Drongo
Spangled Drongo
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಉಪಗಣ:
ಕುಟುಂಬ:
Dicruridae

Vigors, 1825
Genera

ಕಾಜಾಣವು ಪಕ್ಷಿವರ್ಗದ ಪ್ಯಾಸೆರಿಫಾರ್ಮೀಸ್ ಗಣದ ಡೈಕ್ರೂರಿಡೀ ಕುಟುಂಬ ಒಂದು ಜಾತಿಯ ಹಕ್ಕಿ (ಡ್ರಾಂಗೊ). ಇದಕ್ಕೆ ರಾಜಕಾಗೆ (ಕಿಂಗ್ ಕ್ರೋ) ಎಂಬ ಹೆಸರೂ ಇದೆ. ಈ ಜಾತಿಯ ವೈಜ್ಞಾನಿಕ ಹೆಸರು ಡೈಕ್ರೂರಸ್.

ಪ್ರಭೇದಗಳು

ಬದಲಾಯಿಸಿ

ಇದರಲ್ಲಿ ಸುಮಾರು 30 ಪ್ರಭೇದಗಳಿವೆ. ಇವು ಆಗ್ನೇಯ ಏಷ್ಯ ಇಥಿಯೋಪಿಯ, ಮಲಯ ಮತ್ತು ಆಸ್ಟ್ರೇಲಿಯಗಳ ನಿವಾಸಿಗಳು. ಭಾರತದಲ್ಲಿ ಡೈ. ಸೀರೂಲೆಸೆನ್ಸ್ (ಬಿಳಿಯ ಹೊಟ್ಟೆಯ ಕಾಜಾಣ) ಡೈ. ಪ್ಯಾರಡಿಸಿಯಸ್ (ಉದ್ದ ಬಾಲದ ಕಾಜಾಣ) ಮತ್ತು ಡೈ. ಮಾಕ್ರೊಸೆರ್‍ಕಸ್ (ಕಪ್ಪು ಕಾಜಾಣ) ಎಂಬ ಮೂರು ಪ್ರಭೇದಗಳಿವೆ.

ಕಾಜಾಣಗಳು ತೋಟಗಳು ಕಾಡುಗಳು ಮುಂತಾದ ವನ್ಯಪ್ರದೇಶಗಳಲ್ಲಿ ಸಾಧಾರಣವಾಗಿ ಒಂಟಿಯಾಗಿ ಇಲ್ಲವೆ ಜೋಡಿಗಳಲ್ಲಿ ವಾಸಿಸುತ್ತವೆ. ದೊಡ್ಡ ಗುಂಪುಗಳಲ್ಲಿರುವುದು ಅಪೂರ್ಣ.

ಕಾಜಾಣ ಸುಮಾರು 10"-12" ಉದ್ದದ ಸಣ್ಣ ಗಾತ್ರದ ಹಕ್ಕಿ. ನೋಡುವುದಕ್ಕೆ ಬಹಳ ಚೆಲುವಾಗಿದೆ. ದೇಹದ ಬಣ್ಣ ಮಿರಮಿರನೆ ಹೊಳೆಯುವ ಅಚ್ಚಕಪ್ಪು ಅಥವಾ ನೇರಳೆ. ಕೆಲವು ಪ್ರಭೇದಗಳಲ್ಲಿ ಹೊಟ್ಟೆ ಬಿಳಿಯಾಗಿಯೂ ಪುಕ್ಕಗಳು ಬೂದಿ ಅಥವಾ ಕಂದು ಬಣ್ಣದವಾಗಿಯೂ ಇರುವುದುಂಟು ಈ ವರ್ಣಭೇದಗಳ ಆಧಾರದ ಮೇಲೆ ಪ್ರಭೇದಗಳನ್ನು ಬೇರೆ ಬೇರೆ ಬಣಗಳಾಗಿ ವಿಂಗಡಿಸಬಹುದು. ಬಾಲ ಉದ್ದವಾಗಿದ್ದು ಕವಲೊಡೆದಿದೆ. ಉದ್ದಬಾಲದ ಕಾಜಾಣದ ಹೆಸರು ಅನ್ವರ್ಥಕ. ಬಾಲದ ಕವಲುಗಳು ತುದಿಯಲ್ಲಿ ಅಗಲವಾಗಿವೆ. ಅಲ್ಲದೆ ಇದರ ತಲೆಯ ಮೇಲೆ ಶಿಖೆಯೊಂದಿದೆ. ಕನ್ನಡದಲ್ಲಿ ಇದನ್ನು ಭೀಮರಾಜ ಎಂದು ಕರೆಯುತ್ತಾರೆ. ಹಾರುವಾಗ ಪುಕ್ಕದ ತುದಿಯ ಕವಲುಗಳು ಬೀಸುವ ಗದೆಯಂತೆ ತುಯ್ದಾಡುವುದೇ ಇದಕ್ಕೆ ಮೂಲ.

ಕಾಜಾಣ ಬಲು ಚುರುಕಾದ ಹಕ್ಕಿ. ಹಾರಾಟದಲ್ಲೂ ಬುಲು ಕುಶಲಿ, ಕೀಟಗಳು, ಅದರಲ್ಲೂ ಹಾರಬಲ್ಲ ಕೀಟಗಳು. ಮಿಡತೆಗಳು ಇದರ ಆಹಾರ. ಹಾರುತ್ತಿರುವಾಗಲೇ ಆಹಾರದ ಮೇಲೆ ಹಠಾತ್ತನೆ ಎರಗಿ ಕ್ಷಣಾರ್ಧದಲ್ಲಿ ಹಿಡಿಯಬಲ್ಲ ಸಾಮಥ್ರ್ಯ ಇದಕ್ಕಿದೆ. ಹೂಗಳ ಮಕರಂದವನ್ನೂ ಕುಡಿಯುವುದು ಉಂಟು. ಕಾಜಾಣ ಹಲವಾರು ಬಗೆಗಳಲ್ಲಿ ಕೂಗುತ್ತದೆ. ಬೇರೆ ಹಕ್ಕಿಗಳ ಕೂಗನ್ನೂ ಚೆನ್ನಾಗಿ ಅನುಕರಿಸಬಲ್ಲದು.

ಗೂಡು ಕಟ್ಟುವ ಕಾಲ ಸಾಮಾನ್ಯವಾಗಿ ಮಾರ್ಚಿಯಿಂದ ಜೂನ್ ತಿಂಗಳುಗಳು, ಮರಗಳ ಕವಲುಗಳ ಮೇಲೆ ಸಣ್ಣ ಕಡ್ಡಿಗಳು ಬೇರು, ಎಲೆ, ನಾರು, ಮುಂತಾದವನ್ನು ಜೇಡಬಲೆಯಿಂದ ಬಂಧಿಸಿ ಗೂಡು ಕಟ್ಟುತ್ತದೆ. 3-5 ಮೊಟ್ಟೆಗಳನ್ನಿಡುತ್ತದೆ. ಗಂಡು ಹೆಣ್ಣುಗಳೆರಡೂ ಕಾವು ಕೊಡುವುದರಲ್ಲಿ, ಮರಿಗಳ ಪಾಲನೆಯಲ್ಲಿ ಪರಸ್ಪರ ಸಹಕರಿಸುತ್ತವೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಾಜಾಣ&oldid=1019422" ಇಂದ ಪಡೆಯಲ್ಪಟ್ಟಿದೆ