ದಂಗೆ
ದಂಗೆ, ಬಂಡಾಯ, ಅಥವಾ ವಿದ್ರೋಹವು ವಿಧೇಯತೆ ಅಥವಾ ಸುವ್ಯವಸ್ಥೆಯ ನಿರಾಕರಣೆ.[೧] ಇದು ಒಂದು ಸ್ಥಾಪಿತ ಪ್ರಾಧಿಕಾರದ ಆದೇಶಗಳ ವಿರುದ್ಧದ ಮುಕ್ತ ಪ್ರತಿರೋಧವನ್ನು ಸೂಚಿಸುತ್ತದೆ.
ದಂಗೆಯು ಒಂದು ಸಂದರ್ಭದ ಬಗ್ಗೆ ಕೋಪ ಮತ್ತು ಅಸಮ್ಮತಿಯ ಭಾವನೆಯಿಂದ ಆರಂಭವಾಗಿ ಈ ಸಂದರ್ಭಕ್ಕೆ ಜವಾಬ್ದಾರವಾಗಿರುವ ಪ್ರಾಧಿಕಾರಕ್ಕೆ ಅಧೀನವಾಗುವ ಅಥವಾ ಅದನ್ನು ಪರಿಪಾಲಿಸುವ ನಿರಾಕರಣೆಯಿಂದ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ದಂಗೆಯು ವೈಯಕ್ತಿಕ ಅಥವಾ ಸಾಮೂಹಿಕವಾಗಿರಬಹುದು, ಶಾಂತಿಯುತ (ಶಾಸನೋಲ್ಲಂಘನೆ, ನಾಗರಿಕ ಪ್ರತಿರೋಧ, ಮತ್ತು ಅಹಿಂಸಾತ್ಮ ಪ್ರತಿರೋಧ) ಅಥವಾ ಹಿಂಸಾತ್ಮಕವಾಗಿರಬಹುದು (ಭಯೋತ್ಪಾದನೆ, ವಿಧ್ವಂಸಕ ಕೃತ್ಯ ಮತ್ತು ಗುಪ್ತ ಕದನ).
ಸಾಮಾನ್ಯವಾಗಿ ದಂಗೆಯು ಒಂದು ದಬ್ಬಾಳಿಕೆಯ ಶಕ್ತಿಯಿಂದ ತಪ್ಪಿಸಿಕೊಳ್ಳಲು ಮತ್ತು/ಅಥವಾ ಅದರಿಂದ ರಿಯಾಯಿತಿಗಳನ್ನು ಪಡೆಯಲು ಪ್ರಯತ್ನಿಸುತ್ತದೆ.
ಉಲ್ಲೇಖಗಳುಸಂಪಾದಿಸಿ
- ↑ Lalor, John Joseph (1884). Cyclopædia of Political Science, Political Economy, and of the Political ... Rand, McNally. p. 632.