ಡಾ.ಬೇಲೂರು ರಘುನಂದನ್ ಅವರು ಒಬ್ಬ ಕವಿ ಮತ್ತು ನಾಟಕಕಾರರು. ಅವರು ಕಾವ್ಯ, ಮಕ್ಕಳ ಸಾಹಿತ್ಯ, ನಾಟಕ, ಕಥೆಗಳು, ಅಂಕಣ ಬರಹ, ಪ್ರವಾಸ ಸಾಹಿತ್ಯ ಮತ್ತು ಸಂಶೋಧನಾ ಬರಹಗಳನ್ನು ಬರೆಯುತ್ತಾರೆ. [][][][]

ರಘುನಂದನ್. ಬಿ. ಆರ್
ಬೇಲೂರು
Born೨೧ ಮೇ ೧೯೮೨ (೪೨ ವರ್ಷ)
Citizenshipಭಾರತೀಯ
Educationಎಂ ಎ, ಎಂ.ಫಿಲ್, ಪಿಎಚ್.ಡಿ, ಡಿ. ಲಿಟ್
Occupationಸಹ ಪ್ರಾಧ್ಯಾಪಕರು
Known forನಾಟಕಕಾರ, ರಂಗನಿರ್ದೇಶಕ, ಸಾಹಿತಿ ಮತ್ತು ಕವಿ
Board member ofಮಾಜಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರು - ೨೦೧೭
Spouseಲಕ್ಷ್ಮೀ ರಘುನಂದನ್
Childrenಗೋಕುಲ ಸಹೃದಯ, ಉದಯ ರವಿ
Parents
  • ರಮೇಶ್ (father)
  • ಸುಬ್ಬಲಕ್ಷ್ಮಿ. ಸಿ (mother)
Awardsಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2022 - ಕೇಂದ್ರ ಸಂಗೀತ ನಾಟಕ ಅಕಾಡೆಮಿ, ನವ ದೆಹಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ - 2022

ಬೇಲೂರು ರಘುನಂದನ್ ಅವರು ಸುಬ್ಬಲಕ್ಷ್ಮಿ ಮತ್ತು ರಮೇಶ್ ದಂಪತಿಯ ಹಿರಿಯ ಮಗನಾಗಿ, ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದರು. ಇವರಿಗೆ ಒಬ್ಬ ಸೋದರಿ ಹಾಗೂ ಸೋದರ ಇದ್ದಾರೆ.

ಬೇಲೂರು ರಘುನಂದನ್, ಅವರ ಸೋದರಿಯ ಹೆಸರಿನೊಂದಿಗೆ 'ಶ್ವೇತಪ್ರಿಯ ಗುರುವೆ' ಎಂಬ ಅಂಕಿತದೊಂದಿಗೆ ನಾಲ್ಕು ನೂರಕ್ಕೂ ಹೆಚ್ಚು ಕಟ್ಟುಪದಗಳನ್ನು (ವಚನ) ರಚಿಸಿದ್ದಾರೆ. ಇವರ ಬಾಲ್ಯದ ಅನುಭವಗಳು ಚಿಟ್ಟೆ ನಾಟಕದಲ್ಲಿ ಪ್ರಕಟಗೊಂಡಿವೆ.

ಶಿಕ್ಷಣ

ಬದಲಾಯಿಸಿ

ಇವರು ಬೇಲೂರಿನ ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದರು.

ಇವರು ರಾಷ್ಟ್ರಕವಿ ಕೆ.ವಿ ಪುಟ್ಟಪ್ಪ ಚಿನ್ನದ ಪದಕ, ಡಾ. ಚದುರಂಗ ಸುಬ್ರಮಣ್ಯ ರಾಜೇ ಅರಸ್ ಚಿನ್ನದ ಪದಕ ಮತ್ತು ಶ್ರೀಮತಿ ಎಚ್.ಎಲ್ ನಾಗರತ್ನಮ್ಮ, ಶ್ರೀ ಲಕ್ಷ್ಮಣ ಶೆಟ್ಟಿ ಚಿನ್ನದ ಪದಕಗಳೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ಧಿ ನಾಟಕಗಳು: ಒಂದು ಅಧ್ಯಯನ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಹಾಗೂ ಕನ್ನಡ ರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.

ವೃತ್ತಿ ಜೀವನ

ಬದಲಾಯಿಸಿ

ಇವರು ಬೇಲೂರಿನ ಶಾಂತಲ ಪದವಿ ಕಾಲೇಜು, ಹೊಯ್ಸಳ ಕಾಲೇಜು ಮತ್ತು ಸರ್ವೋದಯ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ ನಂತರ ೨೦೦೯ ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಗೆ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದರು. ಒಂದು ವರ್ಷ ಉದಯ ಟಿ.ವಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿ ಹಾಗೂ ಬೆಂಗಳೂರಿನ ಕೆನರಾ ಬ್ಯಾಂಕ್ ಲೇಔಟ್ ನಲ್ಲಿರುವ ಅರಬಿಂದೊ ಶಾಲೆಯಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರನ್ನು ೨೦೧೭ ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ.

೨೦೦೯ ರಲ್ಲಿ ಸಾಹಿತ್ಯ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಿಗೆ ಕೆಲಸ ಮಾಡಲು ಕಾಜಾಣ ಬಳಗವನ್ನು ಪ್ರಾರಂಭಿಸಿದರು. ಇದು ಕಾವ್ಯ ಕಮ್ಮಟ, ಪುಸ್ತಕ ಪ್ರಕಟಣೆ, ರಂಗ ಕಮ್ಮಟ, ಚಿಣ್ಣರ ಕಾಜಾಣ, ಸಸ್ಯ ಕಾಜಾಣ, ಸಿನಿ ಕಾಜಾಣ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮಾಡುತ್ತದೆ.

 
ಕಾವ್ಯ ಕಾಜಾಣ, ಮಹಿಳಾ ಕವಿಗೋಷ್ಠಿ
 

ಕಾಜಾಣ ಪ್ರಕಾಶನವು ಇದುವರೆಗೂ ಕವಿತೆ, ಆತ್ಮಕತೆ, ವಿಮರ್ಶೆ, ಸಂಶೋಧನೆ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಪುಸ್ತಕಗಳನ್ನು ಹೊರ ತಂದಿದೆ.

ವೈಯಕ್ತಿಕ ಜೀವನ

ಬದಲಾಯಿಸಿ

ಬೇಲೂರು ರಘುನಂದನ್ ಅವರು ಲಕ್ಷ್ಮಿಯವರನ್ನು ವಿವಾಹವಾದರು. ಇವರಿಗೆ ಗೋಕುಲ ಸಹೃದಯ ಮತ್ತು ಉದಯರವಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಸಾಹಿತ್ಯ

ಬದಲಾಯಿಸಿ
  • ಶ್ವೇತಪ್ರಿಯ (೨೦೧೧) - ಶ್ವೇತಪ್ರಿಯ ಪ್ರಕಾಶನ ISBN-978-81-923791-0-4
  • ಕನ್ನಡಿ ಮುಂದೆ ನಿಂತಾಗ (೨೦೧೧) - ಶ್ವೇತಪ್ರಿಯ ಪ್ರಕಾಶನ ISBN-978-81-923791-1-1
  • ಕವಿಶೈಲದ ಕವಿತೆಗಳು (೨೦೧೨) - ಶ್ವೇತಪ್ರಿಯ ಪ್ರಕಾಶನ ISBN- 978-81-923791-2-8
  • ಹಸುರು (೨೦೧೨) - ಶ್ವೇತಪ್ರಿಯ ಪ್ರಕಾಶನ ISBN- 978-81-923791-3-5
  • ಸೊನ್ನೆಯಾಗುವ ಕಾಯ (೨೦೧೮) - ನವಸ್ಫೂರ್ತಿ ಪ್ರಕಾಶನ ISBN-978-81-939820-2-0
  • ರಾಗರಂಗ (ಈವರೆಗಿನ ರಂಗಗೀತೆಗಳು)
  • ಮಗ್ಗದ ಮನೆ

ಮಕ್ಕಳ ಸಾಹಿತ್ಯ

ಬದಲಾಯಿಸಿ
  • ಚಿನ್ನಾರಿಯ ಚಿತ್ರ (೨೦೧೨)
  • ನಿಸರ್ಗ ಮತ್ತು ಗುಬ್ಬಚ್ಚಿ (೨೦೧೪) - ಅಹರ್ಣಿಶಿ ಪ್ರಕಾಶನ ISBN- 978-93-84501075-05 []
  • ಹಾರುವ ಆನೆ
  • ಚಿಟ್ಟೆ ಮಕ್ಕಳ ನಾಟಕ

ಕಟ್ಟುಪದ

ಬದಲಾಯಿಸಿ
  • ನೂರೊಂದು ವಚನಗಳು (೨೦೧೨) - ಶ್ವೇತಪ್ರಿಯ ಪ್ರಕಾಶನ ISBN- 978-81-923791-42
  • ಅರಿವು ತೊರೆ (೨೦೧೩)
  • ಬೆತ್ತಲು (೨೦೧೪)
  • ಅಮ್ಮ (೨೦೧೪)
  • ಪದ ಪದ ಕಟ್ಟುಪದ

ಪ್ರವಾಸ ಸಾಹಿತ್ಯ

ಬದಲಾಯಿಸಿ
  • ಜೀವನ್ಮುಖಿ ತೀಸ್ತಾ (೨೦೧೬) - ಕರ್ನಾಟಕ ಸಾಹಿತ್ಯ ಅಕಾಡೆಮಿ ISBN-978-81-931964-7-2

ನಾಟಕ ಸಾಹಿತ್ಯ

ಬದಲಾಯಿಸಿ
  • ರಕ್ತವರ್ಣೆ (೨೦೧೬) - ಅವಿರತ ಪುಸ್ತಕ ISBN-978-93-837690-7-0[]
  • ಸಾಲುಮರಗಳ ತಾಯಿ ತಿಮ್ಮಕ್ಕ (೨೦೧೬)
  • ತಿಪ್ಪೇರುದ್ರ (೨೦೧೬)
  • ಭೂಮಿ
  • ರೂಪ ರೂಪಗಳನು ದಾಟಿ[]
  • ಬೊಂಬಾಯ್ ಮಿಠಾಯಿ, ಮಕ್ಕಳ ನಾಟಕ
  • ಬೆಳಕಿನ ಅಂಗಡಿ
  • ಮೋಹನ ತರಂಗಿಣಿ
  • ಶರ್ಮಿಷ್ಠೆ (ಏಕ ವ್ಯಕ್ತಿ ನಾಟಕ)
  • ರೂಬಿಕ್ಸ್ ಕ್ಯೂಬ್
  • ದಹನಾಗ್ನಿ
  • ತೊರೆದು ಜೀವಿಸಬಹುದೇ
  • ಆಯಾಮ
  • ಉಧೋ ಉಧೋ ಎಲ್ಲವ್ವ (ಜನಪದ ಏಕ ವ್ಯಕ್ತಿ ನಾಟಕ )
  • ಚಿಟ್ಟೆ (ಏಕ ವ್ಯಕ್ತಿ ನಾಟಕ)
  • ಗರ್ಭ
  • ಕ್ಲೀನ್ ಆಂಡ್ ಕ್ಲಿಯರ್ ಪಾಯಖಾನೆ
  • ಸಾಕುಮಗಳು
  • ವಿಧುರಾಶ್ವಥದ ವೀರಗಾಥೆ
  • ಗಾರ್ಗಿ
  • ಮುದ್ದು ಮಗಳೇ
  • ಲೆಟರ್ಸ್ ಟು ಡೆಥ್
  • ಅಕ್ಕಯ್
  • ವಿದಗ್ಧೆ
  • ಮಾತಾ
  • ನಗರ ಪೂಜೆ
  • ನಮ್ ಸ್ಕೂಲು
  • ಅಧಿನಾಯಕಿ
  • ಅಲೆಮಾರಿ ಭಾರತ
  • ಆ ಈ ಫ್ಯಾಮಿಲಿ
  • ಥೆರೇಸಮ್ಮ
  • ಪ್ರೇಮಮಯಿ ಹಿಡಿಂಬೆ
  • ಪಂಚವರ್ಣೆ
  • ಮೂಲ (ನೋವಿನಲ್ಲೂ ನಕ್ಕು ಬಿಡಿ)
  • ಪ್ರಾಣಿ ಪ್ರಪಂಚ

ಕಥಾ ಸಾಹಿತ್ಯ

ಬದಲಾಯಿಸಿ
  • ಅಪ್ಪ ಕಾಣೆಯಾಗಿದ್ದಾನೆ

ಅಂಕಣ ಬರಹ

ಬದಲಾಯಿಸಿ
  • ಉಮಾಸಿರಿ - ೨೦೧೫ (ಅವಧಿ ಅಂತರಜಾಲ ಪತ್ರಿಕೆಯಲ್ಲಿ ಪ್ರಕಟಗೊಂಡ ಸರಣಿ ಲೇಖನಗಳು)
  • ಚಿಣ್ಣರ ಅಂಗಳ (ಕನ್ನಡ ಮಾಣಿಕ್ಯ ಪತ್ರಿಕೆಗೆ ಬರೆದ ಅಂಕಣ)
  • ಬೇಂದ್ರೆ ನಾಟಕಗಳು (ಬುಕ್ ಬ್ರಹ್ಮ ಇ-ಪತ್ರಿಕೆಗೆ)[][][೧೦][೧೧][೧೨]
  • ಅನುಭೂತಿ - ವಿಜಯಕರ್ನಾಟಕ (ಭೋದಿ ವೃಕ್ಷ)

ಸಂಪಾದನೆ

ಬದಲಾಯಿಸಿ
  • ಕಿರಂ ಹೊಸಕವಿತೆ ಸಂಪುಟ ೧ (೨೦೧೭)
  • ಕಿರಂ ಹೊಸಕವಿತೆ ಸಂಪುಟ ೨ (೨೦೧೮)[೧೩]
  • ಕಾವ್ಯಯಾನ (ಎಚ್. ಎ. ಎಲ್ ಕನ್ನಡ ಸಂಘಕ್ಕೆ ಸಂಪಾದಿಸಿದ ಕಾವ್ಯ ಕೃತಿ)
  • ಹಸಿರ ಬನಿ (ಸಾಲುಮರದ ತಿಮ್ಮಕ್ಕನವರ ವ್ಯಕ್ತಿ ಚಿತ್ರ

ವಿಮರ್ಶೆ

ಬದಲಾಯಿಸಿ
  • ಕ್ರಿಯೆ ಪ್ರತಿಕ್ರಿಯೆ

ಪ್ರಶಸ್ತಿ - ಪುರಸ್ಕಾರಗಳು

ಬದಲಾಯಿಸಿ
  • ಕನ್ನಡ ಸಂಘರ್ಷ ಸಮಿತಿ ಕೊಡಮಾಡುವ ಚೊಚ್ಚಲ ಪ್ರಶಸ್ತಿ ಕುವೆಂಪು ಯುವಕವಿ ಪುರಸ್ಕಾರ (೨೦೧೧)
  • ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇವರು ನೀಡುವ, ಜ್ಯೋತಿ ಪುರಸ್ಕಾರ (೨೦೧೨)
  • ಅರಿವುತೊರೆ ಕಟ್ಟುಪದ ಸಂಕಲನಕ್ಕೆ ಧಾರವಾಡದ ಬೇಂದ್ರೆ ಪ್ರತಿಷ್ಠಾನ ಕೊಡಮಾಡುವ ಬೇಂದ್ರೆ ಗ್ರಂಥ ಬಹುಮಾನ’  (೨೦೧೪)[ಸೂಕ್ತ ಉಲ್ಲೇಖನ ಬೇಕು]
  • ರೂಪ ರೂಪಗಳನ್ನು ದಾಟಿ ನಾಟಕ ಕೃತಿಗೆ, ಲೇಖಿಕಾ ಶ್ರೀ ಪ್ರಶಸ್ತಿ (೨೦೨೦)[೧೪]
  • 'ರಕ್ತವರ್ಣೆ’ ನಾಟಕಕ್ಕೆ ಬಿ.ಎಂ.ಶ್ರೀ ಪ್ರತಿಷ್ಠಾನ ಕೊಡ ಮಾಡುವ ದಿವಂಗತ ಸಾರಂಗಿ ವೆಂಕಟರಾಮಯ್ಯ ಪುಟ್ಟಚಟ್ಟಮ್ಮ ದತ್ತಿನಿಧಿ ಪುರಸ್ಕಾರ  (೨೦೧೬)[ಸೂಕ್ತ ಉಲ್ಲೇಖನ ಬೇಕು]
  • ‘ಬೆಳಕಿನ ಅಂಗಡಿ’ ನಾಟಕಕ್ಕೆ ಮುಂಬೈ ನ ಮೈಸೂರು ಅಸೋಸಿಯೇಷನ್ ಅವರು ಕೊಡಮಾಡುವ ನೇಸರು ಜಾಗತಿಕ ಏಕಾಂಕ ನಾಟಕ ಪ್ರಶಸ್ತಿ. (೨೦೧೭)[ಸೂಕ್ತ ಉಲ್ಲೇಖನ ಬೇಕು]
  • ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬೊಂಬಾಯ್ ಮಿಠಾಯಿ ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ(೨೦೧೬)[ಸೂಕ್ತ ಉಲ್ಲೇಖನ ಬೇಕು]
  • ರಂಗಭೂಮಿ ಸಾಧನೆಗೆ ಬೆಂಗಳೂರು ನಗರಜಿಲ್ಲಾ ಸಾಹಿತ್ಯ ಪರಿಷತ್ತು ಕೊಡಮಾಡುವ ಕನ್ನಡ ಸೇವಾ ರತ್ನ ಪ್ರಶಸ್ತಿ(೨೦೧೯)[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು

ಬದಲಾಯಿಸಿ
  1. https://www.kendasampige.com/%e0%b2%85%e0%b2%95%e0%b3%8d%e0%b2%b7%e0%b2%af%e0%b2%be%e0%b2%82%e0%b2%ac%e0%b2%b0-%e0%b2%ac%e0%b3%87%e0%b2%b2%e0%b3%82%e0%b2%b0%e0%b3%81-%e0%b2%b0%e0%b2%98%e0%b3%81%e0%b2%a8%e0%b2%82%e0%b2%a6/
  2. https://www.kendasampige.com/%e0%b2%a1%e0%b2%be-%e0%b2%ac%e0%b3%87%e0%b2%b2%e0%b3%82%e0%b2%b0%e0%b3%81-%e0%b2%b0%e0%b2%98%e0%b3%81%e0%b2%a8%e0%b2%82%e0%b2%a6%e0%b2%a8%e0%b3%8d-%e0%b2%85%e0%b2%a8%e0%b3%81%e0%b2%b5%e0%b2%be/
  3. https://www.kendasampige.com/%e0%b2%a1%e0%b2%be-%e0%b2%ac%e0%b3%87%e0%b2%b2%e0%b3%82%e0%b2%b0%e0%b3%81-%e0%b2%b0%e0%b2%98%e0%b3%81%e0%b2%a8%e0%b2%82%e0%b2%a6%e0%b2%a8%e0%b3%8d-%e0%b2%ac%e0%b2%b0%e0%b3%86%e0%b2%a6-%e0%b2%88/
  4. https://www.kendasampige.com/%e0%b2%85%e0%b2%ae%e0%b3%8d%e0%b2%ae-%e0%b2%aa%e0%b2%ae%e0%b3%8d%e0%b2%ae%e0%b2%bf-%e0%b2%a4%e0%b2%be%e0%b2%a4-%e0%b2%ac%e0%b3%82%e0%b2%9a%e0%b2%bf%e0%b2%ac%e0%b3%86%e0%b2%95%e0%b3%8d%e0%b2%95/
  5. https://www.bookbrahma.com/book/nisarga-mattu-gubbacchi
  6. https://www.bookbrahma.com/book/rakta-varne
  7. https://www.bookbrahma.com/book/roopa-roopagalanu-daati-belakina-angadi
  8. https://www.bookbrahma.com/news/bendre-natakagala-ranga-praveshakke-idu-sakala
  9. https://www.bookbrahma.com/features/roga-mattu-adhikara-bendreyavara-jaatre-nataka-samakaalina-asangata-abhivyakti
  10. https://www.bookbrahma.com/news/samajika-viveka-mattu-tirukara-pidugu
  11. https://www.bookbrahma.com/news/bharateeya-koutumbika-vyavaste-mattu-hosa-samsara-nataka-samucchaya
  12. https://www.bookbrahma.com/news/kathana-kutuhalavirada-gol
  13. https://www.bookbrahma.com/book/kiram-hosa-kavite-samputa-2
  14. https://www.bookbrahma.com/news/prabhavathi-raghunandan-malathi-haagu-mehendale-lekhika-shri-prashasthi