ಗ್ರೀಕ್‌ ವರ್ಣಮಾಲೆ

(ಗ್ರೀಕ್ ಅಕ್ಷರ ಇಂದ ಪುನರ್ನಿರ್ದೇಶಿತ)

ಗ್ರೀಕ್‌ ವರ್ಣಮಾಲೆ ಯಲ್ಲಿ ಇಪ್ಪತ್ತನಾಲ್ಕು ಅಕ್ಷರಗಳಿವೆ. ಸುಮಾರು ೯ನೆಯ ಶತಮಾನದ BCEಯ ಅಪರಾರ್ಧ ಅಥವಾ ೮ನೆಯ ಶತಮಾನದ ಪೂರ್ವಾರ್ಧ BCE ಕಾಲದಿಂದಲೂ ಗ್ರೀಕ್‌ ಭಾಷೆಯಲ್ಲಿ ಬರೆಯಲು ಈ ಅಕ್ಷರಗಳನ್ನು ಬಳಸಲಾಗುತ್ತಿದೆ. ಇದು ಮೊದಲ ಹಾಗೂ ಅತ್ಯಂತ ಪ್ರಾಚೀನ ವರ್ಣಮಾಲೆಯಾಗಿದೆ. ಇದರಲ್ಲಿ ಪ್ರತಿಯೊಂದು ಸ್ವರ ಮತ್ತು ವ್ಯಂಜನಕ್ಕೂ ಪ್ರತ್ಯೇಕ ಚಿಹ್ನೆ ಬಳಸಲಾಗಿದೆ. [] ಇಂದಿನವರೆಗೂ ಸತತವಾಗಿ ಇದೇ ರೀತಿಯಲ್ಲಿ ಬಳಕೆಯಾಗುತ್ತಾ ಬಂದಿದೆ. ಎರಡನೆಯ ಶತಮಾನ BCE ಕಾಲದಿಂದ ಆರಂಭಗೊಂಡು, ಈ ಅಕ್ಷರಗಳನ್ನು ಗ್ರೀಕ್‌ ಸಂಖ್ಯೆಗಳನ್ನು ಉಲ್ಲೇಖಿಸಲೂ ಸಹ ಬಳಸಲಾಗುತ್ತಿತ್ತು.

Greek alphabet
ವರ್ಗAlphabet
ಭಾಷೆಗಳುGreek
ಸಮಯಾವದಿc. 800 BCE – present[]
Parent systems
Child systems
ISO 15924Grek, 200
DirectionLeft-to-right
Unicode aliasGreek
Unicode range

ಗ್ರೀಕ್‌ ವರ್ಣಮಾಲೆಯು ಫೀನಿಷಿಯನ್‌ ವರ್ಣಮಾಲೆಯಿಂದ ಉಗಮವಾಗಿದೆ. ಗ್ರೀಕ್‌ ಭಾಷೆಯಲ್ಲಿ ಬರೆಯಲು ಮೊದಲು ಬಳಸಲಾಗುತ್ತಿದ್ದ ಲೀನಿಯರ್‌ B ಒಂದಿಗಾಗಲೀ ಅಥವಾ ಸಿಪ್ರಿಯಾಟ್‌ ಮಾತ್ರಾಕ್ಷರಮಾಲೆಯೊಂದಿಗಾಗಲೀ ಸಂಬಂಧ ಹೊಂದಿಲ್ಲ. ಲ್ಯಾಟೀನ್‌ ವರ್ಣಮಾಲೆಯೂ ಸೇರಿದಂತೆ, ಯುರೋಪ್‌ ಮತ್ತು ಮಧ್ಯಪ್ರಾಚ್ಯ ವಲಯಗಳಲ್ಲಿ ಬಳಸಲಾದ ಹಲವು ಇತರೆ ವರ್ಣಮಾಲೆಗಳ ಉಗಮಕ್ಕೆ ಇದು ಕಾರಣವಾಗಿದೆ. [] ಆಧುನಿಕ ಗ್ರೀಕ್‌ ಭಾಷೆಯಲ್ಲಿ ಬರೆಯಲ್ಲಿ ಬಳಸಲಾಗುತ್ತಿರುವುದಲ್ಲದೆ, ಇದರ ಅಕ್ಷರಗಳನ್ನು ಗಣಿತಶಾಸ್ತ್ರ ಹಾಗೂ ವಿಜ್ಞಾನಗಳಲ್ಲಿ ಚಿಹ್ನೆಗಳ ರೂಪದಲ್ಲಿ ಬಳಸಲಾಗುತ್ತಿವೆ. ವಿಶಿಷ್ಟವಾಗಿ ಭೌತಶಾಸ್ತ್ರದಲ್ಲಿ ಕಣಗಳ ಹೆಸರುಗಳು, ನಕ್ಷತ್ರಗಳ ಹೆಸರುಗಳು, ಭ್ರಾತೃತ್ವ ಮತ್ತು ಭಗಿನಿಸಮಾಜಗಳ ಹೆಸರುಗಳು, ಸಾಮಾನ್ಯವಾಗಿರುವ ಸಂಖ್ಯೆಯನ್ನೂ ಮೀರಿದ ಉಷ್ಣವಲಯದ ಬಿರುಗಾಳಿಗಳನ್ನು ಹೆಸರಿಸಲು, ಹಾಗೂ ಇತರೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಇತಿಹಾಸ

ಬದಲಾಯಿಸಿ
  • ಮೈಸೀನಿಯನ್‌ ನಾಗರೀಕತೆಯ ಅವಸಾನ ಹಾಗೂ, ಅದರ (ಆರಂಭಿಕ ಗ್ರೀಕ್‌ ಲಿಪಿ ವ್ಯವಸ್ಥೆಯಾಗಿದ್ದ) ಲೀನಿಯರ್‌ B ಲಿಪಿಯ ಬಳಕೆ ಸ್ಥಗಿತಗೊಂಡ ನಂತರ, ಗ್ರೀಕ್‌ ವರ್ಣಮಾಲೆಯು ಎಂಟನೆಯ ಶತಮಾನ BCಯಲ್ಲಿ [] ಉಗಮವಾಯಿತು.
  • ಲೀನಿಯರ್‌ B ಎಂಬುದು ಮಿನೋವನ್ನರು ರಚಿಸಿದ ಲೀನಿಯರ್‌ A ಇಂದ ಉಗಮವಾಗಿದೆ. ಮಿನೋವನ್ನರ ಭಾಷೆಗಳು ಗ್ರೀಕ್‌ ಭಾಷೆಯೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಇದರ ಫಲವಾಗಿ, ಗ್ರೀಕ್‌ ಭಾಷೆಯ ಶಬ್ದಗಳ ಲಿಪ್ಯಂತರ ಮಾಡಲು ಮೊನೋವನ್ನರ ಮಾತ್ರಾಕ್ಷರಮಾಲೆಯು ಸೂಕ್ತ ಮಾಧ್ಯಮ ಒದಗಿಸಿರಲಿಲ್ಲ.
  • ನಾವು ಇಂದು ಗುರುತಿಸುವಂತಹ ಗ್ರೀಕ್‌ ವರ್ಣಮಾಲೆಯು ಗ್ರೀಕ್‌ ಕರಾಳ ಯುಗದ ಆನಂತರ, ಅರ್ಥಾತ್‌ ಸುಮಾರು 1200 BCಯಲ್ಲಿ ಮೈಸೀನೆ ಅವಸಾನ ಹಾಗೂ ಪುರಾತನ ಗ್ರೀಸ್‌ನ ಆರೋಹಣ ನಡುವಣ ಕಾಲದಲ್ಲಿ ಉಗಮವಾಯಿತು. ಇದು 800 BCಯಲ್ಲಿ ರಚನೆಯಾದ ಹೋಮರ್‌ನ ಮಹಾಕೃತಿಗಳು, 776 BCಯಲ್ಲಿ ಆಯೋಜಿಸಲಾದ ಪುರಾತನ ಒಲಿಂಪಿಕ್‌ ಕ್ರೀಡೆಗಳನ್ನು ಒಳಗೊಂಡಿದೆ.
  • ಅತ್ಯಂತ ಗಮನಾರ್ಹ ಪರಿವರ್ತನೆಯೇನೆಂದರೆ ಸ್ವರಾಕ್ಷರಗಳು ಫೀನಿಷಿಯನ್‌ ವರ್ಣಮಾಲೆಯ ಜೋಡಿಯಾಗಿ ಬಳಸುವಿಕೆ. ಇವಿಲ್ಲದಿದ್ದಲ್ಲಿ ಗ್ರೀಕ್‌ ಭಾಷೆಯನ್ನು ಓದಲಾಗುವುದಿಲ್ಲ. [] ಸಿಮಿಟಿಕ್‌ ವರ್ಣಮಾಲೆಯಲ್ಲಿ ಸ್ವರ ಚಿಹ್ನೆಗಳನ್ನು ಮೂಲತಃ ಬಳಸಲಾಗುತ್ತಿರಲಿಲ್ಲ.
  • ಪಾಶ್ಚಾತ್ಯ ಸಿಮಿಟಿಕ್ ಲಿಪಿಗಳ ಆರಂಭಿಕ ಸಮುದಾಯದಲ್ಲಿ (ಫೀನಿಷಿಯನ್‌, ಹೆಬ್ರೂ, ಮೋಬೈಟ್‌ ಇತ್ಯಾದಿ‌), ತಿಳಿಸಲಾಗದ ಸ್ವರದೊಂದಿಗೆ ಅಥವಾ ಸ್ವರವೇ ಇಲ್ಲದೆ, ಅಕ್ಷರವೊಂದು ಎಂದಿಗೂ ವ್ಯಂಜನವಾಗಿ ನಿರೂಪಿಸಲಾಗುತ್ತಿತ್ತು. ಇದು ಸ್ಫುಟತೆಗೆ ಹಾನಿಯೊಡ್ಡುತ್ತಿರಲಿಲ್ಲ, ಏಕೆಂದರೆ, ಸಿಮಿಟಿಕ್‌ ಭಾಷೆಗಳಲ್ಲಿನ ಪದಗಳು ತ್ರಿವ್ಯಂಜನಾತ್ಮಕ ಆಧಾರದ ಮೇಲೆ ನಿಂತಿವೆ. ಇವು ವ್ಯಂಜನಗಳೊಂದಿಗೆಯೇ ಅರ್ಥವನ್ನು ನೀಡುತ್ತವೆ.
  • ಸ್ವರಗಳು ಸಂದರ್ಭದಿಂದ ಸ್ಪಷ್ಟಗೊಳಿಸಲಾಗುತ್ತವೆ. ಇದಕ್ಕೆ ತದ್ವಿರುದ್ಧವಾಗಿ, ಗ್ರೀಕ್‌ ಒಂದು ಇಂಡೋ-ಯುರೋಪಿಯನ್‌ ಭಾಷೆಯಾಗಿದೆ. ಹಾಗಾಗಿ, ಸ್ವರಗಳಲ್ಲಿನ ವ್ಯತ್ಯಾಸಗಳಿಂದಾಗಿ ಅರ್ಥಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಇದರ ಫಲವಾಗಿ, ಗ್ರೀಕ್‌ ವರ್ಣಮಾಲೆಯು ಅಕ್ಷರಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ವ್ಯಂಜನಗಳು (ಸ್ವರಗಳೊಂದಿಗೆ ಉಚ್ಚರಿಸಲಾಗುವುದು.)
  • ಅಲ್ಲದೇ ಸ್ವರಗಳು (ಉಚ್ಚರಿಸಬಲ್ಲ ಅಕ್ಷರಕ್ಕಾಗಿ ವ್ಯಂಜನಾಕ್ಷರಗಳು ಎಂದಿಗೂ ಸ್ವರಗಳೊಂದಿಗೆ ಸೇರಬೇಕಾದದ್ದು). ಹಳೆಯ ಯುಗಾರಿಟಿಕ್‌ ಅಕ್ಷರಮಾಲೆಯು ಮಾಟ್ರೆಸ್‌ ಲೆಕ್ಟಿಯೊನಿಸ್‌ ಅರ್ಥಾತ್‌ ಸ್ವರಗಳನ್ನು ಸೂಚಿಸಲು ಬಳಸಲಾದ ವ್ಯಂಜನಗಳನ್ನು ಬಳಸಿದರೂ, ಅವುಗಳನ್ನು ವ್ಯವಸ್ಥಿತವಾಗಿ ಬಳಸಲಾಗಲಿಲ್ಲ.

ಮೊದಲ ಸ್ವರಾಕ್ಷರಗಳು Α (ಆಲ್ಫಾ), Ε (ಇಪ್ಸಿಲಾನ್‌), Ι (ಐಯೊಟಾ), Ο (ಒಮೈಕ್ರಾನ್‌), ಹಾಗೂ Υ (ಅಪ್ಸಿಲಾನ್‌) ಆಗಿವೆ. ಇವು ಸಿಮಿಟಿಕ್‌ ಕಂಠದ್ವಾರೀಯ, ಗಂಟಲ ಕುಳಿಯ ಅಥವಾ, ಗ್ರೀಕ್‌ ಭಾಷೆಯಲ್ಲಿ ಆವಶ್ಯಕತೆಗಿಂತಲೂ ಮೀರಿರುವ ಧ್ವನಿಜಾರಿನ ವ್ಯಂಜನಗಳು ಇವೆ: ಕ್ರಮವಾಗಿ ('ಅಲೆಫ್‌ ), /h/ (ಹಿ ), /j/ (ಯೊಧ್‌ ), /ʕ/ (ʿayin ) ಹಾಗೂ /w/ (ವಾವ್‌ ) ಯಾವುದೇ ಆಶಯಗಳಿಲ್ಲದ ಪೂರ್ವ ಗ್ರೀಕ್‌ನಲ್ಲಿ, ಸೆಮಿಟಿಕ್‌ ಕಂಠದ್ವಾರೀಯ ವ್ಯಂಜನ /ħ/ (ಹೆತ್‌ )ದಿಂದ ಉಗಮವಾದ ಇಟಾ) ಅಕ್ಷರ Hನ್ನು ಸಹ ದೀರ್ಘ ಸ್ವರಕ್ಕಾಗಿ ಬಳಸಲಾಗಿತ್ತು, ಅಂತಿಮವಾಗಿ ಅಕ್ಷರ Ω (ಒಮೆಗಾ)ವನ್ನು ದೀರ್ಘ /ɔː/ಕ್ಕಾಗಿ ಪರಿಚಯಿಸಲಾಯಿತು. ದೀರ್ಘ, ಮುಕ್ತ e ಮತ್ತು o ಗೆ ಸೂಕ್ತ ಅಕ್ಷರಗಳ ಪರಿಚಯದ ಕಾರಣವು ಭಾಷೆಯ ಶಾಬ್ದಿಕ ರೂಪವಿಜ್ಞಾನದಲ್ಲಿದೆ. ಶಾಸ್ತ್ರೀಯ ಗ್ರೀಕ್‌ ನಿಶ್ಚಯಾರ್ಥಕ ಮತ್ತು ಸಂಭಾವನಾರ್ಥಕಗಳ ನಡುವಿನ ವ್ಯತ್ಯಾಸವನ್ನು ಹೊಂದಿತ್ತು. ಇದು ನಾವೀನ್ಯ ‘ε (E) ವಿರುದ್ಧ η (H)’ ಮತ್ತು ‘ο (O) ವಿರುದ್ಧ ω (Ω)’ ಮೂಲಕ ಸ್ಪಷ್ಟವಾಗಿ ತಿಳಿಸಲಾಗಿತ್ತು. ಇತರೆ ಸ್ವರಗಳಿಗೆ ಹೃಸ್ವ ಮತ್ತು ದೀರ್ಘ ಗಳ ನಡುವಿನ ವ್ಯತ್ಯಾಸದ ಅಗತ್ಯವಿರಲಿಲ್ಲ. ನಿಘಂಟಿನ ವಿಷಯಗಳಿಗೆ ಸಂಬಂಧಿಸಿದಂತೆ, ಇದು ಆವಶ್ಯಕತೆಗಿಂತಲೂ ಹೆಚ್ಚಿನ ಲಕ್ಷಣವಾಗಿದೆ. ಆದರೆ, η ಹಾಗೂ ω ಅಂತಹ ದೀರ್ಘ ಸ್ವರಗಳು ಶಾಬ್ದಿಕ ವ್ಯವಸ್ಥೆಯ ಹೊರಗೆ ಸಂಭವಿಸಿದಲ್ಲಿ (ಅವು α, ι ಮತ್ತು υ ಅಂತೆ ಎಲ್ಲೆಡೆಯೂ ಇದ್ದವು.) ಅವುಗಳನ್ನು ಸುಸ್ಪಷ್ಟವಾಗಿ ನಿರೂಪಿಸಬೇಕಿದೆ. ಇನ್ನೂ ಎರಡು ದೀರ್ಘಸ್ವರಗಳು ಸುಸ್ಪಷ್ಟ ವಿಶಿಷ್ಟತೆ ಹೊಂದಿದವು - ದೀರ್ಘ e (ει) ಹಾಗೂ ದೀರ್ಘ u (ου) - ಇವರೆಡೂ ಸಹ ಕೂಡಕ್ಷರಗಳೊಂದಿಗೆ ಪಡೆದುಕೊಂಡಿದೆ.

ಗ್ರೀಕ್ ಭಾಷೆಯು‌ Φ (phi), Χ (chi) ಮತ್ತು Ψ (psi) ಎಂಬ ಮೂರು ಹೊಸ ವ್ಯಂಜನಗಳನ್ನು ಪರಿಚಯಿಸಿತು. ರಚನೆಯಾದ ಕ್ರಮದಲ್ಲಿಯೇ ಅವುಗಳನ್ನು ವರ್ಣಮಾಲೆಯ ಅಂತ್ಯದಲ್ಲಿ ಸೇರಿಸಲಾಯಿತು. ಫಿನೀಷಿಯನ್‌ನಲ್ಲಿ ಹೋಲಿಸಬಹುದಾದ ಮಹಾಪ್ರಾಣಗಳ ಕೊರತೆಯನ್ನು ಈ ವ್ಯಂಜನಗಳು ತುಂಬಿಸಿದವು. ಪಶ್ಚಿಮ ಗ್ರೀಕ್‌ನಲ್ಲಿ, /ks/ ಗಾಗಿ Χ ಮತ್ತು /kʰ/ ಗಾಗಿ Ψ ಬಳಸಲಾಗುತ್ತಿತ್ತು. ಹಾಗಾಗಿ, ಪಶ್ಚಿಮ ಗ್ರೀಕ್ ಅಕ್ಷರಮಾಲೆಯಿಂದ ಪಡೆಯಲಾದ ಲ್ಯಾಟಿನ್‌ ಅಕ್ಷರ X ನ ಮೌಲ್ಯ. ಈ ಅಕ್ಷರಗಳ ಮೂಲವು ಚರ್ಚಾಸ್ಪದವಾಗಿದೆ.

Ϻ (ಸ್ಯಾನ್‌) ಎಂಬ ಅಕ್ಷರವನ್ನು Σ (ಸಿಗ್ಮಾ)'ದೊಂಗಿದಿನ ವ್ಯತ್ಯಾಸದೊಂದಿಗೆ ಬಳಸಲಾಗಿತ್ತು. ಶಾಸ್ತ್ರೀಯವಾಗಿ, ಸಿಗ್ಮಾ ಹೆಚ್ಚು ಸಮ್ಮತಿ ಪಡೆದು, ಸ್ಯಾನ್‌ ವರ್ಣಮಾಲೆಯಿಂದ ಕಣ್ಮರೆಯಾಯಿತು. ಅಕ್ಷರಗಳಾದ Ϝ (ವಾವ್‌, ಆನಂತರ ವೌ ಎನ್ನಲಾದ) ಮತ್ತು Ϙ (ಖೊಪ್ಪ) ಸಹ ಬಳಕೆಯಾಗದೆ ಮಾಸಿಹೋದವು.

ಮೊದಲನೆಯದು ಕೇವಲ ಪಾಶ್ಚಾತ್ಯ ಭಾಷೆಗಳಿಗಾಗಿ ಅಗತ್ಯವಾಗಿತ್ತು, ಎರಡನೆಯದು ಬಳಕೆಯಾದದ್ದೇ ಇಲ್ಲ. ಆದರೂ, ಈ ಅಕ್ಷರಗಳು ಅಯಾನಿಕ್‌ ಸಂಖ್ಯಾ ವ್ಯವಸ್ಥೆಯಲ್ಲಿ ಉಳಿದುಕೊಂಡವು. ಇದರಂತೆ, ನಿಖರ ಸಂಖ್ಯಾ ಮೌಲ್ಯವನ್ನು ಹೊಂದಿರುವ ಅಕ್ಷರಗಳ ಸರಣಿಯನ್ನು ಬರೆಯುವುದಾಗಿತ್ತು. Ϡ ಐಯಾನಿಯಾದಿಂದ (ಸಾಂಪಿ) ಎಂಬ ಅಪರೂಪದ ಸ್ಥಳೀಯ ಲಿಪಿಯನ್ನು ಆನಂತರದ ಕಾಲದಲ್ಲಿ ಪರಿಚಯಿಸಲಾಯಿತು. ಇದು ಸುಮಾರು 900ನೆಯ ಇಸವಿಯಲ್ಲಿ ಪರಿಚಯಿಸಲಾಗಿರಬಹುದು. ಮೇಲೆ ಎಡಭಾಗದಲ್ಲಿ ಒಂದು ಗುರುತು (1000ಕ್ಕೆ 'A, ಇತ್ಯಾದಿ) ಬಳಸಿ, ಸಾವಿರದ ಸಂಖ್ಯೆಯನ್ನು ನಮೂದಿಸಲಾಗುತ್ತಿತ್ತು.

ಗ್ರೀಕ್‌ ಸಣ್ಣಕ್ಷರಗಳು ಆನಂತರದ ಕಾಲದಲ್ಲಿ ಬಂದ ಕಾರಣ, ಸ್ಯಾನ್‌ನ ಯಾವುದೇ ಐತಿಹಾಸಿಕ ಸಣ್ಣಕ್ಷರವಿಲ್ಲ. ಇತರೆ ಅಕ್ಷರಗಳಿಗಾಗಿ ಸಣ್ಣಕ್ಷರಗಳು ಕೇವಲ ಸಂಖ್ಯೆಗಳಿಗೆ ಮಾತ್ರ ಬಳಸಲಾಗುತ್ತಿತ್ತು. ಆಧುನಿಕ ಗ್ರೀಕರು ಆರನೆಯ (6) ಸಂಖ್ಯೆಗಾಗಿ, ವೌ ಅಥವಾ ΣΤ/στ ಅಲಭ್ಯವಾದಲ್ಲಿ ಸ್ಟಿಗ್ಮಾ ಎಂಬ ಹಳೆಯ ಸಂಯುಕ್ತಾಕ್ಷರವನ್ನು ಬಳಸುವರು. ಸಂಖ್ಯೆ 90ಕ್ಕಾಗಿ ಆಧುನಿಕ Z -ಆಕಾರದ ಖೊಪ್ಪಾ ರೂಪಗಳನ್ನು ಬಳಸಲಾಗುತ್ತಿತ್ತು: Ϟ, ϟ. (ಗಮನಿಸಿ, ಕೆಲವು ಅಂತರಜಾಲ ವೀಕ್ಷಕ/ಫಾಂಟ್‌ ಸಂಯುಕ್ತಗಳು (ಇಂಟರ್ನೆಟ್‌ ಬ್ರೌಸರ್/ಫಾಂಟ್‌ ಕಾಂಬಿನೇಷನ್ಸ್‌) ಇನ್ನೊಂದು ಖೊಪ್ಪಾವನ್ನು ಇಲ್ಲಿ ಪ್ರದರ್ಶಿಸುತ್ತದೆ.)‌

ಮೂಲತಃ ಗ್ರೀಕ್‌ ವರ್ಣಮಾಲೆಯ ಹಲವು ವ್ಯತ್ಯಾಸಗಳಿದ್ದವು.; ಇವುಗಳಲ್ಲಿ ಪ್ರಮುಖವಾಗಿ ಪಾಶ್ಚಾತ್ಯ (ಚಾಲ್ಕಿಡಿಯನ್‌) ಹಾಗೂ ಪೂರ್ವ (ಅಯಾನಿಕ್) ಗ್ರೀಕ್‌. ಮೊದಲನೆಯದು (ಪಾಶ್ಚಾತ್ಯ ಗ್ರೀಕ್‌) ಹಳೆಯ ಇಟಾಲಿಕ್‌ ವರ್ಣಮಾಲೆ ಹಾಗು ಅದರಿಂದ ಉಗಮವಾದ ಲ್ಯಾಟೀನ್‌ ವರ್ಣಮಾಲೆಗೆ ಕಾರಣವಾಯಿತು. ಪೂರ್ವ ಗ್ರೀಕ್‌ ಇಂದಿನ ಗ್ರೀಕ್‌ ವರ್ಣಮಾಲೆಯ ಆಧಾರವಾಗಿದೆ. ಅಥೆನ್ಸ್‌ ವಲಯವು, ಹೋಮರ್‌ನ ಕೃತಿಗಳು ಮತ್ತು ಕಾನೂನಿನಂತಹ ಅಧಿಕೃತ ಪತ್ರಗಳಿಗಾಗಿ ಮೂಲತಃ ಆಟಿಕ್‌ ಲಿಪಿಯನ್ನು ಬಳಸುತ್ತಿತ್ತು. ಇದು ಕೇವಲ ಆಲ್ಫಾದಿಮದ ಅಪ್ಸಿಲಾನ್‌ ತನಕದ ಅಕ್ಷರಗಳನ್ನು ಮಾತ್ರ ಹೊಂದಿತ್ತು, ಶಬ್ದ 'h'ಗಾಗಿ ದೀರ್ಘ 'e' ಬದಲು ಇಟಾ ಅಕ್ಷರವನ್ನು ಬಳಸಲಾಗುತ್ತಿತ್ತು. ಇಸವಿ 403 BCಯಲ್ಲಿ, ಅಥೆನ್ಸ್‌ ತನ್ನ ಮಾನದಂಡದ ದರ್ಜೆಗಾಗಿ ಅಯಾನಿಕ್‌ ಲಿಪಿಯನ್ನು ಆಯ್ದುಕೊಂಡಿತು. ಶೀಘ್ರದಲ್ಲಿಯೇ ಇತರೆ ಆವೃತ್ತಿಗಳು ಕಾಣೆಯಾದವು.

 
ಅಥೆನ್ಸ್‌ನ ನ್ಯಾಷನಲ್‌ ಆರ್ಕಿಯೊಲಾಜಿಕಲ್‌ ಮ್ಯೂಸಿಯಮ್‌ನಲ್ಲಿ ಮಣ್ಣಿನ ಪಾತ್ರೆಯ ಮೇಲೆ ಆರಂಭಿಕ ಗ್ರೀಕ್ ಅಕ್ಷರಮಾಲೆ

ಆಗಲೇ ಗ್ರೀಕ್‌ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತಿತ್ತು; ಆದರೆ ಮೂಲತಃ ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು (ಅಸಮಪಾರ್ಶ್ವದ ಅಕ್ಷರಗಳನ್ನು ಹಿಮ್ಮೊಗ ಮಾಡಲಾಗುತ್ತಿತ್ತು), ಮಧ್ಯದಲ್ಲಿ ಯಾವುದೇ ರೀತಿ ಬರೆಯಲಾಗುತ್ತಿತ್ತು - ಅಥವಾ, ಅನುಕ್ರಮದ ಸಾಲುಗಳು ದಿಕ್ಕು ಬದಲಿಸುವಂತಹ, ಬಹುಶಃ ಸವ್ಯಾಪಸವ್ಯ ಎನ್ನಲಾದ ಶೈಲಿಯಲ್ಲಿ ಸಹ ಬರೆಯಲಾಗುತ್ತಿತ್ತು.

ಹೆಲೀನಿಸ್ಟಿಕ್‌ ಕಾಲದಲ್ಲಿ, ಉಚ್ಚಾರಣಾ ವಿಶಿಷ್ಟತೆಗಾಗಿ, ಬೈಜಾಂಟಿಯಮ್‌ನ ಅರಿಸ್ಟೊಫೇನ್ಸ್‌ ಗ್ರೀಕ್‌ ಅಕ್ಷರಗಳಿಗೆ ಡಯಕ್ರಿಟಿಕ್‌ಗಳನ್ನು ಪರಿಚಯಿಸಿದ. ಗ್ರೀಕ್‌ ಲಿಪಿಗಳು ಮಧ್ಯಯುಗಗಳಲ್ಲಿ ಲ್ಯಾಟೀನ್‌ ಅಕ್ಷರಮಾಲೆಯಂತೆ ಬದಲಾವಣೆಗಳನ್ನು ಕಂಡವು. ಹಳೆಯ ಲಿಪಿಗಳು ಚಿರಸ್ಥಾಯಿ ಲಿಪಿಗಳನ್ನಾಗಿ ಉಳಿಸಿಕೊಂಡರೆ, ಅನ್ಸಿಯಲ್‌ (ಒಂದು ಬಗೆಯ ದೊಡ್ಡಕ್ಷರದ ಹಸ್ತಪ್ರತಿ) ಹಾಗೂ ಅಂತಿಮವಾಗಿ ಸಣ್ಣಕ್ಷರ ಲಿಪಿಗಳು ಪ್ರಾಬಲ್ಯ ಮೆರೆದವು. σ ಅಕ್ಷರವನ್ನು ಪದಗಳ ಕೊನೆಯಲ್ಲಿರುವಾಗ ς ಎಂದು ನಮೂದಿಸಲಾಗಿದೆ. ಇದು ಲ್ಯಾಟೀನ್‌ ಭಾಷೆಯಲ್ಲಿ ಹ್ರಸ್ವ ಹಾಗೂ ದೀರ್ಘ s ಬಳಕೆಯೊಂದಿಗೆ ಸಮಾನಾಂತರ ಹೊಂದಿದೆ.

ಅಕ್ಷರಗಳ ಹೆಸರುಗಳು

ಬದಲಾಯಿಸಿ

ಪ್ರತಿಯೊಂದು ಫೀನಿಷಿಯನ್‌ ಅಕ್ಷರವೂ ಸಹ ಆ ಅಕ್ಷರದ ಶಬ್ದವನ್ನು ನಿರೂಪಿಸುವ ಒಂದು ಪದವಾಗಿದೆ. ಹಾಗಾಗಿ 'ox' ಎಂಬ ಪದಕ್ಕೆ ʾaleph ನ್ನು ಕಂಠದ್ವಾರೀಯ stop /ʔ/, bet ಅಥವಾ /b/ ಶಬ್ದಕ್ಕಾಗಿ 'house' ಇತ್ಯಾದಿ. ಗ್ರೀಕರು ಅಕ್ಷರಗಳನ್ನು ಆಯ್ದುಕೊಂಡಾಗ, ಹಲವು ಫೀನಿಷಿಯನ್‌ ಹೆಸರುಗಳನ್ನು ಉಳಿಸಿಕೊಳ್ಳಲಾಯಿತು ಅಥವಾ ಗ್ರೀಕ್‌ ಧ್ವನಿವಿಜ್ಞಾನಕ್ಕೆ ಹೊಂದಿಕೊಳ್ಳುವಂತೆ ಅಲ್ಪಪ್ರಮಾಣದ ಪರಿವರ್ತನೆ ಮಾಡಲಾಯಿತು. ಹಾಗಾಗಿ, ʾಅಲೆಫ್‌, ಬೀಟ್‌, ಗಿಮೆಲ್‌ ಎಂಬುದು ಆಲ್ಫಾ, ಬೀಟಾ, ಗಾಮಾ ಎಂದಾದವು. ಅಕ್ಷರಗಳಿಗೆ ಹೆಸರುಪಟ್ಟಿಯಾಗುವುದರ ಹೊರತು, ಈ ಎರವಲು ಪಡೆದ ಹೆಸರುಗಳಿಗೆ ಯಾವುದೇ ಗ್ರೀಕ್‌ ಅರ್ಥವಿರಲಿಲ್ಲ. ಆದರೂ, ಗ್ರೀಕರು ಆನಂತರ ಸೇರಿಸಿದ ಅಥವಾ ಪರಿವರ್ತಿಸಿದ ಕೆಲವು ಚಿಹ್ನೆಗಳು ಹೆಸರು ಹಾಗೂ ಆರ್ಥಗಳನ್ನು ಹೊಂದಿವೆ. ಉದಾಹರಣೆಗೆ, ಒ ಮೈಕ್ರಾನ್‌ ಹಾಗೂ ಒ ಮೆಗಾ ಎಂದರೆ 'ಸಣ್ಣ o' ಹಾಗೂ 'ದೊಡ್ಡ o' ಎಂದಾಗುತ್ತದೆ. ಇದೇ ರೀತಿ, ಇ ಪ್ಸಿಲಾನ್ ‌ ಹಾಗೂ ಯು ಪ್ಸಿಲಾನ್‌ ಕ್ರಮವಾಗಿ ಸರಳ e ಮತ್ತು ಸರಳ u ಎನ್ನಲಾಗಿದೆ.

ಪ್ರಮುಖ ಆಕ್ಷರಗಳು

ಬದಲಾಯಿಸಿ

ಗ್ರೀಕ್‌ ಅಕ್ಷರಗಳು ಹಾಗು ಅದರ ರೋಮನೀಕೃತ ರೂಪಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ. ಪ್ರತಿಯೊಂದು ಗ್ರೀಕ್‌ ಅಕ್ಷರದ ಆಧಾರವಾದ ತತ್ಸಮ ಫೀನಿಷಿಯನ್‌ ಅಕ್ಷರವನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ. ಅಂತರರಾಷ್ಟ್ರೀಯ ಉಚ್ಚಾರಣಾನುರೂಪ (ಫೋನೆಟಿಕ್‌) ವರ್ಣಮಾಲೆಯನ್ನು ಬಳಸಿ ಈ ಉಚ್ಚಾರಣೆಯನ್ನು ಲಿಪ್ಯಂತರ ಮಾಡಲಾಗಿದೆ.

ಕೆಳಗೆ ನೀಡಲಾದ ಶಾಸ್ತ್ರೀಯ ಉಚ್ಚಾರಣೆಯು, ಐದನೆಯ ಶತಮಾನ BCಯ ಅಪರಾರ್ಧ ಹಾಗೂ ನಾಲ್ಕನೆಯ ಶತಮಾನ BCಯ ಆರಂಭ ಕಾಲದ ಆಟಿಕ್‌ನ‌ ಪುನರ್ನಿರ್ಮಿತ ಉಚ್ಚಾರಣೆಯಾಗಿದೆ. ಕೆಲವು ಅಕ್ಷರಗಳು ಶಾಸ್ತ್ರೀಯ-ಪೂರ್ವ ಕಾಲ ಅಥವಾ ಆಟಿಕ್‌-ಇತರೆ ಭಾಷೆಗಳಲ್ಲಿ ವಿವಿಧ ಉಚ್ಚಾರಣಾ ಶೈಲಿಗಳನ್ನು ಹೊಂದಿದ್ದವು. ವಿವರಗಳಿಗಾಗಿ, ಗ್ರೀಕ್‌ ವರ್ಣಮಾಲೆಯ ಇತಿಹಾಸ ಮತ್ತು ಪುರಾತನ ಗ್ರೀಕ್ ಧ್ವನಿವಿಜ್ಞಾನ ನೋಡಿ. ಶಾಸ್ತ್ರೀಯ-ನಂತರದ ಪುರಾತನ ಗ್ರೀಕ್‌ ಉಚ್ಚಾರಣೆ ಕುರಿತು ವಿವರಗಳಿಗಾಗಿ, ಕೊಯಿನ್‌ ಗ್ರೀಕ್‌ ಧ್ವನಿವಿಜ್ಞಾನ ನೋಡಿ.

ಅಕ್ಷರ ಸರಿಹೊಂದುವ
ಫೀನಿಷಿಯನ್‌
ಅಕ್ಷರಗಳು
ಹೆಸರು ಲಿಪ್ಯಂತರ1 ಉಚ್ಚಾರಣೆ ಸಾಂಖ್ಯಿಕ
ಮೌಲ್ಯ
ಇಂಗ್ಲೀಷ್ ಪ್ರಾಚೀನ, ಪುರಾತನ
ಗ್ರೀಕ್
ಮಧ್ಯಯುಗ (ಪ್ರಾಚೀನ)
ಗ್ರೀಕ್
(ಪಾಲಿಟೋನಿಕ್‌)
Modern
Greek
ಪ್ರಾಚೀನ, ಪುರಾತನ
ಗ್ರೀಕ್
ಆಧುನಿಕತೆ ಇತಿಹಾಸ
ಗ್ರೀಕ್
ಶಾಸ್ತ್ರೀಯ
ಪ್ರಾಚೀನ, ಪುರಾತನ
ಗ್ರೀಕ್
ಆಧುನಿಕತೆ ಇತಿಹಾಸ
ಗ್ರೀಕ್
Α α   Aleph ಆಲ್ಫಾ ἄλφα άλφα a [a] [aː] [a] 1
Β β   Beth ಬೀಟಾ βῆτα βήτα b v [b] [v] 2
Γ γ   Gimel ಗಾಮಾ γάμμα γάμμα
γάμα
g gh, g, j [ɡ] [ɣ], [ʝ] 3
Δ δ   Daleth ಡೆಲ್ಟಾ δέλτα δέλτα d d, dh, th [d] [ð] 4
Ε ε   He ಇಪ್ಸಿಲಾನ್‌ εἶ ἒ ψιλόν έψιλον e [e] 5
Ζ ζ   Zayin ಝೀಟಾ ζῆτα ζήτα z [zd]
(ಅಥವಾ [dz])
ಆನಂತರ [zː]
[z] 7
Η η   Heth ಇಟಾ ἦτα ήτα e, ē i [ɛː] [i] 8
Θ θ   Teth ತೀಟಾ θῆτα θήτα th [tʰ] [θ] 9
Ι ι   Yodh ಐಯೊಟಾ ἰῶτα ιώτα
γιώτα
i [i] [iː] [i], [ʝ] 10
Κ κ   Kaph ಕಪ್ಪಾ κάππα κάππα
κάπα
k [k] [k], [c] 20
Λ λ   Lamedh ಲ್ಯಾಮ್ಡಾ λάβδα λάμβδα λάμδα
λάμβδα
l [l] 30
Μ μ   Mem ಮ್ಯೂ μῦ μι
μυ
m [m] 40
Ν ν   Nun ನ್ಯೂ νῦ νι
νυ
n [n] 50
Ξ ξ   Samekh ಗ್ಸೈ ξεῖ ξῖ ξι x x, ks [ks] 60
Ο ο   'Ayin ಒಮೈಕ್ರಾನ್‌ οὖ ὂ μικρόν όμικρον o [o] 70
Π π   Pe ಪೈ πεῖ πῖ πι p [p] 80
Ρ ρ   Resh ರೊ ῥῶ ρω r (ῥ: rh) r [r], [r̥] [r] 100
Σ σ ς   Sin ಸಿಗ್ಮಾ σῖγμα σίγμα #s [s] 200
Τ τ   Taw ಟಾವ್‌ ταῦ ταυ t [t] 300
Υ υ   Waw ಅಪ್ಸೈಲಾನ್‌ ὖ ψιλόν ύψιλον u, y y, v, f [y] [yː]
(earlier [ʉ] [ʉː])
[i] 400
Φ φ ಮೂಲ ವಿವಾದಿತ
(ಪಠ್ಯ ನೋಡಿ)
ಫೈ φεῖ φῖ φι ph f [pʰ] [f] 500
Χ χ ಚೈ χεῖ χῖ χι ch ch, kh [kʰ] [x], [ç] 600
Ψ ψ ಪ್ಸೈ ψεῖ ψῖ ψι ps [ps] 700
Ω ω   'Ayin ಒಮೆಗಾ ὦ μέγα ωμέγα o, ō o [ɔː] [o] 800
  1. ವಿವರಗಳು ಮತ್ತು ವಿಭಿನ್ನ ಲಿಪ್ಯಂತರ ವ್ಯವಸ್ಥೆಗಳಿಗಾಗಿ ಗ್ರೀಕ್‌ನ ರೋಮನೀಕರಣ ನೋಡಿ.

ಭಿನ್ನ ರೂಪಗಳು

ಬದಲಾಯಿಸಿ

ಕೆಲವು ಅಕ್ಷರಗಳು ಭಿನ್ನ ಆಕಾರಗಳಲ್ಲಿರಬಹುದು; ಬಹುಮಟ್ಟಿಗೆ ಮಧ್ಯ ಯುಗಗಳ ಸಣ್ಣಾಕ್ಷರದ ಕೈಬರಹದಿಂದ ಪಡೆದವಾಗಿವೆ. ಗ್ರೀಕ್‌ ಭಾಷೆಯ ಸಹಜ ಮುದ್ರಣಕಲೆಯಲ್ಲಿ ಅವುಗಳ ಬಳಕೆಯು ಇಡಿಯಾಗಿ ಫಾಂಟ್‌ ಶೈಲಿಯ ವಿಚಾರವೇ ಆಗಿದ್ದರೆ, ಇಂತಹ ಕೆಲವು ಭಿನ್ನ ರೂಪಗಳಿಗೆ ಯೂನಿಕೋಡ್‌ನಲ್ಲಿ ಪ್ರತ್ಯೇಕ ಸಂಕೇತಗಳನ್ನು ನೀಡಲಾಗಿದೆ.

  • ϐ ('ಸುತ್ತಿಕೊಂಡಿರುವ ಬೀಟಾ') ಚಿಹ್ನೆಯು ಬೀಟಾ (β)ದ ಕೂಡುಬರಹದ ರೂಪವಾಗಿದೆ. ಪುರಾತನ ಗ್ರೀಕ್‌ ಮುದ್ರಣಾಕಲೆಯ ಫ್ರೆಂಚ್ ಸಂಪ್ರದಾಯದಲ್ಲಿ β ಅಕ್ಷರವನ್ನು ಪದದ ಮೊದಲ ಅಕ್ಷರ ಹಾಗೂ ϐ ಅಕ್ಷರವನ್ನು ಪದದ ಮಧ್ಯಭಾಗದಲ್ಲಿ ಬಳಸಲಾಗುತ್ತದೆ.
  • ಇಪ್ಸಿಲಾನ್‌ ಅಕ್ಷರವು ಸಮನಾಗಿ ಪದೇಪದೇ ಆವರ್ತಿಸುವ, ಶೈಲಿಯ ಭಿನ್ನತೆಗಳಾಗಿ ಸಂಭವಿಸುತ್ತವೆ.   ('ಬಾಲಚಂದ್ರಾಕೃತಿಯ ಇಪ್ಸಿಲಾನ್‌', ಒಂದು ಗೀಟು ಹೊಂದಿರುವ ಅರ್ಧವೃತ್ತ) ಅಥವಾ   (ತಿರುಗುಮುರುಗಾಗಿರುವ 3 ಸಂಖ್ಯೆಯಂತೆ). ϵ ಚಿಹ್ನೆಯು (U+03F5) ಬಾಲಚಂದ್ರಾಕೃತಿಯ ರೂಪಕ್ಕೆ ವಿಶಿಷ್ಟವಾಗಿ ಸೂಚಿಸಲಾಗಿದೆ. ಇದನ್ನು ತಾಂತ್ರಿಕ ಚಿಹ್ನೆಯಾಗಿ ಬಳಸಲಾಗಿದೆ.
  • ϑ ('ಲಿಪಿಯ ತೀಟಾ') ಚಿಹ್ನೆಯು ತೀಟಾದ (θ) ಕೂಡಕ್ಷರ ರೂಪವಾಗಿದೆ. ಇದು ತಾಂತ್ರಿಕ ಚಿಹ್ನೆಯ ರೂಪದಲ್ಲಿ ವಿಶಿಷ್ಟ ಅರ್ಥದೊಂದಿಗೆ ಬಳಸಲಾಗಿದೆ.
  • ϰ ಚಿಹ್ನೆ ('ಕಪ್ಪಾ ಚಿಹ್ನೆ') ಕಪ್ಪಾ (κ) ಅಕ್ಷರದ ಕೂಡಕ್ಷರ ರೂಪವಾಗಿದೆ. ಇದು ತಾಂತ್ರಿಕ ಚಿಹ್ನೆಯಾಗಿ ಬಳಕೆಯಾಗುತ್ತದೆ.
  • ϖ ಚಿಹ್ನೆ ('ಭಿನ್ನ ಪೈ') ಪೈ (π) ಹಳೆಯಕಾಲದ ಲಿಪಿರೂಪವಾಗಿದೆ. ಇದನ್ನೂ ಸಹ ತಾಂತ್ರಿಕ ಚಿಹ್ನೆಯಾಗಿ ಬಳಸಲಾಗಿದೆ.
  • ರೊ (ρ) ಅಕ್ಷರವು ವಿಭಿನ್ನ ಶೈಲಿಗಳಲ್ಲಿ ಸಂಭವಿಸಬಹುದು. ಇದರ ಬಾಲವು ನೇರವಾಗಿ ಕೆಳಕ್ಕೆ ಅಥವಾ ಬಲಕ್ಕೆ ತಿರುಗಿರುತ್ತದೆ. ϱ (U+03F1) ಸುರುಳಿಯ ರೂಪಕ್ಕೆ ವಿಶಿಷ್ಟವಾಗಿ ಸೂಚಿಸಲಾಗಿದೆ. ಇದನ್ನು ತಾಂತ್ರಿಕ ಚಿಹ್ನೆಯಾಗಿ ಬಳಸಲಾಗಿದೆ.
  • ಪ್ರಮಾಣಿತ ಅಕ್ಷರ ಸಂಯೋಜನೆಯಲ್ಲಿ ಸಿಗ್ಮಾ ಅಕ್ಷರವು ಎರಡು ಭಿನ್ನತೆಗಳನ್ನು ಹೊಂದಿದೆ: ς ಅಕ್ಷರವನ್ನು ಕೇವಲ ಪದಗಳ ಕೊನೆಯಲ್ಲಿ ಮಾತ್ರ ಬಳಸಲಾಗುತ್ತದೆ. σ ಅಕ್ಷರವನ್ನು ಪದದಲ್ಲಿ ಎಲ್ಲಿ ಬೇಕಾದರೂ ಬಳಸಬಹುದು. ϲ ರೂಪವು (ಲ್ಯಾಟೀನ್‌ ಭಾಷೆಯ c ಅಕ್ಷರವನ್ನು ಹೋಲುವ 'ಬಾಲಚಂದ್ರಾಕಾರದ ಸಿಗ್ಮಾ') ಮಧ್ಯಯುಗದ ಶೈಲಿಯ ಭಿನ್ನ ರೂಪವಾಗಿದೆ. ಅಂತಿಮ/ಅಂತಿಮವಲ್ಲದ ವೈಲಕ್ಷಣ್ಯವಿಲ್ಲದೆಯೇ ಎರಡೂ ಪರಿಸರಗಳಲ್ಲಿ ಬಳಸಬಹುದಾಗಿದೆ.
  • ಅಪ್ಸೈಲಾನ್‌ ದೊಡ್ಡಕ್ಷರ ರೂಪವು (Υ) ವಿಬಿನ್ನ ಶೈಲಿಯ ರೂಪಗಳಲ್ಲಿ ಸಂಭವಿಸಬಹುದು. ಅಕ್ಷರದ ಮೇಲ್ಭಾಗವು ಲ್ಯಾಟೀನ್‌ Y ತರಹ ನೇರವಾಗಿಯೋ ಅಥವಾ ಸ್ವಲ್ಪಮಟ್ಟಿಗೆ ಸುರುಳಿಯಾಗಿರುತ್ತದೆ. ϒ ಚಿಹ್ನೆಯು (U+03D2) ವಿಶಿಷ್ಟವಾಗಿ ಸುರುಳಿಯಾಕಾರಕ್ಕೆ ಸೂಚಿಸಲಾಗಿದ್ದು, ತಾಂತ್ರಿಕ ಚಿಹ್ನೆಯಾಗಿ ಬಳಕೆಯಾಗುತ್ತದೆ.
  • ಫೈ ಅಕ್ಷರವು ಸಮನಾಗಿ ಪದೇ ಪದೇ ಆವರ್ತಿಸುವ ಎರಡು ಶೈಲಿಯ ಭಿನ್ನ ರೂಪಗಳಲ್ಲಿ ಸಂಭವಿಸಬಹುದು, ಪ್ರತಿಯೊಂದೂ   (ವೃತ್ತ ಮತ್ತು ಅದರ ಮಧ್ಯೆ ಗೀಟು) ಅಥವಾ   (ಮೇಲ್ಭಾಗದಲ್ಲಿ ತೆರೆದಿರುವ ಸುರುಳಿಯ ಆಕಾರ), ರೂಪದಲ್ಲಿ ಸಂಭವಿಸಬಹುದು. ϕ (U+03D5) ಚಿಹ್ನೆಯು ವಿಶಿಷ್ಟವಾಗಿ ಮುಚ್ಚಿರುವ ರೂಪಕ್ಕೆ ಸೂಚಿಸಲಾಗಿದೆ. ಇದನ್ನು ತಾಂತ್ರಿಕ ಚಿಹ್ನೆಯಾಗಿ ಬಳಸಲಾಗಿದೆ.

ಬಳಕೆಯಲ್ಲಿಲ್ಲದ ಅಕ್ಷರಗಳು

ಬದಲಾಯಿಸಿ

ಕೆಳಗಿನ ಅಕ್ಷರಗಳು ಪ್ರಮಾಣಿತ ಗ್ರೀಕ್‌ ವರ್ಣಮಾಲೆಯ ಅಂಶವಾಗಿಲ್ಲ. ಆದರೆ ಶಾಸ್ತ್ರೀಯ ಕಾಲದ ಆರಂಭದಲ್ಲಿ ಕೆಲವು ಭಾಷೆಗಳಲ್ಲಿ ಅವು ಬಳಕೆಯಲ್ಲಿದ್ದವು. ವೌ, ಸ್ಯಾನ್‌, ಖೊಪ್ಪಾ ಮತ್ತು ಸಾಂಪಿ ಅಕ್ಷರಗಳನ್ನು ಗ್ರೀಕ್‌ ಸಂಖ್ಯೆಗಳಲ್ಲಿ ಬಳಸಲಾಗುತ್ತಿತ್ತು.

ಅಕ್ಷರಗಳು ಸರಿಹೊಂದುವ
ಫೀನಿಷಿಯನ್‌
ಅಕ್ಷರಗಳು
ಹೆಸರು ಲಿಪ್ಯಂತರ ಉಚ್ಚಾರಣೆ ಸಾಂಖ್ಯಿಕ ಮೌಲ್ಯ
ಇಂಗ್ಲೀಷ್ ಆರಂಭಿಕ
ಗ್ರೀಕ್
ಆನಂತರದ
ಗ್ರೀಕ್
(ಪಾಲಿಟೋನಿಕ್‌)
Ϝ ϝ (Ͷ ͷ)   Waw(ವಾವ್ ) ವೌ ϝαῦ δίγαμμα w [w] 6
Ϛ ϛ ಸ್ತಿಗ್ಮ στίγμα st [st] 6
Ͱ ͱ   Heth ಹೆತ ἧτα ἦτα h [h]
Ϻ ϻ   Tsade (position)(ಟಿಸೇಡ್ ಸ್ಥಳಾಕ್ರಮಣ)
  Sin (name)(ಸಿನ್ ) (ನಾಮ)
ಸನ್ ϻάν σάν s [s]
Ϙ ϙ (Ϟ ϟ)   Qoph(ಊಫ್ ) ಕೊಪ್ಪ ϙόππα κόππα q [k] /u/, /o/ ಕ್ಕೆ ಮುಂಚೆ 90
Ͳ ͳ (Ϡ ϡ) ಮೂಲ ವಿವಾದಿತ,
ಬಹುಶಃ   Tsade(ಟಿಸೇಡ್ )
ಸಮ್ಪಿ σαμπῖ ss ಬಹುಶಃ ಘೃಷ್ಟಧ್ವನಿ,
ಆದರೆ ನಿಖರ ಮೌಲ್ಯ ಇನ್ನೂ ಚರ್ಚಿತ;
[sː], [ks], [ts] ಪ್ರಸ್ತಾಪಿಸಲಾಗಿದೆ
900
Ϸ ϸ Origin disputed,
possibly   Sin
ಶೊ š [ʃ]
  • ಅದರ ಉಚ್ಚಾರಣಾ ಸಂಕೇತ (ಧ್ವನಿಯ ಓಷ್ಠ್ಯ-ಕಂಠ್ಯ ಉಚ್ಚಾರಣೆ) [w] ಐಯಾನಿಕ್‌ ಭಾಷೆ ಹಾಗು ಹಲವು ಇತರೆ ಭಾಷೆಗಳಿಂದ ಮಾಯವಾದ ಕಾರಣ, ವೌ ವರ್ಣಮಾಲೆಯಿಂದ ಮಾಸಿಹೋಯಿತು. ಆರನೆಯ ಸಂಖ್ಯೆಯನ್ನು ಸೂಚಿಸುವುದರ ಮೂಲಕ ಅದು ಸಂಖ್ಯೆ ಚಿಹ್ನೆಯಾಗಿ ಬಳಕೆಯಲ್ಲಿದೆ. ಮಧ್ಯಯುಗದ ಗ್ರೀಕ್‌ ಕೈಬರಹದಲ್ಲಿ, ಸಣ್ಣಾಕ್ಷರ ರೂಪದಲ್ಲಿ ಒಂದೇ ರೂಪವನ್ನು ಹೊಂದಿದ್ದ ಸಂಯುಕ್ತಾಕ್ಷರ ಚಿಹ್ನೆ ಸ್ಟಿಗ್ಮಾ (ϛ) ದೊಂದಿಗೆ ಸಣ್ಣಾಕ್ಷರ ರೂಪದಲ್ಲಿ ಒಂದೇ ರೂಪವನ್ನು ಹೊಂದಿದ್ದ ಒಟ್ಟಿಗೆ ಬೆಸೆಯಲಾಯಿತು.
  • ಡಿಸಿಗ್ಮಾ ಎಂದೂ ಕರೆಯಲಾದ ಸಾಂಪಿ, ಯುಗಳೀಕೃತ ಗೃಷ್ಟಧ್ವನಿ ಇದು ಆನಂತರ ಹಲವು ಭಾಷೆಗಳಲ್ಲಿ -σσ- (ಬಹುಶಃ [sː]), ಹಾಗೂ ಆಟಿಕ್‌ನಲ್ಲಿ -ττ- (ಬಹುಶಃ [tː]) ಕ್ಕೆ ವಿಕಸನ ಹೊಂದಿತು. ಇದರ ನಿಖರ ಮೌಲ್ಯವನ್ನು ಗಹನವಾಗಿ ಚರ್ಚಿಸಲಾಗಿದೆ. ಆದರೆ [ts] ಆಗಾಗ್ಗೆ ಪ್ರಸ್ತಾಪಿಸಲಾಗಿದೆ. ಅದರ ಆಧುನಿಕ ಹೆಸರನ್ನು ಅದರ ಆಕಾರದಿಂದ ಪಡೆಯಲಾಗಿದೆ: (ω)σαν πι = ಪೈ ಅಕ್ಷರದಂತೆ.[]

Τ ತನಕ ಅಕ್ಷರಗಳ ಕ್ರಮವು ಫೀನಿಷಿಯನ್‌ ಅಥವಾ ಹೆಬ್ರೂ ವರ್ಣಮಾಲೆಯನ್ನು ಅನುಸರಿಸುತ್ತದೆ.

ವೈಶಿಷ್ಟ್ಯಗಳು

ಬದಲಾಯಿಸಿ

ಸಾಂಪ್ರದಾಯಿಕವಾಗಿ ಪುರಾತನ ಗ್ರೀಕ್‌ ಭಾಷೆಗಾಗಿ ಬಳಸಲಾದ ಪಾಲಿಟೋನಿಕ್‌ ಅಕ್ಷರ ಸಂಯೋಜನೆಯಲ್ಲಿ, ಸ್ವರಗಳು 'ಉಚ್ಚಾರಣಾ ಶೈಲಿ' ಮತ್ತು 'ಉಸುರುವಿಕೆ' ಎಂಬ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಉಚ್ಚಾರಣಾ ಶೈಲಿಗಳಲ್ಲಿ ಮೂರು ವಿಧಗಳಿವೆ: ತೀಕ್ಷ್ಣ ಉಚ್ಚಾರಣಾ ಶೈಲಿ (´), ಅನುದಾತ್ತ ಉಚ್ಚಾರಣಾ ಶೈಲಿ (`) ಮತ್ತು ಸ್ವರಿತೋಚ್ಚಾರಣೆಯ ಉಚ್ಚಾರಣಾ ಶೈಲಿ (ˆ).

ಪುರಾತನ ಗ್ರೀಕ್‌ನಲ್ಲಿ, ಈ ಉಚ್ಚಾರಣಾ ಶೈಲಿಗಳು ಸ್ವರದ ಮೇಲಿನ ಶ್ರುತಿ ಉಚ್ಚಾರಣಾ ಶೈಲಿಯ ವಿವಿಧ ರೂಪಗಳನ್ನು ಗುರುತಿಸಿದವು. ರೋಮನ್‌ ಯುಗದ ಅಂತ್ಯದಲ್ಲಿ, ಶ್ರುತಿ ಉಚ್ಚಾರಣಾ ಶೈಲಿಯು ಸ್ವರಭಾರ ಉಚ್ಚಾರಣಾ ಶೈಲಿಯಾಗಿ ವಿಕಸನಗೊಂಡು, ಆನಂತರದ ಗ್ರೀಕ್‌ನಲ್ಲಿ ಇವೆಲ್ಲವೂ ಸಹ ಒತ್ತಿ ಉಚ್ಚರಿಸಲಾದ ಸ್ವರವನ್ನು ಗುರುತಿಸಿದವು. ಶ್ವಾಶೋಚ್ಚ್ಚಾರಕ್ಕೆ ಸಂಬಂಧಿಸಿದಂತೆ ಎರಡು ರೀತಿಯದ್ದಾಗಿವೆ: ಪದದ ಆರಂಭದಲ್ಲಿ /h/ ಶಬ್ದವನ್ನು ಗುರುತಿಸುವಂತಹ 'ಒರಟು ಉಸುರುವಿಕೆ' (), ಹಾಗೂ ಪದದ ಆರಂಭದಲ್ಲಿ /h/ ಶಬ್ದವಿರದ 'ಸರಾಗ ಉಸುರುವಿಕೆ' (). ರೊ (ρ) ಅಕ್ಷರವು ಸ್ವರವಲ್ಲದಿದ್ದರೂ ಸಹ, ಪದವನ್ನು ಆರಂಭಿಸುವಾಗ ಯಾವಾಗಲೂ ಒರಟು (ಸ್ವರ)ಉಸುರುವಿಕೆಯನ್ನು ಹೊರಡಿಸುತ್ತದೆ. ಗ್ರೀಕ್‌ನಲ್ಲಿ ಬಳಸಲಾದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಎರಡು ಸ್ವರಗಳ ನಡುವಿನ ತೆರಪನ್ನು ಸೂಚಿಸುವ ಸ್ವರವಿಸಂಧಿ ಚಿಹ್ನೆ.

ಪಾಲಿಟೋನಿಕ್‌ ಎಂಬ ಹಳೆಯ ಕಾಗುಣಿತ ವ್ಯವಸ್ಥೆಯನ್ನು 1982ರಲ್ಲಿ ಸರಳಗೊಳಿಸಿ, ಮೊನೊಟೊನಿಕ್‌ ವ್ಯವಸ್ಥೆಯನ್ನಾಗಿಸಲಾಯಿತು. ಇದು ಗ್ರೀಸ್‌ ದೇಶದಲ್ಲಿ ಇಂದು ಅಧಿಕೃತವಾಗಿದೆ. ಉಚ್ಚಾರಣಾ ಶೈಲಿಗಳನ್ನು ಟೊನೊಸ್‌ ಎಂಬ ಒಂದೇ ಶೈಲಿಗೆ ಕನಿಷ್ಠಗೊಳಿಸಲಾಗಿದೆ, ಉಸುರುವಿಕೆ ಶೈಲಿಗಳನ್ನು ತೆಗೆದುಹಾಕಲಾಯಿತು.

ಕೂಡಕ್ಷರಗಳು ಮತ್ತು ಜಂಟಿಸ್ವರಗಳು

ಬದಲಾಯಿಸಿ

ಕ್ರಮದಲ್ಲಿ ಲಿಖಿತ ಅಕ್ಷರಗಳಿಗೆ ಹೊಂದದ ಒಂದು ಶಬ್ದ ಅಥವಾ ಶಬ್ದಗಳ ಸಂಯುಕ್ತವನ್ನು ಬರೆಯಲು ಬಳಸಲಾದ ಅಕ್ಷರಗಳ ಜೋಡಿಗೆ ಕೂಡಕ್ಷರ ಎನ್ನಲಾಗುತ್ತದೆ. ಉಚ್ಚಾರಣೆಯಲ್ಲಿ ಏಕಸ್ವರಗಳಂತೆ ಸಂಕುಚಿತಗೊಳಿಸಲಾದ, ಜಂಟಿಸ್ವರಗಳೆಂದು ಉಚ್ಚಾರಿತವಾಗಿದ್ದ ಹಲವು ವಿವಿಧ ಸ್ವರಾಕ್ಷರಗಳ ಜೋಡಿಗಳೂ ಸೇರಿದಂತೆ, ಗ್ರೀಕ್‌ ಭಾಷೆಯ ಅಕ್ಷರ ಸಂಯೋಜನೆಯು ಹಲವು ಕೂಡಕ್ಷರಗಳನ್ನು ಒಳಗೊಂಡಿದೆ. ಇವುಗಳಲ್ಲಿ ಹಲವು ಆಧುನಿಕ ಗ್ರೀಕ್‌ ಭಾಷೆಯ ವಿಶಿಷ್ಟವಾದ ಬೆಳವಣಿಗೆಗಳಾಗಿವೆ. ಆದರೆ ಕೆಲವು ಆಗಲೇ ಶಾಸ್ತ್ರೀಯ ಗ್ರೀಕ್‌ ಭಾಷೆಯಲ್ಲಿದ್ದವು. ಇವುಗಳಲ್ಲಿ ಯಾವುವನ್ನೂ ಸಹ ವರ್ಣಮಾಲೆಯ ಅಕ್ಷರವೆಂದು ಪರಿಗಣಿಸಲಾಗಿಲ್ಲ.

ಬೈಜಾಂಟೀನ್‌ ಯುಗದಲ್ಲಿ, ಐಯೊಟಾ ಉಪಲೇಖದಂತೆ (ᾳ, ῃ, ῳ), ಕೂಡಕ್ಷರದಲ್ಲಿ ನಿಃಶಬ್ದ ಐಯೊಟಾವನ್ನು ನಮೂದಿಸುವುದು ಪದ್ಧತಿಯಾಯಿತು.

ಇತರೆ ಭಾಷೆಗಳಿಗಾಗಿ ಗ್ರೀಕ್‌ ವರ್ಣಮಾಲೆಯ ಬಳಕೆ

ಬದಲಾಯಿಸಿ

ಗ್ರೀಕ್‌ ಭಾಷೆಯನ್ನು ಬರೆಯುವುದು ಗ್ರೀಕ್‌ ವರ್ಣಮಾಲೆಯ ಎಂದಿನಂತಿನ (ವಾಡಿಕೆಯ)ಪ್ರಾಥಮಿಕ ಬಳಕೆಯಾಗಿದೆ. ಆದರೆ, ಹಲವು ಬಾರಿ ಮತ್ತು ವಿವಿಧೆಡೆ, ಇತರೆ ಭಾಷೆಗಳನ್ನು ಬರೆಯಲು ಗ್ರೀಕ್‌ ಅಕ್ಷರಗಳನ್ನು ಬಳಸಲಾಗಿದೆ. []

ಆರಂಭಿಕ ಉದಾಹರಣೆಗಳು

ಬದಲಾಯಿಸಿ

ಪುರಾತನ ಮೆಸಿಡೊನಿಯನ್‌ ಸೇರಿದಂತೆ ನೆರೆಹೊರೆ ವಲಯದ ಇತರೆ ಭಾಷೆಗಳು ಮತ್ತು ಭಾಷಾ ಪ್ರಭೇದಗಳಿಗಾಗಿ, ಕೆಲವು ಪದಗಳನ್ನು ಗ್ರೀಕ್‌ ಪಠ್ಯಗಳಲ್ಲಿ ಉಳಿಸಲಾಗಿರುತ್ತದೆ, ಆದರೆ ಯಾವುದೇ ಅವಿಚ್ಛಿನ್ನ ಪಠ್ಯಗಳನ್ನು ಉಳಿಸಲಾಗಿಲ್ಲ.

  • ಆಧುನಿಕ ಫ್ರಾನ್ಸ್‌ನಲ್ಲಿ ಕೆತ್ತಲಾದ ಕೆಲವು ಗಾಲಿಷ್‌ ಲೇಖನಗಳು ಗ್ರೀಕ್‌ ವರ್ಣಮಾಲೆಯನ್ನು ಬಳಸುತ್ತಿದ್ದವು. (ಇದು ಸುಮಾರು 3000 BC ಕಾಲದ್ದು).
  • ಆರಿಜೆನ್‌ನ ಹೆಕ್ಸಾಪ್ಲಾದಲ್ಲಿ, ಬೈಬಲ್‌ನ ಹೀಬ್ರೂ ಪಠ್ಯವನ್ನು ಗ್ರೀಕ್‌ ಅಕ್ಷರಗಳಲ್ಲಿ ಬರೆಯಲಾಗಿತ್ತು.
  • ಎಂಟನೆಯ ಶತಮಾನದ ಅರಾಬಿಕ್‌ ತುಣಕು ಗ್ರೀಕ್‌ ವರ್ಣಮಾಲೆಯ ಪಠ್ಯವನ್ನು ಉಳಸಿಕೊಂಡಿದೆ.
  • ಆರ್ಕ್ಸಿಜ್‌ನಲ್ಲಿ ಪತ್ತೆಯಾದ, 10-12c CE ಕಾಲದ ಪುರಾತನ ಪುರಾತನ ಆಸೆಟಿಕ್‌ ಕೆತ್ತನೆಯು, ಆಸೆಟಿಕ್‌ ಭಾಷೆಯ ಅತಿ ಪ್ರಾಚೀನ ಸಾಕ್ಷಿಯಾಗಿದೆ.

ಹೆಚ್ಚುವರಿ ಅಕ್ಷರಗಳೊಂದಿಗೆ

ಬದಲಾಯಿಸಿ

ಹಲವು ವರ್ಣಮಾಲೆಗಳು, ಕೆಲವು ಹೆಚ್ಚುವರಿ ಅಕ್ಷರಗಳೊಂದಿಗೆ ಪೂರಕವಾಗಿರುವ ಗ್ರೀಕ್‌ ವರ್ಣಮಾಲೆಯನ್ನು ಹೊಂದಿವೆ:

ಇನ್ನೂ ಇತ್ತೀಚೆಗಿನ ಆಧುನಿಕ ಕಾಲಗಳಲ್ಲಿ

ಬದಲಾಯಿಸಿ

ಪಡೆದುಕೊಂಡ ವರ್ಣಮಾಲೆಗಳು

ಬದಲಾಯಿಸಿ

ಗ್ರೀಕ್‌ ವರ್ಣಮಾಲೆಯು ಇತರೆ ವಿಭಿನ್ನತೆಗಳಿಗೆ ಕಾರಣವಾಯಿತು: []

ಅರ್ಮೀನಿಯಾ ವರ್ಣಮಾಲೆಯ ಪೂರ್ವಜ ಎಂದು ಇದನ್ನು ಪರಿಗಣಿಸಲಾಗಿದೆ. ಇದು ಜಾರ್ಜಿಯನ್‌ ವರ್ಣಮಾಲೆಯ ಅಭಿವೃದ್ಧಿಯ ಮೇಲೂ ಪ್ರಭಾವ ಬೀರಿತ್ತು.

ಗಣಿತಶಾಸ್ತ್ರದಲ್ಲಿ ಗ್ರೀಕ್‌

ಬದಲಾಯಿಸಿ

ಗಣಿತಶಾಸ್ತ್ರ, ಭೌತಶಾಸ್ತ್ರ ಹಾಗೂ ವಿಜ್ಞಾನದ ಇತರೆ ವಿಭಾಗಗಳಲ್ಲಿ ಗ್ರೀಕ್‌ ಚಿಹ್ನೆಗಳನ್ನು ಸಾಂಪ್ರದಾಯಿಕವಾಗಿ ಬಳಸಲಾಗಿದೆ. ಲ್ಯಾಟೀನ್‌ ಅಕ್ಷರಗಳೊಂದಿಗೆ ಜೋಡಿಸಿದಲ್ಲಿ, ಲ್ಯಾಟೀನ್‌ ಅಕ್ಷರಗಳು ಸಾಮಾನ್ಯವಾಗಿ ವಿವಿಧ ಸಂಖ್ಯಾಮೌಲ್ಯಗಳನ್ನು ಸೂಚಿಸುತ್ತವೆ. ಗ್ರೀಕ್‌ ಚಿಹ್ನೆಗಳು ಪ್ರಮಿತಿಯನ್ನು ಸೂಚಿಸುತ್ತವೆ. ಹಲವು ಚಿಹ್ನೆಗಳಿಗೆ ಸಾಂಪ್ರದಾಯಿಕ ಅರ್ಥಗಳಿವೆ. ಉದಾಹರಣೆಗೆ, ದ್ರವ ಬಲವಿಜ್ಞಾನದಲ್ಲಿ ಯತ್ನದ ಕೋನವನ್ನು ಸೂಚಿಸಲು ಸಣ್ಣಾಕ್ಷರದ ಆಲ್ಫಾ (α); ನಿಷ್ಪ್ರಮಾಣವಾದ, ಧನಾತ್ಮಕವಾದ ಸಣ್ಣ ಸಂಖ್ಯೆಯನ್ನು ಸೂಚಿಸಲು ಸಣ್ಣಾಕ್ಷರದ ಇಪ್ಸಿಲಾನ್‌ (ε), ಮೊತ್ತಕ್ಕಾಗಿ ದೊಡ್ಡಾಕ್ಷರದ ಸಿಗ್ಮಾ (Σ), ವಿಚಲನ ದಿಕ್ಕು ಬದಲನ್ನು(ದಿಕ್ಚ್ಯುತಿ)ಯನ್ನು ಸೂಚಿಸಲು ಸಣ್ಣಾಕ್ಷರದ ಸಿಗ್ಮಾ (σ).

ಗ್ರೀಕ್‌ ಸಂಕೇತಗೊಳಿಸುವಿಕೆ

ಬದಲಾಯಿಸಿ

ಕಂಪ್ಯೂಟರ್‌ಗಳಲ್ಲಿ ಬಳಕೆಗಾಗಿ, ಆನ್ಲೈನ್‌ ಮಾಧ್ಯಮದಲ್ಲಿ ಗ್ರೀಕ್‌ ಭಾಷೆಗಾಗಿ ಹಲವು ಸಂಕೇತಲಿಪಿಗಳನ್ನು ಬಳಸಲಾಗಿದೆ. ಇದರಲ್ಲಿ ಹಲವನ್ನು RFC 1947ರಲ್ಲಿ ದಾಖಲೆಗೊಳಿಸಲಾಗಿದೆ.

ISO/IEC 8859-7 ಹಾಗೂ ಯೂನಿಕೋಡ್‌ ಇಂದಿಗೂ ಬಳಸಲಾದ ಪ್ರಮುಖ ಸಂಕೇತಗಳಾಗಿವೆ. ISO 8859-7 ಕೇವಲ ಮೊನೊಟೊನಿಕ್‌ ಅಂಕ್ಷರ ಸಂಯೋಜನೆಯನ್ನು ಬೆಂಬಲಿಸುತ್ತದೆ. ಯೂನಿಕೋಡ್‌ ಪಾಲಿಟೊನಿಕ್‌ ಅಕ್ಷರ ಸಂಯೋಜನೆಯನ್ನು ಬೆಂಬಲಿಸುತ್ತದೆ.

A0-FF (ಷೋಡಶಮಾನ) ಶ್ರೇಣಿಗಾಗಿ ಅದು ಯೂನಿಕೋಡ್‌ ಶ್ರೇಣಿ 370-3CFನ್ನು ಅನುಸರಿಸುತ್ತದೆ. ©, ½, § ಇಂತಹ ಚಿಹ್ನೆಗಳು ಅಪವಾದವಾಗಿದ್ದು, ಬಳಸಲಾಗಿಲ್ಲದ ಸ್ಥಳಗಳಲ್ಲಿ ಬಳಸಬಹುದಾಗಿದೆ. ಎಲ್ಲಾ ISO-8859 ಸಂಕೇತಗಳಂತೆ, ಇದು 00-7Fರ ASCII (ಷೋಡಶಮಾನ) ಸಮಾನವಾಗಿದೆ.

ಯೂನಿಕೋಡ್‌ನಲ್ಲಿ ಗ್ರೀಕ್‌

ಬದಲಾಯಿಸಿ

ಅಧುನಿಕ ಹಾಗೂ ಪುರಾತನ ಗ್ರೀಕ್‌ನ ಸಾಧಾರಣ, ಸತತ ಪಠ್ಯಕ್ಕಾಗಿ ಯೂನಿಕೋಡ್‌ ಪಾಲಿಟೊನಿಕ್‌ ಅಕ್ಷರ ಸಂಯೋಜನೆಯನ್ನು ಬೆಂಬಲಿಸುತ್ತದೆ, ಇದಲ್ಲದೆ, ಶಾಸನಶಾಸ್ತ್ರಕ್ಕಾಗಿ ಹಳೆಯ ಕಾಲದ ರೂಪಗಳನ್ನೂ ಸಹ ಯೂನಿಕೋಡ್‌ ಬೆಂಬಲಿಸುತ್ತದೆ. ಒಟ್ಟಾಗಿಸುವ ಅಕ್ಷರಗಳ ಬಳಕೆಯ ಮೂಲಕ, ಯೂನಿಕೋಡ್‌ ಸಹ ಗ್ರೀಕ್‌ ಭಾಷಾಶಾಸ್ತ್ರ ಮತ್ತು ಪ್ರಾಂತ ಭಾಷಾ ಶಾಸ್ತ್ರ ಹಾಗೂ ವಿವಿಧ ಇತರೆ ವಿಶಿಷ್ಟ ಅಗತ್ಯಗಳನ್ನು ಬೆಂಬಲಿಸುತ್ತದೆ. ಆದಾಗ್ಯೂ, ಚಾಲ್ತಿಯಲ್ಲಿರುವ ಹಲವು ಪಠ್ಯ ಮೂಡಿಸುವ ಯಂತ್ರಗಳು ಒಟ್ಟಾಗಿಸುವ ಅಕ್ಷರಗಳನ್ನು ಸಮರ್ಪಕವಾಗಿ ಬೆಂಬಲಿಸುವುಸಿಲ್ಲ. ಹಾಗಾಗಿ, ಮ್ಯಾಕ್ರಾನ್ ಹಾಗೂ ಅಕ್ಯೂಟ್‌‌ನೊಂದಿಗೆ U+03B1 U+0304 U+0301 ಎಂದು ನಿರೂಪಿಸಲಾಗಿದೆ ಯಾದರೂ, ಇದು ಸರಿಹಂದುವುದು ಅಪರೂಪ. ᾱ́.[]

ಯೂನಿಕೋಡ್‌ನಲ್ಲಿ ಗ್ರೀಕ್‌ ಅಕ್ಷರಗಳ ಎರಡು ಮುಖ್ಯ ಗುಂಪುಗಳಿವೆ.

  1. ಮೊದಲನೆಯದು: 'ಗ್ರೀಕ್‌ ಮತ್ತು ಕಾಪ್ಟಿಕ್‌' (U+0370ರಿಂದ U+03FF).

ಈ ಗುಂಪು ISO 8859-7 ಆಧಾರಿತವಾಗಿದ್ದು ಆಧುನಿಕ ಗ್ರೀಕ್ ಭಾಷಯನ್ನು ಹೊಸದಾಗಿ ರಚಿಸಲು ಅವಪ. ಹಳೆಯ ಕಾಲದ ಅಕ್ಷರಗಳು ಹಾಗೂ ಗ್ರೀಕ್‌ ಆಧಾರಿತ ತಾಂತ್ರಿಕ ಚಿಹ್ನೆಗಳೂ ಸಹ ಇವೆ.

  1. ಈ ಗುಂಪು ಸಹ ಕಾಪ್ಟಿಕ್‌ ವರ್ಣಮಾಲೆಯನ್ನು ಬೆಂಬಲಿಸುತ್ತದೆ. ಮುಂಚೆ ಹಲವು ಕಾಪ್ಟಿಕ್‌ ಅಕ್ಷರಗಳು ಅದೇ ರೀತಿ ಕಾಣುವ ಗ್ರೀಕ್‌ ಅಕ್ಷರಗಳೊಂದಿಗೆ ಕೋಡ್‌ಪಾಯಿಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದವು; ಆದರೆ ಹಲವು ವಿದ್ವಾಂಸರ ಕೃತಿಗಳಲ್ಲಿ, ಎರಡೂ ಲಿಪಿಗಳು ವಿಭಿನ್ನ ಅಕ್ಷರಾಕೃತಿಗಳೊಂದಿಗೆ ಸಂಭವಿಸುತ್ತವೆ. ಇದರಿಂದಾಗಿ, ಯೂನಿಕೋಡ್‌ 4.1 ಆವೃತ್ತಿಯಲ್ಲಿ, ಕಾಪ್ಟಿಕ್‌ ಹಾಗೂ ಗ್ರೀಕ್‌ ಬೇರೆ-ಬೇರೆ ರೀತಿಯದ್ದಾದವು.

ಯಾವುದೇ ಗ್ರೀಕ್‌ ತತ್ಸವನ್ನು ಹೊಂದಿರದ ಕಾಪ್ಟಿಕ್‌ ಅಕ್ಷರಗಳು ಇದೇ ಗುಂಪಿನಲ್ಲಿ ಉಳಿದುಕೊಳ್ಳುತ್ತವೆ.

ಪಾಲಿಟೊನಿಕ್‌ ಗ್ರೀಕ್‌ನಲ್ಲಿ ಬರೆಯಲು, ಒಟ್ಟಿಗೆ ಕೂಡಿಸುವ ವೈಶಿಷ್ಟ್ಯ ಹೊಂದಿರುವ ಚಿಹ್ನೆಗಳು ಅಥವಾ ಗ್ರೀಕ್‌ ವಿಸ್ತಾರಿತ ಗುಂಪಿನಲ್ಲಿ ಪೂರ್ವರಚಿತ ಅಕ್ಷರಗಳನ್ನು (U+1F00 ಇಂದ U+1FFF) ಬಳಸಬಹುದಾಗಿದೆ.

ಗ್ರೀಕ್‌ ಮತ್ತು ಕಾಪ್ಟಿಕ್‌

ಬದಲಾಯಿಸಿ
  0 1 2 3 4 5 6 7 8 9 B C ಡಿ E ಫೆ
0370 Ͱ ͱ Ͳ ͳ ʹ ͵ Ͷ ͷ     ͺ ͻ ͼ ͽ ;  
0380         ΄ ΅ Ά · Έ Ή Ί   Ό   Ύ Ώ
0390 ΐ Α Β Γ Δ Ε Ζ Η Θ Ι Κ Λ Μ Ν Ξ Ο
03A0 Π Ρ   Σ Τ Υ Φ Χ Ψ Ω Ϊ Ϋ ά έ ή ί
03B0 ΰ α β γ δ ε ζ η θ ι κ λ μ ν ξ ο
03C0 π ρ ς σ τ υ φ χ ψ ω ϊ ϋ ό ύ ώ Ϗ
03D0 ϐ ϑ ϒ ϓ ϔ ϕ ϖ ϗ Ϙ ϙ Ϛ ϛ Ϝ ϝ Ϟ ϟ
03E0 Ϡ ϡ (Coptic letters here)
03F0 ϰ ϱ ϲ ϳ ϴ ϵ ϶ Ϸ ϸ Ϲ Ϻ ϻ ϼ Ͻ Ͼ Ͽ

ವಿಸ್ತಾರಿತ ಗ್ರೀಕ್‌ (ಪೂರ್ವರಚಿತ ಪಾಲಿಟೊನಿಕ್‌ ಗ್ರೀಕ್‌)

ಬದಲಾಯಿಸಿ
  0 1 2 3 4 5 6 7 8 9 B C ಡಿ E ಫೆ
1F00
1F10        
1F20
1F30 Ἷ
1F40        
1F50        
1F60
1F70 ά έ ή ί ό ύ ώ    
1F80
1F90
1FA0
1FB0   Ά ι ᾿
1FC0   Έ Ή
1FD0 ΐ     Ί  
1FE0 ΰ Ύ ΅ `
1FF0       Ό Ώ ´  

ಒಟ್ಟಿಗೆ ಕೂಡಿಸುವಿಕೆ ಹಾಗೂ ಅಕ್ಷರ-ಮುಕ್ತ ವೈಶಿಷ್ಟ್ಯಗಳು

ಬದಲಾಯಿಸಿ

ಗ್ರೀಕ್‌ ಭಾಷೆಗೆ ಸಂಬಂಧಿಸಿದ ಒಟ್ಟುಗೂಡಿಸುವಿಕೆ ಮತ್ತು ಅಕ್ಷರ ಮುಕ್ತ ಅಂತರದ ವೈಶಿಷ್ಟ್ಯ ಹೊಂದಿರುವ ಚಿಹ್ನೆಗಳು:

ಒಟ್ಟುಗೂಡಿಸುವಿಕೆ ಅಂತರ ನಮೂನೆ ವಿವರಣೆ
U+0300 U+0060 (  ̀) "ವಾರಿಯಾ / ಅನುದಾತ್ತ ಸ್ವರ"
U+0301 U+00B4, U+0384 (  ́) "ಆಕ್ಸಿಯಾ / ಟೊನೊಸ್‌ / ಉದಾತ್ತ ಚಿಹ್ನೆ"
U+0304 U+00AF (  ̄) "ಮ್ಯಾಕ್ರಾನ್‌"
U+0306 U+02D8 (  ̆) "ವ್ರಾಚಿ / ಬ್ರೆವ್‌"
U+0308 U+00A8 (  ̈) "ಡಯಾಲಿಟಿಕಾ / ಸ್ವರವಿಸಂಧಿ ಚಿಹ್ನೆ"
U+0313 U+02BC (  ̓) "ಪ್ಸಿಲಿ / ಮೇಲೆ ಅಲ್ಪವಿರಾಮ" (ಸ್ಪಿರಿಟಸ್‌ ಲೆನಿಸ್‌)
U+0314 U+02BD (  ̔) "ಡಾಸಿಯಾ / ಮೇಲೆ ಹಿಮ್ಮೊಗವಾದ ಅಲ್ಪವಿರಾಮ" (ಸ್ಪಿರಿಟಸ್‌ ಆಸ್ಪರ್‌)
U+0342 (  ͂) "ಪೆರಿಸ್ಪೊಮೆನಿ" (ಸ್ವರಿತ ಚಿಹ್ನೆಯುಳ್ಳ)
U+0343 (  ̓) "ಕೊರೊನಿಸ್‌" (= U+0313)
U+0344 U+0385 (  ̈́) "ಡಯಾಲಿಟಿಕಾ ಟೊನೊಸ್‌" (ಅಸಮ್ಮತಿ ಸೂಚಿತ, = U+0308 U+0301)
U+0345 U+037A (  ͅ) "ypogegrammeni / ಐಯೊಟಾ ಉಪಲೇಖ".

ಗ್ರೀಕ್‌ ವರ್ಣಮಾಲೆಯ ಉಪಗಣದೊಂದಿಗೆ ಸಂಕೇತಗೊಳಿಸುವಿಕೆಗಳು

ಬದಲಾಯಿಸಿ

IBM ಸಂಕೇತಗಳ ಪುಟ 437, 860, 861, 862, 863 ಮತ್ತು 865 ΓΘΣΦΩαδεπστφ ಅಕ್ಷರಗಳನ್ನು ಹೊಂದಿವೆ (ಜೊತೆಗೆ, ß ಗಾಗಿ ಪರ್ಯಾಯ ನಿರೂಪಣೆ β).

ಇವನ್ನೂ ನೋಡಿ

ಬದಲಾಯಿಸಿ

ಗ್ರಂಥಸೂಚಿ

ಬದಲಾಯಿಸಿ
  • Elsie, Robert (1991). "Albanian Literature in Greek Script: the Eighteenth and Early Nineteenth-Century Orthodox Tradition in Albanian Writing" (PDF 0.0 bytes). Byzantine and Modern Greek Studies. 15 (20).[ಶಾಶ್ವತವಾಗಿ ಮಡಿದ ಕೊಂಡಿ]
  • Humez, Alexander Nicholas (1981). Alpha to omega: the life & times of the Greek alphabet. Godine. ISBN 0-87923-377-X. — ವರ್ಣಮಾಲೆಯೊಂದರ ಬದಲಿಗೆ, ಹೆಚ್ಚಾಗಿ ಇಂಗ್ಲಿಷ್‌ ಭಾಷೆಯಲ್ಲಿ ಗ್ರೀಕ್‌ ಮೂಲಗಳ ಕುರಿತು ಜನಪ್ರಿಯ ಇತಿಹಾಸ.
  • Jeffery, Lilian Hamilton (1961). The local scripts of archaic Greece: a study of the origin of the Greek alphabet and its development from the eighth to the fifth centuries B.C. Oxford. ISBN 0-19-814061-4.
  • Macrakis, Michael S. (ed.) (1996). Greek letters: from tablets to pixels: proceedings of a conference sponsored by the Greek Font Society. Oak Knoll. ISBN 1-884718-27-2. {{cite book}}: |first= has generic name (help) — ಇತಿಹಾಸ, ಮುದ್ರಣ ಹಾಗೂ ಅಕ್ಷರ ಕೋಡಿಂಗ್‌ ಕುರಿತು ಪತ್ರಗಳು; ಲೇಖಕರು: ಹರ್ಮನ್‌ ಜಾಫ್‌, ಮ್ಯಾಥ್ಯೂ ಕಾರ್ಟರ್‌, ನಿಕಾಲಸ್‌ ಬಾರ್ಕರ್, ಜಾನ್‌ ಎ. ಲೇನ್‌, ಕೈಲ್‌ ಮೆಕಾರ್ಟರ್‌, ಜೆರೋಮ್‌ ಪೇಗ್ನಾಟ್‌, ಪಿಯರ್‌ ಮೆಕೇ, ಸಿಲ್ವಯೋ ಲೀವಿ, ಮತ್ತು ಇತರರು
  • Hansen and Quinn (1992). Greek - An Intensive Course, Second Revised Edition- especially noted for an excellent discussion on traditional accents and breathings, as well as verbal formation. Fordham University Press.
  • Powell, Barry B. (1991). Homer and the Origin of the Greek Alphabet. — ಹೋಮರ್‌ನ ಪಠ್ಯಗಳ ಮೂಲ, ಕಾಲನಿರ್ದೇಶ, ಅರಂಭಿಕ ಲಿಪಿಗಳು ಹಾಗೂ ಸಂಬಂಧಗಳನ್ನು ಚರ್ಚಿಸುತ್ತದೆ. ISBN 0-486-20070-1
  • Macrakis, Stavros M. (1996). Character codes for Greek: Problems and modern solutions. Archived from the original on 2005-12-16. Retrieved 2010-04-19. — ಗ್ರೀಕ್‌ ಹೊರತು ಇತರೆ ಭಾಷೆಗಳಲ್ಲಿ ಗ್ರೀಕ್‌ ವರ್ಣಮಾಲೆಯ ಬಳಕೆ ಕುರಿತು ಚರ್ಚೆಯನ್ನು ಒಳಗೊಂಡಿದೆ.
  • ಸಿ. ಜೆ. ರುಯಿಜ್‌ (1998) ಸುರ್‌ ಲಾ ಡೇಟ್‌ ಡಿ ಲಾ ಕ್ರಿಯೇಷನ್‌ ಡಿ ಲಾ'ಆಲ್ಫಾಬೆಟ್‌ ಗ್ರೆಕ್‌. ನೆಮೊಸೈನ್‌ 51, 658–687

ಟಿಪ್ಪಣಿಗಳು

ಬದಲಾಯಿಸಿ
  1. Swiggers 1996.
  2. ೨.೦ ೨.೧ ೨.೨ ೨.೩ Coulmas, Florian (1996). The Blackwell Encyclopedia of Writing Systems. Oxford: Blackwell Publishers Ltd. ISBN 0-631-21481-X.
  3. ಮೊಟ್ಟಮೊದಲ ಕೆತ್ತನೆಯ ಆಕೃತಿಗಳ ಕಾಲ; ಎ. ಡಬ್ಲ್ಯೂ ಜಾನ್ಸ್ಟನ್‌, 'ದಿ ಆಲ್ಫಾಬೆಟ್‌' ಸಂಪಾದಕರು ಎನ್‌. ಸ್ಟ್ಯಾಂಪೊಲಿಡಿಸ್‌ ಮತ್ತು ವಿ ಕಾರಜಿಯೊರ್ಗಿಸ್‌, ಸೀ ರೂಟ್ಸ್‌ ಫ್ರಮ್‌ ಸಿಡನ್‌ ಟು ಹ್ಯೂಯೆಲ್ವಾ: ಇಂಟರ್ಕನೆಕ್ಷನ್ಸ್‌ ಇನ ದಿ ಮೆಡಿಟರೆನಿಯನ್ ‌ 2003:263-76, ಕಾಲನಿರ್ದೇಶದ ಕುರಿತು ಪ್ರಸ್ತುತ ಪತ್ರದ ಸಾರಾಂಶವನ್ನು ತಿಳಿಸುತ್ತದೆ.
  4. Greek Letter Sampi
  5. ಗ್ರಂಥಸೂಚಿಗಾಗಿ ಎಸ್‌. ಮೆಕ್ರಾಕಿಸ್‌, 1996 ನೋಡಿ
  6. ನ್ಯೂ ಫೈಂಡಿಂಗ್ಸ್‌ ಇನ್‌ ಏನ್ಷಿಯೆಂಟ್‌ ಅಫ್ಘಾನಿಸ್ತಾನ್‌ - ದಿ ಬ್ಯಾಕ್ಟ್ರಿಯನ್‌ ಡಾಕ್ಯೂಮೆಂಟ್ಸ್‌ ಡಿಸ್ಕವರ್ಡ್‌ ಫ್ರಮ್‌ ದಿ ನಾರ್ದರ್ನ್‌ ಹಿಂದೂ-ಕುಶ್‌ Archived 2007-06-10 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರೊ. ನಿಕಾಲಸ್‌ ಸಿಮ್ಸ್‌-ವಿಲಿಯಮ್ಸ್‌ (ಲಂಡನ್‌ ವಿಶ್ವವಿದ್ಯಾನಿಲಯ) ಅವರಿಂದ ಉಪನ್ಯಾಸ
  7. "Dva balgarski rakopisa s gracko pismo", Balgarski starini 6 , 1920; André Mazon and André Vaillant, L'Evangelaire de Kulakia, un parler slave de Bas-Vardar , Bibliothèque d'études balkaniques 6 , 1938; Jürgen Kristophson, "Das Lexicon Tetraglosson des Daniil Moschopolitis", Zeitschrift für Balkanologie 9 :11; Max Demeter Peyfuss, Die Druckerei von Moschopolis, 1731-1769: Buchdruck und Heiligenverehrung in Erzbistum Achrida , Wiener Archiv für Geschichte des Slawentums und Osteuropas 13 , 1989.
  8. ಯುನಿಕೋಡ್‌ನಲ್ಲಿ ಗ್ರೀಕ್‌ ಅಕ್ಷರಮಾಲಾ ರೂಪಗಳ ಸಮಸ್ಯೆಯ ಕುರಿತು ವಿಸ್ತಾರಿತ ಚರ್ಚೆಗಾಗಿ ಗ್ರೀಕ್‌ ಯೂನಿಕೋಡ್‌ ಇಷ್ಯೂಸ್‌ ನೋಡಿ.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಮುದ್ರಣಶೈಲಿ

ಬದಲಾಯಿಸಿ