ಅಗೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸಸಿ ಲೇಖನಕ್ಕಾಗಿ ಇಲ್ಲಿ ನೋಡಿ.

ಅಂಕುರಿಸುವಿಕೆಯು ಹಸಿಯಾಗಿ ಅಥವಾ ಬೇಯಿಸಿ ತಿನ್ನಲು ಬೀಜಗಳನ್ನು ಚಿಗುರಿಸುವ ಪದ್ಧತಿ. ಮೊಳಕೆಗಳನ್ನು ಮನೆಯಲ್ಲಿ ಚಿಗುರಿಸಬಹುದು ಅಥವಾ ಕೈಗಾರಿಕವಾಗಿ ಉತ್ಪಾದಿಸಬಹುದು. ಅವು ಕಚ್ಚಾ ಆಹಾರದ ಪ್ರಮುಖ ಘಟಕಾಂಶವಾಗಿವೆ ಮತ್ತು ಪೂರ್ವ ಏಷ್ಯಾದ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿವೆ.

ಮಿಶ್ರ ಕಾಳುಗಳ ಮೊಳಕೆ

ಅಡುಗೆಯಂತೆ, ಅಂಕುರಿಸುವಿಕೆಯು ಕಚ್ಚಾ ದ್ವಿದಳ ಧಾನ್ಯಗಳಲ್ಲಿ ಪೌಷ್ಟಿಕವಲ್ಲದ ಸಂಯುಕ್ತಗಳನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಕಚ್ಚಾ ಲೆಂಟಿಲ್‍ಗಳು ಪೌಷ್ಟಿಕವಲ್ಲದ ಲೆಕ್ಟಿನ್ ಪ್ರೋಟೀನ್‍ಗಳನ್ನು ಹೊಂದಿದ್ದು, ಇವನ್ನು ಅಂಕುರಿಸುವಿಕೆ ಅಥವಾ ಬೇಯಿಸಿ ಕಡಿಮೆ ಮಾಡಬಹುದು. ಮಾಲ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ಅಂಕುರಿಸುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಜವೆಗೋಧಿಗೆ ಅನ್ವಯಿಸಲಾಗುತ್ತದೆ. ಕಚ್ಚಾ ಮೊಳಕೆಗಳನ್ನು ಸೇವಿಸುವುದರ ಒಂದು ಅನನುಕೂಲವೆಂದರೆ ಬೀಜಗಳನ್ನು ಚಿಗುರಿಸುವ ಪ್ರಕ್ರಿಯೆಯು ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೂ ಅನುಕೂಲಕರವಾಗಬಹುದು.

ಅಂಕುರಿಸುವಿಕೆಗೆ ಸೂಕ್ತವಾದ ಬೀಜಗಳು

ಬದಲಾಯಿಸಿ

ಎಲ್ಲ ಉಳಿಯಬಲ್ಲ ಬೀಜಗಳನ್ನು ಅಂಕುರಿಸಬಹುದು, ಆದರೆ ಕೆಲವು ಮೊಳಕೆಗಳನ್ನು ಕಚ್ಚಾ ತಿನ್ನಬಾರದು. ಈ ಕೆಳಗಿನವು ಅತ್ಯಂತ ಸಾಮಾನ್ಯ ಆಹಾರ ಮೊಳಕೆಗಳು:

ಆಲ್ಫಾಲ್ಫಾ, ಕ್ಲೋವರ್, ಮೆಂತ್ಯ, ಮಸೂರ ಅವರೆ, ಬಟಾಣಿ, ಕಡಲೆ, ಹೆಸರು ಕಾಳು and ಸೋಯಾ ಅವರೆ.
ತೋಕೆಗೋಧಿ, ಗೋಧಿ, ಮೆಕ್ಕೆ ಜೋಳ, ಅಕ್ಕಿ, ಜವೆ, ಮತ್ತು ಚಿಕ್ಕ ಗೋಧಿ
ಕೀನೋವಾ, ದಂಟು ಮತ್ತು ಬಕ್‍ವೀಟ್
ಎಳ್ಳು, ಸೂರ್ಯಕಾಂತಿ, ಬಾದಾಮಿ, ಹೇಜ಼ಲ್‍ನಟ್, ಸೆಣಬು, ನಾರಗಸೆ, ಶೇಂಗಾ.
ಬ್ರಾಕಲಿ, ಎಲೆಕೋಸು, ವಾಟರ್‍ಕ್ರೆಸ್, ಸಾಸಿವೆ, ಮಿಜ಼ೂನಾ, ಮೂಲಂಗಿ, ಅರೂಗಲಾ, ಟರ್ನಿಪ್.

ಇತ್ಯಾದಿ.