ಗುಮ್ಮಾಳಪುರ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿಗೆ ಸೇರಿದ ಒಂದು ಊರು.[] ಬೆಂಗಳೂರಿಗೆ ಸು. 48 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಜಿಲ್ಲೆಯ ಆನೇಕಲ್ಲಿಗೆ ಸು. 7 ಕಿ.ಮೀ. ಇರುವ ಗಡಿ ಊರಿದು.

ಇತಿಹಾಸ

ಬದಲಾಯಿಸಿ

ಇದು 15-16ನೆಯ ಶತಮಾನಗಳಲ್ಲಿ ತುಂಬ ಪ್ರಸಿದ್ಧಿ ಪಡೆದಿದ್ದು, ಪ್ರಖ್ಯಾತ ವೀರಶೈವ ಶರಣರ ಕೇಂದ್ರಗಳಲ್ಲಿ ಒಂದಾಗಿತ್ತೆಂದು ತಿಳಿದು ಬರುತ್ತದೆ. ಮೂರನೆಯ ಶೂನ್ಯ ಸಂಪಾದನೆಕಾರನಾದ ಸಿದ್ಧಲಿಂಗದೇವರ ಜನ್ಮಸ್ಥಳವಿದು. ಇಲ್ಲಿ ಹಲವಾರು ಜೀರ್ಣ ದೇವಾಲಯಗಳೂ, ಮಠಗಳೂ, ಗವಿಗಳೂ ಇವೆ. ಅವುಗಳಲ್ಲಿ ಸಿದ್ಧಲಿಂಗೇಶ್ವರನ ಮಠ ಇಂದಿಗೂ ಕಂಗೊಳಿಸುತ್ತದೆ. ಇಲ್ಲಿ ಹಲವು ತಾಮ್ರಪಟಗಳು ದೊರೆತಿವೆ. ಒಂದು ತಾಮ್ರ ಶಾಸನದಲ್ಲಿ (ಸು. 1474) ಶಾಂತ ದೇವ, ಚಿಕವೀರದೇವ, ವೀರಣ್ಣ ದೇವ, ನಾಗದೇವ, ಚಿಕ್ಕದೇವಪ್ಪ, ನಿಜಲಿಂಗ ಚಿಕ್ಕಯ್ಯ, ಬಿಟ್ಟಮಂಡೆಯ ಪ್ರಭು, ಶಂಖದ ಸಿದ್ಧಲಿಂಗದೇವ, ಜಂಗುಳಿದೇವ, ಪ್ರಸಾದದೇವ, ಮಲ್ಲಿಕಾರ್ಜುನಾರಾಧ್ಯ, ಬಸವಣ್ಣ ದೇವ, ಇವರೇ ಮುಂತಾದ ಮಹಾ ಶರಣರ ಹೆಸರುಗಳು ಉಲ್ಲೇಖಗೊಂಡಿವೆ. ಅಲ್ಲದೆ ಶಿವತತ್ತ್ವ ಚಿಂತಾಮಣಿ, ವೀರಶೈವಾಮೃತ ಮಹಾಪುರಾಣ, ಚನ್ನಬಸವಯ್ಯ ಮೊದಲಾದ ಕಾವ್ಯಗಳಲ್ಲಿಯೂ ಈ ಊರಿನ ಪ್ರಸ್ತಾಪವಿದೆ.

ಈ ಊರಿನ ಗೌರಮ್ಮ ಬಹಳ ಪ್ರಸಿದ್ಧಿ ಪಡೆದ ದೇವತೆ. ಪ್ರತಿ ವರ್ಷವೂ ಈ ದೇವತೆಯ ಹೆಸರಿನಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: