ಅಂಕುರಿಸುವಿಕೆ
- ಅಗೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸಸಿ ಲೇಖನಕ್ಕಾಗಿ ಇಲ್ಲಿ ನೋಡಿ.
ಅಂಕುರಿಸುವಿಕೆಯು ಹಸಿಯಾಗಿ ಅಥವಾ ಬೇಯಿಸಿ ತಿನ್ನಲು ಬೀಜಗಳನ್ನು ಚಿಗುರಿಸುವ ಪದ್ಧತಿ. ಮೊಳಕೆಗಳನ್ನು ಮನೆಯಲ್ಲಿ ಚಿಗುರಿಸಬಹುದು ಅಥವಾ ಕೈಗಾರಿಕವಾಗಿ ಉತ್ಪಾದಿಸಬಹುದು. ಅವು ಕಚ್ಚಾ ಆಹಾರದ ಪ್ರಮುಖ ಘಟಕಾಂಶವಾಗಿವೆ ಮತ್ತು ಪೂರ್ವ ಏಷ್ಯಾದ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿವೆ.
ಅಡುಗೆಯಂತೆ, ಅಂಕುರಿಸುವಿಕೆಯು ಕಚ್ಚಾ ದ್ವಿದಳ ಧಾನ್ಯಗಳಲ್ಲಿ ಪೌಷ್ಟಿಕವಲ್ಲದ ಸಂಯುಕ್ತಗಳನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಕಚ್ಚಾ ಲೆಂಟಿಲ್ಗಳು ಪೌಷ್ಟಿಕವಲ್ಲದ ಲೆಕ್ಟಿನ್ ಪ್ರೋಟೀನ್ಗಳನ್ನು ಹೊಂದಿದ್ದು, ಇವನ್ನು ಅಂಕುರಿಸುವಿಕೆ ಅಥವಾ ಬೇಯಿಸಿ ಕಡಿಮೆ ಮಾಡಬಹುದು. ಮಾಲ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ಅಂಕುರಿಸುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಜವೆಗೋಧಿಗೆ ಅನ್ವಯಿಸಲಾಗುತ್ತದೆ. ಕಚ್ಚಾ ಮೊಳಕೆಗಳನ್ನು ಸೇವಿಸುವುದರ ಒಂದು ಅನನುಕೂಲವೆಂದರೆ ಬೀಜಗಳನ್ನು ಚಿಗುರಿಸುವ ಪ್ರಕ್ರಿಯೆಯು ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೂ ಅನುಕೂಲಕರವಾಗಬಹುದು.
ಅಂಕುರಿಸುವಿಕೆಗೆ ಸೂಕ್ತವಾದ ಬೀಜಗಳು
ಬದಲಾಯಿಸಿಎಲ್ಲ ಉಳಿಯಬಲ್ಲ ಬೀಜಗಳನ್ನು ಅಂಕುರಿಸಬಹುದು, ಆದರೆ ಕೆಲವು ಮೊಳಕೆಗಳನ್ನು ಕಚ್ಚಾ ತಿನ್ನಬಾರದು. ಈ ಕೆಳಗಿನವು ಅತ್ಯಂತ ಸಾಮಾನ್ಯ ಆಹಾರ ಮೊಳಕೆಗಳು:
- ಬೇಳೆ ಕಾಳುಗಳು (ದ್ವಿದಳ ಧಾನ್ಯಗಳು; ಬಟಾಣಿ ಕುಟುಂಬ):
- ದವಸ ಧಾನ್ಯಗಳು:
- ತೋಕೆಗೋಧಿ, ಗೋಧಿ, ಮೆಕ್ಕೆ ಜೋಳ, ಅಕ್ಕಿ, ಜವೆ, ಮತ್ತು ಚಿಕ್ಕ ಗೋಧಿ
- ಹುಸಿಧಾನ್ಯಗಳು:
- ಎಣ್ಣೆಬೀಜಗಳು:
- ಎಳ್ಳು, ಸೂರ್ಯಕಾಂತಿ, ಬಾದಾಮಿ, ಹೇಜ಼ಲ್ನಟ್, ಸೆಣಬು, ನಾರಗಸೆ, ಶೇಂಗಾ.
- ಬ್ರ್ಯಾಸಿಕಾ (ಕೋಸು ಕುಟುಂಬ)
ಇತ್ಯಾದಿ.