ಸನ್ ಯಾತ್ ಸೆನ್

(ಡಾ.ಸನ್ ಯಾತ್ ಸೆನ್ ಇಂದ ಪುನರ್ನಿರ್ದೇಶಿತ)

ಡಾ. ಸನ್ ಯಾತ್ ಸೆನ್ [೧೮೬೬-೧೯೨೫]

ಬದಲಾಯಿಸಿ
ಚಿತ್ರ:République de Chine (Taiwan),Yuan à l'effigie du président Dr.Sun Yat-Sen.jpg
ಡಾ.ಸನ್ ಯಾತ್ ಸೆನ್

ಡಾ.ಸನ್ ಯಾತ್ ಸೆನ್ ಚೀನಾದ ವ್ಯಕ್ತಿಗಳಲೊಬ್ಬರು. ಇವರನ್ನು ಆಧುನಿಕ ಚೀನಾದ ನಿಮಾ೯ತೃವೆಂದು ಪರಿಗಣಿಸಿದ್ದಾರೆ. ತನ್ನ ಇಡೀ ಜೀವನವನ್ನು ದೇಶದಲ್ಲಿ ಕ್ರಾಂತೀಯ ಸಲುವಾಗಿ ಸವೆಸಿದರು. ಈ ಒಂದು ದೆಶೆಯಲ್ಲಿ ಹಲವು ಬಾರಿ ದೇಶಭ್ರಷ್ಟನಾಗಿ ವಿದೇಶಗಳಲ್ಲಿ ಅಲೆದು ದೇಶದ ಪುನರ್ ನಿಮಾ೯ಣಕ್ಕಾಗಿ ಅನ್ಯರ ಬೆಂಬಲ ಮತ್ತು ಸಹಾನುಭೂತಿ ಗಳಿಸಿದರು. ದೇಶದ ಏಕತೆ ಅವರ ಉಸಿರಾಗಿತ್ತು. ದೇಶದ ನಿಜವಾದ ಒಡೆಯರು ಜನತೆ ಎಂಬುದನ್ನು ಸಾದರಪಡಿಸುವುದು ಅವರ ಏಕೈಕ ಧ್ಯೇಯವಾಗಿತ್ತು. ಚೀನೀಯರಲ್ಲಿ ಮೂಡಿಸಿದ ಮಹಾನ್ ತಂತ್ರ ಎಂದರೆ ರಾಷ್ಟೀಯತೆ. ಮತ್ತು ಇವರ ಧೋರಣೆ ಎಂದರೆ ಪ್ರತಿಯೊಬ್ಬ ಚೀನಿಯನ ಜೀವನವು ಉತ್ತಮ ಮತ್ತು ಸ್ವಾತಂತ್ರ್ಯವಾಗಿರಬೇಕು. ಇದರ ಗಳಿಕೆಗಾಗಿ ಆರಂಭದ ದಿನಗಳಲ್ಲಿ ಡಾ.ಸನ್ ಯಾತ್ ಸೆನ್ ರವರಿಗಿಂತ ಶ್ರಮಿಸಿದವರು ಬೇರೊಬ್ಬರಿಲ್ಲ. ಇವರ ಗುಣಗಳಲ್ಲಿ ಪ್ರಮುಖವಾದುದೆಂದರೆ ಕಾಯ೯ತತ್ಪರತೆ ಮತ್ತು ಪ್ರಾಯೋಗಿಕತೆ ಇವರ ಇಚ್ಚೆ ದೇಶಕ್ಕೊಂದು ಸಂವಿಧಾನವನ್ನು ಒದಗಿಸಬೇಕೆಂಬುದಾಗಿತ್ತು.

ಬಾಲ್ಯ ಜೀವನ

ಬದಲಾಯಿಸಿ

ತೈಚಿಯೊಂಗ್ ಇವರ ಮೊದಲ ಹೆಸರು. ಇವರು ಕ್ಯಾಂತನ್‌ಗೆ ನಲವತ್ತು ಮೈಲಿ ದೂರದ ಸಿಯಾಂಗ್‌ಷಾನ್ ಎಂಬ ಹಳ್ಳಿಯೊಂದರಲ್ಲಿ ೧೮೬೬ ರ ನವೆಂಬರ್ ೧೨ ರಂದು ಜನ್ಮ ತಾಳಿದರು. ತಂದೆ ಸನ್-ತತ್-ಸುಂಗ್ ಇವರು ಒಬ್ಬ ಸಾಧಾರಣ ರೈತನಾಗಿದ್ದರು. ಉತ್ತಮ ವಾಸದ ಮನೆ ಕೂಡ ಇರಲಿಲ್ಲ. ಸನ್ ಯಾತ್ ಸೆನ್ ಗುಡಿಸಲಲ್ಲಿ ಬೆಳೆದು ಉತ್ತಮ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಆದರೂ ತನ್ನ ಸೋದರನೊಡನೆ ಹೋಗಿ ಹವಾಯ್ ದ್ವೀಪಗಳಲ್ಲಿ ನೆಲೆಸಿದರು. ಸೆನ್ ಕ್ರಿಶ್ಚಿಯನ್ ಶಾಲೆ ಸೇರಿ ಪಾಶ್ಚಾತ್ಯ ತಾಂತ್ರಿಕ ವಲಯಗಳಲ್ಲಿ ಅಪಾರ ಬುದ್ದಿಯನ್ನು ಗಳಿಸಿದ. ಇಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪರಿಚಯದ ಜೊತೆಗೆ ಕ್ರೈಸ್ತ ಧಮ೯ದ ಪ್ರಭಾವ ಕೂಡ ಇವರ ಮೇಲೆ ಬೀರಿತು.

thumbnail|left|ಬಾಲ್ಯದ ಡಾ.ಸನ್ ಯಾತ್ ಸ್ವದೇಶಕ್ಕೆ ಮರಳಿದ ಮೇಲೆ ದೇಶದ ಹಿತ ಚಿಂತನೆಯ ಕಾಯ೯ಗಳಲ್ಲಿ ತೊಡಗಿದ ಸನ್ ಯಾತ್ ಸೆನ್ ವಿದ್ಯಾಜ೯ನೆಯನ್ನು ನಿಲ೯ಕ್ಷಿಸಿದರು. ಲುಸಜು ಎಂಬುವಳೊಡನೆ ವಿವಾಹವಾಗಿ ಲೌಕಿಕ ಪಡೆದ ಇವರು ಮತ್ತೆ ಶಿಕ್ಷಣದ ಕಡೆ ಗಮನ ಹರಿಸಿದರು. ಈ ವೇಳೆಗೆ ಬ್ರಿಟಿಷ್ ಪಾದ್ರಿಗಳು ಹಾಂಕಾಂಗ್‌ನಲ್ಲಿ ವೈದ್ಯಕೀಯ ಕಾಲೇಜೊಂದನ್ನು ನಿಮಿ೯ಸಿದರು. ೧೯೮೨ ರಲ್ಲಿ ಈ ಕಾಲೇಜಿಗೆ ಪ್ರವೇಶ ಪಡೆದ ಸನ್ ಯಾತ್ ಸೆನ್ ಸ್ವಲ್ಪ ಕಾಲ ವೈದ್ಯ ವೃತ್ತಿಯನ್ನು ನಡೆಸಿದಾದರು ಇವರಿಗೆ ಆ ವೃತ್ತಿ ಹಿಡಿಸಲಿಲ್ಲ. ಹಾಗಾಗಿ ರಾಜಕೀಯದ ಕಡೆ ಗಮನ ಹರಿಸತೊಡಗಿದರು.

ಕ್ರಾಂತಿಕಾರಿಯಾಗಿ ಡಾ.ಸನ್ ಯಾತ್ ಸೆನ್

ಬದಲಾಯಿಸಿ
 
ಹಾಂಗ್‌ಕಾಂಗ್‌ನಲ್ಲಿರುವ ಡಾ.ಸನ್ ಯಾತ್ ಸೆನ್‌ರವರ ಪ್ರತಿಮೆ

ಪಾಶ್ಚಾತ್ಯ ದೇಶಗಳ ಪ್ರಗತಿ ಹಾಗೂ ಅವರ ಸಂಸ್ಕ್ರತಿ ಡಾ.ಸನ್ ಮೇಲೆ ಅಪಾರ ಪ್ರಭಾವ ಬೀರಿದವು. ಅವುಗಳ ಮುಂದೆ ಕಂದಾಚಾರದ ನರಸತ್ತ ಚೀನಾ ಬಹು ನಿಕೃಷ್ಟವಾಗಿ ಕಂಡಿತು. ತದನಂತರ ಚೀನಾದಲ್ಲಿ ಸುಧಾರಣೆಯಾಗಬೇಕೆಂಬ ಅದರ ಸಾಧನೆಗೆ ಕ್ರಾಂತಿಕಾರಿ ಭಾವನೆಗಳನ್ನು ತಳೆಯತೊಡಗಿದರು. ಅಂದು ಅಧಿಕಾರದಲ್ಲಿದ್ದ ಮಂಚು ಅರಸರು ಅಸಮಥ೯ನಾಗಿದ್ದು ಚೀನವನ್ನು ಆಧುನಿಕತೆಯತ್ತ ಕೊಂಡೊಯ್ಯುವವನಾಗಿರಲಿಲ್ಲ. ಸಮಾಜ ಕನ್ ಫ್ಯೂಷಿಯಸ್ ತತ್ವದ ಗುಂಗಿನಲ್ಲೆ ಮುಳುಗಿತು. ಮತ್ತು ಅದೇ ಅಲ್ಲದೆ ಆ ಒಂದು ವೇಳೆಗೆ ಎಲ್ಲಾ ವಲಯಗಳಲ್ಲಿ ಸಮಗ್ರ ಬದಲಾವಣೆ ಆಗಬೇಕಿದ್ದಿತು. ಅದು ಕ್ರಾಂತಿಯಿಂದ ಮಾತ್ರ ಎಂಬುದನ್ನು ತಿಳಿದ ಸೆನ್ ಆ ನಿಟ್ಟಿ ನಲ್ಲಿ ಕಾಯ೯ಕ್ರಮಗಳನ್ನು ರೂಪಿಸಿಕ್ಕೊಳಲು ಆರಂಭಿಸಿದರು. ಸಮಾಜ ಸುಧಾರಣ ಕಾಯ೯ಕ್ರಮಗಳಲ್ಲಿ ತೊಡಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಅದರಲ್ಲಿ ಏಕಮನೋಭಾವ ಇರುವವರನ್ನು ಸೇರಿಸಿ ಶಿಕ್ಷಣದಲ್ಲಿ ಮಾಪಾ೯ಡು ತರುವ ಪ್ರಯತ್ನ ಮಾಡಿದರು. ಹವಾಯ್‌ನಲ್ಲಿ ಚೀನಾದ ಕ್ರಾಂತಿಗಾಗಿ ಸ್ಥಾಪಿಸಿದ ರಿವೈಟ್ ಚೀನಾ ಸೊಸೈಟಿ ಯ ವತಿಯಿಂದ ಹಣ ಸಂಗ್ರಹಿಸಿದರು. ಹಾಂಕಾಂಗ್‌ನಲ್ಲಿ ಪ್ರಧಾನ ಕಛೇರಿಯನ್ನು ೧೮೯೪ ರಲ್ಲಿ ಸ್ಥಾಪಿಸಿದರು. ಸುಧಾರಣೆ ತರುವಂತೆ ಗವನ೯ರ್ ಜನರಲ್ ಲಿಹಾಂಗ್-ಚಾಂಗ್‌ನಿಗೆ ಮನವಿಯನ್ನು ಅಪಿ೯ಸಿದಾಗ ಅದು ತಿರಸ್ಕೃತವಾಯಿತು.

ಕೊನೆಗೆ ಕ್ರಾಂತಿಯೊಂದರಿಂದ ಮಾತ್ರ ಚೀನಾದ ಬದಲಾವಣೆ ಸಾದ್ಯ ಎಂದು ತಿಮಾ೯ನಿಸಿದ ಸೆನ್ ರಹಸ್ಯವಾಗಿ ಶಸ್ತ್ರಗಳ ಸಂಗ್ರಹಣೆಯಲ್ಲಿ ತೊಡಗಿದ. ಅದರ ಸಲುವಾಗಿ ಲುಕ್‌ಹೊತುಂಗ್ ಎಂಬುವನು ತನ್ನೆಲ್ಲ ಸಂಪತ್ತನ್ನು ನೀಡಿದರು. ನಂತರ ಮಂಚುಗಳ ವಿರುದ್ದ ೧೮೯೫ ರಲ್ಲಿ ದಂಗೆಯನ್ನೇ ವ್ಯವಸ್ಥೆ ಮಾಡಲಾಯಿತು. ಆದರೆ ದಂಗೆ ಯಶಸ್ವಿಯಾಗದೆ ಹೋಯಿತು. ಹಲವು ದಂಗೆ ಕೋರರನ್ನು ಅದರಲ್ಲಿ ಲುಕ್ ಹೊತುಂಗ್ ಸೇರಿದಂತೆ ಹಲವರನ್ನು ಬಂಧಿಸಿ ಮರಣ ದಂಡನೆಗೆ ಈಡು ಮಾಡಲಾಯಿತು. ಹೇಗೋ ಇದರಿಂದ ಪಾರಾದ ಸೆನ್ ದೇಶ ಬಿಟ್ಟು ಓಡಿಹೋಗಬೇಕಾಯಿತು. ಅನಂತರ ಸುಮಾರು ೧೬ ವಷ೯ಗಳ ಕಾಲ ವಿದೇಶಗಳಲ್ಲಿ ಇದ್ದುಕ್ಕೊಂಡು ಕ್ರಾಂತಿಗಾಗಿ ಅವಿರತ ಶ್ರಮಿಸಿದರು.

ಗಡಿಪಾರಾದ ಡಾ.ಸನ್ ಯಾತ್ ಸೆನ್

ಬದಲಾಯಿಸಿ

ಚೀನಾದಿಂದ ಹೊರಬಿದ್ದ ಸೆನ್ ಜಪಾನ್ ತಲುಪಿದ. ಚೀನಾದ ಕ್ರಾಂತಿಗಾಗಿ ಆ ವೇಳೆಯಲ್ಲಿ ನಿಧಿಯನ್ನು ಸಂಗ್ರಹಿಸಿದರು. ಆನಂತರ ಸಾನ್‌ಫ್ರಾನ್ಸಿಸ್ಕೊ, ಲಂಡನ್, ಮೊದಲಾದ ಕಡೆಗಳಲ್ಲಿ ವ್ಯಾಪಕವಾಗಿ ಸಂಚರಿಸಿದರು. ವಿದೇಶಗಳಲ್ಲಿದ್ದ ಚೀನೀಯರಲ್ಲಿ ಮಂಚು ಅಸಮಥ೯ತೆಯನ್ನು ಬಣ್ಣಿಸಿ ಕ್ರಾಂತಿಗಾಗಿ ಅವರ ಸಹಾನುಭೂತಿ ಮತ್ತು ಬೆಂಬಲ ಪಡೆದರು. ಸೆನ್ ಚೀನಾಕ್ಕೆ ಹಿಂತಿರುಗಬೇಕಾದರೆ ದಸ್ತಗಿರಿಯು ಕೂಡ ಮಾಡಲಾಯಿತು ಅದು ಸೆನ್ ಲಂಡನ್‌ನಲ್ಲಿದ್ದಾಗ. ಆಗ ಸ್ವದೇಶಕ್ಕೆ ಮರಳಿದರೆ ಸಾವು ಖಚಿತ ಎಂದು ನಿಧ೯ರಿಸಿದರು. ಕೊನೆಗೆ ತನ್ನ ಗುರುಗಳೊಬ್ಬರ ಮೂಲಕ ಬ್ರಿಟಿಷ್ ಪ್ರಧಾನಿ ಲಾಡ೯ ಸಾಲಿಬ್ ಬರಿ ಸಂಪಕ೯ ಪಡೆದು ಬಹು ಪ್ರಯಾಸದಿಂದ ಬಿಡುಗಡೆ ಹೊಂದಬೇಕಾಯಿತು ಮತ್ತು ಸೆನ್ ಹೆಸರನ್ನು ಪ್ರಪಂಚದಾದ್ಯಂತ ಪ್ರಚಾರಪಡಿಸಿದರು ಏಕೆಂದರೆ ಲಂಡನ್ನಿನಲ್ಲದ ಈ ದಸ್ತಗಿರಿಯಿಂದಾಗಿ, ಈ ಮೂಲಕ ಅವನ ಜನಪ್ರಿಯತೆ ಹೆಚ್ಚಿತು. ಯುರೋಪಿನಾದ್ಯಂತ ತನ್ನ ಕಾಯ೯ ಸಾಧನೆಯಲ್ಲಿ ಅಲೆದಾಡಿದ ಸೆನ್ ಕೊನೆಗೆ ಸಿಂಗಪುರ ತಲುಪಿದರು. ಇಲ್ಲಿಂದ ಕ್ರಾಂತಿಗಾಗಿ ಸೆನ್ ಕ್ರಾಂತಿಗಾಗಿ ತೀವ್ರ ಕಾಯ೯ಕ್ರಮ ಹಾಕಿಕೊಂದು ಮಾರುವೇಷದಲ್ಲಿ ಚೀನಾ ಪ್ರವೇಶ ಮಾಡಿದರು. ಮಾರುವೇಶದಲ್ಲಿ ಇದ್ದುಕೊಂಡು ಕ್ರಾಂತಿಕಾರಿ ಚಟುವಟಿಕೆ ನಡೆಸುವುದು ತುಂಬ ತ್ರಾಸ ದಾಯಕವೆಂಬುದನ್ನು ಮನಗಂಡು ಮತ್ತೆ ಅಮೇರಿಕಾಕ್ಕೆ ಮರಳಿದರು. ಇಲ್ಲಿ ಡಾ. ಸೆನ್‌ಗೆ ಹೊಮ್‌ಲಿಯ ಎಂಬುವನು ಮಿಲಿಟರಿ ಸಲಹೆಗಾರನಾಗಿ ಒದಗಿದನು.

 
ಡಾ.ಸನ್ ಯಾತ್ ಸೆನ್

ತುಂಗ್ ಮಿಂಗ್ ಹುಯಿ [ಏಕತಾ] ಪಕ್ಷ ಸ್ಥಾಪನೆ

ಬದಲಾಯಿಸಿ

ಡಾ.ಸನ್ ಯಾತ್ ಸೆನ್ ೧೮೯೯ ರಲ್ಲಿ ಹಾಂಕಾಂಗಿಗೆ ಬಂದ ಮುಂದಿನ ವಷ೯ದಲ್ಲೇ ಕ್ಯಾಂಟನ್‌ನಲ್ಲಿ ದಂಗೆ ನಡೆಯಿತು. ಅದು ಮಂಚುಗಳಿಂದ ಹತ್ತಿಕ್ಕಲಾಯಿತು. ಸೆನ್ ಹೋದಡೆಯಲ್ಲೆಲ್ಲ ದಂಗೆ ಮತ್ತು ಚಳುವಳಿಗೆ ಕರೆ ಕೊಡುತ್ತಿದ್ದರು. ಇದರ ಒಂದು ಪರಿಣಾಮವಾಗಿ ಸೆನ್‌ನನ್ನು ದಸ್ತಗಿರಿ ಮಾಡುವ ಯತ್ನವು ನಡೆಯಿತು. ಇವನ ರುಂಡ ತೆಗೆದುಕೊಟ್ಟವರಿಗೆ ೭೫೦೦ ಪೌಂಡುಗಳ ಬಹುಮಾನ ಪ್ರಕಟಿಸಲಾಗಿತ್ತು. ಸೆನ್ ಈ ಸುದ್ಧಿ ತಿಳಿದ ನಂತರವೆ ಸಿಂಗಪುರಕ್ಕೆ ಮರಳಿದರು. ಇಲ್ಲಿ ವಿದ್ಯಾಥಿ೯ ಸಮೂಹದ ಬಿಂಬಲ ಪಡೆದು ಕ್ರಾಂತಿಕಾರಿ ಪಕ್ಷ ತುಂಗ್ ಮಿಂಗ್ ಹುಯಿ [ಏಕತಾ ಸಂಸ್ಥೆ] ಸ್ಥಾಪಸಿದರು. ಶ್ರೀ ಸಾಮಾನ್ಯರು, ಕೂಲಿಕಾರರು, ಶೋಷಿತರು ಮೊದಲಾದ ಕೆಳವಗ೯ದವರೊಡನೆ ಮಿಳಿತಗೊಳ್ಳುವುದರ ಮೂಲಕ ಬಹು ಜನಪ್ರಿಯತೆಯನ್ನು ಗಳಿಸಿದರು. ಅಲ್ಪ ಕಾಲದಲ್ಲೇ ಇದರ ಸಂಖ್ಯೆ ೧೦,೦೦೦ ಮುಟ್ಟಿತು. "ಪೀಪಲ್ಸ್ ಪೇಪರ್" ಎಂಬ ಟೋಕಿಯೋದ ಪತ್ರಿಕೆ ಈತನ ಪಕ್ಷ ಹಾಗೂ ತತ್ವಗಳನ್ನು ಜನಪ್ರಿಯಗೊಳಿಸುವಲ್ಲಿ ನೆರವಾಯಿತು.

ಇವನ ಪಕ್ಷದ ಪ್ರಮುಖ ಧ್ಯೇಯಗಳು

ಬದಲಾಯಿಸಿ

೧. ವಿಶ್ವಶಾಂತಿಗಾಗಿ ದುಡಿಯಬೇಕು.

೨. ನೆರೆರಾಷ್ಟಗಳೊಡನೆ [ಜಪಾನ್] ಮೈತ್ರಿ ಸಂಬಂಧ ಬೆಳೆಸಿಕೊಳ್ಳುವುದು.

೩. ದೇಶದಲ್ಲಿ ಒಂದು ರಾಷ್ತ್ರೀಯ ಸಕಾ೯ರ ಇರತಕ್ಕದ್ದು.

೪. ಪ್ರಜೆಗಳಿಂದ ಚುನಾಯಿತನಾದ ಅಧ್ಯಕ್ಷನನ್ನೊಳಗೊಂಡ ಗಣರಾಜ್ಯ ಸ್ಥಾಪನೆಯಾಗಬೇಕು.

೫. ಭೂಮಿ ಎಲ್ಲ ಜನರಿಗೂ ಸಮಾನವಾಗಿ ಹಂಚಿಕೆಯಾಗಬೇಕು.

೬. ಎಷ್ಟು ಬೇಗ ಸಾಧ್ಯವೋ ಅಷ್ಟು ಜಾಗ್ರತೆ ಮಂಚು ಸಂತತಿ ಅಧಿಕಾರದಿಂದ ಇಳಿಯಬೇಕು.

ಈ ಎಲ್ಲ ಕಾಯ೯ಕ್ರಮಗಳು ಅವರ ಪಕ್ಷದ ಧ್ಯೇಯವಾಗಿದ್ದವು. ಪಕ್ಷದ ಸದಸ್ಯನಾಗಬಯಸುವವನು ಈ ಧ್ಯೇಯಗಳಿಗೆ ಬದ್ಧನಾಗಿರುವುದಾಗಿ ಒಮ್ಮೆ ಪ್ರಮಾಣ ಸ್ವೀಕರಿಸಿದನೆಂದರೆ ಅವನು ಮಂಚು ವಿರೋಧಿಯಾಗಿ ಮಾಪ೯ಡುತ್ತಿದ್ದರು.

ಡಾ.ಸನ್ ಯಾತ್ ಸೆನ್‌ನ ತತ್ವಗಳು

ಬದಲಾಯಿಸಿ

ಚೀನಾ ದೇಶವನ್ನು ಉತ್ತಮಗೊಳಿಸಲು ಸರಳ ಮಾಗ೯ವೆಂದರೆ ಪ್ರಜಾಪ್ರಭುತ್ವ ಮತ್ತು ಸಮತಾವಾದಗಳೆ ಸೂಕ್ತ ಎಂಬುದನ್ನು ತಿಳಿದಿದ್ದರು. ಇದರ ಹಿನ್ನಲೆಯಲ್ಲಿ ಡಾ. ಸೆನ್ ತನ್ನ ಹೆಸರಾಂತ "ಮೂರು ಜನತಾ ತತ್ವ" ಗಳನ್ನು ಪ್ರಚಾರಪಡಿಸಿದರು. ಅವುಗಳೆಂದರೆ,

೧. ರಾಷ್ಟ್ರೀಯತೆ

೨. ಪ್ರಜಾಪ್ರಭುತ್ವ

೩. ಪ್ರಜಾಕಲ್ಯಾಣ

ರಾಷ್ಟ್ರದ ಅಧಿಕಾರ ಸುಭದ್ರವಾಗಿ ಇರಲು ಮತ್ತು ಅಧಿಕಾರಿಗಳು ಜನತೆಯ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹಕ್ಕಿಗಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದರು. ಸಮಾಜದ ಒಟ್ಟು ಹಿತಕ್ಕಾಗಿ ಜನತೆಯ ಆಥಿ೯ಕ ಪ್ರಗತಿ ಪ್ರಮುಖವಾದುದು. ಆದುದರಿಂದ ತಾರತಮ್ಯವಿಲ್ಲದೆ ರಾಷ್ಟ್ರದ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಆಧ್ಯತೆ ನೀಡಿದ್ದನು.ಡಾ. ಸೆನ್ ವಿದೇಶದಲ್ಲಿದ್ದುಕೊಂಡು ಚೀನೀ ಕ್ರಾಂತಿಕಾರಿಗಳಿಗೆ ಮಾಗ೯ದಶ೯ನ ನೀಡಿದ ಮತ್ತು ಅದೇ ಅಲ್ಲದೆ ಬದಲಾವಣೆಯ ವಾತವರಣ ಸೃಷ್ಟಿಸಿದರು. ಕ್ರಾಂತಿಯನ್ನು ೧೯೧೧ ರಲ್ಲಿ ಯಶಸ್ವಿಗೊಳಿಸಿದ ಮತ್ತು ದಕ್ಷಿಣ ಚೀನಾದ ನಾನ್‌ಕಿಂಗ್‌ನಲ್ಲಿ ರಿಪಬ್ಲಿಕ್ ಸ್ಥಾಪಿಸಿದರು. ಸೇನಾ ನಾಯಕ ಯು ಆನ್ ಷಿಕಾಯ್‌ನ ನೇತೃತ್ವದಲ್ಲಿ ಮಂಚುಗಳು ಕ್ರಾಂತಿಯನ್ನು ಹತ್ತಿಕ್ಕುವ ಸಂಚು ಹೂಡಿದರು. ಅದು ಸಫಲವಾಗಲಿಲ್ಲ. ಸೆನ್ ರಿಪಬ್ಲಿಕ್‌ನ ಅಧ್ಯಕ್ಷರಾದರು. ಅದೇ ರೀತಿ ಸೆನ್ ದೇಶದ ಸಮಗ್ರತೆ ಮತ್ತು ಏಕತೆಯ ಅವಶ್ಯಕತೆಯನ್ನು ಅರಿತು ಯು ಆನ್ ಷಿಕಾಯ್‌ಗೆ ತನ್ನ ಅಧ್ಯಕ್ಷ ಪದವಿಯನ್ನು ಬಿಟ್ಟು ಕೊಟ್ಟು ಸೆನ್ ರೈಲು ಖಾತೆಯ ಉಸ್ತುವಾರಿಯಲ್ಲಿ ಮುಂದುವರೆದರು. ನಂತರ ಹಲವಾರು ಕ್ರಾಂತಿಕಾರಿ ಪಕ್ಷಗಳನ್ನು ಸೇರಿಸಿ ಕುಮಿಂಗ್‌ಟನ್ ಎಂಬ ಹೊಸ ರಾಷ್ಟ್ರೀಯ ಪಕ್ಷವನ್ನು ೧೯೧೨ ರಲ್ಲಿ ಸ್ಥಾಪಿಸಿದರು.

ಗಣರಾಜ್ಯದ ಉಳಿವಿಗಾಗಿ ಹೋರಾಟ

ಬದಲಾಯಿಸಿ

ಗಣರಾಜ್ಯದ ಏಳಿಗೆ ಮತ್ತು ಸುಭದ್ರತೆಗಾಗಿ ಅಧ್ಯಕ್ಷ ಯು ಆನ್ ಷಿಕಾಯ್ ಶ್ರಮಿಸಿದರು.

ಇವುಗಳನ್ನು ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ