ಟ್ರಿನಿಡಾಡ್ ಮತ್ತು ಟೊಬೆಗೊ

(ಟ್ರಿನಿಡಾಡ್ ಮತ್ತು ಟೊಬ್ಯಾಗೊ ಇಂದ ಪುನರ್ನಿರ್ದೇಶಿತ)

ಟ್ರಿನಿಡಾಡ್ ಮತ್ತು ಟೊಬೆಗೋ ದಕ್ಷಿಣ ಕೆರಿಬ್ಬಿಯನ್‍‍ನಲ್ಲಿರುವ ಒಂದು ದ್ವೀಪಸಮೂಹ ರಾಷ್ಟ್ರ. ಇದು ದಕ್ಷಿಣ ಅಮೇರಿಕ ಖಂಡದ ಈಶಾನ್ಯದಲ್ಲಿದೆ. ಒಟ್ಟು ೫,೧೨೮ ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ದ್ವೀಪಸಮೂಹವು ಟ್ರಿನಿಡಾಡ್ ಹಾಗೂ ಟೊಬೆಗೋ ಎಂಬ ಎರಡು ಹಿರಿಯ ದ್ವೀಪಗಳು ಮತ್ತು ಇತರೆ ೨೧ ಕಿರಿಯ ದ್ವೀಪಗಳನ್ನು ಒಳಗೊಂಡಿದೆ.

ಟ್ರಿನಿಡಾಡ್ ಮತ್ತು ಟೊಬೆಗೊ ಗಣರಾಜ್ಯ
Republic of Trinidad and Tobago
ರಿಪಬ್ಲಿಕ್ ಆಫ್ ಟ್ರಿನಿಡಾಡ್ ಅಂಡ್ ಟೊಬೆಗೊ
Flag of ಟ್ರಿನಿಡಾಡ್ ಮತ್ತು ಟೊಬೆಗೊ
Flag
Coat of arms of ಟ್ರಿನಿಡಾಡ್ ಮತ್ತು ಟೊಬೆಗೊ
Coat of arms
Motto: "Together we aspire, together we achieve"
Anthem: Forged From The Love of Liberty
Location of ಟ್ರಿನಿಡಾಡ್ ಮತ್ತು ಟೊಬೆಗೊ
Capitalಪೋರ್ಟ್ ಆಫ್ ಸ್ಪೇನ್
Largest ಅತಿ ದೊಡ್ಡ ನಗರಸಾನ್ ಫೆರ್ನಾಂಡೊ [೧]
Official languagesಆಂಗ್ಲ ಭಾಷೆ
Governmentಗಣರಾಜ್ಯ
• ರಾಷ್ಟ್ರಪತಿ
ಜಾರ್ಜ್ ಮ್ಯಾಕ್ಸ್‍ವೆಲ್ ರಿಚರ್ಡ್ಸ್
• ಪ್ರಧಾನ ಮಂತ್ರಿ
ಪ್ಯಾಟ್ರಿಕ್ ಮ್ಯಾನಿಂಗ್
ಸ್ವಾತಂತ್ರ್ಯ
ಆಗಸ್ಟ್ ೩೧ ೧೯೬೨
• Water (%)
negligible
Population
• ಜುಲೈ ೨೦೦೫ estimate
1,305,000 (152nd)
GDP (PPP)2005 estimate
• Total
$18.352 billion (113th)
• Per capita
$19,700 (46th)
HDI (2004)0.809
very high · 57th
Currencyಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ (TTD)
Time zoneUTC-4
• Summer (DST)
UTCn/a
Calling code1-868
Internet TLD.tt

೭೦೦೦ ಸಾವಿರ ವರ್ಷಗಳ ಹಿಂದೆ ಅಮೆರಿಂಡಿಯನ್ನರು ಇಲ್ಲಿ ವಾಸಿಸತೊಡಗಿದರು. ನಂತರ ೧೪೯೮ರಲ್ಲಿ ಯುರೋಪಿನವರು ಇಲ್ಲಿಗೆ ತಲುಪಿದ ಸಮಯದಲ್ಲಿ ಅರಕವಾನ್ ಮತ್ತು ಕರಿಬಾನ್ ಭಾಷಿಕರು ತಳವೂರಿದ್ದರು. ಗುಲಾಮಗಿರಿ ಮತ್ತು ಜೀತವ್ಯವಸ್ಥೆ ವ್ಯಾಪಕವಾಗಿ ಆಚರಣೆಯಲ್ಲಿದ್ದುದರಿಂದ ಈ ರಾಷ್ಟ್ರವು ಇಂದು ಮಿಶ್ರಜನಾಂಗೀಯ ನಾಡಾಗಿದೆ. ಮುಖ್ಯವಾಗಿ ಯುರೋಪಿನವರು , ಆಫ್ರಿಕಾದವರು , ಚೀನೀಯರು ಹಾಗೂ ಭಾರತೀಯರು ಕಂಡುಬರುತ್ತಾರೆ. ಟ್ರಿನಿಡಾಡ್ ಮತ್ತು ಟೊಬೆಗೋ ೧೯೬೨ರಲ್ಲಿ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆದು ಮುಂದೆ ೧೯೭೬ ರಲ್ಲಿ ಗಣರಾಜ್ಯವಾಯಿತು. ಎರಡು ಸದನಗಳನ್ನು ಹೊಂದಿರುವ ಸಾಂಸದೀಯ ವ್ಯವಸ್ಥೆಯನ್ನು ಈ ರಾಷ್ಟ್ರವು ಅಳವಡಿಸಿಕೊಂಡಿದೆ. ದೇಶದ ಮುಖ್ಯಸ್ಥರು ರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನಿಯು ಸರ್ಕಾರದ ಮುಖ್ಯಸ್ಥರಾಗಿರುವರು.

ನಾಡಿನ ಒಟ್ಟು ಜನಸಂಖ್ಯೆಯ ೩೯% ಮಂದಿ ಆಫ್ರಿಕಾ ಮೂಲದವರು ಮತ್ತು ೪೦% ಭಾರತೀಯ ಮೂಲದವರಾಗಿದ್ದಾರೆ. ಈ ಜನತೆಯ ಪೂರ್ವಿಕರನ್ನು ಇಲ್ಲಿನ ಕಬ್ಬಿನಗದ್ದೆಗಳಲ್ಲಿ ದುಡಿಯಲು ಜೀತದಾಳುಗಳನ್ನಾಗಿ ೧೯ನೇ ಶತಮಾನದಲ್ಲಿ ಆಂಗ್ಲರು ಕರೆದೊಯ್ದಿದ್ದರು. ಪೋರ್ಟ್ ಆಫ್ ಸ್ಪೆಯ್ನ್ ಈ ರಾಷ್ಟ್ರದ ರಾಜಧಾನಿ. ಹಿಂದೂ , ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳು ಇಲ್ಲಿ ಆಚರಣೆಯಲ್ಲಿವೆ. ಹಿಂದಿ ಮತ್ತು ಇಂಗ್ಲಿಷ್(ಅಧಿಕೃತ ಭಾಷೆ) ಇಲ್ಲಿಯ ಪ್ರಮುಖ ಭಾಷೆಗಳು. ರಾಷ್ಟ್ರದ ಒಟ್ಟು ಜನಸಂಖ್ಯೆ ಸುಮಾರು ೧೩ ಲಕ್ಷ.