ಹಲ್ಲಿಗಳು ಅಂಟಾರ್ಕ್ಟಿಕಾ ಹೊರತಾಗಿ ಎಲ್ಲ ಖಂಡಗಳ ಉದ್ದಗಲಕ್ಕೂ ಜೊತೆಗೆ ಬಹುತೇಕ ಸಾಗರದ ದ್ವೀಪ ಸರಪಳಿಗಳನ್ನು ವ್ಯಾಪಿಸಿರುವ ೯,೭೬೬ ಪ್ರಜಾತಿಗಳಿಗಿಂತ ಹೆಚ್ಚು ಪೊರೆಹೊಂದಿರುವ ಸರೀಸೃಪಗಳ ಒಂದು ಬಹುವ್ಯಾಪಕವಾದ ಗುಂಪು. ಸಾಂಪ್ರದಾಯಿಕವಾಗಿ ಲ್ಯಾಸರ್ಟಿಲಿಯಾ ಉಪಗಣವೆಂದು ಗುರುತಿಸಲಾದ ಈ ಗುಂಪನ್ನು ಸ್ಫೀನೊಡಾಂಟ್‍ಗಳಲ್ಲದ (ಅಂದರೆ ಟೂವಟಾರಾ) ಹಾವುಗಳೂ ಅಲ್ಲದ ಒಂದು ವಿಕಾಸಾತ್ಮಕ ಶ್ರೇಣಿಯನ್ನು ರಚಿಸುವ ಲೆಪಿಡೊಸೋರಿಯಾದ ಎಲ್ಲ ಅಸ್ತಿತ್ವದಲ್ಲಿರುವ ಸದಸ್ಯರು ಎಂದು ವ್ಯಾಖ್ಯಾನಿಸಲಾಗುತ್ತದೆ. ಹಲ್ಲಿಗಳು ಸಾಮಾನ್ಯವಾಗಿ ಪಾದಗಳು ಮತ್ತು ಬಾಹ್ಯ ಕಿವಿಗಳನ್ನು ಹೊಂದಿದ್ದರೆ ಹಾವುಗಳಿಗೆ ಈ ಎರಡೂ ಲಕ್ಷಣಗಳಿಲ್ಲ.

"https://kn.wikipedia.org/w/index.php?title=ಹಲ್ಲಿ&oldid=1225449" ಇಂದ ಪಡೆಯಲ್ಪಟ್ಟಿದೆ