ಆದಿವಾಸಿಗಳ ಎಂಬ ಪದವು ಕೊಡೆ ಶಬ್ಧದಿಂದ ಬಂದಿದೆ.ಇದು ಒಂದು ವಿದವಾದ ಜನಾಂಗೀಯ ಮತ್ತು ಬುಡಕಟ್ಟು ಗುಂಪು ಭಾರತದ ಜನಸಂಖ್ಯೆಯಲ್ಲಿ ತನ್ನ ಮೂಲವನ್ನು ಹೊಂದಿದೆ. ಅವರು ಭಾರತದ ಜನಸಂಖ್ಯೆಯಲ್ಲಿ ದೇಶಿಯ ಅಲ್ಪಸಂಖ್ಯಾತರಾಗಿದ್ದಾರೆ. ಇದೆ ಶಬ್ದವನ್ನು ಬಾಂಗ್ಲಾದೇಶದಲ್ಲಿ ಜನಾಂಗೀಯ ಅಲ್ಪಸಂಖ್ಯಾತರೆಂದು ಮತ್ತು ಶ್ರೀಲಂಕಾದಲ್ಲಿ ವಾಸಿಸುವ ವೆಡ್ಡ ಜನರಿಗೆ ಆದಿವಾಸಿ ಎಂದು ಉಪಯೋಗಿಸುತ್ತಾರೆ, ಈ ಶಬ್ದವನ್ನು ಕೂಡ ಅದೇ ಅರ್ಥದಲ್ಲಿ ನೇಪಾಳದಲ್ಲಿ ಮತ್ತೊಂದು ಪದ ಜನಜತಿ ಎಂಬ ಶಬ್ದದಿಂದ ಉಪಯೋಗಿಸುತ್ತಾರೆ. ಆದಾಗ್ಯೂ ಶೌಹ್ ಮತ್ತು ಶಾನಾ ಎಂಬ ಪದಗಳು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಭಿನ್ನವಾಗಿರುತ್ತದೆ. ಆದಿವಾಸಿ ಸಮಾಜಗಳನ್ನು ನಿರ್ದಿಷ್ಟವಾಗಿ ಆಂಧ್ರ ಪ್ರದೇಶ ಬಿಹಾರ, ಚತ್ತೀಸಘಡ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ಕಾಣಬಹುದು. ಕೆಲವು ಚಿಕ್ಕ ಬುಡಕಟ್ಟು ಗುಂಪುಗಳ ಸೂಕ್ಷ್ಮ ಮನಸ್ಸಿನ ಜನರ ‍ಅವನತಿಗೆ ಅಧುನೀಕರಣ ಕಾರಣವಾಗಿದೆ. ವಾಣಿಜ್ಯದ ಕಾಡು ಪ್ರದೇಶ ಮತ್ತು ಪರಿಪೂರ್ಣ ಕೃಷಿ ಎರಡೂ ಹಲವು ಶತಮಾನಗಳಿಂದ ಅನುಭವಿಸಿಕೊಂಡು ಬಂದಿರುವ ಸ್ವೀಡನ್ ಕೃಷಿಯಕಾಡನ್ನು ನಾಶಮಾಡಿದ್ದಾರೆ.

Percent of scheduled tribes in India by tehsils by census 2011

ಆದಿವಾಸಿ ಪದದ ಒಳಾರ್ಥ

ಬದಲಾಯಿಸಿ

ಆದಿವಾಸಿ ಶಬ್ದವು ಅಬಾವಿಕ ವನವಾಸಿ ಅಥವಾ ಗಿರಿಜನ ಎಂದೂ ಕೂಡ ಭಾರತದ ಬುಡಕಟ್ಟಿನಲ್ಲಿ ಉಪಯೋಗಿಸುತ್ತಾರೆ. ೧೯೩೦ರಲ್ಲಿ ಆದಿವಾಸಿಗಳಿಗೆ ಪ್ರದೇಶ ನೀಡುವುದಕ್ಕಾಗಿ ಮತ್ತು ನಿರ್ದಿಷ್ಟ ಶಬ್ದವನ್ನು ರಚಿಸಲಾಯಿತು. ಶಬ್ದವು ಬಹಳ ವೇಗವಾಗಿ ಒಳಾರ್ಥವನ್ನು ಪಡೆದುಕೊಂಡಿತು. ನೇಪಾಳದಲ್ಲಿ ಮಧ್ಯ ಬೆಟ್ಟಗಳ ಮೂಲಕ ಪೂರ್ವ ಮತ್ತು ಪಶ್ಚಿಮಗಳಿಂದ ನೇಪಾಳದಲ್ಲಿ ಖಾಸೌ ಜನರು ಕ್ಷುಲ್ಲಕ ಕಾರಣಗಳಿಂದ ಹರಿದು ಹಂಚಿ ಹೋಗಿರುವ ಸಾಮ್ರಾಜ್ಯವನ್ನು ಒಟ್ಟುಗೂಡಿಸುವುದಕ್ಕೆ ಶಾಹನ್ನು ಅನುಸರಿಸಿದನ್ನು ರಾಣನು ಸಂಪ್ರಾದಾಯ ಬದ್ದ ಖಾನೂನಿನ ಕೆಳಗಡೆ ಸ್ವದೇಶಿ ರಾಜಕೀಯ ಅಂತಸ್ತನ್ನು ಒಳಗೊಂಡ ಸಮೂಹ ಕಾನೂನನ್ನು ಮುಲ್ಕಿ ಆಯಿನ್ ಎನುತ್ತಾರೆ. ಆದಾಗ್ಯೂ ಶಾಹೌ ರಾಜರುಗಳು ತಮ್ಮ ಅಧಿಕಾರವನ್ನು ೧೯೫೦ ರ ಕ್ರಾಂತಿಯಲ್ಲಿ ಹಿಂದಕ್ಕೆ ಪಡೆದುಕೂಂಡರು. ಅವರು ಉನ್ನತ ಜಾತಿಗಳಿಂದ ಬಾಹುನ್ಸ್, ಥಾಕುರಿಸ, ಚೆತ್ರಿಸ ಮತ್ತು ನ್ಯುವಾರ್ಸ್ಗಳ ಮೂಲಕ ತಮ್ಮ ಪ್ರಭುತ್ವವನ್ನು ಉಳಿಸಿಕೊಂಡರು. ಇದು ನೇಪಾಳಿ ಯುದ್ದಗಳಲ್ಲಿ ಕಷ್ಟಗಳನ್ನು ಉಂಟು ಮಾಡಿತ್ತು. ನೇಪಾಳದಲ್ಲಿ ಯಾವುದೇ ಸಮಾನತೆಗಳಲ್ಲಿ ಬ್ರೀಟೀಷರು ಅಡ್ಡ ಬರುವಿಕೆ ಜೊತೆಗೆ ಹಿಂದು ಸಂಪ್ರದಾಯ ಬದ್ದ, ಹಿಂದೂ ವಿವೇಚನೆ ಅಲ್ಲದೆ ಭಾರತೀಯರ ಹೋಲಿಕೆಯಾಗುವ ಗುರುತರವಾಗಿ ಅವರ ಪರಿಣಾಮವು ಸ್ವಾತಂತ್ರ ನಂತರ ಆದಿವಾಸಿಗಳ ಪ್ರಯತ್ನವು ಸುಧಾರಿಸಿತ್ತು. ಭಾರತದಲ್ಲಿ ಈ ಶಬ್ದವು ಬಹಳ ವಿಭಿನ್ನ ಮತ್ತು ವ್ಯತ್ಯಾಸವನ್ನೂ ಹೊಂದಿದೆ ಮತ್ತು ಅದು ತರ್ಕವನ್ನು ಹೊಂದಿದೆ. ಅದೆಂದರೆ"ಮೂಲ ನಿವಾಸಿ "ಅವರು ಭೂಮಿಯನ್ನು ಹೊಂದಿಲ್ಲ ಎಂಬ ವಿಷಯ ಜಗಳಕ್ಕೆ ತಳಪಾಯವಾಗಿದೆ. ಅವರು ಭೂ ಸುಧಾರಣೆಯ ಬಗ್ಗೆ ಕೇಳುತ್ತಾರೆ ಅವರು ಉನ್ನತ ಗುಂಪಿನಿಂದ ದಬ್ಬಾಳಿಕೆಗೆ ಒಳಪಟ್ಟಿದ್ದಾರೆಂದು ವಾದಿಸುತ್ತಾರೆ ಮತ್ತು ಅವರು ಒಂದು ಭೂ ಸುಧಾರಣೆಯ ಪ್ರತಿಫಲವನ್ನು ಆಜ್ಞಾಪಿಸುತ್ತಾರೆ.

ಬುಡಕಟ್ಟುಗಳ ವಿವರ ಪಟ್ಟಿ

ಬದಲಾಯಿಸಿ

ಭಾರತದ ಸಂವಿದಾನ,ಕಲಮು ೩೬೬(೨೫)ವಿವರ ಪಟ್ಟಿ ಅರ್ಥೈಸುತ್ತದೆ. ಬುಡಕಟ್ಟು ಅಥವ ಬುಡಕಟ್ಟು ಸಮುದಾಯ,ಗುಂಪು ಒಳಗೊಂಡಿರುವ ಬುಡಕಟ್ಟುಗಳು ಪರಿಗಣಿಸುತ್ತವೆ. ಕಲಮು ೩೪೨ ರ ಕೆಳಗೆ ಬುಡಕಟ್ಟುವಿವರ ಪಟ್ಟಿಯು ಸಂವಿದಾನದ ಉದ್ದೇಶವಾಗಿದೆ. ಕಲಮು ೩೪೨ರಲ್ಲಿ ಬುಡಕಟ್ಟುಗಳು ನಿರ್ಧಿಷ್ಟ ಕಾರ್ಯಕ್ರಮಗಳನ್ನು ಹೊಂದಿರಬೇಕೆಂದು ಈ ವಿವರ ಪಟ್ಟಿ ಸೂಚಿಸುತ್ತದೆ ಆದಾಗ್ಯೂ ಯಾವುದೇ ಸಮುದಾಯ ನಿರ್ಧಿಷ್ವವಾದ ಅಳತೆಗೋಲುಗಳನ್ನು ಹೊಂದಿರುವುದಿಲ್ಲ ಆದಾಗ್ಯೂ ಕೆಲವು ಅಳತೆಗೋಲುಗಳ ಮೂಲಕ ಲಕ್ಷಣಗಳನ್ನು ರೂಪಿಸಬಹುದಾಗಿದೆ. ೧*ಭೌಗೋಳಿಕವಾಗಿ ಬೇರ್ಪಡಿಸುವಿಕೆ:-ಅವರು ಕಾಡುಗಳಲ್ಲಿ ಮತ್ತು ಬೆಟ್ಟಗಳಲ್ಲಿ,ವಿಹಾರ,ಪ್ರತ್ಯೇಕ ಬಹುದೂರದ ಮತ್ತು ಸತ್ಕರಿಸದ ಪ್ರದೇಶಗಳಲ್ಲಿ ವಾಸಿಸುತ್ತಾರೆ. ೨*ಹಿಂದುಳಿದಿರುವಿಕೆ:-ಅವರು ಜೀವನೋಪಾಯಕ್ಕಾಗಿ ಕೃಷಿಯನ್ನ ಅವಲಂಬಿಸಿದ್ದಾರೆ ಕೆಳಮಟ್ಟದ ಆರ್ಥಿಕತೆಯ ಜೊತೆಗೆ ಕೆಳಮಟ್ಟದ ತಂತ್ರಜ್ಞಾನ ಅವರ ಬಡತನವನ್ನು ಸೂಚಿಸುತ್ತದೆ ಅವರು ಕೆಳಮಟ್ಟದ ಸಾಕ್ಷರತೆ ಮತ್ತು ಆರೋಗ್ಯವನ್ನು ಹೊಂದಿದ್ದಾರೆ. ೩*ವಿಭಿನ್ನ ಸಂಸ್ಕೃತಿ ಭಾಷೆ ಮತ್ತು ಧರ್ಮ:- ಅವರು ತಮ್ಮದೇಯಾದ ವೈಶಿಷ್ಟ್ಯವಾದ ಸಂಸ್ಕೃತಿ ಭಾಷೆ ಧರ್ಮವನ್ನು ಹೊಂದಿದ್ದಾರೆ.

ನಿರ್ಧಿಷ್ಟವಾಗಿ ಖಂಡನೆಗೊಳಗಾದ ಬುಡಕಟ್ಟು ಗುಂಪುಗಳು

ಬದಲಾಯಿಸಿ

ಬುಡಕಟ್ಟು ಗುಂಪುಗಳ ವಿವರದಿಂದ ಯಾರು ಗುರ್ತಿಸಲ್ಪಡುತ್ತಾರೆ, ವ್ಯಾಪಕವಾಗಿ ಹಬ್ಬಿದ ಸಮುದಾಯದಿಂದ ಬೇರ್ಪಟ್ಟ ಮತ್ತು ಯಾರು ಸಾಂಸ್ಕೃತಿಕವಾಗಿ ಗುರ್ತಿಸುವಿಕೆಯನ್ನು ಸ್ಪಷ್ವವಾಗಿ ಬೇರ್ಪಡಿಸಲ್ಪಡುತ್ತಾರೊ ಅವರೇ ನಿರ್ಧಿಷ್ವವಾಗಿ ಖಂಡನೆಗೊಳಗಾದ ಬುಡಕಟ್ಟು ಗುಂಪುಗಳೆಂದು ಕೇಂದ್ರ ಸರ್ಕಾರ ಹೇಳಿದೆ ಹಾಗಾಗಿ ೭೫ ಬುಡಕಟ್ಟು ಸಮುದಾಯಗಳು ಖಂಡನೆಗೊಳಗಾದ ಬುಡಕಟ್ಟು ಗುಂಪುಗಳೆಂದು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಗುರ್ತಿಸಲ್ಪಟ್ಟಿದೆ. ಇವುಗಳು ಬೇಟೆ, ಆಹಾರ ಹುಡುಕುವಿಕೆ ಮತ್ತು ಕೆಲವು ಕೃಷಿ ಸಮುದಾಯಗಳು ಅಸಂಸ್ಕೃತಿ ಗುಂಪುಗಳೆಂದು ಗುರ್ತಿಸಿ ಕೊಂಡಿದ್ದು ಮತ್ತು ಅವರ ಅಭಿವೃಧಿಯನ್ನು ಸಾಧಿಸಲು ವಿಶೇಷ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಇಂದು ಬುಡಕಟ್ಟು ಜನರು ತಮ್ಮ ಹಕ್ಕುಗಳು ಮತ್ತು ವಿಶೇಷ ಮೀಸಲಾತಿ ಪಾಲುಬೇಕೆಂದು ಆಗ್ರಹಿಸುತ್ತಾರೆ.

ಭೌಗೋಳಿಕ ದೃಷ್ವಿಕೋನ

ಬದಲಾಯಿಸಿ
  • ಭಾರತದ ಸಂವಿಧಾನದಲ್ಲಿ ಬುಡಕಟ್ಟುಗಳ ಪಟ್ಟಿಯು ಗಣನೀಯವಾಗಿ ಗುರ್ತಿಸಲ್ಪಡುತ್ತವೆ. ೨೦೧೧ ರ ಜನಗಣತಿಯ ಪ್ರಕಾರ ೧೦೪ ಮಿಲಿಯನ್ ಜನಸಂಖ್ಯೆಯಲ್ಲಿ ೮.೬% ರಷ್ಟು ಬುಡಕಟ್ಟು ಜನರನ್ನೊಳಗೊಂಡಿದೆ. ಅವರು ಹಿಮಾಲಯದ ವಿಸ್ತಾರ ಪ್ರದೇಶಗಳುದ್ದಕ್ಕೂ ಕಂಡು ಬರುತ್ತಾರೆ. ಅಸ್ಸಾಂ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಲ್ಯಾಂಡ್ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಾದ ಅರುಣಾಚಲ್ ಪ್ರದೇಶ, ಮೇಘಾಲಯ, ಮತ್ತು ನಾಗಲ್ಯಾಂಡ್ ಗಳಲ್ಲಿ ೯೦% ಕ್ಕಿಂತ ಹೆಚ್ಚು ಜನರಿದ್ದಾರೆ.
  • ಮತ್ತೊಂದು ಭಾಗದಲ್ಲಿ ಅಂದರೆ ಭಾರತದ ಮಧ್ಯಭಾಗದ ಗುಡ್ದಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಉತ್ತರದಲ್ಲಿ ನರ್ಮದಾ ನದಿಯಿಂದ ಆಗ್ನೇಯದಲ್ಲಿ ಗೋದಾವರಿ ನದಿಯವರೆಗೆ ಬುಡಕಟ್ಟು ಜನರು ಇಳಿಜಾರು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ.
  • ಮತ್ತೊಂದು ಬುಡಕಟ್ಟು ಜನಾಂಗವೆಂದರೆ ಸಂತಾಲ್ಸ್ ಅವರು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಾರೆ. ಭಾರತದ ಮದ್ಯಭಾಗದ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ವ್ಯಾಪಿಸಿವೆ. ೭೫% ಕ್ಕಿಂತಲೂ ಹೆಚ್ಚಿನ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಒಟ್ಟು ಜನಸಂಖ್ಯೆಯಲ್ಲಿ ೧೦% ರಷ್ಟು ಜನರನ್ನು ಮಾತ್ರ ಬುಡಕಟ್ಟು ಜನರೆಂದು ಪರಿಗಣಿಸಲಾಗಿದೆ.
  • ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮತ್ತು ಕೇರಳಗಳಲ್ಲಿ ಅನೇಕ ಚಿಕ್ಕ ಚಿಕ್ಕ ಬುಡಕಟ್ಟು ಜನರನ್ನು ಕಾಣಬಹುದಾಗಿದೆ. ಭಾರತದ ಪಶ್ಚಿಮ ರಾಜ್ಯಗಳಾದ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಮತ್ತು ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸಂಸ್ತಾನಗಳನ್ನು ರೂಪಿಸಿಕೊಂಡಿದ್ದಾರೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ೧% ರಷ್ಟು ಬಡಕಟ್ಟು ಜನರಿದ್ದಾರೆ.ಅಲ್ಲದೆ ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ೬% ರಷ್ಟು ಜನರಿದ್ದಾರೆ.

ಭಾರತದ ಜನತೆ

ಬದಲಾಯಿಸಿ

ಮೂಲ ನಿವಾಸಿ ಎಂಬ ಕಲ್ಪನೆ ನೇರವಾಗಿ ಮೊದಲಿನ ಭಾರತದ ಜನತೆಗೆ ಸಂಬಂಧಿಸಿದೆ ಯಾವುದು ಚರ್ಚೆಗೆ ವಾದವನ್ನು ಕೊಡತಕ್ಕದ್ದು. ಅದು ಇಂಡೊ-ಆರೈಯನ್ ಜನತೆ ವಲಸೆ ಹೊಗುವ ಕಲ್ಪನೆಯ ನಿರಂತರವಾಗಿ ಸಂಶೋಧನೆ ಮತ್ತು ಸಂಭಾಷಣೆಯಲ್ಲಿ ಚರ್ಚೆಯಾಗುತ್ತಿದೆ. ಕೆಲವು ನರಶಾಸ್ತ್ರಜ್ಞರ ಪ್ರಕಾರ ಸಾವಿರಾರು ವರ್ಷಗಳಿಂದಲೂ ವಿವಿಧ ಕಡೆ ಮಾನವ ವಲಸೆಹೋಗುತ್ತಾರೆ ಮತ್ತು ಮೂಲ ಪ್ರದೇಶ ರೂಪಿಸುತ್ತಾನೆ ಎಂಬ ಪೂರ್ವ ಸಿದ್ದಾಂತವನ್ನು ರೂಪಿಸಿದ್ದಾರೆ. ಅವರು ಕೆಲವೂಂದು ಮೂಲ ಪ್ರದೇಶಗಳನ್ನು ಖಚಿತವಾಗಿ ಆಯ್ಕೆ ಮಾಡಿ ಕೊಳ್ಳುತ್ತಾರೆಂದು ಒಂದು ಕಥೆ, ನೆಗ್ರಿಟೋಸೌ ಜನತೆಯ ಉತ್ಪತ್ತಿಯ ಮೂಲಕ್ಕೆ ಸಂಭಂದಿಸಿದೆ ಎಂದು ವಿವರಿಸುತ್ತದೆ. ಅದೇ ರೀತಿಯಾಗಿ ಇಂದು ಅಂಡಮಾನನೀಸ ಆದಿವಾಸಿಗಳು ವಸಾಹತು ಭಾರತದ ಮೊದಲ ಜನತೆ ಎಂದು ಸುಮಾರು೩೦-೬೫ ವರ್ಷಗಳಿಗಿಂತಲೂ ಮುಂಚಿನಿಂದಲೂ ಇದ್ದಾರೆ. ೬೦%ರಷ್ಟು ಎಲ್ಲಾ ಭಾರತೀಯರು ಡಿಎನ್ ಎ ಹ್ಯಾಪ್ ಗ್ರೂಪ್ ಎಮ್ ಹಂಚಿ ಹೋಗಿದ್ದಾರೆ ಆದಿವಾಸಿ ಬುಡಕಟ್ಟುಗಳು ಐರುಲಾಸೌ ಗುರ್ತಿನ ಮೂಲದಿಂದ ಅವರು ಹೊರದೂಡಲ್ಪಟ್ಟರು. ಓರಾನೌ ಭಾರತದ ಪೂರ್ವದಲ್ಲೂ ಮತ್ತು ಕೂರ್ಕು ಬುಡಕಟ್ಟುಗಳು ಪಶ್ಛಿಮ ಭಾರತದಲ್ಲಿವೆ. ಅವುಗಳು ಆಸ್ಟ್ರೋಯಾಯ್ಡ್ ಮೂಲದ ಬುಡಕಟ್ಟುಗಳಿಗೆ ಉದಾಹರಣೆ ಪರಿಗಣಿಸಲಾಗಿದೆ. ಅನಂತರದಲ್ಲಿ ಆಸ್ಟ್ರೋಲಾಯ್ಡಗಳು ಮಾನವ ಶಾಸ್ತ್ರಜ್ಞರು ಮತ್ತು ಮೂಲ ನಿವಾಸಿಗಳು ಒಪ್ಪಿಕೊಳ್ಳುತ್ತಾರೆ. ಕಾಕಸೂಯಿಡ್ ಮತ್ತು ಮಂಗೋಲಾಯ್ಡ ಇಂಡೋ ಆರ್ಯನ್ ಬಹುಶಃ ಮಧ್ಯ ಪ್ರದೇಶದಿಂದ ಟಿಬೀಟೊ ಬುರ್ಮಾನ್ಸ್, ಹಿಮಾಲಯ ಮತ್ತು ಈಶಾನ್ಯ ಉಪಖಂಡಗಳಿಂದ ಬಂದಿದ್ದಾರೆ. ಈ ಮೇಲಿನ ಎಲ್ಲಾ ಕಲ್ಪನೆಗಳನ್ನು ಮುಕ್ತವಾಗಿ ಚರ್ಚಿಸಬಹುದಾಗಿದೆ ಮತ್ತು ಒಪ್ಪಲು ಸಾಧ್ಯವಿಲ್ಲ. ಜನಾಂಗೀಯ ಮೂಲ ಮತ್ತು ಭಾಷಾಶಾಸ್ತ್ರ ಸಂಯೋಜನೆ ಭಾರತದಲ್ಲಿ ಕೇವಲ ನಿಕೃಷ್ಟವಾಗಿ ಹೊಂದಾಣಿಕೆಯಾಗುತ್ತದೆ. ಹಾಗಿದ್ದರೂ ಈ ಮಧ್ಯೆ, ಓರೊನೌ ಆದಿವಾಸಿಗಳು ಆಸ್ತ್ರೋಲಾಯ್ಡ ಗುಂಪುಗಳಿಂದ ವರ್ಗಿಕರಿಸುತ್ತಾರೆ. ಅವರ ಭಾಷೆಯನ್ನು ಕುರುಖೌ ಎಂದೂ ಅದು ದ್ರಾವಿಡಿಯನ್ ಆಗಿದೆ. ಖಾಸಿಸೌ ಮತ್ತು ನಿಕೋಬಾರೀಸೌಗನ್ನು ಆಸ್ಟ್ರೋಲಾಯ್ಡ ಗುಂಪುಗಳೆಂದು ವರ್ಗಿಕರಿಸುತ್ತಾರೆ. ಮುಂಡಾ ಮತ್ತು ಸಂತಾಲ್ಸ್ ಆಸ್ಟ್ರೋಲಾಯ್ಡ ಗುಂಪುಗಳಲ್ಲಿ ಕಾಣಬಹುದು. ಆದರೂ ಭಿಲೌ ಭಾಷೆಗಳು ಇಂಡೊ-ಯುರೋಪಿಯನ್ ಮತ್ತು ಗೊಂಡಿ ಭಾಷೆಗಳು ದ್ರಾವಿಡಿಯನ್ ಆಗಿದೆ. ಆದಿವಾಸಿಗಳು ಬಲವಂತದಿಂದ ಲೇವಾದೇವಿಗಾರರಿಂದ ಹೆಚ್ಚು ದರದ ಬಡ್ದಿಯ ಮೂಲಕ ಹಣವನ್ನು ಪಡೆಯುತ್ತಿದ್ದರು. ನಂತರ ಲೇವಾದೇವಿಗಾರರು ಜಮೀನ್ದಾರರಾಗುತ್ತಿದ್ದರು. ಆದಿವಾಸಿಗಳು ಹಣವನ್ನು ಹಿಂತಿರುಗಿಸಲು ಸಾದ್ಯವಾಗದಿದ್ದಾಗ ಬಲವಂತದಿಂದ ಅವರು ಜಮೀನ್ದಾರರ ಕರಾರು ಪತ್ರಕ್ಕೆ ಒಳಪಡುತ್ತಿದ್ದರು. ನಂತರ ಅವರು, ಸಾಲ ಮರಳಿಸುವ ಎಲ್ಲಾ ತರಹದ ಪ್ರಯತ್ನಗಳಿಂದ ದೂರಸರಿಯುತ್ತಿದ್ದರು. ಸಾಲಗಾರನ ಮರಣದ ನಂತರ ಅವನ ಮಕ್ಕಳು ಜಮೀನ್ದಾರರ ಕೈಕಳಗೆ ಕೆಲಸಮಾಡಬೇಕಾಗುತ್ತಿತ್ತು. ಅಂಡಮಾನಿನ ಆದಿವಾಸಿಗಳು ಹೊರಗಿನ ಪ್ರಪಂಚದಲ್ಲಿ ಸ್ವಯಂ ಅಧಿಕಾರ ಪಡೆದ ಸಮಾಜದಿಂದ ಬೇರ್ಪಟ್ಟಿದ್ದರು. ನಂತರ ಅದು ಬುಡಕಟ್ಟು ಜನರಿಗೆ ಮಾರಕವಾಗಿ ಪರಿಣಮಿಸಿತು. ಬ್ರಿಟೀಷರ ಆಡಳಿತಕಾಲದಲ್ಲಿ ಕೆಲವು ಬಡಕಟ್ಟು ಜನರನ್ನು ನಾಶ ಮಾಡಲೆಂದು ಪ್ರಯತ್ನಿಸಿದ್ದರು. ಬ್ರಿಟಿಷರು ಮತ್ತು ಜಮೀನ್ದಾರರ ದಬ್ಬಾಳಿಕೆ ಮತ್ತು ಕಿರುಕುಳದಿಂದ ಬೇಸತ್ತ ಕೆಲವು ಆದಿವಾಸಿಗಳು ೧೮ನೇ ಮತ್ತು ೧೯ನೇ ಶತಮಾನದ ಮೊದಲಭಾಗದಲ್ಲಿ ದಂಗೆ ಎದ್ದರು. ಅಂತಹ ದಂಗೆಗಳಲ್ಲಿ ಸಂತಲ್ ಹಲ್ (ಸಂತಲ್ ದಂಗೆ)೧೮೫೫-೫೬ ಒಂದಾಗಿದೆ. ಇವರು ಬ್ರಿಟೀಷ್ ಆಡಳಿತದಲ್ಲಿ, ಕ್ರೂರವಾದ ಹಿಂಸಾಚಾರಕ್ಕೆ ಬಲಿಯಾಗಿದ್ದರು. ಆದರೆ ೧೯ನೇ ಶತಮಾನದ ಕೊನೆಯ ಭಾಗದಲ್ಲಿ ಸುಂಕದ ಬಾರವನ್ನು ಕಡಿಮೆಗೊಳಿಸಿತಾದರೂ ನಂತರ ಭೊ ಸ್ವಾದೀನ ಪಡೆದುಕೂಳ್ಳುವುದನ್ನು ಮುಂದುವರೆಸಿದರು. ಆರ್ಥಿಕತೆಯ ಕೊರತೆಯಿಂದ ಮತ್ತು ಕೆಲವು ಸಮಸ್ಯೆಗಳಿಂದ ಆದಿವಾಸಿಗಳು ಭಾರತದಲ್ಲಿನ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಭಾರತದ ಸ್ವಾತಂತ್ಯ ಹೋರಾಟದಲ್ಲಿ ಭಾಗಹಿಸಿರುವ ಬಗ್ಗೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಕೆಲವು ಬುಡಕಟ್ಟು ಜನಾಂಗದ ದಂಗೆಗಳು ಮತ್ತು ಸುಧಾರಣಾ ಚಳುವಳಿಗಳನ್ನು ಕಾಣಬಹುದಾಗಿದೆ. ಅದರಲ್ಲಿ ಕೆಲವು ಬುಡಕಟ್ಟು ಜನರು ಭಾರತದ ಸ್ವಾತಂತ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಅವರಲ್ಲಿ ಧರಿಂಧರ್ ಭೈಯೂಮ್ ಲಕ್ಶ್ಮನ್ ನಾಯಕ್, ಜಂತ್ಯ ಭಿಲ್, ಬಂಗಾರು ದೇವಿ, ರೆಹಮಾ ವಾಸವಿ ಮುಂತಾದವರ ಬುಡಕಟ್ಟು ಜನರನ್ನೊಳಗೊಂಡಿದೆ.

ದಂಗೆಗಳ ಪಟ್ಟಿ

ಬದಲಾಯಿಸಿ

ಬ್ರಿಟಿಷರ ಆಡಳಿತಕಾಲದಲ್ಲಿ ಭಾರತದಲ್ಲಿ ಕೆಲವು ಹಿಂದುಳಿದ ವರ್ಗಗಳ ದಂಗೆಗಳು ನಡೆದಿದ್ದವು. ಅವುಗಳಲ್ಲಿ ಪ್ರಮುಖವಾದ ದಂಗೆಗಳು ಬ್ರಿಟೀಷರ ಆಡಳಿತದ ವಿರುದ್ದ ನಡೆದ ದಂಗೆಗಳೇ ಆಗಿವೆ.

  • ೧ ಗ್ರೇಟ್ ಕುಕಿ (೧೮೬೦)
  • ೨ ಹಲ್ಬ ದಂಗೆ (೧೭೭೪-೭೯)
  • ೩ ಛಮ್ಕ ದಂಗೆ (೧೭೭೬-೧೭೮೯)
  • ೪ ಬೆಂಗಾಲ್ ನ ಛುರ್ ದಂಗೆ (೧೭೯೫-೧೮೦೦)
  • ೫ ಭೊಪಲ್ ಪಟ್ನಮ್ ದಂಗೆ (೧೭೯೫)
  • ೬ ಖುರ್ದ ದಂಗೆ (ಒರಿಸ್ಸ)(೧೮೧೭)
  • ೭ ಭಿಲ್ ದಂಗೆ (೧೮೨೨-೧೮೫೭)
  • ೮ ಪರಲ್ಕೊಟ್ ದಂಗೆ (೧೮೨೫)
  • ೯ ತರಪುರ್ ದಂಗೆ (೧೮೪೨-೫೪)
  • ೧೦ ಮರಿಯ ದಂಗೆ (೧೮೪೨-೬೩)
  • ೧೧ ಮೊದಲ ಸ್ವಾತಂತ್ರ್ಯ ಸಂಗ್ರಾಮ (೧೮೫೬-೫೭)
  • ೧೨ ಭಿಲ್ ದಂಗೆ (೧೮೫೮)
  • ೧೩ ಕೊಯಿ ದಂಗೆ (೧೮೫೯)
  • ೧೪ ಗೊಂಡ ದಂಗೆ (ರಾಮ್ ಜೇ ಗೊಂಡ)(೧೮೬೦)
  • ೧೫ ಮುರಿಯ ದಂಗೆ (೧೮೭೬)
  • ೧೬ ರಾಣಿ ದಂಗೆ (೧೮೭೮-೮೨)
  • ೧೭ ಭುಮ್ಕಲ್ (೧೯೧೦)
  • ೧೮ ಮಣೆಪುರದ ಕುಕಿ ದಂಗೆ (೧೯೧೭-೧೯೧೯)
  • ೧೯ ಮೊದಲನೆಯ ರಂಪ ದಂಗೆ (೧೮೭೯)
  • ೨೦ ಎರಡನೆಯ ರಂಪ ದಂಗೆ (೧೯೨೧-೨೩)
  • ೨೧ ಸಂಥಲ್ ದಂಗೆ (೧೮೮೫-೧೮೮೬)

ಬುಡಕಟ್ಟು ಜನಾಂಗದ ವಿಂಗಡಣೆ ಮತ್ತು ಬೇಡಿಕೆಗಳು

ಬದಲಾಯಿಸಿ
  • ಕೆಲವೊಂದು ಸಂದರ್ಭಗಳಲ್ಲಿ ಆದಿವಾಸಿಗಳು ಸರ್ಕಾರದ ಮಾನ್ಯತೆ ಪಡೆಯುತ್ತಾರೆ. ಈ ಹಾದಿಯಲ್ಲಿ ಆದಿವಾಸಿಗಳ ವಿವರಣಾಪಟ್ಟಿಯು ಒಳಗೊಂಡಿರುತ್ತದೆ ಮತ್ತು ರಾಜಕೀಯವಾದ ಪರಿಣಾಮಗಳು ನಂಬಲಸಾದ್ಯವಾಗಿರುತ್ತವೆ. ಹೀಗಾಗಿ ಅವರ ಭಾಷೆಯನ್ನು ಪರಿಗಣಿಸಲಾಗುವುದಿಲ್ಲ.
  • ಆಸ್ಟೊಲಾಯ್ದ್ ಮತ್ತು ನಿಗ್ರಿಟೊ ಪಂಗಡಗಳು ಕಾಡಿನಲ್ಲಿ ವ್ಯತಿರಿಕ್ತ ಜೀವನವನ್ನು ನಡೆಸುತ್ತಿದ್ದರು. ಅವರು ಬೆಟ್ಟಗುಡ್ಡಗಳಲ್ಲಿ ಮತ್ತು ಮಂಜಿನಡಿಯಲ್ಲಿ ಮುಳುಗಡೆಯಾದ ಘಟನೆಯನ್ನು ಭಾರತದಲ್ಲಿ ನಾವು ಕಾಣಬಹುದಾಗಿದೆ. ನಂತರ ಅವರನ್ನು ಆದಿವಾಸಿಗಳೆಂದು ವಿಂಗಡಿಸಲಾಯಿತು.
  • ಸ್ವಯಂ ಅಧಿಕಾರ ಪಡೆದ ಮಂಗೊಲಾಯ್ದ್ ಬುಡಕಟ್ಟು ಜನಾಂಗ ಉತ್ತರಭಾರತದ ಖಾಸೀಸ್, ಅಪಾಟನಿ ಮತ್ತು ನಾಗಾಸ್ ಬುಡಕಟ್ಟು ಜನಾಂಗಗಳನ್ನೊಳಗೊಂಡಿದೆ. ಈ ಬುಡಕಟ್ಟು ಜನರು ಆಸ್ತ್ರೊ-ಏಷ್ಯಾಟಿಕ್ ಅಥವಾ ಟಿಬೆಟೊ-ಬರ್ಮನ್ಗಲಾಗಿದ್ದರೆ. ಇವರೆಲ್ಲರನ್ನು ಆದಿವಾಸಿಗಳೆಂದು ಪರಿಗಣಿಸಲಾಗುವುದಿಲ್ಲ. ಈ ಜಾಗವು ೭.೫% ಭಾರತದ ಭೂ ಭಾಗವನ್ನೊಳಗೊಂಡಿದೆ. ಆದರೆ ೨೦%ಆದಿವಾಸಿಗಳ ಜನಸಂಖ್ಯೆ ಇದೆ. ಹಾಗಾದರೆ ಎಲ್ಲಾ ಉತ್ತರ ಭಾರತದ ಪಂಗಡಗಳನ್ನು ಆದಿವಾಸಿಗಳೆಂದು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ ಟಿಬೆಟೊ-ಬರ್ಮನ್ ಆದಿವಾಸಿಗಳು ಮಣಿಪುರದ ಮಿಹಿಟಿ ಭಾಷೆಯನ್ನು ಮಾತನಾಡಿದರೆ ಅವರು ಆದಿವಾಸಿಗಳಾಗುತ್ತಾರೆ. ಆದರೆ ಅವರು ಹಿಂದು ಮತವನ್ನು ಪಡೆಯಲು ಅನೇಕ ಶತಮಾನಗಳೇಬೇಕಾಯಿತು.
  • ಒಂದು ಪಂಗಡಕ್ಕೆ ಸಾಮಾಜಿಕ ಸ್ಥಾನಮಾನ ಕೊಡುವುದು ತುಂಬಾ ಜಟಿಲವಾದ ಸಮಸ್ಯೆ. ಇದು ಒಂದು ಜಾತಿಯೋ ಅಥವಾ ಒಂದು ಬುಡಕಟ್ಟು ಜನಾಂಗವೋ ಎಂದು ತೀರ್ಮಾನ ತೆಗೆದುಕೊಳ್ಳುವುದು ಬಹು ಕಷ್ಟ.
  • ಅವರ ಸಾಮಾಜಿಕ ಸಂಘಟನೆ, ಬೇರೆ ಬುಡಕಟ್ಟು ಜನಾಂಗದೊಂದಿಗಿನ ಸಂಬಂಧ ಮತ್ತು ಸ್ವಯಂ ವರ್ಗೀಕರಣ ಹಾಗೂ ಬೇರೆ ಜನಾಂಗದಿಂದ ವಿದ್ಯೆ ಸಂಪಾದಿಸುವುದು ಈ ಎಲ್ಲಾ ವಿಷಯಗಳನ್ನು ನಾವು ಪರಿಗಣಿಸಬಹುದಾಗಿದೆ.ಆದರೆ ಈ ವಿಂಗಡಣೆ ೧೦೦ ವರ್ಷಗಳವರೆಗೊ ವಿಸ್ತರಣೆಗೊಂಡಿತ್ತು.ಜೊತೆಗೆ ಹಳೆಯ ಪುರಾತನ ಕಾಲದ ಸೂತ್ರದಲ್ಲಿ ಜಾತಿ ಬಗೆಗಿನ ಪಕ್ಷಪಾತಗಳು ಯಾವುದೇ ಸಹ ಪರಿಶುದ್ದ ವಿಂಗಡಣೆಗೆ ಒಳಗಾಗಿಲ್ಲ.
  • ಬುಡಕಟ್ಟು ಜನಾಂಗವನ್ನು ವಿಂಗಡಣೆ ಮಾಡುವುದು ಸುಲಭವಾದ ವಿಚಾರವಲ್ಲ. ಅದು ಒಂದು ಜನಾಂಗ ಆದಿವಾಸಿಗಳಾಗುವ ಮಾನದಂಡ ಅಥವಾ ಪ್ರಮಾಣದ ಮೇಲೆ ನಿಂತಿರಬಹುದು ಅಥವಾ ರಾಜ್ಯದ ಉಪಯೊಗಕ್ಕೊಸ್ಕರ ಕಾನೂನುಗಳು ಸೃಸ್ಟಿಸುವ ಪ್ರಯತ್ನಗಳಾಗಿರಬಹುದು. ಜೊತೆಗೆ ಉದ್ಯೊಗ ಮತ್ತು ಮೀಸಲಾತಿ ಇವುಗಳಲ್ಲಿ ವಿವರಣೆ ಪಟ್ಟಿಯಲ್ಲಿರುವಂತೆ ಅನುಭವಿಸುತ್ತಿರಬೇಕಾಗುತ್ತಿತ್ತು.
  • ಮಣಿಪುರದಲ್ಲಿ ಮಿಯಿಟಿ ವಿಮರ್ಶಕರು ಹೇಳುವುದೇನೆಂದರೆ ವಿವರಣೆಯಲ್ಲಿರುವ ದೋಷದಿಂದ ಬುಡಕಟ್ಟು ಜನಾಂಗದ ಸ್ತಾನಮಾನ ಮತ್ತು ಆರ್ಥಿಕತೆಯು ಅನಾನುಕೂಲಕರ ಪರಿಸ್ಥಿತಿಯನ್ನು ತಂದೊಡ್ಡಿದೆ ಮತ್ತು ಮಿಯಟಿಗಳು ಬೇರೆ ಪಂಗಡಗಳ ವಿರುದ್ದ ಉದ್ಯೋಗಕ್ಕಾಗಿ ಸ್ಪರ್ಧೆ ನಡೆಸುತ್ತಿರುವುದು ಕಾಣಬಹುದಾಗಿದೆ.
  • ಅಸ್ಸಾಂನಲ್ಲಿ ರಾಜ್ ಭೊಂಗ್ ಷಿ ಬುಡಕಟ್ಟು ಜನಾಂಗವು ಅವರ ಸ್ತಾನಮಾನ ಮತ್ತು ಬೇಡಿಕೆಗಳನ್ನು ಈಡೇರಿಸುವಲ್ಲಿ ಮಾದರಿಯಾಗಿದೆ. ರಾಜಾಸ್ತಾನದಲ್ಲಿ ಗುಜ್ಜಾರ್ ಜನಾಂಗವು ಎಸ್.ಟಿ ಸ್ಥಾನಮಾನದ ಜೊತೆಗೆ ದೆಹಲಿಯ ರಾಷ್ಟ್ರೀಯ ಆದಾಯ ದರದ ಬಗ್ಗೆ ಪತ್ರಿಕೆಗೆ ತನ್ನ ಸವಾಲನ್ನು ಇಟ್ಟಿದೆ. ಹೀಗಾಗಿ ರಾಜಾಸ್ತಾನದ ಸರ್ಕಾರವು ಅವರ ಬೇಡಿಕೆಗಳನ್ನು ನಿರಾಕರಿಸಿತು ಹಾಗೂ ಗುಜ್ಜಾರ್ ಬುಡಕಟ್ಟು ಜನಾಂಗವನ್ನು ಮೇಲ್ಜಾತಿ ಎಂದು ಪರಿಗಣಿಸಲಾಯಿತು. ಆದರೆ ಕೆಲವು ವಾದಗಳಲ್ಲಿ ಬುಡಕಟ್ಟುತನದ ಹಕ್ಕು ಬಾದ್ಯತೆಗಳು ಖಂಡನೆಗೊಳಗಾಗಿವೆ.

ಬುಡಕಟ್ಟು ಜನರ ವಿವಾಹ ಪದ್ದತಿ

ಬದಲಾಯಿಸಿ

ಬುಡಕಟ್ಟು ಜನರು ತಮ್ಮ ಕುಲದಲ್ಲೆ ವಿವಾಹ ಮಾಡಿಕೊಳ್ಳುವ ಪದ್ದತಿಯು ಬಹುಸಂಖ್ಯಾತರಾದ ಹಿಂದೂಗಳಿಂದ ಸಾಬೀತಾಗಿದೆ. ಹೀಗಾಗಿಯೂ ಕೆಲವು ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರ ಪ್ರಕಾರ ಈ ಪದ್ದತಿಯು ಒಟ್ಟು ಬುಡಕಟ್ಟು ಜನಾಂಗದ ಮೂಲವು ಬೇರೆ ಬೇರೆ ಪಂಗಡಗಳಿಂದ ಆಗಿರುತ್ತದೆಂದು ಪ್ರತಿಬಿಂಬಿಸುತ್ತದೆ. ಅವು ಈಗ ನೆಲೆನಿಂತಿರುವ ಭಾರತೀಯ ಜಾತಿಗೆ ಒಳಗೊಂಡಿದ್ದಾರೆ. ನಮ್ಮ ಹಿಂದೂ ಸಮಾಜದ ಮತ್ತೊಂದು ಗುಣಲಕ್ಷಣವೆಂದರೆ, ಮುಸ್ಲಿಮ್ ಮತು ಬೇರೆ ಪಂಗಡಗಳೊಂದಿಗೆ ತಾರತಮ್ಯವನ್ನು ತೋರಿಸುತ್ತಿದ್ದಾರೆ. ಹೀಗಾಗಿ ವಿವಾಹವನ್ನು ಮಾಡಬೇಕಾದಾಗ ಅನುಸರಿಸುವ ಈ ಪದ್ದತಿಗಳು ಎಲ್ಲಾ ಬುಡಕಟ್ಟು ಪಂಗಡಗಳಲ್ಲಿ ಸರ್ವವ್ಯಾಪಿಯಾಗಿವೆ. ಜೊತೆಗೆ ಈ ಎಲ್ಲಾ ಗುರುತುಗಳು ನಂಬಲಸಾದ್ಯವಾದ ಅಂತರವನ್ನು ಜಾತಿ ಮತ್ತು ಬುಡಕಟ್ಟು ಜನಾಂಗದಲ್ಲಿ ತೋರಿಸುತ್ತದೆ. ಈ ಪದ್ದತಿಗಳೆಲ್ಲಾ ಪುರಾತನ ಕಾಲದ ಬುಡಕಟ್ಟು ಸಮಾಜದಿಂದ ಹಿಂದೂ ಜಾತಿಗೆ ಬಂದು ಸೇರಿವೆ. ಬಹಳ ಆಶ್ಛರ್ಯಕರವಾದ ವಿಷಯವೆಂದರೆ ಆದಿವಾಸಿಗಳ ಜನಾಂಗದಲ್ಲಿ ಮುಸ್ಲಿಮರು ಸೇರಿದ್ದಾರೆ. ಅವರಲ್ಲಿ ಕಾಶ್ಮೀರದ ಮುಸಲ್ಮಾನ ಗುಜ್ಜಾರ್ ಗಳು ಮತ್ತು ಪಾಕಿಸ್ತಾನದ ಕಲಶ್ ಆದಿವಾಸಿಗಳು ಸೇರಿದ್ದಾರೆ. ಇವರ ಅವಲೋಕನದ ಪ್ರಕಾರ ಹಿಂದೂ ಜಾತಿ ಮತ್ತು ಕಾಶ್ಮೀರಿಗಳಲ್ಲದ ಆದಿವಾಸಿಗಳಲ್ಲಿ ಜಾತಿ ಬಿಟ್ಟು ಹೊರ ಜಾತಿಯವರನ್ನು ವಿವಾಹವಾಗುವ ಪದ್ದತಿಯು ಸಾರ್ವೆಸಾಮಾನ್ಯವಾಗಿದೆ. ಹೀಗಾಗಿ ಹೊಅವರ ಸುತ್ತಮುತ್ತಲೂ ಇರುವ ಮುಸ್ಲಿಮರು ಈ ಕೆಲಸ ಮಾಡುವುದಿಲ್ಲ. ಕೆಲವು ಮಾನವಶಾಸ್ರಜ್ಞರು ಬುಡಕಟ್ಟು ಜನಾಂಗಗಳಲ್ಲಿರುವ ವ್ಯತ್ಯಾಸ ಗಳನ್ನು ತೋರಿಸುತ್ತಾರೆ. ಅವರು ಮುಂದುವರೆಸುತ್ತಾ ಬುಡಕಟ್ಟಿಗ ಮತ್ತು ಬುಡಕಟ್ಟು ಜನರ ಜಾತಿ ಪದ್ದತಿಯು ಆ ಜನಾಂಗದ ಒಡಕಿಗೆ ಕಾರಣವಾಗಿದೆ. ಜೊತೆಗೆ ಮಿಶ್ರ ಜನರನ್ನು ಹೊಂದಿರುವ ಪಂಗಡಗಳು ಉತ್ಪತಿಯಾಗುತ್ತವೆ. ಬೇರೆ ಮಾತಿನಲ್ಹಿ ಹೇಳುವುದಾದರೆ ಬುಡಕಟ್ಟಿನಲ್ಲಿ ಸಂಭವಿಸುತ್ತಿರುವ ಪುರಾಣಗಳ ಸೃಷ್ಟಿಯು ಅವರ ಬೆಳವಣಿಗೆಯ ಅವನತಿಯನ್ನು ತಿಳಿಸುತ್ತದೆ. ಅವರು ಬುಡಕಟ್ಟು ಜನಾಂಗದವರನ್ನು ವಿವಾಹವಾಗುವ ಪದ್ದತಿಯನ್ನು ಕಾಪಾಡುತ್ತಾ ಬಂದಿದ್ದಾರೆ. ಆದರೆ ಅಲ್ಲೆ ಈಗಾಗಲೇ ನೆಲೆ ನಿಂತಿರುವ ಮಿಶ್ರ ಜಾತಿಯನ್ನೊಳಗೊಂಡ ಪಂಗಡಗಳು ಕುಲದಲ್ಲೆ ವಿವಾಹವಾಗುವ ಪದ್ದತಿಯನ್ನು ವಿರೋಧಿಸುತ್ತಾರೆ.

ಬೇರೆ ಮಾನದಂಡ

ಬದಲಾಯಿಸಿ

ಜಾತಿಗಳ ಬೆಳವಣಿಗೆಯು ಜಟಿಲವಾದ ಮತ್ತು ಸ್ಥಳೀಯವಾಗಿ ,ಆರ್ಥಿಕವಾಗಿ ಪರಸ್ಪರ ಬದಲಾವಣೆಗೆ ಒಳಗೊಂಡಿರುತ್ತದೆ. ಬುಡಕಟ್ಟು ಜನಾಂಗಗಳು ತಕ್ಕಷ್ಟು ಮಟ್ಟಕ್ಕೆ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಆದರೆ ಅನೇಕ ಬುಡಕಟ್ಟು ಜನರ ಭೂ ಒಡೆತನವು ಸಾಂಪ್ರದಾಯಿಕವಾಗಿ ಆ ಜನಾಂಗದ ಸದಸ್ಯರಿಂದ ಬಂದಿರುತ್ತದೆ. ಜೊತೆಗೆ ಈ ಜನಾಂಗವು ಸಮಾನತೆಯನ್ನು ಪ್ರತಿಪಾದಿಸುತ್ತದೆ ಮತ್ತು ನಾಯಕತ್ವವು ಬಂಧು ಬಳಗಗಳಿಂದ ಬೆಸೆದುಕೊಂಡಿದೆ ಮತ್ತು ಇದು ವಂಶಪಾರಂಪರ್ಯವಾಗಿ ಬಂದಿರುತ್ತದೆ. ಬುಡಕಟ್ಟುಗಳನ್ನು ವಂಶಗಳ ಭಾಗಗಳೆಂದು ಪರಿಗಣಿಸಬಹುದು ಮತ್ತು ಇವುಗಳ ಮುಂದುವರೆದ ಮನೆತನಗಳು ಸಾಮಾಜಿಕ ಸಂಸ್ಥೆಯ ಹಿಡಿತದಲ್ಲಿರುತ್ತದೆ. ಈ ಮಾನದಂಡವು ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಹೊಂದಾಣೆಕೆಯಾಗುವುದಿಲ್ಲ. ಭಾಷಯು ಬುಡಕಟ್ಟು ಜನರ ಮತ್ತು ಅವರ ಸ್ಥಾನಮಾನವನ್ನು ಸೂಚಿಸುವ ಖಚಿತತೆಯ ಸೂಚಕವಾಗಿರುವುದಿಲ್ಲ. ಅದರಲ್ಲೂ ಒಂದು ಪ್ರದೇಶದಲ್ಲಿನ ಧರ್ಮ, ಭಾರತದಲ್ಲಿ ಬುಡಕಟ್ಟು ಧರ್ಮಗಳು , ಭಾರತೀಯ ಬಹುತೇಕ ಆದಿವಾಸಿಗಳು ಹಿಂದೂ ಮತ್ತು ಕ್ರೈಸ್ತ ಧರ್ಮವನ್ನು ಅನುಸರಿಸುತ್ತಾರೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಒಡಿಸ್ಸಾ, ಮಧ್ಯಪ್ರದೇಶ, ಝಾರ್ಖಾಂಡಿನ ಆದಿವಾಸಿಗಳು ಪ್ರೊಟೊಸ್ಟೆಂಟ್ ಪಂಥಗಳಿಗೆ ಮತಾಂತರಗೊಂಡಿದ್ದಾರೆ. ಆದಿವಾಸಿಗಳ ನಂಬಿಕೆಗಳು ಬುಡಕಟ್ಟು ಜನಾಂಗಗಳ ನಂಬಿಕೆಗಿಂತ ಭಿನ್ನವಾಗಿವೆ ಮತ್ತು ಅವುಗಳು ಸಾಮಾನ್ಯವಾಗಿ ಐತಿಹಾಸಿಕ ವೈದಿಕಧರ್ಮಕ್ಕಿಂತ ಭಿನ್ನವಾಗಿವೆ. ಅದರ ಜೊತೆಗೆ ಅದ್ವೈತ ಆಧಾರವಾಗಿರುವ ಐರೋಪ್ಯ ಭಾರತೀಯ ದೇವತೆಗಳ (ಅವುಗಳು ಕೆಲವೊಮ್ಮೆ ಪ್ರಾಚೀನ ಇರಾನಿನ ಮೂಲದವುಗಳಾಗಿವೆ. ಗ್ರೀಕ್ ಮತ್ತು ರೋಮ್ದೇವತೆಗಳು ಇತ್ಯಾದಿ . ಮಿತ್ರ/ಮಿತ್ರಾಗಳು),ಆರಾಧನ ಮೂರ್ತಿಗಳ ಮತ್ತು ಪುನರ್ಜನ್ಮಗಳ ಅಭಾವವಿದೆ.

ಹಿಂದೂ ಧರ್ಮ

ಬದಲಾಯಿಸಿ

ಆಧುನಿಕ ಹಿಂದೂ ಧರ್ಮದಲ್ಲಿ ಆದಿವಾಸಿಗಳ ಮೂಲ ಕೆಲವು ಇತಿಹಾಸಕಾರರು ಮತ್ತು ಮಾನವ ಶಾಸ್ತ್ರಜ್ಞರು ಪ್ರತಿಪಾದಿಸಿದಂತೆ ಇಂದಿನ ಜಾನಪದ ಹಿಂದೂಧರ್ಮ ಎಂದು ರಚಿತವಾಗಿರುವ ಅದು ಭಾರತೀಯ ಅರ್ಯನ್ ಸಂಸ್ಕೃಂತಿಗಳಿಗಿಂತ ಹೆಚ್ಚು ಆದಿವಾಸಿಗಳ ನಂಬಿಕೆ ಆಚರಿಸಿಕೊಂದು ಬಂದಿರುವ ಮೂರ್ತಿಶಿಲ್ಪಗಳ ಮತ್ತು ದೇವತೆಗಳ ಆರಾಧನೆಗಳ ಮಿಶ್ರಣದಿಂದ ಬಂದಿದ್ದಾಗಿದೆ. ಇದು ಅವುಗಳ ಜೊತೆಗೆ ಕೆಲವು ಪ್ರಾಣಿಗಳಿಗೂ ಪವಿತ್ರ ಸ್ಥಾನವನ್ನು ಕೊಟ್ಟಿದೆ. ಅವುಗಳೆಂದರೆ ಕೋತಿ, ಹಸು, ನವಿಲು, ನಾಗರಹಾವು ಮತ್ತು ಆನೆಗಳಿಗೆ ಮತ್ತು ಕೆಲವು ಗಿಡಗಳು ಅರಳಿ, ತುಳಸಿ, ಬೇವುಗಳಿಗೂ ಪವಿತ್ರ ಸ್ಥಾನವನ್ನು ನೀಡಿದೆ. ಅವುಗಳು ಕೆಲವೊಮ್ಮೆ ಕೆಲವು ಬುದಕಟ್ಟು ಆದಿವಾಸಿ ಜನಾಂಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ಆದಿವಾಸಿ ಸಂತರು

ಬದಲಾಯಿಸಿ

ಸಂತ ಎಂದರೆ ಭಾರತದ ಪವಿತ್ರ ಮನುಷ್ಯ. ಅದು ಭಕ್ತ ಅಥವಾ ಸಂನ್ಯಾಸಿಗೆ ಇರುವ ಹೆಸರಾಗಿದೆ. ವಿಶೇಷವಾಗಿ ದಕ್ಶಿಣ ಭಾಗದಲ್ಲಿ ಮತ್ತು ಪೂರ್ವ ಭಾರತದಲ್ಲಿ ಸಾಮಾನ್ಯವಾಗಿ ಒಬ್ಬ ಪವಿತ್ರ ಅಥವಾ ಸಂತನಾದ ವ್ಯಕ್ತಿಯನ್ನು ಮಹಾತ್ಮ ಪರಮಹಂಸ, ಸ್ವಾಮಿ ಎಂದು ಕರೆಯಲಾಗುತ್ತದೆ ಅಥವಾ ಅವರ ಹೆಸರಿನ ಮುಂದೆ ಶ್ರೀ ಶ್ರೀ ಎಂದು ಪೂರ್ವಪ್ರತ್ಯಯ ಕೊಡಲಾಗುತ್ತದೆ. ಸಂತ ಎಂಬ ಪದ ಕೆಲವೊಮ್ಮೆ ಇಂಗ್ಲೀಷ್ ನಲ್ಲ್ಲಿ ತಪ್ಪಾಗಿ 'ಹಿಂದೂ ಸೈಂಟ್' ಅರ್ಥೈಸಲಾಗುತ್ತದೆ. ಆದಾಗ್ಯೂ ಸಂತ ಎಂಬುದು ಮತ್ತು ಸೈಂಟ್ ಎಂಬುದಕ್ಕೆ ಯಾವುದೇ ಸಂಬಂಧವಿಲ್ಲದ್ದಾಗಿದೆ.

  • ಸಂತ ಬುದ್ದು ಭಗರ್ ರು, ಕೊಲ್ ದಂಗೆಯ ಮುಂದಾಳತ್ವ ವಹಿಸಿದ್ದರು. ಮುಸ್ಲಿಂ ಆಡಳಿತಗಾರರು ಮುಂಡಾ ಬುಡಕಟ್ಟಿನವರ ಮೇಲೆ ವಿಧಿಸಿದ್ದ ತೆರಿಗೆಯನ್ನು ವಿರೋಧಿಸುವುದು ಇದರ ಉದ್ದೇಶವಾಗಿತ್ತು.
  • ಸಂತ ಧೀರ ಅಥವಾ ಕಣ್ಣಪ್ಪ ನಯನಾರ್.ಇವರು ೬೩ನಯನಾರ್ ಶೈವ ಸಂತರಲ್ಲಿ ಒಬ್ಬರು. ಈ ಬಿಲ್ಲುಗಾರರಿಂದ 'ಶಿವ' ಸಂತೋಷದಿಂದ ಆಹಾರದ ಕಣಿಕೆಗಳನ್ನು ಸ್ವೀಕರಿಸಿದ್ದನು. ಇವರು ಹೆಳುವಂತೆ ಅವನು ಬಾಯಿಂದ ನೀರನ್ನು ಲಿಂಗದ ಮೇಲೆ ಹರಿಸಿದ್ದನು ಮತ್ತು ದೇವರು ಹಂದಿ ಮಾಂಸವನ್ನು ಆಹಾರವಾಗಿ ಇವರಿಗೆ ನೀಡಿದ್ದನು.
  • ಸಂತ ದುದಾಲಿನಾಥ್, ಕೋಲಿ, ಗುಜರಾತಿ, ೧೭ ಮತ್ತು ೧೮ನೇ ಶತಮಾನದ ಒಬ್ಬ ಭಕ್ತ(ಪುಟ.೪,ದ ಸ್ಟೋರಿ ಆಫ಼್ ಹಿಸ್ಟಾರಿಕ್ ಪೀಪಲ್ ಆಫ಼್ ಇಂಡಿಯ ದ ಕೋಲಿಸ್)
  • ಸಂತ ಗಂಗ ನರೈನ್ ಭೂಮಿ ಯಜ್ಞದಂಗೆಯ ಮುಂದಾಳತ್ವ ವಹಿಸಿದ್ದರು. ಬ್ರೀಟಿಷ್ ಮಿಷನರಿಗಳು ಮತ್ತು ವಸಾಹತುಗಳನ್ನು ವಿರೋದಿಸುವುದು ಇದರ ಉದ್ದೇಶವಾಗಿತ್ತು.
  • ಸಂತ ಗಿರಾಣಿ ವೆಲ್ನಾಥ್ ಜಿ,ಕೋಲಿ,ಜುನಾಗಡದ ಗುಜರಾತಿ,೧೭ ಮತ್ತು೧೮ ನೇ ಶತಮಾನದ ಒಬ್ಬ ಭಕ್ತ.
  • ಸಂತ ಗುರುದೇವ ಕಲಿಚರಣ ಬ್ರಹ್ಮ ಅಥವಾ ಗುರು ಬ್ರಹ್ಮ, ಒಬ್ಬ ಬೋಡೋ ಜನಾಂಗಕ್ಕೆ ಸೇರಿದವ. ಇವನು ಮಿಷನರಿ ಮತ್ತು ವಸಾಹತುಶಾಹಿಯನ್ನು ವಿರೋಧಿಸುವ ಉದ್ದೇಶದಿಂದ ಬ್ರಹ್ಮ ಧರ್ಮವನ್ನು ಸ್ಥಾಪಿಸಿದನು. ಬ್ರಹ್ಮ ಧರ್ಮ ಚಳುವಳಿ ಎಲ್ಲಾ ಜನರು ಒಟ್ಟುಗೂಡಿ ಜೊತೆಯಾಗಿ ದೇವರನ್ನು ಪ್ರಾರ್ಥಿಸಲು ಸಾಧ್ಯವಾಗಿಸಿತ್ತು ಮತ್ತು ಇಂದಿಗೂ ಉಳಿದುಕೊಂಡಿದೆ.

ಸಂತ ಕಲ್ಲು ದೇವ್,ಪಂಜಾಬ್, ಇವರು ಮಿನುಗಾರ ನಿಶದ ಸಮುದಾಯಕ್ಕೆ ಸೇರಿದವರಾಗಿದ್ದರು.

  • ಸಂತ ಕುಬೇರ, ಗುಜರಾತಿ ಜನಾಂಗ, ಸಾರಸದ ಕೋಲ ಬುಡಕಟ್ಟು, ೩೫ ವರ್ಷಕ್ಕಿಂತ ಹೆಚ್ಚುಕಾಲ ಬೋದಿಸಿದ ಮತ್ತು ಅವನ ಕಾಲದಲ್ಲಿ ೨೦೦೦೦ ಅನುಯಾಯಿಗಳನ್ನು ಹೊಂದಿದ್ದನು.
  • ಸಂತ ಜಾಟ್ರಾ ಒರಾಯನ್, ಒರಾಯನ್, ಠಾಣಾ ಭಾರತ್ ಚಳುವಳಿ ಮುಂದಾಳತ್ವ ವಹಿಸಿದ್ದನು.
  • ಸಂತ ಶ್ರೀ ಕೋಯಾ ಭಗತ್ , ಕೋಲಿ, ಗುಜರಾತಿ, ೧೭ ಮತ್ತು ೧೮ನೇ ಶತಮಾನದ ಒಬ್ಬ ಭಕ್ತ.
  • ಸಂತ ತಾಂತ್ಯಾಮಮ(ಬಿಲ್ಲುಗಾರ), ಒಬ್ಬ ಬಿಲ್ಲುಗಾರ, ಇವರಿಂದ ಇವರ ನಂತರ ಒಂದು ಚಳುವಳಿಗೆ "ಜನನಾಯಕ ತಾಂತ್ಯಾ ಬಿಲ್ಲುಗಾರ" ಎಂಬ ಹೆಸರು ಬಂದಿತು.
  • ಸಂತ ತಿರುಮಣೈ ಅಲ್ವಾರ್, ಕಲ್ಲಾರ, ತಮಿಳಿನಲ್ಲಿ ೬ ವೇದಾಂತಗಳನ್ನು ರಚಿಸಿದ್ದಾನೆ.

ಋಷಿಗಳು

ಬದಲಾಯಿಸಿ
  • ಭಕ್ತರಾಜ್ ಬದುರಾಸ್, ಕೋಲಿ, ಗುಜರಾತಿ, ೧೭ ಮತ್ತು ೧೮ ನೇ ಶತಮಾನದ ಒಬ್ಬ ಭಕ್ತ.

ಭಕ್ತ ಶಬರಿ, ಒಬ್ಬ ನಿಶದ ಜನಾಂಗದ ಹೆಂಗಸು, ಇವಳು ಶ್ರೀರಾಮ ಮತ್ತು ಶ್ರೀಲಕ್ಷಣರಿಗೆ ಅವರು ಸೀತಾದೇವಿಯನ್ನು ಹುಡುಕಿಕೊಂಡು ಕಾಡಿಗೆ ಬಂದಿದ್ದಾಗ ಅವರಿಗೆ ತಿನ್ನಲು ಬೇರ್ ಹಣ್ಣುಗಳನ್ನು ಅರ್ಪಿಸಿದ್ದಳು. ಅವರು ಅವುಗಳನ್ನು ಸಂತೋಷದಿಂದ ಸ್ವೀಕರಿಸಿದ್ದರು.

  • ಮದನ್ ಭಗತ್, ಕೋಲಿ, ಗುಜರಾತಿ, ೧೭ ಮತ್ತು ೧೮ನೇ ಶತಮಾನದ ಒಬ್ಬ ಭಕ್ತ.
  • ಶನಿ ಕಂಜಿ ಸ್ವಾಮಿ, ಕೋಲಿ, ಗುಜರಾತಿ, ೧೭ ಮತ್ತು ೧೮ನೇ ಶತಮಾನದ ಒಬ್ಬ ಭಕ್ತ.
  • ಭಕ್ತರಾಜ್ ವಾಲ್ರಾಮ್, ಕೋಲಿ, ಗುಜರಾತಿ, ೧೭ ಮತ್ತು ೧೮ನೇ ಶತಮಾನದ ಒಬ್ಬ ಭಕ್ತ.

ಮಹರ್ಷಿಗಳು

ಬದಲಾಯಿಸಿ

ಮಹರ್ಷಿ ಮಾತಂಗ, ಮಾತಂಗ ಬಿಲ್ಲುಗಾರ, ಭಕ್ತೆ ಶಬರಿಯ ಗುರು. ನಿಜ ಹೇಳಬೇಕೆಂದರೆ ಚಂಡಾಳ ಜನಾಂಗದವರು ವರಹ ಪುರಾಣದಲ್ಲಿ ಕೆಲವು ವಾಕ್ಯಗಳಲ್ಲಿ ಕೆಲವೊಮ್ಮೆ ಮಾಂತಗರಿ ಎಂದು ಗುರುತಿಸಿಕೊಡಿದ್ದಾರೆ. ೧.೧೩೯.೯೧ ಮಹರ್ಷಿ ವಾಲ್ಮಿಕಿ, ಕಿರಾತ ಬಿಲ್ಲುಗಾರ, ಇವರು ರಾಮಾಯಣ ರಚಿಸಿದರು. ಇವರು ವಾಲ್ಮಿಕಿ ಸಮುದಾಯದಲ್ಲಿ ಒಬ್ಬ ಅವತಾರ ಪುರುಷ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಅವತಾರಗಳು

ಬದಲಾಯಿಸಿ
  • ಬಿಸ್ರಾ ಭಗವಾನ್ ಅಥ್ವಾ ಬಿಸ್ರಾ ಮುಂಡಾ, ಖಸ್ರಾ ಕೋರಾನ ಒಂದು ಅವತಾರವೆಂದು ಪರಿಗಣಿಸಲ್ಪಟ್ಟಿದೆ. ಜನರು ಇವರನ್ನು ಸಿಂಗ್ ಬೊಂಗ, ಸೂರ್ಯದೇವನಿಗೆ ಹೋಲಿಸಿದ್ದಾರೆ. ಇವನ ಪಂಥ ಕ್ರೈಸ್ತ ಮತಾಂತರಿಗಳನ್ನು ಒಳಗೊಡಿದೆ. ಅವನು ಮತ್ತು ಅವನ ಬುಡಕಟ್ಟು ಮುಂಡಾಗಳು, ವೈಷ್ಣವ ಸಂಪ್ರದಾಯಗಳೊಂದಿಗೆ ಸಂಬಂಧ ಹೊದ್ದಿದ್ದರು. ಹಾಗೆಯೇ ಅವರು ಶ್ರೀಚೈತನ್ಯರಿಂದ ಪ್ರಭಾವಿತರಾಗಿದ್ದರು. ಬಿಸ್ರಾಗಳು ಪಾರ್ನೆ ಸಹೋದರ ವೈಷ್ಣವರಿಗೆ ತುಂಬಾ ಹತ್ತಿರದವರಾಗಿದ್ದಾರೆ.
  • ಕಿರಾತ, ಬಿಲ್ಲುಗಾರನಾಗಿ ಶಿವನ ಒಂದು ಅವತಾರ. ಇದನ್ನು ಮಹಾಭಾರತದಲ್ಲಿ ಹೆಸರಿಸಿದ್ದಾರೆ.ಕರ್ಪ್ಪಿಲ್ಲಿಕ್ಕಾವು ಶ್ರೀ ಮಹಾದೇವ ದೇವಸ್ಥಾನ, ಕೇರಳದಲ್ಲಿ ಶಿವನನ್ನು ಈ ಅವತಾರದಲ್ಲಿ ಪೂಜಿಸುತ್ತಾರೆ ಮತ್ತು ಅದು ಭಾರತದಲ್ಲಿ ಉಳಿದಿರುವ ಅತ್ಯಂತ ಹಳೆಯ ದೇವಸ್ಥಾನ ಎಂದು ಪ್ರಸಿದ್ದಿಯಾಗಿದೆ.
  • ವೆಟ್ಟಕ್ಕೊರುಮಾಕನ್, ಕಿರಾತ ದೇವನ ಮಗ.
  • ಕಾಳದೂತಕ ಅಥವಾ'ವೈಕುಂಠನಾಥ',ಕಳ್ಳರ್(ಕಳ್ಳರು),ವಿಷ್ಣುವಿನ ಅವತಾರ

ಬೇರೆ ಬುಡಕಟ್ಟು ಮತ್ತು ಹಿಂದೂ ಧರ್ಮ

ಬದಲಾಯಿಸಿ
  • ಕೆಲವು ಹಿಂದೂಗಳು ನಂಬುವಂತೆ ಭಾರತೀಯ ಬುಡಕಟ್ಟು ಪ್ರಾಚೀನ ವೈದಿಕ ಜನರ ಸಲ್ವಾನ್ ಸಂಸ್ಕೃತಿಯ ಕಲ್ಪನೆಯ ಆದರ್ಶಗಳಿಗೆ ಹತ್ತಿರವಾದವರಾಗಿದ್ದಾರೆ.
  • ಮಾಧವ್ ಸದಾಶಿವ ಗೊಲ್ವಾಲ್ಕರ್ ಹೇಳುವಂತೆ ಬುಡಕಟ್ಟುಗಳು ಯಜ್ಞಗಳನ್ನು ಕೊಡಬಹುದು. ಅವರಿಗೆ ಸಮಾನ ಹಕ್ಕುಗಳು ಕೊಡಲ್ಪಡಬೇಕು ಮತ್ತು ದೇವಾಲಯದೊಳಕ್ಕೆ ಪ್ರವೇಶದ ಹಕ್ಕನ್ನು ಮತ್ತು ಪೂಜಿಸುವ ಹಕ್ಕು ಮತ್ತು ವೇದಗಳ ಅದ್ಯಯನವನ್ನು ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಸಮಾನ ಅವಕಾಶ ನೀಡಬೇಕು. ಈ ದಿನಗಳಲ್ಲಿ ನಮ್ಮ ಹಿಂದೂ ಸಮಾಜದಲ್ಲಿನ ಜಾತಿ ಪದ್ದತಿಯ ಎಲ್ಲ ಸಮಸ್ಯೆಗಳಿಗೆ ಇದು ಒಂದು ಸರಿಯಾದ ಪರಿಹಾರ ಮಾರ್ಗವಾಗಿದೆ.
  • ಭುವನೇಶ್ವರದ ಲಿಂಗರಾಜ ದೇವಸ್ಥಾನದಲ್ಲಿ, ಬ್ರಾಹ್ಮಣ ಮತ್ತು ಬದುಗಳ(ಬುಡಕಟ್ಟು)ಅರ್ಚಕರಿದ್ದಾರೆ. ಬದುಗಳು ದೇವತೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಅವರು ಮಾತ್ರ ದೇವತೆಗಳಿಗೆ ಸ್ನಾನ ಮತ್ತು ಶೃಂಗಾರ ಮಾಡಬಹುದು.
  • ಬಿಲ್ಲುಗಾರರ ಬಗ್ಗೆ ಮಹಾಭಾರತದಲ್ಲಿ ಪ್ರಸ್ಥಾಪಿಸಲಾಗಿದೆ. ದ್ರೋಣಾಚಾರ್ಯರು ಬಿಲ್ಲುಗಾರ ಹುಡುಗ ಏಕಲವ್ಯನ ಗುರುಗಳಾಗಿದ್ದರು ಮತ್ತು ಅವರು ತುಂಬ ಗೌರವ ಹೊಂದಿದ್ದರು. ಅವರು ಇಂದ್ರಪ್ರಸ್ಥದಲ್ಲಿ ನಡೆದ ಯುಧಿಷ್ಟಿರನ ರಾಜಸೂಯಯಾಗಕ್ಕೆ ಆಹ್ವಾನಿಸಲ್ಪಟ್ಟಿದ್ದರು.
  • ಭಾರತೀಯ ಬುಡಕಟ್ಟುಗಳು ರಾಮಾಯಣದಲ್ಲಿ ಮತ್ತು 'ಅರ್ಥಶಾಸ್ತ್ರ'ದಲ್ಲಿ ರಾಜನ ಸೈನ್ಯದ ಒಂದು ಭಾಗವಾಗಿದ್ದರು.
  • ಶಬರಿ ಒಬ್ಬ ಬಿಲ್ಲುಗಾರ ಮಹಿಳೆಯಾಗಿದ್ದು ಅವಳು ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕಿಕೊಂಡು ಕಾಡಿಗೆ ಬಂದಿದ್ದಾಗ ಅವರಿಗೆ ಬೋರೆ ಹಣ್ಣುಗಳನ್ನು ನೀಡಿದ್ದಳು.

ಮಾತಂಗ ಒಬ್ಬ ಬಿಲ್ಲುಗಾರ, ಒಬ್ಬ ಬ್ರಹ್ಮನಾದವನು.

ಮುಖ್ಯ ಲೇಖನ:ಶರಣ ಧರ್ಮ ಮುಂಡಾ, ಹೋ, ಸಂತಾಲಮತ್ತು ಒರಾಯನ್ ಬುಡಕಟ್ಟುಗಳು ಶರಣ ಧರ್ಮವನ್ನು ಅನುಸರಿಸುತ್ತಿದ್ದವು. ಇಲ್ಲಿ ಶರಣ ಎಂದರೆ ಪವಿತ್ರ ಅಡವಿ ಎಂದರ್ಥ. ಅವರ ಧರ್ಮ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದ ಮೌಖಿಕ ಸಂಪ್ರದಾಯಗಳ ಆಧಾರವಾಗಿದೆ. ಇದು ಒಂದು ದೇವರು 'ಮಹಾಶಕ್ತಿ'ಯಲ್ಲಿ ಬಲವಾದ ನಂಬಿಕೆ ಇಡುತ್ತದೆ. ಸಾಂಪ್ರಾದಾಯಿಕವಾಗಿ ಹೆಂಗಸರಿಗೆ ಶರಣರ ಆರಾಧನಾ ಸ್ಥಳಗಳಿಗೆ ಪ್ರವೇಶಾವಕಾಶ ಇಲ್ಲ. ಆದರೆ ಅಖಿಲ ಭಾರತೀಯ ಶರಣ ಧರ್ಮ ಸಮಿತಿ(ಆಲ್ ಇಂಡಿಯಾ ಶರಣ ರಿಲೀಜಿಯನ್ ಕಮಿಟಿ) ಈ ಪದ್ದತಿಯ ವಿರುದ್ದ ಅಂದೋಲನ ಕೈಗೊಂಡಿದೆ.

ಪ್ರತ್ಯೇಕ ಧಾರ್ಮಿಕ ಸಂಕೇತಕ್ಕಾಗಿ ಬೇಡಿಕೆ

ಬದಲಾಯಿಸಿ

ಕೆಲವು ಆದಿವಾಸಿ ಸಂಘಟನೆಗಳು ಕೆಲವು ಬೇಡಿಕೆಗಳನ್ನು ಒಳಗೊಂಡಿವೆ. ಅವುಗಳೆಂದರೆ ೨೦೦೧ರ ಭಾರತದ ಜನಗಣತಿಯಲ್ಲಿ ಬೇರೆಯಾದ ಆದಿವಾಸಿಗಳ ಧಾರ್ಮಿಕ ಸಂಕೇತಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳನ್ನು ನೀಡಬೇಕೆಂದು ಅವರ ಬೇಡಿಕೆಯಾಗಿದೆ. ೨೦೦೧ ಜನವರಿ ೧ ಮತ್ತು ೨ ರಂದು ಬರ್ನಾಪುರ ಮತ್ತು ಅಸಾನ್ಸೋಲ್, ಪಶ್ಚಿಮಬಂಗಾಳದಲ್ಲಿ ಅಖಿಲ ಭಾರತ ಆದಿವಾಸಿಗಳ ಸಮ್ಮೇಳ ನಡೆಯಿತು. ಭಾರತದ ಎಲ್ಲ ಭಾಗಗಳಿಂದ ೭೫೦ ಪ್ರತಿನಿಧಿಗಳು ಭಾಗವಹಿಸಿದ್ದರು ಮತ್ತು ಧಾರ್ಮಿಕ ಸಂಕೇತಗಳಿಗಾಗಿ ಮತ ಚಲಾಯಿಸಿದರು. ಭಾರತೀಯ ಜನಗಣತಿಯ ಪ್ರಕಾರ ಅವರ ಮತಗಳು ಕೆಳಗಿನಂತಿವೆ:

  • ಸಾರಿ ದೋರಮ್-೬೩೨
  • ಶರಣ-೫೧ ಖೇರ್ವಾಲಿ ಧರ್ಮ-೧೪ ಮತ್ತು
  • ಬೇರೆ ಧರ್ಮಗಳು-೦೩

ಬುಡಕಟ್ಟು ಪದ್ದತಿ

ಬದಲಾಯಿಸಿ

ಬುಡಕಟ್ಟುಗಳು ಅವುಗಳ ಜಾತಿ ಪದ್ದತಿಯ ಭಾಗಗಳಲ್ಲ, ಮತ್ತು ಸಾಮಾನ್ಯವಾಗಿ ಸಮಾನತಾವಾದಿ ಸಮಾಜದ ಅಂಶಗಳನ್ನೊಳಗೊಂಡಿವೆ. ಕ್ರೈಸ್ತ ಬುಡಕಟ್ಟುಗಳು ಸ್ವಯ್ಂಚಾಲಿತವಾಗಿ ಅವುಗಳ ಸಾಂಪ್ರಾದಾಯಿಕ ಬುಡಕಟ್ಟು ನೀತಿಗಳನ್ನು ಕಳೆದುಕೊಡವು. ೧೮೯೧ರಲ್ಲಿ ಮಿಷನರಿ ೧೫೦ ಮುಂಡಾ ಕ್ರಿಸ್ಚಿಯನ್ನರನ್ನು ಬೇರೆ ಬೇರೆ ದರ್ಜೆಯ ಜನರೊಂದಿಗೆ ಸಹಬೋಜನ ಮಾಡುವಂತೆ ಕೇಳಿದಾಗ, ಕೇವಲ ೨೦ ಜನ ಕ್ರೈಸ್ತರು ಮಾತ್ರ ಸಹಬೋಜನ ಮಾಡಿದರು ಮತ್ತು ಅನೇಕ ಮತಾಂತರರು ಅವರ ಹೊಸ ನಂಬಿಕೆಯನ್ನು ಕಳೆದುಕೊಂಡಿದ್ದರು. ಫಾದರ್ ಹಾಘ್ಹೆನ್ ಬೇಕ್ ಈ ಸಂಧರ್ಭವನ್ನು ಈ ನಿಯಮಗಳು 'ವಿಗ್ರಹ ಆರಾಧಕರು' ಮತ್ತು'ರಾಷ್ಟ್ರ ಪ್ರೇಮ ಮತ್ತು ಹೆಮ್ಮೆ' ಯ ಸಂಕೇತವಾಗಿರುವವರಿಗಲ್ಲ ಎಂದು ಮುಕ್ತಾಯಗೊಳಿಸುತ್ತಾನೆ ಮತ್ತು ಬರೆದನು. "ದೇಶದಲ್ಲಿ,ದೇವರ ಮುಂದೆ ಎಲ್ಲಾ ಮಾನವರು ಸಮಾನರೆಂದು ಘೋಷಿಸುತ್ತಿರುವಾಗ,ನಾವು ಈಗ ಅವರಿಗೆ ಹೇಳಬೇಕು, ನಿಮ್ಮ ಜನಾಂಗವನ್ನು ಶುದ್ದವಾಗಿರಿಸಿ, ನಿಮ್ಮ ಪದ್ದತಿಗಳನ್ನು ಕಾಪಾಡುವ ಅಗತ್ಯವಿಲ್ಲ, ಒಬ್ಬ ಒಳ್ಳೆ ಕ್ರೈಸ್ತನಾಗಲು ಕಮ್ಮಾರರು ಬಿದಿರು ಕೆಲಸಗಾರರು ಮತ್ತು ಕೆಳವರ್ಗದ ಜನರೊಂದಿಗೆ ಊಟ ಮಾಡಲು ಪ್ರಾರಂಭಿಸಿ. ಹೇಗಾದರೂ, ಅನೇಕ ವಿದ್ವಾಂಸರು ವಾದಿಸುವಂತೆ ಬುಡಕಟ್ಟು ಜನರು ತಮ್ಮದು ಸಮಾನತವಾದಿ ಸಮಾಜವ್ಂದು ಹೇಳಿದರೂ ಜಾತಿ ಆಧಾರಿತ ಸಮಾಜದಲ್ಲಿ ಬೇರೆಯಾಗಿ ಕಾಣುತ್ತಾರೆ. ನಗರ ಸಮಾಜಗಳಿಂದ ಮತ್ತು ಬುಡಕಟ್ತು ಸಮಾಜಗಳು ಬಿನ್ನವಾಗಿರುವುದು ರಾಜಕಾರಣದ ಒಂದು ಭಾಗ ಕೆಲವರಿಂದ ಅದು ಬೃಹತ್ತಾಗುತ್ತದೆ. ವಿದ್ವಾಂಸರ ಕಿಯೊನಾರ್ಡ್ ಎಲ್ಟ್ ರವರ ಪ್ರಕಾರ ಹಿಂದೂ ಬುಡಕಟ್ಟು ಜನರಲ್ಲಿ ಜಾತಿ ಅಚರಣೆಗಳು ಮತ್ತು ಸಾಮಾಜಿಕ ಕಟ್ಟಳೆಗಳು ಅವುಗಳನ್ನು ಹಿಂದೆ ಉಳಿಯುವಂತೆ ಮಾಡಿವೆ. ಮುಂಡಾಗಳು ಮಾತ್ರವಲ್ಲ ಬೇರೆ ಬುಡಕಟ್ಟುಗಳು ಸ್ವಗೋತ್ರ ಬುಡಕಟ್ಟು ವಿವಾಹ ಮತ್ತು ಸಹಪಂಕ್ತಿ ಭೋಜನವನ್ನು ಆಚರಿಸುತ್ತಾರೆ. ಆದರೆ ಇನ್ನೂ ಗಮನಿಸಬೇಕಾದ ಅಂಶವೆಂದರೆ ಬುಡಕಟ್ಟಿನೊಳಗೆ ಜಾತಿ ವಿಂಗಡಣೆ, ಸಮಾಜ ಕಲುಷಿತ ಎಂಬ ಗೋಡೆಗೆ ಒಂದು ಪೌರಾಣಿಕ ಸ್ಪಷ್ಟೀಕರಣ ನೀಡಲಾಗುತ್ತದೆ ಮತ್ತು ಹಾಗೆ ಮಾಡಿದವರಿಗೆ ಉಗ್ರ ಶಿಕ್ಷೆ ವಿಧಿಸಲಾಗುತ್ತದೆ. ಒಬ್ಬ ಮುಂಡಾ ಕ್ಯಾಥೋಲಿಕ್ ಬ್ರಹ್ಮವಿದ್ಯೆಯ ಸಾಕ್ಷಿಗಳು: ಚೋಟಾನಾಗಪುರದ ಬುಡಕಟ್ಟು ಜನರು ಒಂದೇ ಗೋತ್ರದ ಬುಡಕಟ್ಟು. ಅವರು ಸಾಮಾನ್ಯವಾಗಿ ಹೊರಗಿನ ಬುಡಕಟ್ಟು ಸಮುದಾಯದವರನ್ನು ವಿವಾಹವಾಗುವುದಿಲ್ಲ. ಏಕೆಂದರೆ ಅವರಿಗೆ ಅವರ ಬುಡಕಟ್ಟು ಪವಿತ್ರವಾದದ್ದಾಗಿದೆ. ಬುಡಾಕಟ್ಟು ಜನರಿಗೆ ಇದು ಆತ್ಮೋದ್ದಾರ ಅಥವ ಮುಕ್ತಿಯ ಮಾರ್ಗವಾಗಿದೆ. ಸಂತಾಲರಲ್ಲಿ ಹಿಂದೂಗಳ ಹಾಗೆಯೇ ತಮ್ಮ ಜಾತಿಯ ಒಳಗೆ ಮತ್ತು ಅವರ ಗೊತ್ರದ ಹೊರಗಿನ ಗೋತ್ರದವರನ್ನು ವಿವಾಹವಾಗುತ್ತಾರೆ. ಬೇರೆ ಬುಡಕಟ್ಟಿನವರನ್ನು ವಿವಾಹವಾಗುವುದು ಅಥವಾ ಒಂದೇ ಗೋತ್ರದ ಒಳಗೆ ವಿವಾಹವಾಗುವುದು ಸಮಾಜದ ಕಟ್ಟಳೆಯಾಗಿದೆ: ಹೆಚ್ಚು ನಿಖರವಾಗಿ: ತಮ್ಮ ಬುಡಕಟ್ಟಿನ ಐಕಮತ್ಯವನ್ನು ರಕ್ಷಿಸಲು, ಸಂತಾಲರು ತುಂಬಾ ಕಠಿಣ ಕಾನೂನುಗಳನ್ನು ಹೊಂದಿದ್ದರು. ಸಂತಾಲರು ಸಂತಾಲರಲ್ಲದವರನ್ನು ಅಥವಾ ಅವರದೇ ಕುಲದ ಸದಸ್ಯರನ್ನು ವಿವಾಹವಾಗುವುದಿಲ್ಲ. ಪೂರ್ವಿಕರು ಇದನ್ನು ಬುಡಕಟ್ಟು ಜನರ ಸಮಗ್ರತೆಯ ಪ್ರತಿಪಾದನೆ ಎಂದು ಪರಿಗಣಿಸಿದ್ದರು. ನಂತರದಲ್ಲಿ ಅದು ಅಪರಾಧವೆಂದು ಪರಿಗಣಿಸಲ್ಪಟ್ಟಿತ್ತು. ಚೋಟಾನಾಗಪುರದ ಹೋ ಜನಾಂಗದಲ್ಲಿ ಅಪ್ಪಣೆ ಇಲ್ಲದೆ ಬೇರೆ ಬುಡಕಟ್ಟಿಗೆ ಹೋದವರನ್ನು ಬಹಿಷ್ಕಾರ ಹಾಕುವ ಅವಕಾಶ ಕಲ್ಪಿಸಲಾಯಿತು, ಅನ್ಯಗೋತ್ರ ವಿವಾಹಕ್ಕೆ ಯಾವುದೇ ಮೊರೆಗೆ ಅವಕಾಶವಿಲ್ಲದೆ ಅವರು ಅಗತ್ಯವಾಗಿ ಸ್ವಗೋತ್ರ ವಿವಾಹವನ್ನು ಮಾಡಿಕೊಳ್ಳಬೇಕಾಗಿತ್ತು. ಸಹಭೋಜನವನ್ನು ಸಹ ಅನೇಕ ಬುಡಕಟ್ಟುಗಳಲ್ಲಿ ನಿಷೇದಿಸಲಾಗಿದೆ.

ಶಿಕ್ಷಣ

ಬದಲಾಯಿಸಿ

ಬುಡಕಟ್ಟು ಪ್ರದೇಶಗಳಿಗೆ ಪ್ರಾಥಮಿಕ ಶಿಕ್ಷಣದ ವಿಸ್ತರಣೆ ಮತ್ತು ಬುಡಕಟ್ಟು ಜನಾಂಗದ ಮಕ್ಕಳಿಗೆ ಕೇಂದ್ರ ಸರ್ಕಾರದ ನೀತಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದೆ. ಆದರೆ ಬುಡಕಟ್ಟು ಜನಾಂಗಗಳ ಶಿಕ್ಷಣದ ಮಟ್ಟ ಹೆಚ್ಚಿಸುವ ಪ್ರಯತ್ನಗಳು ಮಿಶ್ರ ಪ್ರಭಾವವನ್ನು ಹೊಂದಿವೆ. ಅರ್ಹ ಶಿಕ್ಷಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು, ಬೋದನೆಗೆ ಸೂಕ್ತ ಭಾಷೆಯ ನಿರ್ಧಾರ ಕೆಲವು ತೊದರೆಗಳಿಂದ ಕೂಡಿದೆ. 'ಭಾಷೆಯ ಪ್ರಶ್ನೆ'ಬೋದನೆಗೆ ಬೇಕಾದ ಭಾಷೆಯ ನಿರ್ಧಾರಕ್ಕೆ ಆಯೋಗಗಳ ನಂತರ ಆಯೋಗಗಳನ್ನು ನೇಮಿಸಲಾಯಿತು. ಕೊನೆಯ ಪಕ್ಷ ಪ್ರಾಥಮಿಕ ಹಂತದ ವಿದ್ಯಾರ್ಥಿ ಗಳಿಗೆ ಸ್ಥಳೀಯ ಭತ್ಯೆಯನ್ನು ನಿರ್ಧರಿಸಲಾಯಿತು. ಕೆಲವು ಪ್ರದೇಶಗಳಲ್ಲಿ, ಬುಡಕಟ್ಟು ಮಕ್ಕಳು ಆಡಳಿತ ಭಾಷೆಯನ್ನು ಶಾಲೆಗೆ ಪ್ರವೇಶವಾಗುವಾಗಲೇ ಕಲಿಯಬೇಕು. ಕೆಲವೊಮ್ಮೆ ಅದು ಸಂಪೂರ್ಣ ತಮ್ಮ ಬುಡಕಟ್ಟು ಭಾಷೆಗೆ ಸಂಬಂಧವೇ ಇರುವುದಿಲ್ಲ. ಅನೇಕ ಬುಡಕಟ್ತು ಶಾಲೆಗಳಲ್ಲಿ ಹೆಚ್ಚಿನ ಶಾಲೆ ಬಿಡುವವರ ಹಾವಳಿ ಇರುತ್ತದೆ.ವಿದ್ಯಾರ್ಥಿಗಳು ಪ್ರಾರಂಭದ ಮೂರು ನಾಲ್ಕು ವರ್ಷಗಳ ಪ್ರಾಥಮಿಕ ಶಾಲೆಗಳಿಗೆ ಹಾಜರಾಗುತ್ತಾರೆ ಮತ್ತು ಅಲ್ಪ ಸ್ವಲ್ಪ ಜ್ಞಾನವನ್ನು ಪಡೆಯುತ್ತಾರೆ. ಈ ಆಚಾತುರ್ಯ ನಂತರ ಅನಕ್ಷರತೆಗೆ ಕಾರಣವಾಗುತ್ತದೆ. ಕೆಲವರು ೧೦ನೇ ತರಗತಿ ಯವರೆಗೆ ಮುಂದುವರೆಯಲು ಬರುತ್ತಾರೆ.ಹಾಗೆ ಮಾಡುವ,ಕೆಲವರು ಪ್ರೌಡಶಾಲೆಯನ್ನು ಮುಗಿಸುತ್ತಾರೆ.ಆದ್ದರಿಂದ ಕೆಲವೇ ಕೆಲವರು ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ,ಅಲ್ಲಿ ಹೆಚ್ಚಿನ ದರದ ಘರ್ಷಣೆ ಮುಂದುವರೆಯುತ್ತದೆ.ಕೃಷಿಕ ಬುಡಕಟ್ಟಿನ ಸದಸ್ಯರು ಅಂದರೆ ಗೊಂಡಾಗಳಂತಹ ಬುಡಕಟ್ಟುಗಳು ಕೆಲವೊಮ್ಮೆ ಅವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಇಷ್ಟವಿರುವುದಿಲ್ಲ. ಅವರಿಗೆ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಕೆಲಸ ಮಾಡಲು ಮಕ್ಕಳ ಅವಶ್ಯಕತೆ ಇರುತ್ತದೆ ಎಂದು ಹೇಳುತ್ತಾರೆ. ೧೯೭೦ರಲ್ಲಿ ವಿಶೇಷವಾಗಿ ಕೇಂದ್ರೀಕೃತ ಭಾರತದಿಂದ ಬುಡಕಟ್ಟು ಜನಾಂಗ ಮತ್ತೆ ತೀವ್ರವಾದ ಭೂಮಿ ಒತ್ತಡಕ್ಕೆ ಸಿಲುಕಿತು.ಮತ್ತೊಂದು ಕಡೆ ಆರ್ಥಿಕತೆ. ಬಹುತೇಕ ಬುಡಕಟ್ಟುಗಳು ದಟ್ಟ ಅರಣ್ಯ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ. ಅವುಗಳು ಪ್ರಮುಖ ರಾಜಕೀಯ ಮತ್ತು ಆರ್ಥಿಕ ಮಿತಿಗೆ ಒಳಪಟ್ಟಿವೆ.ಐತಿಹಾಸಿಕವಾಗಿ ಬಹುತೇಕ ಬುಡಕಟ್ಟುಗಳ ಆರ್ಥಿಕತೆಯು ಕೃಷಿಯ ಪೋಷಣೆ ಅಥವಾ ಬೇಟೆಗಾರಿಕೆ ಮತ್ತು ಸಂಗ್ರಹಣೆಯನ್ನು ಒಳಗೊಂಡಿದೆ.ಬುಡಕಟ್ಟು ಜನರು ತಮಗೆ ಅಭಾವವಿರುವ ಅಗತ್ಯಗಳಿಗಾಗಿ ಬೇರೆ ಹೊರಗಿನ ಜನರೊಂದಿಗೆ ವ್ಯಾಪಾರದಲ್ಲಿ ತೊಡಗುತ್ತಾರೆ ಅವುಗಳೆಂದರೆ ಉಪ್ಪು ಮತ್ತು ಕಬ್ಬಿಣ. ಕೆಲವು ಸ್ಥಳೀಯ ಹಿಂದು ಕುಶಲ ಕರ್ಮಿಗಳು ಅಡುಗೆ ಮಾಡಲು ಬೇಕಾದ ಪಾತ್ರೆಗಳಂತಹ ವಸ್ತುಗಳನ್ನು ಒದಗಿಸುತ್ತಾರೆ. ೨೦ನೇ ಶತಮಾನದಲ್ಲಿ ,ಹೇಗೋ,ಬಹುತೇಕ ಬುಡಕಟ್ಟು ಪ್ರದೇಶಗಳು ಸಾರಿಗೆ ಮತ್ತು ಸಂಪರ್ಕದ ಅಭಿವೃದ್ದಿ ಹೆಸರಿನಲ್ಲಿ ಬುಡಕಟ್ಟಲ್ಲದವರ ಕೈ ಸೇರಿದವು.೧೯೯೦ರ ಸುಮಾರಿನಲ್ಲಿ ಬುಡಕಟ್ಟು ಜನರ ಭೂಮಿಗಳಿಗೆ ವಲಸೆ ಹೋಗುವವರ ಸಂಖ್ಯೆ ಕಲ್ಪನೆಯ ರೀತಿಯಲ್ಲಿ ಹೆಚ್ಚತೊಡಗಿತು. ಇದರಿಂದ ಬುಡಕಟ್ಟು ಜನ ತಮ್ಮ ಭೊಮಿಯ ಹಕ್ಕನ್ನು ಕಳೆದುಕೊಳ್ಳಬೇಕಾಯಿತು. ಗುತ್ತಿಗೆ ಸಾಲಗಳಿಗೆ ದಂಡಾದ ರೂಪದಲ್ಲಿ, ಅಥವಾ ದಾಖಲು ಮಾಡುವ ಅಧಿಕಾರಿಗಳಿಗೆ ದಂಡದ ರೂಪದಲ್ಲಿ ತಮ್ಮ ಭೂಮಿ ಕಳೆದುಕೊಳ್ಳಬೇಕಾಯಿತು. ಬೇರೆ ಬುಡಕಟ್ಟುಗಳು ಸುಲಭವಾಗಿ ತಮ್ಮ ನೆಲೆ ಕಂಡುಕೊಂಡರು ಅಥವ ಅವರನ್ನು ವಿಭಜಿಸುವುದರಲ್ಲಿ ಸರ್ಕಾರಗಳು ಸಹ ಪ್ರಭಾವ ಬೀರಿದವು. ಸೀಮಿತವಾಗಿದ್ದ ಪ್ರದೇಶಗಳು ಬುಡಕಟ್ಟು ಮತ್ತು ಬುಡಕಟ್ಟಿಗೆ ಸೇರಿರದ ಜನಸಂಖ್ಯೆಯು ಮಿಶ್ರ ಜನಸಂಖ್ಯೆಯನ್ನು ಹೊಂದಿತು. ಕಾನೂನು ಬಾಹಿರ ವೃತ್ತಿಗಳನ್ನು ನಿರ್ವಹಿಸುವ ಬುಡಕಟ್ಟಿಗೆ ಸೇರಿರದ ಜನರನ್ನು ಹೊರಹಾಕುವ ಸರ್ಕಾರದ ಪ್ರಯತ್ನ ನಿಧಾನವಾಗಿ ಜಾರಿಯಾಯಿತು :ಹೊರದಬ್ಬುವಿಕೆಯ ಕಾರ್ಯ ನಡೆದಾಗ, ಅಲ್ಲಿಂದ ಉಚ್ಚಾಟನೆಗೊಂಡವರು ಸಾಮಾನ್ಯವಾಗಿ ಬಡವರು. ಕೆಲಜಾತಿಗೆ ಸೇರಿದವರಾಗಿದ್ದರು. ಸಂಪರ್ಕ, ಯಾಂತ್ರೀಕೃತ ವಾಹನಗಳ ಓಡಾಟ ಅಭಿವೃದ್ದಿಗೊಂಡಂತೆ ಮತ್ತು ಬುಡಕಟ್ಟು ಜನರು ಹೊರಗಿನ ಜನರೊಂದಿಗೆ ಸಂಪರ್ಕ ಹೆಚ್ಚಿಸುವ ಹೆಸರಿನಲ್ಲಿ ಪದೇ ಪದೇ ಅಡ್ಡ ಬರುವ ಸರ್ಕಾರಗಳ ರಚನೆ ವಾಣಿಜ್ಯ ಬೆಳೆಗಳು ಮತ್ತು ವಾಣಿಜ್ಯ ಹೆದ್ದಾರಿಗಳನ್ನು ತಂದಿತು. ಕೆಲವು ಬುಡಕಟ್ಟುಗಳಿಗೆ ಕೊನೆಯ ಹೊಡೆತ ಬಂದಿತು, ಬುಡಕಟ್ಟಲ್ಲದವರು ,ರಾಜಕೀಯ ವಂಚನೆಯ ಮೂಲಕ, ಕಾನೂನು ಬದ್ದ ಬುಡಕಟ್ಟು ಸ್ಥಾನಮಾನವನ್ನು ಪಡೆದುಕೊಂಡರು. ಅದನ್ನು ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾಯಿತು. ಹಿಮಾಲಯದ ತಪ್ಪಲಿನಲ್ಲಿರುವ ಬುಡಕಟ್ಟು ಜನರು ಬುಡಕಟ್ಟಲ್ಲದವರ ಪ್ರವೇಶದ ತೊಂದರೆಗಳನ್ನು ಹೊಂದಿಲ್ಲ .ಐತಿಹಾಸಿಕವಾಗಿ ಅವರ ರಾಜಕೀಯ ಸ್ಥಾನಮಾನ ಯಾವಾಗಲೂ ಉಳಿದ ಭಾರತದಿಂದ ಹೊರಗೆ ಉಳಿದಿದೆ. ಬ್ರಿಟೀಷ್ ವಸಾಹತು ಕಾಲದವರೆಗೂ ಅಲ್ಲಿ ಯಾವುದೇ ಪರ್ಯಾಯದ್ವೀಪ ಭಾರತದಲ್ಲಿ ಕೇಂದ್ರೀಕೃತವಾದ ಸಾಮ್ರಾಜ್ಯಗಳ ಸ್ವಲ್ಪ ಪರಿಣಾಮಕಾರಿ ನಿಯಂತ್ರಣವಿತ್ತು.ಈ ಪ್ರದೇಶ ಸ್ವಯಂ ವೈರತ್ವದಿಂದ ಕೂಡಿದ ಬುಡಕಟ್ಟು ಜನರಿಂದ ಕೂಡಿತ್ತು.ಬ್ರಿಟಿಷರು, ಶೀಘ್ರಘಾಹಿ ಈಶಾನ್ಯ ಗಡಿಯಲ್ಲಿನ ಬುಡಕಟ್ಟಿನವರನ್ನು ರಕ್ಷಿಸುವ ಪ್ರಯತ್ನವಾಗಿ,ಬಿರುದು ಕೊಡುವ ಒಳಸಂಚು ನೀತಿಯನ್ನು ಅನುಸರಿಸಿತು.ಬುಡಕಟ್ಟಲ್ಲದ ಜನರಿಗೆ ವಿಶೇಷ ಅನುಮತಿಯೊಂದಿಗೆ ಮಾತ್ರ ಆ ಪ್ರದೆಶಗಳಿಗೆ ಪ್ರವೇಶಾವಕಾಶವನ್ನುನೀಡಿದರು. ಸ್ವತಂತ್ರಾನಂತರದ ಸರ್ಕಾರಗಳು ಈ ನೀತಿಯನ್ನೇ ಮುಂದುವರೆಸಿವೆ,ಹಿಮಾಲಯದ ಬುಡಕಟ್ಟು ಯುದ್ದನೀತಿಯ ಭಾಗವಾಗಿ ಚೀನಾದಿಂದ ಗಡಿಯನ್ನು ರಕ್ಷಿಸುತ್ತಿವೆ. ಮೀಸಲು ಅರಣ್ಯಗಳ ಮೇಲಿನ ಸರ್ಕಾರದ ನೀತಿಗಳು ಬುಡಕಟ್ಟು ಜನರನ್ನು ಅಗಾಧವಾಗಿ ದುಖಿಃತರನ್ನಾಗಿಸಿವೆ.

ಉಲ್ಲೇಖ

ಬದಲಾಯಿಸಿ

??