ಆಧುನಿಕತೆ
ಆಧುನಿಕತೆ ಯು ಸಾಂಪ್ರದಾಯಿಕತೆಯ-ನಂತರದ, ಮಧ್ಯಕಾಲದ-ತರುವಾಯದ ಐತಿಹಾಸಿಕ ಅವಧಿಯನ್ನು ಸೂಚಿಸುತ್ತದೆ, ಇದು ಊಳಿಗಮಾನ್ಯ ಪದ್ಧತಿಯು (ಅಥವಾ ರೈತ ಜೀವನ) ಬಂಡವಾಳ ವ್ಯವಸ್ಥೆ, ಕೈಗಾರಿಕೀಕರಣ, ಲೌಕಿಕಗೊಳಿಸುವಿಕೆ, ತರ್ಕಬದ್ಧವಾಗಿಸುವಿಕೆ, ರಾಷ್ಟ್ರ-ರಾಜ್ಯ ಮತ್ತು ಅದರ ಅಂಗ-ಸಂಸ್ಥೆಗಳು ಹಾಗೂ ಕಣ್ಗಾವಲಿನ ಪ್ರಕಾರಗಳು (ಬಾರ್ಕರ್ 2005, 444) ಮೊದಲಾದವುಗಳಾಗಿ ಬದಲಾವಣೆ ಹೊಂದುದರಿಂದ ಗುರುತಿಸಲ್ಪಟ್ಟಿದೆ. ಕಾಲ್ಪನಿಕವಾಗಿ ಆಧುನಿಕತೆಯು ಆಧುನಿಕ ಯುಗ ಮತ್ತು ಆಧುನಿಕತಾ ಸಿದ್ಧಾಂತಕ್ಕೆ ಸಂಬಂಧಿಸಿದೆ, ಆದರೆ ಇದು ಒಂದು ಭಿನ್ನ ಕಲ್ಪನೆಯನ್ನು ರೂಪಿಸುತ್ತದೆ. 18ನೇ ಶತಮಾನದ ತತ್ತ್ವಶಾಸ್ತ್ರ ಅಥವಾ ದಾರ್ಶನಿಕ ಚಳವಳಿಯು ಪಾಶ್ಚಿಮಾತ್ಯ ತತ್ತ್ವಚಿಂತನೆಯಲ್ಲಿ ಒಂದು ನಿರ್ದಿಷ್ಟ ಚಳವಳಿಯನ್ನು ಉಂಟುಮಾಡುತ್ತದೆ. ಅದೇ ಆಧುನಿಕತೆಯು ಬಂಡವಾಳ ವ್ಯವಸ್ಥೆಯ ಏಳಿಗೆಯೊಂದಿಗೆ ಜತೆಗೂಡಿದ ಸಾಮಾಜಿಕ ಸಂಬಂಧಗಳನ್ನು ಮಾತ್ರ ಸೂಚಿಸುತ್ತದೆ. ಆಧುನಿಕತೆಯು ಬೌದ್ಧಿಕ ಸಂಸ್ಕೃತಿಯಲ್ಲಿನ ಒಳಗುಂಪುಗಳನ್ನೂ ಸೂಚಿಸಬಹುದು, ನಿರ್ದಿಷ್ಟವಾಗಿ ಲೌಕಿಕಗೊಳಿಸುವಿಕೆ ಮತ್ತು ಭಾರೀ ಕೈಗಾರಿಕೆಯನ್ನು ಅವಲಂಬಿಸಿರದ ಜೀವನದೊಂದಿಗೆ ಹೆಣೆದುಕೊಂಡ ಚಳವಳಿಗಳು, ಉದಾ, ಮಾರ್ಕ್ಸ್‌ವಾದ, ಅಸ್ತಿತ್ವ-ಸಿದ್ಧಾಂತ ಮತ್ತು ಸಾಮಾಜಿಕ ವಿಜ್ಞಾನದ ಕ್ರಮಬದ್ಧ ಸ್ಥಾಪನೆ. ಆಧುನಿಕತೆಯು 1436—1789ರ ಸಂಸ್ಕೃತಿ ಮತ್ತು ಬೌದ್ಧಿಕ ಚಳವಳಿಗಳೊಂದಿಗೆ ಸಂಬಂಧಿಸಿದೆ ಹಾಗೂ 1970ರ ಅಥವಾ ನಂತರದ ದಶಕಗಳವರೆಗೂ ವಿಸ್ತರಿಸಿದೆ (ಟೌಲ್ಮಿನ್ 1992, 3–5).
ಸಂಬಂಧಿತ ಪದಗಳು
ಬದಲಾಯಿಸಿ"ಆಧುನಿಕ" ಪದವು (ಲ್ಯಾಟಿನ್ ಮೋಡೊ ದಿಂದ ಮಾಡರ್ನಸ್ , ಅಂದರೆ "ಈಗಷ್ಟೆ") ಮೂಲತಃ ಪೇಗನ್ ಯುಗದಿಂದ ಕ್ರಿಶ್ಚಿಯನ್ ಯುಗವನ್ನು ಬೇರ್ಪಡಿಸುವ 5ನೇ ಶತಮಾನದ್ದಾಗಿದೆ. ಆದರೂ ಈ ಪದವು 17ನೇ ಶತಮಾನದಲ್ಲಿ ಸಾಮಾನ್ಯ ಬಳಕೆಗೆ ಬಂದಿತು. ಇದನ್ನು 1690ರ ಆರಂಭದ ಅಕಾಡೆಮಿ ಫ್ರಾಂಕೈಸೆಯ ನಡುವಿನ ಒಂದು ಸಾಹಿತ್ಯಕ ಮತ್ತು ಕಲಾತ್ಮಕ ವ್ಯಾಜ್ಯ ಕ್ವಾರೆಲ್ ಆಫ್ ದಿ ಏನ್ಷಿಯೆಂಟ್ಸ್ ಆಂಡ್ ಮಾಡರ್ನ್ಸ್ ನಿಂದ ಪಡೆಯಲಾಗಿದೆ — ಇದು ಈ ಕೆಳಗಿನದನ್ನು ಪರ್ಯಾಲೋಚಿಸುತ್ತದೆ: "ಆಧುನಿಕ ಸಂಸ್ಕೃತಿಯು ಪ್ರಾಚೀನ (ಗ್ರೀಕೊ–ರೋಮನ್) ಸಂಸ್ಕೃತಿಗಿಂತ ಶ್ರೇಷ್ಠವಾಗಿದೆಯೇ?". ಈ ಬಳಕೆಗಳಿಂದ, 'ಆಧುನಿಕತೆ'ಯು ಇತ್ತೀಚಿಗೆ ಆಗಿಹೋದುದರ ತೊರೆತವನ್ನು ಸೂಚಿಸಿತು, ಹೊಸ ಆರಂಭಕ್ಕೆ ಎಡೆಮಾಡಿಕೊಟ್ಟಿತು ಮತ್ತು ಐತಿಹಾಸಿಕ ಹುಟ್ಟಿಗೆ ಪುನರ್-ವ್ಯಾಖ್ಯಾನ ನೀಡಿತು. ಅಷ್ಟೇ ಅಲ್ಲದೆ, "ಆಧುನಿಕತೆ" ಮತ್ತು "ಆಧುನಿಕ"ದ ನಡುವಿನ ವ್ಯತ್ಯಾಸವು 19ನೇ ಶತಮಾನದವರೆಗೆ ಕಂಡುಬರಲಿಲ್ಲ (ಡೆಲಾಂಟಿ 2007).
ಆಧುನಿಕತೆಯ ಹಂತಗಳು
ಬದಲಾಯಿಸಿಮಾರ್ಷಲ್ ಬರ್ಮ್ಯಾನ್‌ರ ಪುಸ್ತಕಗಳಲ್ಲಿ ಒಂದರ ಪ್ರಕಾರ (ಬರ್ಮ್ಯಾನ್ 1983,[page needed]), ಆಧುನಿಕತೆಯನ್ನು ಮೂರು ಸಾಂಪ್ರದಾಯಿಕ ಹಂತಗಳಾಗಿ ವಿಂಗಡಿಸಬಹುದು (ಪೀಟರ್ ಓಸ್ಬೋರ್ನ್ ಅನುಕ್ರಮವಾಗಿ "ಆರಂಭಿಕ," "ಸಾಂಪ್ರದಾಯಿಕ" ಮತ್ತು "ಇತ್ತೀಚಿನ" ಎಂದು ರೂಪಿಸಿದರು (1992, 25):
- ಆರಂಭಿಕ ಆಧುನಿಕತೆ: 1500-1789 (ಅಥವಾ ಸಾಂಪ್ರದಾಯಿಕ ಚರಿತ್ರೆ-ಶಾಸ್ತ್ರದಲ್ಲಿ 1453-1789)
- ಸಾಂಪ್ರದಾಯಿಕ ಆಧುನಿಕತೆ: 1789-1900 (ಹಾಬ್ಸ್‌ಬಾವ್ಮ್‌ನ ಯೋಜನೆಯಲ್ಲಿ ದೀರ್ಘ 19ನೇ ಶತಮಾನಕ್ಕೆ ಹೊಂದಿಕೆಯಿದೆ (1789–1914))
- ಇತ್ತೀಚಿನ ಆಧುನಿಕತೆ: 1900-1989
ಲ್ಯೋಟಾರ್ಡ್ ಮತ್ತು ಬಾಡ್ರಿಲ್ಲಾರ್ಡ್ ಮೊದಲಾದ ಕೆಲವು ಲೇಖಕರು ಆಧುನಿಕತೆಯು 20ನೇ ಶತಮಾನದ ಮಧ್ಯ ಅಥವಾ ಉತ್ತರಾರ್ಧದಲ್ಲೇ ಕೊನೆಗೊಂಡಿದೆಯೆಂದು ನಂಬುತ್ತಾರೆ. ಆದ್ದರಿಂದ ಅವರು ಆಧುನಿಕೋತ್ತರತೆ ಎಂಬ ಆಧುನಿಕತೆಯ ನಂತರ ಒಂದು ಅವಧಿಯನ್ನು ನಿರೂಪಿಸಿದ್ದಾರೆ (1930/1950/1990- ಇತ್ತೀಚೆಗೆ). ಆದರೆ ಇತರ ತಾತ್ತ್ವಿಕ-ಸಿದ್ಧಾಂತಿಗಳು 20ನೇ ಶತಮಾನದ ಉತ್ತರಾರ್ಧದ ನಂತರದ ಅವಧಿಯು ಬಹುಶಃ ಆಧುನಿಕತೆಯ ಮತ್ತೊಂದು ಹಂತವಾಗಿರಬಹುದೆಂದು ಭಾವಿಸುತ್ತಾರೆ; ಈ ಹಂತವನ್ನು "ಲಿಕ್ವಿಡ್" ಆಧುನಿಕತೆಯೆಂದು ಬಾಮ್ಯಾನ್ ಅಥವಾ "ಹೈ" ಆಧುನಿಕತೆಯೆಂದು ಗಿಡ್ಡೆನ್ಸ್ ಕರೆದಿದ್ದಾರೆ (ಗಮನಿಸಿ: ಆಧುನಿಕೋತ್ತರತೆಯ ವಿವರಣೆಗಳು).
ಆಧುನಿಕತೆಯ ನಿರೂಪಣೆ
ಬದಲಾಯಿಸಿರಾಜಕೀಯವಾಗಿ
ಬದಲಾಯಿಸಿರಾಜಕೀಯವಾಗಿ, ಆಧುನಿಕತೆಯ ಆರಂಭಿಕ ಹಂತವು ನಿಕೋಲೊ ಮ್ಯಾಕಿಯಾವೆಲ್ಲಿಯ ಕೃತಿಗಳೊಂದಿಗೆ ಆರಂಭಗೊಳ್ಳುತ್ತದೆ, ಇವು ನಿಜವಾಗಿ ಹೇಗೆ ಇರುತ್ತವೆ ಎಂಬುದರ ವಾಸ್ತವಿಕ ವಿಶ್ಲೇಷಣೆಯ ಪರವಾಗಿ, ಹೇಗೆ ಇರಬೇಕು ಎಂಬುದರ ಬಗ್ಗೆ ಹೋಲಿಕೆಯ ಕಲ್ಪನೆಗಳಿಂದ ರಾಜಕಾರಣವನ್ನು ವಿಶ್ಲೇಷಿಸುವ ಮಧ್ಯಕಾಲೀನ ಮತ್ತು ಅರಿಸ್ಟಾಟೆಲಿಯನ್ ಶೈಲಿಯನ್ನು ಬಹಿರಂಗವಾಗಿ ನಿರಕಾರಿಸಿದವು. ಆತ ರಾಜಕಾರಣದ ಪ್ರಮುಖ ಗುರಿಯು ಒಬ್ಬ ವ್ಯಕ್ತಿಯ ಸ್ವಂತ ಅವಕಾಶ ಅಥವಾ ಭವಿಷ್ಯವನ್ನು ನಿಯಂತ್ರಿಸುವುದಾಗಿರಬೇಕು ಮತ್ತು ದೈವಾನುಗ್ರಹವನ್ನು ಅವಲಂಬಿಸಿದರೆ ನಿಜವಾಗಿ ಕೆಡುಕು ಉಂಟಾಗುತ್ತದೆಂದು ಸೂಚಿಸಿದರು. ಉದಾಹರಣೆಗಾಗಿ ರಾಜಕೀಯ ಸಮುದಾಯಗಳೊಳಗೆ ಹಿಂಸಾತ್ಮಕ ವಿಭಜನಗಳು ಅನಿವಾರ್ಯವಾಗಿರುತ್ತವೆ, ಆದರೆ ಅವು ಕಾನೂನು-ನಿರ್ಮಾತೃಗಳು ಮತ್ತು ಮುಖಂಡರು ಹೊಂದಿರುವ ಮತ್ತು ಕೆಲವೊಮ್ಮೆ ಅವರು ಕೆಲವು ರೀತಿಯಲ್ಲಿ ಪ್ರೋತ್ಸಾಹಿಸುವ ಪ್ರಾಬಲ್ಯತೆಯ ಮೂಲವೂ ಆಗಿರಬಹುದು ಎಂದು ಮ್ಯಾಕಿಯಾವೆಲ್ಲಿ ವಾದಿಸಿದ್ದಾರೆ (ಸ್ಟ್ರಾಸ್ 1987). ಮ್ಯಾಕಿಯಾವೆಲ್ಲಿಯ ಸೂಚನೆಗಳು ಕೆಲವೊಮ್ಮೆ ರಾಜರು ಮತ್ತು ರಾಜಕುಮಾರರ ಮೇಲೆ ಪ್ರಭಾವ ಬೀರಿದವು, ಆದರೆ ಅವು ಅಂತಿಮವಾಗಿ ರಾಜಪ್ರಭುತ್ವದ ಬದಲಿಗೆ ಸ್ವತಂತ್ರ ಪ್ರಜಾಪ್ರಭುತ್ವದೆಡೆಗೆ ಪಕ್ಷಪಾತ ತೋರುವಂತೆ ಕಂಡುಬಂದವು(Rahe 2006, p. 1) . ಮ್ಯಾಕಿಯಾವೆಲ್ಲಿಯು ಅನುಕ್ರಮವಾಗಿ ಫ್ರಾಂಕಿಸ್ ಬೇಕನ್ (Kennington 2004, chpt. 4) , ಮಾರ್ಚಮೋಂಟ್ ನೀಡ್ಹ್ಯಾಮ್ (Rahe 2006, chpt. 1) , ಹ್ಯಾರಿಂಗ್ಟನ್, (Rahe 2006, chapt. 1) , ಜಾನ್ ಮಿಲ್ಟನ್ (Bock, Skinner & Viroli 1990, chapt. 11) , ಡೇವಿಡ್ ಹ್ಯೂಮ್, (Rahe 2006, chapt. 4) ಮತ್ತು ಅನೇಕ ಇತರರ ಮೇಲೆ ಪ್ರಭಾವ ಬೀರಿದರು (ಸ್ಟ್ರಾಸ್ 1958). ಹೊಸ ಮ್ಯಾಕಿಯಾವೆಲ್ಲಿಯನ್ ವಾಸ್ತವಿಕತೆಯಿಂದ ಹುಟ್ಟಿಕೊಂಡ ಪ್ರಮುಖ ಆಧುನಿಕ ರಾಜಕೀಯ ಸಿದ್ಧಾಂತಗಳು ಮ್ಯಾಂಡೆವಿಲ್ಲೆಯ ಪ್ರಭಾವಶಾಲಿ ಸೂಚನೆಯನ್ನು ಒಳಗೊಳ್ಳುತ್ತವೆ - "Private Vices by the dextrous Management of a skilful Politician may be turned into Publick Benefits ” (ಆತನ ಫೇಬಲ್ ಆಫ್ ಬೀಸ್ ನ ಕೊನೆಯ ವಾಕ್ಯ). ಅಲ್ಲದೆ ಅವು ಮಾಂಟೆಸ್ಕ್ಯು ಮೊದಲು ಸ್ಪಷ್ಟವಾಗಿ ಪ್ರಸ್ತಾಪಿಸಿದ ಸರ್ಕಾರದಲ್ಲಿನ "ಅಧಿಕಾರಗಳ ಸಂವಿಧಾನಾತ್ಮಕ ವಿಭಜನೆ"ಯ ಸಿದ್ಧಾಂತವನ್ನೂ ಒಳಗೊಳ್ಳುತ್ತವೆ. ಈ ಎರಡೂ ತತ್ತ್ವಗಳೂ ಹೆಚ್ಚು ಆಧುನಿಕ ಪ್ರಜಾಪ್ರಭುತ್ವದ ಸಂವಿಧಾನಗಳೊಳಗೆ ಪ್ರತಿಷ್ಠಾಪಿಸಲ್ಪಟ್ಟಿವೆ. ಮ್ಯಾಕಿಯಾವೆಲ್ಲಿಯ ವಾಸ್ತವಿಕತೆಯು ಯುದ್ಧ ಮತ್ತು ರಾಜಕೀಯ ಹಿಂಸೆಗೆ ಕಾರಣವಾದುದರಿಂದ, ಆತನ ಸ್ಥಿರವಾದ ಪ್ರಭಾವವು 'ಕಡಿಮೆಯಾಯಿತು', ಅದರಿಂದಾಗಿ ಉಪಯುಕ್ತ ಸಂಘರ್ಷವು ಸಾಧ್ಯವಾದಷ್ಟು ಮಟ್ಟಿಗೆ ಗಮನಾರ್ಹವಾಗಿ ರಾಜಕೀಯ ಹೋರಾಟಗಳಾಗಿ ಬದಲಾಯಿತು ಮತ್ತು ಆರ್ಥಿಕ ಸಂಘರ್ಷವು ಸ್ವತಂತ್ರ, ಖಾಸಗಿ ಉದ್ಯಮಗಳ ನಡುವೆ ಪ್ರೋತ್ಸಾಹಿಸಲ್ಪಟ್ಟಿತು ಎಂದು ಹೇಳಲಾಗಿದೆ (Rahe 2006, chapt. 5 , ಮ್ಯಾನ್ಸ್‌ಫೀಲ್ಡ್ 1989). ಬೇಕನ್ ಮತ್ತು ಡೆಸ್ಕಾರ್ಟೆಸ್ ಪ್ರಸ್ತಾಪಿಸಿದಂತೆ ಮಾನವೀಯತೆ ಮತ್ತು ರಾಜಕಾರಣಗಳಿಗೆ ಅನ್ವಯಿಸಿದ ಹೊಸ ಆಧುನಿಕ ಭೌತಿಕ ವಿಜ್ಞಾನಗಳ ವಿಧಾನಗಳನ್ನು ಬಳಸಲು ಥೋಮಸ್ ಹೋಬ್ಬೆಸ್‌ರಿಂದ ಆರಂಭಗೊಂಡು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು (ಬರ್ನ್ಸ್ 1987). ಹೋಬ್ಬೆಸ್‌ರ ವಿಧಾನಶಾಸ್ತ್ರೀಯ ಕ್ರಮಗಳನ್ನು ಸುಧಾರಿಸುವ ಗಮನಾರ್ಹ ಪ್ರಯತ್ನಗಳು ಲಾಕೆ (Goldwin 1987) , ಸ್ಪಿನೋಜ (Rosen 1987) , ಗಿಯಾಂಬಟಿಸ್ಟ (1984 xli) ಮತ್ತು ರಾಸ್ಸಿಯಾ (1997 ಭಾಗ 1) ಮೊದಲಾದವರ ಕಾರ್ಯಗಳನ್ನು ಒಳಗೊಳ್ಳುತ್ತವೆ. ಹೋಬ್ಬೆಸ್‌ರ ವಿಧಾನದ ಕೆಲವು ಅಂಶಗಳನ್ನು ನಿರಾಕರಿಸುವ ಮೂಲಕ, ಡೇವಿಡ್ ಹ್ಯೂಮ್ ರಾಜಕೀಯ ವಿಷಯಗಳಿಗೆ ಬೇಕನ್‌ರ ವೈಜ್ಞಾನಿಕ ವಿಧಾನವನ್ನು ಅನ್ವಯಿಸುವ ಪ್ರಯತ್ನವನ್ನು ಮಾಡಿದರು, ಇದನ್ನು ಅವರು ಪ್ರಪಥಮ ಸೂಕ್ತ ಪ್ರಯತ್ನವೆಂದು ಪರಿಗಣಿಸಿದ್ದಾರೆ (ಹ್ಯೂಮ್ 1896 [1739], ಇಂಟ್ರೊ. ). ಡಚ್ ದಂಗೆ (1568–1609) (Bock, Skinner & Viroli 1990, chpt. 10,12) , ಇಂಗ್ಲಿಷ್ ಆಂತರಿಕ ಕದನ (1642–1651) (Rahe 2006, chpt. 1) , ಅಮೇರಿಕನ್ ಕ್ರಾಂತಿ (1775–1783) (Rahe 2006, chpt. 6-11) ಮತ್ತು ಫ್ರೆಂಚ್ ಕ್ರಾಂತಿ (1789–1799) (Orwin & Tarcov 1997, chpt. 8) ಮೊದಲಾದ ಸಂದರ್ಭಗಳಲ್ಲಿ ಆಧುನಿಕತಾವಾದಿ ಪ್ರಜಾತಂತ್ರವಾದವು ಬಹಿರಂಗವಾಗಿ ಪ್ರಜಾಪ್ರಭುತ್ವದ ಸ್ಥಾಪನೆಯ ಮೇಲೆ ಪ್ರಭಾವ ಬೀರಿತು. ಆಧುನಿಕತಾವಾದಿ ರಾಜಕೀಯ ಚಿಂತನೆಯ ಎರಡನೇ ಹಂತವು ರಾಸ್ಸಿಯಾರ ಚಿಂತನೆಯೊಂದಿಗೆ ಆರಂಭವಾಗುತ್ತದೆ. ಆತ ಮಾನವೀಯತೆಯ ಸ್ವಾಭಾವಿಕ ತರ್ಕಸಮ್ಮತತೆ ಮತ್ತು ಸಾಮಾಜಿಕತೆಯನ್ನು ಪ್ರಶ್ನಿಸಿದರು ಹಾಗೂ ಮಾನವ ಸ್ವಭಾವವು ಹಿಂದೆ ಯೋಚಿಸಿದುದಕ್ಕಿಂತ ಹೆಚ್ಚಿಗೆ ಹೊಂದಿಕೊಳ್ಳಬಲ್ಲದು ಎಂದು ಸೂಚಿಸಿದ್ದಾರೆ. ಈ ತರ್ಕದಿಂದ, ಒಂದು ಉತ್ತಮ ರಾಜಕೀಯ ವ್ಯವಸ್ಥೆ ಅಥವಾ ಒಬ್ಬ ಉತ್ತಮ ವ್ಯಕ್ತಿಯನ್ನು ರೂಪುಗೊಳಿಸುವಂಥದ್ದು ಸಂಪೂರ್ಣವಾಗಿ ಚರಿತ್ರೆಯಾದ್ಯಂತ ಎಲ್ಲರೂ ತೆಗೆದುಕೊಂಡು ಅವಕಾಶ ಮಾರ್ಗವನ್ನು ಅವಲಂಬಿಸಿರುತ್ತದೆ. ಈ ಚಿಂತನೆಯು ಇಮಾನ್ಯುವೆಲ್ ಕ್ಯಾಂಟ್, ಎಡ್ಮಂಡ್ ಬರ್ಕೆ ಮತ್ತು ಇತರರ ರಾಜಕೀಯ (ಮತ್ತು ಕಲಾತ್ಮಕ) ಚಿಂತನೆಯ ಮೇಲೆ ಪ್ರಭಾವ ಬೀರಿತು ಹಾಗೂ ಆಧುನಿಕತಾವಾದಿ ರಾಜಕಾರಣಗಳ ವಿಮರ್ಶಾತ್ಮಕ ಪುನರವಲೋಕನಕ್ಕೆ ಕಾರಣವಾಯಿತು. ಸಾಂಪ್ರದಾಯವಾದಿ ದೃಷ್ಟಿಕೋನದಲ್ಲಿ, ಈ ಅರಿವು ತೀವ್ರ ಸುಧಾರಣಾವಾದಿಯಾದ ಬದಲಾವಣೆಯ ಬಗ್ಗೆ ಎಚ್ಚರಿಕೆ ಮತ್ತು ಅದರ ತೊರೆತವನ್ನು ಪ್ರೋತ್ಸಾಹಿಸಿದೆಯೆಂದು ಬರ್ಕೆ ವಾದಿಸಿದ್ದಾರೆ. ಆದರೆ ಹೆಚ್ಚು ಮಹತ್ವಾಕಾಂಕ್ಷೆಯ ಚಳವಳಿಗಳೂ ಸಹ ಈ ಸೂಕ್ಷ್ಮ-ದೃಷ್ಟಿಯಿಂದ ಮಾನವ ಸಂಸ್ಕೃತಿಯಲ್ಲಿ ಅಭಿವೃದ್ಧಿ ಹೊಂದಿದವು, ಆರಂಭಿಕವಾಗಿ ರೊಮ್ಯಾಂಟಿಸಂ ಮತ್ತು ಚಾರಿತ್ರಿಕತತ್ತ್ವ ಹಾಗೂ ಅಂತಿಮವಾಗಿ ಕಾರ್ಲ್ ಮಾರ್ಕ್ಸ್ನ ಕಮ್ಯೂನಿಸಮ್ ಮತ್ತು ಜರ್ಮನ್ ನಾಜಿ ಚಳವಳಿ(Orwin & Tarcov 1997, chpt. 4) ಯನ್ನೂ ಒಳಗೊಂಡಂತೆ ಫ್ರೆಂಚ್ ಕ್ರಾಂತಿಯಿಂದ ಸ್ಫೂರ್ತಿ ಪಡೆದ ರಾಷ್ಟ್ರೀಯತೆಯ ಆಧುನಿಕ ರೂಪಗಳು.
ಸಾಮಾಜಿಕವಾಗಿ
ಬದಲಾಯಿಸಿಸಮಾಜಶಾಸ್ತ್ರದಲ್ಲಿ, ಸಾಮಾನ್ಯವಾಗಿ ದಾರ್ಶನಿಕ ಚಳವಳಿ ಯುಗದ ನಂತರದ ಸಂವಾದಗಳು, ಸಾಮಾಜಿಕ ಸ್ಥಿತಿಗಳು ಮತ್ತು ಪ್ರಕ್ರಿಯೆಗಳನ್ನು ಸೂಚಿಸುವ "ಆಧುನಿಕತೆ"ಯ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಯಾಗಿ ಒಂದು ನಿಯಮವು ಅಭಿವೃದ್ಧಿ ಹೊಂದಿತು (ಹ್ಯಾರ್ರಿಸ್ಸ್ 2000, 325). ಹೆಚ್ಚಿನ ಮೂಲಭೂತ ಪದಗಳಲ್ಲಿ, ಆಂಥೋನಿ ಗಿಡ್ಡೆನ್ಸ್ ಆಧುನಿಕತೆಯನ್ನು ಹೀಗೆಂದು ವಿವರಿಸಿದ್ದಾರೆ -
ಇದು ಆಧುನಿಕ ಸಮಾಜ ಅಥವಾ ಕೈಗಾರಿಕಾ ನಾಗರಿಕತೆಗಾಗಿ ಇರುವ ಒಂದು ಸಂಕ್ಷಿಪ್ತ ಪದವಾಗಿದೆ. ಹೆಚ್ಚಿನ ವಿವರಗಳಲ್ಲಿ ಇದನ್ನು ಹೀಗೆಂದು ನಿರೂಪಿಸಲಾಗಿದೆ - ಇದು (1) ಮಾನವನ ಮಧ್ಯಪ್ರವೇಶದಿಂದ ಪ್ರಪಂಚವು ಪರಿವರ್ತನೆಗೆ ತೆರೆದುಕೊಂಡಿದೆಯೆಂಬ ಕಲ್ಪನೆಯಂತಹ ಕೆಲವು ವರ್ತನೆಗಳು; (2) ಆರ್ಥಿಕ ಸಂಘಟನೆಗಳ ಸಂಕೀರ್ಣ, ವಿಶೇಷವಾಗಿ ಕೈಗಾರಿಕಾ ಉತ್ಪನ್ನ ಮತ್ತು ಮಾರುಕಟ್ಟೆ ಆರ್ಥಿಕ ಸ್ಥಿತಿ; (3) ರಾಷ್ಟ್ರ-ರಾಜ್ಯ ಮತ್ತು ಸಮೂಹಿಕ ಪ್ರಜಾಪ್ರಭುತ್ವವನ್ನೂ ಒಳಗೊಂಡಂತೆ ಕೆಲವು ವ್ಯಾಪ್ತಿಯ ರಾಜಕೀಯ ಸಂಘಟನೆಗಳು ಮೊದಲಾದವುಗಳೊಂದಿಗೆ ಸಂಬಂಧಿಸಿದೆ. ಹೆಚ್ಚಾಗಿ ಈ ವೈಶಿಷ್ಟ್ಯಗಳ ಪರಿಣಾಮವಾಗಿ, ಆಧುನಿಕತೆಯು ಹಿಂದಿನ ಪ್ರಕಾರದ ಸಾಮಾಜಿಕ ಕ್ರಮಕ್ಕಿಂತ ಹೆಚ್ಚು ಪ್ರಬಲವಾಗಿದೆ. ಇದು ಯಾವುದೇ ಹಿಂದಿನ ಸಂಸ್ಕೃತಿಗೆ ಭಿನ್ನವಾಗಿ ಗತದ ಬದಲಿಗೆ ಭವಿಷ್ಯದಲ್ಲಿ ಕಂಡುಬರುವ ಒಂದು ಸಮಾಜವಾಗಿದೆ—ಹೆಚ್ಚು ತಾಂತ್ರಿಕವಾಗಿ, ಸಂಘಟನೆಗಳ ಸಂಕೀರ್ಣವಾಗಿದೆ (ಗಿಡ್ಡೆನ್ಸ್ 1998, 94).
ಆಧುನಿಕತೆಯು 'ಮಾನವಕುಲವನ್ನು ಅಜ್ಞಾನ ಮತ್ತು ವಿವೇಚನಾಶೂನ್ಯತೆಯಿಂದ ಮುಕ್ತಗೊಳಿಸುವುದನ್ನು ಖಚಿತಪಡಿಸುವ ಒಂದು ಪ್ರಗತಿಶೀಲ ಶಕ್ತಿ'ಯೆಡೆಗೆ ಗುರಿಯನ್ನು ಹೊಂದಿದೆ (ರೋಸೆನಾಯ್ 1992, 5). ಆದರೆ ಹೊಸ ಸಾಮಾಜಿಕ ಮತ್ತು ತತ್ತ್ವಶಾಸ್ತ್ರದ ಸ್ಥಿತಿಗಳೊಂದಿಗೆ ಹೊಸ ಸವಾಲುಗಳು ಎದ್ದವು. ಆಧುನಿಕತೆಯ ಯುಗವು ಸಾಮಾಜಿಕವಾಗಿ ಕೈಗಾರಿಕೀಕರಣ ಮತ್ತು ಕಾರ್ಮಿಕರ ವಿಭಜನೆ ಹಾಗೂ ತಾತ್ತ್ವಿಕವಾಗಿ ನಿಶ್ಚಿತತೆಯ ನಷ್ಟ ಮತ್ತು ನಿಶ್ಚಿತತೆಯನ್ನು ದೃಢಪಡಿಸಲು ಸಾಧ್ಯವಿಲ್ಲವೆಂಬ ನೈಜತೆಯಿಂದ ವೈಶಿಷ್ಟ್ಯಗೊಂಡಿದೆ (ಡೆಲಾಂಟಿ 2007). ಈ ನಿಶ್ಚಿತತೆಯ ನಷ್ಟದ ಪ್ರಮುಖ ಕೇಂದ್ರವು ಧರ್ಮವನ್ನು ಕಳೆದುಕೊಳ್ಳುವುದಾಗಿದೆ. ಆಗಸ್ಟೆ ಕಾಮ್ಟೆಯಿಂದ ಹಿಡಿದು ಕಾರ್ಲ್ ಮಾರ್ಕ್ಸ್ ಮತ್ತು ಸಿಗ್ಮಂಡ್ ಫ್ರೆಡ್‌ವರೆಗೆ 19ನೇ ಶತಮಾನದ ವಿವಿಧ ಚಿಂತಕರು ಲೌಕಿಕಗೊಳಿಸುವಿಕೆಯನ್ನು ಅನುಸರಿಸಿ ವೈಜ್ಞಾನಿಕ ಮತ್ತು/ಅಥವಾ ರಾಜಕೀಯ ಸಿದ್ಧಾಂತಗಳನ್ನು ನೀಡಲು ಪ್ರಯತ್ನಿಸಿದರು. ಆಧುನಿಕತೆಯನ್ನು 'ಸಿದ್ಧಾಂತದ ಯುಗ'ವೆಂದು ವಿವರಿಸಬಹುದು.[ಸೂಕ್ತ ಉಲ್ಲೇಖನ ಬೇಕು]
For Marx, what was the basis of modernity was the emergence of capitalism and the revolutionary bourgeoisie, which led to an unprecedented expansion of productive forces and to the creation of the world market. Durkheim tackled modernity from a different angle by following the ideas of Saint-Simon about the industrial system. Although the starting point is the same as Marx, feudal society, Durkheim emphasizes far less the rising of the bourgeoisie as a new revolutionary class and very seldom refers to capitalism as the new mode of production implemented by it. The fundamental impulse to modernity is rather industrialism accompandied by the new scientific forces. In the work of Max Weber, modernity is closely associated with the processess of rationalization and disenchantment of the world. (Jorge Larraín 2000, 13)
ಆಧುನಿಕತೆಯು ದಾರ್ಶನಿಕ ಚಳವಳಿಯ ಪ್ರಮುಖ ತತ್ತ್ವಗಳು ಸರಿದು, ಉಪಯುಕ್ತ ವಸ್ತುಗಳ ಪೂಜಾಪದ್ಧತಿ ಮತ್ತು ಸಾಮೂಹಿಕ ಬಲಿ ಮೊದಲಾದ ದೂರ ಮಾಡುವಿಕೆಯ ಅತಿದುಷ್ಟ ಕಾರ್ಯಗಳೆಡೆಗೆ ಸಾಗುವುದನ್ನು ಸೂಚಿಸುತ್ತದೆಂದು ಥಿಯೋಡರ್ ಅಡೋರ್ನೊ ಮತ್ತು ಜಿಗ್ಮಂಟ್ ಬಾಮನ್ ಮೊದಲಾದ ತಾತ್ತ್ವಿಕ-ಸಿದ್ಧಾಂತಿಗಳು ಹೇಳಿದ್ದಾರೆ (ಅಡೋರ್ನೊ 1973; ಬಾಮನ್ 1989). ಆಧುನಿಕ ಕ್ರಾಂತಿ ಸಿದ್ಧಾಂತಗಳು "ತರ್ಕಬದ್ಧವಾಗಿಸುವಿಕೆ"ಯ ಕಲ್ಪನೆಯನ್ನು ವೆಬೆರ್ ಮೊದಲಿಗೆ ನಿರೂಪಿಸಿದುದಕ್ಕಿಂತ ಇನ್ನಷ್ಟು ಹೆಚ್ಚು ನಕಾರಾತ್ಮಕವಾಗಿ ಸೂಚಿಸುತ್ತವೆ. ತರ್ಕಬದ್ಧವಾಗಿಸುವಿಕೆಯ ಪ್ರಕ್ರಿಯೆಗಳು ಹೆಚ್ಚಿನ ಸಂದರ್ಭಗಳಲ್ಲಿ ಆಧುನಿಕ ಸಮಾಜದ ಮೇಲೆ ನಕಾರಾತ್ಮಕ ಮತ್ತು ಅಪಮಾನುಷಗೊಳಿಸುವ ಪ್ರಭಾವವನ್ನು ಹೊಂದಿವೆ. ಆರ್ಥಿಕ ಜಾಗತೀಕರಣ, ನಾಗರಿಕತೆಗಳ ತುಲನಾತ್ಮಕ ವಿಶ್ಲೇಷಣೆ ಮತ್ತು 'ಪರ್ಯಾಯ ಆಧುನಿಕತೆ'ಗಳ ವಸಾಹತು-ನಂತರದ ದೃಷ್ಟಿಕೋನದ ಬಗೆಗಿನ ವಿವಾದದ ಪರಿಣಾಮವಾಗಿ, ಶ್ಮುಯೆಲ್ ಐಸೆನ್‌ಸ್ಟಾಟ್ 'ಬಹು ಆಧುನಿಕತೆ'ಗಳ ಕಲ್ಪನೆಯನ್ನು ಪರಿಚಯಿಸಿದರು (2003; ಇದನ್ನೂ ಗಮನಿಸಿ ಡೆಲಾಂಟಿ 2007). 'ಬಹು ಸ್ಥಿತಿ'ಯ ಆಧುನಿಕತೆಯು ಈ ಸಮಾಜಶಾಸ್ತ್ರೀಯ ವಿಧಾನ ಮತ್ತು ದೃಷ್ಟಿಕೋನದ ಪ್ರಮುಖ ಕಲ್ಪನೆಯಾಗಿದೆ, ಇದು ಪಾಶ್ಚಿಮಾತ್ಯ ಯುರೋಪಿಯನ್ ಸಂಸ್ಕೃತಿಯನ್ನು ಜಗದ್ವ್ಯಾಪಕವಾದ ನಿರೂಪಣೆಯಾಗಿ ಸೂಚಿಸುವುದರಿಂದ 'ಆಧುನಿಕತೆ'ಯ ನಿರೂಪಣೆಯನ್ನು ವಿಸ್ತಾರಗೊಳಿಸುತ್ತದೆ, ಅದರಿಂದಾಗಿ: 'ಆಧುನಿಕತೆಯು ಪಾಶ್ಚಾತ್ಯೀಕರಣವಲ್ಲ ಹಾಗೂ ಅದರ ಪ್ರಮುಖ ಪ್ರಕ್ರಿಯೆಗಳು ಮತ್ತು ಚಾಲಕ ಶಕ್ತಿಗಳು ಎಲ್ಲಾ ಸಮಾಜಗಳಲ್ಲಿ ಕಂಡುಬರುತ್ತವೆ' (ಡೆಲಾಂಟಿ 2007).
ವೈಜ್ಞಾನಿಕವಾಗಿ
ಬದಲಾಯಿಸಿ14ನೇ ಶತಮಾನದಲ್ಲಿ, ಕಾಪರ್ನಿಕಸ್, ಕೆಪ್ಲರ್, ಗೆಲಿಲಿಯೊ ಮತ್ತು ಇತರರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಒಂದು ಹೊಸ ಸಾಧನೆಯನ್ನು ಮಾಡಿದರು, ಅದು ಹೆಚ್ಚಿನವುಗಳ ಬಗ್ಗೆ ಜನರು ಆಲೋಚಿಸುತ್ತಿದ್ದ ಮಾರ್ಗವನ್ನು ಬದಲಾಯಿಸಿತು. ಕಾಪರ್ನಿಕಸ್ ಸೌರ ವ್ಯೂಹದ ಹೊಸ ಮಾದರಿಗಳನ್ನು ಪ್ರಸ್ತಾಪಿಸಿದರು, ಅವು ಭೂಮಿಯಲ್ಲಿ ಮಾನವಕುಲದ ನೆಲೆಯನ್ನು ಕೇಂದ್ರದಲ್ಲಿ ಇರಿಸಲಿಲ್ಲ. ಕೆಪ್ಲರ್ ಭೌತವಿಜ್ಞಾನವನ್ನು ವಿವರಿಸಲು ಗಣಿತಶಾಸ್ತ್ರವನ್ನು ಬಳಸಿದರು ಮತ್ತು ಪ್ರಕೃತಿಯ ವ್ಯವಸ್ಥಿತ ಸ್ಥಿತಿಗಳನ್ನು ಈ ರೀತಿಯಲ್ಲಿ ವಿವರಿಸಿದರು. ಗೆಲಿಲಿಯೊ ಸ್ವತಂತ್ರ ಪತನದಲ್ಲಿ ಏಕಪ್ರಕಾರದ ವೇಗೋತ್ಕರ್ಷದ ಆತನ ಪ್ರಸಿದ್ಧ ರುಜುವಾತನ್ನು ಗಣಿತಶಾಸ್ತ್ರವನ್ನು ಬಳಸಿಕೊಂಡು ಮಾಡಿದರು(Kennington 2004, chpt. 1,4) . ಫ್ರಾನ್ಸಿಸ್ ಬೇಕನ್ ವಿಶೇಷವಾಗಿ ಆತನ ನೋವಮ್ ಆರ್ಗನಮ್ ನಲ್ಲಿ ವಿಜ್ಞಾನಕ್ಕೆ ಒಂದು ಹೊಸ ಪ್ರಯೋಗ ಆಧಾರಿತ ಹಾದಿಗಾಗಿ ಪ್ರಯತ್ನಿಸಿದರು, ಅದು ಯಾವುದೇ ಮೂಲಭೂತ ಅಥವಾ ಅಂತಿಮ ಕಾರಣಗಳ ಜ್ಞಾನವನ್ನು ಕಂಡುಹಿಡಿಯಲಿಲ್ಲ ಮತ್ತು ಆದ್ದರಿಂದ ಅವರು ಡೆಮೋಕ್ರಿಟಸ್ ಮತ್ತು ಎಪಿಕರಸ್‌ರ ಪುರಾತನ ತತ್ತ್ವಶಾಸ್ತ್ರದಂತೆ ಭೌತವಾದಿಯಾಗಿದ್ದರು. ಆದರೆ ಅವರು ವಿಜ್ಞಾನವು ಮಾನವಕುಲಕ್ಕೋಸ್ಕರ ಪ್ರಕೃತಿಯನ್ನು ನಿಯಂತ್ರಿಸಲು ಪ್ರಯತ್ನಿಸಬೇಕು ಮತ್ತು ತಿಳಿಯುವ ಕಾರಣಕ್ಕಾಗಿ ಮಾತ್ರ ಅದನ್ನು ತಿಳಿಯಲು ಪ್ರಯತ್ನಿಸಬಾರದೆಂಬ ಅಂಶವನ್ನೂ ಸೇರಿಸಿದರು. ಈ ಎರಡೂ ಅಂಶಗಳಲ್ಲಿ ಆತ ಮಧ್ಯಕಾಲೀನ ಅತಿ ಸೂಕ್ಷ್ಮತರ್ಕದ ಮ್ಯಾಕಿಯಾವೆಲ್ಲಿಯ ಆರಂಭಿಕ ವಿಮರ್ಶೆಯಿಂದ ಪ್ರಭಾವಿತರಾಗಿದ್ದರು ಮತ್ತು ಮುಖಂಡರು ತಮ್ಮ ಸ್ವಂತ ಭವಿಷ್ಯವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರಬೇಕೆಂಬುದು ಆತನ ಸೂಚನೆಯಾಗಿತ್ತು (Kennington 2004, chpt. 1,4) . ಗೆಲಿಲಿಯೊನ ಹೊಸ ಭೌತಶಾಸ್ತ್ರ ಮತ್ತು ಬೇಕನ್‌ರಿಂದ ಪ್ರಭಾವಿತರಾದ ರೇನೆ ಡೆಸ್ಕಾರ್ಟೆಸ್ ಅತಿಶೀಘ್ರದಲ್ಲಿ, ಗಣಿತಶಾಸ್ತ್ರ ಮತ್ತು ಜ್ಯಾಮಿತಿಶಾಸ್ತ್ರವು ಸಣ್ಣ ಹಂತಗಳಲ್ಲಿ ವೈಜ್ಞಾನಿಕ ಜ್ಞಾನವನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬ ಮಾದರಿಯನ್ನು ಒದಗಿಸಿದವು ಎಂದು ವಾದಿಸಿದರು. ಮಾನವರನ್ನು ಸಂಕೀರ್ಣ ಯಂತ್ರಗಳೆಂದು ತಿಳಿಯಬಹುದು ಎಂದೂ ಆತ ಬಹಿರಂಗವಾಗಿ ಹೇಳಿದ್ದಾರೆ (Kennington 2004, chpt. 6) . ಡೆಸ್ಕಾರ್ಟೆಸ್‌ರಿಂದ ಪ್ರಭಾವಿತರಾದ ಆದರೆ ಬೇಕನ್‌ರಂತೆ ಪ್ರಯೋಗ ಪರೀಕ್ಷೆಯ ಪ್ರತಿಪಾದಕರಾದ ಐಸಾಕ್ ನ್ಯೂಟನ್, ಒಂದು ಬದಿಯಲ್ಲಿ ಕಾರ್ಟೆಶಿಯನ್ ಗಣಿತಶಾಸ್ತ್ರ, ಜ್ಯಾಮಿತಿಶಾಸ್ತ್ರ ಮತ್ತು ತಾತ್ತ್ವಿಕ ಅನುಮಾನ ಹಾಗೂ ಮತ್ತೊಂದು ಬದಿಯಲ್ಲಿ ಬೇಕೋನಿಯನ್ ಪ್ರಾಯೋಗಿಕ ವೀಕ್ಷಣೆ ಮತ್ತು ದೃಷ್ಟಾಂತ ಕೊಡುವುದು ಒಟ್ಟಿಗೆ ಹೇಗೆ ಪ್ರಕೃತ್ತಿಯ ಕ್ರಮಬದ್ಧತೆಗಳ ಪ್ರಾಯೋಗಿಕ ತಿಳುವಳಿಕೆಯಲ್ಲಿ ಉತ್ತಮ ಪ್ರಗತಿಗಳನ್ನು ಉಂಟುಮಾಡಬಹುದು ಎಂಬ ಬಗ್ಗೆ ಮೂಲಮಾದರಿಯ ಉದಾಹರಣೆಯನ್ನು ಒದಗಿಸಿದರು (ಡಿಅಲೆಂಬರ್ಟ್ 2009 [1751]; ಹೆನ್ರಿ 2004).
ಕಲಾತ್ಮಕವಾಗಿ
ಬದಲಾಯಿಸಿಆಧುನಿಕತಾವಾದಿ ರಾಜಕೀಯ ಚಿಂತನೆಯು ಫ್ರಾನ್ಸಿನಲ್ಲಿ ವ್ಯಾಪಕವಾಗಿ ಪ್ರಸಿದ್ಧವಾದ ನಂತರ, ರಾಸ್ಸಿಯಾರ ಮಾನವ ಸ್ವಭಾವದ ಪುನರ್ವಿಮರ್ಶೆಯು ತರ್ಕದ ಹೊಸ ವಿಮರ್ಶೆಗೆ ಅನುವು ಮಾಡಿಕೊಟ್ಟಿತು, ಅದು ಮತ್ತೆ ಕಡಿಮೆ ತರ್ಕಪಾರಮ್ಯವಾದದ ಮಾನವ ಚಟುವಟಿಕೆಗಳ, ವಿಶೇಷವಾಗಿ ಕಲೆಗಳ, ಹೊಸ ತಿಳುವಳಿಕೆಗೆ ಕಾರಣವಾಯಿತು. ಆ ಚಳವಳಿಗಳ ಮೇಲಿದ್ದ ಆರಂಭಿಕ ಪ್ರಭಾವವನ್ನು 18ನೇ ಮತ್ತು 19ನೇ ಶತಮಾನದಲ್ಲಿ ಜರ್ಮನ್ ಭಾವನಾವಾದ ಮತ್ತು ರೊಮ್ಯಾಂಟಿಸಂ ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ಆಧುನಿಕ ಕಲೆಯು ಕೇವಲ ಆಧುನಿಕತೆಯ ನಂತರದ ಹಂತಗಳಿಗೆ ಮಾತ್ರ ಸಂಬಂಧಿಸಿದೆ. (Orwin & Tarcov 1997, chpt. 2,4) ಈ ಕಾರಣಕ್ಕಾಗಿ ಕಲಾ ಇತಿಹಾಸವು "ಆಧುನಿಕತೆ" ಪದವನ್ನು ಆಧುನಿಕ ಯುಗ ಮತ್ತು ಆಧುನಿಕತಾ ಸಿದ್ಧಾಂತ ಪದಗಳಿಂದ ಭಿನ್ನವಾಗಿರಿಸುತ್ತದೆ - ಒಂದು ಭಿನ್ನ ಪದವಾಗಿ ಸಂಸ್ಕೃತಿ ಸ್ಥಿತಿಯಲ್ಲಿ ಅನ್ವಯಿಸಲಾಯಿತು, ಇದರಲ್ಲಿ ಹೊಸ ಬದಲಾವಣೆಗಳ ಸಂಪೂರ್ಣ ಅಗತ್ಯತೆಯು ಜೀವನ, ಕೆಲಸ ಮತ್ತು ಚಿಂತನೆಯ ಪ್ರಾಥಮಿಕ ಅಂಶವಾಗುತ್ತದೆ. ಕಲೆಯಲ್ಲಿ ಆಧುನಿಕತೆಯು 'ಕೇವಲ ಆಧುನಿಕವಾಗಿರುವ ಸ್ಥಿತಿಗಿಂತ ಅಥವಾ ಹಳೆಯದು ಮತ್ತು ಹೊಸದರ ನಡುವಿನ ವಿರೋಧಕ್ಕಿಂತ ಹೆಚ್ಚಿನದಾಗಿದೆ' (ಸ್ಮಿತ್ 2009). "ದಿ ಪೈಂಟರ್ ಆಫ್ ಮಾಡರ್ನ್ ಲೈಫ್" (1864) ಎಂಬ ಪ್ರಬಂಧದಲ್ಲಿ, ಚಾರ್ಲ್ಸ್ ಬಾಡೆಲೇರ್ ಒಂದು ಸಾಹಿತ್ಯಕ ನಿರೂಪಣೆಯನ್ನು ನೀಡುತ್ತಾರೆ: "ಆಧುನಿಕತೆಯಿಂದ ನಾನು ಕ್ಷಣಿಕ, ನಶ್ವರ, ಅನಿಶ್ಚಿತತೆಯನ್ನು ನಿರ್ಧರಿಸುತ್ತೇನೆ" (ಬಾಡೆಲೇರ್ 1964, 13).
ಆಧುನಿಕತೆಯ ನಿರೂಪಣೆ
ಬದಲಾಯಿಸಿಸಮಾಜಶಾಸ್ತ್ರದಲ್ಲಿ ಲಭ್ಯವಾದ ಕಾಲ್ಪನಿಕ ನಿರೂಪಣೆಗಳಲ್ಲಿ, ಆಧುನಿಕತೆಯನ್ನು 'ಆಧಾರ', ದೃಶ್ಯ ಸಂಸ್ಕೃತಿ ಮತ್ತು ವೈಯಕ್ತಿಕ ಗೋಚರತೆಯೊಂದಿಗೆ ವ್ಯಕ್ತಿಯೊಬ್ಬನ ಮನಸ್ಸಿನಿಂದ ಗುರುತಿಸಲಾಗಿದೆ ಮತ್ತು ನಿರೂಪಿಸಲಾಗಿದೆ (ಲೆಪ್ಪರ್ಟ್ 2004, 19). ಸಾಮಾನ್ಯವಾಗಿ, ಆಧುನಿಕತೆಯನ್ನು ಒಳಗೊಂಡ ದೊಡ್ಡ ಪ್ರಮಾಣದ ಸಾಮಾಜಿಕ ಏಕೀಕರಣವು ಈ ಕೆಳಗಿನದನ್ನು ಒಳಗೊಳ್ಳುತ್ತದೆ:
- ಸರಕುಗಳು, ರಾಜಧಾನಿ, ಜನರು ಮತ್ತು ಹಿಂದಿಗಿಂತ ಭಿನ್ನವಾಗಿರುವ ಜನರ ನಡುವೆ ಮಾಹಿತಿ ಮೊದಲಾದವುಗಳ ಹೆಚ್ಚಿದ ಚಲನೆ ಹಾಗೂ ಸ್ಥಳೀಯ ಪ್ರದೇಶದಾಚೆಗೆ ತರ್ಕಬದ್ಧ ಪ್ರಭಾವ
- ಸಂಚಾರಿ ಜನರ ಹೆಚ್ಚಿದ ಮೂಲಭೂತ ಸಾಮಾಜಿಕ ಸಂಘಟನೆ, ಅವರು ಮತ್ತು ಅವರ ಪ್ರಭಾವವಿರುವ ವ್ಯಾಪ್ತಿಯ ಅಭಿವೃದ್ಧಿ ಹಾಗೂ ಸಾಮಾಜಿಕ-ಆರ್ಥಿಕ ಚಲನಶೀಲತೆಯನ್ನು ಉಂಟುಮಾಡುವ ಸಾಮಾಜಿಕ ಪ್ರಮಾಣಕವಾಗಿಸುವಿಕೆ
- ಸಮಾಜದ ವಿಭಾಗಗಳ ಹೆಚ್ಚಿದ ವಿಶಿಷ್ಟಗೊಳಿಸುವಿಕೆ, ಅಂದರೆ ಕಾರ್ಮಿಕ ವಿಭಾಗ ಮತ್ತು ಪರಸ್ಪರ ಅವಲಂಬಿಕೆಯ ವಲಯ
ಇವನ್ನೂ ಗಮನಿಸಿ
ಬದಲಾಯಿಸಿ- ಆಧುನೀಕರಣ
- ತರ್ಕಬದ್ಧವಾಗಿಸುವಿಕೆ (ಸಮಾಜಶಾಸ್ತ್ರ)
- ನಗರೀಕರಣ
- ಕೈಗಾರಿಕೀಕರಣ
- ಸಾಮೂಹಿಕ ಸಮಾಜ
- ಆಧುನೀಕೋತ್ತರ
- ಹೈಪರ್‌ಮಾಡರ್ನಿಟಿ
- ಟ್ರಾನ್ಸ್‌ಮಾಡರ್ನಿಟಿ
- ನಂತರದ ಆಧುನಿಕತಾವಾದ
- ಎರಡನೇ ಆಧುನಿಕತೆ
- ಇಸ್ಲಾಂ ಮತ್ತು ಆಧುನಿಕತೆ
ಉಲ್ಲೇಖಗಳು
ಬದಲಾಯಿಸಿ- ಆಡೆಮ್, ಸೈಫುಡೈನ್. 2004. "ಡಿಕ್ಲೋನೈಜಿಂಗ್ ಮಾಡರ್ನಿಟಿ: Ibn-ಖಾಲ್ಡನ್ ಆಂಡ್ ಮಾಡರ್ನ್ ಹಿಸ್ಟೋರಿಯೊಗ್ರಫಿ." ಇಸ್ಲಾಂ: ಪಾಸ್ಟ್, ಪ್ರೆಸೆಂಟ್ ಆಂಡ್ ಫ್ಯೂಚರ್ - ಇಂಟರ್‌ನ್ಯಾಷನಲ್ ಸೆಮಿನಾರ್ ಆನ್ ಇಸ್ಲಾಮಿಕ್ ಥಾಟ್ ಪ್ರೊಸೀಡಿಂಗ್ಸ್, ಅಹ್ಮದ್ ಸುನಾವರಿ ಲಾಂಗ್, ಜಾಫರಿ ಅವಾಂಗ್ ಮತ್ತು ಕಾಮರುದ್ದಿನ್ ಸ್ಯಾಲೆಹ್ ಮೊದಲಾದವರು ಸಂಪಾದಿಸಿದರು, 570–87. ಸ್ಯಾಲಂಗರ್ ದಾರುಲ್ ಎಹ್ಸಾನ್, ಮಲೇಷಿಯಾ: ಡಿಪಾರ್ಟ್ಮೆಂಟ್ ಆಫ್ ಥಿಯಾಲಜಿ ಆಂಡ್ ಫಿಲಾಸಫಿ, ಫೇಕಲ್ಟಿ ಆಫ್ ಇಸ್ಲಾಮಿಕ್ ಸ್ಟಡೀಸ್, ಯೂನಿವರ್ಸಿಟಿ ಕೆಬಾಂಗ್ಸಾನ್ ಮಲೇಷಿಯಾ.
- ಅಡೋರ್ನೊ, ಥಿಯೋಡರ್ ಡಬ್ಲ್ಯೂ. 1973. ನೆಗೇಟಿವ್ ಡೈಯಲೆಕ್ಟಿಕ್ಸ್ , ಇ. ಬಿ. ಆಶ್ಟನ್ ಅನುವಾದಿಸಿದ್ದಾರೆ. ಲಂಡನ್: ರೌಟ್ಲೆಡ್ಜ್. (ಮೂಲತಃ ನೆಗೇಟಿವ್ ಡೈಯಲೆಕ್ಟಿಕ್ ಆಗಿ ಪ್ರಕಟಿಸಲಾಯಿತು, ಫ್ರ್ಯಾಂಕ್ಫರ್ಟ್ a.M.: ಸುಹ್ರ್‌ಕ್ಯಾಂಪ್, 1966)
- ಡಿಅಲೆಂಬರ್ಟ್, ಜೀನ್ ಲಿ ರಾಂಡ್. 2009 [1751]. "ಪ್ರಿಲಿಮಿನರಿ ಡಿಸ್ಕೋರ್ಸ್", ದಿ ಎನ್‌ಸೈಕ್ಲೊಪೀಡಿಯಾ ಆಫ್ ಡಿಡರೋಟ್ ಆಂಡ್ ಡಿಅಲಂಬರ್ಟ್ ಕೊಲ್ಲಾಬೊರೇಟಿವ್ ಟ್ರಾನ್ಸ್‌ಲೇಶನ್ ಪ್ರಾಜೆಕ್ಟ್ , ರಿಚಾರ್ಡ್ ಎನ್ ಸ್ಕ್ವಾಬ್ ಮತ್ತು ವಾಲ್ಟರ್ ಅನುವಾದಿಸಿದರು. ಆನ್ನ್ ಆರ್ಬರ್: ಯೂನಿವರ್ಸಿಟಿ ಆಫ್ ಮಿಚಿಗನ್ ಲೈಬ್ರರಿಯ ಸ್ಕಾಲರ್ಲಿ ಪಬ್ಲಿಷಿಂಗ್ ಆಫೀಸ್ Archived 2011-05-10 ವೇಬ್ಯಾಕ್ ಮೆಷಿನ್ ನಲ್ಲಿ.. (2010ರ ಡಿಸೆಂಬರ್ 19ರಂದು ಸಂಕಲನಗೊಂಡಿತು)
- ಬಾರ್ಕರ್, ಕ್ರಿಸ್. 2005. ಕಲ್ಚರ್ ಸ್ಟಡೀಸ್: ಥಿಯರಿ ಆಂಡ್ ಪ್ರಾಕ್ಟೀಸ್ . ಲಂಡನ್: ಸೇಜ್. ISBN 0-7619-4156-8
- ಬಾಡೆಲೈರ್, ಚಾರ್ಲ್ಸ್. 1964. ದಿ ಪೈಂಟರ್ ಆಫ್ ಮಾಡರ್ನ್ ಲೈಫ್ ಆಂಡ್ ಅದರ್ ಎಸ್ಯೇಸ್ , ಜೊನಾತನ್ ಮೇನೆ ಸಂಪಾದಿಸಿದರು ಮತ್ತು ಅನುವಾದಿಸಿದರು. ಲಂಡನ್: ಫೈಡನ್ ಪ್ರೆಸ್.
- ಬಾಮ್ಯಾನ್, ಜಿಗ್ಮಂಟ್. 1989. ಮಾಡರ್ನಿಟಿ ಆಂಡ್ ದಿ ಹೋಲೋಕಾಸ್ಟ್ . ಕೇಂಬ್ರಿಡ್ಜ್: ಪಾಲಿಟಿ ಪ್ರೆಸ್.; ಇತಾಕ, N.Y.: ಕಾರ್ನೆಲ್ ಯೂನಿವರ್ಸಿಟಿ ಪ್ರೆಸ್. ISBN 0745606857 (ಪಾಲಿಟಿ, ಕ್ಲಾತ್); ISBN 0745609309 (ಪಾಲಿಟಿ, 1991 pbk), ISBN 0801487196 (ಕಾರ್ನೆಲ್, ಕ್ಲಾತ್), ISBN 080142397X (ಕಾರ್ನೆಲ್, pbk).
- ಬರ್ಮ್ಯಾನ್, ಮಾರ್ಷಲ್. 1983. ಆಲ್ ದಾಟ್ ಈಸ್ ಸಾಲಿಡ್ ಮೆಲ್ಟ್ಸ್ ಇನ್ಟು ಏರ್: ದಿ ಎಕ್ಸ್‌ಪೀರಿಯನ್ಸ್ ಆಫ್ ಮಾಡರ್ನಿಟಿ. ಲಂಡನ್: [full citation needed]
- ಬರ್ನ್ಸ್, ಲಾರೆನ್ಸ್. 1987. 'ಥೋಮಸ್ ಹೋಬ್ಬೆಸ್' ಹಿಸ್ಟರಿ ಆಫ್ ಪಾಲಿಟಿಕಲ್ ಫಿಲಾಸಫಿ , ಮೂರನೇ ಆವೃತ್ತಿ, ಲಿಯೊ ಸ್ಟ್ರಾಸ್ ಮತ್ತು ಜೋಸಫ್ ಕ್ರಾಪ್ಸಿ ಸಂಪಾದಿಸಿದರು, 369–420. ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್.
- ಬಾಕ್, ಗಿಸೆಲಾ, ಕ್ವೆಂಟಿನ್ ಸ್ಕಿನ್ನರ್ ಮತ್ತು ಮಾರಿಜಿಯೊ ವಿರೋಲಿ. 1990. ಮ್ಯಾಕಿಯಾವೆಲ್ಲಿ ಆಂಡ್ ರಿಪಬ್ಲಿಕಾನಿಸಂ . ಐಡಿಯಾಸ್ ಇನ್ ಕಾಂಟೆಕ್ಸ್ಟ್. ಕೇಂಬ್ರಿಡ್ಜ್ ಆಂಡ್ ನ್ಯೂಯಾರ್ಕ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್. ISBN 0521383765
- ಡೆಲಾಂಟಿ, ಗೆರಾರ್ಡ್. 2007. "ಮಾಡರ್ನಿಟಿ." ಬ್ಲ್ಯಾಕ್‌ವೆಲ್ ಎನ್‌ಸೈಕ್ಲೊಪೀಡಿಯಾ ಆಫ್ ಸೋಷಿಯಾಲಜಿ , ಜಾರ್ಜ್ ರಿಟ್ಜರ್ ಸಂಪಾದಿಸಿದರು. 11 ಸಂಪುಟಗಳು. ಮ್ಯಾಲ್ಡೆನ್, ಮಾಸ್.: ಬ್ಲ್ಯಾಕ್‌ವೆಲ್ ಪಬ್ಲಿಷಿಂಗ್. ISBN 1405124334
- ಐಸೆಂಸ್ಟಾಟ್, ಶ್ಮ್ಯುವೆಲ್ ನೋಹ್. 2003. ಕಂಪೇರೆಟಿವ್ ಸಿವಿಲೈಜೇಶನ್ಸ್ ಆಂಡ್ ಮಲ್ಟಿಪಲ್ ಮಾಡರ್ನಿಟೀಸ್ , 2 ಸಂಪುಟಗಳು. ಲೈಡನ್ ಮತ್ತು ಬೋಸ್ಟನ್: ಬ್ರಿಲ್.
- ಗಿಡ್ಡನ್ಸ್, ಆಂಥೋನಿ. 1998. ಕನ್ಸರ್ವೇಶನ್ಸ್ ವಿದ್ ಆಂಥೋನಿ ಗಿಡ್ಡನ್ಸ್: ಮೇಕಿಂಗ್ ಸೆನ್ಸ್ ಆಫ್ ಮಾಡರ್ನಿಟಿ . ಸ್ಟ್ಯಾನ್ಫರ್ಡ್, ಕಾಲಿಫ್.: ಸ್ಟ್ಯಾನ್ಫರ್ಡ್ ಯೂನಿವರ್ಸಿಟಿ ಪ್ರೆಸ್. ISBN 0804735689 (ಕ್ಲೋತ್) ISBN 0804735697 (pbk.)
- ಗೋಲ್ಡ್‌ವಿನ್, ರಾಬರ್ಟ್. 1987. 'ಜಾನ್ ಲೋಕ್' ಹಿಸ್ಟರಿ ಆಫ್ ಪಾಲಿಟಿಕಲ್ ಫಿಲಾಸಫಿ , ಮೂರನೇ ಆವೃತ್ತಿ, ಲಿಯೊ ಸ್ಟ್ರಾಸ್ ಮತ್ತು ಜೋಸೆಫ್ ಕ್ರಾಪ್ಸಿ ಸಂಪಾದಿಸಿದರು, 476–512. ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್ ISBN 0226777081 (ಕ್ಲಾತ್); 0226777103 (pbk).
- ಹ್ಯಾರಿಸ್, ಜಾನ್. 2000. "ದಿ ಸೆಕೆಂಡ್ ಗ್ರೇಟ್ ಟ್ರಾನ್ಸ್‌ಫಾರ್ಮೇಶನ್? ಕ್ಯಾಪಿಟಲಿಸಂ ಅಟ್ ದಿ ಎಂಡ್ ಆಫ್ ದಿ ಟ್ವೆಂಟಿಯತ್ ಸೆಂಚುರಿ." ಪವರ್ಟಿ ಆಂಡ್ ಡೆವಲಪ್ಮೆಂಟ್ ಇನ್ಟು ದಿ 21ಸ್ಟ್ ಸೆಂಚುರಿ , ಪರಿಷ್ಕೃತ ಆವೃತ್ತಿ, ಟಿಮ್ ಅಲ್ಲೆನ್ ಮತ್ತು ಅಲನ್ ಥೋಮಸ್ ಸಂಪಾದಿಸಿದರು, 325–42. ಆಕ್ಸ್‌ಫರ್ಡ್ ಮತ್ತು ನ್ಯೂಯಾರ್ಕ್: ಓಪನ್ ಯೂನಿವರ್ಸಿಟಿ ಇನ್ ಅಸೋಸಿಯೇಶನ್ ವಿದ್ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್. ISBN 0198776268
- ಹೆನ್ರಿ, ಜಾನ್. 2004. "ಸೈನ್ಸ್ ಆಂಡ್ ದಿ ಕಮಿಂಗ್ ಆಫ್ ಎನ್ಲೈಟನ್ಮೆಂಟ್" - ದಿ ಎನ್ಲೈಟನ್ಮೆಂಟ್ ವರ್ಲ್ಡ್ , ಮಾರ್ಟಿನ್ ಫಿಟ್ಜ್‌ಪ್ಯಾಟ್ರಿಕ್ ಮತ್ತು ಇತರರು ಸಂಪಾದಿಸಿದ್ದಾರೆ.
- ಹ್ಯೂಮ್, ಡೇವಿಡ್. 1896 [1739]. ಎ ಟ್ರೀಟೈಸ್ ಆಫ್ ಹ್ಯೂಮನ್ ನೇಚರ್ Archived 2013-05-20 ವೇಬ್ಯಾಕ್ ಮೆಷಿನ್ ನಲ್ಲಿ. , ಸರ್ ಕೆ. ಸಿ. ಬಿ. ಲೆವಿಸ್ ಆಮ್ಹರ್ಸ್ಟ್ ಸೆಲ್ಬಿ ಬಿಗ್ ಸಂಪಾದಿಸಿದ್ದಾರೆ. ಆಕ್ಸ್‌ಫರ್ಡ್: ಕ್ಲಾರೆಂಡನ್ ಪ್ರೆಸ್.
- ಕೆನ್ನಿಂಗ್ಟನ್, ರಿಚಾರ್ಡ್. 2004. ಆನ್ ಮಾಡರ್ನ್ ಒರಿಜಿನ್ಸ್: ಎಸ್ಯೇಸ್ ಇನ್ ಅರ್ಲಿ ಮಾಡರ್ನ್ ಫಿಲಾಸಫಿ , ಪ್ಯಾಮೆಲಾ ಕ್ರಾಸ್ ಮತ್ತು ಫ್ರ್ಯಾಂಕ್ ಹಂಟ್ ಸಂಪಾದಿಸಿದ್ದಾರೆ. ಲ್ಯಾನ್ಹ್ಯಾಮ್, Md.: ಲೆಕ್ಸಿಂಗ್ಟನ್ ಬುಕ್ಸ್. ISBN 073910814X (ಕ್ಲಾತ್); ISBN 0739108158 (pbk).
- ಲಾರೈನ್, ಜಾರ್ಜ್. 2000. "ಐಡೆಂಟಿಟಿ ಆಂಡ್ ಮಾಡರ್ನಿಟಿ ಇನ್ ಲ್ಯಾಟಿನ್ ಅಮೇರಿಕಾ". ಕೇಂಬ್ರಿಡ್ಜ್, UK: ಪಾಲಿಟಿ; ಮ್ಯಾಲ್ಡನ್, MA: ಬ್ಲ್ಯಾಕ್‌ವೆಲ್. ISBN 0745626238 (ಕ್ಲಾತ್); ISBN 0745626246 (pbk).
- ಲೆಪ್ಪರ್ಟ್, ರಿಚಾರ್ಡ್. 2004. "ದಿ ಸೋಷಿಯಲ್ ಡಿಸಿಪ್ಲಿನ್ ಆಫ್ ಲಿಸನಿಂಗ್." ಆರಲ್ ಕಲ್ಚರ್ಸ್ , ಜಿಮ್ ಡ್ರೋಬ್ನಿಕ್ ಸಂಪಾದಿಸಿದ್ದಾರೆ, 19-35. ಟೊರೊಂಟೊ: YYZ ಬುಕ್ಸ್; ಬ್ಯಾನ್ಫ್: ವಾಲ್ಟರ್ ಫಿಲಿಪ್ಸ್ ಗ್ಯಾಲರಿ ಎಡಿಷನ್ಸ್. ISBN 0920397808
- ಮ್ಯಾಂಡೆವಿಲ್ಲೆ, ಬರ್ನಾರ್ಡ್. ದಿ ಫೇಬಲ್ ಆಫ್ ದಿ ಬೀಸ್ Archived 2013-05-21 ವೇಬ್ಯಾಕ್ ಮೆಷಿನ್ ನಲ್ಲಿ. .
- Mansfield, Harvey (1989), Taming the Prince, The Johns Hopkins University Press
- ನೋರಿಸ್, ಕ್ರಿಸ್ಟೋಫರ್. 1995. 'ಮಾಡರ್ನಿಸಂ.' ದಿ ಆಕ್ಸ್‌ಫರ್ಡ್ ಕಂಪಾನಿಯನ್ ಟು ಫಿಲಾಸಫಿ , ಟೆಡ್ ಹಾಂಡರಿಚ್ ಸಂಪಾದಿಸಿದ್ದಾರೆ, 583. ಆಕ್ಸ್‌ಫರ್ಡ್ ಮತ್ತು ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ISBN 9780198661320
- ಓರ್ವಿನ್, ಕ್ಲಿಫ್ಫರ್ಡ್ ಮತ್ತು ನ್ಯಾದನ್ ಟಾರ್ಕೊವ್. 1997. ದಿ ಲೆಗೆಸಿ ಆಫ್ ರಾಸ್ಸಿಯಾ . ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್. ISBN 0226638553 (ಕ್ಲಾತ್); ISBN 0226638561 (pbk).
- ಓಸ್ಬರ್ನೆ, ಪೀಟರ್. 1992. "ಮಾಡರ್ನಿಟಿ ಈಸ್ ಎ ಕ್ವಾಲಿಟೇಟಿವ್, ನಾಟ್ ಎ ಕ್ರೋನೊಲಾಜಿಕಲ್, ಕೆಟಗರಿ: ನೋಟ್ಸ್ ಆನ್ ದಿ ಡೈಯಲೆಕ್ಟಿಕ್ಸ್ ಆಫ್ ಡಿಫರೆನ್ಷಿಯಲ್ ಹಿಸ್ಟೋರಿಕಲ್ ಟೈಮ್". ಪೋಸ್ಟ್‌ಮಾಡರ್ನಿಸಮ್ ಆಂಡ್ ದಿ ರಿ-ರೀಡಿಂಗ್ ಆಫ್ ಮಾಡರ್ನಿಟಿ , ಫ್ರಾನ್ಸಿಸ್ ಬಾರ್ಕರ್, ಪೀಟರ್ ಹಲ್ಮೆ ಮತ್ತು ಮಾರ್ಗರೇಟ್ ಐವರ್ಸನ್ ಮೊದಲಾದವರು ಸಂಪಾದಿಸಿದ್ದಾರೆ. ಎಸ್ಸೆಕ್ಸ್, ಸಿಂಪೋಸಿಯಾ, ಲಿಟರೇಚರ್, ಪಾಲಿಟಿಕ್ಸ್, ಥಿಯರಿ. ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್. ISBN 071903745X.
- ರಾಹೆ, ಪಾಲ್ ಎ. 2006. ಮ್ಯಾಕಿಯಾವೆಲ್ಲಿಸ್ ಲಿಬರಲ್ ರಿಪಬ್ಲಿಕನ್ ಲೆಗೆಸಿ . ಕೇಂಬ್ರಿಡ್ಜ್ ಮತ್ತು ನ್ಯೂಯಾರ್ಕ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್. ISBN 9780521851879.
- ರೋಸನ್, ಸ್ಟ್ಯಾನ್ಲಿ. 1987. "ಬೆನೆಡಿಕ್ಟ್ ಸ್ಪಿನೋಜ". ಹಿಸ್ಟರಿ ಆಫ್ ಪಾಲಿಟಿಕಲ್ ಫಿಲಾಸಫಿ , ಮೂರನೇ ಆವೃತ್ತಿ, ಲಿಯೊ ಸ್ಟ್ರಾಸ್ ಮತ್ತು ಜೋಸೆಫ್ ಕ್ರಾಪ್ಸಿ, 456–475. ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್.
- ರೋಸೆನಾಯ್, ಪಾಲಿನ್ ಮೇರಿ. 1992. ಪೋಸ್ಟ್-ಮಾಡರ್ನಿಸಂ ಆಂಡ್ ದಿ ಸೋಷಿಯಲ್ ಸೈನ್ಸಸ್: ಇನ್‌ಸೈಟ್ಸ್, ಇನ್‌ರೋಡ್ಸ್ ಮತ್ತು ಇನ್‌ಟ್ರೂಷನ್ಸ್ . ಪ್ರಿನ್ಸೆಟನ್, N.J.: ಪ್ರಿನ್ಸೆಟನ್ ಯೂನಿವರ್ಸಿಟಿ ಪ್ರೆಸ್. ISBN 0691086192 (ಕ್ಲಾತ್) ISBN 0691023476 (pbk).
- ರಾಸ್ಸಿಯಾ, ಜೀನ್-ಜ್ಯಾಕ್ವೆಸ್. 1997. ದಿ ಡಿಸ್ಕೋರ್ಸಸ್ ಆಂಡ್ ಅದರ್ ಪಾಲಿಟಿಕಲ್ ರೈಟಿಂಗ್ಸ್ , ವಿಕ್ಟರ್ ಗೋರೆವಿಚ್ ಸಂಪಾದಿಸಿದರು ಮತ್ತು ಅನುವಾದಿಸಿದರು. ಕೇಂಬ್ರಿಡ್ಜ್ ಟೆಕ್ಸ್ಟ್ಸ್ ಇನ್ ದಿ ಹಿಸ್ಟರಿ ಆಫ್ ಪೊಲಿಟಿಕಲ್ ಥಾಟ್. ಕೇಂಬ್ರಿಡ್ಜ್ ಮತ್ತು ನ್ಯೂಯಾರ್ಕ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್. ISBN 0521413818 (ಕ್ಲಾತ್); ISBN 0521424453 (pbk).
- ಸಾಲ್, ಜಾನ್ ರಾಲ್‌ಸ್ಟನ್. 1992. ವೋಲ್ಟೌರ್ಸ್ ಬಾಸ್ಟರ್ಡ್ಸ್: ದಿ ಡಿಕ್ಟಾಟೋರ್ಷಿಪ್ ಆಫ್ ರೀಜನ್ ಇನ್ ದಿ ವೆಸ್ಟ್ . ನ್ಯೂಯಾರ್ಕ್: ಫ್ರೀ ಪ್ರೆಸ್; ಮ್ಯಾಕ್ಸ್‌ವೆಲ್ ಮ್ಯಾಕ್‌ಮಿಲ್ಲನ್ ಇಂಟರ್‌ನ್ಯಾಷನಲ್. ISBN 0029277256
- ಸ್ಮಿತ್, ಟೆರ್ರಿ. “ಮಾಡರ್ನಿಟಿ”. ಗ್ರೂ ಆರ್ಟ್ ಆನ್‌ಲೈನ್. ಆಕ್ಸ್‌ಫರ್ಡ್ ಆರ್ಟ್ ಆನ್‌ಲೈನ್ . (ಚಂದಾದಾರಿಕೆ ಸ್ವೀಕರಿಸಲಾಯಿತು, 2009ರ ಸೆಪ್ಟೆಂಬರ್ 21ರಂದು ಸಂಕಲನಗೊಂಡಿದೆ).
- ಸ್ಟ್ರಾಸ್, ಲಿಯೋ. 1958. ಥಾಟ್ಸ್ ಆನ್ ಮ್ಯಾಕಿಯಾವೆಲ್ಲಿ . ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್. ISBN 0226777022.
- ಸ್ಟ್ರಾಸ್, ಲಿಯೋ. 1987. "ನಿಕೋಲೊ ಮ್ಯಾಕಿಯಾವೆಲ್ಲಿ". ಹಿಸ್ಟರಿ ಆಫ್ ಪೊಲಿಟಿಕಲ್ ಫಿಲಾಸಫಿ , ಮೂರನೇ ಆವೃತ್ತಿ, ಲಿಯೊ ಸ್ಟ್ರಾಸ್ ಮತ್ತು ಜೋಸೆಫ್ ಕ್ರಾಪ್ಸಿ ಸಂಪಾದಿಸಿದ್ದಾರೆ, 296–317. ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್. ISBN 0226777081 (ಕ್ಲಾತ್); ISBN 0226777103 (pbk).
- ಟೌಲ್ಮಿನ್, ಸ್ಟೀಫನ್ ಎಡೆಲ್‌ಸ್ಟನ್. 1990. ಕಾಸ್ಮೊಪೊಲಿಸ್: ದಿ ಹಿಡನ್ ಅಜೆಂಡಾ ಆಫ್ ಮಾಡರ್ನಿಟಿ . ನ್ಯೂಯಾರ್ಕ್: ಫ್ರೀ ಪ್ರೆಸ್. ISBN 0029326311 ಪೇಪರ್‌ಬ್ಯಾಕ್ ರಿಪ್ರಿಂಟ್ 1992, ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್. ISBN 0-226-80838-6
- ವಿಕೊ, ಗಿಯಾಂಬಟ್ಟಿಸ್ಟ. 1984. ದಿ ನ್ಯೂ ಸೈನ್ಸ್ ಆಫ್ ಗಿಯಾಂಬಟ್ಟಿಸ್ಟ ವಿಕೊ: ಅನ್‌ಎಬ್ರಿಡ್ಜ್ಡ್ ಟ್ರಾನ್ಸ್‌ಲೇಶನ್ ಆಫ್ ದಿ ಥರ್ಡ್ ಎಡಿಶನ್ (1744), ವಿದ್ ದಿ ಎಡಿಶನ್ ಆಫ್ ಪ್ರಾಕ್ಟಿಕ್ ಆಫ್ ದಿ ನ್ಯೂಸೈನ್ಸ್ , ಥೋಮಸ್ ಗೊಡ್ಡಾರ್ಡ್ ಬರ್ಗಿನ್ ಮತ್ತು ಮ್ಯಾಕ್ಸ್ ಹ್ಯಾರೋಲ್ಡ್ ಫಿಸ್ಕ್ ಸಂಪಾದಿಸಿದ್ದಾರೆ. ಕಾರ್ನೆಲ್ ಪೇಪರ್‌ಬ್ಯಾಕ್ಸ್. ಇತಾಕ: ಕಾರ್ನೆಲ್ ಯುನಿವರ್ಸಿಟಿ ಪ್ರೆಸ್. ISBN 0801492653 (pbk).
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ಅರೆಂಡ್ಟ್, ಹ್ಯಾನ್ನಾಹ್. 1958. "ದಿ ಒರಿಜಿನ್ಸ್ ಆಫ್ ಟೊಟಲಿಟಾರಿಯನಿಸಮ್" ಕ್ಲೀವ್‌ಲ್ಯಾಂಡ್: ವರ್ಲ್ಡ್ ಪಬ್ಲಿಷಿಂಗ್ ಕಂಪನಿ. ISBN 0805242252
- ಬರ್ಮ್ಯಾನ್, ಮಾರ್ಷಲ್. 1982. 'ಆಲ್ ದ್ಯಾಟ್ ಈಸ್ ಸೋಲಿಡ್ ಮೆಲ್ಟ್ಸ್ ಇನ್ಟು ಏರ್: ದಿ ಎಕ್ಸ್‌ಪೀರಿಯನ್ಸ್ ಆಫ್ ಮಾಡರ್ನಿಟಿ.' ನ್ಯೂಯಾರ್ಕ್: ಸೈಮನ್ ಮತ್ತು ಸ್ಕಸ್ಟರ್. ISBN 067124602X 1988ರಲ್ಲಿ ಮರುಮುದ್ರಿಸಲಾಯಿತು, ನ್ಯೂಯಾರ್ಕ್: ವಿಕಿಂಗ್ ಪೆಂಗ್ವಿ ISBN 0140109625
- ಬುಸಿ-ಗ್ಲುಕ್ಸ್‌ಮನ್, ಕ್ರಿಸ್ಟೈನ್. 1994. ಬಾರೊಕೆ ರೀಸನ್: ದಿ ಆಸ್ಥೆಟಿಕ್ಸ್ ಆಫ್ ಮಾಡರ್ನಿಟಿ . ಥೌಸಂಡ್ ಓಕ್ಸ್, ಕ್ಯಾಲಿಫ್: ಸೇಜ್ ಪಬ್ಲಿಕೇಶನ್ಸ್. ISBN 080398975X (ಕ್ಲಾತ್) ISBN 0803989768 (pbk)
- ಕ್ಯಾರೋಲ್, ಮೈಕೆಲ್ ಥೋಮಸ್. 2000. ಪಾಪ್ಯುಲರ್ ಮಾಡರ್ನಿಟಿ ಇನ್ ಅಮೇರಿಕಾ: ಎಕ್ಸ್‌ಪೀರಿಯನ್ಸ್, ಟೆಕ್ನಾಲಜಿ, ಮೈಥೊಹಿಸ್ಟರಿ . SUNY ಸೀರೀಸ್ ಇನ್ ಪೋಸ್ಟ್‌ಮಾಡರ್ನ್ ಕಲ್ಚರ್. ಆಲ್ಬನಿ: ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಪ್ರೆಸ್. ISBN 0791447138 (hc) ISBN 0791447146 (pbk)
- ಕೋರ್ಚಿಯಾ, ಲ್ಯೂಕಾ. 2008. "ಕಾನ್ಸೆಟೊ ಡಿ ಮಾಡರ್ನಿಟ ಇನ್ ಜುರ್ಗನ್ ಹ್ಯಾಬರ್ಮಾಸ್. Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.ಉನ್ ಇಂಡಿಸ್ ರೇಜಿಯೊನಾಟೊ Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.." ' ದಿ ಲ್ಯಾಬ್ಸ್ ಕ್ವಾರ್ಟರ್ಲಿ/ಟ್ರಿಮೆಸ್ಟ್ರೇಲ್ ಡೆಲ್ ಲ್ಯಾಬೋರೇಟೋರಿಯೊ0} 2:396ff. ISSN 2035-5548.
- ಕ್ರೌಚ್, ಕ್ರಿಸ್ಟೋಫರ್. 2000. "ಮಾಡರ್ನಿಸಮ್ ಇನ್ ಆರ್ಟ್ ಡಿಸೈನ್ ಆಂಡ್ ಆರ್ಕಿಟೆಕ್ಚರ್," ನ್ಯೂಯಾರ್ಕ್: ಸೇಂಟ್ ಮಾರ್ಟಿನ್ಸ್ ಪ್ರೆಸ್. ISBN 0312218303 (ಕ್ಲಾತ್) ISBN 031221832X (pbk)
- ಐಸೆನ್‌ಸ್ಟ್ಯಾಟ್, ಶ್ಮ್ಯುಯೆಲ್ ನೋಹ್. 2003. ಕಂಪೇರೆಟಿವ್ ಸಿವಿಲೈಜೇಶನ್ಸ್ ಆಂಡ್ ಮಲ್ಟಿಪಲ್ ಮಾಡರ್ನಿಟೀಸ್ , 2 ಸಂಪುಟಗಳು. ಲೈಡನ್ ಮತ್ತು ಬೋಸ್ಟನ್: ಬ್ರಿಲ್.
- ಗಯೋಂಕರ್, ದಿಲೀಪ್ ಪರಮೇಶ್ವರ್ (ಸಂಪಾದಕರು). 2001. ಆಲ್ಟರ್ನೇಟಿವ್ ಮಾಡರ್ನಿಟೀಸ್ . ಎ ಮಿಲೆನ್ನಿಯಲ್ ಕ್ವಾರ್ಟೆಟ್ ಬುಕ್. ದುರ್ಹ್ಯಾಮ್: ಡ್ಯೂಕ್ ಯೂನಿವರ್ಸಿಟಿ ಪ್ರೆಸ್. ISBN 0822327031 (ಕ್ಲಾತ್); ISBN 0822327147 (pbk)
- ಗಿಡ್ಡೆನ್ಸ್, ಆಂಥೋನಿ. 1990. ದಿ ಕಾನ್ಸೀಕ್ವೆನ್ಸಸ್ ಆಫ್ ಮಾಡರ್ನಿಟಿ . ಸ್ಟ್ಯಾನ್ಫರ್ಡ್: ಸ್ಟ್ಯಾನ್ಫರ್ಡ್ ಯೂನಿವರ್ಸಿಟಿ ಪ್ರೆಸ್. ISBN 0804717621 (cloth); ISBN 0804718911 (pbk); ಕೇಂಬ್ರಿಡ್ಜ್, UK: ಪಾಲಿಟಿ ಪ್ರೆಸ್ ಇನ್ ಅಸೋಸಿಯೇಶನ್ ವಿದ್ ಬೇಸಿಲ್ ಬ್ಲ್ಯಾಕ್‌ವೆಲ್, ಆಕ್ಸ್‌ಫರ್ಡ್. ISBN 0745607934
- ಜಾರ್ಜೋಂಬೆಕ್, ಮಾರ್ಕ್. 2000. ದಿ ಸೈಕಾಲಜಿಂಗ್ ಆಫ್ ಮಾಡರ್ನಿಟಿ: ಆರ್ಟ್, ಆರ್ಕಿಟೆಕ್ಚರ್, ಹಿಸ್ಟರಿ. ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.
- ಕೋಲಕೋವ್ಸಿ, ಲೆಸ್ಜೆಕ್. 1990. ಮಾಡರ್ನಿಟಿ ಆನ್ ಎಂಡ್ಲೆಸ್ ಟ್ರೈಯಲ್ . ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್. ISBN 0226450457
- ಲಾಟೌರ್, ಬ್ರುನೊ. 1993. ವಿ ಹ್ಯಾವ್ ನೆವರ್ ಬೀನ್ ಮಾಡರ್ನ್ , ಕ್ಯಾಥರಿನ್ ಪಾರ್ಟರ್ ಅನುವಾದಿಸಿದ್ದಾರೆ. ಕೇಂಬ್ರಿಡ್ಜ್, MA: ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್. ISBN 0674948386 (hb) ISBN 0674948394 (pbk.)
- ಪೆರ್ರಿಯು-ಸಾಸ್ಸಿನೆ, ಎಮಿಲಿ. 2005. "ಲೆಸ್ ಲಿಬೆರಾಕ್ಸ್ ಫೇಸ್ ಆಕ್ಸ್ ರೆವಲ್ಯೂಶನ್ಸ್: 1688, 1789, 1917, 1933." ಕಮೆಂಟೈರೆ no. 109 (ಸ್ಪ್ರಿಂಗ್): 181–93. [೧] PDF (457 KB)
ಬಾಹ್ಯ ಕೊಂಡಿಗಳು
ಬದಲಾಯಿಸಿ- ರಿಲೀಜನ್ ಆಂಡ್ ಮಾಡರ್ನಿಟಿ Archived 2012-07-23 ವೇಬ್ಯಾಕ್ ಮೆಷಿನ್ ನಲ್ಲಿ. – ಮಾಡರ್ನ್ ಮ್ಯಾನ್ಸ್ ಎನ್ಕೌಂಟರ್ ವಿದ್ ರಿಲೀಜನ್