ವಾಸ್ತು ಶಿಲ್ಪಿ ಎಂದರೆ, ಕಟ್ಟಡಗಳನ್ನು ಕಟ್ಟಲು ಒಂದು ಸೂಕ್ತ ಯೋಜನೆ, ವಿನ್ಯಾಸ ಮತ್ತು ತಪ್ಪುಗಳನ್ನು ಪತ್ತೆ ಹಚ್ಚಲು ತರಬೇತಿ ಪಡೆದ ವ್ಯಕ್ತಿಯಾಗಿರುತ್ತಾನೆ ಮತ್ತು ವಾಸ್ತುಶಿಲ್ಪವನ್ನು ರೂಢಿಗತವಾಗಿ ಅನುಷ್ಠಾನಕ್ಕೆ ತರಲು ಅನುಮತಿಯನ್ನು ಪಡೆದಿರುತ್ತಾನೆ. ವಾಸ್ತುಶಿಲ್ಪವನ್ನು ಅಭ್ಯಸಿಸುವುದೆಂದರೆ, ವಿನ್ಯಾಸ ಮತ್ತು ಕಟ್ಟಡಗಳ ರಚನೆಗೆ ಅಥವಾ ಕಟ್ಟಡಗಳ ಗುಂಪಿಗೆ ಸಂಬಂಧಿಸಿದಂತೆ, ಸೇವೆಗಳನ್ನು ನೀಡುವುದು ಅಥವಾ ಸಲ್ಲಿಸುವುದು, ಮತ್ತು ಕಟ್ಟಡದ ಸುತ್ತಮುತ್ತಲಿನ ನಿವೇಶನಗಳಲ್ಲಿ ಮನುಷ್ಯರ ಮುಖ್ಯ ಉದ್ದೇಶಿತ ಚಟುವಟಿಕೆಗಳು ಅಥವಾ ಬಳಕೆಕಾಗಿ ಸ್ಥಳಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಯೋಜನೆಯನ್ನು ರೂಪಿಸುವ ಸೇವೆ ಸಲ್ಲಿಸುವುದು.[]

Architect
An architect at his drawing board, 1893.
Occupation
Namesarchitect
Activity sectorsarchitecture
real estate development
urban planning
construction
interior design
civil engineering
Description
Competenciestechnical knowledge, building design, planning & management skills
Education requiredsee professional requirements

ಪದ ವ್ಯುತ್ಪತ್ತಿಗೆ ಅನುಗುಣವಾಗಿ,ಆರ್ಕಿಟೆಕ್ಟ್ ಎಂಬ ಪದವು ಲ್ಯಾಟಿನ್ ಪದ ಅರ್ಕಿಟೆಕ್ಟಸ್ಎಂಬ ಪದದಿಂದ ವ್ಯುತ್ಪತ್ತಿಯಾಗಿದ್ದು, ಈ ಪದವು ಗ್ರೀಕ್ ಪದವಾದ ಅರ್ಕಿಟೆಕ್ಟನ್ ಎಂಬ ಪದದಿಂದ ವ್ಯುತ್ಪತ್ತಿಗೊಂಡಿದೆ. (ಅರ್ಖಿ- , ಚೀಫ್ + ಟೆಕ್ಟನ್ ಎಂಬ ಪದದಿಂದ ವ್ಯತ್ಪತ್ತಿಯಾಗಿದ್ದು, ಬಿಲ್ಡರ್ , ಅಂದರೆ ಮುಖ್ಯ ಸ್ಥಾಪಕ .[] ವೃತ್ತಿಪರವಾಗಿ, ವಾಸ್ತುಶಿಲ್ಪಿಯ ನಿರ್ಧಾರಗಳು ಸಾರ್ವಜನಿಕ ಸುರಕ್ಷತೆಯ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಇದರಿಂದ ವಾಸ್ತುಶಿಲ್ಪಿಯು ಸುಧಾರಿತ ಶಿಕ್ಷಣ ಮತ್ತು ಕಾರ್ಯಶೀಲತೆ ಅಥವಾ (ಇಂಟರ್ನ್ ಶಿಪ್‌ನ್ನೊಳಗೊಂಡ) ವಿಶೇಷ ತರಬೇತಿಯನ್ನು ಪಡೆಯಬೇಕಲ್ಲದೇ, ವಾಸ್ತುಶಿಲ್ಪ. ವ್ಯವಹಾರವನ್ನು ನಡೆಸಲು ಪರವಾನಗಿ ಪಡೆಯಲು ವ್ಯವಹಾರದ ಅನುಭವವನ್ನು ಕೂಡ ಹೊಂದಿರಬೇಕಾಗುತ್ತದೆ. ಒಬ್ಬ ವಾಸ್ತುಶಿಲ್ಪಿಯಾಗಲು ಬೇಕಾಗುವ ಕಾರ್ಯಶೀಲ , ತಾಂತ್ರಿಕ ಮತ್ತು ಶೈಕ್ಷಣಿಕ ಅರ್ಹತೆಗಳು ಅಧೀಕೃತ ವ್ಯಾಪ್ತಿಗಿಂತ ಭಿನ್ನವಾಗಿರುತ್ತದೆ. (ಕೆಳಗೆ ನೋಡಿರಿ). ವಾಸ್ತುಶಿಲ್ಪಿ ಮತ್ತು ವಾಸ್ತುಶಿಲ್ಪ ಎಂಬ ಪದಗಳು ಮಾಹಿತಿ ತಂತ್ರಜ್ಞಾನಗಳ ಶಿಕ್ಷಣ ವಿಭಾಗದಲ್ಲಿ ಕೂಡ ಬಳಸಲಾಗಿದೆ. (ಉದಾಹರಣೆಗೆ ತಾಂತ್ರಿಕ ವಾಸ್ತುಶಿಲ್ಪಿ), ನಾವಿಕ ವಾಸ್ತುಶಿಲ್ಪ ಮತ್ತು ಲ್ಯಾಂಡ್ ಸ್ಕೇಪ್ ವಾಸ್ತುಶಿಲ್ಪ. ವಿಶ್ವದ ಹೆಚ್ಚಿನ ನ್ಯಾಯ ವ್ಯವಸ್ಥೆಗಳಲ್ಲಿ, “ ವಾಸ್ತುಶಿಲ್ಪ” ಪದದ ಬಳಕೆಯು ಅದರ ಪದವ್ಯತ್ಪತ್ತಿಗಿಂತ ಹೊರತಾಗಿ, ವೃತ್ತಿಪರ ಮತ್ತು ವಾಣಿಜ್ಯ ಬಳಕೆಗಿಂತ ಭಿನ್ನವಾಗಿರುವುದನ್ನು ಗಮನಿಸಿಲಾಗಿದ್ದು ಅದನ್ನು ಕಾನೂನಾತ್ಮಕವಾಗಿ ರಕ್ಷಿಸಲ್ಪಟ್ಟಿದೆ.

ವ್ಯವಹಾರದಲ್ಲಿ ವಾಸ್ತುಶಿಲ್ಪ

ಬದಲಾಯಿಸಿ

ವಾಸ್ತುಶಿಲ್ಪದ ಕಾರ್ಯಚಟುವಟಿಕೆಯು , ಪ್ರೀ ವಿನ್ಯಾಸ ಸೇವೆ, ಪ್ರೋಗ್ರಾಮಿಂಗ್‍ಗಳು, ವಿನ್ಯಾಸಗಳನ್ನು ಒದಗಿಸುವುದು, ಚಿತ್ರಕಲೆಗಳು, ಇತರ ತಾಂತ್ರಿಕ ವಿಶೇಷತೆಗಳು ಮತ್ತು ಮಂಡನೆಗಳು, ನಿರ್ಮಾಣ ಒಪ್ಪಂದಗಳನ್ನು ನಿರ್ವಹಣೆ ಮಾಡುವುದು ಮತ್ತು ಇತರರಿಂದ (ಇಂಜಿನಿಯರ್‌ಗಳಿಂದ ) ಸಿದ್ಧಪಡಿಸಲಾದ ತಾಂತ್ರಿಕ ವಿಶೇಷ ಮಂಡನೆಗಳ ಯಾವುದೇ ಅಂಶಗಳೊಂದಿಗೆ ಸಂಘಟನೆಯನ್ನು ನಿರ್ಮಿಸಲು ನೀಡುವ ಅಥವಾ ಸಲ್ಲಿಸುವ ಸೇವೆಗಳನ್ನೊಳಗೊಂಡಿದೆ. [] ವಾಸ್ತುಶಿಲ್ಪವು ತಾಂತ್ರಿಕ ಜ್ಞಾನ , ನಿರ್ವಹಣೆಯ ವ್ಯವಹಾರವಾಗಿದೆ ಮತ್ತು ವಿನ್ಯಾಸದಂತೆ ಪ್ರಮುಖವಾಗಿ ವ್ಯವಹಾರವನ್ನು ತಿಳಿದುಕೊಳ್ಳುವುದಾಗಿದೆ. ವಾಸ್ತುಶಿಲ್ಪಿಯು ಗ್ರಾಹಕನಿಂದ ಕಮಿಷನ್ ಸ್ವೀಕರಿಸುತ್ತಾನೆ. ಈ ಕಮಿಷನ್ ನಲ್ಲಿ ತಯಾರಿಸಲು ಸಾಧ್ಯವಿರುವ ವರದಿಗಳು, ಬಿಲ್ಡಿಂಗ್ ಆಡಿಟ್‍ಗಳು , ಕಟ್ಟಡದ ಅಥವಾ ಅನೇಕ ಕಟ್ಟಡಗಳ ವಿನ್ಯಾಸಗಳು, ರಚನೆಗಳು ಮತ್ತು ಅವುಗಳಲ್ಲಿನ ಸ್ಥಳಾವಕಾಶಗಳ ಬಗೆಗಿನ ಮಾಹಿತಿಯು ಒಳಗೊಂಡಿರಬಹುದು. ಗ್ರಾಹಕನು ತನ್ನ ಕಟ್ಟಡದಲ್ಲಿ ಬಯಸಿದಂತಹ ಬೇಡಿಕೆಗಳನ್ನು ಅಭಿವೃದ್ಧಿಪಡಿಸಲು ವಾಸ್ತುಶಿಲ್ಪಿಯು ಅದರಲ್ಲಿ ಪಾಲ್ಗೊಳ್ಳುತ್ತಾನೆ. ಯೋಜನೆಯುದ್ದಕ್ಕೂ (ಯೋಜನೆಯಿಂದ ಸ್ವಾಧೀನದವರೆಗೆ) ವಾಸ್ತುಶಿಲ್ಪಿಯು ವಿನ್ಯಾಸ ಗುಂಪಿನೊಂದಿಗೆ ಸೌಹಾರ್ದತೆಯನ್ನು ಇಟ್ಟುಕೊಂಡಿರುತ್ತಾನೆ. ರಚನಾತ್ಮಕ, ಮೆಕಾನಿಕಲ್ ಮತ್ತುಎಲೆಕ್ಟ್ರಿಕಲ್ ಎಂಜಿನಿಯರ್‍ಗಳು ಮತ್ತು ಇತರ ವಿಶೇಷಜÕರುಗಳು ಗ್ರಾಹಕ ಅಥವಾ ವಾಸ್ತುಶಿಲ್ಪಿಗಳೊಂದಿಗೆ ಬಾಡಿಗೆರೂಪದಲ್ಲಿ/ಕೂಲಿವೇತನ ರೂಪದಲ್ಲಿ ಕೆಲಸ ಮಾಡುವುದಲ್ಲದೇ, ಅವರು ವಿನ್ಯಾಸವನ್ನು ರಚಿಸಲು ಕೆಲಸವು ಅದರೊಂದಿಗೆ ಸಂಘಟಿತಗೊಳ್ಳಬೇಕೆಂಬುದನ್ನು ಖಚಿತಪಡಿಸಿಕೊಳ್ಳಬೇಕು.ವಾಸ್ತುಶಿಲ್ಪಿಯು ಬಿಲ್ಡಿಂಗ್ ಮತ್ತು ಆಪರೇಷನಲ್ ಸಂಕೇತಗಳನ್ನು ಅಗತ್ಯವಾಗಿ ತಿಳಿದುಕೊಳ್ಳಬೇಕು, ಗ್ರಾಹಕನ ಕಟ್ಟಡ ಮತ್ತು ರಚನೆಗಳನ್ನು ನಿರ್ಮಾಣ ಮಾಡುವಾಗ ನಿರ್ಮಾಣ ವಿಧಾನಗಳು ನಿರ್ಮಾತೃಗೆ ಲಭ್ಯವಾಗುತ್ತವೆಯಲ್ಲದೇ, ವಾಸ್ತವ ವೆಚ್ಚದಲ್ಲಿ ಮತ್ತು ರಚನಾತ್ಮಕ ಕಾರ್ಯಸೂಚಿ ಮಿತಿಗಳಲ್ಲಿ ತಾನು ನಿರೀಕ್ಷಿಸಿದ ಫಲಿತಾಂಶ ಕೂಡ ಲಭ್ಯವಾಗುತ್ತದೆ. ಕೆಲಸದ ಅವಧಿಯು ಸಾಮಾನ್ಯವಾಗಿ ಒಂದು ಗುಣಮಟ್ಟದ ವಾರದ ಕೆಲಸವಾಗಿರುತ್ತದೆ, ಆದರೆ, ನಿರ್ದಿಷ್ಟ ಅವಧಿಯ ಕೆಲಸದ ಸಂದರ್ಭದಲ್ಲಿ ವಾಸ್ತುಶಿಲ್ಪಿಯು ಹೆಚ್ಚಿನ ಗಂಟೆಗಳವರೆಗೆ ಕೆಲಸ ಮಾಡುತ್ತಾನೆ. ವಾಸ್ತುಶಿಲ್ಪಿಗಳು ಕಚೇರಿ ಆಧಾರಿತ ವೃತ್ತಿಪರರಾಗಿದ್ದಾರೆ , ಆದರೆ ಅವರ ಕೆಲಸವು ಸಾಮಾನ್ಯವಾಗಿ ಗ್ರಾಹಕರನ್ನು ಭೇಟಿಯಾಗುವುದು ಮತ್ತು ನಿರಂತರವಾಗಿ ಕೆಲಸ ನಿರ್ವಹಣಾ ಸ್ಥಳಕ್ಕೆ ಭೇಟಿ ನೀಡುವುದಾಗಿದೆ.

ವಿನ್ಯಾಸದ ಪಾತ್ರ

ಬದಲಾಯಿಸಿ

ವಾಸ್ತುಶಿಲ್ಪಿಯು ಗ್ರಾಹಕನಿಂದ ಬಾಡಿಗೆಗಾಗಿ ದುಡಿಯುವುದಲ್ಲದೇ, ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ವಿನ್ಯಾಸದ ಪರಿಕಲ್ಪನೆಯನ್ನು ರಚಿಸಲು ಕಾರಣವಾಗುತ್ತಾನೆ ಮತ್ತು ಅಗತ್ಯ ಬಳಕೆಗಾಗಿ ಸೂಕ್ತವಾದ ಸೌಲಭ್ಯವನ್ನು ಕೂಡ ಒದಗಿಸುತ್ತಾನೆ. ಆ ಪ್ರಯತ್ನದಲ್ಲಿ, ಒಂದು ಯೋಜನೆಯ ಅತೀ ಸೂಕ್ಷ್ಮತೆಗಳು ಮತ್ತು ಅದರ ಬೇಡಿಕೆಗೆ ಅನುಗುಣವಾಗಿ ಗ್ರಾಹಕನ ಎಲ್ಲಾ ಅಗತ್ಯತೆ ಮತ್ತು ಪ್ರಶ್ನೆಗಳನ್ನು ಖಾತರಿಪಡಿಸಿಕೊಳ್ಳಲು ವಾಸ್ತುಶಿಲ್ಪಿಯು ಸಿದ್ಧನಿರಬೇಕು. ಈ ಮಾಹಿತಿಯನ್ನು , “ ಪ್ರೋಗ್ರಾಂ” ಎಂದು ಕರೆಯಲಾಗುವುದಲ್ಲದೇ, ಇದು ಮಾಲೀಕನ ಎಲ್ಲಾ ಆಸೆಗಳನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವಂತಹ ಯೋಜನೆಯನ್ನು ತಯಾರಿಸುವುದು ಅಗತ್ಯವಾಗಿದೆ. – ಈ ಯೋಜನೆಯು ವಾಸ್ತುಶಿಲ್ಪಿಯೊಬ್ಬನಿಗೆ ವಿನ್ಯಾಸದ ಪರಿಕಲ್ಪನೆಯನ್ನು ರಚಿಸಲು ಒಂದು ಮಾರ್ಗದರ್ಶಿಯಾಗಿರುತ್ತದೆ.ವಾಸ್ತುಶಿಲ್ಪಿಗಳು ನಿಯಮಾವಳಿಗಳು ಮತ್ತು ನಿರ್ಮಾಣ ಸಂಕೇತಗಳ ಬಗ್ಗೆ ಸ್ಥಳೀಯ ಮತ್ತು ಒಕ್ಕೂಟ ನ್ಯಾಯ ವ್ಯಾಪ್ತಿಯೊಂದಿಗೆ ವ್ಯವಹರಿಸುತ್ತಾರೆ.

ವಾಸ್ತುಶಿಲ್ಪಿಯು ಕಟ್ಟಡಕ್ಕೆ ಬೇಕಾಗುವ ಸೆಟ್‍ಬ್ಯಾಕ್ಸ್‍ಗಳು, ಎತ್ತರದ ವ್ಯಾಪ್ತಿಗಳು(ಹೈಟ್ ಲಿಮಿಟ್ಸ್) ಪಾರ್ಕಿಂಗ್ ಬೇಡಿಕೆಗಳು, ಪಾರದರ್ಶಕತೆಯ ಬೇಡಿಕೆಗಳು(ಕಿಟಕಿಗಳು), ಮತ್ತು ಭೂಮಿಯ ಬಳಕೆ ಇಂತಹ ಸ್ಥಳೀಯ ಯೋಜನೆಗಳು ಮತ್ತು ಪ್ರಾದೇಶಿಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲವೊಂದು ನಿರ್ಮಿತ ನ್ಯಾಯವ್ಯಾಪ್ತಿಗಳು ವಿನ್ಯಾಸ ಮತ್ತು ಐತಿಹಾಸಿಕ ಸಂರಕ್ಷಣಾ ಮಾರ್ಗದರ್ಶಿಸೂತ್ರಗಳನ್ನು ಅನುಸರಿಸಬೇಕಾಗುತ್ತದೆ. ಸಾಮಾನ್ಯವಾಗಿ ವಾಸ್ತುಶಿಲ್ಪಿಯು ಮಾಲೀಕನ ಆಯ್ಕೆಗಾಗಿ, ವಿವಿಧ ಆಯ್ಕೆಗಳಲ್ಲಿ, ವಿಭಿನ್ನ ನೋಟಗಳಲ್ಲಿ ಮತ್ತು ಇತರ ಮಾರ್ಪಟುಗಳಲ್ಲಿ ಅನೇಕ ವಿನ್ಯಾಸ ಪರಿಕಲ್ಪನೆಗಳನ್ನು ರಚಿಸುತ್ತಾನೆ. ಹೆಚ್ಚಿನ ಯೋಜನೆಗಳು ಅನೇಕ ಸಂಭವನೀಯ ಪರಿಹಾರಗಳನ್ನು ಹೊಂದಿರುತ್ತವೆ, ಆದರೆ, ಅವುಗಳಲ್ಲಿ ಯಾವುದನ್ನು ನಿರ್ಮಿಸಬೇಕೆಂಬುದು ಮಾಲೀಕನ ನಿರ್ಧಾರವಾಗಿರುತ್ತದೆ.ಕೊನೆಯಲ್ಲಿ ಮಾಲೀಕನಿಂದ ಲಿಖಿತವಾಗಿ ಅನುಮೋದನೆಗೊಂಡ ವಿನ್ಯಾಸ ಪರಿಕಲ್ಪನೆಯೊಂದು ಉಳಿಯುವುದಲ್ಲದೇ, ಅದು ನಿರ್ಮಾಣಕ್ಕಾಗಿ ಒಂದು ಆಧಾರವಾಗುತ್ತದೆ.

ದಾಖಲೆಪತ್ರಗಳ ಪಾತ್ರ

ಬದಲಾಯಿಸಿ

ವಾಸ್ತುಶಿಲ್ಪಿಯು ವಿವರಣಾತ್ಮಕ ಡ್ರಾಯಿಂಗ್‍ಗಗಳು ಮತ್ತು ಅನೇಕ ಇತರ ಕಾಂಟ್ರಾಕ್ಟರು‍ಗಳು ಬಳಸಿದ ಮಾಹಿತಿಗಳನ್ನು ಒದಗಿಸುವ ಮೂಲಕ ವಿನ್ಯಾಸಗಳ ದಾಖಲೆಪತ್ರಗಳನ್ನು ಮಾಡುವ ಜವಾಬ್ದಾರಿಯುತ ಕೆಲಸವನ್ನು ಹೊಂದಿರುತ್ತಾರೆ. ಇದರಲ್ಲಿ, ಕೆಲವೊಂದು ಷರತ್ತುಗಳು ಮತ್ತು ಮಾಹಿತಿಗಳು, ನಿರ್ದೇಶನಗಳು ಮತ್ತು ಸೂಚನೆಗಳನ್ನು ಮಾರ್ಪಡಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡಲು ಅತಿ ಹೆಚ್ಚಿನ ಪ್ರಮಾಣದ ವೃತ್ತಿಪರರ ಶುಲ್ಕ ಮತ್ತು ಹೆಚ್ಚಿನ ಪ್ರಮಾಣದ ಸಮಯದ ಅಗತ್ಯತೆ ಇರುತ್ತದೆ. ಹೆಚ್ಚು ಉತ್ತಮ ಪ್ರಮಾಣದ ದಾಖಲೆಗಳಿದ್ದಾಗ ನಿರ್ಮಾಣವು ಹೆಚ್ಚು ಸಮರ್ಥವಾಗುವುದಲ್ಲದೇ ಹೆಚ್ಚಿನ ಸಹಕಾರಕ್ಕೂ ಈ ದಾಖಲೆಪತ್ರಗಳು ಸಹಕಾರಿಯಾಗುತ್ತದೆ. ಈ ಕೆಲಸವು ತೊರೆಯಬಲ್ಲಂತಹುದಲ್ಲ ಮತ್ತು ಅತಿ ಅವಶ್ಯಕವಾದುದು.

ಇದಕ್ಕೆ ಪೂರಕವಾಗಿ, ವರ್ಕಿಂಗ್ ಡ್ರಾಯಿಂಗ್‍ಗಳು ಸೂಕ್ತವಾದ ನಿರ್ಮಾಣ ವೈಶಿಷ್ಟ್ಯತೆಗಳ ಜೊತೆಗಿರಬೇಕಾಗುತ್ತದೆ. ಎರಡು ದಾಖಲೆಪತ್ರಗಳ ಪ್ರತಿಗಳು ಒಂದಕ್ಕೊಂದು ಬೇರ್ಪಡಿಸಲಾಗದಷ್ಟು ಸಂಘಟಿತವಾಗಿ, ಸಹಾಯಕವಾಗಿ ಮತ್ತು ಪೂರಕವಾಗಿರಬೇಕು, [ ಅಂದರೆ, ಯಾವುದೇ ಯೋಜನೆಯನ್ನು ಕೇವಲ ಒಂದೇ ಒಂದು ಸೆಟ್ ದಾಖಲೆಪತ್ರಗಳನ್ನು ಬಳಸಿ ನಿರ್ಮಿಸಬಾರದು.]

ಇದಕ್ಕೆ ಕಾರಣವೆಂದರೆ, ಕೆಲವೊಂದು ಮಾಹಿತಿಗಳೂ ಸುಲಭವಾಗಿ (ಮತ್ತು ಉತ್ತಮವಾಗಿ) ವಿನ್ಯಾಸಕರವಾಗಿ ಚಿತ್ರಿಸಬಹುದಾಗಿದೆ, ಆದರೆ ಕೆಲವು ದತ್ತಾಂಶಗಳು ಚಿತ್ರಿಸಿಕೊಳ್ಳಲು ಸಾದ್ಯವಾಗದಷ್ಟು ಅಸಮರ್ಪಕವಾಗಿರುತ್ತವೆ ಮತ್ತು ಅವುಗಳನ್ನು ಲಿಖಿತ ರೂಪದಲ್ಲಿ ತಯಾರಿಸಬೇಕಾಗುತ್ತದೆ. ವಾಸ್ತುಶಿಲ್ಪಿಗಳು ತಾಂತ್ರಿಕ ಅಥವಾ “ವರ್ಕಿಂಗ್” ದಾಖಲೆಪತ್ರಗಳನ್ನು (ನಿರ್ಮಾಣ ಚಿತ್ರಣಗಳನ್ನು ಮತ್ತು ವೈಶಿಷ್ಟ್ಯತೆಗಳನ್ನು) ರಚಿಸುತ್ತಾರಲ್ಲದೇ, ಸಾಮಾನ್ಯವಾಗಿ ಪರಸ್ಪರ ಸಂಘಟಿತವಾಗಿರುವುದಲ್ಲದೇ, ವಿವಿಧ ಕೆಲಸದ ನಿಯಮಾವಳಿಗಳಿಗೆ ಪೂರಕವಾಗಿರುತ್ತದೆ [ಅಂದರೆ, ಮೆಕಾನಿಕಲ್, ಪ್ಲಂಬಿಂಗ್, ಎಲೆಕ್ಟ್ರಿಕಲ್ ,ಸಿವಿಲ್, ಸ್ಟ್ರಕ್ಚರಲ್, ಇತ್ಯಾದಿ ವಿಭಿನ್ನ ಪಾಂಡಿತ್ಯಗಳಲ್ಲಿ] ಕಟ್ಟಡ ನಿರ್ಮಾಣ ಸೇವೆಗಳಿಗಾಗಿನ ಎಂಜಿನಿಯರ್‍ಗಳು ಮತ್ತು ಅವುಗಳು ಪರವಾನಗಿಯನ್ನು (ವಿಕಾಸ ಮತ್ತು ಕಟ್ಟಡ ಪರವಾನಗಿಗಳು) ಪಡೆಯುವುದಕ್ಕಾಗಿ ದಾಖಲೆಗಳನ್ನು ಸಲ್ಲಿಸುವುದಲ್ಲದೇ, ಅವುಗಳು ಕಟ್ಟಡಗಳು, ಭೂಕಂಪನ , ಮತ್ತು ಇತರ ಸಂಯುಕ್ತ ಮತ್ತು ಸ್ಥಳೀಯ ನಿಯಮ‍ಗಳೊಂದಿಗೆ ಅನುನಯತೆಯು ಬೇಕಾಗುತ್ತದೆ. ಈ ನಿರ್ಮಾಣ ನಕ್ಷೆಗಳು ಮತ್ತು ವೈಶಿಷ್ಟ್ಯತೆಗಳು ಕೆಲಸಕ್ಕೆ ಮತ್ತು ನಿರ್ಮಾಣಕ್ಕೆ ಮೌಲ್ಯವನ್ನು ಕಟ್ಟಲು ಬಳಸಲ್ಪಡುತ್ತದೆ.

ನಿರ್ಮಾಣದ ಪಾತ್ರ

ಬದಲಾಯಿಸಿ

ವಾಸ್ತುಶಿಲ್ಪಿಗಳು ಒಂದು ಮಾದರಿಯ ಯೋಜನೆಗಳನ್ನು ತನ್ನ ಗ್ರಾಹಕರ ಪರವಾಗಿ ಟೆಂಡರ್‍ಗೆ ಹಾಕುತ್ತಾರಲ್ಲದೇ, ಒಬ್ಬ ಸಾಮಾನ್ಯ ಕಾಂಟ್ರಾಕ್ಟರ್ (ಗುತ್ತಿಗೆದಾರ) ನಿಗೆ ಯೋಜನೆಯ ಬಗ್ಗೆ ವಿವರಿಸುತ್ತಾರೆ ಮತ್ತು ನಿರ್ಮಾಣದ ಅವಧಿಯಲ್ಲಿ ಅಲ್ಲಿಗೆ ಭೇಟಿ ನೀಡಿ ಕೆಲಸಗಳ ಪ್ರಗತಿಯ ಬಗ್ಗೆ ಪರಿಶೀಲಿಸುತ್ತಾರೆ. ಹಾಗೆಯೇ ಈ ವಾಸ್ತುಶಿಲ್ಪಿಗಳು ಉಪಗುತ್ತಿಗೆದಾರನ ಶಾಪ್ ಡ್ರಾಯಿಂಗ್‍ಗಳು ಮತ್ತು ಇತರ ಸಬ್‍ಮಿಟಲ್‍ಗಳು, ಸಿದ್ಧತೆ ಮತ್ತು ಸ್ಥಳ ಹಂಚಿಕೆ ಸೂಚನೆಗಳು, ಮತ್ತು ನಿರ್ಮಾಣ ಒಪ್ಪಂದದ ನಿರ್ವಹಣೆ ಮತ್ತು ಗುತ್ತಿಗೆದಾರರಿಗೆ ಹಣಪಾವತಿಯ ಬಗೆಗಿನ ದೃಢೀಕರಣಪತ್ರಗಳು ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ.( ಡಿಸೈನ್ ಬಿಡ್ ಬಿಲ್ಡ್/ಕಟ್ಟಡದ ಹರಾಜು ವಿನ್ಯಾಸ ವನ್ನು ಕೂಡ ನೋಡುತ್ತಾರೆ.) ಅನೇಕ ನ್ಯಾಯ ವ್ಯಾಪ್ತಿಗಳಲ್ಲಿ, ದೃಢೀಕರಣದ ಖಡ್ಡಾಯ ಅಥವಾ ಕೆಲಸದ ಭರವಸೆಯು ಕೂಡ ಬೇಕಾಗುತ್ತದೆ.

ಒಂದು ಸೀಮಿತ ನ್ಯಾಯ ಚೌಕಟ್ಟಿನಲ್ಲಿ, ಗ್ರಾಹಕರ ಬೇಡಿಕೆ ಮತ್ತು ನ್ಯಾಯ ವ್ಯಾಪ್ತಿಯನ್ನು ಅವಲಂಬಿಸಿ, ವಾಸ್ತುಶಿಲ್ಪ ಸೇವೆಯು ಕೂಡ ವಿಸ್ತಾರಗೊಳ್ಳಬಹುದು(ವಿಸ್ತೃತ ದಾಖಲೆಗಳ ರಚನೆ ಮತ್ತು ನಿರ್ಮಾಣದ ಪರಿಶೀಲನೆ) ಅಥವಾ ಕಡಿಮೆ ವ್ಯಾಪ್ತಿಯಲ್ಲಿರಬಹುದು.( ಗುತ್ತಿಗೆದಾರರು ಸೂಕ್ತ ವಿನ್ಯಾಸ ನಿರ್ಮಾಣ ಕಾರ್ಯಗಳನ್ನು ಮಾಡಲು ಅವಕಾಶ ನೀಡುವಂತಹ) ಕೆಲವೊಮ್ಮೆ ಹೆಚ್ಚಿನ ಕೆಲಸಗಳು , ಸಂಕೀರ್ಣ ಯೋಜನೆಗಳಿದ್ದಾಗ ಒಬ್ಬ ಸ್ವತಂತ್ರ ನಿರ್ಮಾಣ ವ್ಯವಸ್ಥಾಪಕನು ಅವನಿಗೆ ವಿನ್ಯಾಸ ಮತ್ತು ನಿರ್ಮಾಣ ನಿರ್ವಹಣೆಗೆ ಸಹಾಯ ಮಾಡುವುದಕ್ಕಾಗಿ ಒಬ್ಬ ಸಹಾಯಕನನ್ನು ನೇಮಿಸಿಕೊಂಡಿರುತ್ತಾನೆ. ಸಂಯುಕ್ತ ಸಂಸ್ಥಾನಗಳು ಮತ್ತು ಇತರ ರಾಷ್ಟ್ರಗಳಲ್ಲಿ ವೆಚ್ಚ ಸಮಾಲೋಚನೆಗಾಗಿ ಕ್ವಾಂಟಿಟಿ ಸರ್ವೇಯರ್ ತಂಡದ ಭಾಗವಾಗಿರುತ್ತಾನೆ.

ಪರ್ಯಾಯ ವ್ಯವಹಾರ ಮತ್ತು ವೈಶಿಷ್ಟ್ಯತೆಗಳು.

ಬದಲಾಯಿಸಿ

ಇತ್ತೀಚಿನ ದಶಕಗಳು ವೃತ್ತಿಯಲ್ಲಿಯೇ ಅನೇಕ ವೈಶಿಷ್ಟ್ಯತೆಗಳ ಉಗಮವನ್ನು ಕಂಡಿವೆ. ಅನೇಕ ವಾಸ್ತುಶಿಲ್ಪಿಗಳು ಮತ್ತು ವಾಸ್ತುಶಿಲ್ಪ ವ್ಯವಹಾರ ಸಂಸ್ಥೆಗಳು ನಿರ್ದಿಷ್ಟ ಯೋಜನಾ ಮಾದರಿಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತವೆ (ಉದಾಹರಣೆಗೆ,ಹೆಲ್ತ್ ಕೇರ್‍, ರೀಟೇಲ್, ಪಬ್ಲಿಕ್ ಹೌಸಿಂಗ್), ತಾಂತ್ರಿಕ ಕೌಶಲ್ಯ ಅಥವಾ ಯೋಜನಾ ನೀಡಿಕೆ ವಿಧಾನ ಇತ್ಯಾದಿಗಳ ಬಗ್ಗೆಯೂ ಗಮನ ಕೇಂದ್ರೀಕರಿಸುತ್ತಾರೆ. ಕೆಲವೊಂದು ವಾಸ್ತುಶಿಲ್ಪಿಗಳು ಬಿಲ್ಡಿಂಗ್ ಕೋಡ್, ಬಿಲ್ಡಿಂಗ್ ಎನ್ವೆಲಪ್, ಆಧಾರ ವಿನ್ಯಾಸ, ಐತಿಹಾಸಿಕ ಸಂರಕ್ಷಣೆ, ಸುಗಮತೆ/ಸುಲಭಸಾಧ್ಯತೆ ಮತ್ತು ಇತರ ವಿಧಗಳ ವಿಶೇಷ ಸಮಾಲೋಚಕರ ರೀತಿಯಲ್ಲಿಯೂ ವಿಶೇಷ ಜಾÕನವನ್ನು ಹೊಂದಿರುತ್ತಾರೆ.

ಅನೇಕ ವಾಸ್ತುಶಿಲ್ಪಿಗಳು ರೀಯಲ್ ಎಸ್ಟೇಟ್(ಆಸ್ತಿ) ಅಭಿವೃದ್ಧಿಯತ್ತ, ಕಾರ್ಪೋರೇಟ್ ಸೌಲಭ್ಯಗಳ ಯೋಜನೆ, ಯೋಜನಾ ನಿರ್ವಹಣೆ, [[ನಿರ್ಮಾಣ ನಿರ್ವಹಣೆ , ಇಂಟೀರಿಯರ್ ವಿನ್ಯಾಸ|ನಿರ್ಮಾಣ ನಿರ್ವಹಣೆ [[, ಇಂಟೀರಿಯರ್ ವಿನ್ಯಾಸ]]]] ಅಥವಾ ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಆರಿಸಿ ಮುಂದಡಿಯಿಡಲು ಅಂತಹ ಕ್ಷೇತ್ರಗಳನ್ನು ಆರಿಸುತ್ತಾರೆ.

ವೃತ್ತಿಪರ ಅಗತ್ಯತೆಗಳು

ಬದಲಾಯಿಸಿ

ಸ್ಥಳದಿಂದ ಸ್ಥಳಕ್ಕೆ ಅನೇಕ ವಿಭಿನ್ನತೆಗಳಿದ್ದರೂ ಕೂಡ, ಹೆಚ್ಚಿನ ವಿಶ್ವ ವಾಸ್ತುಶಿಲ್ಪಿಗಳು ಸೂಕ್ತ ನ್ಯಾಯವ್ಯಾಪ್ತಿಯಲ್ಲಿ ನೋಂದಾವಣೆಗೊಳ್ಳಬೇಕಾಗುತ್ತದೆ. ಈ ರೀತಿ ಮಾಡಲು, ವಾಸ್ತುಶಿಲ್ಪಿಗಳು ವಿಶೇಷವಾಗಿ ಮೂರು ಅಗತ್ಯ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ: ಅವುಗಳೆಂದರೆ, ಶಿಕ್ಷಣ, ಅನುಭವ ಮತ್ತು ಪರೀಕ್ಷೆಗಳು.

ಶೈಕ್ಷಣಿಕ ಅಗತ್ಯತೆಗಳು ಸಾಮಾನ್ಯವಾಗಿ ವಾಸ್ತುಶಿಲ್ಪದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಪದವಿಯನ್ನು ಒಳಗೊಂಡಿರುತ್ತದೆ. ಪದವೀಧರ ಅಭ್ಯರ್ಥಿಗಳಿಗೆ ಬೇಕಾದ ಅನುಭವವು ಸಾಮಾನ್ಯವಾಗಿ ಕಾರ್ಯಶೀಲತೆ ಅಥವಾ ಇಂಟರ್ನ್‍ಶಿಪ್ (ನ್ಯಾಯವ್ಯಾಪ್ತಿಯನ್ನು ಅವಲಂಬಿಸಿ, ಸಾಮಾನ್ಯವಾಗಿ ಎರಡು ಅಥವಾ ಮೂರು ವರ್ಷಗಳು) ಅಂತಿಮವಾಗಿ, ಪರವಾನಗಿಗೆ ಮುಂಚಿತವಾಗಿ ನೋಂದಣಿ ಪರೀಕ್ಷೆ ಅಥವಾ ಪರೀಕ್ಷೆಗಳ ಸರಣಿಗಳು ಅಗತ್ಯವಾಗಿರುತ್ತದೆ.

19ನೇ ಶತಮಾನಕ್ಕಿಂತ ಪೂರ್ವದಲ್ಲಿ ವಿನ್ಯಾಸ ಮತ್ತು ನಿರ್ಮಾಣದ ಉಸ್ತುವಾರಿ ಯೋಜನೆಗಳಲ್ಲಿ ನಿರತರಾಗಿದ್ದ ವೃತ್ತಿಪರರು ತಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರತ್ಯೇಕ ವಾಸ್ತುಶಿಲ್ಪ ಯೋಜನೆಗಳಲ್ಲಿ ಅಗತ್ಯ ತರಬೇತಿಯನ್ನು ಹೊಂದಿರುತ್ತಿರಲಿಲ್ಲ. ಅದರ ಬದಲಾಗಿ, ಅವರು ವ್ಯವಸ್ಥಿತ ವಾಸ್ತುಶಿಲ್ಪಿಗಳ ಕೈಕೆಳಗೆ ತರಬೇತಿಯನ್ನು ಪಡೆಯುತ್ತಿದ್ದರು. ಆಧುನಿಕ ಸಮಯಕ್ಕಿಂತ ಪೂರ್ವದಲ್ಲಿ, , ವಾಸ್ತುಶಿಲ್ಪಿಗಳು, ಎಂಜಿನಿಯರುಗಳು ಮತ್ತು ಚಿತ್ರಕಾರರ ನಡುವೆ ಯಾವುದೇ ವ್ಯತ್ಯಾಸಗಳಿರುತ್ತಿರಲಿಲ್ಲ, ಮತ್ತು ಭೌಗೋಳಿಕ ಪ್ರದೇಶವನ್ನವಲಂಬಿಸಿ ಪದವಿಗಳು ಬದಲಾಗುತ್ತಿದ್ದವು. ಅವರು ಕೆಲವೊಮ್ಮೆ ಅನೇಕ ವರ್ಷಗಳ ಕಾಲ ಶಿಬಿರಾರ್ಥಿಗಳಾಗಿ ಸೇವೆ ಸಲ್ಲಿಸಿದ ನಂತರ ಮಾಸ್ಟರ್ ಬಿಲ್ಡರ್, ಅಥವಾ ಸರ್ವೇಯರ್ ಎಂಬ ಬಿರುದುಗಳನ್ನು/ಪದವಿ ಪಡೆಯುತ್ತಿದ್ದರು (ಸರ್, ಕ್ರಿಸ್ಟೋಫರ್ ರೆನ್ ಎಂಬಂತಹ)

ಶೈಕ್ಷಣಿಕ ಸಂಸ್ಥೆಗಳಲ್ಲಿ ವಾಸ್ತುಶಿಲ್ಪದ ವಿಧ್ಯುಕ್ತ ಅಧ್ಯಯನವು ಒಂದು ವೃತ್ತಿಯು ಸಂಪೂರ್ಣವಾಗಿ ಬೆಳವಣಿಗೆಯಾಗಲು ಅತೀ ಪ್ರಮುಖ ಪಾತ್ರವಹಿಸುವುದಲ್ಲದೇ, ವಾಸ್ತುಶಿಲ್ಪ ತಂತ್ರಜಾÕನ ಮತ್ತು ಸಿದ್ಧಾಂತಗಳ ಸುಧಾರಣೆಯಲ್ಲಿ ಒಂದು ಕೇಂದ್ರ ಬಿಂದುವಾಗಿ ಸಹಕರಿಸುತ್ತದೆ.

ವೃತ್ತಿಪರ ಪದವಿಗಳ ಭಿನ್ನತೆಗಳು

ಬದಲಾಯಿಸಿ

ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್[]/ ಅಮೆರಿಕದ ವಾಸ್ತುಶಿಲ್ಪ ಸಂಸ್ಥೆಯ ಪ್ರಕಾರ, ಅಮೆರಿಕನ್ ವಾಸ್ತುಶಿಲ್ಪ ಸಂಸ್ಥೆಯ ವ್ಯಾಪ್ತಿಯಲ್ಲಿನ ಪದವಿಗಳು ಮತ್ತು ಕೆಲಸದ ವಿಶ್ಲೇಷಣೆಗಳು ಈ ಕೆಳಗಿನಂತಿರುತ್ತವೆ:

  • ಸೀನಿಯರ್ ಪ್ರಿನ್ಸಿಪಾಲ್ /ಪಾರ್ಟ್ನರ್ : ವಿಶೇಷವಾಗಿ ಒಂದು ವ್ಯವಹಾರ ಸಂಸ್ಥೆಯ ಮಾಲೀಕ ಅಥವಾ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿದವರು; ಅವರ ಪದವಿಗಳು ಅಧ್ಯಕ್ಷ, ಮುಖ್ಯ ಕಾರ್ಯಕಾರಿ ಅಧಿಕಾರಿ, ಅಥವಾ ಮುಖ್ಯ ವ್ಯವಸ್ಥಾಪಕರು/ಪಾಲುದಾರರು.
  • ಮಿಡ್ ಲೆವೆಲ್ ಪ್ರಿನ್ಸಿಪಾಲ್/ ಪಾರ್ಟನರ್: ಮುಖ್ಯ ಅಥವಾ ಪಾಲುದಾರ, ಇವರಿಗೆ ಕಾರ್ಯನಿರ್ವಾಹಕ ಅಥವಾ ಹಿರಿಯ ಉಪಾಧ್ಯಕ್ಷ ಎಂಬ ಬಿರುದುಗಳನ್ನು ಒಳಗೊಳ್ಳುತ್ತವೆ.
  • ಜೂನಿಯರ್ ಪ್ರಿನ್ಸಿಪಾಲ್/ಪಾರ್ಟನರ್ : ಇತ್ತೀಚೆಗಷ್ಟೇ ಮಾಡಿದ ಪಾರ್ಟನರ್ ಅಥವಾ ವ್ಯವಹಾರ ಸಂಸ್ಥೆಯ ಮುಖ್ಯಸ್ಥ; ಅವರ ಪದವಿ ಉಪಾಧ್ಯಕ್ಷ ಎಂದು ಕೂಡ ಆಗಿರಬಹುದಾಗಿದೆ.


  • ವಿಭಾಗೀಯ ಮುಖ್ಯಸ್ಥ/ಹಿರಿಯ ವ್ಯವಸ್ಥಾಪಕ : ಹಿರಿಯ ನಿರ್ವಹಣಾ ವಾಸ್ತುಶಿಲ್ಪಿ ಅಥವಾ ನೋಂದಾವಣೆಯಾಗಿರದ ಪದವೀಧರ; ಇವರು ಮುಖ್ಯ ವಿಭಾಗಗಳ ಅಥವಾ ಕೆಲಸಗಳಿಗೆ ಜವಾಬ್ದಾರರಾಗಿರುತ್ತಾರೆ; ಮತ್ತು ಇವರು ಮುಖ್ಯಸ್ಥರು ಅಥವಾ ಪಾಲುದಾರ/ಪಾರ್ಟನರ್ ‍ಗೆ ವರದಿ ಮಾಡುತ್ತಾರೆ.
  • ಯೋಜನಾ ವ್ಯವಸ್ಥಾಪಕರು  : ಅಧಿಕೃತ ವಾಸ್ತುಶಿಲ್ಪಿ, ಅಥವಾ 10 ವರ್ಷಗಳಿಂದಲೂ ಅಧಿಕ ಅನುಭವವಿರುವ ನೋಂದಾವಣೆಗೊಳ್ಳದ ಪದವೀಧರ; ಇವರು ಗ್ರಾಹಕರ ಸಂಪರ್ಕ, ಶೆಡ್ಯೂಲಿಂಗ್(ಕಾರ್ಯಕ್ರಮ ವೇಳಾಪಟ್ಟಿ), ಮತ್ತು ಬಜೆಟಿಂಗ್‍ನ್ನು(ಹಣಕಾಸು ಲೆಕ್ಕಾಚಾರ) ಒಳಗೊಂಡಂತೆ, ಯೋಜನಾ ತಂಡ ಅಥವಾ ವಿವಿಧ ಯೋಜನೆಗಳ ಸಂಪೂರ್ಣ ಯೋಜನಾ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತಾರೆ.
  • ಹಿರಿಯ ವಾಸ್ತುಶಿಲ್ಪಿ/ವಿನ್ಯಾಸಗಾರ : ಅಧಿಕೃತ ವಾಸ್ತುಶಿಲ್ಪಿ, ಅಥವಾ 10 ವರ್ಷಗಳಿಂದಲೂ ಅಧಿಕ ಅನುಭವವಿರುವ ನೋಂದಾವಣೆಗೊಳ್ಳದ ಪದವೀಧರ; ಇವರು ವಿನ್ಯಾಸ ಅಥವಾ ತಾಂತ್ರಿಕತೆಯ ಬಗ್ಗೆ ಗಮನ ಹರಿಸುವುದಲ್ಲದೇ, ಪ್ರಮುಖ ಯೋಜನಾ ಚಟುವಟಿಕೆಗಳಿಗೆ ಜವಾಬ್ದಾರಿಯನ್ನು ಹೊಂದಿರುತ್ತಾರೆ.
  • ವಾಸ್ತುಶಿಲ್ಪಿ/ವಿನ್ಯಾಸಕಾರ III : ಅಧೀಕೃತ ವಾಸ್ತುಶಿಲ್ಪಿ ಅಥವಾ 8–10 ವರ್ಷಗಳಷ್ಟು ಅನುಭವವಿರುವ ನೋಂದಾವಣೆಗೊಳ್ಳದ ಪದವೀಧರ; ಯೋಜನೆಗಳ ಪ್ರಮುಖ ಅಂಶಗಳ ಜವಾಬ್ದಾರಿಯನ್ನು ಹೊಂದಿರುತ್ತಾನೆ.
  • ವಾಸ್ತುಶಿಲ್ಪಿ/ವಿನ್ಯಾಸಕಾರ II : ಅಧೀಕೃತ ವಾಸ್ತುಶಿಲ್ಪಿ ಅಥವಾ 6–8 ವರ್ಷಗಳಷ್ಟು ಅನುಭವವಿರುವ ನೋಂದಾವಣೆಗೊಳ್ಳದ ಪದವೀಧರ, ದೈನಂದಿನ ವಿನ್ಯಾಸ ಅಥವ ಯೋಜನೆಗಳ ತಾಂತ್ರಿಕ ಅಭಿವೃದ್ಧಿಗೆ ಜವಾಬ್ದಾರರಾಗಿರುತ್ತಾರೆ.
  • ವಾಸ್ತುಶಿಲ್ಪಿ/ವಿನ್ಯಾಸಕಾರ I : ತೀರಾ ಇತ್ತೀಚೆಗೆ ಅಧಿಕೃತಗೊಂಡ ವಾಸ್ತುಶಿಲ್ಪಿ ಅಥವಾ 3–5 ವರ್ಷಗಳಷ್ಟು ಅನುಭವವಿರುವ ನೋಂದಾವಣೆಗೊಳ್ಳದ ಪದವೀಧರ; ಯೋಜನೆಯ ನಿರ್ದಿಷ್ಟ ಅಂಶ/ಭಾಗಗಳನ್ನು ಇತರರಿಂದ ಸೂಚಿಸಲ್ಪಟ್ಟ ಮಾನಕಗಳ ಮೂಲಕ ನಿಗದಿತ ಸಮಯದಲ್ಲಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.
  • ಪದವೀಧರ ವಾಸ್ತುಶಿಲ್ಪಿ : ಮೊದಲ ಮೂರು ವರ್ಷಗಳ ಇಂಟರ್ನ್‍ಶಿಪ್(ತರಬೇತಿ ಅವಧಿಯಲ್ಲಿರುವ) ನಲ್ಲಿರುವ ಅನಧೀಕೃತ ಶಾಲಾ ವಾಸ್ತುಶಿಲ್ಪ ಪದವೀಧರ; ಒಬ್ಬ ವಾಸ್ತುಶಿಲ್ಪಿಯ ಉಸ್ತುವಾರಿಯಡಿಯಲ್ಲಿ ವಿನ್ಯಾಸ ಅಥವಾ ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವವನಾಗಿರುತ್ತಾನೆ.


ಗಳಿಕೆಗಳು

ಬದಲಾಯಿಸಿ

ವಾಸ್ತುಶಿಲ್ಪಿಗಳ ಗಳಿಕೆಯ ವ್ಯಾಪ್ತಿಯು ವಿಸ್ತೃತವಾಗಿ ಅವರು ಕೆಲಸ ಮಾಡುವ ಸ್ಥಳ ಮತ್ತು ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ. ವೇತನಗಳು ಕೂಡ ವೃತ್ತಿಯ ವಿಸ್ತಾರದ ಪ್ರಮಾಣ ಮತ್ತು ಕೆಲಸ ನಿರ್ವಹಣಾ ಸ್ಥಳವನ್ನು ಅವಲಂಬಿಸಿರುತ್ತದೆ. ಗಳಿಕೆಯು ಸಾಂಪ್ರದಾಯಿಕವಾಗಿ ಸ್ಥಳೀಯ ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತವೆ, ಆದರೆ, ತ್ವರಿತ ಜಾಗತೀಕರಣದಿಂದಾಗಿ, ಹೆಚ್ಚಿನ ಅಂತಾರಾಷ್ಟ್ರೀಯ ವ್ಯವಹಾರ ಸಂಸ್ಥೆಗಳಿಗೆ ಇದು ಸೂಕ್ಷ್ಮ/ಸಣ್ಣ ಅಂಶವಾಗುತ್ತಾ ಬರುತ್ತಿದೆ. ಕೆಲವು ವಾಸ್ತುಶಿಲ್ಪಿಗಳು ರೀಯಲ್ ಎಸ್ಟೇಟ್(ಜಮೀನು) ಡೆವಲಪರ್ಸ್ ಆಗುತ್ತಿದ್ದಾರೆ ಅಥವಾ ವಿಶೇಷ ಪಾತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ, ಇದರಿಂದ ಅವರು ಕೈಗಾರಿಕಾ ಮದ್ಯವರ್ತಿಕೆಯಿಂದ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸುತ್ತಾರೆ.

ವೃತ್ತಿಪರ ಸಂಘಟನೆಗಳು

ಬದಲಾಯಿಸಿ

ಅಂತಾರಾಷ್ಟ್ರೀಯ ವೃತ್ತಿಪರ ವಾಸ್ತುಶಿಲ್ಪಿಯ ಸಂಘಟನೆಗಳಿಗೆ ಸಂಬಂಧಿಸಿದಂತೆ, ವಾಸ್ತುಶಿಲ್ಪದಲ್ಲಿ ತಮ್ಮ ವೃತ್ತಿ ಮತ್ತು ವ್ಯವಹಾರದ ಬೆಳವಣಿಗೆಗಾಗಿ ಗುಂಪುಗಳನ್ನು ರಚಿಸಲಾಗಿದೆ. ಅತ್ಯುನ್ನತ ಕಟ್ಟಡಗಳು, ರಚನೆಗಳು ಮತ್ತು ವೃತ್ತಿಪರ ವೃತ್ತಿಗಳನ್ನು ಗುರುತಿಸಿ ವಾಸ್ತುಶಿಲ್ಪಿಗಳಿಗೆ ವಿಸ್ತೃತ ಸ್ವರೂಪದ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ವಾಸ್ತುಶಿಲ್ಪಿಯೊಬ್ಬನು ಅತೀ ಹೆಚ್ಚಿನ ಲಾಭದಾಯಕರವಾದ ಪ್ರಿಟ್ಝ‍ಕರ್ ಪ್ರಶಸ್ತಿಯನ್ನು ಪಡೆಯಬಹುದಾಗಿದ್ದು, ಕೆಲವೊಮ್ಮೆ ಅದನ್ನು ವಾಸ್ತುಶಿಲ್ಪಕ್ಕಾಗಿನ “ನೊಬೆಲ್ ಪ್ರಶಸ್ತಿ” ಎಂದು ಕೂಡ ಕರೆಯಲಾಗುತ್ತದೆ. (ಫಿನ್‍ಲ್ಯಾಂಡ್‍) ಅಲ್ವಾರ್ ಆಲ್ಟೋ ಮೆಡಲ್ ಮತ್ತು ( ಡೆನ್ಮಾರ್ಕ್‌). ಕಾರ್ಲ್ಸ್ ಬರ್ಗ್ ಆರ್ಕಿಟೆಕ್ಚರ್ ಪ್ರಶಸ್ತಿ, ವಾಸ್ತುಶಿಲ್ಪಕ್ಕಾಗಿನ ಇತರ ಪ್ರತಿಷ್ಠಿತ ಪ್ರಶಸ್ತಿಗಳಾಗಿವೆ. ಅತ್ಯುತ್ತಮ ವಾಸ್ತುಶಿಲ್ಪಕ್ಕಾಗಿ, ರಾಷ್ಟ್ರೀಯ ವೃತ್ತಿಪರ ಸಂಸ್ಥೆಗಳಿಂದ ನೀಡಲಾಗುವ ಇತರ ಪ್ರಶಸ್ತಿಗಳೆಂದರೆ, ಅಮೆರಿಕನ್ ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (AIA) ಮತ್ತು ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ (RIBA) ಇವೇ ಮೊದಲಾದವುಗಳಾಗಿವೆ. ವಿನ್ಯಾಸದ ಉತ್ಕೃಷ್ಟತೆ ಅಥವಾ ವಾಸ್ತುಶಿಲ್ಪ ಶಿಕ್ಷಣ, ಅಥವಾ ವೃತ್ತಿಯನ್ನು ಇತರ ಸುಧಾರಿತ ರೀತಿಯಲ್ಲಿ ಅಭಿವೃದ್ಧಿ ಮಾಡುವ ಮೂಲಕ ವೃತ್ತಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ ಬ್ರಿಟನ್‍ನಲ್ಲಿನ ವಾಸ್ತುಶಿಲ್ಪಿಗಳು ಬ್ರಿಟಿಷ್ ಆರ್ಕಿಟೆಕ್ಟ್ಸ್ ರಾಯಲ್ ಇನ್‍ಸ್ಟಿಟ್ಯೂಟ್‍ನ ಸದಸ್ಯರಾಗಿ ಆಯ್ಕೆಗೊಂಡಿದ್ದಾರಲ್ಲದೇ, ಇದರ ಬಗ್ಗೆ ಯಾರಾದರೂ ಆಸಕ್ತಿ ಹೊಂದಿದ್ದರೆ, ಅವರು FRIBA ಗೆ ತಮ್ಮ ಹೆಸರನ್ನು ದಾಖಲಿಸಲು ಬರೆಯಬಹುದಾಗಿದೆ. ವಿನ್ಯಾಸದ ಉತ್ಕೃಷ್ಟತೆ ಅಥವಾ ವಾಸ್ತುಶಿಲ್ಪ ಶಿಕ್ಷಣ, ಅಥವಾ ವೃತ್ತಿಯನ್ನು ಇತರ ಸುಧಾರಿತ ರೀತಿಯಲ್ಲಿ ಅಭಿವೃದ್ಧಿ ಮಾಡುವ ಮೂಲಕ ವೃತ್ತಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅಮೆರಿಕಾದಲ್ಲಿನ ವಾಸ್ತುಶಿಲ್ಪಿಗಳು, ಅಮೆರಿಕನ್ ಇನ್‍ಸ್ಟಿಟ್ಯೂಟ್ ಅಫ್ ಆರ್ಕಿಟೆಕ್ಟ್ಸ್‍ ನ ಸದಸ್ಯರಾಗಿ ಆಯ್ಕೆಗೊಂಡಿದ್ದಾರಲ್ಲದೇ, ಇದರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಯಸುವವರು FAIA ಗೆ ಬರೆಯಬಹುದಾಗಿದೆ.

ಈ ಕೆಳಗಿನವುಗಳನ್ನೂ ನೋಡಬಹುದು

ಬದಲಾಯಿಸಿ

ಟೆಂಪ್ಲೇಟು:Portal

ಆಕರಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2011-07-21. Retrieved 2010-06-18.
  2. Online Etymology of the term "architect"
  3. "ಆರ್ಕೈವ್ ನಕಲು". Archived from the original on 2011-07-21. Retrieved 2010-06-18.
  4. """" (PDF). Archived from the original (PDF) on 2011-05-11. Retrieved 2010-06-18.


http://www.bls.gov/k12/build04.htm Archived 2010-05-29 ವೇಬ್ಯಾಕ್ ಮೆಷಿನ್ ನಲ್ಲಿ. {{http://documents.gov.lk/Extgzt/2009/PDF/May/1601_10/PG%201026%20(E).pdf}}

ಬಾಹ್ಯ ಕೊಂಡಿಗಳು

ಬದಲಾಯಿಸಿ