ಬೆಂಗಳೂರು ಜಿಲ್ಲೆ ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು. ಬೆಂಗಳೂರು ತಾಲೂಕು ೮೯೦ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ೧೯೫೬ರಲ್ಲಿ ಬೆಂಗಳೂರು ೧೦ ತಾಲ್ಲೂಕುಗಳನ್ನು ಹೊಂದಿದ್ದು, ಬೆಂಗಳೂರು, ಆನೇಕಲ್, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳನ್ನು ಒಳಗೊಂಡಿತ್ತು.

ಬೆಂಗಳೂರು
ನಗರ
Bengaluru
Nickname: 
ಉದ್ಯಾನನಗರಿ
ಬೆಂಗಳೂರು is located in Karnataka
ಬೆಂಗಳೂರು
ಬೆಂಗಳೂರು
Coordinates: 12°58′44″N 77°35′30″E / 12.97889°N 77.59167°E / 12.97889; 77.59167
ದೇಶ ಭಾರತ
ರಾಜ್ಯಕರ್ನಾಟಕ
ಪ್ರದೇಶಬಯಲುಸೀಮೆ
ಸ್ಥಾಪನೆ1537
Government
 • Typeಪಾಲಿಕೆ
 • Bodyಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Elevation
೯೨೦ m (೩,೦೨೦ ft)
Population
 (2011)
 • Total೮೪,೪೩,೬೭೫
Demonymಬೆಂಗಳೂರಿನವರು
ಭಾಷೆಕನ್ನಡ
Websitewww.bbmp.gov.in

ಬೆಂಗಳೂರು ಜಿಲ್ಲೆಯನ್ನು ೩ ಭಾಗಗಳಾಗಿ ವಿಂಗಡಿಸಿ ಬೆಂಗಳೂರು ನಗರ (ಬೆಂಗಳೂರು) ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ (ದೊಡ್ಡಬಳ್ಳಾಪುರ) ಜಿಲ್ಲೆ ಹಾಗೂ ನವ ಬೆಂಗಳೂರು (ರಾಮನಗರ) ಜಿಲ್ಲೆಯಾಗಿ ವಿಭಜಿಸಿ ರಚನೆ ಮಾಡಲಾಗಿದೆ.

ನಂತರ ೧೯೮೪ರಲ್ಲಿ ಬೆಂಗಳೂರು ಜಿಲ್ಲೆಯನ್ನು ೨ ಭಾಗಗಳಾಗಿ ವಿಂಗಡಿಸಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ವಿಭಜಿಸಲಾಯಿತು,

ಬೆಂಗಳೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ಹೊಸದಾಗಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲೂಕು ರಚನೆ ಮಾಡಿ ಅನೇಕಲ್ ತಾಲೂಕು ಸೇರಿಸಿ ಬೆಂಗಳೂರು ನಗರ ಜಿಲ್ಲೆ ರಚನೆಯಾಯಿತು,

ಬೆಂಗಳೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಯಾಯಿತು.

ನಂತರ ೨೦೦೭ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ೨ ಭಾಗಗಳಾಗಿ ವಿಂಗಡಿಸಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಾಗಿ ವಿಭಜಿಸಲಾಯಿತು,

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಯಾಯಿತು.

ರಾಮನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಿ ನವ ಬೆಂಗಳೂರು (ರಾಮನಗರ) ಜಿಲ್ಲೆ ರಚನೆಯಾಯಿತು.

೨೦೨೦ರಲ್ಲಿ ಬೆಂಗಳೂರು ೫ ತಾಲ್ಲೂಕು ಹೊಂದಿದ್ದು, ಬೆಂಗಳೂರು ತಾಲೂಕುನ್ನು ವಿಭಜಸಿ ಯಲಹಂಕ ತಾಲೂಕು ರಚನೆ, ಬೆಂಗಳೂರು ದಕ್ಷಿಣ ತಾಲೂಕನ್ನು ಕೆಂಗೇರಿ ಎಂದು ಮರು ನಾಮಕರಣ ಮಾಡಲಾಗಿದೆ, ಕೆಂಗೇರಿ ತಾಲ್ಲೂಕು ವಿಭಜಸಿ ಕೃಷ್ಣರಾಜಪುರ ತಾಲೂಕು ರಚನೆ ಮಾಡಲಾಗಿದೆ, ಮತ್ತು ಆನೇಕಲ್ ತಾಲೂಕು ಹೊಂದಿದೆ.

ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲೂಕುವಾರು ರಚನೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ರಚನೆ ಮಾಡಲಾಗುವುದು.

ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ) ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.

ಬೆಂಗಳೂರು ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ

ಬದಲಾಯಿಸಿ
ಜಿಲ್ಲೆ ತಾಲೂಕು ವಿಸ್ತೀರ್ಣ
01.ಬೆಂಗಳೂರು (1956 ಜನಗಣತಿ ಪ್ರಕಾರ) (1986 ಜನಗಣತಿ ಪ್ರಕಾರ) (2007 ಜನಗಣತಿ ಪ್ರಕಾರ)
01.ಬೆಂಗಳೂರು 393 ಚ.ಕಿ.ಮೀ
02.ಆನೇಕಲ್ 530 ಚ.ಕಿ.ಮೀ
೦3.ಕೆಂಗೇರಿ 540 ಚ.ಕಿ.ಮೀ
04.ಕೃಷ್ಣರಾಜ ಪುರ 329 ಚ.ಕಿ.ಮೀ
05.ಯಲಹಂಕ 401 ಚ.ಕಿ.ಮೀ
ಒಟ್ಟು ಜಿಲ್ಲೆಯ ವಿಸ್ತೀರ್ಣ 2196 ಚ.ಕಿ.ಮೀ
02.ದೊಡ್ಡಬಳ್ಳಾಪುರ
01.ದೊಡ್ಡಬಳ್ಳಾಪುರ 791 ಚ.ಕಿ.ಮೀ
02.ದೇವನಹಳ್ಳಿ 449 ಚ.ಕಿ.ಮೀ
03.ಹೊಸಕೋಟೆ 548 ಚ.ಕಿ.ಮೀ
04.ನೆಲಮಂಗಲ 510 ಚ.ಕಿ.ಮೀ
05.ದಾಬಸ್ ಪೇಟೆ 000 ಚ.ಕಿ.ಮೀ
ಒಟ್ಟು ಜಿಲ್ಲೆಯ ವಿಸ್ತೀರ್ಣ 2298 ಚ.ಕಿ.ಮೀ
03.ರಾಮನಗರ
01.ರಾಮನಗರ 630 ಚ.ಕಿ.ಮೀ
02.ಚನ್ನಪಟ್ಟಣ 530 ಚ.ಕಿ.ಮೀ
೦3.ಮಾಗಡಿ 540 ಚ.ಕಿ.ಮೀ
04.ಕನಕಪುರ 329 ಚ.ಕಿ.ಮೀ
05.ಹಾರೋಹಳ್ಳಿ 401 ಚ.ಕಿ.ಮೀ
ಒಟ್ಟು ಜಿಲ್ಲೆಯ ವಿಸ್ತೀರ್ಣ 2196 ಚ.ಕಿ.ಮೀ