ಕೋತ್ ದ್'ಇವಾರ್

ಪಶ್ಚಿಮ ಆಫ್ರಿಕಾದ ಒಂದು ದೇಶ
(ಐವರಿ ಕೋಸ್ಟ್ ಇಂದ ಪುನರ್ನಿರ್ದೇಶಿತ)

ಕೋತ್ ದ್'ಇವಾರ್, (ಫ್ರೆಂಚ್ ಭಾಷೆಯಲ್ಲಿ: Côte d'Ivoire), ಅಧಿಕೃತವಾಗಿ ಕೋತ್ ದ್'ಇವಾರ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದರ ಪಶ್ಚಿಮಕ್ಕೆ ಲೈಬೀರಿಯ ಮತ್ತು ಗಿನಿ, ಉತ್ತರಕ್ಕೆ ಮಾಲಿ ಮತ್ತು ಬುರ್ಕೀನ ಫಾಸೊ, ಪೂರ್ವಕ್ಕೆ ಘಾನ ಮತ್ತು ದಕ್ಷಿಣಕ್ಕೆ ಗಿನಿ ಕೊಲ್ಲಿ ಇವೆ. ೧೮೯೩ರಲ್ಲಿ ಫ್ರಾನ್ಸ್ವಸಾಹತು ಆದ ಈ ದೇಶ ಮುಂದೆ ೧೯೬೦ರಲ್ಲಿ ಸ್ವಾತಂತ್ರ್ಯ ಪಡೆಯಿತು. ೨೦೦೨ರಿಂದ ೨೦೦೭ರವರೆಗೆ ಜರುಗಿದ ಅಂತಃಕಲಹದಿಂದ ಇಲ್ಲಿನ ಆರ್ಥಿಕ ಬೆಳವಣೆಗೆ ಬಹಳ ಕುಂಠಿತವಾಗಿದೆ.

ಕೋತ್ ದ್'ಇವಾರ್ ಗಣರಾಜ್ಯ
République de Côte d'Ivoire
Flag of ಕೋತ್ ದ್'ಇವಾರ್
Flag
Motto: "ಒಗ್ಗಟ್ಟು, ಶಿಸ್ತು, ಮತ್ತು ಕಾಯಕ"
Anthem: L'Abidjanaise
Location of ಕೋತ್ ದ್'ಇವಾರ್
Capitalಯಮೌಸ್ಸುಕ್ರೊ (ಅಧಿಕೃತ)
ಅಬಿದ್ಜಾನ್ (ನಿಜವಾದ)
Largest cityಅಬಿದ್ಜಾನ್
Official languagesಫ್ರೆಂಚ್
Demonym(s)Ivorian
Governmentಗಣರಾಜ್ಯ
ಲೌರೆನ್ಟ್ ಗ್ಬಾಗ್ಬೊ[]
• ಪ್ರಧಾನ ಮಂತ್ರಿ
ಗಿಲೌಮ್ ಸೊರೊ[]
ಸ್ವಾತಂತ್ರ 
• ದಿನಾಂಕ
ಆಗಸ್ಟ್ ೭, ೧೯೬೦
• Water (%)
1.4[]
Population
• ೨೦೦೬ estimate
17,654,843a[] (57th)
• ೧೯೮೮ census
10,815,694[]
GDP (PPP)೨೦೦೬ estimate
• Total
$28.47 billion[] (98th)
• Per capita
$1,600[] (157th)
Gini (2002)44.6
medium
HDI (೨೦೦೬)Increase 0.421[]
Error: Invalid HDI value · 164th
CurrencyCFA franc (XOF)
Time zoneUTC+0 (GMT)
• Summer (DST)
UTC+0 (not observed)
Calling code225[]
Internet TLD.ci
a Estimates for this country take into account the effects of excess mortality due to AIDS; this can result in lower population than would otherwise be expected.


ಐವರಿ ಕೋಸ್ಟ್‌: ಆಫ್ರಿಕದ ಪಶ್ಚಿಮ ತೀರದಲ್ಲಿರುವ ಒಂದು ಗಣರಾಜ್ಯ. ಪಶ್ಚಿಮ ರೇಖಾಂಶ 20 30' ನಿಂದ 70 30’ರ ವರೆಗೂ ಉತ್ತರ ಅಕ್ಷಾಂಶ 50 ಯಿಂದ 100 ವರೆಗೂ ಇದು ಹಬ್ಬಿದೆ. ರಾಜ್ಯದ ವಿಸ್ತೀರ್ಣ 3,22,500 ಚ.ಕಿಮೀ.

ಮೇಲ್ಮೈ ಲಕ್ಷಣ

ಬದಲಾಯಿಸಿ

ಐವರಿ ಕೋಸ್ಟಿನ ಹೆಚ್ಚು ಭಾಗ ವಿಶಾಲವಾದ ಪ್ರಸ್ಥಭೂಮಿ. ಕಾಂಗ್ ಟೆರ್ ಪ್ರಸ್ಥಭೂಮಿಯ ಎತ್ತರ 1549 ಮೀ. ಅಲ್ಲಿಂದ ಸಮುದ್ರಾಭಿಮುಖವಾಗಿ ಇಳಿಜಾರಾಗಿರುವ ನೆಲದ ಕೊನೆಯ 64 ಕಿಮೀ. ಮೈದಾನವೆನ್ನಬಹುದು. ಇಲ್ಲಿ ಹರಿಯುವ ನದಿಗಳು ಅಮುಖ್ಯ: ಕವಾಲಿ, ಸೆಸಾಂಡ್ರ, ಬಂಡಾಮ ಮತ್ತು ಕೋಮೊ. ಇವು ದೋಣಿಸಂಚಾರಕ್ಕೆ ಯೋಗ್ಯವಾಗಿಲ್ಲ.

ವಾಯುಗುಣ

ಬದಲಾಯಿಸಿ

ಐವರಿ ಕೋಸ್ಟಿನ ವಾಯುಗುಣ ಶಾಖಶೈತ್ಯಗಳಿಂದ ಕೂಡಿದ್ದು. ಉಷ್ಣತೆ 570 ಫ್ಯಾ. (140ಸೆಂ.)ನಿಂದ 1030ಫ್ಯಾ. (390ಸೆಂ.)ವರೆಗೆ ವ್ಯತ್ಯಾಸವಾಗುತ್ತದೆ. ಡಿಸೆಂಬರಿನಿಂದ ಮೇವರೆಗೆ ಹೆಚ್ಚು ಮಳೆ (80"-120"). ತೀರಪ್ರದೇಶದಿಂದ ಉತ್ತರಕ್ಕೆ ಸಾಗಿದಂತೆ ಉಷ್ಣವಲಯ ಮರೆಯಾಗಿ ಉಪೋಷ್ಣವಲಯದ ವಾಯುಗುಣ ಕಂಡುಬರುತ್ತದೆ.

ಸಸ್ಯವರ್ಗ ಮತ್ತು ಪ್ರಾಣಿಗಳು

ಬದಲಾಯಿಸಿ

ಐವರಿ ಕೋಸ್ಟಿನ ದಕ್ಷಿಣದ ಭಾಗದಲ್ಲೂ ಕವಾಲಿ ಮತ್ತು ಕೋಮೊ ನದೀ ಕಣಿವೆಗಳಲ್ಲೂ ದಟ್ಟವಾದ ನಿತ್ಯಹಸುರಿನ ಕಾಡುಗಳುಂಟು. ಸ್ವಲ್ಪ ಉತ್ತರದಲ್ಲಿ ಎಲೆ ಉದುರುವ ಕಾಡುಗಳಿವೆ. ನರಿ, ಕತ್ತೆಕಿರುಬ, ಚಿರತೆ, ಕೋತಿ, ಆನೆ, ನೀರ್ಕುದುರೆ, ಮೊಸಳೆ, ಗೋಸುಂಬೆ, ಹಲ್ಲಿ, ಹಾವು, ಕ್ರಿಮಿಕೀಟ, ಚಿಟ್ಟೆ, ಚೇಳು, ಹಕ್ಕಿಗಳು, ರಣಹದ್ದು, ಕೊಕ್ಕರೆ, ಪಾರಿವಾಳ, ಆಮೆ, ಗಿಣಿ-ಇವು ಇಲ್ಲಿ ಧಾರಾಳ.

ಬೆಳೆ, ಕೈಗಾರಿಕೆ, ವಾಣಿಜ್ಯ

ಬದಲಾಯಿಸಿ

ಐವರಿ ಕೋಸ್ಟಿನ ಸಂಪತ್ತಿಗೆ ಅರಣ್ಯಗಳು ಬಹಳಮಟ್ಟಿಗೆ ಕಾರಣ. ದೇಶದ ನಿರ್ಯಾತದಲ್ಲಿ ಹೆಚ್ಚಿನ ಪ್ರಮಾಣ ಅರಣ್ಯ ವಸ್ತುಗಳು. ಕಾಡು ಕಡಿದು ವ್ಯವಸಾಯಕ್ಕೆ ಬಳಸಲಾಗಿರುವ ನೆಲ ಕಡಿಮೆ. ರಾಷ್ಟ್ರೀಯ ವರಮಾನದ ಅರ್ಧ ಭಾಗ ಬೇಸಾಯದಿಂದ ಬರುತ್ತದೆ. ಕಾಫಿ ಬೆಳೆಯುವ ದೇಶಗಳಲ್ಲಿ ಐವರಿ ಕೋಸ್ಟಿನದು ಮೂರನೆಯ ಸ್ಥಾನ (ಮೊದಲಿನ ಎರಡು ಬ್ರೆಜಿ಼ಲ್ ಮತ್ತು ಕೊಲಂಬಿಯ). ವಿಶ್ವದ ಒಟ್ಟಿನಲ್ಲಿ ಇದರ ಪಾಲು ಶೇ. 6 ಕೋಕೊ ಬೆಳೆಯಲ್ಲಿ ಐವರಿ ಕೋಸ್ಟ್‌ ನಾಲ್ಕನೆಯದು (ಘಾನ, ನೈಜೀರಿಯ ಮತ್ತು ಬ್ರೆಜಿ಼ಲ್ಗಳು ಮೊದಲ ಮೂರು). ವಿಶ್ವ ಬೆಳೆಯಲ್ಲಿ ಶೇ. 9 ರಷ್ಟನ್ನು ಐವರಿ ಕೋಸ್ಟ್‌ ಉತ್ಪಾದಿಸುತ್ತದೆ. ಐವರಿ ಕೋಸ್ಟಿನ ನಿರ್ಯಾತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಇವುಗಳದು. ಬಾಳೆ ಹಣ್ಣು, ತೆಂಗು, ಕೊಬ್ಬರಿ-ಇವು ರಫ್ತಾಗುತ್ತವೆ.

ಐವರಿ ಕೋಸ್ಟಿನ ಮುಖ್ಯ ಆಹಾರ ಬೆಳೆಗಳು ಗೆಣಸು, ಮುಸುಕಿನ ಜೋಳ, ಬತ್ತ, ಮರಗೆಣಸು, ಕಾಳು, ನೆಲಗಡಲೆ ಇತ್ಯಾದಿ. ಕುರಿ ಮತ್ತು ಆಕಳುಗಳನ್ನು ಉತ್ತರದಲ್ಲಿ ಹೆಚ್ಚಾಗಿ ಸಾಕುತ್ತಾರೆ. ಆದರೂ ಹೊರಗಿನಿಂದ ಮಾಂಸ ಆಮದಾಗುತ್ತದೆ. ಅಬಿಜಾನಿನ ಬಳಿ ಮೀನುಗಾರಿಕೆ ಒಂದು ಮುಖ್ಯ ಕಸಬು. ಉತ್ತರದಲ್ಲೂ ಪಶ್ಚಿಮದಲ್ಲೂ ವಜ್ರದ ಉತ್ಪಾದನೆಯಾಗುತ್ತದೆ. ಕರಾವಳಿಯ ಗ್ರಾಂಡ್ ಲಾಹೌ ಬಳಿ ಮ್ಯಾಂಗನೀಸ್ ಗಣಿಗಳಿವೆ. ಖಾದ್ಯ ಎಣ್ಣೆ ತಯಾರಿಕೆ, ಆಹಾರ ಪರಿಷ್ಕರಣ, ಮರಕೊಯ್ತ, ಮೋಟಾರು ಭಾಗಗಳ ಜೋಡಣೆ,ಜವಳಿ-ಇವು ಕೆಲವು ಕೈಗಾರಿಕೆಗಳು. ಐವರಿ ಕೋಸ್ಟಿನಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಬೆಳೆದಿಲ್ಲ. ವಿದೇಶೀ ಬಂಡವಾಳ ನಿಯೋಜನೆಗೆ ಇಲ್ಲಿನ ಸರ್ಕಾರ ವಿಶೇಷವಾಗಿ ಉತ್ತೇಜನ ನೀಡಿದೆ. ಐವರಿ ಕೋಸ್ಟಿನ ರಸ್ತೆವ್ಯವಸ್ಥೆ ಪಶ್ಚಿಮ ಆಫ್ರಿಕದಲ್ಲೇ ಅತ್ಯಂತ ಉತ್ಕೃಷ್ಟವಾದ್ದು. ಸು. 33,000 ಕಿಮೀಗಳ ಪ್ರಾಥಮಿಕ ಹಾಗೂ ದ್ವಿತೀಯಕ ರಸ್ತೆಗಳಿವೆ. ಐವರಿ ಕೋಸ್ಟಿನಿಂದ ಉತ್ತರ ವೋಲ್ಟಕ್ಕೆ ಮೀಟರ್ ಗೇಜ್ ರೈಲುಮಾರ್ಗವುಂಟು.

ಅಬಿಜಾನ್ ಐವರಿ ಕೋಸ್ಟಿನ ರಾಜಧಾನಿ.ಜನಸಂಖ್ಯೆ ೨೯,೩೮೯,೧೫೦. ಇದು ಪಶ್ಚಿಮ ಆಫ್ರಿಕದಲ್ಲೇ ಅತ್ಯುತ್ತಮ ರೇವುಪಟ್ಟಣ. ರೈಲುಮಾರ್ಗದ ಕೊನೆದಾಣ. ವಿಮಾನ ವ್ಯವಸ್ಥೆಯ ಕೇಂದ್ರ. ಬವಾಕೆ, ಬವಾಫ್ಲೆ, ಓಡಿಯೆನೆ, ಸಿಗ್ವೆಲ, ಗಿಗ್ಲೊ, ಗ್ರಾಂಡ್ ಬಸಾರಿ, ಸೆಸಾಂಡ್ರ ಮತ್ತು ಟಾಬೊ ಇತರ ಪಟ್ಟಣಗಳು.

ಐವರಿ ಕೋಸ್ಟಿನ ಅಧಿಕೃತ ಭಾಷೆ ಫ್ರೆಂಚ್. ಅನೇಕ ಸ್ಥಳೀಯ ಭಾಷೆಗಳು ಬಳಕೆಯಲ್ಲಿವೆ. ಸಂಪ್ರದಾಯದ ಆಚರಣೆಗಳಲ್ಲಿ ನಂಬಿಕೆಯಿರುವವರೇ ಹೆಚ್ಚು ಮಂದಿ. ಒಟ್ಟು ಜನಸಂಖ್ಯೆಯ ಶೇ. 12ರಷ್ಟು ಮಂದಿ ಕ್ರೈಸ್ತರು-ಮುಖ್ಯವಾಗಿ ರೋಮನ್ ಕೆಥೊಲಿಕರು. ನೂರಕ್ಕೆ 25 ಮಂದಿ ಮುಸ್ಲಿಮರಿದ್ದಾರೆ.

ಇತಿಹಾಸ, ಆಡಳಿತ

ಬದಲಾಯಿಸಿ

15ನೆಯ ಶತಮಾನದ ದ್ವಿತೀಯಾರ್ಧದ ವೇಳೆಗೆ ಪೋರ್ಚುಗೀಸರು ಈ ಪ್ರದೇಶವನ್ನು ಪರಿಶೋಧಿಸಿದ ಮೇಲೆ ದಂತ ಮತ್ತು ಗುಲಾಮ ವ್ಯಾಪಾರಕ್ಕಾಗಿ ಪಾಶ್ಚಾತ್ಯರು ಇಲ್ಲಿಗೆ ಬರಲಾರಂಭಿಸಿದರು. 17ನೆಯ ಶತಮಾನದ ಕೊನೆಯ ವೇಳೆಗೆ ಫ್ರೆಂಚರು ಇಲ್ಲಿನ ಪುರ್ವತೀರಪ್ರದೇಶದ ಅಸ್ಸಿನಿ ಮತ್ತು ಗ್ರಾಂಡ್ ಬಾಸಮ್ಗಳಲ್ಲಿ ಖಾಯಂ ವ್ಯಾಪಾರಕೇಂದ್ರಗಳನ್ನು ಸ್ಥಾಪಿಸಿದ್ದರು. ಕೋಟೆ ಕೊತ್ತಳಗಳು ನಿರ್ಮಿತವಾದುವು. ಸುತ್ತಮುತ್ತಣ ಪ್ರದೇಶಗಳು ಕ್ರಮೇಣ ಸ್ಥಳೀಯ ನಾಯಕರ ಕೈಯಿಂದ ಇವರಿಗೆ ವರ್ಗವಾದುವು. 1870ರಲ್ಲಿ ಫ್ರೆಂಚ್-ಜರ್ಮನ್ ಯುದ್ಧದ ಫಲವಾಗಿ ಫ್ರೆಂಚ್ ಸೇನೆ ಇಲ್ಲಿಂದ ಕಾಲ್ತೆಗೆಯಿತು. ಈ ಪ್ರದೇಶದ ರಕ್ಷಣೆಯ ಜವಾಬ್ದಾರಿಯನ್ನು ಫ್ರೆಂಚ್ ವರ್ತಕರೇ ವಹಿಸಿಕೊಂಡರು. ಇವರು ಘಾನದ ಕಡೆಯಿಂದ ಬರುತ್ತಿದ್ದ ಬ್ರಿಟಿಷ್ ಆಕ್ರಮಣವನ್ನು ಯಶಸ್ವಿಯಾಗಿ ತಡೆಗಟ್ಟಿದರು. ಮಾರ್ಸೆಲ್ ಟ್ರೀಕ್-ಲ್ಯಾಪ್ಲೇನ್ ಇವರ ಪೈಕಿ ಒಬ್ಬ. ಈತನೂ ಕ್ಯಾಪ್ಟನ್ ಬಿಂಗರನೂ ಸೇರಿ ಇತರ ಸ್ಥಳೀಯ ನಾಯಕರನ್ನು ಪುಸಲಾಯಿಸಿ, ಅವರ ನೆಲಗಳ ಮೇಲೆ ತಮ್ಮ ರಕ್ಷಣೆಯ ಕೊಡೆ ಹಿಡಿದರು. 1893ರಲ್ಲಿ ಐವರಿ ಕೋಸ್ಟ್‌ ಒಂದು ಪ್ರತ್ಯೇಕ ಫ್ರೆಂಚ್ ವಸಾಹತಾಗಿ ಸ್ಥಾಪಿತವಾಯಿತು. ಬಿಂಗರ್ ಪ್ರಥಮ ಗವರ್ನರ್.ಐವರಿ ಕೋಸ್ಟಿನ ಪಶ್ಚಿಮ ಮತ್ತು ಪುರ್ವ ಗಡಿಗಳ ನಿಷ್ಕರ್ಷೆ ಕಷ್ಟವಾಗಲಿಲ್ಲ. ಬ್ರಿಟನ್ ಲೈಬೀರಿಯಗಳೊಂದಿಗೆ ಈ ಬಗ್ಗೆ ಒಪ್ಪಂದವಾಯಿತು. ಆದರೆ ಉತ್ತರದ ಗಡಿ ಖಚಿತಗೊಂಡದ್ದು 1898ರಲ್ಲಿ. ಫ್ರೆಂಚರ ರಾಜ್ಯಾಕಾಂಕ್ಷೆಯ ಮಗ್ಗುಲ ಮುಳ್ಳಾಗಿದ್ದ ಸುಡಾನೀ ಬಂಡಾಯಗಾರ ಸ್ಯಾಮೋರಿಯನ್ನು ಫ್ರೆಂಚರು ಹಿಡಿದು ನಿರ್ದಯೆಯಿಂದ ಬೊಕ್ಕೆಗೆ ಹಾಕಿದಾಗಲೇ ಇದು ಸಾಧ್ಯವಾಯಿತು.

ಆದರೂ ಫ್ರೆಂಚರು ಇಲ್ಲಿ ತಳವೂರುವ ಮುನ್ನ ಇನ್ನೂ ಅನೇಕ ವಿಘ್ನಗಳನ್ನೆದುರಿಸಬೇಕಾಯಿತು. ಹಳದಿ ಜ್ವರ ಒಂದು ಶತ್ರು. ಸ್ವಾತಂತ್ರ್ಯಪ್ರಿಯರಾದ ಸ್ಥಳೀಯ ಜನರ ಪ್ರತಿಭಟನೆಯ ಅಪಾಯವಂತೂ ಇದ್ದೇ ಇತ್ತು. 19ನೆಯ ಶತಮಾನ ಉರುಳಿ, 20ನೆಯ ಶತಮಾನದ ಎರಡನೆಯ ದಶಕದ ಅಂತ್ಯ ಸಮೀಪಿಸುವ ವೇಳೆಗೆ ಫ್ರೆಂಚರು ಇಲ್ಲಿ ಭದ್ರವಾಗಿದ್ದರು. ದಕ್ಷಿಣ ತುದಿಯಿಂದ ಉತ್ತರ ವೋಲ್ಟಕ್ಕೆ ಉದ್ದನೆಯ ರೈಲುಮಾರ್ಗವೂ ರಾಜ್ಯದ ನಾನಾ ಕಡೆಗಳನ್ನು ಕೂಡಿಸುವ ಉತ್ತಮ ರಸ್ತೆ ವ್ಯವಸ್ಥೆಯೂ ನಿರ್ಮಿತವಾದುವು. ಅಬಿಜಾನ್ ರಾಜಧಾನಿಯಾಯಿತು. 1951ರಲ್ಲಿ ಬಂದರು ನಿರ್ಮಾಣವಾಯಿತು. ಎರಡನೆಯ ಮಹಾಯುದ್ಧ ಬಂತು. 1940-42 ರ ವರೆಗೆ ಇದು ಫ್ರಾನ್ಸಿನ ವಿಷಿಯಲ್ಲಿ ಜರ್ಮನರ ಕೈಗೊಂಬೆಯಾಗಿ ರಾಜ್ಯವಾಳುತ್ತಿದ್ದ ಸರ್ಕಾರದ ಅಧೀನದಲ್ಲಿತ್ತು. 1946ರಲ್ಲಿ ಫ್ರೆಂಚಿನ ಒಂದು ಭಾಗವಾಯಿತು. ಆಡಳಿತ ಮತ್ತು ಹಣಕಾಸುಗಳಲ್ಲಿ ಇಷ್ಟಷ್ಟು ಅಧಿಕಾರ ಪ್ರಾಪ್ತವಾಯಿತೇ ವಿನಾ ಇದಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಲಿಲ್ಲ. 1947ರಲ್ಲಿ ಇದರ ಉತ್ತರಭಾಗದ ಜನ ಪ್ರತ್ಯೇಕವಾಗಲು ಬಯಸಿದಾಗ ಫ್ರೆಂಚರು ಅದನ್ನು ಕತ್ತರಿಸಿ ಉತ್ತರ ವೋಲ್ಟವೆಂದು ಹೆಸರಿಸಿದರು. 1958ರ ಡಿಸೆಂಬರ್ 4ರಂದು ಐವರಿ ಕೋಸ್ಟ್‌ ಸ್ವಯಮಾಡಳಿತವನ್ನೂ 1960ರ ಆಗಸ್ಟ್‌ 7ರಂದು ಸ್ವಾತಂತ್ರ್ಯವನ್ನೂ ಪಡೆಯಿತು. ಇದಕ್ಕೆಲ್ಲ ಕಾರಣನಾದ ನಾಯಕನೇ ಫೀಲಿಕ್ಸ್‌ ಹೌಫ್ವೆ-ಬಾಯಿನಿ. ಉತ್ತರ ವೋಲ್ಟ, ನೈಜರ್ ಮತ್ತು ದಹೋಮಿಗಳೊಂದಿಗೆ ಈತ ಮೈತ್ರಿಕೂಟ ಮಾಡಿಕೊಂಡ. ಈ ರಾಜ್ಯಗಳಿಗೆಲ್ಲ ಸಮಾನವಾದ ಸಂವಿಧಾನ, ಸುಂಕವ್ಯವಸ್ಥೆ. ವಿದೇಶ ಮತ್ತು ರಕ್ಷಣಾನೀತಿ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಎಲ್ಲರಿಗೂ ಒದಗಿಬರುವ ಬಂಡವಾಳ ಇರಬೇಕೆಂಬುದು ಬಾಯಿನಿಯ ಕನಸು. ಇವಕ್ಕೂ ಫ್ರಾನ್ಸಿಗೂ ನಡುವೆ ಸಹಕಾರದ ಕರಾರುಗಳಿಗೆ 1961ರಲ್ಲಿ ಸಹಿ ಹಾಕಲಾಯಿತು. ಮೈತ್ರಿಕೂಟದ ರಾಷ್ಟ್ರಗಳು ಈಗ ಫ್ರೆಂಚ್ ಸಮುದಾಯಕ್ಕೆ ಸೇರಿಲ್ಲ.

1960ರ ಸಂವಿಧಾನದ ಪ್ರಕಾರ ಐವರಿ ಕೋಸ್ಟ್‌ ಗಣರಾಜ್ಯದ ಅಧ್ಯಕ್ಷನಿಗೆ ವ್ಯಾಪಕ ಅಧಿಕಾರಗಳುಂಟು. ಸಚಿವರುಗಳನ್ನೂ ಪ್ರಮುಖ ಅಧಿಕಾರಿಗಳನ್ನೂ ನೇಮಕ ಮಾಡುವವನೀತನೇ. ರಾಷ್ಟ್ರೀಯ ಸಭೆಯ ಸದಸ್ಯರ ಸಂಖ್ಯೆ 100. ಇವರು ನೇರವಾಗಿ ಚುನಾಯಿತರಾಗುತ್ತಾರೆ. ದೇಶವನ್ನು ಆಡಳಿತ ಸೌಕರ್ಯಕ್ಕಾಗಿ 19 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "FACTBOX-Key facts on rebel leader Guillaume Soro". AlertNet.org. Reuters Foundation. 2007-03-29. Archived from the original on 2009-04-18. Retrieved 2007-04-01.
  2. ೨.೦ ೨.೧ ೨.೨ ೨.೩ Côte d'Ivoire Archived 2009-02-11 ವೇಬ್ಯಾಕ್ ಮೆಷಿನ್ ನಲ್ಲಿ. in CIA World Factbook. Accessed January 1, 2007.
  3. United Nations: Demographic Yearbook, Historical supplement. Accessed January 1, 2006.
  4. Côte d'Ivoire Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ. in Human Development Report 2006. Accessed January 1, 2006.
  5. "List of ITU-T Recommendation E.164 assigned country codes" (PDF). International telecommunication union. p. 3. Archived from the original (PDF) on 2011-08-13. Retrieved 2006-09-25.