ಗರ್ಭಕಂಠದ ಕ್ಯಾನ್ಸರ್‌

ಗರ್ಭಕಂಠದ ಕ್ಯಾನ್ಸರ್‌ ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪಗೆಡ್ಡೆಯಾಗಿದೆ. ಇದು ಯೋನಿ ಸ್ರಾವದಲ್ಲಿ ಕಂಡು ಬಂದರೂ ರೋಗಲಕ್ಷಣಗಳು ಮಾತ್ರ ಕ್ಯಾನ್ಸರ್‌ನ ಮುಂದುವರೆದ ಹಂತಗಳಲ್ಲಿ ಮಾತ್ರ ಕಂಡು ಬರಬಹುದಾಗಿದೆ.[] ಈ ರೋಗದ ಆರಂಭಿಕ ಹಂತಗಳಲ್ಲಿ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯನ್ನೂ (ಸಾಮಾನ್ಯ ಶಸ್ತ್ರಚಿಕಿತ್ಸೆಸೇರಿದಂತೆ) ಹಾಗೂ ಮುಂದುವರೆದ ಹಂತಗಳಲ್ಲಿ ಕಿಮೊತೆರಪಿ ಹಾಗೂ ರೇಡಿಯೊತೆರಪಿ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ.

Cervical cancer
Classification and external resources
Histopathologic image (H&E stain) of carcinoma in situ, stage 0.
ICD-10C53
ICD-9180
OMIM603956
DiseasesDB2278
MedlinePlus000893
eMedicinemed/324 radio/140
MeSHD002583
ಈ ದೊಡ್ಡ ಸ್ಕ್ವಾಮಸ್‌ ಕಾರ್ಸಿನೋಮ (ಚಿತ್ರದ ಕೆಳಭಾಗ) ಗರ್ಭಕಂಠವನ್ನು ನಾಶಮಾಡುತ್ತದೆ ಮತ್ತು ಕೆಳ ಗರ್ಭಾಶಯ ಭಾಗವನ್ನೂ ಆಕ್ರಮಿಸುತ್ತದೆ. ಗರ್ಭಕಂಠವೂ ಕೂಡ ಮೇಲ್ಭಾಗದಲ್ಲಿ ದುಂಡನೆಯ ಮೃದುವಾದ ಗೆಡ್ಡೆಯನ್ನು ಹೊಂದಿದೆ.

ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್‌ನಿಂದ ತೀವ್ರ ತರದ ಕ್ಯಾನ್ಸರ್‌ ಆರಂಭಿಕ ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಹೀಗೆ ಉಂಟಾಗುವ ಭಾರೀ ಬದಲಾವಣೆಗಳಿಗೆ ಚಿಕಿತ್ಸೆ ನೀಡಿದಲ್ಲಿ ಕ್ಯಾನ್ಸರ್ ಅನ್ನು ತಡೆಯಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಗರ್ಭಕಂಠದ‌ ಸ್ಕ್ರೀನಿಂಗ್‌ ಕಾರ್ಯಕ್ರಮಗಳ ಹೆಚ್ಚು ಬಳಕೆಯಿಂದಾಗಿ, ಗರ್ಭಕಂಠದ‌ ಕ್ಯಾನ್ಸರ್ ಬರುವ ಸಾಧ್ಯತೆಗಳು 50% ಅಥವಾ ಅದಕ್ಕೂ ಹೆಚ್ಚು ಪ್ರಮಾಣದಷ್ಟು ಕಡಿಮೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು ಎಲ್ಲ ಗರ್ಭಕಂಠದ‌ ಕ್ಯಾನ್ಸರ್‌ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ.[][] ಗರ್ಭಕಂಠದ‌ ಕ್ಯಾನ್ಸರ್‌‌ಗೆ ಕಾರಣವಾಗಿರುವ ಎರಡು ಬಗೆಯ HPV ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲ HPV ನಿರೋಧಕ ಲಸಿಕೆಯ ಲೈಸ ನ್ಸ್ ಅನ್ನು U.S. ಮತ್ತು EUಗಳು ಪಡೆದುಕೊಂಡಿವೆ.

ಒಟ್ಟಾರೆ ಈ ಎರಡು HPV ತಳಿಗಳು ಅಂದಾಜು 70%[][] ನಷ್ಟು ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಕಾರಣವಾಗಿವೆ. ಈಗಿರುವ ಲಸಿಕೆಗಳು ಕೇವಲ ಹೆಚ್ಚು ಅಪಾಯಕಾರಿ ತಳಿಗಳ ವಿರುದ್ಧದ ಚಿಕಿತ್ಸೆಗಳಲ್ಲಿ ಮಾತ್ರ ಬಳಕೆಯಾಗುವುದರಿಂದ, ಲಸಿಕೆಯ ಹಾಕಿಸಿಕೊಂಡ ನಂತರವೂ ಮಹಿಳೆಯರು ಆಗಾಗ ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್‌ ಮಾಡಿಸಿಕೊಳ್ಳಬೇಕಾಗುತ್ತದೆ.[]

ವರ್ಗೀಕರಣ

ಬದಲಾಯಿಸಿ

20ನೇ ಶತಮಾನದಲ್ಲಿ ಸರ್ವಿಕಲ್‌ ಕಾರ್ಸಿನೋಮ ಪರ್ಕರ್ಸರ್ ಲೆಸಿಯಾನ್ಸ್‌ನ ಹೆಸರು ಮತ್ತು ವರ್ಗೀಕರಣವು ಹಲವು ಬಾರಿ ಬದಲಾವಣೆಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ[][] ವ್ಯವಸ್ಥೆಯು ಲೆಸಿಯಾನ್ಸ್ಅನ್ನು ಅವುಗಳ ತೀವ್ರತೆಯ ಆಧಾರದ ಮೇಲೆ ಮೈಲ್ಡ್, ಮಾಡರೇಟ್ ಅಥವಾ ಸೀವಿಯರ್ ಡಿಸ್‌ಪ್ಲಾಸಿಯ ಅಥವಾ ಕಾರ್ಸಿನೋಮ ಇನ್‌‌ಸಿಟು ಎಂದು ಹೆಸರಿಸಿತು. ಈ ಲೆಸಿಯಾನ್‌ಗಳ ಅಸಮಾನ್ಯತೆಯ ಬಗ್ಗೆ ಬೆಳಕು ಚೆಲ್ಲಲು ಹಾಗೂ ಚಿಕಿತ್ಸೆಯ ಗುಣಮಟ್ಟವನ್ನು ಕಾಪಾಡಲು[] ಸರ್ವಿಕಲ್ ಇಂಟ್ರಾಎಪಿತೀಲಿಯಲ್ ನಿಯೋಪ್ಲಾಸಿಯ(CIN)ವನ್ನು ಅಭಿವೃದ್ಧಿ ಪಡಿಸಲಾಯಿತು.[] ಇದು ಮೈಲ್ಡ್ ಡಿಸ್‌ಪ್ಲಾಸಿಯಾವನ್ನು CIN1 ಎಂದೂ, ಮಾಡರೇಟ್ ಡಿಸ್‌ಪ್ಲಾಸಿಯಾವನ್ನು CIN2 ಎಂದೂ ಹಾಗೂ ತೀವ್ರ ತರಹದ ಡಿಸ್‌ಪ್ಲಾಸಿಯಾವನ್ನು CIS ಅಂದರೆ CIN3 ಎಂದೂ ವರ್ಗೀಕರಣ ಮಾಡಿದೆ.

ಇತ್ತೀಚಿನ ವರ್ಗೀಕರಣವೆಂದರೆ ಬೆಥೆಸ್ಡಾ ವ್ಯವಸ್ಥೆಯಾಗಿದ್ದು, ಇದರಲ್ಲಿ ಎಲ್ಲ ರೀತಿಯ ಗರ್ಭಕಂಠದ ಎಪಿತೀಲಿಯಲ್ ಪ್ರೆಸರ್ಸಾರ್ ಲೆಸಿಯಾನ್‌ಗಳನ್ನು ಎರಡು ಗುಂಪಾಗಿ ವರ್ಗೀಕರಿಸಿರುವುದು ಹೀಗಿದೆ: ಲೋ-ಗ್ರೇಡ್ ಸ್ಕ್ವಾಮಸ್ ಇಂಟ್ರಾಎಪಿತೀಲಿಯಲ್ ಲೆಸಿಯಾನ್ (LSIL) ಹಾಗೂ ಹೈ-ಗ್ರೇಡ್ ಸ್ಕ್ವಾಮಸ್ ಇಂಟ್ರಾಎಪಿತೀಲಿಯಲ್ ಲೆಸಿಯಾನ್ (HSIL). CIN1, LSILಗೆ ಹೊಂದಿಕೆಯಾದರೆ HSIL CIN2 ಹಾಗೂ CIN3ಯನ್ನು ಒಳಗೊಂಡಿವೆ.[] ಇತ್ತೀಚಿಗೆ CIN2 ಮತ್ತು CIN3ಯನ್ನು ಜೊತೆಯಾಗಿಸಿ CIN2/3 ಎಂದು ಹೆಸರಿಸಲಾಗಿದೆ.

ರೋಗ ಸೂಚನೆ ಹಾಗೂ ಲಕ್ಷಣಗಳು

ಬದಲಾಯಿಸಿ

ಗರ್ಭಕಂಠದ ಕ್ಯಾನ್ಸರ್‌‌ನ ಆರಂಭಿಕ ಹಂತಗಳು ಸಂಪೂರ್ಣ ಲಕ್ಷಣ ರಹಿತವಾಗಿರಬಹುದು.[][] ಮ್ಯಾಲಿಗ್ನೆನ್ಸಿಯನ್ನು ಯೋನಿ ಸ್ರಾವ, ಸಂಪರ್ಕದಿಂದ ಉಂಟಾಗುವ ರಕ್ತಸ್ರಾವ ಅಥವಾ ಯೋನಿಯ ದುರ್ಮಾಂಸದ (ಅಪರೂಪಕ್ಕೊಮ್ಮೆ) ಬೆಳವಣಿಗೆಯಿಂದ ಗುರುತಿಸಬಹುದಾಗಿದೆ. ಲೈಂಗಿಕ ಸಂಭೋಗ ಕ್ರಿಯೆಯಲ್ಲಿ ತೊಡಗಿದಾಗ ಅಲ್ಪ ಪ್ರಮಾಣದ ನೋವು ಕಾಣಿಸಿಕೊಳ್ಳವುದು ಮತ್ತು ಯೋನಿ ಸ್ರಾವ ಗರ್ಭಕಂಠದ ಕ್ಯಾನ್ಸರ್‌‌ನ ಲಕ್ಷಣಗಳಾಗಿವೆ.

ಮುಂದುವರಿದ ರೋಗ ದ ಹಂತದಲ್ಲಿ ಹೊಟ್ಟೆ, ಶ್ವಾಸಕೋಶ ಅಥವಾ ಇತರೆ ಭಾಗಗಳಲ್ಲಿ ಕ್ಯಾನ್ಸರ್‌ಕಾರಕಗಳು ಕಾಣಿಸಿಕೊಳ್ಳುತ್ತವೆ. ಹಸಿವೆ ಆಗದಿರುವುದು, ತೂಕ ಕಡಿಮೆಯಾಗುವುದು, ಬಳಲಿಕೆ, ಅಸ್ಥಿ ಕುಹರದ ನೋವು, ಬೆನ್ನು ನೋವು, ಒಂದು ಕಾಲು ಊದಿಕೊಳ್ಳುವುದು, ಯೋನಿಯ ಅತಿಯಾದ ರಕ್ತಸ್ರಾವ, ಮೂತ್ರ ಸೋರುವಿಕೆ ಅಥವಾ ಯೋನಿಯಿಂದ ಕಲ್ಮಶಗಳ ಅನಿಯಂತ್ರಿತ ವಿಸರ್ಜನೆ[], ಮತ್ತು ಮೂಳೆ ಮುರಿಯುವುದು ಉಲ್ಭಣಾವಸ್ಥೆಯ ಗರ್ಭಕಂಠ ಕ್ಯಾನ್ಸರ್‌‌ನ ಲಕ್ಷಣಗಳಾಗಿವೆ.

ಕಾರಣಗಳು

ಬದಲಾಯಿಸಿ

ಹ್ಯೂಮನ್‌ ಪ್ಯಾಪಿಲೋಮವೈರಸ್‌ ಸೋಂಕು

ಬದಲಾಯಿಸಿ

ಹೆಚ್ಚು ಅಪಾಯಕಾರಿ ತಳಿಯಾದ ಹ್ಯೂಮನ್‌ ಪ್ಯಾಪಿಲೋಮವೈರಸ್‌ನ (HPV) ಸೋಂಕಿಗೊಳಗಾಗುವುದು ಗರ್ಭಕಂಠದ ಕ್ಯಾನ್ಸರ್‌ ಬೆಳವಣಿಗೆಗೆ ಅತಿ ಮುಖ್ಯ ಹಾಗೂ ಅಪಾಯಕಾರಿ ಅಂಶ. ಈ ವೈರಸ್ ಕ್ಯಾನ್ಸರ್ ಅನುಬಂಧವು ಗರ್ಭಕಂಠದ ಜೀವಕೋಶಗಳ ವ್ಯತ್ಯಾಸ ಮೂಡುವಂತೆ ಮಾಡುತ್ತದೆ, ಇದರಿಂದಾಗಿ ಗರ್ಭಕಂಠದ ಇಂಟ್ರಾಎಪಿತೀಲಿಯಲ್‌ ನಿಯೋಪ್ಲಾಸದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಂತರ ಇದು ಕ್ಯಾನ್ಸರ್‌ಗೆ ತಿರುಗುತ್ತದೆ.

ಒಬ್ಬರಿಗಿಂತ ಹೆಚ್ಚು ಸಂಗಾತಿಗಳ (ಪುರುಷರ ಜೊತೆ ಲೈಂಗಿಕ ಸಂಪರ್ಕ ಹೊಂದಿದವರು ಅಥವಾ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿದವರ ಮಹಿಳೆಯರು) ಜೊತೆ ಲೈಂಗಿಕ ಸಂಪರ್ಕ ಹೊಂದಿದ ಮಹಿಳೆಯರು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ತುಂಬಾ ಹೆಚ್ಚು.[೧೦][೧೧]

HPV ಸೋಂಕಿನಲ್ಲಿ ೧೫೦ಕ್ಕೂ ಹೆಚ್ಚು ವಿಧಗಳನ್ನು ಗುರುತಿಸಲಾಗಿದೆ (ಕೆಲವು ಮೂಲಗಳು 200ಕ್ಕೂ ಹೆಚ್ಚು ಉಪವಿಧಗಳಿವೆಯೆಂದು ತಿಳಿಸುತ್ತದೆ).[೧೨][೧೩] ಇವುಗಳ ಪೈಕಿ ೧೫ ವಿಧಗಳನ್ನು (ಅಂದರೆ 16, 18, 31, 33, 35, 39, 45, 51, 52, 56, 58, 59, 68, 73, ಮತ್ತು 82) ತೀವ್ರ ಅಪಾಯಕಾರಿ ವಿಧಗಳು ಎಂದೂ, ೩ ವಿಧಗಳನ್ನು (ಅಂದರೆ 26,53, ಮತ್ತು 66) ಮಧ್ಯಂತರ ಅಪಾಯಕಾರಿ ವಿಧಗಳು ಎಂದೂ ಹಾಗೂ ಉಳಿದ ೧೨ ವಿಧಗಳನ್ನು (ಅಂದರೆ 6, 11, 40, 42, 43, 44, 54, 61, 70, 72, 81, ಹಾಗೂ CP6108)[೧೪] ಕಡಿಮೆ ಅಪಾಯಕಾರಿ ವಿಧಗಳೆಂದು ವರ್ಗೀಕರಿಸಲಾಗಿದೆ. ಈ ಸೋಂಕುಗಳೂ ಕೂಡ ಕ್ಯಾನ್ಸರ್‌ ಉಂಟುಮಾಡುವ ಸಾಧ್ಯತೆಗಳಿವೆ.

೭೦%ನಷ್ಟು ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳಿಗೆ 16 ಮತ್ತು 18ನೇ ವಿಧದ ಸೋಂಕುಗಳೇ ಸಾಮಾನ್ಯವಾದ ಕಾರಣವಾಗಿವೆ. ಎಲ್ಲ ಒಟ್ಟಾರೆಯಾಗಿ ೩೧ ವಿಧಗಳಿದ್ದು, ಅವುಗಳೆಲ್ಲವೂ ಗರ್ಭಕಂಠದ ಕ್ಯಾನ್ಸರ್ ರೋಗದ ಮೂಲ ಕಾರಣಗಳಾಗಿವೆ.[೧೫] ಜನನಾಂಗದ ನರಹುಲಿ(=ನರೂಲಿ)ಗಳಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಲ್ಲದ HPVಯ ಇನ್ನಿತರ ಹಲವಾರು ಸೋಂಕುಗಳು ಕಾರಣವಾಗಿವೆ.

ವೈದ್ಯಕೀಯವಾಗಿ ಒಪ್ಪಿಕೊಂಡಿದ್ದ ಸಿದ್ಧಾಂತಗಳ ಪ್ರಕಾರ, ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಹಾಗೂ ಇತರೆ ಸಂಸ್ಥೆಗಳು, ರೋಗಿಯು ‌HPV ಸೋಂಕಿಗೆ ಈಡಾದರೆ ಮಾತ್ರ ಗರ್ಭಕಂಠದ ಕ್ಯಾನ್ಸರ್ ಬರುತ್ತದೆ. ಹೀಗಾಗಿ ಅದನ್ನು ಲೈಂಗಿಕವಾಗಿ ಹರಡುವ ರೋಗವೆಂದು ಪರಿಗಣಿಸಿದ್ದವು. ಆದರೆ ತೀವ್ರ ತರದ ಅಪಾಯಕಾರಿ HPV ಸೋಂಕಿಗೊಳಗಾದ ಎಷ್ಟೋ ಹೆಂಗಸರು ಗರ್ಭಕಂಠದ ಕ್ಯಾನ್ಸರ್‌‌ಗೆ ತುತ್ತಾಗದಿರುವುದು ಕಂಡುಬಂದಿದೆ.[೧೬]

ಕಾಂಡೋಮ್‌ಗಳ ಬಳಕೆ ರೋಗ ಹರಡುವುದನ್ನು ತಗ್ಗಿಸಬಲ್ಲದೇ ಹೊರತು ಸಂಪೂರ್ಣ ತಡೆಗಟ್ಟುವ ಸಾಧನವಾಗಿಲ್ಲ. ಅದೇ ರೀತಿಯಲ್ಲಿ HPVಯು ಸೋಂಕಿಗೊಳಗಾದ ಚರ್ಮದ ಭಾಗ ಸಂಪರ್ಕಕ್ಕೆ ಬಂದಾಗಲೂ ಸೋಂಕು ಹರಡಬಲ್ಲದು. ಗಂಡಸರಲ್ಲಿ HPV ಸೋಂಕು ಪ್ರಮುಖವಾಗಿ ಶಿಶ್ನಾಗ್ರಚರ್ಮದಲ್ಲಿ ಬೆಳೆಯುತ್ತದೆ ಎಂದು ನಂಬಲಾಗಿದ್ದು ಆ ಜಾಗವನ್ನು ಸ್ವಚ್ಛವಾಗಿ ಇಟ್ಟುಕ್ಕೊಳ್ಳುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ.

ಇತರೆ ಅಂಶಗಳು

ಬದಲಾಯಿಸಿ

ಅಮೆರಿಕನ್ ಕ್ಯಾನ್ಸರ್ ಸೊಸೈಟಿಯು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾದ ಇತರೆ ಅಪಾಯಕಾರಿ ಅಂಶಗಳನ್ನು ಹೀಗೆ ಗುರುತಿಸಿದೆ: ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು, ಧೂಮಪಾನ, HIV ಸೋಂಕು, ಕ್ಲಮೈಡಿಯ ಸೋಂಕು, ಆಹಾರ ಅಭ್ಯಾಸದ ಕ್ರಮ, ಸಂತಾನ ನಿಯಂತ್ರಣಕ್ಕಾಗಿ ಹಾರ್ಮೋನುಗಳ ಬಳಕೆ, ಬಹು ಬಾರಿ ಗರ್ಭ ಧರಿಸುವುದು, ಹಾರ್ಮೋನು ಔಷಧವಾದ ಡೈಈತೈಲ್‌ಸ್ಟಿಲ್‌ಬೆಸ್ಟ್ರಾಲ್ (DES)ನ ಸೇವನೆ ಮತ್ತು ಗರ್ಭಕಂಠದ ಕ್ಯಾನ್ಸರ್‌ ಇದ್ದಿರಬಹುದಾದ ಕುಟುಂಬದ ಇತಿಹಾಸ.[೧೦] HLA-B7 ಜೊತೆ ಅನುವಂಶಿಕ ಗುಣಗಳೂ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳು ಇವೆ.

ಸಾಮಾನ್ಯವಾಗಿ ಶಿಶ್ನದ ಮುಂದೊಗಲ ಸುನತಿ(=ಶಿಶ್ನಾಗ್ರದ ಮುಂದೊಗಲಿನ ಛೇದನ) ಮಾಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಲೈಂಗಿಕ ಜೊತೆಗಾರ್ತಿಗೆ ಬರಬಹುದಾದ ಗರ್ಭಕಂಠದ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುವ ಅಭಿಪ್ರಾಯವನ್ನು HPV ಲಸಿಕೆಯ ಆವಿಷ್ಕಾರದ ನಂತರವೂ ಕೆಲವು ಸಂಶೋಧಕರು ವ್ಯಕ್ತಪಡಿಸುತ್ತಾರೆ. ಇದರಲ್ಲಿ ಅನುಕೂಲಗಳಿಗಿಂತ ಅಪಾಯಗಳೇ ಹೆಚ್ಚು ಎಂದು ಮಿಕ್ಕ ಸಂಶೋಧಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಶಿಶುವಿನ ಜನನಾಂಗದ ಆರೋಗ್ಯಪೂರ್ಣ ಅಂಗಾಂಶಗಳನ್ನು ತೆಗೆದು ಹಾಕುವುದು ಅನೈತಿಕವೆಂತಾಗುತ್ತದೆ ಎಂದು ವಾದಿಸುತ್ತಾರೆ. ಯಾಕೆಂದರೆ ಸಾಮಾನ್ಯವಾಗಿ ಈ ವಿಧಾನಕ್ಕೆ ಗಂಡು ಮಕ್ಕಳನ್ನೇ ಆಯ್ಕೆ ಮಾಡಿಕೊಳ್ಳುವುದು ಈ ವಾದಕ್ಕೆ ಮತ್ತಷ್ಟು ಇಂಬು ನೀಡುತ್ತದೆ.

ಪುರುಷರಿಗೆ ಸುನತಿ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್‌‌ ತಡೆಗಟ್ಟುವುದು ಎಂಬುದಕ್ಕೆ ಯಾವುದೇ ರೀತಿಯ ಸರಿಯಾದ ಆಧಾರಗಳಿಲ್ಲ, ಆದರೂ ಕೆಲವು ಸಂಶೋಧಕರು ಸೋಂಕು ವಿಜ್ಞಾನದ ಪುರಾವೆಗಳನ್ನು ಆಧರಿಸಿ, ಸುನತಿ ಮಾಡಿಸಿಕೊಂಡ ಪುರುಷರು HPV ಸೋಂಕಿಗೊಳಗಾಗುವುದು ತೀರಾ ಕಡಿಮೆ ಎಂದು ಹೇಳುತ್ತಾರೆ.[೧೭] ಗರ್ಭಕಂಠ ಕ್ಯಾನ್ಸರ್‌ನ ಅಪಾಯಕ್ಕೆ ಈಡಾಗಲು ಸುರಕ್ಷಿತ ಲೈಂಗಿಕ ವರ್ತನೆಯುಳ್ಳ ಪುರುಷರ ಹಾಗೂ ಒಂದೇ ಸಂಗಾತಿಯನ್ನು ಹೊಂದಿದ ಪುರುಷರ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ರೋಗ ನಿರ್ಣಯ

ಬದಲಾಯಿಸಿ

ಅಂಗಾಂಶ ಪರೀಕ್ಷಾ ವಿಧಾನಗಳು

ಬದಲಾಯಿಸಿ

ಪ್ಯಾಪ್ ಸ್ಮೀಯರ್ ಪರಿಣಾಮಕಾರಿ ಸ್ಕ್ರೀನಿಂಗ್ ವಿಧಾನವಾಗಿದ್ದರೂ, ಗರ್ಭಕಂಠದ ಕ್ಯಾನ್ಸರ್‌ ಅಥವಾ ಆರಂಭಿಕ ಕ್ಯಾನ್ಸರ್‌ ಬದಲಾವಣೆಗಳನ್ನು ದೃಢೀಕರಿಸಲು ಗರ್ಭಕಂಠದ ಅಂಗಾಂಶ ತಪಾಸಣೆಯ ಅಗತ್ಯವಿದೆ. ಇದನ್ನು ಕಾಲ್ಪಸ್ಕೊಪಿಯಿಂದ ಮಾಡಬಹುದು, ದುರ್ಬಲ ಅಸಿಟಿಕ್ ಆಮ್ಲ ದ್ರಾವಣದ (e.g. ವಿನೆಗರ್‌) ಸಹಾಯದಿಂದ ಗರ್ಭಕಂಠದ ದೊಡ್ಡ ಚಿತ್ರ ಮೂಡಿಸಿ ಗರ್ಭಕಂಠದಲ್ಲಿರಬಹುದಾದ ಅಸಮಾನ್ಯ ಜೀವಕೋಶಗಳನ್ನು ಪರೀಶೀಲನೆ ಮಾಡುವ ಕಾರ್ಯವಾಗಿದೆ.[]

ನಂತರದ ತಪಾಸಣಾ ವಿಧಾನಗಳೆಂದರೆ ಲೂಪ್ ಎಲೆಕ್ಟ್ರಿಕಲ್ ಶಸ್ತ್ರಚಿಕಿತ್ಸಾ ವಿಧಾನ (LEEP) ಮತ್ತು ಕನೈಜೇಷನ್‌‍ಗಳಾಗಿದ್ದು, ಇವುಗಳಲ್ಲಿ ಗರ್ಭಕಂಠದ ಒಳ ಪದರವನ್ನು ತೆಗೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಂಗಾಂಶ ಪರೀಕ್ಷೆಯು ತೀವ್ರ ತರದ ಗರ್ಭಕಂಠದ ಒಳಚರ್ಮದಲ್ಲಿ ಉಂಟಾಗುವ ಗೆಡ್ಡೆಗಳು ಇರುವುದನ್ನು ದೃಢೀಕರಿಸದರೆ ಮಾತ್ರ ಇವುಗಳನ್ನು ಮಾಡಲಾಗುತ್ತದೆ.

ರೋಗ ವೈವಿಧ್ಯ

ಬದಲಾಯಿಸಿ

ಗರ್ಭಕಂಠ ಕ್ಯಾನ್ಸರ್‌‌ಗೆ ಗರ್ಭಕಂಠದ ಒಳಚರ್ಮದಲ್ಲಿ ಉಂಟಾಗುವ ಗೆಡ್ಡೆಗಳು ಪೂರ್ವಗಾಮಿಗಳು. ಆದ್ದರಂದ ಇವುಗಳನ್ನು ರೋಗ ತಜ್ಞರು ಗರ್ಭಕಂಠದ ಅಂಗಾಂಶ ತಪಾಸಣೆ ಮಾಡಿ ರೋಗ ನಿರ್ಣಯಿಸುತ್ತಾರೆ ಆಕ್ರಮಣಕಾರಿ ಗರ್ಭಕಂಠದ ಕಾರ್ಸಿನೋಮದ ಅಂಗಾಂಶಕೋಶಗಳ ಉಪವಿಧಗಳು ಇಂತಿವೆ:[೧೮][೧೯]

ಬಹುತೇಕ ಪ್ರಕರಣಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌‌ ಸ್ಕ್ವಾಮಸ್ ಸೆಲ್‌ ಕಾರ್ಸಿನೋಮ ಆಗಿದ್ದರೂ, ಇತ್ತೀಚಿನ ದಶಕಗಳಲ್ಲಿ ಗರ್ಭಕಂಠದಲ್ಲಿ ಅಡಿನೊಕಾರ್ಸಿನೊಮ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ[].

ಅಪರೂಪಕ್ಕೊಮ್ಮೆ ಗರ್ಭಕಂಠದಲ್ಲಿ ಕಂಡು ಬರುವ ನಾನ್ಕಾರ್ಸಿನೋಮದಲ್ಲಿ ಇವು ಸೇರಿವೆ.

ಇಲ್ಲಿ ಗುರುತಿಸಬೇಕಾದ ಅಂಶವೆಂದರೆ, ಬೇರೆ ಕ್ಯಾನ್ಸರ್‌ ವಿಧಗಳ TNM ಹಂತಗಳಲ್ಲಿ ದುಗ್ಧ ಗ್ರಂಥಿ ಸೇರಿರುವಂತೆ ಇಲ್ಲಿನ FIGO ಹಂತದಲ್ಲಿ ಇದು ಯಾವುದರ ಜೊತೆಗೂ ಸೇರಿರುವುದಿಲ್ಲ. ಶಸ್ತ್ರಚಿಕಿತ್ಸೆಗೊಳಗಾದ ಪ್ರಕರಣಗಳಲ್ಲಿ, ರೋಗತಜ್ಞರಿಂದ ಪಡೆದ ಮಾಹಿತಿಯನ್ನು ಬೇರೆ ಹಂತಕ್ಕೆ ಸೇರಿಸಲು ಮಾತ್ರ ಬಳಸಬಹುದಾಗಿದ್ದು ಇದು ಮೂಲ ವೈದ್ಯಕೀಯ ಹಂತವನ್ನು ಬದಲಾಯಿಸುವುದಕ್ಕಲ್ಲ.ತೀವ್ರ ಸ್ವರೂಪದ ವಿಪರೀತ ಬದಲಾವಣೆಗಳಿಗೂ ಮುಂಚೆ, CIN ([ಸರ್ವಿಕಲ್ ಇಂಟ್ರಾಎಪಿತೀಲಿ ಯಲ್ ನಿಯೋಪ್ಲಾಸಿಯ] ಗರ್ಭಕಂಠದ ಒಳ ಚರ್ಮದಲ್ಲಿ ಕಂಡುಬರುವ ಊತ)ಕ್ಕೆ ಗ್ರೇಡ್‌ಗಳನ್ನು ನೀಡಲಾಗುತ್ತದೆ.

ಹಂತಗಳು ಮತ್ತು ಕಾಲಾವಧಿ

ಬದಲಾಯಿಸಿ

ಗರ್ಭಶಾಸ್ತ್ರ ಮತ್ತು ಪ್ರಸೂತಿ ವಿಜ್ಞಾನದ ಅಂತರರಾಷ್ಟ್ರೀಯ ಒಕ್ಕೂಟವು (FIGO) ಗರ್ಭಕಂಠದ ಕ್ಯಾನ್ಸರನ್ನು ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲಿ ಕಂಡುಕೊಂಡ ಅಂಶಗಳ ಬದಲಿಗೆ ವೈದ್ಯಕೀಯ ವಿಧಾನಗಳನ್ನು ಅನುಸರಿಸಿ ಹಲವು ಹಂತಗಳ ವ್ಯವಸ್ಥೆಯಾಗಿ ವಿಭಾಗಿಸಿದೆ.ಇದು ರೋಗದ ಹಂತಗಳನ್ನು ಪತ್ತೆ ಮಾಡಲು ಈ ಕೆಳಗಿನ ರೋಗ ತಪಾಸಣಾ ಪರೀಕ್ಷೆಗಳನ್ನು ಮಾತ್ರ ಬಳಸಲು ಸೂಚಿಸಿದೆ: ಅವುಗಳೆಂದರೆ ಸ್ಪರ್ಶ ಪರೀಕ್ಷೆ, ಪರಿಶೀಲನೆ, ಕಾಲ್ಪಸ್ಕಪಿ, ಎಂಡೊಸರ್ವಿಕಲ್ ಕ್ಯುರೆಟೇಜ್‌, ಹಿಸ್ಟರೋಸ್ಕೋಪಿ, ಸಿಸ್ಟೋಸ್ಕೋಪಿ, ಪ್ರಾಕ್ಟೋಸ್ಕಪಿ, ಇಂಟ್ರಾವೇನಸ್ ಯೂರೊಗ್ರಫಿ ಹಾಗೂ ಶ್ವಾಸಕೋಶಗಳ ಮತ್ತು ಅಸ್ತಿಯ X-ರೇ ಪರೀಕ್ಷೆ, ಮತ್ತು ಗರ್ಭಕಂಠದ ಕನೈಜೇಷನ್.

ಗರ್ಭಕಂಠದ ಕ್ಯಾನ್ಸರ್‌‌ನ TNM ಹಂತದ ವ್ಯವಸ್ಥೆಯು FIGO ಹಂತವನ್ನು ಹೋಲುತ್ತದೆ.

  • ಹಂತ 0 - ಚರ್ಮ ದಪ್ಪವಾಗತೊಡಗುತ್ತದೆ ಆದರೆ ಯಾವುದೇ ಆಕ್ರಮಣಕಾರಿ ಊತಗಳು (ಕಾರ್ಸಿನೋಮ ಇನ್‌‌ಸಿಟು) ಕಂಡು ಬರುವುದಿಲ್ಲ.
  • ಹಂತ I - ಗರ್ಭಕಂಠಕ್ಕೆ ಮಾತ್ರ ಸೀಮಿತವಾಗಿರುತ್ತದೆ.
    • 0 IA - ಮೈಕ್ರೋಸ್ಕೋಪಿಯಿಂದ ಮಾತ್ರ ತಪಾಸಣೆ ಮಾಡಬಹುದಾಗಿದ್ದು,ಲೆಸಿಯಾನ್‌ಗಳು ಗೋಚರಿಸುವುದಿಲ್ಲ
      • 0 IA1 - ಆಕ್ರಮಿಸಿದ ಊತವು 3 mmಗಿಂತ ಕಡಿಮೆ ಆಳವಿರುತ್ತದೆ ಹಾಗೂ 7 mm ಅಥವಾ ಇನ್ನೂ ಕಡಿಮೆ ಜಾಗದಲ್ಲಿ ಚಪ್ಪಟೆಯಾಗಿ ಹರಡುತ್ತದೆ.
      • 0 IA2 - ಆಕ್ರಮಿಸಿದ ಊತವು 3 ರಿಂದ 5 mmನಷ್ಟಿರುತ್ತದೆ ಹಾಗೂ 7 mm ಅಥವಾ ಅದಕ್ಕಿಂತಲೂ ಕಡಿಮೆ ಜಾಗದಲ್ಲಿ ಹರಡಿರುತ್ತದೆ.
    • 0 IB - ಮೈಕ್ರೊಸ್ಕೋಪ್‌ ಅಥವಾ ಬರಿಗಣ್ಣಿಗೆ ಗೋಚರಿಸುವ ಲೆಸಿಯಾನ್‌ 5 mm ಅಥವಾ ಅದಕ್ಕೂ ಹೆಚ್ಚು ಆಳವಾಗಿದ್ದು ,7 mm ಅಥವಾ ಅದಕ್ಕೂ ಹೆಚ್ಚು ಜಾಗದಲ್ಲಿ ವ್ಯಾಪಿಸುತ್ತದೆ.
      • 0 IB1 - ದೊಡ್ಡ ಆಯಾಮದಲ್ಲಿ ಬರಿಗಣ್ಣಿಗೆ ಗೋಚರಿಸುವ ಲೆಸಿಯಾನ್ 4 cm ಅಥವಾ ಅದಕ್ಕೂ ಕಡಿಮೆಯಿರುತ್ತದೆ.
      • IB2 - ಬರಿಗಣ್ಣಿಗೆ ಗೋಚರಿಸುವ ಲೆಸಿಯಾನ್ 4 cm ಅಥವಾ ಅದಕ್ಕೂ ದೊಡ್ಡದಾಗಿರುತ್ತವೆ.
  • ಹಂತ II - ಗರ್ಭಕಂಠದಾಚೆಗೂ ಹರಡುತ್ತದೆ
    • IIA - ಯಾವುದೇ ಪ್ರಮಿತಿಯಿಲ್ಲದಿದ್ದರೂ ಯೋನಿಯ ಮೇಲಿನ 2/3ರಷ್ಟು ಭಾಗವನ್ನು ಆಕ್ರಮಿಸುತ್ತದೆ.
    • IIB - ಪ್ರಮಿತಿಯೊಳಗೆ ಆಕ್ರಮಿಸುತ್ತದೆ
  • ಹಂತ III - ಅಸ್ಥಿ ಕುಹರದ ಕವಚ ಅಥವಾ ಯೋನಿಯ ಮೂರನೇಯ ಭಾಗದ ಕೆಳಗೂ ಹರಡುತ್ತದೆ
    • 0 IIIA - ಯೋನಿಯ ಮಿಕ್ಕ ಮೂರನೇ ಭಾಗವನ್ನು ಆಕ್ರಮಣ ಮಾಡುತ್ತದೆ
    • 0 IIIB - ಅಸ್ಥಿ ಕುಹರದ ಕವಚಕ್ಕೂ ಹರಡುವ ಇದು ಹೈಡ್ರೊನೆಫ್ರೊಸಿಸ್‌ ಅಂದರೆ ಮೂತ್ರ ಪಿಂಡದ ವಿಫಲತೆಗೆ ಕಾರಣವಾಗುತ್ತದೆ
  • IVA - ಗುದನಾಳದ ಅಥವಾ ಗುದಚೀಲದ‌ ಲೋಳೆಪೊರೆಗೆ ಆಕ್ರಮಿಸುವ ಇದು ಸಂಪೂರ್ಣ ಅಸ್ಥಿ ಕುಹರಕ್ಕೆ ಹರಡುತ್ತದೆ.
  • IVB - ಮೆಟಾಸ್ಟಾಸಿಸ್‌‌ ವಿಭಜನೆಯಾಗಿ ದೇಹದ ಇತರೆ ಭಾಗಗಳಿಗೆ ಹರಡುವುದು

ಚಿಕಿತ್ಸೆ

ಬದಲಾಯಿಸಿ

ಸಣ್ಣ ಪ್ರಮಾಣದ ಕ್ಯಾನ್ಸರನ್ನು (ಹಂತ IA) ಸಾಮಾನ್ಯವಾಗಿ ಹಿಸ್ಟರೆಕ್ಟಮಿಯಿಂದ ಗುಣಪಡಿಸಬಹುದು (ಯೋನಿಯ ಕೆಲವು ಭಾಗವನ್ನೂ ಸೇರಿದಂತೆ ಗರ್ಭಕೋಶವನ್ನು ಸಂಪೂರ್ಣವಾಗಿ ತೆಗೆದುಹಾಕುವುದು). IA2 ಹಂತದಲ್ಲಿ, ದುಗ್ಧ ಗ್ರಂಥಿಯ ಗಂಟುಗಳನ್ನೂ ತೆಗೆದು ಹಾಕಲಾಗುತ್ತದೆ. ಕೋನ್‌ ಬಯಾಪ್ಸಿ.[೨೦] ಅಥವಾ ಸಾಮಾನ್ಯವಾದ ಶಸ್ತ್ರಚಿಕಿತ್ಸಾ ವಿಧಾನವಾದ ಲೂಪ್ ಎಲೆಕ್ಟ್ರಿಕಲ್ ಶಸ್ತ್ರಚಿಕಿತ್ಸಾ ವಿಧಾನ (LEEP) ಎಂಬ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಧಾನವು ಫಲವತ್ತತೆಯನ್ನು ಹಾಗೆಯೇ ಉಳಿಸಿಕೊಳ್ಳುವ ಉದ್ಧೇಶ ಹೊಂದಿದ ರೋಗಿಗಳಿಗಿರುವ ಪರ್ಯಾಯ ಮಾರ್ಗ

ಕೋನ್ ಅಂಗಾಂಶ ಪರೀಕ್ಷೆ ಅಪೇಕ್ಷಿತ ಫಲ ನೀಡುವಲ್ಲಿ ವಿಫಲವಾದರೆ ನೀಡುವಲ್ಲಿ ವಿಫಲವಾದರೆ,[೨೧] ರೋಗಿಗಳಿಗಿರುವ ತಮ್ಮ ಫಲವತ್ತತೆಯನ್ನು ಹಾಗೆಯೇ ಉಳಿಸಿಕೊಳ್ಳಲು ನೆರವಾಗುವ ಇನ್ನೊಂದು ಸಂಭಾವ್ಯ ಚಿಕಿತ್ಸಾ ಪದ್ಧತಿಯೆಂದರೆ ಟ್ರಾಕಿಲೆಕ್ಟಮಿ.[೨೨]

ಟ್ರಾಕಿಲೆಕ್ಟಮಿ ವಿಧಾನವು ಹಿಸ್ಟೆರೆಕ್ಟಮಿಗಿಂತ ಒಳ್ಳೆಯ ಮತ್ತು ಸುರಕ್ಷಿತವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ಅಂಡಾಶಯ ಹಾಗೂ ಗರ್ಭಕೋಶವನ್ನು ಹಾಗೆಯೇ ಉಳಿಸಿಕೊಂಡು ಬರೀ ಕ್ಯಾನ್ಸರ್ ಅಂಶವನ್ನು ಮಾತ್ರ ತೆಗೆದುಹಾಕಲು ಯತ್ನಿಸಲಾಗುತ್ತದೆ.ಇನ್ನೂ ಹರಡದಿರುವ ಗರ್ಭಕಂಠ ದ ಕ್ಯಾನ್ಸರ್‌‌ನ Iನೇ ಹಂತದಲ್ಲಿ ಇದೊಂದು ಉತ್ತಮ ಆಯ್ಕೆ. ಆದಾಗ್ಯೂ ಬೇರೆ ವೈದ್ಯರುಗಳು ಇದನ್ನು ಸುರಕ್ಷಿತ ವಿಧಾನವೆಂದು ಪರಿಣಿಸಿಲ್ಲ. ಈ ವಿಧಾನದ ಚಿಕಿತ್ಸೆ ನೀಡುವ ನುರಿತ ವೈದ್ಯರ ಕೊರತೆಯೇ ಇಂಥ ಪರಿಗಣನೆಗೆ ಕಾರಣವಾಗಿದೆ. ಕ್ಯಾನ್ಸರ್‌ ಹರಡಿರುವ ಪ್ರಮಾಣವನ್ನು ತಿಳಿಯದೇ ಇರುವುದರಿಂದ , ಶಸ್ತ್ರಚಿಕಿತ್ಸೆ ನಡೆಸಿ ತೆಗೆದ ಅಂಗಾಂಶಗಳನ್ನು ಸೂಕ್ಷ್ಮದರ್ಶಕದಲ್ಲಿ ತಪಾಸಣೆ ನಡೆಸುವವರೆಗೂ ಟ್ರಾಕಿಲೆಕ್ಟಮಿ ವಿಧಾನ ಅನುಸರಿಸ ಬಹುದೇ ಬೇಡವೆ ಎಂದು ಹೇಳುವುದಕ್ಕೆ ತಜ್ಞ ವೈದ್ಯರಿಗೂ ಹೇಳಲು ಅಸಾಧ್ಯ. ಹಾಗೇನಾದರೂ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಅರಿವಳಿಕೆ ನೀಡಲ್ಪಟ್ಟ ರೋಗಿಯ ಗರ್ಭಕಂಠದ ಅಂಗಾಂಶಗಳನ್ನು ಮೈಕ್ರೊಸ್ಕೋಪ್‌ನಿಂದ ಸ್ಪಷ್ಟ ಚಿತ್ರಣಗಳನ್ನು ಗುರುತಿಸಲಾಗದಿದ್ದರೆ ಹಿಸ್ಟರೆಕ್ಟಮಿಯೇ ಅಗತ್ಯ ಬೀಳುತ್ತದೆ. ರೋಗಿಯ ಪೂರ್ವಾನುಮತಿ ಪಡೆದರೆ ಮಾತ್ರ ಶಸ್ತ್ರಚಿಕಿತ್ಸೆಯ ದಿನದಂದು ಈ ಪ್ರಕ್ರಿಯೆಯನ್ನು ಮಾಡ ಬಹುದಾಗಿದೆ. 1b ಹಾಗೂ 1a ಹಂತದ ಕ್ಯಾನ್ಸರ್‌ಗಳು ದುಗ್ಧ ಗ್ರಂಥಿಗಳಿಗೂ ಹರಡಿ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆಗಳು ಇರುವುದರಿಂದ, ಕೆಲವು ಸಲ ತಜ್ಞ ವೈದ್ಯರು ಸೋಂಕಿನ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ಪರೀಕ್ಷಿಸಲು ಗರ್ಭಕೋಶದ ಸುತ್ತಮುತ್ತ ಕಂಡು ಬರುವ ದುಗ್ಧ ಗ್ರಂಥಿಗಳನ್ನು ತೆಗೆದು ಹಾಕಬೇಕಾದ ಪ್ರಸಂಗಗಳು ಬರಬಹುದು.

ರಾಡಿಕಲ್ ಟ್ರಾಕಿಲೆಕ್ಟಮಿ ಚಿಕಿತ್ಸೆಯನ್ನು ಹೊಟ್ಟೆಯ[೨೩] ಅಥವಾ ಯೋನಿಯ[೨೪] ಮೂಲಕ ಮಾಡಬಹುದಾಗಿದ್ದು, ಇವೆರಡರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದರ ಬಗ್ಗೆ ವಾದಗಳು ನಡೆಯುತ್ತಿವೆ[೨೫].

ಲಿಂಫೆಡೆನೆಕ್ಟಮಿ ಜೊತೆಗೆ ಮಾಡುವ ರಾಡಿಕಲ್ ಅಬ್ಡಾಮಿನಲ್ ಟ್ರಾಕಿಲೆಕ್ಟಮಿ ಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಎರಡರಿಂದ ಮೂರು ದಿನ ಉಳಿಯಬೇಕಾಗಿ ಬರಬಹುದು, ಮತ್ತು ಹೆಚ್ಚಿನ ಮಹಿಳೆಯರು ಬೇಗನೆ (ಸುಮಾರು ಆರು ವಾರಗಳಲ್ಲಿ) ಚೇತರಿಸಿಕೊಳ್ಳುತ್ತಾರೆ . ಶಸ್ತ್ರ ಚಿಕಿತ್ಸೆಯ ನಂತರ ಗರ್ಭಧರಿಸಿದವರು ಎಚ್ಚರಿಕೆಯಿಂದ ಇರಬೇಕು, ಯಾಕೆಂದರೆ ಇಂಥವರಿಗೆ ಅವಧಿಗೆ ಮುಂಚೆ ಶಿಶು ಜನಿಸುವುದು ಅಥವಾ ಗರ್ಭಪಾತ ಆಗುವುದು ಸಾಮಾನ್ಯ. ಇಂತಹ ಕ್ಲಿಷ್ಟಕರ ಪ್ರಕರಣಗಳು ಅಪರೂಪಕ್ಕೆ ಒಮ್ಮೆ ಕಂಡುಬರುತ್ತವೆ.[೨೬]

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ನಂತರ ಗರ್ಭ ಧರಿಸುವುದಕ್ಕೆ ಕನಿಷ್ಟ ಪಕ್ಷ ಒಂದು ವರ್ಷ ಸಮಯಾವಧಿಯಾದದರೂ ಕಾಯಬೇಕು ಎಂದು ಶಿಫಾರಸು ಮಾಡಲಾಗಿದೆ.[೨೭] ಕ್ಯಾನ್ಸರ್‌‌ಗೆ ಟ್ರಾಕಿಲೆಕ್ಟಮಿ ಚಿಕಿತ್ಸೆ ನೀಡಿದರೆ ಗರ್ಭಕಂಠದ ಉಳಿದ ಭಾಗಗಳಲ್ಲಿ ಪುನಃ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆಗಳು ತೀರಾ ಅಪರೂಪ.[೨೮]

ಆದರೂ ರೋಗಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಹಾಗೂ ಪ್ಯಾಪ್ ಸ್ಕ್ರೀನಿಂಗ್‌/ಕಾಲ್ಪೊಸ್ಕೊಪಿಯನ್ನು ಆಗಾಗ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ಕೆಳ ಗರ್ಭಾಶಯದ ಭಾಗಕ್ಕೆ ಅಗಾಗ (ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ 5 ವರ್ಷಗಳ ವರೆಗೆ) ಬಯಾಪ್ಸಿಗಳನ್ನು ಮಾಡಿ ರೋಗ ಮರುಕಳಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು, ಹಾಗೂ ಗರ್ಭ ಧರಿಸಲು ಕ್ರಿತಾಶೀಲರಾದಾಗ ಸುರಕ್ಷಿತ ಲೈಂಗಿಕ ಕ್ರಮಗಳ ಪಾಲನೆ ಮಾಡುವುದಕ್ಕೆಸಲಹೆ ನೀಡಲಾಗಿದೆ. ಮತ್ತೊಂದು ಬಾರಿ HPV ಸೋಂಕಿಗೆ ಒಳಗಾಗುವ ಸಾಧ್ಯತೆಗಳನ್ನು ಇದು ತಪ್ಪಿಸಬಹುದಾಗಿದೆ.

ಆರಂಭಿಕ ಹಂತಗಳಲ್ಲಿ (ಅಂದರೆ 4 cmಗಿಂತಲೂ ಕಡಿಮೆಯಿರುವ IB1 ಮತ್ತು IIA) ಹಿಸ್ಟರೆಕ್ಟಮಿಯ ಜೊತೆಗೆ ದುಗ್ಧ ಗ್ರಂಥಿಗಳನ್ನೂ ತೆಗೆದು ಹಾಕುವ ಚಿಕಿತ್ಸೆ ಅಥವಾ ರೇಡಿಯೇಷನ್ ತೆರಪಿ ನೀಡಬಹುದಾಗಿದೆ. ರೇಡಿಯೇಷನ್‌ ತೆರಪಿಯಲ್ಲಿ ಹೊರಗಿನಿಂದ ಅಸ್ಥಿ ಕುಹರಕ್ಕೆ ಕ್ಷಕಿರಣಗಳನ್ನು ಹಾಯಿಸಿದರೆ , ಒಳಭಾಗಕ್ಕೆ ಬ್ರಾಕಿತೆರಪಿಮೂಲಕ ಚಿಕಿತ್ಸೆ ನೀಡಲಾಗುತ್ತದೆ(ಇಂಟರ್ನಲ್ ರೇಡಿಯೇಷನ್)ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳಲ್ಲಿ ರೋಗ ತಪಾಸಣೆಯಿಂದ ತೀವ್ರ ತರದ ಲಕ್ಷಣಗಳು ದೃಢಪಟ್ಟಿದ್ದರೆ ಅಂತಹವರಿಗೆ ಕ್ಯಾನ್ಸರ್‌ ಮರು ಕಳಿಸುವುದನ್ನು ತಡೆಯಲು ರೇಡಿಯೇಷನ್‌ ತೆರಪಿಯನ್ನು ಕಿಮೊತೆರಪಿಯ ಜೊತೆಯಲ್ಲಿ ಅಥವಾ ಅದಿಲ್ಲದೇ ನೀಡಲಾಗುತ್ತದೆ.

ಗರ್ಭಕಂಠದಲ್ಲಿರುವ ಆರಂಭಿಕ ಹಂತದ ದೊಡ್ಡ ಗೆಡ್ಡೆಗಳನ್ನು (4 cmನಷ್ಟಿರುವ IB2 ಮತ್ತು IIA ಹಂತಗಳು) ರೇಡಿಯೇಷನ್‌ ತೆರಪಿ ಮತ್ತು ಸಿಸ್‌‌ಪ್ಲ್ಯಾಟಿನ್‌‌-ಅಂಶವುಳ್ಳ ಕಿಮೊತೆರಪಿ ಚಿಕಿತ್ಸೆಗಳಿಂದ (ಅದರ ನಂತರ ಅಡ್ಜುವೆಂಟ್‌ ರೇಡಿಯೇಷನ್‌ ತೆರಪಿಯನ್ನು ನೀಡ ಬೇಕಾಗಿ ಬರಬಹುದು), ಅಥವಾ ಸಿಸ್‌‌ಪ್ಲಟಿನ್‌‌ ಕಿಮೊತೆರಪಿ ಹಾಗೂ ಹಿಸ್ಟರೆಕ್ಟಮಿ ಚಿಕಿತ್ಸೆಗಳ ಸಂಯೋಜನೆಯಿಂದ ತೆಗೆದುಹಾಕಲಾಗಿತ್ತದೆ. ವಿಕಿರಣ ಚಿಕಿತ್ಸೆ ಮತ್ತು ಸಿಸ್‌‌ಪ್ಲ್ಯಾಟಿನ್‌‌-ಅಂಶವುಳ್ಳ ಕಿಮೊತೆರಪಿ ಸಂಯೋಜನೆಯ ಚಿಕಿತ್ಸೆಗಳಿಂದ ಉಲ್ಬಣಾವಸ್ಥೆಯಲ್ಲಿರು ಕಾಣಿಸಿಕೊಳ್ಳುವ (IIB-IVA) ಗೆಡ್ಡೆಗಳನ್ನು ತೆಗೆದುಹಾಕಲಾಗುತ್ತದೆ.

USನ ಆಹಾರ ಮತ್ತು ಔಷಧ ಪ್ರಾಧಿಕಾರವು ಸ್ತ್ರೀಯರಲ್ಲಿ ಕಂಡು ಬರುವ ತೀವ್ರ ಹಂತದ (IVB) ಗರ್ಭಕಂಠ ಕ್ಯಾನ್ಸರ್‌‌ನ ಚಿಕಿತ್ಸೆಗಳಲ್ಲಿ ಎರಡು ಕಿಮೊತೆರಪಿ ಔಷಧಗಳಾದ ಹೈಕೆಮ್ಟಿನ್‌ ಮತ್ತು ಸಿಸ್‌‌ಪ್ಲಾಟಿನ್‌‌ಗಳನ್ನು‌ ಜೊತೆಯಾಗಿ ಬಳಸಲು 2006ರ ಜೂನ್ 15ರಂದು ಅನುಮೋದನೆ ನೀಡಿದೆ.[೨೯] ಸಂಯುಕ್ತ ಚಿಕಿತ್ಸೆಯಿಂದ ಉಂಟಾಗಬಹುದಾದ ಕೆಲವು ಪ್ರಮುಖವಾದ ದುಷ್ಪರಿಣಾಮಗಳೆಂದೆರೆ ನ್ಯೂಟ್ರೊಪೇನಿಯ, ಅನೀಮಿಯ, ಹಾಗೂ ಥ್ರಾಂಬೊಸೈಟೊಪೀನಿಯ. ಹೈಕೆಮ್ಟಿನ್‌ ಔಷಧ ಗ್ಲಾಕ್ಸೊಸ್ಮಿತ್‌ಕ್ಲ್ಯನ್ ಉತ್ಪಾದನೆ.

ರೋಗ ನಿಯಂತ್ರಣ

ಬದಲಾಯಿಸಿ

ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌‌ನ ಅಭಿಪ್ರಾಯದಂತೆ, 2005ರಲ್ಲಿ ಹೆಲ್ತ್‌ ಇನ್‌ಫರ್‌ಮೇಶನ್ ನ್ಯಾಷನಲ್ ಟ್ರೆಂಡ್ಸ್‌ ನಡೆಸಿದ ಸರ್ವೇಕ್ಷಣೆಯ ಪ್ರಕಾರ, ಅಮೆರಿಕದ ಕೇವಲ 40%ನಷ್ಟು ಮಹಿಳೆಯರು ಹ್ಯೂಮನ್‌ ಪ್ಯಾಪಿಲೋಮವೈರಸ್‌ (HPV) ಸೋಂಕಿನ ಬಗ್ಗೆ ತಿಳಿದಿದ್ದು, HPV ಸೋಂಕಿಗೂ ಗರ್ಭಕಂಠದ ಕ್ಯಾನ್ಸರ್‌‌ಗೂ ಇರುವ ಸಂಬಂಧವನ್ನು ಕೇವಲ 20% ನಷ್ಟು ಮಹಿಳೆಯರು ಮಾತ್ರ ಅರಿತಿದ್ದಾರೆ.[೩೦] USನಲ್ಲಿ 2008ರಲ್ಲಿ ಸರಿಸುಮಾರು 3,870 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌‌ನಿಂದಾಗಿ ಮೃತಪಟ್ಟಿದ್ದು , ಮತ್ತು ಆ ವರ್ಷ 11,000 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.[೩೧]

ರೋಗ ತಪಾಸಣೆ

ಬದಲಾಯಿಸಿ

ಗರ್ಭಕಂಠದ ಕ್ಯಾನ್ಸರ್‌ ಪತ್ತೆಗೆ ಬಳಸುವ ಪಪನಿಕೊಲೊವ್‌ ತಪಾಸಣೆ ಅಥವಾ ಪ್ಯಾಪ್ ಸ್ಮೀಯರ್ ವ್ಯಾಪಕ ಪ್ರಚಾರದಿಂದ ಮುಂದುವರಿದ ರಾಷ್ಟ್ರಗಳಲ್ಲಿ ಇರುವುದರಿಂದಾಗಿ ಗರ್ಭಕಂಠದ ಕ್ಯಾನ್ಸರ್‌ ಕಾಯಿಲೆಯಿಂದ ಸಾವಪ್ಪುವವರ ಸಂಖ್ಯೆ ಇಳಿಮುಖವಾಗಿದೆ.[] ಪ್ಯಾಪ್ ಸ್ಮೀಯರ್‌ನ ವ್ಯತಿರಿಕ್ತ ಫಲಿತಾಂಶಗಳು ಸರ್ವಿಕಲ್ ಇಂಟ್ರಾಎಪಿತೀಲಿಯಲ್‌ ನಿಯೋಪ್ಲಾಸಗಳು ಕ್ಯಾನ್ಸರ್‌ ಅಗಿ ಪರಿವರ್ತನೆ ಹೊಂದುವುದಕ್ಕೂ ಮುಂಚೆ (ಗರ್ಭಕೋಶದಲ್ಲಿ ತೀವ್ರ ಸ್ವರೂಪದ ಆರಂಭಿಕ ಬದಲಾವಣೆಗಳು) ಸೂಚನೆ ನೀಡುತ್ತದೆ. ಇದರಿಂದಾಗಿ ಮತ್ತಷ್ಟು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ವರ್ಷಕ್ಕೊಮ್ಮೆ ಮತ್ತು ಐದು ವರ್ಷಕ್ಕೊಮ್ಮೆ ಮಾಡಲಾಗುವ ಪ್ಯಾಪ್ ಸ್ಮೀಯರ್ ತಪಾಸಣೆ ಎಷ್ಟು ಅವಧಿಗೊಮ್ಮೆ ಮಾಡಿಸಬೇಕು ಎಂಬುದರ ಅವಧಿಯಲ್ಲಿ ವ್ಯತ್ಯಾಸವಿದೆ. ಸಂಭೋಗ ಶುರುವಾದ ಮೇಲೆ ಸುಮಾರು 3 ವರ್ಷಗಳ ನಂತರ ಅಥವಾ/ಮತ್ತು ಇಪ್ಪತ್ತೊಂದು ವರ್ಷ ವಯಸ್ಸು ಮೀರುವ ಮುನ್ನ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್‌ನ ತಪಾಸಣೆ ಮಾಡಬೇಕೆಂದು ACS ಸಲಹೆ ನೀಡುತ್ತದೆ.[೩೨] ಸ್ಕ್ರೀನಿಂಗ್‌ನ ಸಲಹಾ ಸೂತ್ರಗಳು ಎಷ್ಟು ಬಾರಿ ಮಾಡಬೇಕು ಎಂಬುದರ ಮೇಲೆ ಅವಲಂಬಿತವಾಗಿವೆ. ಆದರೆ ಸ್ಕ್ರೀನಿಂಗ್‌ಗೆ ಒಳಗಾದ 65ರಿಂದ 70 ವರ್ಷದ ಮಹಿಳೆಯರಲ್ಲಿ ಯಾವುದೇ ರೀತಿಯ ಅಸಮಾನ್ಯ ಸ್ಮೀಯರ್‌ಗಳು ಕಂಡು ಬರದಿದ್ದಲ್ಲಿ ಅಂತಹವರು ಇದನ್ನು ನಿಲ್ಲಸಬಹುದಾಗಿದೆ. ಅರಂಭಿಕ ಹಂತದಲ್ಲಿ ತೀವ್ರ ಸ್ವರೂಪದ ಗೆಡ್ಡೆ ಅಥವಾ ಗರ್ಭಕಂಠದ ಕ್ಯಾನ್ಸರ್‌ ಇರುವುದು ತಿಳಿದು ಬಂದರೆ, ಅದಕ್ಕೆ ಫಲವತ್ತತೆಗೆ ಧಕ್ಕೆ ಉಂಟಾಗದಂತೆ ಚಿಕಿತ್ಸೆಯ ಮೂಲಕ ಹರಡದಂತೆ ನಿಯಂತ್ರಿಸಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಪ್ಯಾಪ್ ಸ್ಮೀಯರ್‌ ಈವರೆವಿಗೂ ಪ್ರಮುಖ ತಂತ್ರಜ್ಞಾನವಾಗಿದೆ. ಈ ವಿಷಯ ಕುರಿತು ಪ್ರಕಟವಾದ ಸಾಹಿತ್ಯದ ವಿಮರ್ಶೆಯ ನಂತರ, UKಯ ನ್ಯಾಷನಲ್ ‌ ಸ್ಕ್ರೀನಿಂಗ್‌‌ ಪ್ರೋಗ್ರಾಂನಲ್ಲಿ ದ್ರವ‌ ಆಧಾರಿತ ಸೈಟಾಲಜಿಯನ್ನು ಅಳವಡಿಸಿಕೊಂಡಿದೆ ಎಂದು NICEಯು ತನ್ನ ವರದಿಯಲ್ಲಿ ತಿಳಿಸಿದೆ.[೩೩] ಪ್ಯಾಪ್ ಟೆಸ್ಟ್‌ನ ನಿಖರತೆಯಲ್ಲಿ ಮತ್ತಷ್ಟು ಹೆಚ್ಚಿಸಲು ತರುವುದು ಇದರ ಉದ್ದೇಶಿಸಲಾಗಿದ್ದು, 9%ನಷ್ಟಿರುವ ಅಸಮರ್ಪಕತೆಯನ್ನು 1%ಗೆ ಇಳಿಸಲು ಅನುಕೂಲವಾಗುತ್ತದೆ.[೩೪] ಇದು ಮಹಿಳೆಯರು ಅನೇಕ ಬಾರಿ ಸ್ಮೀಯರ್‌ ಟೆಸ್ಟ್‌ ಮಾಡಿಸುವುದನ್ನು ತಪ್ಪಿಸುತ್ತದೆ.

ಸಾಮಾನ್ಯವಾಗಿ ಸೈಟೋಟೆಕ್ನಾಲಜಿಸ್ಟ್‌ಗಳು ಮಾಡುತ್ತಿದ್ದ ಸ್ಮೀಯರ್‌ಗಳ ಅಧ್ಯಯನವನ್ನು ಗುರಿಯಾಗಿಸಿಕೊಂಡು ಸ್ವಯಂ ಚಾಲಿತ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ದುರದೃಷ್ಟಕರ ಎಂದರೆ ಇವುಗಳು ಕೂಡ ಮಾನವನಂತೆಯೇ ವಿವರಣೆ ನೀಡುವುದರಲ್ಲಿ ಇವುಗಳೂ ವಿಫಲವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಹೀಗಾಗಿ ಇದರ ಉಪಯೋಗ ಕಡಿಮೆ .[೩೫]

ಗರ್ಭಕಂಠದ ಕ್ಯಾನ್ಸರ್‌ ಪತ್ತೆಗೆ HPV ಪರೀಕ್ಷೆಯು ಹೊಸ ರೀತಿಯ ತಂತ್ರಜ್ಞಾನವಾಗಿದ್ದು, ಇದು ಗರ್ಭಕಂಠದಲ್ಲಿರುವ ಹ್ಯೂಮನ್‌ ಪ್ಯಾಪಿಲೋಮವೈರಸ್‌‌ ಸೋಂಕನ್ನು ಪತ್ತೆ ಹಚ್ಚುತ್ತದೆ. ಇದು ಪ್ಯಾಪ್ ಸ್ಮೀಯರ್‌ಗಿಂತ ತುಂಬಾ ನಿಖರ (ನೆಗೆಟೀವ್‌ ಫಲಿತಾಂಶವನ್ನು ನಿಖರವಾಗಿ ನೀಡುತ್ತದೆ) ಫಲಿತಾಂಶ ನೀಡಿದರೂ, ಒಟ್ಟಾರೆ ಫಲಿತಾಂಶ (ಪಾಸಿಟೀವ್‌ ಫಲಿತಾಂಶಗಳು ಅಷ್ಟು ನಿಖರವಾಗಿರುವುದಿಲ್ಲ) ಸರಿಯಾಗಿ ನೀಡುವುದಿಲ್ಲ ಮತ್ತು ಸ್ಕ್ರೀನಿಂಗ್‌ನಲ್ಲಿ ಇದರ ಪಾತ್ರ ಇನ್ನೂ ಬೆಳವಣಿಗೆಯ ಹಂತ ದಲ್ಲಿದೆ. ವಿಶ್ವದಾದ್ಯಂತ ಕಂಡುಬರುವ ಗರ್ಭಕಂಠದ ಕ್ಯಾನ್ಸರ್‌ಗಳಲ್ಲಿ 99%ನಷ್ಟು HPV ಸೋಂಕನ್ನು ಒಳಗೊಂಡಿರುತ್ತವೆ.

ಅದ್ದರಿಂದ ಕೆಲವು ಸಂಶೋಧಕರು HPV ಪರೀಕ್ಷೆಯನ್ನು ಸರ್ವಿಕಲ್‌ ಸ್ಕ್ರೀನಿಂಗ್‌ನ ಜೊತೆಗೇ ಮಾಡಬಹುದೆಂದು ತಿಳಿಸುತ್ತಾರೆ.[೧೫] ಆದರೆ HPVಯು ಸಾಮಾನ್ಯವಾಗಿ (ಲೈಂಗಿಕವಾಗಿ ಸಕ್ರಿಯರಾಗಿರುವ ಜನರಲ್ಲಿ ಈ ಸೋಂಕು 80%ನಷ್ಟು ಇದೆ), ಬೇರೆಯವರು ಅಗಾಗೆ HPV ಪರೀಕ್ಷೆಯು ಸೋಂಕಿನ ಬಗ್ಗೆ ಮುನ್ಸೂಚನೆ ನೀಡುತ್ತವೆ ಎಂದು ಹೇಳುತ್ತಾರೆ. ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳ ಬಳಕೆಯಿಂದಾಗಿ HPV ಪರೀಕ್ಷೆಯಿಂದಾಗಿ ಗ್ರೇಡ್‌ 2 ಅಥವಾ 3ರ ಗರ್ಭಕಂಠದ‌ ಇಂಟ್ರಾಎಪಿತೀಲಿಯಲ್‌ ನಿಯೋಪ್ಲಾಸ ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ ಅಥವಾ 32–38ರ ಹರೆಯದ ಮಹಿಳೆಯರಿಗೆ ಸಾಕಷ್ಟು ಬಾರಿ ಸ್ಕ್ರೀನಿಂಗ್‌ ಟೆಸ್ಟ್‌ಗಳನ್ನು ಮಾಡಿಸುವುದರಿಂದ ಗರ್ಭಕಂಠದ ಕ್ಯಾನ್ಸರನ್ನು ನಿಯಂತ್ರಿಸಬಹುದಾಗಿದೆ.[೩೬]

ಸರಾಸರಿ 41.3%ನಷ್ಟು ಅಪಾಯದ ಮಟ್ಟವು ಕಡಿಮೆಯಾಯಿತು. ಈ ಅಧ್ಯಯನದಲ್ಲಿ ಒಂದೇ ತೆರನಾದ ಅಪಾಯಕ್ಕೊಳಗಾದ ರೋಗಿಗಳು (63.0%ನಷ್ಟು CIN 2-3 ಅಥವಾ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ) ಇರುವುದರಿಂದ 26% ನಷ್ಟು ಅಪಾಯವನ್ನು ಸಂಪೂರ್ಣವಾಗಿ ಕಡಿಮೆಗೊಳಿಸಲು ಸಾಧ್ಯವಾಯಿತು ಒಬ್ಬನಿಗೆ ಫಲಪ್ರದ ಚಿಕಿತ್ಸೆ ದೊರೆಯಬೇಕೆಂದರೆ 3.8 ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ(ಚಿಕಿತ್ಸೆ ಪಡೆಯಬೇಕಾದವರ ಸಂಖ್ಯೆ=3.8). ಈ ಫಲಿತಾಂಶಗಳನ್ನು ರೋಗಿಯ CIN 2-3ನೇ ಹಂತದ ಯಾವ ಅಪಾಯದಲ್ಲಿ ಇರುವನೆಂದು ತಿಳಿದು, ಸೋಂಕಿನ ಮಟ್ಟವನ್ನು ತುಲನೆ ಮಾಡಲು .0& amp;cer=63.0 ಇಲ್ಲಿ ಕ್ಲಿಕ್‌ ಮಾಡಿ.

ನಿಯಂತ್ರಣ ಲಸಿಕೆ

ಬದಲಾಯಿಸಿ

HPVಯ 6, 11, 16 & 18ನೇ ಸೋಂಕಿನ ವಿರುದ್ಧ ಹೋರಾಡುವ ಲಸಿಕೆಯಾದ ಗಾರ್ಡಸಿಲ್‌‌‌ಅನ್ನು Merck & Coಯು ತಯಾರಿಸಿದ್ದು ಅದರ ಪರವಾನಗಿಯನ್ನು ಕೂಡ ಪಡೆದುಕೊಂಡಿದೆ.ಗಾರ್ಡಸಿಲ್‌ 98%ನಷ್ಟು ಪರಿಣಾಮಕಾರಿಯಾಗಿದೆ.[೩೭]. 2006ರ ಜೂನ್ 8ರಂದು USನ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ನಿಂದ ಅನುಮೋದನೆ ಪಡೆಯಲಾಗಿದ್ದು, ಈಗ ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.[] EUನಲ್ಲಿಯೂ ಗಾರ್ಡಸಿಲ್‌‌ಗೆ ಅನುಮೋದನೆ ದೊರಕಿದೆ.[೩೮]

ಗ್ಲಾಕ್ಸೊಸ್ಮಿತ್‌ಕ್ಲೈನ್‌ರವರು ಸರ್ವರಿಕ್ಸ್‌ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಇದು HPV ಸೋಂಕನ್ನು ಉಂಟುಮಾಡುವ 16 ಮತ್ತು 18ನೇ ತಳಿಗಳ ವಿರುದ್ಧ 92%ನಷ್ಟು ಪರಿಣಾಮಕಾರಿಯಾಗಿ ಹೋರಾಡಬಲ್ಲದೆಂದು ತೋರಿಸಿಕೊಟ್ಟಿದೆ ಹಾಗೂ ನಾಲ್ಕಕ್ಕಿಂತ ಜಾಸ್ತಿ ವರ್ಷಗಳಿಂದಲೂ ತುಂಬಾ ಪರಿಣಾಮಕಾರಿ ಔಷಧವಾಗಿದೆ.[೩೯] ಸರ್ವರಿಕ್ಸ್‌‌ಗೆ ಕೆಲವೆಡೆ ಅನುಮೋದಿಸಲಾಗಿದೆ ಹಾಗೂ ಇನ್ನಿತರೆ ಭಾಗಗಳಲ್ಲಿ ಅನುಮೋದನಾ ಪ್ರಕ್ರಿಯೆ ಪ್ರಗತಿಯ ಹಂತದಲ್ಲಿದೆ.[೪೦]

ಮೆರ್ಕ್‌ & Co.ಆಗಲಿ ಅಥವಾ ಗ್ಲಾಕ್ಸೊಸ್ಮಿತ್‌ಕ್ಲೈನ್‌ ಆಗಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿಲ್ಲ. USನ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌, ನ್ಯೂಯಾರ್ಕ್‌‌ನ ರಾಷ್ಚರ್ ಯೂನಿವರ್ಸಿಟಿ, ವಾಷಿಂಗ್‌ಟನ್‌ DCಯಲ್ಲಿರುವ ಜಾರ್ಜ್‌ಟೌನ್‌ ಯೂನಿವರ್ಸಿಟಿ, NHನ ಹ್ಯಾನೋವರ್‌,NHನ ಡಾರ್ಟ್‌ಮೌತ್ ಕಾಲೇಜು,ಆಸ್ಟ್ರೇಲಿಯದ ಬ್ರಿಸ್ಬೆನ್‌‍‌ನಲ್ಲಿರುವ ಕ್ವೀನ್ಸ್‌ಲೆಂಡ್ ಯೂನಿವರ್ಸಿಟಿ-ಈ ಲಸಿಕೆಯ ಮಹತ್ವದ ಅಭಿವೃದ್ಧಿ ಹಂತಗಳು ತಮ್ಮದೆಂದು ಹೇಳಿಕೊಳ್ಳುತ್ತವೆ. ಮೆರ್ಕ್‌ & Co.ಮತ್ತು ಗ್ಲಾಕ್ಸೊಸ್ಮಿತ್‌ಕ್ಲೆನ್‌ ಮೇಲಿನ ಎಲ್ಲರಿಂದಲೂ ಕೃತಿ ಸ್ವಾಮ್ಯದ ಅನುಮತಿಯನ್ನು ಪಡೆದಿವೆ.[೪೧]

HPV ಸೋಂಕಿನ 16 ಮತ್ತು 18ನೇ ಮಾದರಿಗಳು ಒಟ್ಟಾರೆಯಾಗಿ 70%ನಷ್ಟು ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳಿಗೆ ಕಾರಣವಾಗಿದೆ. 90%ನಷ್ಟು ಜನನಾಂಗದ ನರಹುಲಿ ಪ್ರಕರಣಗಳಿಗೆ HPV ಸೋಂಕಿನ 6 ಮತ್ತು 11ನೇ ಮಾದರಿಗಳು ಕಾರಣವಾಗಿವೆ. HPV ಲಸಿಕೆಗಳನ್ನು 9 ರಿಂದ 26 ವರ್ಷದೊಳಗಿನ ಹುಡುಗಿಯರು ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಯಾಕೆಂದರೆ ಈ ಲಸಿಕೆಗಳು ವ್ಯಕ್ತಿಯು ಸೋಂಕಿಗೀಡಾಗುವುದಕ್ಕಿಂತ ಮುಂಚೆ ನೀಡಿದರೆ ಮಾತ್ರ ಕಾರ್ಯ ಮಾಡಬಲ್ಲದು. ಆದ್ದರಿಂದ, ಸಾರ್ವಜನಿಕ ವೈದ್ಯಕೀಯ ವೃತ್ತಿನಿರತರು ಲೈಂಗಿಕವಾಗಿ ಕ್ರಿಯಾಶೀಲರಾಗುವುದಕ್ಕೂ ಮುಂಚಿನ ಹುಡುಗಿಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಪುರುಷರಲ್ಲಿ ಜನನಾಂಗ ನರಹುಲಿಯ ಬೆಳವಣಿಗೆಯನ್ನು ನಿಯಂತ್ರಿಸಲು ಹಾಗೂ ಸ್ತ್ರೀಯರಿಗೆ ಸೋಂಕು ಹರಡುವುದನ್ನು ತಡೆಯಲು ಬಳಸಲಾಗುತ್ತಿದ್ದ ಈ ಲಸಿಕೆಯ ಮಾರುಕಟ್ಟೆಯನ್ನು ಆರಂಭದಲ್ಲಿ ಗೌಣವೆಂದು ಪರಿಗಣಿಸಲಾಗಿತ್ತು. ಲಸಿಕೆಯ ಬೆಲೆ ಕಳವಳಕ್ಕೆ ಕಾರಣವಾಗಿದ್ದು, ಹಲವು ದೇಶಗಳು HPV ಸೋಂಕಿನ ಲಸಿಕೆಗಾಗಿ ಧನ ಸಹಾಯ ಮಾಡಲು ಅಥವಾ ಪಡೆಯವ ಕಾರ್ಯ ಯೋಜನೆಗಳಿಗಾಗಿ ಕಾದಿವೆ.

ಕಾಂಡೋಮ್‌ಗಳು

ಬದಲಾಯಿಸಿ

ಗರ್ಭಕಂಠದಲ್ಲಿ ಕ್ಯಾನ್ಸರ್‌ಗೂ ಮೊದಲು ಆಗುವ ಗರ್ಭಕಂಠದಲ್ಲಿನ ಬದಲಾವಣೆಗಳ ಚಿಕಿತ್ಸೆಗಳಲ್ಲಿ ಕಾಂಡೋಮ್‌ಗಳ ಬಳಕೆಯು ಅನುಕೂಲವಾಗಬಲ್ಲವು. ಕ್ಯಾನ್ಸರ್‌ಗೂ ಮೊದಲು ಆಗುವ ಬದಲಾವಣೆಗಳಿಗೆ ವೀರ್ಯದ ಸಂಪರ್ಕ(CIN 3) ಅಪಾಯದ ಮಟ್ಟವನ್ನು ಹೆಚ್ಚಿಸುತ್ತದೆ, ಮತ್ತು ಕಾಂಡೋಮ್‌ಗಳ ಬಳಕೆ ಈ ಬದಲಾವಣೆಗಳನ್ನು ಹಿಮ್ಮೆಟ್ಟಿಸುವಲ್ಲಿ ಹಾಗೂ HPV ಮುಕ್ತವಾಗಿರಲು ಸಹಾಯಕವಾಗಿದೆ.[೪೨]

ವೀರ್ಯದಲ್ಲಿರುವ ಪ್ರಾಸ್ಟಗ್ಲ್ಯಾಂಡಿನ್‌‌ ಅಂಶವು ಗರ್ಭಕಂಠ ಮತ್ತು ಗರ್ಭಕೋಶದ ಗೆಡ್ಡೆಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಹಾಗಾಗಿ ಕಾಂಡೋಮ್‌ ಬಳಸುವುದರಿಂದ ರೋಗಪೀಡಿತ ಸ್ತ್ರೀಯರಿಗೆ ಪ್ರಯೋಜನವಾಗುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆ[೪೩][೪೪].

ಪೌಷ್ಟಿಕ ಆಹಾರ

ಬದಲಾಯಿಸಿ

ಹಣ್ಣು ಮತ್ತು ತರಕಾರಿಗಳು

ಬದಲಾಯಿಸಿ

ಹೆಚ್ಚಿನ ಪ್ರಮಾಣದ ತರಕಾರಿ ಸೇವನೆಇನ್ನೂ ಉಳಿದುಕೊಂಡಿರುವ HPVಯ ಅಪಾಯದ ಮಟ್ಟವನ್ನು 54%ನಷ್ಟು ಕಡಿಮೆ ಮಾಡುವುದರೊಂದಿಗೆ ತಳಕು ಹಾಕಿಕೊಂಡಿದೆ.[೪೫] ವಾರಕ್ಕೊಮ್ಮೆಯಾದರೂ ಪರಂಗಿ ಹಣ್ಣನ್ನು ಸೇವಿಸುವುದು ಉಳಿದುಕೊಂಡಿರುವ HPV ಸೋಂಕಿನ ನಡುವೆ ಕಲ್ಪಿಸಲಾಗಿರುವ ಸಂಬಂಧದಲ್ಲಿ ವ್ಯತ್ಯಯವಿದೆ.[೪೬]

ಜೀವಸತ್ವ A

ಬದಲಾಯಿಸಿ

HPV ಸೋಂಕಿನ ಹೊರತಾಗಿಯೂ ರೆಟಿನಾಲ್‌ನ ಗಮನಾರ್ಹ ಪ್ರಮಾಣದ ಕೊರತೆಯು ಗರ್ಭಕಂಠ ದ್ವಾರದ ಡಿಸ್‌ಪ್ಲಾಸಿಯಾಕ್ಕೆ ಒಂದು ಕಾರಣವೆಂದು ಹೇಳಲು ಸಾಕಷ್ಟು ಪುರಾವೆಗಳು ಇಲ್ಲ. ಒಂದು ಜನಾಂಗೀಯವನ್ನು(ನ್ಯೂ ಮೆಕ್ಸಿಕೊದಲ್ಲಿನ ಮೂಲ ಅಮೆರಿಕನ್ನರು) ಆಧರಿಸಿ ನಡೆಸಿದ ಸಣ್ಣದೊಂದು ಅಧ್ಯಯನ, ಈ ಲಘು ಪೋಷಕಾಂಷಗಳು ಸರ್ವಿಕಲ್ ಡಿಸ್‌ಪ್ಲಾಸಿಯಾದ ಬೆಳವಣಿಗೆಯ ಅಪಾಯಕ್ಕೀಡುಮಾಡಬಹುದೆಂದು ಸೂಚಿಸುತ್ತದೆ. ಸೀರಮ್‌ನಲ್ಲಿ ರೆಟಿನಾಲ್‌ ಅಂಶವನ್ನು ಹೆಚ್ಚಾಗಿ ಹೊಂದಿದ ಮಹಿಳೆಯರಿಗಿಂತ ಅತ್ಯಲ್ಪ ಪ್ರಮಾಣದಲ್ಲಿ ಹೊಂದಿದ ಮಹಿಳೆ ಯರಿಗೆ CIN I ಸೋಂಕು ಉಂಟಾಗುವ ಸಾಧ್ಯತೆಗಳು ಹೆಚ್ಚು.[೪೭]

ಆದರೆ ಅಧ್ಯಯನವೊಂದು ಜನರ ಸೀರಮ್‌ನಲ್ಲಿ ರೆಟಿನಾಲ್‌ನ ಪ್ರಮಾಣ ತೀರಾ ಕಡಿಮೆಯಿದ್ದು, ಅದು ಕೊರತೆಯನ್ನು ತೋರಿಸುತ್ತವೆ. ಪೌಷ್ಟಿಕ ಆಹಾರ ಸೇವಿಸುವ 20%ಜನರಲ್ಲಿ ಸೀರಮ್‌ ರೆಟಿನಾಲ್ ಅಂಶ ಅತ್ಯಧಿಕ ಮಟ್ಟದಲ್ಲಿ ಇರುವುದು ಅಧ್ಯಯನದಿಂದ ಗೊತ್ತಾಗಿದೆ.ಇದು ನ್ಯೂ ಮೆಕ್ಸಿಕೊ ಜನರಲ್ಲಿ ಇರುವ ಮಟ್ಟದ ಸನಿಹಕ್ಕೆ ಬರುತ್ತದೆ.[೪೮]

ಜೀವಸತ್ವ C

ಬದಲಾಯಿಸಿ

ಕಡಿಮೆ ಪ್ರಮಾಣದಲ್ಲಿ ಜೀವಸತ್ವ C ಅಂಶವುಳ್ಳ ಆಹಾರ ಸೇವಿಸುವ ಸ್ತ್ರೀಯರಿಗಿಂತ, ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವ ಸ್ತ್ರೀಯರಲ್ಲಿ ನಿರ್ದಿಷ್ಟ ಮಾದರಿಯ HPV ಸೋಂಕು ಹರಡುವ ಅಪಾಯದ ಮಟ್ಟ ಕಡಿಮೆಯಿದೆ.[೪೬]

ಜೀವಸತ್ವ E

ಬದಲಾಯಿಸಿ

ಕಡಿಮೆ ಟೋಕೊಫೆರಾಲ್‌ಗಳ ಮಟ್ಟವನ್ನು ಹೊಂದಿರುವ ಸ್ತ್ರೀಯರಿ ಗೆ ಹೋಲಿಸಿ ನೋಡಿದರೆ ಹೆಚ್ಚಾಗಿ ಹೊಂದಿರುವ ಸ್ತ್ರೀಯರು ಬಹು ಬೇಗನೆ ಗುಣಮುಖರಾಗುತ್ತಾರೆ. ಆದರೆ ಈ ಪರಿಣಾಮಕಾರಿ ಟ್ರೆಂಡ್‌ಗಳು ಹೆಚ್ಚು ಅತ್ಯಲ್ಪ </=120 ದಿನಗಳಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಸೀಮಿತವಾಗಿದೆ. ಟೋಕೊಫೆರಾಲ್‌‌ಗಳ ಪರಿಚಲನೆ ಮಟ್ಟಗಳು ಮೊಂಡಾಗಿ ಮುಂದುವರಿಯುವ HPV (>120 ದಿನಗಳಿಗೂ ಮೀರಿದ) ಸೋಂಕಿನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾದ HPV ಸೋಂಕಿನ ನಿರ್ಮೂಲನೆ ಗೆ ಅಗತ್ಯವಾದ ಲಘು ಪೊಷಕಾಂಶಗಳ ಅವಶ್ಯಕತೆಗಳನ್ನು ತಿಳಿಸುವುದೇ{.{0/}ಈ ಅಧ್ಯಯನದ ಫಲಶೃತಿ

ಸರ್ವಿಕಲ್‌ ಇಂಟ್ರಾಎಪಿತೀಲಿಯಲ್ ನಿಯೋಪ್ಲಾಸ ಹೊಂದಿದ HPV ಸೋಂಕಿತರ ರಕ್ತದ ಸೀರಮ್‌ನಲ್ಲಿ ಅಲ್ಪ ಮಟ್ಟದ ಆಲ್ಫ-ಟೋಕೊಫೆರಾಲ್‌ ಅಂಶವು ಗಣನೀಯವಾಗಿ ಕಡಿಮೆಯಾಗಿರುವುದನ್ನು ತಿಳಿದುಬಂದಿದೆ. ಆಲ್ಫ-ಟೋಕೊಫೆರಾಲ್‌ ಮಟ್ಟ < 7.95 mumol/l ಇದ್ದಾಗ ಡಿಸ್‌ಪ್ಲಾಸಿಯಾದ ಅಪಾಯವು ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ.[೪೯]

ಫೋಲಿಕ್ ಆಮ್ಲ

ಬದಲಾಯಿಸಿ

ಹೆಚ್ಚಿನ ಫೋಲೇಟ್ ಮಟ್ಟವು HPV ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಫೋಲೇಟ್ ಅಂಶವನ್ನು ಹೊಂದಿದ ಮಹಿಳೆಯರಲ್ಲಿ ಮತ್ತೆ ಮತ್ತೆ HPV ಪರೀಕ್ಷೆಗೆ ಪಾಸಿಟೀವ್‌ ಆಗಿ ಸ್ಪಂದಿಸುವ ಸಂಭವ ಗಣನೀಯವಾಗಿ ಕಡಿಮೆಯಾಗಿದ್ದು, ಅಂತಹ ಮಹಿಳೆಯರು ಹೆಚ್ಚಾಗಿ HPV ಪರೀಕ್ಷೆಯಲ್ಲಿ ನೆಗೆಟೀವ್ ಆಗಿ ಸ್ಪಂದಿಸುತ್ತಾರೆ.ಅಲ್ಪ ಮಟ್ಟದ ಫೋಲಿಕ್ ಆಮ್ಲ ಮತ್ತು ಅತ್ಯಲ್ಪ ಮಟ್ಟದ ಆಂಟಿಆಕ್ಸಿಡೆಂಟ್‌‌ಗಳು ಒಟ್ಟಿಗೆ ಇರುವವರಲ್ಲಿ CIN ಬೆಳವಣಿಗೆಯ ಅಪಾಯದ ಮಟ್ಟ ಹೆಚ್ಚು. ತೀವ್ರ ತರದ HPV ಸೋಂಕಿಗೆ ಒಳಗಾದ ಅಥವಾ ಅಂತಹ ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳಿರುವ ಸಂದರ್ಭದಲ್ಲಿ ಫೋಲೇಟ್‌ನ ಮಟ್ಟವನ್ನು ಹೆಚ್ಚಿಸುವ ಕ್ರಮ ಗರ್ಭಕಂಠದ ಕ್ಯಾನ್ಸರ್‌ ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.[೫೦][೫೧] ಆದರೆ ಫೋಲೇಟ್ ಮಟ್ಟಕ್ಕೂ ಹಾಗೂ ಗರ್ಭಕಂಠ ಡಿಸ್‌ಪ್ಲಾಸಿಯಾಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಬೇರೊಂದು ಅಧ್ಯಯನ ತೋರಿಸಿಕೊಟ್ಟಿದೆ.[೪೭]

ಕರಾಟಿನಾಯ್ಡ್‌‌‌‌‌‌‌‌‌‌‌‌‌‌‌‌ಗಳು

ಬದಲಾಯಿಸಿ

ಹೆಚ್ಚಿನ ಮಟ್ಟದ ಕರಾಟಿನಾಯ್ಡ್‌‌‌‌‌‌‌‌‌‌‌‌‌‌‌‌ಗಳ ಪರಿಚಲನೆಯು ಕೆಲ ನಿರ್ದಿಷ್ಟ ಮಾದರಿ HPV ಸೋಂಕನ್ನು ಅತಿ ಕಡಿಮೆ ಸಮಯದಲ್ಲಿ - ವಿಶೇಷವಾಗಿ ಸೋಂಕಿನ ಆರಂಭಿಕ ಹಂತಗಳಲ್ಲಿ (</=120 ದಿನಗಳು) ತೆರವುಗೊಳಿಸಬಲ್ಲವು. ಶಾಶ್ವತ HPV ಸೋಂಕನ್ನು(>120 ದಿನಗಳಿಗೂ ಮೀರಿದವು) ನಿರ್ಮೂಲನೆ ಮಾಡುವುದಕ್ಕೂ ಹಾಗೂ ಕರಾಟಿನಾಯ್ಡ್‌‌‌‌‌‌‌‌‌‌‌‌‌‌‌‌ಗಳ ಪರಿಚಲನೆಗೂ ಯಾವುದೇ ರೀತಿಯ ಸಂಬಂಧವಿಲ್ಲ.[೫೨] ಲೈಕೊಪೀನ್‌ಗಳು ಹೆಚ್ಚಿನ ಮಟ್ಟದ ಬಳಕೆಯಿಂದ ಕ್ಯಾನ್ಸರ್‌ಕಾರಕ HPV ಸೋಂಕಿನ ನಿರ್ಮೂಲ ಮಾಡುವ ಗಣನೀಯವಾಗಿ ಹೆಚ್ಚಿಸಬಹುದಾಗಿದೆ.[೫೩]

ಅತ್ಯಲ್ಪ ಮಟ್ಟದ ಪ್ಲಾಸ್ಮ [ಲೈಕೊಪೀನ್‌] ಸಾಂದ್ರತೆಯಿರುವ ಸ್ತ್ರೀಯರಿಗೆ ಹೋಲಿಸಿದಾಗ ಹೆಚ್ಚಿನ ಮಟ್ಟದ ಪ್ಲಾಸ್ಮ ಲೈಕೊಪೀನ್‌ ಸಾಂದ್ರತೆ ಹೊಂದಿರುವ ಸ್ತ್ರೀಯರಲ್ಲಿ ಉಳಿಕೆಯ HPV ಸೋಂಕಿನ ಅಪಾಯವು 56%ನಷ್ಟು ಪ್ರಮಾಣ ಇಳಿಕೆಯಾಗಿದೆ. ತರಕಾರಿ ಸೇವನೆ ಮತ್ತು ಲೈಕೊಪೀನ್‌ನ ಪೂರೈಕೆಯು ಮೊಂಡು ಹಿಡಿದು ಉಳಿದುಕೊಂಡಿರುವ HPV ಸೋಂಕಿನ ವಿರುದ್ಧ ಹೋರಾಡಲು ಸಹಾಯಕರ ಎಂದುಈ ದತ್ತಾಂಶವು ಸೂಚಿಸುತ್ತದೆ.[೪೫][೪೬][೫೪]

CIN ಅಥವಾ ಗರ್ಭಕಂಠ ದ್ವಾರ ಕ್ಯಾನ್ಸರ್‌ಗೆ ಒಳಗಾದ ಮಹಿಳೆಯರ ರಕ್ತದಲ್ಲಿ CoQ10ನ ಮತ್ತು ಗರ್ಭಕಂಠದ ಜೀವ ಕೋಶಗಳಲ್ಲಿನ ಪ್ರಮಾಣವು ಆರೋಗ್ಯವಂತ ಮಹಿಳೆಯರಲ್ಲಿ ಇರುವುದಕ್ಕಿಂತ ಕಡಿಮೆಯಿರುವುದು ಕಂಡು ಬಂದಿದೆ.

ಮೀನೆಣ್ಣೆ

ಬದಲಾಯಿಸಿ

HPV16ರ ಶಾಶ್ವತ ಜೀವಕೋಶಗಳ ಬೆಳವಣಿಗೆಯನ್ನು ಡೋಕೊಸಹೆಕ್ಸಯೋನಿಕ್ ಆಮ್ಲ ಪರತಿರೋಧಿಸಬಲ್ಲದು ಎಂದು 1999ರ ಅಧ್ಯಯನವು ತೋರಿಸಿದೆ.[೫೫][55]

ಮುನ್ನರಿವು

ಬದಲಾಯಿಸಿ

ಮುಂದೇನಾದೀತು ಎಂಬುದನ್ನು ಊಹಿಸುವುದು ಕ್ಯಾನ್ಸರ್‌ ಹಂತವನ್ನು ಅವಲಂಬಿಸಿದೆ. ಆಕ್ರಮಣಕಾರಿ ಗರ್ಭಕಂಠದ ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲೇ 5 ವರ್ಷ ಚಿಕಿತ್ಸೆ ಪಡೆದವರಲ್ಲಿ ಬದುಕುಳಿದವರು 92%ನಷ್ಟು, ಮತ್ತು ಒಟ್ಟಾರೆಯಾಗಿ (ಎಲ್ಲ ಹಂತಗಳಲ್ಲಿದ್ದವರನ್ನೂ ಸೇರಿಸಿ) ಬದುಕುಳಿದ ವರ ಪ್ರಮಾಣವು 72%ನಷ್ಟಿತ್ತು. ಹೊಸದಾಗಿ ರೋಗ ತಪಾಸಣೆಗೊಳಪಡಿಸುವ ಸ್ತ್ರೀಯರಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡರೆ ಹೊಸದಾಗಿ ರೋಗ ಪತ್ತೆಯಾದವರಲ್ಲಿ ಈ ಅಂಕಿ ಅಂಶ ಮತ್ತಷ್ಟು ಸುಧಾರಿಸಿರಬಹುದು. ಆದರೆ ಈ ಅಂಕಿಅಂಶ ಐದು ವರ್ಷಗಳ ಹಿಂದೆ ಸ್ತ್ರೀಯರಿಗೆ ಪ್ರಥಮ ಬಾರಿ ರೋಗ ತಪಾಸಣೆ ನಡೆಸಿ ಅಂದು ಇದ್ದ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ಪಡೆದ ಫಲಿತಾಂಶಗಳ ಭಾಗ ಎಂಬುದರ ಹಿನ್ನೆಲೆ ಇಲ್ಲಿ ಗಮನಾರ್ಹ.

Iನೇ ಹಂತದ ಕ್ಯಾನ್ಸರ್‌ ಹೊಂದಿದ 80 ರಿಂದ 90%ನಷ್ಟು ಮಹಿಳೆಯರು ಮತ್ತು IIನೇ ಹಂತದ ಕ್ಯಾನ್ಸರ್‌ಗೆ ತುತ್ತಾದ 50 ರಿಂದ 65%ನಷ್ಟು ಮಹಿಳೆಯರು ರೋಗ ಪತ್ತೆಯಾಗಿ 5 ವರ್ಷಗಳ ನಂತರವೂ ಚಿಕಿತ್ಸೆಯ ಪರಿಣಾಮವಾಗಿ ಇನ್ನೂ ಬದುಕುಳಿದಿದ್ದಾರೆ. IIIನೇ ಹಂತದ ಕ್ಯಾನ್ಸರ್‌ ನಿಂದ ಬಳಲುವ ಸ್ತ್ರೀಯರು ಕೇವಲ 25 ರಿಂದ 35%ನಷ್ಟು ಹಾಗೂ IVನೇ ಹಂತ ಕ್ಯಾನ್ಸರ್‌ಗೆ ಈಡಾಗಿರುವ 15% ಅಥವಾ ಅದಕ್ಕೂ ಕಡಿಮೆ ಸ್ತ್ರೀಯರು ಬದುಕುಳಿದಿದ್ದಾರೆ.[೫೬]

ರೇಡಿಯೋತೆರಪಿ ಹಾಗೂ ಸಿಸ್‌‌ಪ್ಲ್ಯಾಟಿನ್‌‌-ಅಂಶ ಹೊಂದಿದ ಕಿಮೊತೆರಪಿಯನ್ನು ಜೊತೆಗೂಡಿಸಿ ನೀಡುವ ಚಿಕಿತ್ಸೆಯಿಂದಾಗಿ ಬದುಕುಳಿಯುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಇಂಟರ್‌ನ್ಯಾಷಿನಲ್ ಫೆಡರೇಷನ್ ಆಫ್ ಗೈನಕಾಲಜಿ ಅಂಡ್ ಆಬ್‌ಸ್ಟೆಟ್ರಿಕ್ಸ್‌ (ಗರ್ಭಶಾಸ್ತ್ರ ಮತ್ತು ಪ್ರಸೂತಿ ವಿಜ್ಞಾನ ಅಂತರರಾಷ್ಟ್ರಿಯ ಒಕ್ಕೂಟವು)ಅಭಿಪ್ರಾಯ ಪಡುತ್ತದೆ.[೫೭]

ಕ್ಯಾನ್ಸರ್‌ಕಾರಕ ಜೀವಕೋಶಗಳು ದೇಹದ ಇತರೆ ಅಂಗಗಳಿಗೆ ಹರಡುತ್ತಿದ್ದಂತೆ ಮುಂದೇನಾಗಬಹುದು ಎಂಬ ಊಹೆ ಹಠಾತ್ತಾಗಿ ಕಡಿಮೆಯಾಗತೊಡಗುತ್ತದೆ. ಯಾಕೆಂದರೆ ಸಂಪೂರ್ಣ ಶರೀರಕ್ಕೆ ಚಿಕಿತ್ಸೆ ನೀಡುವಂಥ ಕಿಮೊತೆರಪಿಗಿಂತ ಕ್ಯಾನ್ಸರ್‌ ಆಗಿರುವ ಭಾಗದತ್ತ ಚಿಕಿತ್ಸೆಗೆ ಗಮನ ಕೊಡುವುದೇ ತುಂಬಾ ಪರಿಣಾಮಕಾರಿಯಾಗಿವೆ. ಚಿಕಿತ್ಸೆಯ ನಂತರ ರೋಗಿಯನ್ನು ಮಧ್ಯಂತರ ಚಿಕಿತ್ಸೆಗೆ ಒಳಪಡಿಸುವುದು ಕಡ್ಡಾಯವಾಗಿದೆ.

ಮರುಕಳಿಸಬಲ್ಲ ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿಯೇ ಗುರುತಿಸಿದರೆ ಶಸ್ತ್ರಚಿಕಿತ್ಸೆ, ರೇಡಿಯೇಷನ್‌ ತೆರಪಿ, ಕಿಮೊತೆರಪಿ ಅಥವಾ ಈ ಮೂರರ ಸಂಯೋಜನೆಯನ್ನು ಬಳಸಿ ಯಶಸ್ವೀ ಚಿಕಿತ್ಸೆ ನೀಡಬಹುದಾಗಿದೆ. ಆಕ್ರಮಣಕಾರಿ ಗರ್ಭಕಂಠದ ಕ್ಯಾನ್ಸರ್‌‌ಗೆ ತುತ್ತಾದ ಮೂವತೈದು ಪ್ರತಿಶತ ರೋಗಿಗಳಲ್ಲಿ ಚಿಕಿತ್ಸೆಯ ನಂತರವೂ ಈ ರೋಗವು ಮರುಕಳಿಸುವ ಅಥವಾ ಶಾಶ್ವತವಾಗಿ ಉಳಿದುಬಿಡುವ ಸಾಧ್ಯತೆಗಳಿವೆ.[೫೮]

ಗರ್ಭಕಂಠದ ಕ್ಯಾನ್ಸರ್‌‌ನಿಂದಾಗಿ ಸರಾಸರಿ ವರ್ಷದಲ್ಲಿ ಸಮರ್ಥವಾಗಿ ಬದುಕಬೇಕಾಗಿದ್ದ ಜೀವಗಳು ಮರಣ ಹೊಂದಿದವರ ಸಂಖ್ಯೆಯು ಶೇಕಡಾ 25.3ರಷ್ಟಿದೆ (SEER ಕ್ಯಾನ್ಸರ್ ಸ್ಟಾಟಿಸ್ಟಿಕ್ಸ್‌ ರಿವ್ಯೂ 1975-2000, ನ್ಯಾಷಿನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ (NCI)). ಗರ್ಭಕಂಠದ ಕ್ಯಾನ್ಸರ್‌‌ನಿಂದಾಗಿ (DSTD) 2001ರಲ್ಲಿ ಅಂದಾಜು 4,600 ಸ್ತ್ರೀಯರು USನಲ್ಲಿ ಮರಣಿಸಿದರೆಂದುದೆ ತಿಳಿದುಬಂದಿದೆ ಮತ್ತು SEER 2002ರಲ್ಲಿ ಅಂದಾಜಿಸಿದಂತೆ USನಲ್ಲಿ ಈ ಪ್ರಕರಣಗಳು 13,000ದಷ್ಟಿದ್ದವು. ಹಾಗಾಗಿ ಈ ಘಟನೆಗಳಿಂದಾದ ಸಾವಿನ ಪ್ರಮಾಣವು 35.4%ರಷ್ಟಾಯಿತು.

ಕ್ಯಾನ್ಸರ್‌ನ ಆರಂಭಿಕ ಬದಲಾಣೆಗಳನ್ನು ಹಾಗೂ ಗರ್ಭಕಂಠದ ಕ್ಯಾನ್ಸರ್‌ನ ಪ್ರಥಮ ಹಂತಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡುವುದೇ ನಿಯಮಿತವಾದ ಸ್ಕ್ರೀನಿಂಗ್‌ ನ ಉದ್ದೇಶ.ಅಂಕಿಅಂಶಗಳ ಪ್ರಕಾರ ಗರ್ಭಕಂಠದ ಸ್ಕ್ರೀನಿಂಗ್‌ ಬಳಕೆ UKಯಲ್ಲಿ ಗರ್ಭಕಂಠದ ಕ್ಯಾನ್ಸರನ್ನು ತಡೆಯಲು ಸಹಾಯಕವಾಗಿದ್ದು, ಪ್ರತಿ ವರ್ಷ 5,000 ಜೀವಗಳನ್ನು ಉಳಿಸುತ್ತಿದೆ.[೫೯] UKಯಲ್ಲಿ ಪ್ರತಿ ವರ್ಷ 1,000 ಸ್ತ್ರೀಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಮರಣ ಹೊಂದುತ್ತಿದ್ದಾರೆ.

ನಿಯಮಿತವಾಗಿ ಎರಡು ವರ್ಷಗಳಿಗೊಮ್ಮೆ ಮಾಡಿಸುವ ಪ್ಯಾಪ್‌ ತಪಾಸಣೆಯಿಂದಾಗಿ ಆಸ್ಟ್ರೇಲಿಯದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಪ್ರಮಾಣವು 90%ನಷ್ಟು ತಗ್ಗಿದೆ, ಮತ್ತು ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ಈ ರೋಗದಿಂದ ಸಾವನ್ನಪುತ್ತಿದ್ದ 1,200 ಸ್ತ್ರೀಯರನ್ನು ಕಾಪಾಡಲು ಸಹಾಯಕವಾಗಿದೆ.[೬೦]

ಸಾಂಕ್ರಾಮಿಕ ರೋಗಶಾಸ್ತ್ರ

ಬದಲಾಯಿಸಿ

ವಿಶ್ವದಾದ್ಯಂತ, ಗರ್ಭಕಂಠದ ಕ್ಯಾನ್ಸರ್‌ ಸ್ತ್ರೀಯರಲ್ಲಿ ಕಂಡುಬರುವ ಐದನೆಯ ಮಾರಣಾಂತಿಕ ಕ್ಯಾನ್ಸರ್‌ ಆಗಿದೆ.[೬೧] ಪ್ರತಿ ವರ್ಷ 100,000ದಲ್ಲಿ 16 ಸ್ತ್ರೀಯರಿಗೆ ತಗುಲುವ ಇದು ವರ್ಷಂಪ್ರತಿ 100,000 ದಲ್ಲಿ 9 ಸ್ತ್ರೀಯರನ್ನು ಬಲಿ ತೆಗೆದುಕೊಳ್ಳುತ್ತದೆ.[೬೨]

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಸ್ತ್ರೀಯರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ 8ನೇ ಕ್ಯಾನ್ಸರ್‌ ಇದಾಗಿದೆ.1998ರಲ್ಲಿ, USನ 12,800ಕ್ಕೂ ಹೆಚ್ಚು ಸ್ತ್ರೀಯರು ರೋಗ ತಪಾಸಣೆಗೊಳಗಾದರು ಹಾಗೂ 4,800 ಸ್ತ್ರೀಯರು ಮರಣವನ್ನಪ್ಪಿದರು.[] ಸ್ತ್ರೀ ಸಂಬಂಧಿ ಕ್ಯಾನ್ಸರ್‌ಗಳಲ್ಲಿ ಇದು ಎಂಡೊಮೆಟ್ರಿಯಲ್‌ ಕ್ಯಾನ್ಸರ್‌ ಹಾಗೂ ಅಂಡಾಶಯ ಕ್ಯಾನ್ಸರ್‌‌ನ ಹಿಂದಿನ ಸ್ಥಾನವನ್ನು ಪಡೆದಿದೆ. ಪ್ರಪಂಚದ ಉಳಿದ ಭಾಗದಲ್ಲಿ ಸಂಭವಿಸುತ್ತಿರುವ ಕ್ಯಾನ್ಸರ್ ಪ್ರಕರಣ ಮತ್ತು ಸಾವಿಗೆ ಹೋಲಿಸಿದರೆ USನಲ್ಲಿ ಅರ್ಧದಷ್ಟು ಮಾತ್ರ ಸಾವು ನೋವು ಆಗುತ್ತಿದೆ. ಇದರ ಯಶಸ್ಸಿಗೆ ಪ್ಯಾಪ್ ಸ್ಮೀಯರ್‌ ಆಂಶಿಕವಾಗಿ ಕಾರಣವಾಗಿದೆ.[] ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ಹೊಸ ಗರ್ಭಕಂಠದ ಕ್ಯಾನ್ಸರ್‌ ಪ್ರಕರಣದ ಘಟನೆಗಳು 2004ರಲ್ಲಿ ಪ್ರತಿ 100,000ಕ್ಕೆ 7 ಸ್ತ್ರೀಯರಲ್ಲಿ ಕಂಡುಬಂದಿತ್ತು.[೬೩]

ಉತ್ತರ ಯುರೊಪ್‌‌ನಂತಯೇ ಯುನೈಟೆಡ್ ಕಿಂಗ್‌ಡಂನಲ್ಲಿ ಕೂಡ, ರೋಗದ ಸಂಭವನೀಯತೆ ವಾರ್ಷಿಕ 9.1/100,000ನಷ್ಟು ಇದೆ (2005), ಮತ್ತು ಸಾವಿನ ಸಂಖ್ಯೆಯು ವಾರ್ಷಿಕ 3.1/100,000ನಷ್ಟಿದೆ (2006) ( UKಗಾಗಿ Cancer Research UK Cervical ಕ್ಯಾನ್ಸರ್ ಸಿದ್ಧಪಡಿಸಿದ ಅಂಕಿಅಂಶಗಳು)[೬೪]. ತೀವ್ರ ಅಪಾಯಕ್ಕೀಡಾಗುವ ವಯಸ್ಸಿನವರಿಗೆ (25–49 ವರ್ಷ )ಪ್ರತಿ 3 ವರ್ಷಕ್ಕೊಮ್ಮೆ,ಹಾಗೂ ಪ್ರತಿ ಐದು ವರ್ಷಗಳಿಗೊಮ್ಮೆ 50–64 ವರ್ಷದವರಿಗೆ ಪ್ರತಿ ಐದು ವರ್ಷಕ್ಕೊಮ್ಮೆ NHS ನಡೆಸುವ 1988-1997ರಿಂದ ಸ್ಕ್ರೀನಿಂಗ್‌ ಕಾರ್ಯಕ್ರಮವು ಯಶಸ್ವಿಯಾಗಿದ್ದು ರೋಗವು 42%ನಷ್ಟು ಕಡಿಮೆಯಾಗಿದೆ.

ಕೆನಡಾದಲ್ಲಿ ಅಂದಾಜು 1,300 ಸ್ತ್ರೀಯರಿಗೆ ಗರ್ಭಕಂಠದ ಕ್ಯಾನ್ಸರ್‌‌ 2008ರಲ್ಲಿ ಪತ್ತೆಯಾಗಬಹುದು ಮತ್ತು ಅವರಲ್ಲಿ 380 ಸ್ತ್ರೀಯರು ಸಾಯುವ ಸಾಧ್ಯತೆಗಳಿವೆ.[೬೫]

ಆಸ್ಟ್ರೇಲಿಯದಲ್ಲಿ 734 ಗರ್ಭಕಂಠದ ಕ್ಯಾನ್ಸರ್‌ (2005) ಪ್ರಕರಣಗಳಿದ್ದವು.1991ರಲ್ಲಿ (1991-2005) ಏರ್ಪಡಿಸಲಾದ ಕ್ರಮಬದ್ಧ ಸ್ಕ್ರೀನಿಂಗ್‌ನಿಂದಾಗಿ ಗರ್ಭಕಂಠದ ಕ್ಯಾನ್ಸರ್‌ ರೋಗನಿರ್ಣಯ ಮಾಡಿಸುತ್ತಿದ್ದವರ ಸಂಖ್ಯೆಯು ಪ್ರತಿ ವರ್ಷ 4.5%ನಷ್ಟು ಇಳಿಕೆಯಾಗುತ್ತಿದೆ.[೬೬]. ವಿಶ್ವದಾದ್ಯಂತ 473,000 ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳಿವೆ, ಹಾಗೂ ಇದರಿಂದಾಗಿ ವಾರ್ಷಿಕ 253,500 ಸಾವುಗಳು ಸಂಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ.[೬೭]

ಇತಿಹಾಸ

ಬದಲಾಯಿಸಿ
  • 400 BCE - ಹಿಪ್ಪೊಕ್ರಾಟ್ಸ್‌: ಗರ್ಭಕಂಠದ ಕ್ಯಾನ್ಸರ್‌ ಅನ್ನು ಗುಣಪಡಿಸಲು ಸಾಧ್ಯವಿಲ್ಲ
  • 1925 - ಹನ್ಸ್‌ ಹಿನ್ಸೆಲ್‌ಮನ್‌: ಕಾಲ್ಪಸ್ಕೋಪ್ ಆವಿಷ್ಕಾರ
  • 1928 - ಪಪನಿಕೊಲೊವ್‌: ಪ್ಯಾಪ್‌ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರು
  • 1941 - ಪಪನಿಕೊಲೊವ್‌ ಮತ್ತು ಟ್ರೌಟ್: ಪ್ಯಾಪ್‌ ಸ್ಕ್ರೀನಿಂಗ್‌
  • 1946 - ಏಯರ್‌: ಗರ್ಭಕಂಠದ ಮೇಲ್ಭಾಗ ಹೆರೆಯಲು ಚಾಕುವನ್ನು ಬಳಸಿದರು.
  • 1976 - ಜರ್ ಹುಸೆನ್ ಮತ್ತು ಗಿಸಮ್: ಗರ್ಭಕಂಠದ ಕ್ಯಾನ್ಸರ್‌ ಮತ್ತು ನರಹುಲಿಗಳಲ್ಲಿ HPV DNAಗಳನ್ನು ಕಂಡುಹಿಡಿದರು.
  • 1988 - ಬೆಥೆಸ್ಡಾ ವ್ಯವಸ್ಥೆಯನ್ನು ಪ್ಯಾಪ್‌ಗಳ ಫಲಶ್ರತಿ ಕಂಡುಹಿಡಿಯಲು ಅಭಿವೃದ್ಧಿ ಪಡಿಸಲಾಯಿತು.

20ನೇ ಶತಮಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೋಗ ತಜ್ಞರು ಕೆಳಗಿನ ಅಂಶಗಳನ್ನು ಪತ್ತೆ ಮಾಡಿದ್ದಾರೆ:

  1. ಲೈಂಗಿಕ ಕಾರ್ಯಕರ್ತೆಯರಲ್ಲಿ ಸಾಮಾನ್ಯವಾಗಿ ಗರ್ಭಕಂಠದ ಕ್ಯಾನ್ಸರ್‌ ಕಂಡುಬರುತ್ತದೆ.
  2. ಶಾಲಾ ಪ್ರವೇಶಕ್ಕೂ ಮೊದಲೇ ಲೈಂಗಿಕವಾಗಿ ಕ್ರಿಯಾಶೀಲರಾದವರನ್ನು ಹೊರತು ಪಡಿಸಿದರೆ ನನ್‌ಗಳಲ್ಲಿ(nuns) ಇದು ಅಪರೂಪ (1841ರಲ್ಲಿ ರಿಗೊನಿ).(1841ರಲ್ಲಿ ರಿಗೊನಿ)
  3. ಇದು ಯಾವುದೇ ವ್ಯಕ್ತಿಯ ಮೊದಲನೆಯ ಹೆಂಡತಿಯು ಗರ್ಭಕಂಠದ ಕ್ಯಾನ್ಸರ್‌‌ನಿಂದ ಬಳಲಿ ಸತ್ತರೆ ವ್ಯಕ್ತಿಯ ಎರಡನೇ ಹೆಂಡತಿಯರಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತದೆ. =ಹೀಗಿರಲಿ
  4. ಜ್ಯೂಯಿಷ್ ಸ್ತ್ರೀಯರಲ್ಲಿ ಇದುತೋರಿಬರುವುದು ಅಪರೂಪ.[೬೮]
  5. 1935ರಲ್ಲಿ, ಸೆವೆರ್ಟನ್ ಮತ್ತು ಬೆರ್ರಿ ಅವರು RPV Rabbit Papillomavirus ಮತ್ತು ಮೊಲದ ಚರ್ಮ ಕ್ಯಾನ್ಸರ್‌ ನಡುವಿನ ಸಂಬಂಧವನ್ನು ಪತ್ತೆ ಮಾಡಿದರು. (HPV ಒಂದು ನಿರ್ದಿಷ್ಟ ತಳಿ .ಅದರಿಂದಾಗಿಯೇ ಇವುಗಳು ಮೊಲಗಳಿಗೆ ವರ್ಗಾವಣೆಗೊಳ್ಳುವುದಿಲ್ಲ).

ಹೀಗಾಗಿ ಲೈಂಗಿಕ ಪ್ರಸರಣ ಮಾಧ್ಯಮದಿಂದ ಗರ್ಭಕಂಠದ ಕ್ಯಾನ್ಸರ್‌‌ ತಗಲುವುದೆಂಬು ವಿಚಾರ ಅನುಮಾನಕ್ಕೆ ಈಡಾಯಿತು.1950ರ ಮತ್ತು 1960ರ ಸಂಶೋಧನೆಗಳು ಸ್ಮೆಗ್ಮವೇ ಕಾರಣವೆಂದು ಪ್ರತಿಪಾದಿಸಿದವು (e.g. Heins et al. 1958)1958)[೬೯]

ಆದರೆ 1970ರ ನಂತರವಷ್ಟೇ ಹ್ಯೂಮನ್‌ ಪ್ಯಾಪಿಲೋಮವೈರಸ್‌‌ (HPV)ಅನ್ನು ಕಂಡುಹಿಡಿಯಲಾಯಿತು. 1949ರಲ್ಲಿ ಎಲೆಕ್ಟ್ರಾನ್ ಮೈಕ್ರೊಸ್ಕೊಪಿಯಿಂದ ವಿವಣೆಯನ್ನು ನೀಡಲಾಯಿತು ಮತ್ತು 1963ರಲ್ಲಿ HPV-DNAಯನ್ನು ಗುರುತಿಸಲಾಯಿತು. ವಾಸ್ತವವಾಗಿ ಎಲ್ಲ ಗರ್ಭಕಂಠದ ಕ್ಯಾನ್ಸರ್‌ಗಳಿಗೆ HPVಯೇ ಕಾರಣವೆಂದು ಆಗಿನಿಂದಲೇ ತೋರಿಸಲಾಗಿದೆ.[] HPVಯ 16, 18, 31, 45 ಮೊದಲಾದವು ನಿರ್ದಿಷ್ಟ ವೈರಸ್‌ ಉಪವಿಧಗಳು.

ಆಕರಗಳು ಮತ್ತು ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ Kumar, Vinay; Abbas, Abul K.; Fausto, Nelson; & Mitchell, Richard N. (2007). Robbins Basic Pathology ((8th ed.) ed.). Saunders Elsevier. pp. 718–721. ISBN 978-1-4160-2973-1.{{cite book}}: CS1 maint: multiple names: authors list (link)
  2. Walboomers JM, Jacobs MV, Manos MM; et al. (1999). "Human papillomavirus is a necessary cause of invasive cervical cancer worldwide". J. Pathol. 189 (1): 12–9. doi:10.1002/(SICI)1096-9896(199909)189:1<12::AID-PATH431>3.0.CO;2-F. PMID 10451482. {{cite journal}}: Explicit use of et al. in: |author= (help)CS1 maint: multiple names: authors list (link)
  3. ೩.೦ ೩.೧ "FDA Licenses New Vaccine for Prevention of Cervical Cancer". U.S. Food and Drug Administration. 2006-06-08. Archived from the original on 2009-05-12. Retrieved 2007-12-02. {{cite news}}: Cite has empty unknown parameter: |coauthors= (help)
  4. ೪.೦ ೪.೧ Lowy DR, Schiller JT (2006). "Prophylactic human papillomavirus vaccines". J. Clin. Invest. 116 (5): 1167–73. doi:10.1172/JCI28607. PMID 16670757. Retrieved 2007-12-01.
  5. "Human Papillomavirus (HPV) Vaccines: Q & A - National Cancer Institute". Retrieved 2008-07-18.
  6. ೬.೦ ೬.೧ "Cancer Research UK website". Archived from the original on 2009-01-16. Retrieved 2009-01-03.
  7. ೭.೦ ೭.೧ ೭.೨ ೭.೩ DeMay, M (2007). Practical principles of cytopathology. Revised edition. ISBN 978-0-89189-549-7.
  8. ೮.೦ ೮.೧ ೮.೨ ೮.೩ Canavan TP, Doshi NR (2000). "Cervical cancer". Am Fam Physician. 61 (5): 1369–76. PMID 10735343. Archived from the original on 2005-02-06. Retrieved 2007-12-01.
  9. Nanda, Rita (2006-06-09). medlineplus/ency/article/000893.htm "Cervical cancer". MedlinePlus Medical Encyclopedia. National Institutes of Health. Retrieved 2007-12-02. {{cite web}}: Check |url= value (help)
  10. ೧೦.೦ ೧೦.೧ cancer.org/docroot/CRI/content/CRI_2_2_2X_What_causes_cancer_of_the_cervix_Can_it_be_prevented_8.asp?sitearea= "What Causes Cancer of the Cervix?". American Cancer Society. 2006-11-30. Retrieved 2007-12-02. {{cite web}}: Check |url= value (help)
  11. Marrazzo JM, Koutsky LA, Kiviat NB, Kuypers JM, Stine K (2001). "Papanicolaou test screening and prevalence of genital human papillomavirus among women who have sex with women". Am J Public Health. 91 (6): 947–52. PMID 11392939. Retrieved 2007-12-30.{{cite journal}}: CS1 maint: multiple names: authors list (link)
  12. hpv typedetect. html "HPV Type-Detect". Medical Diagnostic Laboratories. 2007-10-30. Retrieved 2007-12-02. {{cite web}}: Check |url= value (help)
  13. Gottlieb, Nicole (2002-04-24). "A Primer on HPV". Benchmarks. National Cancer Institute. Archived from the original on 2007-10-26. Retrieved 2007-12-02.
  14. Muñoz N, Bosch FX, de Sanjosé S, Herrero R, Castellsagué X, Shah KV, Snijders PJ, Meijer CJ (2003). [http:// content .nejm.org/cgi/pmidlookup?view=short&pmid=12571259&promo=ONFLNS19 "Epidemiologic classification of human papillomavirus types associated with cervical cancer"]. N. Engl. J. Med. 348 (6): 518–27. doi:10.1056/NEJMoa021641. PMID 12571259. Retrieved 2007-12-01. {{cite journal}}: Check |url= value (help)CS1 maint: multiple names: authors list (link)
  15. ೧೫.೦ ೧೫.೧ Walboomers JM, Jacobs MV, Manos MM, Bosch FX, Kummer JA, Shah KV, Snijders PJ, Peto J, Meijer CJ, Muñoz N (1999). "Human papillomavi rus is a necessary cause of invasive cervical cancer worldwide". J. Pathol. 189 (1): 12–9. doi:10.1002/(SICI) 1096-9896(199909)189:1<12::AID-PATH431>3.0.CO;2-F. PMID 10451482. {{cite journal}}: |access-date= requires |url= (help); Check |doi= value (help)CS1 maint: multiple names: authors list (link)
  16. Snijders PJ, Steenbergen RD, Heideman DA, Meijer CJ (2006). "HPV-mediated cervical carcinogenesis: concepts and clinical implications". J. Pathol. 208 (2): 152–64. doi:10.1002/path.1866. PMID 16362994. {{cite journal}}: |access-date= requires |url= (help)CS1 maint: multiple names: authors list (link)
  17. Nader, Carol (2005-02-16). "Expert says circumcision makes sex safer". The Age. Fairfax Media. Retrieved 2007-12-02. {{cite news}}: Cite has empty unknown parameter: |coauthors= (help)
  18. Garcia, Agustin (2006-07-06). "Cervical Cancer". eMedicine. WebMD. Retrieved 2007-12-02. {{cite web}}: Unknown parameter |coauthors= ignored (|author= suggested) (help)
  19. Dolinsky, Christopher (2006-07-17). "Cervical Cancer: The Basics". OncoLink. Abramson Cancer Center of the University of Pennsylvania. Archived from the original on 2008-01-18. Retrieved 2007-12-02. {{cite news}}: Cite has empty unknown parameter: |coauthors= (help)
  20. Erstad, Shannon (2007-01-12). "Cone biopsy (conization) for abnormal cervical cell changes". WebMD. Retrieved 2007-12-02. {{cite news}}: Cite has empty unknown parameter: |coauthors= (help)
  21. Jones WB, Mercer GO, Lewis JL, Rubin SC, Hoskins WJ (1993). [http:/ /linkinghub.elsevier.com/retrieve/pii/S0090-8258(83)71241-2 "Early invasive carcinoma of the cervix"]. Gynecol. Oncol. 51 (1): 26–32. doi:10.1006/gyno.1993.1241. PMID 8244170. Retrieved 2007-12-01. {{cite journal}}: Check |url= value (help)CS1 maint: multiple names: authors list (link)
  22. Dolson, Laura (2001). "Trachelectomy". Archived from the original on 2007-09-27. Retrieved 2007-12-02.
  23. Cibula D, Ungár L, Svárovský J, Zivný J, Freitag P (2005). "[Abdominal radical trachelectomy--technique and experience]". Ceska Gynekol (in Czech). 70 (2): 117–22. PMID 15918265. {{cite journal}}: |access-date= requires |url= (help)CS1 maint: multiple names: authors list (link) CS1 maint: unrecognized language (link)
  24. Plante M, Renaud MC, Hoskins IA, Roy M (2005). "Vaginal radical trachelectomy: a valuable fertility-preserving option in the management of early-stage cervical cancer. A series of 50 pregnancies and review of the literature". Gynecol. Oncol. 98 (1): 3–10. doi:10.1016/j.ygyno.2005.04.014. PMID 15936061. Retrieved 2007-12-01.{{cite journal}}: CS1 maint: multiple names: authors list (link)
  25. Roy M, Plante M, Renaud MC, Têtu B (1996). "Vaginal radical hysterectomy versus abdominal radical hysterectomy in the treatment of early-stage cervical cancer". Gynecol. Oncol. 62 (3): 336–9. doi:10.1006/gyno.1996.0245. PMID 8812529. Retrieved 2007-12-01.{{cite journal}}: CS1 maint: multiple names: authors list (link)
  26. Dargent D, Martin X, Sacchetoni A, Mathevet P (2000). "Laparoscopic vaginal radical trachelectomy: a treatment to preserve the fertility of cervical carcinoma patients". Cancer. 88 (8): 1877–82. doi:10.1002/(SICI)1097-0142(20000415)88:8<1877::AID-CNCR17>3.0.CO;2-W. PMID 10760765. {{cite journal}}: |access-date= requires |url= (help)CS1 maint: multiple names: authors list (link)
  27. Schlaerth JB, Spirtos NM, Schlaerth AC (2003). "Radical trachelectomy and pelvic lymphadenectomy with uterine preservation in the treatment of cervical cancer". Am. J. Obstet. Gynecol. 188 (1): 29–34. doi:10.1067/mob.2003.124. PMID 12548192. {{cite journal}}: |access-date= requires |url= (help)CS1 maint: multiple names: authors list (link)
  28. ಉಲ್ಲೇಖ ದೋಷ: Invalid <ref> tag; no text was provided for refs named pmid16493253
  29. "FDA Approves First Drug Treatment for Late-Stage Cervical Cancer". U.S. Food and Drug Administration. 2006-06-15. Archived from the original on 2007-10-10. Retrieved 2007-12-02. {{cite news}}: Cite has empty unknown parameter: |coauthors= (help)
  30. Tiro JA, Meissner HI, Kobrin S, Chollette V (2007). "What do women in the U.S. know about human papillomavirus and cervical cancer?". Cancer Epidemiol. Biomarkers Prev. 16 (2): 288–94. doi:10.1158/1055-9965.EPI-06-0756. PMID 17267388. Retrieved 2007-12-01.{{cite journal}}: CS1 maint: multiple names: authors list (link)
  31. [http:/ /www. cancer.org/docroot/CRI/content/CRI_2_4_1X_What_are_the_key_statistics_for_cervical_cancer_8.asp?sitearea= "What Are the Key Statistics About Cervical Cancer?"]. American Cancer Society. 2008-03-26. Retrieved 2008-08-19. {{cite web}}: Check |url= value (help)
  32. Saslow D, Runowicz CD, Solomon D; et al. (2002). "American Cancer Society guideline for the early detection of cervical neoplasia and cancer". CA: a cancer journal for clinicians. 52 (6): 342–62. PMID 12469763. {{cite journal}}: Explicit use of et al. in: |author= (help)CS1 maint: multiple names: authors list (link)
  33. Payne N, Chilcott J, McGoogan E (2000). "Liquid-based cytology in cervical screening: a rapid and systematic review". Health technology assessment (Winchester, England). 4 (18): 1–73. PMID 10932023.{{cite journal}}: CS1 maint: multiple names: authors list (link)
  34. http://www. cancerscreening. nhs.uk/ cervical/lbc.html
  35. Willis BH, Barton P, Pearmain P, Bryan S, Hyde C (2005). "Cervical screening programmes: can automation help? Evidence from systematic reviews, an economic analysis and a simulation modelling exercise applied to the UK". Health technology assessment (Winchester, England). 9 (13): 1–207, iii. PMID 15774236. Archived from the original on 2011-06-11. Retrieved 2009-11-02. {{cite journal}}: Unknown parameter |month= ignored (help)CS1 maint: multiple names: authors list (link)
  36. Naucler P, Ryd W, Törnberg S; et al. (2007). "Human papillomavirus and Papanicolaou tests to screen for cervical cancer". N. Engl. J. Med. 357 (16): 1589–97. doi:10.1056/NEJMoa073204. PMID 17942872. {{cite journal}}: Explicit use of et al. in: |author= (help)CS1 maint: multiple names: authors list (link)
  37. http://www.thelancet.com/journals/lancet/article/PIIS0140-6736(09)61248-4/fulltext
  38. "EU approves cervical cancer jab". BBC. 2006-09-22. Retrieved 2007-12-02. {{cite news}}: Cite has empty unknown parameter: |coauthors= (help)
  39. "GSK's HPV Vaccine 100% Effective For Four Years, Data Show". Medical News Today. MediLexicon International Ltd. 2006-02-27. Archived from the original on 2010-01-08. Retrieved 2007-12-02. {{cite news}}: Cite has empty unknown parameter: |coauthors= (help)
  40. "Cancer jab 'stops 75% of deaths'". BBC. 2006-09-04. Retrieved 2007-12-02. {{cite news}}: Cite has empty unknown parameter: |coauthors= (help)
  41. McNeil C (2006). "Who invented the VLP cervical cancer vaccines?". J. Natl. Cancer Inst. 98 (7): 433. doi:10.1093/jnci/djj144. PMID 16595773. Retrieved 2007-12-01.
  42. Cornelis J.A. Hogewoning, Maaike C.G. Bleeker; et al. (2003). "Condom use Promotes the Regression of Cervical Intraepithelial Neoplasia and Clearance of HPV: Randomized Clinical Trial". International Journal of Cancer. 107: 811–816. doi:10.1002/ijc.11474. PMID 14566832. {{cite journal}}: Explicit use of et al. in: |author= (help)
  43. "Semen 'may fuel cervical cancer'". BBC. 2006-08-31. Retrieved 2007-12-02. {{cite news}}: Cite has empty unknown parameter: |coauthors= (help)
  44. "Semen can worsen cervical cancer". Medical Research Council (UK). Archived from the original on 2008-08-04. Retrieved 2007-12-02. {{cite news}}: Cite has empty unknown parameter: |coauthors= (help)
  45. ೪೫.೦ ೪೫.೧ Sedjo RL, Roe DJ, Abrahamsen M; et al. (2002). "Vitamin A, carotenoids, and risk of persistent oncogenic human papillomavirus infection". Cancer Epidemiol. Biomarkers Prev. 11 (9): 876–84. PMID 12223432. {{cite journal}}: Explicit use of et al. in: |author= (help)CS1 maint: multiple names: authors list (link)
  46. ೪೬.೦ ೪೬.೧ ೪೬.೨ Giuliano AR, Siegel EM, Roe DJ; et al. (2003). "Dietary intake and risk of persistent human papillomavirus (HPV) infection: the Ludwig-McGill HPV Natural History Study". J. Infect. Dis. 188 (10): 1508–16. doi:10 .1086/ 379197. PMID 14624376. {{cite journal}}: Check |doi= value (help); Explicit use of et al. in: |author= (help)CS1 maint: multiple names: authors list (link)
  47. ೪೭.೦ ೪೭.೧ Yeo AS, Schiff MA, Montoya G, Masuk M, van Asselt-King L, Becker TM (2000). "Serum micronutrients and cervical dysplasia in Southwestern American Indian women". Nutrition and cancer. 38 (2): 141–50. doi:10.1207/S15327914NC382_1. PMID 11525590.{{cite journal}}: CS1 maint: multiple names: authors list (link)
  48. Michaëlsson K, Lithell H, Vessby B, Melhus H. (2003). "Serum Retinol Levels and the Risk of Fracture". NEJM. 348 (4): 287–294. doi:10.1056/NEJMoa021171. PMID 12540641.{{cite journal}}: CS1 maint: multiple names: authors list (link)
  49. Kwaśniewska A, Tukendorf A, Semczuk M (1997). "Content of alpha-tocopherol in blood serum of human Papillomavirus-infected women with cervical dysplasias". Nutrition and cancer. 28 (3): 248–51. PMID 9343832.{{cite journal}}: CS1 maint: multiple names: authors list (link)
  50. Piyathilake CJ, Henao OL, Macaluso M; et al. (2004). "Folate is associated with the natural history of high-risk human papillomaviruses". Cancer Res. 64 (23): 8788–93. doi:10.1158/0008-5472 .CAN-04-2402. PMID 15574793. {{cite journal}}: Check |doi= value (help); Explicit use of et al. in: |author= (help)CS1 maint: multiple names: authors list (link)
  51. Kwaśniewska A, Tukendorf A, Goździcka-Józefiak A, Semczuk-Sikora A, Korobowicz E (2002). "Content of folic acid and free homocysteine in blood serum of human papillomavirus-infected women with cervical dysplasia". Eur. J. Gynaecol. Oncol. 23 (4): 311–6. PMID 12214730.{{cite journal}}: CS1 maint: multiple names: authors list (link)
  52. ಉಲ್ಲೇಖ ದೋಷ: Invalid <ref> tag; no text was provided for refs named Goodman_2007
  53. Sedjo RL, Papenfuss MR, Craft NE, Giuliano AR (2003). "Effect of plasma micronutrients on clearance of oncogenic human papillomavirus (HPV) infection (United States)". Cancer Causes Control. 14 (4): 319–26. doi:10.1023/A:1023981505268. PMID 12846362.{{cite journal}}: CS1 maint: multiple names: authors list (link)
  54. Giuliano AR, Papenfuss M, Nour M, Canfield LM, Schneider A, Hatch K (1997). "Antioxidant nutrients: associations with persistent human papillomavirus infection". Cancer Epidemiol. Biomarkers Prev. 6 (11): 917–23. PMID 9367065.{{cite journal}}: CS1 maint: multiple names: authors list (link)
  55. Chen D, Auborn K (1999). "Fish oil constituent docosahexa-enoic acid selectively inhibits growth of human papillomavirus immortalized keratinocytes". Carcinogenesis. 20 (2): 249–54. doi:10.1093/carcin/20.2.249. PMID 10069461.
  56. "Cervical Cancer". Cervical Cancer: Cancers of the Female Reproductive System: Merck Manual Home Edition. Merck Manual Home Edition. Retrieved 2007-03-24.
  57. Committee on Practice Bulletins-Gynecology (2002). "ACOG practice bulletin. Diagnosis and treatment of cervical carcinomas, number 35, May 2002". Obstetrics and gynecology. 99 (5 Pt 1): 855–67. PMID 11978302.
  58. "Cervical Cancer". Cervical Cancer: Pathology, Symptoms and Signs, Diagnosis, Prognosis and Treatment. Armenian Health Network, Health.am.
  59. "Cervical cancer statistics and prognosis". Cancer Research UK. Retrieved 2007-03-24.
  60. http://www.papscreen.org.au/
  61. World Health Organization (2006). "Fact sheet No. 297: Cancer". Retrieved 2007-12-01. {{cite web}}: Unknown parameter |month= ignored (help)
  62. "GLOBOCAN 2002 database: summary table by cancer". Archived from the original on 2008-06-16. Retrieved 2008-10-26.
  63. delay2004& db=1&rpt =TAB&sel= ^12^0^2^0 ^&dec=4&title=SEER%20Age-Adjusted%20Incidence%20Rate%20Comparison~DelayAdjusted%20and%20Observed%20Rates ~For%20Cervix%20Uteri%20 cancer,%20All%20Races, %20Females,% 20All %20Ages~SEER%209%20Registries%20for%201975-2004~Age-Adjusted%20to%20the%202000%20US%20Std% 20Population&template=faststats&amp ;x=Year%20of%20diagnosis ^0,1,2,3,4,5,6,7,8, 9,10, 11, 12, 13,14,15,16,17,18,19,20,21,22,23,24,25,26,27,28,29&y=Statistic%20type^0,2 SEER cancer statistics
  64. "ಆರ್ಕೈವ್ ನಕಲು". Archived from the original on 2009-03-26. Retrieved 2009-11-02.
  65. Noni MacDonald, Matthew B. Stanbrook, and Paul C. Hébert (September 9, 2008). "Human papillomavirus vaccine risk and reality". CMAJ. 179 (6). doi:10.1503/cmaj.081238. Retrieved 2008-11-17.{{cite journal}}: CS1 maint: multiple names: authors list (link)
  66. http://www.papscreen.org.au/browse.asp?ContainerID=c15
  67. "NCCC National Cervical Cancer Coalition". Retrieved 2008-07-01.
  68. Menczer J (2003). "The low incidence of cervical cancer in Jewish women: has the puzzle finally been solved?" (PDF). Isr. Med. Assoc. J. 5 (2): 120–3. PMID 12674663. Archived from the original (PDF) on 2012-08-21. Retrieved 2007-12-01.
  69. Heins Jr, HC (1958-10-01). "The possible role of smegma in carcinoma of the cervix". American Journal of Obstetrics & Gynecology. 76 (4): 726–33. PMID 13583012. {{cite journal}}: |access-date= requires |url= (help); Unknown parameter |coauthors= ignored (|author= suggested) (help)


ಹೊರಗಿನ ಕೊಂಡಿಗಳು

ಬದಲಾಯಿಸಿ