ಬುರ್ಕೀನ ಫಾಸೊ

(ಉತ್ತರ ವೊಲ್ಟ್ ಇಂದ ಪುನರ್ನಿರ್ದೇಶಿತ)

ಬುರ್ಕೀನ ಫಾಸೊ, ಅಥವ ಬುರ್ಕೀನ, ಪಶ್ಚಿಮ ಆಫ್ರಿಕಾದ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಮಾಲಿ, ಪೂರ್ವಕ್ಕೆ ನೈಜರ್, ಆಗ್ನೇಯಕ್ಕೆ ಬೆನಿನ್, ದಕ್ಷಿಣಕ್ಕೆ ಟೊಗೊ ಮತ್ತು ಘಾನ, ಮತ್ತು ಈಶಾನ್ಯಕ್ಕೆ ಕೋತ್ ದ್'ಇವ್ವಾರ್ ದೇಶಗಳಿವೆ. ಮುಂಚೆ "ಮೇಲಿನ ವೋಲ್ಟಾ" ಎಂದು ಕರೆಯಲ್ಪಟ್ಟಿದ್ದ ಈ ದೇಶವನ್ನು ಆಗಸ್ಟ್ ೪, ೧೯೮೪ರಂದು ರಾಷ್ಟ್ರಪತಿ ಥಾಮಸ್ ಸಂಕಾರ ಪ್ರಸಕ್ತ ಹೆಸರಿಗೆ ಬದಲಾಯಿಸಿದನು. ಇದು ಇಲ್ಲಿನ ಪ್ರಮುಖ ಭಾಷೆಗಳಾದ ಮೊರೆ ಮತ್ತು ದಿಔಲಗಳಲ್ಲಿ "ನಿಯತ್ತಿನ ಜನರ ನಾಡು" ಎಂಬ ಅರ್ಥ ನೀಡುತ್ತದೆ. ಇಲ್ಲಿನ ಜನರು "ಬುರ್ಕೀನಬೆ" ಎಂದು ಕರೆಯಲ್ಪಡುತ್ತಾರೆ. ಪಶ್ಚಿಮ ಆಫ್ರಿಕದ ಒಂದು ಗಣರಾಜ್ಯ (ಅಪ್ಪರ್ ವೋಲ್ಟ). ಮೊದಲು ಫ್ರೆಂಚ್ ಪಶ್ಚಿಮ ಆಫ್ರಿಕದ ಒಂದು ಭಾಗವಾಗಿದ್ದು 1960ರಲ್ಲಿ ಸ್ವಾತಂತ್ರ್ಯ ಪಡೆಯಿತು. ನೆಲದ ನಡುವೆ ಇರುವ ಈ ರಾಜ್ಯವನ್ನು ಮಾಲಿ, ನೈಜರ್, ದಹೋಮಿ, ಟೋಗೊ, ಘಾನ ಮತ್ತು ಐವರಿ ಕೋಸ್ಟ್‌ಗಳು ಸುತ್ತುವರಿದಿವೆ. ಸ್ಥೂಲವಾಗಿ ಉ.ಅ. 10º ಯಿಂದ 15ºಯ ವರೆಗೆ ಹಬ್ಬಿರುವ ಈ ದೇಶದ ವಿಸ್ತೀರ್ಣ 2,74,200 ಚ.ಕಿ.ಮೀ. (1,05,839 ಚ.ಮೈ) ಜನಸಂಖ್ಯೆ೧,೭೩,೦೦,೦೦೦ (೨೦೧೪ರ ಅಂದಾಜು ).[] ರಾಜಧಾನಿ: ವಾಗಡೂಗೂ.

Burkina Faso
Flag of ಬುರ್ಕೀನ ಫಾಸೊ
Flag
Motto: "Unité, Progrès, Justice" (ಫ್ರೆಂಚ್)
"ಏಕತೆ, ಪ್ರಗತಿ, ನ್ಯಾಯ"
Anthem: Une Seule Nuit (ಫ್ರೆಂಚ್)
ಒಂದೇ ಒಂದು ರಾತ್ರಿ
Location of ಬುರ್ಕೀನ ಫಾಸೊ
Capitalಔಗಡೌಗೌ
Largest cityರಾಜಧಾನಿ
Official languagesಫ್ರೆಂಚ್
Demonym(s)Burkinabé
Governmentಅರೆ-ರಾಷ್ಟ್ರಪತಿ ಪದ್ಧತಿ ಗಣರಾಜ್ಯ
• ರಾಷ್ಟ್ರಪತಿ
ಬ್ಲೇಸ್ ಕಂಪಒರೇ
• ಪ್ರಧಾನ ಮಂತ್ರಿ
ಟೆರ್ಶಿಯಸ್ ಜೊಂಗೊ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ ೫, ೧೯೬೦
• Water (%)
0.1%
Population
• ೨೦೦೫ estimate
13,228,000 (66th)
• 1996 census
10,312,669
GDP (PPP)೨೦೦೫ estimate
• Total
$16.845 billion1 (117th)
• Per capita
$1,284 (163rd)
Gini (2003)39.5
medium
HDI (೨೦೦೪)Increase 0.342
Error: Invalid HDI value · 174th
CurrencyWest African CFA franc (XOF)
Time zoneGMT
• Summer (DST)
not observed
Calling code226
Internet TLD.bf
  1. The data here is an estimation for the year 2005 produced by the International Monetary Fund in April 2005.

ಮೇಲ್ಮೈಲಕ್ಷಣ

ಬದಲಾಯಿಸಿ

ದೇಶದ ನೆಲ ಬಹಳಮಟ್ಟಿಗೆ ಚಪ್ಪಟೆ, ವೈವಿಧ್ಯರಹಿತ, ಮಳೆಗಾಳಿಗಳು ಸವೆಸಿ ಮಟ್ಟಸಮಾಡಿದ ಶಿಲಾಭೂಯಿಷ್ಠವಾದದ್ದು. ಪಶ್ಚಿಮದಲ್ಲಿ ಈ ಹರಳುಗಲ್ಲುರಾಶಿಯ ಮೇಲೆ ಕಾಚಶಿಲೆಯ ಪ್ರಸ್ಥಭೂಮಿಯಿದೆ. ಉತ್ತರ ಈಶಾನ್ಯಗಳಲ್ಲಿ ಬಂಡೆಗಳಲ್ಲಿನ ಬೆಟ್ಟ ಸಾಲುಗಳೇರ್ಪಟ್ಟಿವೆ. ಕೋಮೊ, ವೋಲ್ಟ ನದಿಗಳೂ ಉಪನದಿಗಳೂ ಶಾಖೆಗಳೂ ಚಳಿಗಾಲ ದಲ್ಲಿ ತುಂಬಿ ಹರಿಯುತ್ತವೆ.

ವಾಯುಗುಣ

ಬದಲಾಯಿಸಿ

ಇಲ್ಲಿನ ವಾಯುಗುಣ ಎರಡು ಬಗೆಯದು. ನೈಋತ್ಯ ವೋಲ್ಟದಲ್ಲಿ ಆಗಸ್ಟ್‌-ಸೆಪ್ಟೆಂಬರಿನಲ್ಲಿ ಪರಿಮಾವಧಿ ಮಳೆ (39" ಅಥವಾ 991 ಮಿಮೀ. ಗಿಂತ ಹೆಚ್ಚು). ಉಳಿದ ಭಾಗದಲ್ಲಿ ಕಡಿಮೆ ಮಳೆ (11" ಅಥವಾ 280 ಮಿಮೀ. ನಿಂದ 39" ಅಥವಾ 991 ಮಿಮೀ. ವರೆಗೆ). ಮಳೆಗಾಲದ ಆದಿ ಅಂತ್ಯಗಳಲ್ಲಿ ಸುಂಟರಗಾಳಿ ಸಾಮಾನ್ಯ, ರಾಜ್ಯದ ಉಷ್ಣತೆಯಲ್ಲಿ ಋತುವಿನಿಂದ ಋತುವಿಗೆ ವ್ಯತ್ಯಾಸ ಹೆಚ್ಚು.

ಸಸ್ಯ, ಪ್ರಾಣಿ

ಬದಲಾಯಿಸಿ

ಇಲ್ಲಿನ ಕಾಡು ತೆಳು. ಇದಕ್ಕೆ ವಾಯುಗುಣವೇ ಕಾರಣ. ದಕ್ಷಿಣದಲ್ಲಿ ಮರಬೆರೆತ ಹುಲ್ಲುಗಾಡು. ಉತ್ತರದಲ್ಲಿ ಮುಳ್ಳುಗಿಡ ಬೆರೆತ ಹುಲ್ಲುಗಾಡು. ನದಿಗಳ ಉದ್ದಕ್ಕೂ ಸೆರಗಿನ ಜರಿಯಂತೆ ಮರಗಳ ಸಾಲು. ಕೆಲವು ಉಪಯುಕ್ತ ಮರಗಳನ್ನು ರೈತರು ಎಚ್ಚರಿಕೆ ಯಿಂದ ಉಳಿಸಿಕೊಂಡಿದ್ದಾರಾದರೂ ಒಟ್ಟಿನಲ್ಲಿ ಇಲ್ಲಿ ಮರಗಳ ನಾಶ ಸಾರ್ವತ್ರಿಕವಾಗಿ ನಡೆದಿದೆ.

ಕೆಂಮೊಗದ ಗಝೆಲ್ ಜಿಂಕೆ, ಹಿಂಬಾಗುಕೊಂಬಿನ ಹಾರ್ಟೆ-ಬೀಸ್ಟ್‌ ಚಿಗರಿ, ಆನೆ, ನೀರಾನೆ, ಕಾಡುಕೋಣ, ಮೊಸಳೆ, ಕೋತಿ, ಬಗೆಬಗೆಯ ಹಕ್ಕಿ-ಇವು ಇಲ್ಲಿನ ಪ್ರಾಣಿ ಸಂಕುಲ. ಇವುಗಳ ಜೊತೆಗೆ ಸೊಳ್ಳೆ, ಟ್ಸೆಟ್ಸಿ ನೊಣ, ಮಿಡತೆ ಮತ್ತು ಗೆದ್ದಲುಗಳ ಹಿಂಸೆಯೂ ಅಪಾಯವೂ ಅಪಾರ. ಕಪ್ಪು, ಬಿಳುಪು, ಕೆಂಪು ವೋಲ್ಟ ನದೀಶಾಖೆಗಳಲ್ಲಿ ಮೀನುಗಳು ಹೇರಳ.

ಜನ, ಜೀವನ, ಆಡಳಿತ

ಬದಲಾಯಿಸಿ

ಇಲ್ಲಿನ ಜನರನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಪಶ್ಚಿಮ ಹಾಗೂ ನೈಋತ್ಯ ಭಾಗದಲ್ಲಿರುವವರು ಪುರಾ ನಿಗ್ರೀಷಿಯೊ ಆದಿವಾಸಿ ಜನ. ಇವರು ವಿರಳ ವಸ್ತ್ರಧಾರಿಗಳು. ಈ ಜನರ ಮುಖ್ಯ ಕಸಬು ಬೇಸಾಯ, ಬೇಟೆ, ಇಲ್ಲಿ ಕುಲಾಡಳಿತಕ್ಕಿಂತ ಹೆಚ್ಚಿನ ಆಡಳಿತ ವ್ಯವಸ್ಥೆಯಿಲ್ಲ. ಉಳಿದ ಭಾಗಗಳಲ್ಲಿನ ಜನ ಸೂಡಾನ್ ಮಾದರಿಯ ತುಂಬುಡುಪು ಧರಿಸುತ್ತಾರೆ. ಇವರಲ್ಲಿ ಊಳಿಗಮಾನ್ಯ ರೀತಿಯ ಹಲವಾರು ಆಡಳಿತವ್ಯವಸ್ಥೆಗಳುಂಟು.

ಇವರಲ್ಲಿ ಬಹುಸಂಖ್ಯೆಯ ಜನ ಪ್ರಕೃತಿಯ ಆರಾಧಕರು. ಈಚೆಗೆ ಇಲ್ಲಿ ಕ್ರೈಸ್ತ ಮತ ಪ್ರಚಾರವಾಗುತ್ತಿದೆ. ಮುಸ್ಲಿಮರೂ ಇದ್ದಾರೆ. ಹಲವು ವೊಲ್ಟಾಯಿಕ್ ಭಾಷೆಗಳನ್ನಾಡುವ ಇಲ್ಲಿನ ಜನ ಅಧಿಕೃತ ಹಾಗೂ ವಾಣಿಜ್ಯ ಭಾಷೆ ಫ್ರೆಂಚ್.

ಅರ್ಥವ್ಯವಸ್ಥೆ

ಬದಲಾಯಿಸಿ

ಇಲ್ಲಿರುವವರು ಬಹುತೇಕ ರೈತಜನ, ವ್ಯವಸಾಯ ಪಶುಪಾಲನೆಗಳು ಇವರು ಮುಖ್ಯ ಉದ್ಯೋಗ. ಆದರೆ ಒಟ್ಟು ನೆಲದಲ್ಲಿ ಬೇಸಾಯವಾಗುತ್ತಿರುವ ಭಾಗ 6% ಮಾತ್ರ. ಜನಸಂದಣಿ ಹೆಚ್ಚಾಗಿರುವುದರಿಂದ ಜೋಳ, ಮೆಕ್ಕೆಜೋಳ, ಸಾರ್ಗಂ, ಬತ್ತ ಮುಂತಾದ ಆಹಾರ ಬೆಳೆಗಳೇ ಹೆಚ್ಚು. ನೆಲಗಡಲೆ ಮರಬೆಣ್ಣೆ, ಹತ್ತಿ ಮುಂತಾದ ನಿರ್ಯಾತ ಬೆಳೆಗಳಿಗೆ ಹೆಚ್ಚು ನೆಲ ಮೀಸಲಿಡುವುದು ಸಾಧ್ಯವಾಗಿಲ್ಲ. ಉತ್ತಮ ವ್ಯವಸಾಯ, ನೆಲದ ನಗ್ನೀಕರಣದ ತಡೆ, ನದೀಕಟ್ಟೆ ರಚನೆ ಇವುಗಳಿಂದ ಪರಿಸ್ಥಿತಿ ಸುಧಾರಿಸುತ್ತಿದೆ. ಪಶುಪಾಲನೆಗೆ ಸರ್ಕಾರ ಹೆಚ್ಚು ಗಮನ ಕೊಡುತ್ತಿದೆ. ನದೀ ಮೀನುಗಳೂ ವನಗಳ ಸಂಪತ್ತೂ ವಾಣಿಜ್ಯ ದೃಷ್ಟಿಯಿಂದ ಮುಖ್ಯವಾಗಬಹುದು. ಚಿನ್ನ, ಬಾಕ್ಸೈಟ್, ಮ್ಯಾಂಗನೀಸ್ ನಿಕ್ಷೇಪಗಳಿವೆಯಾದರೂ ಗಣಿಗಾರಿಕೆ ಹೆಚ್ಚಾಗಿ ಬೆಳೆದಿಲ್ಲ. ಕಚ್ಚಾ ಸಾಮಾಗ್ರಿ ಹಾಗೂ ಶಕ್ತಿಯ ಅಭಾವದಿಂದ ಕೈಗಾರಿಕೆಯ ಬೆಳೆವಣಿಗೆ ಕಡಿಮೆ. ವಾಗಡೂಗೂವಿನ ಕಟ್ಟಡ ನಿರ್ಮಾಣ, ಬೋಬೋ ಡೈಯೂಲಾಸೊವಿನ ಎಣ್ಣೆ ಗಿರಣಿ, ಸಕ್ಕರೆ ಕಾರ್ಖಾನೆ, ಹತ್ತಿ ಹಿಂಜುವ ಉದ್ಯಮ ಇವು ಮುಖ್ಯ ಕೈಗಾರಿಕೆಗಳು. 1963ರಿಂದೀಚೆಗೆ ಈ ದೇಶ ಅಭಿವೃದ್ಧಿ ಯೋಜನೆಯ ಹಾದಿಯಲ್ಲಿ ಸಾಗಿದೆ. ಈ ರಾಜ್ಯಕ್ಕೆ ಸಮುದ್ರ ತೀರವಿಲ್ಲ. ಅಂತರದೇಶೀಯ ಭೂಮಾರ್ಗಗಳು ಈ ರಾಜ್ಯದ ಮೂಲಕ ಹಾದುಹೋಗುತ್ತವೆ. ವಿದೇಶೀ ವ್ಯಾಪಾರ ನಡೆಯುವುದು ಬಹಳಮಟ್ಟಿಗೆ ಐವರಿ ಕೋಸ್ಟ್‌ ಮೂಲಕ. ವಾಗಡೂಗೂ ಹಾಗೂ ಬೋಬೋ ಡೈಯೂಲಾಸೊ ಮುಖ್ಯವಾದ ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಸಂಧಿ ಸ್ಥಾನಗಳು. ವಾಗಡೂಗೂ ಹಾಗೂ ಬೋಬೋ ಡೈಯೂಲಾಸೊಗಳಲ್ಲದೆ ಕೂಡೂಗೂ, ಊಹಿಗೂಯ, ಬ್ಯಾನ್ಫೊರ, ಕಾಯ, ಡಿಡೂಗೂ ಮುಖ್ಯ ಪಟ್ಟಣಗಳು. ಜನಸಾಂದ್ರತೆ ಕಿಲೋಮೀಟರಿಗೆ 16ಕ್ಕಿಂತ (ಚ.ಮೈ.ಗೆ 40) ಹೆಚ್ಚು. ಪಶ್ಚಿಮ ಆಫ್ರಿಕದ ಗಣರಾಜ್ಯಗಳಲ್ಲೆಲ್ಲ ಇದೇ ಅಧಿಕ.

 
ಬುರ್ಕಿನಾ ಫಾಸೋ ಗಣರಾಜ್ಯದ ರಾಷ್ಟ್ರೀಯ ಅಸೆಂಬ್ಲಿ ಇರುವ ಕಟ್ಟಡ

ಬುರ್ಕಿನಾ ಫಾಸೋ ಗಣರಾಜ್ಯದ ಆಡಳಿತಾಧಿಕಾರ ಇರುವುದು ಅಧ್ಯಕ್ಷನಲ್ಲಿ. ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಐದು ವರ್ಷಗಳ ಅವಧಿಗೆ ಈತನ ಆಯ್ಕೆ. ಈತ ಮಂತ್ರಿಮಂಡಲವೊಂದನ್ನು ರಚಿಸುತ್ತಾನೆ. ರಾಷ್ಟ್ರೀಯ ಸಭೆಯ ಸದಸ್ಯರ ಸಂಖ್ಯೆ 75. ಅಧ್ಯಕ್ಷನ ಆಯ್ಕೆಯ ಸಮಯದಲ್ಲೇ ಇದಕ್ಕೂ ಚುನಾವಣೆ. ರಾಜ್ಯದಲ್ಲಿ 39 ಜಿಲ್ಲೆಗಳೂ ಇವುಗಳ ವಿಭಾಗಗಳೂ ಇವೆ. ಸ್ಥಳೀಯ ನ್ಯಾಯಾಲಯಗಳಿಂದ ಉಚ್ಚನ್ಯಾಯಾಲಯದ ವರೆಗೆ ಸುವ್ಯವಸ್ಥಿತ ನ್ಯಾಯಾಂಗ ಚೌಕಟ್ಟು ರಚಿತವಾಗಿದೆ. (ಪಿ.ಎಚ್.)

ಇತಿಹಾಸ

ಬದಲಾಯಿಸಿ

ಶಿಲಾಯುಗದ ಸಂಸ್ಕೃತಿಯ ಕೊಡಲಿಗಳು ಉತ್ತರ ವೋಲ್ಟದಲ್ಲಿ ದೊರಕಿವೆ. ಬೋಬೊ, ಲೋಬಿ, ಗೂರೂನ್ಸಿಗಳೇ ಈಗ ತಿಳಿದಿರುವ ಮಟ್ಟಿಗೆ ಈ ರಾಜ್ಯದ ಅತ್ಯಂತ ಪುರಾತನ ನಿವಾಸಿಗಳು. 14ನೆಯ ಶತಮಾನದಲ್ಲಿ ದಕ್ಷಿಣದಿಂದ ಅಶ್ವಾರೋಹಿ ಆಕ್ರಮಣಕಾರರು ಈ ಪ್ರದೇಶದ ಮೇಲೇರಿ ಬಂದು ಗೂರ್ಮ ಮತ್ತು ಮಾಸಿ ರಾಜ್ಯ ಸ್ಥಾಪನೆ ಮಾಡಿದರು. ಆಸ್ಥಾನ, ಮಂತ್ರಿಗಳು, ಸೇವಕರು, ಅಡಿಯಾಳುಗಳಿಂದ ಕೂಡಿದ ಈ ರಾಜ್ಯಗಳು ಇಪ್ಪತ್ತನೆಯ ಶತಮಾನದಲ್ಲೂ ಉಳಿದುಕೊಂಡು ಬಂದುವು. ಮಾಸಿ ರಾಜ್ಯಕ್ಕೆ ಫೂಲಾನಿ ಮತ್ತು ಸೊಂಗೈ ಮುಸ್ಲಿಮರ ಆಕ್ರಮಣಗಳನ್ನು ತಡೆಗಟ್ಟುವ ಸಾಮರ್ಥ್ಯವಿತ್ತು.

 
ಮಾಸಿ ರಾಜ್ಯದ ಸೈನಿಕರು ಬಲಾಢ್ಯ ಮಾಲಿ ಸಾಮ್ರಾಜ್ಯದ ಸೀಮೆಯೊಳಗೆ ದಾಳಿಮಾಡಿದಾಗ.
 
೧೮೯೨ರಲ್ಲಿ ಫ್ರೆಂಚರ ದಾಳಿಗೆ ಪ್ರತಿರೋಧ

ಉತ್ತರ ವೋಲ್ಟದ ಬಾಗಿಲು ಮೊದಲ ಬಾರಿಗೆ ಪಾಶ್ಚಾತ್ಯರಿಗೆ ದೊಡ್ಡವಾಗಿ ತೆರೆದದ್ದು 1886ರಲ್ಲಿ-ಮಾಸಿ ಪ್ರದೇಶವನ್ನು ಜರ್ಮನ್ ಪ್ರವಾಸಿ ಕ್ರೌಸ್ಸುತ್ತಿ ನೋಡಿದಾಗ. 1889ರಲ್ಲಿ ಫ್ರೆಂಚ್ ಸೇನಾಧಿಕಾರಿ ಲೂಯಿ ಗಸ್ಟಾವ್ ಬಿಂಗರ್ ಇಲ್ಲಿಗೆ ಬಂದಿದ್ದ. 1895ರಲ್ಲಿ ಫ್ರಾನ್ಸು ಇಲ್ಲಿನ ಒಂದು ಪ್ರಾಂತ್ಯದ ಮೇಲೆ ತನ್ನ ರಕ್ಷಣೆಯ ಕೊಡೆ ಹಿಡಿಯಿತು. ಅಲ್ಲಿಂದ ಮುಂದೆ ಅನೇಕ ಪ್ರಾಂತ್ಯಗಳು ಒಂದೊಂದಾಗಿ ಫ್ರೆಂಚ್ ವಶಕ್ಕೆ ಬಂದುವು. 1898ರಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ಆದ ಒಂದು ಒಡಂಬಡಿಕೆಯ ಮೂಲಕ ಫ್ರಾನ್ಸಿನ ಈ ಪ್ರದೇಶಗಳಿಗೂ ಗೋಲ್ಡ್‌ ಕೋಸ್ಟಿಗೂ ನಡುವಣ ಗಡಿರೇಖೆಯ ನಿಷ್ಕರ್ಷೆಯಾಯಿತು.

ಫ್ರೆಂಚರು ಈ ದೇಶವನ್ನು ಅನೇಕ ಆಡಳಿತ ಜಿಲ್ಲೆಗಳಾಗಿ ವಿಂಗಡಿಸಿದರು. ದೇಶೀಯ ಮುಖಂಡರೂ ಉಳಿದುಕೊಂಡರು. ಇದು ಮೊದಲು ಫ್ರೆಂಚ್ ಸೂಡಾನಿಗೆ ಸೇರಿದ್ದು ಅನಂತರ ಪ್ರತ್ಯೇಕ ರಾಜ್ಯವಾಯಿತು (1919).

1932ರಲ್ಲಿ ಇದನ್ನು ಐವರಿ ಕೋಸ್ಟ್‌, ನೈಜರ್, ಹಾಗೂ ಫ್ರೆಂಚ್ ಸೂಡಾನುಗಳ ನಡುವೆ ಭಾಗ ಮಾಡಲಾಯಿತು. ಆದರೆ 1947ರಲ್ಲಿ ಇದನ್ನು ಮತ್ತೆ ಪ್ರತ್ಯೇಕಿಸಿದಾಗ ಇದಕ್ಕೆ ದೊರಕಿದೆ ಬಹುಮಾನವೆಂದರೆ ಫ್ರಾನ್ಸಿನ ಸಾಗರಾಂತರ ಪ್ರದೇಶವೆಂಬ ಅಧೀನಸ್ಥಾನ. ಇದಕ್ಕೆ ಪ್ರತ್ಯೇಕ ಸರ್ಕಾರ ಸ್ಥಾಪಿತವಾದದ್ದು 1957ರಲ್ಲಿ. 1959ರಲ್ಲಿ ಇದನ್ನು ದಹೋಮಿ, ಐವರಿ ಕೋಸ್ಟ್‌, ನೈಜರ್ಗಳೊಂದಿಗೆ ಸೇರಿಸಿ ಒಂದು ಬಗೆಯ ಸಡಿಲ ಒಕ್ಕೂಟ ರಚಿಸಲಾಯಿತು. 1960ರ ಆಗಸ್ಟ್‌ 5 ರಂದು ಸ್ವತಂತ್ರವಾದ ಈ ರಾಜ್ಯಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿದ್ದು ಅದೇ ವರ್ಷದ ಸೆಪ್ಟೆಂಬರಿನಲ್ಲಿ. 1966ರಲ್ಲಿ ಸಂಭವಿಸಿದ ಆಂತರಿಕ ಗಲಭೆಗಳ ಪರಿಣಾಮವಾಗಿ ಆಗಿನ ಅಧ್ಯಕ್ಷ ರಾಜೀನಾಮೆ ಕೊಡಬೇಕಾಗಿ ಬಂದು ಇಲ್ಲಿನ ಅಧಿಕಾರ ಸೇನೆಯ ವಶಕ್ಕೆ ಬಂತು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
Trade

ಉಲ್ಲೇಖಗಳು

ಬದಲಾಯಿಸಿ
  1. "Burkina Faso population projection". insd.bf (in ಫ್ರೆಂಚ್). 2014. Archived from the original on 1 ಸೆಪ್ಟೆಂಬರ್ 2014. Retrieved 1 October 2014.