• ನಾಯಕ ಇದು ಕರ್ನಾಟಕ ಮೂಲದ ಜಾತಿಯ ಹೆಸರು. ಬೇಡ, ನಾಯಕ, ವಾಲ್ಮೀಕಿ, ಬೇಡರು, ಬೋಯ, ರಾಯ [ಪಾಳೇಗಾರ]], ಹೀಗೆ ಸ್ಥಳೀಯವಾಗಿ ಹಲವಾರು ಪರ್ಯಾಯ ಹೆಸರುಗಳಿಂದ ಗುರುತಿಸಲ್ಪಡುವ ಈ ಜನಾಂಗವು, ಕರ್ನಾಟಕ ನೆಲಮೂಲದ ಏಕೈಕ ಕ್ಷತ್ರಿಯ ಜನಾಂಗವೆಂದು ಗುರುತಿಸಿಕೊಂಡಿದೆ.

ನಾಯಕ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ; ಇತಿಹಾಸವಿದೆ. ಅನೇಕರು ರ ಸಾಹಸಿಗಳಾಗಿ ಬಾಳಿ ಬದುಕಿ ಪಾಳೆಯಗಾರರಾಗಿ ರಾಜರೆನಿಸಿಕೊಂಡು, ಅಧಿಕಾರದಲ್ಲಿ ಮೆರೆದು, ಧೀಮಂತರೆನಿಸಿಕೊಂಡು ನಾಡಿನ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿ, ಧರ್ಮ ಪ್ರಭುಗಳಾಗಿ ರಾಷ್ಟ್ರ ಪ್ರೇಮಕ್ಕೆ, ಧೈರ್ಯಕ್ಕೆ, ಸಾಹಸಕ್ಕೆ, ಶೌರ್ಯ ಪರಾಕ್ರಮಗಳಿಗೆ ಹೆಸರುವಾಸಿಯಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳ ಪ್ರೋಹೆಸರುವಾಸಿಗಳಾಗಿದ್ದಾರೆ. ಕಂಪಿಲರಾಯ, ಗಂಡುಗಲಿ ಕುಮಾರರಾಮ, ರಾಷ್ಟ್ರರ ಎಚ್ಚಮ್ಮನಾಯಕ,ಚಿತ್ರದುರ್ಗದ ರಾಜರ ಮದಕರಿನಾಯಕ, ಸುರಪುರದ ರಾಜಾ ಚಿಕ್ಕ ವೆಂಕಟಪ್ಪ ನಾಯಕ, ವೀರ ಸಿಂಧೂರ ಲಕ್ಷ್ಮಣ ಹೀಗೆ ಸಾವಿರಾರು ಕಲಿಗಳು ಈ ಜನಾಂಗದಲ್ಲಿ ಜನಿಸಿದ್ದಾರೆ.

77 ಪಾಳೇಪಟ್ಟುಗಳನ್ನು ಆಳ್ವಿಕೆ ಮಾಡಿ ಪಾಳೆಗಾರರು ಎಂದೆನೆಸಿಕೊಂಡವರು ಇದೆ ನಾಯಕ ಜನಾಂಗ.ಇಂದಿಗೂ ಹಲವಾರು ಹಳ್ಳಿಗಳ ಹೆಸರುಗಳು ನಾಯಕ ಎಂಬ ಪದದಿಂದಲೆ ಅಂತ್ಯಗೊಳ್ಳುವುದನ್ನು ಕಾಣಬಹುದು,ನಾಯಕ ಪಾಳೆಗಾರರು ಆಳಿದ ಊರುಗಳು ಅವು. ಮಹರ್ಷಿ ವಾಲ್ಮೀಕಿ ಜನಿಸಿದ ಜಾತಿ ಇದು.

ಬಿಚ್ಚುಗತ್ತಿ ಭರಮಣ್ಣ ನಾಯಕ,ಮತ್ತಿ ತಿಮ್ಮಣ್ಣ ನಾಯಕ,ಕಂಪಿಲಿ ಕುಮಾರ ರಾಮ, ಕಸ್ತೂರಿ ರಂಗಪ್ಪ ನಾಯಕ, ಕೆಳದಿ ಶಿವಪ್ಪ ನಾಯಕ,ಎಚ್ಚಮ್ಮ ನಾಯಕ,ರಾಜಾ ವೀರ ಮದಕರಿ ನಾಯಕ ಪಾಳೇಗಾರು, ಸುರಪುರದ ನಾಯಕರು.

ಎನ್. ವೈ. ಗೋಪಾಲಕೃಷ್ಣ, ಶ್ರೀರಾಮುಲು, ರಮೇಶ್ ಜಾರಕಿಹೊಳೆ, ರಾಜಾ ವೆಂಕಟೇಶ್ ನಾಯಕ, ರಾಜಾ ಅಮರೇಶ ನಾಯಕ, ರಾಜಾ ಮದನಗೋಪಾಲ ನಾಯಕ, ರಾಜುಗೌಡ(ನರಸಿಂಹ ನಾಯಕ ನಟ ಕಿಚ್ಚ ಸುದೀಪ,ಉದಯೋನ್ಮುಖ ನಟ ಶಶಿಕುಮಾರ್ ಇದೇ ಸಮುದಾಯದವರು.

ಇಂದಿಗೂ ತಿರುಪತಿಯಲ್ಲಿ ಜರುಗುವ ಬ್ರಹ್ಮೋಸ್ತ್ಸವ ಸುರಪುರದ ನಾಯಕರ ಮೊದಲ ಪೂಜೆ ಸಲ್ಲಿಸಿದ ನಂತರವೇ ಆರಂಭಗೊಳ್ಳುವುದು ವಾಡಿಕೆ.ಮದಕರಿ ನಾಯಕ https://www.google.com/search?q=madakari+nayaka&oq=madakari&aqs=chrome.1.0l3j69i61.5337j0j7&client=ms-android-xiaomi-rev1&sourceid=chrome-mobile&ie=UTF-8