ಜೋನ್ ಬ್ಯೂಚಾಂಪ್ ಪ್ರಾಕ್ಟರ್
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ಜೋನ್ ಬ್ಯೂಚಾಂಪ್ ಪ್ರಾಕ್ಟರ್ (೫ ಆಗಸ್ಟ್ ೧೮೯೭- ೨೦ ಸೆಪ್ಟೆಂಬರ್ ೧೯೩೧) ಅವರು ಗಮನಾರ್ಹ ಜೀವಶಾಸ್ತ್ರದವರು ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರೀಸೃಪ ವಿಜ್ಞಾನಿ ಎಂದು ಗುರುತ್ತಿಸಬಹುದು. ಇವರು ಆರಂಭದಲ್ಲಿ ಬ್ರಿಟಿಷ್ ಮ್ಯೂಸಿಯಂನಲ್ಲಿ ಕೆಲಸ ಮಾಡುತ್ತಿದರು ಆಮೇಲೆ ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್ ನಲ್ಲಿ ಮೊದಲ ಸ್ತ್ರೀಯಾಗಿ ಸರೀಸೃಪಗಳ ಮೇಲ್ವಿಚಾರಕ ರಾಗಿ ಲಂಡನ್ ಮೃಗಾಲಯ ದಲ್ಲಿ ಕೆಲಸ ಮಾಡಿದರು.ಅವರು ಚಿಕ್ಕ ವಯಸ್ಸಿನಲ್ಲಿಯೇ ಕೆಲವು ರೋಗಗಳಿಂದ ಪೀಡಿತರಾದರು, ಆದರು ಅವರು ವರ್ಗೀಕರಣದ ಕೆಲಸವನ್ನು ಗಣನೀಯತೆಯಿಂದ ಕೈಗೊಂಡರು ಅದರಿಂದ ಅವರು ಮಹತ್ವವದ ಕೊಡುಗೆಯನ್ನು ಪಶು ಅಭ್ಯಾಸ ಮತ್ತು ಮೃಗಾಲಯ ಪ್ರದರ್ಶನದ ಮುಖಾಂತರ ನೀಡಿದರು.ಅವರು ವೈಜ್ಞಾನಿಕ ಮತ್ತು ಜನಪ್ರಿಯ ಝೂಲಾಜಿಕಲ್ ಲೇಖನ ವನ್ನು ಕೂಡ ಬರೆದರು,ಅವರ ಲೇಖನ ಕೊಮೊಡೊ ಡ್ರ್ಯಾಗನ್ ಬಂಧಿತ ವರ್ತನೆಯ ಬಗೆ ಕೂಡ ಸೇರಿದೆ.
ಜೋನ್ ಬ್ಯೂಚಾಂಪ್ ಪ್ರಾಕ್ಟರ್ | |
---|---|
ರಾಷ್ಟ್ರೀಯತೆ | ಲಂಡನ್, ಯು.ಕೆ |
ಪ್ರಮುಖ ಪ್ರಶಸ್ತಿ(ಗಳು) | ಡಾಕ್ಟರೇಟ್ ಆಫ್ ಸೈನ್ಸ್ ಪ್ರಶಸ್ತಿ |
ಪ್ರಭಾವಗಳು
|
ಜೀವನ
ಬದಲಾಯಿಸಿಜೋನ್ ಬ್ಯೂಚಾಂಪ್ ಪ್ರಾಕ್ಟರ್ ೫ ಆಗಸ್ಟ್ ೧೮೯೭,ಲಂಡನ್ ನಲ್ಲಿ ಜನಿಸಿದರು. ಅವರ ತಂದೆ ಜೋಸೆಫ್ ಪ್ರಾಕ್ಟರ್ ಒಬ್ಬ ಶೇರು ದಲ್ಲಾಳಿ, ತಾಯಿ ಎಲಿಜಬೆತ್ ಪ್ರಾಕ್ಟರ್ ಕಲಾವಿದರು. ಅವರ ಕುಟುಂಬ ಕಲೆ ಮತ್ತು ವಿಜ್ಞಾನಕ್ಕೆ ಆಸಕ್ತಿ ನೀಡಿದರು ಇದ್ದರಿಂದ ಜೋನ್ ಮತ್ತು ಅವರ ಹಿರಿಯ ಅಕ್ಕ ಕ್ರಿಸ್ಟೇಬೆಲ್ ಪ್ರಾಕ್ಟರ್ ಪ್ರಭಾವಿತರಾದರು. ಜೋನ್ ಉಭಯಚರಗಳು ಮತ್ತು ಸರೀಸೃಪದ ಬಗ್ಗೆ ಬಹಳ ಆಸಕ್ತಿ ತೋರಿಸಿದರು.ಅವರು ೧೦ ವಯಸ್ಸಿನಲ್ಲಿಯೇ ಹಲ್ಲಿ ಮತ್ತು ಹಾವು ಮನೆಯಲ್ಲಿ ಸಾಕ್ಕಿದರು. ಇವರಿಗೆ ಎಲ್ಲಾ ಸರೀಸೃಪ ಬ್ರಿಟಿಷ್ ಜಾತಿಗಳ ಅರಿವಿತ್ತು. ಒಂದು ದೊಡ್ಡ ಡಾಲ್ಮೇಷಿಯನ್ ಹಲ್ಲಿ ಅವರ ವಿಶೇಷ ಸಾಕು, ಪ್ರವಾಸ ಮಾಡುವ ಸಮಯದಲ್ಲಿ, ಊಟ ಮಾಡುವ ಸಮಯದಲ್ಲಿ ಅವರ ಜೊತೆ ಇರುತ್ತಿತ್ತು. ಅವರು ರೋಗಿಷ್ಠ ಮಗು ಆದರೆ ಹನ್ನೆರಡು ವಯಸ್ಸಿನಲ್ಲಿ ಚುರುಕಾದ ಸಮಯವನ್ನು ಸ್ವಿಟ್ಜರ್ಲ್ಯಾಂಡ್ ನಲ್ಲಿ ನೃತ್ಯ, ಜಾರುವಾಟ, ಸಸ್ಯ ಶಾಸ್ತ್ರದಲ್ಲಿ ಕಳೆಯುತ್ತಿದರು. ಅವರ ಹಾಮರ್ಸ್ತಿತ್, ಸೆಂಟ್ ಪೌಲ್ ಸ್ಕೂಲ್ ನಲ್ಲಿ (೧೯೦೮-೧೯೧೬) ಓದುವಾಗ ಸರೀಸೃಪದಲ್ಲಿ ಬಹಳ ಆಕರ್ಷಣೆ ಕೊಂಡರು. ಹದಿನಾರು ವಯಸ್ಸಿನಲ್ಲಿ ಮೊಸಳೆಯನ್ನು ಸಾಕಿದರು, ಅದನ್ನು ಸ್ಕೂಲ್ ಗೆ ತೆಗೆದುಕೊಂಡು ಹೋಗುತ್ತಿದರು [೧] . ಅವರು ಪ್ರತಿಭಾವಂತ ವಿದ್ಯಾರ್ಥಿ ಆಗಿದರು ಆದರೆ ಅವರ ಶಿಕ್ಷಣ ಅವರ ರೋಗದಿಂದ ಆಗಾಗ ಅಡಚಣೆ ಆಗುತ್ತಿತ್ತು.
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ | |
---|---|
ಬ್ರಿಟಿಷ್ ಮ್ಯೂಸಿಯಂ (ನೈಸರ್ಗಿಕ ಇತಿಹಾಸ)
ಬದಲಾಯಿಸಿಜೋನ್ ಅವರು ಸರೀಸೃಪದ ಬಗೆ ಆಸಕ್ತಿ ಕಂಡು ಜಾರ್ಜ್ ಆಲ್ಬರ್ಟ್ ಬೊಲೆನ್ಜರ್ ನವರ ಗಮನ ಸೆಳೆಯಿತ್ತು. ಜೋನ್ ನವರ ಆಸಕ್ತಿ ಹೆಚ್ಚಿಸಲು ಇವರು ಪ್ರೋತ್ಸಾಹ ನೀಡಿದರು. ಜೋನ್ ಶಾಲೆಯನ್ನು ಬಿಟ್ಟ ಮೇಲೆ ಜಾರ್ಜ್ ಅವರ ದಿಕ್ಕಿನಲ್ಲಿ ಕೆಲಸ ಮಾಡಲು ಹೇಳಿದರು ಮತ್ತು ೧೯೧೬ರಲ್ಲಿ ಜೋನ್ ಜಾರ್ಜ್ ನವರ ಸಹಾಯಕಿಯಾಗಿ ಸೌತ್ ಕೆನ್ಸ್ಂಗ್ಟನ್ ಮ್ಯೂಸಿಯಂ ನಲ್ಲಿ ಸ್ವಯಂಪ್ರೇರಿತ ಸಾಮರ್ಥ್ಯದ ಕೆಲಸ ಮಾಡಿದರು. ವಿಶ್ವವಿದ್ಯಾಲಯದ ಅರ್ಹತೆ ಇಲ್ಲದಿದರು ಅವರಿಗೆ ಶೈಕ್ಷಣಿಕ ಪ್ರಾಣಿಶಾಸ್ತ್ರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿತ್ತು. ಹತ್ತೊಂಬತ್ತು ವಯಸ್ಸಿನಲ್ಲಿ ಮೊದಲ ಸಲ ವೈಜ್ಞಾನಿಕ ಪ್ರಬಂಧವನ್ನು ಕೇಂದ್ರ ಮತ್ತು ದಕ್ಷಿಣ ಅಮೇರಿಕ ದ ಜಾತಿಯ ಪಿಟ್ ವೈಪರ್ ನ ಬದಲಾವಣೆಯ ಬಗೆ ಝೂಲಾಜಿಕಲ್ ಸೊಸೈಟಿ ಲಂಡನ್(ಝೂ.ಎಸ್.ಎಲ್) ನಲ್ಲಿ ಪ್ರಕಟಿಸಿದರು [೨] . ಆಗಸ್ಟ ೧೯೧೭ರಲ್ಲಿ ಝೂಲಾಜಿಕಲ್ ಸೊಸೈಟಿ ಸಂಗಾತಿಯಾಗಿ ನೇಮಿಸಿದರು. ೧೯೨೦ರಲ್ಲಿ ಜಾರ್ಜ್ ನಿವೃತ್ತಿಯಾದ ಮೇಲೆ ಜೋನ್ ಮ್ಯೂಸಿಯಂದ ಸರೀಸೃಪ ಮೇಲೆ ಏಕೈಕ ಚಾರ್ಜ್ ತೆಗೆದುಕೊಂಡರು ಅವರಿಗೆ ಸ್ವಲ್ಪ ಸಂಬಳ ಸಿಗುತ್ತಿತ್ತು. ಅವರು ೧೯೧೭ ಮತ್ತು ೧೯೨೩ರ ನಡುವೆ ಸಂಶೋಧನೆಯನ್ನು ನಡೆಸಿದರು ಮತ್ತು ಸರಣಿಯಾಗಿ ವೈಜ್ಞಾನಿಕದ ಪ್ರಬಂಧ ಸರೀಸೃಪ ಮತ್ತು ಉಭಯಚರಗಳ ದೇಹರಚನೆ, ವರ್ಗೀಕರಣ ಮತ್ತು ಆಹಾರದ ಬಗೆ ಬರೆದಿದಾರೆ. ಅವರ ಗಮನಾರ್ಹ ವ್ಯಾಸಂಗ ಎಂದರೆ ಪೂರ್ವ ಆಫ್ರಿಕದ ಆಮೆ ಇದನ್ನು ಮಲಾಕೊಚೆರ್ಸಸ್ ಟೊರ್ನಿಯನ್ ಎಂದು ಕರೆಯುತ್ತಾರೆ, ಇದಕ್ಕೆ ಹೊಂದಿಕೊಳ್ಳುವ ಚಿಪ್ಪು ರಾಕ್ ಬಿರುಕುಗಳಲ್ಲಿ ಸ್ವತಃವಾಗಿ ಅಡಗಿಸಿಕೊಳ್ಳುವ ಸಾಧ್ಯತೆಯಿದೆ. ಅವರು ವ್ಯಾಪಕವಾಗಿ ಪ್ರಪಂಚದ ಎಲ್ಲಾ ವಿಜ್ಲೀನಿಯನ್ಞಾನಿ ಜೊತೆ ಖ್ಯಾತಿ ಸ್ಥಾಪಿಸುವ ಮೂಲಕ ಅವರು ಔಪಚಾರಿಕವಾಗಿ ಇತರರು ಸಂಗ್ರಹಿಸಿದ ಎಲ್ಲಾ ಪ್ರಾಣಿಗಳ ಬಗೆ ವಿವರಿಸಿದ್ದಾರೆ. ವರ್ಗಿಕರಣದ ಕೆಲಸ ಉತ್ತಮ ಗುಣಮಟ್ಟದಿಂದ ಜೋನ್ ನನ್ನು ಫೆಲ್ಲೊ ಆಫ್ ಲೀನಿಯನ್ ಸೊಸೈಟಿ ಲಂಡನ್ (ಎಫ್.ಎಲ್.ಎಸ್) ನಲ್ಲಿ ಆರಿಸಿದರು[೩] . ಇವರು ಮುಂಬಯಿ, ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯರಾದರು. ಅವರು ಸಾಧಿಸುವ ಮಾದರಿಯಾಗಿದರು. ಅವರು ಮ್ಯೂಸಿಯಂನಲ್ಲಿ ತಮ್ಮ ಕಲ್ಲೆಯನ್ನು ವೈಜ್ಞಾನಿಕ ನಿಖರತೆಗೆ ಹೋಲಿಸಿ ಸರೀಸೃಪದ ಮತ್ತು ಉಭಯಚರಗಳ ಚಿತ್ರಕಲೆಯನ್ನು ಬಣ್ಣದ ಪೋಸ್ಟ್ ಕಾರ್ಡ್ ಸರಣಿಯಾಗಿ ನಕಲು ಮಾಡಿದರು.
ಝೂಲಾಜಿಕಲ್ ಸೊಸೈಟಿ ಲಂಡನ್
ಬದಲಾಯಿಸಿಜಾರ್ಜ್ ಬೊಲೆನ್ಜರ್ ನ ಮಗ ಎಡ್ವರ್ಡ್. ಜಿ. ಬೊಲೆನ್ಜರ್ ಅವರು ೧೯೧೧ರಲ್ಲಿ ಸರೀಸೃಪದ ಮೇಲ್ವಿಚಾರಕರ ಸೊಸೈಟಿಯಲ್ಲಿ ಇದರು. ಜೋನ್ ಮತ್ತು ಎಡ್ವರ್ಡ್ ಸ್ನೇಹದ ಫಲವಾಗಿ ಜೋನ್ ರ ಕಲಾತ್ಮಕ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಝೂಲಾಜಿ ಸೊಸೈಟಿಯಲ್ಲಿ ನೋಡಬಹುದು. ೧೯೨೩ ಶೀಘ್ರದಲ್ಲಿ ಬ್ರಿಟಿಷ್ ಮ್ಯೂಸಿಯಂನಲ್ಲಿ ಕೆಲಸ ಮಾಡುತ್ತಿದರು ಅವರಿಗೆ ಲಂಡನ್ ಮೃಗಾಲಯದ ಅಕ್ವೇರಿಯಂನನ್ನು ಅಭಿವೃದ್ದಿ ಮಾಡುವ ಜವಾಬ್ದಾರಿಯಿತ್ತು. ಪ್ರಾಕ್ಟರ್ ಹಲವಾರು ತಿಂಗಳು ಅವರಿಗೆ ಹೊಸ ಅಕ್ವೇರಿಯಂ ಟ್ಯಾಂಕ್ ಗೆ ಪ್ರಮಾಣದ ಮಾದರಿ ಮಾಡುವ ಸಹಾಯವನ್ನು ಮಾಡಿದರು. ಅವರ ಕಲಾ ವಿನ್ಯಾಸವನ್ನು ಅಕ್ವೇರಿಯಂನ ಕಲ್ಲಿಗೆ ಮತ್ತು ಅದರ ಹಿನ್ನೆಲೆಗೆ ಅನ್ವಯಿಸುತ್ತಿದರು. ಜೋನ್ ಕಾಂಪ್ಟನ್ ಮೆಕೆಂಜೀಯನ್ನು ನೋಡಿದಾಗ ಅವರು ದೊಡ್ಡ ಪ್ರಮಾಣದಲ್ಲಿ ಶೆಲ್ ಮರಳನ್ನು ಅಕ್ವೇರಿಯಂಗೆ ಚಾನಲ್ ಐಲ್ಯಾಂಡ್ ಹರ್ಮ್ ದಿಂದ ತರಿಸಿದರು. ಆ ವರ್ಷದಲ್ಲೇ ಎಡ್ವರ್ಡ್ ನನ್ನು ಅಕ್ವೇರಿಯಂನ ಮುಖ್ಯಸ್ಥರನ್ನಾಗಿ ಮತ್ತು ಪ್ರಾಕ್ಟರ್ ರನ್ನು ಸರೀಸೃಪದ ಮೇಲ್ವಿಚಾರಕದ ಉತ್ತರಾಧಿಕಾರಿಯಾಗಿ ನೇಮಿಸಿದರು. ಕಾರ್ಲ್ ಪ್ಯಾಟರ್ಸನ್ ಸ್ಮಿತ್, ಚಿಕಾಗೊ ಅವರ ಹೊಂದಿಕೆಯಿಂದ ಪ್ರಾಕ್ಟರ್ ತೃಪ್ತಿಯಿಂದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನನ್ನು ಬಿಟ್ಟು ಹೋಗಬೇಕೆಂದು ಹೇಳಿದರು ಏಕೆಂದರೆ ಆ ಸ್ಥಳ ಮಹಿಳೆಯರಿಗೆ ಅನುಕೂಲಮನೋಭಾವವಿಲ್ಲದ ಸ್ಥಳವಾಗಿತ್ತು.
ವಿನ್ಯಾಸದ ಕೆಲಸ ಲಂಡನ್
ಬದಲಾಯಿಸಿಜೋನ್ ಅಕ್ವೇರಿಯಂ ಕೆಲಸದಲ್ಲಿ ಯಶಸ್ಸು ಆದ ಮೇಲೆ ಅವರು ಮೃಗಾಲಯದ ಹೊರಾಂಗಣ ಪ್ರದೇಶದಲ್ಲಿ ಕಲ್ಲಿನ ವಿನ್ಯಾಸವನ್ನು ಮಾಡಿದರು ಇದರಲ್ಲಿ ಹುಲ್ಲೆ ಬೇಲಿ ಕೂಡ ಸೇರಿದೆ. ಅವರು ಮಂಕೀ ಹಿಲ್ ಗೆ ವ್ಯಾಪಕ ರಾಕ್ ರಚನೆಯ ಮಾದರಿಯನ್ನು (೧೯೨೪-೧೯೨೫)ದಲ್ಲಿ ಪ್ರಾಣಿಗಳ ಆಸ್ಪತ್ರೆಯ ಸೈಟ್ ನಲ್ಲಿ ಕಟ್ಟಿದರು. ಅವರು ದೊಡ್ಡ ಪಡೆಗಳಾದ ಹಮರ್ಡಯಾಸ್ ಬಾಬೂನ್ಸ್ ನನ್ನು ಸ್ಥಾಪಿಸಿದರು. ಇಡೀ ಜೀವನದಲ್ಲಿ ಇದು ಜೋನ್ ಅವರ ಮುಖ್ಯ ಅಥವಾ ದೊಡ್ಡ ಸಾಧನೆಯಾಗಿತ್ತು. ಸರೀಸೃಪ ಮನೆಯ ವಿನ್ಯಾಸದ ಕೆಲಸದಲ್ಲಿ ಅವರಿಗೆ ಶಾಶ್ವತವಾದ ಯಶಸ್ಸು ಸಿಕ್ಕಿತ್ತು, ಇದನ್ನು (೧೯೨೬-೧೯೨೭)ರಲ್ಲಿ ಕಟ್ಟಿದರು ಇದು ಈಗ ಕೂಡ ಉಪಯೊಗದಲ್ಲಿಯಿದೆ. ಇವರು ಸರೀಸೃಪದ ಕೆರೆ ಮತ್ತು ರಾಕ್- ಕೆಲಸ ಮಾಡಿದರು. ಆದರೆ ಹೊರಗಿನ ಇಟಾಲಿಕ್ ವೈಶಿಷ್ಟ್ಯಗಳು ವಾಸ್ತುಶಿಲ್ಪಿ ಎಡ್ವರ್ಡ್ಗೆ ಸೇರಬೇಕಾಗಿತ್ತು, ಆದರೆ ಮೂಲ ರಚನೆ, ನೆಲದ ಉಪಾಯ, ಸರೀಸೃಪ ಮನೆಯ ವಿವರ ಜೋನ್ ಅವರು ಮಾಡಿದರು. ಪೀಟರ್ ಚಾಲ್ಮರ್ ಮಿಚೆಲ್ ಝೂಲಾಜಿಕಲ್ ಸೊಸೈಟಿಯ ಅಧಿಕಾರಿಯಾಗಿದರು ಇವರು ಆರಂಭದಿಂದ ಕೊನೆಯವರೆಗೆ ಜೋನ್ ಅವರ ಮನೆ ಯೆಂದು ದಾಖಲೆ ಮಾಡಿದ್ದಾರೆ. ಪ್ರಾಕ್ಟರ್ ಅವರ ಹೊಸ ತಾಂತ್ರಿಕ ವಿಚಾರಗಳನ್ನು ಅಳವಡಿಸಿದ್ದಾರೆ. ಜೀವನ ಗಾಜಿನ ಉಪಯೋಗದ ಬಗೆ ಪ್ರವರ್ತಕವಾಯಿತ್ತು, ಸರೀಸೃಪಗೆ ಮತ್ತು ಬೇರೆ ಪ್ರಾಣಿಗಳಿಗೆ ಅಗತ್ಯವಿರುವ ಸಂಶ್ಲೇಷಿಸುವ ವಿಟಮಿನ್- ಡಿ, ನೈಸರ್ಗಿಕ ಅತಿನೇರಳೆ ವಿಕಿರಣಗಳು (ಯು.ವಿ ಕಿರಣ) ಮಾತ್ರ ಮುಂದೆ ಸಾಗಲು ಅನುಮತಿಸುತ್ತದೆ.
ಕೊಮೊಡೊ ಡ್ರ್ಯಾಗನ್ | |
---|---|
ಅಪಾಯಕಾರಿ ಪ್ರಾಣಿಗಳ ನಿರ್ವಹಣೆ
ಬದಲಾಯಿಸಿಜೋನ್ ಅವರು ದೊಡ್ಡ ಹೆಬ್ಬಾವು ಗಳು, ಮೊಸಳೆಗಳು, ಕೊಮೊಡೊ ಡ್ರ್ಯಾಗನ್ ಗಳನ್ನು ನಿರ್ವಹಣೆ ಮಾಡುವರಲ್ಲಿ ನಿಪುಣರಾದರು. ಜೋನ್ ಅವರು ಮೊದಲು ಯುರೋಪ್ ಗೆ ಬಂದ ಎರಡು ಕೊಮೊಡೊ ಡ್ರ್ಯಾಗನ್ ಗಳನ್ನು ಸರೀಸೃಪ ಗೃಹದ ಲಂಡನ್ ಮೃಗಾಲಯದಲ್ಲಿ ಪ್ರದೇಶಿಸಿದರು [೪] . ಅವರು ಪ್ರಾಣಿಗಳ ಜೊತೆ ಅಸಾಮಾನ್ಯ ಬಾಂಧವ್ಯವನ್ನು ಹೊಂದಿದರು. ಒಂದು ವಿಷೆಯ ಅವರಿಗೆ ಚೆನ್ನಾಗಿ ತಿಳಿದಿತ್ತು ನಿಸ್ಸಂದೇಹವಾಗಿ ಅವರು ಬಯಸಿದರೆ ಮಾತ್ರ ಕೊಲ್ಲುತ್ತದೆ ಅಥವಾ ಕಚ್ಚುತ್ತದೆ , ಆದರೆ ಒಳ್ಳಯ ರಕ್ಷಣೆ, ಆಹಾರ ಮತ್ತು ದಿನನಿತ್ಯ ನಿರ್ವಹಣೆ ಇದರ ಪರಿಣಾಮ ಡ್ರ್ಯಾಗನ್ ಬಳಿ ಕಾಣಬಹುದು, ಸಾಧುವಾದ ನಾಯಿಗೂ ಸಹ ಪ್ರೀತಿ ತೋರಿಸಬೇಕು. ಒಂದು ಡ್ರಾಗನ್ ಹೆಸರು ಸಂಬವ ಜೋನ್ ಅವರ ಜೊತೆ ಮೃಗಾಲಯದಲ್ಲಿ ನಡೆಯುತ್ತಿತ್ತು ಕೆಲವು ಸಲ ಜೋನ್ ಅವರು ಡ್ರ್ಯಾಗನ್ ಬಾಲಯಿಡಿದು ಮುನ್ನಡೆಸಿದ್ದಾರೆ. ಇವರು ೧೯೨೮ರಲ್ಲಿ ಈ ಡ್ರ್ಯಾಗನ್ ನನ್ನು ಝೂಲಾಜಿಕಲ್ ಸೊಸೈಟಿ ವೈಜ್ಞಾನಿಕ ಸಭೆಯಲ್ಲಿ ಪ್ರದರ್ಶಿಸಿದರು. ಅವರು ಝೂಲಾಜಿಕಲ್ ಪ್ರಾಣಿಗಳ ರೋಗದ ಸಭೆ ಯಲ್ಲಿ ಪ್ರಾಣಿಗಳ ರೋಗದ ಬಗ್ಗೆ ಹೆಚ್ಚು ತಿಳಿದು ಅದನ್ನು ಸರಿಪಡಿಸುವ ಕಾರಣದಿಂದ ಬಹಳ ಕಷ್ಟ ಪಟ್ಟು ಮಾಡುತ್ತಿದರು. ರೋಗಪೀಡಿತ ಪ್ರಾಣಿಗಳನ್ನು ಚಿಕಿತ್ಸೆ ಮಾಡುವ ತಜ್ಞರು ಆದರು ಸಹ ಕೊಮೊಡೊ ಡ್ರ್ಯಾಗನ್ ನ - ಬಾಯಿ ತೆಗೆಯಲು ಮೂರು ಬಲವಾದ ಜನರ ಸಹಾಯಬೇಕಿತ್ತು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯದ ಮಾನ್ಯತೆ
ಬದಲಾಯಿಸಿಸರೀಸೃಪದ ಮೇಲ್ವಿಚಾರಕರಾಗುವ ಮೊದಲು ಅವರು ಮೊದಲ ಸ್ತ್ರೀಯಾಗಿ ಲಂಡನ್ ಮೃಗಾಲಯದಲ್ಲಿ ಕೆಲಸ ಮಾಡಿದರು ಅವರು ಚಿಕ್ಕ ಸಮಯದಲ್ಲಿ ತುಂಬ ಸಾಧನೆ ಮಾಡಿದ್ದಾರೆ. ಅವರು ಮನೆಯ ಸೆಂಟ್. ಮಾರ್ಕ್ ಚೌಕೋನದ ಮೃಗಾಲಯದ ಬಳಿ ಒಂದು ಚಿಂಪಾಂಜಿಯನ್ನು ಸಾಕುತ್ತಿದರು, ಅದರ ಹೆಸರು ಜಾನಿ. ಅವರು ಡ್ರಾಯಿಂಗ್ ಕೋಣೆಯಲ್ಲಿ ಬದುಕಿರುವ ಸರೀಸೃಪವನ್ನು ಮತ್ತು ಅಪಾಯಕರವಾದ ಹಾವನ್ನು ಗಾಜಿನ ಆವರಣದಲ್ಲಿ ಇಟ್ಟಿದರು. ಜೋನ್ ವೈಜ್ಞಾನಿಕ ಪುಸ್ತಕಗಳು ಮತ್ತು ಪತ್ರಿಕೆಗಳು ವ್ಯಾಪಕವಾಗಿ ಪ್ರಕಟಿಸಿದರು. ಜೆ. ಎ. ಹಮರ್ಟಾನ್ಸ್ ವಂಡರ್ ಆಫ್ ಆನಿಮಲ್ ಲೈಫ್ ಇವರ ಜನಪ್ರಿಯ ಖಾತೆ. ಅವರ ಪ್ರಕಟಣೆ ಮತ್ತು ಇತರರ ವಿಜ್ಞಾನಿಯ ಜೊತೆ ಹೊಂದಿಕ್ಕೆಯ ಮೂಲಕ ಜೋನ್ ಸರೀಸೃಪ ವಿಜ್ಞಾನಿಯಾಗಿ ಅಂತಾರಾಷ್ಟ್ರೀಯ ದಲ್ಲಿ ಗುರುತಿಸಿದರು ಮತ್ತು ಮಾರ್ಚ್ ೨೮, ೧೯೩೧ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ, ಡಾಕ್ಟರ್ ಆಫ್ ಸೈನ್ಸ್ (ಡಿ. ಎಸ್. ಸಿ) ಪ್ರಶಸ್ತಿ ಚಿಕಾಗೊ ವಿಶ್ವವಿದ್ಯಾಲಯದಿಂದ ದೊರಕಿತ್ತು.
ಅನಾರೋಗ್ಯ ಮತ್ತು ಅಕಾಲ ಮರಣ
ಬದಲಾಯಿಸಿಅವರ ರೋಗದಿಂದ ಅವರು ಹಲವಾರು ಶಸ್ತ್ರಚಿಕಿತ್ಸೆಯನ್ನು ಕೈಗೊಂಡರು. ಅವರು ದೊಡ್ಡ ಸಮಾಪ್ತಿ ಮತ್ತು ಉತ್ತಮ ಹಾಸ್ಯಕಾರರು, ಆದರೆ ಅವರು ಮಾಡಿದ ಸಾಧನೆ ಅವರ ರೋಗಕ್ಕಿಂತ ಹೆಚ್ಚು. ೧೯೨೮ರಲ್ಲಿ, ಐದು ವರ್ಷ ಕಾಲ ಲಂಡನ್ ಮೃಗಾಲಯದಲ್ಲಿ ಕೆಲಸ ಮಾಡಿದ ಮೇಲೆ ಅವರ ಅನಾರೋಗ್ಯದ ಕಾರಣದಿಂದ ಕೆಲಸವನ್ನು ರಾಜೀನಾಮೆ ನೀಡಲು ಬಯಸಿದರು ಆದರೆ ಹಾಗ ಝೂಲಾಜಿಕಲ್ ಸೊಸೈಟಿಯ ಅಧ್ಯಕ್ಷರಾದ ಹರ್ಬಾಂಡ್ ರಸ್ಸೆಲ್ ೧೧ನೇ ಡ್ಯೂಕ್ ಆಫ್ ಬೆಡ್ಫೊರ್ಡ್ ಅವರ ರಾಜೀನಾಮೆಯನ್ನು ನಿರಾಕರಿಸಿದರು. ೧೯೨೮ರಲ್ಲಿ ಪೀಟರ್ ಚಾಲ್ಮರ ಮಿಚೆಲ್ ಜೋನ್ ಅವರನ್ನು ಹೊಸ ಝೂಲಾಜಿಕಲ್ ಪಾರ್ಕ್ ಮಾಡುವ ಯೋಚನೆಯಲ್ಲಿ ತೊಡಗಿಸಿದರು ಅದು ವಿಪ್-ಸ್ನೇಡ್ ನಲ್ಲಿ ಅಭಿವೃದ್ಧಿಯಾಗಿತ್ತು, ಇದರಿಂದ ಪೀಟರ್, ಜೋನ್ ಅವರನ್ನು ಹಾಲ್ ಕೃಷಿಯಲ್ಲಿ ಉಳಿಯಲು ಹೇಳಿದರು. ಮುಂಜಾನೆ ಸಮಯದಲ್ಲಿ ಕತ್ತೆ ಅಥವಾ ಕುದುರೆ ಮೇಲೆ ಕುಳಿತ್ತು ಸವಾರಿಯನ್ನು ಹಾಲ್ ಕೃಷಿಯಿಂದ ಬೀಳುಗಳ ಅಂಚಿಯವರೆಗೆ ಮಾಡುತ್ತಿದರು. ಜೋನ್ ಅವರ ನೆನಪಿಗಾಗಿ ಅವರು ಸವಾರಿ ಮಾಡಿದ ವಿಪ್-ಸ್ನೇಡ್ ಮೃಗಾಲಯ ವನ್ನು ಈಗ ಮಿಸ್ ಜೋನ್ ಸವಾರಿ ಎಂಬ ಹೆಸರು ಬಂದಿದೆ. ಕೊನೆಯ ಕಾಲವರೆಗೆ ಜೋನ್ ದೊಡ್ಡ ಪ್ರಾಣಿಗಳ ಜೊತೆ ಹೊಂದಿಕೊಂಡರು. ಕಂದು ಬಣ್ಣದ ಕರಡಿಯನ್ನು ಪ್ರತಿಭಟಿಸಿದ ಮೇಲೆ ಜೋನ್ ಅವರು ತನ್ನ ಪೂರ್ತಿ ಜೀವನ ವಿದ್ಯುತ್ ಗಾಲಿಕುರ್ಚಿಯಲ್ಲಿ ಲಂಡನ್ ಮೃಗಾಲಯವನ್ನು ಸುತ್ತುತ್ತಿದರು ಆದರು ಅನಾರೋಗಿಯಾದರು ಅವರು ಸಾಂದರ್ಭಿಕವಾಗಿ ಕೆಲಸ ಮುಂದುವರಿಸಿದರು, ನೀರಿನ ಬಣ್ಣಗಳಲ್ಲಿ ಚಿತ್ರಕಲೆ ಮಾಡುತ್ತಿದರು, ಮ್ಯಾಂಚೆಸ್ಟರ್ ಗಾರ್ಡಿಯನ್ ಬಗ್ಗೆ ಪ್ರಬಂಧ ಬರೆಯಲು ಯೋಚನೆ ಮಾಡಿದರು. ೨೦ನೇ ಸೆಪ್ಟೆಂಬರ್,೧೯೩೧ ಮೂವತ್ತು ವಯಸ್ಸಿನಲ್ಲಿ ಜೋನ್ ಅವರ ಮನೆಯ ಸೆಂಟ್.ಮಾರ್ಕ್ ಗೃಹ, ಸೆಂಟ್.ಮಾರ್ಕ್ ಚೌಕ ಲಂಡನ್ ನಲ್ಲಿ ಕ್ಯಾನ್ಸರ್ ರೋಗದಿಂದ ಮರಣಗೊಂಡರು.
ಸ್ಮರಣೆ
ಬದಲಾಯಿಸಿಜಾರ್ಜ್ ಅಲೆಕ್ಸಾಂಡರ್ ಸರೀಸೃಪವನ್ನು ಕಲ್ಲಿನಲ್ಲಿ ಕೆತ್ತಿದ್ದಾರೆ ಅದನ್ನು ಸರೀಸೃಪದ ಮನೆಯ ಸುತ್ತಮುತ್ತಿನ ಪ್ರವೇಶದಲ್ಲಿ ಇಟ್ಟರು ಆಮೇಲೆ ಜೋನ್ ಅವರ ಶಿಲ್ಪಿಯನ್ನು ಅಮೃತಶಿಲೆಯಿಂದ ಮಾಡಿದರು ಇದನ್ನು ೧೯೩೧ರಂದು ಕಲೆ ರಾಯಲ್ ಅಕಾಡೆಮಿ, ಲಂಡನ್ ನಲ್ಲಿ ಪ್ರದರ್ಶಿಸಿದರು. ಅಲೆಕ್ಸಾಂಡರ್ ಸರೀಸೃಪವನ್ನು ಕೆತ್ತಿ ಹೇಳಿದರು - "" ತೃಪ್ತಿಯಾದ ಪ್ರಾಕ್ಟರ್ ಅವರ ಸೂಕ್ಷ್ಮ ಬಯಕೆ ವೈಜ್ಞಾನಿಕ ನಿಖರತೆ ಜೊತೆ ಕಲೆಗಾರಿಕೆಯ ಸೌಂದರ್ಯ ವನ್ನು ಕುರಿತು ಕೂಡ ಅವರನ್ನು ತನ್ನ ಅತ್ಯುತ್ತಮ ಪ್ರತಿರೂಪ ಯೆಂದು ವಿವರಿಸಬಹುದು.
೨೦೧೪ ಅಂತಾರಾಷ್ಟ್ರೀಯ ಮಹಿಳೆಯರ ದಿನದೆಂದು ಝೂಲಾಜಿಕಲ್ ಸೊಸೈಟಿ ಲಂಡನ್ ಜೋನ್ ಅವರ ಸಾಧನೆಯನ್ನು ಅವರ ಚಿತ್ರ ಮತ್ತು ಕೊಮೊಡೊ ಡ್ರ್ಯಾಗನ್ ಚಿತ್ರವನ್ನು ವೆಬ್ಸೈಟ್ ನಲ್ಲಿ ಪ್ರಕಟಿಸುವ ಮುಖಾಂತರ ಕೊಂಡಾಡಿದರು [೫].
ಹೊರಗಿನ ಸಂಪರ್ಕಗಳು
ಬದಲಾಯಿಸಿ- http://journals.cambridge.org/action/displayAbstract;jsessionid=F56498626E89BA7C0E882A7DC84B4EDA.tomcat1?fromPage=online&aid=4399472 Archived 2013-11-06 ವೇಬ್ಯಾಕ್ ಮೆಷಿನ್ ನಲ್ಲಿ.
- http://zsl.org/zsl-london-zoo/exhibits/aquarium
- http://nationalgeographic.com/animals/reptiles/komodo-dragon/ Archived 2016-06-03 ವೇಬ್ಯಾಕ್ ಮೆಷಿನ್ ನಲ್ಲಿ.
- http://www.zsl.org/zsl-whipsnade-zoo