ಮಾನಸಸರೋವರ ಅಥವಾ ಮಾನಸರೋವರ ಟಿಬೆಟ್ಲ್ಹಾಸಾ ದಿಂದ ಸುಮಾರು ೨೦೦೦ ಕಿ.ಮೀ. ದೂರದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಸಿಹಿನೀರ ಸರೋವರ. ಮಾನಸಸರೋವರದ ಪಶ್ಚಿಮಕ್ಕೆ ರಾಕ್ಷಸತಾಲ್ ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ ಕೈಲಾಸಪರ್ವತಗಳಿವೆ.

ಮಾನಸಸರೋವರದ ಒಂದು ನೋಟ

ಮಾನಸಸರೋವರವು ಸಮುದ್ರಮಟ್ಟದಿಂದ ೪೫೫೬ ಮೀ. ಎತ್ತರದಲ್ಲಿದೆ. ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಸಿಹಿನೀರಿನ ಸರಸ್ಸು. ಮಾನಸಸರೋವರದ ಆಕಾರ ಸರಿಸುಮಾರು ವರ್ತುಲ. ಚಳಿಗಾಲದಲ್ಲಿ ಮಾನಸಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಸಿಂಧೂ ನದಿ, ಸಟ್ಲೆಜ್ ನದಿ, ಕರ್ನಾಲಿ ನದಿ ಮತ್ತು ಯಾರ್ಲುಂಗ್ ತ್ಸಾಂಗ್ಪೋ ನದಿ (ಬ್ರಹ್ಮಪುತ್ರ ನದಿ)ಗಳೆಲ್ಲವೂ ಮಾನಸಸರೋವರದ ಆಸುಪಾಸಿನಲ್ಲಿ ಉಗಮಿಸುತ್ತವೆ.

ಸಾಂಸ್ಕೃತಿಕ ಮಹತ್ವಸಂಪಾದಿಸಿ

ಮಾನಸಸರೋವರ ಮತ್ತು ಕೈಲಾಸಪರ್ವತಗಳು ಧಾರ್ಮಿಕ ಮಹತ್ವ ಹೊಂದಿವೆ. ಭಾರತ, ಟಿಬೆಟ್ ಮತ್ತು ನೆರೆಹೊರೆಯ ದೇಶಗಳಿಂದ ಸಹಸ್ರಾರು ಜನರು ಈ ಎರಡೂ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳುವರು. ಮಾನಸಸರೋವರದಲ್ಲಿ ಸ್ನಾನ ಮತ್ತು ಸರಸ್ಸಿನ ಜಲವನ್ನು ಪಾನಮಾಡುವುದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ದೊರೆಯುವುದೆಂದು ಶ್ರದ್ಧಾಳುಗಳ ನಂಬಿಕೆ. ಭಾರತ ಸರಕಾರದ ನಿರ್ದೇಶನದಲ್ಲಿ ಪ್ರತಿವರ್ಷವೂ ಇಲ್ಲಿಗೆ ತೀರ್ಥಯಾತ್ರೆ ಆಯೋಜಿಸಲಾಗುತ್ತದೆ.

 
ಮಾನಸಸರೋವರದ ಇನ್ನೊಂದು ನೋಟ
 
ಕೈಲಾಸ ಪರ್ವತ ದ ಹಿನ್ನಲೆಯಲ್ಲಿ ಮಾನಸ ಸರೋವರ (ಬಲಕ್ಕೆ) ಮತ್ತು ರಕ್ಷಸ್ಥಳ ದ ಉಪಗ್ರಹ ಚಿತ್ರ.

ಹಿಂದೂ ಧರ್ಮದ ಪ್ರಕಾರ ಈ ಸರಸ್ಸು ಮೊದಲಿಗೆ ಬ್ರಹ್ಮನ ಮನಸ್ಸಿನಲ್ಲಿ ಸೃಷ್ಟಿಸಲ್ಪಟ್ಟಿತು. ಆದ್ದರಿಂದಲೇ ಮಾನಸಸರೋವರವೆಂಬ ಹೆಸರು ಈ ಸರಸ್ಸಿಗೆ ಬಂದಿದೆ. ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಸ್ನಾನಕ್ಕಾಗಿ ಈ ಸರೋವರಕ್ಕೆ ಆಗಮಿಸುವರೆಂಬುದು ಇನ್ನೊಂದು ನಂಬಿಕೆ. ಬೌದ್ಧಧರ್ಮೀಯರಿಗೂ ಈ ಸ್ಥಾನ ಪವಿತ್ರ ಕ್ಷೇತ್ರ. ರಾಣಿ ಮಾಯಾ ಬುದ್ಧನನ್ನು ಅನವತಪ್ತ ಅಥವಾ ಅನತೊತ್ತ ಎಂದು ಬೌದ್ಧರಿಂದ ಕರೆಯಲ್ಪಡುವ ಈ ಸ್ಥಳದಲ್ಲಿ ತನ್ನ ಗರ್ಭದಲ್ಲಿ ಧರಿಸಿದಳೆಂದು ಒಂದು ನಂಬಿಕೆ. ಈ ಸರೋವರದ ದಡದಲ್ಲಿ ಅನೇಕ ಬೌದ್ಧವಿಹಾರಗಳಿವೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ