ಶರಣರು
ಶರಣರು ೧೨ನೇ ಶತಮಾನದಲ್ಲಿ ಶರಣ ಕ್ರಾಂತಿಯನ್ನು ಮಾಡಿದರು. ಅವರು ರಚಿಸಿದ ವಚನಗಳು ಕ್ರಾಂತಿಯ ವಿಚಾರಗಳನ್ನು ಹೊಂದಿವೆ. ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನರು ಹಾಗು ಕೆಳವರ್ಗದ ಜನರು ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರಲ್ಲಿ ಪ್ರಮುಖರು ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಉರಿಲಿಂಗ ಪೆದ್ದಿ, ಸೂಳೆ ಸಂಕವ್ವ ಪ್ರಮುಖರು. ಇವರೆಲ್ಲರು ಸಹಸ್ರಾರು ಸಂಖ್ಯೆಯಲ್ಲಿ ವಚನಗಳನ್ನು ಬರೆದಿದ್ದಾರೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು. ಶರಣ ಧರ್ಮವು ಉದಾರ, ವೈಚಾರಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದು, ರೂಢಿಗತವಾಗಿ ಲಿಂಗಾಯತ, ವೀರಶೈವ ಧರ್ಮ ಎಂದು ಕರೆಯುವ ಬದಲಿಗೆ ಶರಣ ಧರ್ಮ ಎನ್ನುವುದೇ ಸೂಕ್ತ’ ಎಂದು ಕವಿ ಚನ್ನವೀರ ಕಣವಿ ಅಭಿಪ್ರಾಯಪಟ್ಟರು.
ಈ "ಶರಣ" ಪದವು ಸಕಲ ಜೀವಜಂತುಗಳನ್ನೂ ಸಮಸ್ತ ಸೃಷ್ಟ ಜಗತ್ತನ್ನೂ ನಿರ್ದೇಶಿಸುತ್ತದೆ. ಪರಶಿವನಲ್ಲಿ ಪ್ರಪ್ರಥಮದಲ್ಲಿ ಕಾಣಬಂದ 'ಅಸ್ಮಿತಾ' ಸ್ಫುರಣೆಗೆ 'ಶರಣ' ಎಂಬ ಹೆಸರಿದೆ. ಇದುವೆ ಸೃಷ್ಟಿಯ ಪ್ರಥಮತತ್ತ್ವ. ಆದ್ದರಿಂದ "ಶರಣ" ಪದವು ಸಮಸ್ತ ವಿಶ್ವದರ್ಶಕ.
ಏನೇನೂ ಇಲ್ಲದ ಪರಮಸತ್ಯದಿಂದ ಮೊಟ್ಟಮೊದಲು ಸ್ಪುರಿಸಿದುದು ಪರಶಿವ. ಆ ಪರಶಿವನಿಗೇ ಶರಣ ಎಂಬ ಭಿನ್ನಾಭಿಧಾನ. ಆ ಶರಣಸ್ಫುರಣೆ ಭಕ್ತನಲ್ಲಿ ಕಾಣಬರುವುದರಿಂದ ಇವನಿಗೂ ಶರಣ ಎಂಬ ಶಬ್ದ. ಒಟ್ಟಿನಲ್ಲಿ ಏನೂ ಇಲ್ಲದ ವಸ್ತುವಿನಿಂದ ಈ ಶರಣನು ಉದಿಸಿದ.