ್ಸ್‌ ಫಾರ್‌ ದ ಆರಿಜಿನ್ಸ್‌ ಆಫ್‌ ಸೈಕೋಅನಾಲಿಸೀಸ್‌ (1986).ಸೈಕೋಅನಾಲಿಸಿಸ್‌ ಅಂಡ್‌ ಕಂಟೆಂಪೊರರಿ ಥಾಟ್‌, 9:223-260
  8. AnxietyConnection.com ಜೆರ್ರಿ ಕೆನ್ನಾರ್ಡ್‌ ಫ್ರಾಯ್ಡ್‌ 101: ಸೈಕೋಅನಾಲಿಸೀಸ್‌ ಟ್ಯೂಸ್‌ಡೇ, 12 ಫೆಬ್ರವರಿ 2008
  9. ಫ್ರಾಯ್ಡ್‌ಫೈಲ್‌ ಸಿಗ್ಮಂಡ್‌ ಫ್ರಾಯ್ಡ್‌ ‌ಲೈಫ್‌ ಅಂಡ್‌ ವರ್ಕ್‌ - ಜೀನ್‌-ಮಾರ್ಟಿನ್‌ ಚಾರ್ಕೊಟ್‌
  10. Gay, Peter (1988). Freud: A Life for Our Time. pp. 65–66.
  11. Gay, Peter (1988). Freud: A Life for Our Time. p. 76.
  12. ಹ್ಯಾನ್ಸ್‌‌ ಜರ್ಗೆನ್‌ ಐಸೆಂಕ್‌. ಡಿಕ್ಲೈನ್‌ ಅಂಡ್‌ ಫಾಲ್‌ ಆಫ್‌ ದ ಫ್ರಾಯ್ಡಿಯನ್‌ ಎಂಪೈರ್. ಟ್ರಾನ್ಸಾಕ್ಷನ್‌ ಪಬ್ಲಿಷರ್ಸ್‌‌. ೨೦೦೪, p೧೪೬
  13. Blumenthal, Ralph (24 December 2006). "Hotel log hints at desire that Freud didn't repress". International Herald Tribune. Archived from the original on 24 December 2006.
  14. "The Life of Sigmund Freud". WGBH Educational Foundation. 2004. Retrieved 2007-11-24.
  15. Gay, Peter (1999-03-29). "The TIME 100: Sigmund Freud". Time Inc. Archived from the original on 2008-03-07. Retrieved 2007-11-24.
  16. ದ ಕರೆಸ್ಪಾಂಡೆನ್ಸ್‌ ಆಫ್‌ ಸಿಗ್ಮಂಡ್‌ ಫ್ರಾಯ್ಡ್‌ ಅಂಡ್‌ ಸ್ಯಾಂಡರ್‌ ಫೆರೆನ್ಜಿ Archived 2008-03-21 ವೇಬ್ಯಾಕ್ ಮೆಷಿನ್ ನಲ್ಲಿ., ಸಂಪುಟ ೨, ೧೯೧೪-೧೯೧೯, ಸಿಗ್ಮಂಡ್‌ ಫ್ರಾಯ್ಡ್‌, ಸ್ಯಾಂಡರ್‌ ಫೆರೆನ್ಜಿ
  17. "Freud, Sigmund, quote: What progress..." Archived from the original on 2010-06-12. Retrieved 2010-01-03.
  18. Gay, Peter (1988). Freud: A Life for Our Time. New York: W. W. Norton & Company.
  19. ಲಂಡನ್‌ನ ಫ್ರಾಯ್ಡ್‌ ಸಂಗ್ರಹಾಲಯ www.freud.org.uk
  20. http://www.healthsystem.virginia.edu/internet/psych-training/seminars/history-of-psychiatry-೮-೦೪.pdf[ಶಾಶ್ವತವಾಗಿ ಮಡಿದ ಕೊಂಡಿ] - THE HISTORY OF PSYCHIATRY PGY II ಉಪನ್ಯಾಸ ೯/೧೮/೦೩ ಲ್ಯಾರಿ ಮರ್ಕೆಲ್‌ M.D., Ph.D.
  21. ಫ್ರಾಯ್ಡ್‌, S. (೧೯೪೦). ಆನ್‌ ಔಟ್‌ಲೈನ್‌ ಆಫ್‌ ಸೈಕೋ-ಅನಾಲಿಸಿಸ್. ದ ಸ್ಟ್ಯಾಂಡರ್ಡ್‌ ಎಡಿಷನ್‌ ಆಫ್‌ ದ ಕಂಪ್ಲೀಟ್‌ ಸೈಕೊಲಾಜಿಕಲ್‌ ವರ್ಕ್ಸ್‌ ಆಫ್‌ ‌ಸಿಗ್ಮಂಡ್‌ ಫ್ರಾಯ್ಡ್‌, ಸಂಪುಟ XXIII.
  22. ಕ್ರೇನ್‌ಫೀಲ್ಡ್‌‌, ಪೌಲ್‌ F. "ಬ್ರೂವರ್‌, ಜೋಸೆಫ್‌". ಇನ್‌ ಡಿಕ್ಷನರಿ ಆಫ್‌ ಸೈಂಟಿಫಿಕ್‌ ಬಯೋಗ್ರಫಿ , ಚಾರ್ಲ್ಸ್‌ ಕೌಲ್ಸ್ಟನ್‌ ಗಿಲ್ಲೆಸ್ಪಿರಿಂದ ಸಂಪಾದಿತ, vol. ೨. ನ್ಯೂಯಾರ್ಕ್‌ : ಚಾರ್ಲ್ಸ್‌ ಸ್ಕ್ರಿಬ್ನರ್ಸ್‌ ಸನ್ಸ್‌ , ೧೯೭೦
  23. ಫ್ರಾಯ್ಡ್‌, ಆಕರ ಆವೃತ್ತಿ , vol. ೭, ೧೯೦೬, p. ೨೭೪; S.E. ೧೪ , ೧೯೧೪, p. ೧೮; S.E. ೨೦ , ೧೯೨೫, p. ೩೪; S.E. ೨೨ , ೧೯೩೩, p. ೧೨೦; ಷಿಮೆಕ್, J.G. (೧೯೮೭), ಫ್ಯಾಕ್ಟ್‌ ಅಂಡ್‌ ಫ್ಯಾಂಟಸಿ ಇನ್‌ ದ ಸೆಡಕ್ಷನ್‌ ಥಿಯರಿ : ಎ ಹಿಸ್ಟಾರಿಕಲ್‌ ರಿವ್ಯೂ. ಜರ್ನಲ್‌ ಆಫ್‌ ದ ಅಮೇರಿಕನ್‌ ಸೈಕೋಅನಾಲಿಟಿಕ್‌ ಅಸೋಸಿಯೇಷನ್‌ , xxxv: ೯೩೭-೯೬೫; ಎಸ್ಟರ್‌ಸನ್‌, A. (೧೯೯೮), ಜೆಫ್ರೀ ಮ್ಯಾಸ್ಸನ್‌ ಅಂಡ್‌ ಫ್ರಾಯ್ಡ್‌ಸ್‌ ಸೆಡಕ್ಷನ್‌ ಥಿಯರಿ: ಎ ನ್ಯೂ ಫೇಬಲ್‌ ಬೇಸ್‌ಡ್‌ ಆನ್‌ ಓಲ್ಡ್‌ ಮಿಥ್ಸ್‌. ಹಿಸ್ಟರಿ ಆಫ್‌ ಹ್ಯೂಮನ್‌ ಸೈನ್ಸಸ್ , ೧೧ (೧), pp. ೧-೨೧. http://human-nature.com/esterson
  24. ಮ್ಯಾಸ್ಸನ್‌ (ed), ೧೯೮೫, pp. ೧೪೧, ೧೪೪. ಎಸ್ಟರ್‌ಸನ್‌, A. (೧೯೯೮), ಜೆಫ್ರೀ ಮ್ಯಾಸ್ಸನ್‌ ಅಂಡ್‌ ಫ್ರಾಯ್ಡ್‌ಸ್‌ ಸೆಡಕ್ಷನ್‌ ಥಿಯರಿ: ಎ ನ್ಯೂ ಫೇಬಲ್‌ ಬೇಸ್‌ಡ್‌ ಆನ್‌ ಓಲ್ಡ್‌ ಮಿಥ್ಸ್. ಹಿಸ್ಟರಿ ಆಫ್‌ ಹ್ಯೂಮನ್‌ ಸೈನ್ಸಸ್‌ , ೧೧ (೧), pp. 1-21 Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ..
  25. ಫ್ರಾಯ್ಡ್‌, S.E. ೩ , (೧೮೯೬a), (೧೮೯೬b), (೧೮೯೬c); ಇಸ್ರೇಲ್ಸ್, H. & ಷಾಟ್ಜ್‌ಮನ್, M. (೧೯೯೩), ದ ಸೆಡಕ್ಷನ್‌ ಥಿಯರಿ. ಹಿಸ್ಟರಿ ಆಫ್‌ ಸೈಕಿಯಾಟ್ರಿ , iv: ೨೩-೫೯; ಎಸ್ಟರ್‌ಸನ್‌, A. (೧೯೯೮).
  26. ಫ್ರಾಯ್ಡ್‌, S. (೧೮೯೬c). ದ ಎಟಿಯಾಲಜಿ ಆಫ್‌ ಹಿಸ್ಟೀರಿಯಾ. ಆಕರ ಆವೃತ್ತಿ , Vol. ೩, p. ೨೦೪; ಷಿಮೆಕ್, J. G. (೧೯೮೭). ಫ್ಯಾಕ್ಟ್‌ ಅಂಡ್‌ ಫ್ಯಾಂಟಸಿ ಇನ್‌ ದ ಸೆಡಕ್ಷನ್‌ ಥಿಯರಿ : ಎ ಹಿಸ್ಟಾರಿಕಲ್‌ ರಿವ್ಯೂ. ಜರ್ನಲ್‌ ಆಫ್‌ ದ ಅಮೇರಿಕನ್‌ ಸೈಕೋಅನಾಲಿಟಿಕ್‌ ಅಸೋಸಿಯೇಷನ್‌, xxxv: ೯೩೭-೬೫; ಟೋವ್ಸ್‌, J.E. (೧೯೯೧). ಹಿಸ್ಟಾರಿಸೈಜಿಂಗ್‌ ಸೈಕೋಅನಾಲಿಸಿಸ್‌: ಫ್ರಾಯ್ಡ್‌ ಇನ್‌ ಹಿಸ್‌ ಟೈಂ ಅಂಡ್‌ ಫಾರ್‌ ಅವರ್‌ ಟೈಂ‌, ಜರ್ನಲ್‌ ಆಫ್‌ ಮಾಡರ್ನ್‌ ಹಿಸ್ಟರಿ , vol. ೬೩ (pp. ೫೦೪-೫೪೫), p. ೫೧೦, n.೧೨; ಮೆಕ್‌ನಲ್ಲೀ, R.J. (೨೦೦೩), ರಿಮೆಂಬರಿಂಗ್‌ ಟ್ರಾಮಾ , ಹಾರ್ವರ್ಡ್‌ ವಿಶ್ವವಿದ್ಯಾಲಯ ಮುದ್ರಾಲಯ, pp. ೧೫೯-೧೬೯.
  27. ಫ್ರಾಯ್ಡ್‌, S.E. ೩ , ೧೮೯೬c, pp. ೨೦೪, ೨೧೧; ಷಿಮೆಕ್, J. G. (೧೯೮೭); ಎಸ್ಟರ್‌ಸನ್‌, A. (೧೯೯೮); ಐಸ್ಲರ್‌, ೨೦೦೧, p. ೧೧೪-೧೧೫; ಮೆಕ್‌ನಲ್ಲೀ, R.J. (೨೦೦೩).
  28. ಫ್ರಾಯ್ಡ್‌, S.E. ೩ , ೧೮೯೬c, pp. ೧೯೧-೧೯೩; ಸಿಯಾಫ್ಫಿ, F. (೧೯೯೮ [1973]). ವಾಸ್‌ ಫ್ರಾಯ್ಡ್‌ ‌ಎ ಲಯರ್‌‌? ಫ್ರಾಯ್ಡ್‌ ‌ಅಂಡ್‌ ದ ಕ್ವಶ್ಚನ್‌ ಆಫ್‌ ಸೂಡೋಸೈನ್ಸ್. ಷಿಕಾಗೋ : ಓಪನ್‌ ಕೋರ್ಟ್‌, pp. ೧೯೯-೨೦೪; ಷಿಮೆಕ್, J. G. (೧೯೮೭); ಎಸ್ಟರ್‌ಸನ್‌, A. (೧೯೯೮); ಮೆಕ್‌ನಲ್ಲೀ, (೨೦೦೩), pp, ೧೫೯-೧೬೯.
  29. ಬಾರ್ಚ್-ಜಾಕೊಬ್‌ಸೆನ್‌, M. (೧೯೯೬), ನ್ಯೂರೋಟಿಕಾ: ಫ್ರಾಯ್ಡ್‌ ‌ಅಂಡ್‌ ದ ಸೆಡಕ್ಷನ್‌ ಥಿಯರಿ . ಅಕ್ಟೋಬರ್‌ , vol. ೭೬, ವಸಂತ ಕಾಲ ೧೯೯೬, MIT, pp. ೧೫-೪೩; ಹರ್ಗೆನ್‌ಹಾಹ್ನ್‌, B.R. (೧೯೯೭), ಆನ್‌ ಇಂಟ್ರೊಡಕ್ಷನ್‌ ಟು ದ ಹಿಸ್ಟರಿ ಆಫ್‌ ಸೈಕಾಲಜಿ , ಪೆಸಿಫಿಕ್‌ ಗ್ರೋವ್‌, CA: ಬ್ರೂಕ್ಸ್‌ /ಕೋಲ್, pp. ೪೮೪-೪೮೫; ಎಸ್ಟರ್‌ಸನ್‌, A. (೨೦೦೨). ದ ಮಿಥ್‌ ಆಫ್‌ ಫ್ರಾಯ್ಡ್‌ಸ್‌ ಆಸ್ಟ್ರಾಸಿಸಂ ಬೈ ದ ಮೆಡಿಕಲ್‌ ಕಮ್ಯುನಿಟಿ ಇನ್‌ ೧೮೯೬-೧೯೦೫: ಜೆಫ್ರೀ ಮ್ಯಾಸ್ಸನ್‌ಸ್‌ ಅಸಾಲ್ಟ್‌ ಆನ್‌ ಟ್ರುತ್‌. ಹಿಸ್ಟರಿ ಆಫ್‌ ಸೈಕಾಲಜಿ , ೫(೨), pp. 115-134 Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.
  30. ಮಾಸ್ಸನ್‌, ಜೆಫ್ರೀ ಮೌಸ್ಸೆಫ್‌, ದ ಅಸಾಲ್ಟ್‌ ಆನ್‌ ಟ್ರುತ್: ಫ್ರಾಯ್ಡ್‌ಸ್‌ ಸಪ್ರೆಷನ್‌ ಆಫ್‌ ದ ಸೆಡಕ್ಷನ್‌ ಥಿಯರಿ, pp. ೨೩೩-೨೫೦
  31. ನೋಡಿ ಬಾರ್ಚ್-ಜಾಕೊಬ್‌ಸೆನ್‌ (2001)
  32. Scheidt, Jürgen vom (1973). "Sigmund Freud and cocaine". Psyche: 385–430.
  33. ವಿಲಿಯಂ ಜೇಮ್ಸ್‌, ದ ಪ್ರಿನ್ಸಿಪಲ್ಸ್‌ ಆಫ್‌ ಸೈಕಾಲಜಿ , ೨ vols. (ಹೆನ್ರಿ ಹೋಲ್ಟ್‌ & Co, ೧೮೯೦) ಡೋವರ್‌ ಪಬ್ಲಿಕೇಷನ್ಸ್‌ ೧೯೫೦, vol. ೧: ISBN ೦-೪೮೬-೨೦೩೮೧-೬, vol. ೨: ISBN ೦-೪೮೬-೨೦೩೮೨-೪
  34. Altschule, M (1977). Origins of Concepts in Human Behavior. New York: Wiley. p. 199.]
  35. Freud: A Life for Our Time. p. 95.
  36. Barlow DH, Durand VM (2005). Abnormal psychology: an integrative approach (5th ed.). Belmont, CA, USA: Thomson Wadsworth. pp. 18–21.
  37. Robinson-Riegler G, Robinson-Riegler B (2008). Cognitive psychology: Applying the science of the mind (2nd ed.). Boston, MA, USA: Pearson Education. pp. 278–284.
  38. ಝಿಲ್‌ಬೋರ್ಗ್,Beyond the Pleasure Principle. pp. xxvii.
  39. Kovel, Joel (1991). A Complete Guide to Therapy: From Psychoanalysis to Behaviour Modification. pp. 188–198.
  40. Rosen, R. D. (1977). Psychobabble: Fast Talk and Quick Cure in the Era of Feeling. pp. 154–217.
  41. Pendergrast, Mark (1995). Victims of Memory: Incest Accusations and Shattered Lives. pp. 442–443.
  42. ಐಸೆಂಕ್‌, ಹ್ಯಾನ್ಸ್‌‌, ಡಿಕ್ಲೈನ್‌ ಅಂಡ್‌ ಫಾಲ್‌ ಆಫ್‌ ದ ಫ್ರಾಯ್ಡಿಯನ್‌ ಎಂಪೈರ್ (ಹಾರ್ಮಂಡ್ಸ್‌‌ವರ್ತ್‌ : ಪೆಲಿಕನ್‌, ೧೯೮೬)
  43. Friedan, Betty (1963). The Feminine Mystique. W.W. Norton. pp. 166–194. ISBN 0-393-32257-2.
  44. Millett, Kate, 1970 (2000). Sexual Politics. University of Chicago Press. pp. 179–180. {{cite book}}: |first= has numeric name (help)
  45. Millett, Kate, 1970 (2000). Sexual Politics. University of Chicago Press. pp. 176–203. {{cite book}}: |first= has numeric name (help)
  46. Weisstein, Naomi in Miriam Schneir (ed.) (1994). Feminism in Our Time. Vintage. p. 219–220. ISBN 0-679-74508-4. {{cite book}}: |author= has generic name (help)
  47. ಹೌ ಫ್ಯಾಬ್ರಿಕೇಷನ್ಸ್‌ ಡಿಫರ್‌ ಫ್ರಂ ಎ ಲೈ
  48. Ashley D, Orenstein DM (2005). Sociological theory: Classical statements (6th ed.). Boston, MA, USA: Pearson Education. p. 312.
  49. Stafford-Clark, David (1965). What Freud Really Said. Pelican books. p. 19. ISBN 0140208771.
  50. Pigman, G.W. (1995). "Freud and the history of empathy". The International journal of psycho-analysis. 76 (Pt 2): 237–56. {{cite journal}}: Unknown parameter |month= ignored (help)
  51. ಸಿಗ್ಮಂಡ್‌ ಫ್ರಾಯ್ಡ್‌‌, ಮಾನಸಿಕ -ವಿಶ್ಲೇಷಣೆಯ ಬಗ್ಗೆ ಪರಿಚಯಾತ್ಮಕ ಉಪನ್ಯಾಸಗಳು (೧೯೩೩)
  52. Freud, Sigmund (1924). Autobiography. W.W.Norton and Company.
  53. ಕಾರ್ಲ್ ಪಾಪ್ಪರ್‌, ಕಂಜೆಕ್ಚರ್ಸ್‌ ಅಂಡ್‌ ರೆಫ್ಯುಟೇಷನ್ಸ್‌, ಲಂಡನ್‌ : ರೂಟ್‌ಲೆಡ್ಜ್‌ ಮತ್ತು ಕೆಗನ್‌ ಪೌಲ್‌ , ೧೯೬೩, pp. ೩೩-೩೯; ಥಿಯೋಡೋರ್‌ ಷಿಕ್‌ನಿಂದ, ed., ರೀಡಿಂಗ್ಸ್‌‌ ಇನ್‌ ದ ಫಿಲಾಸಫಿ ಆಫ್‌ ಸೈನ್ಸ್‌, ಮೌಂಟೆನ್‌ವ್ಯೂ, CA: ಮೇಫೀಲ್ಡ್‌ ಪಬ್ಲಿಷಿಂಗ್‌ ಕಂಪೆನಿ, ೨೦೦೦, pp. ೯-೧೩. [೧]
  54. ಅಮೇರಿಕನ್‌ ಸೈಕೋಅನಾಲಿಟಿಕ್‌ ಅಸೋಸಿಯೇಷನ್ ಜೂನ್‌ ೨೦೦೮ರ ಅಧ್ಯಯನ, ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿ ವರದಿಯಾದ ಹಾಗೆ , "ಫ್ರಾಯ್ಡ್‌ ‌ಈಸ್‌ ವೈಡ್ಲಿ ಟಾಟ್‌ ಇನ್‌ ಯೂನಿವರ್ಸಿಟೀಸ್‌, ಎಕ್ಸೆಪ್ಟ್‌ ಇನ್‌ ಸೈಕಾಲಜಿ ಡಿಪಾರ್ಟ್‌ಮೆಂಟ್‌" ಪೆಟ್ರೀಷಿಯಾ ಕೋಹೆನ್‌ರಿಂದ, ನವೆಂಬರ್‌ ೨೫, ೨೦೦೭. "[[[ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯ|[ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ]] ಮನಶ್ಸಾಸ್ತ್ರ ವಿಭಾಗದ ಅಧ್ಯಕ್ಷ Dr. ಅಲೈಸ್‌] "...ಮನಶ್ಶಾಸ್ತ್ರದ ಬಹಳಷ್ಟು ಶಾಖೆಗಳು ತಮ್ಮ ವಿಧಾನದ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸುವ ಬಗ್ಗೆ ಹೆಚ್ಚಿನ ಗಮನ ನೀಡುತ್ತಿರುವ ಸಮಯದಲ್ಲಿ, 'ಮಾನಸಿಕವಿಶ್ಲೇಷಕರು ಅದೇ ರೀತಿಯ ಸಾಕ್ಷಾಧಾರಿತ ತಳಹದಿಯನ್ನು ಅಭಿವೃದ್ಧಿಪಡಿಸಿಲ್ಲ.' ಅದರ ಪರಿಣಾಮವಾಗಿ ಬಹಳಷ್ಟು ಮನಶ್ಶಾಸ್ತ್ರದ ವಿಭಾಗಗಳು ಮಾನಸಿಕ ವಿಶ್ಲೇಷಣೆಯ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ" ಎಂದು ಈಗ್ಲಿ ಹೇಳಿದರು.
  55. ಕಪ್ಲನ್‌-ಸಾಲ್ಮ್ಸ್, K., & ಸಾಲ್ಮ್ಸ್‌, M. (೨೦೦೦). ಕ್ಲಿನಿಕಲ್‌ ಸ್ಟಡೀಸ್‌ ಇನ್‌ ನ್ಯೂರೋ-ಸೈಕೋಅನಾಲಿಸಿಸ್‌ : ಇಂಟ್ರೊಡಕ್ಷನ್‌ ಟು ಎ ಡೆಪ್ತ್‌ ನ್ಯೂರೋಸೈಕಾಲಜಿ. ಲಂಡನ್‌: ಕಾರ್ನಾಕ್‌ ಬುಕ್ಸ್.ಸಾಲ್ಮ್ಸ್‌, M., & ಟರ್ನ್‌ಬುಲ್, O. (೨೦೦೨). ದ ಬ್ರೈನ್‌ ಅಂಡ್‌ ದ ಇನ್ನರ್‌ ವರ್ಲ್ಡ್‌ : ಆನ್‌ ಇಂಟ್ರೊಡಕ್ಷನ್‌ ಟೊ ದ ನ್ಯೂರೋಸೈನ್ಸ್‌ ಆಫ್‌ ಸಬ್ಜೆಕ್ಟೀವ್‌ ಎಕ್ಸ್‌ಪೀರಿಯೆನ್ಸ್. ನ್ಯೂಯಾರ್ಕ್‌ :ಇತರೆ ಮುದ್ರಾಲಯ
  56. ಸ್ಯಾಕ್ಸ್‌‌, O. (೧೯೮೪). ಎ ಲೆಗ್‌ ಟು ಸ್ಟ್ಯಾಂಡ್‌ ಆನ್‌. ನ್ಯೂಯಾರ್ಕ್‌ : ಸಮ್ಮಿಟ್‌ ಬುಕ್ಸ್‌‌/ಸಿಮನ್‌ ಮತ್ತು ಷೂಸ್ಟರ್‌.
  57. ಪ್ಯಾಂಕ್‌ಸೆಪ್ಪ್, J. (೧೯೯೮). ಅಫೆಕ್ಟೀವ್‌ ನ್ಯೂರೋಸೈನ್ಸ್‌ : ದ ಫೌಂಡೇಷನ್ಸ್‌ ಆಫ್‌ ಹ್ಯೂಮನ್‌ ಅಂಡ್‌ ಅನಿಮಲ್‌ ಇಮೋಷನ್ಸ್. ನ್ಯೂಯಾರ್ಕ್‌ ಮತ್ತು ಆಕ್ಸ್‌‌ಫರ್ಡ್‌ : ಆಕ್ಸ್‌‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಾಲಯ.
  58. ಡೆಸ್ಕಾರ್ಟೆಸ್‌ ಎರರ್‌: ಇಮೋಷನ್‌, ರೀಸನ್‌, ಅಂಡ್‌ ದ ಹ್ಯೂಮನ್‌ ಬ್ರೇನ್ ‌, ೧೯೯೪; ದ ಸೊಮಾಟಿಕ್‌ ಮಾರ್ಕರ್‌ ಹೈಪೋಥೀಸಿಸ್‌ ಅಂಡ್‌ ದ ಪಾಸಿಬಲ್‌ ಫಂಕ್ಷನ್ಸ್‌ ಆಫ್‌ ದ ಪ್ರಿಫ್ರಂಟಲ್‌ ಕಾರ್ಟೆಕ್ಸ್‌ , ೧೯೯೬; ದ ಫೀಲಿಂಗ್‌ ಆಫ್‌ ವಾಟ್‌ ಹ್ಯಾಪನ್ಸ್‌: ಬಾಡಿ ಅಂಡ್‌ ಇಮೋಷನ್‌ ಇನ್‌ ದ ಮೇಕಿಂಗ್‌ ಆಫ್‌ ಕಾನ್‌ಷಿಯಸ್‌ನೆಸ್ ‌, ೧೯೯೯; ಲುಕಿಂಗ್‌ ಫಾರ್‌ ಸ್ಪಿನೋಜಾ : ಜಾಯ್‌, ಸಾರೋ ಅಂಡ್‌ ದ ಫೀಲಿಂಗ್‌ ಬ್ರೇನ್ ‌}, ೨೦೦೩
  59. ದ ಇಮೋಷನಲ್‌ ಬ್ರೇನ್‌ : ದ ಮಿಸ್ಟೀರಿಯಸ್‌ ಅಂಡರ್‌ಪಿನ್ನಿಂಗ್ಸ್‌ ಆಫ್‌ ಇಮೋಷನಲ್‌ ಲೈಫ್ , ೧೯೯೬, ಸೈಮನ್‌ & ಷೂಸ್ಟರ್, ೧೯೯೮ ಟಚ್‌ಸ್ಟೋನ್‌ ಆವೃತ್ತಿ: ISBN ೦-೬೮೪-೮೩೬೫೯-೯
  60. Appignanesi & Forrester (1992). Freud's Women. p. 108.

ಹೊರಗಿನ ಕೊಂಡಿಗಳು

ಬದಲಾಯಿಸಿ
Awards and achievements
ಪೂರ್ವಾಧಿಕಾರಿ
Patrick Hastings
Cover of Time Magazine
27 October 1924
ಉತ್ತರಾಧಿಕಾರಿ
Thomas Lipton