ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು (ಕೆಂಗೇರಿ ಲೋಕಸಭಾ ಕ್ಷೇತ್ರ) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ೨೮ ಲೋಕಸಭೆ (ಪಾರ್ಲಿಮೆಂಟರಿ) ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ತೇಜಸ್ವಿ ಸೂರ್ಯ ಅವರು ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ ೩,೩೧,೧೯೨ ಮತಗಳ ಅಂತರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಬಿ.ಕೆ. ಹರಿಪ್ರಸಾದ್ ವಿರುದ್ಧ ಗೆದ್ದಿದ್ದಾರೆ.

ವಿಧಾನಸಭೆ ಕ್ಷೇತ್ರಗಳು

ಬದಲಾಯಿಸಿ

ಪ್ರಸ್ತುತ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಈ ಕೆಳಗಿನ ೮ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ:

ಕ್ಷೇತ್ರದ ಸಂಖ್ಯೆ ಹೆಸರು ಕಾಯ್ದಿರಿಸಲಾಗಿದೆ ( ಪ.ಜಾ / ಪ.ಪಂ) ಜಿಲ್ಲೆ
166 ಗೋವಿಂದರಾಜನಗರ ಯಾವುದೂ ಇಲ್ಲ ಬೆಂಗಳೂರು ನಗರ
167 ವಿಜಯನಗರ ಯಾವುದೂ ಇಲ್ಲ ಬೆಂಗಳೂರು ನಗರ
169 ಚಿಕ್ಕಪೇಟೆ ಯಾವುದೂ ಇಲ್ಲ ಬೆಂಗಳೂರು ನಗರ
170 ಬಸವನಗುಡಿ ಯಾವುದೂ ಇಲ್ಲ ಬೆಂಗಳೂರು ನಗರ
171 ಪದ್ಮನಾಭನಗರ ಯಾವುದೂ ಇಲ್ಲ ಬೆಂಗಳೂರು ನಗರ
172 ಬಿಟಿಎಂ ಲೇಔಟ್ ಯಾವುದೂ ಇಲ್ಲ ಬೆಂಗಳೂರು ನಗರ
173 ಜಯನಗರ ಯಾವುದೂ ಇಲ್ಲ ಬೆಂಗಳೂರು ನಗರ
175 ಬೊಮ್ಮನಹಳ್ಳಿ ಯಾವುದೂ ಇಲ್ಲ ಬೆಂಗಳೂರು ನಗರ

ಸಂಸತ್ತಿನ ಸದಸ್ಯರು

ಬದಲಾಯಿಸಿ

ಮೈಸೂರು ರಾಜ್ಯ

ಬದಲಾಯಿಸಿ

ಬೆಂಗಳೂರು ದಕ್ಷಿಣ:

ಬೆಂಗಳೂರು:

ಬೆಂಗಳೂರು:

ಬೆಂಗಳೂರು:

ಬೆಂಗಳೂರು ದಕ್ಷಿಣ ಕ್ಷೇತ್ರ

ಬದಲಾಯಿಸಿ
ವರ್ಷ ಸದಸ್ಯ ಪಾರ್ಟಿ ಪಡೆದ ಮತಗಳು
೧೯೭೭ ಕೆ.ಎಸ್ ಹೆಗ್ಡೆ ಜನತಾ ಪಕ್ಷ ೨,೨೧,೯೭೪
೧೯೮೦ ಟಿ.ಆರ್ ಶಾಮಣ್ಣ ಜನತಾ ಪಕ್ಷ ೧,೯೮,೩೯೦
೧೯೮೪ ವಿ.ಎಸ್.ಕೃಷ್ಣ ಅಯ್ಯರ್ ಜನತಾ ಪಕ್ಷ ೨,೬೪,೭೬೫
೧೯೮೯ ಆರ್. ಗುಂಡು ರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೪,೧೩,೫೭೪
೧೯೯೧ ಕೆ. ವೆಂಕಟಗಿರಿ ಗೌಡ ಭಾರತೀಯ ಜನತಾ ಪಕ್ಷ ೨,೭೫,೦೮೩
೧೯೯೬ ಅನಂತ್ ಕುಮಾರ್ ಭಾರತೀಯ ಜನತಾ ಪಕ್ಷ ೨,೫೧,೨೩೫
೧೯೯೮ ಅನಂತ್ ಕುಮಾರ್ ಭಾರತೀಯ ಜನತಾ ಪಕ್ಷ ೪,೨೯,೬೪೮
೧೯೯೯ ಅನಂತ್ ಕುಮಾರ್ ಭಾರತೀಯ ಜನತಾ ಪಕ್ಷ ೪,೧೦,೧೬೧
೨೦೦೪ ಅನಂತ್ ಕುಮಾರ್ ಭಾರತೀಯ ಜನತಾ ಪಕ್ಷ ೩,೮೬,೬೮೨
೨೦೦೯ ಅನಂತ್ ಕುಮಾರ್ ಭಾರತೀಯ ಜನತಾ ಪಕ್ಷ ೪,೩೭,೯೫೩
೨೦೧೪ ಅನಂತ್ ಕುಮಾರ್ ಭಾರತೀಯ ಜನತಾ ಪಕ್ಷ ೬,೩೩,೮೧೬
೨೦೧೯ ತೇಜಸ್ವಿ ಸೂರ್ಯ ಭಾರತೀಯ ಜನತಾ ಪಕ್ಷ ೭,೩೯,೨೨೯

ಚುನಾವಣಾ ಇತಿಹಾಸ

ಬದಲಾಯಿಸಿ

೧೯೭೭ರಲ್ಲಿ ಕ್ಞೇತ್ರ ವಿಂಗಡನೆಯ ನಂತರ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೂ ನಡೆದ ೧೨ ಚುನಾವಣೆಗಳಲ್ಲಿ ೩ ಬಾರಿ ಜನತಾ ಪಕ್ಷ, ಒಮ್ಮೆ ಕಾಂಗ್ರೆಸ್ ಮತ್ತು ೮ ಬಾರಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್, ೬ ಬಾರಿ ಸತತವಾಗಿ ಇಲ್ಲಿಂದ ಸಂಸದರಾಗಿ ಚುನಾಯಿತರಾಗಿದ್ದರು.

೧೯೭೭ರ ಚುನಾವಣೆಯಲ್ಲಿ, ಕೆ.ಎಸ್ ಹೆಗ್ಡೆಯವರು (ನಿಟ್ಟೆ ಸಂತೋಷ್‌ ಹೆಗ್ಡೆಯವರ ತಂದೆ) ಜನತಾ ಪಕ್ಷದ ಉಮೇದುವಾರರಾಗಿ ಮೈಸೂರಿನ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸೌಧದ ನಿರ್ಮಾತೃವಾದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಗೆದ್ದರು.[][] ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ರಾಜೀನಾಮೆ ನೀಡಿದ್ದರು. ೭೦ರ ದಶಕದ ಮಧ್ಯಭಾಗದಲ್ಲಿ ತತ್ಕಾಲೀನ ಕೇಂದ್ರ ಸರ್ಕಾರ, ಅವರು ಮತ್ತು ಇನ್ನು ಇಬ್ಬರು ಹಿರಿಯ ನ್ಯಾಯಾಧೀಸರನ್ನು ಕಡೆಗಣಿಸಿ ಇವರೆಲ್ಲರಿಗಿಂತ ಕಿರಿಯರನ್ನು ಮುಖ್ಯನಾಯಾಧೀಶರನ್ನಾಗಿ ನೇಮಿಸಿದಾಗ, ಸ್ವಾಭಿಮಾನಿ ಹೆಗ್ಡೆಯವರು ರಾಜೀನಾಮೆ ನೀಡಿದ್ದರು.[] ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹಾಸನ ಹೊರತುಪಡಿಸಿ ಜನತಾ ಪಕ್ಷ ಗೆದ್ದಂತಹ ಒಂದೇ ಒಂದು ಕ್ಷೇತ್ರ ಇದು. ನಂತರ ಅವರು ಲೋಕಸಭೆಯ ಮೊದಲ ಕಾಂಗ್ರೆಸೇತರ ಸಭಾಪತಿ (ಸ್ಪೀಕರ್)ರಾಗಿ ತಮ್ಮ ಶಿಸ್ತುಬದ್ಧ, ನ್ಯಾಯಯುತ ನಡುವಳಿಕೆಯಿಂದಾಗಿ ಖ್ಯಾತರಾದರು.[]

೧೯೮೦ರ ಚುನಾವಣೆಯಲ್ಲಿ ಟಿ.ಆರ್ ಶಾಮಣ್ಣ [] ಜನತಾ ಪಕ್ಷದಿಂದ ಗೆದ್ದರು. ಈ ಚುನಾವಣೆಯಲ್ಲಿ ಕಾಂಗ್ರಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು.

೧೯೮೪ರ ಚುನಾವಣೆ ತತ್ಕಾಲೀನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ಕಾರಣ ನಡೆದ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ರಾಜೀವ ಗಾಂಧಿಯವರು ದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಈ ಕ್ಷೇತ್ರದಲ್ಲಿ ವಿ.ಎಸ್.ಕೃಷ್ಣ ಅಯ್ಯರ್,[] ಜನತಾ ಪಕ್ಷದಿಂದ ಗೆದ್ದರು.

೧೯೮೯ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರಸ್ ಸೋತರೂ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಗುಂಡು ರಾಯರು ಗೆದ್ದರು.[] ಇದೊಂದೇ ಸಲ ಕಾಂಗ್ರಸ್ ಈ ಕ್ಷೇತ್ರದಲ್ಲಿ ಗೆದ್ದಿರುವುದು.

೧೯೯೧ರ ಚುನಾವಣೆಯಲ್ಲಿ ಗುಂಡು ರಾಯರನ್ನು ಖ್ಯಾತ ಅರ್ಥಶಾಸ್ತ್ರಜ್ಞ ಕೆ. ವೆಂಕಟಗಿರಿ ಗೌಡರು [] ಸೋಲಿಸಿ ಭಾರತೀಯ ಜನತಾ ಪಕ್ಷಕ್ಕೆ ಮೊದಲ ಬಾರಿ ಜಯ ಗಳಿಸಿಕೊಟ್ಟರು.

೧೯೯೬ ರಿಂದ ೨೦೧೪ರವರೆಗೆ, ಭಾರತೀಯ ಜನತಾ ಪಕ್ಷದಲ್ಲಿ ತಳಮಟ್ಟದಿಂದ ಬೆಳೆದು ಬಂದ ಅನಂತ್ ಕುಮಾರ್,[] ಸತತ ೬ ಬಾರಿ ಈ ಕ್ಷೇತ್ರವನ್ನು ಗೆದ್ದಿದ್ದರು. ಇಲ್ಲಿಯವರೆಗೆ ಈ ಕ್ಷೇತ್ರವನ್ನು ಗೆದ್ದವರು ಆನುಭವಿಗಳಾಗಿದ್ದು. ಹಿರಿಯ ರಾಜಕಾರಣಿಗಳು, ಖ್ಯಾತ ನ್ಯಾಯಾಧೀಶರು, ಅರ್ಥಶಾಸ್ತ್ರಜ್ಞರು ಆಗಿದ್ದರು. ಈ ನಡುವೆ ವಾಜಪೇಯಿ ಸರ್ಕಾರಗಳಲ್ಲಿ ಮತ್ತು ಮೋದಿ ಸರ್ಕಾರದಲ್ಲಿಯೂ ಮಂತ್ರಿಆದರು. ವಿಶೇಷವೆಂದರೆ ಅವರ ವಿರುದ್ದ ಆರು ಬಾರಿ ಬೇರೆ ಬೇರೆ ಕಾಂಗ್ರೆಸ್ ಉಮೇದುವಾರರು ನಿಂತು ಸೋತರು.

೨೦೧೯ರ ಚುನಾವಣೆಯಲ್ಲಿ ೩.೩೦ ಲಕ್ಷದ ಭಾರಿ ಬಹುಮತದಿಂದ, ೨೮ ವರ್ಷದ ತೇಜಸ್ವಿ ಸೂರ್ಯ [] ಮೊದಲ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಬಂದರು

ಚುನಾವಣಾ ಫಲಿತಾಂಶಗಳು

ಬದಲಾಯಿಸಿ

ಸಾಮಾನ್ಯ ಚುನಾವಣೆ 1998

ಬದಲಾಯಿಸಿ
ಭಾರತೀಯ ಸಾರ್ವತ್ರಿಕ ಚುನಾವಣೆ, 1998 : ಬೆಂಗಳೂರು ದಕ್ಷಿಣ
ಪಾರ್ಟಿ ಅಭ್ಯರ್ಥಿ ಮತಗಳು % ±
ಬಿಜೆಪಿ ಅನಂತ್ ಕುಮಾರ್ 4,29,648 53.83
INC ಡಿ.ಪಿ ಶರ್ಮಾ 2,49,601 31.27
ಜನತಾ ದಳ ವಿ. ಸೋಮಣ್ಣ 1,10,323 13.82
ಸಮತಾ ಪಾರ್ಟಿ ಬಿ.ಎಸ್ ರಜಪೂತ 2,688 0.34
ಸ್ವತಂತ್ರ ಹೊಟ್ಟೆಪಕ್ಷ ರಂಗಸ್ವಾಮಿ 1,649 0.21
ಗೆಲುವಿನ ಅಂತರ 1,80,047 22.56
ಮೊತ್ತ 7,98,135 57.09
ಬಿಜೆಪಿ ಮುಂದುವರೆದಿದೆ ಬದಲಾವಣೆ

ಸಾಮಾನ್ಯ ಚುನಾವಣೆ 1999

ಬದಲಾಯಿಸಿ
ಭಾರತೀಯ ಸಾರ್ವತ್ರಿಕ ಚುನಾವಣೆ, 1999 : ಬೆಂಗಳೂರು ದಕ್ಷಿಣ
ಪಾರ್ಟಿ ಅಭ್ಯರ್ಥಿ ಮತಗಳು % ±
ಬಿಜೆಪಿ ಅನಂತ್ ಕುಮಾರ್ 4,10,161 50.99
INC ಬಿ.ಕೆ. ಹರಿಪ್ರಸಾದ್ 3,44,107 42.78
ಜೆಡಿ (ಎಸ್) ಬಿ.ಟಿ ಪಾರ್ಥಸಾರಥಿ 22,801 2.83
ಎ.ಐ.ಎ.ಡಿ.ಎಂ.ಕೆ ಡಿ. ಅರುಮುಗಮ್ 11,643 1.45
ಸ್ವತಂತ್ರ ಡಾ.ಆರ್.ಆರ್ ಮಂಜುನಾಥ್ 11,636 1.45
ಗೆಲುವಿನ ಅಂತರ 66,054 8.21
ಮೊತ್ತ 8,04,342 54.08
ಬಿಜೆಪಿ ಮುಂದುವರೆದಿದೆ ಬದಲಾವಣೆ

ಸಾಮಾನ್ಯ ಚುನಾವಣೆ 2004

ಬದಲಾಯಿಸಿ
ಭಾರತೀಯ ಸಾರ್ವತ್ರಿಕ ಚುನಾವಣೆ, 2004 : ಬೆಂಗಳೂರು ದಕ್ಷಿಣ
ಪಾರ್ಟಿ ಅಭ್ಯರ್ಥಿ ಮತಗಳು % ±
ಬಿಜೆಪಿ ಅನಂತ್ ಕುಮಾರ್ 3,86,682 48.30
INC ಎಂ. ಕೃಷ್ಣಪ್ಪ 3,24,411 40.52
ಜೆಡಿ (ಎಸ್) ಜಯಂತಿ 77,551 9.69
ಸ್ವತಂತ್ರ ಎಸ್.ವಿ. ಶ್ರೀನಿವಾಸ ರಾವ್ 5,012 0.63
ಸ್ವತಂತ್ರ ಜಿಎಚ್ ಪಕ್ಷ ರಂಗಸ್ವಾಮಿ 3,304 0.41
ಗೆಲುವಿನ ಅಂತರ 62,271 7.78
ಮೊತ್ತ 8,00,649 49.41
ಬಿಜೆಪಿ ಮುಂದುವರೆದಿದೆ ಬದಲಾವಣೆ

ಸಾಮಾನ್ಯ ಚುನಾವಣೆ 2009

ಬದಲಾಯಿಸಿ
ಭಾರತೀಯ ಸಾರ್ವತ್ರಿಕ ಚುನಾವಣೆ, 2009 : ಬೆಂಗಳೂರು ದಕ್ಷಿಣ
ಪಾರ್ಟಿ ಅಭ್ಯರ್ಥಿ ಮತಗಳು % ±
ಬಿಜೆಪಿ ಅನಂತ್ ಕುಮಾರ್ 4,37,953 48.20
INC ಕೃಷ್ಣ ಬೈರೆ ಗೌಡ 4,00,341 44.06
ಜೆಡಿ (ಎಸ್) ಪ್ರೊ. ಕೆ.ಇ ರಾಧಾಕೃಷ್ಣ 30,045 3.31
ಸ್ವತಂತ್ರ ಕ್ಯಾಪ್ಟನ್. ಜಿ.ಆರ್ ಗೋಪಿನಾಥ್ 16,383 1.80
ಬಿಎಸ್ಪಿ ಎಸ್. ನಹೀದಾ ಸಲ್ಮಾ 4,621 0.51
ಗೆಲುವಿನ ಅಂತರ 37,612 4.14
ಮೊತ್ತ 9,08,590 44.74
ಬಿಜೆಪಿ ಮುಂದುವರೆದಿದೆ ಬದಲಾವಣೆ

ಸಾಮಾನ್ಯ ಚುನಾವಣೆ 2014

ಬದಲಾಯಿಸಿ
ಭಾರತೀಯ ಸಾರ್ವತ್ರಿಕ ಚುನಾವಣೆ, 2014 : ಬೆಂಗಳೂರು ದಕ್ಷಿಣ
ಪಾರ್ಟಿ ಅಭ್ಯರ್ಥಿ ಮತಗಳು % ±
ಬಿಜೆಪಿ ಅನಂತ್ ಕುಮಾರ್ 6,33,816 56.88 +8.68
INC ನಂದನ್ ನಿಲೇಕಣಿ 4,05,241 36.37 -7.69
ಜೆಡಿ (ಎಸ್) ರುತ್ ಮನೋರಮಾ 25,677 2.30 -1.01
ಎಎಪಿ ನೀನಾ ನಾಯಕ್ 21,403 1.92 ಎನ್ / ಎ
ಸ್ವತಂತ್ರ ಪ್ರಮೋದ್ ಮುತಾಲಿಕ್ 4,247 0.38 ಎನ್ / ಎ
ನೋಟಾ ಮೇಲಿನ ಯಾವುದೂ ಅಲ್ಲ 7,414 0.67 ಎನ್ / ಎ
ಗೆಲುವಿನ ಅಂತರ 2,28,575 20.51 +16.37
ಮೊತ್ತ 11,13,726 55.72 +10.98
ಬಿಜೆಪಿ ಮುಂದುವರೆದಿದೆ ಬದಲಾವಣೆ +8.68

ಸಾಮಾನ್ಯ ಚುನಾವಣೆ 2019

ಬದಲಾಯಿಸಿ
ಭಾರತೀಯ ಸಾರ್ವತ್ರಿಕ ಚುನಾವಣೆಗಳು, 2019 : ಬೆಂಗಳೂರು ದಕ್ಷಿಣ
ಪಾರ್ಟಿ ಅಭ್ಯರ್ಥಿ ಮತಗಳು % ±
ಬಿಜೆಪಿ ತೇಜಸ್ವಿ ಸೂರ್ಯ 7,39,229 62.20 +5.32
INC ಬಿ.ಕೆ. ಹರಿಪ್ರಸಾದ್ 4,08,037 34.33
ನೋಟಾ ಮೇಲಿನ ಯಾವುದೂ ಅಲ್ಲ 9,938 0.84
ಗೆಲುವಿನ ಅಂತರ 3,31,192 27.87
ಮೊತ್ತ 11,88,491 53.65
ಬಿಜೆಪಿ ಮುಂದುವರೆದಿದೆ ಬದಲಾವಣೆ

ಉಲ್ಲೇಖಗಳು

ಬದಲಾಯಿಸಿ
  1. "ರಾಜಕೀಯದಲ್ಲಿ ತಮ್ಮ ಅದೃಷ್ಠ ಪರೀಕ್ಷಿಸಿದ ನ್ಯಾಯಾಧೀಶರು". www.newindianexpress.com. newindianexpress. Archived from the original on 2020-05-15. Retrieved 2020-05-15.
  2. "ಕೆ.ಎಸ್ ಹೆಗ್ಡೆಯವರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.{{cite web}}: CS1 maint: bot: original URL status unknown (link)
  3. ೩.೦ ೩.೧ "ಕೆ.ಎಸ್ ಹೆಗ್ಡೆ". google.co.in. indianexpress. Archived from the original on 2020-05-15. Retrieved 2020-05-15.{{cite web}}: CS1 maint: bot: original URL status unknown (link)}
  4. "ಟಿ.ಆರ್ ಶಾಮಣ್ಣರವರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.
  5. "ವಿ.ಎಸ್.ಕೃಷ್ಣ ಅಯ್ಯರ್ ಅವರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.
  6. "ಗುಂಡು ರಾಯರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.
  7. "ವೆಂಕಟಗಿರಿ ಗೌಡರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.
  8. "ಅನಂತ್ ಕುಮಾರ್ ಅವರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.
  9. "ತೇಜಸ್ವಿ ಸೂರ್ಯರ ಕಿರು ಪರಿಚಯ". loksabhaph.nic.in. loksabha. Archived from the original on 2020-05-15. Retrieved 2020-05-15.

ಸಹ ನೋಡಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ