ದಂಗಲ್ (ಚಲನಚಿತ್ರ)

(ದಂಗಲ್ ಇಂದ ಪುನರ್ನಿರ್ದೇಶಿತ)

ದಂಗಲ್ (ಅನುವಾದ: ಕುಸ್ತಿ ಸ್ಪರ್ಧೆ) ನಿತೇಶ್ ತಿವಾರಿ ನಿರ್ದೇಶಿಸಿದ ೨೦೧೬ರ ಒಂದು ಹಿಂದಿ ಜೀವನಚರಿತ್ರೆಯ ಕ್ರೀಡಾ ನಾಟಕೀಯ ಚಲನಚಿತ್ರ. ಇದನ್ನು ಆಮಿರ್ ಖಾನ್‌ ಯುಟಿವಿ ಮೊಷನ್ ಪಿಕ್ಚರ್ಸ್ ಹಾಗೂ ವಾಲ್ಟ್ ಡಿಸ್ನಿ ಪಿಕ್ಚರ್ಸ್ ಇಂಡಿಯಾದೊಂದಿಗೆ ತಮ್ಮ ನಿರ್ಮಣಶಾಲೆ ಆಮಿರ್ ಖಾನ್ ಪ್ರೊಡಕ್ಷನ್ಸ್‌ನಡಿ ನಿರ್ಮಿಸಿದರು. ಫೋಗಾಟ್ ಕುಟುಂಬದ ಮೇಲೆ ಸಡಿಲವಾಗಿ ಆಧಾರಿತವಾದ ಈ ಚಿತ್ರದಲ್ಲಿ ಆಮಿರ್ ಖಾನ್ ಭಾರತದ ಮೊದಲ ವಿಶ್ವ ದರ್ಜೆಯ ಮಹಿಳಾ ಕುಸ್ತಿಪಟುಗಳಾಗಲು ತನ್ನ ಪುತ್ರಿಯರಾದ ಗೀತಾ ಫ಼ೋಗಾಟ್ ಮತ್ತು ಬಬೀತಾ ಕುಮಾರಿಗೆ ತರಬೇತಿ ನೀಡಿದ ಮಹಾವೀರ್ ಸಿಂಗ್ ಫ಼ೋಗಾಟ್ಆಗಿ ಅಭಿನಯಿಸಿದ್ದಾರೆ.[] ಫ಼ಾತಿಮಾ ಸನಾ ಶೇಖ್ ಹಾಗೂ ಸಾನ್ಯಾ ಮಲ್ಹೋತ್ರಾ ಇಬ್ಬರು ಫೋಗಾಟ್ ಸೋದರಿಯರ ಪ್ರೌಢ ಪಾತ್ರಗಳಲ್ಲಿ ನಟಿಸಿದ್ದಾರೆ. ಜ಼ಾಯರಾ ವಸೀಮ್ ಮತ್ತು ಸುಹಾನಿ ಭಟ್ನಾಗರ್ ಅವರ ಯುವ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಕ್ಷಿ ತನ್ವರ್ ಅವರ ಅಮ್ಮನಾಗಿ, ಮತ್ತು ಅಪಾರ್‌ಶಕ್ತಿ ಖುರಾನಾ ಅವರ ಸೋದರಸಂಬಂಧಿಯಾಗಿ ನಟಿಸಿದ್ದಾರೆ.

ದಂಗಲ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನನಿತೇಶ್ ತಿವಾರಿ
ನಿರ್ಮಾಪಕಆಮಿರ್ ಖಾನ್
ಕಿರಣ್ ರಾವ್
ಸಿದ್ಧಾರ್ಥ್ ರಾಯ್ ಕಪೂರ್
ಲೇಖಕನಿತೇಶ್ ತಿವಾರಿ
ಪೀಯುಷ್ ಗುಪ್ತಾ
ಶ್ರೇಯಸ್ ಜೈನ್
ನಿಖಿಲ್ ಮೆಹರೋತ್ರಾ
ಸಂಭಾಷಣೆಅಪಾರ್‌ಶಕ್ತಿ ಖುರಾನಾ
ಪಾತ್ರವರ್ಗಆಮಿರ್ ಖಾನ್
ಸಾಕ್ಷಿ ತನ್ವರ್
ಫ಼ಾತಿಮಾ ಸನಾ ಶೇಖ್
ಜ಼ಾಯರಾ ವಸೀಮ್
ಸಾನ್ಯಾ ಮಲ್ಹೋತ್ರಾ
ಸುಹಾನಿ ಭಟ್ನಾಗರ್
ಅಪಾರ್‌ಶಕ್ತಿ ಖುರಾನಾ
ಗಿರೀಶ್ ಕುಲ್ಕರ್ಣಿ
ಸಂಗೀತಪ್ರೀತಮ್
ಛಾಯಾಗ್ರಹಣಸೇತು (ಸತ್ಯಜೀತ್ ಪಾಂಡೆ)[]
ಸಂಕಲನಬಲ್ಲು ಸಲೂಜಾ
ಸ್ಟುಡಿಯೋಆಮಿರ್ ಖಾನ್ ಪ್ರೊಡಕ್ಷನ್ಸ್
ವಾಲ್ಟ್ ಡಿಸ್ನಿ ಪಿಕ್ಚರ್ಸ್ ಇಂಡಿಯಾ
ವಿತರಕರುಯುಟಿವಿ ಮೋಷನ್ ಪಿಕ್ಚರ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 21 ಡಿಸೆಂಬರ್ 2016 (2016-12-21) (ಅಮೇರಿಕ)
  • 23 ಡಿಸೆಂಬರ್ 2016 (2016-12-23) (ಭಾರತ)
  • 5 ಮೇ 2017 (2017-05-05) (ಚೈನಾ)
ಅವಧಿ161 ನಿಮಿಷಗಳು[]
ದೇಶಭಾರತ
ಭಾಷೆಹಿಂದಿ
ಬಂಡವಾಳ70 ಕೋಟಿ[]
ಬಾಕ್ಸ್ ಆಫೀಸ್ಅಂದಾಜು 2,024–2,100 ಕೋಟಿ[][][][]
($೩೧೧–೩೪೦ million)[]

೨೦೧೩ರ ಆರಂಭಿಕ ಅವಧಿಯಲ್ಲಿ ತಿವಾರಿ ಚಿತ್ರಕಥೆಯನ್ನು ಬರೆಯಲು ಆರಂಭಿಸಿದಾಗ ಚಿತ್ರದ ಬೆಳವಣಿಗೆಯು ಆರಂಭವಾಯಿತು. ೨೦೧೪ರಲ್ಲಿ, ತಮ್ಮ ಟಾಕ್ ಶೋ ಸತ್ಯಮೇವ ಜಯತೇಯಲ್ಲಿ ಖಾನ್ ಫೋಗಾಟ್ ಸೋದರಿಯರ ಸಂದರ್ಶನ ಮಾಡಿದ್ದರು. ಇದಾದ ಕೆಲವು ತಿಂಗಳುಗಳ ನಂತರ ತಿವಾರಿ ಕಥೆಯೊಂದಿಗೆ ಅವರನ್ನು ಭೇಟಿಯಾಗಿ ಚರ್ಚಿಸಿದರು. ನಂತರ ಖಾನ್ ಮುಖ್ಯ ನಟ ಮತ್ತು ನಿರ್ಮಾಪಕರಾದರು. ಮುಖ್ಯವಾಗಿ ಭಾರತದ ಹರಿಯಾಣ ರಾಜ್ಯದಲ್ಲಿ ಹಿನ್ನೆಲೆಯನ್ನು ಹೊಂದಿದ ಇದರ ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ ೨೦೧೫ರಲ್ಲಿ ನೆರೆರಾಜ್ಯ ಪಂಜಾಬ್‍ನಲ್ಲಿ ಆರಂಭವಾಯಿತು.[೧೦] ಸತ್ಯಜೀತ್ ಪಾಂಡೆ ಛಾಯಾಗ್ರಹಕರಾಗಿ ಮತ್ತು ಬಲ್ಲು ಸಲೂಜಾ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದರು. ದಂಗಲ್‍ನ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದರು, ಮತ್ತು ಗೀತೆಗಳನ್ನು ಅಮಿತಾಭ್ ಭಟ್ಟಾಚಾರ್ಯ ರಚಿಸಿದ್ದಾರೆ. ಭಾರತೀಯ ಮಹಿಳಾ ಕುಸ್ತಿ ತಂಡದೊಂದಿಗೆ ತರಬೇತುದಾರರಾಗಿದ್ದ ಕೃಪಾ ಶಂಕರ್ ಬಿಶ್ಣೋಯಿ ಆಮಿರ್ ಖಾನ್ ಮತ್ತು ಪಾತ್ರವರ್ಗಕ್ಕೆ ಕುಸ್ತಿ ದೃಶ್ಯಾವಳಿಗಳಿಗಾಗಿ ತರಬೇತಿ ನೀಡಿದರು.

ದಂಗಲ್ ಚಿತ್ರವನ್ನು ವಿಶ್ವಾದ್ಯಂತ ೨೩ ಡಿಸೆಂಬರ್ ೨೦೧೬ರಂದು ಬಿಡುಗಡೆ ಮಾಡಲಾಯಿತು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು; ಪ್ರಶಂಸೆಯು ಒಂದು ನಿಜಜೀವನದ ಕಥೆಯ ಬಗ್ಗೆ ಚಿತ್ರದ "ಪ್ರಾಮಾಣಿಕ" ಚಿತ್ರಣ ಮತ್ತು ಖಾನ್‍ರ ಅಭಿನಯದ ಮೇಲೆ ಕೇಂದ್ರೀಕೃತವಾಗಿತ್ತು. ೬೨ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ನಾಲ್ಕು ಪ್ರಶಸ್ತಿಗಳನ್ನು ಗೆದ್ದಿತು: ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಖಾನ್) ಮತ್ತು ಅತ್ಯುತ್ತಮ ಸಾಹಸ (ಶ್ಯಾಮ್).[೧೧] ೬೪ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ಗೀತಾಳ ಯುವ ಪಾತ್ರದ ನಟನೆಗಾಗಿ ವಸೀಮ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದರು. ಆಸ್ಟ್ರೇಲಿಯಾ, ಚೈನಾ, ಬರ್ಲಿನ್ ಸೇರಿದಂತೆ ವಿದೇಶದಲ್ಲಿಯೂ ಈ ಚಿತ್ರ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ನಾಮನಿರ್ದೇಶನಗಳನ್ನು ಪಡೆಯಿತು.

ಈ ಚಿತ್ರವು ದಾಖಲೆಗಳನ್ನು ಮುರಿದು ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು, ಮತು ಸಾರ್ವಕಾಲಿಕವಾಗಿ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಲನಚಿತ್ರವೆನಿಸಿಕೊಂಡಿತು. ಇದು ವಿಶ್ವದಲ್ಲಿ ಅತಿ ಹೆಚ್ಚು ಹಣಗಳಿಸಿದ ಕ್ರೀಡಾಧಾರಿತ ಚಲನಚಿತ್ರವೆನಿಸಿಕೊಂಡಿತು.[೧೨] ೭೦ ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣಗೊಂಡ ಈ ಚಿತ್ರವು ವಿಶ್ವಾದ್ಯಂತ ೨,೧೦೦ ಕೋಟಿ ರೂಪಾಯಿ ಗಳಿಸಿತು[೧೩] ಚೈನಾದ ಸ್ಟ್ರೀಮಿಂಗ್ ಪ್ಲ್ಯಾಟ್‌ಫ಼ಾರ್ಮ್‌ಗಳ ಮೇಲೆ ಕೂಡ ಈ ಚಿತ್ರವನ್ನು ೪೦೦ ದಶಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆ.[೧೪][೧೫][೧೬]

ಕಥಾವಸ್ತು

ಬದಲಾಯಿಸಿ

ಭಾರತದ ಪೆಹಲ್‍ವಾನಿ ಶೈಲಿಯ ಕುಸ್ತಿಯಲ್ಲಿ ತರಬೇತಿ ಪಡೆದ ಮಾಜಿ ಹವ್ಯಾಸಿ ಕುಸ್ತಿಪಟುವಾದ ಮಹಾವೀರ್ ಸಿಂಗ್ ಫೋಗಾಟ್ ಬಲಾಲಿಯಲ್ಲಿ ನೆಲೆಸಿರುವ ರಾಷ್ಟ್ರೀಯ ಕುಸ್ತಿ ಚ್ಯಾಂಪಿಯನ್ ಆಗಿರುತ್ತಾನೆ. ಲಾಭದಾಯಕ ಉದ್ಯೋಗವನ್ನು ಪಡೆಯುವ ಸಲುವಾಗಿ ಕ್ರೀಡೆಯನ್ನು ತ್ಯಜಿಸುವಂತೆ ಅವನ ತಂದೆ ಅವನನ್ನು ಒತ್ತಾಯಪಡಿಸಿರುತ್ತಾನೆ. ತಾನು ತನ್ನ ದೇಶಕ್ಕಾಗಿ ಪದಕವನ್ನು ಗೆಲ್ಲಲಾಗಲಿಲ್ಲವೆಂದು ವಿಷಣ್ಣನಾಗಿ, ತನ್ನ ಹುಟ್ಟಿರದ ಮಗನು ಪದಕ ಗೆಲ್ಲುವನು ಎಂದು ಪ್ರತಿಜ್ಞೆ ಮಾಡುತ್ತಾನೆ. ನಾಲ್ಕು ಪುತ್ರಿಯರು ಹುಟ್ಟಿದ ಮೇಲೆ ನಿರಾಶನಾಗಿ ಅವನ ಭರವಸೆಯನ್ನು ಬಿಟ್ಟುಬಿಡುತ್ತಾನೆ. ಆದರೆ ಅವಹೇಳನಕಾರಿ ಟಿಪ್ಪಣಿಗಳಿಗೆ ಪ್ರತಿಕ್ರಿಯೆಯಾಗಿ ಅವನ ಹಿರಿಯ ಪುತ್ರಿಯರಾದ ಗೀತಾ ಮತ್ತು ಬಬೀತಾ ಇಬ್ಬರು ಹುಡುಗರಿಗೆ ಹೊಡೆದು ಮನೆಗೆ ಬಂದಾಗ, ಅವನಿಗೆ ಕುಸ್ತಿಪಟುಗಳಾಗುವ ಅವರ ಸಾಮರ್ಥ್ಯದ ಅರಿವಾಗಿ ಅವರಿಗೆ ತರಬೇತಿ ನೀಡಲು ಆರಂಭಿಸುತ್ತಾನೆ.

ಶಕ್ತಿಹ್ರಾಸಕ ಮುಂಜಾನೆಯ ತಾಲೀಮುಗಳು ಹಾಗೂ ಸಣ್ಣದಾದ ಕೇಶಕೃಂತನ ಸೇರಿದಂತೆ, ಅವನ ವಿಧಾನಗಳು ಕಠೋರವೆಂದು ತೋರುತ್ತವೆ. ಗ್ರಾಮಸ್ಥರಿಂದ ಹಿಂದೇಟನ್ನು ಎದುರಿಸಿಯೂ ಅವನು ಅವುಗಳನ್ನು ಮುಂದುವರೆಸಿ ಅವರಿಗೆ ತನ್ನ ತಾತ್ಕಾಲಿಕ ಮಣ್ಣಿನ ಹಳ್ಳದಲ್ಲಿ ತರಬೇತಿ ನೀಡುತ್ತಾನೆ. ಆರಂಭದಲ್ಲಿ, ಹುಡುಗಿಯರು ಅವರ ತಂದೆಯ ಮೇಲೆ ಅವನ ನಡವಳಿಕೆಗಾಗಿ ಸಿಟ್ಟಾಗುತ್ತಾರೆ ಆದರೆ ಅವನು ಅವರ ಭವಿಷ್ಯಕ್ಕಾಗಿ ಕಾಳಜಿ ಹೊಂದಿದ್ದಾನೆ ಎಂದು ಬೇಗನೇ ಅವರಿಗೆ ಅರಿವಾಗುತ್ತದೆ. ಪ್ರೇರಿತರಾಗಿ, ಅವರು ಸ್ವಇಚ್ಛೆಯಿಂದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹುಡುಗರನ್ನು ಸೋಲಿಸುತ್ತಾರೆ. ಕುಸ್ತಿ ಚಾಪೆಗಳನ್ನು ಕೊಡಿಸಲು ಸಾಧ್ಯವಾಗದೆ, ಅವನು ಗಾದಿಗಳನ್ನು ಬಳಸಿ ಅವರನ್ನು ಸ್ಪರ್ಧಾತ್ಮಕ ಪಂದ್ಯಗಳಿಗೆ ತಯಾರು ಮಾಡಲು ಅವರಿಗೆ ಫ಼್ರೀಸ್ಟೈಲ್ ಕುಸ್ತಿಯಲ್ಲಿ ತರಬೇತಿ ನೀಡುತ್ತಾನೆ. ಗೀತಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಿರಿಯ ಮತ್ತು ಹಿರಿಯ ಚ್ಯಾಂಪಿಯನ್‍ಶಿಪ್‍ಗಳನ್ನು ಗೆಲ್ಲುತ್ತಾಳೆ. ನಂತರ ಮುಂಬರುವ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ತರಬೇತಿ ಪಡೆಯಲು ಪಟಿಯಾಲದ ರಾಷ್ಟ್ರೀಯ ಕ್ರೀಡಾ ಅಕಾಡೆಮಿಗೆ ಹೋಗುತ್ತಾಳೆ.

ಅಲ್ಲಿಗೆ ಹೋದ ಮೇಲೆ, ಗೀತಾ ಸ್ನೇಹಿತರನ್ನು ಮಾಡಿಕೊಂಡು ಅವಳಿಗೆ ಮಹಾವೀರ್ ಕಲಿಸಿಕೊಟ್ಟ ಶಿಸ್ತನ್ನು ಉಪೇಕ್ಷಿಸಲು ಆರಂಭಿಸುತ್ತಾಳೆ. ಅವಳ ತರಬೇತುದಾರ ಪ್ರಮೋದ್ ಕದಮ್‍ನ (ಗಿರೀಶ್ ಕುಲ್ಕರ್ಣಿ) ತರಬೇತಿಯ ವಿಧಾನಗಳು ಮತ್ತು ಕುಸ್ತಿ ತಂತ್ರಗಳು ಅವಳ ಅಪ್ಪನದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಪರಿಣಾಮವಾಗಿ, ಅವಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಪಂದ್ಯವನ್ನು ಸೋಲುತ್ತಾಳೆ. ಒಮ್ಮೆ ಮನೆಗೆ ಭೇಟಿನೀಡಿದ ವೇಳೆ, ಅವಳು ಮಹಾವೀರ್‌ನನ್ನು ಅಣಕಿಸಿ ಒಂದು ಭೀಕರ ಪಂದ್ಯದಲ್ಲಿ ದಣಿದಂತೆ ಕಂಡ ಅವನನ್ನು ಸೋಲಿಸುತ್ತಾಳೆ. ಅವಳು ಮಹಾವೀರ್‌ನನ್ನು ಗೌರವಿಸಬೇಕು ಎಂಬ ಅವಳ ತಪ್ಪನ್ನು ಬಬೀತಾ ಗೀತಾಗೆ ನೆನಪಿಸಿಕೊಡುತ್ತಾಳೆ. ಸ್ವಲ್ಪ ಸಮಯದ ನಂತರ, ಬಬೀತಾ ರಾಷ್ಟ್ರೀಯ ಚ್ಯಾಂಪಿಯನ್‍ಷಿಪ್‍ನ್ನು ಗೆದ್ದು ಗೀತಾಳನ್ನು ಅಕಾಡೆಮಿಗೆ ಹಿಂಬಾಲಿಸುತ್ತಾಳೆ. ಇಬ್ಬರೂ ಸೋದರಿಯರು ಒಂದು ಭಾವನಾತ್ಮಕ ಸಂಭಾಷಣೆಯಲ್ಲಿ ತೊಡಗಿ ಬಬೀತಾ ಅವಳಿಗೆ ಪ್ರೋತ್ಸಾಹ ನೀಡಿದ ಮೇಲೆ, ಗೀತಾ ದುಃಖದಿಂದ ಅಳುತ್ತ ಮಹಾವೀರ್‌ನೊಂದಿಗೆ ಜಗಳವನ್ನು ಅಂತ್ಯಗೊಳಿಸುತ್ತಾಳೆ.

ಕಾಮನ್‍ವೆಲ್ತ್ ಕ್ರೀಡೆಗೆ ಮುನ್ನ, ಗೀತಾ ತನ್ನ ಮಾಮೂಲಾದ ೫೫ ಕೆ.ಜಿ. ವಿಭಾಗದ ಬದಲು ೫೧ ಕೆ.ಜಿ. ತೂಕದ ವಿಭಾಗದಲ್ಲಿ ಸ್ಪರ್ಧಿಸುವಂತೆ ಪ್ರಮೋದ್ ಒತ್ತಾಯಪಡಿಸುತ್ತಾನೆ. ಇದನ್ನು ತಿಳಿದು ಕಿರಿಕಿರಿಗೊಂಡು, ಮಹಾವೀರ್ ತನ್ನ ಸೋದರಳಿಯ ಓಂಕಾರ್‌ನೊಂದಿಗೆ (ಅಪಾರ್‌ಶಕ್ತಿ ಖುರಾನಾ) ಪಟಿಯಾಲಾಕ್ಕೆ ಹೋಗಿ ತನ್ನ ಹುಡುಗಿಯರಿಗೆ ರಹಸ್ಯವಾಗಿ ತರಬೇತಿ ನೀಡಲು ಆರಂಭಿಸುತ್ತಾನೆ. ಇದರ ಬಗ್ಗೆ ಗೊತ್ತಾಗಿ, ಮತ್ತು ಮಹಾವೀರ್‌ನ ಹಸ್ತಕ್ಷೇಪದಿಂದ ಆಕ್ರೋಶಗೊಂಡು, ಪ್ರಮೋದ್ ಹುಡುಗಿಯರನ್ನು ಹೊರಹಾಕಬೇಕೆಂದು ಬಯಸುತ್ತಾನೆ; ಕ್ರೀಡಾ ಪ್ರಾಧಿಕಾರವು ಎಚ್ಚರಿಕೆ ನೀಡುತ್ತದೆ ಆದರೆ ಅವರು ಮುಂದುವರಿಯಲು ಬಿಡುತ್ತದೆ. ಮಹಾವೀರ್‌ಗೆ ಅಕಾಡೆಮಿಯನ್ನು ಪ್ರವೇಶಿಸದಂತೆ ತಡೆಹಿಡಿಯಲಾಗುತ್ತದೆ, ಮತ್ತು ಹುಡುಗಿಯರು ಹೊರಹೋಗದಂತೆ ನಿಷೇಧಿಸಲಾಗುತ್ತದೆ. ತನ್ನ ಪುತ್ರಿಯರಿಗೆ ನೆರವಾಗುವುದನ್ನು ಮುಂದುವರಿಸುವ ದೃಢಸಂಕಲ್ಪ ಮಾಡಿ, ಮಹಾವೀರ್ ಗೀತಾಳ ಹಿಂದಿನ ಯಶಸ್ವಿಯಲ್ಲದ ಪಂದ್ಯಗಳ ಟೇಪ್‍ಗಳನ್ನು ಪಡೆದು ಫೋನ್‍ನಲ್ಲಿ ಅವಳ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಅವಳಿಗೆ ತರಬೇತಿ ನೀಡುತ್ತಾನೆ.

ಕ್ರೀಡಾಕೀಟದಲ್ಲಿ, ಗೀತಾ ೫೫ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಫೈನಲ್‍ಗೆ ಸುಲಭವಾಗಿ ಪ್ರವೇಶಿಸುತ್ತಾಳೆ. ಪ್ರೇಕ್ಷಕರಲ್ಲಿ ಕುಳಿತುಕೊಂಡೇ ಮಹಾವೀರ್ ಸತತವಾಗಿ ಪ್ರಮೋದ್‍ನ ಸೂಚನೆಗಳನ್ನು ವಿರೋಧಿಸುತ್ತಾನೆ, ಮತ್ತು ಅವಳು ಅವನ ಬದಲು ತನ್ನ ತಂದೆಯ ಸೂಚನೆಗಳನ್ನು ಅನುಸರಿಸುತ್ತಾಳೆ. ಚಿನ್ನದ ಪದಕದ ಪಂದ್ಯಕ್ಕೆ ಸ್ವಲ್ಪ ಮೊದಲು, ಅಸೂಯೆಗೊಂಡ ಪ್ರಮೋದ್ ಪಿತೂರಿ ಮಾಡಿ ಮಹಾವೀರ್‌ನನ್ನು ಒಂದು ಸಣ್ಣ ಕೋಣೆಯಲ್ಲಿ ಕೂಡಿ ಹಾಕಿಸುತ್ತಾನೆ.

ಪಂದ್ಯದಲ್ಲಿ, ಗೀತಾ ಮೊದಲ ಅವಧಿಯನ್ನು ಗೆಲ್ಲಲು ಯಶಸ್ವಿಯಾಗಿ ಎರಡನೆಯದರಲ್ಲಿ ಸೋಲುತ್ತಾಳೆ. ಕೊನೆಯ ಅವಧಿಯಲ್ಲಿ 1–5 ರಿಂದ ಹಿಂದುಳಿದು ಮತ್ತು ಕೇವಲ ಒಂಭತ್ತು ಸೆಕೆಂಡುಗಳು ಉಳಿದಿರುವಾಗ, ಅವಳು ತನ್ನ ತಂದೆ ಕಲಿಸಿಕೊಟ್ಟ ತಂತ್ರಗಳನ್ನು ನೆನಪಿಸಿಕೊಂಡು, ಕೊನೆಯ ಮೂರು ಸೆಕೆಂಡುಗಳಲ್ಲಿ ೫ ಅಂಕದ ಪಟ್ಟನ್ನು ತನ್ನ ಎದುರಾಳಿಯ ಮೇಲೆ ಪ್ರಯೋಗಿಸಿ, ಅಂಕವನ್ನು ತನ್ನ ಪರವಾಗಿ 6–5 ಕ್ಕೆ ಒಯ್ದು ಆ ಅವಧಿಯನ್ನು ಗೆದ್ದು ಪಂದ್ಯವನ್ನು 2–1 ರಿಂದ ಗೆಲ್ಲುತ್ತಾಳೆ. ಈ ಮೂಲಕ, ಅವಳು ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಆಗುತ್ತಾಳೆ. ಮಹಾವೀರ್ ಸರಿಯಾದ ಸಮಯಕ್ಕೆ ಮರಳಿ ತನ್ನ ಪುತ್ರಿಯರನ್ನು ಆಲಂಗಿಸುತ್ತಾನೆ, ಮತ್ತು ಸುದ್ದಿ ಮಾಧ್ಯಮಗಳ ಎದುರು ಮನ್ನಣೆ ಪಡೆಯುವ ಪ್ರಮೋದ್‍ನ ನಿರೀಕ್ಷೆಯನ್ನು ನಿರಾಶಗೊಳಿಸುತ್ತಾನೆ.

ಪಾತ್ರವರ್ಗ

ಬದಲಾಯಿಸಿ
  • ಮಹಾವೀರ್ ಸಿಂಗ್ ಫ಼ೋಗಾಟ್ ಪಾತ್ರದಲ್ಲಿ ಆಮಿರ್ ಖಾನ್
  • ದಯಾ ಶೋಭಾ ಕೌರ್ ಪಾತ್ರದಲ್ಲಿ ಸಾಕ್ಷಿ ತನ್ವರ್
  • ಗೀತಾ ಫೋಗಾಟ್ ಪಾತ್ರದಲ್ಲಿ ಫ಼ಾತಿಮಾ ಸನಾ ಶೇಖ್
    • ಯುವ ಗೀತಾ ಫೋಗಾಟ್ ಪಾತ್ರದಲ್ಲಿ ಜ಼ಾಯರಾ ವಸೀಮ್
  • ಬಬೀತಾ ಕುಮಾರಿ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರಾ
    • ಯುವ ಬಬೀತಾ ಕುಮಾರಿ ಪಾತ್ರದಲ್ಲಿ ಸುಹಾನಿ ಭಟ್ನಾಗರ್
  • ಒಂಕಾರ್ ಪಾತ್ರದಲ್ಲಿ ಅಪಾರ್‌ಶಕ್ತಿ ಖುರಾನಾ
    • ಯುವ ಓಂಕಾರ್ ಪಾತ್ರದಲ್ಲಿ ರಿತ್ವಿಕ್ ಸಾಹೋರ್
  • ಪ್ರಮೋದ್ ಕದಮ್ ಪಾತ್ರದಲ್ಲಿ ಗಿರೀಶ್ ಕುಲಕರ್ಣಿ
  • ಹರ್ಕಿಂದರ್ ಪಾತ್ರದಲ್ಲಿ ವಿವಾನ್ ಭಟೇನಾ
  • ಪುರುಷ ಹೋರಾಟಗಾರ ಸಂ. ೨ ಪಾತ್ರದಲ್ಲಿ ಕೌಸ್ತುಭ್ ಪೀಲೆ
  • ರಾಷ್ಟ್ರೀಯ ಕ್ರೀಡಾ ಅಕಾಡೆಮಿಯ ವಿಭಾಗ ಮುಖ್ಯಸ್ಥನ ಪಾತ್ರದಲ್ಲಿ ಶಿಶಿರ್ ಶರ್ಮಾ
  • ಜಸ್ಮೀತ್ ಪಾತ್ರದಲ್ಲಿ ಮೀನು ಪ್ರಜಾಪತಿ
  • ಶಮೀಮ್ ಪಾತ್ರದಲ್ಲಿ ಬದ್ರುಲ್ ಇಸ್ಲಾಮ್[೧೭]
  • ಮಹಾವೀರ್ ಸಿಂಗ್ ಫೋಗಾಟ್‍ನ ಅಪ್ಪನ ಪಾತ್ರದಲ್ಲಿ ಕರ್ಮ್‌ವೀರ್ ಚೌಧರಿ

ತಯಾರಿಕೆ

ಬದಲಾಯಿಸಿ

ಬೆಳವಣಿಗೆ

ಬದಲಾಯಿಸಿ

೨೦೧೨ರಲ್ಲಿ, ಡಿಸ್ನಿಯ ಸೃಜನಾತ್ಮಕ ತಂಡದ ಒಬ್ಬ ಸದಸ್ಯೆಯಾದ ದಿವ್ಯಾ ರಾವ್ ವಿಶ್ವ ಚ್ಯಾಂಪಿಯನ್‍ಗಳಾಗಲು ತಮ್ಮ ಪುತ್ರಿಯರಿಗೆ ತರಬೇತಿ ನೀಡಿದ ಮಹಾವೀರ್ ಸಿಂಗ್ ಫೋಗಾಟ್ ಬಗ್ಗೆ ಒಂದು ಸುದ್ದಿಪತ್ರಿಕೆ ಲೇಖನವನ್ನು ಓದಿದರು. ಇದು ಒಂದು ಶ್ರೇಷ್ಠ ಚಲನಚಿತ್ರವನ್ನು ತಯಾರಿಸುವುದು ಎಂದು ಭಾವಿಸಿ ಇದರ ಬಗ್ಗೆ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಇತರ ಡಿಸ್ನಿ ಸಿಬ್ಬಂದಿಯೊಂದಿಗೆ ಮಾತನಾಡಿದರು. ಕಥೆಯನ್ನು ಬರೆದು ನಿರ್ದೇಶಿಸಲು ಡಿಸ್ನಿ ನಿತೇಶ್ ತಿವಾರಿ ಬಳಿ ಹೋಯಿತು. ತಿವಾರಿ ಫೋಗಾಟ್ ಮತ್ತು ಅವರ ಪುತ್ರಿಯರನ್ನು ಭೇಟಿಯಾದರು, ಅವರು ತತ್‍ಕ್ಷಣ ಕಥೆಯನ್ನು ಹೇಳಲು ಒಪ್ಪಿಕೊಂಡರು.[೧೮][೧೯] ತಿವಾರಿ ಚಿತ್ರಕಥೆಯ ಮೇಲೆ ಸುಮಾರು ಒಂದು ವರ್ಷ ಕೆಲಸ ಮಾಡಿದ ಮೇಲೆ ಯುಟಿವಿ ಮೋಷನ್ ಪಿಕ್ಚರ್ಸ್‌ನ ಸಿಇಒ ರಾನಿ ಸ್ಕ್ರ್ಯೂವಾಲಾ ಮತ್ತು ಕಪೂರ್ ಬಳಿ ಅಂತಿಮ ಕಥೆಯೊಂದಿಗೆ ಹೋದರು. ಆಮಿರ್ ಖಾನ್ ಫೋಗಾಟ್‍ನ ಪಾತ್ರವಹಿಸಬೇಕೆಂದು ಸಲಹೆ ನೀಡಿದರು.[೧೦]

ತಮ್ಮ ಬಳಿ ಕಥೆ ಬರುವ ಕೆಲವು ತಿಂಗಳ ಮುಂಚೆ, ಆಮಿರ್ ಖಾನ್ ಫೋಗಾಟ್ ಸೋದರಿಯರನ್ನು ತಮ್ಮ ದೂರದರ್ಶನ ಟಾಕ್ ಶೋ ಸತ್ಯಮೇವ ಜಯತೆಯಲ್ಲಿ ಆಹ್ವಾನಿಸಿ ಅವರ ಸಂದರ್ಶನ ನಡೆಸಿದ್ದರು.[೨೦] ಆಮೇಲೆ ಖಾನ್ ಬಳಿ ತಿವಾರಿ ಮತ್ತು ಕಪೂರ್ ಹೋದರು.[೨೧] ಖಾನ್ ಅದರ ಮೊದಲ ನಿರೂಪಣೆಯನ್ನು ಇಷ್ಟಪಟ್ಟರು. ಖಾನ್ ಆಗ ಇನ್ನೊಂದು ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದರು. ಆ ಪಾತ್ರಕ್ಕೆ ೫೫ ವರ್ಷ ವಯಸ್ಸಿನ ನಟ ಬೇಕಾಗಿದ್ದರಿಂದ ಮತ್ತು ಅವರು ಆಗಲೂ ಯುವ ಪಾತ್ರಗಳನ್ನು ಮಾಡುತ್ತಿದ್ದರಿಂದ ಅವರು ಈ ಚಿತ್ರವನ್ನು 5–10 ವರ್ಷಗಳ ನಂತರ ಮಾಡಲು ಬಯಸಿದ್ದರು. ಕೆಲವು ತಿಂಗಳ ನಂತರ ಆಮಿರ್ ತಿವಾರಿಯವರಿಗೆ ಕರೆ ಮಾಡಿ ಕಥೆಯನ್ನು ಮತ್ತೊಮ್ಮೆ ನಿರೂಪಿಸಬೇಕೆಂದು ಕೇಳಿಕೊಂಡರು.[೨೨]

2014ರಲ್ಲಿ, ತಾವು ನಿತೇಶ್ ತಿವಾರಿ ನಿರ್ದೇಶನದ ತಮ್ಮ ಮುಂದಿನ ಚಿತ್ರ ದಂಗಲ್‍ನಲ್ಲಿ ಕುಸ್ತಿಪಟುವಿನ ಪಾತ್ರವಹಿಸುತ್ತಿರುವುದಾಗಿ ಆಮಿರ್ ಘೋಷಿಸಿದರು. ಇದು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಾಟ್‍ರ ಸಿನಿಮಾತ್ಮಕ ಜೀವನ ಚರಿತ್ರೆಯಾಗಿತ್ತು.[೨೩]

ಮಾರ್ಚ್ ೨೦೧೫ರಲ್ಲಿ, ಖಾನ್ ಮತ್ತು ದಂಗಲ್‍ನ ಇಡೀ ತಂಡಕ್ಕೆ ತರಬೇತಿ ನೀಡುವಂತೆ ಕೇಳಲು ಆಮಿರ್ ಖಾನ್ ಪ್ರೊಡಕ್ಷನ್ಸ್ ಕಿರಿಯ ಭಾರತೀಯ ಮಹಿಳೆಯರ ಕುಸ್ತಿ ತಂಡದ ತರಬೇತುದಾರರಾದ ಕ್ರಿಪಾ ಶಂಕರ್ ಪಟೇಲ್ ಬಿಷ್ಣೋಯಿ ಬಳಿ ಹೋಯಿತು.

ಈ ಚಿತ್ರಕ್ಕಾಗಿ ಖಾನ್ ಸ್ವಲ್ಪ ತೂಕ ಇಳಿಸಿದರು ಮತ್ತು ಹರಿಯಾಣವಿ ಪಾಠಗಳನ್ನು ಹಾಗೂ ಪ್ರಾಂತ ಭಾಷೆಯ ತರಬೇತಿಯನ್ನು ತೆಗೆದುಕೊಂಡರು.[೨೪][೨೫] ಅವರು ಚಿತ್ರದಲ್ಲಿ ಎರಡು ವಿಶಿಷ್ಟ ಪಾತ್ರಗಳನ್ನು ವಹಿಸಿದರು: ೬೦ ವರ್ಷ ವಯಸ್ಸಿನ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಾಟ್, ಮತ್ತು ಫೋಗಾಟ್‍ರ ೨೦ ವರ್ಷ ವಯಸ್ಸಿನ ಪಾತ್ರ. ಹಿರಿಯ ವಯಸ್ಸಿನ ಫೋಗಾಟ್ ಪಾತ್ರವನ್ನು ವಹಿಸಲು ಖಾನ್ ೩೦ ಕೆ.ಜಿ. ತೂಕ ಹೆಚ್ಚಿಸಿ ೯೮ ಕೆ.ಜಿ. ತೂಕ ತಲುಪಿದ್ದರು ಎಂದು ವರದಿಯಾಯಿತು. ನಂತರ ದಂಗಲ್‍ನಲ್ಲಿ ಕಿರಿಯ ಪಾತ್ರವನ್ನು ವಹಿಸಲು ಆ ತೂಕವನ್ನು ಇಳಿಸಿಕೊಂಡರು.[೨೬][೨೭] ಈ ಚಿತ್ರವನ್ನು ರೂ. ೭೦ ಕೋಟಿ ಬಂಡವಾಳದಲ್ಲಿ ತಯಾರಿಸಲಾಯಿತು.[]

ಪಾತ್ರ ಹಂಚಿಕೆ

ಬದಲಾಯಿಸಿ

ಮಾರ್ಚ್ ೨೦೧೫ರಲ್ಲಿ, ಖಾನ್‍ರ ಪರದೆ ಮೇಲಿನ ಪುತ್ರಿಯರ ಪಾತ್ರಕ್ಕಾಗಿ ಅನೇಕ ನಟಿಯರನ್ನು ಪರಿಗಣಿಸಲಾಗುತ್ತಿತ್ತು.[೨೮] ಎಪ್ರಿಲ್‍ನಲ್ಲಿ, ಫ಼ಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾರಿಗೆ ಹರಿಯಾಣದ ಭಿವಾನಿಯ ಬಲಾಲಿ ಗ್ರಾಮದ ಜಾಟ್ ಸಮುದಾಯದವರಾದ ಪುತ್ರಿಯರ ಪಾತ್ರಗಳನ್ನು ಹಂಚಲಾಯಿತು.[೨೯][೩೦][೩೧] ಗೀತಾ ಫೋಗಾಟ್ ೨೦೧೨ ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.[೩೨] ಬಬೀತಾ ಗ್ಲ್ಯಾಸ್ಗೊದಲ್ಲಿನ ೨೦೧೪ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು.[೩೩][೩೪] ಜೂನ್ ೨೦೧೫ರಲ್ಲಿ, ಬಾಲನಟಿಯರಾದ (ಕಾಶ್ಮೀರದ) ಜ಼ಾಯರಾ ವಸೀಮ್ ಮತ್ತು (ದೆಹಲಿಯ) ಸುಹಾನಿ ಭಟ್ನಾಗರ್‌ರನ್ನು ದಂಗಲ್‍ನಲ್ಲಿ ಸೇರಿಸಿಕೊಳ್ಳಲಾಯಿತು.[೩೫] ಆಯುಷ್ಮಾನ್ ಖುರಾನಾರ ಸೋದರ ಅಪಾರ್‌ಶಕ್ತಿ ಖುರಾನಾರಿಗೂ ಒಂದು ಪಾತ್ರವನ್ನು ಹಂಚಲಾಯಿತು.[೩೬] ಮುಕೇಶ್ ಛಾಬ್ರಾ ದಂಗಲ್‍ನ ಪಾತ್ರಹಂಚಿಕಾ ನಿರ್ದೇಶಕರಾಗಿದ್ದರು. ಖಳನಾಯಕನ ಪಾತ್ರವನ್ನು ವಹಿಸಲು ವಿಕ್ರಮ್ ಸಿಂಗ್‍ರನ್ನು ನೇಮಿಸಿಕೊಳ್ಳಲಾಯಿತು.[೩೭][೩೮] ಆಮಿರ್ ಖಾನ್‍ರ ಸೋದರಳಿಯ ಪಾಬ್ಲೊ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದರು.[೩೯][೪೦] ಪಾತ್ರಕ್ಕಾಗಿ ೭೦ ನಟಿಯರ ಅಭಿನಯ ಪರೀಕ್ಷೆ ನಡೆಸಿದ ಮೇಲೆ ಅಂತಿಮವಾಗಿ ಮಹಾವೀರ್ ಸಿಂಗ್ ಫೋಗಾಟ್‍ರ ಹೆಂಡತಿ ದಯಾ ಕೌರ್‌ರಾಗಿ ಸಾಕ್ಷಿ ತನ್ವರ್‌ರನ್ನು ತರಲಾಯಿತು.[೪೧][೪೨][೪೩] ಮಹಾವೀರ್ ಫೋಗಾಟ್‍ನ ಅತ್ಯಂತ ಕಿರಿಯ ಮಗಳು ಸಂಗೀತಾ ಪಾತ್ರವಹಿಸಲು ಅನನ್ಯಾಳನ್ನು ಆಯ್ಕೆ ಮಾಡಲಾಯಿತು.[೪೪][೪೫] ಅಕ್ಟೋಬರ್ ೨೦೧೫ರಲ್ಲಿ, ಚಿತ್ರದಲ್ಲಿ ಒಂದು ನಕಾರಾತ್ಮಕ ಪಾತ್ರವನ್ನು ವಹಿಸಲು ವಿವೇಕ್ ಭಟೇನಾರನ್ನು ಆಯ್ಕೆಮಾಡಲಾಯಿತು.[೪೬]

ಚಿತ್ರೀಕರಣ

ಬದಲಾಯಿಸಿ

ದಂಗಲ್‍ನ ಚಿತ್ರೀಕರಣ ಕಾರ್ಯಕ್ರಮವು ೧ ಸೆಪ್ಟೆಂಬರ್ ೨೦೧೫ರಂದು ಆರಂಭವಾಯಿತು.[೪೭][೪೮] ಲುಧಿಯಾನದ ಹಳ್ಳಿಗಳಿಗೆ ಹರಿಯಾಣವಿ ರೂಪಾಂತರವನ್ನು ನೀಡಲಾಯಿತು.[೪೯][೫೦] ಚಿತ್ರೀಕರಣವು ಪಂಜಾಬ್ ಮತ್ತು ಹರಿಯಾಣಾದ ಹಳ್ಳಿಗಳಲ್ಲಿ ನಡೆಯಿತು.[೫೧][೫೨]

ಸೆಪ್ಟೆಂಬರ್ ೨೦೧೫ರಿಂದ ಡಿಸೆಂಬರ್ ೨೦೧೫ರ ವರೆಗೆ ಆಮಿರ್ ಖಾನ್ ೯% ಕೊಬ್ಬನ್ನು ಹೆಚ್ಚಿಸಿಕೊಂಡು ದಂಗಲ್ಗಾಗಿ ಸುಮಾರು ೯೮ ಕೆ.ಜಿ. ತೂಕವನ್ನು ಹೊಂದಿದ್ದರು. ಜನೆವರಿ ೨೦೧೬ರಿಂದ ಎಪ್ರಿಲ್ ೨೦೧೬ರ ವರೆಗೆ ಅವರು ತಮ್ಮ ಎಂದಿನ ಆಕಾರವನ್ನು ಮತ್ತೆ ಪಡೆದರು ಮತ್ತು ದಂಗಲ್‍ನ ಚಿತ್ರೀಕರಣವನ್ನು ನಿಲ್ಲಿಸಿ ಮುಂದಿನ ಚಿತ್ರಗಳಿಗಾಗಿ ಕಥೆಯನ್ನು ಕೇಳಿದರು.[೫೩]

ಚಿತ್ರೀಕರಣದ ವೇಳೆ ಆಮಿರ್ ಎರಡು ಬಾರಿ ಗಾಯಗೊಂಡರು. ಒಮ್ಮೆ ಖಾನ್‍ಗೆ ಸಣ್ಣಪುಟ್ಟ ಗಾಯಗಳಾಗಿ ಅವರ ಬೆನ್ನಿನಲ್ಲಿ ಸ್ನಾಯು ಸೆಳೆತಗಳಾದವು. ಮತ್ತೊಮ್ಮೆ, ರಂಗಸಜ್ಜಿನಲ್ಲಿ ಭುಜದ ಗಾಯಕ್ಕೀಡಾಗಿ ಖಾನ್ ಕುಸಿದು ಬಿದ್ದರು. ಗಾಯದಿಂದ ಚೇತರಿಸಿಕೊಂಡು ಚಿತ್ರೀಕರಣವನ್ನು ಪುನರಾರಂಭಿಸಿದರು.

ಚಿತ್ರತಂಡವು ಪುಣೆಯಲ್ಲಿನ ಶ್ರೀ ಶಿವ್ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿನ ಮತ್ತು ಅದರ ಸುತ್ತಲಿನ ಕ್ರೀಡಾಂಗಣದಲ್ಲಿ ಚಿತ್ರೀಕರಣ ನಡೆಸಿತು. ಆ ವೇಳೆಯಲ್ಲಿ ಭಾಗವಹಿಸುತ್ತಿದ್ದ ವಿದೇಶಿ ಕ್ರೀಡಾಪಟುಗಳನ್ನು ಚಿತ್ರದಲ್ಲಿ ಹಿನ್ನೆಲೆ ಕ್ರೀಡಾಪಟುಗಳ ಪಾತ್ರವಹಿಸಲು ನೇಮಿಸಿಕೊಳ್ಳಲಾಯಿತು.

ಕುಸ್ತಿ ದೃಶ್ಯಾವಳಿಗಳನ್ನು ದೆಹಲಿಯ ತಾಲ್‍ಕಟೋರಾ ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾಯಿತು. ಕಾಮನ್‍ವೆಲ್ತ್ ಕ್ರೀಡಾಕೂಟ ಮತ್ತು ರಾಷ್ಟ್ರೀಯ ಕ್ರೀಡೆಗಳ ದೃಶ್ಯಾವಳಿಗಳನ್ನು ದೆಹಲಿಯ ಬೇರೊಂದು ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾಯಿತು.[೫೪]

ಚಿತ್ರವು ಅನೇಕ ದಶಕಗಳ ಹಿನ್ನೆಲೆ ಹೊಂದಿರುವುದರಿಂದ, ಛಾಯಾಗ್ರಾಹಕ ಸತ್ಯಜೀತ್ ಪಾಂಡೆ ಮತ್ತು ಬಣ್ಣಗಾರ ಆಶೀರ್ವಾದ್ ಹಾಡ್ಕರ್ ತಯಾರಿಕಾಪೂರ್ವ ಹಂತದಲ್ಲಿ ಚರ್ಮದ ಬಣ್ಣಗಳು ಮತ್ತು ವಸ್ತ್ರಗಳಿಗಾಗಿ ಅನೇಕ ಪರೀಕ್ಷೆಗಳನ್ನು ಪ್ರಯೋಗ ಮಾಡಿದರು. ಚಿತ್ರದಲ್ಲಿ ಪ್ರಧಾನವಾಗಿ ನೈಸರ್ಗಿಕ ಬೆಳಕನ್ನು ಬಳಸಲಾಯಿತು.

ಧ್ವನಿವಾಹಿನಿ

ಬದಲಾಯಿಸಿ

ಚಿತ್ರದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಹಿಂದಿಯಲ್ಲಿ ಅಮಿತಾಭ್ ಭಟ್ಟಾಚಾರ್ಯ, ತಮಿಳಿನಲ್ಲಿ ರಾಜೇಶ್ ಮಲಾರ್‌ವಣ್ಣನ್ ಮತ್ತು ತೆಲುಗಿನಲ್ಲಿ ವನಮಾಲಿ ಬರೆದಿದ್ದಾರೆ.[೫೫] ದಲೇರ್ ಮೆಹಂದಿ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದರು.[೫೬] "ಧಾಕಡ್" ಹಾಡನ್ನು ರ್‍ಯಾಪರ್ ಆದ ರಫ಼್ತಾರ್ ಹಾಡಿದರು ಮತ್ತು ಇದು ಜನಪ್ರಿಯವಾಯಿತು.[೫೭] ಆಮಿರ್ ಖಾನ್ ಈ ಹಾಡಿನ ತಮ್ಮ ಸ್ವಂತ ಆವೃತ್ತಿಯನ್ನು ರ್‍ಯಾಪ್ ಮಾಡಿ ಧ್ವನಿವಾಹಿನಿಯಲ್ಲಿ ಸೇರಿಸಿದರು.[೫೮] ಧ್ವನಿವಾಹಿನಿ ಸಂಗ್ರಹವನ್ನು ೨೩ ನವಂಬರ್ ೨೦೧೬ರಂದು ಹಿಂದಿಯಲ್ಲಿ ಮತ್ತು ೨೬ ನವಂಬರ್ ೨೦೧೬ರಂದು ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಲಾಯಿತು.[೫೯]

ಬಿಡುಗಡೆ

ಬದಲಾಯಿಸಿ

ದಂಗಲ್ ಚಿತ್ರವನ್ನು ವಿಶ್ವಾದ್ಯಂತ ೨೩ ಡಿಸೆಂಬರ್ ೨೦೧೬ರಂದು ಬಿಡುಗಡೆ ಮಾಡಲಾಯಿತು.[೬೦] ಇದನ್ನು ಡಬ್ ಮಾಡಿದ ರೂಪದಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಯುದ್ಧಮ್ ಎಂದೂ ಬಿಡುಗಡೆ ಮಾಡಲಾಯಿತು.[೬೧][೬೨] ದಂಗಲ್ ಅನ್ನು ಹೆಣ್ಣು ಮಕ್ಕಳ ಆಯ್ದ ಗರ್ಭಪಾತವನ್ನು ಕಡಿಮೆಮಾಡುವ, ಹುಡುಗಿಯರನ್ನು ರಕ್ಷಿಸುವ, ಮತ್ತು ಅವರಿಗೆ ಶಿಕ್ಷಣ ನೀಡುವ ಗುರಿ ಹೊಂದಿದ ಭಾರತ ಸರ್ಕಾರದ ಬೇಟಿ ಬಚಾವೊ ಬೇಟಿ ಪಢಾವೊ ಸಾಮಾಜಿಕ ಅಭಿಯಾನವನ್ನು ಪ್ರಚಾರಮಾಡಲು ಆರು ಭಾರತೀಯ ರಾಜ್ಯಗಳು - ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣಾ, ಛತ್ತೀಸ್‍ಗಢ್, ಮಧ್ಯ ಪ್ರದೇಶ ಮತ್ತು ದೆಹಲಿಯಲ್ಲಿ ತೆರಿಗೆ ಮುಕ್ತವೆಂದು ಘೋಷಿಸಲಾಯಿತು.[೬೩][೬೪][೬೫][೬೬][೬೭][೬೮] ಈ ಚಿತ್ರವು ಜನಪ್ರಿಯ ಪ್ರಸಾರ ವ್ಯವಸ್ಥೆಯಾದ ನೆಟ್‍ಫ್ಲಿಕ್ಸ್‌ನಲ್ಲಿ ಬೇಡಿಕೆ ಮೇರೆಗೆ ವೀಡಿಯೊ ಸೇವೆಯಾಗಿ ಲಭ್ಯವಿದೆ.[೬೯]

ದಂಗಲ್ ಚಿತ್ರವನ್ನು ತೈವಾನ್‌ನಲ್ಲಿ ೨೪ ಮಾರ್ಚ್ ೨೦೧೭ರಂದು ಬಿಡುಗಡೆ ಮಾಡಲಾಯಿತು.[೭೦] ದಂಗಲ್ ಚಿತ್ರವನ್ನು ೭ನೇ ಬೀಜಿಂಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಇದು ಆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಚಿತ್ರವಾಗಿತ್ತು ಮತ್ತು ಜಯಘೋಷವನ್ನು ಪಡೆಯಿತು. ಪ್ರದರ್ಶನದಲ್ಲಿ ಚೈನಾದ ಅನೇಕ ಪ್ರಸಿದ್ಧ ವ್ಯಕ್ತಿಗಳು ಉಪಸ್ಥಿತರಿದ್ದರು.[೭೧] ಇದು ಚೈನಾದ ಚಿತ್ರಮಂದಿರಗಳಲ್ಲಿ ೫ ಮೇ ೨೦೧೭ರಂದು ಬಿಡುಗಡೆಗೊಂಡಿತು, ಮತ್ತು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಸಮಾನವಾಗಿ ಅಗಾಧ ಪ್ರತಿಕ್ರಿಯೆ ಪಡೆಯಿತು.[೭೨][೭೩] ಚಿತ್ರವು ಹಾಂಗ್ ಕಾಂಗ್‌ನಲ್ಲಿ ೨೪ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡಿತು.[೭೪]

ದಂಗಲ್ ಜಪಾನ್‍ನಲ್ಲಿ ೬ ಎಪ್ರಿಲ್ ೨೦೧೮ರಂದು ಬಿಡುಗಡೆಗೊಂಡಿತು.[೭೫][೭೬] ダンガル きっと、つよくなる (ಡಂಗಾರು ಕಿಟ್ಟೊ, ಟ್ಸುಯೊಕು ನಾರು) ಎಂಬುದು ಈ ಚಿತ್ರದ ಜಪಾನಿ ಭಾಷೆಯ ಶೀರ್ಷಿಕೆಯಾಗಿತ್ತು.

ದಂಗಲ್ ದಕ್ಷಿಣ ಕೊರಿಯಾದಲ್ಲಿ ೨೫ ಎಪ್ರಿಲ್ ೨೦೧೮ರಲ್ಲಿ ಬಿಡುಗಡೆಗೊಂಡಿತು.[೭೭]

ವಿಮರ್ಶಾತ್ಮಕ ಪ್ರತಿಕ್ರಿಯೆ

ಬದಲಾಯಿಸಿ
ಅನೇಕ ಚಲನಚಿತ್ರ ವಿಮರ್ಶಕರು ಜ಼ಾಯರಾ ವಸೀಮ್ ಮತ್ತು ಫ಼ಾತಿಮಾ ಸನಾ ಶೇಖ್‍ರನ್ನು ಗೀತಾ ಫೋಗಾಟ್‌ಳ ಅವರ ಯುವ ಮತ್ತು ಪ್ರೌಢ ಪಾತ್ರಕ್ಕಾಗಿ ಪ್ರಶಂಸಿಸಿದರು.

ವಿಮರ್ಶಕರು ಹಲವುವೇಳೆ ದಂಗಲ್ನಲ್ಲಿನ ವಿಷಯವಸ್ತುವಿನ ಚಿತ್ರಣವನ್ನು ಪ್ರಶಂಸಿಸಿದರು.

ಎಲ್ಲ ಮುಖ್ಯ ನಟರ ಅಭಿನಯಗಳನ್ನು ಪ್ರಶಂಸಿಸುತ್ತಾ ಬಹುತೇಕ ವಿಮರ್ಶಕರು ತಮ್ಮ ಪ್ರಶಂಸೆಯನ್ನು ಖಾನ್‍ರ ಅಭಿನಯದ ಮೇಲೆ ಕೇಂದ್ರೀಕರಿಸಿದರು.

ಚಿತ್ರವು ಲಾಘವಕಾರಿಗಳ ತನ್ನ ಪಾಲನ್ನೂ ಹೊಂದಿತ್ತು. ಅವರು ನಿರೂಪಣೆ ಮತ್ತು ಅಭಿನಯಗಳನ್ನು ಪ್ರಶಂಸಿಸಿದರಾದರೂ, ಚಲನಚಿತ್ರದಲ್ಲಿ ಚಿತ್ರಿತವಾದ ಸ್ತ್ರೀ ಸ್ವಾತಂತ್ರ್ಯವಾದದ ಪರಿಕಲ್ಪನೆಯು ದೋಷಪೂರಿತವಾಗಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಕುಸ್ತಿಪಟು ತಂದೆಯು ದೇಶಕ್ಕಾಗಿ ಪದಕ ಗೆಲ್ಲುವ ತನ್ನ ಗುರಿಯ ಅನ್ವೇಷಣೆಯಲ್ಲಿ ತನ್ನ ಪುತ್ರಿಯರಿಗೆ ಅವರ ಇಚ್ಛೆಗೆ ವಿರುದ್ಧವಾಗಿ ತರಬೇತಿ ನೀಡಿದನು ಎಂದು ಅವರು ಸೂಚಿಸಿದರು.

ಟೀಕೆಯು ಚಿತ್ರದ ಇತರ ಕ್ಷೇತ್ರಗಳತ್ತ ಕೂಡ ನಿರ್ದೇಶಿತವಾಗಿತ್ತು, ಉದಾಹರಣೆಗೆ ಅಕಾಡೆಮಿಯಲ್ಲಿನ ತರಬೇತುದಾರನ ಚಿತ್ರಣ.

ಬಾಕ್ಸ್ ಆಫ಼ಿಸ್

ಬದಲಾಯಿಸಿ

ದಂಗಲ್ ವಿಶ್ವಾದ್ಯಂತ $300 ದಶಲಕ್ಷದಷ್ಟು ಹಣಗಳಿಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ.[೭೮] ದಂಗಲ್ ಅತ್ಯಂತ ಹೆಚ್ಚು ಹಣಗಳಿಸಿದ ಕ್ರೀಢಾಧಾರಿತ ಚಲನಚಿತ್ರವೂ ಆಗಿದೆ.

ದಂಗಲ್ ಅಂತಿಮವಾಗಿ ಭಾರತದಲ್ಲಿನ ಎಲ್ಲ ಭಾಷೆಗಳಿಂದ ಒಟ್ಟು ₹೫೩೮.೦೩ crore ಕೋಟಿಯಷ್ಟು ಹಣಗಳಿಸಿತು.[೭೯] ಸ್ಥಳೀಯ ಭಾರತೀಯ ಬಾಕ್ಸ್ ಆಫ಼ಿಸ್‍ನಲ್ಲಿ ಚಿತ್ರದ ಒಟ್ಟು ಜನಪ್ರವೇಶದ ಸಂಖ್ಯೆ ಸುಮಾರು ೩೭ ದಶಲಕ್ಷದಷ್ಟಿತ್ತು.[೮೦]

ಉತ್ತರ ಅಮೇರಿಕದಲ್ಲಿ ದಂಗಲ್ US$12.4 ದಶಲಕ್ಷದಷ್ಟು ಗಳಿಸಿತು. ದಂಗಲ್ ಕೊಲ್ಲಿ ದೇಶಗಳ ಪ್ರದೇಶಗಳಿಂದ 59.04 ಕೋಟಿಯಷ್ಟು ಗಳಿಸಿತು. ಈ ಚಿತ್ರ ಆಸ್ಟ್ರೇಲಿಯಾದಲ್ಲಿ 12.65 ಕೋಟಿಗಿಂತ ಹೆಚ್ಚು ಹಣಗಳಿಸಿತು. ಈ ಚಿತ್ರವು ನ್ಯೂ ಜ಼ೀಲಂಡ್‍ನಲ್ಲಿ 2.98 ಕೋಟಿಯಷ್ಟು ಗಳಿಸಿತು.[೮೧] ಯುಕೆಯಲ್ಲಿ 25.78 ಕೋಟಿಯಷ್ಟು ಗಳಿಸಿತು.[೮೨]

ತೈವಾನ್

ಬದಲಾಯಿಸಿ

ತೈವಾನ್‍ನಲ್ಲಿ ಈ ಚಿತ್ರವು ೪೧ ಕೋಟಿಯಷ್ಟು ಗಳಿಸಿತು.[೮೩] ಅಲ್ಲಿ ಈ ಚಿತ್ರವು ನಾಲ್ಕು ತಿಂಗಳು ಕಾಲ ಓಡಿತು.

ಚೈನಾದಲ್ಲಿ ಇದು ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಿತ್ರವೆನಿಸಿಕೊಂಡಿತು.

ಚಿತ್ರಮಂದಿರಗಳಲ್ಲಿ ಇದರ ಓಟ ಅಂತ್ಯಗೊಂಡ ವೇಳೆಗೆ, ಇದರ ಅಂತಿಮ ಹಣಗಳಿಕೆ ¥1,299.12 ದಶಲಕ್ಷದಷ್ಟಿತ್ತು.[೮೪]

ಟರ್ಕಿ ಮತ್ತು ಹಾಂಗ್ ಕಾಂಗ್

ಬದಲಾಯಿಸಿ

ಟರ್ಕಿಯಲ್ಲಿ ದಂಗಲ್ $428,201 ನಷ್ಟು ಗಳಿಸಿತು.[೮೫]

ದಂಗಲ್ ಹಾಂಗ್ ಕಾಂಗ್‍ನಲ್ಲಿ HK$27,139,998 ನಷ್ಟು ಹಣಗಳಿಸಿತು.[೮೬]

ಜಪಾನ್ ಮತ್ತು ದಕ್ಷಿಣ ಕೊರಿಯಾ

ಬದಲಾಯಿಸಿ

ಜಪಾನ್‍ನಲ್ಲಿ ದಂಗಲ್ ೩ ಕೋಟಿಯಷ್ಟು ಗಳಿಸಿತು.[೮೭]

ದಕ್ಷಿಣ ಕೊರಿಯಾದಲ್ಲಿ, ಈ ಚಿತ್ರವು $850,000 ನಷ್ಟು ಗಳಿಸಿತು.[೮೮]

ವಾಣಿಜ್ಯಿಕ ವಿಶ್ಲೇಷಣೆ

ಬದಲಾಯಿಸಿ

ಈ ಚಿತ್ರದ ಬಿಡುಗಡೆಯ ಮೊದಲು ಈ ಚಿತ್ರದಿಂದ ಸೃಷ್ಟಿಯಾದ ಪ್ರಚಾರದ ಹೊರತಾಗಿಯೂ ಇದು ಚೆನ್ನಾಗಿ ಓಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಭಾರತದಲ್ಲಿ ನಡೆಯುತ್ತಿದ್ದ ಅಸಹಿಷ್ಣುತೆ ಚರ್ಚೆಯ ವೇಳೆಯಲ್ಲಿ ಆಮಿರ್ ಖಾನ್‍ರ ನವೆಂಬರ್ ೨೦೧೫ರ ಹೇಳಿಕೆಯು ಕೆಲವು ವರ್ಗಗಳ ಜನರ ಅಸಮಾಧಾನ ಮತ್ತು ಪ್ರತಿಕೂಲ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತ್ತು. ಅವರ ಸ್ಪಷ್ಟೀಕರಣದ ಹೊರತಾಗಿಯೂ, ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯು ಮುಂದುವರೆಯಿತು. ಚಿತ್ರದ ಬಿಡುಗಡೆಯ ಮೊದಲು ಚಿತ್ರದ ಬಹಿಷ್ಕಾರ ಮಾಡಬೇಕೆಂದು ವಿನಂತಿಸಿಕೊಳ್ಳುವ ಪ್ರಚಾರಗಳು ಆರಂಭವಾದವು.[೮೯][೯೦] ಭಾರತ ಸರ್ಕಾರವು ನವೆಂಬರ್ ೨೦೧೬ರಲ್ಲಿ ನೋಟುಗಳನ್ನು ಅಮಾನ್ಯ ಮಾಡಿದ ಮೇಲೆ, ಚಲನಚಿತ್ರಗಳ ವ್ಯವಹಾರವು ಕುಸಿಯಿತು ಏಕೆಂದರೆ ಟಿಕೇಟುಗಳಿಗೆ ಮುಖ್ಯವಾಗಿ ನಗದಿನ ಸಂದಾಯವಾಗುತ್ತಿತ್ತು. ಈ ಸಮಯದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಪಾದನೆ ಗಣನೀಯವಾಗಿ ಪ್ರಭಾವಿತವಾದವು.

ಆದರೆ ಇವ್ಯಾವುದೂ ದಂಗಲ್ನ ಪ್ರದರ್ಶನ ಮೇಲೆ ಪ್ರಭಾವ ಬೀರಲಿಲ್ಲ.

ದಂಗಲ್ ಚಿತ್ರವು ಚೈನಾದಲ್ಲಿ ಬಹಳ ಚೆನ್ನಾಗಿ ಓಡಿತು. ಚೈನಾದಲ್ಲಿ ಖಾನ್‍ರ ಜನಪ್ರಿಯತೆಯು ಇದಕ್ಕೆ ಭಾಗಶಃ ಕಾರಣವೆಂದು ಹೇಳಲಾಯಿತು.

ಚೈನಾದ ಪ್ರೇಕ್ಷಕರು ದಂಗಲ್‍ನ ಆಧಾರವಾಗಿರುವ ಸಾಮಾಜಿಕ ವಿಷಯಕ್ಕೆ ಸಂಬಂಧಿಸಬಲ್ಲರಾಗಿದ್ದರು ಎಂದೂ ವರದಿಯಾಯಿತು ಏಕೆಂದರೆ ಇದು ಚೈನಾದಲ್ಲಿ ಅಂತರ್ಗತವಾಗಿರುವ ಪರಿಸ್ಥಿತಿಗಳಂತೆ, ಪಿತೃಪ್ರಧಾನ ಮತ್ತು ಲಿಂಗ ಅಸಮಾನ ಸಮಾಜದ ಹಿನ್ನೆಲೆಯಲ್ಲಿ ಸಹೋದರಿಯರ ಯಶಸ್ಸಿನ ಕಥೆಯನ್ನು ಚಿತ್ರಿಸಿತ್ತು.[೯೧][೯೨] ಈ ಚಿತ್ರವು ದೇಶೀಯ ಚಿತ್ರಗಳ ಕಳಪೆ ಗುಣಮಟ್ಟದ ಕಾರಣ ಪ್ರೇಕ್ಷಕರ ಆಸಕ್ತಿಯ ಕೊರತೆಯಿಂದ ಸೃಷ್ಟಿಯಾದ ನಿರ್ವಾತವನ್ನು ತುಂಬಿಸಿದ್ದು ಮತ್ತೊಂದು ಅಂಶವಾಗಿತ್ತು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ

ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಲನಚಿತ್ರ - ದಂಗಲ್ - ಗೆಲುವು
  • ಅತ್ಯುತ್ತಮ ನಿರ್ದೇಶಕ - ನಿತೇಶ್ ತಿವಾರಿ - ಗೆಲುವು
  • ಅತ್ಯುತ್ತಮ ನಟ - ಆಮಿರ್ ಖಾನ್ - ಗೆಲುವು
  • ಅತ್ಯುತ್ತಮ ಸಾಹಸ - ಶ್ಯಾಮ್ ಕೌಶಲ್ - ಗೆಲುವು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಅತ್ಯುತ್ತಮ ಪೋಷಕ ನಟಿ - ಜ಼ಾಯರಾ ವಸೀಮ್ - ಗೆಲುವು

ಗೃಹ ಮಾಧ್ಯಮ

ಬದಲಾಯಿಸಿ

ದಂಗಲ್ ಚಿತ್ರದ ಉಪಗ್ರಹ ಹಕ್ಕುಗಳನ್ನು ಭಾರತದಲ್ಲಿ ₹೧೧೦ crore ಕೋಟಿಗೆ ಮಾರಾಟ ಮಾಡಲಾಯಿತು. ದಂಗಲ್ ದೂರದರ್ಶನದಲ್ಲಿ ೨೦೧೭ರಲ್ಲಿ ಜ಼ೀ ಟಿವಿ ವಾಹಿನಿಯಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು. ಇದನ್ನು ೧೬.೨೬೩ ದಶಲಕ್ಷ ಪ್ರೇಕ್ಷಕರು ವೀಕ್ಷಿಸಿದರು. ದಂಗಲ್ ಚಿತ್ರವು ಜ಼ೀ ತಮಿಳ್ ವಾಹಿನಿಯಲ್ಲಿ ಆಗಸ್ಟ್ ೨೦೧೭ರಲ್ಲಿ ಪ್ರಥಮ ಬಾರಿ ಪ್ರದರ್ಶನಗೊಂಡಿತು.

ಈ ಚಿತ್ರವನ್ನು ಹಲವಾರು ಚೈನೀಸ್ ಆನ್‍ಲೈನ್ ಪ್ರಸಾರ ಪ್ಲ್ಯಾಟ್‌ಫ಼ಾರ್ಮ್‌ಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಪ್ರಭಾವ

ಬದಲಾಯಿಸಿ

ಮತ್ತೊಂದು ಜಪಾನಿ ಚಿತ್ರದೊಂದಿಗೆ ದಂಗಲ್ ಚೈನಾದ ಬಾಕ್ಸ್ ಆಫ಼ಿ‍ಸ್‍ನಲ್ಲಿ ಹೊಸ ಪ್ರವೃತ್ತಿಯನ್ನು ಆರಂಭಿಸಿತು. ಚೈನಾದ ಪ್ರೇಕ್ಷಕರು ನಿಧಾನವಾಗಿ ಹಾಲಿವುಡ್ ಬ್ಲಾಕ್‍ಬಸ್ಟರ್‌ಗಳಿಂದ ದೂರ ಚಲಿಸಿ ಇತರ ದೇಶಗಳ ಚಲನಚಿತ್ರಗಳಲ್ಲಿ ಹೆಚ್ಚು ಆಸಕ್ತಿಯನ್ನು ತೆಗೆದುಕೊಳ್ಳತೊಡಗಿದರು.

ದಂಗಲ್ ಮತ್ತು ಸೀಕ್ರೆಟ್ ಸೂಪರ್‌ಸ್ಟಾರ್ ಚಿತ್ರಗಳ ಯಶಸ್ಸು ಅನೇಕ ಇತರ ಭಾರತೀಯ ಚಲನಚಿತ್ರಗಳು ಚೈನಾದಲ್ಲಿ ಬಿಡುಗಡೆಯಾಗುವಲ್ಲಿ ಕೊಡುಗೆ ನೀಡಿತು.[೯೩]

ಈ ಚಿತ್ರವು ಚೈನಾದ ಸಿನಿಮಾಗಳ ಮೇಲೆ ಕೂಡ ಪ್ರಭಾವ ಬೀರಿತು. ಈ ಚಿತ್ರದ ಯಶಸ್ಸಿನಿಂದ ಚೈನಾದ ಚಲನಚಿತ್ರೋದ್ಯಮಿಗಳು ಚೈನಾದ ಸಮಾಜಕ್ಕೆ ಸಂಬಂಧಿಸಿದಂತೆ ಸಾಮಾಜಿಕ ವಾಸ್ತವವಾದಿ ವಿಷಯಗಳನ್ನು ನಿಭಾಯಿಸುವಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ.[೯೪]

ದಂಗಲ್ ಚಿತ್ರವು ರಾಜಕೀಯ ಪ್ರಭಾವವನ್ನು ಹೊಂದಿದೆ. ಮಹಿಳಾ ಸಬಲೀಕರಣದ ಸಂದೇಶವನ್ನು ಪ್ರಸಾರಮಾಡುವ ಪ್ರಯತ್ನವಾಗಿ ಇದನ್ನು ಭಾರತದ ಸಂಸತ್ತಿನಲ್ಲಿ ಪ್ರದರ್ಶಿಸಲಾಯಿತು.[೯೫] ಇದು ಭಾರತ ಚೀನಾ ಸಂಬಂಧಗಳ ಮೇಲೂ ಪರಿಣಾಮ ಬೀರಿದೆ.[೯೬]

ವಿವಾದಗಳು

ಬದಲಾಯಿಸಿ

ರಾಜಕೀಯ ವಿವಾದಗಳು

ಬದಲಾಯಿಸಿ

ಭಾರತದಲ್ಲಿ ದಂಗಲ್ ಚಿತ್ರದ ಬಿಡುಗಡೆಯ ನಂತರ ರಾಜಕೀಯ ವಿವಾದವಾಯಿತು. ೨೦೧೫ರಲ್ಲಿ, ತಮಗೆ ಹಾಗೂ ತಮ್ಮ ಹೆಂಡತಿಗೆ ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಬಗ್ಗೆ ಇರುವ ತಮ್ಮ ಅನಿಸಿಕೆಗಳನ್ನು ಆಮಿರ್ ಖಾನ್ ವ್ಯಕ್ತಪಡಿಸಿದರು.[೯೭][೯೮] ಈ ಹೇಳಿಕೆಗಳಿಗೆ ಅವರು ತೀವ್ರ ಪ್ರತಿಕೂಲ ಪ್ರತಿಕ್ರಿಯೆ ಎದುರಿಸಬೇಕಾಯಿತು.[೯೮][೯೯] ಇದರ ಭಾಗವಾಗಿ ಅವರ ಚಿತ್ರ ದಂಗಲ್‍ನ ವಿರುದ್ಧ ಪ್ರತಿಭಟನೆಗಳು ಮತ್ತು ಬಹಿಷ್ಕಾರಕ್ಕೆ ಕರೆನೀಡಲಾಯಿತು.

ಇದರ ಬಿಡುಗಡೆಯ ಬಗ್ಗೆ ಪಾಕಿಸ್ತಾನದಲ್ಲೂ ವಿವಾದವಾಯಿತು. ಪಾಕಿಸ್ತಾನಿ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರು ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ ಹಾಕಿದ್ದರು. ಆದರೆ ದಂಗಲ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಲಾಯಿತು. ಕೆಲವು ದೃಶ್ಯಗಳನ್ನು ತೆಗೆಯಬೇಕೆಂದು ಅಲ್ಲಿಯ ಸೆನ್ಸಾರ್ ಮಂಡಳಿ ಹೇಳಿತು. ಖಾನ್ ನಿರಾಕರಿಸಿದ್ದರಿಂದ ಚಿತ್ರವು ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿಲ್ಲ.

ಪ್ರಶಸ್ತಿಯ ವಿವಾದಗಳು

ಬದಲಾಯಿಸಿ

೬೪ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಗ್ಗೆ ವಿವಾದವಾಯಿತು. ಸಮಿತಿಯು ಪ್ರಶಸ್ತಿಯನ್ನು ಆಮಿರ್ ಖಾನ್‍ರ ಬದಲು ಅಕ್ಷಯ್ ಕುಮಾರ್‌ಗೆ ನೀಡಿತು.

ಅದೇ ರೀತಿ ಐಫ಼ಾ ಪ್ರಶಸ್ತಿ ಸಮಾರಂಭದಲ್ಲೂ ದಂಗಲ್ ಚಿತ್ರ ಪ್ರಶಸ್ತಿ ಗೆಲ್ಲಲಿಲ್ಲ, ಕುಮಾರ್ ಕೂಡ ಪ್ರಶಸ್ತಿ ಗೆಲ್ಲಲಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. Setu (Director of Photography) (19 October 2016). Dangal official trailer [On screen credits]. UTV Motion Pictures. Event occurs at 3:11.
  2. "Dangal (2016)". British Board of Film Classification. bbfc.co.uk. Archived from the original on 3 ಜುಲೈ 2017. Retrieved 21 May 2017.
  3. ೩.೦ ೩.೧ "Dangal: 5 reasons Aamir's film is ruling the box office despite demonetisation woes". India Today. 26 December 2016. Retrieved 21 May 2017.
  4. ಉಲ್ಲೇಖ ದೋಷ: Invalid <ref> tag; no text was provided for refs named boi-worldwide
  5. Narayanan, Nirmal (15 February 2018). "Rajinikanth's 2.0 set to rock 10000 screens in Japan, Singapore, Malaysia, UAE, US and more". International Business Times.
  6. "Aamir Khan's Secret Superstar earns seven times more money in China in 1 week than what it did in India". Hindustan Times. 26 January 2018.
  7. "'Baahubali 2' to open on more than 7,000 screens in China". The Statesman. 3 May 2018. Archived from the original on 29 ಜೂನ್ 2018. Retrieved 16 ಜುಲೈ 2020.
  8. "All time box office revenue of the highest grossing Bollywood movies worldwide". Statista. December 2017.
  9. "Baahubali 2 vs Dangal box office collection: Aamir's film trailing Rajamouli's by a few crores". India Today. 24 May 2017. Retrieved 24 May 2017.
  10. ೧೦.೦ ೧೦.೧ Bhadani, Priyanka (25 December 2016). "Dangal wasn't an easy screenplay". The Week. Retrieved 22 May 2017.
  11. "62nd Filmfare Awards 2017: Winners' list". The Times of India. 15 January 2017. Retrieved 15 January 2017.
  12. Cain, Rob (19 June 2017). "How An Indian Drama Became The World's Highest-Grossing Sports Movie Of 2017". Forbes.
  13. "Dangal box office: Aamir Khan film is fourth biggest worldwide hit for Disney, to enter Rs 2000-cr club this weekend". indianexpress.com. 27 June 2017.
  14. ಉಲ್ಲೇಖ ದೋಷ: Invalid <ref> tag; no text was provided for refs named tencent
  15. ಉಲ್ಲೇಖ ದೋಷ: Invalid <ref> tag; no text was provided for refs named iqiyi
  16. ಉಲ್ಲೇಖ ದೋಷ: Invalid <ref> tag; no text was provided for refs named youku
  17. "Dangal's BEST actor? VOTE!". Rediff.com. 30 December 2016. Retrieved 24 May 2017.
  18. "Here's what was the inspiration behind Aamir Khan's 'Dangal'". DNA India. 23 October 2016. Retrieved 2 November 2016.
  19. "Making of 'Dangal' inspired by a small newspaper article". ದಿ ಟೈಮ್ಸ್ ಆಫ್‌ ಇಂಡಿಯಾ. 23 October 2016. Retrieved 2 November 2016.
  20. "The Real Phogat Sisters & Aamir's 'Dangal' Connection Began On The Sets Of Satyamev Jayate!". India Times. 28 December 2016.
  21. "When Geeta and Babita Phogat Appeared on Aamir Khan's TV Show". CNN-News18. 27 December 2016.
  22. "Aamir Khan wanted to do 'Dangal' when 60". ಟೈಮ್ಸ್ ಆಫ್ ಇಂಡಿಯ. 4 July 2016. Archived from the original on 2 February 2017. Retrieved 14 November 2016.
  23. Baddhan, Raj (2014-12-12). "Aamir Khan to play wrestler in 'Dangal'". BizAsia | Media, Entertainment, Showbiz, Events and Music (in ಬ್ರಿಟಿಷ್ ಇಂಗ್ಲಿಷ್). Retrieved 2019-06-14.
  24. "Aamir Khan to lose weight for 'Dangal'". The Times of India. Retrieved 7 November 2015.
  25. "Four new girls in Aamir Khan's life". The Times of India. Retrieved 7 November 2015.
  26. "How Aamir Khan followed the calorie-count method to lose around 25 kg for Dangal". The Indian Express. Divya Goyal. 29 November 2016.
  27. "Video: Aamir Khan's strict diet and workout plan for his fat to fit journey for Dangal". The Indian Express. 29 November 2016.
  28. Rakshit, Nayandeep (11 March 2015). "Revealed: Who are playing Aamir Khan's daughters in 'Dangal'?". Daily News and Analysis. Archived from the original on 31 May 2017. Retrieved 31 May 2017.
  29. "Meet Aamir Khan's wrestler daughters". Mumbai Mirror. Retrieved 7 November 2015.
  30. "Aamir Khan's daughters in 'Dangal' finally revealed!". Deccan Chronicle. Retrieved 7 November 2015.
  31. "Aamir Khan has found his onscreen daughters for 'Dangal'?". The Indian Express. 22 April 2015. Retrieved 7 November 2015.
  32. Tribune News Service. "Aamir picks Phogat sisters' story for his next". The Tribune Chandigarh, India. Archived from the original on 11 ಅಕ್ಟೋಬರ್ 2015. Retrieved 7 November 2015.
  33. "Meet the medal winning Phogat sisters". Daily News and Analysis. 10 August 2014. Retrieved 7 November 2015.
  34. "Wrestling coach Mahavir Phogat overlooked for Dronacharya Award". Mid Day. 12 August 2014. Retrieved 7 November 2015.
  35. Bollywood Hungama. "Kids Zarina Wasim and Suhani Bhatnagar roped in for Aamir Khan starrer Dangal". Bollywood Hungama. Retrieved 7 November 2015.
  36. Bollywood Hungama. "Ayushmann Khurrana's brother to make debut in Dangal". Bollywood Hungama. Retrieved 7 November 2015.
  37. "Makers of Aamir Khan's 'Dangal' found their villain?". Mid Day. 10 July 2015. Retrieved 7 November 2015.
  38. "Makers of Aamir Khans Dangal Found Their Villain?". NDTV. Retrieved 7 November 2015.
  39. "Aamir Khan's nephew Pablo roped in as AD for 'Dangal'". Deccan Chronicle. Retrieved 7 November 2015.
  40. "Aamir Khan to launch his nephew Pablo with 'Dangal'". India TV News. Retrieved 7 November 2015.
  41. Bollywood Hungama. "Check out: Aamir Khan and Sakshi Tanwar pose with Phogat girls". Bollywood Hungama. Retrieved 7 November 2015.
  42. "Aamir Khan's Wife in Dangal Has Finally Been Cast. It's Not Mallika Sherawat". NDTV. Retrieved 7 November 2015.
  43. "Sakshi Tanwar to play Aamir Khan's wife in Dangal?". Hindustan Times. Archived from the original on 25 ಡಿಸೆಂಬರ್ 2018. Retrieved 7 November 2015.
  44. "Little star from Amritsar floors Aamir Khan's 'Dangal'". Hindustan Times. Retrieved 7 November 2015.
  45. Tribune News Service. "Child actor from city to play Aamir's daughter in 'Dangal'". The Tribune Chandigarh, India. Archived from the original on 18 ನವೆಂಬರ್ 2015. Retrieved 7 November 2015.
  46. "Vivan Bhatena playing negative role in Aamir Khan's 'Dangal'". The Indian Express. 31 October 2015. Retrieved 7 November 2015.
  47. "Aamir Khan to start shooting for 'Dangal' on September 1". The Times of India. Retrieved 7 November 2015.
  48. "Aamir Khan's 'Dangal' update: Two more actresses finalised to play the younger daughters". The Indian Express. 17 June 2015. Retrieved 7 November 2015.
  49. "For Aamir Khan's film 'Dangal', Punjab villages turn 'Haryanvi'". The Indian Express. 1 September 2015. Retrieved 7 November 2015.
  50. "Stage is set: Villages near Ludhiana converted for Aamir Khan's Dangal". Hindustan Times. Archived from the original on 14 ಸೆಪ್ಟೆಂಬರ್ 2015. Retrieved 7 November 2015.
  51. Bollywood Hungama. "Aamir Khan shoots Dangal in one of oldest schools of Punjab". Bollywood Hungama. Retrieved 7 November 2015.
  52. "'Dangal' shuru: Aamir Khan shares first look poster of the movie". The Indian Express. Retrieved 20 October 2015.
  53. "I have four months to get to 9% body fat: Aamir Khan". Daily News and Analysis. 5 August 2015. Retrieved 7 November 2015.
  54. "Aamir Khan shoots in Delhi for 'Dangal'". ದಿ ಟೈಮ್ಸ್ ಆಫ್‌ ಇಂಡಿಯಾ. 20 January 2016. Retrieved 7 August 2016.
  55. "Aamir Khan and Pritam to collaborate for 'Dangal'". Deccan Chronicle. 30 June 2015. Retrieved 5 March 2016.
  56. "Daler Mehndi to sing for Aamir Khan's 'Dangal'". RadioandMusic.com. 14 October 2015. Retrieved 5 March 2016.
  57. "Raftaar Lends His Voice for Dangal's New Song Dhaakad". News18. Retrieved 2019-10-25.
  58. "'Dhaakad' song from Aamir Khan's Dangal achieves 12 million views in 3 days - News Nation". News Nation (in ಇಂಗ್ಲಿಷ್). Retrieved 2019-10-25.
  59. "Dangal music review: Pritam works wonders with a rustic soundtrack for Aamir Khan's wrestling biopic". Bollywood Life (in ಇಂಗ್ಲಿಷ್). 2016-12-19. Retrieved 2019-10-25.
  60. "Dangal: Aamir Khan's film has an impressive opening in US, Canada". Retrieved 27 December 2016.
  61. "Mind your language".
  62. Sinha, Ashish. "$110 Million Prize Fight".
  63. "Aamir Khan's Dangal gets 'U' certificate from CBFC". Firstpost. 8 December 2016. Retrieved 22 December 2016.
  64. "Dangal Tax Free in Uttar Pradesh". Indicine. 15 December 2016. Retrieved 16 December 2016.
  65. "Dangal made tax-free in Haryana: Aamir Khan's film gets a thumbs up from India". intoday.in. India Today. Retrieved 27 December 2016.
  66. "Dangal gets tax-free status in CG". timesofindia.indiatimes.com/. The Times of India. 28 December 2016.
  67. "Aamir Khan starrer Dangal made tax-free in Haryana". indianexpress.com/. Indian Express. Retrieved 27 December 2016.
  68. "MP's BJP govt gets inspired by Aamir Khan's Dangal, declares it tax-free". Retrieved 22 January 2017.
  69. "Dangal". Netflix. Archived from the original on 2020-07-22. Retrieved 2020-07-21.
  70. "Dangal China box office collection: movie entered Rs 800-crore club". Blasting News. 25 May 2017.
  71. "Aamir Khan's Dangal receives standing ovation in China". The Indian Express. 21 April 2017. Retrieved 29 April 2017.
  72. "Dangal: India's wrestling blockbuster delights China". BBC. 18 May 2017. Retrieved 18 May 2017.
  73. Jingjing, Li. "Chinese fans crazy about 'Dangal' actor Aamir Khan". Global Times. Archived from the original on 14 May 2017. Retrieved 14 May 2017.
  74. "Aamir Khan's Dangal wins Hong Kong bout, continues box office domination". Hindustan Times. 28 August 2017.
  75. "映画『ダンガル きっと、つよくなる』公式サイト". Gaga Corporation. Retrieved 21 March 2018.
  76. "インド映画史上最大のヒット!アーミル・カーン主演『DANGAL』4月日本公開 - シネマトゥデイ". Cinema Today (in ಜಾಪನೀಸ್). 6 December 2017.
  77. "당갈 (2016)". Daum (in ಕೊರಿಯನ್). Retrieved 9 April 2018.
  78. ಉಲ್ಲೇಖ ದೋಷ: Invalid <ref> tag; no text was provided for refs named 5thForbes
  79. ಉಲ್ಲೇಖ ದೋಷ: Invalid <ref> tag; no text was provided for refs named hungama
  80. "Top India Footfalls All Time". Box Office India. Retrieved 2 December 2017.
  81. "Weekend New Zealand Chart for January 20th, 2017 (USD)". the-numbers.com. Archived from the original on 21 May 2017. Retrieved 21 May 2017.
  82. "Dangal box office collection day 30: Aamir Khan film earns Rs 378.24 cr". The Indian Express. 22 January 2017. Retrieved 21 May 2017.
  83. "Dangal's China box office collection at Rs 1,200 crore; Aamir Khan film to enter 2000-crore club". Firstpost. 21 June 2017.
  84. 内地总票房排名 ("All-Time Domestic Box Office Rankings"). 中国票房 (China Box Office) (in ಚೈನೀಸ್). Entgroup.
  85. "Turkey Box Office, October 13–15, 2017". Box Office Mojo. Retrieved 8 February 2018.
  86. "Dangal Box Office". Bollywood Hungama. Retrieved 19 January 2018.
  87. "Dangal vs Baahubali 2: The Conclusion in Japan — Aamir Khan's film adds Rs 3 cr to unrivaled global total". Firstpost. 25 April 2018.
  88. "Historical Exchange Rates Tool & Forex History Data (1069 KRW per USD)". OFX. 30 April 2018. Archived from the original on 19 June 2018. Retrieved 16 December 2017.
  89. "Being tolerant? Twitterati slams Aamir Khan, wants to boycott Dangal". Hindustan Times. 26 January 2016. Retrieved 23 May 2017.
  90. "Aamir Khan facing Dangal trouble? #BoycottDangal trends on Twitter". The Financial Express. 23 December 2016. Retrieved 23 May 2017.
  91. Shah, Khyati (13 May 2017). "Bollywood films bridge cultural gaps". Global Times. Archived from the original on 23 May 2017.
  92. Mangaldas, Leeza (19 May 2017). "Why Aamir Khan's Bollywood Blockbuster 'Dangal' Is Box-Office Gold In China". Forbes. Retrieved 23 May 2017.
  93. "Aamir Khan's 'Thugs of Hindostan' loses a battle, but Indian film as a whole still winning in China". Global Times. 1 January 2019. Archived from the original on 1 ಅಕ್ಟೋಬರ್ 2020. Retrieved 23 ಜುಲೈ 2020.
  94. Cain, Rob. "5 Key Reasons For 'Dangal's' Massive Success In China". Forbes (in ಇಂಗ್ಲಿಷ್). Retrieved 2019-06-14.
  95. "Aamir Khan's Dangal to be screened in Parliament for MPs on Thursday". Hindustan Times. 22 March 2017.
  96. "Aamir Khan creates history again. After Dangal, Secret Superstar crosses the Rs 500 crore mark in China". Times Now. 2 February 2018.
  97. Sugden, Joanna. "The Intolerant Response to Aamir Khan's Intolerance Comments". WSJ Blogs. Retrieved 2015-11-25.
  98. ೯೮.೦ ೯೮.೧ Iyengar, Rishi. "Bollywood Star Aamir Khan Faces Religious Backlash". time.com. Retrieved 2015-11-25.
  99. "Aamir Khan took on religious intolerance, and Snapdeal got caught in the crossfire". Quartz (in ಅಮೆರಿಕನ್ ಇಂಗ್ಲಿಷ್). Retrieved 2015-11-25.


ಹೊರಗಿನ ಕೊಂಡಿಗಳು

ಬದಲಾಯಿಸಿ