ಅಖಂಡ ಭಾರತ (ಅವಿಭಜಿತ ಭಾರತ)ಅಖಂಡ ಹಿಂದೂಸ್ತಾನ್ ಎಂದೂ ಕರೆಯಲ್ಪಡುವ ಏಕೀಕೃತ ಗ್ರೇಟರ್ ಇಂಡಿಯಾದ ಒಂದು ಪರಿಕಲ್ಪನೆ. [] [] [] ಆಧುನಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಒಂದೇ ರಾಷ್ಟ್ರವೆಂದು ಇದು ಪ್ರತಿಪಾದಿಸುತ್ತದೆ. [] [] []

ಅಖಂಡ ಭಾರತ ಪರಿಕಲ್ಪನೆಯ ನಕ್ಷೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಅನ್ನು ಚಿತ್ರಿಸುತ್ತದೆ. []

ಇತಿಹಾಸ

ಬದಲಾಯಿಸಿ

ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ, ಕನೈಯಾಲಾಲ್ ಮನೆಕ್ಲಾಲ್ ಮುನ್ಷಿ ಅಖಂಡ ಹಿಂದೂಸ್ತಾನದ ವಾದವನ್ನು ಪ್ರತಿಪಾದಿಸಿದರು, ಇದನ್ನು ಮಹಾತ್ಮಾ ಗಾಂಧಿಯವರು ಸಹ ಒಪ್ಪಿದ್ದರು. ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬಯಸುತ್ತದೆ ಅದುದರಿಂದ ಹಿಂದೂ-ಮುಸ್ಲಿಂ ಏಕತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ತಿಳಿದಿದ್ದರು []. ಮಝರ್ ಅಲಿ ಖಾನ್ ಎಂಬ ಪತ್ರಕರ್ತರು ತಮ್ಮ ಲೇಖನದಲ್ಲಿ"ಖಾನ್ ಅಬ್ದುಲ್ ಗಫಾರ್ ಖಾನ್ ಸಹೋದರರು ಅಖಂಡ ಹಿಂದೂಸ್ತಾನಕ್ಕಾಗಿ ಹೋರಾಡಲು ನಿರ್ಧರಿಸಿದ್ದಾರೆ ಸಾಧ್ಯವಿದ್ದರೆ ಮುಸ್ಲಿಂ ಲೀಗ್‌ ಈ ವಿಷಯವನ್ನು ಪ್ರಾಂತ್ಯದ ಮತದಾರರ ಮುಂದೆ ಬಗೆಹರಿಸಿಕೊಳ್ಳಿ" ಎಂದು ಸವಾಲು ಹಾಕಿದರು []. ೭ - ೮ ಅಕ್ಟೋಬರ್ ೧೯೪೪ ರಂದು, ದೆಹಲಿಯಲ್ಲಿ, ರಾಧಾ ಕುಮುದ್ ಮುಖರ್ಜಿ ಅವರು ಅಖಂಡ ಹಿಂದೂಸ್ತಾನ್ ನಾಯಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು[].

೧೯೩೭ ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ ೧೯ ನೇ ವಾರ್ಷಿಕ ಅಧಿವೇಶನದಲ್ಲಿ ಭಾರತೀಯ ಕಾರ್ಯಕರ್ತ ಮತ್ತು ಹಿಂದೂ ಮಹಾಸಭಾದ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರು "ಕಾಶ್ಮೀರದಿಂದ ರಾಮೇಶ್ವರಂ, ಸಿಂಧ್‌ನಿಂದ ಅಸ್ಸಾಂವರೆಗೆ ಭಾರತ ಅವಿಭಾಜ್ಯವಾಗಿ ಉಳಿಯಬೇಕು ಎಂದು ಪ್ರತಿಪಾದಿಸಿದರು" ಮುಂದುವರಿದು ಅವರು "ಭಾರತೀಯ ರಾಷ್ಟ್ರ ಮತ್ತು ಭಾರತ ರಾಜ್ಯಕ್ಕೆ ಅವಿಭಜಿತ ನಿಷ್ಠೆ ಮತ್ತು ನಿಷ್ಠೆಯನ್ನು ಹೊಂದಿರುವ ಎಲ್ಲಾ ನಾಗರಿಕರನ್ನು ಪರಿಪೂರ್ಣ ಸಮಾನತೆಯೊಂದಿಗೆ ಪರಿಗಣಿಸಲಾಗುವುದು. ಜಾತಿ, ಧರ್ಮ ಅಥವಾ ಧರ್ಮವನ್ನು ಲೆಕ್ಕಿಸದೆ ಸಮಾನವಾಗಿ ಕರ್ತವ್ಯಗಳು ಮತ್ತು ಕಟ್ಟುಪಾಡುಗಳನ್ನು ಹಂಚಿಕೊಳ್ಳಬೇಕು. ಎಲ್ಲರಿಗೂ ಸಮಾನ ಪ್ರಾತಿನಿಧ್ಯ ಕೊಡಬೇಕು. ಒಬ್ಬ ವ್ಯಕ್ತಿ ಒಂದು ಮತದಾನ ಎಂಬ ತತ್ವದ ಮೇಲೆ ಅಥವ ಜನಸಂಖ್ಯಾ ಅನುಪಾತದ ಮೇಲೆ ಅಥವ ಸಾರ್ವಜನಿಕ ಸೇವೆಗಳ ಆಧಾರದ ಮೇಲೆ ಪ್ರಾತಿನಿಧ್ಯ ಕೊಡಬೇಕು" [೧೦] ಎಂದು ಹೇಳಿದ್ದಾರೆ.

ಸಮಕಾಲೀನ ಬಳಕೆ

ಬದಲಾಯಿಸಿ

ಹಿಂದೂ ಮಹಾಸಭಾ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಹಿಂದೂ ಸೇನೆ, ಹಿಂದೂ ಜನಜಾಗೃತಿ ಸಮಿತಿ, ಭಾರತೀಯ ಜನತಾ ಪಾರ್ಟಿ ಮುಂತಾದ ಹಲವಾರು ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳು ಅಖಂಡ ಭಾರತ ಅಥವಾ ಅಖಂಡ ಹಿಂದೂಸ್ತಾನದ ರಚನೆಗೆ ಹಲವಾರು ಸಂದರ್ಭಗಳಲ್ಲಿ ಕರೆಯನ್ನು ಕೊಟ್ಟಿವೆ[೧೧] . ಅಖಂಡ ಹಿಂದೂಸ್ತಾನ್ ಮೋರ್ಚಾ ಎಂಬ ಸಂಸ್ಥೆ ಇದನ್ನೇ ಗುರಿಯನ್ನಾಗಿ ಮಾಡಿಕೂಂಡಿದೆ ಇದರ ಹೆಸರಿನಲ್ಲಿ ಅಖಂಡ ಪದವನ್ನು ಹೊಂದಿದೆ [೧೨].

೧೯೪೭ ರ ಪೂರ್ವದ ಭಾರತದ ನಕ್ಷೆಗಳು, ಆಧುನಿಕ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಬ್ರಿಟಿಷ್ ಭಾರತದ ಭಾಗವಾಗಿ ತೋರಿಸುತ್ತದೆ. ಈ ನಕ್ಷೆ ಅಖಂಡ ಭಾರತದ ಗಡಿಗಳನ್ನು ವಿವರಿಸುತ್ತದೆ. ಅಖಂಡ ಭಾರತದ ರಚನೆಯು ಸೈದ್ಧಾಂತಿಕವಾಗಿ ಹಿಂದುತ್ವ (ಹಿಂದೂ ರಾಷ್ಟ್ರೀಯತೆ), ಸಂಘಟನೆ (ಏಕತೆ) ಮತ್ತು ಶುದ್ಧಿ (ಶುದ್ಧೀಕರಣ) ಎಂಬ ತತ್ವಗಳನ್ನು ಹೊಂದಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಠ್ಯಪುಸ್ತಕದ ಮೊದಲ ಆವೃತ್ತಿಯ ಅಖಿಲ ಭಾರತೀಯ ಸಂಸ್ಕೃತ ಜ್ಞಾನ ಪರೀಕ್ಷೆಯ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ವಿಭಜನೆಗೆ ಮುಂಚೆ ಇದ್ದ "ಅಖಂಡ ಭಾರತ" ನಕ್ಷೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಭಾಗಗಳನ್ನು ತೋರಿಸಿದೆ. ಇದಲ್ಲದೆ ಭಾರತೀಯ ಮಜ್ದೂರ್ ಸಂಘ ತನ್ನ ನಿಯತಕಾಲಿಕೆಯಲ್ಲಿ ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ ಗಳನ್ನು ಒಳಗೂಂಡ ನಕ್ಷೆಯನ್ನು ಸೇರಿಸಿದೆ[೧೩].

ಬಲಪಂಥೀಯ ಬಿಜೆಪಿಯ ನಾಯಕತ್ವವು ಈ ವಿಷಯದ ಬಗ್ಗೆ ತೊಳಲಾಡುತಿದ್ದರೆ, ಆರ್‌ಎಸ್‌ಎಸ್ ಯಾವಾಗಲೂ ಈ ಕಲ್ಪನೆಯ ಪ್ರಬಲ ಪ್ರತಿಪಾದಕವಾಗಿದೆ. [೧೪] .</ref>[೧೫] ಆರ್‌ಎಸ್‌ಎಸ್ ಮುಖಂಡ ಹು.ವೇ ಶೇಷಾದ್ರಿ ಅವರ ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್ ಎಂಬ ಪುಸ್ತಕವು ಅಖಂಡ ಭಾರತ ಪರಿಕಲ್ಪನೆಯ ಮಹತ್ವವನ್ನು ಒತ್ತಿಹೇಳುತ್ತದೆ. [೧೬] ಆರ್‌ಎಸ್‌ಎಸ್ ಸಂಯೋಜಿತ ಮ್ಯಾಗಜೀನ್ ಆರ್ಗನೈಸರ್ ಆಗಾಗ ಈಗಿನ ಸರಸಂಘ ಚಾಲಕ, ಮೋಹನ್ ಭಾಗವತ್‌ರಂತಹ ನಾಯಕರ ಸಂಪಾದಕೀಯಗಳನ್ನು ಪ್ರಕಟಿಸುತ್ತದೆ. ಅಖಂಡ ಭಾರತ ಮತ್ತು ಸಂಪೂರ್ಣ ಸಮಾಜ (ಐಕ್ಯ ಸಮಾಜ) ಮಾತ್ರ ಭಾರತದ ಜನರಿಗೆ "ನೈಜ" ಸ್ವಾತಂತ್ರ್ಯವನ್ನು ತರಬಲ್ಲದು ಎಂಬ ತತ್ವವನ್ನು ಪ್ರತಿಪಾದಿಸುತ್ತದೆ [೧೭]. ಭಾರತದ ಪುನರೇಕೀಕರಣದ ಕರೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, [೧೮] ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಬೆಂಬಲಿಸಿದ್ದಾರೆ. [೧೯]

ಡಿಸೆಂಬರ್ ೨೦೧೫ ರಲ್ಲಿ, ನರೇಂದ್ರ ಮೋದಿಯವರ ಪಾಕಿಸ್ತಾನದ ಲಾಹೋರ್‌ಗೆ ರಾಜತಾಂತ್ರಿಕ ಭೇಟಿಯ ನಂತರ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ (ಅಲ್ ಜಜೀರಾದ ಮೆಹದಿ ಹಸನ್‌ಗೆ ನೀಡಿದ ಸಂದರ್ಶನದಲ್ಲಿ) " ಆರ್‌ಎಸ್‌ಎಸ್ ಒಂದು ದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಂದಾಗುತ್ತವೆ ಎಂದು ನಂಬುತ್ತದೆ. ಏತಿಹಾಸಿಕ ಕಾರಣಗಳಿಂದ ಕೇವಲ ೬೦ ವರ್ಷಗಳ ಹಿಂದೆ ಬೇರ್ಪಟ್ಟ ಈ ರಾಷ್ಟ್ರಗಳು ಮುಂದೊಮ್ಮೆ ಜನಾಭಿಪ್ರಾಯದ ಮೂಲಕ ಒಟ್ಟಿಗೆ ಸೇರುತ್ತದೆ ಮತ್ತು ಅಖಂಡ ಭಾರತವನ್ನು ಪನಃ ರಚಿಸಲಾಗುತ್ತದೆ" [೨೦] ಎಂದು ಹೇಳಿದರು. ಮಾರ್ಚ್ ೨೦೧೯ ರಲ್ಲಿ, ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಅವರು ೨೦೨೫ ರ ವೇಳೆಗೆ ಪಾಕಿಸ್ತಾನವು ಭಾರತದೊಂದಿಗೆ ಮತ್ತೆ ಒಂದಾಗಲಿದೆ ಎಂದು ಹೇಳಿಕೊಂಡರು, ಭಾರತೀಯರು ಲಾಹೋರ್ ಮತ್ತು ಟಿಬೆಟ್‌ನ ಮಾನಸರೋವರ ಸರೋವರದಲ್ಲಿ ನೆಲೆಸಬಹುದು. ಢಾಕಾದಲ್ಲಿ ಭಾರತೀಯ ಮಿತ್ರ ಸರ್ಕಾರವಿದೆ ಮತ್ತು ಯುರೋಪಿಯನ್ ಯೂನಿಯನ್ ಮಾದರಿಯ ಅಖಂಡ ಭಾರತವು ರೂಪುಗೊಳ್ಳುತ್ತದೆ [೨೧]ಎಂದು ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ವಿವಾದಕ್ಕೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಪುನರ್ ಏಕೀಕರಣವೇ ಏಕೈಕ ಪರಿಹಾರವಾಗಿದೆ ಇದು ಬಲಿಷ್ಠ, ಜಾತ್ಯತೀತ, ಆಧುನಿಕ ಚಿಂತನೆಯ ಸರ್ಕಾರದ ಬುನಾದಿ ಎಂದು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಪಾಕಿಸ್ತಾನಿ ಪತ್ರಿಕೆ ದಿ ನೇಷನ್‌ನಲ್ಲಿ ಕೊಟ್ಟ ಸಂದರ್ಶನದಲ್ಲಿ ಹೇಳಿದರು [೨೨] [೨೩]. ಅವರು ನ್ಯೂಸ್‌ಲಾಂಡ್ರಿಗೆ ಒಂದು ಲೇಖನದಲ್ಲಿ ಪುನರೇಕೀಕೃತ ಭಾರತಕ್ಕೆ ತಮ್ಮ ಬೆಂಬಲದ ಕಾರಣಗಳನ್ನು ವಿವರಿಸಿದರು [೨೪] ಇಂತಹ ರಾಜ್ಯವನ್ನು ಜಾತ್ಯತೀತ ಸರ್ಕಾರವು ಆಡಳಿತ ನಡೆಸುತ್ತದೆ ಎಂದು ಕಾಟ್ಜು ಪ್ರತಿಪಾದಿಸಿದರು[೨೫]. ಕಾಟ್ಜು ಅವರು ಭಾರತೀಯ ಪುನರೇಕೀಕರಣ ಸಂಘದ (IRA) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಮೇಲಿನ ಈ ಕಾರಣಕ್ಕಾಗಿ IRA ಅಭಿಯಾನಗಳನ್ನು ಮಾಡುತ್ತದೆ [೨೬] [೨೭] ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಏಪ್ರಿಲ್ ೨೦೦೪ ರಲ್ಲಿ, ಭಾರತ ಮತ್ತು ಪಾಕಿಸ್ತಾನದ ಸಾರ್ವಭೌಮ ರಾಷ್ಟ್ರಗಳ ಒಕ್ಕೂಟವನ್ನು ಯುರೋಪಿಯನ್ ಯೂನಿಯನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ರಷ್ಯನ್ ಫೆಡರೇಶನ್ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಪ್ರಬಲ ಭೌಗೋಳಿಕ ರಾಜಕೀಯ ಘಟಕವನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸಿದರು[೨೮].

ಭಾರತೀಯ ಸಂವಿಧಾನದ ೩೭೦ ಮತ್ತು ೩೫ಎ (ಜಮ್ಮು ಮತ್ತು ಕಾಶ್ಮೀರದ ಅರೆ ಸ್ವಾಯತ್ತತೆಯನ್ನು ತೆಗೆದುಹಾಕುವುದು) ರದ್ದತಿಯ ನಂತರ ಆಗಸ್ಟ್ ೨೦೧೯ ರಂದು ಶಿವಸೇನೆಯಂತಹ ಹಿಂದೂ ರಾಷ್ಟ್ರೀಯತಾವಾದಿ ರಾಜಕೀಯ ಗುಂಪುಗಳು ಅಖಂಡ ಭಾರತದ ಹೆಸರಿನಲ್ಲಿ ಪಾಕಿಸ್ತಾನ-ಆಡಳಿತದ ಕಾಶ್ಮೀರವನ್ನು ಮರುಪಡೆಯಲು ಪ್ರಯತ್ನಿಸಿಬೇಕು, ಎಂದು ಅಭಿಪ್ರ್ರಯ ಪಟ್ಟವು [೨೯] [೩೦].

೧೭ನೇ ನವೆಂಬರ್ ೨೦೨೦ ರಂದು, ಅರ್ ಎಸ್ ಎಸ್ ಪ್ರಚಾರಕರು "ಅಖಂಡ ಭಾರತ" ವಿಷಯ ಆಧಾರಿತ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ಈ ಕ್ಯಾಲೆಂಡರ್ ಅನ್ನು ಜೈಪುರದ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತದ ಪೋಷಕರಿಂದ ಸಿದ್ಧಪಡಿಸಲಾಗಿದೆ. [೩೧]

 
೧೭ ನವೆಂಬರ್, ೨೦೨೦ ರಂದು ಜೈಪುರದಲ್ಲಿ RSS ಪ್ರಚಾರಕರು ಅಖಂಡ ಭಾರತ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು

೨೦೨೩ ರಲ್ಲಿ, ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿಅಶೋಕನ ಮೌರ್ಯ ಸಾಮ್ರಾಜ್ಯದ ನಕ್ಷೆಯ ಭಿತ್ತಿಚಿತ್ರ ವನ್ನು ಅನಾವರಣಗೊಳಿಸಲಾಯಿತು. ಇದು ಭಾರತದ ನೆರೆಯ ದೇಶಗಳಿಂದ ವಿವಾದ ಮತ್ತು ಟೀಕೆಗಳಿಗೆ ಗುರಿಯಾಯಿತು. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಇದು " ಐತಿಹಾಸಿಕ ಪರಿಷ್ಕರಣೆ ಮತ್ತು ವಿಸ್ತರಣಾವಾದಿ ಮನಸ್ಥಿತಿಯನ್ನು ಅಭಿವ್ಯಕ್ತಿಪಡಿಸುತ್ತದೆ" ಎಂದು ಟೀಕಿಸಿದರು. ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಕಿರಿಯ ಸಚಿವರು "ನೇಪಾಳದ ಗಡಿಯನ್ನು ಭಾರತ ತನ್ನನಕ್ಷೆಯಲ್ಲಿ ಸೇರಿಸಿ ಸಂಸತ್ತಿನಲ್ಲಿ ಪ್ರದರ್ಶನ ಮಾಡಿದ್ದು ಸರಿಯಲ್ಲ" ಎಂದು ಹೇಳಿದ್ದಾರೆ[೩೨]. ಹಲವಾರು ನೇಪಾಳಿ ರಾಜಕಾರಣಿಗಳು ಸಹ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಇದು "[ಅಶೋಕ] ಅಳವಡಿಸಿಕೊಂಡ ಮತ್ತು ಹರಡಿದ ಜವಾಬ್ದಾರಿಯುತ ಮತ್ತು ಜನ-ಆಧಾರಿತ ಆಡಳಿತದ ಕಲ್ಪನೆಯನ್ನು" ಸಂಕೇತಿಸುತ್ತದೆ ಎಂದು ಹೇಳಿದರೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಇತರ ರಾಜಕಾರಣಿಗಳು ಇದನ್ನು ಅಖಂಡದ ಸಂಕೇತವೆಂದು ಘೋಷಿಸಿದರು. ಭಾರತ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ "ಸಂಕಲ್ಪ ಸ್ಪಷ್ಟವಾಗಿದೆ. ಅಖಂಡ ಭಾರತ" ಎಂದು ಟ್ವೀಟ್ ಮಾಡಿದ್ದಾರೆ. [೩೨]

ಸಹ ನೋಡಿ

ಬದಲಾಯಿಸಿ

 

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Banerjee, Supurna; Ghosh, Nandini (17 September 2018). Caste and Gender in Contemporary India: Power, Privilege and Politics. en:Taylor & Francis. ISBN 978-0-429-78395-1. The Hindutva discourse believes in India, Pakistan, Bangladesh and Afghanistan all being a part of Akhand Bharat as they are a part of the sacred soil of the Hindu nation with common claims of nationalism.
  2. Erdman, H. L. (17 December 2007). The Swatantra Party and Indian Conservatism. Cambridge University Press. p. 55. ISBN 9780521049801. The ultimate reunification of the subcontinent is a professed goal, as it is for the Mahasabha, but here, too, there is a difference in emphasis which deserves note: for the Sangh, the goal is 'Akhand Bharat', while for the Mahasabha it is 'Akhand Hindustan'.
  3. Chitkara, M. G. (1 January 2004). Rashtriya Swayamsevak Sangh. APH Publishing. p. 262. ISBN 9788176484657. Those who dub Shri L. K. Advani, the Home Minister of India and others as foreigners, must realise that the freedom struggle was a mass movement of all the people of entire Akhand Hindustan (United Bharat).
  4. Prasad, Sumit Ganguly, Jai Shankar (27 July 2019). "India Faces a Looming Disaster". Foreign Policy (in ಅಮೆರಿಕನ್ ಇಂಗ್ಲಿಷ್). Archived from the original on 30 July 2019. Retrieved 8 August 2019.{{cite web}}: CS1 maint: multiple names: authors list (link)
  5. Khandelwal, Meena; Hausner, Sondra L.; Gold, Ann Grodzins (2007). Nuns, Yoginis, Saints, and Singers: Women's Renunciation in South Asia. Zubaan. ISBN 978-81-89884-34-5. Archived from the original on 15 July 2022. Retrieved 21 January 2021.
  6. Chatterji, Angana P.; Hansen, Thomas Blom; Jaffrelot, Christophe (August 2019). Majoritarian State: How Hindu Nationalism Is Changing India (in ಇಂಗ್ಲಿಷ್). Oxford University Press. p. 161. ISBN 978-0-19-007817-1.
  7. Ghose, Sankar (1 January 1991). Mahatma Gandhi. Allied Publishers. p. 315. ISBN 9788170232056. Later, K.M. Munishi, with Gandhi's blessing, also resigned from the Congress to plead for Akhand Hindustan as a counter blast to Pakistan. Gandhi, who previously thought that swaraj was impossible without Hindu-Muslim unity, subsequently came to the conclusion that as Britain wanted to retain her empire by pursuing a policy of divide and rule, Hindu-Muslim unity could not be achieved as long as the British were there.
  8. Khan, Mazhar Ali (1996). Pakistan: The First Twelve Years. Oxford University Press. ISBN 9780195776768. Archived from the original on 30 April 2016. Retrieved 14 August 2015. Many months ago, when the Pakistan issue was still in the melting pot, the Khan brothers determined to fight for Akhand Hindustan, and challenged the League to fight the issue out before the electorate of the Province.
  9. Sharma, Jai Narain (1 January 2008). Encyclopaedia Eminent Thinkers. Concept Publishing Company. p. 88. ISBN 9788180694929. On 5 August 1944, he issued a common letter to the leaders of various parties making a proposal to hold Akhand Hindustan Leaders' Conference. Such a conference was held on 7 and 8 October in Delhi. It was presided over by Dr. Radha Kumud Mukherji.
  10. Sampath, Vikram (7 August 2019). "Savarkar Wanted One God, One Nation, One Goal". The Print India. Archived from the original on 8 August 2019. Retrieved 8 August 2019.
  11. Suda, Jyoti Prasad (1953). India, Her Civic Life and Administration. Jai Prakash Nath & Co. Archived from the original on 5 February 2016. Retrieved 14 August 2015. Its members still swear by the ideal of Akhand Hindusthan.
  12. Hindu Political Parties. General Books. 30 May 2010. ISBN 9781157374923.
  13. Ghosh, Papiya (21 March 2014). Partition and the South Asian Diaspora: Extending the Subcontinent (in ಇಂಗ್ಲಿಷ್). Routledge. ISBN 9781317809654. Archived from the original on 8 March 2021. Retrieved 9 August 2019.
  14. Jyotirmaya Sharma, "Ideological heresy?, en:The Hindu, 2005-06-19.
  15. Radhika Ramaseshan, "Advani fires Atal weapon Archived 28 July 2013 ವೇಬ್ಯಾಕ್ ಮೆಷಿನ್ ನಲ್ಲಿ.", The Telegraph, 16 June 2005.
  16. Ashish Vashi, "Anti-Sardar Patel book sold from RSS HQ in Gujarat", en:The Times of India, 27 August 2009.
  17. Manini Chatterjee, "Only by Akhand Bharat Archived 15 July 2022 ವೇಬ್ಯಾಕ್ ಮೆಷಿನ್ ನಲ್ಲಿ.", en:The Indian ExpressThe Indian Express, 1 February 2007.
  18. "Sindhis want Sindh in India?Modi gives example of Jews". DeshGujarat (in ಅಮೆರಿಕನ್ ಇಂಗ್ಲಿಷ್). 24 March 2012. Archived from the original on 12 December 2019. Retrieved 8 September 2019.
  19. "One day, India, Pak and Bangladesh could reunite as Akhand Bharat: Ram Madhav". The Indian Express (in Indian English). 27 December 2015. Archived from the original on 13 December 2019. Retrieved 8 September 2019.
  20. "RSS and the idea of Akhand Bharat". The Indian Express (in Indian English). 4 January 2016. Archived from the original on 8 August 2019. Retrieved 8 August 2019.
  21. Scroll Staff (17 March 2019). "Pakistan will be part of India after 2025, claims RSS leader Indresh Kumar: Report". Scroll.in (in ಅಮೆರಿಕನ್ ಇಂಗ್ಲಿಷ್). Archived from the original on 3 April 2019. Retrieved 8 August 2019.
  22. "The truth about Pakistan". The Nation. 2 March 2013. Archived from the original on 10 November 2013. Retrieved 9 January 2018.
  23. "Pakistan all-praise for Markandey Katju". The Indian Express. 7 March 2013. Archived from the original on 10 March 2013. Retrieved 9 January 2018.
  24. "We must reunite: Why Pakistan, India and Bangladesh should be one country". Newslaundry. 8 December 2015. Archived from the original on 17 August 2018. Retrieved 9 January 2018.
  25. "India And Pakistan Must Reunite For Their Mutual Good". HuffPost India (in ಇಂಗ್ಲಿಷ್). 10 April 2017. Archived from the original on 22 November 2020. Retrieved 9 February 2019.
  26. "Mission Statement of the Indian Reunification Association" (in English). Indica News. 7 February 2019. Archived from the original on 22 November 2020. Retrieved 9 February 2019.{{cite web}}: CS1 maint: unrecognized language (link)
  27. Markandey Katju (10 April 2017). "India And Pakistan Must Reunite For Their Mutual Good". The Huffington Post (in English). Archived from the original on 22 November 2020. Retrieved 9 February 2019.{{cite web}}: CS1 maint: unrecognized language (link)
  28. "The Tribune, Chandigarh, India – Opinions". tribuneindia.com. Archived from the original on 30 January 2017. Retrieved 9 August 2019.
  29. "Dream of 'Akhand Bharat' fulfilled partially with Article 370 abrogation: Shiv Sena lauds Modi, Amit Shah". Zee News (in ಇಂಗ್ಲಿಷ್). 6 August 2019. Archived from the original on 8 August 2019. Retrieved 8 August 2019.
  30. Wasim, Amir (8 August 2019). "Govt, opposition united on Kashmir, divided on domestic issues". DAWN.COM (in ಇಂಗ್ಲಿಷ್). Archived from the original on 8 August 2019. Retrieved 8 August 2019.
  31. "RSS प्रचारकों पर जारी किया अखंड भारत कैलेंडर, जीवनी-संघ के कार्यों का किया गया उल्लेख". Zee Rajasthan (in ಹಿಂದಿ). 2020-11-17. Archived from the original on 17 November 2020. Retrieved 2021-09-16.
  32. ೩೨.೦ ೩೨.೧ Mogul, Rhea (13 June 2023). "Why a map in India's new Parliament is making its neighbors nervous". CNN. Archived from the original on 16 June 2023. Retrieved 17 June 2023.


ಬಾಹ್ಯ ಕೊಂಡಿಗಳು

ಬದಲಾಯಿಸಿ

*ಅಖಂಡ ಭಾರತ