ಏಕರೂಪ ನಾಗರಿಕ ನೀತಿಸಂಹಿತೆ
ಏಕರೂಪ ನಾಗರಿಕ ನೀತಿಸಂಹಿತೆ (ಸಮಾನ ನಾಗರಿಕ ಸಂಹಿತೆ ಎಂದೂ ಕರೆಯಲಾಗುತ್ತದೆ) ಎಂಬುದು ಭಾರತದಲ್ಲಿ ಅಳವಡಿಸಬೇಕೆಂದಿರುವ ಸಂಹಿತೆಯ ಆವರಣದಂತಹಾ ಪೌರ/ನಾಗರಿಕ ಕಾನೂನು ಸಂಹಿತೆಯ ಕಲ್ಪನೆಯಾಗಿದೆ. ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯಾತೀತ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುತ್ತದೆ. ಈ ಕಾನೂನು ತಮ್ಮ ಧರ್ಮ ಅಥವಾ ಜಾತಿ ಅಥವಾ ಜನಾಂಗ/ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ನಾಗರಿಕರ ಹಕ್ಕನ್ನು ರದ್ದುಗೊಳಿಸುತ್ತದೆ. ಅಂತಹಾ ಸಂಹಿತೆಗಳು ಬಹುತೇಕ ಆಧುನಿಕ ರಾಷ್ಟ್ರಗಳಲ್ಲಿ ಈಗಾಗಲೇ ಜಾರಿಯಲ್ಲಿವೆ.
ನಾಗರಿಕ ನೀತಿಸಂಹಿತೆಯ ವ್ಯಾಪ್ತಿಯಲ್ಲಿ ಒಳಪಡುವ ಸಾಮಾನ್ಯ ಕ್ಷೇತ್ರಗಳೆಂದರೆ ಆಸ್ತಿಪಾಸ್ತಿಗಳ ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಆಡಳಿತ, ಮದುವೆ, ವಿಚ್ಛೇದನ ಮತ್ತು ದತ್ತುಸ್ವೀಕಾರಗಳಾಗಿವೆ.
ಈ ಪಾರಿಭಾಷಿಕ ಪದವನ್ನು ಭಾರತೀಯ ಸಂವಿಧಾನವು ನಿರ್ದೇಶಕ ಸೂತ್ರಗಳ ರೂಪದಲ್ಲಿ ಅಥವಾ ಸಾಧಿಸಬೇಕಾಗಿರುವ ಗುರಿಯಾಗಿ ತನ್ನ ನಾಗರಿಕರಿಗೆ ಏಕರೂಪ ನಾಗರಿಕ ನೀತಿಸಂಹಿತೆಯಾಗಿ ವ್ಯವಸ್ಥಿತವಾಗಿ ನಿರೂಪಿಸುವ ಪ್ರಯತ್ನ ಮಾಡುತ್ತಿರುವ ಭಾರತದಲ್ಲಿ ಬಳಸಲಾಗುತ್ತದೆ.
ವೈಯಕ್ತಿಕ ಕಾನೂನುಗಳು
ಬದಲಾಯಿಸಿಸಂಬಂಧಪಟ್ಟ ವ್ಯಕ್ತಿಗಳ ಧರ್ಮವನ್ನು ಆಧರಿಸಿ ಭಾರತದಲ್ಲಿ ಬಹುತೇಕ ಕೌಟುಂಬಿಕ ಕಾನೂನುಗಳನ್ನು ನಿರ್ಣಯಿಸಲಾಗುತ್ತದೆ.[೧] ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರುಗಳು ಹಿಂದೂ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟರೆ, ಮುಸಲ್ಮಾನರು ಮತ್ತು ಕ್ರೈಸ್ತರು ತಮ್ಮದೇ ಆದ ಕಾನೂನುಗಳನ್ನು ಹೊಂದಿದ್ದಾರೆ. ಮುಸಲ್ಮಾನರ ಕಾನೂನು ಷರಿಯಾದ ಮೇಲೆ ಆಧಾರಿತವಾಗಿರುತ್ತದೆ. ಭಾರತೀಯ ಸಂಸತ್ತಿನ ಕಾಯಿದೆಯೊಂದರ ಮುಖಾಂತರ ಇತರೆ ಧಾರ್ಮಿಕ ಸಮುದಾಯಗಳ ವೈಯಕ್ತಿಕ ಕಾನೂನುಗಳನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸಲಾಗಿದೆ. ಇತರೆ ವಿಧಗಳ ಕಾನೂನುಗಳಾದ ಅಪರಾಧ ಕಾನೂನುಗಳು/ದಂಡಶಾಸನಗಳು ಮತ್ತು ಗುತ್ತಿಗೆ, ಪ್ರಾಮಾಣ್ಯ/ರುಜುವಾತು, ಆಸ್ತಿಗಳ ವರ್ಗಾವಣೆ, ಕಂದಾಯ ಪಾವತಿ/ಕರಸಲ್ಲಿಕೆಗಳಿಗೆ ಸಂಬಂಧಿಸಿದ ಪೌರ ಕಾನೂನುಗಳನ್ನು ಕೂಡಾ ಶಾಸನಗಳನ್ನು ಕ್ರೋಡೀಕರಿಸುವ ರೀತಿಯಲ್ಲಿಯೇ ಕ್ರೋಡೀಕರಿಸಲಾಗುತ್ತದೆ.
ಇತಿಹಾಸ
ಬದಲಾಯಿಸಿಏಕರೂಪ ನಾಗರಿಕ ನೀತಿಸಂಹಿತೆಯ ಮೇಲಿನ ಈ ಚರ್ಚೆಯು ವಸಾಹತು ಕಾಲದ ಅವಧಿಯಷ್ಟು ಹಿಂದಿನದಾಗಿದೆ.
ಅಪರಾಧಗಳು, ಪುರಾವೆ/ಸಾಕ್ಷ್ಯಗಳು, ಗುತ್ತಿಗೆ etc.ಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ ೧೮೪೦ರ ಲೆಕ್ಸ್ ಲೋಚಿ/ಕಿ/ಸಿ ವರದಿಯು ಭಾರತೀಯ ಕಾನೂನುಗಳ ಸಂಹಿತೆ ರಚನೆ/ಕ್ರೋಡೀಕರಣ ಮಾಡುವಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳುವ ಅಗತ್ಯತೆಯನ್ನು ಹಾಗೂ ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತ್ತು, ಆದರೆ ಅಂತಹಾ ಸಂಹಿತೆ ರಚನೆ/ಕ್ರೋಡೀಕರಣದಿಂದ ಹಿಂದೂಗಳ ಹಾಗೂ ಮುಸಲ್ಮಾನರ ವೈಯಕ್ತಿಕ ಕಾನೂನುಗಳನ್ನು ಹೊರತಾಗಿರಿಸಲು ಶಿಫಾರಸು ಮಾಡಿತ್ತು.[೨]
ವಿಜ್ಞಾನೇಶ್ವರನ ಸಂಹಿತೆ ಮಿತಾಕ್ಷರ ಮತ್ತು ಹಿಂದೂ ಕಾನೂನು.
ಬದಲಾಯಿಸಿಹಿಂದೂ ಕಾನೂನಿಗೆ ಸಂಬಂಧಪಟ್ಟ ಹಾಗೆ ಎರಡು ಪ್ರಧಾನ ಪಂಥಗಳಿವೆ, ಅವೆಂದರೆ ದಯಾಭಾಗ ಮತ್ತು ಮಿತಾಕ್ಷರ. ಮಿತಾಕ್ಷರವನ್ನು ಮತ್ತೆ ನಾಲ್ಕು ಉಪ ಪಂಥಗಳಾಗಿ ವಿಭಜಿಸಲಾಗುತ್ತದೆ. ಇದರ ಜೊತೆಗೆ ಸದಾಚಾರದ ಪದ್ಧತಿಗೆ ಕೂಡಾ ಇದರಲ್ಲಿ ಪ್ರಮುಖ ಸ್ಥಾನವಿದೆ. ಶಾಸನ ವಿಧೇಯಕಗಳ ಮುಖಾಂತರ ಹಿಂದೂ ಕಾನೂನುಗಳಲ್ಲಿ ಸುಧಾರಣೆಯನ್ನು ತರುವ ಪ್ರಯತ್ನಗಳು ಬ್ರಿಟಿಷರ ಅವಧಿಯಲ್ಲಿ ಆರಂಭವಾದವು. ೧೮೫೦ರ ಜಾತಿ ಅನರ್ಹತೆಗಳ ನಿವಾರಣಾ ಕಾಯಿದೆ, ೧೮೫೬ರ ಹಿಂದೂ ವಿಧವಾ ಮರುವಿವಾಹ ಕಾಯಿದೆ, ೧೯೨೮ರ ಹಿಂದೂ ಉತ್ತರಾಧಿಕಾರ (ಅನರ್ಹತೆಗಳ ನಿವಾರಣೆ) ಕಾಯ್ದೆ, ೧೯೨೯ರ ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ಹಿಂದೂ ಕಾನೂನು (ತಿದ್ದುಪಡಿ) ಕಾಯಿದೆ, ೧೯೩೦ರ ಹಿಂದೂ ಕಲಿಕೆಯ ಲಾಭಗಳ ಕಾಯಿದೆ, ೧೯೩೭ರ ಹಿಂದೂ ಮಹಿಳೆಯರ ಆಸ್ತಿಯ ಮೇಲಿನ ಹಕ್ಕು ಕಾಯಿದೆ, ೧೯೪೬ರ ಹಿಂದೂ ವಿವಾಹಿತ ಮಹಿಳೆಯ ಪ್ರತ್ಯೇಕ ಮನೆ ಹೊಂದುವ ಹಾಗೂ ಜೀವನಾಂಶ ಕಾಯಿದೆಗಳಂತಹಾ ಸುಧಾರಣಾ ಕಾಯಿದೆಗಳೆಲ್ಲವನ್ನೂ ಪ್ರಾಚೀನ ಶಾಸ್ತ್ರಗಳ ನಿಯಮಗಳನ್ನು ಅನುಸರಿಸಲು ಇಚ್ಛಿಸದಂತಹವರಿಗೆ ಅವುಗಳಿಂದ ಬಿಡುಗಡೆ ನೀಡಲು ಜಾರಿಗೆ ತರಲಾಯಿತು. ಹಿಂದೂ ಕಾನೂನು ಸಮಿತಿಯನ್ನು ಎಲ್ಲಾ ಹಿಂದೂ ಕಾನೂನುಗಳನ್ನು ಒಳಗೊಳ್ಳುವಂತಹಾ ವ್ಯಾಪಕ ಶಾಸನಾತ್ಮಕ ವಿಧೇಯಕವನ್ನು ರಚಿಸುವ ಬಗ್ಗೆ ಪರಿಶೀಲನೆ ನಡೆಸಲು ೧೯೪೧ರಲ್ಲಿ ನೇಮಿಸಲಾಯಿತು.[೩] ಈ ಸಮಿತಿಯು ಕೆಲ ಕಾಲಾನಂತರ ಯುದ್ಧದ ಕಾರಣದಿಂದಾಗಿ ಕಾರ್ಯವನ್ನು ಸ್ಥಗಿತಗೊಳಿಸಿತು. ೧೯೪೪ರಲ್ಲಿ ಈ ಸಮಿತಿಯನ್ನು ಮತ್ತೆ ಸರ್/ಶ್ರೀ B.N. ರಾವುರವರ ಅಧ್ಯಕ್ಷತೆಯಲ್ಲಿ ಪುನಶ್ಚೇತನಗೊಳಿಸಲಾಗಿತ್ತು ಹಾಗೂ ರಾವು ಸಮಿತಿಯ ಶಿಫಾರಸುಗಳನ್ನು ೧೯೫೫ ಮತ್ತು ೧೯೫೬ನೇ ಇಸವಿಗಳಲ್ಲಿ ವಿವಾಹಾನಂತರ ಉತ್ತರಾಧಿಕಾರ, ಪಾಲಕತ್ವ/ಪಾಲಕತನ ಹಾಗೂ ದತ್ತು ಸ್ವೀಕಾರಗಳನ್ನು ಕ್ರಮಬದ್ಧಗೊಳಿಸುವ ಕಾಯಿದೆಗಳ ಸರಣಿಯನ್ನು ಅನುಮೋದಿಸುವ ಮುಖಾಂತರ ಕಾರ್ಯಗತಗೊಳಿಸಲಾಯಿತು. ೧೯೫೫ರ ಹಿಂದೂ ವಿವಾಹ ಕಾಯಿದೆ, ೧೯೫೬ರ ಹಿಂದೂ ಉತ್ತರಾಧಿಕಾರ ಕಾಯಿದೆ, ೧೯೫೬ರ ಹಿಂದೂ ಅಪ್ರಾಪ್ತವಯಸ್ಕತೆ ಹಾಗೂ ಪಾಲಕತ್ವ/ಪಾಲಕತನ ಕಾಯಿದೆ ಹಾಗೂ ಅಂತಿಮವಾಗಿ ೧೯೫೬ರ ಹಿಂದೂ ದತ್ತುಸ್ವೀಕಾರವ್ಯವಸ್ಥೆ ಹಾಗೂ ಜೀವನಾಂಶ ಕಾಯಿದೆಗಳೇ ಹೀಗೆ ರೂಪಿಸಿದ ಕಾಯಿದೆಗಳಾಗಿದೆ.[೪]
ಮುಸಲ್ಮಾನರಲ್ಲಿ ಸುನ್ನೀಗಳು, ಷಿಯಾಗಳು, ಇಸ್ಮಾಯಿಲಿಗಳು, ಬೊಹ್ರಾಗಳು, ಖೋಜಾಗಳು ಹಾಗೂ ಸಂಪ್ರದಾಯಬದ್ಧರಲ್ಲದ ಅಹ್ಮದೀಯಾಗಳ ಪಂಗಡಗಳಿವೆ. ಸುನ್ನೀಗಳಲ್ಲಿ ನಾಲ್ಕು ಪ್ರತ್ಯೇಕ ಪಂಥಗಳಿವೆ. ಅವರುಗಳಲ್ಲಿ ಕುಚಿ ಮೆಮನ್‌ಗಳೆಂದು ಕರೆಸಿಕೊಳ್ಳುವವರೂ ಕೂಡಾ ಇದ್ದು ಅವರು ಸ್ವಲ್ಪಮಟ್ಟಿಗೆ ಹಿಂದೂಗಳ ವೈಯಕ್ತಿಕ ಕಾನೂನುಗಳಿಗೆ ಬದ್ಧರಾಗಿದ್ದಾರೆ.[೫] ಮುಸಲ್ಮಾನರಿಗೆ ಸಂಬಂಧಪಟ್ಟ ಶಾಸನಗಳಲ್ಲಿ ಬಹುಪಾಲು ಶಾಸನಗಳನ್ನು ಪ್ರಮುಖವಾಗಿ ನ್ಯಾಯಿಕ ನಿರ್ಣಯಗಳನ್ನು ರದ್ದುಪಡಿಸಿ ಷರೀಯತ್ ಕಾನೂನನ್ನು ಪುನಃಸ್ಥಾಪನೆಗೊಳಿಸುವ ಉದ್ದೇಶದಿಂದ ಕಾರ್ಯಗತಗೊಳಿಸಲಾಯಿತು. ೧೯೧೩ರ ವಕ್ಫ್ ಸ್ಥಿರೀಕರಣ ಕಾಯಿದೆಯನ್ನು, ಗೋಪ್ಯ ಸಲಹಾಮಂಡಲಿಗಳ ನಿರ್ಧಾರಗಳನ್ನು ರದ್ದುಪಡಿಸಲು ಜಾರಿಗೊಳಿಸಲಾಯಿತು.ಉಲ್ಲೇಖ ದೋಷ: Closing </ref>
missing for <ref>
tag ವಸಾಹತು ಶಾಹಿಯ ಅವಧಿಯಲ್ಲಿ ಜಾರಿಗೊಳಿಸಲಾದ ಅನೇಕ ಕಾಯಿದೆಗಳಲ್ಲಿ ನಿರ್ದಿಷ್ಟವಾಗಿ ಮುಸಲ್ಮಾನರಿಗೆ ವಿನಾಯಿತಿ ನೀಡಿರುವುದರ ಉದ್ದೇಶ ಆ ಸಮುದಾಯದಿಂದ ಪ್ರತಿರೋಧವನ್ನು ತಡೆಗಟ್ಟುವುದಾಗಿತ್ತು. ಅರ್ಜಿತ ಹಕ್ಕುಗಳು ಹಾಗೂ ಉತ್ತರಾಧಿಕಾರಗಳಿಗೆ ಸಂಬಂಧಪಟ್ಟ ೧೯೨೫ರ ಭಾರತೀಯ ಉತ್ತರಾಧಿಕಾರ ಕಾಯಿದೆಯು, ನಿರ್ದಿಷ್ಟವಾಗಿ ಮುಸಲ್ಮಾನರಿಗೆ ವಿನಾಯಿತಿಯನ್ನು ನೀಡಿತ್ತು.[೬] ಮುಸಲ್ಮಾನರು ಖು/ಕುರಾನ್‌ನನ್ನು ಆಧರಿಸಿದ ಸಂಕೀರ್ಣವಾದ ಉತ್ತರಾಧಿಕಾರ ವ್ಯವಸ್ಥೆಯನ್ನು ಹೊಂದಿದ್ದರು. ಮೂಲಭೂತವಾದ ಭಾರತೀಯ ಉತ್ತರಾಧಿಕಾರ ಕಾನೂನನ್ನು ೧೮೬೫ರಲ್ಲಿ ಜಾರಿಗೊಳಿಸಲಾಗಿತ್ತಲ್ಲದೇ ಅದು ಹಿಂದೂಗಳಿಗೂ ವಿನಾಯಿತಿಯನ್ನು ನೀಡಿತ್ತು. ಆದಾಗ್ಯೂ, ಆ ಕಾಯಿದೆಯನ್ನು ಅಂತಿಮವಾಗಿ ಹಿಂದೂಗಳಿಗೆ ಅನ್ವಯಿಸಲಾಯಿತು. ಮೂಲಭೂತವಾಗಿ ಅಂತರ್ಜಾತೀಯ ನಾಗರಿಕ ವಿವಾಹ ಕಾನೂನೇ ಆಗಿದ್ದ ೧೮೭೨ರ ವಿಶೇಷ ವಿವಾಹ ಕಾಯಿದೆಯಲ್ಲಿಯೂ ಕೂಡಾ ಮುಸಲ್ಮಾನರಿಗೆ ವಿನಾಯಿತಿಯನ್ನು ನೀಡಲಾಗಿತ್ತು. ಮುಸಲ್ಮಾನರಿಗೆ ವಿನಾಯ್ತಿಯನ್ನು ನೀಡಬೇಕೆಂದು ಬಂದ ಎಲ್ಲಾ ಕೋರಿಕೆಗಳನ್ನು ಅನುಮೋದಿಸಲಾಗಿದೆ ಎಂದೇನಿಲ್ಲ. ೧೮೭೨ರ ಭಾರತೀಯ ಸಾಕ್ಷ್ಯಾಧಾರ/ಪುರಾವೆ ಕಾಯಿದೆಯು ಮಕ್ಕಳ ಧರ್ಮಸಂತಾನತೆ/ಔರಸತೆಯ ಬಗೆಗಿನ ಪರಿಚ್ಛೇದ ೧೧೨ಅನ್ನು ಒಳಗೊಂಡಿದೆ. ಮುಸಲ್ಮಾನರ ಕಾನೂನುಗಳೊಂದಿಗೆ ವಿರೋಧಾಭಾಸ/ಅಸಾಂಗತ್ಯತೆಯನ್ನು ಹೊಂದಿದ್ದರೂ ಅವುಗಳನ್ನು ಕೆಲಕಾಲಾನಂತರ ಮುಸಲ್ಮಾನರಿಗೂ ಅನ್ವಯಿಸಲಾಯಿತೆಂದು ತಿಳಿದುಬರುತ್ತದೆ. ೧೯೩೭ರ ಷರೀಯತ್ ಕಾಯಿದೆಯು ಉತ್ತರಾಧಿಕಾರ, ಸ್ತ್ರೀಯರ ವಿಶೇಷ ಆಸ್ತಿಗಳು, ವಿವಾಹಗಳು ಹಾಗೂ ವಿಚ್ಛೇದನಗಳು, ಪಾಲಕತ್ವ/ಪಾಲಕತನ, ಉಡುಗೊರೆಗಳು, ನ್ಯಾಸದ ಆಸ್ತಿಗಳು, ವಕ್ಫ್‌ಗಳು etcಗಳಿಗೆ ಸಂಬಂಧಿಸಿದಂತೆ ಷರೀಯತ್ ಗೆ ವಿರುದ್ಧವಾಗಿರುವ ಯಾವುದೇ ಪದ್ಧತಿ ಅಥವಾ ವಾಡಿಕೆಗಳನ್ನು ತಿರಸ್ಕರಿಸಿತು.[೭] ೧೯೩೯ರ ಮುಸಲ್ಮಾನರ ವಿವಾಹ ವಿಚ್ಛೇದನೆ ಕಾಯಿದೆಯು ಮಹಿಳೆಯರಿಗೆ ವಿಚ್ಛೇದನದ ಹಕ್ಕನ್ನು ದಯಪಾಲಿಸಿತು.[೮]
ಕ್ರೈಸ್ತರ ಸಾಮಾಜಿಕ ಕಾನೂನು
ಬದಲಾಯಿಸಿಕ್ರೈಸ್ತರಿಗೆ ಸಂಬಂಧಪಟ್ಟ ಹಾಗೆ ಭಾರತೀಯ ಕ್ರೈಸ್ತರ ವಿವಾಹ ಕಾಯಿದೆಯನ್ನು ಜಾರಿಗೆ ತರಲಾಯಿತು. ಆದರೆ ಈ ಕಾಯಿದೆಯು ವ್ಯಾಪಕವಾದ ಕಾಯಿದೆಯಾಗಿರಲಿಲ್ಲ.[೯]
ಪಾರ್ಸಿಗಳ ವೈಯಕ್ತಿಕ ಕಾನೂನನ್ನು ಭಾಗಶಃ ಕ್ರೋಡೀಕರಿಸಲಾಗಿದೆಯಾದರೂ ವಿಚ್ಛೇದನ ಹಾಗೂ ವೈವಾಹಿಕ ಪರಿಹಾರಗಳಿಗೆ ಸಂಬಂಧಪಟ್ಟ ಏರ್ಪಾಟುಗಳು ಸೂಕ್ತವಾಗಿ ನಿಗದಿಪಡಿಸಲಾಗಿಲ್ಲ.
ಮುಸಲ್ಮಾನರು ಮತ್ತು ಏಕರೂಪ ನಾಗರಿಕ ನೀತಿಸಂಹಿತೆ
ಬದಲಾಯಿಸಿ೧೯೫೦-೧೯೮೫
ಬದಲಾಯಿಸಿನೆಹರೂರವರು ಸೇರಿದಂತೆ ಭಾರತೀಯ ಸಂವಿಧಾನದ ನಿರ್ಮಾತೃಗಳು ಮುಸಲ್ಮಾನರು ಸೇರಿದಂತೆ ವಿವಿಧ ಧರ್ಮಗಳಿಗೆ ಸೇರಿದ ನಾಗರಿಕರ ಮೇಲೆ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಅನ್ವಯಿಸುವ ಮುಂಚೆ ಸ್ವಲ್ಪ ಮಟ್ಟಿಗಿನ ಆಧುನಿಕೀಕರಣವು ಅಗತ್ಯವಾಗಿರುತ್ತದೆ ಎಂಬುದನ್ನು ಮನಗಂಡಿದ್ದರು. ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳನ್ನು ಕಡೆಗಣಿಸುವ ಯಾವುದೇ ಪ್ರಯತ್ನವು ಅಂತರ್ಯುದ್ಧ, ವ್ಯಾಪಕ ಕೋಲಾಹಲ ಹಾಗೂ ಸಾಮಾಜಿಕ ವಿಪ್ಲವಗಳಿಗೆ ಕಾರಣವಾಗಬಹುದೆಂಬ ಭೀತಿಯೂ ಉಂಟಾಗಿತ್ತು. ಮತೀಯ ಸಮಸ್ಯೆಗಳಿಂದಾಗಿ ಗಾಂಧಿಯನ್ನು ಹತ್ಯೆ ಮಾಡಿದಂತಹಾ ೧೯೪೮ರ ಘಟನೆಗಳಿಂದ ಉಂಟಾದ ತರ್ಕಬದ್ಧ ಹಿತಾಸಕ್ತಿ ಇದಾಗಿತ್ತು. "ಆ ಮೂಲಕ ಮುಸಲ್ಮಾನರು ಹಾಗೂ ಇತರ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಯಥೋಚಿತವಾಗಿ ರಕ್ಷಿಸಬಹುದಾಗಿದೆ" ಎಂಬ ಕಾನೂನುಭಾಗವನ್ನು ಹೊಂದಿದ್ದ ೧೯೩೯ರಲ್ಲಿ ಭಾರತಕ್ಕೆ ಮಾದರಿ ಸಂವಿಧಾನವೊಂದನ್ನು ರಚಿಸಿದಾಗ ಸೈಯೆದ್ ಅಬ್ದುಲ್ ಲತೀಫ್‌ರಿಗೆ ಈ ಸಮಸ್ಯೆಗಳ ಬಗ್ಗೆ ಕಲ್ಪನೆಯಿತ್ತು. ನ್ಯಾಯಾಂಗದ ಬಗೆಗಿನ ತಮ್ಮ ಲೇಖನದಲ್ಲಿ ಅವರು ಮಾಡಿದ್ದ ಏಕೈಕ ಟಿಪ್ಪಣಿಯೆಂದರೆ "ಮುಸಲ್ಮಾನರ ವೈಯಕ್ತಿಕ ಕಾನೂನುಗಳನ್ನು ರೂಪಿಸುವಿಕೆಯು ಮುಸಲ್ಮಾನ ನ್ಯಾಯಾಧೀಶರುಗಳಿಂದಲೇ ಮಾಡಿಸಬೇಕು" ಎಂಬುದಾಗಿತ್ತು. ಸೌಮ್ಯವಾದ/ಹಿತಕರ ಸಂವಿಧಾನವನ್ನು ರೂಪಿಸದೇ ಹೋದರೆ ಭಾರತವು ವಿಭಜನೆಗೊಳ್ಳಬಹುದು ಎಂದು ಉಂಟಾಗಿದ್ದ ಭಾವನೆಯನ್ನು ಹೈದರಾಬಾದ್ ರಾಜ್ಯದಂತಹವುಗಳನ್ನು ಒತ್ತಾಯಪೂರ್ವಕವಾಗಿ ಸೇರಿಸಿಕೊಳ್ಳಬೇಕಾಗಿ ಬಂದ ರಾಜಾಡಳಿತಕ್ಕೆ ಒಳಪಟ್ಟಿದ್ದ ರಾಜ್ಯಗಳ ವಿಭಜನೆಯು ಮತ್ತಷ್ಟು ತೀವ್ರಗೊಳಿಸಿತು. ಭಾರತೀಯ ಸಂವಿಧಾನ ಹಾಗೂ ಅದು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಹೊಂದಿರುವ ನಿಲುವುಗಳ ಬಗ್ಗೆ ಸೂಕ್ತವಾದ ಅಭಿಪ್ರಾಯವನ್ನು ತಳೆಯಲು ಇಂತಹಾ ವಾತಾವರಣವು ಅಗತ್ಯ.
ಆ ಅವಧಿಯ ಭಾರತದ ನಾಯಕರುಗಳು ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ಮಾದರಿಯನ್ನು ಆಧರಿಸಿದ ಜಾತ್ಯತೀತ ಸಂವಿಧಾನವನ್ನು ಹೊಂದಲು ಇಚ್ಛಿಸಿದ್ದರು. ಆದಾಗ್ಯೂ, ಇದರಿಂದ ಹೊರಹೊಮ್ಮಿದ್ದು ಮಾತ್ರ ಆ ಪದದ ಪಾಶ್ಚಿಮಾತ್ಯ ಅರ್ಥದ ಪ್ರಕಾರ ಜಾತ್ಯತೀತವಾದುದಲ್ಲ, ಬದಲಿಗೆ ತನ್ನಲ್ಲಿನ ಧಾರ್ಮಿಕ ಸಮೂಹಗಳಿಗೆ ತಮ್ಮದೇ ಆದ ಧಾರ್ಮಿಕ ಕಾನೂನುಗಳನ್ನು ಹೊಂದಿರುವ 'ಜಾತ್ಯತೀತ' ರಾಷ್ಟ್ರದ ಸಂವಿಧಾನವಾಗಿತ್ತು. ಭಾರತದಲ್ಲಿ 'ಜಾತ್ಯತೀತ'ವೆಂಬುದರ ಅರ್ಥ "ಧರ್ಮದ ವಿಚಾರದಲ್ಲಿ ಮಧ್ಯಪ್ರವೇಶಿಸದಿರುವುದು" ಎಂಬುದೆಂದು ಮುಷೀರ್-ಅಲ್/ಉಲ್-ಹಕ್ ಎತ್ತಿ ತೋರಿಸುತ್ತಾರೆ. ಭಾರತದಲ್ಲಿ ಇರುವ ಧಾರ್ಮಿಕ ಸಮೂಹಗಳು ಹಲವು, ಪ್ರಧಾನವಾಗಿ ಬಹುಸಂಖ್ಯಾತರಾದ ಹಿಂದೂಗಳು, ಗಮನಾರ್ಹ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಮುಸಲ್ಮಾನರು ಹಾಗೂ ಸಣ್ಣ ಪ್ರಮಾಣದಲ್ಲಿರುವ ಬೌದ್ಧರು, ಸಿಖ್ಖರು, ಜೈನರು, ಕ್ರೈಸ್ತರು, ಯಹೂದಿಗಳು ಮತ್ತು ಬುಡಕಟ್ಟುಗಳ ಜನರು. ಜಾತ್ಯತೀತ ರಾಷ್ಟ್ರವನ್ನು ಕಟ್ಟುವ ಉದ್ದೇಶಕ್ಕೆ ಸಂಬಂಧಿಸಿದಂತೆ, "ರಾಷ್ಟ್ರವು ನಾಗರಿಕರಿಗೆ ಭಾರತದ ಎಲ್ಲಾ ಪ್ರಾಂತ್ಯಗಳ ನಾಗರಿಕರಿಗೆ ಏಕರೂಪ ನಾಗರಿಕ ನೀತಿಸಂಹಿತೆಯನ್ನು ರೂಪಿಸಿ ಕಾರ್ಯಗತಗೊಳಿಸುವ ಪ್ರಯತ್ನವನ್ನು ಮಾಡಬೇಕು" ಎಂದು ಸೂಚಿಸುವ ವಿಧಿ/ಪರಿಚ್ಛೇದ ಸಂಖ್ಯೆ ೪೪ ಇದೆ. ಆದಾಗ್ಯೂ, ಇದಕ್ಕೆ ಪ್ರತಿಕ್ರಿಯೆಯಾಗಿ ವಿಧಿ/ಪರಿಚ್ಛೇದ ಸಂಖ್ಯೆ ೧೪ ಕೂಡಾ ಇದ್ದು, ಅದು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಮೂಲಭೂತ ಹಕ್ಕಿನ ಭರವಸೆಯನ್ನು ನೀಡುತ್ತದೆ, ವಿಧಿ/ಪರಿಚ್ಛೇದ ಸಂಖ್ಯೆ ೧೫ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳಗಳ ಮೇಲೆಯೇ ಆಧಾರಿತವಾಗಿ ಯಾವುದೇ ನಾಗರಿಕರಿಗೆ ತಾರತಮ್ಯ ತೋರುವುದನ್ನು ಪ್ರತಿಬಂಧಿಸಿದ್ದರೆ ಹಾಗೂ ೨೫-೨೯ವರೆಗಿನ ವಿಧಿ/ಪರಿಚ್ಛೇದಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ನೀಡುತ್ತವೆ...ಸಂವಿಧಾನದ ೧೩ನೆಯ ವಿಧಿ/ಪರಿಚ್ಛೇದವು ಸೂಚಿಸುವ ಪ್ರಕಾರ ಸಂವಿಧಾನದ ಅನುಷ್ಠಾನವು ಆರಂಭಗೊಳ್ಳುವ ಸಮಯದಲ್ಲಿ ಭಾರತದಲ್ಲಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು, ಯಾವುದೇ ಮೂಲಭೂತ ಹಕ್ಕಿಗೆ ಪ್ರತಿಕೂಲವೆಂದು ಸಂಬಂಧಪಟ್ಟಿದ್ದರೂ, ಅದು ಹೇಗೆ ಇದ್ದರೂ ಆಯಾ ಕಾನೂನುಗಳು ಅಪ್ರಸ್ತುತ ಎಂದು ಹೇಳುತ್ತದೆ.ಇದೇ ಸಂದರ್ಭಕ್ಕೆ ಅನ್ವಯಿಸುವಂತೆ ೩೭೨ನೆಯ ವಿಧಿ/ಪರಿಚ್ಛೇದವು "ಭಾರತದ ಪ್ರಾಂತ್ಯಗಳಲ್ಲಿ ಈಗಾಗಲೇ ಸಂವಿಧಾನದ ಅನುಷ್ಠಾನವು ಆರಂಭಗೊಳ್ಳುವ ಮುಂಚಿನಿಂದಲೇ ಚಾಲ್ತಿಯಲ್ಲಿರುವ ಎಲ್ಲಾ ಕಾನೂನುಗಳು ಸೂಕ್ತವಾದ ಶಾಸನ ಅಥವಾ ಇತರೆ ಸಮರ್ಥ ಸಂಸ್ಥೆಯಿಂದ ಹಿಂತೆಗೆದುಕೊಳ್ಳುವಿಕೆ ಅಥವಾ ತಿದ್ದುಪಡಿಗೊಳಗಾಗುವಿಕೆ ಅಥವಾ ಬದಲಾವಣೆಗೊಳಗಾಗುವಿಕೆಗೆ ಒಳಪಟ್ಟ ಹೊರತಾಗಿ ಇನ್ನು ಮುಂದೆಯೂ ಚಾಲ್ತಿಯಲ್ಲಿರುತ್ತವೆ ಎಂದು ಸೂಚಿಸುತ್ತದೆ.
ಇಲ್ಲಿ ಮೂಲಭೂತ ವಿರೋಧಾಭಾಸವಿದೆ. ಒಂದೆಡೆ ಗಮನಿಸಿದರೆ ಸಂವಿಧಾನವು ವೈಯಕ್ತಿಕ ಕಾನೂನಿನ ಮುಂದುವರಿಕೆಗೆ ಮಾನ್ಯತೆಯನ್ನು ನೀಡಿದೆ, ಇದಕ್ಕಾಗಿಯೇ ೪೪ನೆಯ ವಿಧಿ/ಪರಿಚ್ಛೇದವು ಭಾರತವು ಮುಂದೊಮ್ಮೆ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಹೊಂದಲಿದೆ ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತದೆ. ಮತ್ತೊಂದೆಡೆ ೧೪-೧೯ರವರೆಗಿನ ವಿಧಿ/ಪರಿಚ್ಛೇದಗಳಂತಹಾ ಸಮಾನ ಹಕ್ಕುಗಳನ್ನು ನೀಡಬೇಕೆಂದು ಹೇಳುವ ಅನೇಕ ಪರಿಚ್ಛೇದ/ವಿಧಿಗಳು ಅಸ್ತಿತ್ವದಲ್ಲಿವೆ. ವಿವಿಧ ಸಮೂಹಗಳಿಗೆ ಸಂಬಂಧಪಟ್ಟ ವೈಯಕ್ತಿಕ ಕಾನೂನುಗಳು ಮೂಲಸ್ವರೂಪವಾಗಿಯೇ ಅಸಮಾನತೆಯನ್ನು ಹೊಂದಿದ್ದು, ಉದಾಹರಣೆಗೆ ಮುಸಲ್ಮಾನರ ಕಾನೂನಿಗೆ ಸಂಬಂಧಪಟ್ಟ ಹಾಗೆ ಓರ್ವ ವಿಚ್ಛೇದಿತ ಮಹಿಳೆಯು ಹಿಂದೂ ಕಾನೂನಿಗೆ ಸಂಬಂಧಪಟ್ಟಂತೆ ಸಿಗುವ ಹಕ್ಕುಗಳಿಗಿಂತ ಭಿನ್ನವಾದ ಹಕ್ಕುಗಳಿಗೆ ಅರ್ಹಳಾಗಿರುತ್ತಾಳಾದುದರಿಂದ, ೧೫ನೆಯ ವಿಧಿ/ಪರಿಚ್ಛೇದವು ವೈಯಕ್ತಿಕ ಕಾನೂನುಗಳನ್ನು ಅಸಾಂವಿಧಾನಿಕವೆನ್ನುವಂತೆ ಬಿಂಬಿಸುತ್ತದೆ. ಇದಕ್ಕೂ ಮೇಲಾಗಿ, ೧೫ನೆಯ ವಿಧಿ/ಪರಿಚ್ಛೇದವು "ಲಿಂಗ"ದ ಮೇಲೆ ಆಧಾರಿತವಾಗಿ ಭೇದಭಾವ ಮಾಡಬಾರದೆಂಬುದನ್ನು ಕೂಡಾ ಸೂಚಿಸುತ್ತದೆ, ಮುಸಲ್ಮಾನರ ವೈಯಕ್ತಿಕ ಕಾನೂನುಗಳು ಅನೇಕ ಸಂದರ್ಭಗಳಲ್ಲಿ ಪುರುಷನಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ, ವಿಶೇಷವಾಗಿ ವಿಚ್ಛೇದನದ ವಿವಾದಗಳ ಹಾಗೂ ಬಹುವಿವಾಹಗಳ ವಿವಾದಗಳಲ್ಲಿ ಹೀಗಿರುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದರ ಮೂಲಭೂತ ಅರ್ಥ ಮುಸಲ್ಮಾನ ಮಹಿಳೆಯರು ಕೂಡಾ ನಾಲ್ಕು ಜನದವರೆಗೆ ಗಂಡಂದಿರನ್ನು ಹೊಂದಬಹುದು ಎಂಬುದಾಗಿರುತ್ತದೆ. ಇಂತಹಾ ವಿವಾದಾಂಶಗಳು ಸಂವಿಧಾನದಲ್ಲಿ ಪರಿಹರಿಸದೇ ಉಳಿದಿವೆ.
ಬಾಂಬೆ/ಮುಂಬಯಿ, ಮದ್ರಾಸು/ಸ್ ಮತ್ತು ಪಂಜಾಬ್‌ಗಳ ಉಚ್ಚ ನ್ಯಾಯಾಲಯಗಳೆಲ್ಲವೂ ೧೯೫೨ ಮತ್ತು ೧೯೬೮ರ ಅವಧಿಗಳಲ್ಲಿನ ಆರಂಭಿಕ ತೀರ್ಪುಗಳಲ್ಲಿ ಈ ವಿರೋಧಾಭಾಸವನ್ನು ಅರ್ಥೈಸುವ ಪ್ರಯಾಸದಾಯಕ ನೋವನ್ನು ಅನುಭವಿಸಿವೆ. ಇಂತಹಾ ಮೊಕದ್ದಮೆಗಳಲ್ಲಿನ ಅಂತಿಮ ತೀರ್ಪು, ಅವುಗಳಲ್ಲಿ ಒಂದು ಬಹುವಿವಾಹಕ್ಕೆ ಸಂಬಂಧಪಟ್ಟಿದುದಾಗಿತ್ತು, ಬಹಳವೇ ಸಂಕೀರ್ಣವಾದುದಾಗಿತ್ತು. ಒಂದೆಡೆಯಲ್ಲಿ ನ್ಯಾಯಾಲಯಗಳು ಮುಸಲ್ಮಾನರ ವೈಯಕ್ತಿಕ ಕಾನೂನು 'ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನು' ಆಗಿ ೩೭೨ನೆಯ ವಿಧಿ/ಪರಿಚ್ಛೇದದಡಿಯಲ್ಲಿ ಬರುವುದಿಲ್ಲ, ಏಕೆಂದರೆ ಮುಸಲ್ಮಾನರ ವೈಯಕ್ತಿಕ ಕಾನೂನು ತನ್ನ ಮೂಲಗಳನ್ನು ಖು/ಕುರಾನ್‌ನಲ್ಲಿ ಹೊಂದಿದ್ದು ಹಾಗಾಗಿ 'ಅವುಗಳನ್ನು ಅಂಗೀಕರಿಸಲಾಗಿದೆ ಅಥವಾ ಶಾಸನದ ಮೂಲಕ ಅಧಿಕೃತಗೊಳಿಸಲಾಗಿದೆ ಎಂದು ಹೇಳಲು ಬರುವುದಿಲ್ಲ' ಎಂಬುದನ್ನು ಕಂಡುಕೊಂಡವು. ೧೯೫೦ರ ನಂತರವೂ ಚಾಲ್ತಿಯಲ್ಲಿಯೇ ಉಳಿದಿರುವ ಪ್ರಧಾನ ವ್ಯವಸ್ಥೆಯಾದ ಆಂಗ್ಲೋ-ಮಹಮ್ಮದೀಯ ಕಾನೂನು ಕೇವಲ, ಖು/ಕುರಾನಿನ ಮೇಲೆ ಮಾತ್ರ ಆಧಾರವಾಗಿಲ್ಲ ಬದಲಿಗೆ ಷರೀಯತ್ ಕಾಯಿದೆಯ ಮೇಲೆ ಆಧಾರಿತವಾಗಿದೆ ಎಂಬುದನ್ನು ಕಡೆಗಣಿಸಲಾಗಿತ್ತು ಎಂಬುದನ್ನು ಇದು ನಿಸ್ಸಂದೇಹವಾಗಿ ಸ್ಪಷ್ಟಗೊಳಿಸುತ್ತದೆ. ಎರಡನೆಯದಾಗಿ, ನ್ಯಾಯಾಧೀಶರುಗಳು ೧೩ನೆಯ ವಿಧಿ/ಪರಿಚ್ಛೇದ ಹಾಗೂ ಅದರ ಕರ್ತವ್ಯವಾದ ಸಮಾನತೆಗಳು ವೈಯಕ್ತಿಕ ಕಾನೂನುಗಳನ್ನು ರದ್ದುಗೊಳಿಸಿಲ್ಲ, ಏಕೆಂದರೆ ಅದನ್ನು ರದ್ದುಗೊಳಿಸಿದ್ದೇ ನಿಜವಾಗಿದ್ದರೆ, ವೈಯಕ್ತಿಕ ಕಾನೂನುಗಳನ್ನು ಬೇರೆಡೆ ಎಲ್ಲಿಯೂ ಪ್ರಸ್ತಾಪಿಸಲಾಗಿರುತ್ತಿರಲಿಲ್ಲ. ಇವೆಲ್ಲವುಗಳದರ ಅಂತಿಮ ನಿರ್ಣಯವೆಂದರೆ ಸಂವಿಧಾನವು ೪೪ನೆಯ ವಿಧಿ/ಪರಿಚ್ಛೇದದಡಿಯಲ್ಲಿ ವೈಯಕ್ತಿಕ ಕಾನೂನುಗಳಿಗೆ ಮಾನ್ಯತೆ ನೀಡಿದೆ, ೧೩ನೆಯ ವಿಧಿ/ಪರಿಚ್ಛೇದದಡಿಯಲ್ಲಿ ಅವುಗಳನ್ನು ಅನೂರ್ಜಿತಗೊಳಿಸಿಲ್ಲ ಹಾಗೂ ೩೭೨ನೆಯ ವಿಧಿ/ಪರಿಚ್ಛೇದವು ವೈಯಕ್ತಿಕ ಕಾನೂನುಗಳಿಗೆ ಅನ್ವಯವಾಗುವುದಿಲ್ಲ ಏಕೆಂದರೆ ಅವುಗಳನ್ನು ಶಾಸನಗಳ ಮೂಲಕ ರೂಪಿಸದೇ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ರೂಪಿಸಲಾಗಿದೆ. ಆದ್ದರಿಂದ, ವೈಯಕ್ತಿಕ ಕಾನೂನುಗಳು ಸಮಾನತೆಯ ಬಗ್ಗೆ ಹೊರಡಿಸಿದ ಯಾವುದೇ ತೀರ್ಪುಗಳ ವ್ಯಾಪ್ತಿಗೆ ಬರುವುದಿಲ್ಲ. ಈ ತರಹದ ನ್ಯಾಯಾಲಯದ ಆಲೋಚನಾ ಲಹರಿಯು ೧೯೮೦ರ ದಶಕದವರೆಗೆ ಹಾಗೂ ಷಾಹ್ ಬಾನೋ ಮೊಕದ್ದಮೆಯವರೆಗೆ ಚಾಲ್ತಿಯಲ್ಲಿತ್ತು.
ಸಂವಿಧಾನ ಹಾಗೂ ಮುಸಲ್ಮಾನರ ವೈಯಕ್ತಿಕ ಕಾನೂನುಗಳ ಬಗ್ಗೆ ಅದರ ಮಹತ್ವದ ಬಗ್ಗೆ ಮತ್ತೆರಡು ವಿಚಾರಗಳನ್ನು ಗಮನಕ್ಕೆ ತರುವುದು ಸೂಕ್ತವೆನಿಸುತ್ತದೆ. ಅದರಲ್ಲಿ ಮೊದಲನೆಯದೆಂದರೆ ೨೫ನೆಯ ವಿಧಿ/ಪರಿಚ್ಛೇದ, ಅದರ ಪ್ರಕಾರ "ಯಾವುದೇ ಚಾಲ್ತಿಯಲ್ಲಿರುವ ಕಾನೂನಿನ ಕಾರ್ಯಾಚರಣೆಗೆ ಈ ಪರಿಚ್ಛೇದ/ವಿಧಿಯ ಯಾವುದೇ ಅಂಶವು ಪರಿಣಾಮ ಬೀರಬಾರದು". ೩೭೨ನೆಯ ವಿಧಿ/ಪರಿಚ್ಛೇದದಂತೆ ಇದೂ ಸಹಾ ಬ್ರಿಟಿಷರ ಆಡಳಿತಾವಧಿಯಲ್ಲಿ ಅನುಮೋದನೆಗೊಳಪಟ್ಟ ಕಾನೂನುಗಳ ಬಗ್ಗೆ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತದೆ, ಇವುಗಳಲ್ಲಿ ಅನೇಕವು ಸಂವಿಧಾನವು ಜಾರಿಯಾದ ನಂತರವೂ ಚಾಲ್ತಿಯಲ್ಲಿ ಉಳಿದಂತವು. ಇಷ್ಟೇ ಅಲ್ಲದೇ, ೪೪ನೆಯ ವಿಧಿ/ಪರಿಚ್ಛೇದವು ವ್ಯಕ್ತವಾಗಿಯೇ ಈ ಬಗ್ಗೆ, ಮುಸಲ್ಮಾನರಿಗೆ ಅವರ ವೈಯಕ್ತಿಕ ಕಾನೂನುಗಳಲ್ಲಿ ನೀಡಲಾದ ಪ್ರಮುಖ ರಕ್ಷಣೆಗಳಾದ ವಿವಾಹ, ಉತ್ತರಾಧಿಕಾರ ಮತ್ತು ವಿಚ್ಛೇದನಗಳಂತಹಾ ವಿಷಯಗಳನ್ನೊಳಗೊಂಡ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಪರಿಚಯಿಸುವುದನ್ನು ಸರ್ಕಾರಕ್ಕೆ ಕಡ್ಡಾಯಗೊಳಿಸುತ್ತದೆ. ತಾಹೀರ್ ಮಹಮೂದ್ ತಮ್ಮ ಅತ್ಯುತ್ತಮ ಅಧ್ಯಯನವಾದ, ಮುಸ್ಲಿಮ್ ಪರ್ಸನಲ್ ಲಾ ಎಂಬುದರಲ್ಲಿ, "೪೪ನೆಯ ವಿಧಿ/ಪರಿಚ್ಛೇದವು ಒಟ್ಟಿಗೆಯೇ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೆ ತರಲು ವಿಧಿಸಿಲ್ಲ ; ಬದಲಿಗೆ ಅದು ಅಂತಹಾ ಸಂಹಿತೆಯನ್ನು ಹಂತ ಹಂತವಾಗಿ ಜಾರಿಗೆ ತರುವ ಮುಕ್ತ ಸ್ವಾತಂತ್ರ್ಯವನ್ನು ನೀಡಿದೆ... ಏಕೆಂದರೆ ಮುಸಲ್ಮಾನರು ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳು 'ಸಾಮಾಜಿಕ ಸುಧಾರಣೆಗಳನ್ನು ಸ್ವಾಗತಿಸುವ ಹಾಗೂ ಅದನ್ನು ಕಾರ್ಯಗತಗೊಳಿಸಲು ತಯಾರಿರುವುದಿಲ್ಲ' ಹಾಗೂ ಅಂತಹಾ ಎಲ್ಲವನ್ನೂ ಒಳಗೊಂಡ ನಾಗರಿಕ ನೀತಿಸಂಹಿತೆಯ ಜಾರಿಗೆ ತರುವಿಕೆಯನ್ನು ಕಾನೂನಾತ್ಮಕವಾಗಿಯೇ ಮುಂದೂಡಬಹುದಾಗಿದೆ."
೧೯೫೦ರ ದಶಕದಲ್ಲಿ ಅಂಗೀಕಾರವನ್ನು ಪಡೆದುಕೊಂಡ ಹಿಂದೂ ನೀತಿಸಂಹಿತೆಯ ವಿಧೇಯಕವು ಮುಸಲ್ಮಾನರ ವೈಯಕ್ತಿಕ ಕಾನೂನಿನ ಇತಿಹಾಸದಲ್ಲೇ ನಿರ್ಣಾಯಕ ಘಟ್ಟವೆನಿಸಿಕೊಂಡಿತು. ಅದುವರೆಗೆ, ಮುಸಲ್ಮಾನರ ವೈಯಕ್ತಿಕ ಕಾನೂನು ಹಿಂದೂಗಳು ಹಾಗೂ ಇತರ ಧಾರ್ಮಿಕ ಸಮೂಹಗಳಿಗೆ ಇದ್ದ ಸಮಾನರೂಪವಾದ ಧಾರ್ಮಿಕ ಕಾನೂನುಗಳೊಂದಿಗೆ ಒಟ್ಟಿಗೆ ಅಸ್ತಿತ್ವದಲ್ಲಿತ್ತು. ಹಿಂದೂ ನೀತಿಸಂಹಿತೆಯ ವಿಧೇಯಕಗಳು ಹಿಂದೂ ಸಮುದಾಯವನ್ನು ಸಂಪೂರ್ಣವಾಗಿ ಜಾತ್ಯತೀತಗೊಳಿಸುವ ಉದ್ದೇಶದಿಂದ ರೂಪುಗೊಂಡ ಹಾಗೂ ಅದರ ಕಾನೂನುಗಳನ್ನು ಆಧುನಿಕ ಕಾಲದೆಡೆಗೆ ಕರೆತರುವ ಕಾಯಿದೆಗಳ ಸಂಗ್ರಹವಾಗಿತ್ತು, ಇದರ ಅರ್ಥ ಹಿಂದೂ ಕಾನೂನಿನ ರದ್ದತಿ ಹಾಗೂ ಪುರುಷರ ಹಾಗೂ ಮಹಿಳೆಯರ ಸಮಾನತೆಯನ್ನು ಬಿಂಬಿಸುವ ಹಾಗೂ ಇತರೆ ಪ್ರಗತಿಶೀಲ ಪಾಶ್ಚಿಮಾತ್ಯ ನಿಲುವುಗಳ ಮೇಲೆ ಆಧಾರಿತವಾದ ಕಾನೂನುಗಳನ್ನು ರೂಪುಗೊಳಿಸುವುದು ಹಾಗೂ ಜಾರಿಗೊಳಿಸುವುದಾಗಿತ್ತು. ೧೯೫೫ರ ಹಿಂದೂ ವಿವಾಹ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯಿಸಲಾಯಿತು. ಹಿಂದೂ ವಿವಾಹ ಕಾಯಿದೆಯ ಜಾರಿಗೊಳಿಕೆಯ ಉದ್ದೇಶವು ಹಿಂದೂಗಳಲ್ಲಿ ಬಹುವಿವಾಹಪದ್ಧತಿಯನ್ನು ತಡೆಗಟ್ಟುವುದು ಹಾಗೂ ವಿಚ್ಛೇದಿತ ಪತ್ನಿಗೆ ಜೀವನ ನಡೆಸುವ ವೆಚ್ಚ ಅಥವಾ ಜೀವನಾಂಶದ ಹಕ್ಕನ್ನು ವಿಸ್ತೃತಗೊಳಿಸುವದಾಗಿತ್ತು. ಮುಸಲ್ಮಾನರು, ಕ್ರೈಸ್ತರು, ಪಾರಸಿಗಳು ಹಾಗೂ ಯಹೂದಿಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಈ ಕಾಯಿದೆಯನ್ನು ಅನ್ವಯಿಸಲಾಯಿತು. ಯಹೂದಿಗಳು ತೀರ ಸಣ್ಣ ಪ್ರಮಾಣದ ಸಮುದಾಯವಾದುದರಿಂದ ಹಾಗೂ ಪಾರಸೀಗಳು ಕೂಡಾ ಅಂತಹವರೇ ಆದುದರಿಂದ ಮತ್ತು ಕ್ರೈಸ್ತರು ಈಗಾಗಲೇ ಆಧುನಿಕ [ಸೂಕ್ತ ಉಲ್ಲೇಖನ ಬೇಕು] ಅಥವಾ ಪ್ರಗತಿಗಾಮಿ ಕಾನೂನಿನ ಅಡಿಯಲ್ಲಿ [clarification needed] ಇದ್ದುದರಿಂದ, ಮುಸಲ್ಮಾನರು ವಸ್ತುತಃ ಆಧುನಿಕ ಕಲ್ಪನೆಗಳನ್ನು ಪ್ರತಿನಿಧಿಸುವ ಹಾಗೆ ಸುಧಾರಣೆಗಳಿಗೊಳಪಡದೇ ಉಳಿದ ಪ್ರತ್ಯೇಕ ಧಾರ್ಮಿಕ ಕಾನೂನನ್ನು ಹೊಂದಿದ ಏಕೈಕ ಭಾರೀ ಸಮುದಾಯವೆನಿಸಿಕೊಂಡರು.
ಮುಸಲ್ಮಾನರನ್ನು ಹೊರತುಪಡಿಸುವ ಕಾನೂನುಗಳನ್ನು ರೂಪಿಸುವ ಪದ್ಧತಿಯು "ಮುಸಲ್ಮಾನರ ವೈಯಕ್ತಿಕ ಕಾನೂನಿಗೆ (ಷರೀಯತ್) ಒಳಪಟ್ಟವರಿಗೆ ಸಂಬಂಧಪಟ್ಟಹಾಗೆ ಡೋವರ್ ಅಥವಾ ಮಹ್ರ್‌ಗಳನ್ನು" ಎಂದು ನಿರ್ದಿಷ್ಟವಾಗಿ ಹೊರತುಪಡಿಸಿದ ೧೯೬೧ರ ವರದಕ್ಷಿಣೆ ನಿಷೇಧ ಕಾಯಿದೆಯ ಅಂಗೀಕೃತಗೊಳಿಸುವಿಕೆಯೊಂದಿಗೆ ಇನ್ನೂ ಮುಂದುವರೆಯಿತು. ೧೯೭೩ರಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯನ್ನು ಪರಿಷ್ಕರಣಗೊಳಿಸುವ ಬಗ್ಗೆ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ, ಮುಸಲ್ಮಾನರನ್ನು ಒಳಗೊಂಡ ಮೊಕದ್ದಮೆಗಳಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡುವುದಕ್ಕೆ ಸಂಬಂಧಿಸಿದ ಹಾಗೆ, ನ್ಯಾಯಾಲಯವು ಮಹಿಳೆಗೆ ವೈಯಕ್ತಿಕ ಕಾನೂನಿನಡಿಯಲ್ಲಿ ಜೀವನಾಂಶವನ್ನು ಪಡೆದಿದ್ದಾಳೆಯೇ ಎಂಬುದರ ಬಗ್ಗೆ ಗಮನವನ್ನು ನೀಡಬೇಕು ಎಂಬುದನ್ನು ಎತ್ತಿ ಹೇಳಲಾಯಿತು. ಮುಸಲ್ಮಾನರ ಮಟ್ಟಿಗೆ, ಇದು ಇದ್ದಾ ದ ಅವಧಿ ಅಥವಾ ವಿಚ್ಛೇದನವಾದ ನಂತರದ ಮೂರು ತಿಂಗಳ ಅವಧಿ ಆಗಿತ್ತು. ಮೂಲಭೂತವಾಗಿ, ಸಂಸತ್ತು ಮತ್ತೊಮ್ಮೆ ಮುಸಲ್ಮಾನರನ್ನು ಹೊರತುಪಡಿಸಿಟ್ಟಿತು, ಈ ಕಾನೂನು ಇತರೆ ವಿಚ್ಛೇದಿತ ಮಹಿಳೆಯರಿಗೆ ಅನ್ವಯಿಸುವುದಾಗಿ ಅವರುಗಳಿಗೆ ಮೂರು ತಿಂಗಳಿಗಿಂತ ಹೆಚ್ಚಿನ ಮಟ್ಟಿಗೆ ಜೀವನಾಂಶವನ್ನು ನೀಡಬೇಕೆಂಬುದು ನಿಗದಿಯಾಯಿತು. ಈ ಅವಧಿಯ ಬಗೆಗಿನ ಷಹೀದಾ ಲತೀದ್'ರ ಟಿಪ್ಪಣಿಗಳಲ್ಲಿ "ಹಿಂದೂ ನೀತಿಸಂಹಿತೆ ವಿಧೇಯಕದ ಅಂಗೀಕಾರವಾದ ನಂತರ ಹಿಂದೂ ಪುರುಷರು ಮತ್ತು ಮಹಿಳೆಯರ ಹಕ್ಕುಗಳ ನಡುವಿನ ಕಾನೂನಿನ ಅಸಮಾನತೆಯನ್ನು ಹೋಗಲಾಡಿಸಿದಂತಾಗಿದೆ, ಮುಸಲ್ಮಾನ ಮಹಿಳೆಯರ ಹಾಗೂ ಪುರುಷರ ಹಕ್ಕುಗಳ ನಡುವಿನ ಅಲ್ಪವ್ಯತ್ಯಾಸದ/ಅಪ್ರಮುಖ ಅಸಮಾನತೆಯು ಹಾಗೆಯೇ ಉಳಿದಿದೆ" ಎಂಬ ಅಭಿಪ್ರಾಯವೂ ಸೇರಿದೆ.
೧೯೫೦–೧೯೮೫ರ ಅವಧಿಯು ಮುಸಲ್ಮಾನರ ವೈಯಕ್ತಿಕ ಕಾನೂನುಗಳನ್ನು ಶಾಸನಗಳಿಂದ ಹೊರತುಪಡಿಸುತ್ತಿದ್ದ ಹಾಗೂ ಅವುಗಳು ಸುಧಾರಣೆಗೆ ಒಳಪಡದೇ ಇದ್ದ ಅವಧಿ ಎಂದು ಸಂಗ್ರಹವಾಗಿ ಹೇಳಬಹುದಾದರೂ, ಇದೇ ಅವಧಿಯನ್ನು ಮುಸಲ್ಮಾನರ ಪಾಲಿಗೆ ಜಾತ್ಯತೀತತೆಯ ಮಾರ್ಗವು ತೆರೆದ ಅವಧಿಯೆಂದು ಕೂಡಾ ಪರಿಗಣಿಸಬಹುದಾಗಿದ್ದು, ಅಂತಹವುಗಳಲ್ಲಿ ಬಹು ಪ್ರಮುಖವಾದ ೧೯೫೪ರ ವಿಶೇಷ ವಿವಾಹ ಕಾಯಿದೆಯ ಅಂಗೀಕಾರವೂ ಸೇರಿದೆ. ಈ ಕಾಯಿದೆಯನ್ನು ರೂಪಿಸುವ ಹಿಂದಿನ ಉದ್ದೇಶವೇನೆಂದರೆ ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ನಾಗರಿಕ ವಿವಾಹ ಎಂದು ಕರೆಯಲ್ಪಡುವ ವ್ಯವಸ್ಥೆಯ ಮೂಲಕ ವೈಯಕ್ತಿಕ ಕಾನೂನುಗಳ ಹೊರತಾಗಿ ವಿವಾಹವಾಗುವ ಅವಕಾಶವನ್ನು ನೀಡುವುದು. ವಾಡಿಕೆಯ ಹಾಗೆಯೇ ಈ ಕಾನೂನನ್ನೂ ಕೂಡಾ ಜಮ್ಮು ಮತ್ತು ಕಾಶ್ಮೀರಗಳ ಹೊರತಾಗಿ ಸಂಪೂರ್ಣ ಭಾರತಕ್ಕೆ ಅನ್ವಯಿಸಲಾಗಿದೆ. ಹಲವು ವಿಚಾರಗಳಿಗೆ ಸಂಬಂಧಪಟ್ಟಂತೆ, ಈ ಕಾಯಿದೆಯು ೧೯೫೫ರ ಹಿಂದೂ ವಿವಾಹ ಕಾಯಿದೆಗೆ ಬಹುತೇಕ ತದ್ವತ್ತಾಗಿದ್ದು, ಹಿಂದೂಗಳಿಗೆ ಸಂಬಂಧಪಟ್ಟ ಕಾನೂನು ಎಷ್ಟರಮಟ್ಟಿಗೆ ಜಾತ್ಯತೀತಗೊಳಿಕೆಗೆ ಒಳಪಟ್ಟಿದೆ ಎಂಬುದರ ಕಲ್ಪನೆಯನ್ನು ನೀಡಬಲ್ಲುದಾಗಿದೆ. ಈ ವಿಶೇಷ ವಿವಾಹ ಕಾಯಿದೆಯು ಮುಸಲ್ಮಾನರಿಗೆ ತನ್ನ ಮೂಲಕ ವಿವಾಹವಾಗುವ ಅವಕಾಶವನ್ನು ನೀಡಿದ್ದು, ಆ ಮೂಲಕ ವೈಯಕ್ತಿಕ ಕಾನೂನುಗಳಲ್ಲಿ ಲಭ್ಯವಾಗದಂತಹಾ ಸಾಧಾರಣವಾಗಿ ಮುಸಲ್ಮಾನ ಮಹಿಳೆಯರಿಗೆ ಮಾತ್ರ ದೊರಕುವಂತಹಾ ರಕ್ಷಣೆಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಈ ಕಾಯಿದೆಯಡಿಯಲ್ಲಿ ಬಹುಪತ್ನಿತ್ವವು/ಬಹುವಿವಾಹವು ಕಾನೂನುಬಾಹಿರವಾಗಿದ್ದು, ಆಸ್ತಿಗಳ ಆನುವಂಶಿಕವಾಗಿ ಪಡೆಯುವಿಕೆ ಹಾಗೂ ಉತ್ತರಾಧಿಕಾರಗಳಿಗೆ ಸಂಬಂಧಪಟ್ಟ ಹಾಗೆ ಸಂಬಂಧಪಟ್ಟ ಮುಸಲ್ಮಾನರ ವೈಯಕ್ತಿಕ ಕಾನೂನುಗಳ ಬದಲಾಗಿ ಭಾರತೀಯ ಉತ್ತರಾಧಿಕಾರ ಕಾಯಿದೆಗೆ ಒಳಪಟ್ಟಿರುತ್ತಾರೆ. ವಿಚ್ಛೇದನವು ಕೂಡಾ ಜಾತ್ಯತೀತ ಕಾನೂನಿನ ಅನುಸಾರವೇ ನಡೆಯಬೇಕಾಗಿರುವುದಲ್ಲದೇ, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ವ್ಯವಸ್ಥೆಯು ನಾಗರಿಕ ಕಾನೂನು ಸೂಚಿಸಿದ ಪ್ರಕಾರ ನಡೆಯಬೇಕಾಗಿರುತ್ತದೆ.
ಮುಸಲ್ಮಾನ ನಾಯಕರುಗಳು ಈ ಮಸೂದೆಯನ್ನು ಉಗ್ರವಾಗಿ ವಿರೋಧಿಸಿದರು ಹಾಗೂ ಜಮೀಯತ್ ಅಲ್-ಉಲಾಮಾವು "ಓರ್ವ ಮುಸಲ್ಮಾನ ೧೯೫೪ರ ಈ ಕಾಯಿದೆಯಡಿಯಲ್ಲಿ ವಿವಾಹವಾದರೆ, ಆತ 'ಪಾಪಕಾರ್ಯವನ್ನು' ಮಾಡಿದಂತೆ ಹಾಗೂ ಆತನ ವಿವಾಹವು ಇಸ್ಲಾಮಿನ ದೃಷ್ಟಿಯಲ್ಲಿ ನ್ಯಾಯಸಮ್ಮತವಾದುದಲ್ಲ" ಎಂದು ಘೋಷಿಸಿತು. ೧೯೭೨ರ ವೇಳೆಗೆ, ಈ ಸಮುದಾಯವು ಜಾತ್ಯತೀತವಾದ ಮಕ್ಕಳ ದತ್ತು ಸ್ವೀಕಾರದ ಮಸೂದೆಯನ್ನು ಶಾಶ್ವತವಾಗಿ ಕೈಬಿಡುವಂತೆ ಮಾಡುವಷ್ಟು ರಾಜಕೀಯ ಪ್ರಭಾವವನ್ನು ಗಳಿಸಿಕೊಂಡಿತ್ತು. ಮುಸಲ್ಮಾನರ ಮಟ್ಟಿಗೆ, ಈ ಅವಧಿಯು ಅವರ ಧಾರ್ಮಿಕ ನಾಯಕಪಡೆಯು ಸರ್ಕಾರದ ಎಲ್ಲಾ ವಿಧೇಯಕಗಳ ಬಗ್ಗೆ ಸಂತುಷ್ಟವಾಗಿರದಿದ್ದರೂ, ಅದು ಸುಧಾರಣೆಗಳನ್ನು ತಡೆಹಿಡಿಯುವಲ್ಲಿ ಯಶಸ್ವಿಯಾದಂತಹಾ ಅವಧಿಯಾಗಿತ್ತು.
ವೈಯಕ್ತಿಕ ಕಾನೂನುಗಳ ಮೇಲೆ ನಡೆದ ಮುತ್ತಿಗೆ ೧೯೮೫-೨೦೦೫
ಬದಲಾಯಿಸಿಮುಸಲ್ಮಾನರ ವೈಯಕ್ತಿಕ ಕಾನೂನುಗಳ ಬೆಳವಣಿಗೆ/ಅಭಿವೃದ್ಧಿಯು ನಿರ್ವಾತದಲ್ಲಿ/ಕತ್ತಲಲ್ಲೇನೂ ನಡೆಯಲಿಲ್ಲ. ಸಂವಿಧಾನದ ೪೪ನೆಯ ವಿಧಿ/ಪರಿಚ್ಛೇದವನ್ನು ಹಾಗೂ ಅದರಲ್ಲಿ ಸೂಚಿಸಿರುವ ಕಡ್ಡಾಯ ಏಕರೂಪಿ ಸಂಹಿತೆಯನ್ನು ಹೇಗೆ ಕಡೆಗಣಿಸಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು/ಗ್ರಹಿಸಲು ಭಾರತದ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳನ್ನು ಗ್ರಹಿಸಬೇಕಾದುದು ಅತ್ಯಗತ್ಯ. ಭಾರತವು ಸರಿಸುಮಾರು ೧೨%ರಷ್ಟು ಮುಸಲ್ಮಾನರನ್ನು ಹೊಂದಿದ್ದು ಈ ಪ್ರಮಾಣವು ಸ್ವಾತಂತ್ರ್ಯವು ದೊರಕಿದಂದಿನಿಂದಲೂ ಇದೆ. ಆದ್ದರಿಂದ ೧೯೭೩ರಲ್ಲಿ, ಭಾರತವು ಸರಿಸುಮಾರು ೬೧ ದಶಲಕ್ಷ ಮುಸಲ್ಮಾನರನ್ನು ಹೊಂದಿತ್ತು. ಇಂದಿಗೆ ಈ ಪ್ರಮಾಣವು ೧೩೫ ದಶಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.[೧೦] ಹಲವು ರಾಜಕೀಯ ಪಕ್ಷಗಳನ್ನು ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮುದಾಯವಾಗಿ ಭಾರತದ ಮುಸಲ್ಮಾನರು ರಾಜಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ೧೯೯೦ರ ದಶಕದವರೆಗೆ ಕಾಂಗ್ರೆಸ್ ಪಕ್ಷದ ಕಪಿಮುಷ್ಠಿಯಲ್ಲಿದ್ದ ಭಾರತದ ಸರ್ಕಾರವು, ಭಾರತದ ಮುಸಲ್ಮಾನರ[ಸೂಕ್ತ ಉಲ್ಲೇಖನ ಬೇಕು], ಬಗ್ಗೆ ರಾಜಕೀಯದಲ್ಲಿ ಅವರನ್ನು ಒಳಗೊಳ್ಳುವುದರ ಮೂಲಕ ಅವರ ಬೆಂಬಲವನ್ನು ಪಡೆಯುವ ಉದ್ದೇಶದಿಂದ ತುಷ್ಟೀಕರಣದ/ಸಂತುಷ್ಟಗೊಳಿಸುವ ಕಾರ್ಯನೀತಿಯನ್ನು ಅನುಸರಿಸುತ್ತಿದೆ[clarification needed]. ಕಾಂಗ್ರೆಸ್ ಪಕ್ಷವು ಎಡಪಂಥೀಯವಾದುದರಿಂದ ಹಾಗೂ ಭಾರತದಲ್ಲಿರುವ ಮುಸಲ್ಮಾನರು ತಮ್ಮ ಹಿತಾಸಕ್ತಿಗಳನ್ನು ಹೆಚ್ಚಿನಮಟ್ಟಿಗೆ ಈಡೇರಿಸುತ್ತೇವೆಂದು ಹೇಳಿಕೊಳ್ಳುವ ಎಡಪಂಥೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದರಿಂದ, ಭಾರತದ ಮುಸಲ್ಮಾನರು ಹಾಗೂ ಭಾರತವನ್ನು ಬಹುಪಾಲು ಅವಧಿಯಲ್ಲಿ ಆಳಿದ ಗಣ್ಯ ಪಕ್ಷವೆಂದು ಪರಿಗಣಿಸಲ್ಪಡುವ ಪಕ್ಷದೊಂದಿಗೆ ಸಹಜೀವನದ ಸಂಬಂಧವು ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷದ ನಾಯಕರುಗಳಾದ ೧೯೫೦ರ ದಶಕದಲ್ಲಿ ನೆಹರೂರವರು ಹಾಗೂ ೧೯೭೦ರ ದಶಕ ಹಾಗೂ ೮೦ರ ದಶಕದ ಆದಿಯಲ್ಲಿ ಇಂದಿರಾ ಗಾಂಧಿಯವರುಗಳ ಹೆಸರು ಚಿರಪರಿಚಿತವಾಗಿದೆ.
ಹಿಂದೂ ರಾಷ್ಟ್ರೀಯತಾವಾದಿ RSS ಮತ್ತು ಶಿವ ಸೇನಾ ಸಂಘಟನೆಗಳೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದ್ದ ಒಂದು ಬಲಪಂಥೀಯ ಒಕ್ಕೂಟವಾಗಿದ್ದ ಭಾರತೀಯ ಜನತಾ ಪಾರ್ಟಿ (BJP) ಪಕ್ಷದ ಉದಯವು, ವೈಯಕ್ತಿಕ ಕಾನೂನುಗಳನ್ನು ಬದಲಿಸಿ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಅಳವಡಿಸುವ ಸವಾಲಿಗೆ ಸಂಬಂಧಿಸಿದಂತೆ ಪ್ರಧಾನವಾದ ಪ್ರಭಾವ ಬೀರುವಂತಹುದಾಗಿತ್ತು. ೧೯೯೯ರಲ್ಲಿ ಧರ್ಮದ ಬಗೆಗಿನ ತನ್ನ ನಿಲುವಿನ ಬಗ್ಗೆ ಅದು ನೀಡಿದ ಹೇಳಿಕೆ ಹೀಗಿತ್ತು : "೩೬. ನಾಗರೀಕತೆಯುಳ್ಳ, ಧರ್ಮಬುದ್ಧಿಯುಳ್ಳ ಹಾಗೂ ಜಾತಿ, ಧರ್ಮ, ವರ್ಗ, ವರ್ಣ/ಬಣ್ಣ, ಜನಾಂಗ ಅಥವಾ ಲಿಂಗಗಳ ಮೇಲೆ ಆಧಾರಿತವಾಗಿ ತಾರತಮ್ಯ ತೋರದ ಕೇವಲ ನಾಗರಿಕ ಶ್ರೇಣಿಯನ್ನು ಮಾತ್ರ ಹೊಂದುವ ; ಆಡಳಿತವನ್ನು ಹೊಂದುವುದಕ್ಕೆ ಬದ್ಧರಾಗಿದ್ದೇವೆ. ನಾವು ಸತ್ಯವಾಗಿಯೂ ಹಾಗೂ ಪ್ರಾಮಾಣಿಕವಾಗಿಯೂ 'ಸರ್ವ ಪಂಥ ಸಮಾಧಾರ'ದ (ಎಲ್ಲಾ ಪಂಥಗಳಿಗೂ ಸಮಾನ ಮನ್ನಣೆ ನೀಡುವಿಕೆ) ಹಾಗೂ ಸರ್ವರೂ ಸಮಾನರು ಎಂಬ ಕಲ್ಪನೆಯ ಭಾರತದ ಪರಂಪರೆಗೆ ನಿಷ್ಠವಾದ ಜಾತ್ಯತೀತತೆಯ ಕಲ್ಪನೆಯನ್ನು ಎತ್ತಿ ಹಿಡಿದು ಆಚರಣೆಯಲ್ಲಿಯೂ ತರುತ್ತೇವೆ. ನಾವು ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಳಿಗೆ ಬದ್ಧರಾಗಿದ್ದು, ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಪರಿಣಾಮಕಾರಿ ಹೆಜ್ಜೆಗಳನ್ನು ಇಡಲಿದ್ದೇವೆ."
ಈ ರಾಜಕೀಯ ಧ್ಯೇಯವು ಸ್ವಲ್ಪಮಟ್ಟಿಗೆ ಮಸುಕಾಗಿದ್ದು, ಇದರ ಉದ್ದೇಶವು ಇಂತಹುದೇ ಎಂದು ಸ್ಪಷ್ಟವಾಗಿ ಹೇಳಲು ಕಷ್ಟಸಾಧ್ಯವಾಗಿತ್ತಾದರೂ, ದೆಹಲಿಯಲ್ಲಿನ ಪಕ್ಷದ ವಕ್ತಾರ ಮುಖ್ತಾರ್ ಅಬ್ಬಾಸ್‌ರ ಸಂದರ್ಶನದಿಂದ ತಿಳಿದುಬಂದ ಪ್ರಕಾರ, ಇವರ ಗುರಿಯು ಮುಸಲ್ಮಾನರ ವೈಯಕ್ತಿಕ ಕಾನೂನುಗಳ ಕೂಲಂಕುಷ ತಿದ್ದುಪಡಿ ಅಥವಾ ರದ್ದುಗೊಳಿಸುವುದಾಗಿತ್ತು ಎಂಬುದು ಸುಸ್ಪಷ್ಟ. ಬಹುಮಟ್ಟಿಗೆ ಸಂಭವನೀಯವಾಗಿ, ಇದು ೪೪ನೆಯ ವಿಧಿ/ಪರಿಚ್ಛೇದದ ಏಕರೂಪ ನಾಗರಿಕ ನೀತಿಸಂಹಿತೆಯನ್ನು ರಚಿಸುವ ಕಡ್ಡಾಯ ವಿಧಿಯನ್ನು ಪಾಲಿಸುವ ರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯಿತ್ತು. BJP ಪಕ್ಷವು ಮತಗಳಿಕೆಯಲ್ಲಿನ ತಮ್ಮ ಪಾಲನ್ನು ಸ್ಥಿರ ಪ್ರಮಾಣದಲ್ಲಿಯೇ ಹೆಚ್ಚಿಸಿಕೊಳ್ಳುತ್ತಾ ಬಂದಿತ್ತು ಹಾಗೂ ೧೯೯೬ರಲ್ಲಿ ಪ್ರಧಾನ ಮಂತ್ರಿಯ ಸ್ಥಾನವನ್ನು ತನ್ನದಾಗಿಸಿತ್ತು ಹಾಗೂ ಮತ್ತೆ ೧೯೯೮–೨೦೦೪ರ ಅವಧಿಯಲ್ಲಿಯೂ ಕೂಡಾ ಆ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ರಾಜಕೀಯವನ್ನು ಹಿನ್ನೆಲೆಯಾಗಿಟ್ಟುಕೊಂಡು, ನಾವು ಈ ಅವಧಿಯಲ್ಲಿನ ಮುಸಲ್ಮಾನರ ವೈಯಕ್ತಿಕ ಕಾನೂನುಗಳಲ್ಲಿನ ಬದಲಾವಣೆಗಳು ಹಾಗೂ ಸುಧಾರಣೆಯ ಪ್ರಯತ್ನಗಳ ಕುರಿತು ಅವಲೋಕಿಸಬಹುದು.
ಷಾಹ್ ಬಾನೋ vs. ಮೊಹಮ್ಮದ್ ಅಹ್ಮದ್ ಖಾನ್‌ರ ಮೊಕದ್ದಮೆಯು ಭಾರತೀಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ವಿಭಾಗ ೧೨೫ರ ಅನುಸಾರ ವಿಚ್ಛೇದಿತೆ ಷಾಹ್ ಬಾನೋಳು ಜೀವನ ವೆಚ್ಚದ ಪಡೆಯುವಿಕೆಗೆ ಅರ್ಹಳಾಗಿದ್ದಾಳೆಯೋ ಅಥವಾ ಇಲ್ಲವೋ ಎಂಬುದನ್ನು ನಿರ್ಣಯಿಸಲು ಏಪ್ರಿಲ್ ೨೩, ೧೯೮೫ರಂದು ನಡೆಯಿತು. ಬಾನೋಳು ಓರ್ವ ೭೩ ವರ್ಷ ವಯಸ್ಸಿನ ಮುಸಲ್ಮಾನ ವೃದ್ಧೆಯಾಗಿದ್ದು ಆಕೆಯ ಪತಿ ಆಕೆಯನ್ನು ತ್ರಯ ತಲಾಖ್ ಎಂಬ "ನಾನು ನಿನ್ನಿಂದ ವಿಚ್ಛೇದನ ಪಡೆಯುತ್ತಿದ್ದೇನೆ" ಎಂದು ಮೂರು ಬಾರಿ ಮೂರು ಅವಧಿಗಳಲ್ಲಿ ಘೋಷಿಸುವುದರ ಮೂಲಕ ಏಕಪಕ್ಷೀಯವಾಗಿ ವಿಚ್ಛೇದನ ಪಡೆಯುವ ಗಂಡನ ಹಕ್ಕನ್ನು ಬಳಸಿಕೊಂಡು ವಿಚ್ಛೇದನ ನೀಡಿದ್ದ. ಆಕೆಯ ಪತಿಯು ಆಕೆಗೆ ಮುಸಲ್ಮಾನರ ಕಾನೂನು ನಿಗದಿಪಡಿಸಿದ್ದ ಅವಧಿಯ ನಂತರ ಆಕೆಯ ಜೀವನ ನಿರ್ವಹಣಾ ವೆಚ್ಚವನ್ನು ನೀಡುವುದನ್ನು ನಿಲ್ಲಿಸಿದಾಗ, ಆಕೆಯು ಅಪರಾಧ ಸಂಹಿತೆಯು ಮುಸಲ್ಮಾನರಿಗೂ ಕೂಡಾ ಅನ್ವಯಿಸಬೇಕು ಹಾಗೂ ಅದರ ಪ್ರಕಾರ ಮುಸಲ್ಮಾನರ ವೈಯಕ್ತಿಕ ಕಾನೂನಿನಡಿಯಲ್ಲಿ ತನಗೆ ನೀಡಲಾಗುವ ಜೀವನವೆಚ್ಚಕ್ಕಿಂತ ಹೆಚ್ಚಿನದನ್ನು ತಾನು ಪಡೆಯಲು ಅರ್ಹಳು ಎಂದು ಪ್ರತಿಪಾದಿಸಿ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಿದ್ದಳು. ನ್ಯಾಯಾಲಯವು ಬಹುಶಃ ಮುಸಲ್ಮಾನರ ಪ್ರತಿರೋಧವನ್ನು ನಿರೀಕ್ಷಿಸುತ್ತಲೇ, ಖು/ಕುರಾನ್‌ನಲ್ಲಿಯೂ ಕೂಡಾ ಸುರಾ ೨:೨೪೧-೨೪೨ದ ಉಲ್ಲೇಖದ ಮೂಲಕ ಮಹಿಳೆಯು ಜೀವನವೆಚ್ಚಕ್ಕೆ ಅರ್ಹಳಾಗಿರುತ್ತಾಳೆಂದು ವಾದಿಸಿತು. ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಹೇಳಿಕೆ ನೀಡಿ "ಮುಸಲ್ಮಾನ ಪತಿಗೆ ವಿಚ್ಛೇದಿತ ಪತ್ನಿಯ ಜೀವನಕ್ಕೆ ದಾರಿಮಾಡಿಕೊಡುವ ಅಥವಾ ಜೀವನ ನಿರ್ವಹಣೆಯ ವೆಚ್ಚವನ್ನು ನೀಡುವ ಜವಾಬ್ದಾರಿಯನ್ನು ಖು/ಕುರಾನ್ ಹೇರುತ್ತದೆ ಎಂಬುದರ ಬಗ್ಗೆ ಈ ಎಲ್ಲಾ ಆಯತ್‌ಗಳು(ಧಾರ್ಮಿಕ ಉಲ್ಲೇಖಗಳು) ಯಾವುದೇ ಅನುಮಾನಕ್ಕೂ ಆಸ್ಪದವೀಯುವುದಿಲ್ಲ.". ಇದರಲ್ಲಿನ ಆಸಕ್ತಿದಾಯಕ ವಿಚಾರವೆಂದರೆ ನ್ಯಾಯಾಲಯವು ಮುಸಲ್ಮಾನರಿಗೆ ಅಪರಾಧ ಸಂಹಿತೆಯನ್ನು ಅನ್ವಯಿಸಬೇಕು ಎಂದು ವಿಧಿಸಬೇಕೆಂದು ಮಾತ್ರವಲ್ಲದೇ, ಅದು ಖು/ಕುರಾನ್ ಅನ್ನು ಅರ್ಥೈಸುವ ಪ್ರಯತ್ನಗಳ ಅಗತ್ಯವಿದೆ ಎಂಬ ಭಾವವನ್ನೂ ವ್ಯಕ್ತಪಡಿಸಿತು. ಮುಸಲ್ಮಾನ ಪ್ರಾಧಾನ್ಯದ ಪ್ರದೇಶಗಳಲ್ಲಿ ಈ ತೀರ್ಪಿಗೆ ಪ್ರತಿಕ್ರಿಯೆಯು ನಿರೀಕ್ಷಿತವಾದಂತೆಯೇ ಇತ್ತು ಹಾಗೂ ಪ್ರಗತಿವಿರೋಧಿಯಾಗಿತ್ತು. ಪ್ರತಿಭಟನಾಕಾರರು ರಸ್ತೆಗಿಳಿದು ಪ್ರತಿಭಟಿಸಿದರು, ಇದರಿಂದ ಗಲಭೆ ದೊಂಬಿಗಳು ಉಂಟಾದವು, ಹಾಗೂ ಮುಸಲ್ಮಾನ ನಾಯಕರು ತಮ್ಮ ಸಮುದಾಯದ ವೈಯಕ್ತಿಕ ಕಾನೂನುಗಳನ್ನು ರಕ್ಷಿಸಲು 'ಎಲ್ಲವನ್ನೂ' ತ್ಯಾಗ ಮಾಡಲು ಸಿದ್ಧರಿರುವುದಾಗಿ ಉದ್ಘೋಷಿಸಿದರು. ಇಂದಿರಾರ ಪುತ್ರ ರಾಜೀವ್ ಗಾಂಧಿಯವರ ಸರ್ಕಾರವು, ಇದಕ್ಕೆ ತ್ವರಿತವಾಗಿ ಸ್ಪಂದಿಸಿ ೧೯೮೬ರಲ್ಲಿ ಮುಸಲ್ಮಾನ ಮಹಿಳೆಯರ (ವಿಚ್ಛೇದನಕ್ಕೆ ಸಂಬಂಧಪಟ್ಟ ಹಕ್ಕುಗಳು) ಕಾಯಿದೆಯನ್ನು ಅಂಗೀಕರಿಸಿತು ಮೂಲಭೂತವಾಗಿ ಅಪರಾಧ ಸಂಹಿತೆಯ ಹೊರತಾಗಿ ಮುಸಲ್ಮಾನ ಮಹಿಳೆಯರಿಗೆ ಜೀವನವೆಚ್ಚವನ್ನು ಕೊಡಿಸುವ, ಹಾಗೂ ಆ ಮೂಲಕ ಮುಸಲ್ಮಾನ ಮಹಿಳೆಯರು ಸಂವಿಧಾನಾತ್ಮಕ ಸಮಾನತೆಯ ಹಕ್ಕಿನಡಿಯಲ್ಲಿ ರಕ್ಷಣೆಯನ್ನು ಪಡೆಯುವಂತಿಲ್ಲ ಎಂಬುದನ್ನು ಖಚಿತಪಡಿಸಿತಲ್ಲದೇ, ಅವರು ಇನ್ನು ಮುಂದೆ ಅಪರಾಧ ಸಂಹಿತೆಯ ವಿಭಾಗ ೧೨೫ರ ಆಸರೆಯನ್ನು ಪಡೆಯುವ ಯಾವುದೇ ಅವಕಾಶವಿಲ್ಲ ಎಂದು ಸೂಚಿಸುವ ಕಾನೂನು ಇದಾಗಿತ್ತು. ಈ ಕಾಯಿದೆಯು Ms. ಬಾನೋಳು ನಿರೀಕ್ಷಿಸಿದ್ದ ಷರೀಯತ್ ಕಾಯಿದೆ, ಅಥವಾ ಮುಸಲ್ಮಾನರ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಈ ಹಿಂದೆ ನೀಡಲಾಗಿದ್ದ ವಿಚ್ಛೇದಿತೆಯ ಹಕ್ಕುಗಳಲ್ಲಿನ ಸುಧಾರಿತ ರೂಪವಾಗಿತ್ತು. ಮುಸಲ್ಮಾನ ಮಹಿಳೆಯರ (ವಿಚ್ಛೇದನಕ್ಕೆ ಸಂಬಂಧಪಟ್ಟ ಹಕ್ಕುಗಳ ರಕ್ಷಣೆ) ಕಾಯಿದೆಯು ಮಹ್ರ್ ಅನ್ನು ಹಿಂತಿರುಗಿಸುವುದು ಹಾಗೂ ಇದ್ದತ್ ಅವಧಿಯ ಮಾನಕ ಪ್ರಮಾಣದ ಜೀವನ ನಿರ್ವಹಣೆಯ ವೆಚ್ಚದ ನೀಡಿಕೆಯನ್ನು ನಿಗದಿಪಡಿಸಿತು ಹಾಗೂ ಈ ಕೆಳಕಂಡ ಆದೇಶಗಳನ್ನು ಕೂಡಾ ನೀಡಿತು :
- ಉಪವಿಭಾಗ(೧) ಮ್ಯಾಜಿಸ್ಟ್ರೇಟರು/ನ್ಯಾಯಾಧಿಪತಿಗಳು ವಿಚ್ಛೇದಿತ ಮಹಿಳೆಯು ಮರು ಮದುವೆಯಾಗಿಲ್ಲ ಹಾಗೂ ಇದ್ದತ್ ಅವಧಿಯ ನಂತರ ತನ್ನ ಜೀವನ ನಿರ್ವಹಣೆಯನ್ನು ಮಾಡಿಕೊಳ್ಳಲು ಶಕ್ತಳಲ್ಲ ಎಂಬುದನ್ನು ಮನಗಂಡರೆ, ಮುಸಲ್ಮಾನರ ಕಾನೂನಿನ ಪ್ರಕಾರ ಆಕೆಯ ಮರಣಾನಂತರ ಆಕೆಯ ಆಸ್ತಿಗಳ ಮೇಲೆ ಹಕ್ಕನ್ನು ಹೊಂದಬಹುದಾದಂತಹಾ ಆಕೆಯ ಸಂಬಂಧಿಕರಿಗೆ, ವಿಚ್ಛೇದಿತ ಮಹಿಳೆಯ ಅಗತ್ಯತೆಗಳಿಗೆ ಅನುಗುಣವಾಗಿ ಹಾಗೂ ಆಕೆಯ ವಿವಾಹದ ಅವಧಿಯಲ್ಲಿ ಆಕೆಯು ನಡೆಸುತ್ತಿದ್ದ ಜೀವನ ಮಟ್ಟಕ್ಕೆ ಅನುಗುಣವಾಗಿ ತಮಗೆ ಸೂಕ್ತ ಕಂಡ ಹಾಗೂ ಸರಿಯೆನಿಸಿದ ಪ್ರಮಾಣದ ಸುಸಂಗತವಾದ ಹಾಗೂ ಸಮಂಜಸವಾದ ಜೀವನಾಂಶವನ್ನು ಅವರು ನೀಡಲು ನಿರ್ದೇಶಿಸಬಹುದಾಗಿದೆ.
- ಉಪವಿಭಾಗ (೨)... ಮ್ಯಾಜಿಸ್ಟ್ರೇಟರು/ನ್ಯಾಯಾಧಿಪತಿಗಳು ೧೯೫೪ರ ವಕ್ಫ್ ಕಾಯಿದೆಯ ವಿಭಾಗ ೯ರ ಅಡಿಯಲ್ಲಿ ಅಥವಾ ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆಯು ವಾಸಿಸುವ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಇತರ ಯಾವುದೇ ಕಾನೂನಿನಡಿಯಲ್ಲಿ ಸ್ಥಾಪಿಸಲಾದ ವಕ್ಫ್ ರಾಜ್ಯ ಮಂಡಳಿಗೆ ಉಪವಿಭಾಗ (೧)ರಲ್ಲಿ ಸೂಚಿತವಾದ ಪ್ರಕಾರ ತಾವು ನಿಗದಿಪಡಿಸಿದಂತಹಾ ನಿರ್ವಹಣಾ ವೆಚ್ಚವನ್ನು ಪಾವತಿಸಲು ನಿರ್ದೇಶನ ನೀಡಬಹುದಾಗಿದೆ.
ಮೈನಾರಿಟಿ ರೈಟ್ಸ್ ಗ್ರೂಪ್ ಇಂಟರ್‌ನ್ಯಾಷನಲ್ ಸಂಸ್ಥೆಯು ಈ ಕಾಯಿದೆಯ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಕಾಯಿದೆಯು "ಲಿಂಗಾಧಾರಿತ ಸಮಾನತೆಯನ್ನು ಆಧಾರವಾಗಿಟ್ಟುಕೊಂಡ ಸಂವಿಧಾನಾತ್ಮಕ ಕಾನೂನು ಹಾಗೂ ಅದೇ ವಿಚಾರದ ಆಧಾರದಲ್ಲಿ ತಾರತಮ್ಯ ತೋರಿಸುವ ಧಾರ್ಮಿಕ ಕಾನೂನುಗಳ ನಡುವಿನ ಭಾರೀ ಅಂತರವನ್ನು ಎತ್ತಿ ತೋರಿಸುತ್ತಿದೆ" ಎಂದು ಹೇಳಿಕೆ ನೀಡಿತ್ತು. ತಮ್ಮ ಮುಸ್ಲಿಮ್ ವಿಮೆನ್ ಇನ್ ಇಂಡಿಯಾ ಎಂಬ ಗ್ರಂಥದಲ್ಲಿ ಷಹೀದಾ ಲತೀಫ್‌ರವರು ಮುಸಲ್ಮಾನ ಮಹಿಳೆಯರ "ಭವಿಷ್ಯವು ಯಾವತ್ತೂ ಸಂಪ್ರದಾಯಶೀಲ ವ್ಯಕ್ತಿಗಳಿಂದ ವ್ಯಥೆಯನ್ನು ಪಡೆಯುತ್ತಲೇ ಇದೆ, ಅವರ ಮಟ್ಟಿಗೆ ಇಸ್ಲಾಮ್ ಎಂದರೆ ಮಹಿಳೆಯರ ಹಕ್ಕುಗಳ ಬಗ್ಗೆ ಎಚ್ಚರಿಕೆಯ ನಿಯಮಗಳನ್ನೊಳಗೊಂಡ ಒಟ್ಟಾರೆ ನ್ಯಾಯಿಕ ವ್ಯವಸ್ಥೆಯಾಗಿರದೇ, ಮಹಿಳೆಯರಿಗೆ ತೊಂದರೆಯನ್ನುಂಟು ಮಾಡುವ ಮೂಲಕ ಕೇವಲ ಅಲ್ಪಸಂಖ್ಯಾತರಲ್ಲಿನ ಭೇದವನ್ನು ದೃಢಪಡಿಸುವ ಒಂದು ಅವಕಾಶವಾಗಿದೆ" ಎಂದು ಪ್ರತಿಪಾದಿಸುತ್ತಾರೆ.
ಷಾಹ್ ಬಾನೋ ಮೊಕದ್ದಮೆಯು ಈಗಲೂ ಭಾರತದಲ್ಲಿನ ಮುಸಲ್ಮಾನರ ವೈಯಕ್ತಿಕ ಕಾನೂನಿನ ಸವಾಲಿಗೆ ಸಂಬಂಧಪಟ್ಟಂತೆ ನಿರ್ಣಾಯಕ ಘಟ್ಟವಾಗಿಯೇ ಉಳಿದಿದೆ, ಏಕೆಂದರೆ ಉಚ್ಚ ನ್ಯಾಯಾಲಯಗಳ ಸಮಾನತೆಯ ಕರೆಯ ಹೊರತಾಗಿ ಶಾಸನಾಂಗವು ವೈಯಕ್ತಿಕ ಕಾನೂನುಗಳನ್ನು ಮಿತಿಗಳಿಂದ ಹೊರತುಪಡಿಸಲು ತನ್ನ ಅಧಿಕಾರ ವಲಯದ ಒಳಗಿನ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತದೆ ಎಂಬುದು ಸಾಬೀತಾಗಿ ಹೋಗಿದೆ. ಇದೆಲ್ಲದರ ಹಿಂದಿನ ತತ್ವವೇನೆಂದರೆ ಮುಸಲ್ಮಾನರಲ್ಲದ ಇತರರು ಹೇಳುವ ಹಾಗೆ ಮುಸಲ್ಮಾನರು ಸ್ವತಃ ತಾವೇ ಬದಲಾಗಿ ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರಬೇಕು ಹಾಗೂ ಭಾರತದ ಮುಸಲ್ಮಾನ ಜನಸಮೂಹ ಹಾಗೂ ಅದರ ವಕ್ತಾರರುಗಳಾದ ಅಖಿಲ ಭಾರತ ಮುಸಲ್ಮಾನರ ವೈಯಕ್ತಿಕ ಕಾನೂನು ಮಂಡಳಿ ಅಥವಾ ಜ/ಜುಮೀಯತ್ ಅಲ್-ಉಲಾಮಾದಂತಹಾ ಸಂಸ್ಥೆಗಳು ಬದಲಾವಣೆಗೆ ಓಗೊಡದ ಹೊರತು ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿದೆ. ಅದೇ ಸಮಯಕ್ಕೆ ಸರಿಯಾಗಿ, ಮುಸಲ್ಮಾನರು ಕೂಡಾ ತಮ್ಮ ಕಾನೂನನ್ನು ತಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೆಂಬ ವಸಾಹತುಶಾಹಿಯ ಅವಧಿಯಲ್ಲೇ ವ್ಯಕ್ತವಾದ ಭಾವವನ್ನು ವ್ಯಕ್ತಪಡಿಸಿದರು. ವೈಯಕ್ತಿಕ ಕಾನೂನುಗಳ ರಕ್ಷಣೆಯನ್ನು ಭಂಗಗೊಳಿಸುವ ಯಾವುದೇ ಪ್ರಯತ್ನವು ಈ ಉಪಖಂಡದಲ್ಲಿನ ತಮ್ಮನ್ನು, ಮುಸಲ್ಮಾನ ಸಂಸ್ಕೃತಿಯನ್ನೇ ನಾಶಗೊಳಿಸುತ್ತದೆ ಎಂಬ ಭೀತಿಯನ್ನು ಮುಸಲ್ಮಾನರು ವ್ಯಕ್ತಪಡಿಸುತ್ತಾರೆ. ಆದಾಗ್ಯೂ ಬಾನೋ ಮೊಕದ್ದಮೆಯು, ಬಲ ಪಂಥೀಯ ಹಿಂದೂ ಚಳುವಳಿಗಳನ್ನು ಕೂಡಾ ಅವರ ಬೆಂಬಲಕ್ಕೆ ಬರುವಂತೆ ಮಾಡಿತು, ಮೂಲಭೂತವಾಗಿ ಮಹಿಳೆಯರ ಹಕ್ಕುಗಳಿಗೆ ಸಂಬಂಧಪಟ್ಟಂತೆ ಅಲ್ಲವಾದರೂ ಬದಲಿಗೆ ಏಕರೂಪ ನಾಗರಿಕ ನೀತಿಸಂಹಿತೆಗೆ ಸಂಬಂಧಪಟ್ಟದ್ದಾಗಿತ್ತು. ಬಿಪನ್ ಚಂದ್ರ ತಮ್ಮ ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್ ಗ್ರಂಥದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಇಲ್ಲಿನ ಸಮಸ್ಯೆಯು "ಮುಸಲ್ಮಾನರ ಪ್ರಾತಿನಿಧಿತ್ವವು ಮಹಿಳೆಯರ ಹಕ್ಕುಗಳ ಸರಳ ಸಮಸ್ಯೆಯೊಂದಿಗೆ ಸೇರಿಕೊಂಡು ಜಟಿಲಗೊಳ್ಳುತ್ತಿದೆ ಹಾಗೂ ಮುಸಲ್ಮಾನ ಮಹಿಳೆಯರ ಹಕ್ಕುಗಳ ಬಗೆಗಿನ ಹಿಂದೂ ಕೋಮುವಾದಿ ಸಂಘಟನೆಗಳ ಉತ್ಸಾಹವು ಮಹಿಳಾ ಹಕ್ಕುಗಳ ಹೋರಾಟಗಾರರನ್ನು ಗೊಂದಲಕ್ಕೀಡು ಮಾಡಿ ಅಸಹಾಯಕರನ್ನಾಗಿ ಮಾಡಿದೆ." ಮೈನಾರಿಟಿ ರೈಟ್ಸ್ ಗ್ರೂಪ್ ಇಂಟರ್‌ನ್ಯಾಷನಲ್ ಸಂಸ್ಥೆಯು "ಮುಸಲ್ಮಾನರ ವೈಯಕ್ತಿಕ ಕಾನೂನುಗಳನ್ನು ಸ್ಥಾನಪಲ್ಲಟಗೊಳಿಸಿ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೆ ತರುವ ಬಗ್ಗೆ ಭಾರೀ ಹೋರಾಟ ನಡೆಸುವಾಗ BJP ಪಕ್ಷವು ಮಹಿಳಾ ಹಕ್ಕುಗಳ ಚರ್ಚೆಯನ್ನು ಬಳಸಿಕೊಂಡಿದೆ" ಎಂದು ಹೇಳಿಕೆ ನೀಡಿದಾಗ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ೧೯೮೬ರಿಂದ ಪ್ರಸಕ್ತ ಕಾಲದವರೆಗಿನ ಈ ಹೋರಾಟದ ಹಾದಿಯು ಈ ಮೂಲಭೂತ ಹೋರಾಟವನ್ನು ಪ್ರತಿಬಿಂಬಿಸಿದೆ. ಮುಸಲ್ಮಾನ ಮಹಿಳೆಯರ ಪರವಾಗಿ ಬಲಪಂಥೀಯ ಪಕ್ಷಗಳ ಅಭಿಯಾನಗಳು ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಹೋರಾಟ ಗುಂಪುಗಳಲ್ಲಿ ವಾಸ್ತವವಾಗಿ ಮುಸಲ್ಮಾನರ ವೈಯಕ್ತಿಕ ಕಾನೂನುಗಳಲ್ಲಿನ ಮಹಿಳೆಯರ ಮೇಲೆ ತೋರುವ ಭೇದದ ಬಗ್ಗೆ ತಮ್ಮ ಆಕ್ರೋಶವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿತಲ್ಲದೇ ಇದಕ್ಕೆ ಪ್ರತಿಕ್ರಿಯೆಯಾಗಿ ಮುಸಲ್ಮಾನರ ಸಂಪ್ರದಾಯವಾದಿ ಸಂಘಟನೆಗಳು ತಮ್ಮ ರಕ್ಷಣೆಗೆ ಸಂಬಂಧಪಟ್ಟಂತೆ ದೃಢವಾಗುತ್ತಾ ಹೋದವು. ಜೂನ್ ೨೦೦೦ರಲ್ಲಿ "೧೯೯೩ರಲ್ಲಿ ಒಂದು ದಿನ ಬೆಳ್ಳಂಬೆಳಗ್ಗೆ, ಅವರು [ನನ್ನ ಗಂಡ/ಪತಿ] ನನ್ನ ಬಳಿ ಬಂದು ತಲಾಖ್, ತಲಾಖ್ ಹಾಗೂ ತಲಾಖ್ ಎಂದು ಮೂರು ಬಾರಿ ಉಚ್ಛರಿಸಿದರು" ಎಂದು ತ್ರಯ ತಲಾಖ್ ವಿಧಾನದ ಮೂಲಕ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದ ಷಕೀಲಾ ಪರ್ವೀನ್‌ರ ಮೊಕದ್ದಮೆಯು ವಿಚಾರಣೆಗೆ ಬಂದಾಗ ೧೯೮೬ರ ಕಾನೂನು ಒರೆಗೆ ಹಚ್ಚಲ್ಪಟ್ಟಿತು. ನ್ಯಾಯಾಧೀಶ M.C. ಮಚಂದಾ/ಡಾರು ತಮ್ಮ ೧೯೭೩ರ ಭಾರತದಲ್ಲಿನ ವಿಚ್ಛೇದನದ ಕಾನೂನುಗಳು ಎಂಬ ಗ್ರಂಥದಲ್ಲಿ ತ್ರಯ ತಲಾಖ್‌ನ ಬಳಕೆಯನ್ನು "ಅನುಮೋದಿಸದಿರುವ ರೂಪ" ಎಂದು ಸ್ಪಷ್ಟಪಡಿಸಿದ್ದರೂ, ಅದೇ ರೂಪದಲ್ಲಿ ಷಾಹ್ ಬಾನೋಳ ಪತಿಯಿಂದ ಬಳಸಲ್ಪಟ್ಟಿದ್ದರೂ ಸಾಮಾನ್ಯ ಬಳಕೆಯಲ್ಲಿ ಉಳಿದುಕೊಂಡಿತ್ತು ಹಾಗೂ ಮಹಿಳಾ ಸಂಘಟನೆಗಳಿಂದ ಅಸಮರ್ಥನೀಯ ವಿಚ್ಛೇದನ ವಿಧಾನ ಎಂದು ಪರಿಗಣಿಸಲ್ಪಟ್ಟಿತ್ತು. ಮಚಂದಾ/ಡಾರು "ಈ ರೂಪದಲ್ಲಿ, ಮೂರು ಬಾರಿ ಉಚ್ಚಾರಣೆಗಳನ್ನು ಒಂದೇ ನೈರ್ಮಲ್ಯತೆಯ ಅವಧಿಯಲ್ಲಿ, ಒಂದೇ ಬಾರಿ ಅಥವಾ ಬೇರೆ ಬೇರೆ ಅವಧಿಗಳಲ್ಲಿ ಮಾಡಲಾಗುತ್ತದೆ" ಎಂದು ಟಿಪ್ಪಣಿಸುತ್ತಾರೆ. ಮಚಂದಾ/ಡಾರು ತಲಾಖ್‌ನ 'ಅನುಮೋದಿತ' ರೂಪವು "ಮೂರು ಬಾರಿ ಸತತವಾಗಿ ಉಚ್ಚಾರಣೆಗಳನ್ನು ನೈರ್ಮಲ್ಯದ ಮೂರು ಸತತ ಅವಧಿಗಳಲ್ಲಿ ಮಾಡುವುದನ್ನು" ಒಳಗೊಂಡಿರುತ್ತದೆ ಎಂದು ಎತ್ತಿ ತೋರಿಸುತ್ತಾರೆ. ಷಕೀಲಾ ಪರ್ವೀನ್‌ಳಿಗೆ ಆಕೆಯ ಮಾಹ್ರ್ ಮೊತ್ತವಾದ ೨೫೦೦rsಅನ್ನು ಪಾವತಿಸುವುದಕ್ಕೆ ಹೆಚ್ಚುವರಿಯಾಗಿ ತಿಂಗಳಿಗೆ ೮೦೦ ರೂಪಾಯಿಗಳ ವೆಚ್ಚವನ್ನು ನೀಡಲಿಕ್ಕೆ ಆಕೆಯ ಇದ್ದಾಹ್‌ದ ಅವಧಿಯಲ್ಲಿ (ಮೂರು ಹಯಾದ್/ರಜಃಸ್ರಾವದ ಅವಧಿಗಳು) ನಿಗದಿಪಡಿಸಲಾಗಿತ್ತು ವಾಸ್ತವವಾಗಿ ಈ ಮಾಹ್ರ್‌ಅನ್ನು ಭಾರತದಲ್ಲಿ ಅನೇಕ ಸಂದರ್ಭಗಳಲ್ಲಿ ಮದುವೆಯ ಸಮಯದಲ್ಲಿ ಪತ್ನಿಗೆ ನೀಡಲಾಗುವುದಿಲ್ಲ, ಇದು ಖು/ಕುರಾನ್‌ನ ಆಶಯಕ್ಕೆ ವಿರುದ್ಧವಾಗಿರುತ್ತದೆ. ಪರ್ವೀನಳು ಕಲಕತ್ತಾದ ಉಚ್ಚ ನ್ಯಾಯಾಲಯದಲ್ಲಿ ಅಹವಾಲನ್ನು ೧೯೮೬ರ ಮುಸಲ್ಮಾನ ಮಹಿಳೆಯರ ರಕ್ಷಣಾ(ವಿಚ್ಛೇದನಕ್ಕೆ ಸಂಬಂಧಪಟ್ಟ ಹಕ್ಕುಗಳ ರಕ್ಷಣೆ) ಕಾಯಿದೆಯಡಿಯಲ್ಲಿ ದಾಖಲಿಸಿದಳು. ಜುಲೈ ೨೦೦೦ರಲ್ಲಿ ನ್ಯಾಯಾಧೀಶ ಬಸುದೇವ್ ಪಾಣಿಗ್ರಾಹಿಯವರು "ಓರ್ವ ವಿಚ್ಛೇದಿತ ಮುಸಲ್ಮಾನ ಮಹಿಳೆಯು ಆಕೆಯ ಭವಿಷ್ಯತ್ತಿನ ಅಗತ್ಯತೆಗಳನ್ನು ಅವಲೋಕಿಸಿದ ನಂತರ ಆಕೆಗೆ ನೀಡಬೇಕಿರುವ ಜೀವನವೆಚ್ಚದ ಪ್ರಮಾಣವನ್ನು ನಿಗದಿಪಡಿಸಬಹುದಾಗಿರುತ್ತದೆ ಹಾಗೂ ಈ ಜೀವನವೆಚ್ಚವು ಕೇವಲ ಇದ್ದತ್ ಅವಧಿಗೆ ಮಾತ್ರವೇ ಸೀಮಿತವಾಗಿರುವುದಿಲ್ಲ. ೧೯೮೬ರ ಕಾಯಿದೆಯ ವಿಭಾಗ ೩ (I) (A)ದಲ್ಲಿ ಬಳಸಲಾದ ಪದಪುಂಜವು ತರ್ಕಬದ್ಧ ಹಾಗೂ ಸಮಂಜಸ ವ್ಯವಸ್ಥೆ ಹಾಗೂ ನಿರ್ವಹಣಾ ವೆಚ್ಚಗಳನ್ನು ನೀಡುವುದರ ಮೂಲಕ ವಿಚ್ಛೇದನದ ನಂತರವೂ ತನ್ನ ಜೀವನೋಪಾಯಕ್ಕೆ ಅಗತ್ಯವಾದದ್ದನ್ನು ಪಡೆದಿರುತ್ತಾಳೆ ಹಾಗೂ ಅವಳು ನಿರ್ಗತಿಕಳಾಗುವ ಅಥವಾ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳುವುದನ್ನು ಸೂಚಿಸುತ್ತದೆ" ಎಂದು ತೀರ್ಪು ನೀಡಿದ್ದರು. ಈ ತೀರ್ಪಿನಲ್ಲಿನ ತರ್ಕಬದ್ಧತೆಯನ್ನು ಬಾಂಬೆ/ಮುಂಬಯಿ ಮತ್ತು ಲಖ್ನೌಗಳ ನ್ಯಾಯಾಲಯಗಳಲ್ಲಿಯೂ ಕೂಡಾ ಅನ್ವಯಿಸಿದ್ದವು ಹಾಗೂ ೧೯೮೬ರ ಮುಸಲ್ಮಾನ ಮಹಿಳೆಯರ ಕಾಯಿದೆಯು ದೀರ್ಘ ಕಾಲದ ಚಾಲನೆಯಲ್ಲಿರುವ ಮೂಲಕ, ೧೯೮೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂಲಭೂತ ತೀರ್ಪು ಏನಿತ್ತೋ ಅದನ್ನು ಸಾಧಿಸಿದೆ ಎಂಬಂತೆ ತೋರುತ್ತದೆ, ಎಂದರೆ ಮುಸಲ್ಮಾನ ಮಹಿಳೆಯರು ತಮ್ಮ ಇದ್ದತ್ ಅವಧಿಯ ಹೊರತಾಗಿಯೂ ಸಹಾ ಜೀವನವೆಚ್ಚವನ್ನು ಪಡೆಯಬೇಕೆಂಬ ಅಂಶ.
ಮುಸಲ್ಮಾನ ಮಹಿಳೆಯರ ಕಾಯಿದೆಯಡಿಯಲ್ಲಿ ನೀಡಿದ್ದ ತೀರ್ಪುಗಳಿಗೆ ಹೆಚ್ಚುವರಿಯಾಗಿ, ಇದು ಭಾರತೀಯ ಸಂವಿಧಾನದಲ್ಲಿ ಸಮೂದಿಸಲಾಗಿರುವ ಲಿಂಗಾಧಾರಿತ ಸಮಾನತೆಯ ವಾಗ್ದಾನಕ್ಕೆ ವಿರುದ್ಧವಾಗಿ ತೋರುವುದರಿಂದ ಮಹಿಳಾ ಸಂಘಟನೆಗಳು ಈ ಕಾಯಿದೆಯ ಸಂವಿಧಾನಾತ್ಮಕತೆಯನ್ನು ಪ್ರಶ್ನಿಸಿದ್ದವು. ಈ ಅಹವಾಲುಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಪರಿಗಣಿಸಲಾಗಲಿಲ್ಲ, ಇದಕ್ಕೆ ಕಾರಣ ಪ್ರಾಯಶಃ ಮುಸಲ್ಮಾನ ಸಮುದಾಯದಲ್ಲಿ ಇದು ಉಂಟುಮಾಡಬಹುದಾದ ಪ್ರಕ್ಷುಬ್ಧ ಪರಿಸ್ಥಿತಿಯ ಭಯ. ವಾಸ್ತವವಾಗಿ ೧೯೯೭ರಲ್ಲಿ, ಒಮ್ಮೆ ನ್ಯಾಯಾಲಯದಲ್ಲಿ ಅಂತಹುದೊಂದು ಮೊಕದ್ದಮೆಯನ್ನು ವಿಚಾರಣೆಗೆ ಕರೆಯಬಹುದೆಂದು ತೋರುತ್ತಿದ್ದಾಗ ಪತ್ರಿಕೆಗಳಲ್ಲಿ ಮುಸಲ್ಮಾನರ "ಧರ್ಮವು ಅಪಾಯದಲ್ಲಿದೆ" ಎಂಬ ಹೇಳಿಕೆಯ ಲೇಖನವು ಪ್ರಕಟವಾಗಿತ್ತು. ಮತ್ತೊಂದು ಅಂತಹುದೇ ಸಂದರ್ಭದಲ್ಲಿ, ೧೯೯೪ರಲ್ಲಿ ಅಲಹಾಬಾದ್‌ನ ಓರ್ವ ನ್ಯಾಯಾಧೀಶರು ತ್ರಯ ತಲಾಖ್ ವಿಚ್ಛೇದನದ ಇಡೀ ಕಲ್ಪನೆಯೇ/ಮೂಲತತ್ವವೇ ಅಸಾಂವಿಧಾನಿಕವಾದುದು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದರು. ಆದಾಗ್ಯೂ ಈ ತೀರ್ಪನ್ನು ನ್ಯಾಯಾಲಯಕ್ಕೆ ಹೊರತಾದ ಸಮಸ್ಯೆಗಳಿಂದಾಗಿ ನೆನೆಗುದಿಗೆ ಹಾಕಲಾಯಿತು. ಈ ತೀರ್ಪನ್ನು ಬಾಂಬೆ/ಮುಂಬಯಿ ಉಚ್ಚ ನ್ಯಾಯಾಲಯವು ತ್ರಯ ತಲಾಖ್ ಕಾನೂನುಬಾಹಿರವೆಂದು ಕಂಡುಬಂದ ರಹೀಮ್ ಬೀ/ಬಾಯ್‌ನ ಮೊಕದ್ದಮೆಯಲ್ಲಿ ನೀಡಿದ ಪ್ರತ್ಯೇಕ ತೀರ್ಪಿನಿಂದ ಪುನರುಜ್ಜೀವನಗೊಳಿಸಿದಂತೆ ತೋರುತ್ತದೆ.
ಇದುವರೆಗಿನ ಚರ್ಚೆಯು ೧೯೮೫ರ ಷಾಹ್ ಬಾನೋ ಮೊಕದ್ದಮೆಯಿಂದ ಆರಂಭಿಸಿ ಮುಸಲ್ಮಾನರ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಹೊರಬಿದ್ದ ತೀರ್ಪುಗಳ ಒಂದು ತ್ವರಿತ ಸಮೀಕ್ಷೆಯಾಗಿತ್ತು. ಇದೆಲ್ಲದರ ಮೂಲ ಸಂದೇಶವು ಏನೆಂದರೆ ನಿಧಾನವಾಗಿ ಆದರೆ ಖಚಿತವಾಗಿ ನ್ಯಾಯಾಲಯಗಳು ಮಹಮ್ಮದೀಯ/ಇಸ್ಲಾಮಿನ ಕಾನೂನುಗಳ ಬಹುತೇಕ ಸುವ್ಯಕ್ತವಾಗಿರುವ ಪಕ್ಷಪಾತದ ಅಂಶಗಳನ್ನು ಹೊರಹಾಕುತ್ತಲಿವೆ. ತಲಾಖ್ ವಿಚ್ಛೇದನ ಹಾಗೂ ವಿಚ್ಛೇದಿತ ಮುಸಲ್ಮಾನ ಮಹಿಳೆಯರ ಹಕ್ಕುಗಳು ನ್ಯಾಯಾಂಗದ ಮರುಪರಿಶೀಲನೆಗೆ ಒಳಪಡುತ್ತಿವೆ. ಆದಾಗ್ಯೂ, ಬದಲಾಗದೇ ಉಳಿದಿರುವ ಆದರೆ ಸವಾಲನ್ನು ಎದುರಿಸಿಲ್ಲ ಎನ್ನುವಂತಿಲ್ಲದಿರುವ ಮತ್ತೊಂದು ಪ್ರಧಾನ ಸಮಸ್ಯೆಯೆಂದರೆ ಅದು ಬಹುಪತ್ನಿತ್ವ/ಬಹುವಿವಾಹ ಸಮಸ್ಯೆ. ಷರಿಯಾ ಕಾನೂನಿನ ಇನ್ಯಾವುದೇ ಭಾಗವು ಬಹುಪತ್ನಿತ್ವ/ಬಹುವಿವಾಹಕ್ಕೆ ಸಂಬಂಧಿಸಿದ ಕಾನೂನಿಗಿಂತ ಹೆಚ್ಚಿನ ತಾರತಮ್ಯವನ್ನು ಮಹಿಳೆಯರ ಮೇಲೆ ತೋರಿಸಿಲ್ಲವಾಗಿದೆ, ಅದಕ್ಕೆ ಸರಿಯಾಗಿ ಇದನ್ನು ಸ್ಪಷ್ಟವಾಗಿ ಖು/ಕುರಾನ್‌ನಲ್ಲಿಯೇ ಉಲ್ಲೇಖಿಸಲಾಗಿದೆಯಾದ್ದರಿಂದ ಇದೇ ಸಮಸ್ಯೆಯು ಬದಲಾಯಿಸಲು ತೀರ ಕಷ್ಟಕರವಾದ ಸಮಸ್ಯೆಯಾಗಿದೆ. ಭಾರತದಲ್ಲಿ, ಬಹುಪತ್ನಿತ್ವ/ಬಹುವಿವಾಹದ ಮೇಲಿನ ಕಾನೂನು ನಿಷ್ಕರುಣೆಯಿಂದ ಕೂಡಿದ ಸಡಿಲ ಕಾನೂನಾಗಿದೆ ಏಕೆಂದರೆ ಇದು ಪುರುಷನಿಗೆ ತಾನು ಒಬ್ಬಳು ಪತ್ನಿಗಿಂತ ಹೆಚ್ಚಿನವರನ್ನು ನೋಡಿಕೊಳ್ಳಬಲ್ಲೆ ಎಂಬುದನ್ನು ಸಾಬೀತುಪಡಿಸಬೇಕೆಂದೇನೂ ನಿಗದಿಪಡಿಸಿಲ್ಲ. ಆದ್ದರಿಂದ ತೀರ ಬಡವನಾದ ವ್ಯಕ್ತಿಯೂ ಕೂಡಾ ಯಾವುದೇ ಪರಿಶೀಲನೆಯು ಇಲ್ಲದೆಯೇ ಒಬ್ಬಳಿಗಿಂತ ಹೆಚ್ಚಿನ ಸಂಖ್ಯೆಯ ಪತ್ನಿಯರನ್ನು ಹೊಂದಬಹುದಾಗಿದೆ. ಭಾರತದಲ್ಲಿ ಬಹುಪತ್ನಿತ್ವ/ಬಹುವಿವಾಹ ಪದ್ದತಿಯನ್ನು ನಿಷೇಧಗೊಳಿಸಲು ಮಾಡಿದ ಪ್ರಯತ್ನಗಳ ಮಾರ್ಗಗಳು ಮೂರು ಮಗ್ಗಲುಗಳನ್ನು ಹೊಂದಿದ್ದವು. ಮೊದಲಿಗೆ ಮುಸಲ್ಮಾನ ಮಹಿಳೆಯರಿಂದ ಸಾಪೇಕ್ಷವಾಗಿ ತಮ್ಮ ಪತಿಗೆ ಇರುವ ಬಹುಪತ್ನಿತ್ವ/ಬಹುವಿವಾಹದ ಆಯ್ಕೆಗಳ ಬಗ್ಗೆ ನಿರ್ದಿಷ್ಟ ಸಮಸ್ಯೆಯ ರೂಪದಲ್ಲಿ ನ್ಯಾಯಾಲಯಕ್ಕೆ ಬರುತ್ತಿದ್ದ ದೂರುಗಳು ವಿರಳವಾಗಿದ್ದವು. ಎರಡನೆಯದಾಗಿ ಮುಸಲ್ಮಾನರ ವೈಯಕ್ತಿಕ ಕಾನೂನುಗಳನ್ನು ಟ್ಯುನೀಷಿಯಾ ಅಥವಾ ಟರ್ಕಿಗಳಲ್ಲಿನ ಕಾನೂನುಗಳ ಮಾರ್ಗದರ್ಶಿ ಸೂತ್ರಗಳ ಮೇಲೆ ಸುಧಾರಣೆಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದ ಅನೇಕ ಸಂಘಟನೆಗಳು ಹಾಗೂ ಪ್ರಗತಿಪರರು ಅಸ್ತಿತ್ವದಲ್ಲಿದ್ದವು. ಅಂತಿಮ ಹೋರಾಟದ ಮಗ್ಗಲು ಎಂದರೆ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಲು ಕರೆ ನೀಡುವುದು ಹಾಗೂ ಮುಸಲ್ಮಾನರ ವೈಯಕ್ತಿಕ ಕಾನೂನುಗಳು ಅನಮ್ಯ/ಬದಲಾವಣೆಗೆ ಹೊಂದಿಕೊಳ್ಳಲಾರದಂತಿರುವುದರಿಂದ, ಅದನ್ನು ನಿಷೇಧಿಸುವುದು.
"ಎಂಡ್ ಪಾಲಿಗಾಮಿ, ಮುಸ್ಲಿಮ್ ವುಮನ್ ಪ್ಲಿಯಾಸ್ ವಿತ್ SC (ಸರ್ವೋಚ್ಚ ನ್ಯಾಯಾಲಯ)" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ೨೦೦೧[ಸೂಕ್ತ ಉಲ್ಲೇಖನ ಬೇಕು]ರಲ್ಲಿ ಮಹಿಳೆಯರ ವಕೀಲೆ ಲಿಲಿ ಥಾಮಸ್‌ರವರು "ಬಹುಪತ್ನಿತ್ವ/ಬಹುವಿವಾಹದ ವಾಡಿಕೆ/ರಿವಾಜು ಮತ್ತು ಬಳಕೆ ಹಾಗೂ ನ್ಯಾಯಾಲಯದ ಹೊರತಾದ ವಿಚ್ಛೇದನಗಳ ಪದ್ಧತಿಯನ್ನು ಮುಸಲ್ಮಾನರು ಅನುಸರಿಸಲು ನೀಡಿರುವ ಅನುಮತಿಯು ಸಂವಿಧಾನದ ೧೪, ೧೫ ಮತ್ತು ೨೧ನೆಯ ವಿಧಿ/ಪರಿಚ್ಛೇದಗಳ ಮೂಲಕ ಎಲ್ಲಾ ನಾಗರಿಕರಿಗೆ ನೀಡಲಾಗಿರುವ ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ನಿರಾಕರಣೆಯಾಗಿದೆ ... [ಆಕೆಯು ನ್ಯಾಯಾಲಯಕ್ಕೆ ಇದನ್ನು ಘೋಷಿಸಲು ಕೋರಿದ್ದರು] ಮುಸಲ್ಮಾನ ಸಮುದಾಯವು ಪಾಲಿಸಿಕೊಂಡು ಬರುತ್ತಿರುವ ಬಹುಪತ್ನಿತ್ವ/ಬಹುವಿವಾಹ ಪದ್ಧತಿಯು ಕಾನೂನುಬಾಹಿರ, ಅಸಾಂವಿಧಾನಿಕ ಹಾಗೂ ಸಮಾನ ಕಾಲಿಕವಾಗಿ ಏಕವಿವಾಹ ಪದ್ಧತಿಗೆ ಪರ್ಯಾಯವಾಗಿ ಇರುವುದು ಅನೂರ್ಜಿತ" ಎಂದು ವಾದಿಸಿದರು ಎಂದು ವರದಿ ಮಾಡಿತು. ಇಷ್ಟೆಲ್ಲಾ ದಾವೆಗಳ ಹೊರತಾಗಿಯೂ, ನ್ಯಾಯಾಲಯವು ಮುಸಲ್ಮಾನರ ವೈಯಕ್ತಿಕ ಕಾನೂನು ಹಾಗೂ ಬಹುಪತ್ನಿತ್ವ/ಬಹುವಿವಾಹ ಪದ್ಧತಿಯ ಅದರ ಅಂಗೀಕಾರವನ್ನು ರದ್ದುಗೊಳಿಸಲಿಲ್ಲ.
೧೯೯೫ರಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಎರಡನೆಯ ಪತ್ನಿಯನ್ನು ವಿವಾಹವಾಗುವ ಉದ್ದೇಶದಿಂದ ಹಿಂದೂ ಪುರುಷರು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ನಾಲ್ಕು ಮೊಕದ್ದಮೆಗಳನ್ನು ಪರಿಶೀಲಿಸಲು ಕೋರಲಾಯಿತು. ಆ ಮೊಕದ್ದಮೆಯೆಂದರೆ ಸರಳಾ ಮುದ್ಗಲ್ v. ಭಾರತದ ಒಕ್ಕೂಟ, AIR ೧೯೯೫ SC ೧೫೩, ಈ ಮೊಕದ್ದಮೆಗಳಲ್ಲಿ ಪ್ರತಿಯೊಂದರಲ್ಲೂ, ಮೊದಲ ವಿವಾಹವನ್ನು ೧೯೫೪ರ ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಸಲಾಗಿತ್ತು. ನ್ಯಾಯಮೂರ್ತಿ ಕುಲ್‌ದೀಪ್ ಸಿಂಗ್‌ರವರು ಹಿಂದೆ ೧೯೪೫ರ ಮೊಕದ್ದಮೆಯೊಂದರ ವಿಚಾರಕ್ಕೆ ಮರಳಿ, ಅದರಲ್ಲಿ ನ್ಯಾಯಾಲಯವು ಹೀಗೆ ತೀರ್ಪು ಘೋಷಿಸಿತ್ತು "ಈ ರಾಷ್ಟ್ರವು ಒಂದು ಪಕ್ಷದವರು ಮಹಮ್ಮದೀಯರಾಗಿರುವ ಎಲ್ಲಾ ಮೊಕದ್ದಮೆಗಳಲ್ಲಿ ಮೊಹಮ್ಮದೀಯ ಕಾನೂನನ್ನು ಅನ್ವಯಿಸಲಾಗುವಂತಹಾ ಒಂದು ಮಹಮ್ಮದೀಯ/ಇಸ್ಲಾಮೀಯ ರಾಷ್ಟ್ರವಾಗಿದ್ದರೆ, ಫಿರ್ಯಾದಿಯು ಕೇಳಿಕೊಂಡಿದ್ದ ಘೋಷಣೆಯನ್ನು ಅವರ ಪರವಾಗಿ ಕೊಡಬಹುದಿತ್ತು. ಆದರೆ ಇದು ಒಂದು ಮಹಮ್ಮದೀಯ ರಾಷ್ಟ್ರವಲ್ಲ; ಹಾಗೂ ಮಹಮ್ಮದೀಯ ಕಾನೂನು ಇಲ್ಲಿ ನಾಡಿನ ಕಾನೂನು ಕೂಡಾ ಅಲ್ಲ." ನ್ಯಾಯಮೂರ್ತಿ ಸಿಂಗ್‌ರವರ ಈ ತೀರ್ಪು ಬಹುಮಟ್ಟಿಗೆ ಹಲವು ವಿಚಾರಗಳಿಗೆ ಸಂಬಂಧಪಟ್ಟಂತೆ ಗಮನವನ್ನು ಸೆಳೆಯುವಂತಹುದಾಗಿತ್ತು. ಮೊತ್ತಮೊದಲಿಗೆ ಅವರು ಎತ್ತಿ ತೋರಿಸಿದ್ದು "ಭಾರತದಲ್ಲಿ ಸಾರ್ವತ್ರಿಕ ಅನ್ವಯಕ್ಕೆ ಬಳಸಬಹುದಾದಂತಹಾ ಯಾವುದೇ ವೈವಾಹಿಕ ಕಾನೂನು ಇಲ್ಲ. ಶಾಸನೋಕ್ತ ಕಾನೂನಿನ ಹೊರತಾಗಿ ಒಂದು ವಿವಾಹದ ಮಾನ್ಯತೆಯು ಸಂಬಂಧಪಟ್ಟ ವ್ಯಕ್ತಿಗಳ ವೈಯಕ್ತಿಕ ಕಾನೂನುಗಳ ಕಟ್ಟುಪಾಡುಗಳಿಗೊಳಪಡುತ್ತವೆ." ಎರಡನೆಯದಾಗಿ ಅವರು "ನಿರ್ದಿಷ್ಟ ವೈಯಕ್ತಿಕ ಕಾನೂನುಗಳ ಕಟ್ಟಳೆಗಳಿಗೆ ಒಳಪಟ್ಟಂತೆ ಏರ್ಪಡಿಸಲ್ಪಟ್ಟ ವಿವಾಹವೊಂದನ್ನು ದಂಪತಿಗಳಲ್ಲೊಬ್ಬರು ಮತಾಂತರಗೊಂಡ, ಮತ್ತೊಬ್ಬರು ಅದಕ್ಕೆ ನಿರಾಕರಿಸಿದ ಸಂದರ್ಭದಲ್ಲಿ ಆ ಮತ್ತೊಂದು ಧರ್ಮದ ವೈಯಕ್ತಿಕ ಕಾನೂನುಗಳ ಅನ್ವಯದಿಂದಾಗಿ ರದ್ದುಪಡಿಸಲು ಸಾಧ್ಯವಿಲ್ಲ" ಎಂದೂ ತಿಳಿಸಿದರು. ಇದನ್ನು ಮುಕ್ತಾಯಗೊಳಿಸುತ್ತಾ "ಏಕಪತ್ನಿತ್ವ/ಏಕವಿವಾಹವು ಹಿಂದೂಗಳಿಗೆ ಕಾನೂನುಬದ್ಧವಾದುದರಿಂದ ಹಾಗೂ ಮುಸಲ್ಮಾನರ ಕಾನೂನು ಭಾರತದಲ್ಲಿ ನಾಲ್ಕು ಪತ್ನಿಯರನ್ನು ಅನುಮತಿಸುವುದರಿಂದ, ಮತಾಂತರಗೊಂಡ ಹಿಂದೂ ಪತಿಯು ಹಿಂದೂ ಕಾನೂನುಗಳ ಕಟ್ಟುಪಾಡುಗಳಿಂದ ನುಣುಚಿಕೊಳ್ಳಲು ಹಾಗೂ ದಂಡನಾರ್ಹ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಇಸ್ಲಾಮ್ ಧರ್ಮಕ್ಕೆ ಸೇರಿಕೊಳ್ಳುತ್ತಾನೆ" ಎಂದಿದ್ದರು.
ತಮ್ಮ ಸಾಕಷ್ಟು ದೀರ್ಘವೆನಿಸುವಂತಹಾ ತೀರ್ಪಿನಲ್ಲಿ ಅವರು, ಭಾರತದಲ್ಲಿ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೆ ತರುವ ಅಗತ್ಯದ ಕುರಿತು ೨೦ ಬಾರಿ ಪ್ರಸ್ತಾಪಿಸಿದ್ದರು. "ಇದುವರೆಗೆ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳೂ ಸತತವಾಗಿ ೪೪ನೆಯ ವಿಧಿ/ಪರಿಚ್ಛೇದದಡಿಯಲ್ಲಿ ಸಂವಿಧಾನಾತ್ಮಕ ಆಜ್ಞೆಯನ್ನು ಪಾಲಿಸುವ ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ವಿಫಲವಾಗಿವೆ" ಎಂದು ನೀಡಿದ ತಮ್ಮ ಅಭಿಪ್ರಾಯ/ಟೀಕೆಯಲ್ಲಿ ಸಿಂಗ್‌ರವರು ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೊಳಿಸುವ ಬಗೆಗಿನ ತಮ್ಮ ಕರೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ೨೦೦೩ರಲ್ಲಿ ಮುಖ್ಯ ನ್ಯಾಯಮೂರ್ತಿಯವರ V.N. ಖಾರೆಯವರ ಅಧೀನ ನಡೆದ ಜಾನ್ ವಾಲ್ಲಮಾಟ್ಟಮ್ V. ಭಾರತೀಯ ಒಕ್ಕೂಟ, AIR ೨೦೦೩ SC ೨೯೦೨, ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಇದೇ ರೀತಿಯ ಕರೆಯನ್ನು ತಮ್ಮ ಟಿಪ್ಪಣಿ/ಷರಾದಲ್ಲಿ "೪೪ನೆಯ ವಿಧಿ/ಪರಿಚ್ಛೇದವು ಭಾರತದ ಎಲ್ಲಾ ಪ್ರಾಂತ್ಯಗಳ ಎಲ್ಲಾ ನಾಗರಿಕರಿಗೂ ಅನ್ವಯಿಸುವ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಖಾತರಿಪಡಿಸುವ ಪ್ರಯತ್ನವನ್ನು ರಾಷ್ಟ್ರವು ಕೈಗೊಳ್ಳುವುದಕ್ಕೆ ಏರ್ಪಾಡನ್ನು ಮಾಡಿದೆ. ಸಂವಿಧಾನದ ೪೪ನೆಯ ವಿಧಿ/ಪರಿಚ್ಛೇದವನ್ನು ಕಾರ್ಯಗತಗೊಳಿಸಲಾಗಿಲ್ಲ ಎಂಬ ವಿಚಾರವು ತೀರ ವಿಷಾದಪಡುವಂತಹಾ ವಿಚಾರವಾಗಿದೆ ಎಂದು ಹೇಳಲು ನಾವು ಇಚ್ಛೆಪಡುತ್ತೇವೆ. ರಾಷ್ಟ್ರದಲ್ಲಿ ಅಳವಡಿಸಬೇಕಾದ ಸಾರ್ವತ್ರಿಕ ನಾಗರಿಕ ಸಂಹಿತೆಯನ್ನು ರೂಪುಗೊಳಿಸುವ ಕಾರ್ಯಕ್ಕೆ ಸಂಸತ್ತು ಇನ್ನೂ ಬಹಳಷ್ಟು ಕಾರ್ಯಗಳನ್ನು ಮಾಡಬೇಕಿದೆ. ಸಾರ್ವತ್ರಿಕ ನಾಗರಿಕ ನೀತಿಸಂಹಿತೆಯು ಸೈದ್ಧಾಂತಿಕ ನೆಲೆಗಳ ಮೇಲೆ ಆಧಾರಿತವಾಗಿ ಹುಟ್ಟಿಕೊಳ್ಳುವ ಅಸಮಂಜಸತೆಗಳನ್ನು ತೊಡೆದುಹಾಕುವ ಮೂಲಕ ರಾಷ್ಟ್ರದ ಏಕೀಕರಣದ ಉದ್ದೇಶದ ಈಡೇರಿಕೆಗೆ ಸಹಾಯವನ್ನು ಮಾಡಬಲ್ಲದು" ಎಂದು ಕೊಟ್ಟಿದ್ದರು. ೪೪ನೆಯ ವಿಧಿ/ಪರಿಚ್ಛೇದವನ್ನು ಇನ್ನೂ ಕಾರ್ಯಗತಗೊಳಿಸದಿರುವುದಕ್ಕೆ ಮುಖ್ಯ ಕಾರಣವನ್ನು ಅತ್ಯುತ್ತಮವಾಗಿ ಭಾರತದ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂರವರು ೧೯೫೪ರಲ್ಲಿ ಘೋಷಿಸಿದ್ದ "ಈ ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಈ ವಿಚಾರವನ್ನು ಕಾರ್ಯಗತಗೊಳಿಸಲು ಕಾಲವು ಪಕ್ವಗೊಂಡಿಲ್ಲ ಎಂದು ನನ್ನ ಅಭಿಪ್ರಾಯ" ಎಂಬ ಹೇಳಿಕೆ ಸ್ಪಷ್ಟಪಡಿಸುತ್ತದೆ." ವಸಾಹತುಶಾಹಿ ಆಡಳಿತಾನಂತರದ ಭಾರತವು ತಾನು ಅಸ್ತಿತ್ವದಲ್ಲಿರುವ ಬಹುಪಾಲು ಸಮಯ ನೆಹರೂರವರ ಕಾಂಗ್ರೆಸ್ ಪಕ್ಷದಿಂದಲೇ ಆಳ್ವಿಕೆಗೊಳಪಟ್ಟಿರುವುದು ಸುಸ್ಪಷ್ಟವಾಗಿರುವಾಗ ಹಾಗೂ ಆತನ ಮಗಳು ಹಾಗೂ ಮೊಮ್ಮಗ ಭಾರತದ ಸ್ವಾತಂತ್ರ್ಯದ ೫೮ ವರ್ಷಗಳ ಅವಧಿಯಲ್ಲಿನ ೩೫ ವರ್ಷಗಳ ಕಾಲ ಪ್ರಧಾನ ಮಂತ್ರಿಗಳ ಹುದ್ದೆಯಲ್ಲಿದ್ದರು ಎಂಬುದು ಅಷ್ಟೇ ಸ್ಪಷ್ಟವಿರುವಾಗ, ನೆಹರೂರವರ ಪಕ್ಷವು ಭಾರತದ ಮುಸಲ್ಮಾನರ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡುವ ವಿಚಾರದಲ್ಲಿ ಏಕೆ ಹೆಚ್ಚು ಮುಂದುವರೆಯಲಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಸುಲಭ.
ಭಾರತೀಯ ಸಂವಿಧಾನದ ೪೪ನೆಯ ವಿಧಿ/ಪರಿಚ್ಛೇದದ ಮುಂದುವರೆಯುತ್ತಿರುವ ವಿವಾದಗಳು ಹಾಗೂ ಅದರ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೊಳಿಸುವ ಬಗೆಗಿನ ಕರೆಗಳು ಸಮಯ ಕಳೆದಂತೆ ಹಿಂದೆ ಸರಿದಿಲ್ಲವಾದರೂ, ಸಂವಿಧಾನವನ್ನು ತಿದ್ದುಪಡಿಗೊಳಿಸುವ ಯಾವುದೇ ಪ್ರಯತ್ನಗಳೂ ಆಗಿಲ್ಲ. ಇದರಲ್ಲಿನ ಪ್ರಧಾನ ಪ್ರಶ್ನೆಯು "ಧರ್ಮಪ್ರಜ್ಞೆಯ ಸ್ವಾತಂತ್ರ್ಯ ಹಾಗೂ ಮುಕ್ತ ಉದ್ಯೋಗ/ಉದ್ಯಮ, ಧರ್ಮದ ಅನುಷ್ಠಾನ ಹಾಗೂ ಪ್ರಸರಣಗಳ ಹಕ್ಕು"ಗಳನ್ನು ಖಾತರಿಪಡಿಸುವ ೨೫ನೆಯ ವಿಧಿ/ಪರಿಚ್ಛೇದವು ಅದೇ ಸಂವಿಧಾನಕ್ಕೆ ಸೇರಿದ್ದೇ ಎಂಬುದಾಗಿದೆ.
೧೯೯೦ರ ದಶಕದ ಮಧ್ಯಭಾಗದಲ್ಲಿ ಭಾರತದ ಮಹಾರಾಷ್ಟ್ರ ರಾಜ್ಯದ ಆಡಳಿತವನ್ನು ನಡೆಸಿದ ಪಕ್ಷವಾದ ಶಿವ ಸೇನಾ ಪಕ್ಷವು ೧೯೯೫ರಲ್ಲಿ ತಾನು ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೆ ತರಲು ಇಚ್ಛಿಸಿದುದಾಗಿ ಹೇಳಿಕೊಂಡಿತ್ತು ಆದರೆ ಅಂತಹಾ ಯಾವುದೇ ಮಸೂದೆಯನ್ನು ಅಂಗೀಕರಿಸಿರಲಿಲ್ಲ. ಕೆಲ ಮುಸಲ್ಮಾನ ನಾಯಕರುಗಳು ಇದನ್ನು "ಮುಸಲ್ಮಾನರ ಪ್ರಾತಿನಿಧಿತ್ವವನ್ನು ನಾಶ ಮಾಡುವ ಪ್ರಯತ್ನ" ಎಂದು ಭಾವಿಸಿದರು. ಗೋವಾದಂತಹಾ ಸಣ್ಣ ರಾಜ್ಯದಲ್ಲಿ, ಹಳೆಯ ಪೋರ್ತು/ರ್ಚುಗೀಸರ ಕೌಟುಂಬಿಕ ಕಾನೂನುಗಳ ಮೇಲೆ ಆಧರಿಸಿದ ನಾಗರಿಕ ನೀತಿಸಂಹಿತೆಯೊಂದು ಅಸ್ತಿತ್ವದಲ್ಲಿದೆ ಮಾತ್ರವಲ್ಲದೇ ಮುಸಲ್ಮಾನರ ವೈಯಕ್ತಿಕ ಕಾನೂನನ್ನು ಅಲ್ಲಿ ನಿಷೇಧಿಸಲಾಗಿದೆ. ೧೯೬೧ರಲ್ಲಿ ಭಾರತವು ಗೋವಾವನ್ನು ವಶಪಡಿಸಿಕೊಂಡಿದುದರ ಪರಿಣಾಮ ಇದಾಗಿದೆ, ಆ ಸಮಯದಲ್ಲಿ ಭಾರತ ಸರ್ಕಾರವು ಅವರಿಗೆ ತಮ್ಮ ಕಾನೂನುಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ವಾಗ್ದಾನ ಮಾಡಿತ್ತು. ಗೋವಾದ ಕಾನೂನುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ವ್ಯಕ್ತಿಯಾದ ಮಾರ್ಗರೇಟ್ ಮಸ್ಕರೆನ್ಹಾಸ್‌ರು "ವಿವಾಹ, ವಿಚ್ಛೇದನ, ಮಕ್ಕಳ ರಕ್ಷಣೆ ಹಾಗೂ ಉತ್ತರಾಧಿಕಾರಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಗೋವಾದಲ್ಲಿ ಚಾಲ್ತಿಯಲ್ಲಿರುವ ಪೌರ ಕಾನೂನುಗಳು ಬಹುತೇಕ ಮಟ್ಟಿಗೆ ಜಾತಿ, ಜನಾಂಗೀಯತೆ ಅಥವಾ ಲಿಂಗಗಳನ್ನು ಆಧರಿಸಿ ಯಾವುದೇ ತಾರತಮ್ಯ ತೋರುವಂತಹುದಲ್ಲ" ಎಂದು ಬರೆಯುತ್ತಾರೆ. ೧೯೭೯ರ ಸಮ್ಮೇಳನವೊಂದರಲ್ಲಿ ಗೋವಾದ ಕಾನೂನು ವ್ಯವಸ್ಥೆಯ ಮೇಲೆ ಆಧಾರಿತವಾದ ಸಾರ್ವತ್ರಿಕ ಸಂಹಿತೆಯನ್ನು ಇಡೀ ಭಾರತಕ್ಕೆ ಅನ್ವಯಿಸುವ ಕರೆ ಕೇಳಿ ಬಂದರೂ ಗೋವಾ ರಾಜ್ಯವು ಆ ನಿಯಮದಿಂದ ಹೊರತಾಗಿ ಉಳಿಯಿತು. ಇಲ್ಲಿ ಪ್ರಸ್ತಾಪಿಸಲು ಅರ್ಹವಾದ ವಿಷಯವೆಂದರೆ ೧೯೭೮ರಲ್ಲಿ ಭಾರತವು ಬಾಲ್ಯ ವಿವಾಹ ಪ್ರತಿಬಂಧಕ ಕಾಯಿದೆಯನ್ನು ೨೧ ವರ್ಷದೊಳಗಿನ ವಯಸ್ಸಿನ ಪುರುಷರು ಹಾಗೂ ೧೮ ವರ್ಷದೊಳಗಿನ ವಯಸ್ಸಿನ ಮಹಿಳೆಯರು ಮದುವೆಯಾಗುವುದನ್ನು ತಡೆಯುವಂತೆ ತಿದ್ದುಪಡಿ ಮಾಡಲಾಯಿತು. ಹೀಗೆ ತಿದ್ದುಪಡಿಯಾದ ಕಾನೂನು ಸಣ್ಣದೊಂದು ಸಮಸ್ಯೆಯನ್ನು ತಂದೊಡ್ಡಿದೆ ೧೯೭೨ರ ಭಾರತೀಯ ಒಪ್ಪಂದ ಕಾಯಿದೆಯಡಿಯಲ್ಲಿ ಓರ್ವ ಪುರುಷನು ತನ್ನ ೧೮ನೆಯ ವಯಸ್ಸಿನಲ್ಲಿ ಮದುವೆಯ ಕರಾರನ್ನು ಮಾಡಿಕೊಳ್ಳಬಹುದಾಗಿದೆ. ಬಾಲ್ಯ ವಿವಾಹ ಕಾನೂನಿನ ೧೯೭೮ರ ಪರಿಷ್ಕರಣೆಯು ಈ ಒಪ್ಪಂದ ಕಾಯಿದೆಯನ್ನು ತಳ್ಳಿಹಾಕುತ್ತದೆ.
ಏಕರೂಪ ನಾಗರಿಕ ನೀತಿಸಂಹಿತೆಯೆಡೆಗೆ
ಬದಲಾಯಿಸಿಮುಸಲ್ಮಾನರ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವ ಇಚ್ಛೆಯುಳ್ಳವರು ಅಂತಹಾ ಸುಧಾರಣೆಗಳು ಸಾಧ್ಯವೆಂಬುದಕ್ಕೆ ಹಲವು ಸಂದರ್ಭಗಳಲ್ಲಿ ಮುಸಲ್ಮಾನ ರಾಷ್ಟ್ರಗಳನ್ನು ಉದಾಹರಣೆಯನ್ನಾಗಿ ತೋರಿದ್ದಾರೆ. ದ ಡೆವೆಲಪ್‌ಮೆಂಟ್ ಆಫ್ ಇಸ್ಲಾಮಿಕ್ ಲಾ ಎಂಬ ತಮ್ಮ ಅಧ್ಯಾಯದಲ್ಲಿ ಟೆರೆನ್ಸ್ ಫರಿಯಾಸ್‌ರು ಪಾಕಿಸ್ತಾನದ ೧೯೬೧ರ ಮುಸಲ್ಮಾನರ ಕೌಟುಂಬಿಕ ಕಾನೂನಿಗೆ ಸಂಬಂಧಪಟ್ಟ ಶಾಸನವನ್ನು ಉಲ್ಲೇಖಿಸಿ "ಎರಡನೆಯ ಪತ್ನಿಯನ್ನು ಹೊಂದಲು ಇಚ್ಛಿಸುವ ವ್ಯಕ್ತಿಯು ಸರ್ಕಾರದಿಂದ ನಿಯಮಿತವಾದ ಒಂದು ಮಧ್ಯಸ್ಥ ಸಮಿತಿಯಿಂದ ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯಗೊಳಿಸಿದೆ" ಎಂಬುದನ್ನು ಎತ್ತಿ ತೋರಿಸುತ್ತಾರೆ. ಪಾಕಿಸ್ತಾನಕ್ಕೆ ಸಂಬಂಧಪಟ್ಟ ಒಂದು ಆಸಕ್ತಿದಾಯಕ ವಿಚಾರವೇನೆಂದರೆ ೧೯೪೭ರವರೆಗೆ ಭಾರತ ಹಾಗೂ ಪಾಕಿಸ್ತಾನಗಳೆರಡೂ ತಮ್ಮ ಮುಸಲ್ಮಾನರನ್ನು ೧೯೩೭ರ ಷರೀಯತ್ ಕಾಯಿದೆಯ ಅನುಸಾರ ನಡೆಸಿಕೊಳ್ಳುತ್ತಿದ್ದವು. ಆದಾಗ್ಯೂ, ೧೯೬೧ರ ವೇಳೆಗೆ ಓರ್ವ ಮುಸಲ್ಮಾನ ರಾಷ್ಟ್ರವಾದ ಪಾಕಿಸ್ತಾನವು, ವಾಸ್ತವವಾಗಿ ತನ್ನ ಮುಸಲ್ಮಾನರ ಕಾನೂನುಗಳಲ್ಲಿ ಭಾರತಕ್ಕಿಂತ ಹೆಚ್ಚಾಗಿಯೇ ಸುಧಾರಣೆಗಳನ್ನು ತಂದಿದ್ದು, ಇದು ಇಂದಿಗೂ ಸತ್ಯವಾಗಿಯೇ ಉಳಿದಿದೆ. ಮುಷೀರ್ ಅಲ್-ಹಕ್ ಮತ್ತು ತಾಹೀರ್ ಮಹಮೂದ್ ಎಂಬ ಈರ್ವರು ಮುಸಲ್ಮಾನ ಲೇಖಕರು ಭಾರತದಲ್ಲಿನ ಮಹಮ್ಮದೀಯ ಕಾನೂನುಗಳ ಬಗೆಗಿನ ಈ ಸುಧಾರಣೆಗಳು ಬಹುಪತ್ನಿತ್ವ/ಬಹುವಿವಾಹ ಪದ್ಧತಿಯನ್ನು ನಿಷೇಧಿಸಿರುವ ಟ್ಯುನೀಷಿಯಾ ಮತ್ತು ಟರ್ಕಿಗಳಲ್ಲಿ ಕಾರ್ಯಗತಗೊಳಿಸಿದ್ದಂತಹವು ಎಂಬುದನ್ನು ಎತ್ತಿ ತೋರಿಸುತ್ತಾರೆ. ಇರಾನ್, ದಕ್ಷಿಣ ಯೆಮೆನ್ ಮತ್ತು ಸಿಂಗಪೂರ್‌ಗಳೆಲ್ಲವೂ ತಮ್ಮಲ್ಲಿನ ಮುಸಲ್ಮಾನರ ಕಾನೂನುಗಳಲ್ಲಿ ೧೯೭೦ರ ದಶಕದಲ್ಲಿಯೇ ಸುಧಾರಣೆಗಳನ್ನು ತಂದಿದ್ದವು, ಇರಾನ್ ಈ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಹಿಂದುಳಿದಿರಬಹುದಿತ್ತು ಎನ್ನಬಹುದಾಗಿದೆ. ಕೊನೆಯಲ್ಲಿ ಈ ಪ್ರತಿಪಾದನೆಗಳೆಲ್ಲದರ ಅಂತಿಮ ವಾದವು ಸ್ಪಷ್ಟವಾಗಿದೆ. ಮುಸಲ್ಮಾನ ರಾಷ್ಟ್ರಗಳು ಮುಸಲ್ಮಾನರ ವೈಯಕ್ತಿಕ ಕಾನೂನುಗಳನ್ನು ಸುಧಾರಣೆ ಮಾಡಬಹುದಾದರೆ, ಹಾಗೂ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳು ಸಂಪೂರ್ಣ ಜಾತ್ಯತೀತ ವ್ಯವಸ್ಥೆಗಳನ್ನು ಹೊಂದಬಹುದಾದರೆ, ಭಾರತೀಯ ಮುಸಲ್ಮಾನರೇಕೆ ಇನ್ನೂ ೧೯೩೦ರ ದಶಕದಲ್ಲಿ ಜಾರಿಗೊಳಿಸಿದ ಕಾನೂನುಗಳಡಿಯಲ್ಲಿ ಜೀವಿಸುತ್ತಿದ್ದಾರೆ?
ಈ ವಿಷಯದ ಬಗೆಗಿನ ಬಹುತೇಕ ಲೇಖನಗಳು ವೈಯಕ್ತಿಕ ಕಾನೂನುಗಳನ್ನು ತೊಡೆದುಹಾಕುವುದು ಅಥವಾ ಅವುಗಳನ್ನು ಸುಧಾರಿಸುವುದರ ಪರವಾಗಿರುವ ತಾಹೀರ್ ಮಹಮೂದ್‌ರಂತಹ ಮುಸಲ್ಮಾನ ವೈಚಾರಿಕ ಸಮುದಾಯದ ಅಲ್ಪಸಂಖ್ಯೆಯ ಬಗ್ಗೆ ಎತ್ತಿ ತೋರುತ್ತಾರೆ. ಆದಾಗ್ಯೂ, ಜ/ಜುಮೀಯತ್ ಅಲ್-ಉಲಾಮಾ ಹಾಗೂ ಇತರೆ ಸಂಪ್ರದಾಯಶರಣ ಮುಸಲ್ಮಾನ ಸಂಘಟನೆಗಳ ನೇತೃತ್ವದಲ್ಲಿ ಬಹುಸಂಖ್ಯೆಯ ಮುಸಲ್ಮಾನರು ಬಲವಾಗಿ ಪಟ್ಟು ಹಿಡಿದು ವೈಯಕ್ತಿಕ ಕಾನೂನುಗಳಲ್ಲಿ ತರಬಹುದಾದ ಯಾವುದೇ ಬದಲಾವಣೆಯ ವಿರುದ್ಧ ಹೋರಾಡಿದರು. ಮುಷೀರ್-ಅಲ್/ಉಲ್-ಹಕ್‌ರವರು ಇಸ್ಲಾಮ್ ಇನ್ ಸೆಕ್ಯುಲರ್ ಇಂಡಿಯಾ ಎಂಬ ತಮ್ಮ ಗ್ರಂಥದಲ್ಲಿ ಮೂಲಭೂತವಾದಿಗಳು, ಸೌಮ್ಯವಾದಿಗಳು ಹಾಗೂ ತೀವ್ರಗಾಮಿಗಳು ಎಂಬ ಮೂರು ಸಮುದಾಯಗಳನ್ನು ಗುರುತಿಸಿದ್ದರು. ತೀವ್ರಗಾಮಿ ಪಾಳೆಯದಲ್ಲಿದ್ದವರೆಂದರೆ ಒಟ್ಟಾರೆಯಾಗಿ ವೈಯಕ್ತಿಕ ಕಾನೂನುಗಳನ್ನು ತೊಡೆದು ಹಾಕಿ ಏಕರೂಪ ಸಂಹಿತೆಯನ್ನು ಅಳವಡಿಸಬೇಕೆಂದಿದ್ದವರು. ಫರಿಯಾಸ್ ಅವರನ್ನು "ಮುಸಲ್ಮಾನರಲ್ಲಿನ ಒಂದು ಸಣ್ಣ ಪಂಗಡವು ...ಬಹುತೇಕ ಪಾಶ್ಚಿಮಾತ್ಯ ತರಬೇತಿಯನ್ನು ಪಡೆದವರದ್ದು" ಎಂದು ಅವರನ್ನು ವರ್ಣಿಸುತ್ತಾರೆ. ಆಧುನಿಕರ ಪಾಳಯದಲ್ಲಿ, ಷರಿಯಾ ಕಾನೂನು ಸಮುದಾಯ ಅಥವಾ ಇಜ್ಮಾದ ಸಮ್ಮತಿಯಿದ್ದರೆ ಹೊಂದಿಕೊಳ್ಳಬಹುದಾದಂತಹುದು ಹಾಗೂ ಬದಲಾಯಿಸಬಹುದಾದಂತಹುದು ಎಂದು ನಂಬಿದ್ದ A.A. ಫೈಜೀರಂತಹವರನ್ನು ಕಾಣಬಹುದಿತ್ತು. ಮೂಲಭೂತವಾದಿಗಳು ಅಥವಾ 'ಸಂಪ್ರದಾಯಶರಣರು', ಈ ಹಿಂದೆಯೇ ಪ್ರಸ್ತಾಪಿಸಿದಂತೆ, ಮುಷೀರ್ ಉಲ್-ಹಕ್‌ರ ವಾದಸರಣಿ ಇಸ್ಲಾಮ್ ಇನ್ ಸೆಕ್ಯುಲರ್ ಇಂಡಿಯಾ ಎಂಬ ಗ್ರಂಥದಲ್ಲಿ ಪ್ರತಿಪಾದಿಸುವ ಹಾಗೆ ಟ್ಯುನೀಷಿಯಾ ಮತ್ತು ಟರ್ಕಿ ಅಥವಾ ಇರಾಕ್‌ನಂತಹಾ ರಾಷ್ಟ್ರಗಳಲ್ಲಿನ ಕಾನೂನುಗಳನ್ನು "ಅಲ್ಲಿನ ಸರ್ವಾಧಿಕಾರಿ ಧೋರಣೆಯ ಆಳುವವರಿಂದ ಬಲಾತ್ಕಾರವಾಗಿ ಹೇರಲ್ಪಟ್ಟಿದೆ" ಹಾಗೂ "ಯಾವುದೇ ಮುಸಲ್ಮಾನ ರಾಷ್ಟ್ರವು ಷರಿಯಾ ಮೂಲದ ಹೇಳಿಕೆಗಳ ಪ್ರಾಮಾಣ್ಯವನ್ನು ನಿರಾಕರಿಸಿದ ಉದಾಹರಣೆ ಇದುವರೆಗೆ ಇಲ್ಲ" ಎಂದಿದ್ದಾರೆ.
ಈ ಎಲ್ಲಾ ತರ್ಕಬದ್ಧ ವಾದಗಳ ನಂತರವೂ, ಈ ವಿಷಯದ ಬಗೆಗಿನ ಲೇಖನಗಳು ಬಹುತೇಕವಾಗಿ ೧೯೭೦ರ ದಶಕದ್ದಾಗಿರುತ್ತವೆ. ಮಹ್‌ಮೂದ್‌ರು ತಮ್ಮ ಕೃತಿ ಮುಸ್ಲಿಮ್ ಪರ್ಸನಲ್ ಲಾ ಅನ್ನು ೧೯೭೭ರಲ್ಲಿ ಪ್ರಕಟಪಡಿಸಿದರೆ ಉಲ್-ಹಕ್‌ರು ತಮ್ಮ ಕೃತಿಯನ್ನು ೧೯೭೨ರಲ್ಲಿ ರಚಿಸಿದರು. ಮತ್ತೂ ಆಧುನಿಕ ಸ್ರೋತಗಳೆಂದರೆ ಬಹುತೇಕವಾಗಿ ೧೯೮೦ರಲ್ಲಿ ಪ್ರಕಟವಾದ ದ ಮುಸಲ್ಮಾನ್ಸ್ ಆಫ್ ದಿ ಸಬ್‌ಕಾಂಟಿನೆಂಟ್ ಅಥವಾ ೧೯೮೮ರಲ್ಲಿ ಪ್ರಕಟವಾದ ದ ಮುಸ್ಲಿಮ್ಸ್ ಆಫ್ ಇಂಡಿಯಾ ಎಂಬಂತಹಾ ಲೇಖನಗಳ ಸಂಗ್ರಹವಾಗಿವೆ. ಭಾರತದಲ್ಲಿನ ಚರ್ಚೆಯ ಮಾರ್ಗವೇ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜಾತ್ಯತೀತವಾದಿಗಳು ಹಾಗೂ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ದಾರಿಯನ್ನು ತುಳಿಯುತ್ತಿರುವಂತಿದೆ. ಏಕರೂಪ ಸಂಹಿತೆಯ ಜಾರಿಗೆ ನೀಡಿದ ಕರೆಗಳು ೧೯೮೫ರಲ್ಲಿ ಷಾಹ್ ಬಾನೋ ಮೊಕದ್ದಮೆಯ ತೀರ್ಪು ಹೊರಬಂದ ನಂತರದ ನಡೆದ ಪ್ರತಿಭಟನೆಗಳು ಹಾಗೂ ಅಪಾಯಸೂಚನೆಗಳ ತರಹದ ಯಾವ ಪ್ರತಿಕ್ರಿಯೆಯನ್ನೂ ಪಡೆದಿಲ್ಲ. ಮುಸಲ್ಮಾನ ಸಮುದಾಯವು ಈ ಏಕರೂಪ ಸಂಹಿತೆಯನ್ನು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಬಹುತೇಕ ೬೦ ವರ್ಷಗಳಾದ ನಂತರ ಇದು ತೀರ್ಮಾನವಾಗಿ ಹೋದ ಸಂಗತಿ ಎಂಬ ಭಾವವನ್ನು ತಳೆದಿರಬಹುದಾದುದೂ ಅಸಂಭವವೇನಲ್ಲ.
ವೈಯಕ್ತಿಕ ಕಾನೂನುಗಳಿಗೆ ಮೂರು ಆಯ್ಕೆಗಳು ಮುಕ್ತವಾಗಿರುತ್ತವೆ. ಅದು ಈಗ ಇರುವ ಹಾಗೆಯೇ ಅಂದರೆ ಪ್ರಮುಖವಾಗಿ ಹಾಗೆ ಇರಬಹುದು, ೧೯೩೭ರ ಷರೀಯತ್ ಕಾಯಿದೆಯ ಕಾಲದ್ದಾಗಿ, ಆದರೆ ೧೯ನೆಯ ಶತಮಾನದ ಆಂಗ್ಲೋ-ಮುಹಮ್ಮದನ್ ಕಾನೂನುಗಳನ್ನು ಹೋಲುವಂತದ್ದಾಗಿರಬಹುದು. ಈ ಕಾನೂನುಗಳನ್ನು ಸುಧಾರಣೆಗೆ ಒಳಪಡಿಸಬಹುದು, ಆದರೆ ಹಾಗೆ ಮಾಡುವುದು ಸಂಪ್ರದಾಯಶರಣ ಮುಸಲ್ಮಾನರ ಸಂಘಟನೆಗಳಿಂದ ಕ್ರಿಯಾತ್ಮಕತೆಯನ್ನು ಬೇಡುತ್ತದೆ, ಇದು ಅಸಂಭವನೀಯವಾಗಿದೆ, ಏಕೆಂದರೆ ಅವರು ಈ ಬಗ್ಗೆ ಯಾವುದೇ ಇಚ್ಛಾಶಕ್ತಿಯನ್ನು ಪ್ರದರ್ಶಿಸಿರಲಿಲ್ಲ, ವಾಸ್ತವವಾಗಿ ಅವರು ಸುಧಾರಣೆಗಳು ಭಾರತದಲ್ಲಿನ ಮುಸಲ್ಮಾನರ ಸಂಸ್ಕೃತಿಯನ್ನು ಹಾಳುಮಾಡುತ್ತವೆ ಎಂದು ಅವುಗಳ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಕೊನೆಯ ಆಯ್ಕೆಯೆಂದರೆ, ಏಕರೂಪ ಸಂಹಿತೆಯು ಜಾರಿಯಾಗುವ ಸಾಧ್ಯತೆಯು ಹೆಚ್ಚುವ ಹಾಗೆ ಕಾಣಿಸುತ್ತಿದೆ. ಆದಾಗ್ಯೂ, ೧೯೭೦ರ ದಶಕದಲ್ಲಿನ ಜನರು ಕೂಡಾ ಹಾಗೆಯೇ ಹೇಳುತ್ತಿದ್ದರು ಎಂಬುದನ್ನು ಪರಿಗಣಿಸಿದರೆ ಹಾಗೂ ೧೯೮೫ರಲ್ಲಿ ಷಾಹ್ ಬಾನೋ ಪ್ರಕರಣವು ಅವರ ಆಶಯಗಳನ್ನು ಇನ್ನೂ ಎತ್ತರಿಸಿದ್ದರೂ, ಅದಿನ್ನೂ ದಶಕಗಳಷ್ಟು ದೂರವಿದೆ. ಸುಧಾರಣಾವಾದಿಗಳು ಪ್ರಮುಖವಾಗಿ ಪರಿಗಣಿಸುತ್ತಿರುವ ನ್ಯಾಯಿಕ ವಿಷಯಗಳು ಬಹುಪತ್ನಿತ್ವ/ಬಹುವಿವಾಹ ಪದ್ಧತಿ, ಮಹಿಳೆಯರಿಗೆ ವಿಚ್ಛೇದನದ ಹಕ್ಕು ಹಾಗೂ ಮಹಿಳೆಯರಿಗೆ ವಿಚ್ಛೇದನಾ ನಂತರ ಜೀವನಾಂಶ ಪಡೆಯುವ ಹಕ್ಕುಗಳನ್ನೇ ಒಳಗೊಂಡಿದ್ದವು. ಅವರುಗಳ ಮನೋಭಾವನೆಯ ಪ್ರಕಾರ ತಕ್ಷಣವೇ ಬಹುಪತ್ನಿತ್ವ/ಬಹುವಿವಾಹ ಪದ್ಧತಿಯನ್ನು ನಿಷೇಧಿಸಬೇಕು, ಹಾಗೂ ಮಹಿಳೆಯರಿಗೆ ವಿಚ್ಛೇದನದ ದಾವೆ ಹಾಕುವ ಪ್ರಕ್ರಿಯೆ ಸುಲಭವಾಗಬೇಕು ಮತ್ತು ಪತಿಯಂದಿರು ತ್ರಯ ತಲಾಖ್ ವಿಧಾನವನ್ನು ವಿಚ್ಛೇದನವನ್ನು ಬಳಸುವ ಅವಕಾಶವನ್ನು ನಿರಾಕರಿಸಬೇಕು ಹಾಗೂ ಜೀವನಾಂಶದ ಪ್ರಮಾಣವು ಮುಸಲ್ಮಾನರಲ್ಲದವರಿಗೆ ಎಷ್ಟಿದೆಯೋ ಅಷ್ಟನ್ನು ನಿಗದಿಪಡಿಸಬೇಕು. ಮೂಲಭೂತವಾಗಿ, ಅವರು ಏನನ್ನು ಪಡೆಯಲು ಇಚ್ಛಿಸುತ್ತಿದ್ದರೆಂದರೆ ೧೯೫೪ರ ವಿಶೇಷ ವಿವಾಹ ಕಾಯಿದೆಯು ಆ ಕಾಯಿದೆಯಡಿಯಲ್ಲಿ ಮದುವೆಯಾಗುವವರಿಗೆ ಐಚ್ಛಿಕವಾಗಿ ಮಾತ್ರವಾಗಿರುವುದರ ಬದಲು ಮುಸಲ್ಮಾನರಿಗೂ ಅನ್ವಯಿಸಬೇಕೆಂಬುದಾಗಿತ್ತು.
ಸರ್ವೋಚ್ಚ ನ್ಯಾಯಾಲಯದಲ್ಲಿ ಲಿಲಿ ಥಾಮಸ್‌ರವರು ವಾದಿಸಿದ ಮೊಕದ್ದಮೆಯೊಂದರಲ್ಲಿ, ವೈಯಕ್ತಿಕ ಕಾನೂನುಗಳಡಿಯಲ್ಲಿ ಮುಸಲ್ಮಾನರಲ್ಲಿ ಅನುಮತಿಸಲಾಗಿರುವ ವಿಚ್ಛೇದನವನ್ನು ಪಡೆಯುವ ಅನೇಕ 'ನ್ಯಾಯಾಲಯದ ಹೊರಗಿನ' ವಿಧಾನಗಳ ಕಡೆಗೆ ಗಮನವನ್ನು ಸೆಳೆದರು. ಇವುಗಳಲ್ಲಿ ಮೇಲೆ ಪ್ರಸ್ತಾಪಿಸಲಾದ ಕೇವಲ ಪುರುಷರು ಮಾತ್ರ ಬಳಸಬಹುದಾದ ತಲಾಖ್‌ನ ರೂಪವೂ ಸೇರಿದೆ. ಇಲಾ ಎಂಬ ವಿಚ್ಛೇದನ ರೂಪದಲ್ಲಿ ಮುಸಲ್ಮಾನ ಪುರುಷನು ನಾಲ್ಕು ತಿಂಗಳ ಕಾಲ ಲೈಂಗಿಕ ಸಂಪರ್ಕವನ್ನು ಕೈಗೊಳ್ಳದಿರುವ ಶಪಥವನ್ನು ಒಳಗೊಂಡಿರುತ್ತದೆ. ಝಿಹಾರ್ ಎಂಬುದು ಮತ್ತೊಂದು ರೂಪವಾಗಿದ್ದು ಅದು ತನ್ನ ಹೆಸರನ್ನು 'ಬೆನ್ನು' ಎಂಬ ಪದದಿಂದ ಪಡೆದಿದ್ದು ಅದರ ಅಕ್ಷರಾರ್ಥವೆಂದರೆ, ಪತಿಯು ತನ್ನ ಪತ್ನಿಯ ಬೆನ್ನು ತನ್ನ ತಾಯಿಯ ಬೆನ್ನನ್ನು ಹೋಲುತ್ತದೆ ಎಂದು ಭಾವಿಸಿದಾಗ ಅದು ನಿಷೇಧಿತ ಸಂಬಂಧವಾದುದರಿಂದ ವಿಚ್ಛೇದನಕ್ಕೆ ದಾರಿಯಾಗುತ್ತದೆ. ಪರಸ್ಪರ ಒಪ್ಪಿಗೆಯ ವಿಚ್ಛೇದನ ಅಥವಾ ಖುಲಾ ಎಂಬುದು ಪತ್ನಿಯು ತನ್ನನ್ನು ವಿವಾಹ ಸಂಬಂಧದಿಂದ ಬಿಡುಗಡೆಗೊಳಿಸಲು ಪರಸ್ಪರ ಒಪ್ಪಿತವಾದ ಮೊತ್ತವನ್ನು ಪತಿಗೆ ಪಾವತಿಸುವ ಮೂಲಕ ಜಾರಿಯಾಗುತ್ತದೆ. ಈಗಾಗಲೇ ಗಮನಿಸಿದಂತೆ, ಇವೆಲ್ಲಾ ವಿಧಾನಗಳು ಗಂಡನ ಆಣತಿಯಂತೆ ನಡೆಯುವಂತಹವಾಗಿದ್ದು ಅವುಗಳೆಲ್ಲಾ ೧೯೩೯ರ ಮುಸಲ್ಮಾನರ ವಿಚ್ಛೇದನ ಕಾಯಿದೆಯಡಿಯಲ್ಲಿ ಮುಸಲ್ಮಾನ ಮಹಿಳೆಯು ದಾವೆ ಹಾಕಿ ವಿಚ್ಛೇದನ ಪಡೆಯುವ ವಿಧಾನವನ್ನು ಒಳಗೊಂಡಿಲ್ಲವಾದುದರಿಂದ 'ನ್ಯಾಯಾಲಯದ ಹೊರಗಿನ'ವಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಇವೆಲ್ಲಾ ಕಾನೂನಿನ ವ್ಯಾಜ್ಯಗಳ ಹೊರತಾಗಿಯೂ ಭಾರತದಲ್ಲಿನ ಹಲವು ಮುಸಲ್ಮಾನ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗೆಗೆ ಕೂಡಾ ಅರಿವಿಲ್ಲದಿರುವುದು ಹಾಗೂ ಅನೇಕ ಮುಸಲ್ಮಾನ ವಿವಾಹಗಳನ್ನು ಭಾರತೀಯ ಕಾನೂನುಗಳ ಮಾತ್ರವಲ್ಲದೆ ಷರಿಯಾ ಕಾನೂನುಗಳ ಉಲ್ಲಂಘನೆಗಳನ್ನು ಮಾಡುವ ಮೂಲಕ ನಡೆಸಲಾಗುತ್ತದೆ. ಡೈವೋರ್ಸ್ ಅಂಡ್ ಮುಸ್ಲಿಮ್ ವಿಮೆನ್ ಎಂಬ ಪುಸ್ತಕ/ಗ್ರಂಥದಲ್ಲಿ ಅದರ ಲೇಖಕರು ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಗಳ ಬಗ್ಗೆ ಅನೇಕ ಅಧ್ಯಯನಗಳನ್ನು ನಡೆಸಿದ್ದಾರೆ.
ಮುರ್ಷಿದಾಬಾದ್ ನಗರದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಕೇವಲ ೪೪.೮೩%ರಷ್ಟು ಪೋಷಕರು ವಿವಾಹದ ವಿಚಾರದಲ್ಲಿ ತಮ್ಮ ಪುತ್ರಿಯರ ಒಪ್ಪಿಗೆಯನ್ನು ಪಡೆಯುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಇಂತಹಾ ಬಹುಪಾಲು ಸಂದರ್ಭಗಳಲ್ಲಿ, ಆ ಪುತ್ರಿಯರು ಇನ್ನೂ ತಮ್ಮ ಹದಿ ವಯಸ್ಸಿನಲ್ಲಿರುತ್ತಾರೆ ಹಾಗೂ ಕೆಲವೊಮ್ಮೆ ಇನ್ನೂ ಕಿರಿಯ ಅಂದರೆ ೧೦ ವರ್ಷದವರಷ್ಟೇ ಆಗಿರುತ್ತಾರೆ. ಅದೇನೇ ಆದರೂ, ಇದು ಏರ್ಪಾಟು ಮಾಡಿದ ವಿವಾಹಗಳು ತೀರಾ ಸಾಮಾನ್ಯವಾದ ಹಾಗೂ ಚಿಕ್ಕವಯಸ್ಸಿನ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಡುವುದು ಅಪರೂಪವಲ್ಲದ ರಾಷ್ಟ್ರವಾದ ಭಾರತ. ಇಂತಹಾ ಎಲ್ಲಾ ಸಂದರ್ಭಗಳಲ್ಲಿಯೂ ಗಮನಿಸಬೇಕಾದುದೆಂದರೆ ಸ್ಥಳೀಯ ರೂಢಿಗತ ಪದ್ಧತಿಗಳ ಸಮಸ್ಯೆಯು ಇಸ್ಲಾಮಿನ/ಮಹಮ್ಮದೀಯ ಕಾನೂನುಗಳ ಲಾಭವನ್ನು ಪಡೆದುಕೊಳ್ಳುತ್ತಿದೆ ಎಂಬುದು, ವಾಸ್ತವವಾಗಿ ೧೯೩೮ರ ಷರೀಯತ್ ಕಾನೂನನ್ನು ಅಂಗೀಕರಿಸಲು ಇದೇ ಸಮಸ್ಯೆಯು ಪ್ರಮುಖ ಕಾರಣವಾಗಿತ್ತು. ವರದಕ್ಷಿಣೆಗೆ ಸಂಬಂಧಿಸಿದಂತೆ ಅಂದರೆ ಮಾಹ್ರ್ ಅಲ್ಲ, ಮುಸಲ್ಮಾನ ಕಾನೂನಿನ ನೇರ ಉಲ್ಲಂಘನೆಯಾಗಿ ಮುಸಲ್ಮಾನರಲ್ಲಿ ಬಹುಪಾಲು ಜನರು ವರದಕ್ಷಿಣೆಯನ್ನು ಕೂಡಾ ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾಹ್ರ್‌ಗೆ ಸಂಬಂಧಿಸಿದಂತೆ ನೋಡುವುದಾದರೆ, ಇದನ್ನು ಸಾಧಾರಣವಾಗಿ ತೀರಾ ಹೆಚ್ಚಿನ ಮೊತ್ತವನ್ನು ನಿಗದಿಪಡಿಸುತ್ತಿದ್ದುದರಿಂದ ಪುರುಷರು ಅದನ್ನು ವಿವಾಹದ ಸಮಯದಲ್ಲಿ ಪತ್ನಿಗೆ ಕೊಡುವ ಯಾವ ಯೋಚನೆಯನ್ನೂ ಹೊಂದಿರುತ್ತಿರಲಿಲ್ಲ. ಬದಲಿಗೆ, ಈ ಮೊತ್ತವನ್ನು ಪತಿಯು 'ಖಾತರಿಯಾಗಿ' ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ. ಅಕಸ್ಮಾತ್ ವಿಚ್ಛೇದನವೇನಾದರೂ ನಡೆದರೆ, ಪತ್ನಿಯು ತನ್ನ ಮಾಹ್ರ್‌ಅನ್ನು ಹಿಂದಿರುಗಿಸಲು ಒತ್ತಾಯಿಸಬಹುದಾಗಿತ್ತು. ವಿಚ್ಛೇದನದ ಸಂದರ್ಭದಲ್ಲಿ, ತಲಾಖ್ ಎಂದು ಉಚ್ಚರಿಸಿದುದರ ನಂತರ ಅಗತ್ಯವಾಗಿ ಕಾಯಬೇಕಾದ ಮೂರು ತಿಂಗಳವರೆಗೆ ಪುರುಷರು ಕಾಯುತ್ತಿರಲಿಲ್ಲ ಮಾತ್ರವಲ್ಲ, ಇಂತಹಾ ವಿಚ್ಛೇದನಗಳು ಕೇವಲ 'ಸ್ಥಳೀಯ ಜನರ' ಮುಂದೆ ಮಾತ್ರವೇ ನಡೆಯುತ್ತಿದ್ದು, ಖಾಜಿಗಳು (ಮುಸಲ್ಮಾನ ನ್ಯಾಯಾಧೀಶರು) ಅಥವಾ ನ್ಯಾಯಾಲಯಗಳ ಮುಂದೆ ನಡೆಯುತ್ತಿರಲಿಲ್ಲ ಎಂಬುದೂ ತಿಳಿದುಬಂದಿದೆ. Dr. ಸೈಯೆದ್ ಅಬ್ದುಲ್ ಹಫೀಜ್ ಮೊಯಿನುದ್ದೀನ್‌ರು ತಮ್ಮ ವೆಸ್ಟ್ ಬೆಂಗಾಲೀ ಮುಸ್ಲಿಮ್ಸ್ ಎಂಬ ಅಧ್ಯಯನದಲ್ಲಿ "ಪಶ್ಚಿಮ ಬಂಗಾಳದಲ್ಲಿನ ವಿಚ್ಛೇದಿತ/ಪ್ರತ್ಯೇಕಗೊಂಡ ಮುಸಲ್ಮಾನ ಮಹಿಳೆಯರು ಶೋಚನೀಯ ಜೀವನವನ್ನು ನಡೆಸುತ್ತಿದ್ದಾರೆ...ಸಿದ್ಧಾಂತ ಹಾಗೂ ಅನುಷ್ಠಾನಗಳ ನಡುವೆ ಇರುವ ವ್ಯತ್ಯಾಸವು ತುಂಬ ಸ್ಪಷ್ಟವಾಗಿ ಕೂಡಾ ಕಾಣಿಸುತ್ತದೆ...ಸ್ಥಳೀಯ ಜನರು ಸಾಧಾರಣವಾಗಿ ತಲಾಖ್‌ನ ಬಗ್ಗೆ ಖು/ಕುರಾನಿನಲ್ಲಿರುವ ಮೂಲತತ್ವಗಳನ್ನು ಅರ್ಥೈಸಿಕೊಂಡಿರುವುದಿಲ್ಲ" ಎಂದು ಬರೆದಿದ್ದಾರೆ.
ಮುಸಲ್ಮಾನ ಮಹಿಳೆಯರ ಬಗೆಗೆ ನಡೆಸಿದ ತಮ್ಮದೇ ಅಧ್ಯಯನದಲ್ಲಿ ಷಹೀದಾ ಲತೀಫ್‌ರು, ಮುಸಲ್ಮಾನ ಮಹಿಳೆಯರಿಗೆ ಹಲವು ಸಂದರ್ಭಗಳಲ್ಲಿ ತಮ್ಮ ಹಕ್ಕುಗಳ ಬಗ್ಗೆ ತಿಳಿದೇ ಇರುವುದಿಲ್ಲ ಎಂದು ಒತ್ತಿ ಹೇಳುತ್ತಾ ಇದೇ ವಿಚಾರವನ್ನು ಎತ್ತಿ ತೋರುತ್ತಾರೆ. ಮೈನಾರಿಟಿ ರೈಟ್ಸ್ ಗ್ರೂಪ್ ಇಂಟರ್‌ನ್ಯಾಷನಲ್ ಸಂಸ್ಥೆಯಂತಹಾ (MRGI) ಉದಾರವಾದಿ ಸಂಘಟನೆಗಳು ಭಾರತದ ಸರ್ಕಾರದ ಮೇಲೆ ತಾರತಮ್ಯದ ನೀತಿಗಾಗಿ ಮೊದಲಿಗೆ ದೂಷಿಸುವುದರ ಮೂಲಕ ಹಾಗೂ ನಂತರ ಈ ಚರ್ಚೆಯನ್ನು ರಾಜಕೀಯಗೊಳಿಸಿದುದಕ್ಕಾಗಿ ಬಲಪಂಥೀಯ ಪಕ್ಷಗಳನ್ನು ದೂರುತ್ತಾ ವಾಸ್ತವವಾಗಿ ಮುಸಲ್ಮಾನ ಮಹಿಳೆಯರಿಗೆ ಅನ್ಯಾಯವನ್ನು ಮಾಡುತ್ತಿವೆ. MRGI ಸಂಸ್ಥೆಯು "ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ CEDAW ಷರತ್ತುಗಳನ್ನು ಭಾರತ ಸರ್ಕಾರವು ತಿರಸ್ಕರಿಸಿದುದು ಕುಟುಂಬವರ್ಗದಲ್ಲಿ ಹಾಗೂ ಸಮಾಜದಲ್ಲಿ ಮಹಿಳೆಯರ ಹಕ್ಕುಗಳಿಗೆ ಪ್ರೋತ್ಸಾಹ ಕೊಡುವುದರ ಬಗ್ಗೆ ಅದಕ್ಕಿರುವ ಬದ್ಧತೆಯ ಕೊರತೆಯನ್ನು ಹಾಗೂ ಮಹಿಳೆಯರಿಗೆ ಸಂವಿಧಾನಾತ್ಮಕವಾಗಿ ದೊರಕಿರುವ ಸಮಾನತೆಯ ಹಕ್ಕುಗಳ ಉಲ್ಲಂಘನೆಗಳನ್ನು ಎತ್ತಿತೋರುತ್ತದೆ" ಎಂದು ಹೇಳಿಕೊಳ್ಳುತ್ತದೆ. ತೀರಾ 'ಜನಾಂಗೀಯ'ವೆಂದು ಕಾಣಿಸಿಕೊಂಡರೆ ಎಂದು ಯಾವಾಗಲೂ ಭೀತಿಯಲ್ಲಿರುವ ಅದೇ ಪ್ರಕಾಶನವು "ಅವರ [ಮುಸಲ್ಮಾನ ಮಹಿಳೆಯರ] ಪರಿಸ್ಥಿತಿಯನ್ನು ಯಾವುದಾದರೂ ಇಸ್ಲಾಮೀಯ/ಮಹಮ್ಮದೀಯ ಗುಣಲಕ್ಷಣವೆಂದು ಕೂಡಾ ಹೊಣೆ ಹೊರಿಸಲಾಗುವುದಿಲ್ಲ" ಎಂದೂ ಹೇಳಿ ಜಾರಿಕೊಳ್ಳುತ್ತದೆ.
ಆದ್ದರಿಂದ ಇಂತಹಾ ಸಂಘಟನೆಗಳ ಪ್ರಕಾರ, ಈ ಸಮಸ್ಯೆಗೆ BJP ಪಕ್ಷವು ಹೊಣೆಯಾಗಿದ್ದು "ಈ ಸಮಸ್ಯೆಗೆ ರಾಜಕೀಯದೊಂದಿಗಿರುವ ಸಂಪರ್ಕ ಉಂಟಾಗಲು ಅದೇ ಕಾರಣ ಹಾಗೂ ಧರ್ಮವು ಭಾರತದ ಜಾತ್ಯತೀತ ಚೌಕಟ್ಟಿಗೆ ಅಪಾಯವನ್ನು ತಂದಿಟ್ಟಿದೆ." ಅಷ್ಟು ಮಾತ್ರವಲ್ಲದೇ, "ಬಲಪಂಥೀಯ ಪ್ರಭುತ್ವವು ತನ್ನ ಸರ್ವಾಧಿಕಾರತ್ವದೊಂದಿಗೆ...ಹಾಗೂ ಮಹಿಳೆಯರ ಬಗೆಗಿನ ಅದರ ನಿಲುವುಗಳು, ಎಲ್ಲಾ ಭಾರತೀಯ ಮಹಿಳೆಯರಿಗೆ ಕೇಡನ್ನು ಮುನ್ಸೂಚಿಸುತ್ತದೆ." ಮಹಿಳೆಯರ ಹಕ್ಕುಗಳ ಹೋರಾಟಗಾರರ ನಿಲುವುಗಳು, ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ಮೂಲದವರ ನಿಲುವುಗಳು ಸುಸ್ಪಷ್ಟ. ಸಮಾನ ಹಕ್ಕುಗಳ ಬಗೆಗೆ ಅಭಿಯಾನ ನಡೆಸುತ್ತಿರುವ ಬಲಪಂಥೀಯ ಪಕ್ಷಗಳು ಅಂಗೀಕಾರಕ್ಕೆ ಅರ್ಹರಲ್ಲ, ಆದರೆ ೫೦ ವರ್ಷಗಳ ತನ್ನ ನಾಯಕತ್ವದಲ್ಲಿ ಮುಸಲ್ಮಾನರ ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ಹೆಚ್ಚೇನೂ ಮಾಡದಿರುವ ಕಾಂಗ್ರೆಸ್ ಪಕ್ಷಕ್ಕೆ "ಅಂತರರಾಷ್ಟ್ರೀಯ ಮಾನವಹಕ್ಕುಗಳ ಮಾನಕಗಳಿಗೆ ಬದ್ಧರಾಗಿರುವಂತೆ ಹಾಗೂ ಮಹಿಳೆಯರ ಹಿತಾಸಕ್ತಿಗಳನ್ನು ರಕ್ಷಿಸಲು ತನ್ನದೇ ಆದ ಸಂವಿಧಾನಾತ್ಮಕ ಕಟ್ಟುಪಾಡುಗಳನ್ನು ರೂಪಿಸಲು" ಕರೆ ನೀಡಲಾಗಿದೆ.
'ಭಾರತೀಯ ಸಂವಿಧಾನದ ಪಿತಾಮಹ'ರಾದ, Dr. ಅಂಬೇಡ್ಕರ್‌ರವರು, ೪೪ನೆಯ ವಿಧಿ/ಪರಿಚ್ಛೇದ ಹಾಗೂ ಏಕರೂಪ ಸಂಹಿತೆಯ ಬಗ್ಗೆ ಅದು ನೀಡುವ ಕರೆಗಳ ಬಗ್ಗೆ ಮಾತನಾಡುತ್ತಾ, "ಭವಿಷ್ಯದ ಸಂಸತ್ತು ಇದರ ಬಗ್ಗೆ ವಿಧಿ/ಕಟ್ಟಳೆ/ನಿಬಂಧನೆಗಳನ್ನು ಮಾಡಿ ಮೊದಲಿಗೆ ಇಂತಹಾ ಸಂಹಿತೆಯು ಕೇವಲ ಅದಕ್ಕೆ ತಾವು ಬದ್ಧರಾಗಿರಲು ಸಿದ್ಧರಾಗಿದ್ದೇವೆಂದು ಘೋಷಿಸುವ ವ್ಯಕ್ತಿಗಳಿಗೆ ಮಾತ್ರವೇ ಅನ್ವಯಿಸುವಂತೆ, ಅಂದರೆ ಈ ಪ್ರಕಾರ ಆರಂಭಿಕ ಹಂತದಲ್ಲಿ ಸಂಹಿತೆಯ ಅನ್ವಯಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರತಕ್ಕದ್ದು ಎಂದು ಕಾರ್ಯಗತಗೊಳಿಸುವ ಮೂಲಕ ಜಾರಿಗೆ ತರಲು ಖಂಡಿತಾ ಸಾಧ್ಯ" ಎಂದು ಅವಲೋಕಿಸಿದ್ದರು. Dr. ಅಂಬೇಡ್ಕರ್‌ರವರು ಸರ್ಕಾರವು ವೈಯಕ್ತಿಕ ಕಾನೂನುಗಳನ್ನು ಬದಲಿಸುವಂತಹಾ ಶಾಸನಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ ಎಂಬುದರ ಬಗ್ಗೆ ಖಚಿತ ಅಭಿಪ್ರಾಯ ಹೊಂದಿದ್ದರೂ, ಅವರು "ಯಾವುದೇ ಸರ್ಕಾರವು ತನ್ನ ಅಧಿಕಾರವನ್ನು ಮುಸಲ್ಮಾನ ಸಮುದಾಯವು ದಂಗೆಯೇಳುವಂತೆ ಪ್ರಚೋದಿಸಬಹುದಾದ ರೀತಿಯಲ್ಲಿ ಕಾರ್ಯಗತಗೊಳಿಸಬಾರದು" ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು.
೫೦೦,೦೦೦ ಮಂದಿ ಭಾರತೀಯರು ಮರಣಿಸಿದ್ದ, ೧೯೪೮ರಲ್ಲಿ ನಡೆದ ಕೋಮು ಘರ್ಷಣೆಗಳಿಂದ ಭೀತಿಗೊಂಡಿದ್ದ Dr. ಅಂಬೇಡ್ಕರ್‌ರವರ ಎಚ್ಚರಿಕೆಯಿಂದ ಜಾರಿಗೆ ತರಬೇಕಾದ ವಿಧಾನವನ್ನು ಅನುಸರಿಸುವ ಬದಲಿಗೆ, ೪೪ನೆಯ ವಿಧಿ/ಪರಿಚ್ಛೇದವನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಜೀನರಾಗಿ ವರ್ತಿಸಿದ್ದ ನೆಹರೂರವರ ಅಭಿಪ್ರಾಯವನ್ನು ವಿಶ್ಲೇಷಿಸುವುದು ಉಪಯುಕ್ತವಾಗಬಹುದು. ಭಾರತವನ್ನು 'ಜಾತ್ಯತೀತ' ರಾಷ್ಟ್ರವಾಗಿಸುವ ಕಲ್ಪನೆಯ ಬಗ್ಗೆ ಅವಲೋಕಿಸಿ, ಅವರು "'ಜಾತ್ಯತೀತ' ಎಂಬ ಪದವು, ಬಹುಶಃ ಅಂತಹಾ ಸಂತೋಷದಾಯಕವಲ್ಲದಿರಬಹುದು, ಆದರೂ ನಾವು ಅದನ್ನು ಬಳಸುತ್ತಿರುವುದರಿಂದ ಇನ್ನೂ ಉತ್ತಮವಾದುದನ್ನು ನಿರೀಕ್ಷಿಸೋಣ. ಆ ಪದದ ವಾಸ್ತವಾರ್ಥ ಏನು? ಧರ್ಮಕ್ಕೆ ಯಾವುದೇ ಮಾನ್ಯತೆ ನೀಡದಿರುವ ಸಮಾಜ ಎಂದು ಖಂಡಿತಾ ಅದರ ಅರ್ಥವಾಗಿರಲಾರದು ಎಂಬುದು ಸ್ಪಷ್ಟ. ಧರ್ಮ ಮತ್ತು ಧರ್ಮಪ್ರಜ್ಞೆಯ ಬಗ್ಗೆ ಸ್ವಾತಂತ್ರ್ಯ ಎಂಬುದು ಇದರ ಅರ್ಥ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದಾಗ್ಯೂ ಅದೇ ಕಾರಣದಿಂದ, ಭಾರತದ ಮಾಜಿ ರಾಷ್ಟ್ರಪತಿ, Dr. S. ರಾಧಾಕೃಷ್ಣನ್‌ರವರು, "ಯಾವುದೇ ಧರ್ಮಕ್ಕೆ ಆದ್ಯತೆಯ ಸ್ಥಾನ ಅಥವಾ ಅದ್ವಿತೀಯ ಮನ್ನಣೆಯನ್ನು ಕೊಡುವ ಹಾಗಿಲ್ಲ ಎಂಬುದನ್ನು ನಾವು ಎತ್ತಿಹಿಡಿಯುತ್ತೇವೆ" ಎಂದು ಸ್ಪಷ್ಟೀಕರಿಸಿದ್ದರು.
ಭಾರತದಲ್ಲಿ ಮೂಲತಃ ಅಂತರ್ನಿಹಿತವಾಗಿಯೇ ಅಸಾಂಗತ್ಯವಿದ್ದು, ಇದುವರೆಗೂ ಪರಿಹರಿಸದೇ ಉಳಿದ ಸಮಸ್ಯೆಯಾಗಿ ಇದು ಉಳಿದಿದೆ. ವಿಶಾಲವಾದ ವಿಭಿನ್ನವಾದ, ಕಿಕ್ಕಿರಿದ ಜನಸಮೂಹವನ್ನು ಹೊಂದಿರುವ ರಾಷ್ಟ್ರದ ಎಲ್ಲಾ ಸಮಸ್ಯೆಗಳಲ್ಲಿ, ಗಮನಾರ್ಹ ಪ್ರಮಾಣದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರನ್ನು ಹೊಂದಿರುವ ಯಾವುದೇ ರಾಷ್ಟ್ರವು ಎದುರಿಸಬೇಕಾಗಿ ಬರಬಹುದಾದ ಅಂತರ್ನಿಹಿತ ಸಮಸ್ಯೆಗಳೂ ಸೇರಿರುತ್ತವೆ ಉದಾಹರಣೆಗೆ ಆ ಸಮುದಾಯದಿಂದ ವಿಶೇಷ ಹಕ್ಕುಗಳನ್ನು ನೀಡಬೇಕೆಂಬ ಬೇಡಿಕೆಗಳನ್ನು ಎದುರಿಸುವುದು ಸರ್ವೇಸಾಮಾನ್ಯ. ಭಾರತದಲ್ಲಿ ವಿವಿಧ ಸಮೂಹಗಳಿಗೆ ವೈಯಕ್ತಿಕ ಕಾನೂನುಗಳನ್ನು ನಿಗದಿಪಡಿಸುವ ಪ್ರಯೋಗವು ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣುವ ಉದ್ದೇಶದಲ್ಲಿ ವಿಫಲವಾಯಿತು. ಹಾಗಾಗಿ ರಾಷ್ಟ್ರವು ತನ್ನ ಅಲ್ಪಸಂಖ್ಯಾತ ಸಮೂಹಗಳಲ್ಲಿ ಒಂದಕ್ಕೆ ಅನ್ವಯಿಸುವ ಕಾನೂನುಗಳ ಹೊರತಾಗಿ ಇನ್ನೆಲ್ಲಾ ವೈಯಕ್ತಿಕ ಕಾನೂನುಗಳನ್ನು ಶಾಸನಗಳ ಮೂಲಕ ತೊಡೆದುಹಾಕಿತು. ಇತರೆ ಅಲ್ಪಸಂಖ್ಯಾತ ಸಮೂಹಗಳನ್ನು ಜಾತ್ಯತೀತ ಮತ್ತು ಸಮಾನ ಹಕ್ಕುಗಳ ಪಾಶ್ಚಿಮಾತ್ಯ ಮಾನಕಗಳಿಗೆ ಅನುಸಾರವಾಗಿ ಪ್ರಧಾನ ವಾಹಿನಿಗೆ ತರಲಾಯಿತು. ಆದಾಗ್ಯೂ, ವ್ಯಾಪಕ ಪ್ರಮಾಣದ ಗಲಭೆ ಹಾಗೂ ದಂಗೆಗಳು ಉಂಟಾಗಬಹುದೆಂಬ ಭಯದಿಂದ, ಸರ್ಕಾರವು ಮುಸಲ್ಮಾನ ಸಮುದಾಯಕ್ಕೆ ಸಂಬಂಧಿಸಿದಂತೆ ಯಾವುದೇ ಸುಧಾರಣೆಗಳ ಪ್ರಸ್ತಾಪಗಳನ್ನು ನೆನೆಗುದಿಗೆ ತಳ್ಳಿತು, ಇದು ೧೯೩೦ರ ದಶಕದ ಅವಧಿಯಿಂದ ಇದನ್ನು ಹೆಪ್ಪುಗಟ್ಟಿದ ಸ್ಥಿತಿಯಲ್ಲಿಯೇ ಉಳಿಸಿತು. ಬ್ರಿಟಿಷರು ಇದಕ್ಕೆ ವಿರುದ್ಧವಾದುದನ್ನು ಮಾಡಿದ್ದರು. ಮಹಮ್ಮದೀಯ ಕಾನೂನನ್ನು ಜಾರಿಗೊಳಿಸುವಾಗ ಬ್ರಿಟಿಷರು ವಾಸ್ತವವಾಗಿ ಭಾರತೀಯ ಮುಸಲ್ಮಾನರ ಅನೇಕ ಪರಂಪರಾಗತ ವಾಡಿಕೆಗಳ ಮಾನದಂಡವನ್ನು ಎತ್ತರಕ್ಕೇರಿಸಿದ್ದರು. ಭಾರತದ ವಸಾಹತುಶಾಹಿ ಆಡಳಿತಾನಂತರದ ಸರ್ಕಾರವು ಇದಕ್ಕೆ ವಿರುದ್ಧವಾದುದನ್ನು ಮಾಡಿತ್ತು. ಅದು ತನ್ನ ೫೦ ದಶಲಕ್ಷ ಮುಸಲ್ಮಾನ ಮಹಿಳಾ ನಾಗರಿಕರ ಸಮಾನ ಹಕ್ಕುಗಳನ್ನು ಜಾರಿಗೊಳಿಸಲು ಶಾಸನಾತ್ಮಕ ಮಾರ್ಗವನ್ನು ಕಂಡುಕೊಳ್ಳಲು ನಿರಾಕರಿಸಿತ್ತು. ಕೊನೆಯಲ್ಲಿ, ಪಾಶ್ಚಿಮಾತ್ಯ ಉದಾರತಾವಾದಿಗಳು ಎಂಬ ಸುಧಾರಣೆಯ ಪರವಾಗಿರಬಹುದಾಗಿದ್ದ ಅದೇ ಜನರು, ಏಕರೂಪ ಸಂಹಿತೆಯ ಕಲ್ಪನೆಯನ್ನು ಹರಿಯಬಿಟ್ಟಿದ್ದರು, ಏಕೆಂದರೆ ಅವರು ಬಲಪಂಥೀಯರು ಆ ವಿಚಾರವನ್ನು ಗೊಂದಲಮಯಗೊಳಿಸುತ್ತಿದ್ದಾರೆ ಎಂದು ಭಯಪಡುತ್ತಿದ್ದರು. ಏಕರೂಪ ನಾಗರಿಕ ನೀತಿಸಂಹಿತೆಯನ್ನು "ಹಿಂದೂ ರಾಷ್ಟ್ರೀಯತಾವಾದಿ ಒಳಸಂಚು" ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯವನ್ನು ತುಳಿಯಲು ನಡೆಸುತ್ತಿರುವ ಪಿತೂರಿ ಎಂದು ಇದನ್ನು ಪರಿಗಣಿಸಲಾಗಿತ್ತು. ಕಟ್ಟಾ ಹಿಂದೂ ರಾಷ್ಟ್ರೀಯತಾವಾದಿಗಳು ಎಂದು ಕರೆಸಿಕೊಳ್ಳುವಂತಹವರು ಮುಸಲ್ಮಾನ ಮಹಿಳೆಯರ ಬಗೆಗೆ ಕಾಳಜಿ ತೋರುತ್ತಿದ್ದಾರೆ ಎಂಬ ಕಲ್ಪನೆಯನ್ನೇ "ಕುಟಿಲತೆಯ ಅಥವಾ ಹಾಸ್ಯಾಸ್ಪದ"ವಾದ ವಿಚಾರವೆಂದು ಪರಿಗಣಿಸಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಕಾಂಗ್ರೆಸ್ ಪಕ್ಷ ಹಾಗೂ ಅದರ ಮುಸಲ್ಮಾನ ಸಮುದಾಯವನ್ನು ತುಷ್ಟೀಕರಿಸುವ ರಾಜನೀತಿಯು ಬಲಪಂಥೀಯರು ಈ ವಿಚಾರವನ್ನು ಕೈಗೆತ್ತಿಕೊಳ್ಳುವ ಅವಕಾಶ ಪಡೆದುಕೊಳ್ಳಲು ನೇರ ತಪಿತಸ್ಥವಾಗಿದೆ. ೧೯೭೦ರ ದಶಕದಲ್ಲಿ ಅಥವಾ ೧೯೮೫ರಷ್ಟು ತಡವಾಗಿಯಾದರೂ ಕಾಂಗ್ರೆಸ್ ಪಕ್ಷವು ಎಚ್ಚೆತ್ತುಕೊಂಡು ಸರ್ಕಾರವು ಮಾಡುವ ಅಧಿಕಾರವನ್ನು ಹೊಂದಿದೆ ಎಂದು Dr. ಅಂಬೇಡ್ಕರ್‌ರವರು ಕೂಡಾ ಅನುಮೋದಿಸಿದ್ದ ಮುಸಲ್ಮಾನರ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಯನ್ನು ತರಲು ಕ್ರಿಯಾಶೀಲವಾಗಿದ್ದರೆ, ಈ ಸಮಸ್ಯೆಯು ವಾಜಪೇಯಿ ಹಾಗೂ BJP ಪಕ್ಷದವರಿಗೆ ಚುನಾವಣೆಯನ್ನು ಗೆಲ್ಲುವ ವಿಷಯವಾಗುತ್ತಿರಲಿಲ್ಲ.
BJP ಪಕ್ಷವು ಈಗ ಭಾರತದ ಬಹುತೇಕ ಭಾಗಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಉತ್ತರ ಹಾಗೂ ಮಧ್ಯಭಾರತವನ್ನು ಆವರಿಸಿರುವ 'ಹಿಂದಿ ವಲಯ'ದಲ್ಲಿ ಪ್ರಬಲ ಶಕ್ತಿಯಾಗಿದೆ. ಇಸ್ಲಾಮೀಯ/ಮಹಮ್ಮದೀಯ ಕಾನೂನು ಭಾರತದಲ್ಲಿ ೮೫೦ ವರ್ಷಗಳ ಕಾಲದಿಂದ ವರ್ಧಿಸುತ್ತಲೇ ಇದೆ. ಜಾತ್ಯತೀತ ಮೌಲ್ಯಗಳನ್ನು ಬೋಧಿಸುವ ಹಿಂದೂ ಮಹಾಸಮೂಹದ ಉದಯವು ಇಸ್ಲಾಮೀಯ/ಮಹಮ್ಮದೀಯ ಕಾನೂನುಗಳು ಮಸೀದಿ ಹಾಗೂ ಸಂಪ್ರದಾಯ ಪಾಲನೆಗಳಿಗೆ ಮಾತ್ರ ಸೀಮಿತಗೊಳ್ಳುತ್ತದೆ ಎಂಬುದನ್ನು ಸ್ಪಷ್ಟಗೊಳಿಸಿರಬಹುದಿತ್ತು. ಆದರೂ ಅಲ್ಪಸಂಖ್ಯಾತ ಸಮುದಾಯವನ್ನು ಸಂತುಷ್ಟಿಗೊಳಿಸುವ ತನ್ನ ವಿರೋಧಾತ್ಮಕ ಹಾಗೂ ಕೆಲವು ಪ್ರದೇಶಗಳಲ್ಲಿ ಬೂಟಾಟಿಕೆಯ ಪ್ರಯತ್ನಗಳಲ್ಲಿ ಭಾರತದ ಸರ್ಕಾರವು ಒಂದೆಡೆಯಲ್ಲಿ ವೈಯಕ್ತಿಕ ಕಾನೂನುಗಳ ಮೂಲಕ ತಾರತಮ್ಯಕ್ಕೆ ಅನುಮತಿ ನೀಡುವ ಹಾಗೂ ಅದೇ ಸಮಯದಲ್ಲಿ ಸಮಾನತೆಯನ್ನು ಎತ್ತಿಹಿಡಿಯುವ ಗೊಂದಲಮಯ ಸಂವಿಧಾನವನ್ನು ಜಾರಿಗೆ ತಂದಿತು. ನ್ಯಾಯಾಲಯಗಳು ಹಾಗೂ ರಾಜಕೀಯದವರು ಈ ವಿಚಾರವನ್ನು ಗ್ರಹಿಸಲು ಸ್ವಲ್ಪ ಕಾಲ ಕಾಯಬೇಕಾಯಿತಷ್ಟೇ. ಇಂದು ಮುಸಲ್ಮಾನರ ಸಮುದಾಯಗಳು ಪಟ್ಟುಹಿಡಿದು ಸುಧಾರಣೆಗಳನ್ನು ವಿರೋಧಿಸುತ್ತಿವೆ, ಹಾಗೂ ಮೂಲಭೂತವಾಗಿ ಅದರ ನಿರಾಕರಣವು ಅದಕ್ಕೆ ಲಭ್ಯವಾಗಿರುವ ವಿಶೇಷ ಸ್ಥಾನಮಾನ/ಸೌಲಭ್ಯಗಳನ್ನು ಕಳೆದುಕೊಳ್ಳಲಿದೆ ಎಂಬುದು ಸರಳವಾಗಿ ಗೋಚರಿಸಬಹುದಾದ ಅರ್ಥವಾಗಿದೆ.
ಸಂಪ್ರದಾಯ ಶರಣ ಇಸ್ಲಾಮೀ/ಮಹಮ್ಮದೀಯರು ಮಾಡುವ ಪ್ರತಿಪಾದನೆಗಳಿಗೆ ವಿರುದ್ಧವಾಗಿ, ಏಕರೂಪ ನಾಗರಿಕ ನೀತಿಸಂಹಿತೆಯು ಹಿಂದೂ ರಾಷ್ಟ್ರೀಯತಾವಾದಿ ಸಮುದಾಯಗಳ ಹೊರತಾದ, ಹಿಂದೂ ರಾಷ್ಟ್ರೀಯತಾ ನೀತಿಯ ವಿರೋಧಿಗಳಾದ ವಿಚಾರವಾದಿಗಳು ಹಾಗೂ ಮಾನವತಾವಾದಿಗಳಾದ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ/ಫೆಡರೇಷನ್ ಆಫ್ ಇಂಡಿಯನ್ ರ್ರ್ಯಾಷನಲಿಸ್ಟ್ ಅಸೋಸಿಯೇಷನ್ಸ್‌ನಂತಹಾ ಸಂಘಟನೆಗಳ ಹಲವು ಜನರಿಂದ ಬೆಂಬಲವನ್ನು ಪಡೆದಿದೆ.[೨]
ವಿವಾದ
ಬದಲಾಯಿಸಿಏಕರೂಪ ನಾಗರಿಕ ನೀತಿಸಂಹಿತೆಯ ಸಿದ್ಧಾಂತ ಪ್ರತಿಪಾದಕರು ಎರಡು ಆಲೋಚನಾ ಪಥಗಳಿಂದ ತಮ್ಮ ವಾದವನ್ನು ಪ್ರತಿಪಾದಿಸುತ್ತಾರೆ:
- ಈ ನೀತಿಸಂಹಿತೆಯು ಸಮಾನತೆಯನ್ನು ಉಂಟುಮಾಡುತ್ತದೆ. ಇತರೆ ವೈಯಕ್ತಿಕ ಕಾನೂನುಗಳು ಸುಧಾರಣೆಗಳಿಗೆ ಒಳಪಟ್ಟಿದ್ದರೆ, ಮುಸಲ್ಮಾನರ ಕಾನೂನುಗಳು ಸುಧಾರಣೆಗೆ ಒಳಪಟ್ಟಿಲ್ಲ. ಹಿಂದೂ ರಾಷ್ಟ್ರೀಯತಾವಾದಿಗಳು ವಾದಿಸುವ ಪ್ರಕಾರ ಮುಸಲ್ಮಾನರಿಗೆ, ಉದಾಹರಣೆಗೆ, ಒಂದಕ್ಕಿಂತ ಹೆಚ್ಚು ಬಾರಿ ವಿವಾಹವಾಗಲು ಅವಕಾಶ ನೀಡುವುದು, ಆದರೆ ಹಿಂದೂಗಳು ಅಥವಾ ಕ್ರೈಸ್ತರು ಅದನ್ನೇ ಮಾಡಿದರೆ ಅವರನ್ನು ಶಿಕ್ಷಿಸುವುದು ನಿರರ್ಥಕ. ಅವರು ಎಲ್ಲಾ ಧರ್ಮಗಳಿಗೆ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಒತ್ತಾಯಿಸುತ್ತಿದ್ದಾರೆ.
- ಲಿಂಗ ಸಮಾನತೆ. ಅನೇಕ ಉದಾರವಾದಿಗಳು ಹಾಗೂ ಮಹಿಳಾ ಸಂಘಟನೆಗಳು ಏಕರೂಪ ನಾಗರಿಕ ನೀತಿಸಂಹಿತೆಯು ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುತ್ತದೆ ಎಂದು ಪ್ರತಿಪಾದಿಸುತ್ತಾ ಬಂದಿವೆ.
ಅನುದಾನಗಳು
ಬದಲಾಯಿಸಿಮುಸಲ್ಮಾನರಿಗೆ ಮೆಕ್ಕಾಗೆ ಹೋಗುವ ಒಂದು ತೀರ್ಥಕ್ಷೇತ್ರಯಾತ್ರೆಯಾದ ಹಜ್‌ಗೆ ಹೋಗಲು ಹಾಗೂ ತಮ್ಮ ಧಾರ್ಮಿಕ ಶಾಲೆಗಳನ್ನು (ಮದ್ರಸಾಗಳು) ನಡೆಸಲು ಅನುದಾನಗಳ ಮೂಲಕ ಹಣವನ್ನು ನೀಡಲಾಗುತ್ತದೆ. ಒಂದೆಡೆಯಲ್ಲಿ ಭಾರತದ ಸರ್ಕಾರವು ಮುಸಲ್ಮಾನರಿಗೆ ಹಜ್ ಯಾತ್ರೆಗೆ ಹೋಗಲು ಅನುದಾನಗಳನ್ನು ನೀಡುತ್ತದೆ ; ಮತ್ತೊಂದೆಡೆ ಭಾರತದ ಸರ್ಕಾರವು ತನ್ನದೇ ಸರ್ಕಾರೀ ವಿಮಾನಯಾನ ಸಂಸ್ಥೆಗಳಲ್ಲಿ ವಿಮಾನಯಾನ ನಡೆಸಲು ಅವಕಾಶ ನೀಡುತ್ತದೆ ಹಾಗೂ ಭಾರತೀಯ ಮುಸಲ್ಮಾನರಿಗೆ ನೀಡುವ ಸೇವೆಗಳಿಗಾಗಿ ಸೌದಿ ಅರೇಬಿಯಾದಿಂದ ಅನುದಾನವನ್ನೂ ಪಡೆಯುತ್ತದೆ, ಇದನ್ನು ಪರಿಗಣಿಸಿದಾಗ ಹಿಂದೂಗಳು ಭಾರತದ ಸರ್ಕಾರದಿಂದ ತಮ್ಮದೇ ಆದ ತೀರ್ಥಯಾತ್ರೆಗಳಿಗೆ ಅಥವಾ ಧಾರ್ಮಿಕ ಶಾಲೆಗಳಿಗೆ ಇಂತಹಾ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಪ್ರತಿಪಾದಿಸುತ್ತಾರೆ.
ಷಾಹ್ ಬಾನೋ ಮೊಕದ್ದಮೆ
ಬದಲಾಯಿಸಿಸಂಪ್ರದಾಯವಾದಿ ಮುಸಲ್ಮಾನರ ಒತ್ತಡಗಳಿಗೆ ಮಣಿದು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬುಡಮೇಲು ಮಾಡುವ/ಅನೂರ್ಜಿತಗೊಳಿಸುವ ರಾಜೀವ್ ಗಾಂಧಿ ಮಾಡಿದ ಭಾರತೀಯ ಕಾನೂನಿನ ತಿದ್ದುಪಡಿಯು ಹಿಂದುತ್ವದ ಬೆಂಬಲಿಗರನ್ನು ಕೆರಳಿಸಿತು. ಷರೀಯತ್‌ನ ಕಡೆ ಹೆಚ್ಚು ಹೊಂದಿಕೊಂಡಂತಿದ್ದ ಹೀಗೆ ತಿದ್ದುಪಡಿಯಾದ ಕಾನೂನುಗಳು ಈ ಹಿಂದೆ ವಿಚ್ಛೇದಿತ ಮುಸಲ್ಮಾನ ಮಹಿಳೆಯರಿಗಿದ್ದ ಹಕ್ಕುಗಳನ್ನು ಕಡಿಮೆಗೊಳಿಸಿತ್ತು. ರಾಜೀವ್ ಗಾಂಧಿ ಇದಕ್ಕಾಗಿ ಭಾರೀ ಬೆಲೆಯನ್ನೇ ತೆರಬೇಕಾಯಿತು.
ಇವನ್ನೂ ನೋಡಿ
ಬದಲಾಯಿಸಿಹೆಚ್ಚಿನ ಓದಿಗೆ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ಅಕ್ಬರ್, M.J. ದ ಷೇಡ್ ಆಫ್ ಸ್ವಾರ್ಡ್ಸ್ : ಜಿಹಾದ್ ಅಂಡ್ ದ ಕಾನ್ಫ್ಲಿಕ್ಟ್ ಬಿಟ್ವೀನ್ ಇಸ್ಲಾಮ್ & ಕ್ರಿಶ್ಚಿಯಾನಿಟಿ. ರೂಟ್ಲೆಡ್ಜ್, ನ್ಯೂಯಾರ್ಕ್, ೨೦೦೨.
- ಆಂಡರ್ಸನ್, ಮೈಕೇಲ್ A. ಇಸ್ಲಾಮಿಕ್ ಲಾ ಅಂಡ್ ದ ಕಾಲೋನಿಯಲ್ ಎನ್ಕೌಂಟರ್ ಇನ್ ಇಂಡಿಯಾ. Archived 2009-04-29 ವೇಬ್ಯಾಕ್ ಮೆಷಿನ್ ನಲ್ಲಿ. ಜೂನ್ ೧೯೯೬. ಪಡೆದಿದ್ದು ಫೆಬ್ರವರಿ ೨೦, ೨೦೦೫.
- ಪಡೆದಿದ್ದು ಮಾರ್ಚ್ 14, 2005 ಬಿಲಿಮೋರಿಯಾ, ಪುರುಷೋತ್ತಮ್. ಮುಸ್ಲಿಮ್ ಪರ್ಸನಲ್ ಲಾ ಇನ್ ಇಂಡಿಯಾ : ಕಾಲೋನಿಯಲ್ ಲೆಗಸಿ ಅಂಡ್ ಕರೆಂಟ್ ಡಿಬೇಟ್ಸ್.
- ಚಂದ್ರ, ಬಿಪನ್. ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್ ೧೯೪೭–೨೦೦೦. ನವ ದೆಹಲಿ ೨೦೦೦.
- ದಿ/ಡಿವರಾಜ್, ರಣಜಿತ್/ರಂಜೀತ್. Archived 2014-07-23 ವೇಬ್ಯಾಕ್ ಮೆಷಿನ್ ನಲ್ಲಿ.ಫೈಟಿಂಗ್ ದ ವೇಯ್ಲ್ Archived 2014-07-23 ವೇಬ್ಯಾಕ್ ಮೆಷಿನ್ ನಲ್ಲಿ.. ಮಾರ್ಚ್ ೧೪, ೨೦೦೫ರಂದು ಪಡೆಯಲಾಗಿತ್ತು. ಆಗಸ್ಟ್ ೨೦೦೨.
- D'ಸೋಜಾ, ಕಾರ್ಮೋ. Archived 2011-05-27 ವೇಬ್ಯಾಕ್ ಮೆಷಿನ್ ನಲ್ಲಿ.ಫ್ಯಾಮಿಲಿ ಲಾಸ್ ಆಫ್ ಗೋವಾ Archived 2011-05-27 ವೇಬ್ಯಾಕ್ ಮೆಷಿನ್ ನಲ್ಲಿ.. ಪಡೆದಿದ್ದು ಮಾರ್ಚ್ ೨೬, ೨೦೦೫ರಂದು.
- ಎಂಜಿನಿಯರ್, ಅಸ್ಗರ್ ಅಲಿ. ದ ಷಾಹ್ ಬಾನೋ ಕೇಸ್. ಹೈದರಾಬಾದ್, ೧೯೮೭.
- - ಸೆಕ್ಯುಲರ್ ಪರ್ಸ್ಪೆಕ್ಟಿವ್.ಮುಸ್ಲಿಮ್ ವಿಮೆನ್ಸ್ ಮೇಂಟೆನೆನ್ಸ್-ಸಮ್ ನ್ಯೂ ಜಡ್ಜ್ಮೆಂಟ್ಸ್. ಮಾರ್ಚ್ ೧೫, ೨೦೦೫ರಂದು ಪಡೆಯಲಾಗಿತ್ತು. ಜುಲೈ ೧೬, ೨೦೦೦.
- ಫರ್ಗ್ಯೂಸನ್, ನಿಯಾಲ್. ಎಂಪೈರ್. ಲಂಡನ್ ೨೦೦೩.
- ಘೋಷ್, A. ಅಲಿಮನಿ ಫಾರ್ ಟಲಾಖ್ಡ್ ಮುಸ್ಲಿಮ್ ವಿಮೆನ್ ಇನ್ ಇಂಡಿಯಾ. ಪಡೆದಿದ್ದು ಫೆಬ್ರವರಿ ೨೬, ೨೦೦೫.
- ಹಕ್, ಮುಷೀರ್ ಉಲ್. ಇಸ್ಲಾಮ್ ಇನ್ ಸೆಕ್ಯುಲರ್ ಇಂಡಿಯಾ. ಸಿಮ್ಲಾ ೧೯೭೨.
- ಇಮಾಮ್, ಝಾಫರ್(ed). ದ ಮುಸಲ್ಮಾನ್ಸ್ ಆಫ್ ದ ಸಬ್‌ಕಾಂಟಿನೆಂಟ್. ಸಮ್ ಆಸ್ಪೆಕ್ಟ್ಸ್ ಆಫ್ ದ ಪ್ರಾಬ್ಲಮ್ಸ್ ಆಫ್ ಮುಸ್ಲಿಮ್ ಸೋಷಿಯಲ್ ರಿಫಾರ್ಮ್ ಲೇಖಕ ಮುಷೀರಲ್ ಹಸನ್. ಲಾಹೋರ್, ೧೯೮೦.
- ಜ್ಯಾಕ್ಸನ್, ಪಾಲ್(ed). ದ ಮುಸ್ಲಿಮ್ಸ್ ಆಫ್ ಇಂಡಿಯಾ. ದ ಡೆವಲಪ್ಮೆಂಟ್ ಆಫ್ ಇಸ್ಲಾಮಿಕ್ ಲಾ ಲೇಖಕ ಟೆರೆನ್ಸ್ ಫರಿಯಾಸ್. ನವ ದೆಹಲಿ ೧೯೮೮.
- ಜೈನ್, M.P. ಔಟ್ಲೈನ್ಸ್ ಆಫ್ ಇಂಡಿಯನ್ ಲೀಗಲ್ ಹಿಸ್ಟರಿ. ಲಂಡನ್, ೧೯೬೬.
- ಕಾಜಿ/ಝಿ, ಸೀಮಾ. ಮುಸ್ಲಿಮ್ ವಿಮೆನ್ ಇನ್ ಇಂಡಿಯಾ. ಲಂಡನ್, ೧೯೯೯.
- ಕೀ, ಜಾನ್. ಇಂಡಿಯಾ: A ಹಿಸ್ಟರಿ. ಲಂಡನ್, ೨೦೦೦.
- ಕುಕರ್ನಿ/ರ್ಣಿ, ಗೌಲಿ. ಸೊಸೈಟಿಸ್ ಲಾ ಕಾಲೇಜ್. ಪುಣೆ. ಮಾರ್ಚ್ ೧೪, ೨೦೦೫ರಂದು ಪಡೆಯಲಾಗಿತ್ತು.
- ಲಾರ್ಸನ್, ಗೆರಾಲ್ಡ್ ಜೇಮ್ಸ್. Archived 2004-12-30 ವೇಬ್ಯಾಕ್ ಮೆಷಿನ್ ನಲ್ಲಿ.ರಿಲಿಜನ್ ಅಂಡ್ ಪರ್ಸನಲ್ ಲಾ ಇನ್ ಸೆಕ್ಯುಲರ್ ಇಂಡಿಯಾ : A ಕಾಲ್ ಟು ಜಡ್ಜ್ಮೆಂಟ್. Archived 2004-12-30 ವೇಬ್ಯಾಕ್ ಮೆಷಿನ್ ನಲ್ಲಿ.2001 Archived 2004-12-30 ವೇಬ್ಯಾಕ್ ಮೆಷಿನ್ ನಲ್ಲಿ..
- ಲತೀಫ್, ಷಹೀದಾ. ಮುಸ್ಲಿಮ್ ವಿಮೆನ್ ಇನ್ ಇಂಡಿಯಾ : ಪೊಲಿಟಿಕಲ್ ಅಂಡ್ ಪ್ರೈವೇಟ್ ರಿಯಾಲಿಟೀಸ್. ನವ ದೆಹಲಿ, ೧೯೯೦.
- ಲತೀಫ್, ಸೈಯೆದ್ ಅಬ್ದುಲ್. ದ ಮುಸ್ಲಿಮ್ ಪ್ರಾಬ್ಲಮ್ ಇನ್ ಇಂಡಿಯಾ. ಮುಂಬಯಿ, ೧೯೩೯.
- ಮಹಮೂದ್, ತಾಹೀರ್. ಮುಸ್ಲಿಮ್ ಪರ್ಸನಲ್ ಲಾ : ರೋಲ್ ಆಫ್ ದ ಸ್ಟೇಟ್ ಇನ್ ದ ಸಬ್‌ಕಾಂಟಿನೆಂಟ್. ನವ ದೆಹಲಿ, ೧೯೭೭.
- ಮಚಂದಾ/ಡಾ, S. C. ದ ಲಾ ಅಂಡ್ ಪ್ರಾಕ್ಟೀಸ್ ಆಫ್ ಡೈವೊರ್ಸ್. ಅಲಹಾಬಾದ್, ೧೯೭೩.
- ಮಸ್ಕರೇನ್ಹಸ್, ಮಾರ್ಗರೇಟ್. ಲೀಗಲ್ ಲೆಗಸಿ. ೨೬ ಮಾರ್ಚ್ ೨೦೦೫ರಂದು ಪಡೆಯಲಾಗಿತ್ತು.
- ಮೊಯಿನುದ್ದೀನ್, S.A.H. ಡೈವೋರ್ಸ್ ಅಂಡ್ ಮುಸ್ಲಿಮ್ ವಿಮೆನ್. ಜೈಪುರ್, ೨೦೦೦.
- ರಾಜು, M.P. ಯೂನಿಫಾರ್ಮ್ ಸಿವಿಲ್ ಕೋಡ್ : A ಮಿರಾಜ್? ದೆಹಲಿ ೨೦೦೩.
- ರಾಥೊ, ಸರ್ ಬಿಪಿನ್ ಬಹಿರಾ. ಯೂನಿಫಾರ್ಮ್ ಸಿವಿಲ್ ಕೋಡ್, ಎ ರಿಫ್ಲೆಕ್ಷನ್. ಪಡೆದಿದ್ದು ಮಾರ್ಚ್ ೬, ೨೦೦೫ರಂದು. ಸೆಪ್ಟೆಂಬರ್ ೨೦೦೦ರಿಂದ.
- ಶಿವ ಸೇನಾ ಅಟ್ ಎ ಗ್ಲಾನ್ಸ್. ಶಿವ ಸೇನಾ ಪಕ್ಷದ ಜಾಲತಾಣ.
- ಷಾದಿ ಟೈಮ್ಸ್. ಲೀಗಲ್ ಇಷ್ಯೂಸ್. ಪಡೆದಿದ್ದು ಫೆಬ್ರವರಿ ೨೦, ೨೦೦೫.
- ಷಕೀರ್, ಮೊಯಿನ್. ದ ಸೆಕ್ಯುಲರೈಸೇಷನ್ ಆಫ್ ಮುಸ್ಲಿಮ್ ಬಿಹೇವಿಯರ್. ಕಲ್ಕತ್ತಾ ೧೯೭೩.
- ಟ್ಯಾಬ್ಜಿ, ಫೈಜ್ B.ಮುಹಮ್ಮದನ್ ಲಾ. ಮುಂಬಯಿ, ೧೯೪೦.
- ಯುನೈಟೆಡ್ ನೇಷನ್ಸ್ : ಡಿವಿಷನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ವಿಮೆನ್. CEDAW. ಪಡೆದಿದ್ದು ಮಾರ್ಚ್ ೧೩, ೨೦೦೫ರಂದು.
- ಗವರ್ನಮೆಂಟ್ ಆಫ್ ಇಂಡಿಯಾ. ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಪಡೆದಿದ್ದು ಮಾರ್ಚ್ ೧೪, ೨೦೦೫ರಂದು.
- ವರ್ಮಾ, B.R. ಕಮೆಂಟರೀಸ್ ಆನ್ ಮೊಹಮ್ಮದನ್ ಲಾ. ಅಲಹಾಬಾದ್, ೨೦೦೨.
- ಇನ್ಸ್ಟಿಟ್ಯೂಟ್ ಆಫ್ ಇಸ್ಲಾಮಿಕ್ ಸ್ಟಡೀಸ್ ಅಂಡ್ ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲರಿಸಮ್. Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ.ಮುಸ್ಲಿಮ್ ವಿಮೆನ್ಸ್ ಮೇಂಟೆನೆನ್ಸ್ ಸಮ್ ನ್ಯೂ ಜಡ್ಜ್ಮೆಂಟ್ಸ್ Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ.. ಜುಲೈ ೧೬–೩೧, ೨೦೦೦. ಮಾರ್ಚ್ ೨೭, ೨೦೦೫ರಂದು ಪಡೆದಿದ್ದು.
- ಮುಸ್ಲಿಮ್ ಪರ್ಸನಲ್ ಲಾ ಇನ್ ಇಂಡಿಯಾ. ಪಡೆದಿದ್ದು ಫೆಬ್ರವರಿ ೭, ೨೦೦೫ರಂದು. ಪರಿಷ್ಕರಿಸಿದ್ದು ಅಕ್ಟೋಬರ್ ೭, ೨೦೦೨ರಂದು.
- ದ ಟೈಮ್ಸ್ ಆಫ್ ಇಂಡಿಯಾ. ಎಂಡ್ ಪಾಲಿಗಾಮಿ, ಮುಸ್ಲಿಮ್ ವುಮನ್ ಪ್ಲೀಡ್ಸ್ ವಿತ್ SC. 12 ಮೇ 2001. ಪಡೆದಿದ್ದು ಮಾರ್ಚ್ ೧೪, ೨೦೦೫ರಂದು.
- BJP ಪಕ್ಷದ ಜಾಲಪುಟ Archived 2012-03-14 ವೇಬ್ಯಾಕ್ ಮೆಷಿನ್ ನಲ್ಲಿ.. ಮಾರ್ಚ್ ೨೫, ೨೦೦೫ರಂದು ಪಡೆದಿದ್ದು.
- ಇಸ್ಲಾಮಿಕ್ ವಾಯ್ಸ್ (ನಿಯತಕಾಲಿಕೆ) ಆನ್ಲೈನ್. Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ.ಜೂನ್ 2000. Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ.ಮುಸ್ಲಿಮ್ ವಿಮೆನ್ ಅಂಡ್ ದ ಲಾ Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ.. ೨೬ ಮಾರ್ಚ್ ೨೦೦೫ರಂದು ಪಡೆಯಲಾಗಿದೆ.
- ಮುಖ್ತಾರ್ ಅಬ್ಬಾಸ್ರೊಂದಿಗಿನ ಸಂದರ್ಶನ, BJP ಪಕ್ಷ ರಾಷ್ಟ್ರೀಯ ವಕ್ತಾರ. ಫೆಬ್ರವರಿ ೧೦, ೨೦೦೫. ನವ ದೆಹಲಿ. ಭಾರತ
- ಫೈಟಿಂಗ್ ದ ವೇಲ್ Archived 2014-07-23 ವೇಬ್ಯಾಕ್ ಮೆಷಿನ್ ನಲ್ಲಿ.. ಮಾರ್ಚ್ ೨೭, ೨೦೦೫ರಂದು ಪಡೆಯಲಾಗಿದೆ.
- ಇಂಡಿಯನ್ ಪಬ್ಲಿಕ್ ಲಾ ಇನಿಷಿಯೇಟಿವ್. ೨೬ ಮಾರ್ಚ್ ೨೦೦೫ರಂದು ಪಡೆಯಲಾಗಿದೆ.
ಟಿಪ್ಪಣಿಗಳು
ಬದಲಾಯಿಸಿThis article includes a list of references, but its sources remain unclear because it has insufficient inline citations. (June 2009) |
- ↑ ಮಾಡರ್ನ್ ಇಂಡಿಯನ್ ಫ್ಯಾಮಿಲಿ ಲಾ - ಲೇಖಕ ವರ್ನರ್ ಮೆನ್ಸ್‌ಕಿ
- ↑ ಇಂಗ್ಲಿಷ್ ಲಾ ಇನ್ ಇಂಡಿಯಾ : ಲೇಖಕ ಅನಿಲ್ ಚಂದ್ರ ಬ್ಯಾನರ್ಜಿ
- ↑ ಲಾ ಅಂಡ್ ಕಸ್ಟಮರಿ ಲಾ ಇನ್ ಏಷ್ಯಾ
- ↑ [೧]
- ↑ "ಆರ್ಕೈವ್ ನಕಲು". Archived from the original on 2009-06-04. Retrieved 2011-03-06.
- ↑ http://www.legalserviceindia.com/wills.htm
- ↑ http://ier.sagepub.com/cgi/pdf_extract/೩೪/೧/೧
- ↑ http://www.legalserviceindia.com/article/l೩೩೮-Muslim-womens-right-for-dissolution-of-marriage.html
- ↑ THE INDIAN CHRISTIAN MARRIAGE ACT, 1872
- ↑ "ಆರ್ಕೈವ್ ನಕಲು". Archived from the original on 2008-06-11. Retrieved 2011-03-06.